ಕರ್ನಾಟಕ
KCET 2023 Result: ಸಿಇಟಿ ಫಲಿತಾಂಶ ಪ್ರಕಟ, ಲೈವ್ ಮಾಹಿತಿ ಇಲ್ಲಿದೆ ನೋಡಿ
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶ ಪ್ರಕಟವಾಗಿದ್ದು, ಅದರ ಲೈವ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: KCET 2023 Result : ಬೆಂಗಳೂರಿನ ವಿಘ್ನೇಶ್ ನಟರಾಜ್ ಕುಮಾರ್‌ಗೆ ಮೊದಲ ರ‍್ಯಾಂಕ್
ತುಮಕೂರು
Tumkur News: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ ಪಾವಗಡದಲ್ಲಿ ಪ್ರತಿಭಟನೆ
Tumkur News: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಪಾವಗಡ ತಾಲೂಕು ಸಮಿತಿ ವತಿಯಿಂದ ಪಾವಗಡದ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪಾವಗಡ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ (Building Construction Labors) ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಪಾವಗಡ ತಾಲೂಕು ಸಮಿತಿ ವತಿಯಿಂದ ಇಲ್ಲಿನ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ (Protest) ನಡೆಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಭಟನಾ ಮೆರವಣಿಗೆ ಮೂಲಕ ಕೆಬಿ ಕಚೇರಿ ಮುಂಭಾಗದ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಾರ್ಮಿಕ ಇಲಾಖೆ ಅಧಿಕಾರಿ ರವೋಫ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಪಾವಗಡ ಸಿ.ಐ.ಟಿ.ಯು. ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಕಾನೂನು ಪ್ರಕಾರ ಪ್ರತಿವರ್ಷ ನೀಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಿಲ್ಲ. 2022-23ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಈವರೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ: Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ
2023-24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ, ಅರ್ಧ ವರ್ಷ ಕಳೆಯುತ್ತಿದ್ದರೂ ಈವರೆಗೂ ಸಹಾಯಧನಕ್ಕಾಗಿ ಅರ್ಜಿಯನ್ನೇ ಆಹ್ವಾನಿಸಿಲ್ಲ. ಹಾಗೆಯೇ 2021-22ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು ಒಂದೂವರೆ ಲಕ್ಷ ಜನ ಕಾರ್ಮಿಕರಿಗೆ ಸಹಾಯಧನ ಕೊಡದೇ, ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಷರತ್ತುಗಳ ಕಾಯ್ದೆ – 1996 ರ ನಿಯಮ 45ರ ಅಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಇಬ್ಬರು ಮಕ್ಕಳಿಗೆ ‘ಕಲಿಕಾ ಭಾಗ್ಯ’ ಯೋಜನೆಯಡಿ ಶೈಕ್ಷಣಿಕ ಸಹಾಯಧನ ನೀಡಬೇಕೆಂದು ಕಾನೂನು ಹೇಳುತ್ತದೆ. ನೋಂದಾಯಿತ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಆದರೆ ಇದೀಗ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಲು ‘ಹಣದ ಕೊರತೆ ಇದೆ’ ಎಂದು ಹೇಳಲಾಗುತ್ತಿದೆ ಎಂದು ದೂರಿದರು.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಪದಾಧಿಕಾರಿಗಳಾದ ರಾಮಾಂಜಿನಪ್ಪ, ಮಮತ, ನಾಗರಾಜ್ ಹಾಗೂ ದುರ್ಗಪ್ಪ, ಶಿವಗಂಗಮ್ಮ, ಕೆಂಚಮ್ಮ, ನವಿನ್ ಕುಮಾರ್, ಜಬಿವುಲ್ಲಾ, ಈಶ್ವರಪ್ಪ, ಚಾಂದ್ ಬಾಷ, ಮಲೇಶಪ್ಪ, ಕಾಮಕ್ಕ, ಹನಮಂತರಾಯಪ್ಪ, ಕಮಲಮ್ಮ, ದೇವಿ, ನಂಜಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.
ಉತ್ತರ ಕನ್ನಡ
Uttara Kannada News: ಮಠಕ್ಕೆ ಗುರು ಎಷ್ಟು ಮುಖ್ಯವೋ ಸಮಾಜಕ್ಕೆ ಗುರಿಕ್ಕಾರರು ಅಷ್ಟೇ ಮುಖ್ಯ: ಶ್ರೀರಾಘವೇಶ್ವರಭಾರತೀ ಸ್ವಾಮೀಜಿ
Uttara Kannada News: ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ಅಂಗವಾಗಿ ಗುರಿಕ್ಕಾರರ ಬೃಹತ್ ಸಮಾವೇಶ ಜರುಗಿತು.
ಗೋಕರ್ಣ: ಮಠದಲ್ಲಿ ಗುರುಗಳು ಹೇಗೆ ಮುಖ್ಯವೋ ಸಮಾಜದಲ್ಲಿ ಗುರಿಕ್ಕಾರರು ಅಷ್ಟೇ ಮುಖ್ಯ. ಗುರಿಕ್ಕಾರರು ಇಡೀ ಸಮಾಜ (Society) ವ್ಯವಸ್ಥೆಯ ಬೆನ್ನೆಲುಬು (Backbone) ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ತಿಳಿಸಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ಅಂಗವಾಗಿ ಆಯೋಜಿಸಿದ್ದ ಗುರಿಕ್ಕಾರರ ಬೃಹತ್ ಸಮಾವೇಶದಲ್ಲಿ ಶ್ರೀಸಂದೇಶ ನೀಡಿದ ಶ್ರೀಗಳು, “ರಾಮನಿಗೆ ಮುಖ್ಯಪ್ರಾಣನ ಸೇವೆ ಹೇಗೆ ಸಂದಿದೆಯೋ ಗುರಿಕ್ಕಾರರು ಸಮಾಜಕ್ಕೆ ಅಂಥ ಸೇವೆ ಸಲ್ಲಿಸಬೇಕು. ಆ ಸ್ಥಾನ ನೀಡುವ ಗೌರವ ದೊಡ್ಡದು. ಗುರಿಕ್ಕಾರ ಗೌರವದ ಜತೆಗೆ ಹಲವು ಜವಾಬ್ದಾರಿಗಳೂ ಹೆಗಲಿಗೇರುತ್ತವೆ” ಎಂದು ಕಿವಿಮಾತು ಹೇಳಿದರು.
ಸಮಾಜದಲ್ಲಿ ನಿಮಗಿಂತ ಶ್ರೀಮಂತರು ಅಥವಾ ಪ್ರಭಾವಿಗಳು ಇರಬಹುದು. ಆದರೆ ಸಮಾಜದಲ್ಲಿ ಗುರುಪೀಠ ಮಾತ್ರ ನಿಮಗಿಂತ ದೊಡ್ಡದು. ಇಡೀ ಸಮಾಜದ ಭಾವ ಗಮನಿಸಿ ಗುರುಪೀಠ ನಿಮ್ಮನ್ನು ನೇಮಕ ಮಾಡಿದೆ. ಇಡೀ ಪೀಠದ ಶಕ್ತಿ ನಿಮ್ಮ ಹಿಂದಿರುತ್ತದೆ. ಸಮಾಜಸೇವೆಗಾಗಿ ಆತ್ಮವಿಶ್ವಾಸದಿಂದ ಮುನ್ನುಗ್ಗಿ ಎಂದು ಕರೆ ನೀಡಿದರು.
ಸಮಾಜ ನೀಡುವ ಗೌರವಕ್ಕೆ ತಕ್ಕಂತೆ ನೀವು ಕೂಡಾ ಜವಾಬ್ದಾರಿಯುತವಾಗಿ ಕೆಲಸ ಮಾಡಿ, ಆ ಗೌರವ ಉಳಿಸಿಕೊಳ್ಳಬೇಕು. ಗುರುಗಳ, ಶ್ರೀರಾಮನ, ಸಮಾಜದ ಪ್ರತಿನಿಧಿಗಳು ನೀವು. ಇಡೀ ಶಿಷ್ಯಸಮಾಜದ ಅಭಿವ್ಯಕ್ತಿ ನೀವು. ಸಮಾಜದ ಎಲ್ಲರನ್ನೂ ಮಮತೆಯಿಂದ ಕಾಣಬೇಕು, ಕಾಳಜಿ ವಹಿಸಬೇಕು. ದಾರಿ ತಪ್ಪಿದರೆ ಎಚ್ಚರಿಸಿ ಅವರನ್ನು ಸರಿದಾರಿಗೆ ತರುವ ಕರ್ತವ್ಯ ನಿಮ್ಮದು ಎಂದು ಸೂಚಿಸಿದರು.
ಇದನ್ನೂ ಓದಿ: Indian Coast Guard: 290 ನಾವಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಅಪ್ಲೈ ದಿನಾಂಕ ವಿಸ್ತರಣೆ
ಸಂಘಟನೆಯನ್ನು ತಳಮಟ್ಟದಿಂದ ಬೆಳೆಸುವಲ್ಲಿ ನಿಮ್ಮ ಪಾತ್ರ ಅತ್ಯಂತ ದೊಡ್ಡದು. ಭಾವ ರಾಮಾಯಣದ ಮೂಲಕ ಗುರುಭಾವವನ್ನು ಪ್ರತಿಯೊಬ್ಬ ಶಿಷ್ಯರ ಮನೆಗೆ ತಲುಪಿಸುವ ರಾಯಭಾರಿಗಳು ನೀವು. ಸಮಾಜವನ್ನು ಸನ್ಮಾರ್ಗಕ್ಕೆ ಒಯ್ಯುವ ದೊಡ್ಡ ಅಭಿಯಾನ ನಿಮ್ಮಿಂದ ಆಗುತ್ತಿದೆ. ಇದು ಜ್ಞಾನ ಜಾಗರಣ. ನೀವು ಸಮಾಜದ ನೇತಾರರಾಗಿ ನಿಂತು ಬೇರು ಮಟ್ಟದಲ್ಲಿ ಸಂಘಟನೆಯನ್ನು ಬೆಳೆಸಬೇಕು ಎಂದು ಸಲಹೆ ಮಾಡಿದರು.
ಶ್ರೀರಾಮ ತನ್ನ ಸೇವೆ ಮಾಡಿದ ಕಪಿಸೇನೆಯನ್ನು ಕಾಪಾಡಿದಂತೆ ಶ್ರೀಸಂಸ್ಥಾನದವರ ಸಾಕ್ಷಾತ್ ಪ್ರತಿನಿಧಿಗಳಾದ ನಿಮ್ಮನ್ನು ಶ್ರೀಪೀಠ ರಕ್ಷಿಸುತ್ತದೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ನೀವು ಸಲ್ಲಿಸುತ್ತಿರುವ ಸೇವೆ ಅಮೂಲ್ಯ. ನಮ್ಮ ಸಂಘಟನೆ, ಶಿಸ್ತು, ಬದ್ಧತೆ, ಇಡೀ ಜಗತ್ತಿಗೆ ಮಾದರಿ. ಇದನ್ನು ಮತ್ತಷ್ಟು ಬಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಧರ್ಮಕರ್ಮ ವಿಭಾಗ ಸಿದ್ಧಪಡಿಸಿ, ಭಾರತಿ ಪ್ರಕಾಶನ ಹೊರತಂದ ಗುರಿಕ್ಕಾರರ ಗುರುಮಾರ್ಗ ಕೈಪಿಡಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ: Ganesh Chaturthi: 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್ ಕಂಪೆನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ಮುಳ್ಳೇರಿಯಾ ಮಂಡಲ ಪ್ರಧಾನ ಗುರಿಕ್ಕಾರ ಎಂ.ಜಿ.ಸತ್ಯನಾರಾಯಣ ಅವರು ಕೃತಿ ಬಗ್ಗೆ ಮಾತನಾಡಿದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಹವ್ಯಕ ಮಹಾಮಂಡಲದ ನಿಕಟಪೂರ್ವ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮೂಲೆ, ಮಂಡಲ ಪ್ರಧಾನ ಗುರಿಕ್ಕಾರರಾದ ಉದಯ ಕುಮಾರ್ ಖಂಡಿಗ, ಲಕ್ಷ್ಮೀನಾರಾಯಣ ಕೌಲಕೈ, ಸುಬ್ರಹ್ಮಣ್ಯ ಚಿಪ್ಲಿ, ಕೆ.ಎಸ್.ಮಂಜುನಾಥ ಭಟ್ಟ ಕೌಲಮನೆ, ಶಂಭು ಎಸ್.ಭಟ್ ಕಡತೋಕ, ಬಾಲ್ಯ ಶಂಕರನಾರಾಯಣ ಭಟ್, ಪ್ರಕಾಶ ಮಳಲಗದ್ದೆ, ಜೆಡ್ಡು ರಾಮಚಂದ್ರ ಭಟ್, ಮಹಾಮಂಡಲದ ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಪದಾಧಿಕಾರಿಗಳಾದ ಹೇರಂಬ ಶಾಸ್ತ್ರಿ, ಗಣೇಶ್ ಜೋಶಿ, ಕೇಶವಪ್ರಕಾಶ್ ಎಂ, ಗೀತಾ ಮಂಜಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.
ಶ್ರೀಮಠದ ಇತಿಹಾಸ, ಪರಂಪರೆ ಮಹತ್ವ ಹಾಗೂ ಗುರಿಕ್ಕಾರರ ಕರ್ತವ್ಯಗಳ ಬಗ್ಗೆ ವಿದ್ವಾನ್ ಸತ್ಯನಾರಾಯಣ ಶರ್ಮಾ ಮಾತನಾಡಿದರು. ಗುರಿಕ್ಕಾರರ ಸಮಾವೇಶದ ಅಂಗವಾಗಿ ಡಾ.ಗೌತಮ್ ಅವರಿಂದ ದಾನ ಧಾರಾ ಪ್ರಸ್ತುತಿ ನಡೆಯಿತು. ಶ್ರೀಸಂಸ್ಥಾನದವರು ಅನುಗ್ರಹಿಸುವ ಭಾವರಾಮಾಯಣದ ಎಂಟನೇ ಸಂಚಿಕೆಯನ್ನು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಲೋಕಾರ್ಪಣೆ ಮಾಡಿದರು. ಆರ್.ಎಸ್.ಹೆಗಡೆಯವರ ಆಯತನ ಕೃತಿಯ ಎರಡನೇ ಭಾಗವನ್ನು ಇದೇ ಸಂದರ್ಭದಲ್ಲಿ ಶ್ರೀಗಳು ಲೋಕಾರ್ಪಣೆ ಮಾಡಿದರು.
ಇದನ್ನೂ ಓದಿ: Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಮಂದಿ ಗುರಿಕ್ಕಾರರು, ಶ್ರೀಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಗುರಿಕ್ಕಾರರ ಯೋಗಕ್ಷೇಮವನ್ನು ಪ್ರಾರ್ಥಿಸಿ ಪರಮೇಶ್ವರ ಮಾರ್ಕಂಡೆ ನೇತೃತ್ವದಲ್ಲಿ ನವಗ್ರಹ ಹವನ, ಆಂಜನೇಯ ಹವನ ನಡೆಯಿತು. ಶ್ರೀಮಠದ ಧರ್ಮಕರ್ಮ ವಿಭಾಗದ ಸಂಯೋಜಕ ಕೇಶವ ಪ್ರಸಾದ್ ಕೂಟೇಲು, ಚಾತುರ್ಮಾಸ ಸಮಿತಿ ಅಧ್ಯಕ್ಷ ಯು.ಎಸ್.ಜಿ.ಭಟ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನ ಕುಮಾರ್ ಉಪಸ್ಥಿರಿದ್ದರು.
ಕರ್ನಾಟಕ
Bangalore Bandh : ಬೆಂಗಳೂರು ಬಂದ್ ಫಿಕ್ಸ್; ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಬಸ್ ಸಂಚಾರ ಡೌಟ್; ಏನಿರುತ್ತೆ? ಏನಿರಲ್ಲ?
Bangalore Bandh : ಮಂಗಳವಾರದ ಬೆಂಗಳೂರು ಬಂದ್‌ಗೆ ವೇದಿಕೆ ಸಿದ್ಧವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಹಾಗಿದ್ದರೆ ಬಂದ್ ವೇಳೆ ಏನಿರುತ್ತದೆ? ಏನಿರಲ್ಲ ಎಂಬುದರ ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ (Jala Samrakshana Samiti) ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಆದರೆ, ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಸೆ. 29ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಈ ಹಿಂದೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ.
ರೈತ ಸಂಘದ ಕುರುಬೂರು ಶಾಂತ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಹಲವಾರು ಸಂಘಟನೆಗಳ ಬೆಂಬಲದೊಂದಿಗೆ ಬೆಂಗಳೂರು ಬಂದ್ ನಡೆಯಲಿದೆ. ಬಂದ್‌ನಿಂದಾಗಿ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿಗಳು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ (Holiday announced for School and Colleges) ಘೋಷಿಸಿದ್ದಾರೆ. ಕಾಲೇಜುಗಳು ಮತ್ತು ವಿವಿಗಳು ನಿಗದಿ ಮಾಡಿದ್ದ ಪರೀಕ್ಷೆಗಳನ್ನು ಮುಂದೂಡಿವೆ (Exams Postponed).
ಈ ನಡುವೆ ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಬಿಎಂಟಿಸಿ ಮತ್ತು ಕರ್ನಾಟಕ ಸಾರಿಗೆ ಬಸ್‌ಗಳ ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆಗಳಿವೆ. ಯಾಕೆಂದರೆ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಬಂದ್‌ಗೆ ಬೆಂಬಲ ಘೋಷಿಸಿವೆ. ಆದರೆ ಮೆಟ್ರೋ ಸಂಚಾರ ಎಂದಿನಂತೆ ಇರುತ್ತದೆ.
ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ
ಕನ್ನಡ ಮತ್ತು ನೀರಿಗೆ ಸಂಬಂಧಿಸಿದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಕನ್ನಡ ರಕ್ಷಣಾ ವೇದಿಕೆ ಈ ಬಾರಿ ತಟಸ್ಥವಾಗಿ ಉಳಿದಿದೆ. ಸೆ. 26 ಅಥವಾ ಸೆ. 29 ಯಾವ ಬಂದ್‌ಗೂ ಬೆಂಬಲ ಕೊಡುವುದಿಲ್ಲ ಎಂದು ಅದು ಪ್ರಕಟಿಸಿದೆ. ಇದು ಬಂದ್ ಆಯೋಜಕರಿಗೆ ದೊಡ್ಡ ಹಿನ್ನಡೆಯಾಗಲಿದೆ.
ಹಲವು ಸಂಘಟನೆಗಳ ಬೆಂಬಲ ವಾಪಸ್
ಬೆಂಗಳೂರು ಬಂದ್, ಕರ್ನಾಟಕ ಬಂದ್ ಎರಡು ಬಂದ್ ಘೋಷಣೆಯಾಗಿದ್ದರಿಂದ ಕೆಲವು ಸಂಘಟನೆಗಳು ಸೆ. 26ರ ಬಂದ್‌ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ.
1. ಬೆಂಗಳೂರಿನ ಓಲಾ, ಊಬರ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಅವರು ತಾವು ಸೆ. 26ರ ಬದಲು ಸೆ. 29ರ ಬಂದ್ ಬೆಂಬಲಿಸುವುದಾಗಿ ಹೇಳಿದೆ.
2. ಬೆಂಗಳೂರಿನ ಆದರ್ಶ ಆಟೋ ಚಾಲಕರ ಯೂನಿಯನ್ ಕೂಡಾ ಸೆ. 26ರ ಬದಲು ಸೆ. 29ಕ್ಕೆ ಶಿಫ್ಟ್ ಆಗಿದೆ.
3. ಈ ಹಿಂದೆ ಸೆ. 26ರ ಬೆಂಗಳೂರು ಬಂದ್‌ಗೆ ಬೆಂಬಲ ಘೋಷಿಸಿದ್ದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ಈಗ ಸೆ. 29ರ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಇರುವುದಿಲ್ಲ ಅಂದಿದೆ ಸಂಘಟನೆ
ಸೆ. 26ರಂದು ನಡೆಯುವ ಬೆಂಗಳೂರು ಬಂದ್ ಗೆ ಬಿಎಂಟಿಸಿ ಹಾಗೂ KSRTC ನೌಕರರು ಬೆಂಬಲ ಕೊಡುತ್ತಾರೆ ಎಂದು ಕರ್ನಾಟಕ ಸಾರಿಗೆ ನಿಗಮಗಳ ನೌಕರರ ಕೂಟದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜ್ ಹೇಳಿಕೆ ನೀಡಿದ್ದಾರೆ. ನಾವು ಹಾಗೂ ಸಮಾನ ಮನಸ್ಕರ ವೇದಿಕೆ ಹಾಗೂ ಬಿಎಂಟಿಸಿ ನೌಕರರ ಸಂಘಗಳು ತೀರ್ಮಾನ ಮಾಡಿದ್ದೇವೆ. ಯಾವ ವಾಹನಗಳನ್ನು ರಸ್ತೆಗೆ ಇಳಿಸಬೇಡಿ ಅಂತ ನಾವು ಸೂಚನೆ ಕೊಟ್ಟಿದ್ದೇವೆ. ಈ ಹಿಂದೆಯೂ ನಾವು ಬೆಂಬಲ ಕೊಟ್ಟಿದ್ದೆವು, ನಾಳೆಯೂ ಬೆಂಬಲ ಕೊಡುತ್ತೇವೆ ಎಂದಿದ್ದಾರೆ ನಾಗರಾಜ್.
ಸೆ. 26ರ ಬಂದ್‌ನಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗಿ ಆಗುವಂತೆ ಕರೆ ಕೊಟ್ಟಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ. ಶಾಂತಿಯುತ ಹೋರಾಟಕ್ಕೆ ನಾವು ಒಟ್ಟು ಕೊಡುತ್ತೇವೆ, ಅಹಿತಕರ ಘಟನೆ ಆಸ್ಪದ ಕೊಡಲ್ಲ. ಇದರಲ್ಲಿ ನಮ್ಮ ನೌಕರರನ್ನು ವಿಭಜನೆ ಮಾಡಿ ನೋಡುವ ಅಗತ್ಯ ಇಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: Cauvery water dispute : ನಾಳೆ ಬಂದ್ ಯಶಸ್ವಿ ಆಗಬೇಕು; ಹೋಟೆಲ್ ಓಪನ್ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಹಾಗಿದ್ದರೆ ಸೆ. 26ರ ಬೆಂಗಳೂರು ಬಂದ್‌ನಲ್ಲಿ ಏನಿರುತ್ತದೆ? ಏನಿರುವುದಿಲ್ಲ?
ಏನೇನು ಇರುವುದಿಲ್ಲ?
-ಶಾಲೆ, ಕಾಲೇಜುಗಳು ಬಂದ್: ಪರೀಕ್ಷೆಗಳು ಕೂಡಾ ಮುಂದಕ್ಕೆ
-ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಬಹುತೇಕ ಇರುವುದಿಲ್ಲ
– ಓಲಾ, ಊಬರ್ ಹೊರತಾದ ಆಟೋ ರಿಕ್ಷಾಗಳು ಡೌಟ್
– ಸಿನಿಮಾ ಥಿಯೇಟರ್‌ಗಳು ಬಂದ್
– ಖಾಸಗಿ ಬಸ್‌ಗಳು, ಗೂಡ್ಸ್ ವಾಹನಗಳು
-ಸೂಪರ್ ಮಾರ್ಕೆಟ್, ಮಾಲ್‌ಗಳು
– ಬಹುತೇಕ ಅಂಗಡಿಗಳು ಬಂದ್
– ಕೈಗಾರಿಕೆಗಳು
– ಜುವೆಲ್ಲರಿ ಶಾಪ್‌ಗಳು
– ಬಿಬಿಎಂಪಿ ಕಾರ್ಮಿಕರು, ನೌಕರರು ಕೆಲಸ ಮಾಡಲ್ಲ
ಏನೇನು ಸೇವೆಗಳು ಲಭ್ಯ ಇರುತ್ತವೆ?
– ತುರ್ತು ಅಗತ್ಯದ ಎಲ್ಲ ಸೇವೆಗಳು ಇರುತ್ತವೆ.
– ಹಾಲಿನ ಬೂತ್ ಓಪನ್, ಪತ್ರಿಕೆಗಳು ಸಿಗುತ್ತವೆ
– ನಗರದಲ್ಲಿ ಹೋಟೆಲ್‌ಗಳು ತೆರೆದಿರುತ್ತವೆ.
– ಓಲಾ ಮತ್ತು ಊಬರ್ ಟ್ಯಾಕ್ಸಿಗಳು ಓಡಾಡುತ್ತವೆ
– ಹೆಚ್ಚಿನ ಆಟೋಗಳು ಓಡಾಡುತ್ತವೆ.
– ಆಸ್ಪತ್ರೆ, ಮೆಡಿಕಲ್‌ಗಳ ಸೇವೆ ಯಥಾಸ್ಥಿತಿ
– ಸರ್ಕಾರಿ ಕಚೇರಿಗಳು ಇರುತ್ತವೆ, ಜನ ಕಡಿಮೆ ಇರಬಹುದು
– ಆಂಬ್ಯುಲೆನ್ಸ್ ಸೇವೆಗಳು ಸಿಗುತ್ತವೆ.
– ಮೆಟ್ರೋ ಸೇವೆ ಎಂದಿನಂತೆ ಇರುತ್ತದೆ.
ಬಲವಂತವಾಗಿ ಬಂದ್ ಮಾಡುವಂತಿಲ್ಲ
ಸುಪ್ರೀಂಕೋರ್ಟ್ ತೀರ್ಪಿನಂತೆ ಬಂದ್ ಎಂಬ ಪದವೇ ಇಲ್ಲ. ಪ್ರತಿಭಟನೆಗೆ ಮಾತ್ರ ಅವಕಾಶ. ಬೆಂಗಳೂರು ಬಂದ್ ವೇಳೆ ಯಾರೂ ಯಾವುದೇ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವಂತಿಲ್ಲ, ವಾಹನಗಳನ್ನು ತಡೆಯುವಂತಿಲ್ಲ. ಹಾಗೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಬಂದ್‌ನಿಂದಾಗಿ ಆಸ್ತಿಪಾಸ್ತಿಗೆ ಹಾನಿ ಉಂಟಾದರೆ ಸಂಘಟಕರಿಂದಲೇ ವಸೂಲಿ ಮಾಡಲಾಗುವುದು.
ಕರ್ನಾಟಕ
Bangalore Bandh : ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ
Bangalore Bandh : ಬಂದ್ ಯಾವತ್ತೂ ಕೊನೆಯ ಅಸ್ತ್ರವಾಗಬೇಕು ಎಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಸೆ. 26 ಅಥವಾ 29ರ ಯಾವ ಬಂದ್‌ಗೂ ಬೆಂಬಲ ಕೊಡುವುದಿಲ್ಲ ಎಂದು ಪ್ರಕಟಿಸಿದೆ.
ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಸೆ. 26ರಂದು ನಡೆಯಲಿರುವ ಬೆಂಗಳೂರು ಬಂದ್ (Bangalore Bandh) ಮತ್ತು ಸೆ. 29ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗಳಲ್ಲಿ (Karnataka Bandh) ಯಾವುದಕ್ಕೂ ತಾನು ಬೆಂಬಲ ನೀಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಘೋಷಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ (TA Narayana Gowda) ಅವರು ಈ ಬಗ್ಗೆ ಆಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಕಾವೇರಿ ನೀರು ವಿಚಾರದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ, ಆದರೆ ಯಾವುದೇ ಬಂದ್‌ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಕುರುಬೂರು ಶಾಂತಕುಮಾರ್ ನೇತೃತ್ವದ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಬಂದ್‌ಗೆ ಕರೆ ನೀಡಿದರೆ ಮತ್ತು ಸೆಪ್ಟೆಂಬರ್ 29ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಪ್ರತ್ಯೇಕವಾಗಿ ನಡೆಯಲಿರುವ ಈ ಯಾವ ಬಂದ್‌ಗೂ ನಮ್ಮ ಬೆಂಬಲವಿಲ್ಲ ಎಂದು ರಕ್ಷಣಾ ವೇದಿಕೆ ಸ್ಪಷ್ಟಪಡಿಸಿದೆ. ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ರಾಜ್ಯಾದ್ಯಂತ ಮುಂದುವರೆಯುತ್ತದೆ ಎಂದು ಹೇಳಿದೆ.
ಸೋಮವಾರ ಬೆಳಗ್ಗೆ ಸಭೆ ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ಉನ್ನತಾಧಿಕಾರ ಸಮಿತಿ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಅದರ ಪ್ರಮುಖಾಂಶಗಳನ್ನು ಮಾಧ್ಯಮಗಳಿಗೆ ನೀಡಲಾಗಿದೆ.
ಬಂದ್‌ಗೆ ರಕ್ಷಣಾ ವೇದಿಕೆ ಬೆಂಬಲ ಯಾಕಿಲ್ಲ?
- ಸೆಪ್ಟೆಂಬರ್ 26 ಮತ್ತು 29ರಂದು ಕರೆ ನೀಡಲಾಗಿರುವ ಬೆಂಗಳೂರು ಬಂದ್, ಕರ್ನಾಟಕ ಬಂದ್‌ಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವುದಿಲ್ಲ.
- ಆದರೆ ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟ ಪ್ರತಿದಿನವೂ ನಡೆಯಲಿದೆ.
- ಸೆಪ್ಟೆಂಬರ್ 26ರಂದು ಮಂಗಳವಾರ ವೇದಿಕೆಯ ಗಾಂಧಿನಗರ ಕಚೇರಿ ಆವರಣದಿಂದ ವೇದಿಕೆ ಕಾರ್ಯಕರ್ತರು ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ.
- ಕರ್ನಾಟಕ ರಕ್ಷಣಾ ವೇದಿಕೆ ಮೊದಲಿನಿಂದಲೂ ಯಾವುದೇ ಚಳವಳಿ ಕೈಗೆತ್ತಿಕೊಂಡರೂ ಜನಜಾಗೃತಿ ಮೂಡಿಸುವುದನ್ನು ಮೊದಲನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತದೆ.
- ದಿಢೀರನೆ ಬಂದ್ ಕರೆ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವುದನ್ನು ರಕ್ಷಣಾ ವೇದಿಕೆ ಒಪ್ಪುವುದಿಲ್ಲ. ಬಂದ್ ಹೋರಾಟದ ಕೊನೆಯ ಅಸ್ತ್ರವಾಗಿರಬೇಕು.
ಇದನ್ನೂ ಓದಿ: Bangalore Bandh : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್ ಬಂದ್ ಬಿಸಿ, ಬೇಕಿತ್ತಾ ಎರಡೆರಡು ಬಂದ್?
ನಾವು ಯಾವುದೇ ಅಂಗಡಿ ಮುಂಗಟ್ಟು ಬಂದ್ ಮಾಡಿಸುವುದಿಲ್ಲ
ಎರಡೂ ದಿನಗಳ ಬಂದ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯಾವುದೇ ಪದಾಧಿಕಾರಿ, ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವುದಿಲ್ಲ. ಬಂದ್‌ಗೆ ಸಂಬಂಧಪಟ್ಟಂತೆ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ಕಾವೇರಿಗಾಗಿ ನಮ್ಮ ಪ್ರಜಾಸತ್ತಾತ್ಮಕ ಮಾದರಿಯ ಹೋರಾಟಗಳು ಮುಂದುವರೆಯುತ್ತವೆ ಎಂದು ಕರವೇ ಹೇಳಿದೆ.
ಇದೇ ವೇಳೆ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ವಿದೇಶ9 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ದೇಶ23 hours ago
Viral News: ಎಲ್ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು , ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ
-
ಕರ್ನಾಟಕ7 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ23 hours ago
India Canada Row : ಖಲಿಸ್ತಾನಿ ಉಗ್ರರ ಕಡೆಗೆ ಮೃದು ಧೋರಣೆ; ಟ್ರುಡೊ ವಿರುದ್ಧ ಆರ್ಯ ಮತ್ತೆ ವಾಗ್ದಾಳಿ
-
ಅಂಕಣ9 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ7 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ಕರ್ನಾಟಕ13 hours ago
BJP-JDS Alliance: ಬಿಜೆಪಿ- ಜೆಡಿಎಸ್ ಮೈತ್ರಿ; ಮುಸ್ಲಿಂ ನಾಯಕರು ಜೆಡಿಎಸ್ಗೆ ಗುಡ್ಬೈ?