Rashtrapati Droupadi Murmu: ಬುಡಕಟ್ಟು ಜನರ ಬಳಿಯೇ ಬಂದು ಆಪ್ತವಾಗಿ ಬೆರೆತ ರಾಷ್ಟ್ರಪತಿ ದ್ರೌಪದಿ ಮುರ್ಮು - Vistara News

ಕರ್ನಾಟಕ

Rashtrapati Droupadi Murmu: ಬುಡಕಟ್ಟು ಜನರ ಬಳಿಯೇ ಬಂದು ಆಪ್ತವಾಗಿ ಬೆರೆತ ರಾಷ್ಟ್ರಪತಿ ದ್ರೌಪದಿ ಮುರ್ಮು

Rashtrapati Droupadi Murmu: ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನೈಜ ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಾದ ನಡೆಸಿದರು.

VISTARANEWS.COM


on

Rashtrapati Droupadi Murmu interacted with tribal community
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು, ಕರ್ನಾಟಕ: ನೈಜ ದುರ್ಬಲ ಬುಡಕಟ್ಟು ಜನರ(Particularly Vulnerable Tribal Groups) ಸರ್ವಾಂಗೀಣ ವಿಕಾಸಕ್ಕಾಗಿ ವಸತಿ, ಶಿಕ್ಷಣ, ಆರ್ಥಿಕ ಚಟುವಟಿಕೆಗಳು, ಆರೋಗ್ಯ ಸೌಕರ್ಯಗಳ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಿ,ಸುಧಾರಣೆಯ ದಾರಿ ತೋರಿಸಿದರೆ ಸಾಕು ಅವರು ಮುನ್ನಡೆಯಬಲ್ಲರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಜ ದುರ್ಬಲ ಬುಡಕಟ್ಟುಗಳ ಕಲ್ಯಾಣಕ್ಕಾಗಿ ಆಂದೋಲನದ ಮಾದರಿಯಲ್ಲಿ (Mission Mode) ಕಾರ್ಯನಿರ್ವಹಿಸಬೇಕು ಎಂದು ರಾಷ್ಟಪತಿ ದ್ರೌಪದಿ ಮುರ್ಮು (Rashtrapati Droupadi Murmu) ಹೇಳಿದರು. ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ರಾಜ್ಯದ ವಿವಿಧ ಜಿಲ್ಲೆಗಳ ನೈಜ ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ 2011 ರ ಜನಗಣತಿಯ ಪ್ರಕಾರ ಸುಮಾರು 43 ಲಕ್ಷ ಪರಿಶಿಷ್ಟ ವರ್ಗದ ಜನಸಂಖ್ಯೆಯಿದೆ.ಇದರಲ್ಲಿ ನೈಜ ದುರ್ಬಲ ಬುಡಕಟ್ಟುಗಳೆಂದು ಗುರುತಿಸಲಾಗಿರುವ ಜೇನುಕುರುಬರು ಹಾಗೂ ಕೊರಗ ಸಮುದಾಯಗಳ ಜನಸಂಖ್ಯೆ ಸುಮಾರು 50 ಸಾವಿರದಷ್ಟಿದೆ.ರಾಜ್ಯದ ನೈಜ ದುರ್ಬಲ ಬುಡಕಟ್ಟು ಸಮುದಾಯಗಳಲ್ಲಿಯೂ ಡಾಕ್ಟರೇಟ್ ಪದವಿ ಪಡೆದ ಮಹಿಳೆ,ಶುಶ್ರೂಷಕಿ( ಸ್ಟಾಫ್ ನರ್ಸ್),ಅಂಗನವಾಡಿ ಕಾರ್ಯಕರ್ತೆ,ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವ ಖಾಸಗಿ ಮಹಿಳಾ ನೌಕರರು ಇರುವುದು ಕಂಡು ಬಹಳ ಸಂತಸವಾಗಿದೆ.ಭಾರತ ದೇಶದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಸುಮಾರು 28 ಲಕ್ಷದಷ್ಟಿದೆ.75 ವಿವಿಧ ಬುಡಕಟ್ಟುಗಳನ್ನು ನೈಜ ದುರ್ಬಲ ಬುಡಕಟ್ಟುಗಳೆಂದು ಪಟ್ಟಿ ಮಾಡಲಾಗಿದೆ.ಹಿಂದುಳಿದ ಅರಣ್ಯವಾಸಿ ಸಮುದಾಯಗಳನ್ನು ಗುರುತಿಸಿ ವಸತಿ,ಕೃಷಿಭೂಮಿ ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ಸ್ಥಳೀಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಶಾಲೆ,ರಸ್ತೆ,ಆರೋಗ್ಯದ ಸಮಸ್ಯೆಗಳು ಕರ್ನಾಟಕದಲ್ಲಿ ಮಾತ್ರವಲ್ಲ,ದೇಶದೆಲ್ಲೆಡೆ ಸಾಮಾನ್ಯವಾಗಿವೆ. ಅರಣ್ಯವಾಸಿ ಬುಡಕಟ್ಟುಗಳಲ್ಲಿನ ಕ್ಷಯರೋಗ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮಧ್ಯಪ್ರದೇಶ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿಯವರು ದುರ್ಬಲ ಬುಡಕಟ್ಟುಗಳ ಜನಸಂಖ್ಯೆ ಋಣಾತ್ಮಕವಾಗುತ್ತಿರುವದನ್ನು ತಡೆಯಲು ಇಂತಹ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದರು.

ನೈಜ ದುರ್ಬಲ ಬುಡಕಟ್ಟುಗಳ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಪಿವಿಟಿಜಿ ಅಭಿವೃದ್ಧಿ ಮಿಷನ್ ಅಡಿ 15 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.ರಾಜ್ಯದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಹಣ ಬಂದಿರುತ್ತದೆ ಮನೆ,ಶಾಲೆ,ರಸ್ತೆ,ವಿದ್ಯುದ್ದೀಪ,ನೀರು ಮೊದಲಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಆಂದೋಲನದ ರೀತಿ ಕಾರ್ಯೋನ್ಮುಖವಾಗಬೇಕು. ಸರ್ಕಾರ ಬುಡಕಟ್ಟು ಜನರಿಗಾಗಿ ಒಂದು ಹೆಜ್ಜೆ ಮುಂದೆ ಇರಿಸಿ ದಾರಿ ತೋರಿದರೆ ಅವರು ನಿಧಾನವಾಗಿ ನಡೆಯಲು ಕಲಿತು ಹಂತ ಹಂತವಾಗಿ ಓಡಲು ಕಲಿಯುತ್ತಾರೆ.ಬುಡಕಟ್ಟು ಜನರು ತಮ್ಮ ಆತ್ಮಗೌರವ(Self Respect) ಕಾಪಾಡಿಕೊಳ್ಳಲು ಸಮಸ್ಯೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವದನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನೈಜ ದುರ್ಬಲ ಬುಡಕಟ್ಟುಗಳು ಶಿಕ್ಷಣಕ್ಕೆ ಒತ್ತು ನೀಡಲಿ,ಎಸ್ ಎಸ್ ಎಲ್ ಸಿ ಓದಿದವರನ್ನು ಗುರುತಿಸಿ ಅವರಲ್ಲಿ ಇರುವ ಕರಕುಶಲ ಕಲೆ,ಜೀವನ ಕೌಶಲ್ಯಗಳನ್ನು ಪ್ರೋತ್ಸಾಹಿಸಿ ಅವರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿದರೆ ಅವರು ಸಮಾಜದ ಮುಖ್ಯವಾಹಿನಿಯೊಂದಿಗೆ ಸಾಗಬಲ್ಲರು.ರಾಜ್ಯದಲ್ಲಿ ಕೇವಲ 50 ಸಾವಿರದಷ್ಟು ನೈಜ ದುರ್ಬಲ ಬುಡಕಟ್ಟು ಸಮುದಾಯವಿರುವದರಿಂದ ಸರ್ಕಾರಕ್ಕೆ ಇದು ಕಷ್ಟದ ಕಾರ್ಯವಲ್ಲ ಎಂದರು.

ರಾಜ್ಯದ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಮ ಶಾಲೆಗಳಲ್ಲಿ ನೈಜ ದುರ್ಬಲರಿಗಾಗಿ ವಿಶೇಷ ಸ್ಥಾನ ,ಗಮನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು.ತಾವು ಚಿಕ್ಕವರಿದ್ದಾಗ ತಮ್ಮ ತಂದೆಗೆ ಇಂತಹ ಯಾವ ಸೌಕರ್ಯಗಳು ಇಲ್ಲದಿದ್ದರೂ ತಮಗೆ ಶಿಕ್ಷಣ ಕೊಡಿಸಿದ್ದನ್ನು ರಾಷ್ಟ್ರಪತಿಯವರು ಹೆಮ್ಮೆಯಿಂದ ಸ್ಮರಿಸಿದರು. ನೈಜ ದುರ್ಬಲ ಬುಡಕಟ್ಟುಗಳ ಜನ ತಮ್ಮೊಳಗಿನ ಸಾಮರ್ಥ್ಯ ಒರೆಗೆ ಹಚ್ಚಿಕೊಳ್ಳಬೇಕು‌. ನೆರೆಹೊರೆಯವರನ್ನು ನೋಡಿ ಶಿಕ್ಷಿತರಾಗಿ ಮುಂದೆ ಬರಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಬುಡಕಟ್ಟು ಜನರ ಬಳಿಯೇ ಬಂದು ಆಪ್ತವಾಗಿ ಬೆರೆತ ರಾಷ್ಟ್ರಪತಿಗಳು

ಸಂವಾದದ ಪ್ರಾರಂಭದಲ್ಲಿ ಸಭಾಂಗಣದಲ್ಲಿ ನೆರೆದಿದ್ದ ನೈಜ ದುರ್ಬಲ ಬುಡಕಟ್ಟು ಜನರ ಜೀವನ ಮಟ್ಟ ಅರಿಯಲು ಪ್ರಯತ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಬುಡಕಟ್ಟು ಜನ ಮುಕ್ತವಾಗಿ ಮಾತನಾಡಲು ಹಿಂಜರಿದಾಗ ರಾಷ್ಟ್ರಪತಿಗಳು ಖುದ್ದು ತಾವೇ ಜನರ ಆಸನಗಳ ಬಳಿ ತೆರಳಿ ಒಬ್ಬೊಬರನ್ನು ಪ್ರತ್ಯೇಕವಾಗಿ ಆಪ್ತವಾಗಿ ಮಾತನಾಡಿಸಿ,ಅವರಿಗೆ ಮನೆ ಇದೆಯೇ ,ಸರ್ಕಾರ ಮನೆ ಕಟ್ಟಿಸಿಕೊಟ್ಟಿದೆಯೇ,ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ,ಅರಣ್ಯಭೂಮಿಯಲ್ಲಿ ವಾಸವಾಗಿರುವವರು ಯಾರಿದ್ದೀರಿ ಎಂಬ ಪ್ರಶ್ನೆಗಳನ್ನು ಹಾಕಿ ಕೊರಗ ಮತ್ತು ಜೇನುಕುರುಬ ಬುಡಕಟ್ಟು ಜನರಿಂದ ನೇರ ಉತ್ತರ ಪಡೆದರು.

Rashtrapati Droupadi Murmu: ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಲು ಪ್ರೋತ್ಸಾಹ

ಜೇನುಕುರುಬ ಸಮುದಾಯದ ಪರವಾಗಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಹಾಡಿಯ ಚಂದ್ರು ಹಿಂದಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದ ವೇಳೆಯಲ್ಲಿ ಮಧ್ಯೆ ಪ್ರವೇಶಿಸಿದ ರಾಷ್ಟ್ರಪತಿ ಅವರು,ಸ್ಥಳೀಯವಾಗಿ ನಿಮ್ಮ ಭಾಷೆಯಲ್ಲಿಯೇ ಮಾತನಾಡಿ ಎಂದು ಸೂಚಿಸಿ,ಪ್ರೋತ್ಸಾಹಿಸಿದಾಗ, ಚಂದ್ರು ಅವರು, ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿ ಸ್ಥಾನ ಅಲಂಕರಿಸಿರುವುದು ಹೆಮ್ಮೆಯ ಸಂಗತಿ ನಿಮ್ಮನ್ನು ಹತ್ತಿರದಿಂದ ಕಾಣಲು ಇಂದು ಬೆಳಗಿನಿಂದಲೂ ಕಾತರರಾಗಿದ್ದೆವು ಎಂದು ಸಂತಸದಿಂದ ಹೇಳಿದಾಗ ಕರತಾಡನಗಳ ಮಳೆ ಸುರಿಯಿತು.

ಕೊರಗ ಸಮುದಾಯದ ಮೊಟ್ಟಮೊದಲ ಡಾಕ್ಟರೇಟ್ ಪದವೀಧರೆ,ಪ್ರಾಧ್ಯಾಪಕಿ ಉಡುಪಿ ಜಿಲ್ಲೆ ಸಾಲಿಗ್ರಾಮದ ಡಾ.ಸವಿತಾ ಮಾತನಾಡಿ,ಕೊರಗ ಸಮುದಾಯ ಅಪೌಷ್ಟಿಕತೆ, ಆರೋಗ್ಯ ಸಮಸ್ಯೆಗಳಿಂದ ಜನಸಂಖ್ಯೆ ಕ್ಷೀಣಿಸುತ್ತಿದೆ.ಈ ಸಂಶೋಧನೆ ಮತ್ತು ಪರಿಹಾರ ಕಾರ್ಯಗಳು ನಡೆಯಬೇಕು ಎಂದರು.

ಬುಡಕಟ್ಟು ಸಮುದಾಯಗಳ ಚಂದ್ರು,ರತ್ನಾ,ಸುಂದರ,ಬಾಬು ಮತ್ತು ಅಯ್ಯಪ್ಪ ಅವರು ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಸನ್ಮಾನಿಸಿ,ನೆನಪಿನ ಕಾಣಿಕೆಗಳನ್ನು ನೀಡಿದರು. ರಾಷ್ಟ್ರಪತಿ ಭವನದಿಂದ ಬುಡಕಟ್ಟು ಜನರಿಗೆ ಉಡುಗೊರೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊರಗ ಹಾಗೂ ಜೇನುಕುರುಬ ಬುಡಕಟ್ಟುಗಳ ಜನರಿಗೆ ರಾಷ್ಟ್ರಪತಿ ಭವನದಿಂದ ತಂದಿದ್ದ ಉಡುಗೊರೆಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಿತರಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವಸಬಲೀಕರಣ ಸಚಿವರಾದ ಬಿ.ನಾಗೇಂದ್ರ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ,ರಾಜ್ಯದಲ್ಲಿ ನೈಜ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

ಈ ಸುದ್ದಿಯನ್ನೂ ಓದಿ: KSOU Convocation : 64ರ ಅರ್ಧನಾರಿಗೆ ಸಂಸ್ಕೃತದಲ್ಲಿ ಚಿನ್ನ; ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮುಕ್ತ ವಿವಿ ಗೌರವ ಡಾಕ್ಟರೇಟ್‌

ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರ ಸಮ್ಮುಖದಲ್ಲಿ ನಡೆದ ಬುಡಕಟ್ಟು ಸಮುದಾಯಗಳೊಂದಿಗಿನ ಸಂವಾದದಲ್ಲಿ ಗುಂಡ್ಲುಪೇಟೆಯ ದೇಶಿಪುರ ಕಾಲೊನಿಯ ಸಿದ್ದಮ್ಮ, ಪುಟ್ಟಮ್ಮ, ಮದ್ದೂರು ಕಾಲೊನಿಯ ಗೋವಿಂದ, ಎಚ್.ಡಿ.ಕೋಟೆಯ ಬಸಮ್ಮ, ರಾಜೇಶ್, ಅಯ್ಯಪ್ಪ, ಭೈರಾ, ಸಿ. ಭಾಸ್ಕರ, ಪುಟ್ಟಬಸವಯ್ಯ, ಹುಣಸೂರಿನ ಜೆ.ಪಿ. ಪಾರ್ವತಿ, ಸುಮಾ, ರಾಜಪ್ಪ, ಸಚಿನ್‌, ಪಿರಿಯಾಪಟ್ಟಣದ ಜಯಮ್ಮ, ಗೌರಿ, ಲಕ್ಷ್ಮೀ, ಜಾನಕಮ್ಮ, ಬಸವಣ್ಣ, ಬಸಪ್ಪ, ಸರಗೂರಿನ ವಿಜಯ್, ಸೋಮವಾರಪೇಟೆಯ ಜೆ.ಕೆ. ಮುತ್ತಮ್ಮ, ಬಿ.ಕೆ. ಧರ್ಮಪ್ಪ, ಉಡುಪಿ ಜಿಲ್ಲೆಯ ನಳಿನಿ, ಡಾ. ಸಬಿತಾ, ಸುಶೀಲಾ, ಪ್ರಕೃತಿ, ಶಕೀಲಾ, ಸುನಂದಾ, ಕುಡ್ವಾ, ಬಾಬು, ರಮೇಶ್, ಕೊಗ್ಗ, ಅಕ್ಷಯ್, ಕುಮಾರ್, ಸಂಜೀವ ಕೊರಗ, ಕೆ.ಪುತ್ರಯ, ದಕ್ಷಿಣ ಕನ್ನಡ ಜಿಲ್ಲೆಯ ರತ್ನ, ಚಂದ್ರವತಿ, ಶಶಿಕಲಾ, ರಾಧಾ, ಎಂ.ಸುಂದರ್, ಬಾಬು, ಮಥಾಡಿ, ಶ್ಯಾಮ್ ಸೇರಿದಂತೆ ಮೈಸೂರು, ಚಾಮರಾಜನಗರ,ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳಿಂದ ಆಗಮಿಸಿದ್ದ ಜೇನುಕುರುಬ ಹಾಗೂ ಕೊರಗ ಬುಡಕಟ್ಟು ಸಮುದಾಯಗಳ 50 ಜನ ಭಾಗವಹಿಸಿ ತಮ್ಮ ಸಾಂಸ್ಕೃತಿಕ, ಸಾಮಾಜಿಕ ಅಸ್ಮಿತೆಯ ವಿಶಿಷ್ಟತೆಗಳನ್ನು ಸಾರಿದರು. ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ‌.ಮಣಿವಣ್ಣನ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜು ಮತ್ತಿತರ ಗಣ್ಯರು ಇದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

Murder Case: ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ.

VISTARANEWS.COM


on

shivamogga triple murder case
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ (Shimogga Gang War) ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ (Triple Murder Case) ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ (Rowdy Sheeter) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Shoot out) ಬಂಧಿಸಿದ್ದಾರೆ.

ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್‌ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದರು.

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್‌ ವಾರ್‌ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು‌, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಹೆ‌ಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಹಲ್ಲೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ (Chetan Chandra) ನಗರದ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ನಡೆದಿದೆ. ಪಿಯುಸಿ, ರಾಜಧಾನಿ, ಜರಾಸಂಧ, ಪ್ರಭುತ್ವ ಚಿತ್ರಗಳ ಮೂಲಕ ಖ್ಯಾತವಾಗಿರುವ ನಟನ ಮೇಲೆ ಭಾನುವಾರ ಹಲ್ಲೆ ನಡೆದಿದೆ.

ಕಾರಿನಲ್ಲಿದ್ದ ನಟ ಚೇತನ್ ಚಂದ್ರ ಅವರನ್ನು ರಕ್ತ ಬರುವಂತೆ ಥಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ನಟನ ಮೇಲೆ 20ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಟ ಚೇತನ್‌ ಚಂದ್ರ ಅವರಿಗೆ ಕಗ್ಗಲಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ | Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

ಭಾನುವಾರ ಅಮ್ಮಂದಿರ ದಿನವಾಗಿದ್ದರಿಂದ ನಟ ಚೇತನ್ ಚಂದ್ರ ಅವರು ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಕೆಲ ಕಿಡಿಗೇಡಿಗಳು ಕಾರಿಗೆ ಅಡ್ಡ ಹಾಕಿ, ದುಡ್ಡು ಕೀಳಲು ಮುಂದಾಗಿದ್ದಾರೆ. ಹಣ ಕೊಡೋದಿಲ್ಲ ಎಂದಿದ್ದಕ್ಕೆ ಗಲಾಟೆ ಮಾಡಿ, ನಟ ಚೇತನ್ ಚಂದ್ರ ಅವರ ಮುಖಕ್ಕೆ ರಕ್ತ ಬರುವ ಹಾಗೆ ಕಿಡಿಗೇಡಿಗಳು ಹೊಡೆದಿದ್ದಾರೆ.

ಇದನ್ನೂ ಓದಿ: Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Continue Reading

ಪ್ರಮುಖ ಸುದ್ದಿ

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ನವೀನ್ ಗೌಡ ಎ೧ ಆರೋಪಿಯಾಗಿದ್ದು, ಎಸ್‌ಐಟಿ ಈತನ ಹುಡುಕಾಟದಲ್ಲಿದೆ. ಎಸ್ಐಟಿ ತಲಾಶ್ ಮಾಡುತ್ತಿರುವಾಗಲೇ ಫೇಸ್‌ಬುಕ್ ಪೋಸ್ಟ್ ಹಾಕಿ ಈತ ಒಂದು ರೀತಿಯಲ್ಲಿ ಚಾಲೆಂಜ್ ಮಾಡಿದಂತಾಗಿದೆ. ಈಗಾಗಲೆ ಪೆನ್ ಡ್ರೈವ್ ಹಂಚಿಕೆ ಕೇಸಲ್ಲಿ ಇಬ್ಬರನ್ನು ಎಸ್ಐಟಿ ಆರೆಸ್ಟ್ ಮಾಡಿದ್ದು, ನವೀನ್ ಗೌಡ ತಲಾಶೆಯಲ್ಲಿದೆ.

VISTARANEWS.COM


on

prajwal revanna case
ಲಿಖಿತ್‌ ಗೌಡ, ಚೇತನ್‌, ದೇವರಾಜೇಗೌಡ
Koo

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ್ದು (Prajwal Revanna Case) ಎನ್ನಲಾದ ಅಶ್ಲೀಲ ದೃಶ್ಯವುಳ್ಳ ಪೆನ್‌ ಡ್ರೈವ್ ಹಂಚಿಕೆ (Pen drive case) ಮಾಡಿದ ಪ್ರಕರಣದಲ್ಲಿ, ಆರೋಪಿಯಾಗಿ ಇನ್ನೂ ಸೆರೆಸಿಗದ ನವೀನ್‌ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ಎಸ್‌ಐಟಿಗೆ (SIT) ಪರೋಕ್ಷವಾಗಿ ಸವಾಲು ಹಾಕಿದ್ದಾನೆ.

“ಪೆನ್ ಡ್ರೈವ್‌ನ ನಾನು ಅರಕಲಗೂಡು ಶಾಸಕ ಎ. ಮಂಜುಗೆ ಕೊಟ್ಟಿದ್ದೆ. ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದಂತೆ ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡ ಇದೆ. ಆ ಮಹಾನಾಯಕ ಅರಕಲಗೂಡು ಎಂಎಲ್ಎ ಮಂಜುನಾ?” ಎಂದು ನವೀನ್ ಗೌಡ ಪೋಸ್ಟ್ ಹಾಕಿದ್ದಾನೆ.

ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ನವೀನ್ ಗೌಡ ಎ೧ ಆರೋಪಿಯಾಗಿದ್ದು, ಎಸ್‌ಐಟಿ ಈತನ ಹುಡುಕಾಟದಲ್ಲಿದೆ. ಎಸ್ಐಟಿ ತಲಾಶ್ ಮಾಡುತ್ತಿರುವಾಗಲೇ ಫೇಸ್‌ಬುಕ್ ಪೋಸ್ಟ್ ಹಾಕಿ ಈತ ಒಂದು ರೀತಿಯಲ್ಲಿ ಚಾಲೆಂಜ್ ಮಾಡಿದಂತಾಗಿದೆ. ಈಗಾಗಲೆ ಪೆನ್ ಡ್ರೈವ್ ಹಂಚಿಕೆ ಕೇಸಲ್ಲಿ ಇಬ್ಬರನ್ನು ಎಸ್ಐಟಿ ಆರೆಸ್ಟ್ ಮಾಡಿದ್ದು, ನವೀನ್ ಗೌಡ ತಲಾಶೆಯಲ್ಲಿದೆ.

ದೇವರಾಜೇಗೌಡ ಮೇಲೆ ಫೋಕಸ್

ಹೊಳೆನರಸೀಪುರ ಪೊಲೀಸರಿಂದ ಬಂಧನ ಆಗಿರುವ ವಕೀಲ ದೇವರಾಜೇಗೌಡರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಎಸ್ಐಟಿ ಕೇಳುವ ಸಾಧ್ಯತೆ ಇದೆ. ಆರೆಸ್ಟ್‌ಗೂ ಮುನ್ನ ದೇವರಾಜೇಗೌಡಗೆ ಮತ್ತೊಂದು ನೊಟೀಸ್ ಅನ್ನು ಎಸ್ಐಟಿ ನೀಡಿದ್ದು, ಕೇಸ್ ಸಂಬಂಧ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು.

ವಿಚಾರಣೆಗೆ ಹಾಜರಾಗದೆ ಕರ್ನಾಟಕ ಬಿಟ್ಟು ಹೊರಟಿದ್ದ ದೇವರಾಜೇಗೌಡರನ್ನು ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಹೊಳೆನರಸೀಪುರ ಪೊಲೀಸರು ಆರೆಸ್ಟ್ ಮಾಡಿದ್ದರು. ನಂತರ ಜಿಲ್ಲಾ ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈಗ ಪ್ರಜ್ವಲ್ ಕೇಸ್ ಸಂಬಂಧ ತನಿಖೆಗೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಈಗಾಗಲೇ ದೇವರಾಜೇಗೌಡ ಪ್ರಕರಣ ತನಿಖೆ ನಡೆಸುತ್ತಿರುವ ಹೊಳೆನರಸೀಪುರ ಪೊಲೀಸರು ಕೂಡ ಆರೋಪಿಯ ಕಸ್ಟಡಿಗೆ ಮನವಿ ಮಾಡಲಿದ್ದಾರೆ. ತನಿಖೆ ವೇಳೆ ಒಂದು ಮೊಬೈಲ್, ದಾಖಲೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಆರೋಪಿಯ ವಿಚಾರಣೆ ಅಗತ್ಯವಿದೆ. ಹೀಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಕೇಳಬಹುದು. ದೇವರಾಜೇಗೌಡ ಕೇಸ್ ಸಂಬಂಧ ಹೊಳೆನರಸೀಪುರ ಪೊಲೀಸರ ಸಂಪರ್ಕದಲ್ಲಿ ಎಸ್ಐಟಿ ಇದೆ.

ಪ್ರೀತಂಗೌಡ ಆಪ್ತರೂ ಕಸ್ಟಡಿಗೆ?

ಪ್ರಕರಣದಲ್ಲಿ ಬಿಜೆಪಿ ಮುಖಂಡ ಪ್ರೀತಂಗೌಡ ಗೌಡ ಆಪ್ತರ ಬಂಧನದ ಬಳಿಕ ಕುತೂಹಲ ಹೆಚ್ಚಿದ್ದು, ಇಂದು ತೆರೆದ ಕೋರ್ಟ್‌ನಲ್ಲಿ ಇಬ್ಬರು ಆರೋಪಿಗಳನ್ನು ಎಸ್ಐಟಿ ಕಸ್ಟಡಿಗೆ ಕೇಳಲು ತಯಾರಿ ನಡೆದಿದೆ. ಏಪ್ರಿಲ್ 21ರಂದೇ ಪ್ರೀತಂಗೌಡ ಆಪ್ತ ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್‌ ದೂರು ನೀಡಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಎಸ್ಐಟಿಯಿಂದ ಆರಂಭಿಕವಾಗಿಯೇ ಪ್ರೀತಂಗೌಡ ಆಪ್ತರ ಆರೆಸ್ಟ್ ಆಗಿದೆ.

ನಿನ್ನೆ ಲಿಖಿತ್ ಗೌಡ ಹಾಗು ಚೇತನ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸ್ ವಿಚಾರಣೆ ಬಳಿಕ ಮತ್ತಷ್ಟು ಜನರ ಬಂಧನ ಸಾಧ್ಯತೆ ಇದೆ. ವೀಡಿಯೋ ಹಾಗು ಪೆನ್ ಡ್ರೈವ್ ಹಂಚಿದ ಬಗ್ಗೆ ಎಸ್‌ಐಟಿ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದು, ವೀಡಿಯೋ ವೈರಲ್ ದಾರಿಯನ್ನು ಎಳೆ ಎಳೆಯಾಗಿ ಭೇದಿಸಲು ಪ್ಲಾನ್ ಮಾಡಿದೆ. ವೀಡಿಯೋ ವೈರಲ್ ಕೇಸ್ ಭೇದಿಸಲೆಂದೇ ಪ್ರತ್ಯೇಕ ಟೀಂ ರಚನೆ ಮಾಡಲಾಗಿದೆ. ಹಾಸನದಲ್ಲೇ ಒಂದು ತಂಡ ಬೀಡು ಬಿಟ್ಟಿದ್ದು, ಹಾಸನದ ಎಎಸ್ಪಿ ತಮ್ಮಯ್ಯ ನೇತೃತ್ವದ ತಂಡದಿಂದ ವಿಚಾರಣೆ ಮುಂದುವರಿದಿದೆ.

14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ (Prajwal Revanna Case) ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಗರದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇಬ್ಬರು ಆರೋಪಿಗಳಿಗೆ ಮೇ 25 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ​ ವಿಡಿಯೊಗಳನ್ನು ವೈರಲ್ ಮಾಡಲಾಗುತ್ತಿದೆ ಎಂದು ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಸದ್ಯ ಅಶ್ಲೀಲ ವಿಡಿಯೊ ಹರಿಬಿಟ್ಟವರನ್ನು ವಶಕ್ಕೆ ಪಡೆಯುತ್ತಿರುವ ಎಸ್‌ಐಟಿ ಅಧಿಕಾರಿಗಳ ತಂಡ, ಆರೋಪಿಗಳಾದ ಚೇತನ್​ ಹಾಗೂ ಲಿಖಿತ್​ನನ್ನು ಬಂಧಿಸಿದ್ದು, ನವೀನ್ ಗೌಡ ಮತ್ತು ಪುಟ್ಟರಾಜುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಗಳಾದ ಲಿಖಿತ್​ ಗೌಡ ಮತ್ತು ಚೇತನ್, ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾಗಿದ್ದಾರೆ. ಮೊದಲಿಗೆ ಪೆನ್‌ಡ್ರೈವ್ ವೈರಲ್ ಸಂಬಂಧ ದಾಖಲಾಗಿದ್ದ ಕೇಸ್‌ನಲ್ಲಿ ಈ ಇಬ್ಬರ ಹೆಸರು ಇರಲಿಲ್ಲ. ನಂತರ ಈ ಇಬ್ಬರ ಮೇಲೆ ವಿಡಿಯೊ ಹಂಚಿಕೆ ಆರೋಪದಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಹೀಗಾಗಿ ಈ ಪ್ರಕರಣವು ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

Continue Reading

ಪ್ರಮುಖ ಸುದ್ದಿ

HD Revanna Jailed: ಇಂದು ಏನಾಗುತ್ತೆ ಎಚ್‌ಡಿ ರೇವಣ್ಣ ಭವಿಷ್ಯ? ಜಾಮೀನು ಅರ್ಜಿ ಮತ್ತೆ ವಿಚಾರಣೆ

HD Revanna Jailed: ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಮೇ 09ರಂದು ವಾದ ಪ್ರತಿವಾದ ಆಲಿಸಿ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿತ್ತು. ವಕೀಲ ಸಿ.ವಿ.ನಾಗೇಶ್ ರೇವಣ್ಣ ಪರ ವಾದ ಮಂಡಿಸಿದ್ದರು. ರೇವಣ್ಣ ಅವರನ್ನು ಈಗಾಗಲೇ ಎಸ್.ಐ.ಟಿ ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಪ್ರಕರಣದಲ್ಲಿ ಎಲ್ಲೂ ನೇರವಾಗಿ ರೇವಣ್ಣರ ಪಾತ್ರವಿಲ್ಲ ಎಂದು ನಾಗೇಶ್‌ ವಾದ ಮಂಡಿಸಿದ್ದರು.

VISTARANEWS.COM


on

Prajwal Revanna Case HD Revanna jailed
Koo

ಬೆಂಗಳೂರು: ಕಿಡ್ನಾಪ್‌ ಪ್ರಕರಣದಲ್ಲಿ (Kidnap Case) ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Jailed) ಅವರು ಇಂದು ಮತ್ತೆ ಜಾಮೀನು ಅರ್ಜಿ (Bail plea) ವಿಚಾರಣೆ ಎದುರಿಸಬೇಕಿದೆ. ಬೇಲ್ ಆಗುತ್ತಾ ಅಥವಾ ಮತ್ತೆ ಜೈಲಾ ಎಂಬ ಆತಂಕದಲ್ಲಿ ರೇವಣ್ಣ ಇದ್ದಾರೆ.

ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಮೇ 09ರಂದು ವಾದ ಪ್ರತಿವಾದ ಆಲಿಸಿ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿತ್ತು. ವಕೀಲ ಸಿ.ವಿ.ನಾಗೇಶ್ ರೇವಣ್ಣ ಪರ ವಾದ ಮಂಡಿಸಿದ್ದರು. ರೇವಣ್ಣ ಅವರನ್ನು ಈಗಾಗಲೇ ಎಸ್.ಐ.ಟಿ ವಿಚಾರಣೆ ನಡೆಸಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಪ್ರಕರಣದಲ್ಲಿ ಎಲ್ಲೂ ನೇರವಾಗಿ ರೇವಣ್ಣರ ಪಾತ್ರವಿಲ್ಲ ಎಂದು ನಾಗೇಶ್‌ ವಾದ ಮಂಡಿಸಿದ್ದರು.

ಸಿ.ವಿ.ನಾಗೇಶ್, ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ. ಬೇಲ್ ಅರ್ಜಿ ಊರ್ಜಿತವಲ್ಲವೆಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. 2023ರ ತೀಸ್ತಾ ಸೆಟಲ್ ವಾಡ್‌ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ನಾಗೇಶ್‌, ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ನಿರಂಜನ್ ಸಿಂಗ್ ಕೇಸ್‌ನಲ್ಲಿಯೂ ಜಾಮೀನು ಉಲ್ಲೇಖವಿದೆ. 22 ತೀರ್ಪುಗಳಲ್ಲಿ ನಿರಂಜನ್ ಕೇಸ್‌ ಅನ್ನು ಅನುಸರಿಸಲಾಗಿದೆ. ಕಸ್ಟಡಿಯಲ್ಲಿದ್ದಾಗಲೂ ಜಾಮೀನು ನೀಡಿರುವ ಉಲ್ಲೇಖವಿದೆ. ಒಂದೊಂದು ದಿನ ಒಬ್ಬೊಬ್ಬರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗುತ್ತಿದೆ. ಮೊದಲು ಜಗದೀಶ್ ಇದ್ದರು, ಈಗ ಜಯ್ನಾ ಕೊಠಾರಿ ಇದ್ದಾರೆ. ಎಸ್‌ಪಿಪಿ ನೇಮಕಕ್ಕೂ ಕಾನೂನಿನಲ್ಲಿ ಕೆಲ ಕ್ರಮಗಳಿವೆ ಎಂದು ವಾದಿಸಿದರು.

ಎಸ್.ಐ.ಟಿ ಪರ ವಾದ ಮಂಡಿಸಿದ್ದ ಎಸ್.ಪಿ.ಪಿ ಜಯ್ನಾ ಕೊಠಾರಿ, ಈ ವೇಳೆ ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಡ್ಜ್‌, ಈಗಾಗಲೇ ಆಕ್ಷೇಪಣೆಗೆ 3 ಬಾರಿ ಸಮಯ ನೀಡಲಾಗಿದೆ. ಇನ್ನೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್‌ ಮುಂದೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ ಎಂದು ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು. ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ‌ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.

ಕಿಡ್ನಾಪ್ ಪ್ರಕರಣ ಮಾತ್ರವಲ್ಲ ಪ್ರಜ್ವಲ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆ ಎಂದು ಕೊಠಾರಿ ವಾದಿಸಿದ್ದರು. ಪ್ರಜ್ವಲ್ ವಿರುದ್ಧದ ಲೈಂಗಿಕ ಪ್ರಕರಣ ಸಂಬಂಧ ಸಂತ್ರಸ್ತೆಯ ಅಪಹರಣವಾಗಿದೆ. ಆರೋಪಿ ಪ್ರಭಾವಿ ಆಗಿದ್ದು, ಜಾಮೀನು ನೀಡಿದರೆ ಸಾಕ್ಷಿ ನಾಶ ಮಾಡುವ ಸಂಭವವಿದೆ ಎಂದು ವಾದಿಸಿ, ಮತ್ತೆ ವಾದ ಮಾಡಲು ಇಂದಿಗೆ ಕಾಲಾವಕಾಶ ಕೇಳಿದ್ದರು.

ಎಸ್.ಐ.ಟಿ ಪರವಾಗಿ ಎಸ್.ಪಿ.ಪಿ ಅಶೋಕ್‌ ನಾಯ್ಕ್ ವಾದ ಮಂಡನೆಗೆ ಅವಕಾಶ ಕೇಳಿದ್ದರು. ಇಂದು ಎಸ್.ಐ.ಟಿ ಪರ ವಕೀಲ ಅಶೋಕ್ ನಾಯ್ಕ್‌ರ ವಾದ ಮಂಡನೆಗೆ ಅವಕಾಶ ನೀಡಿ ಕೋರ್ಟ್‌ ವಿಚಾರಣೆ ಮುಂದೂಡಿತ್ತು. ಇಂದು ಎಸ್.ಪಿ.ಪಿ ಅಶೋಕ್ ನಾಯ್ಕ್ ಅವರ ಎಸ್.ಐ.ಟಿ ಪರ ವಾದದ ಬಳಿಕ ರೇವಣ್ಣ ಪರ ವಾದ ಮಂಡಿಸಲಿದ್ದಾರೆ ಸಿ.ವಿ.ನಾಗೇಶ್. ವಾದ ಪ್ರತಿವಾದ ಆಲಿಸಿ ನ್ಯಾಯಾಲಯ ಮಧ್ಯಾಹ್ನ ಅಥವಾ ನಾಳೆಗೆ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Prajwal Revanna Case: ದಿಕ್ಕು ತಪ್ಪಿದೆ ಪ್ರಜ್ವಲ್ ರೇವಣ್ಣ ಕೇಸ್‌; ಡಿಕೆಶಿ ವಿಚಾರಣೆಯೂ ಆಗಲಿ ಎಂದ ಬಸವರಾಜ ಬೊಮ್ಮಾಯಿ

Continue Reading

ವೈರಲ್ ನ್ಯೂಸ್

Elephant Attack: ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ; ಬೆಚ್ಚಿಬಿದ್ದ ಡ್ರೈವರ್‌ನಿಂದ ಅಪಘಾತ!

Elephant Attack: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಓಡಾಟ ಮಿತಿಮೀರಿದೆ. ಪ್ರತಿ ರಾತ್ರಿ ಎಂಬಂತೆ ಇಲ್ಲಿ 8, 9, 10 ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ರಾತ್ರಿ 9ನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಗಾಬರಿಯಾದ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ರಸ್ತೆಯ ಬದಿಗೆ ಸರಿದು ಚರಂಡಿಗೆ ಬಿದ್ದಿದೆ.

VISTARANEWS.COM


on

elephant attack charmadi ghat
Koo

ಚಿಕ್ಕಮಗಳೂರು: ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದ ಪ್ರಮುಖ ಕೊಂಡಿಯಾದ ಘಾಟಿಗಳಲ್ಲಿ ಒಂದಾಗಿರುವ ಚಾರ್ಮಾಡಿ ಘಾಟಿಯ (Charmadi Ghat) ರಸ್ತೆಯಲ್ಲಿ ಕಾಡಾನೆ ((Elephant Attack) ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ನಿನ್ನೆ ರಾತ್ರಿ ‌ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ಗಾಬರಿಯಾದ ಮಹಿಂದ್ರ ಜೀಪ್‌ ಚಾಲಕನೊಬ್ಬ ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಓಡಾಟ ಮಿತಿಮೀರಿದೆ. ಪ್ರತಿ ರಾತ್ರಿ ಎಂಬಂತೆ ಇಲ್ಲಿ 8, 9, 10 ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗುತ್ತಿದೆ. ನಿನ್ನೆ ರಾತ್ರಿ 9ನೇ ತಿರುವಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಗಾಬರಿಯಾದ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ವಾಹನ ರಸ್ತೆಯ ಬದಿಗೆ ಸರಿದು ಚರಂಡಿಗೆ ಬಿದ್ದಿದೆ.

ಮಂಜು ಕವಿದ ವಾತಾವರಣದಲ್ಲಿ ರಸ್ತೆಯೇ ಸರಿಯಾಗಿ ಕಾಣುತ್ತಿಲ್ಲ. ವಾಹನ ಚಾಲಕರು ಪರದಾಡುತ್ತ ವಾಹನ ಚಲಾಯಿಸುತ್ತಾರೆ. ಇಂಥ ಹೊತ್ತಿನಲ್ಲಿ ಏಕಾಏಕಿ ಕಾಡಾನೆ ಪ್ರತ್ಯಕ್ಷವಾಗುತ್ತಿರುವುದರಿಂದ ವಾಹನ ಸವಾರರು ಭಯಭೀತರಾಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಚಾರ್ಮಾಡಿ ಘಾಟಿಯಲ್ಲಿ ಆನೆ ಪ್ರತ್ಯಕ್ಷವಾಗುತ್ತಿದೆ. ಹಗಲು ಕೂಡ ಆನೆ ಕಾಣಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರು ಗಲಿಬಿಲಿ ಆಗುತ್ತಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಘಾಟಿ ಕೆಳಗಿನ ಧರ್ಮಸ್ಥಳ ಮುಂತಾದ ತೀರ್ಥಕ್ಷೇತ್ರಗಳಿಗೆ ಬರುವವರ ವಾಹನಗಳ ಸಂಖ್ಯೆ ಹೆಚ್ಚು ಇದೆ. ಈಗ ಶಾಲೆಗಳಿಗೆ ರಜೆಯೂ ಇರುವುದರಿಂದ ವಾಹನಗಳು ಇನ್ನಷ್ಟು ಹೆಚ್ಚಿವೆ. ದೊಡ್ಡ ವಾಹನಗಳಲ್ಲಿ ಇರುವವರು ಆನೆಗೆ ಕ್ಯಾರೇ ಎನ್ನದೆ ಸ್ಲೋ ಮಾಡಿ ಆನೆ ನೋಡಲು ನಿಲ್ಲಿಸುತ್ತಿರುವುದರಿಂದ, ಸಣ್ಣ ವಾಹನಗಳಿಗೆ ಹಾಗೂ ದ್ವಿಚಕ್ರ ಸವಾರರಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಆನೆ ಓಡಾಟದಿಂದ ಪದೇಪದೇ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಸಲಗ ವಾಹನಗಳ ಮೇಲೆ ಎರಗುವುದಕ್ಕೆ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ವಾಪಸ್‌ ಬದುಕಿ ಬರುವ ಗ್ಯಾರಂಟಿ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮನೆ ಸಮೀಪದ ಕಾಡಿಗೆ ತೆರಳುತ್ತಿದ್ದ ವ್ಯಕ್ತಿ ಮಸಣ ಸೇರಿದ್ದಾನೆ. ಕಾಡಾನೆ ದಾಳಿಗೆ ವ್ಯಕ್ತಿ (Elephant attack) ಬಲಿಯಾಗಿದ್ದಾರೆ.

ಶಿವಮೊಗ್ಗದ ಹೊಸನಗರ ತಾಲೂಕಿನ ಬಸವಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತಿಮ್ಮಪ್ಪ (58) ಕಾಡಾನೆ ದಾಳಿಯಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜನರ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯುವಂತೆ ಒತ್ತಾಯ ಕೇಳಿ ಬಂದಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಮನೆಯಿಂದ ಹೊರ ಹೋಗಲು ಎದುರುವಂತಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.

ಇದನ್ನೂ ಓದಿ: Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

Continue Reading
Advertisement
shivamogga triple murder case
ಕ್ರೈಂ12 mins ago

Murder Case: ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡೇಟು, ಬಂಧನ

Turbo Trailer Out mammoottys raj b shetty looks menacing
ಮಾಲಿವುಡ್17 mins ago

Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

prajwal revanna case
ಪ್ರಮುಖ ಸುದ್ದಿ56 mins ago

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

Health Tips Kannada Stay away from these foods to get rid of acne
ಆಹಾರ/ಅಡುಗೆ57 mins ago

Health Tips Kannada: ಈ ಆಹಾರಗಳಿಂದ ದೂರವಿದ್ದರೆ ಮೊಡವೆ ಸಮಸ್ಯೆಯಿಂದ ಪಾರಾಗಬಹುದು!

Kannada New Movie meghashri starrer kuntebille goes on floor
ಸ್ಯಾಂಡಲ್ ವುಡ್1 hour ago

Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

Brinda Acharya Saavira Gungali Video Song Out
ಸ್ಯಾಂಡಲ್ ವುಡ್1 hour ago

Brinda Acharya: ‘ಸಾವಿರ ಗುಂಗಲಿ’ ಒಲವಿನ ಸವಾರಿ ಹೊರಟ ಬೃಂದಾ ಆಚಾರ್ಯ-ಭರತ್ ಬೋಪಣ್ಣ!

pm narendra Modi Varanasi road show
Lok Sabha Election 20242 hours ago

PM Nanrendra Modi: ನಾಳೆ ವಾರಾಣಸಿಯಲ್ಲಿ ಮೋದಿ 3ನೇ ಬಾರಿ ನಾಮಪತ್ರ ಸಲ್ಲಿಕೆ, ಇಂದು ವೈಭವದ ರೋಡ್‌ ಶೋ

Food Tips Kannada adulterated food effect health
ಲೈಫ್‌ಸ್ಟೈಲ್2 hours ago

Food Tips Kannada: ಕಲಬೆರಕೆ ಆಹಾರಗಳಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Jyoti Rai seeks divine blessings at tirupathi
ಕಿರುತೆರೆ2 hours ago

Jyoti Rai: ವೈರಲ್ ವಿಡಿಯೊ ಬೆನ್ನಲ್ಲೇ ಜ್ಯೋತಿ ರೈ ಟೆಂಪಲ್‌ ರನ್‌!

Kochi Tour
ಪ್ರವಾಸ2 hours ago

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather forecast karnataka rains
ಮಳೆ4 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ5 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ16 hours ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ17 hours ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

Prajwal Revanna Case Naveen Gowda post against MLA A Manju
ರಾಜಕೀಯ17 hours ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ20 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ22 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ1 day ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು2 days ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

ಟ್ರೆಂಡಿಂಗ್‌