Puneeth Parva | ಕಾಡು ಪ್ರಾಣಿ, ಗಿಡ-ಮರಗಳಲ್ಲೂ ಅಪ್ಪುವನ್ನು ನೋಡೋಣ: ರಾಘವೇಂದ್ರ ರಾಜಕುಮಾರ್ - Vistara News

ಕರ್ನಾಟಕ

Puneeth Parva | ಕಾಡು ಪ್ರಾಣಿ, ಗಿಡ-ಮರಗಳಲ್ಲೂ ಅಪ್ಪುವನ್ನು ನೋಡೋಣ: ರಾಘವೇಂದ್ರ ರಾಜಕುಮಾರ್

Puneeth Parva | ಪುನೀತ ಪರ್ವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ವಿವಿಧ ಕಡೆಗಳಿಂದ ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹಲವು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

VISTARANEWS.COM


on

puneeta parwa 47
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಪ್ಪ ಗಂಧದ ಗುಡಿ ಮಾಡಿದರು, ನಂತರ ಶಿವಣ್ಣ ಮಾಡಿದರು, ಈಗ ಅಪ್ಪು ಮಾಡಿದ್ದಾನೆ. ಇನ್ನು ಮೇಲೆ ಕಾಡು ಪ್ರಾಣಿ, ಮರ ಗಿಡಗಳಲ್ಲಿ ಅಪ್ಪುವನ್ನು ಅಭಿಮಾನಿಗಳು ನೋಡಬೇಕು. ಇದು ನನ್ನ ತಮ್ಮನ್ನ ಕೊನೇ ಸಿನಿಮಾ. ಹೀಗಾಗಿ ಇದನ್ನು ಪುನೀತ ಪರ್ವ (Puneeth Parva) ಕಾರ್ಯಕ್ರಮದ ಮೂಲಕ ದೊಡ್ಡದಾಗಿ ಮಾಡುತ್ತಿದ್ದೇವೆ. ಅಭಿಮಾನಿಗಳು ಯಾವುದೇ ಗಲಾಟೆ ಇಲ್ಲದೆ ಇದನ್ನು ನಡೆಸಿಕೊಡಿ. ಅಪ್ಪು ಹೋದಾಗಿನಿಂದ ಏನು ಸಮಸ್ಯೆ ಆಗದೆ ನಮಗೆ ಸಹಕಾರ ಕೊಟ್ಟಿದ್ದೀರಿ. ಇಂದೂ ಕೂಡಾ ನಮಗೆ ಸಹಕಾರ ಕೊಡಿ ಎಂದು ನಟ, ಪುನೀತ್‌ ರಾಜಕುಮಾರ್‌ ಸಹೋದರ ರಾಘವೇಂದ್ರ ರಾಜಕುಮಾರ್‌ ಹೇಳಿದರು.

ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ “ಪುನೀತ ಪರ್ವ” ಕಾರ್ಯಕ್ರಮಕ್ಕೂ ಮುನ್ನ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿ, ಈ ಸಿನಿಮಾ ಬಗ್ಗೆ ನನಗೂ ಮಾಹಿತಿ ಇರಲಿಲ್ಲ. ಸಿನಿಮಾ ನಿರ್ಮಾಣ ಬಳಿಕ ನಮಗೆ ಹೇಳಿದ. ಅಪ್ಪುಗೆ ಭೇದಭಾವ ಇಲ್ಲ. ಬಿಳಿ ಅಂದ್ರೆ ಅಪ್ಪ ನೆನಪು ಆಗುತ್ತಾರೆ. ಅಪ್ಪುಗೂ ಬಿಳಿ ಬಣ್ಣ ಅಂದರೆ ಇಷ್ಟ. ಹೀಗಾಗಿ ಇವತ್ತು ಬಿಳಿ ಬಟ್ಟೆ ಹಾಕಲು ಹೇಳಿದ್ದೇವೆ ಎಂದು ಹೇಳಿದರು.

Puneeth Parva

ಇದು ಅಭಿಮಾನಿಗಳ ಕಾರ್ಯಕ್ರಮ
ಅಭಿಮಾನಿಗಳಿಗಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಬರುವ ಅಭಿಮಾನಿಗಳೇ ಮುಖ್ಯ ಅತಿಥಿಗಳಾಗಿದ್ದಾರೆ. ಬರುವ ಎಲ್ಲರಿಗೂ ಸ್ವಾಗತ. ಎಲ್ಲರೂ ಸೇರಿ ಮಾಡೋಣ. ಅಪ್ಪು ಗಾಯಕನಾಗಿ ಹಾಡಿದ ಹಾಡನ್ನು ನಾನು ಹಾಡುತ್ತೇನೆ. ಅವನ ಜತೆಗಿನ ಒಡನಾಟ ಹೇಳಿ ನಾನು ಹಾಡು ಹಾಡುತ್ತೇನೆ. ಶಿವರಾಜಕುಮಾರ್ ಡ್ಯಾನ್ಸ್ ಮಾಡುತ್ತಾರೆ. ಕುನಾಲ್ ಗಾಂಜಾವಾಲ್‌ ಸೇರಿದಂತೆ ಹಲವು ಇರಲಿದ್ದಾರೆ. ಎಲ್ಲರೂ ರಂಜಿಸಲಿದ್ದಾರೆ ಎಂದು ರಾಘವೇಂದ್ರ ರಾಜಕುಮಾರ್‌ ತಿಳಿಸಿದರು.

ಇದನ್ನೂ ಓದಿ | Puneeth Parva | ʻಪುನೀತ ಪರ್ವʼದ ವಿವರ ಹಂಚಿಕೊಂಡ ಅಶ್ವಿನಿ ಪುನೀತ್ ರಾಜಕುಮಾರ್‌

Puneeth Parva

ಕುನಾಲ್‌, ರಾಘವೇಂದ್ರ ರಾಜಕುಮಾರ್‌ ರಿಹರ್ಸಲ್‌
ಗಾಯಕ ಕುನಾಲ್ ಗಾಂಜಾವಾಲ, ರಾಘವೇಂದ್ರ ರಾಜಕುಮಾರ್‌ ಅವರಿಂದ ಈಗಾಗಲೇ ರಿಹರ್ಸಲ್‌ ನಡೆದಿದೆ. “ನೀನೇ ನೀನೇ, ನನಗೆಲ್ಲಾ ನೀನೇ” ಹಾಡಿನ ಖ್ಯಾತಿಯ ಕುನಾಲ್ ಅಪ್ಪು ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಇನ್ನು ಅಪ್ಪು ಹಾಡಿದ ಕೆಲವು ಹಾಡುಗಳನ್ನು ಹಾಡಲು ರಾಘವೇಂದ್ರ ರಾಜ್‌ಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದು, “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ” ಗೀತೆಯನ್ನು ರಿಹರ್ಸಲ್‌ ಮಾಡುತ್ತಿದ್ದಾರೆ. ವೇದಿಕೆ ಮೇಲೆ ಪೂರ್ಣ ಪ್ರಮಾಣದ ಬ್ಯಾಂಡ್ ಟೀಂ ಜತೆಗೆ ಹಾಡಿನ ಅಭ್ಯಾಸ ಮುಂದುವರಿದಿದೆ.

Puneeth Parva

ದೂರದೂರಿನಿಂದ ಅಭಿಮಾನ ಆಗಮನ
ದೂರದ ಜಿಲ್ಲೆಗಳಿಂದ, ಹಳ್ಳಿಗಳಿಂದ ಅಪ್ಪು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹಲವರು ಬಸ್‌ಗಳಲ್ಲಿ ಆಗಮಿಸಿದರೆ ಮತ್ತೆ ಕೆಲವರು ಬಾಡಿಗೆ, ಸ್ವಂತ ವಾಹನಗಳ ಮೂಲಕ ಕಾರ್ಯಕ್ರಮಕ್ಕಾಗಿ ಬರುತ್ತಿದ್ದಾರೆ. ಈ ವಾಹನಗಳನ್ನು ಪಾರ್ಕಿಂಗ್‌ಗೆ ಪೊಲೀಸರು ಸ್ಥಳ ನಿಯೋಜನೆ ಮಾಡಿಸುತ್ತಿದ್ದು, ವಾಹನ ದಟ್ಟಣೆ ಆಗದಂತೆ ಕ್ರಮವಹಿಸುತ್ತಿದ್ದಾರೆ.

ಇದನ್ನೂ ಓದಿ | Puneeth Parva | ಪುನೀತ ಪರ್ವ ಕಾರ್ಯಕ್ರಮಕ್ಕಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸೈಕಲ್‌ ಏರಿದ ಅಭಿಮಾನಿ

Puneeth Parva

ಅದ್ಧೂರಿ ವೇದಿಕೆ
ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 10 ಎಕರೆ ಜಾಗದಲ್ಲಿ ಅದ್ಧೂರಿ ವೇದಿಕೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 80-60 ಅಳತೆಯ 10 ಅಡಿ ಎತ್ತರದಲ್ಲಿ‌ ವೇದಿಕೆ ನಿರ್ಮಾಣಗೊಂಡಿದೆ. ವೇದಿಕೆ ಮೇಲೆ ಸುಮಾರು ೫೦೦ ಲೈಟ್‌ಗಳನ್ನು ಬಳಕೆ ಮಾಡಲಾಗಿದ್ದು, 400ರಿಂದ 500 ಸಿಬ್ಬಂದಿ 1 ವಾರದಲ್ಲಿ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ. 14 ಕ್ಯಾಮೆರಾಗಳನ್ನು ಪುನೀತ ಪರ್ವ ಕಾರ್ಯಕ್ರಮದಲ್ಲಿ ಆಯೋಜಕರಿಂದಲೇ ಅಳವಡಿಸಲಾಗಿದೆ. ವಿಐಪಿಗಳಿಗೆ 5000 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಳೂವರೆ ಅಡಿಯ ಎಲ್‌ಇಡಿ (LED) ಸ್ಕ್ರೀನ್ ಅನ್ನು ಒಟ್ಟು ೭ ಕಡೆ ಅಳವಡಿಕೆ ಮಾಡಲಾಗಿದೆ.

ನೂಕು ನುಗ್ಗಲು ಆಗದಂತೆ ಕ್ರಮವಹಿಸಲಾಗಿದ್ದು, ಅಭಿಮಾನಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಬರುವ ಅಭಿಮಾನಿಗಳಿಗೆ ಎರಡು ಗೇಟ್‌ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಅಭಿಮಾನಿಗಳಿಗೆ ಒಳಗಡೆ ಹೋಗಲು ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ ತಂಡೋಪ ತಂಡವಾಗಿ ಅಭಿಮಾನಿಗಳು ಸ್ಥಳಕ್ಕೆ ಬಂದಿದ್ದಾರೆ. ಸುಮಾರು ಒಂದು ಲಕ್ಷ ಅಭಿಮಾನಿಗಳು ಬರುವ ನಿರೀಕ್ಷೆ ಇದ್ದು, ಸೂಕ್ತ ಕ್ರಮ ವಹಿಸಲಾಗಿದೆ.

ಇದನ್ನೂ ಓದಿ | ನ.1ರಂದು ಪುನೀತ್‌ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ, ಇದಕ್ಕಾಗಿ ಸಕಲ ಸಿದ್ಧತೆ ಎಂದ ಬೊಮ್ಮಾಯಿ

ಡ್ಯಾನ್ಸ್‌ ಪ್ರದರ್ಶನಗಳು
ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಪ್ರದರ್ಶನಗಳು ಇರಲಿದ್ದು, ಭಾರತದ ಮೈಕಲ್‌ ಜಾಕ್ಸನ್‌ ಖ್ಯಾತಿಯ ನಟ ಪ್ರಭುದೇವ, ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಮತ್ತು ಮೋಹಕ ತಾರೆ ರಮ್ಯಾ ಅವರಿಂದ ಡ್ಯಾನ್ಸ್‌ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ, ಕುನಾಲ್ ಗಾಂಜಾವಾಲ, ವಿಜಯ್ ಪ್ರಕಾಶ್, ಅರ್ಮಾನ್ ಮಲ್ಲಿಕ್, ಗುರು ಕಿರಣ್ ಹಾಗು ಟಿಪ್ಪು ಅವರಿಂದ ಗೀತ ನಮನ ಕಾರ್ಯಕ್ರಮಗಳೂ ನಡೆಯಲಿದೆ.

Puneeth Parva

ಮುಂಬೈಯಿಂದ ಆಗಮಿಸಿದ ನೃತ್ಯ ಕಲಾವಿದರು
ಪುನೀತ ಪರ್ವ ಕಾರ್ಯಕ್ರಮಕ್ಕೆ ಬೆಳಗ್ಗೆಯೇ ಮುಂಬೈಯಿಂದ ನೃತ್ಯ ಕಲಾವಿದರ ತಂಡ ಆಗಮಿಸಿದ್ದು, ಹಲವು ಸುತ್ತಿನ ರಿಹರ್ಸಲ್‌ಗಳನ್ನು ನಡೆಸಿವೆ. ಪುನೀತ್‌ ಸಿನಿಮಾಗಳ ಹಾಡಿಗೆ ಇವರೆಲ್ಲರೂ ಹೆಜ್ಜೆ ಹಾಕಲಿದ್ದಾರೆ.

ಸಂಚಾರ ದಟ್ಟನೆ ನಿಯಂತ್ರಣಕ್ಕೆ ಹಲವು ಮಾರ್ಗ
ಅಭಿಮಾನಿಗಳು ಹಾಗೂ ಸಾರ್ವಜನಿಕರ ಆಗಮನಕ್ಕೆ ಸಂಚಾರಿ ಪೊಲೀಸರು ಹಲವು ಮಾರ್ಗಗಳನ್ನು ಗುರುತಿಸಿದ್ದು, ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್, ಸುಮ್ಮುನಹಳ್ಳಿ ಬ್ರಿಡ್ಜ್, ರಾಜಕುಮಾರ್ ಸಮಾದಿ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ, ಮೆಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.

ತುಮಕೂರು ಕಡೆಯಿಂದ ಬರುವ ವಾಹನಗಳು ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಕಡೆಯಿಂದ ಬರುವ ವಾಹನಗಳು, ಮೇಜರ್ ಉನ್ನಿಕೃಷ್ಣ ರಸ್ತೆ, ಯಲಹಂಕ ಪೊಲೀಸ್ ಠಾಣೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಮೇಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.

ಹೊಸೂರು ಕಡೆಯಿಂದ ಬರುವ ವಾಹನಗಳು, ಹೊಸೂರು ರಸ್ತೆ, ಮಡಿವಾಳ ಚಕ್‌ಪೋಸ್ಟ್‌, ಡೈರಿ ಸರ್ಕಲ್, ಲಾಲ್‌ ಬಾಗ್ ಮುಖ್ಯದ್ವಾರ, ಮಿನರ್ವ ಸರ್ಕಲ್, ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಬಸವೇಶ್ವರ ವೃತ್ತ, ಮೌಂಟ್ ಕಾರ್ಮಲ್ ಕಾಲೇಜ್, ವಸಂತ ನಗರ ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನಕ್ಕೆ ತಲುಪಲು ಕ್ರಮ ವಹಿಸಲಾಗಿದೆ.

ಇದನ್ನೂ ಓದಿ | Gandhada Gudi | ಡಾ. ರಾಜ್‌ ಗಂಧದ ಗುಡಿಗಿಂತಲೂ ಪುನೀತ್‌ ಸಿನಿಮಾ ಯಶಸ್ಸು ಕಾಣಲಿ: ಸೋದರತ್ತೆ ನಾಗಮ್ಮ ಹಾರೈಕೆ

ಕೋಲಾರ, ಹೊಸಕೋಟೆ ಕಡೆಯಿಂದ ಬರುವ ವಾಹನಗಳು ಕೆ‌.ಆರ್ ಪುರ, ಟಿನ್ ಫ್ಯಾಕ್ಟರಿ, ಹೆಣ್ಣೂರು ರಿಂಗ್ ರೋಡ್, ಹೆಬ್ಬಾಳ ಮೇಲ್ಸೇತುವೆ, ಮೇಕ್ರಿ ಸರ್ಕಲ್‌ನಿಂದ ಅರಮನೆ ಮೈದಾನಕ್ಕೆ ತಲುಪಲು ಕಾರ್ಯಕ್ರಮಕ್ಕೆ ಬರುವ ಎಲ್ಲ ವಾಹನಗಳಿಗೆ ಸರ್ಕಸ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮ ಆರಂಭವಾಗುವ ಕ್ಷಣದಿಂದ ಕಾರ್ಯಕ್ರಮ‌ ಮುಗಿಯುವ ತನಕ ಸಂಚಾರ ದಟ್ಟಣೆ ಆಗದಂತೆ ಹೆಚ್ಚುವರಿ ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬಳ್ಳಾರಿ ರಸ್ತೆಯ ತ್ರಿಪುರ ನಿವಾಸಿನಿ ಗೇಟ್ ಮೂಲಕ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಯಮಹಲ್ ಮೂಲಕ ವಿಐಪಿ ಹಾಗೂ ವಿವಿಐಪಿಗಳಿಗೆ ಪ್ರವೇಶ ವ್ಯವಸ್ಥೆ ಕಲ್ಪಿಸಲಾಗಿದೆ.

Puneeth Parva

ಏನಿದು ಪುನೀತ ಪರ್ವ?
ಅಗಲಿದ ನಾಯಕ ನಟ, ಕನ್ನಡಿಗರ ಕಣ್ಮಣಿ ಪುನೀತ್‌ ರಾಜ್‌ಕುಮಾರ್‌ ಅವರ ನೆನಪಿನಲ್ಲಿ ʼಪುನೀತ ಪರ್ವʼ ಕಾರ್ಯಕ್ರಮವು ಅಕ್ಟೋಬರ್‌ ೨೧ರಂದು ಸಂಜೆ ೬ ಗಂಟೆಗೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಪುನೀತ್ ನಟನೆಯ ಕೊನೆಯ ಸಿನಿಮಾ ʼಗಂಧದ ಗುಡಿʼ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಪುನೀತ್‌ ಕುಟುಂಬ ಹಾಗೂ ಸಿನಿಮಾ ತಂಡ ನಿರ್ಧರಿಸಿದೆ. ಇವೆಂಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತನಾಮರು ಆಗಮಿಸಲಿದ್ದಾರೆ.

ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್​ನಿಂದಲೂ ನಟ – ನಟಿಯರು ಆಗಮಿಸುತ್ತಿದ್ದಾರೆ. ಟಾಲಿವುಡ್‌ನಿಂದ ಬಾಲಯ್ಯ, ಕಾಲಿವುಡ್​ ನಾಯಕ ಕಮಲ್ ಹಾಸನ್, ಸೂರ್ಯ, ಬಹುಭಾಷಾ ನಟ ಪ್ರಭುದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುನೀತ ಪರ್ವಕ್ಕೆ ಚಂದನವನದ ಖ್ಯಾತನಾಮರು ಸಹ ಸಾಕ್ಷಿಯಾಗಲಿದ್ದಾರೆ. ಕಿಚ್ಚ ಸುದೀಪ್, ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ರಮ್ಯಾ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ತಾರೆಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇರಲಿದೆ. ನಟ ಶಿವರಾಜ್​ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದು, ಅಕ್ಟೋಬರ್ 28ಕ್ಕೆ ಬಿಡುಗಡೆ ಆಗಲಿದೆ.

ಕಾರ್ಯಕ್ರಮಕ್ಕೆ ಬಂದೋಬಸ್ತ್‌
ಕಾರ್ಯಕ್ರಮಕ್ಕೆ ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. 3 ಡಿಸಿಪಿ, 14 ಎಸಿಪಿ, 60 ಇನ್ಸ್‌ಪೆಕ್ಟರ್‌, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 KSRP ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ತಿಳಿಸಲಾಗಿದೆ. ಪಾಸ್‌ ಇದ್ದವರಿಗೆ ಮಾತ್ರ ಅವಕಾಶ. ಪ್ರತ್ಯೇಕವಾದ ಪಾರ್ಕಿಂಗ್ ನೀಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಇದನ್ನೂ ಓದಿ | ಇಂದು ಪುನೀತ ಪರ್ವ ಕಾರ್ಯಕ್ರಮ, ಸ್ಟಾರ್‌ ನಟ ನಟಿಯರಿಂದ ಮೆಗಾ ಶೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

AC Blast: ಜ್ಯುವೆಲ್ಲರಿಯಲ್ಲಿರುವ ಎಸಿ ವ್ಯವಸ್ಥೆಗೆ ಗ್ಯಾಸ್ ಮರುಪೂರಣ ಮಾಡಲು ಹೋದಾಗ ಘಟನೆ ಸಂಭವಿಸಿದೆ. ಈ ವೇಳೆ ಶಾರ್ಟ್​ ಸರ್ಕೀಟ್​ ಉಂಟಾಗಿದ್ದು ಏಕಾಏಕಿ ಬ್ಲಾಸ್ಟ್ ಎಸಿ ಬ್ಲಾಸ್ಟ್​ ಆಗಿ ಕಿಟಕಿ ಗಾಜುಗಳು ಎಲ್ಲೆಡೆ ಸಿಡಿದು ಬಿದ್ದಿವೆ. ಈ ಕೆಲಸಕ್ಕಾಗಿ ಬಂದಿದ್ದ ಮೂವರು ಕಾರ್ಮಿಕರಿಗೆ ಗಾಯವಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭಿರವಾಗಿ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

AC Blast
Koo

ಬಳ್ಳಾರಿ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಏರ್​ ಕಂಡೀಷನರ್​ ಯಂತ್ರ (AC Blast) ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ ನಡಿದೆ. ಬಳ್ಳಾರಿಯ ಕಲ್ಯಾಣ್ ಜುವೆಲರ್ಸ್ ನಲ್ಲಿ ಘಟನೆ ನಡೆದಿದೆ. ಬಳ್ಳಾರಿಯ ತೇರು ಬೀದಿಯ ರಸ್ತೆಯಲ್ಲಿ ಇರುವ ಕಲ್ಯಾಣ ಜ್ಯುವೆಲರ್ಸ್​ನಲ್ಲಿ ಶಾ್ಟ್​ ಸರ್ಕೀಟ್​ನಿಂದಾಗಿ ಎಸಿ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜ್ಯುವೆಲ್ಲರಿಯಲ್ಲಿರುವ ಎಸಿ ವ್ಯವಸ್ಥೆಗೆ ಗ್ಯಾಸ್ ಮರುಪೂರಣ ಮಾಡಲು ಹೋದಾಗ ಘಟನೆ ಸಂಭವಿಸಿದೆ. ಈ ವೇಳೆ ಶಾರ್ಟ್​ ಸರ್ಕೀಟ್​ ಉಂಟಾಗಿದ್ದು ಏಕಾಏಕಿ ಬ್ಲಾಸ್ಟ್ ಎಸಿ ಬ್ಲಾಸ್ಟ್​ ಆಗಿ ಕಿಟಕಿ ಗಾಜುಗಳು ಎಲ್ಲೆಡೆ ಸಿಡಿದು ಬಿದ್ದಿವೆ. ಈ ಕೆಲಸಕ್ಕಾಗಿ ಬಂದಿದ್ದ ಮೂವರು ಕಾರ್ಮಿಕರಿಗೆ ಗಾಯವಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭಿರವಾಗಿ ಎಂದು ಮೂಲಗಳು ತಿಳಿಸಿವೆ.

ಗಾಯಗಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಎಸಿ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ಶಾಪ್ ನಲ್ಲಿ ದಟ್ಟ ಹೊಗೆ ಆವರಿಸಿತ್ತು.

ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

ಬೆಂಗಳೂರು: ಪೊಲೀಸ್ ಠಾಣಾ ಆವರಣದಲ್ಲೇ ಮಹಿಳೆಯೊಬ್ಬಳು ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ (Assault Case) ಮಾಡಿದ್ದಾಳೆ. ಸೈಟು ವಿಚಾರಕ್ಕೆ (Site Dispute) ಎರಡು ಗುಂಪುಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಜ್ಞಾನಭಾರತಿ ಠಾಣೆಗೆ ಬಂದಿದ್ದರು. ಈ ವೇಳೆ ಎರಡು ಗುಂಪುಗಳ ಸದಸ್ಯರು ಮಾತಿಗೆ ಮಾತು ಬೆಳೆಸಿ ಕಿತ್ತಾಡಲು ಮುಂದಾಗಿದ್ದರು. ಹೀಗಾಗಿ ಮಧ್ಯಪ್ರವೇಶಿಸಿ ಗಲಾಟೆ ಮಾಡದಂತೆ ಎಚ್ಚರಿಸಲು ಹೋದ ಇನ್‌ಸ್ಪೆಕ್ಟರ್‌ಗೆ ಮಹಿಳೆಯೊಬ್ಬಳು ಕಪಾಳಕ್ಕೆ ಹೊಡೆದಿದ್ದಾಳೆ.

ಇದನ್ನೂ ಓದಿ: Murder Case : ನಡುರಸ್ತೆಯಲ್ಲೆ ಪತ್ನಿಗೆ ಚಾಕು ಇರಿದು ಕೊಂದ ಪತಿ

ನಿನ್ನೆ ಬುಧವಾರ ಸಂಜೆ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ರವಿ ಅವರಿಗೆ ಫೌಜೀಯಾ ಎಂಬಾಕೆ ಹಲ್ಲೆ ನಡೆಸಿದ್ದಾಳೆ. ಫೌಜೀಯಾ ಹಾಗೂ ಇನ್ನೊಂದು ಗುಂಪು ಸೈಟು ವಿಚಾರಕ್ಕೆ ಜ್ಞಾನಭಾರತಿ ಠಾಣೆ ಮೆಟ್ಟಿಲೇರಿದ್ದರು. ಈ ವೇಳೆ ಠಾಣೆ ಆವರಣದಲ್ಲಿ ಎರಡು ಗುಂಪುಗಳು ಏರು ಧ್ವನಿಯಲ್ಲಿ ಕೂಗಾಡುತ್ತಾ ಮಾತನಾಡುತ್ತಿದ್ದರು.

ಕರ್ತವ್ಯದಲ್ಲಿದ್ದ ಇನ್‌ಸ್ಪೆಕ್ಟರ್‌ ರವಿ ಎರಡು ಗುಂಪುಗಳಿಗೆ ಗಲಾಟೆ ಮಾಡದಂತೆ ವಾರ್ನಿಂಗ್‌ ಮಾಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಫೌಜೀಯ ಏಕಾಏಕಿ ಇನ್‌ಸ್ಪೆಕ್ಟರ್‌ ರವಿ ಅವರ ಕಪಾಳಕ್ಕೆ ಹೊಡೆದಿದ್ದಾಳೆ. ಮಾನವ ಹಕ್ಕುಗಳ ಸಂಘಟನೆಯಲ್ಲಿರುವ ಫೌಜೀಯಾ ಹಾಗೂ ಮತ್ತಿಬ್ಬರು ಮಹಿಳೆಯರ ಮೇಲೆ ಎಫ್‌ಐಆರ್ ದಾಖಲಾಗಿದೆ. ರಾತ್ರಿಯೇ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Continue Reading

ಬಳ್ಳಾರಿ

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Dr Vinayaka Prasanna: ಬಳ್ಳಾರಿಯ ವಿಮ್ಸ್‌ನ ವಿಧಿ ವಿಜ್ಞಾನ ವೈದ್ಯಶಾಸ್ತ್ರ ವಿಭಾಗದ ಪ್ರೊ. ಡಾ.ವಿನಾಯಕ ಪ್ರಸನ್ನ(50) ಅವರು ಅನಾರೋಗ್ಯದಿಂದ ಬೆಂಗಳೂರಿ‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

VISTARANEWS.COM


on

Dr Vinayaka Prasanna passed away
Koo

ಬಳ್ಳಾರಿ: ಬಳ್ಳಾರಿಯ ವಿಮ್ಸ್‌ನ ವಿಧಿ ವಿಜ್ಞಾನ ವೈದ್ಯಶಾಸ್ತ್ರ ವಿಭಾಗದ ಪ್ರೊ. ಡಾ.ವಿನಾಯಕ ಪ್ರಸನ್ನ (50) (Dr Vinayaka Prasanna) ಅವರು ಅನಾರೋಗ್ಯದಿಂದ ಬೆಂಗಳೂರಿ‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ತಾಯಿ ಶಕುಂತಲ, ಪತ್ನಿ ಡಾ‌. ವನಜ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಯಿತು. ಬಳಿಕ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ ಬಳ್ಳಾರಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರೊ. ಡಾ.ವಿನಾಯಕ ಪ್ರಸನ್ನ ಅವರ ನಿಧನಕ್ಕೆ ವಿಮ್ಸ್ ವೈದ್ಯರು, ಭಾರತೀಯ ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

Continue Reading

ಶಿವಮೊಗ್ಗ

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Shivamogga News: ರಿಪ್ಪನ್‌ಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು.

VISTARANEWS.COM


on

Sri Siddhivinayaka Swami SrimanMaharathotsava in Ripponpet
Koo

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವವು ಗುರುವಾರ ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಆಭಿನವ ಚನ್ನಬಸವ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ, ಈ ವರ್ಷ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ, ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಸಿದ್ಧಿವಿನಾಯಕ ದೇವರಲ್ಲಿ ಶ್ರೀಗಳು ಪ್ರಾರ್ಥಿಸಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಮನ್ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಉಚಿತವಾಗಿ ಕಬ್ಬಿನ ಹಾಲು ಮತ್ತು ಐಸ್‌ಕ್ರೀಮ್, ಕುಡಿಯುವ ನೀರಿನ ವ್ಯವಸ್ಥೆಯನ್ನು ವಿವಿಧ ಸಂಘಟನೆಗಳಿಂದ ಆಯೋಜಿಸಲಾಗಿತ್ತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಮುಂದುವರಿಯಲಿದೆ ಶಾಖದ ಹೊಡೆತ; ಕೋಲಾರದಲ್ಲಿ ಮೊದಲ ಮಳೆಯ ಸಿಂಚನ

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶಟ್ಟಿ, ಎನ್. ಸತೀಶ್, ಗಣೇಶ್ ಎನ್. ಕಾಮತ್, ಎಂ.ಡಿ. ಇಂದ್ರಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ತುಳೋಜಿರಾವ್, ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ. ಕೃಷ್ಣ, ಉಮೇಶ್ ಆರ್., ಮಂಜನಾಯ್ಕ್, ಎಂ.ಬಿ. ಮಂಜುನಾಥ, ಎಂ. ಸುರೇಶ್‌ ಸಿಂಗ್, ಸುಧೀರ್ ಪಿ., ರವೀಂದ್ರ ಕೆರೆಹಳ್ಳಿ, ನಾಗರತ್ನ ದೇವರಾಜ್, ಎಸ್.ಎನ್. ಬಾಲಚಂದ್ರ, ಕುಸುಮಾ ಬಾಲಚಂದ್ರ, ಪದ್ಮಾ ಸುರೇಶ್, ನಿವೃತ್ತ ಶಿಕ್ಷಕ ರಾಧಾಕೃಷ್ಣ, ಜಯಲಕ್ಷ್ಮಿ ಮೋಹನ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

Lok Sabha Election 2024: ಕಳಸಾ-ಬಂಡೂರಿ ಮತ್ತು ಮಹಾದಾಯಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ತಮ್ಮ ಚುನಾವಣಾ ಪ್ರಚಾರಕ್ಕೆ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಸಚಿವ ಸಂತೋಷ್‌ ಲಾಡ್‌ ಆರೋಪಿಸಿದ್ದಾರೆ.

VISTARANEWS.COM


on

Minister Santosh Lad latest statement in Dharwad
Koo

ಧಾರವಾಡ: ಕರ್ನಾಟಕದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಾದ ಕಳಸಾ-ಬಂಡೂರಿ (Kalasa-Banduri) ಮತ್ತು ಮಹಾದಾಯಿ (Mahadayi) ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ತಮ್ಮ ಚುನಾವಣಾ (Lok Sabha Election 2024) ಪ್ರಚಾರಕ್ಕೆ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕನಾಥ ಶಿಂಧೆ ಅವರನ್ನು ತಮ್ಮ ಪರ ಪ್ರಚಾರ ಮಾಡಲು ಪ್ರಲ್ಹಾದ್‌ ಜೋಶಿ ಕರೆಸಿದ್ದಾರೆ. ಅವರು ಜೋಶಿ ಪರವಾಗಿ ಮತ ಕೇಳುತ್ತಿದ್ದಾರೆ. ಶಿಂಧೆ ಅವರನ್ನು ಕರೆಸಿದ್ದರ ಬಗ್ಗೆ ಜನರೇ ಪ್ರಶ್ನೆ ಮಾಡಬೇಕು. ಕನ್ನಡ ನಾಡಿನ ಯೋಜನೆಗೆ ಅಡ್ಡಗಾಲು ಹಾಕುವ ಶಿಂಧೆ ಕರೆಸಿ, ಕರ್ನಾಟಕಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ದೂರಿದರು.

ಇದನ್ನೂ ಓದಿ: IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

ಕಳೆದ ಹತ್ತು ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಈ ಹಿಂದೆ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿತ್ತು. ಆದರೂ ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಗಳನ್ನು ಏಕೆ ಜೋಶಿ ಅವರು ಸಾಕಾರ ಮಾಡಲಿಲ್ಲ. ಇದನ್ನು ಬಿಟ್ಟು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ದೂರುತ್ತಾರೆ. ಜೋಶಿ ಅವರು ಈ ರಾಜ್ಯದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Continue Reading
Advertisement
AC Blast
ಪ್ರಮುಖ ಸುದ್ದಿ29 mins ago

AC Blast : ಕಲ್ಯಾಣ್​ ಜ್ಯುವೆಲರಿಯಲ್ಲಿ ಭಾರಿ ಅವಘಡ; ಏರ್​ ಕಂಡೀಷನರ್​ ಬ್ಲಾಸ್ಟ್​ ಆಗಿ ಮೂವರಿಗೆ ಗಾಯ

Tax Returns
ಪ್ರಮುಖ ಸುದ್ದಿ43 mins ago

Tax Returns: ಪಾಕ್‌ ಜನರಿಗೆ ಬೆಲೆಯೇರಿಕೆ ಬೆನ್ನಲ್ಲೇ ತೆರಿಗೆ ಹೊರೆ; ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ನೋಡಿ!

Dr Vinayaka Prasanna passed away
ಬಳ್ಳಾರಿ1 hour ago

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Sri Siddhivinayaka Swami SrimanMaharathotsava in Ripponpet
ಶಿವಮೊಗ್ಗ1 hour ago

Shivamogga News: ವಿಜೃಂಭಣೆಯ ರಿಪ್ಪನ್‌ಪೇಟೆ ಶ್ರೀ ಸಿದ್ಧಿವಿನಾಯಕ ಸ್ವಾಮಿಯ ರಥೋತ್ಸವ

Minister Santosh Lad latest statement in Dharwad
ಕರ್ನಾಟಕ1 hour ago

Lok Sabha Election 2024: ಮಹಾರಾಷ್ಟ್ರ ಸಿಎಂ ಕರೆಸಿ ಕನ್ನಡಿಗರಿಗೆ ಅವಮಾನ ಮಾಡಿದ ಜೋಶಿ: ಸಂತೋಷ್‌ ಲಾಡ್‌

Voting Awareness for Passengers at Hosapete Railway Station
ವಿಜಯನಗರ1 hour ago

Lok Sabha Election 2024: ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತದಾನ ಜಾಗೃತಿ

BJP workers meeting in Banavasi
ರಾಜಕೀಯ1 hour ago

Lok Sabha Election 2024: ಕೇಂದ್ರದ ಸಾಧನೆಗಳನ್ನು ಮನೆ ಮನೆಗೂ ಪರಿಚಯಿಸಿ: ವಿ. ಸುನೀಲ್ ಕುಮಾರ್

Yakshagana performance for voting awareness in Uttara Kannada district on May 4
ಉತ್ತರ ಕನ್ನಡ1 hour ago

Lok Sabha Election 2024: ಉ.ಕ. ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಮೇ 4 ರಂದು ಯಕ್ಷಗಾನ

Reliance Retail Tira Beauty launch new brand Nails Our Way
ದೇಶ1 hour ago

Reliance Retail: ರಿಲಯನ್ಸ್ ರಿಟೇಲ್‌ನ ಟಿರಾ ಬ್ಯೂಟಿಯಿಂದ ಹೊಸ ಬ್ರ್ಯಾಂಡ್ ‘ನೈಲ್ಸ್ ಅವರ್ ವೇ’ ಅನಾವರಣ

M S Dhoni
ಪ್ರಮುಖ ಸುದ್ದಿ1 hour ago

M S Dhoni : ಧೋನಿಯನ್ನು ರನ್​ಔಟ್ ಮಾಡಿದ ಜಿತೇಶ್​ ಶರ್ಮಾ ನಿಂದಿಸಿದ ಅಭಿಮಾನಿಗಳು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ17 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌