Praveen Nettaru murder: ಮನೆ ಬಾಡಿಗೆ ಪಡೆದುಕೊಂಡವನೇ ಬೇರೆ; ತುಫೈಲ್‌ ಇದ್ದಿದ್ದೇ ಗೊತ್ತಿಲ್ಲ: ಮನೆ ಮಾಲೀಕ ಹೇಳಿದ್ದೇನು? - Vistara News

ಕರ್ನಾಟಕ

Praveen Nettaru murder: ಮನೆ ಬಾಡಿಗೆ ಪಡೆದುಕೊಂಡವನೇ ಬೇರೆ; ತುಫೈಲ್‌ ಇದ್ದಿದ್ದೇ ಗೊತ್ತಿಲ್ಲ: ಮನೆ ಮಾಲೀಕ ಹೇಳಿದ್ದೇನು?

Praveen Nettaru murder: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಹಿಂದು ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಪ್ರಮುಖ ಆರೋಪಿಯಲ್ಲೊಬ್ಬನಾಗಿರುವ ತುಫೈಲ್‌ ಕೊನೆಗೂ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಣೆ. ಈತ ಕಳೆದ ಆರು ತಿಂಗಳಿನಿಂದ ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಮನೆ ಮಾಲೀಕನಿಗೆ ಯಾವುದೇ ವಿಷಯ ತಿಳಿದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

VISTARANEWS.COM


on

Praveen Nettaru murder case House owner says he doesnt know tufail lives in rented house
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಿಂದು ಕಾರ್ಯಕರ್ತ ಮಂಗಳೂರಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ (Praveen Nettaru murder) ಪ್ರಕರಣದ ಪ್ರಮುಖ ಆರೋಪಿ ನಿಷೇಧಿತ ಪಿಎಫ್‌ಐ ಸಂಘಟನೆಯ ಮೋಸ್ಟ್‌ ವಾಂಟೆಡ್‌ ಮುಖಂಡ, ಮಡಿಕೇರಿ ಮೂಲದ ತುಫೈಲ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದೇ ಒಂದು ರೋಚಕವಾದರೆ, ಆತ ಮನೆಯಲ್ಲಿ ಇದ್ದಿದ್ದು ಮನೆ ಮಾಲೀಕರಿಗೇ ಗೊತ್ತಿಲ್ಲ ಎಂಬ ಸಂಗತಿ ಈಗ ಬಯಲಾಗಿದೆ!

ರಾಜ್ಯವಿಡೀ ಸುದ್ದಿಯಾಗಿದ್ದ ಸುಳ್ಯದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ‌ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಈತನ ಸುಳಿವು ಕೊಟ್ಟವರಿಗೆ ಪೊಲೀಸರು 5 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಣೆ ಮಾಡಿದ್ದರು. ಈತನಿಗಾಗಿ ಕೇರಳ, ತಮಿಳುನಾಡು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಹುಡುಕಾಟ ನಡೆಸಲಾಗಿತ್ತು. ಆದರೆ, ಯಾರ ಕಣ್ಣಿಗೂ ಬೀಳದೆ ಆರಾಮವಾಗಿ ಓಡಾಡಿಕೊಂಡಿದ್ದ ಎಂದು ಈಗ ತಿಳಿದುಬಂದಿದೆ. ಈಗ ನಿಖರ ಮಾಹಿತಿ ಮೇರೆಗೆ ಎನ್‌ಐಎ ದಾಳಿ ಮಾಡಿದ್ದರಿಂದ ಆತ ಸಿಕ್ಕಿಬಿದ್ದಿದ್ದಾನೆ.

Praveen Nettaru murder case House owner says he doesnt know tufail lives in rented house
ತುಫೈಲ್‌ ವಾಸವಾಗಿದ್ದ ಮನೆ

ತುಫೈಲ್‌ ಇದ್ದಿದ್ದೇ ಗೊತ್ತಿಲ್ಲವೆಂದ ಮನೆ ಮಾಲೀಕ

ಮಹಮ್ಮದ್‌ ಶಫಿ ಎಂಬಾತ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಆತ ಬಾಡಿಗೆಗೆ ಪಡೆದುಕೊಂಡು 2 ವರ್ಷವಾಗಿದೆ. ಪ್ರತಿ ಬಾರಿಯೂ ಶಫಿಯೇ ಮನೆ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದ. ಫ್ಯಾಮಿಲಿಯವರು ಇರುತ್ತೇವೆ ಎಂದು ಬಾಡಿಗೆಗೆ ಪಡೆದುಕೊಂಡಿದ್ದ. ಆದರೆ, ಹೆಂಡತಿ ಡೆಲಿವರಿಗಾಗಿ ಊರಿನಲ್ಲಿರುವುದಾಗಿ ಹೇಳಿದ್ದಾರೆ. ಇಲ್ಲಿ ಬ್ಯುಸಿನೆಸ್‌ ಮಾಡಿಕೊಂಡಿರುವುದಾಗಿ ಹೇಳಿದ್ದರು. ಆದರೆ, ತುಫೈಲ್ ಇಲ್ಲಿಗೆ ಬಂದಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಮನೆ ಮಾಲೀಕ ನಂಜುಡಪ್ಪ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಮಹಮ್ಮದ್‌ ಶಫಿ ಸೋಮವಾರಪೇಟೆ ನಿವಾಸಿಯಾಗಿದ್ದಾನೆ.

ಇದನ್ನೂ ಓದಿ: ನಿಮ್ಮ ಕೇಂದ್ರ ಸರ್ಕಾರ ತನಿಖಾ ದಳಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ; ವಿಪಕ್ಷಗಳ 9 ನಾಯಕರಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

6 ತಿಂಗಳಿಂದ ವಾಸ?

ಅಮೃತಹಳ್ಳಿಯ ದಾಸರಹಳ್ಳಿಯ ಭುವನೇಶ್ವರಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿಬಿದ್ದಿರುವ ತುಫೈಲ್‌ ಕಳೆದೆರಡು ತಿಂಗಳಿನಿಂದ ವಾಸವಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅಪಾರ್ಟ್‌ಮೆಂಟ್‌ನ ಮೊದಲ ಮಹಡಿಯಲ್ಲಿನ ಮನೆಯಲ್ಲಿ ಈತ ವಾಸವಿದ್ದ. ಆದರೆ, ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವು ಈತನನ್ನು ನೋಡಿದ್ದೇ ಕಡಿವೆ. ಸುಮಾರು ಎರಡು ತಿಂಗಳಿನಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಮಾಹಿತಿಗಳ ಪ್ರಕಾರ ಆರು ತಿಂಗಳಿನಿಂದ ವಾಸವಾಗಿದ್ದಾನೆ ಎನ್ನಲಾಗಿದೆ.

ಉಳಿದ ಆರೋಪಿಗಳಿಗಾಗಿ ಶೋಧ

ಸದ್ಯ ತುಫೈಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಇನ್ನುಳಿದ ಮೂವರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರಿಸಿದ್ದಾರೆ. ಮಹಮ್ಮದ್ ಮುಸ್ತಾಫ್‌ ಪತ್ತೆಗಾಗಿ 5 ಲಕ್ಷ ರೂ., ಉಮ್ಮರ್ ಫಾರೂಖ್‌ಗೆ 2 ಲಕ್ಷ ರೂ., ಅಬೂಬಕರ್ ಸಿದ್ದಿಕ್‌ಗೆ 2 ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದೆ. ನಾಲ್ವರೂ ನಿಷೇಧಿತ ಸಂಘಟನೆ ಪಿಎಫ್‌ಐನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ಅಡಗಲು ಅಚ್ಚುಕಟ್ಟು ತಾಣವನ್ನೇ ಆಯ್ದುಕೊಂಡಿದ್ದ ತುಫೈಲ್‌

ತುಫೈಲ್‌ ಅಡಗಿ ಕೂರಲು ಅಚ್ಚುಕಟ್ಟು ತಾಣವನ್ನೇ ಆಯ್ದುಕೊಂಡಿದ್ದ. ನೆಟ್ಟಾರು ಹತ್ಯೆಗೆ ಮೊದಲೇ ಮಹಮ್ಮದ್ ಶಫಿಗೆ ತುಫೈಲ್‌ ಪರಿಚಿತನಾಗಿದ್ದ ಎನ್ನಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಇಲ್ಲದಿರುವುದನ್ನು ಗಮನಿಸಿಕೊಂಡಿದ್ದ ಈತ ಜನರ ಓಡಾಟ ಕಡಿಮೆ ಇರುವುದನ್ನು ಗಮನಿಸಿಕೊಂಡಿದ್ದ. ತನ್ನ ಚಲನವಲನಗಳು ಎಲ್ಲಿಯೂ ತಿಳಿಯದಂತೆ ಸಾಕಷ್ಟು ಮುನ್ನೆಚ್ಚರಿಗೆ ವಹಿಸಿಕೊಂಡಿದ್ದ.

ನೆಟ್ಟಾರು ಕೊಲೆ ಬಳಿಕ ಅಲ್ಲಲ್ಲಿ ಅಡ್ಡಾಡಿ ಮಹಮ್ಮದ್ ಶಫಿ ಮನೆಯಲ್ಲಿ ಅಡಗಿದ್ದ ಎಂದು ಹೇಳಲಾಗುತ್ತಿದೆ. ತುಫೈಲ್ ಬಂದ‌ ನಂತರ ಶಫಿ ತನ್ನ ಹೆಂಡತಿಯನ್ನು ತವರಿಗೆ ಕಳಿಸಿದ್ದ ಎನ್ನಲಾಗಿದೆ. ತುಫೈಲ್‌ಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಶಫಿ ಮಾಡಿಕೊಡ್ಡುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Praveen Nettaru Murder: ಪ್ರವೀಣ್‌ ಹತ್ಯೆ ಆರೋಪಿ ತುಫೈಲ್‌ನನ್ನು NIA ಹಿಡಿದದ್ದು ಹೀಗೆ!

ಟ್ರೇಗಟ್ಟಲೆ ಮೊಟ್ಟೆ, ವಾರಕ್ಕೆ ಬೇಕಾದ ಮಟನ್ ಸೇರಿ ಬೇಕಿದ್ದ ಆಹಾರ ಸಾಮಗ್ರಿಯನ್ನು ಶಫಿಯೇ ಪೂರೈಕೆ ಮಾಡುತ್ತಿದ್ದ. ತುಫೈಲ್ ಕೊಲೆ ಆರೋಪಿ ಎಂದು ತಿಳಿದಿದ್ದರೂ ಮಹಮ್ಮದ್ ಶಫಿ ರಕ್ಷಣೆ ನೀಡಿದ್ದ. ಆತನ ರಕ್ಷಣೆಯಲ್ಲಿಯೇ ಕಳೆದ 6 ತಿಂಗಳಿನಿಂದ ವಾಸ ಮಾಡಿದ್ದಾನೆಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಈಗ ಕೊಲೆ ಆರೋಪಿಗೆ ರಕ್ಷಣೆ ನೀಡಿದ ಹಿನ್ನೆಲೆಯಲ್ಲಿ ಮಹಮ್ಮದ್ ಶಫಿ ಮೇಲೆಯೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಮ್ಮದ್ ಶಫಿ ಸಹ ಎಸ್ಕೇಪ್‌ ಆಗಿದ್ದಾನೆ. ಆತನಿಗೂ ಶೋಧ ಕಾರ್ಯ ಮುಂದುವರಿದಿದೆ.

ತುಫೈಲ್‌ಗೆ ನಾನು ಮನೆ ಬಾಡಿಗೆ ಕೊಟ್ಟಿರಲಿಲ್ಲ- ಮನೆ ಮಾಲೀಕ ಮಾತನಾಡಿದ ವಿಡಿಯೊ ಇಲ್ಲಿದೆ

ಏನಿದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ?

2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆಯಲ್ಲಿ ಹಿಂದು ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ನಿಷೇಧಿತ ಪಿಎಫ್‌ಐ ಸಂಘಟನೆಯ ಹಲವರು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರವೀಣ್ ನೆಟ್ಟಾರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಇವರನ್ನು ಹತ್ಯೆ ಮಾಡಲು ಸುಳ್ಯ ಮತ್ತು ಬೆಳ್ಳಾರೆಯ ಪಿಎಫ್‌ಐ ಸದಸ್ಯರು ಸ್ಕೆಚ್‌ ಹಾಕಿದ್ದರು. ಅದರಂತೆ ಬೆಳ್ಳಾರೆಯಲ್ಲಿ ಜುಲೈ 26ರ ರಾತ್ರಿ ಕೊಲೆ ಮಾಡಿದ್ದರು.

ಪ್ರಕರಣದ ಆರೋಪಿಗಳು ಯಾರ್ಯಾರು?

ಸುಳ್ಯ ಪಟ್ಟಣದ ಮಹಮ್ಮದ್ ಶಿಯಾಬ್, ಅಬ್ದುಲ್ ಬಶೀರ್, ಪಾಲ್ತಾಡಿಯ ರಿಯಾಜ್, ಸುಳ್ಯ ತಾಲೂಕಿನ ಮುಸ್ತಫಾ ಪೈಚರ್, ನೆಕ್ಕಿಲಾಡಿಯ ಮಸೂದ್ ಕೆ.ಎ., ಬಂಟ್ವಾಳದ ಕೊಡಾಜೆ ಮೊಹಮ್ಮದ್ ಶೆರಿಫ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್, ಸುಳ್ಯ ತಾಲೂಕಿನ ನೌಫಾಲ್ ಎಂ., ಬೆಳ್ಳಾರೆ ಗ್ರಾಮದ ಇಸ್ಮಾಯಿಲ್ ಶಫಿ ಕೆ., ಶೇಖ್ ಸದ್ದಾಂ ಹುಸೇನ್, ಎನ್. ಅಬ್ದುಲ್ ಹ್ಯಾರಿಸ್ ಮತ್ತು ಕೆ. ಮೊಹಮ್ಮದ್ ಇಕ್ಬಾಲ್, ಬೆಳ್ಳಾರೆಯ ಮೊಹಮ್ಮದ್ ಶಫೀಕ್, ಮಂಗಳಂತಿಯ ಶಹೀದ್ ಎಂ., ಸುಳ್ಯದ ಉಮ್ಮರ್ ಫಾರೂಕ್ ಎಂಆರ್, ಅಬ್ದುಲ್ ಕಬೀರ್, ನೆಲ್ಲೂರು ಕೆಮ್ರಾಜೆ ಗ್ರಾಮದ ಮುಹಮ್ಮದ್ ಇಬ್ರಾಹಿಂ ಶಾ, ನಾವೂರ್‌ನ ಸೈನುಲ್ ಅಬಿದ್ ವೈ, ಸವಣೂರಿನ ಝಕಿಯಾರ್ ಎ., ಮಡಿಕೇರಿಯ ತುಫೈಲ್ ಎಂ.ಎಚ್. ಪ್ರಕರಣದ ಆರೋಪಿಗಳಾಗಿದ್ದಾರೆ.

ಇಷ್ಟು ಜನ ಆರೋಪಿಗಳಲ್ಲಿ ಮುಸ್ತಫಾ ಪೈಚರ್, ಮಸೂದ್ ಕೆ.ಎ., ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕಿ, ಉಮ್ಮರ್ ಫಾರೂಕ್ ಎಂ.ಆರ್. ತಲೆಮರೆಸಿಕೊಂಡಿದ್ದ ಆರೋಪಿಗಳಾಗಿದ್ದಾರೆ. ಈಗ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಲು ಎನ್‌ಐಎ ಮುಂದಾಗಿದೆ.

ಇದನ್ನೂ ಓದಿ: BJP Politics: ಬಿಜೆಪಿಯಲ್ಲಿ ಸಂಸದ ವರ್ಸಸ್‌ ಶಾಸಕ: ಈರಣ್ಣ ಕಡಾಡಿ ವಿರುದ್ಧ ರಮೇಶ್‌ ಜಾರಕಿಹೊಳಿ ವಾಗ್ದಾಳಿ

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120ಬಿ (ಅಪರಾಧ ಸಂಚಿನ ಶಿಕ್ಷೆ), 153ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದನೆ), 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಅನೇಕ ವ್ಯಕ್ತಿಗಳು ನಡೆಸಿರುವ ಕೃತ್ಯ), ಯುಎಪಿಎ ಕಾಯ್ದೆಯ 16, 18 ಮತ್ತು 20ನೇ ಸೆಕ್ಷನ್‌ಗಳು, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 15 (1) (a) ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Tata Motors: ಟಾಟಾ ಮೋಟರ್ಸ್ ಕಂಪನಿಯು ದಾಖಲೆಯ ಅತ್ಯಧಿಕ 333 ಪೇಟೆಂಟ್‌ಗಳಿಗೆ ಅನುಮೋದನೆ ಪಡೆದುಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 850ಕ್ಕೂ ಹೆಚ್ಚು ಪೇಟೆಂಟ್‌ಗಳಿಗೆ ಅನುಮೋದನೆ ಪಡೆದಂತಾಗಿದೆ. ಹೊಸ ಹೊಸ ಉತ್ಪನ್ನಗಳು, ಪ್ರಕ್ರಿಯೆ ನಾವೀನ್ಯತೆಗಳು, ಕನೆಕ್ಟಿವಿಟಿ, ಎಲೆಕ್ಟ್ರಿಫಿಕೇಶನ್, ಸಸ್ಟೇನೇಬಿಲಿಟಿ ಅಂಡ್ ಸೇಫ್ಟಿ (CESS) ಯಂತಹ ಪ್ರಮುಖ ಆಟೋಮೋಟಿವ್ ಟ್ರೆಂಡ್‌ಗಳಲ್ಲಿನ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತಾದ ವಿಸ್ತಾರವಾದ ಕ್ಷೇತ್ರಗಳಲ್ಲಿ ಆವಿಷ್ಕಾರ ತರುವ ನಿಟ್ಟಿನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

VISTARANEWS.COM


on

Tata Motors gets approval for 333 patents
Koo

ಬೆಂಗಳೂರು: ಭಾರತದ ಮುಂಚೂಣಿಯಲ್ಲಿರುವ ಆಟೋಮೋಬೈಲ್ ಕಂಪನಿ ಟಾಟಾ ಮೋಟಾರ್ಸ್ (Tata Motors) ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (IPR)ನಲ್ಲಿ ಮತ್ತೊಂದು ಮಹತ್ವದ ಹೊಸ ಮೈಲುಗಲ್ಲು ಸ್ಥಾಪಿಸಿದೆ.

2024ನೇ ಹಣಕಾಸು ಸಾಲಿನಲ್ಲಿ ಸಂಸ್ಥೆಯು ದಾಖಲೆಯ 222 ಪೇಟೆಂಟ್‌ಗಳು ಮತ್ತು 117 ಡಿಸೈನ್ ಅರ್ಜಿಗಳನ್ನು ಸಲ್ಲಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತ್ಯಧಿಕ ಎನಿಸಿದೆ. ಹೊಸ ಹೊಸ ಉತ್ಪನ್ನಗಳು, ಪ್ರಕ್ರಿಯೆ ನಾವೀನ್ಯತೆಗಳು, ಕನೆಕ್ಟಿವಿಟಿ, ಎಲೆಕ್ಟ್ರಿಫಿಕೇಶನ್, ಸಸ್ಟೇನೇಬಿಲಿಟಿ ಅಂಡ್ ಸೇಫ್ಟಿ (CESS) ಯಂತಹ ಪ್ರಮುಖ ಆಟೋಮೋಟಿವ್ ಟ್ರೆಂಡ್‌ಗಳಲ್ಲಿನ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತಾದ ವಿಸ್ತಾರವಾದ ಕ್ಷೇತ್ರಗಳಲ್ಲಿ ಆವಿಷ್ಕಾರ ತರುವ ನಿಟ್ಟಿನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಆರತಕ್ಷತೆಯಲ್ಲಿ ವಧು-ವರರಿಂದ ಮತದಾನ ಜಾಗೃತಿ

ಇದಲ್ಲದೇ, ಪವರ್ ಟ್ರೇನ್, ಬಾಡಿ & ಟ್ರಿಮ್, ಸಸ್ಪೆನ್ಷನ್, ಬ್ರೇಕ್ಸ್, ಎಚ್‌.ವಿ.ಎ.ಸಿ. (HVAC) ಮತ್ತು ಮಾಲಿನ್ಯ ನಿಯಂತ್ರಣ ಸೇರಿದಂತೆ ವಿವಿಧ ವಾಹನ ಸಿಸ್ಟಂಗಳನ್ನೂ ಈ ಅರ್ಜಿಗಳು ಒಳಗೊಂಡಿವೆ. ಇದೇ ವೇಳೆ ಟಾಟಾ ಮೋಟರ್ಸ್ ದಾಖಲೆಯ ಅತ್ಯಧಿಕ 333 ಪೇಟೆಂಟ್‌ಗಳಿಗೆ ಅನುಮೋದನೆ ಪಡೆದುಕೊಂಡಿರುವುದು ಹೆಗ್ಗಳಿಕೆಯಾಗಿದೆ. ಈ ಮೂಲಕ ಟಾಟಾ ಮೋಟರ್ಸ್ ಇಲ್ಲಿವರೆಗೆ ಒಟ್ಟು 850ಕ್ಕೂ ಹೆಚ್ಚು ಪೇಟೆಂಟ್‌ಗಳಿಗೆ ಅನುಮೋದನೆ ಪಡೆದಂತಾಗಿದೆ.

ಇದು ಎಂಜಿನಿಯರಿಂಗ್ ಪರಿಣತಿ, ಕ್ಲೀನ್ ಪವರ್‌ಟ್ರೇನ್‌ಗಳು, ವಿನ್ಯಾಸ ಸಂಪರ್ಕ ಮತ್ತು ಸ್ಮಾರ್ಟ್ ಸುರಕ್ಷತೆ ವೈಶಿಷ್ಟ್ಯಗಳಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಮೂಲಕ ನೈಜ-ವಿಶ್ವದ ಅಗತ್ಯತೆಗಳಿಗೆ ಅನುಗುಣವಾಗಿ ನಾವೀನ್ಯತೆಗಳನ್ನು ಅಳವಡಿಕೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಹಕರ ಹಿತರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಟಾಟಾ ಮೋಟರ್ಸ್, ಇದಕ್ಕೆ ಪೂರಕವಾಗಿ ಉದ್ದೇಶಿತ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ. ಇದರ ಪರಿಣಾಮ ಕಂಪನಿಯು ಕಾರ್ಯದಕ್ಷತೆ, ಹಸಿರು ಮತ್ತು ಸುರಕ್ಷಿತ ವಾಹನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

ಈ ಮೂಲಕ ಬಳಕೆದಾರರು ಮತ್ತು ಉದ್ಯಮದ ಪರಿವರ್ತನೆಗೆ ಪ್ರಯೋಜನವಾಗುವಂತೆ ಕಾರ್ಯನಿರ್ವಹಿಸುತ್ತಿದೆ. 2024 ನೇ ಹಣಕಾಸು ಸಾಲಿನಲ್ಲಿ ಟಾಟಾ ಮೋಟರ್ಸ್ ತನ್ನ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (IPR) ಪರಿಣತಿಗಾಗಿ ಐದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಾಗೂ ಜಾಗತಿಕ ಮಾನ್ಯತೆಯನ್ನು ಗಳಿಸಿದೆ.

ಇದನ್ನೂ ಓದಿ: DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್​ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್

ಈ ಕುರಿತು ಮಾತನಾಡಿದ ಟಾಟಾ ಮೋಟರ್ಸ್‌ನ ಅಧ್ಯಕ್ಷ & ಚೀಫ್ ಟೆಕ್ನಾಲಾಜಿ ಆಫೀಸರ್ ರಾಜೇಂದ್ರ ಪೇಟ್ಕರ್, ಟಾಟಾ ಮೋಟರ್ಸ್‌ ದಾಖಲೆ ಸಂಖ್ಯೆಯ ಪೇಟೆಂಟ್‌ಗಳನ್ನು ಸಲ್ಲಿಸಿ ಮತ್ತು ಮಂಜೂರು ಪಡೆಯುವುದರೊಂದಿಗೆ ನಾವು ಆಟೋಮೋಟಿವ್ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನಗಳು, ಹಸಿರು ವಾಹನಗಳು ಮತ್ತು ಗ್ರಾಹಕ ಕೇಂದ್ರಿತ ವಿಧಾನವು ನಮ್ಮನ್ನು ಉದ್ಯಮದಲ್ಲಿ ಮುಂಚೂಣಿಯಲ್ಲಿರಿಸಿದೆ. ಚಲನಶೀಲತೆ ವಿಕಸನಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್ ಮುಂಚೂಣಿಯಲ್ಲಿದೆ. ಈ ಮೂಲಕ ಎಲ್ಲರಿಗೂ ಸ್ಮಾರ್ಟ್, ಹೆಚ್ಚು ಸಂಪರ್ಕದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ ಎಂದು ತಿಳಿಸಿದ್ದಾರೆ.

Continue Reading

ಹುಬ್ಬಳ್ಳಿ

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ ನಡೆಸುತ್ತಿದ್ದಾರೆ. ಮಗಳ 5ನೇ ದಿನದ ಸಂತಾಪದ ನೆಪದಲ್ಲಿ ವಿಡಿಯೊ ತೆಗೆದುಕೊಂಡು ಹೋಗಿದ್ದಾರೆ. ಇವತ್ತು ಕೆಲ ವ್ಯಕ್ತಿಗಳು ಯಾವುದೊ ಸಂಚು ಹಾಕಿದ್ದಾರೆ ಎಂಬ ಅನುಮಾನ ಬಂದಿದೆ. ಹೀಗಾಗಿ ಆಯುಕ್ತರು ಪೊಲೀಸ್‌ ಭದ್ರತೆಯನ್ನು ಒದಗಿಸಿದ್ದಾರೆ ಎಂದು ನೇಹಾ ತಂದೆ ನಿರಂಜನ್‌ ಹಿರೇಮಠ ತಿಳಿಸಿದ್ದಾರೆ.

VISTARANEWS.COM


on

By

Neha Murder Case in hubblli
Koo

ಹುಬ್ಬಳ್ಳಿ: ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣಕ್ಕೆ (Neha Murder Case) ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಈಗಾಗಲೇ ನೇಹಾ ಮನೆಗೂ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದು, ನೇಹಾ ತಂದೆ-ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಅನಾಮಧೇಯ ವ್ಯಕ್ತಿಗಳು ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಆತಂಕವನ್ನು ಹೊರಹಾಕಿದ್ದಾರೆ.

ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಆದರೆ ಮಗಳ ಹತ್ಯೆಯಾದ ಐದನೇ ದಿನ, ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ಮನೆಗೆ ಬಂದು ವಿಡಿಯೊ ಮಾಡಿಕೊಂಡು ಹೋಗಿದ್ದಾರೆ. ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದ ಎಂದು ತಿಳಿದು ಬಂದಿದೆ. ಇವತ್ತು ಕೆಲ ವ್ಯಕ್ತಿಗಳು ಯಾವುದೊ ಸಂಚು ಹಾಕಿದ್ದಾರೆ ಎಂಬ ಅನುಮಾನ ಬಂದಿದೆ. ಈ ವಿಷಯವನ್ನು ಪೊಲೀಸ್ ಆಯುಕ್ತರಿಗೆ ಹೇಳಿದ್ದೇವೆ, ಅವರು ಭದ್ರತೆ ಕೊಡುವುದಾಗಿ ಹೇಳಿದ್ದು, ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ನಿರಂಜನ್‌ ತಿಳಿಸಿದ್ದಾರೆ.

ಇನ್ನೂ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಂದಲೂ ಕೆಲ ಮಾಹಿತಿ ಕೇಳಿದ್ದಾರೆ. ಪ್ರಕರಣದ ತನಿಖೆಗೆ ನಮ್ಮ ಸಹಕಾರ ಕೇಳಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಸದ್ಯ ತನಿಖೆ ವಿವರಗಳನ್ನು ಹೇಳದಿರುವಂತೆ ಮನವಿ ಮಾಡಿದ್ದಾರೆ. ಸಿಐಡಿ ವರದಿ ಕೊಟ್ಟ ನಂತರ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Self Harming : ಬೆಂಗಳೂರಲ್ಲಿ ರೈಲಿಗೆ ಸಿಲುಕಿ ಮೂವರು ಸಾವು; ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಗುರುವಾರ (ಏ.25) ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದರು. ಸಿಐಡಿ ಎಡಿಜಿಪಿ ಬಿಕೆ‌ ಸಿಂಗ್, ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ಸುಮಾರು ಒಂದು ಗಂಟೆಗಳ ಸುದೀರ್ಘ ವಿಚಾರಣೆಯನ್ನು ನಡೆಸಿದರು. ನಂತರ ನೇಹಾ ತಂದೆ ನಿರಂಜನ್‌ ಹಿರೇಮಠ್‌, ತಾಯಿ ಗೀತಾರಿಂದ ಹೇಳಿಕೆಯನ್ನು ಪಡೆದರು.

ಇನ್ನೂ ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಆರು ದಿನಗಳ‌ ಕಾಲ‌ ಕಸ್ಟಡಿಗೆ ನೀಡಿದ ಹಿನ್ನೆಲೆ ಆರೋಪಿಯನ್ನು ಧಾರವಾಡದ ಕಾರಾಗೃಹದಿಂದ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು. ಇದೀಗ ನೇಹಾ ತಂದೆ- ತಾಯಿಯಿಂದ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿರುವ ಸಿಐಡಿ ಅಧಿಕಾರಿಗಳು 1 ಗಂಟೆಯ ವಿಚಾರಣೆ ನಡೆಸಿ ವಾಪಸ್‌ ಆದರು.

ರಹಸ್ಯ ಸ್ಥಳದಲ್ಲಿ ಆರೋಪಿ ಫಯಾಜ್‌ ವಿಚಾರಣೆ

ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಧಾರವಾಡದಲ್ಲಿ ಬೀಡು ಬಿಟ್ಟಿದೆ. ಆರೋಪಿ ಫಯಾಜ್‌ನನ್ನು ಧಾರವಾಡದ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ಅಧಿಕಾರಿಗಳು ನಿನ್ನೆ ಬುಧವಾರ ಸ್ಥಳ ಮಹಜರು ಜತೆಗೆ ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿದ್ದಾರೆ.

ಸ್ಥಳ ಮಹಜರು ವೇಳೆ ಕಾಲೇಜು ಬಳಿ ಎವಿಬಿಪಿ ಪ್ರತಿಭಟನೆ ನಡೆಸಿತ್ತು. ಇದೀಗ ಧಾರವಾಡದಲ್ಲಿಯೂ ಪ್ರತಿಭಟನೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಫಯಾಜ್‌ನನ್ನು ರಹಸ್ಯ ಸ್ಥಳದಲ್ಲಿಟ್ಟಿದ್ದಾರೆ. ಫಯಾಜ್‌ ನೇಹಾಳನ್ನು ಹತ್ಯೆ ಮಾಡಲು ಧಾರವಾಡದಲ್ಲೇ ಚಾಕು ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಾಕು ಖರೀದಿಸಿದ ಸ್ಥಳ, ಸ್ನೇಹಿತರ ಭೇಟಿಯಾದ ಸ್ಥಳಗಳಿಗೆ ಸಿಐಡಿ ಟೀಂ ಭೇಟಿ ನೀಡುವ ಸಾಧ್ಯತೆ ಇದೆ.

ಏನಿದು ನೇಹಾ ಹತ್ಯೆ ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹುಬ್ಬಳ್ಳಿ

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case : ನೇಹಾ ಹತ್ಯೆ ಪ್ರಕರಣ ಸಂಬಂಧ ವಿವಿಧ ಆಯಾಮದಲ್ಲಿ ಸಿಐಡಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ನೇಹಾ ತಂದೆ-ತಾಯಿ ವಿಚಾರಣೆ ಬಳಿಕ ನಿರಂಜನ್‌ ಹಿರೇಮಠ್‌ ಅವರ ಕಾರು ಚಾಲಕ ಹಾಗೂ ಅಕೌಂಟೆಂಟ್‌ರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

VISTARANEWS.COM


on

By

Neha Murder Case
Koo

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ (Neha Murder case) ಸಂಬಂಧಿಸಿದಂತೆ ನೇಹಾ ತಂದೆ ನಿರಂಜನ್‌ ಹಿರೇಮಠ್‌ ಅವರ ಕಾರುಚಾಲಕ ಮತ್ತು ಅಕೌಂಟೆಂಟ್‌ರನ್ನು ಸಿಐಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ.

ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಮತ್ತು ಸಿಐಡಿ ಎಸ್‌ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಕಾರು ಚಾಲಕ ಮಹಾಂತೇಶ ಮೆಣಸಿನಕಾಯಿ, ಅಕೌಂಟೆಂಟ್ ಬಷೀರ್ ಅಹ್ಮದ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅವರಿಬ್ಬರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ?

ಅನಾಮಧೇಯ ವ್ಯಕ್ತಿಗಳು ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯಿಸಿದ್ದಾರೆ. ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಆದರೆ ಮಗಳ ಹತ್ಯೆಯಾದ ಐದನೇ ದಿನ, ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ಮನೆಗೆ ಬಂದು ವಿಡಿಯೊ ಮಾಡಿಕೊಂಡು ಹೋಗಿದ್ದಾರೆ. ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದ ಎಂದು ತಿಳಿದು ಬಂದಿದೆ. ಇವತ್ತು ಕೆಲ ವ್ಯಕ್ತಿಗಳು ಯಾವುದೊ ಸಂಚು ಹಾಕಿದ್ದಾರೆ ಎಂಬ ಅನುಮಾನ ಬಂದಿದೆ. ಈ ವಿಷಯವನ್ನು ಪೊಲೀಸ್ ಆಯುಕ್ತರಿಗೆ ಹೇಳಿದ್ದೇವೆ, ಅವರು ಭದ್ರತೆ ಕೊಡುವುದಾಗಿ ಹೇಳಿದ್ದು, ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೂ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಂದಲೂ ಕೆಲ ಮಾಹಿತಿ ಕೇಳಿದ್ದಾರೆ. ಪ್ರಕರಣದ ತನಿಖೆಗೆ ನಮ್ಮ ಸಹಕಾರ ಕೇಳಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಸದ್ಯ ತನಿಖೆ ವಿವರಗಳನ್ನು ಹೇಳದಿರುವಂತೆ ಮನವಿ ಮಾಡಿದ್ದಾರೆ. ಸಿಐಡಿ ವರದಿ ಕೊಟ್ಟ ನಂತರ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Physical abuse : ಬೆಂಗಳೂರಲ್ಲಿ ಯುವತಿ ಕಿಡ್ನ್ಯಾಪ್; ಐವರು ಕಾಮುಕರಿಂದ ಅತ್ಯಾಚಾರ

ಏನಿದು ನೇಹಾ ಹತ್ಯೆ ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Lok Sabha Election 2024

Lok Sabha Election 2024: ವೋಟರ್‌ ಲಿಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳ ಹೆಸರೇ ಇಲ್ಲ; ಮತಗಟ್ಟೆ ಮುಂದೆಯೇ ಪ್ರೊಟೆಸ್ಟ್!

Lok Sabha Election 2024: ಚುನಾವಣಾ ಕೆಲಸಕ್ಕೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಕೆಲವರಿಗೆ ನಿಯೋಜನೆಗೊಂಡ ಮತಗಟ್ಟೆಯಲ್ಲಿಯೇ ಮತ ಹಾಕಲು ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಎಚ್ಎಸ್ಆರ್ ಲೇಔಟ್ ಬಳಿ ಇರುವ ಜೆಎಸ್‌ಎಸ್ ಶಾಲೆ ಮತಗಟ್ಟೆಯಲ್ಲಿ ನಿಯೋಜನೆಗೊಂಡ ಅಧಿಕಾರಿಗಳ ಹೆಸರು ವೋಟರ್‌ ಲಿಸ್ಟ್‌ನಲ್ಲಿಯೇ ಇಲ್ಲ. ಇದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರು ವೋಟಿಂಗ್ ನಡೆಯುವ ಶಾಲೆ ಮುಂದೆಯೇ ಧರಣಿ ಕುಳಿತಿದ್ದಾರೆ.

VISTARANEWS.COM


on

Lok Sabha Election 2024 No names of election officials in voter list Protest in front of the polling booth
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಏಪ್ರಿಲ್‌ 26ರ ಶುಕ್ರವಾರ ಬೆಂಗಳೂರಿನಲ್ಲಿ ಮೊದಲ ಹಂತದ ಮತದಾನ (First phase of polling) ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ನಡೆಸಿದೆ. ಚುನಾವಣಾ ಪ್ರಕ್ರಿಯೆಗೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆದರೆ, ಬೆಂಗಳೂರಲ್ಲಿ ಚುನಾವಣಾ ಸೇವೆಗೆ ನಿಯೋಜನೆಗೊಂಡ ಅಧಿಕಾರಿಗಳ ಹೆಸರೇ ವೋಟರ್‌ ಲಿಸ್ಟ್‌ನಲ್ಲಿ (Voter List) ಇಲ್ಲದಿರುವುದು ಗೊತ್ತಾಗಿದೆ. ಈ ಸಂಬಂಧ ಆ ಅಧಿಕಾರಿಗಳು ಮತಗಟ್ಟೆ ಎದುರೇ ಧರಣಿ ಕುಳಿತಿದ್ದಾರೆ.

ಚುನಾವಣಾ ಕೆಲಸಕ್ಕೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಕೆಲವರಿಗೆ ನಿಯೋಜನೆಗೊಂಡ ಮತಗಟ್ಟೆಯಲ್ಲಿಯೇ ಮತ ಹಾಕಲು ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಎಚ್ಎಸ್ಆರ್ ಲೇಔಟ್ ಬಳಿ ಇರುವ ಜೆಎಸ್‌ಎಸ್ ಶಾಲೆ ಮತಗಟ್ಟೆಯಲ್ಲಿ ನಿಯೋಜನೆಗೊಂಡ ಅಧಿಕಾರಿಗಳ ಹೆಸರು ವೋಟರ್‌ ಲಿಸ್ಟ್‌ನಲ್ಲಿಯೇ ಇಲ್ಲ. ಇದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರು ವೋಟಿಂಗ್ ನಡೆಯುವ ಶಾಲೆ ಮುಂದೆಯೇ ಧರಣಿ ಕುಳಿತಿದ್ದಾರೆ. ಹಲವು ಅಧಿಕಾರಿಗಳ ಹೆಸರು ಮಿಸ್‌ ಆಗಿರುವುದು ಗೊಂದಲಕ್ಕೆ ಕಾರಣವಾಗಿದೆ.

ಇವಿಎಂನಲ್ಲಿ ನಿಮ್ಮ ಮತ ದಾಖಲಾಗುವುದು ಹೇಗೆ? ವಿವಿಪ್ಯಾಟ್‌ ಕೆಲಸ ಏನು? ಇಲ್ಲಿದೆ ಸಮಗ್ರ ವಿವರ

ವಿದ್ಯುನ್ಮಾನ ಮತಯಂತ್ರಗಳ (EVM- ಇವಿಎಂ) ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಕಾನೂನು ಹೋರಾಟದ ನಡುವೆಯೇ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase Voting) ನಡೆಯುತ್ತಿದೆ. ಇವಿಎಂಗಳಲ್ಲಿ ಚಲಾವಣೆಯಾದ 100% ಮತಗಳನ್ನೂ ವಿವಿಪ್ಯಾಟ್ (VVPAT) ವ್ಯವಸ್ಥೆಯ ಮೂಲಕ ಪರಿಶೀಲಿಸುವ ವ್ಯವಸ್ಥೆ ಜಾರಿ ಮಾಡಬೇಕು (VVPAT Verification) ಎಂದು ಅರ್ಜಿದಾರರು ಕೋರಿದ್ದಾರೆ. ಈ ಸಂದರ್ಭದಲ್ಲಿ, ಇವಿಎಂ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ವಿವಿಪ್ಯಾಟ್‌ ಮೂಲಕ ಅದರ ಪರಿಶೀಲನೆ ಹೇಗೆ, ಎಂಬುದನ್ನು ವಿವರವಾಗಿ ತಿಳಿಯೋಣ.

ಕೋರ್ಟ್‌ನಲ್ಲಿ ನಡೆಸದ ವಾದವಿವಾದಗಳ ಸಮಯದಲ್ಲಿ, ಬ್ಯಾಲೆಟ್ ವೋಟಿಂಗ್ ಸಿಸ್ಟಮ್‌ಗೆ ಹಿಂತಿರುಗಲು ಸಲಹೆಗಳು ಬಂದಿವೆ. ಅರ್ಜಿದಾರರು ಯುರೋಪಿಯನ್ ರಾಷ್ಟ್ರಗಳ ಉದಾಹರಣೆ ತೋರಿಸಿದ್ದಾರೆ. ಆದರೆ, “ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಜರ್ಮನಿಗಿಂತ ಹೆಚ್ಚಿರುವುದನ್ನು ಗಮನಿಸಿ. ಇಂತಹ ಹೋಲಿಕೆಗಳನ್ನು ಮಾಡಬೇಡಿ” ಎಂದು ನ್ಯಾಯಾಲಯವು ಅರ್ಜಿದಾರರಿಗೆ ಹೇಳಿದೆ. ನಿನ್ನೆ, ಭಾರತೀಯ ಚುನಾವಣಾ ಆಯೋಗದ ವಕೀಲರು ಇವಿಎಂ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ರೀತಿಯ ಟ್ಯಾಂಪರಿಂಗ್ ವಿರುದ್ಧ ಹೇಗೆ ದೋಷರಹಿತವಾಗಿದೆ ಎಂಬುದನ್ನು ವಿವರಿಸಿದರು.

ಇವಿಎಂ ಕೆಲಸ ಮಾಡುವುದು ಹೇಗೆ?

EVM ಎರಡು ಘಟಕಗಳನ್ನು ಹೊಂದಿದೆ- ನಿಯಂತ್ರಣ ಘಟಕ ಮತ್ತು ಮತದಾನ ಘಟಕ. ಇವುಗಳನ್ನು ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಇವಿಎಂ ನಿಯಂತ್ರಣ ಘಟಕವು ಪೋಲಿಂಗ್ ಆಫೀಸರ್‌ ಬಳಿ ಇರುತ್ತದೆ. ಮತಯಂತ್ರ ಸಾಮಾನ್ಯವಾಗಿ ಮತದಾರನ ಖಾಸಗಿತನಕ್ಕಾಗಿ ಮುಚ್ಚಿದ ಆವರಣದೊಳಗೆ ಇರುತ್ತದೆ.

ಮತಗಟ್ಟೆಯಲ್ಲಿ, ಮತಗಟ್ಟೆ ಅಧಿಕಾರಿಯು ನಿಮ್ಮ ಗುರುತನ್ನು ಪರಿಶೀಲಿಸುತ್ತಾರೆ. ನಂತರ ನೀವು ಮತ ​​ಚಲಾಯಿಸಲು ಅನುವು ಮಾಡಿಕೊಡುವ ಬ್ಯಾಲೆಟ್ ಬಟನ್ ಅನ್ನು ಒತ್ತುತ್ತಾರೆ. ಬ್ಯಾಲೆಟ್ ಯೂನಿಟ್‌ನಲ್ಲಿ ಅಭ್ಯರ್ಥಿಗಳ ಹೆಸರುಗಳು ಮತ್ತು ಚಿಹ್ನೆಗಳು ಅವುಗಳ ಪಕ್ಕದಲ್ಲಿ ನೀಲಿ ಬಟನ್‌ಗಳಿರುತ್ತವೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತಬೇಕು.

ಮತದಾನ ಪ್ರಕ್ರಿಯೆ

ಮತಗಟ್ಟೆ ಅಧಿಕಾರಿಯ ನಿಯಂತ್ರಣ ಘಟಕವು ಬಹು ಬಟನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ʼballot’ ಎಂಬ ಶೀರ್ಷಿಕೆಯಿದು. ಒಮ್ಮೆ ಅಧಿಕಾರಿಯು ಈ ಗುಂಡಿಯನ್ನು ಒತ್ತಿದರೆ, ʼಬ್ಯುಸಿ’ ಎಂಬ ಶೀರ್ಷಿಕೆಯ ಕೆಂಪು ದೀಪವು ಬೆಳಗುತ್ತದೆ. ಒಂದು ಮತವನ್ನು ದಾಖಲಿಸಲು ನಿಯಂತ್ರಣ ಘಟಕ ಸಿದ್ಧವಾಗಿದೆ ಎಂದು ಇದು ಸೂಚಿಸುತ್ತದೆ. ಮತದಾರ ಇರುವ ಬ್ಯಾಲೆಟ್ ಯೂನಿಟ್‌ನಲ್ಲಿ ಹಸಿರು ದೀಪ ಆನ್ ಆಗಿದ್ದು, ಮತದಾನಕ್ಕೆ ಯಂತ್ರ ಸಿದ್ಧವಾಗಿದೆ ಎಂದು ಸಂಕೇತಿಸುತ್ತದೆ. ನಂತರ ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒತ್ತುತ್ತಾನೆ. ಬ್ಯಾಲೆಟ್ ಯೂನಿಟ್ ದೃಷ್ಟಿಹೀನ ಮತದಾರರಿಗೆ ಬ್ರೈಲ್ ಲಿಪಿಯನ್ನು ಸಹ ಹೊಂದಿದೆ.

ಮತದಾರರು ಮತದಾನ ಮಾಡಿದ ನಂತರ, ನಿಯಂತ್ರಣ ಘಟಕವು ಬೀಪ್ ಧ್ವನಿಯನ್ನು ಹೊರಸೂಸುತ್ತದೆ. ಇದು ಮತದಾನ ಪೂರ್ಣಗೊಂಡಿದೆ ಎಂದು ಸೂಚಿಸುತ್ತದೆ. ನಿಯಂತ್ರಣ ಘಟಕವು ಎಲ್‌ಇಡಿ ಪರದೆ ಮತ್ತು ಬಟನ್‌ಗಳನ್ನು ಹೊಂದಿದ್ದು, ಅದರಲ್ಲಿ ದಾಖಲಾಗಿರುವ ಒಟ್ಟು ಮತಗಳ ಸಂಖ್ಯೆಯನ್ನು ನೋಡಲು ಬಳಸಬಹುದು. ಎಲ್ಲಾ ಮತಗಳು ದಾಖಲಾದ ನಂತರ, ಮತಗಟ್ಟೆ ಅಧಿಕಾರಿಯು ನಿಯಂತ್ರಣ ಘಟಕದ ಬದಿಯಲ್ಲಿರುವ ಗುಂಡಿಯನ್ನು ಒತ್ತಿ, ಯಂತ್ರವನ್ನು ಮುಚ್ಚುತ್ತಾರೆ. ಎಣಿಕೆಯ ದಿನದಂದು, ಪ್ರತಿ ಅಭ್ಯರ್ಥಿ ಪಡೆದ ಒಟ್ಟು ಮತಗಳನ್ನು ನೋಡಲು ʼresult’ ಶೀರ್ಷಿಕೆಯ ಬಟನ್ ಅನ್ನು ಬಳಸಲಾಗುತ್ತದೆ. ನಿಯಂತ್ರಣ ಘಟಕದಿಂದ ಎಲ್ಲಾ ಡೇಟಾವನ್ನು ಅಳಿಸಲು ಬಳಸಬಹುದಾದ ʼclear’ ಬಟನ್ ಕೂಡ ಇದೆ.

VVPAT ಎಂದರೇನು?

VVPAT ಎಂದರೆ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್. ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಮತ್ತು ಮತದಾರ ಚಲಾಯಿಸಿದ ಅಭ್ಯರ್ಥಿಗೇ ಆ ಮತ ಹೋಗಿದೆಯೇ ಎಂದು ನೋಡಲು ಅವಕಾಶವಿರುವ ಯಂತ್ರ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಬಟನ್ ಅನ್ನು ಒಮ್ಮೆ ಒತ್ತಿದರೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‌ಗೆ ಸಂಪರ್ಕಗೊಂಡಿರುವ VVPAT, ಏಳು ಸೆಕೆಂಡುಗಳ ಕಾಲ ಮತದಾರರಿಗೆ ಗೋಚರಿಸುವ ಕಾಗದದ ಸ್ಲಿಪ್ ಅನ್ನು ಉತ್ಪಾದಿಸುತ್ತದೆ. ಅದರ ನಂತರ, ಪೇಪರ್ ಸ್ಲಿಪ್ VVPAT ಯಂತ್ರದಲ್ಲಿರುವ ಡ್ರಾಪ್ ಬಾಕ್ಸ್‌ಗೆ ಬೀಳುತ್ತದೆ.

ಪ್ರಸ್ತುತ, ಪ್ರತಿ ಅಸೆಂಬ್ಲಿ ವಿಭಾಗದಲ್ಲಿಯೂ 5 ವಿವಿಪ್ಯಾಟ್ ಯಂತ್ರಗಳಲ್ಲಿ ದಾಖಲಾದ ಮತಗಳನ್ನು ಇವಿಎಂಗಳೊಂದಿಗೆ ಕ್ರಾಸ್-ಚೆಕ್ ಮಾಡಲಾಗುತ್ತದೆ. 100 ಶೇಕಡ ಇವಿಎಂಗಳಲ್ಲಿ ದಾಖಲಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನು ಕ್ರಾಸ್ ಚೆಕ್ ಮಾಡಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಬಯಸಿವೆ. ವಿವಿಪ್ಯಾಟ್‌ನಲ್ಲಿ ಏಳು ಸೆಕೆಂಡ್ ಲೈಟ್ ಆನ್ ಆಗಿದ್ದು, ಮತದಾರರು ತಮ್ಮ ಮತವನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಅರ್ಜಿದಾರರು ಕೋರಿದ್ದಾರೆ. ಪೇಪರ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಸಲಹೆಯಾಗಿದೆ. ಚುನಾವಣಾ ಆಯೋಗ ಇದನ್ನು ವಿರೋಧಿಸಿದೆ. ಇದು ಮತದಾನದ ಗೌಪ್ಯತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುರ್ಬಳಕೆಯಾಗಬಹುದು ಎಂದು ಹೇಳಿದೆ.

ಇದನ್ನೂ ಓದಿ: Gold Rate Today: ಬಂಗಾರದ ಮಾರುಕಟ್ಟೆಯಲ್ಲಿ ದರ ಇಂದು ತುಸು ಇಳಿಕೆ; 24Kಗೆ ಎಷ್ಟಿದೆ ನೋಡಿ

ಸಮಯ ಉಳಿಕೆ

ಚುನಾವಣಾ ಆಯೋಗದ ಪ್ರಕಾರ ಇವಿಎಂ ವ್ಯವಸ್ಥೆ ಫೂಲ್ ಪ್ರೂಫ್ ಆಗಿದೆ. ಇದು ಮತ ಎಣಿಕೆ ಸಮಯವನ್ನು ಉಳಿಸುತ್ತದೆ, ಟ್ಯಾಂಪರ್ ಪ್ರೂಫ್ ಮತ್ತು ಬಳಕೆದಾರ ಸ್ನೇಹಿಯಾಗಿದೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಇವಿಎಂಗಳು ಹಗುರವಾಗಿವೆ ಮತ್ತು ಸದೃಢವಾಗಿವೆ- ಮತಗಟ್ಟೆ ಅಧಿಕಾರಿಗಳು ದೂರದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಟ್ರೆಕ್ಕಿಂಗ್‌ ಮಾಡಬೇಕಾದ ದೇಶದಲ್ಲಿ ಇದು ನಿರ್ಣಾಯಕವಾಗಿದೆ.

ಎಲ್ಲರ ಸಮ್ಮುಖದಲ್ಲಿ ಪರಿಶೀಲನೆ

ಇವಿಎಂಗಳಿಗೆ ವಿದ್ಯುತ್ ಅಗತ್ಯವಿಲ್ಲ ಮತ್ತು ಬ್ಯಾಟರಿ/ಪವರ್ ಪ್ಯಾಕ್‌ ಇದರೊಂದಿಗೆ ಬರುತ್ತದೆ. ಸ್ಥಿರವಾದ ವಿದ್ಯುತ್ ಸರಬರಾಜನ್ನು ಹೊಂದಿರದ ಪ್ರದೇಶಗಳಲ್ಲಿ ಮತದಾನವನ್ನು ಸಕ್ರಿಯಗೊಳಿಸಲು ಇದು ಮತ್ತೊಂದು ನಿರ್ಣಾಯಕ ವೈಶಿಷ್ಟ್ಯ. ಪ್ರತಿ ಚುನಾವಣೆಗೂ ಮುನ್ನ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ತಪಾಸಣೆ (ಎಫ್‌ಎಲ್‌ಸಿ) ನಡೆಸಲಾಗುತ್ತದೆ. ಈ ಪರಿಶೀಲನೆಯ ಸಮಯದಲ್ಲಿ, ಇವಿಎಂಗಳಲ್ಲಿನ ಡೇಟಾವನ್ನು ಅಳಿಸಲಾಗುತ್ತದೆ ಮತ್ತು ವಿವಿಧ ಘಟಕಗಳ ಕಾರ್ಯವನ್ನು ಪ್ರದರ್ಶಿಸಲಾಗುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಸಲಾಗುತ್ತದೆ.

ಈ ಬಗ್ಗೆ ಚುನಾವಣಾ ಆಯೋಗವು ಇನ್ನೂ ಯಾವುದೇ ರೀತಿಯ ಸ್ಪಷ್ಟನೆಯನ್ನು ನೀಡಿಲ್ಲ. ಈ ಅಧಿಕಾರಿಗಳಿಗೆ ಪರ್ಯಾಯವಾಗಿ ಯಾವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಮಾಹಿತಿ ಗೊತ್ತಾಗಿಲ್ಲ.

Continue Reading
Advertisement
KKR vs PBKS
ಕ್ರೀಡೆ48 seconds ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

IPL 2024
ಕ್ರೀಡೆ4 mins ago

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

Haji Akbar Afridi
ವಿದೇಶ6 mins ago

Lashkar-e-Islam: ಮತ್ತೊಬ್ಬ ಭಾರತ ವಿರೋಧಿ ಉಗ್ರ ಪಾಕಿಸ್ತಾನದಲ್ಲಿ ಅಪರಿಚಿತರ ಗುಂಡಿಗೆ ಖತಂ

Tata Motors gets approval for 333 patents
ದೇಶ12 mins ago

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Neha Murder Case in hubblli
ಹುಬ್ಬಳ್ಳಿ24 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ31 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

ICICI Bank
ದೇಶ31 mins ago

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

Kannada Serials TRP Lakshmi Nivasa In Top Amruthadhaare in Top 5
ಕಿರುತೆರೆ39 mins ago

Kannada Serials TRP: ಈ ವಾರ ಟಿಆರ್‌ಪಿಯಲ್ಲಿ ʻಲಕ್ಷ್ಮೀ ನಿವಾಸʼಕ್ಕೆ ಎರಡನೇ ಸ್ಥಾನ: ಟಾಪ್‌ 5ನಲ್ಲಿ ʻಅಮೃತಧಾರೆʼ!

Lok Sabha Election 2024 No names of election officials in voter list Protest in front of the polling booth
Lok Sabha Election 202442 mins ago

Lok Sabha Election 2024: ವೋಟರ್‌ ಲಿಸ್ಟ್‌ನಲ್ಲಿ ಚುನಾವಣಾ ಅಧಿಕಾರಿಗಳ ಹೆಸರೇ ಇಲ್ಲ; ಮತಗಟ್ಟೆ ಮುಂದೆಯೇ ಪ್ರೊಟೆಸ್ಟ್!

Reliance Smart Bazar
ವಾಣಿಜ್ಯ52 mins ago

Reliance Smart Bazar: ರಿಲಯನ್ಸ್ ಸ್ಮಾರ್ಟ್ ಬಜಾರ್ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಯಾವೆಲ್ಲ ವಸ್ತುಗಳಿಗೆ ಹೆಚ್ಚಿನ ಬೇಡಿಕೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ24 mins ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ31 mins ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ4 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20245 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌