ಪತ್ನಿ-ಮಕ್ಕಳನ್ನು ನೋಡಿ ಬರುತ್ತೇನೆ ಎಂದು ಅಮೆರಿಕಕ್ಕೆ ಹೊರಟ ಶಾಸಕ; 10 ದಿನ ಲಭ್ಯವಿರೋಲ್ಲ ಇವರು - Vistara News

ಕರ್ನಾಟಕ

ಪತ್ನಿ-ಮಕ್ಕಳನ್ನು ನೋಡಿ ಬರುತ್ತೇನೆ ಎಂದು ಅಮೆರಿಕಕ್ಕೆ ಹೊರಟ ಶಾಸಕ; 10 ದಿನ ಲಭ್ಯವಿರೋಲ್ಲ ಇವರು

ಈ ಸಲದ ವಿಧಾನಸಭೆ ಚುನಾವಣೆ ಪೂರ್ವ ಇಲ್ಲಿಯೇ ನೆಲೆಸಿದ್ದು ಪ್ರಚಾರ ನಡೆಸಿದ್ದರು. ಇದೀಗ ಫಲಿತಾಂಶ ಬಂದು, ತಾವು ಗೆದ್ದ ಬೆನ್ನಲ್ಲೇ ಅಮೆರಿಕಕ್ಕೆ ಹೊರಟಿದ್ದಾರೆ. ಕ್ಷೇತ್ರದ ಜನರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

VISTARANEWS.COM


on

darshan puttannaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಡ್ಯ: ಇಲ್ಲಿನ ಮೇಲುಕೋಟೆ ಶಾಸಕ, ಸರ್ವೋದಯ ಪಕ್ಷದ ಮುಖಂಡ ದರ್ಶನ್​ ಪುಟ್ಟಣ್ಣಯ್ಯ (Darshan Puttannaiah) ಈಗ ಅಮೆರಿಕಕ್ಕೆ ಹೊರಟುನಿಂತಿದ್ದಾರೆ. ಈ ಬಗ್ಗೆ ವಿಡಿಯೊ ಮೂಲಕ ತಿಳಿಸಿದ ಅವರು, ಪತ್ನಿ ಮತ್ತು ಮಕ್ಕಳೆಲ್ಲ ಅಮೆರಿಕದಲ್ಲಿಯೇ ಇದ್ದಾರೆ. ಅವರನ್ನು ನೋಡದೆ ಐದು ತಿಂಗಳ ಮೇಲಾಯಿತು. ಹೀಗಾಗಿ ಅವರನ್ನು ನೋಡಿಕೊಂಡು ಬರುತ್ತೇನೆ. 10 ದಿನಗಳ ಕಾಲ ಅಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.

ದರ್ಶನ್​ ಪುಟ್ಟಣ್ಣಯ್ಯನವರು ಈ ಸಲ ಮೇಲುಕೋಟೆಯಲ್ಲಿ ಬಿಜೆಪಿಯ ಡಾ.ಇಂದ್ರೇಶ್​ ಮತ್ತು ಜೆಡಿಎಸ್​ನ ಸಿಎಸ್​ ಪುಟ್ಟರಾಜು ಅವರ ವಿರುದ್ಧ ಗೆದ್ದು ಶಾಸಕರಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿರಲಿಲ್ಲ, ಬದಲಿಗೆ ದರ್ಶನ್​ ಪುಟ್ಟಣಯ್ಯನವರನ್ನೇ ಬೆಂಬಲಿಸಿತ್ತು. ದರ್ಶನ್​ ಪುಟ್ಟಣಯ್ಯ 15 ವರ್ಷಗಳಿಂದಲೂ ಅಮೆರಿಕದಲ್ಲಿಯೇ ನೆಲೆಸಿ, ಉದ್ಯಮ ಮಾಡಿಕೊಂಡಿದ್ದವರು. ತಂದೆ ಕೆ.ಎಸ್​.ಪುಟ್ಟಣಯ್ಯ ಸಾವಿನ ಬಳಿಕ ಅವರು ರಾಜಕೀಯಕ್ಕೆ ಕಾಲಿಟ್ಟು, 2018ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಮತದಾರ ಕೈಹಿಡಿದು ಗೆಲ್ಲಿಸಿದ್ದಾನೆ.

ಈ ಸಲದ ವಿಧಾನಸಭೆ ಚುನಾವಣೆ ಪೂರ್ವ ಇಲ್ಲಿಯೇ ನೆಲೆಸಿದ್ದು ಪ್ರಚಾರ ನಡೆಸಿದ್ದರು. ಇದೀಗ ಫಲಿತಾಂಶ ಬಂದು, ತಾವು ಗೆದ್ದ ಬೆನ್ನಲ್ಲೇ ಅಮೆರಿಕಕ್ಕೆ ಹೊರಟಿದ್ದಾರೆ. ಯಾರಿಗಾದರೂ, ಏನಾದರೂ ಕೆಲಸ ಕಾರ್ಯಗಳು ಆಗಬೇಕೆಂದರೆ ನನ್ನ ಫೋನ್​ನಂಬರ್​ಗೆ ಕರೆ ಮಾಡಿ, ಇಲ್ಲಿರುವುವರೇ ಕರೆ ಸ್ವೀಕರಿಸುತ್ತಾರೆ. ನನ್ನ ಬಳಿಯೇ ಮಾತಾಡಬೇಕು ಎಂದರೆ ಅವರೇ ನನಗೆ ಕನೆಕ್ಟ್ ಮಾಡಿಕೊಡುತ್ತಾರೆ. ಎಲ್ಲರೂ ಶಾಂತಿಯಿಂದ ಇರಿ. ನಾನು ಮತ್ತೆ ಬಂದು ಕಾಣುತ್ತೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.

ಇದನ್ನೂ ಓದಿ: Karnataka Elections : ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯಗೆ ಚಿನಕುರುಳಿ ಗ್ರಾಮಸ್ಥರಿಂದ 3.25 ಲಕ್ಷ ರೂ. ದೇಣಿಗೆ

ಸುಳ್ಳು ಹೇಳ್ತಿದ್ದಾರಾ ಶಾಸಕ?
ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದ ದರ್ಶನ್​ ಪುಟ್ಟಣಯ್ಯ ತಾವಿನ್ನು ಇಲ್ಲಿಯೇ ನೆಲೆಸುವುದಾಗಿ ಹೇಳಿದ್ದರು. ಇನ್ನು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನೋಡಿ ಐದು ತಿಂಗಳಾಗಿದೆ ಎನ್ನುತ್ತಿದ್ದಾರೆ. ಆದರೆ ಚುನಾವಣೆ ಸಮಯದಲ್ಲಿ ಪತ್ನಿ ಮತ್ತು ಮಕ್ಕಳು ಕ್ಯಾತನಹಳ್ಳಿಗೆ ಬಂದಿದ್ದರು. ಅವರು ಚುನಾವಣೆ ಮುಗಿದ ಬಳಿಕ ವಾಪಸ್ ಅಮೆರಿಕಕ್ಕೆ ತೆರಳಿದ್ದಾರೆ. ದರ್ಶನ್​ ಪುಟ್ಟಣಯ್ಯ ಜತೆ ಅವರ ಪತ್ನಿಯೂ ಪ್ರಚಾರದಲ್ಲಿ ಭಾಗಿಯಾಗಿದ್ದರು. ಹಾಗಿದ್ದಾಗ್ಯೂ ದರ್ಶನ್​ ಪುಟ್ಟಣ್ಣಯ್ಯ ಈ ಸುಳ್ಳು ಹೇಳುತ್ತಿರುವುದು ಯಾಕೆ ಎಂದು ಕ್ಷೇತ್ರದ ಕೆಲವು ಜನರೇ ಪ್ರಶ್ನೆ ಮಾಡುತ್ತಿದ್ದಾರೆ.

ದರ್ಶನ್​ ಪುಟ್ಟಣ್ಣಯ್ಯ ಜತೆ ಪ್ರಚಾರದಲ್ಲಿ ಪಾಲ್ಗೊಂಡ ಪತ್ನಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna Case: ಪ್ರಜ್ವಲ್‌ ರೇವಣ್ಣ, ರೇವಣ್ಣ ಮನೆ ಇಂಚಿಂಚೂ ತಲಾಶ್, ಸಿಗ್ತಾ ಮಹತ್ವದ ಕ್ಲೂ?

Prajwal Revanna Case: ನಿನ್ನೆ ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್, ಸೂರಜ್ ರೇವಣ್ಣಗೆ ಸೇರಿದ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್ ಮೇಲೆ ಹೀಗೆ ಒಟ್ಟು ಮೂರು ಕಡೆ SIT ಅಧಿಕಾರಿಗಳು ದಾಳಿ ನಡೆಸಿದ್ದಾರೆ.

VISTARANEWS.COM


on

prajwal revanna case hd revanna farm house
Koo

ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಹಾಗೂ ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna) ಲೈಂಗಿಕ ದೌರ್ಜನ್ಯ (Physical abuse) ಹಗರಣಕ್ಕೆ ಸಂಬಂಧಿಸಿ ತೀವ್ರ ಕಾರ್ಯಾಚರಣೆಗೆ ಇಳಿದಿರುವ ವಿಶೇಷ ತನಿಖಾ ತಂಡ (SIT) ತಂದೆ- ಮಗ ಇಬ್ಬರ ಬೆಂಗಳೂರು ಹಾಗೂ ಹಾಸನ ಜಿಲ್ಲೆಯ ಮನೆಗಳು ಹಾಗೂ ಫಾರಂ ಹೌಸ್‌ಗಳಿಗೆ (Farm house) ದಾಳಿ ನಡೆಸಿ ತೀವ್ರ ತಪಾಸಣೆ ನಡೆಸಿದೆ.

ಇಂದು ಬೆಳ್ಳಂಬೆಳಿಗ್ಗೆ ಪ್ರಜ್ವಲ್ ತೋಟದ ಮನೆಗೆ ಎಸ್ಐಟಿ ಅಧಿಕಾರಿಗಳ ತಂಡ ರೇಡ್ ಮಾಡಿದ್ದು, ಐದು ಜನರ ತಂಡದಿಂದ ಪಡುವಲಹಿಪ್ಪೆಯ ತೋಟದ ಮನೆಯಲ್ಲಿ ಪರಿಶೀಲನೆ ನಡೆದಿದೆ. ಮುಂಜಾನೆ 3.30ರ ಸುಮಾರಿನಲ್ಲೇ ಬಂದು ಪರಿಶೀಲನೆ ನಡೆಸಿರುವ ಬಗ್ಗೆ ಮಾಹಿತಿ ಇದೆ.

ನಿನ್ನೆ ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್, ಸೂರಜ್ ರೇವಣ್ಣಗೆ ಸೇರಿದ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್ ಮೇಲೆ ಹೀಗೆ ಒಟ್ಟು ಮೂರು ಕಡೆ SIT ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 30ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿ ಏಕಕಾಲಕ್ಕೆ ದಾಳಿ ಮಾಡಿದ್ದು, ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಎಸ್‌ಪಿ ಸೀಮಾ ಲಾಠ್ಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಪ್ರಜ್ವಲ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗುತ್ತಲೇ ಹಾಸನಕ್ಕೆ ಬಂದಿರುವ ಪೊಲೀಸರ ಎರಡು ತಂಡ, ಪಡುವಲಹಿಪ್ಪೆ ಸೇರಿ ಎರಡು ಕಡೆ ಸ್ಥಳ ಪರಿಶೀಲನೆ ನಡೆಸಿದೆ. ಇಂದು ಹೊಳೆನರಸೀಪುರದ ರೇವಣ್ಣ ನಿವಾಸ ಹಾಗು ಹಾಸನದ ಪ್ರಜ್ವಲ್ ನಿವಾಸದಲ್ಲೂ ಪರಿಶೀಲನೆ ನಡೆಸಿ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ.

ಕೃತ್ಯ ನಡೆದಿದೆ ಎನ್ನಲಾಗುತ್ತಿರುವ ಹಲವು ಸ್ಥಳಗಳಲ್ಲಿ ಎಸ್‌ಐಟಿ ತನಿಖೆ ನಡೆಸಬೇಕಿದೆ. ಹೀಗಾಗಿ ಹಾಸನದ ಆರ್‌ಸಿ ರಸ್ತೆಯ ಸಂಸದರ ನಿವಾಸ ಹಾಗು ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯ ತೋಟದ ಮನೆಯನ್ನು ಎಸ್ಐಟಿ ವಶಕ್ಕೆ ಪಡೆಯುವ ಸಂಭವ ಇದೆ.

ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಟೈಟ್‌ ಎಫ್‌ಐಆರ್‌, ಇದರಲ್ಲಿ ಬಂಧನ ಖಚಿತ!

ಬೆಂಗಳೂರು: ಹಗರಣದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ದೂರಿನಲ್ಲಿ ಬಿಗಿಯಾದ ಸೆಕ್ಷನ್‌ಗಳನ್ನು ದಾಖಲಿಸಲಾಗಿದ್ದು, ಇದರಡಿ ಪ್ರಜ್ವಲ್‌ ಅವರ ಬಂಧನ ಖಚಿತವಾಗಿದೆ. ಮೈಸೂರಿನಲ್ಲೂ (Mysore news) ಇನ್ನೊಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದೆ. ಇಲ್ಲಿಗೆ ಒಟ್ಟು ಮೂರು ದೂರುಗಳಾಗಿವೆ.

ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವ ಎರಡನೇ ಎಫ್ಐಆರ್ ಸಿಐಡಿ ಸೈಬರ್ ಠಾಣೆಯಲ್ಲಿ ದಾಖಲಾಗಿದೆ. ಎರಡನೇ ಎಫ್ಐಆರ್‌ನಲ್ಲಿ ದಾಖಲಿಸಿರುವ ಸೆಕ್ಷನ್‌ಗಳು ಹೆಚ್ಚು ಬಿಗಿಯಾಗಿದ್ದು, ತನಿಖೆಗೆ ಹಾಸನ ಸಂಸದರ ಬಂಧನವನ್ನು ಅನಿವಾರ್ಯವಾಗಿಸಿವೆ. IPC 376(2)N, 506 ,354a1, 354b, 354c ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿವೆ. 376(2)n ಸೆಕ್ಷನ್‌ ಮಹಿಳೆ ಮೇಲೆ‌ ಬೆದರಿಸಿ ನಿರಂತರ ಅತ್ಯಾಚಾರ ನಡೆಸುವುದನ್ನು ದಾಖಲಿಸುತ್ತಿದ್ದು, ಇದು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಯಾಗಲಿದೆ.

ಸೆಕ್ಷನ್‌ 506 ಅಪರಾಧಿಕ ಉದ್ದೇಶದಿಂದ ಬೆದರಿಸುವುದು, 354a1 ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು- ಇದಕ್ಕೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ, 354b ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡುವುದು- ಗರಿಷ್ಠ ಮೂರು ವರ್ಷ ಶಿಕ್ಷೆ, 354c ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಖಾಸಗಿ ವಿಷಯವನ್ನು ರೆಕಾರ್ಡ್ ಮಾಡುವುದು ಮತ್ತು ನೋಡುವುದು- ಗರಿಷ್ಠ ಏಳು ವರ್ಷ ಶಿಕ್ಷೆ ಇವುಗಳಿವೆ.

ಎರಡನೇ ಎಫ್ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ ಮಾತ್ರ ಆರೋಪಿಯಾಗಿದ್ದಾರೆ. ಮೊದಲ ದೂರಿನಲ್ಲಿ ಎಚ್‌ಡಿ ರೇವಣ್ಣ ಕೂಡ ಆರೋಪಿಯಾಗಿದ್ದರು. ಎಚ್‌ಡಿ ರೇವಣ್ಣ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದ ಕೂಡಲೇ ಬಂಧನ ಮಾಡಲು ಎಸ್‌ಐಟಿ ಸಜ್ಜಾಗಿದೆ. ಈಗಾಗಲೇ ಆರೋಪಿಗೆ ಲುಕ್‌ಔಟ್ ನೊಟೀಸ್ ಹೊರಡಿಸಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನ ಬಹುತೇಕ ಖಚಿತವಾಗಿದೆ.

ಮೈಸೂರಿನಲ್ಲೂ ದೂರು

ಪ್ರಜ್ವಲ್‌ ರೇವಣ್ಣ (Prajwal Revanna Case) ಮೇಲೆ ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ದಾಖಲಾಗಿದೆ. ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕೆ.ಆರ್.ನಗರ ತಾಲೂಕಿನಲ್ಲಿ ಘಟನೆ ನಡೆದಿದೆ. “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಂತೆ ಈ ದೂರು ಕೂಡ ಹೊರಬಂದಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಟೈಟ್‌ ಎಫ್‌ಐಆರ್‌, ಇದರಲ್ಲಿ ಬಂಧನ ಖಚಿತ!

Continue Reading

ಕ್ರೈಂ

Assault Case: ಇನ್ನೊಂದು ವಂಟಮೂರಿ ಮಾದರಿ ಕೇಸ್‌, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿತ

Assault Case: ಹನಮವ್ವ ದುರಗಪ್ಪ ಮೆಡ್ಲೆರಿ (50) ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳ ಜೊತೆಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

VISTARANEWS.COM


on

woman assault case haveri
Koo

ಹಾವೇರಿ: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ (Vantamuri Case) ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿ (Assault Case) ಮೆರವಣಿಗೆ ಮಾಡಿದ ಅಮಾನುಷ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಂದು ಅಂಥದೇ ಪ್ರಕರಣ ಹಾವೇರಿ (Haveri news) ಜಿಲ್ಲೆಯಲ್ಲಿ ನಡೆದಿದೆ. ಇದರಲ್ಲಿ ಮಹಿಳೆಯನ್ನು (Woman assaulted) ಆಕೆಯ ಯಾವುದೇ ತಪ್ಪಿಲ್ಲದೆ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.

ಹಾವೇರಿ ಜಿಲ್ಲೆಯ ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಅರಮಲ್ಲಾಪುರ ಗ್ರಾಮದಲ್ಲಿ ಈ ಬರ್ಬರ ಘಟನೆ ನಡೆದಿದೆ. ಹನಮವ್ವ ದುರಗಪ್ಪ ಮೆಡ್ಲೆರಿ (50) ಹಲ್ಲೆಗೊಳಗಾದ ಮಹಿಳೆ. ಈಕೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳ ಜೊತೆಗೆ ಪರಾರಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವಕನ ಮಗ ಯುವತಿಯೊಬ್ಬಳನ್ನು ಅಪಹರಿಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಯುವತಿ ಕಡೆಯವರು ಥಳಿಸಿದ್ದಾರೆ. ಅದೇ ಗ್ರಾಮದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಹಲ್ಲೆ ಮಾಡಿದ ಆರೋಪಿಗಳು. ಈಕೆಯ ಮಗ ಮಂಜುನಾಥ ಯುವತಿಯನ್ನು ಕರೆದುಕೊಂಡು ಹೋಗಿರುವ ಆರೋಪವಿದೆ. ಆತ ಯುವತಿಯನ್ನು ಬಲವಂತವಾಗಿ ಅಪಹರಿಸಿದ್ದಲ್ಲದೆ ಆಭರಣಗಳನ್ನೂ ದೋಚಿದ್ದಾನೆ ಎಂದು ಇವರು ದೂರಿದ್ದಾರೆ.

ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ “ನಿನ್ನ ಮಗ ಎಲ್ಲಿದ್ದಾನೆ ಹೇಳು” ಎಂದು ಪೀಡಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿದರು. ಗಾಯಗೊಂಡ ಹನಮವ್ವಳಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ರಾಣೇಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಬೆಂಗಳೂರು: ಪೊಲೀಸ್ ಠಾಣಾ ಆವರಣದಲ್ಲೇ ಮಹಿಳೆಯೊಬ್ಬಳು ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ (Assault Case) ಮಾಡಿದ್ದಾಳೆ. ಸೈಟು ವಿಚಾರಕ್ಕೆ (Site Dispute) ಎರಡು ಗುಂಪುಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಜ್ಞಾನಭಾರತಿ ಠಾಣೆಗೆ ಬಂದಿದ್ದರು. ಈ ವೇಳೆ ಎರಡು ಗುಂಪುಗಳ ಸದಸ್ಯರು ಮಾತಿಗೆ ಮಾತು ಬೆಳೆಸಿ ಕಿತ್ತಾಡಲು ಮುಂದಾಗಿದ್ದರು. ಹೀಗಾಗಿ ಮಧ್ಯಪ್ರವೇಶಿಸಿ ಗಲಾಟೆ ಮಾಡದಂತೆ ಎಚ್ಚರಿಸಲು ಹೋದ ಇನ್‌ಸ್ಪೆಕ್ಟರ್‌ಗೆ ಮಹಿಳೆಯೊಬ್ಬಳು ಕಪಾಳಕ್ಕೆ ಹೊಡೆದಿದ್ದಾಳೆ.

ಬುಧವಾರ ಸಂಜೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ರವಿ ಅವರಿಗೆ ಫೌಜೀಯಾ ಎಂಬಾಕೆ ಹಲ್ಲೆ ನಡೆಸಿದ್ದಾಳೆ. ಫೌಜೀಯಾ ಹಾಗೂ ಇನ್ನೊಂದು ಗುಂಪು ಸೈಟು ವಿಚಾರಕ್ಕೆ ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಠಾಣೆ ಆವರಣದಲ್ಲಿ ಎರಡು ಗುಂಪುಗಳು ಏರು ಧ್ವನಿಯಲ್ಲಿ ಕೂಗಾಡುತ್ತಾ ಮಾತನಾಡುತ್ತಿದ್ದರು.

ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್‌ ರವಿ ಎರಡು ಗುಂಪುಗಳಿಗೆ ಗಲಾಟೆ ಮಾಡದಂತೆ ವಾರ್ನಿಂಗ್‌ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಫೌಜೀಯ ಏಕಾಏಕಿ ಇನ್‌ಸ್ಪೆಕ್ಟರ್‌ ರವಿ ಅವರ ಕಪಾಳಕ್ಕೆ ಹೊಡೆದಿದ್ದಾಳೆ. ಮಾನವ ಹಕ್ಕುಗಳ ಸಂಘಟನೆಯಲ್ಲಿರುವ ಫೌಜೀಯಾ ಹಾಗೂ ಮತ್ತಿಬ್ಬರು ಮಹಿಳೆಯರ ಮೇಲೆ ಎಫ್‌ಐಆರ್ ದಾಖಲಾಗಿದೆ. ರಾತ್ರಿಯೇ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Assault Case : ವಿವಾಹಿತೆ ಹಿಂದೆ ಬಿದ್ದ ಪಾಗಲ್‌ ಪ್ರೇಮಿ; ಮದುವೆ ನಿರಾಕರಿಸಿದ್ದಕ್ಕೆ ಮನೆಗೆ ಇಟ್ಟ ಬೆಂಕಿ

ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

ಬೆಂಗಳೂರು: ಬೆಂಗಳೂರಿನ (Bengaluru News) ಕೋರಮಂಗಲ ಪೊಲೀಸ್ ಠಾಣಾ (Kormangala police station) ವ್ಯಾಪ್ತಿಯಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಕೊಲೆಯಾಗಿದೆ. ಸೆಲ್ವಿನ್ ಪ್ರಾನ್ಸಿಸ್ ಎಂಬಾತ ಪತ್ನಿಯನ್ನು ನಡುರಸ್ತೆಯಲ್ಲೆ ಚಾಕುವಿನಿಂದ ಇರಿದು (Murder Case) ಕೊಂದಿದ್ದಾನೆ. ಗುರುವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಸೆಲ್ವಿನ್ ಪ್ರಾನ್ಸಿಸ್ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಪತಿಯಿಂದ 6 ತಿಂಗಳ ಹಿಂದೆ ದೂರಾಗಿದ್ದಳು. ವೆಂಕಟಾಪುರದ ತಾಯಿ ಮನೆಯಲ್ಲಿ ವಾಸವಿದ್ದಳು. ಇಂದು ಗುರುವಾರ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಪತ್ನಿ ಜತೆಗೆ ಸೆಲ್ವಿನ್‌ ಪ್ರಾನ್ಸಿಸ್‌ ಗಲಾಟೆ ಮಾಡಿಕೊಂಡಿದ್ದ. ಈ ಮೊದಲೇ ಪ್ರಿಪ್ಲಾನ್‌ ಮಾಡಿಕೊಂಡು ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸೆಂಜ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

KSET Exam 2023: ಉಪನ್ಯಾಸಕರ ಅರ್ಹತಾ ಪರೀಕ್ಷೆ ಕೆಸೆಟ್‌- 2023ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

KSET Exam 2023: ಕೆಸೆಟ್‌-2023 ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿಯನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ವಿಷಯವಾರು ಲಿಂಕ್‌ ಕ್ಲಿಕ್ ಮಾಡುವ ಮೂಲಕ ತಾತ್ಕಾಲಿಕ ಅಂಕಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.

VISTARANEWS.COM


on

KSET Exam 2023 provisional score list
Koo

ಬೆಂಗಳೂರು: ಕೆಸೆಟ್‌ ಪರೀಕ್ಷೆ- 2023ರ (KSET Exam 2023) ತಾತ್ಕಾಲಿಕ ಸ್ಕೋರ್‌ (provisional score list) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪದವಿ ಕಾಲೇಜು ಉಪನ್ಯಾಸಕರ (College lecturer) ಅರ್ಹತಾ ಪರೀಕ್ಷೆಯಾದ ʼಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ – ಕೆಸೆಟ್‌ʼ (KSET – Karnataka State Eligibility Test) ಇದರ 2023ನೇ ಸಾಲಿನ ಪರೀಕ್ಷೆಯನ್ನು ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ ಬರೆದವರು ಈಗ ತಮ್ಮ ತಾತ್ಕಾಲಿಕ ಸ್ಕೋರ್‌ ಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.

ಕೆಸೆಟ್‌-2023 ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿಯನ್ನು ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ವಿಷಯವಾರು ಲಿಂಕ್‌ ಕ್ಲಿಕ್ ಮಾಡುವ ಮೂಲಕ ತಾತ್ಕಾಲಿಕ ಅಂಕಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು. ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು 2024ರ ಜನವರಿ 13ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ರಾಜ್ಯದಾದ್ಯಂತ ವಿವಿಧ ಕೇಂದ್ರಗಳಲ್ಲಿ ನಡೆಸಿತ್ತು.

ನಂತರ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿ ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿ ದಿನಾಂಕ 04-04-2024ರಂದು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಪ್ರಸ್ತುತ ಕೆಸೆಟ್ ಪರೀಕ್ಷೆಯ ಪತ್ರಿಕೆ-1 ಮತ್ತು 41 ವಿಷಯಗಳ (ಪತ್ರಿಕೆ-2) ವಿಷಯವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರವು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ಆಕ್ಷೇಪಣೆಗಳಿಗೆ ಆಹ್ವಾನ

ಪ್ರಸ್ತುತ ಕೆಇಎ ಬಿಡುಗಡೆ ಮಾಡಿರುವ ಕೆಸೆಟ್‌ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ವಿವರವಾದ ಮಾಹಿತಿಗಳೊಂದಿಗೆ ಸಲ್ಲಿಸಲು ಮೇ 10, 2024 ರವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಯನ್ನು ಇಮೇಲ್‌ ವಿಳಾಸ -keakset2023@gmail.com ಗೆ ಕಳುಹಿಸಬಹುದು.

ವಿಶೇಷ ಸೂಚನೆ : ಈಗ ಬಿಡುಗಡೆ ಮಾಡಿರುವ ತಾತ್ಕಾಲಿಕ ಅಂಕಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಯು ಕೆಸೆಟ್-2023ರಲ್ಲಿ ಅರ್ಹತೆ ಪಡೆದಿದ್ದಾರೆಂದು ಭಾವಿಸಬಾರದು ಎಂದು ಕೆಇಎ ಸೂಚನೆ ನೀಡಿದೆ.

ತಾತ್ಕಾಲಿಕ ಅಂಕಪಟ್ಟಿ ಚೆಕ್‌ ಮಾಡುವ ವಿಧಾನ

ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.
ತೆರೆದ ಮುಖಪುಟದಲ್ಲಿ ಇತ್ತೀಚಿನ ಪ್ರಕಟಣೆಗಳು ಎಂಬಲ್ಲಿ ಗಮನಿಸಿ.
ಮೇ 02ರಂದು ಕೆಸೆಟ್‌ ತಾತ್ಕಾಲಿಕ ಅಂಕಪಟ್ಟಿಗಳನ್ನು ವಿಷಯವಾರು ಬಿಡುಗಡೆ ಮಾಡಲಾಗಿದೆ.
ನೀವು ಪರೀಕ್ಷೆ ಬರೆದ ವಿಷಯವನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
ಪಿಡಿಎಫ್‌ ಫೈಲ್‌ ಓಪನ್ ಆಗುತ್ತದೆ.
ಹೆಸರು, ರಿಜಿಸ್ಟರ್ ನಂಬರ್ ಪ್ರಕಾರ ನಿಮ್ಮ ಅಂಕಗಳನ್ನು ಚೆಕ್‌ ಮಾಡಿಕೊಳ್ಳಿ.
ಆಕ್ಷೇಪಣೆಗಳು ಇದ್ದಲ್ಲಿ ಮೇಲೆ ತಿಳಿಸಿದಂತೆ ಸವಿವರ ಮಾಹಿತಿಗಳೊಂದಿಗೆ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.

ಇದನ್ನೂ ಓದಿ: Money Guide: ಮನೆ ಪೂರ್ತಿಯಾಗುವ ಮುನ್ನವೇ ಸಾಲದ ಹಣ ಖರ್ಚಾಯ್ತೆ? ಚಿಂತೆ ಬೇಡ; ಟಾಪ್‌ ಅಪ್‌ ಲೋನ್‌ಗೆ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್ ರೇವಣ್ಣ ಮೇಲೆ ಮತ್ತೊಂದು ಟೈಟ್‌ ಎಫ್‌ಐಆರ್‌, ಇದರಲ್ಲಿ ಬಂಧನ ಖಚಿತ!

Prajwal Revanna Case: IPC 376(2)N, 506 ,354a1, 354b, 354c ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿವೆ. 376(2)n ಸೆಕ್ಷನ್‌ ಮಹಿಳೆ ಮೇಲೆ‌ ಬೆದರಿಸಿ ನಿರಂತರ ಅತ್ಯಾಚಾರ ನಡೆಸುವುದನ್ನು ದಾಖಲಿಸುತ್ತಿದ್ದು, ಇದು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಯಾಗಲಿದೆ.

VISTARANEWS.COM


on

prajwal revanna case arrest
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಲೈಂಗಿಕ ದೌರ್ಜನ್ಯ (Physical abuse) ಹಗರಣದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ದೂರಿನಲ್ಲಿ ಬಿಗಿಯಾದ ದಂಡ ಸಂಹಿತೆ ಸೆಕ್ಷನ್‌ಗಳನ್ನು (IPC) ದಾಖಲಿಸಲಾಗಿದ್ದು, ಇದರಡಿ ಪ್ರಜ್ವಲ್‌ ಅವರ ಬಂಧನ ಖಚಿತವಾಗಿದೆ. ಮೈಸೂರಿನಲ್ಲೂ (Mysore news) ಇನ್ನೊಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದೆ. ಇಲ್ಲಿಗೆ ಒಟ್ಟು ಮೂರು ದೂರುಗಳಾಗಿವೆ.

ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವ ಎರಡನೇ ಎಫ್ಐಆರ್ ಸಿಐಡಿ ಸೈಬರ್ ಠಾಣೆಯಲ್ಲಿ (CID cyber station) ದಾಖಲಾಗಿದೆ. ಎರಡನೇ ಎಫ್ಐಆರ್‌ನಲ್ಲಿ ದಾಖಲಿಸಿರುವ ಸೆಕ್ಷನ್‌ಗಳು ಹೆಚ್ಚು ಬಿಗಿಯಾಗಿದ್ದು, ತನಿಖೆಗೆ ಹಾಸನ ಸಂಸದರ ಬಂಧನವನ್ನು ಅನಿವಾರ್ಯವಾಗಿಸಿವೆ.

IPC 376(2)N, 506 ,354a1, 354b, 354c ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿವೆ. 376(2)n ಸೆಕ್ಷನ್‌ ಮಹಿಳೆ ಮೇಲೆ‌ ಬೆದರಿಸಿ ನಿರಂತರ ಅತ್ಯಾಚಾರ ನಡೆಸುವುದನ್ನು ದಾಖಲಿಸುತ್ತಿದ್ದು, ಇದು ಸಾಬೀತಾದರೆ ಕನಿಷ್ಠ ಹತ್ತು ವರ್ಷ ಜೈಲು ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಯಾಗಲಿದೆ.

ಸೆಕ್ಷನ್‌ 506 ಅಪರಾಧಿಕ ಉದ್ದೇಶದಿಂದ ಬೆದರಿಸುವುದು, 354a1 ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು- ಇದಕ್ಕೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ, 354b ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡುವುದು- ಗರಿಷ್ಠ ಮೂರು ವರ್ಷ ಶಿಕ್ಷೆ, 354c ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಖಾಸಗಿ ವಿಷಯವನ್ನು ರೆಕಾರ್ಡ್ ಮಾಡುವುದು ಮತ್ತು ನೋಡುವುದು- ಗರಿಷ್ಠ ಏಳು ವರ್ಷ ಶಿಕ್ಷೆ ಇವುಗಳಿವೆ.

ಎರಡನೇ ಎಫ್ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ ಮಾತ್ರ ಆರೋಪಿಯಾಗಿದ್ದಾರೆ. ಮೊದಲ ದೂರಿನಲ್ಲಿ ಎಚ್‌ಡಿ ರೇವಣ್ಣ ಕೂಡ ಆರೋಪಿಯಾಗಿದ್ದರು. ಎಚ್‌ಡಿ ರೇವಣ್ಣ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದ ಕೂಡಲೇ ಬಂಧನ ಮಾಡಲು ಎಸ್‌ಐಟಿ ಸಜ್ಜಾಗಿದೆ. ಈಗಾಗಲೇ ಆರೋಪಿಗೆ ಲುಕ್‌ಔಟ್ ನೊಟೀಸ್ ಹೊರಡಿಸಲಾಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನ ಬಹುತೇಕ ಖಚಿತವಾಗಿದೆ.

ಮೈಸೂರಿನಲ್ಲೂ ದೂರು

ಪ್ರಜ್ವಲ್‌ ರೇವಣ್ಣ (Prajwal Revanna Case) ಮೇಲೆ ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ (kidnap) ಪ್ರಕರಣ ದಾಖಲಾಗಿದೆ. ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಕೆ.ಆರ್.ನಗರ ತಾಲೂಕಿನಲ್ಲಿ ಘಟನೆ ನಡೆದಿದೆ. “ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ (Bhavani Revanna) ಅಪಹರಣ ಮಾಡಿಸಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಗ್ಗೆ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD Revanna) ವಿರುದ್ಧ ದಾಖಲಾಗಿರುವ ದೂರಿನ ತನಿಖೆಗೆ ಎಸ್‌ಐಟಿ ರಚನೆ ಮಾಡಿರುವಂತೆ ಈ ದೂರು ಕೂಡ ಹೊರಬಂದಿದೆ.

ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಇನ್ನೊಬ್ಬ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಎಚ್.ಡಿ. ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌, ಎಫ್ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಿದ್ದರೂ ನಿರೀಕ್ಷಣಾ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ? ಈ ಅರ್ಜಿ ಹೇಗೆ ಊರ್ಜಿತವಾಗುತ್ತದೆ? ನೀವು ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ರೇವಣ್ಣ ಪರ ಹಿರಿಯ ವಕೀಲರಿಗೆ ಕೋರ್ಟ್ ಪ್ರಶ್ನೆ ಮಾಡಿದೆ.

ಇದಕ್ಕೆ ವಾದ ಮಂಡಿಸಿದ ಎಚ್.ಡಿ. ರೇವಣ್ಣ ಪರ ವಕೀಲರು, ಎಸ್ಐಟಿ ಸಲ್ಲಿಸಿದ ಅರ್ಜಿಯ ವಿವರ ಇನ್ನೂ ಲಭ್ಯವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಫ್ಐಆರ್‌ನಲ್ಲಿ ಜಾಮೀನು ನೀಡಬೇಕಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸೇರಿಸಲು ಅರ್ಜಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಎಚ್.ಡಿ. ರೇವಣ್ಣ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ವಕೀಲ ಮೂರ್ತಿ ಡಿ. ನಾಯ್ಕ್ ತಿಳಿಸಿದರು.

ಇದನ್ನೂ ಓದಿ: Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Continue Reading
Advertisement
Lalu Prasad Yadav
ದೇಶ1 min ago

Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

Kiccha Sudeep jailer fame kevin has composed stunt in max
ಸ್ಯಾಂಡಲ್ ವುಡ್5 mins ago

Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

prajwal revanna case hd revanna farm house
ಕ್ರೈಂ9 mins ago

Prajwal Revanna Case: ಪ್ರಜ್ವಲ್‌ ರೇವಣ್ಣ, ರೇವಣ್ಣ ಮನೆ ಇಂಚಿಂಚೂ ತಲಾಶ್, ಸಿಗ್ತಾ ಮಹತ್ವದ ಕ್ಲೂ?

Thomas Cup 2024
ಕ್ರೀಡೆ44 mins ago

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ACTOR DHANUSH Nagarjuna mysterious first look from Kubera
ಕಾಲಿವುಡ್46 mins ago

Actor Dhanush: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ನಾಗಾರ್ಜುನ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Viral News
ವೈರಲ್ ನ್ಯೂಸ್49 mins ago

Viral News: ಶಾಕಿಂಗ್‌ ವಿಡಿಯೊ; ಹಾವು ಕಚ್ಚಿದ್ದ ಯುವಕ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ನೇತಾಡಿಸಿದರು!

T20 World Cup 2024
ಕ್ರಿಕೆಟ್1 hour ago

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

woman assault case haveri
ಕ್ರೈಂ1 hour ago

Assault Case: ಇನ್ನೊಂದು ವಂಟಮೂರಿ ಮಾದರಿ ಕೇಸ್‌, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿತ

West Bengal Governor
ದೇಶ2 hours ago

West Bengal Governor: ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ; TMC ಆಕ್ರೋಶ

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ16 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌