B.S. Yediyurappa Birthday: ಬಿ.ಎಸ್‌. ಯಡಿಯೂರ್‌ʼಅಪ್ಪʼ ಕುರಿತು ಐವರು ಮಕ್ಕಳ ಭಾವನಾತ್ಮಕ ನುಡಿಗಳಿವು - Vistara News

ಪ್ರಮುಖ ಸುದ್ದಿ

B.S. Yediyurappa Birthday: ಬಿ.ಎಸ್‌. ಯಡಿಯೂರ್‌ʼಅಪ್ಪʼ ಕುರಿತು ಐವರು ಮಕ್ಕಳ ಭಾವನಾತ್ಮಕ ನುಡಿಗಳಿವು

ಊರಿಗೆಲ್ಲರಿಗೂ ಮಾಜಿ ಸಿಎಂ, ಜನನಾಯಕ ಆದರೂ ಆದರೂ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಮಕ್ಕಳಿಗೆ ಇಂದಿಗೂ ಪ್ರೀತಿಯ ʼಅಣ್ಣʼ. ತಂದೆಯ ಕುರಿತು ಮಕ್ಕಳ ನೆನಪಿನ ಬುತ್ತಿ ಇಲ್ಲಿದೆ.

VISTARANEWS.COM


on

children shares emtion on the occation of b-s-yediyurappa-birthday
ಸಂಗ್ರಹ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ 80ನೇ ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮೊದಲುಗೊಂಡು ನಾಡಿನ ಸಾಮಾನ್ಯ ಜನರವರೆಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಹೋರಾಟವನ್ನೇ ಜೀವನವಾಗಿಸಿಕೊಂಡ ಯಡಿಯೂರಪ್ಪ ಕುರಿತು ರಾಜಕೀಯ ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ, ಯಡಿಯೂರಪ್ಪ ಅವರ ಕುಟುಂಬದವರು ಏನು ಹೇಳುತ್ತಾರೆ ಎನ್ನುವುದು ಮುಖ್ಯ. ಯಡಿಯೂರಪ್ಪ ಅವರ ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯ ಕುರಿತು ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಬಿ.ವೈ.‌ ಪದ್ಮಾವತಿ, ಜ್ಯೇಷ್ಠ ಪುತ್ರಿ
ನಾವು ಮಕ್ಕಳೆಲ್ಲರಿಗೂ ತಂದೆಯವರನ್ನು ಅಣ್ಣ ಎಂದು ಕರೆದೇ ಅಭ್ಯಾಸ. ಇದು ನಮ್ಮ ಸೋದರತ್ತೆಯಿಂದ ರೂಢಿಗೆ ಬಂದಿತು. ಚಿಕ್ಕಂದಿನಿಂದಲೂ ನಮಗೆಲ್ಲಾ ಬೇರೆಯವರ ಹಾಗೆ ಪ್ರತಿ ದಿವಸ ತಂದೆಯವರ ಜೊತೆಯೇ ಇರುವ ಅವಕಾಶ ಸಿಗಲಿಲ್ಲ. ಅದಕ್ಕೆಲ್ಲ ನಮ್ಮ ತಂದೆಯವರ ಕೆಲಸದ ರೀತಿಯೇ ಕಾರಣ. ಬಹಳಷ್ಟು ಸಮಯ ಅವರು ರಾಜಕೀಯ ಕಾರಣಗಳಿಗಾಗಿ ಪ್ರವಾಸದಲ್ಲಿರಬೇಕಾಗುತ್ತಿತ್ತು. ಹಾಗಾಗಿ ಮನೆಯ ಜವಾಬ್ದಾರಿ ಸಂಪೂರ್ಣವಾಗಿ ಅಮ್ಮನದೇ ಆಗಿತ್ತು. ಆದರೂ ಸಹ ನಮ್ಮ ತಂದೆಯವರಿಗೆ ತಮ್ಮ ಮಕ್ಕಳ ಬಗ್ಗೆ ಇದ್ದ ಕಾಳಜಿ ಕಡಿಮೆ ಏನಿರಲಿಲ್ಲ. ಆಯಾ ಕಾಲಕ್ಕೆ ಅವರ ಜವಾಬ್ದಾರಿಯನ್ನು ಯಾವುದೇ ಕೊರತೆಯಾಗದಂತೆ ನಿಭಾಯಿಸಿದರು. ನಾವು ಸ್ವಲ್ಪ ಸಮಯ ಒಟ್ಟಿಗೆ ಇದ್ದರೂ ನಾವೂ ಯಾವಾಗಲೂ ಅವರಿಂದ ಸುರಕ್ಷಿತವಾಗಿರುವ ಭಾವನೆ. ಈಗಲೂ ಸಹ ತಾವು ಎಷ್ಟೇ ಕಷ್ಟಪಟ್ಟರೂ ಕುಟುಂಬದಲ್ಲಿ ಎಲ್ಲರೂ ನೆಮ್ಮದಿಯಿಂದಿರಬೇಕು, ಸುಖದಿಂದಿರಬೇಕು ಎಂದು ಆಸೆ ಪಡುವವರು, ತಮಗೆ ಏನೇ ಬೇಸರವಿರಲಿ, ದುಃಖವಿರಲಿ ತಮ್ಮಲ್ಲೇ ಇಟ್ಟುಕೊಂಡು ಸುಮ್ಮನೆ ಇದ್ದುಬಿಡುತ್ತಾರೆ.

ಒಂದು ವಿಷಯ ನಾನೀಗ ಬರೆಯಬೇಕೆನಿಸುತ್ತಿದೆ. ಅದು ಅಮ್ಮ ಅಪ್ಪಾಜಿಯ ಸಿನಿಮಾ ಪ್ರೀತಿ. ಇಬ್ಬರು ಬಿಡುವು ಸಿಕ್ಕಾಗ ಸದ್ದಿಲ್ಲದೆ ಚಿತ್ರ ಮಂದಿರಕ್ಕೆ ಹೊರಟು ಬಿಡುತ್ತಿದ್ದರು. ಕೆಲವು ಚಲನಚಿತ್ರಗಳಿಗೆ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಕಲ್ಪನಾರ “ಬೆಳ್ಳಿಮೋಡ’ ಆಡ್ವಾಣಿಗೆ ಬಹಳ ಇಷ್ಟವಾದ ಚಿತ್ರ.

1999ರಲ್ಲಿ ನಡೆದ ಚುನಾವಣೆಯಲ್ಲಿ ತಂದೆಯವರು ಸೋಲನ್ನನುಭವಿಸಬೇಕಾಗಿ ಬಂತು. ಆಗ ದೊರೆತ ಬಿಡುವಿನಲ್ಲಿ ಬಹಳಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಉಪಯೋಗಿಸದೇ ಖಾಲಿ ಬಿಟ್ಟಿದ್ದ ಜಮೀನನ್ನು ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ಪುತ್ರ ರಾಘವೇಂದ್ರನನ್ನೂ ಜೊತೆಗಿಟ್ಟುಕೊಂಡು ಹದ ಮಾಡಿಸಿದರು. ಅದು ಈಗ ನಂದನವನವಾಗಿದೆ. ಯಾವಾಗಲೂ ಅಷ್ಟೇ, ಅವರೊಬ್ಬ ಉತ್ತಮ ಗೃಹಸ್ಥ. ಪ್ರತಿನಿತ್ಯ ಬೆಳಿಗ್ಗೆ ಜಮೀನಿಗೆ ಭೇಟಿ ಕೊಟ್ಟು ಅಲ್ಲಿಯ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಫಸಲು ಕೈಗೆ ಬಂದು ಹಣ ಮಾಡುವಾಗ ಒಂದೊಂದು ವಾರ ಮನೆಗೆ ಬರದೆ ತೋಟದ ಮನೆಯಲ್ಲಿಯೇ ಇದ್ದು ಬಿಡುತ್ತಿದ್ದರು, ಮನೆಯಿಂದ ಊಟ ತಿಂಡಿ ರವಾನೆಯಾಗುತ್ತಿತ್ತು.

ಬಿ.ವೈ. ಅರುಣಾದೇವಿ, ದ್ವಿತೀಯ ಪುತ್ರಿ
ನನ್ನ ತಂದೆಯೇ ನನ್ನ ಬದುಕಿನ ʼಹೀರೊʼ, ʼಗಾಡ್‌ ಫಾದರ್‌ʼ- ಹೀಗೆ ಎಲ್ಲ ಏಳಿಗೆಗೆ ಅವರೇ ಕಾರಣ. ನನ್ನ ಅಮ್ಮ ಮೃದು ಸ್ವಭಾವದವರು. ತಂದೆ ಇದಕ್ಕೆ ತದ್ವಿರುದ್ಧ. ನಾನು ಆರು ವರ್ಷದವಳಿದ್ದಾಗಿನ ನೆನಪಿಗೂ, ಇಂದಿನ ತಂದೆ ಯಡಿಯೂರಪ್ಪ ಅವರ ಬದುಕನ್ನು ನೋಡಿದರೆ ಒಂದೇ ತೆರನಾಗಿದೆ. ಬೆಂಗಳೂರಿನಿಂದ ಶಿಕಾರಿಪುರಕ್ಕೆ ಬೆಳಗಿನ ಜಾವ ಬಂದಾಗ ಮನೆ ಗೇಟ್‌ನಿಂದಲೇ ʼಮೈತ್ರಾʼ ಎಂದು ಕೂಗಿಕೊಂಡೇ ಬಾಗಿಲು ಬಡಿಯುತ್ತಿದ್ದರು ಎಂದು ನನ್ನಮ್ಮ ಸಂಕೋಚದಿಂದ ನಮ್ಮೊಂದಿಗೆ ಹೇಳುತ್ತಿದ್ದರು. ಅಪ್ಪನ ಬಾಯಲ್ಲಿ ಅಮ್ಮನ ಹೆಸರು ಬಹಳ ಸುಂದರ ಎನ್ನಿಸುತ್ತಿತ್ತು. ಒಮ್ಮೆ ನಾನು 7ನೇ ತರಗತಿಯಲ್ಲಿದ್ದಾಗಆಗತಾನೆ ಸೈಕಲ್‌ ಕಲಿತು ರಸ್ತೆಯಲ್ಲಿ ಚಲಾಯಿಸುತ್ತಿದ್ದೆ. ಸೈಕಲ್‌ ಮೇಲೆ ಕೂಡಬಾರದು ಎಂದು ಅವತ್ತು ಅಪ್ಪ ಗದರಿದ್ದರು. ಆದರೆ ಮಾರನೆಯ ದಿನವೇ, ಸೈಕಲ್‌ ತೆಗೆದುಕೊಂಡು ಹೋಗಿ ತಮ್ಮ ಸ್ನೇಹಿತರನ್ನು ಸಭೆಗೆ ಆಹ್ವಾನಿಸುವಂತೆ ಕಳಿಸಿದ್ದರು. ಇದೇ ಅಪ್ಪ ಉಪಮುಖ್ಯಮಂತ್ರಿಯಾದಾಗ, ಹೆಣ್ಣುಮಕ್ಕಳಿಗೆ ಉಚಿತ ಸೈಕಲ್‌ ಯೋಜನೆ ಜಾರಿ ಮಾಡಿದಾಗ ಈ ಘಟನೆ ನೆನಪಾಯಿತು.

ಭಾವಗೀತೆಗಳನ್ನು ಕೇಳುವುದೆಂದರೆ ಅಪ್ಪನಿಗೆ ತುಂಬಾ ಇಷ್ಟ. ಅಮ್ಮನ ಧ್ವನಿ ಮಧುರವಾಗಿತ್ತು. ಅಮ್ಮನ ಭಾವಗೀತೆಗಳನ್ನು ರೆಕಾರ್ಡ್‌ ಮಾಡಿಡುತ್ತಿದ್ದರು. ಎಲ್ಲಿಗೇ ಪ್ರವಾಸ ಹೋದರೂ ಅಮ್ಮನೊಂದಿಗೇ ಹೋಗುತ್ತಿದ್ದರು. ಬಹಳಷ್ಟು ವಿದೇಶ ಪ್ರವಾಸ ಮಾಡಿದ್ದಾರೆ. ಅಪ್ಪ ನಮಗೆ ತರುತ್ತಿದ್ದ ಬಟ್ಟೆ, ಶೂಗಳ ಕುರಿತು ಬೆಂಗಳೂರಿನಲ್ಲಿ ನಮ್ಮ ಕಾಲೇಜಿನ ಸ್ನೇಹಿತರು ಆಶ್ಚರ್ಯಪಡುತ್ತಿದ್ದರು. ಅವರಿಂದ ದೊರಕಿದ ಸಮಾಜಮುಖಿ ಜೀವನದ ದೃಷ್ಟಿಯ ಕಾರಣದಿಂದಲೇ ಇಂದು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲದಿದ್ದರೆ ನಾನು ಒಬ್ಬ ಗೃಹಿಣಿಯಾಗಷ್ಟೆ ಇರುತ್ತಿದ್ದೆ ಎನ್ನಿಸುತ್ತದೆ.

ಬಿ.ವೈ. ಉಮಾದೇವಿ, ತೃತೀಯ ಪುತ್ರಿ
ತಮ್ಮ ಅರ್ಧ ಶತಮಾನಕ್ಕೂ ಅಧಿಕವಾದ ರಾಜಕೀಯ ಬದುಕಿನಲ್ಲಿ ಶಿಕಾರಿಪುರದ ಮುನಿಸಿಪಲ್‌ ಅಧ್ಯಕ್ಷರಾಗಿ, ಶಾಸಕರಾಗಿ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪ ಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳ ಹುದ್ದೆಯನ್ನೂ ಅಲಂಕರಿಸಿ ಈ ದೇಶಕ್ಕೇ ಚಿರಪರಿಚಿತರಾದರೂ ನನಗೆ ಮಾತ್ರ ನನ್ನ ಪ್ರೀತಿಯ ‘ಅಣ್ಣ’. ಶಾಲೆಯಲ್ಲಿ ಓದುತ್ತಿರುವಾಗ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಿಗೆ ತಂದೆಯವರು ‘ಅತಿಥಿಗಳಾಗಿ ವೇದಿಕೆಯ ಮೇಲಿರುವಾಗ ನನಗೂ ಸ್ವಾಗತ ಭಾಷಣವೋ, ವಂದನಾರ್ಪಣೆಯೋ ಮಾಡುವ ಅವಕಾಶ ಬಂದರೆ, ನನಗೆ ಈ ತಾಲ್ಲೂಕಿನ ಜನಪ್ರಿಯ ಶಾಸಕರಾಗಿರುವ ಶ್ರೀ…… ಎನ್ನಬೇಕಾಗಿರುವ ಅನಿವಾರ್ಯತೆ, ಸ್ವಲ್ಪ ಮುಜುಗರ/ಹಿಂಜರಿಕೆ. ಗೆಳತಿಯರೆಲ್ಲಾ ನಂತರ ತಮಾಷೆ ಮಾಡುತ್ತಿದ್ದುದು ಈಗಲೂ ನೆನಪು.

ಹಾಸ್ಟೆಲ್ಲಿಂದ ಒಮ್ಮೆ ರಜೆಗಾಗಿ ಮನೆಗೆ ಬಂದಿದ್ದೆ. ತಂದೆ ಮನೆಯಲ್ಲಿಯೇ ಕಾರ್ಯಕರ್ತರ ಮೀಟಿಂಗ್ ಕರೆದಿದ್ದರು. ಅಯೋಧ್ಯೆಗೆ ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಹೋಗಲು ಕರಸೇವಕರ ಆಯ್ಕೆ ನಡೆದಿತ್ತು. ನಾನೂ ಬಾಗಿಲ ಹಿಂದೆಯೇ ನಿಂತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಆಗ ತಂದೆಯವರು ಕಾರ್ಯಕರ್ತರಿಗೆ ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಈ ಹೋರಾಟದಲ್ಲಿ ಜೀವ ಕೊಡುವ ಸಂದರ್ಭ ಬಂದರೂ ಬರಬಹುದು. ಹಾಗಾಗಿ ಪೂರ್ತಿ ಧೈರ್ಯ ಇರುವವರು ಮಾತ್ರ ನನ್ನ ಜೊತೆ ಬನ್ನಿ ಎಂದು. ಎಷ್ಟೊಂದು ಸುಲಭವಾಗಿ ಅಣ್ಣ ಈ ಮಾತನ್ನು ಹೇಳುತ್ತಿದ್ದಾರಲ್ಲ ಎಂದು ನನಗೆ ದಿಗ್ಧಮೆಯಾಗಿತ್ತು.

ಅಕ್ಟೋಬರ್ 1, 2004 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತಂದೆಯವರಿಗೆ ಸನ್ಮಾನ ಕಾರ್ಯಕ್ರಮವಿತ್ತು. ವಾಜಪೇಯಿಯವರ ಅಧ್ಯಕ್ಷತೆ. ಕಾರಿನಲ್ಲಿ ನಾನೂ ಕುಳಿತಿದ್ದೆ. ಲಕ್ಷಾಂತರ ಕಾರ್ಯಕರ್ತರು ಸಮಾರಂಭಕ್ಕೆ ಆಗಮಿಸುತ್ತಿದ್ದನ್ನು ನೋಡಿ ತಂದೆಯವರು ಅಮ್ಮನಿಗೆ “ಮೈತ್ರಾ ನಿನ್ನ ಕಾಲ್ಗುಣದಿಂದ ಈ ರೀತಿಯ ಅಪರೂಪದ ಜನಾಭಿಮಾನ ನನ್ನ ಮೇಲೆ ಬಂದಿದೆ,” ಎಂದು ಕಣ್ಣಲ್ಲಿ ನೀರು ತಂದುಕೊಂಡು ಭಾವುಕರಾಗಿ ನುಡಿದಿದ್ದರು.

ಬಿ.ವೈ. ರಾಘವೇಂದ್ರ, ಹಿರಿಯ ಪುತ್ರ
ನನ್ನ ತಂದೆ ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಆರೈಕೆ, ಪೋಷಣೆಗಳಲ್ಲಿ ಹಿಂದೆ ಬಿದ್ದವರಲ್ಲ, ನನಗೆ ಶಿಕ್ಷಣ ಸಮಯದಲ್ಲಿ ಆರೋಗ್ಯ ಹದಗೆಟ್ಟು ಬೆಂಗಳೂರಿನಲ್ಲಿ ಆಸ್ಪತ್ರೆ ಸೇರಿದ್ದೆ. ಆಗ ನನ್ನ ತಾಯಿ ಜೊತೆ ನಿತ್ಯ ಬಂದು ನನ್ನ ಉಪಚರಿಸಿ ಮಮತೆಯ ಮಡಿಲು ನೀಡಿದವರು. ಈಗಲೂ ನನ್ನ ತಾಯಿ ಕಳೆದುಕೊಂಡರೂ ನಿತ್ಯ ತಾಯಿ ಮಮತೆ ತೋರುವ ಮಮಕಾರದ ಮೂರ್ತಿ ಅವರು, ತನ್ನ ಒತ್ತಡದ ಬದುಕಲ್ಲಿ ಕುಟುಂಬವನ್ನೆಂದೂ ಮರೆತವರಲ್ಲ, ನಾವು ಶಿವಮೊಗ್ಗದಲ್ಲಿ ಓದುತ್ತಿದ್ದಾಗ ಶಿಕಾರಿ ಪುರದಿಂದ ಬೆಂಗಳೂರಿಗೆ ಹೋಗುವಾಗ ಪ್ರತೀಬಾರಿ ಬಂದು ನಮ್ಮ ಜೊತೆ ಕಾಲಕಳೆದು ಹೋಗುತ್ತಿದ್ದುದು ನನಗಿನ್ನೂ ಹಸಿರಾದ ನೆನಪು. ಹಾಗೆಯೇ ನನ್ನ ಎಲ್ಲಾ ಅಕ್ಕಂದಿರನ್ನು ತಮ್ಮನನ್ನು ಸಮಾನವಾಗಿ ಪ್ರೀತಿಸಿ ನಮ್ಮ ಜೊತೆ ಮಧುರ ಕ್ಷಣ ಕಳೆಯುತ್ತಲೇ ಮಾಸದಂತೆ ಪಾಠ ಕಲಿಸುತ್ತಿದ್ದ ಅವರ ವ್ಯಕ್ತಿತ್ವ ಅನನ್ಯ.
ಸಂಘಟನೆ ವಿಷಯ ಬಂದಾಗ ನಮ್ಮಣ್ಣ ಶಿಕಾರಿಪುರದಲ್ಲಿ ಪ್ರಾರಂಭಿಸಿದ ಸಣ್ಣ ಸಾರ್ವಜನಿಕ ಗಣಪತಿ ಹಬ್ಬದಿಂದ ರಾಜ್ಯ ಸಂಘಟನೆವರೆಗೆ ಮನೆ-ಮಠ ತೊರೆದು ಹಗಲಿರುಳು ದುಡಿದ, ಪರಿ ನಮಗೆ ಪಾಠವಾಗಿದೆ.

ಎಷ್ಟೋ ಸಾರಿ ಸಂಘಟನೆಗೆ ಹಣದ ಕೊರತೆಯಾದಾಗ ನಮ್ಮ ಮನೆಯಲ್ಲಿದ್ದ ಫಸಲು ಮಾರಿ, ಅಮ್ಮನ ಬಂಗಾರ ಮಾರಿ ಸಂಘಟನೆಯ, ಪಕ್ಷದ ಕೆಲಸ ಮಾಡಿದ್ದು ನಮಗೆ ನೆನಪಿದೆ. ಅವರು ವಿಶ್ರಾಂತಿ ಎಂದರೆ ಪುಸ್ತಕ ಪ್ರೀತಿ, ಜ್ಞಾನಾರ್ಜನೆ, ಅವರ ಹತ್ತಿರ ದೊಡ್ಡ ಪುಸ್ತಕ ಭಂಡಾರವೇ ಇದೆ. ಸಮಯ ಸಿಕ್ಕಾಗಲೆಲ್ಲ ಓದುತ್ತಾರೆ. ತಮ್ಮ ದಿನಚರಿಯ ಪ್ರಸ್ತಕದಲ್ಲಿ ವಿಶಿಷ್ಟ ಜ್ಞಾನದ ಸಾಲುಗಳನ್ನು ದಾಖಲಿಸುತ್ತಾರೆ, ಪ್ರತಿ ದಿನದ ಕಾರ್ಯಕ್ರಮ ಪಟ್ಟಿ, ಕೆಲಸಗಳ ವಿವರಗಳನ್ನು ಈಗಲೂ ದಿನಚರಿಯಲ್ಲಿ ಬರೆದಿಡುತ್ತಾರೆ. ಯಾರಾದರೂ ತಜ್ಞರು ಮಾತನಾಡುವಾಗ ಈಗಲೂ ವೇದಿಕೆಯಲ್ಲೇ ಕುಳಿತು Learning Points ನ್ನು Note ಮಾಡಿಕೊಳ್ಳುತ್ತಾರೆ. ಅವರ ಅಕ್ಷರವೇ ಚೆಂದ, ಪ್ರಯಾಣದಲ್ಲಿ ಬರೆದರೂ ಮುದ್ದಾಗಿ ಬರೆಯುತ್ತಾರೆ… ಅದೇ ನೀತಿಪಾಠ ನನಗೂ ಸಹಾಯಕವಾಗಿದೆ.

ಸೋಲು ಗೆಲುವು, ನೋವು – ನಲಿವು, ಸಂಕಟ ಸಂಭ್ರಮ, ನಗೆ – ಹಗೆ ಎಲ್ಲವನ್ನೂ ಸಮಾನವಾಗಿ ಅನುಭವಿಸಿದವರು ನನ್ನ ತಂದೆ. ಪುರಸಭೆ ಅಧ್ಯಕ್ಷತನದಿಂದ ರಾಜ್ಯದ ಮುಖ್ಯಮಂತ್ರಿಯಾಗುವ ತನಕ ಹಲವು ಏರು – ಪೇರುಗಳನ್ನು ಕಂಡ ಹಿರಿಜೀವ ಅವರದ್ದು. ಅವರ ಪಯಣ, ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಕಂಡಾಗ ನಮಗನಿಸುವುದೇನೆಂದರೆ ನಿಶ್ಚಿತ ಗುರಿ, ನಿರಂತರ ಪರಿಶ್ರಮ, ಪ್ರಾಮಾಣಿಕ ಶ್ರದ್ಧಾವಂತ ನಿರ್ಧಾರಗಳೊಂದಿಗೆ ಉದಾತ್ತ ಧೈರ್ಯವನ್ನು ಎದುರಿಗಿಟ್ಟುಕೊಂಡು ಮುನ್ನಡೆದಾಗ ಯಾವುದೇ ಅಡ್ಡಿ – ಆತಂಕಗಳನ್ನೂ ಜಯಿಸಬಹುದೆಂಬುದು. ಅಂತಹ ಮಾದರಿಯ ಬದುಕೇ ನನಗೆ ದೊರೆತ ದೊಡ್ಡ ಜೀವನ ಪಾಠ, ಅವರು ಕಲಿಸಿದ ಪಾಠಗಳನ್ನು ಸ್ಮರಿಸಿಕೊಳ್ಳುತ್ತೇನೆ. ಅವರ ಆದರ್ಶಗಳನ್ನು ಪಾಲಿಸುತ್ತೇನೆ, ಅವರ ನೀತಿ, ಜೀವನ ಪ್ರೀತಿಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅವರ ದೃಢ ಹೆಜ್ಜೆ, ಗಂಭೀರ ನಡೆ, ಸಾಹಸ ಗಾಥೆಗಳನ್ನು ಧೈಯವಾಗಿಸಿಕೊಂಡು ಮುಂದೆ ಸಾಗುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ನನ್ನ ತಂದೆಯವರು ಸಾಧನೆಯ ಶಿಖರ, ಅವರು ಸವೆದ ಹಾದಿಯಲ್ಲೇ ನನ್ನ ಹೆಜ್ಜೆಗಳು. ಅವರ ಜೀವನ ನಿದರ್ಶನಗಳೇ ನನ್ನ ಬದುಕಿನ ಆದರ್ಶ ಎಂದು ಮನದುಂಬಿ ಸ್ಮರಿಸುತ್ತೇನೆ.

ಬಿ.ವೈ. ವಿಜಯೇಂದ್ರ, ಕಿರಿಯ ಪುತ್ರ
ಸ್ವಂತ ಬದುಕಿನ ಸಿಹಿಯನ್ನು ತ್ಯಾಗ ಮಾಡಿ ಜನಸಾಮಾನ್ಯರ ಬದುಕಿನ ಕಹಿಯನ್ನು ರುಚಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸಲು ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ನನ್ನ ತಂದೆ ನನಗೆ ಮಾದರಿ. ಅವರು ನನ್ನ ಹೀರೋ, ನಾನು ಎದೆಯುಬ್ಬಿಸಿ ಹೇಳಬಲ್ಲ ನಿಜವಾದ ಜನನಾಯಕ – ಬಾಲ್ಯದಿಂದ ತಂದೆಯ ಪ್ರೀತಿ ವಾತ್ಸಲ್ಯದ ಬಂಧನದಲ್ಲಿ ಬೆಳೆದ ನನಗೆ ನನ್ನ ತಂದೆಯಲ್ಲಿ ಕಂಡ ಗುಣ ವಿಶೇಷವಿದೆ.

ಸ್ವಚ್ಛತೆ, ಶಿಸ್ತು, ಡ್ರೆಸ್ ಸೆನ್ಸ್ ಹಾಗೂ ಸಮಯ ಪಾಲನೆಯಲ್ಲಿ ನನಗವರೇ ರೋಲ್ ಮಾಡೆಲ್. ಪ್ರತಿದಿನ ಸ್ನಾರದ ನಂತರ ಅವರು ತಲ್ಲೀನರಾಗಿ ಮಾಡುತ್ತಿದ್ದ ದೇವರ ಪೂಜೆ, ಸದಾ ಧರಿಸುತ್ತಿದ್ದ ಇಸ್ತ್ರಿ ಮಾಡಿದ ಡ್ರೆಸ್, ಎಣ್ಣೆ ಹಾಕಿ ಬಾಚಿದ ತಲೆಗೂದಲು ಮತ್ತು ಹಣೆಗಿಡುವ ತಿಲಕ ನನಗರಿವಿಲ್ಲದಂತೆಯೂ ನನ್ನ ಮೇಲೆ ಪ್ರಭಾವ ಬೀರುತ್ತಿದ್ದವು. ಮುಂಚಿತವಾಗಿಯೂ ತಾವು ಡೈರಿಯಲ್ಲಿ ಬರೆದಿಟ್ಟುಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಅವುಗಳಲ್ಲಿ ವ್ಯತ್ಯಾಸವಾಗದಂತೆ ಪಾಲ್ಗೊಳ್ಳುತ್ತಿದ್ದ ಅವರ ಸಮಯ ಪಾಲನೆ ನನ್ನ ತಂದೆಯವರಲ್ಲಿ ನಾನು ತುಂಬಾ ಇಷ್ಟಪಟ್ಟಿರುವ ಒಳ್ಳೆ ಅಭ್ಯಾಸಗಳು.

ನಾನು ಹುಟ್ಟಿದ್ದು 1975ರಲ್ಲಿ, ನನ್ನ ಹಂದೆಯವರೇ ಹೇಳಿದಂತೆ ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ನಾನು ತಾಯಿಗರ್ಭದಲ್ಲಿದ್ದ ಸಮಯದಲ್ಲಿ, ಕರಾಳ ದಿನಗಳನ್ನು ವಿರೋಧಿಸಿದ ನನ್ನ ತಂದೆ ಜೈಲಿನಲ್ಲಿದ್ದರು. ತುಂಬು ಗರ್ಭಿಣಿಯವರು ತಂದೆಯವರನ್ನು ನೋಡಲು ಜೈಲಿಗೆ ಹೋಗಿದ್ದರಂತೆ. ಗುರುರಾಘವೇಂದ ಮೇಲೆ ನಮ್ಮ ತಂದೆಗೆ ಅಪಾರ ಭಕ್ತಿ. ಹಾಗೆಯೇ ಮಂತ್ರಾಲಯಕ್ಕೆ ಹೋಗಿ ಅವರ ದರ್ಶನ ಮಾಡಿಕೊಂಡು ಬಂದ ನಂತರ ಜನಿಸಿದ ನನ್ನ ಅಣ್ಣನಿಗೆ ರಾಘವೇಂದ್ರ ಎಂದೇ ಹೆಸರಿಡಲಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಗುರುಗಳಾದ ಶ್ರೀ ವಿಜಯೇಂದ್ರ ಸರಸ್ವತಿಗಳ ಆಶೀರ್ವಾದಗಳಿಂದ ನನ್ನ ಹೆಸರನ್ನು ವಿಜಯೇಂದ್ರ ಎಂದು ಕರೆಯಲಾಯಿತಂತೆ. ಅನ್ನದ ಬಗ್ಗೆ ಅಪ್ಪನಿಗೆ ತುಂಬಾ ಗೌರವ. ಊಟ ಮಾಡುವಾಗ ಒಂದು ಅನ್ನದ ಅಗುಳು ಚೆಲ್ಲಿದರೆ ಅನ್ನದ ಬೆಲೆ, ಅದನ್ನು ಬೆಳೆಯುವ ರೈತನ ಬೆಲೆ ನಿಮಗೆ ಗೊತ್ತಾ ಎಂದು ಕೋಪಿಸಿಕೊಳ್ಳುತ್ತಿದ್ದರು.

(ಮೂಲ: ʼದಣಿವರಿಯದ ಧೀಮಂತʼ ಕೃತಿಯಿಂದ ಆಯ್ದ ಭಾಗಗಳು)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಎಸ್‌ಪಿ ನಾಯಕ ಮೊಯೀದ್‌ ಖಾನ್‌ ಬೇಕರಿ ಧ್ವಂಸ! Video ಇದೆ

Ayodhya Rape Case: ಆಗಸ್ಟ್‌ 2ರಂದು ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಭದರ್ಸಾದಲ್ಲಿರುವ ಮೊಯೀದ್‌ ಖಾನ್‌ ಬೇಕರಿಯನ್ನು ಜಿಲ್ಲಾಧಿಕಾರಿ ಚಂದ್ರ ವಿಜಯ್‌ ಸಿಂಗ್‌ ಹಾಗೂ ಎಸ್‌ಪಿ ರಾಜಕಿರಣ್ ನಾಯರ್‌ ನೇತೃತ್ವದಲ್ಲಿ ಧ್ವಂಸಗೊಳಿಸಲಾಗಿದೆ.

VISTARANEWS.COM


on

Ayodhya Rape Case
Koo

ಅಯೋಧ್ಯೆ: ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರು ಸೇರಿ ಹಲವು ಕ್ರಿಮಿನಗಳ ಮನೆಗಳನ್ನು ಧ್ವಂಸಗೊಳಿಸುವ ಮೂಲಕ ಯೋಗಿ ಆದಿತ್ಯನಾಥ್‌ (Yogi Adityanath) ಸರ್ಕಾರವು ‘ಬುಲ್ಡೋಜರ್‌ ನ್ಯಾಯ’ (UP Bulldozer) ಒದಗಿಸುತ್ತಿದೆ. ಸಮಾಜಕ್ಕೆ ಮಾರಕರಾದವರನ್ನು ಎನ್‌ಕೌಂಟರ್‌ ಮಾಡಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ (Ayodhya Rape Case) ಎಸಗಿದ ಆರೋಪಿ, ಸಮಾಜವಾದಿ ಪಕ್ಷದ ನಾಯಕನೂ ಆಗಿರುವ ಮೊಯೀದ್‌ ಖಾನ್‌ ಬೇಕರಿಯನ್ನು ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸಲಾಗಿದೆ.

ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಮೊಯೀದ್‌ ಖಾನ್‌ ಪ್ರಮುಖ ಆರೋಪಿಯಾಗಿದ್ದಾನೆ. ಭದರ್ಸಾದಲ್ಲಿರುವ ಬೇಕರಿಯ ಮಾಲೀಕ ಮೊಯೀದ್‌ ಖಾನ್‌ ಆಗಿದ್ದು, ಬೇಕರಿಯಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ತಿಳಿದುಬಂದಿದೆ. ಫುಡ್‌ ಸೇಫ್ಟಿ ಡೆಪ್ಯೂಟಿ ಕಮಿಷನರ್‌ ಅವರು ಈಗಾಗಲೇ ಬೇಕರಿಯಲ್ಲಿರುವ ತಿನಿಸುಗಳ ತಪಾಸಣೆಗೆ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ, ಮೊಯೀದ್‌ ಖಾನ್‌ ಬೇಕರಿಯನ್ನು ಬುಲ್ಡೋಜರ್‌ ಮೂಲಕ ಧ್ವಂಸಗೊಳಿಸಲಾಗಿದೆ.

ಆಗಸ್ಟ್‌ 2ರಂದು ಬಾಲಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಭದರ್ಸಾದಲ್ಲಿರುವ ಮೊಯೀದ್‌ ಖಾನ್‌ ಬೇಕರಿಯನ್ನು ಜಿಲ್ಲಾಧಿಕಾರಿ ಚಂದ್ರ ವಿಜಯ್‌ ಸಿಂಗ್‌ ಹಾಗೂ ಎಸ್‌ಪಿ ರಾಜಕಿರಣ್ ನಾಯರ್‌ ನೇತೃತ್ವದಲ್ಲಿ ಧ್ವಂಸಗೊಳಿಸಲಾಗಿದೆ. “ಬೇಕರಿಯನ್ನು ಜಪ್ತಿ ಮಾಡಲಾಗಿದೆ. ತಪಾಸಣೆ ನಡೆಸಿದಾಗ ಬೇಕರಿಯಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿವೆ. ಇದಾದ ಬಳಿಕ ಬೇಕರಿಯನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ” ಎಂಬುದಾಗಿ ಚಂದ್ರ ವಿಜಯ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಮೂರು ದಿನಗಳ ಹಿಂದಷ್ಟೇ ನಡುರಸ್ತೆಯಲ್ಲಿ ಯುಕವರ ಗುಂಪೊಂದು ನೀರು ಎರಚಿ ಕಿರುಕುಳ ಕೊಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಘಟನಾ ಸ್ಥಳ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಯ ಎಲ್ಲಾ ಪೊಲೀಸರನ್ನು ಅಮಾನತುಗೊಳಿಸಿದ್ದರು. ಲಖನೌದಲ್ಲಿ ನಡೆದ ಈ ಘಟನೆ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಯೋಗಿ, ಇನ್ನು ಮುಂದೆ ʼಬುಲೆಟ್‌ ರೈಲುʼ ಶುರುವಾಗುತ್ತೆ ಎಂದು ಎಚ್ಚರಿಕೆ ನೀಡಿದ್ದರು. ಆ ಮೂಲಕ ಅಪರಾಧಿಗಳಿಗೆ ಅವರು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: Yogi Adityanath: ನೀರು ಎರಚಿ ಮಹಿಳೆಗೆ ಕಿರುಕುಳ ಕೇಸ್‌; ಇಡೀ ಪೊಲೀಸ್‌ ಚೌಕಿಯೇ ಅಮಾನತು; ಇನ್ಮುಂದೆ ʼಬುಲೆಟ್‌ ರೈಲ್‌ʼ ಓಡಿಸಲಾಗುತ್ತೆ ಎಂದು ವಾರ್ನಿಂಗ್‌

Continue Reading

ಕ್ರೀಡೆ

Paris Olympics Archery: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ದೀಪಿಕಾ; ಭಜನ್ ಕೌರ್​ಗೆ ಸೋಲು

Paris Olympics Archery: ಮಹಿಳಾ ಸಿಂಗಲ್ಸ್​ ಆರ್ಚರಿಯಲ್ಲಿ  18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರು.

VISTARANEWS.COM


on

Paris Olympics
Koo

ಪ್ಯಾರಿಸ್​: ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಿರಾಸೆ ಎದುರಿಸಿದ್ದ ದೀಪಿಕಾ ಕುಮಾರಿ(Deepika Kumari) ಈ ಬಾರಿಯ ಪ್ಯಾರಿಸ್​ ಒಲಿಂಪಿಕ್ಸ್​(Paris Olympics)ನಲ್ಲಿ ಪದಕ ಗೆಲ್ಲುವ ಇರಾದೆಯಲ್ಲಿದ್ದಾರೆ. ಮಹಿಳಾ ಸಿಂಗಲ್ಸ್​ ಆರ್ಚರಿಯಲ್ಲಿ(Paris Olympics Archery) ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದರು. ಇಂದು ಸಂಜೆ ನಡೆಯುವ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ನಾಮ್ ಸು-ಹ್ಯೆನ್ ವಿರುದ್ಧ ಸೆಣಸಾಡಲಿದ್ದಾರೆ.

ಇಂದು(ಶನಿವಾರ) ನಡೆದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  ಜರ್ಮನಿಯ 13 ಶ್ರೇಯಾಂಕದ ಮೈಕಲ್‌ ಕ್ರೋಪೆನ್‌ ವಿರುದ್ಧ 6-4 ಅಂತರದಿಂದ ಗೆದ್ದು ಬೀಗಿದರು. ಆದರೆ, ಇದೇ ವಿಭಾಗದ ಮತ್ತೊಂದು ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ  18 ವರ್ಷದ ಭಜನ್ ಕೌರ್(Bhajan Kaur) ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ 5-6 ಕೂದಲೆಳೆ ಅಂತರದಲ್ಲಿ ಸೋಲು ಕಂಡರು.

ಬುಧವಾರ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಎಸ್ಟೋನಿಯಾದ ರೀನಾ ಪರ್ನಾಟ್‌ ಮತ್ತು ನೆದರ್ಲ್ಯಾಂಡ್ಸ್​ನ ಕ್ವಿಂಟಿ ರೋಫೆನ್ ಅವರನ್ನು ಹಿಮ್ಮೆಟ್ಟಿಸಿ ಪ್ರೀ ಕ್ವಾರ್ಟರ್​ಗೆ ಪ್ರವೇಶ ಪಡೆದಿದ್ದರು. ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗೆಲುವಿನ ನಗೆ ಬೀರಿದರು.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊರಿಯಾದ ಆಟಗಾರ್ತಿಯ ವಿರುದ್ಧ ದೀಪಿಕಾ ಸೋಲನುಭವಿಸಿ ನಿರಾಸೆ ಎದುರಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲಿ, ರಿಯೋ ಒಲಿಂಪಿಕ್ಸ್​ನಲ್ಲಿ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಮುಗ್ಗರಿಸಿದ್ದರು. ಇದೀಗ 2ನೇ ಬಾರಿ ಕ್ವಾರ್ಟರ್​ ಫೈನಲ್​ ತಲುಪಿರುವ ಅವರು ಪದಕ ಬರ ನೀಗಿಸುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ Paris Olympics: ಹ್ಯಾಟ್ರಿಕ್​ ಪದಕ ತಪ್ಪಿಸಿಕೊಂಡ ಮನು ಭಾಕರ್​; 4ನೇ ಸ್ಥಾನಕ್ಕೆ ತೃಪ್ತಿ

ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಭಾರತದ ಯುವ ಬಿಲ್ಗಾರ್ತಿ ಭಜನ್ ಕೌರ್ ಇಂಡೋನೇಷ್ಯಾದ ಡಯಾನಂದ ಚೋರುನಿಸಾ ವಿರುದ್ಧ ಅಮೋಘ ಹೋರಾಟ ನಡೆಸಿ 5-5 ಸಮಬಲ ಸಾಧಿಸಿದರೂ ಕೂಡ ಅಂತಿಮ ಶೂಟ್​ನಲ್ಲಿ ಎಡವಿದರು. ಚೋರುನಿಸಾ 9 ಅಂಕಕ್ಕೆ ಗುರಿ ಇಟ್ಟರೆ, ಕೌರ್ 8 ಅಂಕ ಗಳಿಸಿ ಸೋಲು ಕಂಡರು. 10 ಅಂಕಕ್ಕೆ ಗುರಿ ಇಡುತ್ತಿದ್ದರೆ ಗೆದ್ದು ಕ್ವಾರ್ಟರ್​ ಫೈನಲ್​ ಪ್ರವೇಶಿಸುತ್ತಿದ್ದರು. ಸೋಲು ಕಂಡರೂ ಕೂಡ ತಮ್ಮ ಚೊಚ್ಚಲ ಒಲಿಂಪಿಕ್ಸ್​ನಲ್ಲಿ ಈ ಸಾಧನೆ ತೋರಿದ್ದು ಮೆಚ್ಚಾಲೇ ಬೇಕು.

4ನೇ ಸ್ಥಾನಕ್ಕೆ ತೃಪ್ತಿಪಟ್ಟ ಶೂಟರ್​ ಮನು ಭಾಕರ್​

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics) ಹ್ಯಾಟ್ರಿಕ್​ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್​ಗೆ(manu bhaker) ನಿರಾಸೆಯಾಗಿದೆ. ಇಂದು(ಶನಿವಾರ) ನಡೆದ 25 ಮೀ. ಪಿಸ್ತೂಲ್​ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅವರು ಐತಿಹಾಸಿಕ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡರು. ಪದಕ ಗೆಲ್ಲುತ್ತಿದ್ದರೆ ವೈಯಕ್ತಿಕವಾಗಿ ಒಂದೇ ಆವೃತ್ತಿಯಲ್ಲಿ ಹಾಗೂ ಒಟ್ಟಾರೆಯಾಗಿ 3 ಒಲಿಂಪಿಕ್ಸ್​ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ಬರೆಯಬಹುದಿತ್ತು.

ಫೈನಲ್​ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್​ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.

Continue Reading

Latest

Viral Video: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Viral Video: ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ಇನ್ಸ್ಟಾಗ್ರಾಂನಲ್ಲಿ 37,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಪ್ರದರ್ಶನ ನೀಡಿದವರು. ಈ ವೈರಲ್ ಆಗಿರುವ ವಿಡಿಯೊದಲ್ಲಿ, ತನುಮಿತಾ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ನಡೆದಿದ್ದು ಕಂಡು ಬಂದಿದೆ. ಇದನ್ನು ನೋಡಿದವರಿಗೆ ಆಕೆ ಬಾತ್‍ರೂಂನಿಂದ ಹೊರಬಂದಂತೆ ಕಾಣಿಸುತ್ತದೆ. ಆದರೆ ಅಸಲಿ ಕತೆ ಬೇರೆಯೇ ಇದೆ!

VISTARANEWS.COM


on

Viral Video
Koo


ಮುಂಬೈ : ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ವಿವಿಧ ರೀತಿಯ ರೀಲ್ಸ್ ಗಳನ್ನು ಮಾಡಲು ಹೋಗಿ ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ. ಸಾಮಾನ್ಯವಾಗಿ ಯುವತಿಯರು ಸ್ನಾನ ಮಾಡಿ ಬಾತ್‍ರೂಂನಿಂದ ಹೊರಗೆ ಬರುವಾಗ ದೇಹಕ್ಕೆ ಟವೆಲ್ ಸುತ್ತಿಕೊಂಡು ಮನೆಯೊಳಗೆ ಓಡಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಯುವತಿ ತನ್ನ ದೇಹವನ್ನು ಟವೆಲ್‍ನಿಂದ ಸುತ್ತಿಕೊಂಡು ರಸ್ತೆಗೆ ಬಂದಿದ್ದಾಳೆ. ಇವಳನ್ನು ನೋಡಿ ದಾರಿಹೋಕರು ದಿಗ್ಭ್ರಮೆಗೊಂಡಿದ್ದಾರೆ. ಈ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ.

ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ಇನ್ಸ್ಟಾಗ್ರಾಂನಲ್ಲಿ 37,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಪ್ರದರ್ಶನ ನೀಡಿದವರು. ಈ ವೈರಲ್ ಆಗಿರುವ ವಿಡಿಯೊದಲ್ಲಿ, ತನುಮಿತಾ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ನಡೆಯುತ್ತಿದ್ದಾರೆ. ಇದನ್ನು ನೋಡಿದವರಿಗೆ ಆಕೆ ಬಾತ್‍ರೂಂನಿಂದ ಹೊರಬಂದಂತೆ ಕಾಣಿಸುತ್ತದೆ. ವಿಡಿಯೊದಲ್ಲಿ ‘ತೌಬಾ-ತೌಬಾ’ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಈ ವಿಡಿಯೊ ಶೀರ್ಷಿಕೆಯಲ್ಲಿ, ಮುಂಬೈನ ಪ್ರೇಕ್ಷಕರು ತನ್ನ ನೋಟವನ್ನು ನೋಡಿ ‘ತೌಬಾ-ತೌಬಾ’ ಎಂದು ಉದ್ಗರಿಸುತ್ತಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಬರೆದಿದ್ದಾರೆ.

ಈ ಅಸಾಮಾನ್ಯ ಉಡುಗೆಯ ಜೊತೆಗೆ ಕಿವಿಯೋಲೆಗಳನ್ನು ಧರಿಸಿದ್ದರು ಮತ್ತು ಸ್ಟೈಲಿಶ್ ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದರು. ಅವರು ಈ ವೇಷದಲ್ಲಿ ಬಸ್ ನಿಲ್ದಾಣದಿಂದ ಅಂಗಡಿಯ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ದಾರಿಹೋಕರು ಇವರನ್ನು ದಿಟ್ಟಿಸಿ ನೋಡುತ್ತಿದ್ದಾರೆ. ಈ ವಿಡಿಯೊದ ಕೊನೆಯಲ್ಲಿ ತನುಮಿತಾ ತನ್ನ ಕೂದಲಿಗೆ ಹಾಗೂ ದೇಹಕ್ಕೆ ಸುತ್ತಿದ್ದ ಟವೆಲ್ ಅನ್ನು ತೆಗೆದಿದ್ದಾರೆ. ಆದರೆ ಅದರೊಳಗೆ ಅವರು ಬಟ್ಟೆ ಧರಿಸಿದರು. ಈ ವಿಡಿಯೊ ಪ್ರೇಕ್ಷಕರಿಗೆ ಹಾಗೂ ದಾರಿಹೋಕರಿಗೆ ಆಶ್ಚರ್ಯ ಮತ್ತು ಕುತೂಹಲವನ್ನುಂಟು ಮಾಡಿದಂತು ನಿಜ.

ಈ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‍ಗಳು ಮತ್ತು ಶೇರ್ ಗಳನ್ನು ಗಳಿಸಿದೆ. ಇದಕ್ಕೆ ಹಲವಾರು ಕಾಮೆಂಟ್‍ಗಳು ಸಹ ಬಂದಿವೆ, ಹೆಚ್ಚಿನವರು ಅವರ ಈ ಕಾರ್ಯದ ಉದ್ದೇಶ ಮತ್ತು ಪರಿಣಾಮವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

ಆದರೆ ತನುಮಿತಾ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಸೋನಾಕ್ಷಿ ಸಿನ್ಹಾ, ಶಲೀನಾ ನಥಾನಿ, ಮನೀಶ್ ಮಲ್ಹೋತ್ರಾ ಮತ್ತು ಡಿನೋ ಮೋರಿಯಾ ಅವರಂತಹ ಸೆಲೆಬ್ರಿಟಿಗಳಂತೆ ತಾನು ಮನರಂಜನೆಗಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.ಅವರ ವಿವರಣೆಯ ಹೊರತಾಗಿಯೂ, ಕೆಲವು ಬಳಕೆದಾರರು ನಿರಾಶೆಯನ್ನು ವ್ಯಕ್ತಪಡಿಸುತ್ತಲೇ ಇದ್ದರು, ಇದು ಸಂಪ್ರದಾಯಸ್ಥ ಕುಟುಂಬದವರಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಹೇಳಿದ್ದಾರೆ.

Continue Reading

ಕರ್ನಾಟಕ

PSI Parshuram Death Case: ಪಿಎಸ್ಐ ಪರಶುರಾಮ ಸಾವು ಪ್ರಕರಣ; ಯಾದಗಿರಿ ಕೈ ಶಾಸಕ, ಪುತ್ರನ ವಿರುದ್ಧ ಎಫ್‌ಐಆರ್‌

PSI Parshuram death Case: ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೇಸ್ ದಾಖಲಾಗಿದ್ದರಿಂದ ಅಪ್ಪ-ಮಗ ತಲೆ ಮರೆಸಿಕೊಂಡಿದ್ದು, ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

VISTARANEWS.COM


on

PSI Parshuram death Case
Koo

ಯಾದಗಿರಿ: ಪಿಎಸ್ಐ ಪರಶುರಾಮ ಸಾವು ಪ್ರಕರಣಕ್ಕೆ (PSI Parshuram Death Case) ಸಂಬಂಧಿಸಿದಂತೆ ಘಟನೆ ನಡೆದ 17 ಗಂಟೆ ಬಳಿಕ ಕೇಸ್‌ ದಾಖಲಾಗಿದೆ. ಮೃತ ಪಿಎಸ್ಐ ಪತ್ನಿ ಶ್ವೇತಾ ಕೊಟ್ಟ ದೂರಿನನ್ವಯ ಯಾದಗಿರಿ ಕಾಂಗ್ರೆಸ್‌ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಿಎನ್ಎಸ್ ಸೆಕ್ಷನ್ 108 ಅಡಿ ಪ್ರಕರಣ ದಾಖಲಾಗಿದ್ದು, ಕೇಸ್‌ನಲ್ಲಿ ಎ1 ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಎ2 ಪುತ್ರ ಪಂಪನಗೌಡ ಹೆಸರು ಉಲ್ಲೇಖಿಸಲಾಗಿದೆ. ಸತತ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ, ಕೊನೆಗೂ ಎಫ್ಐಆರ್ ದಾಖಲಿಸಿಕೊಂಡಿದೆ.

ಕೇಸ್ ದಾಖಲಾಗುತ್ತಿದ್ದಂತೆ ಶಾಸಕನ ಮೊಬೈಲ್ ಸ್ವಿಚ್ ಆಫ್

ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೇಸ್ ದಾಖಲಾಗಿದ್ದರಿಂದ ಅಪ್ಪ-ಮಗ ತಲೆ ಮರೆಸಿಕೊಂಡಿದ್ದು, ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಶುಕ್ರವಾರ(ಆ.2) ನಿಧನರಾಗಿದ್ದರು. ಇತ್ತೀಚೆಗೆ ಸೈಬರ್ ಕ್ರೈಮ್ (Cyber Crime) ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಶುಕ್ರವಾರ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದರು.

ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಪಿಎಸ್‌ಐ ಪತ್ನಿ ಶ್ವೇತಾ ಗಂಭೀರ ಆರೋಪ ಮಾಡಿ, ಸ್ಥಳೀಯ ದಲಿತ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಿ ಶಾಸಕ, ಪುತ್ರನ ವಿರುದ್ಧ ದೂರು ನೀಡಿದ್ದರು.

PSI Death: ನಿನ್ನೆ ಬೀಳ್ಕೊಡುಗೆ ಪಡೆದ ಪಿಎಸ್‌ಐ ಇಂದು ಹೃದಯಾಘಾತದಿಂದ ಸಾವು; 30 ಲಕ್ಷ ರೂ. ಲಂಚಕ್ಕೆ ಶಾಸಕ ಒತ್ತಡ ಹಾಕಿದ್ದರಿಂದ ಖಿನ್ನತೆ?

ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿ ಪತಿ ಪರಶುರಾಮ ಮೃತಪಟ್ಟಿದ್ದಾರೆ ಎಂದು ಶ್ವೇತಾ ಆರೋಪಿಸಿದ್ದರು. ಹೀಗಾಗಿ ಶಾಸಕ ಹಾಗೂ ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಶಾಸಕ, ಪುತ್ರನ ಬಂಧನಕ್ಕೆ ಆಗ್ರಹ

ಪಿಎಸ್ಐ ಪರಶುರಾಮ್ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಹಾಗೂ ಪುತ್ರನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮೃತ ಪಿಎಸ್ಐ ಪತ್ನಿ ಸೇರಿ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಯಿಮ್ಸ್‌ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಕ್ಷೇತ್ರದ ಪಕ್ಷೇತರ ಪರಾಜಿತ ಅಭ್ಯರ್ಥಿ ಹಣಮೇಗೌಡ ಬೀರನಕಲ್ ಮಾತನಾಡಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಕಂಡಲ್ಲಿ ಕಲ್ಲು ಹೊಡೆಯಬೇಕು. ವೋಟ್ ಹಾಕಿ ಗೆಲ್ಲಿಸಿದ್ದೀರಿ, ಈಗ ಕಂಡರೇ ಕಲ್ಲು ತೆಗೆದುಕೊಂಡು ಹೊಡೆಯಿರಿ. ಶಾಸಕ ಭೃಷ್ಟಚಾರದಲ್ಲಿ ಭಾಗಿಯಾಗಿದ್ದು, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

Continue Reading
Advertisement
Anchor Shalini reveals her paycheck per day for paapa pandu tv serial
ಕಿರುತೆರೆ14 mins ago

Anchor Shalini: ಅವತ್ತಿನ ಕಾಲಕ್ಕೆ ‘ಪಾಪ ಪಾಂಡು’ ಖ್ಯಾತಿಯ ಶಾಲಿನಿ ಪಡೆಯುತ್ತಿದ್ದ ಸಂಭಾವನೆ ಏಷ್ಟು?

Ayodhya Rape Case
ದೇಶ16 mins ago

ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಎಸ್‌ಪಿ ನಾಯಕ ಮೊಯೀದ್‌ ಖಾನ್‌ ಬೇಕರಿ ಧ್ವಂಸ! Video ಇದೆ

poison food bellary news
ಬಳ್ಳಾರಿ36 mins ago

Poison Food: ವಿಷಕಾರಿ ಬೀಜ ತಿಂದು 8 ಮಕ್ಕಳು ಅಸ್ವಸ್ಥ

Wayanad Landslide
ದೇಶ37 mins ago

Wayanad Landslide: ವಯನಾಡು ಭೂಕುಸಿತ: ದುರಂತದ ಮಧ್ಯೆಯೂ ಭರವಸೆಯ ಕಿರಣ; ಸಂತ್ರಸ್ತರ ರಕ್ಷಣೆಯೇ ರೋಚಕ

Paris Olympics
ಕ್ರೀಡೆ52 mins ago

Paris Olympics Archery: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ದೀಪಿಕಾ; ಭಜನ್ ಕೌರ್​ಗೆ ಸೋಲು

Viral Video
Latest56 mins ago

Viral Video: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Wayanad Tragedy
Latest59 mins ago

Wayanad Tragedy : ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

DMK Leader Controversy
ದೇಶ1 hour ago

DMK leader Controversy: ಶ್ರೀರಾಮನ ಅಸ್ತಿತ್ವಕ್ಕೆ ಪುರಾವೆಗಳೇ ಇಲ್ಲ: ಡಿಎಂಕೆ ನಾಯಕನ ವಿಡಿಯೋ ಫುಲ್‌ ವೈರಲ್‌

PSI Parshuram death Case
ಕರ್ನಾಟಕ1 hour ago

PSI Parshuram Death Case: ಪಿಎಸ್ಐ ಪರಶುರಾಮ ಸಾವು ಪ್ರಕರಣ; ಯಾದಗಿರಿ ಕೈ ಶಾಸಕ, ಪುತ್ರನ ವಿರುದ್ಧ ಎಫ್‌ಐಆರ್‌

assault case
ಚಿಕ್ಕಮಗಳೂರು2 hours ago

Assault Case : ಹೆಲ್ಮೆಟ್‌ ಇಲ್ಲದೇ ಚಲಿಸುತ್ತಿದ್ದ ಬೈಕ್ ಸವಾರನ ಕಾಲರ್ ಪಟ್ಟಿ ಹಿಡಿದು ಎಳೆದ ಟ್ರಾಫಿಕ್‌ ಪೊಲೀಸ್‌!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ3 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌