ಉತ್ತರ ಕನ್ನಡ
Karwar News: ಜಗತ್ತಿನ ಯಾವುದೇ ದೇಶಗಳಿಗೆ ಆಹಾರ ಪೂರೈಸುವಷ್ಟರ ಮಟ್ಟಿಗೆ ಭಾರತ ಬೆಳೆದಿದೆ; ಈ ಏಳ್ಗೆಗೆ ರೈತರ ಶ್ರಮವೇ ಕಾರಣ
Karwar News: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ನಾವು ಯಾರು, ನಮ್ಮ ಶಕ್ತಿ, ಸಾಮರ್ಥ್ಯ ಏನು ಎನ್ನುವುದರ ಅರಿವಾಗುತ್ತಿದೆ ಎಂದಿದ್ದಾರೆ ವಿಶ್ವೇಶ್ವರ ಹೆಗಡೆ ಕಾಗೇರಿ.
ಕಾರವಾರ: “ಸ್ವಾತಂತ್ರ್ಯ ಬಳಿಕ ನಮ್ಮ ಹಿರಿಯರು ಮಾಡಿದ ಪರಿಶ್ರಮದ ಫಲವಾಗಿ 75 ವರ್ಷಗಳಲ್ಲಿ ನಾವು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದೇವೆ. ಈ ಸಂದರ್ಭದಲ್ಲಿ ವಿಶೇಷವಾಗಿ ರೈತರನ್ನು (Farmers) ಅಭಿನಂದಿಸಬೇಕಾಗಿದೆ” ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ಅವರು, “ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಕರ್ನಾಟಕದಲ್ಲಿ ಆರೂವರೆ ಕೋಟಿ ಜನ ಸಂಖ್ಯೆಯಿದ್ದು, ದೇಶದಲ್ಲಿ ಇದು 140 ಕೋಟಿಗೇರಿದೆ. ಆದರೆ ಭಾರತ ಅಂದರೆ ಈ ಹಿಂದೆ ಇತರೆ ದೇಶಗಳು ಇದೊಂದು ಬಡವರ ದೇಶ, ಇಲ್ಲಿ ನಾಗರಿಕ ಜೀವನವೇ ಇಲ್ಲ, ಸೌಲಭ್ಯಗಳೇ ಇಲ್ಲ ಎನ್ನುವ ರೀತಿಯಲ್ಲಿ ನಮ್ಮನ್ನು ಪ್ರತಿಬಿಂಬಿಸುತ್ತಿದ್ದುದನ್ನು ನೋಡಿದ್ದೇವೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಮಗೆ ಆಹಾರದ ಕೊರತೆ ಎದುರಾಗಿತ್ತು. ಈ ವೇಳೆ ಹೊರ ದೇಶಗಳಿಂದ ಆಹಾರ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಈಗಿನ ದಿನಮಾನದಲ್ಲಿ ಭಾರತ ತನ್ನ ಬಳಕೆಗೆ ಹೊರತುಪಡಿಸಿ ಜಗತ್ತಿನ ಯಾವುದೇ ದೇಶಗಳಿಗೆ ಅಗತ್ಯವಿದ್ದಲ್ಲಿ ಅವರಿಗೂ ಆಹಾರ ಪೂರೈಸುವಷ್ಟರ ಮಟ್ಟಿಗೆ ಸದೃಢವಾಗಿ ಬೆಳೆದಿದೆ. ಇದಕ್ಕೆ ರೈತರ ಪರಿಶ್ರಮವೇ ಕಾರಣ” ಎಂದರು.
“ಜಗತ್ತು ಕೊರೊನಾದಿಂದ ತತ್ತರಿಸಿ ಹೋದಂತಹ ಸಂದರ್ಭದಲ್ಲಿ ಅತ್ಯಂತ ಸಮರ್ಥವಾಗಿ ಎದುರಿಸಿರುವ ದೇಶ ನಮ್ಮದು. 30 ಕೋಟಿ ಜನ ಸಂಖ್ಯೆಯಿದ್ದು ಮುಂದುವರಿದ ರಾಷ್ಟ್ರ ಎಂದು ಅಮೆರಿಕಾ ಕರೆಸಿಕೊಳ್ಳುತ್ತದೆ. ಆದರೆ 140 ಕೋಟಿ ಜನ ಸಂಖ್ಯೆ ಇದ್ದು, ಕೊರೋನಾ ಲಾಕ್‌ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ಸಮರ್ಥವಾದ ಆಡಳಿತ ಕೊಟ್ಟು, ನೇತೃತ್ವ ವಹಿಸಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಕಾರಣ” ಎಂದರು.
ಇದನ್ನೂ ಓದಿ: Weekend With Ramesh: ಮಾರ್ಚ್ 25ರಿಂದ ʻವೀಕೆಂಡ್ ವಿತ್ ರಮೇಶ್’; ಮೊದಲ ಗೆಸ್ಟ್ ಮೋಹಕ ತಾರೆ ರಮ್ಯಾ?
“ಸೈನಿಕರ ಸಾಧನೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ನಮ್ಮ ದೇಶದ ಸೈನಿಕರ ಶೌರ್ಯದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ, ಚೀನಾದಂತಹ ದೇಶಗಳು ಭಾರತದತ್ತ ತಲೆ ಹಾಕಿ ನಿದ್ರಿಸುವ ಧೈರ್ಯವನ್ನೂ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಪುಲ್ವಾಮಾ, ಏರ್‌ಸ್ಟ್ರೈಕ್ ದಾಳಿಗಳನ್ನು ನೋಡಿದಾಗ ಭಾರತದಲ್ಲಿ ಯಾರೇ ಭಯೋತ್ಪಾದಕ ಕೃತ್ಯವನ್ನು ನಡೆಸಿದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡಲು ನಮ್ಮ ದೇಶದ ಸೈನಿಕರು ಸನ್ನದ್ಧರಾಗಿದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿವೆ. ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಇಡೀ ದೇಶ ಸಾಕಷ್ಟು ಮುಂದುವರಿದಿದೆ” ಎಂದು ಹೇಳಿದರು.
ಇದನ್ನೂ ಓದಿ: Karnataka Elections : ಈಗಲೂ ಹೇಳುತ್ತೇನೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ; ಈಶ್ವರಪ್ಪ
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ಜಗತ್ತು ನೋಡುವ ದೃಷ್ಟಿಕೋನ ಬದಲಾಗಿದ್ದು, ಜಿ20 ದೇಶದ ನೇತೃತ್ವ ವಹಿಸಲು ಭಾರತವನ್ನು ಸೂಚಿಸುವಷ್ಟರ ಮಟ್ಟಿಗೆ ಭಾರತ ಪ್ರಬಲವಾಗಿ ಬೆಳೆದಿದೆ. ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿಯಾದ ಮೇಲೆ ನಮಗೆ ನಾವು ಯಾರು, ನಮ್ಮ ಶಕ್ತಿ, ಸಾಮರ್ಥ್ಯ ಏನು ಎನ್ನುವುದರ ಅರಿವಾಗುತ್ತಿದೆ. ಯಾವ ಕ್ಷೇತ್ರವನ್ನು ತೆಗೆದುಕೊಂಡರೂ ಹೊಸದಾದ ದಾಖಲೆಯನ್ನು ಬರೆಯುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಹಾಕುತ್ತಿದೆ. ಗುಡ್ಡಗಾಡಿನಲ್ಲಿ ಜೀವನ ನಡೆಸುತ್ತಿದ್ದಂತಹ ಮಹಿಳೆ ದ್ರೌಪದಿ ಮುರ್ಮು ದೇಶದ ರಾಷ್ಟ್ರಪತಿಯಾಗಿದ್ದಾರೆ. ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಒಬ್ಬ ಯುವಕ ದೇಶದ ಪ್ರಧಾನಿಯಾಗುತ್ತಾನೆ ಎಂದರೆ ನಮ್ಮ ದೇಶದ ಸಂಸದೀಯ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಡಲು ಸಾಧ್ಯವಾಗಿದೆ” ಎಂದರು.
ಇದನ್ನೂ ಓದಿ: Rain Alert: ಮುಂದಿನ 3 ದಿನ ದೇಶಾದ್ಯಂತ ಭಾರಿ ಮಳೆ, ಈಗಾಗಲೇ 10 ಜನ ಸಾವು, ಕಟಾವು ಬೇಡ ಎಂದ ಹವಾಮಾನ ಇಲಾಖೆ
ಉತ್ತರ ಕನ್ನಡ
Karnataka Elections : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್‌ವೈ ಗೋಪಾಲಕೃಷ್ಣ; ಕಾಂಗ್ರೆಸ್ ಸೇರಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ!
ಕೂಡ್ಲಿ ಬಿಜೆಪಿ ಶಾಸಕ ಎನ್.ವೈ ಗೋಪಾಲಕೃಷ್ಣ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹಾಗಿದ್ದರೆ ಮೊಳಕಾಲ್ಮುರು ಕ್ಷೇತ್ರದಿಂದ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುತ್ತಾರಾ?
ಶಿರಸಿ/ವಿಜಯನಗರ: ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ (Karnataka Elections) ರಾಜೀನಾಮೆ ನೀಡಿದ್ದು, ಅದರ ಬೆನ್ನಿಗೇ ರಾಜಕೀಯ ನಿವೃತ್ತಿಯ ಘೋಷಣೆಯನ್ನು ಮಾಡಿದ್ದಾರೆ. ತಾನು ಯಾವುದೇ ಪಕ್ಷ ಸೇರುವುದಿಲ್ಲ, ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದರು.
ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿರಸಿಯ ಅವರ ನಿವಾಸದಲ್ಲಿ ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್ ಸೇರುವ ಮತ್ತು ಮೊಳಕಾಲ್ಮುರು ಕ್ಷೇತ್ರದಿಂದ ಅಭ್ಯರ್ಥಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆದರು. ಮಾತ್ರವಲ್ಲ, ತಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಪ್ರಕಟಿಸಿದರು.
ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ನಾನು ಯಾವ ಪಕ್ಷವನ್ನೂ ಸೇರೊಲ್ಲ, ರಾಜಕೀಯದಿಂದಲೇ ದೂರವಿರುತ್ತೇನೆ ಎಂದು ಹೇಳಿದರು. ಆದರೆ ಈ ಬಾರಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಅವರು ಸೂಚ್ಯವಾಗಿ ಹೇಳಿದ್ದಾರೆ.
ʻʻನನಗೆ ವಯಸ್ಸಾಗಿದೆ. ಕ್ಷೇತ್ರದ ಜನರು ಬೇರೆಯವರಿಗೆ ನೀಡಿ ಎನ್ನುತ್ತಿದ್ದಾರೆ. ಜೊತೆಗೆ ಮಕ್ಕಳು ನಮಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ.ʼʼ ಎಂದು ಎನ್.ವೈ ಗೋಪಾಲಕೃಷ್ಣ ಹೇಳಿದರು.
ಮಂತ್ರಿ ಸ್ಥಾನ ನೀಡದ ಬಗ್ಗೆ ಬೇಸರ
ಆರು ಬಾರಿ ಗೆಲುವು ಸಾಧಿಸಿದರೂ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಬಗ್ಗೆ ಎನ್‌ವೈ ಗೋಪಾಲಕೃಷ್ಣ ಅವರಿಗೆ ಬೇಸರ ಇರುವುದು ಸ್ಪಷ್ಟವಾಗಿದೆ. ʻʻನಾಲ್ಕು ಬಾರಿ ಗೆದ್ದವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಆದರೆ ನಾನು ಆರು ಬಾರಿ ಶಾಸಕನಾದರೂ ಮಂತ್ರಿ ಸ್ಥಾನ ನೀಡಿಲ್ಲ. ಬಿಜೆಪಿಯೂ ನೀಡಿಲ್ಲ. ಕಾಂಗ್ರೆಸ್ ಸಹ ನೀಡಿಲ್ಲ. ಇದಕ್ಕೆ ಅಸಮಧಾನವಿದೆʼʼ ಎಮದು ಹೇಳಿದರು.
ʻʻನನಗೆ ಈಗ 73 ವರ್ಷ. ವಯಸ್ಸಾದ ಕಾರಣಕ್ಕೆ, ಆರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೂ ಸೇರೋದಿಲ್ಲ. ಅದಕ್ಕೆ ರಾಜಕೀಯದಿಂದ ದೂರವಿರುತ್ತೇನೆ. ರಾಜಕೀಯ ನಿವೃತ್ತಿ ಪಡೆಯಲೆಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಿದ್ದರೆ ಅವರು ಕರೆಯುವುದು, ಇವರು ಕರೆಯುವ ಗೊಂದಲ ಉಂಟಾಗುತ್ತದೆ. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದೆಲ್ಲ ಸುದ್ದಿಯಾಗಿದೆ. ಆದರೆ, ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲʼʼ ಎಂದಿದ್ದಾರೆ.
ಹಾಗಿದ್ದರೆ ಮುಂದಿನ ಕಥೆ ಏನು?
ಇದುವರೆಗಿನ ಮಾಹಿತಿ ಪ್ರಕಾರ ಎನ್‌ವೈ ಗೋಪಾಲಕೃಷ್ಣ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಸ್ವತಃ ಗೋಪಾಲಕೃಷ್ಣ ಅವರೇ ಬೇರೆ ಪಕ್ಷ ಸೇರುವ, ಸ್ಪರ್ಧಿಸುವ ಸಾಧ್ಯತೆಯನ್ನು ನಿರಾಕರಿಸಿರುವುದರಿಂದ ಮುಂದೇನು ಎಂಬ ಕುತೂಹಲ ಮೂಡಿದೆ. ಒಂದು ಸಾಧ್ಯತೆಯ ಪ್ರಕಾರ, ಎನ್.ವೈ. ಗೋಪಾಲಕೃಷ್ಣ ಅವರ ಪುತ್ರ ಮೊಳಕಾಲ್ಮುರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಅದಕ್ಕಾಗಿಯೇ ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಸ್ಪಷ್ಟ.
ಆರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು
ಎನ್. ಯಲ್ಲಪ್ಪ ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮುರುವಿನಿಂದ (1993ರಿಂದ 2013) ಶಾಸಕರಾಗಿದ್ದು, 2014ರಲ್ಲಿ ಕಾಂಗ್ರೆಸ್‌ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ 2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಕೂಡ್ಲಿಗಿಯಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ : Karnataka Elections : ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಕಾಂಗ್ರೆಸ್‌ಗೆ
ಉತ್ತರ ಕನ್ನಡ
Joida News: ಸುಪಾ ಅಣೆಕಟ್ಟೆಯಲ್ಲಿ ಹೆಜ್ಜೇನು ಗೂಡು: ವಿಷ ಸಿಂಪಡಣೆಯಿಂದ ಸತ್ತಿರುವ ಜೇನುಹುಳಗಳು
Joida News: ಜೇನು ಈ ಭೂಮಿಯ ಮೇಲೆ ಇದ್ದರೆ ಪರಾಗ ಸ್ಪರ್ಶ ಕ್ರಿಯೆ ನಡೆದು ನಮ್ಮ ತೋಟದ ಬೆಳೆಗಳೂ ಸೇರಿದಂತೆ ಕಾಡಿನ ಬೆಳೆವಣಿಗೆಗೆ ಅನುಕೂಲ ಆಗುತ್ತದೆ. ಒಂದು ವೇಳೆ ಅಣೆಕಟ್ಟೆ ಮೇಲೆ ಕಟ್ಟಿರುವ ಜೇನುಗೂಡನ್ನು ರಾಸಾಯನಿಕ ಸಿಂಪಡಣೆ ಮಾಡಿ ಕೊಂದಿದ್ದರೆ ಅದು ಅಕ್ಷಮ್ಯ. ಈ ರೀತಿ ಮಾಡಬಾರದು ಎಂದು ಪರಿಸರ ತಜ್ಞ ಶಿವಾನಂದ ಕಳವೆ ಪ್ರತಿಕ್ರಿಯೆ ನೀಡಿದ್ದಾರೆ.
ಜೋಯಿಡಾ: ತಾಲೂಕಿನ ಕಾಳಿ ನದಿಯ (Kali River) ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಾರ್ನ್ ಬಿಲ್ ಸಂರಕ್ಷಿತ ಪರಿಸರ ಸೂಕ್ಷ್ಮ ಪ್ರದೇಶದ ಪಕ್ಕದಲ್ಲಿಯೇ ಜೇನು ಗೂಡಿಗೆ ರಾಸಾಯನಿಕ ವಿಷ ಸಿಂಪಡಿಸಿ ಜೇನು ಕುಟುಂಬವನ್ನೇ ನಾಶ ಮಾಡುವ ಕಾರ್ಯವು ಕರ್ನಾಟಕ ವಿದ್ಯುತ್ ನಿಗಮದಿಂದ ನಡೆಯುತ್ತಿದೆ. ಇದನ್ನು ಗಮನಿಸಬೇಕಾದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮಾತ್ರ ಈ ಬಗ್ಗೆ ಯಾವುದೇ ಗಮನ ನೀಡದೆ ನಿರ್ಲಕ್ಷ್ಯ ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ ಎನ್ನುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಒಂದೊಂದು ಕಟ್ಟಡದ ಮೇಲೆ 50ರಿಂದ 200ರಷ್ಟು ಸಂಖ್ಯೆಯಲ್ಲಿ ವರ್ಷಕ್ಕೆ ಎರಡು ಬಾರಿ ಹೆಜ್ಜೇನು ಬಂದು ಇಲ್ಲಿ ಜೇನುಗೂಡು ಕಟ್ಟುತ್ತವೆ. ಪ್ರತಿ ವರ್ಷ ಕರ್ನಾಟಕ ವಿದ್ಯುತ್ ನಿಗಮದಿಂದ ಕಾಳಿ ಜಲ ವಿದ್ಯುತ್ ಯೋಜನೆಯ ಸುಪಾ ಜಲಾಶಯ, ಪವರ್ ಹೌಸ್, ಬೊಮ್ಮನಳ್ಳಿ ಜಲಾಶಯ, ಅಂಬಿಕಾ ನಗರ ಪವರ್ ಹೌಸ್‌ಗಳನ್ನು ನಿರ್ವಹಣೆ ಮಾಡಲು ಟೆಂಡರ್ ನೀಡಲಾಗುತ್ತದೆ. ಟೆಂಡರ್ ಪಡೆದ ಗುತ್ತಿಗೆದಾರರು ಇಲ್ಲಿ ನಿರ್ವಹಣೆ ಮಾಡುವುದರ ಜತೆಗೆ ಕಡಿಮೆ ಖರ್ಚಿನಲ್ಲಿ ಈ ಜೇನುಗಳನ್ನು ಯಾವುದೋ ವಿಷ ಸಿಂಪಡಿಸಿ ಸಂಪೂರ್ಣವಾಗಿ ಸಾಯಿಸಿ ಇಡೀ ಜೇನು ಸಂಕುಲವನ್ನೇ ನಾಶ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಇದು ವನ್ಯ ಜೀವಿ ಕಾನೂನು ಅಡಿ ಕೂಡ ಅಪರಾಧವಾಗಿದೆ.
ಇದನ್ನೂ ಓದಿ: KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಜೇನು ನೊಣಗಳು ಕೂಡ ಪರಿಸರ ವ್ಯವಸ್ಥೆಯ ಒಂದು ಭಾಗ. ಸುಪಾ ಡ್ಯಾಂ, ಜಲ ವಿದ್ಯುತ್ ಕಟ್ಟಡ, ಬೊಮ್ಮನಳ್ಳಿ ಜಲಾಶಯ, ಅಂಬಿಕಾ ನಗರ ಪವರ್ ಹೌಸ್ ಇದೆಲ್ಲ ಈ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ ಪರಿಸರ ವ್ಯವಸ್ಥೆಯ ಒಳಗೆ ಇದೆ. ಜೇನು ನೊಣಗಳು ಈ ಪ್ರದೇಶದ ಎಲ್ಲ ಮರಗಳ ಪರಾಗ ಸ್ಪರ್ಶ ನಡೆಸಲು ಅತಿ ಅಗತ್ಯ. ಈ ಜೇನು ಹುಳಗಳನ್ನು ಯಾವುದೇ ವಿಷ ಸಿಂಪಡಿಸಿ ಸಾಯಿಸುವ ಕಾರ್ಯ ಮಾಡಬಾರದು. ಈ ಜೇನು ತೆಗೆಯಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಸ್ಥಳಿಯ ಜನರಿಗೆ ಅಥವಾ ಗ್ರಾಮಾರಣ್ಯ ಸಮಿತಿಗೆ ಈ ಜೇನುಗಳನ್ನು ತೆಗೆಯಲು ಅವಕಾಶ ನೀಡುವ ಕಾರ್ಯ ಮಾಡಿದರೆ ಈ ಜೇನು ಸಂತತಿ ಉಳಿಯುವುದು. ಇಲ್ಲದಿದ್ದಲ್ಲಿ ಜೇನು ಸಂಕುಲ ಕೂಡ ವಿನಾಶದ ಅಂಚಿಗೆ ತಲುಪಲಿದೆ ಎಂಬ ಆತಂಕ ವ್ಯಕ್ತವಾಗಿದೆ.
“ಪ್ರತಿ ವರ್ಷ ಸುಪಾ ಡ್ಯಾಂ ಮತ್ತು ಪವರ್ ಹೌಸ್ ಕಟ್ಟಡ ನಿರ್ವಹಣೆ ಮಾಡಲು ಟೆಂಡರ್ ಕೊಡುತ್ತೇವೆ. ಅವರೇ ಈ ಜೇನುಗೂಡುಗಳನ್ನು, ಜೇನು ಹುಳಗಳನ್ನು ಹೇಗೆ ತೆಗೆಯುತ್ತಾರೆ ಎಂದು ಕೇಳಿ ಹೇಳುತ್ತೇನೆ” ಎಂದು ಕೆಪಿಸಿ ಚೀಫ್ ಎಂಜಿನಿಯರ್ ನಿಂಗಣ್ಣ ಹೇಳಿದ್ದಾರೆ.
ಇದನ್ನೂ ಓದಿ: Amritpal Singh: ಪೊಲೀಸರಿಗೆ ನಾನು ಶರಣಾಗಲ್ಲ; ಯುಟ್ಯೂಬ್ ಲೈವ್‌ನಲ್ಲಿ ಅಮೃತ್ ಪಾಲ್ ಸಿಂಗ್ ಹೇಳಿಕೆ
“ಕಾಡಿನ ಹೆಜ್ಜೇನುಗಳು ಅಣೆಕಟ್ಟು ಮತ್ತು ಇತರ ಕಟ್ಟಡಗಳಿಗೆ ಬಂದಿದ್ದಾಗ ವಿಷ ಸಿಂಪಡಿಸಿ ಕೊಲ್ಲುವುದು ಅಕ್ಷಮ್ಯ ಅಪರಾಧ. ಇದು ವನ್ಯಜೀವಿ ಕಾನೂನಿನ ಪ್ರಕಾರ ತಪ್ಪು ಕ್ರಮ ಆಗುತ್ತದೆ. ಜೇನು ಈ ಭೂಮಿಯ ಮೇಲೆ ಇದ್ದರೆ, ಕಾಡಿನಲ್ಲಿ ಇದ್ದರೆ ಮಾತ್ರ ಪರಾಗಸ್ಪರ್ಶ ಕ್ರಿಯೆ ನಡೆದು ನಮ್ಮ ತೋಟದ ಬೆಳೆಗೂ ಸೇರಿದಂತೆ ಕಾಡಿನ ಬೆಳೆವಣಿಗೆಗೂ ಅನುಕೂಲ ಆಗುತ್ತದೆ. ಜೇನಿನ ಮೇಲೆ ದ್ವೇಷ ಸಾಧಿಸುವ ರೀತಿ ಸಾಯಿಸುತ್ತಿರುವುದು ಜೇನಿನ ಮೇಲೆ ಮಾಡುತ್ತಿರುವ ದ್ರೋಹ. ತಕ್ಷಣ ಇದನ್ನು ನಿಲ್ಲಿಸಬೇಕು. ಈ ರೀತಿ ತಪ್ಪು ನಡೆದರೆ ಇವರ ಮೇಲೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನನ್ನ ನಿಲುವು” ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದ್ದಾರೆ.
ಉತ್ತರ ಕನ್ನಡ
Karwar News: ಕಾರವಾರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ
Karwar News: 2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಂಡು ಜನ ಮೆಚ್ಚುಗೆ ಗಳಿಸಿದ ಪಿಎಸ್‌ಐ ನಾಗಪ್ಪ ಭೋವಿ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಕಾರವಾರ: ರಾಜ್ಯದ 42 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ (Chief Minister’s Medal) ಘೋಷಿಸಲಾಗಿದ್ದು, ನಗರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿ ಅವರನ್ನೂ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಎಂ.ಎ ಕನ್ನಡ ವ್ಯಾಸಂಗ ಮಾಡಿರುವ ನಾಗಪ್ಪ, ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಜಿಲ್ಲೆಯ ಪಾಮನಕಲ್ಲೂರಿನವರು. 2015ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾದ ಅವರು, ಕಲಬುರಗಿಯ ಕುಂಚಾವರ, ಯಡ್ರಾಮಿ, ದಾಂಡೇಲಿ ನಗರ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಕಾರವಾರ ನಗರ ಸಂಚಾರ ಠಾಣೆಯ ಪಿಎಸ್‌ಐ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಂಡು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 10,000ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, ಅಂದಾಜು 52 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ, ಹಿಟ್ ಅಂಡ್ ರನ್ ಪ್ರಕರಣಗಳ ಪತ್ತೆ, ನಗರದಲ್ಲಿ ವಾಹನಗಳ ನೂತನ ಪಾರ್ಕಿಂಗ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅವರು ಪ್ರಯತ್ನ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಿಬ್ಬಂದಿಗಳಿಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ 13 ಸಂಚಾರ ಪೊಲೀಸ್ ಚೌಕಿಗಳು ಮತ್ತು 55 ಬ್ಯಾರಿಕೇಡ್‌ಗಳ ನಿರ್ಮಾಣ ಮತ್ತು ಠಾಣಾ ಮರು ನವೀಕರಣ ಕಾರ್ಯ, ರಸ್ತೆ ಅಪಘಾತಗಳನ್ನು ತಡೆಯಲು ವಿನೂತನ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಏಕ ಗವಾಕ್ಷಿ ಯೋಜನೆಯಡಿಯಲ್ಲಿ ಸಾರ್ವಜನಿಕ ವಾಹನ ದಾಖಲೆಗಳ ತಿದ್ದುಪಡಿ ಅಭಿಯಾನ ನಡೆಸಿದ್ದರು.
ಇದನ್ನೂ ಓದಿ: ವೃತ್ತಿಪರ ಭಿಕ್ಷುಕನಾಗಿದ್ದರೂ ಹೆಂಡತಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್
‘ಹೆಲ್ಮೆಟ್ ಧರಿಸಿ – ಜೀವ ಉಳಿಸಿ’ ಜಾಗೃತಿ ಜಾಥಾ ಅಭಿಯಾನ, ಶಾಲಾ- ಕಾಲೇಜುಗಳಲ್ಲಿ ರಸ್ತೆ ಅಪಘಾತ ತಡೆ ಕುರಿತು ವಿಶೇಷ ಜಾಗೃತಿ ಉಪನ್ಯಾಸ, ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ಉಪನ್ಯಾಸ, ‘ನನ್ನನ್ನು ಕ್ಷಮಿಸಿ’ ಹೆಲ್ಮೆಟ್ ಜಾಗೃತಿ ಅಭಿಯಾನ, ‘ರಸ್ತೆ ಅಪಘಾತ ಮುಕ್ತ ಭಾರತಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಿ’ ಸಹಿ ಸಂಗ್ರಹ ಅಭಿಯಾನ ಮತ್ತು ಜಾಗೃತಿ ಜಾಥಾ, ಆಟೋ/ಲಘು/ಭಾರಿ/ಆಂಬುಲೆನ್ಸ್/ ಟೂರ್ಸ್ ಮತ್ತು ಟ್ರಾವೆಲ್ಸ್/ಸಾರಿಗೆ ಇಲಾಖೆ/ ವಾಹನ ಚಾಲಕರಿಗೆ ರಸ್ತೆ ಅಪಘಾತಗಳ ಜಾಗೃತಿ ಕಾರ್ಯಕ್ರಮ, ಆಟೋ ಚಾಲಕರಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ, ‘ರನ್ ಫಾರ್ ರೋಡ್ ಸೇಫ್ಟಿ’ ಜಾಗೃತಿ ಅಭಿಯಾನ ಹೀಗೆ ರಸ್ತೆ ಅಪಘಾತ ತಡೆ ಮತ್ತು ಸಾರ್ವಜನಿಕ ಸಂಚಾರ ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷ ಮತ್ತು ಪ್ರಾಮಾಣಿಕ ಪ್ರಯತ್ನ ನಡೆಸಿರುವ ಅವರು ಈ ಸಾಲಿನ ಸಿಎಂ ಮೆಡಲ್‌ಗೆ ಆಯ್ಕೆಯಾಗಿದ್ದಾರೆ.
ಕೇವಲ ಪೊಲೀಸ್ ಆಗಿರದೆ, ಸಾಹಿತ್ಯ ಸೇವೆಯಲ್ಲೂ ತೊಡಗಿಸಿಕೊಂಡಿರುವ ನಾಗಪ್ಪ, ಪುಸ್ತಕಗಳನ್ನೂ ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಗೂ ಅನೇಕ ಪ್ರಶಸ್ತಿಗಳು ದೊರೆತಿವೆ. ಏಪ್ರಿಲ್ 2ರ ಪೊಲೀಸ್ ಧ್ವಜ ದಿನಾಚರಣೆಯ ದಿನದಂದು ಸಿಎಂ ಮೆಡಲ್ ಪ್ರದಾನ ಮಾಡಲಾಗುತ್ತದೆ.
ಉತ್ತರ ಕನ್ನಡ
Karnataka Election 2023: ಜಿಲ್ಲಾದ್ಯಂತ 25 ಚೆಕ್‌ಪೋಸ್ಟ್ ನಿರ್ಮಾಣ; ಅಕ್ರಮ ಸಾಗಾಟಗಳ ಮೇಲೆ ಹೆಚ್ಚಿನ ನಿಗಾ: ಪ್ರಭುಲಿಂಗ ಕವಳಿಕಟ್ಟಿ
Karnataka Election 2023: ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾಮಗಾರಿಗಳ ಕೆಲಸದ ಮೇಲೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.
ಕಾರವಾರ: “ಚುನಾವಣಾ ನೀತಿ ಸಂಹಿತೆ (Karnataka Election 2023) ಜಾರಿಗೆ ಎರಡು ವಾರಗಳ ಮೊದಲೇ ಪ್ರಾಥಮಿಕ ಹಂತದ ಚುನಾವಣಾ ಕಾರ್ಯಗಳನ್ನು ಜಿಲ್ಲಾಡಳಿತ ಆರಂಭಿಸಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಸುಮಾರು 69 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ” ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಈಗಾಗಲೇ ಜಿಲ್ಲಾದ್ಯಂತ ಇದ್ದ ರಾಜಕೀಯ ವ್ಯಕ್ತಿಗಳ ಬ್ಯಾನರ್, ಬಂಟಿಂಗ್ಸ್‌ಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜಕೀಯ ವ್ಯಕ್ತಿಗಳ ಫೋಟೊಗಳಿರುವ ಬ್ಯಾನರ್‌ಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳಿಂದ ಅದನ್ನು ಕೂಡಲೇ ತೆರವುಗೊಳಿಸಲಾಗುವುದು” ಎಂದರು.
ಇದನ್ನೂ ಓದಿ: Rajkummar Rao: ಶಾರುಖ್ ಖಾನ್ ವ್ಯಕ್ತಿತ್ವ ಕೊಂಡಾಡಿದ ನಟ ರಾಜಕುಮಾರ್ ರಾವ್, ತಮ್ಮ ತಾಯಿಯ ಬಗ್ಗೆ ಹೇಳಿದ್ದೇನು?
ಈಗಾಗಲೇ ಜಿಲ್ಲಾದ್ಯಂತ 25 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು ಚುನಾವಣೆಯಲ್ಲಿ ಆಮಿಷ ಒಡ್ಡುವ ನಿಟ್ಟಿನಲ್ಲಿ ಹಣ ವಸ್ತುಗಳ ಅಕ್ರಮ ಸಾಗಾಟ ನಡೆಯುತ್ತದೆ. ಹೀಗಾಗಿ ವಾಹನಗಳ ಮೇಲೆ ನಿಗಾವಹಿಸಲಾಗಿದೆ. ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ 40 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪ್ರಕರಣಗಳಲ್ಲಿ ಒಟ್ಟು 10 ಲಕ್ಷ ರೂ. ದಾಖಲೆರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ದಾಖಲೆ ರಹಿತವಾಗಿ ಸಾಗಿಸಲಾಗುತ್ತಿದ್ದ 7.5 ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಉಳಿದಂತೆ ಗಾಂಜಾ, ಚರಸ್‌ನಂತಹ ಮಾದಕ ವಸ್ತುಗಳನ್ನೂ ಭಾರೀ ಪ್ರಮಾಣದಲ್ಲಿ ಪತ್ತೆ ಹಚ್ಚಿದ್ದು ಒಟ್ಟು 69 ಲಕ್ಷ ರೂ. ಮೌಲ್ಯದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ಈಗಾಗಲೇ ಜಪ್ತಿಪಡಿಸಿಕೊಳ್ಳಲಾಗಿದೆ” ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
“ಸರ್ಕಾರದಿಂದ ಜಾರಿಯಾದ ಕಾಮಗಾರಿಗಳಲ್ಲಿ ಆರಂಭವಾಗಿರುವ, ಅನುಮೋದನೆಯಾಗಿ ಪ್ರಾರಂಭವಾಗದ ಹಾಗೂ ಅನುಮೋದನೆಯಾಗದ ಕಾಮಗಾರಿಗಳ ಪಟ್ಟಿಯನ್ನು ಮಾಡಲಾಗುತ್ತಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾಮಗಾರಿಗಳ ಕೆಲಸದ ಮೇಲೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಮಾದ್ಯಮಗಳ ಮೇಲೂ ನಿಗಾ ಇರಿಸಲಾಗುತ್ತಿದ್ದು ಪ್ರಕಟವಾಗುವ ಜಾಹೀರಾತುಗಳು ಹಾಗೂ ಸುದ್ದಿಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವಂತೆ ಇದ್ದಲ್ಲಿ ಅಂಥವುಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು” ಎಂದರು.
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ