Dina Bhavishya read your daily horoscope predictions for july 04, 2023Dina Bhavishya : ಕುಂಭರಾಶಿಗೆ ಚಂದ್ರನ ಸಂಚಾರ; ಈ ರಾಶಿಯ ಉದ್ಯೋಗಿಗಳಿಗೆ ಶುಭ ಫಲ Vistara News

ಪ್ರಮುಖ ಸುದ್ದಿ

Dina Bhavishya : ಕುಂಭರಾಶಿಗೆ ಚಂದ್ರನ ಸಂಚಾರ; ಈ ರಾಶಿಯ ಉದ್ಯೋಗಿಗಳಿಗೆ ಶುಭ ಫಲ

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಪಾಡ್ಯದ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

moon transit 2023 horoscope today
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಗಳವಾರವಾದ ಇಂದು ಚಂದ್ರನು ಮಧ್ಯಾಹ್ನ 01:30ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರನು ಕುಂಭ ರಾಶಿಗೆ ಪ್ರವೇಶಿಸಿದ ನಂತರ ಮೇಷ, ಕಟಕ, ಸಿಂಹ, ವೃಶ್ಚಿಕ, ಮಕರ ಹಾಗೂ ಮೀನ ರಾಶಿಗೆ ಚಂದ್ರನ ಬಲ ದೊರೆಯಲಿದೆ. ಈ ವಿಶೇಷವಾದ ದಿನ ಮೂರು ರಾಶಿಯ ಉದ್ಯೋಗಿಗಳು ಶುಭ ಫಲ ಪಡೆಯಲಿದ್ದಾರೆ. ನಿಮ್ಮ ಇಂದಿನ ದಿನ ಹೇಗಿದೆ, ಭವಿಷ್ಯ ಏನು ಹೇಳುತ್ತದೆ (kannada dina bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (04-07-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ
ತಿಥಿ:
ಪಾಡ್ಯ 13:37 ವಾರ: ಮಂಗಳವಾರ
ನಕ್ಷತ್ರ: ಪೂರ್ವಾಷಾಢ 08:24/ಉತ್ತರಾಷಾಢ 29:38
ಯೋಗ: ಇಂದ್ರ 11:47 ಕರಣ: ಕೌಲವ 13:37
ಅಮೃತಕಾಲ: ಬೆಳಗ್ಗೆ 04 ಗಂಟೆ 08 ನಿಮಿಷದಿಂದ ಬೆಳಗ್ಗೆ 05 ಗಂಟೆ 34 ನಿಮಿಷದವರೆಗೆ.
ಇಂದಿನ ವಿಶೇಷ: ಅಶೂನ್ಯಶಯನ ವ್ರತ.

ಸೂರ್ಯೋದಯ : 05:58 ಸೂರ್ಯಾಸ್ತ : 06:50

ರಾಹುಕಾಲ : ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಪ್ರಾತಃ ಕಾಲ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (dina bhavishya in kannada)

Horoscope Today

ಮೇಷ: ಆರ್ಥಿಕವಾಗಿ ಬಲಿಷ್ಠರಾಗುವಿರಿ. ಹೂಡಿಕೆ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಒತ್ತಡ. ಹಳೆಯ ಸ್ನೇಹಿತರ ಜೊತೆ ಕಾಲ ಕಳೆಯುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಷಭ: ಪ್ರಯಾಣ ಮಾಡುವ ಸಾಧ್ಯತೆ. ಅನಿರೀಕ್ಷಿತ ಲಾಭಗಳನ್ನು ಪಡೆಯುವಿರಿ. ಕುಟುಂಬದ ಸದಸ್ಯರ ಬೆಂಬಲ ದೊರೆಯಲಿದೆ. ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಸುವುದು ಬೇಡ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ. ಉದ್ಯೋಗಿಗಳಿಗೆ ಒತ್ತಡ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಿಥುನ: ಬಲವಂತವಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ಇಂದಿನ ದಿವಸ ಗಾಬರಿಯಿಂದ ಇರುವ ಸಾಧ್ಯತೆ. ಅವಘಡ ಸಂಭವ. ನಿಧಾನವಾಗಿ ವಾಹನ ಚಾಲನೆ ಮಾಡಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಒತ್ತಡದ ಜೀವನಕ್ಕೆ ವಿಶ್ರಾಂತಿ ಸಿಗಲಿದೆ. ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿವೆ. ಅಗತ್ಯ ವಸ್ತುಗಳ ಖರೀದಿ. ಸಹದ್ಯೋಗಿಗಳ ಬೆಂಬಲ ದೊರೆಯಲಿದೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಸಿಂಹ: ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಮಾನಸಿಕ ಆರೋಗ್ಯ ಸದೃಢ. ಅತಿ ಆವಶ್ಯಕ ಕೆಲಸದ ಕಾರಣ ದೈಹಿಕ ಶ್ರಮ. ಉದ್ಯೋಗಿಗಳಿಗೆ ಸಹಕಾರ. ಆರೋಗ್ಯ ಉತ್ತಮ. ಕೌಟುಂಬಿಕ ಕಲಹಗಳಿಗೆ ದ್ವನಿ ಆಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕನ್ಯಾ: ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ದೀರ್ಘಕಾಲದ ಪ್ರಯಾಣ ಸಾಧ್ಯತೆ. ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ. ಆಪ್ತರೊಂದಿಗೆ ಸಮಯ ಹಂಚಿಕೊಳ್ಳುವ ಅವಕಾಶ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಯಶಸ್ಸು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಕುಟುಂಬದಲ್ಲಿನ ಹಿರಿಯರೊಂದಿಗೆ ವಾದಕ್ಕೆ ಇಳಿಯುವುದು ಬೇಡ. ಆರ್ಥಿಕ ಪ್ರಗತಿ ಸಾಧಾರಣ. ಹರಟೆಯಿಂದ ಕಾಲ ಹರಣ ಮಾಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

Horoscope Today

ವೃಶ್ಚಿಕ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗುವವು. ಸಕಾರಾತ್ಮಕ ಆಲೋಚನೆ ಮಾಡಿ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಕಿರಿಕಿರಿ ಸಾಧ್ಯತೆ. ಆರೋಗ್ಯ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಮಂಗಳವಾರವಾದ ಇಂದು ಯಾವ ದೇವರನ್ನು ಪೂಜೆ ಮಾಡಬೇಕು? ಈ ವಿಡಿಯೋ ನೋಡಿ.
Horoscope Today

ಧನಸ್ಸು: ಉತ್ತಮ ಫಲಿತಾಂಶ ದೊರೆಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬದ ಸದಸ್ಯರ ಮೇಲೆ ಕೋಪಗೊಳ್ಳುವುದು ಬೇಡ. ಆರೋಗ್ಯ ಮಧ್ಯಮ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಉತ್ತಮ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಮಕರ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಪ್ರಯಾಣ ಮಾಡುವ ಸಾಧ್ಯತೆ. ಆರ್ಥಿಕ ಪ್ರಗತಿ ಉತ್ತಮ. ಪ್ರಮುಖ ಯೋಜನೆ ಕೈಗೊಳ್ಳುವ ಸಾಧ್ಯತೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕುಂಭ: ನಿಮ್ಮ ವರ್ತನೆ ಇತರರಿಗೆ ಮುಜುಗರ ಉಂಟು ಮಾಡುವ ಸಾಧ್ಯತೆ. ಯಾರೊಂದಿಗೂ ಅತಿಯಾದ ಸಲುಗೆ ಬೇಡ. ಆತುರದ ಮಾತುಗಳು ಅಪಾಯ ತರುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಇದನ್ನೂ ಓದಿ : Mars Transit 2023 : ಜು.1ಕ್ಕೆ ಸಿಂಹ ರಾಶಿಗೆ ಮಂಗಳನ ಸಂಚಾರ; ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

Horoscope Today

ಮೀನ: ಒತ್ತಡದ ಕೆಲಸದಿಂದ ಮುಕ್ತಿ. ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವುದು. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

Reliance Retail: ಟಿರಾದಿಂದ ಖರೀದಿ ಮಾಡುವಂಥ ಅನುಭವವೇ ಬಹಳ ವಿಶಿಷ್ಟವಾದದ್ದು. ಈಗಿನ ತಲೆಮಾರಿನ ಅಗತ್ಯಗಳು ಹಾಗೂ ಅಭಿರುಚಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿದಂಥ ಜಾಗತಿಕ ಹಾಗೂ ಸ್ಥಳೀಯವಾದ ಸೌಂದರ್ಯ ಬ್ರ್ಯಾಂಡ್ ಗಳ ವಿಶೇಷ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ.

VISTARANEWS.COM


on

Reliance Retail launches beauty retail store 'Tira' in Bengaluru
Koo

ಬೆಂಗಳೂರು: ಇದೀಗ ‘ಟಿರಾ’ ಬೆಂಗಳೂರಿಗೆ (Bengaluru) ಕಾಲಿಟ್ಟಿದೆ. ಅಂದ ಹಾಗೆ ಟಿರಾ ಎಂಬುದು ರಿಲಯನ್ಸ್ ರೀಟೇಲ್ ನ (Reliance Retail) ಸೌಂದರ್ಯ ರೀಟೇಲ್ ಪ್ಲಾಟ್ ಪ್ಲಾರ್ಮ್. ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ (phoenix mall of Asia) ರೀಟೇಲ್ ಕೇಂದ್ರವನ್ನು ಶುರು ಮಾಡುವ ಮೂಲಕ ಟಿರಾ ಬೆಂಗಳೂರು ನಗರಕ್ಕೆ ಪ್ರವೇಶ ಮಾಡಿದೆ. ಇಲ್ಲಿಯ ತನಕ ಮುಂಬೈ, ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಮಾತ್ರ ‘ಟಿರಾ’ (Tira) ಇತ್ತು. ಅದರ ಹೆಜ್ಜೆ ಗುರುತು ಬೆಂಗಳೂರಲ್ಲೂ ಮೂಡಿದೆ.

ಟಿರಾದಿಂದ ಖರೀದಿ ಮಾಡುವಂಥ ಅನುಭವವೇ ಬಹಳ ವಿಶಿಷ್ಟವಾದದ್ದು. ಈಗಿನ ತಲೆಮಾರಿನ ಅಗತ್ಯಗಳು ಹಾಗೂ ಅಭಿರುಚಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿದಂಥ ಜಾಗತಿಕ ಹಾಗೂ ಸ್ಥಳೀಯವಾದ ಸೌಂದರ್ಯ ಬ್ರ್ಯಾಂಡ್ ಗಳ ವಿಶೇಷ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಖರೀದಿ ಮಾಡುವಂಥ ಗ್ರಾಹಕರಿಗೆ ಸೌಂದರ್ಯ ರೀಟೇಲ್ ಉತ್ಪನ್ನಗಳ ಪೈಕಿ ಬೇರೆಲ್ಲೂ ಸಿಗದಂಥ ಅನುಭವ ದೊರೆಯಲಿ ಎಂಬ ಕಾರಣಕ್ಕಾಗಿಯೇ ‘ಟಿರಾ’ದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಬೆಂಗಳೂರಿನಲ್ಲಿ ಹೊಸದಾಗಿ ಶುರುವಾಗಿರುವ ಟಿರಾ ಮಳಿಗೆಯಲ್ಲಿ ತಮಗೆ ಬೇಕಾದಂಥ ಸುಗಂಧ ಅಥವಾ ಸುವಾಸನೆಯನ್ನು ಹುಡುಕಿಕೊಳ್ಳುವುದಕ್ಕೆ ಗ್ರಾಹಕರಿಗೆ ವಿಶಾಲವಾದ ಆಯ್ಕೆಗಳಿವೆ. ಪ್ರತಿ ವ್ಯಕ್ತಿಯೂ ತಮ್ಮದೇ ಆದ ಆದ್ಯತೆಯ ಮೇಲೆ ಸುಗಂಧ ದ್ರವ್ಯಗಳನ್ನು ಆರಿಸಿಕೊಳ್ಳಬಹುದಾಗಿದೆ. ಇನ್ನೂ ವಿಶೇಷ ಏನೆಂದರೆ, ಟಿರಾದಲ್ಲಿ ಲಭ್ಯ ಇರುವಂಥ ಸ್ಮಾರ್ಟ್ ಕನ್ನಡಿಗಳು ಹಾಗೂ ಆಗ್ಯುಮೆಂಟೆಡ್ ರಿಯಾಲಿಟಿ ಕಾರಣಕ್ಕೆ ಗ್ರಾಹಕರು ಉತ್ಪನ್ನಗಳನ್ನು ವರ್ಚುವಲ್ ಆಗಿ ಪ್ರಯೋಗಿಸಬಹುದು. ಅದೇ ರೀತಿ ಇಲ್ಲಿ ಲಭ್ಯ ಇರುವಂಥ ಬ್ಯೂಟಿ ಟ್ರೀಟ್ಸ್ ಮತ್ತು ನಮೂನೆಗಳನ್ನು ವಿತರಿಸುವಂಥ ವಿತರಣೆ ಯಂತ್ರಗಳ ಸಹಾಯದಿಂದ ಗ್ರಾಹಕರು ತಮಗೆ ಬೇಕಾದಂಥದ್ದನ್ನು ತಮ್ಮ ಮನೆಗೆ ಕೊಂಡೊಯ್ಯಬಹುದು.
ಅಂದಹಾಗೆ ಸೌಂದರ್ಯದ ವಿಚಾರದಲ್ಲಿ ಸಲಹೆ ನೀಡುವುದರಲ್ಲಿ ಪರಿಣತರಾದಂಥವರೇ ರೂಪಿಸಿರುವ ‘ಟಿರಾ ಸಿಗ್ನೇಚರ್ ಲುಕ್ಸ್’ ಬಗ್ಗೆ ಗ್ರಾಹಕರು ದೊಡ್ಡ ಮಟ್ಟದಲ್ಲಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಜತೆಗೆ ಇಲ್ಲಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಉಚಿತ ಗ್ಲಾಮ್ ಲುಕ್ ಪಡೆಯಬಹುದಾಗಿದೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ‘ಟಿರಾ’ದಲ್ಲಿ ಉಡುಗೊರೆ ನೀಡುವುದಕ್ಕೆ ಅಂತಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ತಾವು ಖರೀದಿ ಮಾಡಿದ ವಸ್ತುಗಳ ಮೇಲೆ ಪ್ರೀತಿಪಾತ್ರರ ಹೆಸರನ್ನು ಬರೆಸಿ, ನೀಡುವುದರೊಂದಿಗೆ ತಮ್ಮ ಉಡುಗೊರೆಗಳನ್ನು ಇನ್ನಷ್ಟು ವಿಶೇಷ ಎನ್ನುವಂತೆ ಮಾಡಬಹುದು.

ಸೌಂದರ್ಯ ಉತ್ಪನ್ನಗಳ ರೀಟೇಲ್ ವ್ಯಾಪ್ತಿಯಲ್ಲಿ ಟಿರಾ ಹಿಗ್ಗಿಸುತ್ತಾ ಬಂದಿದ್ದು, ಪ್ರತಿ ಗ್ರಾಹಕರಿಗೆ ತಮಗೆ ಬೇಕಾದದ್ದು ಇಲ್ಲಿ ದೊರೆಯುತ್ತದೆ ಎಂಬ ಭರವಸೆಯನ್ನು ನೀಡಿತ್ತಾ ಬಂದಿದೆ. ಇನ್ನು ‘ಟಿರಾ’ ಆಪ್ ಡೌನ್ ಲೋಡ್ ಸಂಖ್ಯೆಯು ಐದು ಮಿಲಿಯನ್ ಸಂಖ್ಯೆಯ ಮೈಲುಗಲ್ಲು ದಾಟಿದೆ. ಈ ಸಂಖ್ಯೆಯೇ ಮೂಲಕ ತಿಳಿಯಬಹುದಾದದ್ದು ಏನೆಂದರೆ, ಸೌಂದರ್ಯ ಅಭಿಮಾನಗಳಲ್ಲಿ ಟಿರಾಗೆ ಜನಪ್ರಿಯತೆಯು ಹೆಚ್ಚುತ್ತಲೇ ಬರುತ್ತಿದೆ. ಭಾರತ ದೇಶದಾದ್ಯಂತ ಶೇ 98ರಷ್ಟು ಪಿನ್ ಕೋಡ್ ಗಳ ವ್ಯಾಪ್ತಿಯಲ್ಲಿ ಟಿರಾ ಉತ್ಪನ್ನಗಳನ್ನು ವೇಗವಾಗಿ ಪೂರೈಕೆ ಮಾಡಲಾಗುತ್ತಿದ್ದು, 100ಕ್ಕೂ ಹೆಚ್ಚು ನಗರಗಳ ಗ್ರಾಹಕರನ್ನು ತಲುಪುತ್ತಿದೆ.

ಮಾಲ್ ಆಫ್ ಏಷ್ಯಾದಲ್ಲಿನ ಮಳಿಗೆಯು ಬೆಂಗಳೂರು ಮಾತ್ರವಲ್ಲದೆ ಅದರ ಆಚೆಗೆ ಇರುವಂಥ ಸೌಂದರ್ಯ ಉತ್ಪನ್ನಗಳ ಬಳಕೆದಾರರ ಪಾಲಿಗೆ ಪ್ರಮುಖ ಕೇಂದ್ರ ಆಗುವುದಕ್ಕೆ ಎಲ್ಲ ರೀತಿಯಿಂದಲೂ ಸಜ್ಜಾಗಿದ್ದು, ಉನ್ನತ ಮಟ್ಟದ- ಅತ್ಯಾಧುನಿಕ ತಂತ್ರಜ್ಞಾನದ ಅನುಭವದ ಹೊಸ ಯುಗಕ್ಕೆ ಇದು ನಾಂದಿ ಹಾಡಿದೆ. ಟಿರಾ ಮಳಿಗೆ ವಿಳಾಸ: ಕೆಳ ಮಹಡಿ, 239/240, ಬ್ಯಾಟರಾಯನಪುರ, ಯಲಹಂಕ ಹೋಬಳಿ, ಯಲಹಂಕ ತಾಲೂಕು, ಬಳ್ಳಾರಿ ರಸ್ತೆ, ಬೆಂಗಳೂರು, ಕರ್ನಾಟಕ 560092.

ಈ ಸುದ್ದಿಯನ್ನೂ ಓದಿ: ರಿಲಯನ್ಸ್‌ ರಿಟೇಲ್‌ ಅಧ್ಯಕ್ಷರಾಗಿ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ನೇಮಕ

Continue Reading

ಕ್ರಿಕೆಟ್

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

ದಕ್ಷಿಣ ಆಫ್ರಿಕಾ(IND vs SA) ಮತ್ತು ಭಾರತ ನಡುವಣ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು ಟಾಸ್​ ಮತ್ತು ಪಂದ್ಯ ಆರಂಭ ವಿಳಂಬಗೊಳ್ಳಲಿದೆ.

VISTARANEWS.COM


on

South Africa vs India 1
Koo

ಡರ್ಬಾನ್​: ದಕ್ಷಿಣ ಆಫ್ರಿಕಾ(IND vs SA) ಮತ್ತು ಭಾರತ ನಡುವಣ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು ಟಾಸ್​(Toss delayed due to rain) ಮತ್ತು ಪಂದ್ಯ ಆರಂಭ ವಿಳಂಬಗೊಳ್ಳಲಿದೆ. ಸದ್ಯಕ್ಕೆ ಡರ್ಬಾನ್​ನಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ ಹಿನ್ನಲೆ ಇತ್ತಂಡಗಳಿಗೂ ಈ ಸರಣಿ ಪ್ರಮುಖವಾಗಿದೆ.

ಕವರ್​ನಿಂದ ಮುಚ್ಚಿದ ಮೈದಾನ

ಸದ್ಯ ಡರ್ಬಾನ್​ನ ಕಿಂಗ್ಸ್‌ಮೀಡ್ ಮೈದಾನವನ್ನು ಕವರ್​ನಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಆಟಗಾರರೆಲ್ಲ ಡ್ರೆಸಿಂಗ್​ ರೂಮ್​ನಲ್ಲಿ ಮಳೆ ಯಾವಾಗ ಬಿಡುತ್ತದೆ ಎಂದು ಕಾದು ಕುಳಿತಿದ್ದಾರೆ. ಇದು ಐಸಿಸಿ ಅಡ್ಡಿಯಲ್ಲಿ ನಡೆಯುವ ಟೂರ್ನಿಯಾದ ಕಾರಣ ನಿಗದಿತ ಸಮಯಕ್ಕೆ ಮಳೆ ನಿಂತು ಆಟ ಪ್ರಾರಂಭವಾಗದಿದ್ದರೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ.

ಟಿ20 ಮುಖಾಮುಖಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ಇದುವರೆಗೆ 24 ಟಿ20 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಭಾರತವು 13 ಪಂದ್ಯಗಳನ್ನು ಗೆದ್ದಿದೆ. ದಕ್ಷಿಣ ಆಫ್ರಿಕಾ 10 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ, ‘ಮೆನ್ ಇನ್ ಬ್ಲೂ’ ಏಳು ಪಂದ್ಯಗಳನ್ನು ಆಡಿ ಐದರಲ್ಲಿ ಗೆದ್ದಿದ್ದರೆ, ಆತಿಥೇಯರು ಎರಡರಲ್ಲಿ ಗೆದ್ದಿದ್ದಾರೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದೆ.

ಪಿಚ್​ ರಿಪೋರ್ಟ್

ಡರ್ಬಾನ್​ನ ಕಿಂಗ್ಸ್‌ಮೀಡ್ ಪಿಚ್ ಮೈದಾನದಲ್ಲಿ ಆಡಿದ 18 ಪಂದ್ಯಗಳಲ್ಲಿ, ವೇಗದ ಬೌಲರ್‌ಗಳು 23.84 ಸರಾಸರಿಯಲ್ಲಿ 162 ವಿಕೆಟ್‌ಗಳನ್ನು ಪಡೆದರೆ, ಸ್ಪಿನ್ನರ್‌ಗಳು 18 ಪಂದ್ಯಗಳಲ್ಲಿ 26.80 ಸರಾಸರಿಯಲ್ಲಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ ಒಂಬತ್ತು ಗೆಲುವು ಸಾಧಿಸಿದರೆ, ಎರಡನೇ ಬ್ಯಾಟಿಂಗ್ ನಡೆಸಿದ ತಂಡ ಎಂಟು ಗೆಲುವುಗಳನ್ನು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಡರ್ಬನ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 143 ಆಗಿದೆ.

ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮೊದಲ ಬಾರಿ ಆಡಿದ ತಂಡವೆಂದರೆ ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ. 2007ರಲ್ಲಿ ನಡೆದ ಚೊಚ್ಚಲ ಅಂತಾರಾಷ್ಟೀಯ ಟಿ20 ಪಂದ್ಯದಲ್ಲಿ ವೀರೇಂದ್ರ ಸೆಹವಾಗ್​ ಸಾರಥ್ಯದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 82 ರನ್​ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ 6 ವಿಕೆಟ್​ಗೆ 169 ರನ್​ ಬಾರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೇವಲ 87 ರನ್​ಗೆ ಸರ್ವಪತನ ಕಂಡಿತ್ತು.

ಸಿಕ್ಕ ಅವಕಾಶ ಬಳಿಸಿಕೊಳ್ಳಿ

ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿಯ ಇಬ್ಬರು ಅಧಿಕಾರಿಗಳನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿದ್ದು ಆಟಗಾರರ ಎಲ್ಲ ಪ್ರದರ್ಶನದ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದೆ. ಹೀಗಾಗಿ ವಿಶ್ವಕಪ್​ನಲ್ಲಿ ಸ್ಥಾನ ಪಡೆಯಬೇಕಿದ್ದರೆ. ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ವಿಶ್ವಕಪ್​ಗೂ ಮುನ್ನ ಐಪಿಎಲ್​ ಕೂಡ ನಡೆಯುದರಿಂದ ಇಲ್ಲಿಯೂ ಕೆಲ ಉದಯೋನ್ಮುಖ ಆಟಗಾರು ಬೆಳಕಿಗೆ ಬರುತ್ತಾರೆ. ಆದ್ದರಿಂದ ಈಗ ತಂಡದಲ್ಲಿ ಇದ್ದ ಆಟಗಾರರು ತಮ್ಮ ಶ್ರೇಷ್ಠ ಪ್ರದರ್ಶನ ತೋರಿ ಆಯ್ಕೆ ಸಮಿತಿಯ ಗಮನಸೆಳೆಯಬೇಕಿದೆ.

Continue Reading

ದೇಶ

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

VISTARANEWS.COM


on

Shri Ram Janmabhoomi Mandir carvings are wonderful
Koo

ಅಯೋಧ್ಯೆ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮ ಮಂದಿರ (Ayodhya Ram Mandir) ಬಹುತೇಕ ಸಿದ್ಧವಾಗಿದೆ. ಜನವರಿ 22ರಂದು ರಂದು ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ನಡುವೆ ರಾಮ ಮಂದಿರ ಗರ್ಭಗಡಿ (Sanctum Sanctorum) ಹಾಗೂ ದೇವಾಲಯ ಒಳಗಿರುವ ಅದ್ಭುತ, ಮನಮೋಹಕ ಕಲಾಕೃತಿಗಳ (carvings) ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಲೀಸ್ ಮಾಡಿದೆ.

ಅದ್ಭುತ ಕೆತ್ತನೆಗಳನ್ನು ಹೊಂದಿರುವ ಮಂದಿರ ಒಳಾಂಗಣ ಫೋಟೋಗಳು ಭಾರೀ ವೈರಲ್ ಆಗಿವೆ. ಸುಂದರ ಕಲಾಕೃತಿಗಳನ್ನು ಮಂದಿರದೊಳಗೆ ಕಾಣಬಹುದಾಗಿದೆ. ನಿನ್ನೆಯಷ್ಟೇ ರಾಮ ಮಂದಿರದ ಗರ್ಭಗಡಿಯು ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಮಂತ್ರಣ ನೀಡಲಾಗಿದೆ. ಸುಮಾರು 10 ಸಾವಿರದಿಂದ 15 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮನಮೋಹಕ ರಾಮ ಮಂದಿರ ಗರ್ಭ ಗುಡಿ

ಶ್ರೀ ರಾಮ (Lord Ram Idol) ದೇವರ ಮೂರ್ತಿ ಪ್ರತಿಷ್ಠಾಪನೆಯಾಗಲಿರುವ ಗರ್ಭ ಗುಡಿಯ (Sanctum Sanctorum) ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ರಾಮನನ್ನು ಪ್ರತಿಷ್ಠಾಪಿಸುವ ಪೀಠ ಮತ್ತು ಗರ್ಭಗುಡಿಯನ್ನು ಫೋಟೋದಲ್ಲಿಕಾಣಬಹುದು.

ಭಗವಾನ್ ಶ್ರೀ ರಾಮ ಅವರ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ಇತ್ತೀಚೆಗೆ ಲೈಟಿಂಗ್-ಫಿಟ್ಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯದ ನಿರ್ಮಾಣವು ಪ್ರಗತಿಯಲ್ಲಿದ್ದು, ಇದು ದೇವಾಲಯದೊಳಗಿನ ಸಂಕೀರ್ಣ ಕೆತ್ತನೆಗಳ ಚಿತ್ರಗಳನ್ನು ಕಾಣಬಹುದು. ಇದಕ್ಕೂ ಮೊದಲು ಚಂಪತ್ ರಾಯ್ ಅವರು ಶ್ರೀ ರಾಮ ದೇವರ ಮೂರ್ತಿ ಕೆತ್ತನೆ ಶೇ.90ರಷ್ಟು ಮುಗಿದಿದೆ ಎಂದು ಹೇಳಿದ್ದರು.

ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ ಐದು ವರ್ಷದ ಮಗುವಿನ ರೂಪವನ್ನು ಚಿತ್ರಿಸುವ 4’3″ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ. ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಶಿಲೆಗಳಯಲ್ಲಿ ವಿಗ್ರಹವನ್ನು ನಿರ್ಮಿಸುತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತದಷ್ಟು ಸಿದ್ಧವಾಗಿವೆ ಮತ್ತು ಅಂತಿಮ ಕಾರ್ಯವು ಸುಮಾರು ಒಂದು ವಾರ ತೆಗೆದುಕೊಳ್ಳುತ್ತದೆ ಎಂದು ರಾಮ ಮಂದಿರ ಟ್ರಸ್ಟ್ ಕಾರ್ಯದರ್ಶಿ ಅವರು ಈ ಹಿಂದೆ ಹೇಳಿದ್ದರು.

ಪ್ರಾಣ-ಪ್ರತಿಷ್ಠಾ ಸಮಾರಂಭದ ವೈದಿಕ ವಿಧಿವಿಧಾನಗಳು ಜನವರಿ 16 ರಂದು ಮುಖ್ಯ ಸಮಾರಂಭಕ್ಕೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಲಕ್ಷ್ಮೀಕಾಂತ ದೀಕ್ಷಿತ್ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 10ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: ಮನಮೋಹಕ ರಾಮ ಮಂದಿರ ಗರ್ಭ ಗುಡಿ! ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರು

Continue Reading

ಉದ್ಯೋಗ

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

Job Alert: ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಸುಮಾರು 828 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಸಕ್ತರು ಡಿಸೆಂಬರ್‌ 18ರಿಂದ 23ರ ವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

VISTARANEWS.COM


on

air india
Koo

ಬೆಂಗಳೂರು: ಏರ್‌ ಇಂಡಿಯಾದಲ್ಲಿ ಉದ್ಯೋಗಾವಕಾಶಗಳಿವೆ. ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್ ಸುಮಾರು 828 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (AIATSL Recruitment 2023). ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್, ರ‍್ಯಾಂಪ್‌ ಸರ್ವಿಸ್ ಎಕ್ಸಿಕ್ಯೂಟಿವ್, ಡ್ಯೂಟಿ ಆಫೀಸರ್ ಮುಂತಾದ ಹುದ್ದೆಗಳಿವೆ. ಅಭ್ಯರ್ಥಿಗಳನ್ನು 3 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆಸಕ್ತರು ಡಿಸೆಂಬರ್‌ 18ರಿಂದ 23ರ ವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು (Job Alert).

ಹುದ್ದೆಗಳ ವಿವರ

ಡೆಪ್ಯೂಟಿ ಮ್ಯಾನೇಜರ್ ರ‍್ಯಾಂಪ್‌ / ಮೇಂಟೆನೆನ್ಸ್‌: 7, ಡೆಪ್ಯೂಟಿ ಮ್ಯಾನೇಜರ್-ರ‍್ಯಾಂಪ್‌: 28, ಜೂನಿಯರ್ ಆಫೀಸರ್ ಟೆಕ್ನಿಕಲ್: 24, ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್: 138, ಯುಟಿಲಿಟಿ ಏಜೆಂಟ್ ಕಮ್ ರ‍್ಯಾಂಪ್‌ ಡ್ರೈವರ್: 167, ಡ್ಯೂಟಿ ಮ್ಯಾನೇಜರ್- ಪ್ಯಾಸೆಂಜರ್: 19, ಡ್ಯೂಟಿ ಆಫೀಸರ್-ಪ್ಯಾಸೆಂಜರ್: 30, ಡ್ಯೂಟಿ ಮ್ಯಾನೇಜರ್-ಕಾರ್ಗೊ: 3, ಡ್ಯೂಟಿ ಆಫೀಸರ್-ಕಾರ್ಗೊ: 8, ಜೂನಿಯರ್ ಆಫೀಸರ್-ಕಾರ್ಗೊ: 9, ಸೀನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: 178, ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: 217 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ಡಿಪ್ಲೊಮ, ಐಟಿಐ, ಪದವಿ, ಇಂಜಿನಿಯರಿಂಗ್, ಇತರ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು, 21 ವರ್ಷದಿಂದ 55 ವರ್ಷದ ಒಳಗಿರುವ ಆಸಕ್ತರು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಶುಲ್ಕ 500 ರೂ. ಅನ್ನು ಏರ್‌ ಇಂಡಿಯಾ ಏರ್ ಟ್ರಾನ್ಸ್‌ಪೋರ್ಟ್‌ ಸರ್ವೀಸೆಸ್ ಲಿಮಿಟೆಡ್ (AIR INDIA AIR TRANSPORT SERVICES LTD) ಹೆಸರಿನಲ್ಲಿ ಡಿಡಿ ತೆಗೆಯುವ ಮೂಲಕ ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ನಿವೃತ್ತ ಯೋಧರಿಗೆ ಯಾವುದೇ ಶುಲ್ಕವಿಲ್ಲ. ನೇರ ಸಂದರ್ಶನಕ್ಕೆ ಹಾಜರಾಗುವವರು ತಮ್ಮ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳು, ಆಧಾರ್‌ ಕಾರ್ಡ್‌, ಅಪ್‌ಡೇಟ್‌ ಮಾಡಲಾದ ಇತ್ತೀಚಿನ ರೆಸ್ಯೂಮ್‌, ಅರ್ಜಿ ಶುಲ್ಕ ಪಾವತಿಸಿದ ಡಿಡಿ ರಶೀದಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ವಿಳಾಸ www.aiasl.inಗೆ ಭೇಟಿ ನೀಡಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿ
  • ಎಲ್ಲ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯವಾದ ಎಲ್ಲ ಡ್ಯಾಕುಮೆಂಟ್‌ಗಳನ್ನು ಲಗತ್ತಿಸಿ
  • ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ನಿಗದಿತ ನಮೂನೆಯ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ:

GSD Complex, Near
Sahar Police Station,
CSMI Airport,
Terminal-2, Gate No.5,
Sahar, AndheriEast, Mumbai 400099.

ಇದನ್ನೂ ಓದಿ: Job Alert: ಬ್ಯಾಂಕ್‌ ಆಫ್‌ ಬರೋಡಾದ 250 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Continue Reading
Advertisement
Reliance Retail launches beauty retail store 'Tira' in Bengaluru
ದೇಶ14 mins ago

Reliance Retail: ಯಲಹಂಕದಲ್ಲಿ ರಿಲಯನ್ಸ್ ರೀಟೇಲ್‌ನ ‘ಟಿರಾ’ ಮಳಿಗೆ ಆರಂಭ

South Africa vs India 1
ಕ್ರಿಕೆಟ್33 mins ago

IND vs SA: ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ವಿಳಂಬ

Shri Ram Janmabhoomi Mandir carvings are wonderful
ದೇಶ38 mins ago

Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಅದ್ಭುತ ಕಲಾಕೃತಿಗಳು!

Bus-jeep accident
ಉಡುಪಿ44 mins ago

Road Accident: ಕಾರ್ಕಳ ಬಳಿ ಖಾಸಗಿ ಬಸ್‌-ಜೀಪ್ ನಡುವೆ ಭೀಕರ ಅಪಘಾತ; 12 ಮಂದಿಗೆ ಗಂಭೀರ ಗಾಯ

Killers who killed lawyer for property in kalaburagi
ಕರ್ನಾಟಕ1 hour ago

ವಕೀಲನ ಹತ್ಯೆ ಮಾಡಿ ರಕ್ತದ ಕೈಯಲ್ಲೇ ದಂಪತಿಯಿಂದ ಹಣ ಪಡೆದಿದ್ದ ಸುಪಾರಿ ಕಿಲ್ಲರ್ಸ್‌!

air india
ಉದ್ಯೋಗ1 hour ago

Job Alert: ಏರ್‌ ಇಂಡಿಯಾದಲ್ಲಿದೆ ಉದ್ಯೋಗಾವಕಾಶ; ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ

man accused of murder wins acquittal after studying law and fighting own Case
ದೇಶ1 hour ago

ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಾಯಕ, ಲಾ ಓದಿ ತನ್ನ ಕೇಸನ್ನು ತಾನೇ ಗೆದ್ದ!

Kate Cross reveals ‘soft spot for RCB’ after bagging deal
ಕ್ರಿಕೆಟ್1 hour ago

ಚೆನ್ನೈ ತಂಡದ ಕಟ್ಟರ್‌ ಅಭಿಮಾನಿಯನ್ನು ಖರೀದಿ ಮಾಡಿದ ಆರ್​ಸಿಬಿ ಫ್ರಾಂಚೈಸಿ

Mysore people
ಕರ್ನಾಟಕ1 hour ago

Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

Winter Food Tips
ಆಹಾರ/ಅಡುಗೆ2 hours ago

Winter Food Tips: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ದೇಸೀ ಸಿಹಿತಿಂಡಿಗಳಿವು!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ1 week ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

DCC Bank Recruitment 2023
ಉದ್ಯೋಗ11 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ3 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Actor Shivarajkumar rejects DKS offer
ಕರ್ನಾಟಕ4 hours ago

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

HD Kumaraswamy attack on congress
ಕರ್ನಾಟಕ7 hours ago

HD Kumaraswamy: ಬಿಜೆಪಿಗೆ ‌50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್‌ ನಾಯಕ!

Dina Bhavishya
ಪ್ರಮುಖ ಸುದ್ದಿ15 hours ago

Dina Bhavishya : ಈ ರಾಶಿಯವರ ಲೆಕ್ಕಾಚಾರವು ಇಂದು ಉಲ್ಟಾ ಪಲ್ಟಾ!

read your daily horoscope predictions for december 9 2023
ಪ್ರಮುಖ ಸುದ್ದಿ2 days ago

Dina bhavishya: ಗೌಪ್ಯ ವಿಷಯ ಹೇಳುವಾಗ ಈ ರಾಶಿಯವರು ಎಚ್ಚರ!

Actress Leelavathi felicitated
South Cinema2 days ago

Actress Leelavathi: ನಮ್ಮಮ್ಮ ಲೀಲಮ್ಮ-ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದ ಫಿಲ್ಮ್‌ ಚೇಂಬರ್

Actress Leelavati and Rajkumar film
South Cinema2 days ago

Actress Leelavathi: ಲೀಲಾವತಿಗೆ ಸಂದ ಪ್ರಶಸ್ತಿಗಳ ಗರಿ; ಇಲ್ಲಿದೆ ಸಿನಿ ಜರ್ನಿ ಲಿಸ್ಟ್‌

Actress Leelavati and Rajkumar film
South Cinema2 days ago

Actress Leelavathi: ತೆರೆಯಲ್ಲಿ ಮೋಡಿ ಮಾಡಿದ್ದ ಡಾ.ರಾಜ್‌ಕುಮಾರ್‌-ಲೀಲಾವತಿ ಜೋಡಿ!

PM Narenda modi and Moulvi thanveer Peera
ಕರ್ನಾಟಕ2 days ago

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

Dina Bhavishya
ಪ್ರಮುಖ ಸುದ್ದಿ3 days ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ3 days ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಟ್ರೆಂಡಿಂಗ್‌