ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ - Vistara News

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ ಭಾರಿ ಅಚ್ಚರಿ ನೀಡಿದೆ.

VISTARANEWS.COM


on

Electricity Bil
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದೆ. ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ (Karnataka Electricity regulatory Commission) ವಿದ್ಯುತ್‌ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿದೆ. ಬುಧವಾರ ಸಂಜೆ ವೇಳೆ ವಿದ್ಯುತ್‌ ದರ ಪರಿಷ್ಕರಣೆ ಘೋಷಣೆಯಾಗಿದೆ. ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ ಭಾರಿ ಸರ್‌ಪ್ರೈಸ್‌ ನೀಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎಂಬ ಆರೋಪ, ಗುಲ್ಲುಗಳ ನಡುವೆಯೇ ಇದೊಂದು ಸಿಹಿಯಾದ ಶಾಕ್.‌ ಪರಿಷ್ಕೃತ ದರ ಮಾರ್ಚ್ 1ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ.‌ ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆಇಆರ್‌ಸಿ ಹೇಳಿದೆ. ಅಪರೂಪದಲ್ಲಿ ಅಪರೂಪವಾಗಿ ನಡೆಯುವ ಈ ಇಳಿಕೆಯ ಲಾಭವನ್ನು ಗೃಹ ಬಳಕೆದಾರರು ಮಾತ್ರವಲ್ಲ, ವಾಣಿಜ್ಯ, ಕೈಗಾರಿಕೆ, ರೈತರು ಎಲ್ಲರಿಗೂ ನೀಡಲಾಗಿದೆ. ಇದೊಂದು ಶ್ಲಾಘನೀಯ ಕ್ರಮ.

ಮುಖ್ಯವಾಗಿ ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ 100 ಯೂನಿಟ್‌ಗಳಿಗಿಂತ ಹೆಚ್ಚಿನ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ. ಇದರ ಲಾಭ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಸಿಗಲಿದೆ. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್‌ ವಿದ್ಯುತ್‌ಗೆ 1 ರೂಪಾಯಿ 25 ಪೈಸೆ ಇಳಿಕೆ. ಕೈಗಾರಿಕೆಗಳಿಗೆ ಬಳಸುವ ವಿದ್ಯುತ್‌ ದರದಲ್ಲಿ ಯುನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಹಾಗು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್‌ ದರ ಒಂದು ಯುನಿಟ್‌ಗೆ 40 ಪೈಸೆ ಇಳಿಕೆ. ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ 50 ಪೈಸೆ ಇಳಿಕೆ. ಖಾಸಗಿ ಏತ ನೀರಾವರಿ ವಿದ್ಯುತ್‌ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್‌ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ಗಳಿಗೆ ಡಿಮ್ಯಾಂಡ್‌ ಚಾರ್ಜಸ್‌ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ. ಇನ್ನು ಗೃಹ ಜ್ಯೋತಿ (Gruha Jyothi) ಉಚಿತ ವಿದ್ಯುತ್‌ ಬಳಕೆದಾರರಿಗೆ ಇದರ ಹೊರೆ ತಟ್ಟುವುದಿಲ್ಲ. ಯಾಕೆಂದರೆ, ಗೃಹಜ್ಯೋತಿಗೆ ಇರುವ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 200 ಯೂನಿಟ್‌ ವರೆಗೆ ವಿದ್ಯುತ್‌ ಬಳಸುವವರು ಬಿಲ್‌ ಕಟ್ಟಬೇಕಿಲ್ಲ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಬಿಲ್‌ ಬರುತ್ತದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಿವೃತ್ತ ಐಎಎಸ್‌ ಜಿ. ಗುರುಚರಣ್‌ ಅವರ ಏಕಸದಸ್ಯ ಆಯೋಗವೊಂದನ್ನು ರಚಿಸಲಾಗಿದ್ದು, ಇದು ಎಸ್ಕಾಂಗಳ ಸುಧಾರಣೆಯ ಬಗ್ಗೆ ವರದಿಯೊಂದನ್ನು ನೀಡಿತ್ತು. ಇದರಲ್ಲಿ ಕರ್ನಾಟಕದ ಇಂಧನ ವಲಯದ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತ್ತು. ಇಂಧನ ಉತ್ಪಾದನೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯವು ನಾಯಕತ್ವ ವಹಿಸಿದೆ. ಕರ್ನಾಟಕವು ನವೀಕರಿಸಬಹುದಾದ, ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯವಾಗಿದೆ. ಆಧುನಿಕ ಗ್ರಿಡ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಕೋಟ್ಯಂತರ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸಿದೆ. ಆದರೆ ರಾಜ್ಯದ ಪೂರ್ಣ ಸಾಮರ್ಥ್ಯವನ್ನು ಇನ್ನೂ ಶೋಧಿಸಬೇಕಿದೆ. ಇನ್ನಷ್ಟು ಪರಿಣಾಮಕಾರಿ, ಸುಸ್ಥಿರವಾಗಿ ಬೆಳೆಯಬಲ್ಲ ಸಾಧ್ಯತೆಯನ್ನು ರಾಜ್ಯದ ಇಂಧನ ವಲಯ ಹೊಂದಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಅದು ನಿಜವಾದುದು ಎಂದು ಈ ಬೆಳವಣಿಗೆ ತೋರಿಸಿದೆ.

ಇದನ್ನೂ ಓದಿ: Biggest Surprise! : ಹೀಗೂ ಉಂಟೆ! ರಾಜ್ಯದಲ್ಲಿ ವಿದ್ಯುತ್‌ ದರ ಭಾರಿ ಇಳಿಕೆ! ನಿಜಕ್ಕೂ ಶಾಕ್!‌

ವಿದ್ಯುತ್‌ ಬೆಲೆ ಮತ್ತು ವಿದ್ಯುತ್ತಿನ ಲಭ್ಯತೆ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮುಖ್ಯವಾದುದು. ವಿದ್ಯುತ್‌ ಬೆಲೆ ಏರಿದಂತೆಲ್ಲ ಕೈಗಾರಿಕೆಗಳ, ಕೃಷಿಯ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಕೈಗಾರಿಕೆ ಹಾಗೂ ಕೃಷಿ ಉತ್ಪನ್ನಗಳು ಗ್ರಾಹಕನವರೆಗೆ ಬರುವಾಗ ಅದರ ಬೆಲೆ ವರ್ಧಿಸುತ್ತದೆ. ಪೆಟ್ರೋಲ್‌ ಬೆಲೆ ಹೇಗೋ ಹಾಗೇ ವಿದ್ಯುತ್‌ ಬೆಲೆ ಹೆಚ್ಚಳವೂ ಹೀಗೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸಕಾರಣವಾದ ವಿದ್ಯುತ್‌ ಬೆಲೆಯನ್ನು ಉಳಿಸಿಕೊಳ್ಳುವುದೊಂದೇ ದಾರಿ. ಗೃಹಜ್ಯೋತಿ ಯೋಜನೆಯ ಮೂಲಕ ಮಧ್ಯಮ ವರ್ಗದವರ ಒಂದು ಹೊರೆಯನ್ನು ಸರ್ಕಾರ ಇಳಿಸಿದೆ. ವಿದ್ಯುತ್‌ ದರ ಇಳಿಕೆಯ ಮೂಲಕ ಅದನ್ನು ಇನ್ನಷ್ಟು ಹಗುರವಾಗಿಸಿದೆ. ಈ ಶ್ಲಾಘನೀಯ ಕ್ರಮದಿಂದ ಉಂಟಾಗುವ ಉಳಿಕೆಯನ್ನು ಮಧ್ಯಮ, ಕೆಳಮಧ್ಯಮ ವರ್ಗದವರು ಇತರ ವೆಚ್ಚಗಳನ್ನು ಸರಿದೂಗಿಸಲು ಬಳಸಬಹುದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಂಪಾದಕೀಯ

ವಿಸ್ತಾರ ಸಂಪಾದಕೀಯ: ಸೈಬರ್‌ ಸುರಕ್ಷತೆಗೆ ಆದ್ಯತೆಯಿರಲಿ

ದೇಶದಲ್ಲಿ ಆನ್‌ಲೈನ್‌ ವಂಚನೆ, ಸೈಬರ್‌ ಕ್ರೈಂ (Cyber Crime) ಬಗ್ಗೆ ಎಷ್ಟೇ ಜಾಗೃತಿ ಮಾಡಿಸಿದರು ಕೂಡ ಸೈಬರ್‌ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಅದರಲ್ಲೂ, ಶಿಕ್ಷಣ ಪಡೆದವರು, ಪದವೀಧರರು, ಉದ್ಯೋಗಿಗಳೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Cyber
Koo

ಇತ್ತೀಚೆಗೆ ಸೈಬರ್‌ ಕ್ರೈಮ್‌ಗಳು ನಾನಾ ರೂಪವನ್ನು ತಾಳುತ್ತಿವೆ. ಬೆಂಗಳೂರಿನಲ್ಲಿ (Bengaluru) ವಕೀಲೆಯೊಬ್ಬರು ಇಂಥ ಸೈಬರ್‌ ವಂಚನೆಗೆ ತುತ್ತಾಗಿ ಬರೋಬ್ಬರಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೊರಿಯರ್‌ ಸೇವೆಗಳಿಗೆ ಹೆಸರಾಗಿರುವ ಫೆಡ್‌ಎಕ್ಸ್ (FedEx) ಸಂಸ್ಥೆ ಹಾಗೂ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಈ ವಂಚನೆ ನಡೆದಿದೆ. ತಾನು ಮುಂಬೈ ಪೊಲೀಸ್‌ ಇಲಾಖೆ ಅಧಿಕಾರಿ ಎಂದು, ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ನಿಂದ ಫೆಡ್‌ಎಕ್ಸ್‌ ಮೂಲಕ 140 ಗ್ರಾಂ ಡ್ರಗ್ಸ್‌ (ಮಾದಕವಸ್ತು) ಕೊರಿಯರ್‌ ಮಾಡಲಾಗಿದೆ ಎಂದು ವಕೀಲೆಗೆ ಕರೆ ಮಾಡಿ ಬೆದರಿಸಿ, ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ, ಹವಾಲಾ ದಂಧೆ ಹಾಗೂ ಡ್ರಗ್ಸ್‌ ದಂಧೆಯ ಪ್ರಕರಣಗಳು ದಾಖಲಾಗಿವೆ ಎಂದು ಆತಂಕ ಮೂಡಿಸಲಾಗಿದೆ. ನಂತರ ಈ ಕೇಸ್‌ನಿಂದ ಪಾರುಮಾಡಲು ಡ್ರಗ್ಸ್‌ ಟೆಸ್ಟ್‌ ಎಂಬ ಹೆಸರಿನಲ್ಲಿ ಮಹಿಳೆಯು ಬೆತ್ತಲೆಯಾಗಿ ವೆಬ್‌ ಕ್ಯಾಮ್‌ ಎದುರು ನಿಲ್ಲುವಂತೆ ಮಾಡಿ, ಅದನ್ನು ರೆಕಾರ್ಡ್‌ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ಹಣವನ್ನು ಸುಲಿಗೆ ಮಾಡಿದ್ದಾರೆ.

ದೇಶದಲ್ಲಿ ಆನ್‌ಲೈನ್‌ ವಂಚನೆ, ಸೈಬರ್‌ ಕ್ರೈಂ (Cyber Crime) ಬಗ್ಗೆ ಎಷ್ಟೇ ಜಾಗೃತಿ ಮಾಡಿಸಿದರು ಕೂಡ ಸೈಬರ್‌ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಅದರಲ್ಲೂ, ಶಿಕ್ಷಣ ಪಡೆದವರು, ಪದವೀಧರರು, ಉದ್ಯೋಗಿಗಳೇ ಇಂತಹ ವಂಚನೆಗಳಿಗೆ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ವಕೀಲರು, ಪೊಲೀಸರಂಥ, ಜನಸಾಮಾನ್ಯರಿಗೆ ಇಂಥ ಅಪರಾಧಗಳಿಂದ ದೂರವಿರಬೇಕಾದ ಪಾಠ ಹೇಳಬೇಕಾದವರೇ ಇಂಥ ವಂಚನೆಗಳಿಗೆ ತುತ್ತಾಗುತ್ತಾರೆ ಎಂದರೆ, ಚೋರರು ಹೆಣೆಯುವ ಬಲೆ ಎಷ್ಟು ಗಟ್ಟಿಯಾಗಿರುತ್ತದೆ ಎಂದು ನಾವು ಊಹಿಸಬಹುದು. ಇಂದು ಆನ್‌ಲೈನ್‌ ವಂಚನೆಗಳಿಗೆ ಹಲವು ಬಗೆಯ ಸ್ವರೂಪ ಬಂದಿದೆ. ಕರೆ ಮಾಡಿ ಕ್ರೆಡಿಟ್‌- ಡೆಬಿಟ್‌ ಕಾರ್ಡ್‌ಗಳ ಪಾಸ್‌ವರ್ಡ್‌ ಕೇಳುತ್ತಾರೆ; ಒಟಿಪಿ ಕೇಳುತ್ತಾರೆ; ಇದು ಸ್ವಲ್ಪ ಹಳೆಯ ತಂತ್ರ. ಆದರೆ ಈಗಲೂ ಇದಕ್ಕೆ ಮೋಸ ಹೋಗುವವರು ಇದ್ದಾರೆ. ಅಂದರೆ ಸೈಬರ್‌ ಸುರಕ್ಷತೆಯಲ್ಲಿ ನಾವು ಮೂಲಭೂತ ಶಿಕ್ಷಣವನ್ನೇ ಪಡೆದಿಲ್ಲ ಎಂದರ್ಥ. ಹಾಗಿದ್ದ ಮೇಲೆ, ವಂಚಕರು ಹೆಣೆಯು ಅತ್ಯಾಧುನಿಕ ತಂತ್ರಗಳನ್ನು ಎದುರಿಸಲು ಮೂಲಶಿಕ್ಷಣದ ಜೊತೆಗೆ ಜಾಣ್ಮೆ, ಎಚ್ಚರಿಕೆ, ವಿವೇಕ ಎಲ್ಲವೂ ಅಗತ್ಯವಾಗಿವೆ.

ರಾನ್ಸಮ್‌ವೇರ್ ದಾಳಿ, ಆನ್‌ಲೈನ್‌ ಸಾಲದ ಆ್ಯಪ್‌ ವಂಚನೆ, ಸಿಮ್-ಸ್ವಾಪ್‌ ಅಪರಾಧಗಳು, ಆಧಾರ್ ಬಳಸಿಕೊಂಡು ನಡೆಯುತ್ತಿರುವ ಅಪರಾಧಗಳು, ಪ್ಯಾನ್ ಬಳಸಿಕೊಂಡು ನಡೆಯುವ ವಂಚನೆಗಳು, ಸೆಕ್ಸ್‌ಟಾರ್ಶನ್‌, ಪಿಗ್‌ ಬುಚ್ಚರಿಂಗ್‌, ಆನ್‌ಲೈನ್‌ ಆಟಗಳ ಮೂಲಕ ಮೋಸ, ಸೋಗು ಹಾಕುವಿಕೆ, ಗುರುತಿನ ಕಳ್ಳತನ (identity theft), ಕ್ಯೂಆರ್ ಕೋಡ್ ಅಪರಾಧಗಳು, ಮನೆಯಿಂದಲೇ ಕೆಲಸ, ಆನ್ಲೈನ್ ಕೆಲಸದ ಆಮಿಷದ ಮೂಲಕ ವಂಚನೆ, ಗ್ರಾಹಕ ಸಹಾಯವಾಣಿ, ಕೊರಿಯರ್ ಸಂಬಂಧಿತ ಅಪರಾಧಗಳು, ಮಹಿಳೆಯರು, ಹುಡುಗಿಯರು ಮತ್ತು ಮಕ್ಕಳನ್ನು ಗುರಿಯಾಗಿಸಿ ನಡೆಯುವ ಕ್ರೈಮ್‌ಗಳು, ಡೀಪ್‌ಫೇಕ್, ಕ್ರಿಪ್ಟೋಕರೆನ್ಸಿ ಅಥವಾ ಬಿಟ್‌ಕಾಯಿನ್ ವಂಚನೆಗಳು ಮುಂತಾದ ವೈವಿಧ್ಯಮಯ ಅಪರಾಧಗಳು ಈ ಲೋಕದಲ್ಲಿವೆ. ನಮ್ಮ ತಿಳುವಳಿಕೆ, ಅನುಭವವನ್ನು ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕನುಗುಣವಾಗಿ ರೂಪುಗೊಳ್ಳುವ ಕ್ರಿಮಿನಲ್‌ಗಳ ಕುತಂತ್ರಗಳು ಹೊಸ ಬಗೆಯ ಸವಾಲುಗಳನ್ನು ಒಡ್ಡುತ್ತಿರುತ್ತದೆ.

ಮುಖ್ಯವಾಗಿ ಮಾಡಬೇಕಾದ್ದೇನೆಂದರೆ, ಸೈಬರ್‌ ವಂಚನೆಗೆ ತುತ್ತಾಗುತ್ತಿದ್ದೇನೆ ಅಥವಾ ಆಗಿದ್ದೇನೆ ಎಂಬ ಅನುಮಾನ ಬಂದ ಕೂಡಲೇ ತಡಮಾಡದೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡುವುದು ಅಥವಾ https://cybercrime.gov.in/ ನಲ್ಲಿ ದೂರು ಸಲ್ಲಿಸುವುದು. ಮೋಸದಿಂದ ಕಳೆದುಕೊಂಡ ಹಣವನ್ನು ಫ್ರೀಜ್‌ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸುವುದು. ಆಧಾರ್ ಕಾರ್ಡ್‌ನ್ನು ಲಾಕ್‌ ಮಾಡುವುದು. ನಿಮ್ಮ ಬ್ಯಾಂಕ್‌ ಖಾತೆಗಳ ಪಾಸ್‌ವರ್ಡ್/ಪಿನ್‌ಗಳನ್ನು ಬದಲಾಯಿಸುವುದು. ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ಗೆ ಏನಾದರೂ ಮಾಲ್‌ವೇರ್ ಅಥವಾ ವೈರಸ್‌ ದಾಳಿಯ ಅನುಮಾನವಿದ್ದರೆ ಫಾರ್ಮ್ಯಾಟ್‌ ಮಾಡುವುದು. ಆಮಿಷಗಳಿಗೆ ಬಲಿಯಾಗಬಾರದು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎಂಬ ಗಾದೆ ಮಾತನ್ನು ಸದಾ ನೆನಪಿನಲ್ಲಿಟ್ಟುಕೊಂಡಿದ್ದರೆ ಅಂತರ್ಜಾಲದಲ್ಲಿ ಎದುರಾಗುವ ವಿವಿಧ ಆಮಿಷಗಳಿಗೆ ಬಲಿಯಾಗುವುದು ತಪ್ಪುತ್ತದೆ. ಆನ್‌ಲೈನ್‌ ಬೆದರಿಕೆಗಳಿಗೆ ಜಗ್ಗದೆ ಸೈಬರ್‌ ಪೊಲೀಸರ ಸಹಾಯ ಪಡೆಯುವುದು ಎಷ್ಟೋ ಸುರಕ್ಷಿತ.

ಇದನ್ನೂ ಓದಿ: FedEx Scam: ಬೆಂಗಳೂರು ವಕೀಲೆಗೆ 15 ಲಕ್ಷ ರೂ. ವಂಚನೆ; ವೆಬ್‌ಕ್ಯಾಮ್‌ ಎದುರು ಬೆತ್ತಲೆ ನಿಂತಿದ್ದೇಕೆ?

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಕ್ಯಾನ್ಸರ್ ನ ರಾಜಧಾನಿಯಾಗುತ್ತಿದೆ ಭಾರತ; ಇದರಿಂದ ಪಾರಾಗುವ ದಾರಿ ಹುಡುಕೋಣ

ಚಿಂತೆಗೀಡುಮಾಡುವ ಇನ್ನೊಂದು ಅಂಶ ಎಂದರೆ, ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕ್ಯಾನ್ಸರ್ ರೋಗನಿರ್ಣಯದ ವಯಸ್ಸು ಕಡಿಮೆಯಾಗುತ್ತಿರುವುದು. ಪ್ರತಿಯೊಬ್ಬರೂ ಸೂಕ್ತ ಜೀವನಶೈಲಿ, ಆಹಾರ, ದುಶ್ಚಟಗಳ ನಿವಾರಣೆಯ ಮೂಲಕ ಈ ಕ್ಯಾನ್ಸರ್‌ ತಡೆಗಟ್ಟಲು ಗರಿಷ್ಠ ಯತ್ನಿಸಬಹುದು.

VISTARANEWS.COM


on

Cancer Capital
Koo

ಭಾರತ `ಕ್ಯಾನ್ಸರ್​ನ ರಾಜಧಾನಿ’ (Cancer Capital) ಆಗುವತ್ತ ಸಾಗಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. 2024ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4ನೇ ಆವೃತ್ತಿಯು ಭಾರತವನ್ನು ʼವಿಶ್ವದ ಕ್ಯಾನ್ಸರ್ ರಾಜಧಾನಿʼ ಎಂದು ಕರೆದಿದೆ. ವರದಿಯ ಪ್ರಕಾರ, ಮೂವರು ಭಾರತೀಯರಲ್ಲಿ ಒಬ್ಬರು ಪ್ರಿ ಡಯಾಬಿಟೀಸ್‌ನಿಂದ, ಮೂವರಲ್ಲಿ ಇಬ್ಬರು ಪೂರ್ವ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 10ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿದ್ದಾರೆ. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿರ್ಣಾಯಕ ಮಟ್ಟ ತಲುಪಿವೆ. ಇದು ಒಟ್ಟಾರೆ ರಾಷ್ಟ್ರದ ಆರೋಗ್ಯದ ಮೇಲೆಯೇ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಉಲ್ಬಣಿಸಿವೆ; ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಭಾರತದಲ್ಲಿ ಪತ್ತೆಯಾಗುವ ಸಾಮಾನ್ಯ ಕ್ಯಾನ್ಸರ್‌ಗಳಾಗಿದ್ದು, ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ.

ಚಿಂತೆಗೀಡುಮಾಡುವ ಇನ್ನೊಂದು ಅಂಶ ಎಂದರೆ, ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕ್ಯಾನ್ಸರ್ ರೋಗನಿರ್ಣಯದ ವಯಸ್ಸು ಕಡಿಮೆಯಾಗುತ್ತಿರುವುದು. ಅಂದರೆ, ಯುಎಸ್, ಯುಕೆ ಮತ್ತು ಚೀನಾದಲ್ಲಿ ಕ್ಯಾನ್ಸರ್‌ ರೋಗನಿರ್ಣಯದ ವಯಸ್ಸು 60 ಮತ್ತು 70 ವರ್ಸದ ಆಸುಪಾಸಿನಲ್ಲಿ ಇದ್ದರೆ, ಭಾರತದಲ್ಲಿ ಸ್ತನ ಕ್ಯಾನ್ಸರ್ ರೋಗನಿರ್ಣಯಕ್ಕೆ ಸರಾಸರಿ 52 ವರ್ಷ, ಶ್ವಾಸಕೋಶದ ಕ್ಯಾನ್ಸರ್​ಗೆ ಸರಾಸರಿ 54 ವರ್ಷ ಇದೆ. ಇನ್ನೊಂದು ಕಳವಳದ ಅಂಶವೆಂದರೆ ಅಸಮರ್ಪಕ ತಪಾಸಣೆ. ಇದು ಜಾಗತಿಕ ಮಾನದಂಡಗಳಿಗಿಂತ ಬಹಳ ಕಡಿಮೆ.

ಭಾರತೀಯರಲ್ಲಿ ಯಾಕೆ ಹೆಚ್ಚುತ್ತಿರಬಹುದು? ವರದಿಯ ಪ್ರಕಾರ ಭಾರತೀಯರಲ್ಲಿ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಸ್ಲೀಪ್ ಅಪ್ನಿಯಾ (ನಿದ್ರೆಯ ಸಮಸ್ಯೆ) ಸಮಸ್ಯೆ ಗಮನಾರ್ಹ ಹೆಚ್ಚಳ ಕಂಡಿವೆ. ಸ್ಥೂಲಕಾಯದ ಪ್ರಮಾಣ 2016ರಲ್ಲಿ ಇದ್ದ 9 ಪ್ರತಿಶತದಿಂದ 2023ರಲ್ಲಿ 20 ಪ್ರತಿಶತಕ್ಕೆ ಏರಿದೆ. ಇದೇ ಅವಧಿಯಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಶೇಕಡಾ 9ರಿಂದ 13ಕ್ಕೆ ಏರಿದೆ. ಹೆಚ್ಚಿನ ಪ್ರಮಾಣದ ಭಾರತೀಯರು ಸ್ಲೀಪ್ ಅಪ್ನಿಯಾ ಅಪಾಯದಲ್ಲಿದ್ದಾರೆ. ಒತ್ತಡ, ಜೀವನಶೈಲಿ ಸಮಸ್ಯೆಗಳು, ವ್ಯಾಯಾಮದ ಕೊರತೆ, ಸರಿಯಾದ ಡಯಟ್‌ ಕೊರತೆ, ವಿಕಿರಣ ಅಥವಾ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಿಕೆ, ಇವೆಲ್ಲವೂ ಕ್ಯಾನ್ಸರ್‌ಗೆ ಕಾರಣಗಳಾಗಿವೆ. ಡಾಕ್ಟರ್‌ಗಳ ಪ್ರಕಾರ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯದ ಸಮಸ್ಯೆಗಳ ವಿರುದ್ಧ ಹೋರಾಡಲು, ತಡೆಗಟ್ಟಲು ಮತ್ತು ಹಿಮ್ಮೆಟ್ಟಿಸಲು ತಕ್ಷಣದ ಕ್ರಮಗಳಾಗಬೇಕು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಯುಗಾದಿ ದೇಶಕ್ಕೆ ಶುಭ ಹೊತ್ತು ತರಲಿ

ಪ್ರತಿಯೊಬ್ಬರೂ ಸೂಕ್ತ ಜೀವನಶೈಲಿ, ಆಹಾರ, ದುಶ್ಚಟಗಳ ನಿವಾರಣೆಯ ಮೂಲಕ ಈ ಕ್ಯಾನ್ಸರ್‌ ತಡೆಗಟ್ಟಲು ಗರಿಷ್ಠ ಯತ್ನಿಸಬಹುದು. ತಂಬಾಕು ಬಳಸದಿರುವಿಕೆ, ಆಲ್ಕೋಹಾಲ್ ಸೇವನೆ ಮಾಡದಿರುವುದು ಅಥವಾ ಕಡಿಮೆ ಮಾಡುವುದು, ಲಸಿಕೆ ಶಿಫಾರಸು ಮಾಡಿದ ಗುಂಪಿಗೆ ಸೇರಿದವರಾಗಿದ್ದರೆ ಎಚ್‌ಪಿವಿ ಮತ್ತು ಹೆಪಟೈಟಿಸ್ ಬಿ ವಿರುದ್ಧ ಲಸಿಕೆ ಪಡೆಯುವುದು, ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು, ಯುರೇನಿಯಂನ ನೈಸರ್ಗಿಕ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ವಿಕಿರಣಶೀಲ ಅನಿಲ ರೇಡಾನ್‌ಗೆ ಒಡ್ಡಿಕೊಳ್ಳದಿರುವುದು- ಇವುಗಳು ಅಗತ್ಯ. ನಮ್ಮಲ್ಲಿ ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಬಗ್ಗೆ ಜನತೆಗೆ ಅರಿವೇ ಇಲ್ಲ. ಆರೋಗ್ಯ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಹೆಚ್ಚಾಗಬೇಕು ರಕ್ತದೊತ್ತಡ ಮತ್ತು ಬಾಡಿ ಮಾಸ್ ಇಂಡೆಕ್ಸ್ ಮಟ್ಟಗಳ ಬಗ್ಗೆ ನಿಗಾ ಇಡುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬೇಕು.

ಆನುವಂಶಿಕವಾಗಿಯೂ ಕ್ಯಾನ್ಸರ್‌ ಬರುತ್ತದೆ. ಕುಟುಂಬದಲ್ಲಿ ಇದರ ಹಿನ್ನೆಲೆ ಇರುವವರು ಜಾಗರೂಕರಾಗಿರಬೇಕಿದೆ. ನಿಯಮಿತ ಆರೋಗ್ಯ ತಪಾಸಣೆ ಅಗತ್ಯ. ಕ್ಯಾನ್ಸರ್‌ಗೆ ಮದ್ದೇ ಇಲ್ಲ ಎಂದೇನೂ ಇಲ್ಲ. ಆದರೆ ಕ್ಯಾನ್ಸರ್‌ನ ಬಗ್ಗೆ ಇರುವ ಆತಂಕ- ಭಯಗಳು ರೋಗಿಯನ್ನು ಅರ್ಧಕ್ಕರ್ಧ ಕುಗ್ಗಿಸಿಬಿಡುತ್ತವೆ. ನಮ್ಮಲ್ಲಿ ಕ್ಯಾನ್ಸರ್‌ ಚಿಕಿತ್ಸೆಯ ವೆಚ್ಚವೂ ಬಲು ದುಬಾರಿ. ಆರೋಗ್ಯ ವಿಮೆ ಹೊಂದಿಲ್ಲದಿದ್ದರೆ ಈ ರೋಗಿಗಳ ಬದುಕು ದುರ್ಭರ. ಸರ್ಕಾರ ಇದನ್ನು ಗಮನಿಸಿ ಮಧ್ಯಮ- ಬಡವರ್ಗದಲ್ಲಿ ರೋಗತಪಾಸಣೆ, ರೋಗನಿದಾನಕ್ಕೆ ಲಭ್ಯ ವ್ಯವಸ್ಥೆಯನ್ನು ಒದಗಿಸಬೇಕು.

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಯುಗಾದಿ ದೇಶಕ್ಕೆ ಶುಭ ಹೊತ್ತು ತರಲಿ

Yugadi Festival: ಈ ಬಾರಿಯ ಯುಗಾದಿ, ಜನಪ್ರಾತಿನಿಧ್ಯದ ಮಹತ್ವದ ನಿರ್ಣಯವನ್ನು ನೀಡುವ ಸಂದರ್ಭವನ್ನೂ ಹೊತ್ತು ತಂದಿದೆ. ಲೋಕಸಭೆ ಚುನಾವಣೆ ಹತ್ತಿರ ಬಂದಿದೆ. ನಮ್ಮನ್ನು ಆಳುವವರು ಹೇಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು, ಹೇಗಿರಬೇಕು ಎಂಬುದನ್ನು ವಿಶ್ಲೇಷಿಸಿಕೊಂಡು, ಮುಂಬರುವ ಚುನಾವಣೆಯಲ್ಲಿ ಮೌಲಿಕವಾದ ರೀತಿಯಲ್ಲಿ ಮತದಾನ ಮಾಡುವ ಸಂದೇಶವನ್ನೂ ಈ ಬಾರಿಯ ಯುಗಾದಿ ನಮಗೆ ಹೊತ್ತು ತಂದಿದೆ.

VISTARANEWS.COM


on

Yugadi festival
Koo

ಮಂಗಳವಾರ ಮುಂಜಾನೆ ಚಾಂದ್ರಮಾನ ಯುಗಾದಿ (Yugadi Festival). ಇಂದಿಗೆ ಶೋಭಕೃತು ಹೆಸರಿನ ಸಂವತ್ಸರ ಮುಕ್ತಾಯವಾಗಿ ʼಕ್ರೋಧಿʼ ಅಥವಾ ʼಕ್ರೋಧʼ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರಿನಲ್ಲೇ ಕ್ರೋಧವನ್ನು ಧರಿಸಿರುವ ಈ ಸಂವತ್ಸರ, ಕೋಪವನ್ನು ಹೆಸರಿನಲ್ಲಿ ಮಾತ್ರ ಹೊಂದಿದ್ದರೆ ಸಾಕು ಎಂಬುದು ಹಿಂದೂ ಪಂಚಾಂಗ ನಂಬುವವರ ಆಶಯವಾಗಿದೆ. ಮುಂದಿನ ದಿನಗಳು ಶುಭವನ್ನು ಹೊತ್ತು ತರಲಿ ಎಂಬ ಆಶಯದಿಂದ ಹಬ್ಬಗಳನ್ನು ಆಚರಿಸುತ್ತೇವೆ. ಇಂದಿನಿಂದ ವಸಂತ ಋತು ಆರಂಭವಾಗುತ್ತದೆ. ಮಾವು ಚಿಗುರಿ, ಹಣ್ಣು ಬಿಟ್ಟು ಮಾರುಕಟ್ಟೆಯನ್ನು ತುಂಬಿದೆ. ಹಲಸು ಮುಂತಾದ ಈ ಋತುವಿನ ಹಣ್ಣುಗಳು ಕೈಗೆ ಸಿಗುತ್ತಿವೆ. ಹೊಂಗೆ ಮುಂತಾದ ಮರಗಳು ಹೂಬಿಟ್ಟಿವೆ. ಚಾಂದ್ರಮಾನ ಯುಗಾದಿ ಬಂದರೆ ಇಡೀ ಪ್ರಕೃತಿ ಹೊಸದಾಗುತ್ತದೆ. ಮಾನವನನ್ನೂ ʼಮತ್ತೆ ಹೊಸದಾಗುʼ ಎಂದು ಆಹ್ವಾನಿಸುತ್ತದೆ. ದ.ರಾ ಬೇಂದ್ರೆ ಅವರ ಕವನದ ಆಶಯದಂತೆ, “ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ.”

ಯುಗಾದಿ ಎಂಬ ಹಬ್ಬದ ಸಂದೇಶ ಬೇವು ಹಾಗೂ ಬೆಲ್ಲಗಳನ್ನು ಒಟ್ಟಾಗಿ ಸೇರಿಸಿ, ಸೇವಿಸಿ, ಬದುಕಿನಲ್ಲಿ ಅವೆರಡೂ ಸಮಾನವಾಗಿ ಇದೆ ಎಂಬ ಸತ್ಯವನ್ನು ಕಂಡುಕೊಳ್ಳುವುದು. ಪ್ರಕೃತಿ ಮರಳಿ ಅರಳಿದೆ. ಆದರೆ ಬಿರುಬಿಸಿಲು, ನೀರಿನ ಕೊರತೆ ಹಾಗೂ ಶಾಖದ ಕರಾಳತೆ ಈ ವರ್ಷ ತನ್ನ ಪ್ರತಾಪವನ್ನು ತೋರಿಸುತ್ತಿದೆ. ಬೆಂಗಳೂರಿನಂಥ, ಇದುವರೆಗೆ ಕಾವೇರಿ ನೀರಿನಿಂದ ತನ್ನ ಬದುಕನ್ನು ಕಂಡುಕೊಂಡ ನಗರದಲ್ಲಿ ನೀರಿನ ತತ್ವಾರ ಕಂಡುಬರುತ್ತಿದೆ. ಉತ್ತರ ಕರ್ನಾಟಕದಲ್ಲಿ ತೀವ್ರ ಬರದ ಛಾಯೆ ವ್ಯಾಪಿಸಿದೆ. ಹಣದುಬ್ಬರ ಎಲ್ಲದರ ಮೇಲೂ ತನ್ನ ಕರಾಳ ಬಾಹುಗಳನ್ನು ಚಾಚಿದೆ. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳಿಗೂ ಬೆಲೆಗಳು ದುಬಾರಿಯಾಗಿವೆ. ಹೀಗಾಗಿ ಕಳೆದ ವರ್ಷದ ಯುಗಾದಿಗೆ ಮಾಡಿದ ಪ್ರಮಾಣದಲ್ಲಿ ಈ ವರ್ಷವೂ ಸಿಹಿತಿಂಡಿ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂಬುದು ಮಧ್ಯಮ, ಕೆಳಮಧ್ಯಮ ವರ್ಗದ ದುಗುಡ. ಬಡವರಿಗಂತೂ ಕೇಳುವುದೇ ಬೇಡ. ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಿದ್ದರೂ ರೈತನಿಗೇನೂ ಅದರಿಂದ ಲಾಭವಾಗಿಲ್ಲ ಎಂಬುದು ಗೊತ್ತೇ ಇದೆ. ಇವೆಲ್ಲವನ್ನೂ ಬೇವು ಎಂದು ಭಾವಿಸಿ ಬೆಲ್ಲವನ್ನು ಹುಡುಕಾಡಬೇಕಿದೆ. ಹೊಸ ಫಸಲು ಕೈಗೆ ಬರುವ ಕಾಲವಿದು. ಉತ್ತಮ ಬೆಳೆ ಬರಲಿ ಹಾಗೂ ಅದನ್ನು ಬೆಳೆದ ಅನ್ನದಾತನಿಗೆ ಸರಿಯಾದ ಬೆಲೆ ಸಿಗಲಿ ಎಂದು ಆಶಿಸೋಣ.

ಈ ಸಲದ ಬೇಸಿಗೆ ನಮ್ಮೆಲ್ಲರನ್ನು ಬೇಯಿಸುತ್ತಿದೆ; ಬರ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇದೇನೂ ಹಿತಕರವಾದ ಸುದ್ದಿಯಲ್ಲ. ಈ ವಿಶ್ಲೇಷಣೆ ಸುಳ್ಳಾಗದು. ಆದರೆ ಪರಿಸ್ಥಿತಿಯನ್ನು ಸಹನೀಯವಾಗಿಸಲು ಏನೇನು ಮಾಡಬಹುದು ಎಂಬುದನ್ನು ನಾವು ನೋಡಬೇಕಿದೆ. ಬರದಲ್ಲಿ ಸಿಲುಕಿ ನಾವು ಹಾಗೂ ಸುತ್ತಮುತ್ತಲಿನವರು ಸಂಕಷ್ಟಕ್ಕೆ ಒಳಗಾಗದಂತೆ ಯಾವ್ಯಾವ ಉಪಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಯುಗಾದಿಯ ಕಾಲಪುರುಷ ನಮಗೂ ನಮ್ಮನ್ನು ಆಳುವವರಿಗೂ ಅಧಿಕಾರಿಗಳಿಗೂ ವಿವೇಕವನ್ನು ಕೊಡಲಿ ಎಂದು ಹಾರೈಸೋಣ. ʼಕಾಲಚಕ್ರʼ ಎಂದು ಹಿರಿಯರು ಕರೆದಿದ್ದಾರೆ. ಅಂದರೆ ಸುಖದುಃಖಗಳು ಚಕ್ರದಂತೆ ತಿರುಗುತ್ತಲೇ ಇರುತ್ತವಂತೆ. ಹೀಗಾಗಿ ಇಂದು ಕಷ್ಟಗಳು ಎದುರಾದರೆ ನಾಳೆ ಸುಖ ಬರಬಹುದು. ಹೀಗಾಗಿ ಗತಿಸಿದ ಕಾಲದ ಬಗ್ಗೆ ಹೆಚ್ಚು ಕೊರಗದೆ ಮುಂಬರುವ ಹಿತವನ್ನು ಎದುರು ನೋಡುತ್ತಾ ಭರವಸೆಯಿಂದ ಬದುಕಬೇಕೆಂಬುದನ್ನೇ ನಮಗೆ ಯುಗಾದಿಯು ಸಂದೇಶ ರೂಪದಲ್ಲಿ ತಿಳಿಸುತ್ತದೆ. ಈ ಸಂದೇಶವನ್ನು ಅರ್ಥ ಮಾಡಿಕೊಂಡು ವಿವೇಕಯುತವಾದ ರೀತಿಯಲ್ಲಿ ಹಬ್ಬವನ್ನು ಆಚರಿಸೋಣ.

ವಿಶೇಷವೆಂದರೆ ಈ ಬಾರಿಯ ಯುಗಾದಿ, ಜನಪ್ರಾತಿನಿಧ್ಯದ ಮಹತ್ವದ ನಿರ್ಣಯವನ್ನು ನೀಡುವ ಸಂದರ್ಭವನ್ನೂ ಹೊತ್ತು ತಂದಿದೆ. ಲೋಕಸಭೆ ಚುನಾವಣೆ ಹತ್ತಿರ ಬಂದಿದೆ. ನಮ್ಮನ್ನು ಆಳುವವರು ಹೇಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು, ಹೇಗಿರಬೇಕು ಎಂಬುದನ್ನು ವಿಶ್ಲೇಷಿಸಿಕೊಂಡು, ಮುಂಬರುವ ಚುನಾವಣೆಯಲ್ಲಿ ಮೌಲಿಕವಾದ ರೀತಿಯಲ್ಲಿ ಮತದಾನ ಮಾಡುವ ಸಂದೇಶವನ್ನೂ ಈ ಬಾರಿಯ ಯುಗಾದಿ ನಮಗೆ ಹೊತ್ತು ತಂದಿದೆ. ಸರಿಯಾದ ಫಲಿತಾಂಶ ಮತ್ತು ಉತ್ತಮ ಸರ್ಕಾರ ನಮ್ಮದಾಗಬೇಕಿದ್ದರೆ ಪೂರ್ಣ ಪ್ರಮಾಣದ ಮತದಾನ ಆಗಬೇಕು ಹಾಗೂ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯೂ ಅದರಲ್ಲಿ ಭಾಗಿಯಾಗಬೇಕು. ಆಗ ಪ್ರಜಾಪ್ರಭುತ್ವ ಎಂಬುದು ಸಿಹಿಯಾದ ಬೆಲ್ಲವಾಗುತ್ತದೆ. ಅಲ್ಲಿ ಎಲ್ಲರ ಧ್ವನಿಗೂ ಮನ್ನಣೆ ದೊರೆಯುತ್ತದೆ. ಉತ್ತಮ ಸರ್ಕಾರವಿದ್ದರೆ ಬದುಕು ಸುಗಮವಾಗುತ್ತದೆ. ಹಿಂದಿನವರು ʼರಾಜಾ ಕಾಲಸ್ಯ ಕಾರಣಂʼ ಎಂದಿದ್ದಾರೆ. ಆಳುವವರಿಂದಾಗಿ ಕಾಲವು ರೂಪ ಪಡೆಯುತ್ತದೆ. ಆಳುವವರು ಮತ್ತು ಅವರನ್ನು ಆಯ್ಕೆ ಮಾಡುವ ಮತದಾರರು- ಇಬ್ಬರಿಗೂ ಕಾಲಪುರುಷ ವಿವೇಕ ನೀಡಿ, ಸೂಕ್ತ ಆಯ್ಕೆಗೆ ಕಾರಣವಾಗಲಿ.

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಪಶ್ಚಿಮ ಬಂಗಾಳದಲ್ಲಿನ ಪುಂಡಾಟಕ್ಕೆ ಮಮತಾ ಸರ್ಕಾರದ ಕುಮ್ಮಕ್ಕು ಆತಂಕಕಾರಿ

ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಕುಮ್ಮಕ್ಕಿನಿಂದಲೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳು, ಹಿಂಸಾಚಾರ ಆಗಾಗ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ, ತನಿಖಾ ಸಂಸ್ಥೆಗಳ ಅಧಿಕಾರಿಗಳ ಮೇಲೆಯೂ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದು ನಡೆಯುತ್ತಿರುವುದು ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಎಂಬುದು ರಹಸ್ಯವೇನಲ್ಲ.

VISTARANEWS.COM


on

Loksabha Election
Koo

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ಮೇಲೆಯೇ ಜನರ ಗುಂಪು ದಾಳಿ ಮಾಡಿದೆ. ಪಶ್ಚಿಮ ಬಂಗಾಳದ ಭೂಪತಿನಗರದಲ್ಲಿ 2022ರಲ್ಲಿ ಟಿಎಂಸಿ ನಾಯಕರೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್‌ಐಎ ಅಧಿಕಾರಿಗಳು ಶನಿವಾರ (ಏಪ್ರಿಲ್‌ 6) ತೆರಳಿದ್ದರು. ಇದೇ ವೇಳೆ ಮಹಿಳೆಯರು ಸೇರಿ ಒಂದಷ್ಟು ಜನ ಎನ್‌ಐಎ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯ ವೇಳೆ ಎನ್‌ಐಎ ತಂಡದ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಎನ್‌ಐಎ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೊ ಕೂಡ ಲಭ್ಯವಾಗಿದೆ. ದೊಣ್ಣೆಗಳಿಂದಲೂ ಜನ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದು ಈ ಬಗೆಯ ಹೊಸ ಪ್ರಕರಣವಲ್ಲ. ಸಂದೇಶ್‌ಖಾಲಿಯಲ್ಲೂ ನಡೆದದ್ದು ಇದೇ. ಕಳೆದ ಜನವರಿಯಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ತೆರಳಿದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ವಾಹನದ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ದಾಳಿಯ ತೀವ್ರತೆಗೆ ಇ.ಡಿ ಅಧಿಕಾರಿಗಳು ಇದ್ದ ವಾಹನದ ನಾಲ್ಕೂ ಕಿಟಕಿಗಳು ಪುಡಿಪುಡಿಯಾಗಿದ್ದವು. ಇದೇ ಪ್ರಕರಣದಲ್ಲಿ ಸಂದೇಶ್‌ಖಾಲಿಯ ಟಿಎಂಸಿ ಸ್ಥಳೀಯ ಮುಖಂಡ ಶಹಜಹಾನ್ ಶೇಖ್‌ ಎಂಬವನ ಮನೆಯ ಮೇಲೆ ದಾಳಿ ನಡೆಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ, ದಾಳಿ ನಡೆದಿತ್ತು. ದಾಳಿಯಲ್ಲಿ ಕೆಲ ಅಧಿಕಾರಿಗಳಿಗೆ ಗಾಯಗಳಾಗಿದ್ದವು. ನಂತರ ಇದನ್ನು ವಿರೋಧಿಸಿ ವ್ಯಾಪಕವಾದ ಪ್ರತಿಭಟನೆ ನಡೆದಿತ್ತು. ಶಹಜಹಾನ್‌ನ ದೌರ್ಜನ್ಯದ ಕರಾಳತೆ ಬಯಲಾಗಿದ್ದು, ಆತನ ಬಂಧನಕ್ಕೆ ಸುಪ್ರೀಂ ಕೋರ್ಟೇ ನಿರ್ದೇಶನ ನೀಡಬೇಕಾಗಿ ಬಂದಿತ್ತು. ಆತನ ಬಂಧನ ಆದ ಬಳಿಕವೇ ಪಕ್ಷದಿಂದ ಆತನನ್ನು ಟಿಎಂಸಿ ಉಚ್ಚಾಟಿಸಿತ್ತು. ಅಂದರೆ ಅಲ್ಲಿಯವರೆಗೂ ಪಾತಕಿಯನ್ನು ಪಕ್ಷ ಸಾಕಿಕೊಂಡಿತ್ತು.

ಪಶ್ಚಿಮ ಬಂಗಾಳದಲ್ಲಿ ಹೀಗೆ ಸರ್ಕಾರಿ ಕುಮ್ಮಕ್ಕಿನಿಂದಲೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳು, ಹಿಂಸಾಚಾರ ಆಗಾಗ ನಡೆಯುತ್ತಲೇ ಇರುತ್ತವೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತವೆ. ಇತ್ತೀಚೆಗೆ, ತನಿಖಾ ಸಂಸ್ಥೆಗಳ ಅಧಿಕಾರಿಗಳ ಮೇಲೆಯೂ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದು ನಡೆಯುತ್ತಿರುವುದು ಆಡಳಿತ ಪಕ್ಷದ ಕುಮ್ಮಕ್ಕಿನಿಂದ ಎಂಬುದು ರಹಸ್ಯವಲ್ಲ. ಸಂದೇಶ್‌ಖಾಲಿಯಲ್ಲಿ ಏನು ನಡೆಯುತ್ತಿದೆ ಎಂಬ ವೀಕ್ಷಣೆಗೆ ಹೋಗಿದ್ದ ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷರನ್ನೂ ಅಡ್ಡಗಟ್ಟಿ ಬೆದರಿಸಿ ವಾಪಸ್‌ ಕಳಿಸಲಾಗಿತ್ತು. ಅಲ್ಲಿಗೆ ಹೊರಟಿದ್ದ ಬಿಜೆಪಿ ನಿಯೋಗಕ್ಕೂ ಹಲ್ಲೆ ಮಾಡಲಾಗಿತ್ತು. ಅಂದರೆ, ತನ್ನ ಪಕ್ಷದವರು ನಡೆಸುತ್ತಿರುವ ದೌರ್ಜನ್ಯಗಳನ್ನೆಲ್ಲ ಮುಚ್ಚಿಹಾಕಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಮತಾ ಬ್ಯಾನರ್ಜಿ ಸರ್ಕಾರ ವ್ಯವಸ್ಥಿತವಾಗಿ ಮಾಡುತ್ತಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಆರ್‌ಬಿಐ ಸುಧಾರಣಾ ಕ್ರಮಗಳು ಉಪಯುಕ್ತ, ಶ್ಲಾಘನಾರ್ಹ

ಹಗರಣ, ಅಕ್ರಮಗಳ ತನಿಖೆಗೆ ಮುಂದಾಗುವ ಕೇಂದ್ರೀಯ ತನಿಖಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳು ಬೆಂಬಲ ನೀಡಬೇಕು. ಆಗ ಮಾತ್ರ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಇರಬಲ್ಲುದು. ಒಕ್ಕೂಟ ವ್ಯವಸ್ಥೆಯ ಸೌಹಾರ್ದದ ಮೂಲಭೂತ ಸೂತ್ರವೇ ಇದು. ಆದರೆ ಪಶ್ಚಿಮ ಬಂಗಾಳ ಆಡಳಿತ ಪಕ್ಷ ಮಾತ್ರ ಬೆಂಬಲದ ಮಾತಂತಿರಲಿ, ಸಿಬಿಐ ತನಿಖೆಗೆ ಅಸಹಕಾರ, ತನಿಖಾ ಸಂಸ್ಥೆಗಳ ಮೇಲೆ ಹಲ್ಲೆ ಇತ್ಯಾದಿಗಳನ್ನು ಸ್ವತಃ ನಡೆಸುತ್ತಿರುವುದು ಆಘಾತಕಾರಿ; ಶೋಚನೀಯ. ಮಮತಾ ಅವರ ಪಕ್ಷದ ಮುಖಂಡರೇ ರಾಷ್ಟ್ರೀಯ ಏಜೆನ್ಸಿಗಳ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದರೆ ಏನರ್ಥ? ಅವರು ಭಾರತ ಒಕ್ಕೂಟದ ಒಳಗೆ ಇಲ್ಲವೇ? ಈಗ ನಡೆದ ಘಟನೆಗೂ, ರಾತ್ರಿ ಹೊತ್ತು ಯಾಕೆ ಬಂಧಿಸಲು ಹೋಗಬೇಕಿತ್ತು? ಜನ ಮಾಡಿದ್ದು ಸರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಕುತರ್ಕ; ಪುಂಡರು ನಡೆಸಿದ ಹಿಂಸೆಗೆ ಸ್ವತಃ ಸರ್ಕಾರವೇ ನೀಡುತ್ತಿರುವ ಬೆಂಬಲ. ಪುಂಡರ ಆಡಳಿತಕ್ಕೆ ಯಾವುದೇ ತಡೆ ಹಾಕದ ಸರ್ಕಾರ ಇದ್ದೂ ಉಪಯೋಗವಿಲ್ಲ. ಇಂಥ ಭಂಡತನಕ್ಕೆ ಜನ ತಕ್ಕ ಪಾಠ ಕಲಿಸಬಲ್ಲರು.

Continue Reading
Advertisement
Rishabh Pant
ಕ್ರಿಕೆಟ್29 mins ago

Rishabh Pant: ಐಪಿಎಲ್​ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್​

IPL 2024
ಪ್ರಮುಖ ಸುದ್ದಿ60 mins ago

IPL 2024 : ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್​ ವಿಜಯ

NIA Raid
ಕರ್ನಾಟಕ1 hour ago

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

Khalistan Terrorist
ಪ್ರಮುಖ ಸುದ್ದಿ2 hours ago

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Lok Sabha Election 2024
ಕರ್ನಾಟಕ2 hours ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ2 hours ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ2 hours ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ2 hours ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ2 hours ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ2 hours ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ12 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ19 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌