Praveen Nettaru| ಶಫೀಕ್‌, ಝಾಕಿರ್‌ಗೆ ತಲಶ್ಶೇರಿಯ ಅಬೀದ್‌ ಜತೆ ಸಂಪರ್ಕ? ಪಿನ್‌ ಟು ಪಿನ್‌ ಮಾಹಿತಿ ರವಾನೆ ಸಂಶಯ - Vistara News

ಕರ್ನಾಟಕ

Praveen Nettaru| ಶಫೀಕ್‌, ಝಾಕಿರ್‌ಗೆ ತಲಶ್ಶೇರಿಯ ಅಬೀದ್‌ ಜತೆ ಸಂಪರ್ಕ? ಪಿನ್‌ ಟು ಪಿನ್‌ ಮಾಹಿತಿ ರವಾನೆ ಸಂಶಯ

ಪ್ರವೀಣ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿಚಾರಣೆ ಎದುರಿಸುತ್ತಿರುವ ತಲಶ್ಶೇರಿಯ ಶಫೀಕ್‌ ಸಾಕಷ್ಟು ಮಾಹಿತಿ ನೀಡುವ ಸಾಧ್ಯತೆ ಕಂಡುಬಂದಿದೆ. ಆತನಿಗೆ ಬೆಳ್ಳಾರೆಯ ಜತೆ ಕನೆಕ್ಷನ್‌ ಇತ್ತು ಎನ್ನಲಾಗಿದೆ.

VISTARANEWS.COM


on

Praveen Nettar Murder Accused zakir and Shafik
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳ್ಳಾರೆ (ಸುಳ್ಯ ತಾಲೂಕು, ದಕ್ಷಿಣ ಕನ್ನಡ): ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲಶ್ಶೇರಿಯಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಅಬೀದ್‌ಗೂ ಈಗಾಗಲೇ ಬಂಧನಲ್ಲಿರುವ ಬೆಳ್ಳಾರೆಯ ಶಫೀಕ್‌ ಮತ್ತು ಸವಣೂರಿನ ಝಾಕಿರ್‌ಗೂ ಸಂಪರ್ಕವಿದೆ ಎಂಬ ಮಹತ್ವ ಅಂಶವನ್ನು ಪೊಲೀಸರು ಕಂಡುಕೊಂಡಿದ್ದಾರೆ ಎನ್ನಲಾಗಿದೆ.

ಕೇರಳದ ತಲಶ್ಶೇರಿ ಪ್ಯಾರಾಲ್ ನಿವಾಸಿ ಅಬೀದ್‌ನನ್ನು ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದಿದ್ದರು. ಆತ ಅಲ್ಲಿನ ಕೋಳಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ. ಶಫೀಕ್‌ ಮತ್ತು ಝಾಕಿರ್‌ನ ವಿಚಾರಣೆ ವೇಳೆ ಅಬೀದ್‌ನ ಬಗ್ಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ. ಅಬೀದ್‌ನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಶಫೀಕ್‌ ಮತ್ತು ಝಾಕಿರ್‌ ಜತೆಗಿನ ನಂಟಿನ ಮಾಹಿತಿ ಬಯಲಾಗಿದೆ ಎನ್ನಲಾಗಿದೆ.

ಜುಲೈ ೨೬ರಂದು ಪ್ರವೀಣ್‌ ನೆಟ್ಟಾರು ಕೊಲೆ ನಡೆದ ದಿನ ಅಬೀದ್‌ ಕೋಳಿ ಅಂಗಡಿಯ ಕೆಲಸಕ್ಕೆ ಬಂದಿರಲಿಲ್ಲ ಎನ್ನುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಅಬೀದ್‌ ಧಾರ್ಮಿಕ ಭಯೋತ್ಪಾದನೆ ವಿಚಾರಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇದೀಗ ಪೊಲೀಸರು ಅಬೀದ್‌ನ ಮೊಬೈಲ್‌ನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಚಟುವಟಿಕೆಗಳ ಹಲವು ಮುಖಗಳು ಬಯಲಾಗಿದೆ. ಶಫೀಕ್‌ ಮತ್ತು ಅಬೀದ್‌ ಕೇರಳ ಮೂಲದ ಸಂಘಟನೆಯ ವಾಟ್ಸ್‌ ಆ್ಯಪ್‌ ಗ್ರೂಪ್‌ನ ಸದಸ್ಯರಾಗಿದ್ದರು ಎನ್ನಲಾಗಿದೆ. ಅಲ್ಲಿಂದ ಅವರಿಬ್ಬರು ಸ್ನೇಹಿತರಾಗಿರಬಹುದು ಎನ್ನಲಾಗಿದೆ.

ಶಫೀಕ್‌ ಮತ್ತು ಅಬೀದ್‌ ಅವರು ಬೆಳ್ಳಾರೆ ಮಸೂದ್‌ ಹತ್ಯೆಯ ಬಗ್ಗೆಯೂ ಪರಸ್ಪರ ಚರ್ಚೆ ಮಾಡಿಕೊಂಡಿದ್ದರು ಎನ್ನಲಾಗಿದೆ. ವಾಟ್ಸ್‌ ಆ್ಯಪ್‌ ಗ್ರೂಪ್ ಹಾಗೂ ವೈಯಕ್ತಿಕ ಚಾಟ್ ಮೂಲಕ ವಿಚಾರ ವಿನಿಮಯ ಮಾಡಿಕೊಂಡಿದ್ದು ಕಂಡುಬಂದಿದೆ. ಶಫೀಕ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ತಪಾಸಣೆ ವೇಳೆ ಅಬೀದ್ ನಂಟು ಬಹಿರಂಗ ಬಯಲಾಗಿದೆ ಎನ್ನಲಾಗಿದೆ.

ಶಫೀಕ್‌ ಮತ್ತು ಅಬೀದ್‌ ಆತ್ಮೀಯರಂತೆ ಮಾಹಿತಿ ರವಾನೆ ಮಾಡಿದ್ದು ನಿಜವಾದರೂ ಇದರ ಹಿಂದೆ ಕೊಲೆಯ ಸಂಚಿದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಅಬೀದ್‌ ಇದನ್ನು ಕೇರಳದ ಬೇರೆ ಸಂಘಟನೆಗಳಿಗೆ ರವಾನಿಸಿರುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಇಲ್ಲಿನ ವಿದ್ಯಮಾನಗಳ ಪಿನ್‌ ಟು ಪಿನ್‌ ಮಾಹಿತಿ ರವಾನೆಯಾಗಿರಬಹುದು ಎನ್ನುವುದು ಪೊಲೀಸರ ಸಂಶಯ. ಹೀಗಾಗಿ ಅಬೀದ್‌ನ ವಿಚಾರಣೆ ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿರುವ ಹಂತಕರ ಪತ್ತೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂಬ ಆಶಾವಾದ ಪೊಲೀಸರದ್ದು.

ಶಫೀಕ್‌ ಮತ್ತು ಝಾಕಿರ್‌ ತಿಳಿದೇ ಈ ಮಾಹಿತಿ ರವಾನಿಸುತ್ತಿದ್ದರೋ ಅಥವಾ ಸಂಪರ್ಕದ ಹಿನ್ನೆಲೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಂಡರೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಅಜ್ಞಾತ ಸ್ಥಳದಲ್ಲಿ ಅಬೀದ್‌ ವಿಚಾರಣೆ
ಈ ನಡುವೆ, ತಲಶ್ಶೇರಿಯಿಂದ ಕರೆತರಲಾಗಿರುವ ಅಬೀದ್‌ನನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಇದನ್ನೂ ಓದಿ Praveen Nettaru| ಕೇರಳದ ತಲಶ್ಶೇರಿಯಲ್ಲಿ ಮೂರನೇ ಆರೋಪಿ ಬಂಧನ, ಅಲ್ಲೇನು ಮಾಡ್ತಿದ್ದ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

BS Yediyurappa : ಲೈಂಗಿಕ ಕಿರುಕುಳ ಕೇಸ್; ಹೈಕೋರ್ಟ್​ನಲ್ಲಿ ಇಂದು ಯಡಿಯೂರಪ್ಪಗೆ ಜಾಮೀನು ಸಿಗದಿದ್ದರೆ ಬಂಧನ

BS Yediyurappa : ಗುರುವಾರ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್​ ಅನ್ನು ಬೆಂಗಳೂರಿನ ನ್ಯಾಯಾಲಯ ಹೊರಡಿಸಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯಲು ಕಾಯುತ್ತಿದೆ. ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯೂ ಶುಕ್ರವಾರ ವಿಚಾರಣೆಗೆ ಬರಲಿದೆ. ಇದು ಕೂಡ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.

VISTARANEWS.COM


on

B S yediyurappa
Koo

ಬೆಂಗಳೂರು: ಪೋಕ್ಸೋ ಪ್ರಕರಣಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (BS Yediyurappa) ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಶುಕ್ರವಾರ (ಇಂದು) ವಿಚಾರಣೆಗೆ ಬರಲಿದೆ. ಒಂದು ವೇಳೆ ಅವರು ಸಲ್ಲಿಸಿರುವ ಅರ್ಜಿ ತಿರಸ್ಕೃತಗೊಂಡರೆ ಯಡಿಯೂರಪ್ಪ ಅವರು ಬಂಧನಕ್ಕೆ ಒಳಗಾಗುವುದು ಖಚಿತ. ಯಾಕೆಂದರೆ ಗುರುವಾರ ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್​ ಅನ್ನು ಬೆಂಗಳೂರಿನ ನ್ಯಾಯಾಲಯ ಹೊರಡಿಸಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆಯಲು ಕಾಯುತ್ತಿದ್ದಾರೆ. ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯೂ ಶುಕ್ರವಾರ ವಿಚಾರಣೆಗೆ ಬರಲಿದೆ. ಇದು ಕೂಡ ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರ ಬಂಧನಕ್ಕೆ ಕಾಯುತ್ತಿದ್ದಾರೆ. ಹೀಗಾಗಿ ಅವರು ಪೋಸ್ಕೋ ಪ್ರಕರಣದಡಿ ಬಂಧನದ ಆತಂಕ ಎದುರಿಸುತ್ತಿದ್ದಾರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಅವರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ನ್ಯಾಯಾಲಯದಿಂದ ಬಂಧನ ವಾರಂಟ್​ ಪಡೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರು ಯಡಿಯೂರಪ್ಪ ಅವರನ್ನು ಯಾವುದೇ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಗಳು ಶುಕ್ರವಾರ ವಿಚಾರಣೆಗೆ ಬರಲಿರುವ ಕಾರಣ ಪ್ರಕರಣ ಕುತೂಹಲ ಮೂಡಿಸಿದೆ. ಅರ್ಜಿ ತಿರಸ್ಕೃತಗೊಂಡರೆ ಮಾಜಿ ಸಿಎಂಗೆ ಮತ್ತೆ ಸಂಕಷ್ಟ ಎದುರಾಗಲಿದೆ.

ಸಾಕ್ಷ್ಯ ನಾಶದ ಆರೋಪವೂ ಇದೆ

ಈ ಪ್ರಕರಣದಲ್ಲಿ ಬಿ.ಎಸ್​ ಯಡಿಯೂರಪ್ಪ ಅವರ ಆಪ್ತರ ಮೇಲೆ ಸಾಕ್ಷಿಗಳನ್ನು ನಾಶಪಡಿಸಿದ ಆರೋಪವೂ ಇದೆ. ಅರುಣ್ ಹಾಗೂ ರುದ್ರೇಶ್​ ಹಾಗೂ ಮರಿಸ್ವಾಮಿ ಎಂಬುವರನ್ನೂ ಪ್ರಕರಣದ ಆರೋಪಿಗಳನ್ನಾಗಿ ತನಿಖಾ ತಂಡ ಗುರುತಿಸಿದೆ. ಸಾಕ್ಷಿಗಳನ್ನು ನಾಶ ಮಾಡಿರುವುದು, ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ಅವರನ್ನು ಸಿಆರ್​ಪಿಸಿ 41 ರ ಅಡಿಯಲ್ಲಿ ಆರೋಪಿಗಳನ್ನಾಗಿ ಪರಿಗಣಿಸಿ ನೋಟಿಸ್ ನೀಡಲಾಗಿದೆ.

ದೂರು ನೀಡಿದ ತಕ್ಷಣ ಬಾಲಕಿಯ ತಾಯಿಯನ್ನು ಕರೆಸಿಕೊಂಡಿದ್ದ ಯಡಿಯೂರಪ್ಪ ಅವರು ಹಣದ ಆಮಿಷ ಒಡ್ಡಿದ್ದರು. ಈ ದೃಶ್ಯಗಳನ್ನು ತಾಯಿ ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಅದನ್ನು ಗಮನಿಸಿದ್ದ ಬಿಎಸ್​​ವೈ ಆಪ್ತರು ಮೊಬೈಲ್ ಕಸಿದು ದೃಶ್ಯಗಳನ್ನು ಡಿಲೀಟ್ ಮಾಡಿದ್ದರು. ಅದೇ ರೀತಿ ತಾಯಿ ಮಗಳನ್ನು ಕಾರಿನಲ್ಲಿ ಕೂರಿಸಿ ಅವರ ಮನೆಗೆ ಬಿಟ್ಟಿದ್ದರು. ಈ ನಡುವೆ ಅವರು ಹಣದ ಆಮಿಷ, ಜೀವ ಬೆದರಿಕೆ ಒಡ್ಡಿದ್ದರು. ಇವೆಲ್ಲರೂ ದೂರಿನಲ್ಲಿ ದಾಖಲಾಗಿರುವ ಕಾರಣ ಎಲ್ಲರಿಗೂ ಸಮಸ್ಯೆ ಉಂಟಾಗಿದೆ.

ಇದನ್ನೂ ಓದಿ: 7th pay commission : ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ

ನ್ಯಾಯಾಲಯದಿಂದ ವಾರಂಟ್ ಪಡೆದ ತಕ್ಷಣ ಸಿಐಡಿ ಡಿಜಿಪಿ ಎಂ ಎ ಸಲೀಮ್ ಅವರು ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಹೈಕೋರ್ಟ್​ನಲ್ಲಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯ ಭವಿಷ್ಯವನ್ನು ಪರಿಗಣಿಸಿ ಮುಂದಿನ ಪ್ರಕ್ರಿಯೆ ನಡೆಸಲು ಮುಂದಾಗಿದ್ದಾರೆ. ಒಂದು ವೇಳೆ ಅರ್ಜಿ ತಿರಸ್ಕೃತಗೊಂಡರೆ ಮಾಜಿ ಸಿಎಂ ಬಂಧನಕ್ಕಾಗಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಕುರಿತು ಸಿದ್ಧತೆ ನಡೆಸಿಕೊಂಡಿದ್ದಾರೆ.

ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ

ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯವು ಮಾಜಿ ಸಿಎಂ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತು. ಗುರುವಾರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅವರು ಬಂದಿರಲಿಲ್ಲ. ಅಲ್ಲದೆ ಸಿಐಡಿ ನೋಟಿಸ್​ಗೆ ಪ್ರತಿಕ್ರಿಯಿಸಿ 17ಕ್ಕೆ ಬರುವುದಾಗಿ ಹೇಳಿದ್ದರು.

ಕಳೆದ ವರ್ಷ ಮಾರ್ಚ್ ನಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಬಿಎಸ್ ವೈಗೆ ಬಂಧನ ಭೀತಿ ಎದುರಾಗಿದೆ. ಬಿಎಸ್ ವೈ ಅವರ ಬಂಧನವನ್ನು ಯಾವುದೇ ಕ್ಷಣದಲ್ಲಿಯಾದರೂ ಮಾಡಬಹುದು ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮಾರ್ಚ್‌ 14ರಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದರು. ನಮ್ಮ 17 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಫೆಬ್ರವರಿ 2ರಂದು ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಪ್ರಕರಣವನ್ನು ಸಿಐಡಿ ತನಿಖೆ ಮಾಡಲು ಡಿಜಿಪಿ ಅಲೋಕ್‌ ಮೋಹನ್‌ ಆದೇಶಿಸಿದ್ದರು.

ದೂರು ನೀಡಿದ ಮಹಿಳೆ ಸುಮಾರು 53 ಗಣ್ಯರ ವಿರುದ್ಧ ದೂರು ನೀಡಿದ್ದರು. ಹೀಗಾಗಿ, ಇದು ಸುಳ್ಳು ದೂರು ಆಗಿರಬಹುದು ಎಂಬ ವಾದಗಳು ಕೇಳಿಬಂದಿದ್ದವು. ಇದೇ ಕಾರಣಕ್ಕೆ ಈ ಪ್ರಕರಣವನ್ನು ಬಿಎಸ್‌ ಯಡಿಯೂರಪ್ಪ ಕಡೆಗಣಿಸಿದ್ದರು.

Continue Reading

ಪ್ರಮುಖ ಸುದ್ದಿ

7th pay commission : ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ

7th pay commission: ಈ ಕುರಿತು ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರುವ ಸಂಘದ ಅಧ್ಯಕ್ಷರಾದ ರಮೇಶ್​ ಸಂಗಾ, 7ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರ ಉದಾಸೀನ ಧೋರಣೆ ತಳೆಯುತ್ತಿರುವುದು ಸ್ಪಷ್ಟ. ಇದೇ ನಿಲುವು ಮುಂದುವರಿದರೆ ನೌಕರರ ಸಂಘವು ಪ್ರತಿ ಭಟನೆಯನ್ನು ಆಯೋಜಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

7th Pay Commission
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ (7th pay commission ) ಶಿಫಾರಸು ಜಾರಿಗೊಳಿಸುವ ಕುರಿತು ಯಾವುದೇ ನಿರ್ಣಯ ಕೈಗೊಳ್ಳದಿರುವುದು ಸರ್ಕಾರಿ ನೌಕರರ ಸಂಘಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳದಿರುವುದು ರಾಜ್ಯ ಸರ್ಕಾರದ ಸಮಸ್ತ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ ಎಂಬುದಾಗಿ ಸಚಿವಾಲಯದ ನೌಕರರ ಸಂಘ ಹೇಳಿದೆ. ಆಯೋಗದ ಶಿಫಾರಸಿನ ಜಾರಿ ಕುರಿತು ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ ಎಂದು ಅದು ಹೇಳಿದೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಪ್ರಕಟಿಸಿರುವ ಸಂಘದ ಅಧ್ಯಕ್ಷರಾದ ರಮೇಶ್​ ಸಂಗಾ, 7ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರ ಉದಾಸೀನ ಧೋರಣೆ ತಳೆಯುತ್ತಿರುವುದು ಸ್ಪಷ್ಟ. ಇದೇ ನಿಲುವು ಮುಂದುವರಿದರೆ ನೌಕರರ ಸಂಘವು ಪ್ರತಿ ಭಟನೆಯನ್ನು ಆಯೋಜಿಸುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡುವಂತೆ ಸಚಿವಾಲಯದ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿದ್ದೆವು. ಈ ವೇಳೆ ಅವರು ಚುನಾವಣೆ ಮುಗಿದ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಚುನಾವಣೆ ಮುಗಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ನಂಬಿಕೆ ಇರಿಸಿಕೊಂಡಿದ್ದೆವು. ಅದು ಹುಸಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

ಈಗಾಗಲೇ ವೇತನ ಆಯೋಗವು ಶಿಫಾರಸು ಮಾಡಿರುವ ಶೇ. 27.5 ಫಿಟ್ಮೆಂಟಿಗೆ, ಶೇಕಡಾ 2.5ರಷ್ಟು ಸೇರ್ಪಡೆಗೊಳಿಸಿ ಒಟ್ಟು ಶೇಕಡಾ 30ರಷ್ಟು ಫಿಟ್ಮೆಂಟ್​ನೊಂದಿಗೆ ವೇತನ ಹೆಚ್ಚಳ ಮಾಡುವುದು ನಮ್ಮ ಬೇಡಿಕೆ ಎಂಬುದಾಗಿ ಸಂಗಾ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ನೌಕರರಿಗೆ ನಿರಾಸೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಗುರುವಾರ (ಜೂನ್‌ 13) ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ. ರಾಜ್ಯದಲ್ಲಿ ಏಳನೇ ವೇತನ ಆಯೋಗದ (7th Pay Commission) ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದರಿಂದಾಗಿ, ಏಳನೇ ವೇತನ ಆಯೋಗದ ಜಾರಿ ಕುರಿತು ಭಾರಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇದರಿಂದ ನಿರಾಸೆಯಾದಂತಾಗಿದೆ.

ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಕಾನೂನು, ನ್ಯಾಯ, ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ, ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ನೀಡಿದ್ದರು.

Continue Reading

ಪ್ರಮುಖ ಸುದ್ದಿ

Wild Elephant : ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚರಿಸುವವರಿಗೆ ಎಚ್ಚರಿಕೆ; ಆಗಾಗ ಕಾಣಿಸಿಕೊಳ್ಳುತ್ತಿದೆ ಒಂಟಿ ಸಲಗ

Wild Elephant:ಬುಧವಾರ ರಾತ್ರಿ ಒಂಟಿ ಸಲಹ ಸರ್ಕಾರಿ ಬಸ್​ ಒಂದಕ್ಕೆ ಅಡ್ಡ ಬಂದಿತ್ತು. ಸುಮಾರು ಅರ್ಧ ಗಂಟೆ ಅಲ್ಲೇ ನಿಂತ ಕಾರಣ ವಾಹನ ದಟ್ಟಣೆ ಉಂಟಾಗಿತ್ತು. ಘಾಟಿ ರಸ್ತೆಯಲ್ಲಿ ಸುಮಾರು 2 ಕಿಲೋಮೀಟರ್​ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಂತೆಯೇ ಶುಕ್ರವಾರ ಮುಂಜಾನೆ ಒಂಟಿ ಸಲಗದ ದರ್ಶನ ಕೊಟ್ಟಿದೆ..

VISTARANEWS.COM


on

Wild Elephant
Koo

ಚಿಕ್ಕಮಗಳೂರು:ದಕ್ಷಿಣ ಕನ್ನಡದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪದೇ ಪದೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಇದು ಈ ರಸ್ತೆಯ ಮೂಲಕ ಸಾಗುವ ಮಂದಿಗೆ ಆತಂಕ ತಂದಿದೆ. ಬುಧವಾರ ರಾತ್ರಿ ಆನೆ ಕಾಣಿಸಿಕೊಂಡು ಯಾವುದೇ ಹಾನಿ ಮಾಡದೇ ಹೊರಟು ಹೋಗಿತ್ತು. ಅಂತೆಯೇ ಗುರುವಾರ ರಾತ್ರಿ ಮತ್ತೆ ಅನೆ ಕಾಣಿಸಿಕೊಂಡಿದೆ. ರಸ್ತೆ ಮಧ್ಯೆ ಒಂಟಿ ಸಲಗ ಕಾಣಿಸಿಕೊಂಡ ಕಾರಣ ಸವಾರರು ಹೆದರಿಕೊಂಡಿದ್ದರು.

ಬುಧವಾರ ರಾತ್ರಿ ಒಂಟಿ ಸಲಹ ಸರ್ಕಾರಿ ಬಸ್​ ಒಂದಕ್ಕೆ ಅಡ್ಡ ಬಂದಿತ್ತು. ಸುಮಾರು ಅರ್ಧ ಗಂಟೆ ಅಲ್ಲೇ ನಿಂತ ಕಾರಣ ವಾಹನ ದಟ್ಟಣೆ ಉಂಟಾಗಿತ್ತು. ಘಾಟಿ ರಸ್ತೆಯಲ್ಲಿ ಸುಮಾರು 2 ಕಿಲೋಮೀಟರ್​ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಂತೆಯೇ ಶುಕ್ರವಾರ ಮುಂಜಾನೆ ಒಂಟಿ ಸಲಗದ ದರ್ಶನ ಕೊಟ್ಟಿದೆ.

ಚಾರ್ಮಾಡಿ ಘಾಟ್ ಅತ್ಯಂತ ಕಿರಿದಾದ ಹಾಗೂ ತಿರುವುಗಳುಳ್ಳ ರಸ್ತೆಯನ್ನು ಹೊಂದಿದೆ. ಈ ಮಾರ್ಗದಲ್ಲಿ ಆನೆ ಎದುರಾದರೆ ತಪ್ಪಿಸಿಕೊಳ್ಳುವುದು ಕೂಡ ಕಷ್ಟ. ತಿರುವಿನಲ್ಲಿ ಬೈಕ್ ಸವಾರರು ಆನೆ ಕೈಗೆ ಸಿಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ.

ಚಾರ್ಮಾಡಿ ಘಾಟಿ ತಪ್ಪಲಿನ ಗ್ರಾಮಗಳಿಗೂ ಒಂಟಿ ಸಲಗ ಆಗಾಗ ಬರುತ್ತಿದೆ. ಹೀಗಾಗಿ ಈ ಆನೆಯನ್ನು ಸೆರೆ ಹಿಡಿದು ಆನೆಗಳಿರುವ ಪ್ರದೇಶಕ್ಕೆ ಬಿಡಬೇಕು ಎಂಬುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

ಆನೆ ತುಳಿದು ಗಾಯಗೊಂಡಿದ್ದ ಕಾರ್ಮಿಕ

ಕೂಲಿ ಕೆಲಸಕ್ಕೆ ಹೋಗುತ್ತಿದ್ದವನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಾಟೆಹಳ್ಳ ಗ್ರಾಮದಲ್ಲಿ ಗುರುವಾರ ನಡೆದಿತ್ತು . ಆಘಾತಕ್ಕೆ ರೈತನ ಕಾಲು ಮುರಿತವಾಗಿದೆ. ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆನೆ ದಾಳಿ (Wild Elephant Attack) ಮಾಡಿತ್ತು. 60 ವರ್ಷದ ದಿವಾಕರ್ ಶೆಟ್ಟಿ ಗಾಯಗೊಂಡವರು.

ಇದನ್ನೂ ಓದಿ: Dengue Fever : ಡೆಂಗ್ಯೂ ಜ್ವರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ

ದಿವಾಕರ್​ ಅವರು ಬೆಳಗ್ಗೆ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಿನಿಂದ ಬಂದಿದ್ದ ಒಂಟಿ ಸಲಗವು ದಾಳಿ ಮಾಡಿದೆ. ದಿವಾಕರ್ ಅವರನ್ನು ಅಟ್ಟಿಸಿಕೊಂಡು ಬಂದು ಕಾಲಿನ ಮೇಲೆ ತುಳಿದಿದೆ. ಅವರ ಬಲಗಾಲು ಮುರಿದಿದೆ. ಅವರ ಕಿರುಚಾಟಕ್ಕೆ ಹೆದರಿದ ಆನೆ ಕಾಫಿ ತೋಟದ ಮೂಲಕ ವಾಪಸ್​ ಹೋಗಿದೆ. ಹೀಗಾಗಿ ಅವರ ಪ್ರಾಣ ಉಳಿದಿದೆ. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ, ಪರಿಶೀಲನೆ

ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ

ಕಾಡಿನಿಂದ ನಾಡಿಗೆ ಮುಖ ಮಾಡಿರುವ ಆನೆಗಳು ಕಾಫಿ ತೋಟಗಳ ನಡುವೆ ನಿಂತಿವೆ. ಹೀಗಾಗಿ ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಆನೆಗಳು ಮತ್ತು ಮಾನವನ ಸಂಘರ್ಷ ಹಲವಾರು ಸಮಯದಿಂದ ಈ ಪ್ರದೇಶದಲ್ಲಿ ನಡೆಯುತ್ತಿದೆ. ಅದಕ್ಕೊಂದು ಪರಿಹಾರ ಸಿಗುತ್ತಿಲ್ಲ. ಕಾಫಿ ತೋಟಗಳಿಗೆ ಆನೆಗಳು ಲಗ್ಗೆ ಇಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆನೆಗಳ ದಾಳಿಯಿಂದಾಗಿ ಹಲವಾರು ಕಾರ್ಮಿಕರು ಜರ್ಜರಿತರಾಗಿದ್ದಾರೆ. ಹೀಗಾಗಿ ಇದಕ್ಕೊಂದು ಪರಿಹಾರ ಇಲ್ಲ ಎನ್ನುವಂತಾಗಿದೆ.

Continue Reading

ಮಳೆ

Karnataka Weather : ಬೆಂಗಳೂರಲ್ಲಿ ಮುಂದುವರಿಯಲಿದೆ ಭರ್ಜರಿ ಮಳೆ; ಈ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Rain News : ರಾಜ್ಯಾದ್ಯಂತ ಮಳೆ ಪ್ರಮಾಣ ತಗ್ಗಿದ್ದರೂ, ಮಲೆನಾಡು ಹಾಗೂ ಒಳನಾಡಿನ ಹಲವೆಡೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Karnataka Weather Forecast) ನಿರೀಕ್ಷೆ ಇದೆ. ಶುಕ್ರವಾರವೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ (Yellow Alert) ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಉತ್ತರ ಒಳನಾಡು ಮತ್ತು ಕರಾವಳಿಯ ಪ್ರತ್ಯೇಕವಾಗಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಲವೆಡೆ ಚದುರಿದಂತೆ ಮಧ್ಯಮ ಮಳೆಯಾಗಲಿದೆ. ಬಾಗಲಕೋಟೆಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉತ್ತರ ಕನ್ನಡದಲ್ಲಿ ಹಲವೆಡೆ ಭಾರೀ ಮಳೆಯಾಗಲಿದೆ. ಬೆಂಗಳೂರಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕರಾವಳಿ ಸೇರಿ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಗಾಳಿಯು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ

ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Double Decker Flyover : ಬೆಂಗಳೂರಿನ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಕೊನೆಗೂ ಸಿದ್ಧ; ಯಾವಾಗಿಂದ ಸಂಚಾರಕ್ಕೆ ಅವಕಾಶ

ರಾಯಚೂರಿನಲ್ಲಿ ಈಜುಕೊಳವಾದ ಶಾಲೆ ಆವರಣ

ಅಲ್ಪ ಮಳೆಗೆ ಸರಕಾರಿ‌ ಶಾಲೆ ಆವರಣವು ಈಜುಕೊಳವಾಗಿದೆ. ರಾಯಚೂರಿನ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸರಕಾರಿ ಶಾಲೆಯಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಶಾಲೆ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಜೀವ ಭಯದಲ್ಲೇ ಮಕ್ಕಳು ಮತ್ತು ಶಿಕ್ಷಕರು ಪಾಠ ಪ್ರವಚನ ಮಾಡಬೇಕಾದ ಪರಿಸ್ಥಿತಿ ನಿರ್ಮಾನವಾಗಿದೆ. ಜಿಟಿ ಜಿಟಿ ಮಳೆಯಿಂದ ಕೊಠಡಿಗಳು ಸೋರುತ್ತಿದೆ. ಜೋರಾಗಿ ಮಳೆ ಬಂದರೆ ನೀರು ನುಗ್ಗುವ ಭೀತಿ ಇದೆ. ಇತ್ತ ಸೋರುತ್ತಿರುವ ಕೊಠಡಿಯಲ್ಲೆ ಮಧ್ಯಾಹ್ನ ಬಿಸಿ ಊಟದ ಆಹಾರ ಧಾನ್ಯಗಳ ಸಂಗ್ರಹ ಮಾಡಲಾಗಿದೆ. ಪಿಡಿಒ, ಬಿಇಓ ಅವರ ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರ

ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬೈಕ್ ಸವಾರನ ಜೀವ ಉಳಿದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲೇ ಹಳ್ಳ ದಾಟಲು ಬೈಕ್‌ ಸವಾರ ಮುಂದಾಗಿದ್ದ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ, ಇದನ್ನೂ ಗಮನಿಸಿದ ಸ್ಥಳೀಯರು ಕೂಡಲೇ ಸವಾರನನ್ನು ರಕ್ಷಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
BMW Motorrad
ಆಟೋಮೊಬೈಲ್35 seconds ago

BMW Motorrad: ಐಷಾರಾಮಿ BMW R 1300 GS ಬೈಕ್‌ ಬಿಡುಗಡೆ; ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ವಿವರ

Actor Darshan his brother-in-law homeless
ಸ್ಯಾಂಡಲ್ ವುಡ್14 mins ago

Actor Darshan: ಸೋದರ ಮಾವಂದಿರನ್ನೇ ಬೀದಿಪಾಲು ಮಾಡಿದ್ದ ದರ್ಶನ್​, ಒಂದೊಂದಾಗಿ ಹೊರಬರುತ್ತಿದೆ ‘ದಾಸ’ನ ದುರ್ಬುದ್ಧಿ !

B S yediyurappa
ಪ್ರಮುಖ ಸುದ್ದಿ18 mins ago

BS Yediyurappa : ಲೈಂಗಿಕ ಕಿರುಕುಳ ಕೇಸ್; ಹೈಕೋರ್ಟ್​ನಲ್ಲಿ ಇಂದು ಯಡಿಯೂರಪ್ಪಗೆ ಜಾಮೀನು ಸಿಗದಿದ್ದರೆ ಬಂಧನ

Nataša Stanković
ಕ್ರೀಡೆ34 mins ago

Nataša Stanković: ವಿಚ್ಛೇದನದ ವದಂತಿಗಳ ನಡುವೆ ಮತ್ತೊಂದು ರಹಸ್ಯ ಪೋಸ್ಟ್​ ಮಾಡಿದ ಹಾರ್ದಿಕ್ ಪಾಂಡ್ಯ ಪತ್ನಿ

Actor Darshan warn darshan previous
ಸ್ಯಾಂಡಲ್ ವುಡ್47 mins ago

Actor Darshan: ಇದು ರೌಡಿಸಂ ಸೆಂಟರ್‌ ಅಲ್ಲ; ನಿಜ ಆಗ್ತಾ ಇದೆಯಾ ಅಂದು ಜಗ್ಗೇಶ್‌ ನುಡಿದಿದ್ದ ಭವಿಷ್ಯ?

7th Pay Commission
ಪ್ರಮುಖ ಸುದ್ದಿ52 mins ago

7th pay commission : ಸಂಪುಟದಲ್ಲಿ ಚರ್ಚೆಯಾಗದ 7ನೇ ವೇತನ ಆಯೋಗ ಶಿಫಾರಸು; ಸರ್ಕಾರಿ ನೌಕರರ ಸಂಘಗಳ ಆಕ್ರೋಶ

Heavy Rainfall
ದೇಶ56 mins ago

Heavy Rainfall: ಸಿಕ್ಕಿಂನಲ್ಲಿ ಭಾರೀ ಮಳೆ, ಪ್ರವಾಹ: 6 ಮಂದಿ ಸಾವು, ಭೂಕುಸಿತದಿಂದ ಸಂಪರ್ಕ ಕಡಿತ

Paris Olympics 2024
ಕ್ರೀಡೆ1 hour ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಬೋಪಣ್ಣಗೆ ಶ್ರೀರಾಮ್‌ ಬಾಲಾಜಿ ಜತೆಗಾರ

Tirupati Temple
ಪ್ರಮುಖ ಸುದ್ದಿ1 hour ago

Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Rape Case
ಪ್ರಮುಖ ಸುದ್ದಿ2 hours ago

Rape Case: 14 ವರ್ಷದ ಬಾಲಕಿಯನ್ನು ಮನೆಗೆ ಕರೆದೊಯ್ದ ಪ್ರೇಮಿ; 6 ಸ್ನೇಹಿತರಿಂದ ಅತ್ಯಾಚಾರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ7 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌