Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ? - Vistara News

ಕರ್ನಾಟಕ

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Karnataka Weather: ಬೆಂಗಳೂರು ಭಾಗದ ಸುತ್ತಮುತ್ತ ಭಾಗಶಃ ಮಂಜು ಮುಸುಕಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಮುಂದಿನ ಒಂದು ವಾರದ ವಾತಾವರಣವನ್ನು ಗಮನಿಸುವುದಾದರೆ, ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

VISTARANEWS.COM


on

Karnataka Weather Rain for first week of March
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯಾದ್ಯಂತ ಬಿಸಿಲು ತೀವ್ರತೆ ಪಡೆದುಕೊಂಡಿರುವುದರಿಂದ ಜನರು ಹೈರಾಣಾಗಿದ್ದಾರೆ. ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶಗಳಲ್ಲಿ ಏರಿಕೆ ಕಾಣುತ್ತಿರುವುದು ಜನರನ್ನು ಕಂಗೆಡಿಸಿದೆ. ಬೇಸಿಗೆ ಬಿಸಿಲಿನ ಹೊಡೆತ ಬಲವಾಗಿ ಬೀಳುತ್ತಿದೆ. ಈ ಮಧ್ಯೆ ಉತ್ತರ ಭಾರತದ ಹಲವು ಕಡೆ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಹ ಮಾರ್ಚ್‌ ಮೊದಲ ವಾರದಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ. ಆದರೆ, ಸದ್ಯದ ವರದಿ ಪ್ರಕಾರ ಅಂತಹ ಯಾವುದೇ ವಾತಾವರಣದ ಮುನ್ಸೂಚನೆ ಇಲ್ಲ. ಆದರೆ, ಬಿಸಿಲು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆ ನೀಡಿದೆ.

ಮುಂದಿನ ಎರಡು ದಿನದ ವಾತಾವರಣವನ್ನು ಗಮನಿಸುವುದಾದರೆ, ಗುರುವಾರ ಮತ್ತು ಶುಕ್ರವಾರ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳಲ್ಲಿ (Maximum and Minimum Temperature) 1 – 2 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗಬಹುದು. ಇದು ರಾಜ್ಯದ ಜನರ ನೆತ್ತಿಯನ್ನು ಸುಡಲಿದೆ.

ಬೆಂಗಳೂರಲ್ಲಿ ಇನ್ನೊಂದು ವಾರದ ಸ್ಥಿತಿ ಹೇಗೆ?

ಬೆಂಗಳೂರು ಭಾಗದ ಸುತ್ತಮುತ್ತ ಭಾಗಶಃ ಮಂಜು ಮುಸುಕಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಮುಂದಿನ ಒಂದು ವಾರದ ವಾತಾವರಣವನ್ನು ಗಮನಿಸುವುದಾದರೆ, ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ತೀವ್ರ ಪ್ರಮಾಣದಲ್ಲಿ ಸೆಕೆ ಇರಲಿದೆ.

ಇನ್ನು ಬೆಂಗಳೂರಿನಲ್ಲಿ ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಯಿದೆ. ಇದರಿಂದಾಗಿ ಹಗಲಿರುಳು ಗಾಳಿ ವೇಗವು ಹೆಚ್ಚಾಗಿ ಇರಲಿದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ

ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ 35-36 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಇರಲಿದೆ. ಗದಗದಲ್ಲಿ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇನ್ನು ಈ ಭಾಗದ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನ ಸಹ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಲಿದೆ.

ಕರಾವಳಿಯಲ್ಲಿ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಳ

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.

ದಕ್ಷಿಣ ಒಳನಾಡಲ್ಲೂ ಬಿಸಿಲ ಧಗೆ

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ವಿಜಯನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣವು ಹೆಚ್ಚಳವಾಗಲಿದೆ. ಈ ಭಾಗದ ಕೆಲವು ಕಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಹೆಚ್ಚಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Yadgiri News: ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 31 ಡಿ.ಸೆ – 20 ಡಿ.ಸೆ
ಮಂಗಳೂರು: 35 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 35 ಡಿ.ಸೆ – 21 ಡಿ.ಸೆ
ಗದಗ: 36 ಡಿ.ಸೆ – 22 ಡಿ.ಸೆ
ಹೊನ್ನಾವರ: 34 ಡಿ.ಸೆ- 22 ಡಿ.ಸೆ
ಕಲಬುರಗಿ: 36 ಡಿ.ಸೆ – 22 ಡಿ.ಸೆ
ಬೆಳಗಾವಿ: 35 ಡಿ.ಸೆ – 18 ಡಿ.ಸೆ
ಕಾರವಾರ: 36 ಡಿ.ಸೆ – 23 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿಕ್ಕಬಳ್ಳಾಪುರ

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Lok Sabha Election 2024: ಮಾಜಿ ಸಚಿವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್, ಏ.13 ರಂದು ಶನಿವಾರ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.

VISTARANEWS.COM


on

Chikkaballapur Lok Sabha Constituency BJP Candidate Dr K Sudhakar is campaigning in various places today
Koo

ಚಿಕ್ಕಬಳ್ಳಾಪುರ: ಮಾಜಿ ಸಚಿವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Lok Sabha Election 2024) ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್, ಏ.13 ರಂದು ಶನಿವಾರ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.

ಶನಿವಾರ ಬೆಳಿಗ್ಗೆ 9.45ಕ್ಕೆ ಕ್ಷೇತ್ರದ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಅರಶಿನಕುಂಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 10.30ಕ್ಕೆ ತ್ಯಾಮಗೊಂಡ್ಲು ರುದ್ರಮ್ಮ ಹನುಮಯ್ಯ ಭವನದಲ್ಲಿ ಸಭೆ ಅನಂತರ ಮಧ್ಯಾಹ್ನ 3ರಿಂದ 5 ಗಂಟೆಯವರೆಗೆ ಸೋಲೋರು ಕೆ.ಎನ್ ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವರು.

ಇದನ್ನೂ ಓದಿ:First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

ಸಂಜೆ 6 ಗಂಟೆಗೆ ಕ್ಷೇತ್ರದ ಕಸಬಾ ಮತ್ತು ನೆಲಮಂಗಲ ನಗರ ಎಂ. ವಿ. ಎಂ ಕಲ್ಯಾಣ ಮಂಟಪದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Continue Reading

ಹುಬ್ಬಳ್ಳಿ

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Lok Sabha Election 2024: ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಎಲ್ಲಾ ದೇಶದ್ರೋಹಿ ಕೃತ್ಯಗಳನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಸರಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

VISTARANEWS.COM


on

Union Minister Pralhad Joshi statement
Koo

ಹುಬ್ಬಳ್ಳಿ: ಭಾರತದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವೇ ಅತ್ಯಗತ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Lok Sabha Election 2024) ಪ್ರತಿಪಾದಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ರಜಪೂತ ಮತ್ತು ಮರಾಠ ರಜಕ್ ಸಮಾಜದ ಪ್ರಮುಖರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಎಲ್ಲಾ ದೇಶದ್ರೋಹಿ ಕೃತ್ಯಗಳನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿಯವರೇ ಸರಿ ಎಂದು ಹೇಳಿದರು.

ದೇಶದಲ್ಲಿ ಎಲ್ಲೇ ಆಗಲಿ ಉಗ್ರ ಚಟುವಟಿಕೆಗಳನ್ನು ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಂಡು ಎದುರಿಸಿದೆ. ಅದರ ಪರಿಣಾಮ ದೇಶದಲ್ಲಿ ಭಯೋತ್ಪಾದನೆ ಕ್ಷೀಣಿಸಿ ಶಾಂತಿ ನೆಲೆಸಿದೆ ಎಂದರು.

ಇದನ್ನೂ ಓದಿ: EPFO Pension: ಇಪಿಎಫ್ ಒ ಪಿಂಚಣಿ ಮೊತ್ತ ಹೆಚ್ಚು ಸಿಗಲು ಏನು ಮಾಡಬೇಕು?

ಪ್ರಧಾನಿ ಮೋದಿ ಅವರ ಖಡಕ್ ನಿಲುವುಗಳಿಂದಾಗಿ ಇಂದು ದೇಶ ಸುರಕ್ಷಿತವಾಗಿದೆ. ಜನರೂ ಶಾಂತಿಯಿಂದ ಜೀವಿಸುವಂತಾಗಿದೆ ಎಂದು ಹೇಳಿದರು.

ಸದಾ ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿಯವರ ಕೈ ಬಲಪಡಿಸಲು ಈ ಬಾರಿಯೂ ಸರ್ವ ಸಮಾಜದವರು ಬೆಂಬಲಿಸಬೇಕು ಎಂದು ಸಚಿವ ಪ್ರಲ್ಹಾದ್‌ ಜೋಶಿ ಮನವಿ ಮಾಡಿದರು.

ಈ ಮಹತ್ವದ ಸಭೆಯಲ್ಲಿ ನೆರೆದಿದ್ದ ರಜಪೂತ, ರಜಕ್ ಮರಾಠ ಸಮಾಜದವರು ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Tumkur News: ಶಿರಾದಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಸಭೆಯಲ್ಲಿ ರಜಪೂತ, ರಜಕ್ ಮರಾಠ ಸಮಾಜದ ಪ್ರಮುಖರಾದ ವಿದ್ಯಾ ಜಾವುರ, ಸುಭಾಸ ಸಿಂಗ ಜಮಾದಾರ, ವಿಷ್ಣು ಕೆಲಗೇರಿ, ಸತೀಶ್ ಸಂಕ್ಪಾಲ್, ಸಂಜಯ ಕಪಟ್ಕರ್, ಮಂಜುನಾಥ್ ಕಾಟ್ಕರ್, ಶೋಭಾ ಕಿಲ್ಲೇಧಾರ್, ನಾರಾಯಣಸಿಂಗ್, ಅಜಿತ್ ಸಿಂಗ್ ರಜಪೂತ್ ಹಾಗೂ ಸಮಾಜದ ಮುಖಂಡರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೂರಕ್ಕಿಂತ ಹೆಚ್ಚು ಕ್ಷೇತ್ರಗಳನ್ನೂ ಗೆಲ್ಲುವುದಿಲ್ಲ ಎಂದು ಸವಾಲು ಹಾಕಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ದೇಶಾದ್ಯಂತ ಕಾಂಗ್ರೆಸ್ 40 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಿದೆ. ಹಾಗಿರುವಾಗ ಕರ್ನಾಟಕದಲ್ಲಿ ಹೇಗೆ 20 ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ಪ್ರಶ್ನಿಸಿದ್ದಾರೆ.

VISTARANEWS.COM


on

Union Minister Pralhad Joshi latest statement in hubli
Koo

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ (Congress Party) ಮೂರಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸವಾಲು ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ಕ್ಷೇತ್ರಗಳನ್ನೂ ದಾಟುವುದಿಲ್ಲ ಎಂದು ಭವಿಷ್ಯ ನುಡಿದರು. ಒಂದು ವೇಳೆ ಮೂರಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದರೆ ಅವರು ಹೇಳಿದಂತೆ ಕೇಳುವೆ ಎಂದು ಅವರು ಸವಾಲು ಹಾಕಿದರು.

ದೇಶಾದ್ಯಂತ ಕಾಂಗ್ರೆಸ್ 40 ಕ್ಷೇತ್ರಗಳನ್ನು ಗೆಲ್ಲುವುದೂ ಕಷ್ಟವಿದೆ. ಹಾಗಿರುವಾಗ ಕರ್ನಾಟಕದಲ್ಲಿ ಹೇಗೆ 20 ಕ್ಷೇತ್ರಗಳನ್ನು ಗೆಲ್ಲುತ್ತದೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

ಲೋಕಸಭಾ ಚುನಾವಣೆ ಬಳಿಕ ಸಿಎಂ-ಡಿಸಿಎಂ ಬಣದಲ್ಲಿನ ಆಂತರಿಕ ಗೊಂದಲದಿಂದ ರಾಜ್ಯ ಸರ್ಕಾರ ಅದಾಗೇ ಪತನಗೊಳ್ಳಬಹುದು. ಆದರೆ ಸರ್ಕಾರದ ಪತನದಲ್ಲಿ ಬಿಜೆಪಿ ಪಾತ್ರ ಇರುವುದಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ಏ.15ರಂದು ನಾಮಪತ್ರ ಸಲ್ಲಿಕೆ

ಧಾರವಾಡ ಲೋಕಸಭೆ ಕ್ಷೇತ್ರಕ್ಕೆ 5ನೇ ಬಾರಿ ಸ್ಪರ್ಧೆ ಬಯಸಿ ಇದೇ ಏ.15ರಂದು ಬೃಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಹುಬ್ಬಳ್ಳಿಯ ಶಿವಾಜಿ ಸರ್ಕಲ್‌ನಿಂದ ಅಸಂಖ್ಯಾತ ಕಾರ್ಯಕರ್ತರೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸುವೆ ಎಂದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ್ ಕೋರೆ ಅವರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆದಿದೆ. ಶಾಸಕ ಅರವಿಂದ ಬೆಲ್ಲದ್, ಮಹೇಶ ತೆಂಗಿನಕಾಯಿ, ಶಂಕರಣ್ಣ ಮುನವಳ್ಳಿ ಸೇರಿದಂತೆ ಮುಂತಾದ ಪ್ರಮುಖರು ಅಂದು ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Tumkur News: ಶಿರಾದಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

ಅಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆ ನಡೆಯಲಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

Continue Reading

ಕರ್ನಾಟಕ

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Rashtrotthana Parishat: ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ.

VISTARANEWS.COM


on

Rashtrotthana Hospital adopts Dozi technology to provide greater safety to patients
Koo

ಬೆಂಗಳೂರು: 162 ಹಾಸಿಗೆಗಳನ್ನು ಹೊಂದಿರುವ ಇಂಟಿಗ್ರೇಟೆಡ್ ಮಲ್ಟಿ-ಸ್ಪೆಷಾಲಿಟಿ ಟರ್ಷಿಯರಿ ಕೇರ್ ಹಾಸ್ಪಿಟಲ್ ಆಗಿರುವ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು (Rashtrotthana Parishat) ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ.

ಈ ಹೊಸ ವ್ಯವಸ್ಥೆ ಅನುಷ್ಠಾನದ ಮೂಲಕ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆಯು ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಸಂಯೋಜಿತವಾಗಿರುವ ದಕ್ಷಿಣ ಭಾರತದ ಆಸ್ಪತ್ರೆಗಳಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಂಡಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಳಿಸಿದೆ. ಆ ಮೂಲಕ ರೋಗಿಗಳ ಸುರಕ್ಷತೆ, ನಿರಂತರ ಕಾಳಜಿ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು “ಮೇಡ್ ಇನ್ ಇಂಡಿಯಾ’ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ನಾನ್-ಐಸಿಯು ವಾರ್ಡ್ ಬೆಡ್‌ಗಳು ಮುಂದಿನ ಪೀಳಿಗೆಯ ಅತ್ಯಾಧುನಿಕ ಸಂಚಾರಿ- ಸಂಪರ್ಕಿತ ರೋಗಿಗಳ ನಿಗಾ ವಹಿಸುವ ವ್ಯವಸ್ಥೆ ಹೊಂದಿದೆ. ಜತೆಗೆ ಅದು ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ ವ್ಯವಸ್ಥೆಯನ್ನೂ ಹೊಂದಿದ್ದು, ಸಂಪರ್ಕರಹಿತವಾಗಿ ನಿರಂತರವಾಗಿ ರೋಗಿಗಳ ನಿಗಾವಹಿಸುವಿಕೆಯ ಕೆಲಸವನ್ನು ಮಾಡುತ್ತದೆ.

ಇದನ್ನೂ ಓದಿ: Summer Tour: ಐತಿಹಾಸಿಕ ಹೆಗ್ಗುರುತಿನ ಶ್ರೀಮಂತ ನಗರ ತಿರುಚ್ಚಿ; ಬೇಸಿಗೆ ಪ್ರವಾಸದಲ್ಲಿ ನೋಡಲು ಮರೆಯದಿರಿ

ಡೋಝಿಯ ಉತ್ಪನ್ನವು ಕ್ಲೌಡ್ ಆಧರಿತವಾಗಿದೆ. ರೋಗಿಗಳ ಸುರಕ್ಷತೆಗಾಗಿ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶ ದೊರಕಿಸಲು ಸಕಾಲಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಅನುವು ಮಾಡಿಕೊಡುವ ಸೆಂಟ್ರಲ್ ಆಂಡ್ ರಿಮೋಟ್ ಮಾನಿಟರಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ರಾಷ್ಟ್ರೋತ್ಥಾನ ಪರಿಷತ್ತಿನ ಒಂದು ಭಾಗವಾಗಿದ್ದು, ಸಮಾಜದ ಎಲ್ಲಾ ಸ್ತರದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ಉತ್ತಮ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಆಸ್ಪತ್ರೆಯು 19 ಸಾಮಾನ್ಯ ವಾರ್ಡ್‌ಗಳು, 72 ಅರೆ-ಖಾಸಗಿ ವಾರ್ಡ್‌ಗಳು, 11 ತುರ್ತು ಚಿಕಿತ್ಸಾ ವಿಭಾಗಗಳು ಮತ್ತು 17 ಖಾಸಗಿ ವಾರ್ಡ್‌ಗಳನ್ನು ಹೊಂದಿದೆ. ಒಟ್ಟು 162 ಹಾಸಿಗೆಗಳನ್ನು ಹೊಂದಿದ್ದು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ.

ಹೃದಯ ಬಡಿತ, ಉಸಿರಾಟ ಸ್ಥಿತಿ, ರಕ್ತದೊತ್ತಡ, ಎಸ್‌ಪಿಓ2 ಮಟ್ಟಗಳು, ಟೆಂಪರೇಚರ್ ಮತ್ತು ಇಸಿಜಿಯಂತಹ ರೋಗಿಗಳ ಪ್ರಮುಖ ಆರೋಗ್ಯ ಅಂಶಗಳನ್ನು ದೂರದಿಂದಲೇ ನಿಗಾ ವಹಿಸುವ ಸೌಲಭ್ಯವನ್ನು ಡೋಝಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸುತ್ತದೆ. ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅವಶ್ಯ ಮಾಹಿತಿಗಳನ್ನು ಗಮನಿಸುತ್ತಿರುತ್ತದೆ ಮತ್ತು ಒಂದು ವೇಳೆ ರೋಗಿಯ ಆರೋಗ್ಯ ಕ್ಷೀಣಿಸುವಿಕೆ ಕಂಡುಬಂದರೆ ಆ ಕುರಿತು ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತದೆ. ಆ ಮೂಲಕ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಒದಗಿಸಲು ನೆರವಾಗುತ್ತದೆ. ಸಂಪರ್ಕರಹಿಕ ನಿಗಾ ವಹಿಸುವಿಕೆಗಾಗಿ ಡೋಝಿ ಎಐ ಆಧಾರಿತ ಬ್ಯಾಲಿಸ್ಟೋಕಾರ್ಡಿಯೋಗ್ರಫಿ (ಬಿಸಿಜಿ) ಅನ್ನು ಬಳಸುತ್ತದೆ. ಡೋಝಿಯ ಈ ಹೊಸ ತಂತ್ರಜ್ಞಾನವು ಪೇಟೆಂಟ್ ಹೊಂದಿದ್ದು, ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ.

ಇದನ್ನೂ ಓದಿ: Karnataka Weather : ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ವರ್ಷಧಾರೆ; ನಾಳೆ ರಭಸವಾಗಿ ‌ಬೀಸಲಿದೆ ಗಾಳಿ- ಮಳೆ

ಬೆಂಗಳೂರಿನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಐಸಿಯು ಮತ್ತು ಇಆರ್‌ನ ಅನೆಸ್ತೇಷಿಯಾಲಜಿ ಎಚ್‌ಒಡಿ ಡಾ. (ಕರ್ನಲ್) ಆನಂದ್ ಶಂಕರ್ ಮಾತನಾಡಿ, “ಆರೋಗ್ಯ ಸೇವಾ ಕ್ಷೇತ್ರವು ನಿರಂತರವಾಗಿ ರೂಪಾಂತರಕ್ಕೆ ಒಳಗಾಗುತ್ತಿರುವುದರಿಂದ ಆರೋಗ್ಯ ಸೇವೆ ಪೂರೈಕೆದಾರರು ರೋಗಿಗಳಿಗೆ ಅತ್ಯುತ್ತಮ ಆರೈಕೆ ಒದಗಿಸಲು ಅತ್ಯಾಧುನಿಕ ಸಾಧನಗಳಿಗೆ ಹೊಂದಿಕೊಳ್ಳುವುದು ಮತ್ತು ಅವುಗಳನ್ನು ಹೊಂದುವುದು ಅವಶ್ಯವಾಗಿದೆ. ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಮತ್ತು ರೋಗಿಗಳ ಚಿಕಿತ್ಸೆ ಫಲಿತಾಂಶಗಳನ್ನು ಸುಧಾರಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿ ‘ಮೇಡ್ ಇನ್ ಇಂಡಿಯಾ’ ಸಂಪರ್ಕರಹಿತ, ನಿರಂತರ ರೋಗಿಗಳ ನಿಗಾ ವಹಿಸುವಿಕೆ ಪರಿಹಾರೋತ್ಪನ್ನವಾದ ಡೋಝಿ ಜತೆಗಿನ ಪಾಲುದಾರಿಕೆ ಸೂಕ್ತವಾಗಿ ಹೊಂದಿಕೊಂಡಿದೆ.

ಜೀವಗಳನ್ನು ಉಳಿಸುವ ಸಾಮರ್ಥ್ಯವಿರುವ ಈ ಹೊಸ ಆರೋಗ್ಯ ಸೇವೆ ಆವಿಷ್ಕಾರವನ್ನು ಮೊದಲು ಬಳಸಿಕೊಳ್ಳುವ ಮೂಲಕ ದೇಶದಲ್ಲಿನ ರೋಗಿಗಳ ಸುರಕ್ಷತೆಗೆ ಹೊಸ ಮಾನದಂಡಗಳನ್ನು ರೂಪಿಸುವಲ್ಲಿ ನಾವು ಮುಂಚೂಣಿಯಲ್ಲಿ ನಿಂತಿದ್ದೇವೆ. ಡೋಝಿ ಜತೆಗೆ ಈ ಪ್ರಯಾಣದ ಭಾಗವಾಗಲು ನಮಗೆ ಸಂತೋಷವಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಆತ್ಮಾರಾಮ್ ಡಿ.ಸಿ. ಡೋಝಿ ತಂತ್ರಜ್ಞಾನದ ಅಳವಡಿಕೆಯ ಕುರಿತು ಮಾತನಾಡಿ, ಜಯದೇವ್ ಸ್ಮಾರಕ ಆಸ್ಪತ್ರೆಯು 162 ಹಾಸಿಗೆಗಳ ಇಂಟಿಗ್ರೇಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಸಮಾಜದ ಎಲ್ಲಾ ವರ್ಗಗಳ ಜನರಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ರೋಗಿಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದಕ್ಕಾಗಿ ಡೋಝಿಯ ಎಐ ಆಧಾರಿತ ಸಂಪರ್ಕರಹಿತ ನಿಗಾವಹಿಸುವಿಕೆ ವ್ಯವಸ್ಥೆಯನ್ನು ಅಳವಡಿಸಿದ್ದು, ಅದರ ಅರ್ಲಿ ವಾರ್ನಿಂಗ್ ಸಿಸ್ಟಮ್ ಸಮಯಕ್ಕೆ ಸರಿಯಾಗಿ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಉತ್ತಮ ಆರೈಕೆ ಒದಗಿಸಲು ಸಹಾಯ ಮಾಡುತ್ತದೆ. ಅದರ ಕ್ಲೌಡ್-ಆಧರಿತ ತಂತ್ರಜ್ಞಾನದಿಂದಾಗಿ ನಮ್ಮ ವೈದ್ಯರು ತಮ್ಮ ರೋಗಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದೂರದಿಂದಲೇ ನಿಗಾವಹಿಸಬಹುದಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಸಲಹೆಯನ್ನು ನೀಡಬಹುದಾಗಿದೆ. ಈ ಮೂಲಕ ಸಂಗ್ರಹಿಸಿದ ಡೇಟಾವು ಮಹತ್ವದ್ದಾಗಿದ್ದು, ಬಹುಶಃ ಭವಿಷ್ಯದ ಎಲ್ಲಾ ಸಂಶೋಧನಾ ಅಧ್ಯಯನಗಳಿಗೆ ನೆರವನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತಾಧಿಕಾರಿ ಡಾ. ಶೈಲಾ ಎಚ್.ಎನ್. ಮಾತನಾಡಿ, ನಮ್ಮ ರೋಗಿಗಳ ಆರೈಕೆಯಲ್ಲಿ ಡೋಝಿಯ ಅನುಷ್ಠಾನವು ಆರೋಗ್ಯ ಸೇವೆ ಒದಗಿಸುವಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ನಮ್ಮ ಬದ್ಧತೆಯನ್ನು ತೋರಿಸಿಕೊಟ್ಟಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೋಗ್ಯ ಸೇವೆ ಒದಗಿಸುವ ನಮ್ಮ ದೃಷ್ಟಿಗೆ ಹೊಂದಿಕೆಯಾಗುತ್ತದೆ. ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಪ್ರಮುಖವಾಗಿ ನಾವು ಉತ್ಕೃಷ್ಟ ಆವಿಷ್ಕಾರ ಮತ್ತು ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಂಡು ನಮ್ಮ ಚಿಕಿತ್ಸಾ ವಿಧಾನವನ್ನು ಪರಿಷ್ಕರಿಸುವ ಮೌಲ್ಯವನ್ನು ಹೊಂದಿದ್ದೇವೆ. ಶ್ರೇಷ್ಠತೆಯನ್ನು ಅಳವಡಿಸಿಕೊಂಡು ಸಮುದಾಯಕ್ಕೆ ಸಹಾನುಭೂತಿ, ಕಾಳಜಿ ಮತ್ತು ಸೇವೆ ಒದಗಿಸುವ ಬದ್ಧತೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!

ಈ ಕುರಿತು ಡೋಝಿ ಸಿಇಒ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವಾಟೆ ಮಾತನಾಡಿ, ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಕೈಜೋಡಿಸುವುದಕ್ಕೆ ನಮಗೆ ಹೆಮ್ಮೆ ಇದೆ. ಏಕೆಂದರೆ ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಮತ್ತು ಚಿಕಿತ್ಸಾ ಫಲಿತಾಂಶಗಳು ಮತ್ತು ಶುಶ್ರೂಷೆಯ ಧಕ್ಷತೆಯನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ನಿರಂತರವಾದ ವಾರ್ಡ್ ಮಾನಿಟರಿಂಗ್ ಮತ್ತು ಅರ್ಲಿ ವಾರ್ನಿಂಗ್ ಸಿಸ್ಟಮ್ ಅಳವಡಿಕೆಯಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸಾಧ್ಯವಾಗುತ್ತದೆ. ಜಾಗತಿಕವಾಗಿ ಆರೋಗ್ಯ ಸೇವಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯ ಆವಿಷ್ಕಾರಗಳ ಪಾತ್ರವು ಹೆಚ್ಚುತ್ತಿರುವುದಕ್ಕೆ ಈ ಸಹಯೋಗವು ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ10 mins ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ12 mins ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ13 mins ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ16 mins ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Iran- israel War
ದೇಶ19 mins ago

Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

Rain News
ಪ್ರಮುಖ ಸುದ್ದಿ28 mins ago

Rain News: ರಾಜ್ಯದ ವಿವಿಧೆಡೆ ಮಳೆ ಆರ್ಭಟ; ಸಿಡಿಲು ಬಡಿದು ಗದಗದಲ್ಲಿ 20, ಶಿವಮೊಗ್ಗದಲ್ಲಿ 18 ಕುರಿ ಸಾವು

SK Jain
ಕರ್ನಾಟಕ45 mins ago

SK Jain: ಅನಾರೋಗ್ಯದಿಂದ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ನಿಧನ

IPL 2024
ಪ್ರಮುಖ ಸುದ್ದಿ54 mins ago

IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

Lok Sabha Election 2024 Will your vote get respect and dignity if you vote for BJP CM Siddaramaiah question
Lok Sabha Election 20241 hour ago

Lok Sabha Election 2024: ಬಿಜೆಪಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ, ಘನತೆ ಬರುತ್ತಾ? ಸಿಎಂ ಪ್ರಶ್ನೆ

David Warner
ಕ್ರೀಡೆ2 hours ago

David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್​ ವಾರ್ನರ್ ಆ್ಯಕ್ಟಿಂಗ್​; ಇಲ್ಲಿದೆ ವಿಡಿಯೊ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ10 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ17 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌