PM Modi: ದೆಹಲಿ ಕನ್ನಡಿಗರಿಗೆ ಮೋಡಿ ಮಾಡಿದ ಮೋದಿ; ಕನ್ನಡದ ಅಸ್ಮಿತೆ, ಸಂಸ್ಕೃತಿ ಹೊಗಳಿದ ನಮೋ; ಹೇಗಿತ್ತು ಪ್ರಧಾನಿ ಮತಬೇಟೆ? - Vistara News

ಕರ್ನಾಟಕ

PM Modi: ದೆಹಲಿ ಕನ್ನಡಿಗರಿಗೆ ಮೋಡಿ ಮಾಡಿದ ಮೋದಿ; ಕನ್ನಡದ ಅಸ್ಮಿತೆ, ಸಂಸ್ಕೃತಿ ಹೊಗಳಿದ ನಮೋ; ಹೇಗಿತ್ತು ಪ್ರಧಾನಿ ಮತಬೇಟೆ?

PM Modi: ಪ್ರಸಕ್ತ ಬಾರಿಯ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಲೇ ಬಂದಿದ್ದಾರೆ. ಈ ವೇಳೆ ನವ ದೆಹಲಿಯಲ್ಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ, ಕರ್ನಾಟಕದ ಮಹತ್ವದ ಬಗ್ಗೆ ಮೋದಿ ಅರ್ಥಪೂರ್ಣವಾಗಿ ಮಾತನಾಡುವ ಮೂಲಕ ಕನ್ನಡಿಗರ ಮತ ಬುಟ್ಟಿಗೆ ಕೈಹಾಕಿದ್ದಾರೆ.

VISTARANEWS.COM


on

pm modi mesmerizes delhi kannadigas namo praises kannada identity culture plan for vote hunt
'ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಕ್ರಂ ಕುಮಾರ್‌, ವಿಸ್ತಾರ ನ್ಯೂಸ್‌, ನವ ದೆಹಲಿ

ಸಮೀಪದಲ್ಲಿಯೇ ಇರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು (Karnataka Election 2023) ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ರಾಜ್ಯಕ್ಕೆ ಕೇಂದ್ರ ನಾಯಕರು ಸರಣಿ ಭೇಟಿ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಲೇ ಇದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೆಹಲಿಯಲ್ಲೇ ಕನ್ನಡಿಗರ ಮತ ಸೆಳೆಯಲು ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ಆ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.

ನವ ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ‘ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡ ಭಾಷಣ, ರಾಜ್ಯದ ಸಂಸ್ಕೃತಿ, ಕನ್ನಡ ಅಸ್ಮಿತೆ ಬಗ್ಗೆ ಹಾಡಿ ಹೊಗಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಬಿಜೆಪಿಯು ಕನ್ನಡಕ್ಕೆ ಮಹತ್ತರ ಆದ್ಯತೆ ನೀಡಿದೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. ಕೇಂದ್ರ ಬಿಜೆಪಿ ರಾಜ್ಯಕ್ಕೆ ನೀಡಿರುವ ಯೋಜನೆ, ಅನುದಾನ, ಕಾಂಗ್ರೆಸ್ ಮಾಡಿೃುವ ಲೋಪದೋಷಗಳ ಬಗ್ಗೆ ಮೋದಿ ಈ ವೇಳೆ ಉಲ್ಲೇಖಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿಯಿಂದ ಮಾತ್ರ ಸುಸ್ಥಿರ ಸರ್ಕಾರ ಸಾಧ್ಯ ಎಂದು ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದಾರೆ.

ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಇದನ್ನೂ ಓದಿ: Shivamogga Airport: ಬೆಂಗಳೂರು ನಂತರ ಅತಿ ದೊಡ್ಡ ವಿಮಾನ ನಿಲ್ದಾಣ ಎಂದ ಯಡಿಯೂರಪ್ಪ: ಕಾರ್ಯಕ್ರಮಕ್ಕೆ ಪಾಸ್‌ ಬೇಕಿಲ್ಲ ಎಂದ ಬಿವೈಆರ್‌

ಅಲ್ಲದೆ, ರಾಜ್ಯದ ಹಿತಾಸಕ್ತಿ, ಬಿಜೆಪಿಯ ಕನ್ನಡಾಭಿಮಾನದ ಬಗ್ಗೆ ಮೋದಿ ಪ್ರಸ್ತಾಪ ಮಾಡುತ್ತಾ, ಬಿಜೆಪಿ ಸ್ಥಳೀಯ ಭಾಷೆ ವಿರೋಧಿ ಅಲ್ಲ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಿದರು. ಇದಲ್ಲದೆ, ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾಲುಗಳನ್ನು ನರೇಂದ್ರ ಮೋದಿ ನೆನೆದರು. “ದೇಶವು ಸ್ವಾತಂತ್ರ್ಯ ಗಳಿಸಿ ೭೫ನೇ ವರ್ಷದ ಸಂಭ್ರಮ ಆಚರಿಸುತ್ತಿರುವ ವೇಳೆಯೇ ದೆಹಲಿ ಕರ್ನಾಟಕ ಸಂಘವೂ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ” ಎಂದೂ ಹೇಳಿದರು. ಈ ಮೂಲಕ ಕನ್ನಡ ಭಾಷೆಯ ಸಂಪ್ರದಾಯದ ಬಗ್ಗೆಯೂ ಪ್ರಸ್ತಾಪಿಸಿದರು.

ಮಕ್ಕಳಿಗೆ ಕನ್ನಡ ಕಲಿಸಲು ದೆಹಲಿ ಕನ್ನಡಿಗರಿಗೆ ಕರೆ

ದೆಹಲಿಯಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡದಲ್ಲಿಯೇ ಅಧ್ಯಯನ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಇದು ಕನ್ನಡಿಗರ ಜತೆ ಬೇರೆಯವರೂ ಕನ್ನಡ ಕಲಿಯಲು ನೆರವಾಗುತ್ತದೆ. ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಎಂಬ ಧ್ಯೇಯ ನಿಮ್ಮದಾಗಲಿ ಎಂದೂ ಮೋದಿ ಕರೆ ನೀಡುವ ಮೂಲಕ ಕನ್ನಡ ಭಾಷೆಗೆ ತಮಗಿರುವ ಬದ್ಧತೆಯನ್ನು ತೋರಿದರು. ಈ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವತ್ತ ಹೆಜ್ಜೆ ಇಟ್ಟರು.

ಇನ್ನು ಕರ್ನಾಟಕವು ಸಿರಧಾನ್ಯಗಳ ತವರೂರು ಎಂಬಂತೆಯೂ ಮೋದಿ ಪ್ರಸ್ತಾಪಿಸಿದ್ದಾರೆ. “ಸಿರಿಧಾನ್ಯ ವರ್ಷವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಸಿರಿಧಾನ್ಯದ ಪ್ರಮುಖ ಕೇಂದ್ರವಾಗಿದೆ. ಅನ್ನ, ರಾಗಿಯ ನಾಡಾಗಿ ಕರ್ನಾಟಕವು ಸಿರಿಧಾನ್ಯಗಳ ವಿಷಯದಲ್ಲಿ ಸಮೃದ್ಧವಾಗಿದೆ. ಸಿರಿಧಾನ್ಯಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಕರ್ನಾಟಕದ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Grama Vastavya: ಕೊನೇ ಗ್ರಾಮ ವಾಸ್ತವ್ಯ ಯಶಸ್ವಿ; ಗ್ರಾಮಕ್ಕೆ 1 ಕೋಟಿ ರೂ. ಘೋಷಿಸಿದ ಆರ್.‌ ಅಶೋಕ್‌

ಬಸವಣ್ಣ, ರಾಷ್ಟ್ರಕವಿ ಕುವೆಂಪು ನೆನೆದ ಮೋದಿ

ಕುವೆಂಪು ಅವರು ಕರ್ನಾಟಕದ ನಾಡಗೀತೆ ರಚಿಸಿದರು. ಭಾರತ ಮಾತೆಯ ಪುತ್ರಿ ಕರ್ನಾಟಕ ಎಂದು ಗೀತೆ ರಚಿಸಿದರು. ಇದು ಅವರ ಏಕ ಭಾರತ್‌, ಶ್ರೇಷ್ಠ ಭಾರತ್‌ ಕಲ್ಪನೆಯ ದ್ಯೋತಕವಾಗಿದೆ. ಬಸವಣ್ಣನವರು ಜಗತ್ತಿಗೆ ಜ್ಞಾನದ ಬೆಳಕು ನೀಡಿದರು. ಅವರ ಮೂರ್ತಿಯನ್ನು ಲಂಡನ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಕರ್ನಾಟಕವು ತಂತ್ರಜ್ಞಾನ, ಸಂಸ್ಕೃತಿ, ಕೃತಕ ಬುದ್ಧಿಮತ್ತೆಯ ತವರೂರಾಗಿದೆ ಎಂದೂ ಹೊಗಳುವ ಮೂಲಕ ಕನ್ನಡಿಗರ ಮನಮುಟ್ಟಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

CM Siddaramaiah: ಜೆಡಿಎಸ್‌ ಕೋಟೆಯಲ್ಲಿ ದೇವೇಗೌಡರ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ

CM Siddaramaiah: ಸುಳ್ಳಿನ ಕಾರ್ಖಾನೆ ಬಿಜೆಪಿಯವರಿಗೆ ಪ್ರತಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರಿಸುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ನಿರಂತರವಾಗಿ ಅವಮಾನಿಸುತ್ತಿರುವ ಬಿಜೆಪಿ, ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರು ಬದಲಾಯಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VISTARANEWS.COM


on

CM Siddaramaiah slams HD Deve Gowda
Koo

ಅರಸೀಕೆರೆ (ಬಾಣಾವಾರ): ರಾಜ್ಯಕ್ಕೆ ಕೇಂದ್ರ ಸರ್ಕಾರ ವಂಚನೆ ಮಾಡಿದೆ. ರಾಜ್ಯಕ್ಕೆ ಆದ ಅನ್ಯಾಯವನ್ನು ಸಮರ್ಥಿಸಿ ಕೇಂದ್ರದ ಪರವಾಗಿ ಮಾತನಾಡುತ್ತಿರುವ ಬಿಜೆಪಿಯವರು (BJP Karnataka) ರಾಜ್ಯದ ಜನರ ಪರವಾಗಿ ನಿಲ್ಲುತ್ತಾರಾ? ಈ ಬಗ್ಗೆ ನೀವೇ ತೀರ್ಮಾನಿಸಿ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಈಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಗುಡುಗಿದರು.

ಅರಸೀಕೆರೆ ತಾಲೂಕಿನ 152 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದ ದೇವೇಗೌಡರು ಈಗ ಬಿಜೆಪಿ ಜತೆ ಕೂಡಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ವಿಧಾನ ಪರಿಷತ್‌ಗೆ ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ನಮ್ಮ ಜನ ಬಿಜೆಪಿ-ಜೆಡಿಎಸ್ ದೋಸ್ತಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಭರ್ಜರಿಯಾಗಿ ಗೆಲ್ಲಿಸಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಅವರ ದೋಸ್ತಿಗೆ ಇದೇ ಗತಿ ಆಗಲಿದೆ ಎಂದು ಭವಿಷ್ಯ ನುಡಿದರು.

ನಾವು ಅಧಿಕಾರಕ್ಕೆ ಬಂದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವ ಕಾರ್ಯ ಶುರು ಮಾಡಿದ್ದೇವೆ. ಎಂಟು ತಿಂಗಳುಗಳಲ್ಲೇ ಐತಿಹಾಸಿಕವಾದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತಿ ವರ್ಷ 60000 ಕೋಟಿ ರೂಪಾಯಿಗಳನ್ನು ತಿಂಗಳ ಕಂತುಗಳಲ್ಲಿ ಜನರ ಜೇಬಿಗೆ ಹಾಕುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಾಸಕ ಶಿವಲಿಂಗೇಗೌಡರು ತಮ್ಮ ಕೆಲಸ ಕಾರ್ಯಗಳಿಂದ ನಿರಂತರವಾಗಿ ಗೆಲ್ಲುತ್ತಾರೆ. ನಾನು ಹಲವು ವರ್ಷಗಳಿಂದ ಶಾಸಕ ಶಿವಲಿಂಗೇಗೌಡರ ಕೆಲಸಗಳನ್ನು ನೋಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಜತೆಗೆ ರಾಜ್ಯದ ಅಭಿವೃದ್ಧಿ ಬಗ್ಗೆ ವಿಧಾನಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಾರೆ. ಹೀಗಾಗಿ ಶಿವಲಿಂಗೇಗೌಡರು ಶಾಶ್ವತವಾಗಿ ವಿಧಾನಸಭೆಗೆ ಆರಿಸಿ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಎತ್ತಿನಹೊಳೆ ಯೋಜನೆ ಪರವಾಗಿ ಶಿವಲಿಂಗೇಗೌಡರು ನಿರಂತರವಾಗಿ ಹೋರಾಡುತ್ತಿದ್ದಾರೆ. ನಾವು ಮಾತ್ರ ಮಣ್ಣಿನ ಮಕ್ಕಳು ಎನ್ನುವವರು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದರು. ಯಾರೇ ವಿರೋಧ ಮಾಡಿದರೂ ಎರಡು ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆಯಿಂದ ಕ್ಷೇತ್ರಕ್ಕೆ ನೀರು ಕೊಡುವುದು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಯಾರ ಪರ ಎಂದು ತೀರ್ಮಾನಿಸಿ

ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುತ್ತೇವೆ. ಇದಕ್ಕಾಗಿ 5300 ಕೋಟಿ ರೂಪಾಯಿ ಕೊಡುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಮತ್ತು ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ, ಇವತ್ತಿನವರೆಗೂ ಒಂದೇ ಒಂದು ರೂಪಾಯಿಯನ್ನೂ ಕೊಡದೆ ರಾಜ್ಯಕ್ಕೆ ವಂಚಿಸಿದರು. ಇವರು ನಿಮ್ಮ ಪರವಾಗಿ ಇರುವವರಾ? ರಾಜ್ಯದ ಪರವಾಗಿ ನಿಲ್ಲುವವರಾ ಎನ್ನುವುದನ್ನು ನೀವೇ ತೀರ್ಮಾನಿಸಿ ಎಂದು ಸಿಎಂ ಸಿದ್ದರಾಮಯ್ಯ ಜನರಿಗೆ ಕರೆ ನೀಡಿದರು.

ಮೋದಿ ಗ್ಯಾರಂಟಿ ಎಂದು ಹೆಸರು ಬದಲಾವಣೆ

ಒಂದು ಕಡೆ ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಬಿಜೆಪಿಯವರು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಮತ್ತೊಂದು ಕಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೆಸರು ಬದಲಾಯಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಬಾಣಾವರದ ಎರಡೂ ಪಂಚಾಯ್ತಿಗಳನ್ನು ಒಟ್ಟಾಗಿಸಿ ಪಟ್ಟಣ ಪಂಚಾಯ್ತಿ ಮಾಡಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Continue Reading

ಕರ್ನಾಟಕ

Davanagere News : ಕುತ್ತಿಗೆಗೆ ಬಿಗಿದ ಜೋಕಾಲಿ ಹಗ್ಗ; 4ನೇ ಕ್ಲಾಸ್‌ ಹುಡುಗ ದುರ್ಮರಣ

ಜೋಕಾಲಿ ಆಡುತ್ತಿದ್ದಾಗ ಉರುಳಿಗೆ ಸಿಲುಕಿ ಬಾಲಕನೊರ್ವ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ.

VISTARANEWS.COM


on

By

Boy dies after being hit by a roll while playing jokali in Davangere
Koo

ದಾವಣಗೆರೆ: ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿ ಪಿ.ಜೆ.ಕೊಟ್ರೇಶಿ ಮೃತಪಟ್ಟ ಬಾಲಕ.

ಸವಳಂಗದ ಎನ್ ಜಿ ಪ್ರವೀಣ್ ಅವರ ಮಗ ಕೊಟ್ರೇಶಿ ಶಿವಮೊಗ್ಗ ಖಾಸಗಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆಡಲೆಂದು ನಡುಮನೆಯಲ್ಲಿ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಅಂತೆಯೇ ಕೊಟ್ರೇಶಿ ಶಾಲೆಯಿಂದ ಮನೆಗೆ ಬಂದವನೇ ಜೋಕಾಲಿಯಲ್ಲಿ ಕುಳಿತು ಆಡುತ್ತಿದ್ದ.

ಜೋಕಾಲಿ ಆಡುತ್ತಿದಾಗ ಆಕಸ್ಮಿಕವಾಗಿ ಉರುಳಿದ್ದು, ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರಗಟ್ಟಿ ಮೃತಪಟ್ಟಿದ್ದಾನೆ. ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆದಾಗಲೇ ಆತ ಉಸಿರುನಿಲ್ಲಿಸಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

ಸ್ಕೂಟರ್‌ ನಿಲ್ಲಿಸುವಾಗ ಕುಸಿದು ಬಿದ್ದು ವೃದ್ಧ ಸಾವು

ದಿಢೀರ್ ಕುಸಿದು ಬಿದ್ದು ನಿವೃತ್ತ ಎಎಸ್‌ಐ ಅಧಿಕಾರಿ ಮೃತಪಟ್ಟಿದ್ದಾರೆ. ರಾಜು (71) ಮೃತ ದುರ್ದೈವಿ. ಮೈಸೂರಿನ ವಿಜಯನಗರ ಬಡಾವಣೆ ಬಳಿ ಘಟನೆ ನಡೆದಿದೆ.

ಪಾರ್ಕಿಂಗ್‌‌ನಲ್ಲಿ ಸ್ಕೂಟರ್ ನಿಲ್ಲಿಸುವಾಗ ಏಕಾಏಕಿ ರಾಜು ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರಾಜು ಅವರು ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

Assault Case : ಕುಡಿದು ಬಂದು ಹೊಡೆದು ಬಡಿದು ಮಾಡುತ್ತಿದ್ದ ಸಂಶಯ ಪಿಶಾಚಿ ಪತಿ ವಿರುದ್ಧ ಪತ್ನಿ ಠಾಣೆ (Family Dispute) ಮೆಟ್ಟಿಲೀರಿದ್ದಾರೆ.

VISTARANEWS.COM


on

By

Drunk husband assaults wife
Koo

ಬೆಂಗಳೂರು: ಪತಿಯ ಸಂಶಯವು ಇಡೀ ಸಂಸಾರವನ್ನೇ ಹಾಳು ಮಾಡಿದೆ. ಪರಪುರಷನ ಜತೆ ಪತ್ನಿಗೆ ಸಂಬಂಧವಿದೆ ಎಂದು ಅನುಮಾನಿಸಿದ ಪತಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಸಂಜಯನಗರದಲ್ಲಿ (Assault Case)ಈ ಘಟನೆ ನಡೆದಿದೆ.

ಸುಬ್ರಮಣಿ ಎಂಬಾತ ಕಂಠ ಪೂರ್ತಿ ಕುಡಿದು ಪತ್ನಿ ಸರಸ್ವತಿಗೆ ಮನಬಂದಂತೆ ಥಳಿಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಸರಸ್ವತಿ ಕುಟುಂಬಸ್ಥರು ದೂರದ ಸಂಬಂಧಿಯಾಗಿರುವ ಸುಬ್ರಮಣಿಗೆ 2015ರಲ್ಲಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆಗಿ 9 ವರ್ಷ ಕಳೆದಿರುವ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಫಿಲ್ಟರ್‌ ಕೆಲಸವನ್ನು ಮಾಡಿಕೊಂಡಿದ್ದ ಸುಬ್ರಮಣಿ ಮೊದಮೊದಲು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಇತ್ತೀಚೆಗೆ ಕುಡಿದು ಬಂದು ಸಣ್ಣ-ಪುಟ್ಟ ವಿಚಾರಕ್ಕೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದ.

ಪತಿ ಕಾಟಕ್ಕೆ ಸರಸ್ವತಿ 6 ಬಾರಿ ಪೊಲೀಸ್‌ ಠಾಣೆಗೆ ದೂರು ಕೊಡಲು ಹೋಗಿದ್ದರು. ಆದರೆ ಆಗೆಲ್ಲ ಊರಿನ ಹಿರಿಯರು ಮಧ್ಯಸ್ಥಿತಿಕೆ ವಹಿಸಿ ಜಗಳವನ್ನು ಪರಿಹರಿಸಿದ್ದರು. ಆದರೆ ಇದ್ಯಾವುದರಿಂದಲೂ ಬದಲಾಗದ ಸುಬ್ರಮಣಿ ನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ನಡುವೆ ಮನೆ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯನ್ನು ಅನುಮಾನಿಸುತ್ತಿದ್ದ ಸುಬ್ರಮಣಿ, ಸರಸ್ವತಿ ಕೆಲಸಕ್ಕೆ ಹೋದರೆ ಹಿಂಬಾಲಿಸಿಕೊಂಡು ಹೋಗುವುದು ಮಾಡಿದ್ದಾನೆ.

ಇದನ್ನೂ ಓದಿ: Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

ತಮ್ಮನಿಗೆ ಕಾರು ಕೊಡಿಸಲು ಹೆಂಡ್ತಿ ಒಡವೆ ಅಡವಿಟ್ಟ

ಇನ್ನು ಸುಬ್ರಮಣಿ ತನ್ನ ತಮ್ಮನಿಗೆ ಕಾರು ಕೊಡಿಸುವ ಸಲುವಾಗಿ ಪತ್ನಿ ಸರಸ್ವತಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದಾನೆ. ಚಿನ್ನಾಭರಣವನ್ನು ಬಿಡಿಸಿಕೊಡಿ‌ ಎಂದರೆ ಜಗಳ ತೆಗೆದು ಹೊಡೆದು ಬಡಿದು ಮಾಡಿದ್ದಾನೆ.

ಈ ಗಲಾಟೆ ವಿಚಾರವನ್ನು ಪೋಷಕರಿಗೆ ಹಾಗೂ ಸಂಬಂಧಿಕರಿಗೆ ಹೇಳಿದರೆ ಕೊಲ್ಲುವುದಾಗಿ ಸುಬ್ರಮಣಿ ಬೆದರಿಕೆ ಹಾಕಿದ್ದಾನೆ. ಸದ್ಯ ಈತನ ಕಾಟಕ್ಕೆ ಬೇಸತ್ತಿರುವ ಸರಸ್ವತಿ ಸಂಜಯನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ರಾಜಕೀಯ

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

40 percent commission: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ, ಪ್ರತಿಭಟನೆ ಜಾಹೀರಾತು ಕೊಟ್ಟರೆ ಅದು ಮಾನನಷ್ಟ ಮೊಕದ್ದಮೆ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

40 percent commission Court summons CM No defamation if advertised says Siddaramaiah
Koo

ಹಾಸನ: ಕಳೆದ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆ ಚುನಾವಣೆ (Karnataka Assembly Elections 2023) ವೇಳೆ 40 ಪರ್ಸೆಂಟ್‌ ಕಮಿಷನ್ (40 percent commission) ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್​ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಅವರು ಸಮರ್ಪಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ‌ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ, ಪ್ರತಿಭಟನೆ ಜಾಹೀರಾತು ಕೊಟ್ಟರೆ ಅದು ಮಾನನಷ್ಟ ಮೊಕದ್ದಮೆ ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಪ್ರಕರಣ? ಯಾರು ಯಾರಿಗೆ ಸಮನ್ಸ್‌ ಜಾರಿ?

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್‌ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿವಿ ಸೇರಿದಂತೆ ಮಾಧ್ಯಮಗಳಲ್ಲಿ ಈ ಕುರಿತು ಜಾಹೀರಾತು ನೀಡಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್​​​ಗೆ (DK Shivakumar) ಅವರಿಗೆ ಕೋರ್ಟ್​ ಸಮನ್ಸ್​ ಜಾರಿ ಮಾಡಿದ್ದು, ಖುದ್ದು ಹಾಜರಾಗುವಂತೆ ಸೂಚಿಸಿದೆ.

ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್‌ 40 ಪರ್ಸೆಂಟ್‌ ಆರೋಪ ಮಾಡಿತ್ತು. ಅಲ್ಲದೆ, ಈ ಸಂಬಂಧ ಜಾಹೀರಾತನ್ನು ಸಹ ನೀಡಿತ್ತು. ಹೀಗಾಗಿ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿದ್ದಾರೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಜಾಹೀರಾತು ವಿರುದ್ಧ ದೂರು ನೀಡಿದ್ದ ಬಿಜೆಪಿ

ಈ ಸಂಬಂಧ ಬಿಜೆಪಿ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿತ್ತು. ಕೆಪಿಸಿಸಿ ಹಾಗೂ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಸುಳ್ಳು ಆರೋಪಗಳ ಜಾಹೀರಾತು ನೀಡಿ ಪಕ್ಷದ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗಿದೆ. ಈ ನಿಟ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ರಾಜ್ಯ ಕಾರ್ಯದರ್ಶಿ ಎಸ್‌. ಶಿವಪ್ರಸಾದ್‌ ಖಾಸಗಿ ದೂರು ಸಲ್ಲಿಸಿದ್ದರು. ದೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ, ಕೆಪಿಸಿಸಿ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಈಗ ಈ ಅರ್ಜಿಯ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: medical negligence: ನವಜಾತ ಶಿಶುವನ್ನು ಬಿಸಿನೀರಲ್ಲಿ ಮುಳುಗಿಸಿ ಚರ್ಮ ಕಾಯಿಲೆ ಕಥೆ ಕಟ್ಟಿದ್ದ ಆಸ್ಪತ್ರೆಗೆ 10 ಲಕ್ಷ ದಂಡ!

ಬಿಜೆಪಿಗೆ ಡ್ಯಾಮೇಜ್‌ ಮಾಡಿದ್ದ 40 ಪರ್ಸೆಂಟ್‌ ಅಭಿಯಾನ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ 40 ಪರ್ಸೆಂಟ್‌ ಅಭಿಯಾನ ಮಾಡಿದ್ದರಿಂದ ಬಿಜೆಪಿಗೆ ಭಾರಿ ಡ್ಯಾಮೇಜ್‌ ಆಗಿತ್ತು. ಈ ಸಂಬಂಧ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟರ್‌ಗಳನ್ನು ಹರಿಬಿಡಲಾಗಿತ್ತು. ಅಲ್ಲದೆ, ಬೀದಿಗಳಲ್ಲಿ ಪೋಸ್ಟರ್‌ ಅಂಟಿಸಲಾಗಿತ್ತು. ಈ ಸಂಬಂಧ ಮೊಬೈಲ್‌ಗಳಲ್ಲಿ ಆಡಿಯೊ ಜಾಹೀರಾತು ಸೇರಿದಂತೆ ಟಿವಿ, ಪೇಪರ್‌ಗಳಲ್ಲಿ ಜಾಹೀರಾತುಗಳನ್ನು ನೀಡಲಾಗಿತ್ತು. ಈ ಸಂಬಂಧ ಬಿಜೆಪಿ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗ ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್​​​ಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗ ಪ್ರತಿಕ್ರಿಯೆ ನೀಡಿದ್ದು, ವಕೀಲರು ಸೂಕ್ತ ಉತ್ತರ ನೀಡಲಿದ್ದಾರೆ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಹೇಳಿದ್ದಾರೆ.

Continue Reading
Advertisement
CM Siddaramaiah slams HD Deve Gowda
ರಾಜಕೀಯ3 mins ago

CM Siddaramaiah: ಜೆಡಿಎಸ್‌ ಕೋಟೆಯಲ್ಲಿ ದೇವೇಗೌಡರ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ

Google Pay
ದೇಶ10 mins ago

Google Pay: ಇಲ್ಲಿದೆ ಬ್ಯಾಡ್‌ನ್ಯೂಸ್; ಈ ದಿನದಿಂದ ಗೂಗಲ್‌ ಪೇ ಆ್ಯಪ್ ಸ್ಥಗಿತ!

icc test batting rankings
ಕ್ರೀಡೆ14 mins ago

Yashasvi Jaiswal : ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

Star travel Fashion mokshith pai
ಫ್ಯಾಷನ್18 mins ago

Star travel Fashion: ಪಾರು ಖ್ಯಾತಿಯ ಮೋಕ್ಷಿತಾ ಪೈ ದುಬೈ ಟ್ರಾವೆಲ್‌ ಫ್ಯಾಷನ್‌ ವಿಶೇಷ ಇದು!

Girish Kasaravalli first film Ghatashraddha is another feather
ಸ್ಯಾಂಡಲ್ ವುಡ್19 mins ago

Ghatashraddha Movie: ಗಿರೀಶ್ ಕಾಸರವಳ್ಳಿಯವರ ಮೊದಲ ಚಿತ್ರ ‘ಘಟಶ್ರಾದ್ಧ ಚಿತ್ರಕ್ಕೆ ಇನ್ನೊಂದು ಪ್ರಶಸ್ತಿ!

Boy dies after being hit by a roll while playing jokali in Davangere
ಕರ್ನಾಟಕ26 mins ago

Davanagere News : ಕುತ್ತಿಗೆಗೆ ಬಿಗಿದ ಜೋಕಾಲಿ ಹಗ್ಗ; 4ನೇ ಕ್ಲಾಸ್‌ ಹುಡುಗ ದುರ್ಮರಣ

Drunk husband assaults wife
ಬೆಂಗಳೂರು60 mins ago

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

indian penal code
ದೇಶ1 hour ago

New Laws: ಐಪಿಸಿ ಮೂಲೆಗೆ; ಜುಲೈ 1ರಿಂದಲೇ ಹೊಸ ಕಾನೂನು ಜಾರಿ, ಏನೆಲ್ಲ ಬದಲು?

bankok
ವೈರಲ್ ನ್ಯೂಸ್1 hour ago

Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

Amazon Sweets
ವಾಣಿಜ್ಯ1 hour ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ4 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ11 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ24 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌