Tumkur News: ಶಿರಾ ನಗರದಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ; ಜನತೆ ಹೈರಾಣು Vistara News

ತುಮಕೂರು

Tumkur News: ಶಿರಾ ನಗರದಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ; ಜನತೆ ಹೈರಾಣು

Tumkur News: ಶಿರಾ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಉಪಟಳ ಮಿತಿಮೀರಿದ್ದು, ಇದರಿಂದ ಸಾರ್ವಜನಿಕರು, ಮಹಿಳೆಯರು, ಚಿಕ್ಕ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

VISTARANEWS.COM


on

problem of stray dogs has increased in Shira
ಶಿರಾ ನಗರದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಿರುವುದು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿರಾ: ನಗರದ ನಾನಾ ಕಡೆ ಬೀದಿ ನಾಯಿಗಳ (Stray Dogs) ಹಾವಳಿ ಮಿತಿಮೀರಿದ್ದು, ಜನಸಾಮಾನ್ಯರು (Publics) ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಉಪಟಳದಿಂದಾಗಿ ಸಾರ್ವಜನಿಕರು, ಮಹಿಳೆಯರು, ಚಿಕ್ಕ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹಿಂಡು ಹಿಂಡಾಗಿ ಬೀದಿ ನಾಯಿಗಳು ರಸ್ತೆಯಲ್ಲಿ ಓಡಾಡುತ್ತಾ, ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ, ಗಾಯಗೊಳಿಸುತ್ತಿವೆ. ನಗರದ ವಿವಿಧ ಬಡಾವಣೆಗಳಲ್ಲಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಅತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

ಇತ್ತೀಚೆಗೆ ನಗರದ ರಸ್ತೆಯಲ್ಲಿ ರಾತ್ರಿ ವೇಳೆ ದಂಪತಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಅವರ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿದ್ದು, ದಂಪತಿ ರಸ್ತೆಯ ವಿಭಜಕದ ಮೇಲೆ ಬಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೆ ತೀವ್ರ ಸ್ವರೂಪದ ಗಾಯಗಳಾದ ಘಟನೆಯನ್ನು ನಗರದ ಜನತೆ ಇನ್ನೂ ಮರೆತಿಲ್ಲ.

ನಗರದಲ್ಲಿ ಬೀದಿ ನಾಯಿಗಳು ಚಿಕ್ಕ ಮಕ್ಕಳ ಮೇಲೂ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆಗಳೂ ನಡೆದಿವೆ. ಇದರಿಂದ ಮಕ್ಕಳು ಹೊರಹೋಗಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ನಗರದ ಹಳೇ ಆಸ್ಪತ್ರೆ ರಸ್ತೆ, ಮಧುಗಿರಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರಸಭೆ ನಿರ್ಲಕ್ಷ್ಯ

ನಗರದಲ್ಲಿ ಬೀದಿ ನಾಯಿಗಳ ಉಪಟಳವನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳಬೇಕಾದ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: Viral Video: ಪಂದ್ಯ ಮುಗಿದರೂ ತಡರಾತ್ರಿವರೆಗೂ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಶಾಲೆಗೆ ನಿರ್ಭೀತಿಯಿಂದ ಹೋಗಿ ಬರುವ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಉಡುಪಿ

Karnataka weather : ಸೈಕ್ಲೋನ್‌ ಎಫೆಕ್ಟ್‌; ನಾಳೆ ಮಳೆ ಜತೆಗೆ ಥಂಡಿ ಗಾಳಿ

Karnataka Weather Forecast : ಮಿಚುಂಗ್‌ ಸೈಕ್ಲೋನ್‌ ಎಫೆಕ್ಟ್‌ನಿಂದಾಗಿ ಮುಂದಿನ 24 ಗಂಟೆಯಲ್ಲಿ ಥಂಡಿ ಗಾಳಿ ಬೀಸಲಿದ್ದು, ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

Rain alert
Koo

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮಿಚುಂಗ್ ಚಂಡಮಾರುತದ ಪರಿಣಾಮದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೋಡ ಕವಿದ ವಾತಾವರಣ (karnataka weather Forecast) ಇರಲಿದೆ. ಮುಂದಿನ 24 ಗಂಟೆಗಳಲ್ಲಿ ಮಿಚುಂಗ್ ಸೈಕ್ಲೋನ್ ತೀವ್ರಗೊಳ್ಳುವ ನಿರೀಕ್ಷೆ ಇದ್ದು ಮಳೆಯಾಗುವ (Rain News) ನಿರೀಕ್ಷೆ ಇದೆ.

ತಮಿಳುನಾಡಿಗೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಲ್ಲಿ ಹಗುರ ಮಳೆಯಾಗಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ.

ಮೇಲ್ಮೈ ಗಾಳಿಯೊಂದಿಗೆ ಮಳೆ ಸಾಥ್‌

ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಳೆ ನಡುವೆಯೂ ತಾಪಮಾನ ಎಚ್ಚರಿಕೆ

ಮುಂದಿನ 48 ಗಂಟೆಯಲ್ಲಿ ಕನಿಷ್ಠ ಉಷ್ಣಾಂಶವು ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಶನಿವಾರ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉಳಿದಂತೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ಕಡಿಮೆ ಉಷ್ಣಾಂಶ 16.0 ಡಿ.ಸೆ. ವಿಜಯಪುರದಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ತುಮಕೂರು

Tumkur News: ಪ್ಯಾರಾ ಮೆಡಿಕಲ್ ಓದಿದವರಿಗೆ ವಿಫುಲ ಅವಕಾಶ: ಶಾಸಕ ಟಿ.ಬಿ.ಜಯಚಂದ್ರ

Tumkur News: ಶಿರಾ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಸರ್ಕಾರಿ ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್ ) ನೂತನ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮ ಜರುಗಿತು.

VISTARANEWS.COM


on

MLA T.B.Jayachandra spoke at the inauguration program of the new Para Medical College at Shira
ಶಿರಾ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಸರ್ಕಾರಿ ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್ ) ನೂತನ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿದರು.
Koo

ಶಿರಾ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಸರ್ಕಾರಿ ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್) (Para Medical) ನೂತನ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ನೂತನ ಸರ್ಕಾರಿ ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್) ಕಾಲೇಜನ್ನು ಶಾಸಕ ಟಿ.ಬಿ. ಜಯಚಂದ್ರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ಯಾರಾ ಮೆಡಿಕಲ್ ಅಧ್ಯಯನ ಮಾಡಿದವರಿಗೆ ಸಾಕಷ್ಟು ಉದ್ಯೋಗ ಅವಕಾಶಗಳಿವೆ, ಈ ಭಾಗದ ಯುವಕ-ಯುವತಿಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಅಡಳಿತ ಅಧಿಕಾರಿ ಡಾ. ಶ್ರೀಕಾಂತ್, ತಾಲೂಕು ವೈದ್ಯ ಅಧಿಕಾರಿ ಡಾ.ಸಿದ್ದೇಶ್ವರ್, ರಾಮಕೃಷ್ಣ ನರ್ಸಿಂಗ್ ಶಾಲೆಯ ಮುಖ್ಯಸ್ಥ ಡಾ. ರಾಮಕೃಷ್ಣಪ್ಪ, ಸ್ಥಳೀಯ ನಗರಸಭೆ ಸದಸ್ಯೆ ಉಮಾ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ತುಮಕೂರು

Tumkur News: ವಿದ್ಯಾರ್ಥಿಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು: ಡಾ. ಸುರೇಶ್

Tumkur News ಗುಬ್ಬಿ ತಾಲೂಕಿನ ಹೇರೂರಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಟಾರ್ಟ್ ತಾನ್ 2.0 ಕಾರ್ಯಕ್ರಮ ಜರುಗಿತು.

VISTARANEWS.COM


on

Tumkur News Students can succeed when they utilize opportunities in the right way says Dr. Suresh D S
ಗುಬ್ಬಿ ತಾಲೂಕಿನ ಹೇರೂರಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಟಾರ್ಟ್ ತಾನ್ 2.0 ಕಾರ್ಯಕ್ರಮ ಜರುಗಿತು.
Koo

ಗುಬ್ಬಿ: ಇಂದಿನ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿದ್ದು (Opportunities), ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಖಂಡಿತವಾಗಿಯೂ ಯಶಸ್ಸು (Success) ಗಳಿಸಬಹುದು ಎಂದು ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ. ಸುರೇಶ್ ಡಿ.ಎಸ್. ತಿಳಿಸಿದರು.

ತಾಲೂಕಿನ ಹೇರೂರಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಟಾರ್ಟ್ ತಾನ್ 2.0 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಸಂವಹನವು ಇಂದಿನ ದಿನಕ್ಕೆ ಬೇಕಾದ ಬಹಳ ಮುಖ್ಯವಾದ ಮಾರ್ಗಗಳಾಗಿದ್ದು, ಅದನ್ನು ವಿದ್ಯಾರ್ಥಿ ದೆಸೆಯಲ್ಲಿ ಸರಿಯಾದ ರೀತಿಯಲ್ಲಿ ಕಲಿತುಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ಸ್ಥಾನ ಮಾನಗಳಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಶಾಂತಲಾ ಮಾತನಾಡಿ, ತಾವೆಲ್ಲರೂ ಕೌಶಲ್ಯತೆ ಹೆಚ್ಚಿನದಾಗಿ ಪಡೆದುಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

ಕಾರ್ಯಕ್ರಮದಲ್ಲಿ ಡೀನ್, ಶಿಕ್ಷಣ ತಜ್ಞ ಅನಿಲ್ ಕುಮಾರ್ ಜಿ, ಐಎಸ್ಇ ವಿಭಾಗದ ಎಚ್‌ಒಡಿ ತಾರಾ ಡಿ. ಕೆ. ಮತ್ತು ಇನ್ಫಿ ಚಾಲೆಂಜರ್ಸ್ ಕ್ಲಬ್ ಸಂಯೋಜಕ ಅನಿಲ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

ಉತ್ತರ ಕನ್ನಡ

Leopard Death : ನಾಯಿಗಳ ದಾಳಿಯಿಂದ ಚಿರತೆ ಮರಿ ಸಾವು, ಇನ್ನೊಂದು ಕರೆಂಟ್‌ ಶಾಕ್‌ಗೆ ಬಲಿ

Leopard death : ನಾಯಿಗಳ ದಾಳಿಗೆ ಚಿರತೆ ಬಲಿ, ವಿದ್ಯುದಾಘಾತಕ್ಕೆ ಸಿಲುಕಿ ಚಿರತೆ ಮೃತ್ಯು. ಹೀಗೆ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ.

VISTARANEWS.COM


on

Leopard death
ನಾಯಿ ದಾಳಿ ಮತ್ತು ವಿದ್ಯುದಾಘಾತದಿಂದ ಪ್ರಾಣ ಕಳೆದುಕೊಂಡ ಚಿರತೆಗಳು
Koo

ತುಮಕೂರು: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯಿಂದ (Leopard Attack) ಸಾವು ಸಂಭವಿಸಿದ್ದನ್ನೇ ಕೇಳುತ್ತಿದ್ದೇವೆ. ಆದರೆ ಶುಕ್ರವಾರ ಎರಡು ಪ್ರಕರಣಗಳಲ್ಲಿ ಚಿರತೆಗಳೇ ಪ್ರಾಣ (Leopard death) ಬಿಟ್ಟಿವೆ. ಒಂದು ಪ್ರಕರಣದಲ್ಲಿ ನಾಯಿಗಳ ದಾಳಿಗೆ ಚಿರತೆ ಮರಿಯೊಂದು ಪ್ರಾಣ (leopard dies of Leopard attack) ಕಳೆದುಕೊಂಡಿದ್ದರೆ, ಇನ್ನೊಂದು ಪ್ರಕರಣದಲ್ಲಿ ಚಿರತೆಯೊಂದು ಬೇರೆ ಪ್ರಾಣಿಯನ್ನು ಹಿಡಿಯಲು ವಿದ್ಯುದಾಘಾತಕ್ಕೆ (Leopard Electricuted) ಸಿಲುಕಿ ಮೃತಪಟ್ಟಿದೆ.

ನಾಯಿಗಳ ದಾಳಿಗೆ ಎಂಟು ತಿಂಗಳ ಚಿರತೆ ಮರಿ ಸಾವು

ತುಮಕೂರು ತಾಲೂಕಿನ ಮಾವುಕೆರೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮರಿಯೊಂದು ಅಂತಿಮವಾಗಿ ನಾಯಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಕೋರಾ ಹೋಬಳಿ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಸುಮಾರು ಎಂಟು ತಿಂಗಳ ಚಿರತೆ ರಾತ್ರೋರಾತ್ರಿ ನಾಯಿಗಳ ದಾಳಿಗೆ ಪ್ರಾಣ ಬಿಟ್ಟಿದೆ.

ಚಿರತೆ ಮರಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಜನರು ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ. ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಚಿರತೆ ಸಾವಿಗೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಚಿರತೆ ಮರಿ ನಾಯಿಗಳ ಗುಂಪಿನ ಜತೆ ಕಾದಾಡುತ್ತಿತ್ತು. ಈ ವೇಳೆ ಅದು ಗಾಯಗೊಂಡು ಓಡಿ ಹೋಗಿದೆ ಎನ್ನಲಾಗಿದೆ. ಬಳಿಕ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಪರೀಕ್ಷಾ ವರದಿಯಲ್ಲಿ ನಾಯಿಗಳ ದಾಳಿಗೆ ಚಿರತೆ ಮರಿ ಸಾವು ಕಂಡಿರುವುದು ದೃಢವಾಗಿದೆ.

ಶಿರಸಿ ಬಳಿ ವಿದ್ಯುತ್‌ ಸ್ಪರ್ಶಿಸಿ ಚಿರತೆ ಸಾವು

ಬೇಟೆ ಅರಸಿ ಬಂದ ಚಿರತೆಯೊಂದು ವಿದ್ಯುತ್‌ ಸ್ಪರ್ಶಿಸಿ ಸಾವು ಕಂಡಿರುವ ಘಟನೆ ಶಿರಸಿ ತಾಲೂಕಿನ ಬೆಳಗಲಮನೆ ಗ್ರಾಮದಲ್ಲಿ ನಡೆದಿದೆ. ಕಾಡು ಬೆಕ್ಕು ಭೇಟೆಯಾಡಲು ಬಂದ ಚಿರತೆ ಮರ ಹತ್ತಿ ಕಾಡು ಬೆಕ್ಕಿನ ಮೇಲೆ ಜಿಗಿದಿದೆ. ಈ ವೇಳೆ ಅದು ವಿದ್ಯುತ್ ಕಂಬದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಹೈ ಟೆನ್ಷನ್ ಕೇಬಲ್ ಕಂಬದಲ್ಲೇ ಚಿರತೆ ಪ್ರಾಣ ಬಿಟ್ಟಿದೆ. ಶಿರಸಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಾನ್ವಿಯಲ್ಲಿ ಹಟ್ಟಿಗೇ ನುಗ್ಗಿದ ಚಿರತೆ: ಎಳೆ ಕರು ಸಾವು

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶುಕ್ರವಾರ ತಡರಾತ್ರಿ ದನದ ಕೊಟ್ಟಿಗೆ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಎಳೆಯ ಕರು ಮೃತಪಟ್ಟಿದೆ.

ಸಿಂಧನೂರು ರಸ್ತೆ ಹೆದ್ದಾರಿ ಪಕ್ಕದಲ್ಲಿರುವ ದುರ್ಗಮ್ಮ ಎಂಬುವವರ ದನದ ಕೊಟ್ಟಿಗೆ ಮೇಲೆ ದಾಳಿ ನಡೆದಿದೆ. ಇಲ್ಲಿನ ಮಲ್ಲಿಕಾರ್ಜುನ ಗುಡ್ಡ,ಬಾಲ ನಗರ ಗುಡ್ಡದಲ್ಲಿ 3-4 ತಿಂಗಳುಗಳಿಂದ ಚಿರತೆ ವಾಸವಾಗಿರುವ ಮಾಹಿತಿ ಇತ್ತು. ಚಿರತೆ ವಾಸವಿರುವ ಕೂಗಳತೆ ದೂರದಲ್ಲಿ ಜನ ವಸತಿ ಇದೆ. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಹಿಡಿಯಲು ಗುಡ್ಡಗಾಡಿನಲ್ಲಿ ಸಿಬ್ಬಂದಿಗಳು ಗಸ್ತು ನಡೆಸುತ್ತಿದ್ದರು, ಬೋನು ಇಟ್ಟಿದ್ದರು. ತಡರಾತ್ರಿ ಅರಣ್ಯ ಅಧಿಕಾರಿಗಳ ಕಣ್ಣಿಗೂ ಚಿರತೆ ಕಂಡಿದೆ. ಆದರೆ, ಎಲ್ಲರ ದಿಕ್ಕು ತಪ್ಪಿಸಿ ಕೊಠಡಿಗೆ ನುಗ್ಗಿ ಎಳೆಯ ಕರುವಿನ ಪ್ರಾಣ ತೆಗೆದಿದೆ.

Continue Reading
Advertisement
David Warner
ಕ್ರಿಕೆಟ್3 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ46 mins ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ60 mins ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್2 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ2 hours ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Rain in Karnataka woman listening to music with an umbrella
ಕರ್ನಾಟಕ2 hours ago

Karnataka Weather : ಇಂದು – ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಭಾರಿ ಮಳೆ; ಇದು ಮಿಚುಂಗ್ ಎಫೆಕ್ಟ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌