ಮಳೆ
Raichur : ನಡುಗಡ್ಡೆಯಲ್ಲಿ ಸಿಲುಕಿದ್ದ ರೋಗಿಗೆ ಔಷಧಿ ತಲುಪಿಸಿದ ವೈದ್ಯರು
ಉಡುಪಿ
Karnataka Rain: ಮುಂದಿನ 24 ಗಂಟೆಯಲ್ಲಿ ಉಡುಪಿ, ಬೆಂಗಳೂರು, ಬೀದರ್‌ನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
Karnataka Rain: ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (weather report) ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಮಳೆ ಸಾಧ್ಯತೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು (Rain alert) ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ರಾಮನಗರ, ತುಮಕೂರಿನಲ್ಲೂ ಮಳೆಯ ಅಬ್ಬರ ಇರಲಿದೆ.
ಬೆಂಗಳೂರು ನಗರದಲ್ಲಿ ಭಾಗಶ: ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಳೆ ಪ್ರಮಾಣ ಹೀಗಿದೆ?
ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಶನಿವಾರ ಮಳೆಯಾಗಿದೆ. ಬೀದರ್‌ನ ಔರಾದ್, ಕೋಲಾರದ ಚಿಂತಾಮಣಿ, ರಾಯಲ್ಪಾಡು ತಲಾ 4 ಸೆ.ಮೀ ಮಳೆ ಆಗಿದ್ದು, ಗೇರುಸೊಪ್ಪ, ಚಿಂಚೋಳಿ, ಮಂತಾಲ, ಮನ್ನಾಳಿ, ಸಿಂದಗಿ, ಸೈದಾಪುರದಲ್ಲಿ ತಲಾ 2 ಸೆ.ಮೀ ಮಳೆಯಾಗಿದೆ.
ಬ್ರಹ್ಮಾವರ, ಬೀದರ್, ಹುಮನಾಬಾದ್, ಅಫಜಲಪುರ, ಸುಲೇಪೇಟೆ, ರಾಯಚೂರು, ಮಧುಗಿರಿ, ರಾಮನಗರ, ವೈ.ಎನ್. ಹೊಸಕೋಟೆ, ಶಿರಾ, ಶೃಂಗೇರಿ, ಕುಡುತಿನಿ, ಹರದನಹಳ್ಳಿಯಲ್ಲಿ ತಲಾ 1 ಸೆ.ಮೀ ಮಳೆಯಾಗಿದೆ. ಇನ್ನು ಪಣಂಬೂರು ಹಾಗೂ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶ 14.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ವೀಕೆಂಡ್ ಮೋಜಿಗೆ ಮಳೆರಾಯ ಅಡ್ಡಿ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೀಕೆಂಡ್ ಮೋಜಿಗೆ ಮಳೆರಾಯ ಅಡ್ಡಿಯಾಗಿದ್ದ. ಉಡುಪಿಯಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಶುರುವಾಗಿದ್ದರಿಂದ ಜನರ ಕೆಲಸ ಕಾರ್ಯಗಳಿಗೆ ಕಿರಿಕಿರಿ ಉಂಟಾಗಿತ್ತು. ಇನ್ನು ಕಳೆದ ಒಂದು ವಾರದಿಂದ ತಾಪಮಾನ 35 ರಿಂದ 37 ಡಿಗ್ರಿವರೆಗೂ ಹೆಚ್ಚಾಗಿತ್ತು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಕರಾವಳಿ ಜನರಿಗೆ ತುಂತುರು ಮಳೆಯಿಂದ ವಾತಾವರಣ ತಂಪಾಗಿತ್ತು. ಮುಂದಿನ ಒಂದು ವಾರಗಳ ಕಾಲ ಸಾಧಾರಣ ಮಳೆ ಆಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಆಲಿಕಲ್ಲು ಮಳೆಗೆ ಕಲ್ಲಂಗಡಿ ಬೆಳೆ ನಾಶ
ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಮಳೆ ಅವಾಂತರದಿಂದ ಲಕ್ಷಾಂತರ ರೂಪಾಯಿ ಕಲ್ಲಂಗಡಿ ಬೆಳೆ ನಾಶವಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಲ್ಲಪೂರ್ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದಾಗಿ ಶರಣಗೌಡ ಪಾಟೀಲ ಎಂಬುವವರ 3.5 ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಹಾಳಾಗಿದೆ. 5 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು, 2 ದಿನದಲ್ಲಿ ಕಟಾವು ಮಾಡಲು ಬಂದಿದ್ದ ಕಲ್ಲಂಗಡಿ ಹಣ್ಣುಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅವೈಜ್ಞಾನಿಕ ರಸ್ತೆ ಕಾಮಗಾರಿ
ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಮಳೆ ನೀರು ರೈತರ ಹೊಲಕ್ಕೆ ನುಗ್ಗಿದೆ. ಪರಿಣಾಮ ಹತ್ತಾರು ಎಕರೆಗಳಷ್ಟು ಜಮೀನಿನಲ್ಲಿ ಬೆಳೆಸಿದ್ದ ಜೋಳ ಮುಳುಗಿ ನಷ್ಟವಾಗಿದೆ. ಬೀದರ್ ತಾಲೂಕಿನ ಮರಕಲ್ ಗ್ರಾಮಸ್ಥರಿಂದ ಗುತ್ತಿಗೆ ದಾರನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಟಾವಿಗೆ ಬಂದಿದ್ದ ಜೋಳ ನೀರು ಪಾಲಾಗಿದೆ ಎಂದು ರಸ್ತೆ ತಡೆದು ಮರಕಲ್ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Bengaluru Auto Bandh: ಬೈಕ್ ಟ್ಯಾಕ್ಸಿಗೆ ವಿರೋಧ; ಇಂದು ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ
ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದವರು ರೈತರ ಬೆಳೆ ಹಾನಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಸ್ಥಳೀಯ ಶಾಸಕ ರಹೀಂಖಾನ್ ಭೇಟಿ ನೀಡಿ, ಸೂಕ್ತ ಪರಿಹಾರ ಕೊಡಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Karnataka Rain: ಸಿಡಿಲು ಬಡಿದು ಕುರಿಗಳು ಬಲಿ; ಶೆಡ್ ಕುಸಿದು ಸಾವಿರಾರು ಕೋಳಿಗಳ ಮಾರಣ ಹೋಮ
Karnataka Rain: ಗುಡುಗು ಸಹಿತ ಗಾಳಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವುದು ಮಾತ್ರವಲ್ಲದೆ ಜಾನುವಾರುಗಳ ಪ್ರಾಣಹಾನಿಯೂ ಸಂಭವಿಸಿದೆ. ಶನಿವಾರ ರಾಯಚೂರಲ್ಲಿ ಸಿಡಿಲು ಬಡಿದು ಕುರಿಗಳು ಬಲಿಯಾಗಿದ್ದರೆ, ಹಾಸನದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಶ್ವಾನವೊಂದು ಮೃತಪಟ್ಟಿದೆ. ಇತ್ತ ಬೀದರ್‌ನಲ್ಲಿ ಮಳೆಗೆ ಶೆಡ್ ಕುಸಿದು ಸಾವಿರಾರು ಕೋಳಿಗಳು ಮೃತಪಟ್ಟಿವೆ.
ರಾಯಚೂರು/ಹಾಸನ/ಬೀದರ್: ರಾಯಚೂರಿನ ದೇವದುರ್ಗ ತಾಲೂಕಿನಲ್ಲಿ ಲಿಂಗದಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಕುರಿಗಳು ಮೃತಪಟ್ಟಿವೆ. ದೇವದುರ್ಗ ಭಾಗದಲ್ಲಿ ಕಳೆದೆರಡು ದಿನಗಳಿಂದ ಗುಡುಗು ಸಹಿತ ಭಾರಿ ಮಳೆ (Karnataka Rain) ಆಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಗ್ರಾಮದ ಬಸವರಾಜ್ ಎಂಬುವವರಿಗೆ ಸೇರಿದ ಮೂರು ಕುರಿಗಳು ಮಳೆ ಹಿನ್ನೆಲೆ ಮರದ ಕೆಳಗೆ ನಿಂತಿದ್ದವು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿವೆ. ವಿಷಯ ತಿಳಿದು ಸ್ಥಳಕ್ಕೆ ದೇವದುರ್ಗದ ಕಂದಾಯ ನಿರೀಕ್ಷಕ ದೇವರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೆ ವೇಳೆ ಬಸವರಾಜ್ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ಶೆಡ್ ಕುಸಿದು 8 ಸಾವಿರಕ್ಕೂ ಅಧಿಕ ಕೋಳಿಗಳ ಮಾರಣ ಹೋಮ
ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಎಂಟು ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೂಡ್ಲಿ ಗ್ರಾಮದಲ್ಲಿ ಮಳೆ ಹಾಗೂ ಗಾಳಿಗೆ ಕೋಳಿ ಸಾಕಾಣಿಕೆಯ ಶೆಡ್ ಕುಸಿದಿದೆ. ಪರಿಣಾಮ ಸಾವಿರಾರು ಕೋಳಿಗಳ ಮಾರಣಹೋಮವಾಗಿದೆ.
ಕೂಡ್ಲಿ ಗ್ರಾಮದ ಮದನ್ ರಾವ್ ಪಾಟೀಲ್ ಎಂಬುವರಿಗೆ ಸೇರಿದ ಕೋಳಿ ಫಾರಂ ಕುಸಿದಿದೆ. ಸಾಲಸೋಲ ಮಾಡಿ ಇನ್ನೇನು ಮಾರಾಟಕ್ಕೆ ಬಂದಿದ್ದ ಕೋಳಿಗಳು ಮೃತಪಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹಾಸನದಲ್ಲಿ ಮಳೆಗೆ ತುಂಡಾದ ವಿದ್ಯುತ್ ತಂತಿ
ಹಾಸನ ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಭಾರಿ ಮಳೆ ಆಗುತ್ತಿದ್ದು, ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು ಗ್ರಾಮದಲ್ಲಿ ಭಾರಿ ಗಾಳಿಯಿಂದ ವಿದ್ಯುತ್ ತಂತಿಯೊಂದು ತುಂಡಾಗಿ ಇನ್ನೊಂದು ತಂತಿ ಮೇಲೆ ಬಿದ್ದಿದೆ. ಪರಿಣಾಮ ಶಾರ್ಟ್ ಸರ್ಕ್ಯೂಟ್‌ನಿಂದ ಶ್ವಾನವೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಶಿವು ಎಂಬುವವರು ಸಾಕಿದ್ದ ಶ್ವಾನ ಮೃತಪಟ್ಟಿದೆ. ಸುಮಾರು ಆರಕ್ಕೂ ಹೆಚ್ಚು ಮನೆಯಲ್ಲಿದ್ದ ರೆಫ್ರಿಜರೇಟರ್, ಟಿವಿಗಳಿಗೆ ಹಾನಿ ಆಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸ್ಥಳಕ್ಕೆ ವಿದ್ಯುತ್ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain: ವೀಕೆಂಡ್‌ನಲ್ಲೂ ಇರಲಿದೆ ಮಳೆರಾಯನ ಕಿರಿಕ್; ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಮಳೆ ಅಲರ್ಟ್
ಬಿರುಗಾಳಿಗೆ ಹೆದರಿ ಓಡಿದ ಜನರು
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಹಾಸನ-ಮಡಿಕೇರಿ ರಸ್ತೆಯಲ್ಲಿ ಬಿರುಗಾಳಿಯ ರಭಸಕ್ಕೆ ರಸ್ತೆ ಬದಿಯ ಕ್ಯಾಂಟೀನ್‌ನ ಮೇಲೆ ಹಾಕಿದ್ದ ಟಾರ್ಪಲ್ ಹಾರಿ ಹೋಗಿದೆ. ಏಕಾಏಕಿ ಜೋರಾಗಿ ಗಾಳಿ ಬೀಸಿದ ಕಾರಣಕ್ಕೆ ಜನರು ಭೀತಿಗೊಂಡು ಓಡಿಹೋಗಿ ಸೂಕ್ತ ಸ್ಥಳದಲ್ಲಿ ರಕ್ಷಣೆ ಪಡೆದುಕೊಂಡರು. ರಸ್ತೆ ಬದಿಯ ಕೆಲವು ಅಂಗಡಿಗಳ ಮುಂದೆ ಇಟ್ಟಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿ ಆಗಿದ್ದವು. ಹಾರಿ ಹೋಗುತ್ತಿದ್ದ ಗೂಡಂಗಡಿಗಳ ಶೀಟ್‌ಗಳನ್ನು ಹಿಡಿಯಲು ಹರಸಾಹಸ ಪಡಬೇಕಾಯಿತು. ಜೋರು ಗಾಳಿಗೆ ರಸ್ತೆ ಹಾಗೂ ಅಂಗಡಿಗಳು, ಸುತ್ತಮುತ್ತಲಿನ ಮನೆಗಳು ಧೂಳುಮಯವಾಗಿದ್ದವು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Karnataka Rain: ವೀಕೆಂಡ್‌ನಲ್ಲೂ ಇರಲಿದೆ ಮಳೆರಾಯನ ಕಿರಿಕ್; ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಮಳೆ ಅಲರ್ಟ್
Karnataka Rain: ರಾಜ್ಯಾದ್ಯಂತ ಭಾನುವಾರವೂ ಮಳೆಯ ಅಬ್ಬರ ಮುಂದುವರಿಯಲಿದೆ. ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಲ್ಲಿ ಮಳೆ ಅಲರ್ಟ್ ನೀಡಿದೆ. ಎಲ್ಲೆಲ್ಲಿ ಮಳೆಯಾಗಲಿದೆ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿ ಸೇರಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ (Karnataka Rain) ಸಾಧ್ಯತೆ ಇದೆ. ಕರಾವಳಿಯ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡಿ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಹಾಸನ, ಕೋಲಾರ, ಮಂಡ್ಯ , ಮೈಸೂರು, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾದಗಿರಿಯ ನಿರ್ಣದಲ್ಲಿ ದಾಖಲೆ ಮಳೆ
ಶುಕ್ರವಾರದಂದು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಕರಾವಳಿಯಲ್ಲಿ ಒಣಹವೆ ಮುಂದುವರಿದಿದೆ. ಯಾದಗಿರಿಯ ನಿರ್ಣದಲ್ಲಿ 7 ಸೆಂ.ಮೀ, ಶಹಪುರದಲ್ಲಿ 6 ಸೆಂ.ಮೀ ಹಾಗೂ ನಿಟ್ಟೂರು 5 ಸೆಂ.ಮೀ, ಮನ್ನಾಲಿ, ಮಂಠಾಳ, ಸಂತಪುರ, ಜನವಾಡ, ಹುಮನಾಬಾದ್ ಹಾಗೂ ಕಲಬುರಗಿಯ ಕಮಲಾಪುರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.
ಇದನ್ನೂ ಓದಿ: Karnataka Rain: ಆಲಿಕಲ್ಲು ಮಳೆಗೆ ನೆಲಕಚ್ಚಿದ ಬೆಳೆ; ರೈತರು ಕಂಗಾಲು, ಗೋಳು ಕೇಳುವವರ‍್ಯಾರು?
ಮುಡಬಿ, ಕೋಲಾರ, ಮಾಲೂರು ಹಾಗೂ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಎಂಪ್ರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ರಾಜೇಶ್ವರ್, ಹಲಬರ್ಗ, ಮುಧೋಳ, ಅಡಕಿ, ಮಹಾಗೋನ್, ಕೋಡ್ಲಾ ಹಾಗೂ ಗುಂಡಗುರ್ತಿ, ತಾಳಿಕೋಟೆ, ಗೋಪಾಲ ನಗರ, ಉತ್ತರಹಳ್ಳಿ, ಹೊಸಕೋಟೆ, ಗೌರಿಬಿದನೂರುನಲ್ಲಿ ತಲಾ 1 ಸೆಂ.ಮೀ ಮಳೆ ಸುರಿದಿದೆ. ಇನ್ನು ಪಣಂಬೂರಿನಲ್ಲಿ ಗರಿಷ್ಠ ಉಷ್ಣಾಂಶ 36.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Karnataka Rain: ವಿಜಯಪುರ, ಬಳ್ಳಾರಿಯಲ್ಲಿ ಭರ್ಜರಿ ವರ್ಷಧಾರೆ; ಸಿಂದಗಿಯಲ್ಲಿ ಆಲಿಕಲ್ಲನ್ನು ಹೆಕ್ಕಿ ತಿಂದ ವಿದ್ಯಾರ್ಥಿಗಳು
ಕಳೆದರಡು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು, ವಿಜಯಪುರದ ಸಿಂದಗಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಆಲಿಕಲ್ಲು ಆಯ್ದುಕೊಂಡು ಖುಷಿಪಟ್ಟರು. ಮತ್ತೊಂದು ಕಡೆ ಆಲಿಕಲ್ಲು ಮಳೆಯು ಬೆಳೆಗೆ ಮಾರಕವಾಗಿ ರೈತರಿಗೆ ಸಂಕಷ್ಟವನ್ನುಂಟು ಮಾಡಿದೆ.
ವಿಜಯಪುರ/ ಬಳ್ಳಾರಿ: ರಾಜ್ಯದ ಹಲವು ಕಡೆ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂಜಾನೆ ಬಿಸಲು, ಮಧ್ಯಾಹ್ನ ಮೋಡ ಮುಸುಕಿದ ವಾತಾವರಣ, ಸಂಜೆ ವೇಳೆಗೆ ದಿಢೀರ್ ಬರುವ ಮಳೆಗೆ ಜನರು ಹೈರಾಣಾಗಿದ್ದಾರೆ. ಜನಜೀವನವೂ ಅಸ್ತವ್ಯಸ್ತವಾಗಿದೆ. ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಯ ಅಲ್ಲಲ್ಲಿ ಶನಿವಾರ (ಮಾ. 18) ಭರ್ಜರಿ ಮಳೆಯಾಗಿದೆ. ಸಿಂದಗಿಯಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ವಿದ್ಯಾರ್ಥಿಗಳು ಮಳೆಯನ್ನೂ ಲೆಕ್ಕಿಸದೇ ಹೆಕ್ಕಿ ತಿಂದರು.
ಶನಿವಾರವೂ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ವಿಜಯಪುರದ ಸಿಂದಗಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಮಧ್ಯಾಹ್ನದ ಹೊತ್ತಿಗೆ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಆಲಿಕಲ್ಲು ಮಳೆ ಸುರಿದಿದೆ. ಸಿಂದಗಿಯಲ್ಲಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಬಂಧಿಯಾಗುವಂತಾಯಿತು. ಕಾಲೇಜು ಆವರಣದಲ್ಲಿ ನಿಂತು ಆಲಿಕಲ್ಲುಗಳನ್ನು ಆಯ್ದುಕೊಂಡು ಓಡುತ್ತಿದ್ದ ಚಿತ್ರಣ ಕಂಡು ಬಂತು.
ಬಳ್ಳಾರಿಯಲ್ಲೂ ಆಲಿಕಲ್ಲು ಮಳೆ; ಬೆಳೆ ಹಾನಿ
ಬಳ್ಳಾರಿಯ ಕೃಷ್ಣನಗರ ಕ್ಯಾಂಪ್ ಸೇರಿದಂತೆ ನಗರದ ವಿವಿಧೆಡೆ ಆಲಿಕಲ್ಲು ಮಳೆ ಆಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಅಕಾಲಿಕ ಮಳೆಯಿಂದಾಗಿ, ಬಯಲಿನಲ್ಲಿ ಒಣಗಿ ಹಾಕಿದ್ದ ಮೆಣಸಿನಕಾಯಿ ಕೊಚ್ಚಿಹೋಗಿತ್ತು. ಇದು ರೈತರನ್ನು ಕಂಗಾಲಾಗುವಂತೆ ಮಾಡಿತು. ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದ ಮೆಣಸಿನಕಾಯಿಯನ್ನು ಆಯ್ದುಕೊಳ್ಳುವುದು ಕಂಡುಬಂತು.
ಆಲಿಕಲ್ಲು ಮಳೆಗೆ ಅಪಾರ ಪ್ರಮಾಣ ಬೆಳೆ ಹಾನಿ
ಕಳೆದೆರಡು ದಿನಗಳಿಂದ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬಯಲು ಸೀಮೆ ಕೋಲಾರದಲ್ಲಿ ಬೇಸಿಗೆಯ ಮೊದಲ ಮಳೆಗೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೈಗೆ ಬರಬೇಕಿದ್ದ ಮಾವು ನೆಲಕ್ಕೆ ಉದುರಿದ್ದು, ರೈತನಿಗೆ ದಿಕ್ಕು ತೋಚದಂತಾಗಿದೆ.
ಶ್ರೀನಿವಾಸಪುರ ತಾಲೂಕಿನ ಅರಿಕೆರೆ ಹಾಗೂ ಹೊಸೂರು ಗ್ರಾಮದಲ್ಲಿನ ಮಾವಿನ ತೋಟಗಳಲ್ಲಿ ಮಾವಿನ ಕಾಯಿ ಪಿಂದೆಗಳು ಹಾಗು ಹೂಗಳು ಉದುರಿಹೋಗಿದ್ದು, ಆಲಿಕಲ್ಲು ಮಳೆ ರಭಸಕ್ಕೆ ಎಲೆಗಳು ಉದುರಿ ಹೋಗಿ ಮಾವು ಬೆಳೆಗಾರರ ಆಸೆಗೆ ತಣ್ಣೀರು ಎರಚಿದೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಸುಮಾರು 34ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗಿತ್ತು.
ಶ್ರೀನಿವಾಸಪುರ ಮಾವು ಬೆಳೆಗಾರರು ಎರಡು ವರ್ಷಗಳಿಂದ ಕೈ ಕೊಟ್ಟ ಬೆಳೆ ಈ ಬಾರಿ ಮಳೆ ಇಲ್ಲದೆ ಉತ್ತಮ ಇಳುವರಿಗೆ ಸೂಕ್ತವಾದ ವಾತಾವರಣದಲ್ಲಿ ಉತ್ತಮ ಫಸಲು ಬಂದಿತ್ತು. ಆದರೆ ಕಾಯಿ ಕಟ್ಟುವ ವೇಳೆಗೆ ಆಲಿಕಲ್ಲು ಮಳೆ ಎರಡು ದಿನ ಸುರಿದು ಮಾವು ಹೂ ಸೇರಿದಂತೆ ಎಲಚು ಕಾಯಿಗಳು ನಾಶವಾಗಿವೆ. ಮಾವು ಬೆಳೆಗಾರರ ನಿರೀಕ್ಷೆಯನ್ನು ಹುಸಿಯಾಗಿದೆ. ಈ ಬಗ್ಗೆ ಸರ್ಕಾರ ಪರಿಹಾರ ನೀಡಲೇಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಕಾಮಗಾರಿಗೆ ಅಕಾಲಿಕ ಮಳೆ ಎಫೆಕ್ಟ್
ವಿಜಯಪುರದ ಸಿಂದಗಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಕಳೆದ 3 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಹಲವಾರು ರಸ್ತೆಗಳು ಸಂಪೂರ್ಣ ಬ್ಲಾಕ್ ಆಗಿದ್ದು, ವಾಹನ ಸಂಚಾರ ತುಂಬಾ ವಿರಳವಾಗಿದೆ. ಮೊದಲೇ ಅಮೆಗತಿಯಿಂದ ಸಾಗುತ್ತಿರುವ ಕಾಮಗಾರಿಗಳಿಂದ ಬೇಸತ್ತಿರುವ ಸಾರ್ವಜನಿಕರಿಗೆ ಈ ಅಕಾಲಿಕ ಮಳೆ ಮತ್ತಷ್ಟು ಕಣ್ಣು ಕೆಂಪಾಗುವಂತೆ ಮಾಡಿದೆ. ಮಳೆ ಬಂದ ಕಾರಣ ತಗ್ಗು ಗುಂಡಿಗಳಿಗೆ ನೀರು ತುಂಬಿದ್ದು ಪಾದಚಾರಿ ಮತ್ತು ವಾಹನ ಸವಾರರು ಪರದಾಡುವಂತಹ ಪರಸ್ಥಿತಿ ಎದುರಾಗಿದೆ.
ಕಳೆದ 6 ತಿಂಗಳಿನಿಂದ ಮಂದಗತಿಯಲ್ಲಿ ಸಾಗುತ್ತಿರುವ ನಗರದ ಪ್ರಮುಖ ರಸ್ತೆ ಕಾಮಗಾರಿಗಳಿಂದ ತಾಲೂಕಿನ ಸಾರ್ವಜನಿಕರು ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡುವುದನ್ನೇ ಬಿಟ್ಟಿದ್ದಾರೆ. ಎಲ್ಲೆಂದರಲ್ಲಿ ತಗ್ಗು ಗುಂಡಿ ತೋಡಿ ಎಚ್ಚರಿಕೆ ಸೂಚನಾ ಫಲಕ ಅಳವಡಿಕೆ ಮಾಡದೆ ಕಾಮಗಾರಿಯ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ24 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ