Mangalore News: ಪಣಂಬೂರು ಬೀಚ್‌ನಲ್ಲಿ ಅಲೆಗಳ ರಭಸಕ್ಕೆ ಮೂವರು ಯುವಕರು ನಾಪತ್ತೆ - Vistara News

ಕರ್ನಾಟಕ

Mangalore News: ಪಣಂಬೂರು ಬೀಚ್‌ನಲ್ಲಿ ಅಲೆಗಳ ರಭಸಕ್ಕೆ ಮೂವರು ಯುವಕರು ನಾಪತ್ತೆ

Mangalore News: ಪಣಂಬೂರು ಬೀಚ್‌ನಲ್ಲಿ ಲೈಫ್ ಗಾರ್ಡ್ ಸೂಚನೆ ಧಿಕ್ಕರಿಸಿ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಸಿಲುಕಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ.

VISTARANEWS.COM


on

yuths go missing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಲೈಫ್ ಗಾರ್ಡ್ ಸೂಚನೆ ಧಿಕ್ಕರಿಸಿ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ಮೂವರು ಯುವಕರು ನಾಪತ್ತೆಯಾಗಿದ್ದಾರೆ.

ಮಿಲನ್(20), ಲಿಖಿತ್(18) ಹಾಗೂ ನಾಗರಾಜ್ (24) ನಾಪತ್ತೆಯಾದ ಯುವಕರು. ನಾಪತ್ತೆಯಾದ ಯುವಕರಿಗಾಗಿ ಮುಳುಗತಜ್ಞರು ಹುಡುಕಾಟ ನಡೆಸುತ್ತಿದ್ದಾರೆ. ಮಿಲನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಲಿಖಿತ್‌ ಕೈಕಂಬದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ನಾಗರಾಜ್‌ ಬೈಕಂಪಾಡಿಯ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Temple demolition : ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರಮನೆ ರಾತ್ರೋರಾತ್ರಿ ಧ್ವಂಸ

ಕಡಲೆ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಬೆಳಗಾವಿ: ಕಡಲೆ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ. ಮಹಾದೇವಿ ಮಲ್ಲಪ್ಪ ಗಣಾಚಾರಿ (45) ಮೃತ ಮಹಿಳೆ.

ಜಮೀನಿನಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್ ಒಳಗೆ ಸೀರೆ ಸಿಲುಕಿ ಅವಘಡ ನಡೆದಿದೆ. ಮಷಿನ್ ಒಳಗೆ ಸಿಲುಕಿ ಕೆಲಹೊತ್ತು ಮಹಿಳೆ ಒದ್ದಾಡಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಮಷಿನ್ ಬಂದ್ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | Self Harming: ಇವನಿಗೇನು ಹುಚ್ಚಾ? ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲು ಮುಂದಾದ ವ್ಯಕ್ತಿ!

ಕಾರು – ಬೈಕ್ ಡಿಕ್ಕಿ; ಜೊಮೆಟೊ ಡೆಲಿವರಿ ಬಾಯ್‌ಗೆ ಗಂಭೀರ ಗಾಯ

ಶಿವಮೊಗ್ಗ: ಕಾರು-ಬೈಕ್ ಡಿಕ್ಕಿಯಾಗಿ ಜೊಮ್ಯಾಟೊ ಡೆಲಿವರಿ ಬಾಯ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಜಯನಗರ ಪೊಲೀಸ್ ಠಾಣೆ ಎದುರು ನಡೆದಿದೆ. ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Karnataka Weather Forecast: ಮುಂಗಾರು ಅಬ್ಬರಕ್ಕೆ ಜನರು ವಿಲವಿಲ ಅಂತ ಒದ್ದಾಡುವಂತೆ ಮಾಡಿದೆ. ಮಳೆ ಬಂದರೂ (Heavy rain Effect) ಕಷ್ಟ ಬಾರದೆ ಇದ್ದರೂ ಸಂಕಷ್ಟ ಎಂಬಂತಾಗಿದೆ. ಈಗಾಗಲೇ ಭಾರಿ ಮಳೆ ಹಿನ್ನೆಲೆಯಲ್ಲಿ ಗಿರಿಶಿಖರಗಳಲ್ಲಿ (Trekking) ಚಾರಣಕ್ಕೆ ನಿಷೇಧ ಹೇರಲಾಗಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು/ಮಂಗಳೂರು: ವ್ಯಾಪಕ ಮಳೆಯಿಂದಾಗಿ (Karnataka Weather Forecast) ಕರಾವಳಿಯ ಹಲವೆಡೆ ಪ್ರವಾಸಿಗರಿಗೆ ನಿಷೇಧ ಹಾಕಲಾಗಿದೆ. ಗಿರಿಶಿಖರಗಳಲ್ಲಿ ಚಾರಣಕ್ಕೆ ಹೋಗಬೇಕಾದರೆ ಮಳೆಗಾಲ (Heavy rain) ಮುಗಿಯುವವರೆಗೂ ಕಾಯಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಭೂ ಕುಸಿತ , ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿವೆ. ಇನ್ನಷ್ಟು ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗಿರಿ ಶಿಖರಗಳಿಗೆ ಚಾರಣಕ್ಕೆ ಹೋಗುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಮಳೆಗಾಲ ಮುಗಿಯುವವರೆಗೆ ಹೋಮ್ ಸ್ಟೇ, ರೆಸಾರ್ಟ್ ಸೇರಿದಂತೆ ಅರಣ್ಯ ಇಲಾಖೆ ಏರ್ಪಡಿಸುವ ಟ್ರಕ್ಕಿಂಗ್, ಸಾಹಸ ಯಾತ್ರೆಗೂ ನಿಷೇಧ ಹಾಕಲಾಗಿದೆ. ಇವೆಲ್ಲದರ ಜತೆಗೆ ನದಿ, ಸಮುದ್ರ ತೀರಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಅಲ್ಲೂ ನದಿ ಹಾಗು ಸಮುದ್ರ ತಟದಲ್ಲಿ ಈಜು ಮೋಜು-ಮಸ್ತಿ ಚಟುವಟಿಕೆಗಳಿಗೂ ಬ್ರೇಕ್‌ ಹಾಕಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿಷೇಧ ಆದೇಶವನ್ನು ಹೊರಡಿಸಿದ್ದಾರೆ.

ಇಲ್ಲೆಲ್ಲ ಮಳೆ ಅಬ್ಬರ

ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಸಕ್ರಿಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ಸಾಧಾರಣವಾಗಿದೆ. ಉತ್ತರ ಕನ್ನಡದ ಕ್ಯಾಸಲ್‌ ರಾಕ್‌ನಲ್ಲಿ 17 ಸೆಂ.ಮೀ ಮಳೆಯಾದರೆ, ಹೊನ್ನಾವರದಲ್ಲಿ 16 ಹಾಗೂ ಉಡುಪಿಯಲ್ಲಿ 15, ಅಂಕೋಲಾದಲ್ಲಿ 13 ಸೆಂ.ಮೀ ಮಳೆಯಾಗಿದೆ.

ಜು.7ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಗಾಳಿ ವೇಗವು 30-40ಕಿ.ಮೀ ಇರಲಿದ್ದು, ಜತೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಗಾಳಿ ವೇಗವು 30 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ.

ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ,ಕೊಡಗು, ಮೈಸೂರು, ರಾಮನಗರ ಸೇರಿದಂತೆ ದಾವಣಗೆರೆ, ಮಂಡ್ಯ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.

ಉಕ್ಕಿ ಹರಿಯುವ ನದಿಯಲ್ಲಿ ಮೀನು ಹಿಡಿಯುವ ಸಾಹಸ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಮಳೆ ಪ್ರಮಾಣದಿಂದಾಗಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಘಟ್ಟದಲ್ಲಿಯೂ ನಿರಂತರವಾಗಿ ಮಳೆ ಹೆಚ್ಚಿದ್ದು, ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ತೀರ ಪ್ರದೇಶದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪ್ರವಾಹದ ಭೀತಿ ಇರುವುದರಿಂದ ನೇತ್ರಾವತಿ ನದಿ ತೀರದವರಿಗೆ, ದ್ವೀಪ ಪ್ರದೇಶ ಜನರಿಗೂ ಸೂಚನೆ ನೀಡಲಾಗಿದೆ. ನದಿಯಲ್ಲಿ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದರೂ, ಸ್ಥಳೀಯರು ದೋಣಿ ಮೂಲಕ ಮೀನು ಹಿಡಿಯುತ್ತಿರುವುದು ಕಂಡು ಬಂದಿದೆ.

ತುಂಗಭದ್ರೆಯ ತಟದಲ್ಲಿ ಅಪರೂಪದ ನೀರು ನಾಯಿಗಳು ಪ್ರತ್ಯಕ್ಷ

ದಾವಣಗೆರೆಯ ಹರಿಹರದ ಬಳಿಯ ರಾಜನಹಳ್ಳಿ ಜಾಕ್ ವೆಲ್ ಬಳಿ ನೀರು ನಾಯಿಗಳ ಹಿಂಡು ಹಿಂಡಾಗಿ ಪ್ರತ್ಯಕ್ಷವಾಗಿದೆ. ನೀರು ನಾಯಿಗಳು ಜನರ ಕಣ್ಣಿಗೆ ಕಾಣುವುದು ಅಪರೂಪ. ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ದಡದಲ್ಲಿ ನೀರು ನಾಯಿಗಳು ಆಟವಾಡುತ್ತಿರುವುದು ಕಂಡು ಬಂದಿದೆ. ನೀರು ನಾಯಿ ಕಂಡರೆ ಸಮೃದ್ಧಿ ಮಳೆ ಬೆಳೆ ಆಗುತ್ತೆ ಎಂಬ ನಂಬಿಕೆ ಇದೆ.

ಅಬ್ಬಿ ಜಲಪಾತಕ್ಕೆ ಸಾಕು ನಾಯಿ ಜತೆಗೆ ಬಂದ ಪ್ರವಾಸಿಗರು!

ಕೊಡಗಿನಲ್ಲಿ ಮತ್ತೆ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಸಾಕು ನಾಯಿ ಹಿಡಿದು ಪ್ರವಾಸಿತಾಣವಾದ ಮಡಿಕೇರಿ ಸಮೀಪದ ಅಬ್ಬಿ ಜಲಪಾತಕ್ಕೆ ಬಂದಿದ್ದಾರೆ. ಶ್ವಾನವನ್ನು ಒಳಗೆ ತರಬೇಡಿ ಎಂದರು ಹೇಳಿದರೆ ಪ್ರವಾಸಿಗರು ಪೊಲೀಸರೊಟ್ಟಿಗೆ ಕೂಗಾಟ ಶುರು ಮಾಡುತ್ತಿದ್ದಾರೆ.

ಇತ್ತ ಪ್ರವಾಸಿಗರನ್ನು ಕಂಡು ಶ್ವಾನಗಳು ಕಚ್ಚಲು ಎಳೆದಾಡುತ್ತಿದ್ದ ದೃಶ್ಯ ಕಂಡು ಬಂತು. ಮಕ್ಕಳು ಸೇರಿದಂತೆ ನೂರಾರು ಪ್ರವಾಸಿಗರು ಇರುವ ಸ್ಥಳದಲ್ಲಿ ಜರ್ಮನ್ ಶೆಫರ್ಡ್, ಎರಡು ಲ್ಯಾಬ್ ಸೇರಿದಂತೆ ಶ್ವಾನವನ್ನು ಹಿಡಿದು ಒಳಗೆ ಬಂದಿದ್ದಾರೆ. ಬಳಿಕ ಬಲವಂತವಾಗಿ ಪೊಲೀಸರು ಹೊರಗೆ ಕಳುಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

BJP Karnataka: ವಿಧಾನಸಭೆ, ವಿಧಾನ ಪರಿಷತ್ ಉಪಚುನಾವಣೆ; 4 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ

BJP Karnataka: ವಿಧಾನಸಭೆ, ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು (BJP Karnataka) ನೇಮಿಸಲಾಗಿದೆ.

VISTARANEWS.COM


on

BJP Karnataka
Koo

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭೆ, ಒಂದು ಸ್ಥಾನಕ್ಕೆ ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿಗಳನ್ನು ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ, ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳನ್ನು (BJP Karnataka) ನೇಮಿಸಲಾಗಿದೆ.

ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಉಸ್ತುವಾರಿ ನಾಯಕರು ಅಭಿಪ್ರಾಯ ಸಂಗ್ರಹ ಮತ್ತು ವರದಿ ತಯಾರಿಸಿ, ಹೈ ಕಮಾಂಡ್‌ಗೆ ನೀಡಲಿದ್ದಾರೆ.

ಉಸ್ತುವಾರಿಗಳ ಪಟ್ಟಿ

ದಕ್ಷಿಣ ಕನ್ನಡ (ಸ್ಥಳೀಯ ಸಂಸ್ಥೆ)

ಬಸವರಾಜ್ ಬೊಮ್ಮಾಯಿ, ಕೋಟ ಶ್ರೀನಿವಾಸ್ ಪೂಜಾರಿ, ಬ್ರಿಜೇಶ್ ಚೌಟ, ಪ್ರೀತಂ ಗೌಡ

ಶಿಗ್ಗಾಂವಿ

ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಪಿ. ರಾಜೀವ್

ಸಂಡೂರು

ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಎನ್.ರವಿಕುಮಾರ್, ಕೆ.ಎಸ್ ನವೀನ್

ಚನ್ನಪಟ್ಟಣ

ಸಿ.ಎನ್ ಅಶ್ವತ್ಥ್‌ ನಾರಾಯಣ್, ಎಂ.ಕೃಷ್ಣಪ್ಪ, ಗೋಪಿನಾಥ್ ರೆಡ್ಡಿ, ನಂದೀಶ್ ರೆಡ್ಡಿ

ರಾಜ್ಯ ಬಿಜೆಪಿಗೆ ನೂತನ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಬೆಂಗಳೂರು: ರಾಜ್ಯ ಬಿಜೆಪಿಗೆ (BJP Karnataka) ನೂತನ ಉಸ್ತುವಾರಿ, ಸಹ ಉಸ್ತುವಾರಿಯನ್ನು ನೇಮಕ ಮಾಡಲಾಗಿದೆ. ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕವಾಗಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿದ್ದ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ರಾಜ್ಯ ಬಿಜೆಪಿ ನೂತನ ಉಸ್ತುವಾರಿಯಾಗಿ ಮುಂದುವರಿಸಲಾಗಿದೆ.

ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದು, ಕರ್ನಾಟಕದ ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕ ಮಾಡಲಾಗಿದೆ.

ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

Channapatna By Election

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ (Channapatna By Election) ಅನುಸೂಯ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿ ಇದೆ. ಆದರೆ, ಯಾವುದೇ ಕಾರಣಕ್ಕೂ ಅನುಸೂಯ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿ ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಪತ್ನಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನೂರಕ್ಕೆ ನೂರು ಪರ್ಸೆಂಟ್ ನನ್ನ ಪತ್ನಿ ನಿಲ್ಲಲ್ಲ. ಕೆಲವು ಪತ್ರಿಕೆ, ಮಾಧ್ಯಮದಲ್ಲಿ ಅನಸೂಯ ಸ್ಪರ್ಧಿಸುತ್ತಾರೆ ಎಂದು ಬಂದಿದೆ. ಇದು ನಮಗೆ ಬಹಳಷ್ಟು ಮುಜುಗರ ತರಿಸಿದೆ. ಅನುಸೂಯ ಯಾವುದೇ ಕಾರಣಕ್ಕೂ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಡಿ.ಕೆ. ಸಹೋದರರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು, ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ನಿಯನ್ನು ಕಣಕ್ಕಿಳಿಸಲಿವೆ ಎಂದು ಚರ್ಚೆಯಾಗುತ್ತಿತ್ತು. ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅನಸೂಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿತ್ತು. ಇದಕ್ಕೆ ಡಾ.ಮಂಜುನಾಥ್‌ ಅವರು ಸ್ಪಷ್ಟನೆ ನೀಡಿದ್ದಾರೆ.

Continue Reading

ಕರ್ನಾಟಕ

CM Siddaramaiah: ಪ್ರತಿ ಠಾಣೆಗೂ ತೆರಳಿ ಪರಿಶೀಲಿಸಬೇಕು: ಪೊಲೀಸ್‌ ಮೇಲಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

CM Siddaramaiah: ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

VISTARANEWS.COM


on

CM Siddaramaiah
Koo

ಬೆಂಗಳೂರು: ಎಸ್‌ಪಿ, ಡಿಸಿಪಿ, ಐಜಿಗಳು ತಮ್ಮ ವ್ಯಾಪ್ತಿಯ ಪ್ರತಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ. ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್‌ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್‌ ದಂಧೆ ನಿಲ್ಲಿಸದಿದ್ದರೆ ಎಸ್‌ಪಿ ಮತ್ತು‌ ಐಜಿ ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಪಿ, ಐಜಿಗಳು ಪ್ರತಿ ಠಾಣೆಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಾಳೆಯಿಂದಲೇ ಎಸ್‌ಪಿ, ಐಜಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಸಿದರು.

ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ: ಇಲ್ಲಾಂದ್ರೆ ಕ್ರಮ ಎದುರಿಸಿ

ಫೇಕ್ ನ್ಯೂಸ್‌ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ fact check ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್‌ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ. ಹೀಗಾಗಿ ಕೃತಕ ಬುದ್ದಿಮತ್ತೆ ಬಳಸಿ. ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದಾಖಲಿಸಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ?

ಡ್ರಗ್ಸ್ ಮಾರೋರು ಯಾರು? ರೌಡಿಗಳು ಯಾರು?, ರಿಯಲ್ ಎಸ್ಟೇಟ್ ಮಾಡೋರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರುತ್ತೆ. ಆದರೂ ಯಾಕೆ ನಿಲ್ಲುತ್ತಿಲ್ಲ‌ ಎಂದು ಪ್ರಶ್ನಿಸಿದ ಸಿಎಂ, ನಿಮಗೆ ಗನ್‌ ಕೊಟ್ಟಿರುವುದು ಏಕೆ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ. ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದರು.

ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ನಿಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಕೆಳಗಿನ‌ ಅಧಿಕಾರಿಗಳು‌ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬೀಟ್ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಹೈವೇ ಪ್ಯಾಟ್ರೋಲಿಂಗ್ ವ್ಯವಸ್ಥೆಯನ್ನು ತೀವ್ರ ಪರಿಣಾಮಕಾರಿಯಾಗಿ ನಿರ್ವಹಿಸಲು ಸಿಎಂ ಸೂಚನೆ ನೀಡಿದರು.

ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಮತ್ತೊಂದು ಕೊಲೆಗಳು ನಡೆದವು. ಇಂಟೆಲಿಜೆಂಟ್ ಪೊಲೀಸರು ಎಚ್ಚರ ಇದ್ದಿದ್ದರೆ ಎರಡನೇ ಕೊಲೆ ತಪ್ಪಿಸಬಹುದಿತ್ತು. ಅದಕ್ಕೇ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಯಿತು.‌ ಇವರ ನಿರ್ಲಕ್ಷ್ಯದಿಂದ ಕೊಲೆ ಆಗಿದೆ. ಈ ಕೊಲೆ ತಪ್ಪಿಸಬಹುದಿತ್ತು. ಜನರಿಗೆ ಪೊಲೀಸ್ ಬಳಿ ಹೋದರೆ ನ್ಯಾಯ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸ ಹೆಚ್ಚಾಗಬೇಕು. ಶಾಂತಿ ಸಭೆಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ನಿಯಮಿತವಾಗಿ ನಡೆಸಲೇಬೇಕು ಎಂದು ಸೂಚಿಸಿದರು.

ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸಹಿಸಲ್ಲ

ವರ್ಗಾವಣೆಗೆ ಪ್ರಭಾವ ಬೀರುವವರ ವಿರುದ್ಧ, ಹಣ ಕೊಟ್ಟು ಟ್ರಾನ್ಸ್‌ಫರ್‌ಗೆ ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ನಿಮಗೆ ಸಮಸ್ಯೆಗಳಿದ್ದರೆ ಗೃಹ ಸಚಿವರು, ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿ ಸರಿಪಡಿಸಿಕೊಳ್ಳಿ. ಕಾನೂನು ಮೀರಿ ಕೆಲಸ ಮಾಡಿ ಎಂದು ಸರ್ಕಾರ ಯಾವತ್ತೂ ಬಯಸಲ್ಲ. ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸರ್ಕಾರ ಸಹಿಸಲ್ಲ ಎಂದರು.

ಗೃಹ ಸಚಿವರಿಗೆ, ಕರ್ನಾಟಕ‌ ಪೊಲೀಸ್‌ಗೆ ಅಭಿನಂದನೆ

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್‌ ಇಲಾಖೆಗೆ ಮುಖ್ಯಮಂತ್ರಿಗಳು ಅಭಿನಂಧಿಸಿದರು.‌

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.

ನ್ಯಾಯ ನೀಡಿಕೆಯಲ್ಲಿ ಕರ್ನಾಟಕ ಪೊಲೀಸ್‌ಗೆ ದೇಶದಲ್ಲಿ ಪ್ರಥಮ ಸ್ಥಾನ

ದೇಶದ ಪ್ರತಿಷ್ಠಿತ India justice Report ನವರು ನಡೆಸಿದ ಸಮೀಕ್ಷೆ ಮತ್ತು ವರದಿಯಲ್ಲಿ ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice delivery) ಯಲ್ಲಿ ಪ್ರಥಮ‌ ಸ್ಥಾನ‌ ಪಡೆದಿದೆ. ಒಟ್ಟು 10 ಅಂಕಗಳನ್ನು ಇಟ್ಟು ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ 6.38 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ‌ ಸ್ಥಾನ ಗಳಿಸಿದೆ ಎಂದು India justice Report ಅನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರಸ್ತಾಪಿಸಿ, ಈ ಗುಣಮಟ್ಟ ಕಾಯ್ದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ | Channapatna By Election: ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

ತಂತ್ರಾಂಶ ಮತ್ತು ಕೈಪಿಡಿ ಬಿಡುಗಡೆ

  • ಸೀನ್ ಆಫ್ ಕ್ರೈಂ ಕೈಪಿಡಿ
  • ಸಂಚಯ: ಹೊಸ ಕ್ರಿಮಿನಲ್ ಕಾನೂನುಗಳ ಡಿಜಿಟಲ್ ತಂತ್ರಾಂಶ, ಆಪ್ ಬಿಡುಗಡೆ.
  • ರಿಯಲ್ ಟೈಂ ಟ್ರಾಕಿಂಗ್ ಆಫ್ ಹೊಯ್ಸಳ ತಂತ್ರಾಂಶ
  • ಬೆಂಗಳೂರು ಸಿಟಿ ಪೊಲೀಸ್- ಸೇಫ್ ಕನೆಕ್ಟ್ (ಕಮಾಂಡ್ ಸೆಂಡರ್ ಜೊತೆಗೆ ನೊಂದವರು ಆಡಿಯೊ, ವಿಡಿಯೊ ಕಾಲ್ ಮೂಲಕ ಸಂಪರ್ಕ‌ ಸಾಧಿಸುವ ಸಾಧನ)
  • ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ (ಸೈಬರ್ ಕ್ರೈಂ ಕೈಪಿಡಿ) ಬಿಡುಗಡೆ ಮಾಡಲಾಯಿತು.
Continue Reading

ಬೆಂಗಳೂರು

BESCOM Order : ವಿದ್ಯುತ್‌ ಕಂಬಗಳ ಮೇಲೆ ಅನಧಿಕೃತ ಕೇಬಲ್‌ ತೆರವಿಗೆ ಗಡುವು; ಬಿಸಿ ಮುಟ್ಟಿಸಲು ಸಜ್ಜಾದ ಬೆಸ್ಕಾಂ

ಹಿಂದೊಮ್ಮೆ ನಡೆದ ಅವಘಡದಿಂದ ಎಚ್ಚೆತುಕೊಂಡಿರುವ ಬೆಸ್ಕಾಂ, ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ಗಳ ತೆರವಿಗೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ಅನಧಿಕೃತ ಕೇಬಲ್‌ ಅಳವಡಿಸುವವರಿಗೆ ಬಿಸಿಮುಟ್ಟಿಸಿಲು ಮುಂದಾಗಿರುವ ಬೆಸ್ಕಾಂ (BESCOM Order) ಬರುವ ಸೋಮವಾರದವರೆಗೆ ಗಡುವು ನೀಡಿದೆ.

VISTARANEWS.COM


on

By

Bescom Order
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿರುವ (BESCOM Order) ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್‌ಸಿ ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್ ಕೇಬಲ್‌ಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಜು. 8ರ ಒಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್‌ ನೆಟ್‌ ಸೇವಾ ಕಂಪನಿಗಳು, ಟಿವಿ ಕೇಬಲ್‌ ಆಪರೇಟರ್‌ಗಳಿಗೆ ಬೆಸ್ಕಾಂ ಗಡುವು ನೀಡಿದೆ.

ಹಿಂದೊಮ್ಮೆ ಕಳೆದ 2023ರಂದು ಆಗಸ್ಟ್‌ 23 ರಂದು ಬೆಂಗಳೂರಿನ ಸುದ್ಗುಂಟೆಪಾಳ್ಯ ಬಳಿ‌ ಇರುವ ಸೆಂಟ್ ಕ್ರೈಸ್ಟ್ ಕಾಲೇಜು ಬಳಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ವಿದ್ಯುತ್‌ ತಂತಿ (electric shock) ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದಳು. ಈ ಘಟನೆ ನಡೆದ ದಿನದಿಂದ ಬೆಸ್ಕಾಂ ಅಧಿಕಾರಿಗಳು ಆ್ಯಕ್ವಿವ್‌ ಆಗಿದ್ದಾರೆ.

ವಿದ್ಯುತ್‌ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓಎಫ್‌ಸಿ, ಕೇಬಲ್‌, ಡಾಟ ಕೇಬಲ್‌ ಹಾಗೂ ಡಿಶ್‌ ಕೇಬಲ್‌ ಗಳನ್ನು ತೆರವುಗೊಳಿಸುವ ಸಂಬಂಧ ಬೆಸ್ಕಾಂ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಅನಧಿಕೃತ ಡಾಟ ಕೇಬಲ್‌, ಓಎಫ್‌ಸಿ ಕೇಬಲ್‌ ಹಾಗೂ ಡಿಶ್‌ ಕೇಬಲ್‌ಗಳನ್ನು ತೆರವುಗೊಳಿಸಲು ಒಂದು ವಾರಗಳ ಗಡುವು ವಿಧಿಸಿತ್ತು.

ಇದನ್ನೂ ಓದಿ: Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಬೆಸ್ಕಾಂನ ವಿಶೇಷ ಕಾರ್ಯಾಚರಣೆ ಹೊರತಾಗಿಯೂ ಅನಧಿಕೃತ ಕೇಬಲ್‌ಗಳನ್ನು ವಿದ್ಯುತ್‌ ಕಂಬಗಳ ಮೇಲೆ ಡಿಶ್‌ ಕೇಬಲ್‌ ಹಾಗೂ ಡಾಟ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಬೆಸ್ಕಾಂ ವಿದ್ಯುತ್‌ ಕಂಬಗಳಲ್ಲಿ ಹಾಕಿರುವ ಓಎಫ್‌ಸಿ, ಇಂಟರ್‌ ನೆಟ್‌ ಡಾಟ ಕೇಬಲ್‌ ಹಾಗೂ ಡಿಶ್‌ ಕೇಬಲ್‌ಗಳನ್ನು ಬರುವ ಸೋಮವಾರದೊಳಗೆ (08.07.2024) ತೆರವುಗೊಳಿಸಲು ಸೂಚಿಸಿದೆ.

ಸಂಬಂಧಪಟ್ಟ ಇಂಟರ್‌ ನೆಟ್‌ ಕಂಪನಿಗಳು ಹಾಗೂ ಡಿಶ್‌ ಕೇಬಲ್‌ ಅಪರೇಟರ್‌ಗಳು ತೆರವುಗೊಳಿಸಲು ತಪ್ಪಿದ್ದಲ್ಲಿ, ಬೆಸ್ಕಾಂ ಅವುಗಳನ್ನು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲಿದೆ. ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಒಂದು ವೇಳೆ ಅನಧಿಕೃತ ಕೇಬಲ್‌ಗಳಿಂದ ವಿದ್ಯುತ್‌ ಅವಘಡಗಳು ಸಂಭವಿಸಿದ್ದಲ್ಲಿ ಸಂಬಂಧಿಸಿದ ಓಎಫ್‌ಸಿ, ಡಾಟ ಕೇಬಲ್‌, ಡಿಶ್‌ ಕೇಬಲ್‌ ಅಪರೇಟರ್‌ಗಳು ಅಥವಾ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
karnataka weather Forecast
ಮಳೆ11 mins ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Ambani Family Fashion
ಫ್ಯಾಷನ್38 mins ago

Ambani Family Fashion: ಅಂಬಾನಿ ಮಹಿಳೆಯರ ದುಬಾರಿ ಉಡುಗೆಗಳು; ಇವರ ಮದುವೆ ಡ್ರೆಸ್‌‌ಗಳು ಹೇಗಿವೆ?

Team India :
ಪ್ರಮುಖ ಸುದ್ದಿ39 mins ago

Team India : ಎರಡನೇ ಟಿ20 ವಿಶ್ವ ಕಪ್​ ಗೆದ್ದ ಬಳಿಕವೂ ಭಾರತ ತಂಡದ ಜೆರ್ಸಿಯಲ್ಲಿ ಒಂದೇ ಸ್ಟಾರ್​ ಯಾಕೆ? ಇಲ್ಲಿದೆ ವಿವರಣೆ

BJP Karnataka
ಕರ್ನಾಟಕ40 mins ago

BJP Karnataka: ವಿಧಾನಸಭೆ, ವಿಧಾನ ಪರಿಷತ್ ಉಪಚುನಾವಣೆ; 4 ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳ ನೇಮಕ

Narendra Modi
ಪ್ರಮುಖ ಸುದ್ದಿ57 mins ago

Narendra Modi: ಬ್ರಿಟನ್‌ ನೂತನ ಪ್ರಧಾನಿ ಕೀರ್‌ ಸ್ಟಾರ್ಮರ್‌ಗೆ ಮೋದಿ ಕರೆ; ಭಾರತಕ್ಕೆ ಆಗಮಿಸುವಂತೆ ಮನವಿ!

Nafees Iqbal
ಪ್ರಮುಖ ಸುದ್ದಿ1 hour ago

Nafees Iqbal : ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗನಿಗೆ ಮೆದುಳಿನ ರಕ್ತಸ್ರಾವ; ಪರಿಸ್ಥಿತಿ ಗಂಭೀರ

World Chocolate Day
ಲೈಫ್‌ಸ್ಟೈಲ್1 hour ago

World Chocolate Day: ಬಾಯಿ ಸಿಹಿ ಮಾಡಿಕೊಳ್ಳುವುದಕ್ಕೆ ಮತ್ತೊಂದು ದಿನ! ಇಂದು ಚಾಕಲೇಟ್ ಮರೆಯದೇ ತಿನ್ನಿ!

Password Leak
ದೇಶ1 hour ago

Password Leak: 995 ಕೋಟಿ ಪಾಸ್‌ವರ್ಡ್‌ಗಳು ಲೀಕ್;‌ ನಿಮ್ಮ ಪಾಸ್‌ವರ್ಡ್‌ ಕೂಡ ಕಳ್ಳತನ ಆಗಿದೆಯೇ?

CM Siddaramaiah
ಕರ್ನಾಟಕ2 hours ago

CM Siddaramaiah: ಪ್ರತಿ ಠಾಣೆಗೂ ತೆರಳಿ ಪರಿಶೀಲಿಸಬೇಕು: ಪೊಲೀಸ್‌ ಮೇಲಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

Dolly dhananjay Halagali on set
ಸ್ಯಾಂಡಲ್ ವುಡ್2 hours ago

Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ11 mins ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ3 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ4 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು6 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ8 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ12 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ1 day ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ1 day ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ1 day ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ1 day ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

ಟ್ರೆಂಡಿಂಗ್‌