Keremane Shambhu Hegde: ಫೆ.3ರಿಂದ 7ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ Vistara News
Connect with us

ಉತ್ತರ ಕನ್ನಡ

Keremane Shambhu Hegde: ಫೆ.3ರಿಂದ 7ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

Keremane Shambhu Hegde: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವು ಫೆ. 3ರಿಂದ 7 ರವರೆಗೆ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.

VISTARANEWS.COM


on

Keremane Shambhu Hegde National Dance Festival gunavante
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ವಿವರ ನೀಡಿದ ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ.
Koo

ಕಾರವಾರ: ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ (Keremane Shambhu Hegde) ರಾಷ್ಟ್ರೀಯ ನಾಟ್ಯೋತ್ಸವವು ಫೆ. 3ರಿಂದ 7ರವರೆಗೆ ನಡೆಯಲಿದೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ (ಜ.೨೫ ) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ ಅವರು, ನಾಟ್ಯೋತ್ಸವದ ಮೊದಲ ದಿನ ಫೆ. 3 ರಂದು ಸಂಜೆ 4.30ಕ್ಕೆ ಚಿತ್ರಾಪುರ ಮಠಾಧೀಶ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವ ವಿ.ಸುನೀಲ ಕುಮಾರ ಉದ್ಘಾಟಿಸುವರು ಎಂದು ತಿಳಿಸಿದರು.

ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದ ಅನಂತ ನಾಗ್ ಅವರಿಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2021’ ಅನ್ನು ಪ್ರದಾನ ಮಾಡಲಾಗುವುದು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಶಸ್ತಿ ಪ್ರದಾನ ಮಾಡುವರು. ಮಂಡಳಿ ವತಿಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಲಾವಿದ ಡಾ. ಎಂ.ಪ್ರಭಾಕರ ಜೋಶಿ ಇವರಿಗೆ ವಿಶೇಷ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ನಟ ಅನಂತ ಭಟ್ಟ ಹುಳಗೋಳ, ಬರಹಗಾರ ಎಂ.ಕೆ.ಭಾಸ್ಕರ ರಾವ್, ಶಾಸಕ ಸುನೀಲ ನಾಯ್ಕ, ಪತ್ರಕರ್ತ ಬಿ.ಗಣಪತಿ, ಉಡುಪಿ ಶಾಸಕ ರಘುಪತಿ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ ಕೊಡಗಿ, ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಬರಹಗಾರ ರೋಹಿತ್ ಚಕ್ರತೀರ್ಥ, ಸಾಂಸ್ಕೃತಿಕ ಚಿಂತಕ ನಾರಾಯಣ ಯಾಜಿ, ಮಾಜಿ ಶಾಸಕ ಮಂಕಾಳ ವೈದ್ಯ, ಸಾಹಿತಿ ರೋಹಿದಾಸ ಮತ್ತಿತರರು ಈ ಐದು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಇದನ್ನೂ ಓದಿ | Nuclear War : ಭಾರತ-ಪಾಕ್ ಮಧ್ಯೆ ಅಣ್ವಸ್ತ್ರ ಬಳಕೆ ಸ್ವಲ್ಪದರಲ್ಲೇ ತಪ್ಪಿತಾ? ಅಮೆರಿಕದ ಮಾಜಿ ಸಚಿವ ಹೇಳೋದೇನು?

ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಯಕ್ಷರಂಗ ಮಾಸಪತ್ರಿಕೆ, ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮತ್ತಿತರರಿಗೆ ಸನ್ಮಾನ, ವೆಂಕಟ್ರಮಣ ಹೆಗಡೆ ಇವರಿಗೆ ಶ್ರೀಮಯ ಕಲಾ ಪೋಷಕ ಪ್ರಶಸ್ತಿ ಪ್ರದಾನವಿದೆ. ಗುಣವಂತೆಯ ಭಂಡಾರಿ ಮಿತ್ರ ವೃಂದದವರಿಂದ ಪಂಚವಾದ್ಯ ಸಮ್ಮೇಳ-ಮಂಗಳವಾದ್ಯ, ಕೇರಳ ತಂಡದ ಕಿರಾತಾರ್ಜುನೀಯ ಕಥಕ್ಕಳಿ, ಓಡಿಸ್ಸಿ ನೃತ್ಯ, ಲಯ ಲಾವಣ್ಯ, ಶ್ರೀ ಕೃಷ್ಣ ಕಾರುಣ್ಯ ಯಕ್ಷಗಾನ, ನಾಟಕ, ಗಝಲ್ ಗಾಯನ, ನಾಟ್ಯ ಪ್ರಕಾರದ ರೂಪಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಬಾನ್ಸುರಿ ವಾದನ, ತಬಲ ವಾದನ, ಶಾಲಾ ಮಕ್ಕಳಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮಗಳು ಈ ದಿನಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು. ಫೆ. 7ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಅಧ್ಯಕ್ಷತೆ ವಹಿಸುವರು.

ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಶಿ ಮಾತನಾಡಿ, ವಿವಿಧ ಕಲಾ ಪ್ರಕಾರ ಪ್ರದರ್ಶನದ ಜೊತೆಗೆ ಅನೇಕ ಸಾಧಕರನ್ನು ಸನ್ಮಾನಿಸುವ ಕಾರ್ಯ ರಾಷ್ಟ್ರೀಯ ನಾಟ್ಯೋತ್ಸವದ ಮೂಲಕ ನಡೆಯುತ್ತಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆ.ಜಿ.ಹೆಗಡೆ ಉಪಸ್ಥಿತರಿದ್ದರು.

ಇದನ್ನೂ ಓದಿ | Ayodhya Ram Mandir : ರಾಮ-ಸೀತೆಯ ಮೂರ್ತಿ ನಿರ್ಮಾಣಕ್ಕೆ ನೇಪಾಳದಿಂದ ಬರಲಿವೆ ಶಿಲೆಗಳು!

Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ

Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರ ಪಟ್ಟಣದಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಗವಾ ಧ್ವಜಗಳೊಂದಿಗೆ ಭಾಗವಹಿದ್ದವು.

VISTARANEWS.COM


on

Edited by

Bike Rally yallapur ugadi
ಯುಗಾದಿ ಪ್ರಯುಕ್ತ ನಡೆದ ಬೈಕ್ ರ‍್ಯಾಲಿ.
Koo

ಯಲ್ಲಾಪುರ: ಯುಗಾದಿ ಪ್ರಯುಕ್ತ ಯಲ್ಲಾಪುರ ಪಟ್ಟಣದಲ್ಲಿ ಸೋಮವಾರ (ಮಾ.20) ಹಮ್ಮಿಕೊಳ್ಳಲಾದ ಬೈಕ್ ರ‍್ಯಾಲಿಯು (Bike Rally) ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಪಟ್ಟಣದ ಕಾಳಮ್ಮನಗರ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮ ದೇವಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಗವಾ ಧ್ವಜಗಳೊಂದಿಗೆ ರ‍್ಯಾಲಿಯಲ್ಲಿ ಭಾಗವಹಿದ್ದವು. ಕಳೆದ ಬಾರಿಗಿಂತ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಸಹ ರ‍್ಯಾಲಿಯಲ್ಲಿ ಭಾಗವಹಿಸಿ ರ‍್ಯಾಲಿಯ ಮೆರುಗು ಹೆಚ್ಚಿಸಿದರು. ರ‍್ಯಾಲಿ ಸಾಗುವ ದಾರಿಯುದ್ದಕ್ಕೂ ಕೇಸರಿ ಧ್ವಜ ಹಾಗೂ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿದ್ದರಿಂದ ಸಂಪೂರ್ಣ ಪಟ್ಟಣವು ಕೇಸರಿಮಯವಾಗಿತ್ತು.

ಇದನ್ನೂ ಓದಿ: Shama Sikander: ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ, ಬಿಕಿನಿ ಹಾಟ್ ಫೋಟೊ ಫುಲ್ ಹವಾ

ಬೈಕ್ ರ‍್ಯಾಲಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ರಾಮು ನಾಯ್ಕ, ಯುವ ಮುಖಂಡ ವಿವೇಕ ಹೆಬ್ಬಾರ್, ಪ್ರಶಾಂತ ಹೆಗಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಆದಿತ್ಯ ಗುಡಿಗಾರ್, ಸೋಮೇಶ್ವರ್ ನಾಯ್ಕ, ಸತೀಶ ನಾಯ್ಕ, ಪ್ರಮುಖರಾದ ಪ್ರದೀಪ ಯಲ್ಲಾಪುರಕರ್, ರಜತ್ ಬದ್ದಿ, ಮುಂತಾದವರು ಇದ್ದರು. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರ‍್ಯಾಲಿಯುದ್ದಕೂ ನಿಗಾ ವಹಿಸಿ, ವಾಹನ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಿ ರ‍್ಯಾಲಿ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.

ಇದನ್ನೂ ಓದಿ: Benefits Of Pongame: ಬಹೂಪಯೋಗಿ ಹೊಂಗೆ: ಏನೇನಿವೆ ಇದರ ಸದ್ಗುಣಗಳು?

Continue Reading

ಉತ್ತರ ಕನ್ನಡ

Karnataka Election 2023: ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಸೂಚನೆ

Karnataka Election 2023: ಬಾರ್ಡರ್ ಚೆಕ್ ಪೋಸ್ಟ್‌ಗಳಲ್ಲಿ ಮದ್ಯ, ನಗದು, ಬೆಲೆಬಾಳುವ ಲೋಹಗಳು ಸಾಗಿಸುವ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಬೇಕೆಂದು ಡಿಸಿ ಪ್ರಭುಲಿಂಗ ಕವಳಿಕಟ್ಟಿ ಸಲಹೆ ನೀಡಿದ್ದಾರೆ.

VISTARANEWS.COM


on

Edited by

DC Prabhulinga Kavalikatti karwar
ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ.
Koo

ಕಾರವಾರ: “ಕರ್ನಾಟಕ ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ (Karnataka Election 2023) ಇರುವುದರಿಂದ ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿ ಡ್ರಗ್ ದಂಧೆಕೋರರ ಮೇಲೆ ತೀವ್ರ ನಿಗಾ ಇರಿಸಲು ಕ್ರಮವಹಿಸಬೇಕು” ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಅಂತಾರಾಜ್ಯ ಗಡಿ ಪ್ರದೇಶಗಳ ಚೆಕ್ ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಒದಗಿಸಲು ಹಮ್ಮಿಕೊಂಡಿದ್ದ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, “ಬಾರ್ಡರ್ ಚೆಕ್ ಪೋಸ್ಟ್‌ಗಳಲ್ಲಿ ಮದ್ಯ, ನಗದು, ಬೆಲೆಬಾಳುವ ಲೋಹಗಳು, ಡ್ರಗ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಸಾಗಿಸುವ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು” ಎಂದು ಅಂತಾರಾಜ್ಯ ಗಡಿ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Swiss Open: ಸ್ವಿಸ್‌ ಓಪನ್ ಬ್ಯಾಡ್ಮಿಂಟನ್; ಪ್ರಶಸ್ತಿ ಉಳಿಸಿಕೊಳ್ಳಲಿದ್ದಾರಾ ಪಿ.ವಿ. ಸಿಂಧು?

“ಕರ್ನಾಟಕದ ಮದ್ಯದ ದರಕ್ಕಿಂತ ಗೋವಾ ರಾಜ್ಯದಲ್ಲಿ ಮದ್ಯದ ದರ ಅಗ್ಗವಾಗಿದೆ‌. ಈ ಕಾರಣದಿಂದ ಮದ್ಯ ಮಾರಾಟಗಾರರು ಗೋವಾದಿಂದ ಕರ್ನಾಟಕಕ್ಕೆ ಮದ್ಯವನ್ನು ಸಾಗಾಟ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಗಡಿಯಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚಿಸಿದರು. ಈಗಾಗಲೇ ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್ ಮತ್ತು ಜೋಯಿಡಾ ತಾಲೂಕಿನ ಅನ್‌ಮೋಡ್ ಚೆಕ್‌ಪೋಸ್ಟ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಬೇಕು” ಎಂದು ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ- 1 ಜಯಲಕ್ಷ್ಮಮ್ಮ, ಅಬಕಾರಿ ನಿರೀಕ್ಷಕರು ಜಗದೀಶ್ ಕುಲಕರ್ಣಿ ಉಪಸ್ಥಿತರಿದ್ದರು.

ಇದನ್ನೂ ಓದಿ: BJP Important Party: ಜಗತ್ತಿನಲ್ಲೇ ಬಿಜೆಪಿ ಪ್ರಮುಖ ಪಕ್ಷ, 2024ರಲ್ಲೂ ಗೆಲುವು; ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ

Continue Reading

ಉತ್ತರ ಕನ್ನಡ

Sirsi News: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ: ಗಂಗಾವತಿ ಪ್ರಾಣೇಶ

Sirsi News: ಮಕ್ಕಳಿಗೆ ಶುದ್ಧ ಕನ್ನಡ‌ ಕಲಿಸಬೇಕು. ಮಾತೃ ಭಾಷೆ ಮೂಲಕ ಮನಸ್ಸಿನಲ್ಲಿ ಭಾವ ತುಂಬಿಸಲು ಸಾಧ್ಯವಿದೆ‌ ಎಂದು ಗಂಗಾವತಿ ಪ್ರಾಣೇಶ ಹೇಳಿದ್ದಾರೆ.

VISTARANEWS.COM


on

Edited by

Gangavathi Pranesh nisarga mane sirsi
ನಿಸರ್ಗ ಮನೆಯಲ್ಲಿ‌ ನಡೆದ ಹಾಸ್ಯ ಸಂಜೆಯಲ್ಲಿ ಮಾತನಾಡಿದ ಗಂಗಾವತಿ ಪ್ರಾಣೇಶ.
Koo

ಶಿರಸಿ: “ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ” ಎಂದು ಹಾಸ್ಯ ಚಕ್ರವರ್ತಿ, ಅಭಿನವ ಬೀಚಿ ಎಂದೇ‌ ಪ್ರಸಿದ್ಧರಾದ ಗಂಗಾವತಿ ಪ್ರಾಣೇಶ (Gangavathi Pranesh) ಬಣ್ಣಿಸಿದರು.

ಅವರು ನಗರದ ಹೊರ ವಲಯದ ನಿಸರ್ಗ ಮನೆಯಲ್ಲಿ‌ ನಡೆದ ಹಾಸ್ಯ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿ,
“ಆಂಗ್ಲ ಭಾಷೆ ಎಂಬುದು ಭಾವ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಕಟ್ಟಿ ಕೊಡುವುದಿಲ್ಲ. ಮಕ್ಕಳಿಗೆ ಶುದ್ಧ ಕನ್ನಡ‌ ಕಲಿಸಬೇಕು. ಮಾತೃ ಭಾಷೆ ಮೂಲಕ ಮನಸ್ಸಿನಲ್ಲಿ ಭಾವ ತುಂಬಿಸಲು ಸಾಧ್ಯವಿದೆ‌” ಎಂದರು.

ಕನ್ನಡದಲ್ಲಿ ಪ್ರಾಂತೀಯ ಭಾಷೆಗಳು ಸಾಕಷ್ಟು ಸಿಗುತ್ತವೆ. ಕನ್ನಡದಲ್ಲಿ ಎಷ್ಟೊಂದು ಶಬ್ದಗಳಿವೆ ಎಂದು ವಿವರಿಸಿ ಮಾತನಾಡಿದ ಪ್ರಾಣೇಶ್, ಶುದ್ಧ ಹವೆ, ಒಳ್ಳೆಯ ಪರಿಸರದ ಜತೆ ಶುದ್ಧ ಆಹಾರ ಕೂಡ ಬಳಸಬೇಕು. ನಿಸರ್ಗ ಮನೆ ನಾವು ಹೇಗೆ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇಲ್ಲಿ ಇದು ಹಿಂಸೆಯಲ್ಲ.‌ ಹತ್ತು‌ ದಿನದ ಚಿಕಿತ್ಸೆ ಬಳಿಕ ಮನೆಯಲ್ಲೂ‌ ಅದನ್ನು ಅನುಸರಿಸಬೇಕಿದೆ” ಎಂದರು.

“ಮೊಬೈಲ್ ಅನ್ನು ಬಹಳ ಹೊತ್ತ ಹಿಡಿದುಕೊಂಡರೆ ನಾವು‌ ಕುಳಿತುಕೊಳ್ಳುವ ಭಂಗಿ ಕೂಡ ಬದಲಾಗುತ್ತದೆ. ಅತಿ‌ಯಾದ ಮೊಬೈಲ್ ಸಹವಾಸ ಒಳಿತಲ್ಲ” ಎಂದು ಸಲಹೆ ನೀಡಿದರು.

ಪ್ರಸಿದ್ಧ ಹಾಸ್ಯ ಕಲಾವಿದ ಬಸವರಾಜ್‌ ಮಹಾಮನಿ ಮಾತನಾಡಿ, “ಒಂದೊಂದು‌ ಮಾತಿನಲ್ಲಿಯೂ ಹಾಸ್ಯ ನೋಡಬಹುದು. ಮನೆ ಮನೆಯಲ್ಲಿ ಹಾಸ್ಯವಿದೆ. ಹಾಸ್ಯವನ್ನು ಹಾಸ್ಯವಾಗಿ ಸ್ವೀಕಾರ ಮಾಡಬೇಕು‌. ಯಾವುದೇ ಕಲೆಯಾದರೂ ಆ ಕಲೆಯನ್ನು ಉಳಿಸಬೇಕಾಗಿದೆ. ಮುಖ್ಯವಾಗಿ ದೇಶೀಯ ಕಲೆ ಉಳಿಸಿ ಬೆಳೆಸಬೇಕಿದೆ. “ತಂದೆ ತಾಯಿ, ಗುರು ಹಿರಿಯರ ಮಾತು ಕೇಳಿ ಜೀವನವನ್ನು ಸುಖವಾಗಿ ನಡೆಸಬೇಕು” ಎಂದು ಹೇಳಿದರು.

ಇದನ್ನೂ ಓದಿ: Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್‌ ಕುರ್ತಾಗಳು

ನಿಸರ್ಗ ಮನೆಯ ವೈದ್ಯ, ಲೇಖಕ ಡಾ. ವೆಂಕಟರಮಣ ಹೆಗಡೆ ಪ್ರಾಸ್ತಾವಿಕ‌ ಮಾತನಾಡಿದರು. ಬಳಿಕ ತುಳಸಿ ಹೆಗಡೆ ಅವರಿಂದ ವಿಶ್ವಶಾಂತಿ‌ ಸರಣಿಯ ವಂಶೀ ವಿಲಾಸ ಯಕ್ಷನೃತ್ಯ ರೂಪಕ ಪ್ರದರ್ಶನ ನಡೆಯಿತು.

Continue Reading

ಉತ್ತರ ಕನ್ನಡ

Fire Accident: ಕಡ್ಲೆ ಗ್ರಾಮದಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗೆ ಬೆಂಕಿ; 15 ಲಕ್ಷ ರೂ. ಹಾನಿ

Fire Accident: ರಂಗ ಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಅಕಸ್ಮಾತ್ ಬೆಂಕಿ ತಗುಲಿ 15 ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳು ಪೂರ್ತಿ ಸುಟ್ಟು ಹೋಗಿವೆ.

VISTARANEWS.COM


on

Edited by

fire accident honnavar Ranga Bhoomika
ಸುಟ್ಟು ಕರಕಲಾದ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗಳು.
Koo

ಹೊನ್ನಾವರ: ಹೆಸರಾಂತ ರಂಗ ನಟ, ವರ್ಣಾಲಂಕಾರ ಪ್ರವೀಣರಾದ ದಾಮೋದರ ನಾಯ್ಕ (ದಾಮು) ಇವರ ಕಡ್ಲೆಯಲ್ಲಿರುವ ರಂಗ ಭೂಮಿಕಾ ಅಲಂಕಾರ ಸಾಮಗ್ರಿಗಳಿಗೆ ಅಕಸ್ಮಾತ್ ಬೆಂಕಿ ತಗುಲಿ (Fire Accident) 15 ಲಕ್ಷ ರೂಪಾಯಿ ಅಂದಾಜಿನ ಸಾಮಗ್ರಿಗಳು ಪೂರ್ತಿ ಸುಟ್ಟು ಹೋಗಿದ್ದು, ಇನ್ನಷ್ಟು ಸಾಮಗ್ರಿ ಅರ್ಧ ಸುಟ್ಟಿವೆ.

ಜಿಲ್ಲೆಯಲ್ಲಿ ಮಾತ್ರವಲ್ಲ ಹಂಪೆ ಉತ್ಸವ ಮೊದಲಾದ ಕಡೆ ಸಭಾ ವೇದಿಕೆ ಮತ್ತು ಸಭಾಗೃಹದ ಅಲಂಕಾರಕ್ಕೆ ಫೈಬರ್‌ನಿಂದ ತಯಾರಿಸಿದ ಅರಮನೆ, ಕಂಬಗಳು, ಆನೆ, ಮೊದಲಾದವುಗಳನ್ನು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬಳಸಿ ಸುಂದರ ವೇದಿಕೆ ಸಿದ್ಧಪಡಿಸುತ್ತಿದ್ದ ದಾಮೋದರ ನಾಯ್ಕ 10-15 ಜನರಿಗೆ ಕೆಲಸ ಕೊಟ್ಟಿದ್ದರು. ಆದಾಯ ತರುವ ಈ ಸೀಜನ್‌ನಲ್ಲಿ ತಮ್ಮ ದುಡಿಮೆಯ ಉಳಿತಾಯದ ಬಂಡವಾಳವೆಲ್ಲ ಬೆಂಕಿಗಾಹುತಿಯಾಯಿತು ಎಂದು ದಾಮೋದರ ನಾಯ್ಕ ನೊಂದುಕೊಂಡಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ತರಗೆಲೆಯಂತೆ ವಸ್ತುಗಳು ಉರಿದು ಹೋದವು. ಪೊಲೀಸ್ ಮತ್ತು ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದ ಮೇರೆಗೆ ಬೆಂಕಿ ನಂದಿಸಿದ್ದರೂ ಹಲವು ವಸ್ತುಗಳು ಕರಕಲಾಗಿವೆ.

ಇದನ್ನೂ ಓದಿ: Lokayukta Raid: ರಾಣೆಬೆನ್ನೂರು ಪಿಎಸ್‌ಐ, ವಾಹನ ಚಾಲಕ ಲೋಕಾಯುಕ್ತ ಬಲೆಗೆ; 40 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದರು

Continue Reading
Advertisement
smartphone
ವಾಣಿಜ್ಯ1 min ago

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಕರ್ನಾಟಕ7 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

Jio True 5G service launched in 41 cities including KGF's robertsonpet
ಕರ್ನಾಟಕ15 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್29 mins ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ37 mins ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ42 mins ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ44 mins ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

Delhi team won the toss against UP and chose fielding
ಕ್ರಿಕೆಟ್46 mins ago

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

savadatti accident
ಕರ್ನಾಟಕ50 mins ago

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

HP Pavilion Aero 13 Laptop Launched and Check details
ಗ್ಯಾಜೆಟ್ಸ್52 mins ago

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!