ಕರ್ನಾಟಕ
Road accident : ಸಿಗ್ನಲ್‌ನಲ್ಲಿ ಸ್ಕೂಟರ್‌ಗೆ ಬಡಿದು ಮುಂದೆ ಸಾಗಿದ ಲಾರಿ, ಇಬ್ಬರು ಸವಾರರು ಸ್ಥಳದಲ್ಲೇ ಮೃತ್ಯು
ಮಂಗಳೂರಿನ ನಂತೂರು ಜಂಕ್ಷನ್‌ನಲ್ಲಿ ಸಿಗ್ನಲ್ ಬಿಡುವ ವೇಳೆ ಲಾರಿಯೊಂದು ಧಾವಂತದಿಂದ ಮುಂದೆ ನುಗ್ಗಿ ಸ್ಕೂಟರ್‌ಗೆ ಡಿಕ್ಕಿ (Road accident) ಹೊಡೆದಿದೆ. ಸ್ಕೂಟರ್‌ನಲ್ಲಿದ್ದ ಇಬ್ಬರ ಪ್ರಾಣವನ್ನು ಬಲಿ ಪಡೆದಿದೆ.
ಮಂಗಳೂರು: ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ (Road accident) ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ನಂತೂರು ಸರ್ಕಲ್‌ನಲ್ಲಿ ಸಂಭವಿಸಿದೆ. ಸ್ಕೂಟರ್‌ನಲ್ಲಿದ್ದ ಸ್ಯಾಮ್ಯುಯೆಲ್ ಜೇಸುದಾಸ್ (67) ಮತ್ತು 30 ವರ್ಷದ ಯುವತಿ ಮೃತ ದುರ್ದೈವಿಗಳು.
ಸ್ಕೂಟರ್ ಮತ್ತು ಲಾರಿ ಎರಡೂ ನಂತೂರು ಸರ್ಕಲ್‌ನ ಸಿಗ್ನಲ್‌ನಲ್ಲಿ ನಿಂತಿದ್ದವು. ಒಮ್ಮೆಗೆ ಸಿಗ್ನಲ್ ಬಿಟ್ಟಾಗ ಎರಡೂ ಮುಂದಕ್ಕೆ ಹೊರಟಿದ್ದವು. ಈ ಸಂದರ್ಭ ಲಾರಿಯನ್ನು ವೇಗವಾಗಿ ಚಲಾಯಿಸಿದ್ದರಿಂದ ಅದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಲಾರಿಯಡಿಗೆ ಬಿದ್ದು ಇಬ್ಬರೂ ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಆಕ್ರೋಶಿತರಿಂದ ಲಾರಿ ಚಾಲಕನಿಗೆ ಹಲ್ಲೆ
ಸರ್ಕಲ್‌ನಲ್ಲಿ ಸಿಗ್ನಲ್ ಬಿದ್ದಿದ್ದರೂ ಅವಸರ ತೋರಿದ, ಇಬ್ಬರ ಪ್ರಾಣಹಾನಿಗೆ ಕಾರಣನಾದ ಲಾರಿ ಚಾಲಕನ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತ ಸಾರ್ವಜನಿಕರು ಹೆಲ್ಮೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ.
ಕದ್ರಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಇದೀಗ ಲಾರಿ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಟಾಟಾ ಏಸ್‌ಗೆ ಡಿಕ್ಕಿ ಹೊಡೆದ ಬಸ್; ಇಬ್ಬರು ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಟಾಟಾ ಏಸ್‌ಗೆ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲಿಯೆ ಮೃತಪಟ್ಟಿದ್ದರೆ, ಮತ್ತೊರ್ವ ಗಂಭೀರ ಗಾಯಗೊಂಡಿದ್ದಾರೆ. ಶಂಕರ್ (34), ವಿಲ್ಸನ್ ಗಲ್ಬಟ್ (32) ಮೃತ ದುರ್ದೈವಿಗಳು.
ಮೃತರು ಬೆಂಗಳೂರಿನ ಎಚ್ಎಎಲ್ ನಿವಾಸಿಗಳಾಗಿದ್ದು, ಶ್ರೀವಾಸ್ (35) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಮೂವರು ಪೈಂಟರ್ಸ್‌ಗಳಾಗಿದ್ದು, ತುಮಕೂರಿನಲ್ಲಿ ಕೆಲಸ ಮುಗಿಸಿ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Accidental death : ರಬ್ಬರ್ ಟ್ಯಾಪಿಂಗ್‌ಗೆ ಹೋಗಿದ್ದ ವೇಳೆ ಎದೆಗೆ ಕತ್ತಿ ತಾಗಿ ಮಹಿಳೆ ದಾರುಣ ಸಾವು
ಕರ್ನಾಟಕ
Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!
ಸಿಎಂ ಬೊಮ್ಮಾಯಿ ಅವರನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ರೂಪಿಸಿರುವ ಪ್ಲ್ಯಾನ್ ತಿರುಗುಬಾಣವಾಗುವ ಅಪಾಯವಿದೆ. ಅಜ್ಜಂಪೀರ್ ಖಾದ್ರಿ ಅವರೇ ಇಲ್ಲೀಗ ನಿರ್ಣಾಯಕ
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಮತ ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗಳಿಂದ ಗೆಲ್ಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಚಮಕ್ ನೀಡಲು ಮುಂದಾಗಿರುವ ಪ್ಲ್ಯಾನ್ ಈಗ ಕಾಂಗ್ರೆಸ್‌ಗೇ ತಿರುಗುಬಾಣವಾಗುವ ಪರಿಸ್ಥಿತಿ ಎದುರಾಗಿದೆ.
ಶಿಗ್ಗಾಂವಿಯಲ್ಲಿ ಖಡಾಖಡಿ ಹೋರಾಟವನ್ನು ನೀಡುವ ಮೂಲಕ ಬೊಮ್ಮಾಯಿ ಅವರನ್ನು ಅವರ ಕ್ಷೇತ್ರದಿಂದ ಹೊರಬರದಂತೆ ಕಟ್ಟಿಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ. ಬೊಮ್ಮಾಯಿಗೆ ಕಠಿಣ ಸ್ಪರ್ಧೆ ನೀಡಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ನಾಯಕರು ಅವರನ್ನು ಹೇಗೋ ಮನವೊಲಿಸಿ ಒಪ್ಪಿಸಿದ್ದಾರೆ. ಆದರೆ, ಈಗ ಶಿಗ್ಗಾಂವಿಯಲ್ಲಿ ಇದುವರೆಗೂ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ತಿರುಗಿಬಿದ್ದಿದ್ದಾರೆ. ತನಗೆ ಟಿಕೆಟ್ ನೀಡದೆ ಹೋದರೆ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಖಾದ್ರಿ ಹೇಳಿರುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾದಂತಾಗಿದೆ.
ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೇಸ್ ಟಿಕೆಟ್ ಬಯಸಿ 14 ಜನರು ಅರ್ಜಿ ಸಲ್ಲಿಕೆ ಮಾಡಿದ್ದರು. ಅಲ್ಪಸಂಖ್ಯಾತ ಕೋಟಾದಡಿ ಸತತ ಮೂರು ಸಲ ಟಿಕೆಟ್ ಪಡೆದು ಬೊಮ್ಮಾಯಿ ವಿರುದ್ಧ ಸೋತಿದ್ದ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಈ ಸಲವೂ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ.
ಆದರೆ, ಈ ಬಾರಿ ಅಲ್ಪಸಂಖ್ಯಾತ ಅಸ್ತ್ರದ ಬದಲು ಪಂಚಮಸಾಲಿ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ. ಅಲ್ಪಸಂಖ್ಯಾತರು ಹೇಗಿದ್ದರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಅವರ ಜತೆ ಪಂಚಮಸಾಲಿಗಳ ಮತವೂ ಸೇರಿದರೆ ಬೊಮ್ಮಾಯಿ ಅವರನ್ನು ಸೋಲಿಸಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮನವಿ ಒಲಿಸಿದೆ. ಕೆಲವು ದಿನಗಲ ಹಿಂದೆ ದೆಹಲಿಯಲ್ಲಿ ನಡೆದ ಸಭೆಯಲ್ಲಿಯ ವಿನಯ ಕುಲಕರ್ನಿ ಜೊತೆ ಕೈ ನಾಯಕರು ಮಾತುಕತೆ ನಡೆಸಿದ್ದರು.
ವಿನಯ ಕುಲಕರ್ಣಿ ಅವರ ಹೆಸರು ಮುನ್ನಲೆಗೆ ಬರುತ್ತಿದ್ದಂತೆ ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಕೈ ನಾಯಕರಿಗೆ ಶಾಕ್ ನೀಡಿದ್ದಾರೆ. ಶಿಗ್ಗಾಂವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಈ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಡರಾತ್ರಿಯವರೆಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸಭೆ ನಡೆಸಿ ಮನ ಒಲಿಸಲು ಕಸರತ್ತು ನಡೆಸಿದರಾದರೂ ಅದರಲ್ಲಿ ಸಫಲರಾಗಿಲ್ಲ. ಖಾದ್ರಿ ಅವರು ಸಿದ್ದರಾಮಯ್ಯ ಬೆಂಬಲಿಗರಾಗಿರುವುದರಿಂದ ಜಮೀರ್ ಅಹ್ಮದ್ ಅವರಿಗೆ ಮನವೊಲಿಕೆ ಜವಾಬ್ದಾರಿಯನ್ನು ನೀಡಲಾಗಿದೆ.
ಖಾದ್ರಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಕೊನೆಯ ಬಾರಿಗೆ ಗೆದ್ದಿದ್ದು 1994ರಲ್ಲಿ. ಮಂಜುನಾಥ ಕೊನ್ನೂರು ಅವರು ಆಗ ಶಾಸಕರಾಗಿದ್ದರು.
ಖಾದ್ರಿ ಅವರು 1998ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಲ್ಲಿ ಸಿಂಧೂರ ರಾಜಶೇಖರ್ ಇಲ್ಲಿಗೆ ಪಕ್ಷೇತರರಾಗಿ ಗೆಲುವು ಪಡೆದಿದ್ದರು. ಬಳಿಕ ಗೆದ್ದಿದ್ದೆಲ್ಲ ಬೊಮ್ಮಾಯಿ ಅವರೇ.
ಇಲ್ಲಿನ ಒಟ್ಟಾರೆ ಲೆಕ್ಕಾಚಾರ ಗಮನಿಸಿದರೆ ಕಾಂಗ್ರೆಸ್ ಕೇವಲ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡರೆ ಗೆಲ್ಲುವುದು ಕಷ್ಟ. ಹಾಗಾಗಿ ಅದು ಬೇರೆ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಆದರೆ, ಮುಸ್ಲಿಂ ಮತಗಳನ್ನು ಬಿಟ್ಟರೂ ಗೆಲುವು ಸುಲಭವಲ್ಲ. ಹೀಗಾಗಿ ಖಾದ್ರಿ ಅವರು ಪಕ್ಷೇತರರಾಗಿ ನಿಂತರೆ ಮುಸ್ಲಿಂ ಮತಗಳು ಒಡೆಯುವುದು ನಿಶ್ಚಿತ. ಹೀಗಾಗಿ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾದ ಅಗತ್ಯ ಕಾಂಗ್ರೆಸ್‌ಗಿದೆ. ಖಾದ್ರಿ ಅವರು ಕಾಂಗ್ರೆಸ್ ಮನವೊಲಿಕೆಗೆ ಒಲಿಯುತ್ತಾರಾ ಎಂದು ಕಾದು ನೋಡಬೇಕು.
ಇದನ್ನೂ ಓದಿ : Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಕರ್ನಾಟಕ
Murder Case: ಅವಳದ್ದು ಮೋಹ, ಇವನಿಗೆ ಮಧುಮೇಹ; ಕೊಲೆಯಲ್ಲಿ ಅಂತ್ಯವಾಯ್ತು ಕಾಳಜಿ ಕಲಹ
ಈಗೀಗ ನೀನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಕಿರಿಕಿರಿ ಮಾಡುತ್ತಿದ್ದವಳಿಗೆ ಪ್ರಿಯಕರ ಮಾರಕಾಸ್ತ್ರದಿಂದ ಹತ್ಯೆ (Murder Case) ಮಾಡಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿ: ಇಲ್ಲಿನ ರಾಮದುರ್ಗ ತಾಲೂಕಿನ ಸಾಲಾಪುರ ಗ್ರಾಮದಲ್ಲಿ ಮಧುಮೇಹಿಯೊಬ್ಬ ಮೋಹಿಸಿದವಳನ್ನೇ ಕೊಂದು (Murder Case) ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಜಾನವ್ವ ದ್ಯಾಮನ್ನವರ (50) ಹಾಗೂ ಬಸವಗೌಡ ಶಾಸಪ್ಪನವರ (55) ಎಂಬುವವರು ಮೃತಪಟ್ಟಿದ್ದಾರೆ.
ಇವರಿಬ್ಬರು ಕಳೆದ 28 ವರ್ಷಗಳಿಂದ ಅನೈತಿಕ ಸಂಬಂಧವನ್ನು ಹೊಂದಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಬಸವಗೌಡಗೆ ಮಧುಮೇಹ ಕಾಯಿಲೆ ಬಂದಿದೆ. ಇದು ವಿಪರೀತಕ್ಕೆ ಹೋಗಿ ಅನಾರೋಗ್ಯಕ್ಕೆ ತುತ್ತಾಗಿದ್ದ. ಹೀಗೆ ಅನಾರೋಗ್ಯಕ್ಕೆ ಬಿದ್ದಿದ್ದ ಬಸವಗೌಡನ ಬಳಿ ಜಾನವ್ವ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ನಿತ್ಯ ಕಿರಿಕಿರಿ ಮಾಡುತ್ತಿದ್ದಳು ಎಂದು ಹೇಳಲಾಗಿದೆ.
ಈಕೆ ಪೀಡನೆ ತಾಳಲಾರದೆ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಗೌಡ ಸಿಟ್ಟಿಗೆದ್ದವನೇ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಜಾನವ್ವಳನ್ನು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಹತ್ಯೆ ಮಾಡಿದ ಬಳಿಕ ಬಸವಗೌಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹಗಳನ್ನು ರಾಮದುರ್ಗ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಾನವ್ವಳ ಪತಿ ತೀರಿ ಹೋದ ಬಳಿಕ ಈ ಬಸವಗೌಡ ಪತ್ನಿಯನ್ನು ತೊರೆದು ಈಕೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ.
ಸುಟ್ಟ ಸ್ಥಿತಿಯಲ್ಲಿ ಹಸಿ ಬಾಣಂತಿ ಶವ ಪತ್ತೆ
ಕೊಪ್ಪಳ: ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಹಸಿ ಬಾಣಂತಿಯೊಬ್ಬಳ ಶವ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, (Woman Murdered) ಇದರ ಬಗ್ಗೆ ನಾನಾ ಸಂಶಯಗಳು ವ್ಯಕ್ತವಾಗುತ್ತಿದೆ. ಇದು ಆತ್ಮಹತ್ಯೆಯಾಗಿರುವ ಸಾಧ್ಯತೆ ಇಲ್ಲ. ಬದಲಾಗಿ ನಿಧಿಗಾಗಿ ನಡೆದಿರುವ ಕೊಲೆ ಎಂದು ಸಂಶಯಿಸಲಾಗಿದೆ.
ನೇತ್ರಾವತಿ ಕುರಿ (26) ಕೊಲೆಯಾದ ಬಾಣಂತಿ. ಅವರಿಗೆ ಕೇವಲ ಒಂದೂವರೆ ತಿಂಗಳ ಪುಟ್ಟ ಮಗುವಿದ್ದು, ಅವರ ಶವ ಸಮೀಪದ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೇತ್ರಾವತಿಯನ್ನು ಸುಟ್ಟು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ರಾತ್ರಿ ಅಮಾವಾಸ್ಯೆ ಇದ್ದು, ತಡರಾತ್ರಿ ನಿಧಿಗಾಗಿ ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಮನೆಯಿಂದ ಅನತಿ ದೂರದಲ್ಲಿ ಶವ ಸಿಕ್ಕಿದೆ. ಪರಿಸರದಲ್ಲಿ ವಾಮಾಚಾರ ಸಂಬಂಧಿತ ಕೆಲವು ವಸ್ತುಗಳು ಸಿಕ್ಕಿರುವುದು ಇದೊಂದು ನಿಧಿಗಾಗಿ ನಡೆಸಿದ ಕೊಲೆಯಾಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
BJP Yuva Morcha: ಅಮ್ಮ ನೀಡುವ ಪಾಕೆಟ್ ಮನಿ ಮೇಲೆಯೇ ರಾಹುಲ್ ಗಾಂಧಿ ಜೀವನ: ತೇಜಸ್ವಿ ಸೂರ್ಯ
BJP Yuva Morcha: 10 ರೂಪಾಯಿ ಸಂಪಾದಿಸುವ ಸಾಮರ್ಥ್ಯವಿಲ್ಲದವರಿಂದ ಯುವಕರಿಗೆ ಸ್ವಾವಲಂಬಿ ಪಾಠ ಹೇಗೆ ಸಾಧ್ಯ ಎಂದು ಕಾಂಗ್ರೆಸ್‌ನ ನಿರುದ್ಯೋಗ ಭತ್ಯೆ ಯೋಜನೆ ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯವಾಡಿದ್ದಾರೆ.
ಗಂಗಾವತಿ (ಕೊಪ್ಪಳ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾಡಲು ಒಂದು ಸಣ್ಣ ಕೆಲಸವಿಲ್ಲ. 10 ರೂಪಾಯಿ ಸಂಪಾದಿಸುವ ಸಾಮರ್ಥ್ಯವಿಲ್ಲ. ಅವರ ಅಮ್ಮ ನೀಡುವ ಪಾಕೆಟ್ ಮನಿಯ ಮೇಲೆಯೇ ಜೀವನ ಅವಲಂಬಿಸಿದೆ. ಇಂತಹವರಿಂದ ಯುವಕರಿಗೆ ಸ್ವಾವಲಂಬಿ ಪಾಠ ಹೇಗೆ ಸಾಧ್ಯ ಎಂದು ಬಿಜೆಪಿಯ ಯುವ ಮೋರ್ಚಾ (BJP Yuva Morcha) ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ.
ಗಂಗಾವತಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿದ ಮಾತನಾಡಿ, ಡಿಪ್ಲೊಮಾ ಪದವೀಧರರು ಮತ್ತು ಪದವೀಧರರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡುತ್ತಿದೆ. ರಾಹುಲ್ ಜೀವನವೇ ಇನ್ನೊಬ್ಬರ ಮೇಲೆ ಅವಲಂಬಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ವಾವಲಂಬನೆ, ಸ್ವಾಭಿಮಾನಿಯನ್ನಾಗಿಸುವ ಯೋಜನೆಗಳನ್ನು ಸಾಧ್ಯವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Karnataka Election: ಯುಗಾದಿಗೆ ಕಾಂಗ್ರೆಸ್ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್
ದೇಹದಲ್ಲಿ ಶಕ್ತಿ ಇದ್ದಾಗಲೂ ಕೂಡ ಯುವ ಸಮೂಹವನ್ನು ಪರವಾಲಂಬಿಯನ್ನಾಗಿಸುವುದು ಕಾಂಗ್ರೆಸ್ ಆಡಳಿತದ ಮಾದರಿ. ಆದರೆ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದಕು ಕಟ್ಟಿಕೊಡುವುದು ಬಿಜೆಪಿಯ ಆಡಳಿತದ ಮಾದರಿ. ಯುವ ಶಕ್ತಿಗೆ ಪ್ರೇರಣೆ ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು. ಆದರೆ, ಕಾಂಗ್ರೆಸ್ ಅಗ್ಗದ ಯೋಜನೆಗಳನ್ನು ನೀಡುವ ಮೂಲಕ ಯುವ ಸಮೂಹದ ಶಕ್ತಿ ಕುಂದಿಸುವ ಕೆಲಸ ಮಾಡುತ್ತಿದೆ. ಇಂಥವರಿಂದ ಯುವ ಸಬಲೀಕರಣದ ಯೋಜನೆ ನಿರೀಕ್ಷೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
70 ವರ್ಷದಲ್ಲಿ ಕಾಂಗ್ರೆಸ್ ನೀಡಿರುವ ಇಂತಹ ಯೋಜನೆಗಳಿಂದಾಗಿಯೇ ಇಂದು ಮನೆ ಸೇರುವ ಹಂತಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಅವರು ನೀಡಿರುವ ಗ್ಯಾರಂಟಿಗಳು ನಿರುಪಯುಕ್ತವಾಗಲಿವೆ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.
ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ: ಶಾಸಕ ಅಪ್ಪಚ್ಚು ರಂಜನ್
ಕೊಡಗು: ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ. ಹೀಗಾಗಿ ಅವರು ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಸಿಎಂ ಆಗಿದ್ದವರಿಗೆ ಕ್ಷೇತ್ರಕ್ಕಾಗಿ ಹುಡುಕಾಡುವ ಸ್ಥಿತಿ ಬಂದಿದೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಎಲ್ಲಿ ಬೇಕಾದರೂ ಬಂದು ಸ್ಪರ್ಧಿಸಲಿ, ಅವರ ಎದುರು ನಾನು ಸ್ಪರ್ಧಿಸುತ್ತೇನೆ. ನಾನೇ ಅವರನ್ನು ಸೋಲಿಸುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಕ್ಷೇತ್ರದಿಂದ ಹಿಂದೆ ಸರಿದ ವಿಚಾರಕ್ಕೆ ಕುಶಾಲನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಎಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಸೋತರು. ಬಾದಾಮಿಯಲ್ಲಿ ಕೇವಲ 700 ಮತಗಳ ಅಂತರದಲ್ಲಿ ಗೆದ್ದರು. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಮಾಡಿ ಹಿಂದು-ಮುಸ್ಲಿಂ ಸಮಾಜಗಳನ್ನು ಒಡೆದು ಹಾಕಿದರು. ಹೀಗಾಗಿ ಜನರಿಗೆ ಅವರ ಮೇಲೆ ತೀವ್ರ ಸಿಟ್ಟಿದ್ದು, ಅವರನ್ನು ಸೋಲಿಸಲೇ ಬೇಕೆಂದು ನಿರ್ಧರಿಸಿದ್ದಾರೆ ಎಂದರು.
ಇದನ್ನೂ ಓದಿ | Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಉತ್ತರ ಕನ್ನಡ
Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರದಲ್ಲಿ ನಡೆದ ಬೈಕ್ ರ‍್ಯಾಲಿಗೆ ಅಭೂತಪೂರ್ವ ಬೆಂಬಲ
Bike Rally: ಯುಗಾದಿ ಪ್ರಯುಕ್ತ ಯಲ್ಲಾಪುರ ಪಟ್ಟಣದಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಗವಾ ಧ್ವಜಗಳೊಂದಿಗೆ ಭಾಗವಹಿದ್ದವು.
ಯಲ್ಲಾಪುರ: ಯುಗಾದಿ ಪ್ರಯುಕ್ತ ಯಲ್ಲಾಪುರ ಪಟ್ಟಣದಲ್ಲಿ ಸೋಮವಾರ (ಮಾ.20) ಹಮ್ಮಿಕೊಳ್ಳಲಾದ ಬೈಕ್ ರ‍್ಯಾಲಿಯು (Bike Rally) ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಪಟ್ಟಣದ ಕಾಳಮ್ಮನಗರ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ, ಗ್ರಾಮ ದೇವಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು. ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳು ಭಗವಾ ಧ್ವಜಗಳೊಂದಿಗೆ ರ‍್ಯಾಲಿಯಲ್ಲಿ ಭಾಗವಹಿದ್ದವು. ಕಳೆದ ಬಾರಿಗಿಂತ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವತಿಯರು ಸಹ ರ‍್ಯಾಲಿಯಲ್ಲಿ ಭಾಗವಹಿಸಿ ರ‍್ಯಾಲಿಯ ಮೆರುಗು ಹೆಚ್ಚಿಸಿದರು. ರ‍್ಯಾಲಿ ಸಾಗುವ ದಾರಿಯುದ್ದಕ್ಕೂ ಕೇಸರಿ ಧ್ವಜ ಹಾಗೂ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿದ್ದರಿಂದ ಸಂಪೂರ್ಣ ಪಟ್ಟಣವು ಕೇಸರಿಮಯವಾಗಿತ್ತು.
ಇದನ್ನೂ ಓದಿ: Shama Sikander: ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ, ಬಿಕಿನಿ ಹಾಟ್ ಫೋಟೊ ಫುಲ್ ಹವಾ
ಬೈಕ್ ರ‍್ಯಾಲಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಮುಖರಾದ ರಾಮು ನಾಯ್ಕ, ಯುವ ಮುಖಂಡ ವಿವೇಕ ಹೆಬ್ಬಾರ್, ಪ್ರಶಾಂತ ಹೆಗಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಆದಿತ್ಯ ಗುಡಿಗಾರ್, ಸೋಮೇಶ್ವರ್ ನಾಯ್ಕ, ಸತೀಶ ನಾಯ್ಕ, ಪ್ರಮುಖರಾದ ಪ್ರದೀಪ ಯಲ್ಲಾಪುರಕರ್, ರಜತ್ ಬದ್ದಿ, ಮುಂತಾದವರು ಇದ್ದರು. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ರ‍್ಯಾಲಿಯುದ್ದಕೂ ನಿಗಾ ವಹಿಸಿ, ವಾಹನ ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸಿ ರ‍್ಯಾಲಿ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಇದನ್ನೂ ಓದಿ: Benefits Of Pongame: ಬಹೂಪಯೋಗಿ ಹೊಂಗೆ: ಏನೇನಿವೆ ಇದರ ಸದ್ಗುಣಗಳು?
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ7 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ