Karnataka Elections : ಕೋಲಾರ ಬಿಟ್ಟು ವರುಣಾಗೆ ಹೋಗಿ ಎಂದು ರಾಹುಲ್‌ ಹೇಳಿಲ್ಲ, ಇದೆಲ್ಲ ಗಾಳಿ ಸುದ್ದಿ ಎಂದ ಸಿದ್ದರಾಮಯ್ಯ Vistara News
Connect with us

ಕರ್ನಾಟಕ

Karnataka Elections : ಕೋಲಾರ ಬಿಟ್ಟು ವರುಣಾಗೆ ಹೋಗಿ ಎಂದು ರಾಹುಲ್‌ ಹೇಳಿಲ್ಲ, ಇದೆಲ್ಲ ಗಾಳಿ ಸುದ್ದಿ ಎಂದ ಸಿದ್ದರಾಮಯ್ಯ

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ವರುಣಾಗೆ ಶಿಪ್ಟ್‌ ಆಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಇಂಥ ಯಾವುದೇ ಸಲಹೆಯನ್ನು ರಾಹುಲ್‌ ಗಾಂಧಿ ನೀಡಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ.

VISTARANEWS.COM


on

siddaramaiah
Koo

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ (Karnataka Elections) ಕೋಲಾರದಲ್ಲಿ ಸ್ಪರ್ಧಿಸದಂತೆ ಇಲ್ಲವೇ ವರುಣಾಕ್ಕೆ ಹೋಗುವಂತೆ ರಾಹುಲ್‌ ಗಾಂಧಿ ಅವರು ತನಗೆ ಯಾವುದೇ ಸಲಹೆ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ನಡೆದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಶನಿವಾಅರ ಬೆಂಗಳೂರಿಗೆ ಆಗಮಿಸಿದ ಬಳಿಕ ಈ ಹೇಳಿಕೆ ನೀಡಿದರು. ದಿಲ್ಲಿಯಲ್ಲಿ ನಡೆದ ಸಭೆಯ ವೇಳೆ ಕೋಲಾರದ ಟಿಕೆಟ್‌ ಫೈನಲ್‌ ಮಾಡಲಾಗಿರಲಿಲ್ಲ. ಕೋಲಾರದ ಟಿಕೆಟ್‌ ಚರ್ಚೆ ನಡೆದಾಗ ರಾಹುಲ್‌ ಗಾಂಧಿ ಅವರು ಕೋಲಾರ ಬಿಟ್ಟು ಸುರಕ್ಷಿತವಾಗಿರುವ ವರುಣಾ ಕ್ಷೇತ್ರದಲ್ಲಿ ನಿಲ್ಲುವಂತೆ ಸಲಹೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಇದನ್ನು ನಿರಾಕರಿಸಿದ್ದಾರೆ.

ʻʻರಾಹುಲ್ ಗಾಂಧಿಯವರು ನನಗೆ ಯಾವುದೇ ಸೂಚನೆ ಕೊಟ್ಟಿಲ್ಲ. ಸೂಚನೆ ಕೊಟ್ಟಿದ್ದಾರೆ ಅನ್ನೋದು ಗಾಳಿ ಸುದ್ದಿʼʼ ಎಂದು ಹೇಳಿದ ಅವರು, ವರುಣಾ ಕ್ಷೇತ್ರದಲ್ಲಿ ಯತೀಂದ್ರ ಅವರು ಇದ್ದಾರೆ. ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟಿದ್ದೇನೆ. ಹೈಕಮಾಂಡ್‌ ಎರಡು ಕ್ಷೇತ್ರಗಳಲ್ಲಿ ನಿಲ್ಲಿ ಅಂದ್ರೂ ನಿಲ್ತೇನೆ. ಏನಿದ್ದರೂ ಹೈಕಮಾಂಡ್ ನಿರ್ಧಾರದಂತೆ ಮಾಡ್ತೀನಿʼʼ ಎಂದು ಹೇಳಿದರು.

ಭಾನುವಾರದ ಕೋಲಾರ ಪ್ರವಾಸ ರದ್ದು

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಮನೆ ಮಾಡಿದ್ದಾರೆ ಎಂಬುದನ್ನು ತಳ್ಳಿ ಹಾಕಿದರು. ʻʻನಾನು ಕೋಲಾರದಲ್ಲಿ ಮನೆ ಮಾಡಿಲ್ಲ. ಮನೆ ನೋಡಿದ್ದು ನಿಜ ಆದ್ರೆ ಮಾಡಿಲ್ಲʼʼ ಎಂದರು. ಭಾನುವಾರ ಬೆಳಗಾವಿಗೆ ಹೋಗುತ್ತಿರುವುದರಿಂದ ಕೋಲಾರಕ್ಕೆ ಹೋಗಲು ಆಗುತ್ತಿಲ್ಲ. ಹೀಗಾಗಿ ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ ಎಂದು ಹೇಳಿದರು.

ನಾನು ಯಾವುದೇ ಕ್ಷೇತ್ರಕ್ಕೆ ಅರ್ಜಿ ಹಾಕಿಲ್ಲ. ಹೈಕಮಾಂಡ್‌ ಹೇಳಿದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಹಿಂದೆ ಕೋಲಾರದಲ್ಲಿ ದೊಡ್ಡ ರ‍್ಯಾಲಿಯನ್ನು ನಡೆಸಿದ್ದ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಕಳೆದ ಬಾರಿ ಗೆದ್ದ ಬಾದಾಮಿ ಕ್ಷೇತ್ರ ದೂರವಾಗುವುದರಿಂದ ಈ ಬಾರಿ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೂಡಾ ಹೇಳಿದ್ದರು.

ಎಲ್ಲಿ ಹೇಳಿದರೂ ನಿಲ್ತೇನೆ ಎಂದ ಸಿದ್ದರಾಮಯ್ಯ

ʻʻಬಾದಾಮಿ, ಕೋಲಾರ, ವರುಣಾ ಎಲ್ಲಿ ಹೇಳ್ತಾರೋ ಅಲ್ಲಿ ನಿಲ್ತೇನೆ. ನನಗೆ ಯಾವುದೇ ರೀತಿಯ ಆತಂಕ ಇಲ್ಲ. ವರುಣಾದಲ್ಲಿ ಯತೀಂದ್ರ ಇದ್ದಾನೆ, ಅವನದು ಒಂದೇ ಹೆಸರು ಇದೆ. ಅದು ಕ್ಲಿಯರ್‌ ಆಗಬೇಕು ಅಲ್ವಾ? ಬಿಜೆಪಿಯಿಂದ ಕೆಲವರು ಬರ್ತಾರೆ ಅವರಿಗೆ ಕೆಲವು ಸೀಟು ಇಡಬೇಕು. ಒಂದು ಹೆಸರು ಇರುವ ಕ್ಷೇತ್ರ ಮಾತ್ರ ಕ್ಲೀಯರ್ ಆಗಿದೆʼʼ ಎಂದು ತಿಳಿಸಿದರು.

ಎರಡು ಕ್ಷೇತ್ರದಲ್ಲಿ ಸ್ಫರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಏನು ಹೇಳುತ್ತೆ ಅಂತ ಗೊತ್ತಿಲ್ಲ. ಎರಡು ಕ್ಷೇತ್ರಗಳಲ್ಲಿ ನಿಲ್ಲಿ ಅಂತ ಹೇಳಿದ್ರೆ ನಿಲ್ತೀನಿ. ಆದರೆ, ಹೈಕಮಾಂಡ್‌ ಎರಡು ಕ್ಷೇತ್ರದಲ್ಲಿ ನಿಲ್ಲಿ ಅಂತ ಹೇಳುವ ಸಾಧ್ಯತೆ ಕಡಿಮೆ ಎಂದರು ಸಿದ್ದರಾಮಯ್ಯ. ʻʻಬಾದಾಮಿಯಿಂದ ನನಗೆ ಒತ್ತಡ ಇದೆ, ಕೋಲಾರ ನಾಯಕರಿಂದ ಕೂಡಾ ಒತ್ತಡ ಇದೆʼʼ ಎಂದು ತಿಳಿಸಿದರು.

ಇದನ್ನೂ ಓದಿ : Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸ್ಪಷ್ಟ ಸಲಹೆ

ಕರ್ನಾಟಕ

Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

Murder Case: ತಮಿಳುನಾಡಿನ ಕಾವೇರಿಪಟ್ಟಣಂ ಬಳಿ ನಡು ರಸ್ತೆಯಲ್ಲಿ ದುಷ್ಕರ್ಮಿಗಳ ತಂಡ ಯುವಕನನ್ನು ಅಟ್ಟಾಡಿಸಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದೆ.

VISTARANEWS.COM


on

Edited by

Man killed in attack with deadly weapons near Kaveripatnam
Koo

ಬೆಂಗಳೂರು ಗ್ರಾಮಾಂತರ: ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಾವೇರಿಪಟ್ಟಣಂ ಬಳಿಯ ಕೃಷ್ಣಗಿರಿ ಡ್ಯಾಂ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ದುಷ್ಕರ್ಮಿಗಳ ತಂಡ ನಡುರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ (Murder Case) ಮಾಡಿದೆ.

ಪ್ರೇಮ ಪ್ರಕರಣದಲ್ಲಿ ಯುವಕನ್ನು ಮೂವರು ಯುವಕರ ತಂಡ ಕೊಲೆ ಮಾಡಿದೆ. ಇತ್ತೀಚೆಗೆ ಯುವತಿಯನ್ನು ಪ್ರೀತಿಸಿ ಮೃತ ಯುವಕ ಮದುವೆಯಾಗಿದ್ದ. ಹೀಗಾಗಿ ಯುವತಿ ಕಡೆಯವರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೃಷ್ಣಗಿರಿ ಡ್ಯಾಂ ಸರ್ವಿಸ್ ರಸ್ತೆಯಲ್ಲಿ ಯುವಕ ಹೋಗುತ್ತಿದ್ದಾಗ ಅಡ್ಡಗಟ್ಟಿರುವ ಆರೋಪಿಗಳು, ತಲ್ವಾರ್‌ನಿಂದ ಹಲ್ಲೆ ನಡೆಸಿದ್ದರಿಂದ ತಲೆ ಹಾಗೂ ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿ ಯುವಕ ಮೃತಪಟ್ಟಿದ್ದಾನೆ. ಕೊಲೆಯ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರ ಸಿದ್ಧತೆ

ಬೆಂಗಳೂರು: ಕಳೆದ ಜನವರಿ 10 ರಂದು ನಾಗವಾರ ಬಳಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

ಲೋಹಿತ್ ಎಂಬುವವರು ತಮ್ಮ ಬೈಕ್‌ನಲ್ಲಿ ಪತ್ನಿ ತೇಜಸ್ವಿನಿ ಹಾಗೂ ಮಗ ವಿಹಾನ್ ಜತೆ ಬೈಕ್‌ನಲ್ಲಿ ಕೆ.ಆರ್.ಪುರಂ ಕಡೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ನಾಗವಾರ ಬಳಿ ಮೆಟ್ರೊ ಪಿಲ್ಲರ್ ಬೈಕ್ ಮೇಲೆ ಬಿದ್ದು ತಾಯಿ ತೇಜಸ್ವಿನಿ ಹಾಗೂ ಮಗ ವಿಹಾನ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಮೃತ ತೇಜಸ್ವಿನಿ ಪತಿ ಲೋಹಿತ್ ಗೋವಿಂದಪುರ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ | Road accident : ಬೈಕ್‌- ಲಾರಿ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

ಲೋಹಿತ್ ನೀಡಿದ ದೂರಿನನ್ವಯ ಸೈಟ್ ಎಂಜಿನಿಯರ್, ಮೆಟ್ರೊ ಕಂಟ್ರಾಕ್ಟರ್, ಸೈಟ್ ಇಂಚಾರ್ಜ್, ಬಿಎಂಆರ್‌ಸಿಎಲ್ ಅಧಿಕಾರಿಗಳು ಸೇರಿ 8 ಮಂದಿ ವಿರುದ್ಧ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆಯನ್ನು ಗೋವಿಂದಪುರ ಪೊಲೀಸರು ಪೂರ್ಣಗೊಳಿಸಿದ್ದಾರೆ. ಕೇಸ್ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಗೋವಿಂದಪುರ ಪೊಲೀಸರ ವರದಿಯನ್ನು ಖುದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಮುಖ ಅಂಶಗಳನ್ನು ಪರಿಶೀಲನೆ ಮಾಡಲಿದ್ದಾರೆ. ಪೊಲೀಸರು ಪ್ರಮುಖವಾಗಿ ಎರಡು ಅಂಶಗಳ ಮೇಲೆ ಒತ್ತು ಕೊಟ್ಟು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ | Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

ಮೆಟ್ರೋ ಪಿಲ್ಲರ್ ದುರಂತದಲ್ಲಿ ಮೊದಲಿಗೆ ಮೆಟ್ರೋ ಪಿಲ್ಲರ್‌ನ ಪ್ಲಾನ್ ಹಾಗೂ ಎಕ್ಸಿಕ್ಯೂಟಿಂಗ್. ಪಿಲ್ಲರ್ ಬಳಿ ಕೈಗೊಂಡಿದ್ದ ಸುರಕ್ಷತಾ ಕ್ರಮಗಳು. ಸುರಕ್ಷತೆ ಕೈಗೊಳ್ಳಲು ನಿರ್ಲಕ್ಷ್ಯ ಕೈಗೊಂಡಿರುವುದು ಬೆಳಕಿಗೆ ಬಂದಿದೆ. ಸುರಕ್ಷತಾ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಜೆಕ್ಟ್ ಮ್ಯಾನೇಜರ್‌ಗೆ ಇದ್ದು ಪ್ರಾಜೆಕ್ಟ್ ಹೆಡ್‌ಗೆ ಎಲ್ಲರನ್ನೂ ನಿರ್ಧರಿಸುವ ಅಧಿಕಾರವಿದೆ. ಆದರೆ, ಸುರಕ್ಷತಾ ಮುತುವರ್ಜಿ ವಹಿಸದೇ ದುರ್ಘಟನೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಹೀಗೆ ಸುಮಾರು 9 ಮಂದಿ ಅಧಿಕಾರಿಗಳನ್ನು ಹೊಣೆಯಾಗಿಸಿ ತನಿಖೆ ನಡೆಸಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.

Continue Reading

ಕರ್ನಾಟಕ

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

Edited by

vistara top 10 news siddaramaiah constituency confusion continues to congress first list on wednesday and more news
Koo

1. Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!
ʻʻಕೋಲಾರ ಸುರಕ್ಷಿತ ಅಲ್ಲ ಎಂಬ ವರದಿಗಳಿವೆ. ಹೀಗಾಗಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿʼʼ ಎಂಬ ಹೈಕಮಾಂಡ್‌ ಸಂದೇಶದ ಬಳಿಕ ಅಡಕತ್ತರಿಯಲ್ಲಿ ಸಿಲುಕಿರುವ ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಅಭಿಮಾನಿಗಳನ್ನು ಸಮಾಧಾನ ಮಾಡಲು ʻಫ್ಯಾಮಿಲಿ ಅಸ್ತ್ರʼ ಪ್ರಯೋಗ ಮಾಡಿದ್ದಾರೆ. ನಾನು ಹೆಂಡತಿ ಮತ್ತು ಮಗನ ಜತೆ ಚರ್ಚೆ ಮಾಡಿ ಗುರುವಾರ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ (Karnataka Elections) ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಳೆದ ಎರಡು ತಿಂಗಳಲ್ಲಿ ಬರೊಬ್ಬರಿ 13 ಬಾರಿ ತಮ್ಮ ಕ್ಷೇತ್ರ ಶಿಗ್ಗಾಂವಿಗೆ ಪ್ರವಾಸ ಮಾಡಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

3. Nitin Gadkari : ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?
ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Amritpal Singh: 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ? ಪಂಜಾಬ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ
ಖಲಿಸ್ತಾನಿಗಳ ಪರ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಅಮೃತ್‌ಪಾಲ್‌ ಸಿಂಗ್‌ (Amritpal Singh) ಬಂಧನಕ್ಕಾಗಿ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆತನನ್ನು ಬಂಧಿಸಲು ರಾಜ್ಯದ ಪೊಲೀಸರು ಹರಸಾಹಸಪಡುತ್ತಿದ್ದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಆತನ ಆಪ್ತರ ಬಂಧನ, ಕಾರು ವಶ, ಶಸ್ತ್ರಾಸ್ತ್ರಗಳ ಜಪ್ತಿ ಮಾತ್ರ ಸಾಧ್ಯವಾಗಿದೆ. ಇನ್ನು ಬಂಧನ ಕಾರ್ಯಾಚರಣೆ ಕುರಿತು ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election: ಯುಗಾದಿಗೆ ಕಾಂಗ್ರೆಸ್‌ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್‌
ಈಗಾಗಲೆ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಎರಡು ಸಭೆಗಳನ್ನು ನಡೆಸಿರುವ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣೆಯ ಮೊದಲ ಪಟ್ಟಿಯನ್ನು ಯುಗಾದಿ ದಿನವಾದ ಬುಧವಾರ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಮಾಜಿ ಸಚಿವ ಹಾಗೂ ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಕೆ.ಜೆ. ಜಾರ್ಜ್‌ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಒಟ್ಟು 155 ಲಕ್ಷ ಕೋಟಿ ರೂ. ಸಾಲ ಇದೆ ಎಂದ ಸೀತಾರಾಮನ್, ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ಸಾಲ?
ಭಾರತ ಸರ್ಕಾರ (Indian Government) ಮಾಡಿರುವ ಒಟ್ಟು ಸಾಲ ಎಷ್ಟಾಗಿದೆ ಗೊತ್ತಾ? ಬರೋಬ್ಬರಿ 155.8 ಲಕ್ಷ ಕೋಟಿ ರೂಪಾಯಿ. ಅಂದರೆ, ನಮ್ಮ ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ ಈ ಮೊತ್ತ! ಅಂದ ಹಾಗೆ, ಈ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸೋಮವಾರ ಲೋಕಸಭೆಗೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Zakir Naik: ಒಮಾನ್‌ನಿಂದ ಜಾಕೀರ್‌ ನಾಯ್ಕ್‌ ಗಡಿಪಾರು, ಮೂಲಭೂತವಾದಿಯ ಬಂಧನಕ್ಕೆ ಭಾರತ ಮುಹೂರ್ತ ಫಿಕ್ಸ್‌?
ಇಸ್ಲಾಮಿಕ್‌ ಮೂಲಭೂತವಾದವನ್ನು ಪಸರಿಸುವುದು, ಉಗ್ರರಿಗೆ ಹಣಕಾಸು ನೆರವು ನೀಡುವುದು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಭಾಷಣಗಳಿಂದ ಸಂಕಷ್ಟಕ್ಕೆ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ವಿವಾದಿತ ಧರ್ಮಗುರು ಜಾಕೀರ್‌ ನಾಯ್ಕ್‌ನನ್ನು (Zakir Naik) ಬಂಧಿಸಲು ಭಾರತ ಮುಹೂರ್ತ ಫಿಕ್ಸ್‌ ಮಾಡಿದೆ. ಇಸ್ಲಾಮಿಕ್‌ ಮೂಲಭೂತವಾದಿಯನ್ನು ಗಡಿಪಾರು ಮಾಡಲು ಒಮಾನ್‌ ಸರ್ಕಾರದ ಜತೆ ಭಾರತ ಮಾತುಕತೆ ನಡೆಸುತ್ತಿದೆ. ಅಲ್ಲಿಯೇ ಈತನ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಒಮಾನ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Modi in Karnataka: ಬೈಯಪ್ಪನಹಳ್ಳಿ-ಕೆ.ಆರ್‌. ಪುರ ಕಾಮಗಾರಿ ಮುಗಿದಿಲ್ಲ: ಮೋದಿಯಿಂದ ಅಪೂರ್ಣ ಮೆಟ್ರೊ ಕಾಮಗಾರಿ ಉದ್ಘಾಟನೆ ಎಂದ ಕಾಂಗ್ರೆಸ್‌
ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 25 ರಂದು ಬೆಂಗಳೂರಿನಲ್ಲಿ ಕೆ.ಆರ್.‌ ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ರೈಲು ಮಾರ್ಗವನ್ನು ಉದ್ಘಾಟಿಸುವ ಕಾರ್ಯಕ್ರಮವಿದೆ. ಆದರೆ ಈ ಮಾರ್ಗ ಇನ್ನೂ ಅಪೂರ್ಣವಾಗಿದೆ ಹಾಗೂ ಹಿಂದಿನ ನಿಲ್ದಾಣದೊಂದಿಗೆ ಸಂಪರ್ಕವೇ ಸಾಧ್ಯವಾಗಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Actor Chetan Ahimsa : ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌; ನಟ ಚೇತನ್‌ ಅಹಿಂಸಾ ಅರೆಸ್ಟ್‌
ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟ ಚೇತನ್‌ ಅಹಿಂಸಾ (Actor Chetan Ahimsa) ಅವರನ್ನು ಮಂಗಳವಾರ ಮುಂಜಾನೆ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಅವರು ಹಿಂದು ಧರ್ವವನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ಸೋಮವಾರ ರಾತ್ರಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಶೇಷಾದ್ರಿಪುರಂ ಪೊಲೀಸರು ಮಂಗಳವಾರ ಬೆಳಗ್ಗಿನ ಜಾವ ಮನೆಯಿಂದ ಬಂಧಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು
ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭದಲ್ಲಿ ಮಗಳು ಧೃತಿಗೆಡದೆ, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ (Brave daughter) ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ. ಮತ್ತಷ್ಟು ವೈರಲ್‌ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Rupert Murdoch: 92ನೇ ವಯಸ್ಸಲ್ಲಿ ಕೊನೇ ಪ್ರೀತಿ ಕಂಡುಕೊಂಡ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್; ಶೀಘ್ರದಲ್ಲೇ 5ನೇ ಮದುವೆ
  2. WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ
  3. Pathaan Film: ಒಟಿಟಿಯಲ್ಲೂ ತೆರೆಕಾಣಲು ಸಜ್ಜಾಗಿದೆ ಪಠಾಣ್​​; ಅಮೇಜಾನ್​ ಪ್ರೈಮ್​​ನಲ್ಲಿ ಈ ದಿನಾಂಕದಂದು ಬಿಡುಗಡೆ
  4. BJP Important Party: ಜಗತ್ತಿನಲ್ಲೇ ಬಿಜೆಪಿ ಪ್ರಮುಖ ಪಕ್ಷ, 2024ರಲ್ಲೂ ಗೆಲುವು; ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ
  5. ಪಾಟ್ನಾ ರೈಲ್ವೆ ಸ್ಟೇಶನ್​​ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಆಗಿದ್ದಕ್ಕೆ ಫುಲ್ ಖುಷಿಯಾದ ಪೋರ್ನ್​ ಸ್ಟಾರ್​; ಅದು ನಂದೇ ಎಂದ ಕೇಂದ್ರಾ ಲಸ್ಟ್​
  6. Tipu Sultan: ಕಾಂಗ್ರೆಸ್ ನನ್ನನ್ನು ನಂಜೇಗೌಡರಿಗೆ ಹೋಲಿಕೆ ಮಾಡಿರುವುದು ಹೆಮ್ಮೆಯ ವಿಚಾರ: ಸಿ.ಟಿ. ರವಿ
Continue Reading

ಕರ್ನಾಟಕ

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

ರಿಲಯನ್ಸ್ ಕಂಪನಿಯ ಜಿಯೋ ದೇಶಾದ್ಯಂತ ತನ್ನ 5ಜಿ ಸೇವೆಯನ್ನು ವಿಸ್ತರಿಸುತ್ತದೆ. ಈವರೆಗೆ ಒಟ್ಟಾರೆ 406 ನಗರಗಳಲ್ಲಿ 5ಜಿ ಸೇವೆ ದೊರೆಯುತ್ತಿದೆ. ಈಗ ಕರ್ನಾಟಕದ ಕೆಜಿಎಫ್‌ ನಗರದಲ್ಲಿ ಲಾಂಚ್ ಮಾಡಲಾಗಿದೆ(Jio True 5G).

VISTARANEWS.COM


on

Edited by

Jio True 5G service launched in 41 cities including KGFs robertsonpet
Koo

ಬೆಂಗಳೂರು: ಕರ್ನಾಟಕದ ಕೋಲಾರ ಜಿಲ್ಲೆಯ ಕೆಜಿಎಫ್‌ನ ರಾಬರ್ಟಸನ್‌ಪೇಟೆ ಸೇರಿದಂತೆ ದೇಶದ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 41 ಹೆಚ್ಚುವರಿ ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಗಳನ್ನು (Jio True 5G) ಮಂಗಳವಾರ ಪ್ರಾರಂಭಿಸಿದೆ. ರಿಲಯನ್ಸ್ ಜಿಯೋ ಭಾರತದ ಡಿಜಿಟಲ್ ರೂಪಾಂತರದ ಕಡೆಗೆ ದಣಿವರಿಯದೆ ಕೆಲಸ ಮಾಡುತ್ತಿದೆ ಮತ್ತು ಈ ನಗರಗಳಲ್ಲಿ ಹೆಚ್ಚಿನವುಗಳಲ್ಲಿ ಟ್ರೂ 5ಜಿ ಸೇವೆಗಳನ್ನು ವಿಸ್ತರಿಸಿದ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಆಗಿದೆ. ಇದರೊಂದಿಗೆ ದೇಶದ 406 ನಗರಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.

ಜಿಯೋ ತನ್ನ ಸುಧಾರಿತ ಟ್ರೂ 5ಜಿ ಸೇವೆಗಳನ್ನು ಶೀಘ್ರವಾಗಿ ಹೊರ ತರುತ್ತಿದೆ. ಆದರೂ ಗ್ರಾಹಕರಿಗೆ ಬಹು ನೆಚ್ಚಿನ ಆಪರೇಟರ್ ಆದ ಜಿಯೋ ಉತ್ತಮ ಗ್ರಾಹಕ ಅನುಭವವನ್ನು ಖಚಿತಪಡಿಸಿಕೊಳ್ಳಲು ಆ ನಗರವು ಅದರ ಟ್ರೂ 5ಜಿ ನೆಟ್‌ವರ್ಕ್‌ನಿಂದ ಗಣನೀಯ ಪ್ರಮಾಣದಲ್ಲಿ ಕವರ್ ಆದಾಗ ಮಾತ್ರ ಟ್ರೂ 5ಜಿ ಅನ್ನು ಹೊಸ ನಗರಕ್ಕೆ ವಿಸ್ತರಿಸುತ್ತದೆ. ಜಿಯೋ ಟ್ರೂ 5ಜಿ ಅನುಭವವನ್ನು ಈಗಾಗಲೇ ನೂರಾರು ನಗರಗಳಲ್ಲಿ ಲಕ್ಷಾಂತರ ಬಳಕೆದಾರರು ಪಡೆಯುತ್ತಿದ್ದಾರೆ.

16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 41 ನಗರಗಳೆಂದರೆ ಅದೋನಿ, ಬದ್ವೇಲ್, ಚಿಲಕಲೂರಿಪೇಟೆ, ಗುಡಿವಾಡ, ಕದಿರಿ, ನರಸಾಪುರ, ರಾಯಚೋಟಿ, ಶ್ರೀಕಾಳಹಸ್ತಿ, ತಾಡೆಪಲ್ಲಿಗುಡೆಂ (ಆಂಧ್ರಪ್ರದೇಶ), ಮಾರ್ಗೋವಾ (ಗೋವಾ) ಫತೇಹಾಬಾದ್, ಗೋಹಾನ, ಹಂಸಿ, ನರ್ನಾಲ್, ಪಲ್ವಾಲ್ (ಹರಿಯಾಣ), ಪೌಂಟಾ ಸಾಹಿಬ್ (ಹಿಮಾಚಲ ಪ್ರದೇಶ), ರಜೌರಿ (ಜಮ್ಮು ಮತ್ತು ಕಾಶ್ಮೀರ) ದುಮ್ಕಾ (ಜಾರ್ಖಂಡ್), ರಾಬರ್ಟ್‌ಸನ್‌ಪೇಟೆ(ಕರ್ನಾಟಕ), ಕಾಞಂಗಾಡ್, ನೆಡುಮಂಗಡ, ತಳಿಪರಂಬ, ತಲಸ್ಸೆರಿ, ತಿರುವಲ್ಲಾ (ಕೇರಳ), ಬೇತುಲ್, ವಿದಿಶಾ, ದೇವಾಸ್, (ಮಧ್ಯಪ್ರದೇಶ) ಭಂಡಾರಾ, ವಾರ್ಧಾ (ಮಹಾರಾಷ್ಟ್ರ), ಲುಂಗ್ಲೇ (ಮಿಜೋರಾಂ), ಬ್ಯಾಸನಗರ, ರಾಯಗಡ (ಒಡಿಶಾ), ಹೋಶಿಯಾರ್‌ಪುರ (ಪಂಜಾಬ್), ಟೋಂಕ್ (ರಾಜಸ್ಥಾನ), ಕಾರೈಕುಡಿ, ಕೃಷ್ಣಗಿರಿ, ರಾಣಿಪೇಟ್, ಥೇನಿ ಅಲ್ಲಿನಗರಂ, ಉದಗಮಂಡಲಂ, ವಾನಂಬಾಡಿ (ತಮಿಳುನಾಡು) ಮತ್ತು ಕುಮಾರ್‌ಘಾಟ್ (ತ್ರಿಪುರ)

ಇಂದಿನ ಟ್ರೂ 5ಜಿ ಆರಂಭದ ಕುರಿತು ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, “ದೇಶಾದ್ಯಂತ ಲಕ್ಷಾಂತರ ಬಳಕೆದಾರರು ಜಿಯೋ ಟ್ರೂ 5ಜಿ ಬಳಸಲು ಪ್ರಾರಂಭಿಸಿದ್ದಾರೆ. ನಮ್ಮ ನೆಟ್‌ವರ್ಕ್‌ನ ಬಲವು ನಮ್ಮ ಗ್ರಾಹಕರ ಜೀವನವನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಜಿಯೋ ತನ್ನ ಟ್ರೂ 5ಜಿ ವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ. ನಾವು ದೇಶದ ಹೆಚ್ಚಿನ ಭಾಗವನ್ನು ಆವರಿಸಿದ್ದೇವೆ, ಇದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.

“2023ರಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ಪರಿವರ್ತನೆಯ ಪ್ರಯೋಜನಗಳನ್ನು ಪ್ರತಿ ಭಾರತೀಯ ಆನಂದಿಸಬೇಕೆಂದು ನಾವು ಬಯಸುತ್ತೇವೆ. ರಾಜ್ಯ ಸರ್ಕಾರಗಳು ಮತ್ತು ಆಡಳಿತಗಾರರು ತಮ್ಮ ಪ್ರದೇಶಗಳನ್ನು ಡಿಜಿಟಲೈಸ್ ಮಾಡುವುದಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ,” ಎಂದಿದ್ದಾರೆ.

ಇದನ್ನೂ ಓದಿ: ಈಗ ದೇಶದ 304 ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಲಭ್ಯ, ಕೋಲಾರದಲ್ಲೂ ಲಾಂಚ್

ಮಾರ್ಚ್ 21ರಿಂದ ಈ 41 ನಗರಗಳಲ್ಲಿರುವ ಜಿಯೋ ಬಳಕೆದಾರರಿಗೆ ಜಿಯೋ ವೆಲ್ಕಮ್ ಆಫರ್ ಅನ್ನು ಪ್ರಯತ್ನಿಸಲು ಆಹ್ವಾನಿಸಲಾಗುತ್ತದೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಬಹುದು.

Continue Reading

ಕರ್ನಾಟಕ

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

ಬೆಳಗಾವಿಯ ಸವದತ್ತಿ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿಯೊಂದು ಬೈಕ್‌, ಕಾರು ಮತ್ತು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.

VISTARANEWS.COM


on

Edited by

savadatti accident
Koo

ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದ ಎಪಿಎಂಸಿ ಆವರಣದ ಎದುರು ಲಾರಿ, ಬೈಕ್, ಕಾರು, ಆಟೋ ಮಧ್ಯೆ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.

ಬೈಕ್ ಸವಾರ, ಸವದತ್ತಿ ತಾಲೂಕಿನ ಕುರವಿನಕೊಪ್ಪ ಗ್ರಾಮದ ಸೋಮಲಿಂಗ ಹೂಗಾರ (33) ಮತ್ತು ಸವದತ್ತಿ ತಾಲೂಕಿನ ಮದಿಗೇರಿ ಗ್ರಾಮದ ಕಾರ್ತಿಕ್ ಕುರಬಗಟ್ಟಿ (9) ಮೃತಪಟ್ಟ ದುರ್ದೈವಿಗಳು. ಬೈಕ್ ಮೇಲಿದ್ದ ಇನ್ನಿಬ್ಬರಾದ ಮಂಜುಳಾ ಕುರಬಗಟ್ಟಿ (36), ಮಲ್ಲವ್ವ ಕುರಬಗಟ್ಟಿ (11) ಅವರಿಗೆ ಗಂಭೀರ ಗಾಯಗಳಾಗಿವೆ.

ಧಾರವಾಡದಿಂದ ಸವದತ್ತಿ ಕಡೆಗೆ ಬರುತ್ತಿದ್ದ ಲಾರಿ ಬ್ರೇಕ್ ಫೇಲ್ ಆಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಬ್ರೇಕ್‌ ಫೇಲ್‌ ಆದ ಲಾರಿ ಮೊದಲು ಸವದತ್ತಿ ಪಟ್ಟಣದ ಕಡೆಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಪಕ್ಕ‌ ನಿಂತಿದ್ದ ಕಾರು ಮತ್ತು ಆಟೋ ರಿಕ್ಷಾಗೂ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬೈಕ್ ಸವಾರನ ಮೃತದೇಹ ಲಾರಿ ಚಕ್ರದ ಕೆಳಗೆ ಸಿಲುಕಿತ್ತು. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿದರು. ಸ್ಥಳಕ್ಕೆ ಸವದತ್ತಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading
Advertisement
Man killed in attack with deadly weapons near Kaveripatnam
ಕರ್ನಾಟಕ24 seconds ago

Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

smartphone
ವಾಣಿಜ್ಯ7 mins ago

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಕರ್ನಾಟಕ13 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

Jio True 5G service launched in 41 cities including KGF's robertsonpet
ಕರ್ನಾಟಕ21 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್35 mins ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ43 mins ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ48 mins ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ50 mins ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

Delhi team won the toss against UP and chose fielding
ಕ್ರಿಕೆಟ್52 mins ago

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

savadatti accident
ಕರ್ನಾಟಕ56 mins ago

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!