ಉತ್ತರ ಕನ್ನಡ ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಟ್ರಾಮಾ ಸೆಂಟರ್: ವಿಶ್ವೇಶ್ವರ ಹೆಗಡೆ ಕಾಗೇರಿ - Vistara News

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಟ್ರಾಮಾ ಸೆಂಟರ್: ವಿಶ್ವೇಶ್ವರ ಹೆಗಡೆ ಕಾಗೇರಿ

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಒಟ್ಟಾಗಿ ಚರ್ಚಿಸಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ವಹಿಸಲಿದ್ದೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಜತೆಗೆ ಟ್ರಾಮಾ ಸೆಂಟರ್(ಅಪಘಾತ ತುರ್ತು ಚಿಕಿತ್ಸಾ ಘಟಕ) ಸ್ಥಾಪನೆಯ ಬೇಡಿಕೆಯೂ ಇದೆ. ಭೌಗೋಳಿಕ ಸ್ಥಿತಿ, ಅಪಘಾತ ಪ್ರಕರಣ, ತುರ್ತು ಚಿಕತ್ಸೆಗಳ ಅಂಕಿ-ಸಂಖ್ಯೆಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣವಾಗಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಚರ್ಚಿಸಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ನಗರದಲ್ಲಿ ಮೇಲ್ದರ್ಜೆಗೇರಿದ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಕಾಮಗಾರಿ ಹಾಗೂ ರಾಯಪ್ಪ ಹುಲೇಕಲ್ ಶಾಲೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ತುರ್ತು ಚಿಕಿತ್ಸಾ ಘಟಕದ ಕಟ್ಟಡದ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.

ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಯೋಜನಾಬದ್ಧವಾಗಿ ಕೆಲಸ ನಡೆಯಬೇಕು. ಯಾವುದೇ ರೀತಿ ವಿಳಂಬ ಧೋರಣೆ ಅನುಸರಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಈಗಾಗಲೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಜೊತೆ ಚರ್ಚಿಸಲಾಗಿದ್ದು, ಅವರು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಸ್ಪತ್ರೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | ಪತ್ರಕರ್ತರು ವಸ್ತುನಿಷ್ಠ, ಸತ್ಯ ವರದಿಯಿಂದ ಜನರ ದನಿಯಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಮಳೆ

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು; ಉಳಿದೆಡೆ ಗುಡುಗು ಸಹಿತ ಮಳೆ

Karnataka Weather Forecast : ಗಂಟೆಗಳ ಕಾಲ ಮಳೆ ಸುರಿದರೂ ವಾತಾವರಣ ಮಾತ್ರ ಕಾದ ಕೆಂಡವಾಗಿಯೇ ಇದೆ. ರಾಜ್ಯಾದ್ಯಂತ ಕೆಲವೆಡೆ ಮಳೆ ಸೂಚನೆ (Rain News) ಇದ್ದರೂ, ಮುಕ್ಕಾಲು ಭಾಗದಲ್ಲಿ ತಾಪಮಾನ ಏರಿಕೆ ಮುಂದುವರಿಯಲಿದೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

VISTARANEWS.COM


on

By

karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ರಾಜ್ಯದ ಹಲವೆಡೆ ಗುಡುಗು ಸಹಿತ (Rain News) ಮಳೆಯಾಗಲಿದ್ದು, ಹವಾಮಾನ ಇಲಾಖೆ (Karnataka Weather Forecast) ಯೆಲ್ಲೋ ಅಲರ್ಟ್ (Yellow alert) ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನೊಂದೆಡೆ ತುಮಕೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ಯಾದಗಿರಿ, ರಾಯಚೂರು,ಕೊಪ್ಪಳ, ಕಲಬುರಗಿ ಹಾಗೂ ಹಾವೇರಿ, ಬೆಳಗಾವಿ, ಬೀದರ್, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿ.ಸೆ ಹೆಚ್ಚಾಗಲಿದೆ. ಹೀಗಾಗಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.

ಇನ್ನೂ ರಾಜಧಾನಿ ಬೆಂಗಳೂರಲ್ಲಿ ಮಳೆ ಇದ್ದರೂ ಬಿಸಿಲ ಧಗೆ ಕಡಿಮೆ ಆಗುವುದಿಲ್ಲ. ಹೀಗಾಗಿ ಬೆಂಗಳೂರು ನಗರವು ಸೇರಿ ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.

ತಾಪಮಾನ ಮುನ್ಸೂಚನೆ

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ರಾತ್ರಿಯಂದು ವಾತಾವರಣ ಬೆಚ್ಚಗೆ ಇರಲಿದ್ದು, ಬಿಸಿಗಾಳಿ ಬೀಸಲಿದೆ. ಶಾಖ ತರಂಗ ಎಚ್ಚರಿಕೆಯನ್ನು ನೀಡಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ, ಹಾಸನ ಮತ್ತು ಮೈಸೂರಿನಲ್ಲಿ ಹೀಟ್‌ ವೇವ್‌ ಇರಲಿದೆ.

ಇದನ್ನೂ ಓದಿ: Physical Abuse : ಮೊಬೈಲ್ ಕೊಡಿಸುವುದಾಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸೋದರ ಮಾವ

ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಪ್ರವಾಸಗಳನ್ನು ಇಷ್ಟಪಡುವ ಮಂದಿಯಲ್ಲಿ ಎರಡು ಬಗೆಯ ಮಂದಿಯಿರುತ್ತಾರೆ. ಒಂದು ಬಗೆಯವರಿಗೆ ಪ್ರವಾಸವನ್ನು ಎಂಜಾಯ್‌ ಮಾಡಿ, ತಮ್ಮ ಪ್ರೀತಿಪಾತ್ರರ ಜೊತೆಗೆ ಸಂತೋಷವಾಗಿ ಕಾಲ ಕಳೆದು, ಐಷಾರಾಮಿ ಹೊಟೇಲುಗಳಲ್ಲಿ ಇದ್ದು, ರಿಲ್ಯಾಕ್ಸ್‌ ಆಗಿ ಸಮಯ ಕಳೆದುಕೊಂಡು ಮಜಾ ಮಾಡಿಕೊಂಡು ಬರುವವರಾದರೆ, ಇನ್ನೊಂದು ವರ್ಗ, ಜನಜಂಗುಳಿಯಿಂದ ದೂರವಿದ್ದು, ಶಾಂತವಾದ ನದೀತೀರದಲ್ಲೋ, ಬೆಟ್ಟದ ತಪ್ಪಲಲ್ಲೋ, ಪರ್ವತದ ಮೇಲಿನ ಒಂದು ಹಳ್ಳಿಯಲ್ಲೋ, ಒಂದಿಷ್ಟು ಸಮಾನ ಮನಸ್ಕರೊಂದಿಗೆ ಚಾರಣ ಮಾಡಿಯೋ ಸಮಯ ಕಳೆಯಲು ಇಷ್ಟ ಪಡುವ ಮಂದಿ. ಈ ಎರಡನೇ ವರ್ಗದ ಪ್ರವಾಸ ಪ್ರಿಯರಿಗೆ ಶಾಂತವಾಗಿ ಸಮಯ ಕಳೆಯಲು ಭಾರತದಲ್ಲಿ ಬೇಕಾದಷ್ಟು ಸ್ಥಳಗಳಿವೆ. ಹಿಮಾಲಯದ ತಪ್ಪಲಿನ ಹಳ್ಳಿಗಳು ತಮ್ಮ ಪ್ರಕೃತಿ ಸೌಂದರ್ಯದಿಂದಲೂ, ಶಾಂತವಾದ ವಾತಾವರಣದಿಂದಲೂ ಇಂತಹ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ. ಬನ್ನಿ, ಯಾವೆಲ್ಲ ಮುದ್ದಾದ ಹಳ್ಳಿಗಳಿಗೆ ನೀವು ಈ ಬೇಸಿಗೆಯ ಬಿರುಬಿಸಿಲಿನಲ್ಲೂ ಪ್ರವಾಸ ಮಾಡಿ ತಂಪಾಗಿ, ಹಿತವಾಗಿ ಸಮಯ ಕಳೆಯಬಹುದು (Summer Tour) ಎಂಬುದನ್ನು ನೋಡೋಣ.

Sikkim

ಝುಲುಕ್, ಸಿಕ್ಕಿಂ

ಪೂರ್ವ ಸಿಕ್ಕಿಂನ ಝುಲುಕ್‌ ಎಂಬ ಹಳ್ಳಿ ಭಾರತದ ಅತ್ಯಂತ ಪುರಾತನವಾದ ಸಿಲ್ಕ್‌ ರೂಟ್‌ ಹಾದಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದು. ಮೇ ತಿಂಗಳಲ್ಲಿ ಆಗಸವೂ ತಿಳಿಯಾಗಿದ್ದು, ಹಿತವಾದ ಚಳಿಯೂ ಆವರಿಸಿರುವ, ಪ್ರವಾಸಕ್ಕೆ ಅತ್ಯಂತ ಯೋಗ್ಯವಾದ ಸಮಯ. ಸಾಲು ಸಾಲು ಹಿಮಬೆಟ್ಟಗಳಿಂದ ಆವೃತವಾದ ಹಿಮಾಲಯದ ಮನಮೋಹಕ ದೃಶ್ಯಗಳನ್ನು ಈ ಹಳ್ಳಿಯಲ್ಲಿದ್ದುಕೊಂಡು ಆಸ್ವಾದಿಸುತ್ತಾ ಸಮಯ ಕಳೆಯಬಹುದು.

Chitkool, Himachal Pradesh

ಚಿತ್ಕೂಲ್‌, ಹಿಮಾಚಲ ಪ್ರದೇಶ

ಭಾರತ ಚೀನಾ ಗಡಿಯಲ್ಲಿರುವ ಜನರ ವಸತಿಯಿರುವ ಕೊನೆಯ ಹಳ್ಳಿ ಚಿತ್ಕೂಲ್‌. ಕಿನೌರ್‌ ಜಿಲ್ಲೆಯ ಅತ್ಯಂತ ಸುಂದರವಾದ ಹಿಮಾಲಯದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾದ ಜಾಗವಿದು. ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು, ಅಲ್ಲಿನ ಜನಜೀವನ, ಆಹಾರ ಇತ್ಯಾದಿಗಳೆಲ್ಲವುಗಳ ಪರಿಚಯ ಮಾಡಿಕೊಂಡು, ಅದ್ಭುತ ದೃಶ್ಯಗಳನ್ನೂ ಕಂಡು ಆನಂದಿಸಬಹುದು.

Naggar, Himachal Pradesh

ನಗ್ಗರ್‌, ಹಿಮಾಚಲ ಪ್ರದೇಶ

ಹಳೆಯ ದೇವಸ್ಥಾನಗಳು, ಅರಮನೆಗಳು, ಕಟ್ಟಡಗಳು ಇತ್ಯಾದಿಗಳಿರುವ ನಗ್ಗರ್‌ ಎಂಬ ಹಳ್ಳಿ ಮನಾಲಿಯಂತಹ ಕಿಕ್ಕಿರಿದು ತುಂಬಿರುವ ಪ್ರವಾಸಿಗಳಿಂದ ಮುಕ್ತವಾಗಿದೆ. ಜೊತೆಗೆ ಇಲ್ಲಿಂದ ಕಾಣುವ ಹಿಮಾಲಯದ ಪರ್ವತಶ್ರೇಣಿಗಳ ಸುಂದರ ದೃಶ್ಯ ನೆಮ್ಮದಿಯನ್ನು ಅರಸಿ ಬರುವ ಮಂದಿಗೆ ಹೇಳಿ ಮಾಡಿಸಿದ್ದು.

Pelling, Sikkim

ಪೆಲ್ಲಿಂಗ್‌, ಸಿಕ್ಕಿಂ

ಕಾಂಚನಜುಂಗಾದ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪೆಲ್ಲಿಂಗ್‌ ಎಂಬ ಸಿಕ್ಕಿಂನ ಪುಟ್ಟ ಊರು ಒಳ್ಳೆಯ ತಾಣ. ಶಾಂತಿಯುತವಾದ ಜಾಗವನ್ನರಸಿ ಬರುವ ಮಂದಿಗೆ ಪೆಲ್ಲಿಂಗ್‌ ಬಹಳ ಇಷ್ಟವಾಗಬಹುದು.

Malana, Himachal Pradesh

ಮಲಾನಾ, ಹಿಮಾಚಲ ಪ್ರದೇಶ

ಮಲಾನಾ ಎಂಬ ಪುಟ್ಟ ಹಳ್ಳಿ ಹಿಮಾಚಲ ಪ್ರದೇಶದ ಕಸೋಲ್‌ ಸಮೀಪದಲ್ಲಿರುವ ಹಳ್ಳಿ. ಇದು ತನ್ನ ವಿಶಿಷ್ಟ ಸಂಸೃತಿ ಹಾಗೂ ಆಚರಣೆಯ ವಿಶೇಷತೆಗಳನ್ನು ಹೊಂದಿರುವ ಸುಂದರ ತಾಣ. ಪಾರ್ವತಿ ಕಣಿವೆಯ ಮನಮೋಹಕ ಹಿಮಾಲಯದ ಸೌಂದರ್ಯವನ್ನು ಇದು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.

Zero, Arunachal Pradesh

ಝೀರೋ, ಅರುಣಾಚಲ ಪ್ರದೇಶ

ಅತ್ಯದ್ಭುತ ಪ್ರಕೃತಿ ಸೌಂದರ್ಯ, ಭತ್ತದ ಗದ್ದೆಗಳು, ಹಳೆಯ ಮರದ ಮನೆಗಳು ಇತ್ಯಾದಿಗಳಿಂದ ಮನಮೋಹಕವಾಗಿ ಕಾಣುವ ಝೀರೋ ಎಂಬ ಅರುಣಾಚಲ ಪ್ರದೇಶದ ಹಳ್ಳಿ ಪರಿಸರ ಪ್ರಿಯರು ಖಂಡಿತ ಇಷ್ಟಪಡಬಹುದಾದ ಹಾಗಿದೆ.

Mawlynnong, Meghalaya

ಮಾವ್ಲಿನಾಂಗ್‌, ಮೇಘಾಲಯ

ಪೂರ್ವ ಖಾಸಿ ಬೆಟ್ಟ ಪ್ರದೇಶಗಳಲ್ಲಿರುವ ಮೇಘಾಲಯದ ಈ ಪುಟ್ಟ ಹಳ್ಳಿಯ ಅಪರೂಪದ ಸಂಸ್ಕೃತಿ, ಶಿಸ್ತುಬದ್ಧ ಜೀವನ, ಸ್ವಚ್ಛತೆ ಎಲ್ಲವನ್ನೂ ನೋಡಲೇಬೇಕು. ನಗರದ ಮಂದಿ ಖಂಡಿತವಾಗಿಯೂ ಈ ಹಳ್ಳಿಯ ಜನರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಬೇರಿನಿಂದ ಮಾಡಲ್ಪಟ್ಟ ಸೇತುವೆಗಳು ಇಲ್ಲಿನ ವಿಶೇಷತೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather: ಮೈಸೂರಲ್ಲಿ ಬಿರುಗಾಳಿಗೆ ಸಿಲುಕಿ ವೃದ್ಧೆ ಸಾವು; ಮತ್ತೆ ಗುಡುಗು ಸಹಿತ ಗಾಳಿ ಮಳೆಯ ಎಚ್ಚರಿಕೆ

Karnataka Weather Forecast : ಬೆಂಗಳೂರಲ್ಲಿ ಎರಡು ದಿನಗಳಿಂದ ಮಳೆಯು ಅಬ್ಬರಿಸಿತ್ತು. ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಮಳೆ (Rain News) ಜತೆಗೆ ಹೀಟ್‌ ವೇವ್‌ (Heat Wave) ಅಲರ್ಟ್‌ ಅನ್ನು ಹವಾಮಾನ ಇಲಾಖೆ ನೀಡಿದೆ. ಇತ್ತ ನಿನ್ನೆ ಶುಕ್ರವಾರ ಬಂದ ಬಿರುಗಾಳಿ ಮಳೆಗೆ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

VISTARANEWS.COM


on

By

karnataka weather Forecast
ಬಿರುಗಾಳಿಗೆ ಸಿಲುಕಿ ಮೃತಪಟ್ಟ ವೃದ್ಧೆ ಮಾದಮ್ಮ
Koo

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಬಿಸಿಲು ಸಿಕ್ಸರ್‌ ಬಾರಿಸುತ್ತಿದ್ದರೆ, ಅತ್ತ ಮಳೆಯು ಫೋರ್ ಬಾರಿಸುತ್ತಿದೆ. ಗುರುವಾದ ಅಬ್ಬರಿಸಿದ ಬಿರುಗಾಳಿ ಮಳೆಗೆ (Rain News) ವೃದ್ಧೆಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಘಟನೆ (Karnataka Weather Forecast) ನಡೆದಿದೆ.

ಮಾದಮ್ಮ (66) ಮೃತ ದುರ್ದೈವಿ. ನಿನ್ನೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮಾದಮ್ಮ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂದಿನಂತೆ ತಮ್ಮ ಜಮೀನಿಗೆ ಮೇವು ತರಲು ಹೋದ ಸಂದರ್ಭದಲ್ಲಿ ಬಿರುಗಾಳಿ ಮಳೆಗೆ ಸಿಲುಕಿದ್ದಾರೆ. ಮೇವನ್ನು ತೆಗೆದುಕೊಂಡು ಬರುವಾಗ ರಸ್ತೆ ಮಧ್ಯದಲ್ಲಿ ಬಿರುಗಾಳಿ ಮಳೆಗೆ ಸಿಲುಕಿ ಕುಸಿದು ಬಿದ್ದಿದ್ದಾರೆ. ಕೆಳಗಡೆ ಬಿದ್ದ ಪರಿಣಾಮ ಮಾದಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ನಾಗರಹೊಳೆ ಅಭಯಾರಣ್ಯಕ್ಕೆ ತಂಪೆರೆದ ಮಳೆರಾಯ

ನಾಗರಹೊಳೆ ಅಭಯಾರಣ್ಯದಲ್ಲಿ ಮಳೆರಾಯ ತಂಪೆರೆದಿದ್ದಾನೆ. ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾಡ್ಗಿಚ್ಚು ಆತಂಕದಲ್ಲಿದ್ದ ಸಿಬ್ಬಂದಿಗೆ ವರಣನ ಸಿಂಚನದಿಂದ ಆತಂಕ ದೂರವಾಗಿದೆ. ಮೈಸೂರು ಜಿಲ್ಲೆ ಎಚ್.ಡಿ ಕೋಟೆ ಮಾರ್ಗ ಮಧ್ಯೆ ಬಿರುಗಾಳಿ ಸಹಿತ ಸುರಿದ ಮಳೆಗೆ ನೂರಾರು ಮರಗಳು ಧರೆಗುರುಳಿದ್ದವು.

ಎಚ್.ಡಿ ಕೋಟೆಯ ದಮ್ಮನಕಟ್ಟೆ ವಲಯದಲ್ಲಿ ಧಾರಾಕಾರ ಮಳೆಯಾಗಿದೆ. ಒಣಗಿ ನಿಂತ ಕಾನನಕ್ಕೆ ಜೀವ ಕಳೆ ಬಂದಿದೆ. ರಸ್ತೆಯ ಹಿಕ್ಕೆಲೆಗಳ ಹಸಿರು ಹುಲ್ಲು ಬರಲು ಮೊದಲ ಮಳೆ ಸಹಕಾರಿಯಾಗಿದೆ. ಸದ್ಯಕ್ಕೆ ಕಾಡಿಗೆ ಬೆಂಕಿ ಬೀಳುವ ಆತಂಕವು ಅರಣ್ಯ ಇಲಾಖೆ‌ ಸಿಬ್ಬಂದಿಗೆ ದೂರಾವಾಗಿದೆ.

ಶನಿವಾರವೂ ಮಳೆ ಅಬ್ಬರ

ಶನಿವಾರ ಮಧ್ಯಾಹ್ನದಂದು ಚಾಮರಾಜನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಐಎಂಡಿ ಮಾಹಿತಿ ನೀಡಿದೆ.

ಮೇ.5ರ ಭಾನುವಾರದಂದು ದಕ್ಷಿಣ ಒಳನಾಡಿನ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಏ. 6ರಂದು ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Accident News: ಬಿರುಗಾಳಿಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವು; ಬಿಸಿಲಾಘಾತಕ್ಕೆ ಇಬ್ಬರು ಬಲಿ

ಶಾಖದ ಅಲೆಯ ಎಚ್ಚರಿಕೆ

ಮಳೆ ನಡುವೆಯೂ ಕೆಲವೆಡೆ ಶಾಖದ ಅಲೆಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ, ಬೆಂಗಳೂರು ನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಾಖದ ಅಲೆಯ ವಾತಾವರಣವು ಹೆಚ್ಚಾಗಿರುತ್ತದೆ. ಮುಂದಿನ 4 ದಿನಗಳವರೆಗೆ ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ರಾತ್ರಿ ಸಮಯ ಬೆಚ್ಚಗಿನ ವಾತಾವರಣ ಇರಲಿದೆ. ಕರಾವಳಿಯಲ್ಲಿ ಬಿಸಿ ಗಾಳಿ ಬೀಸಲಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 37 ಮತ್ತು 24ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather: ಯೆಲ್ಲೋ ಅಲರ್ಟ್‌; ಬೆಂಗಳೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Karnataka Weather Forecast : ಬೆಂಗಳೂರು (Bengaluru Rains) ಸೇರಿದಂತೆ ಹಲವೆಡೆ ಗುಡುಗು ಸಿಡಿಲು ಸಹಿತ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ತಿಳಿಸಿದೆ. ಮಲೆನಾಡು ಮತ್ತು ದಕ್ಷಿಣ ಒಳನಾಡಿ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದ್ದು, ಹೀಟ್‌ ವೇವ್‌ ಅಲರ್ಟ್‌ ನೀಡಲಾಗಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಚದುರಿದಂತೆ ಹಗುರದಿಂದ ಮಳೆಯಾಗಬಹುದು. ಮಲೆನಾಡಿನ ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಅಲ್ಲಲ್ಲಿ ಮಳೆಯಾಗಲಿದೆ.

ಗುಡುಗು ಸಹಿತ ಮಳೆಗೆ ಯೆಲ್ಲೋ ಅಲರ್ಟ್

ರಾಮನಗರ, ಮೈಸೂರು, ಮಂಡ್ಯ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯು ಅಬ್ಬರಿಸಲಿದ್ದರೆ, ಇತ್ತ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ. ಪ್ರಮುಖವಾಗಿ ತುಮಕೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ಯಾದಗಿರಿ, ರಾಯಚೂರು ಸೇರಿ ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: Prajwal Revanna Case‌: ಗನ್‌ ಪಾಯಿಂಟ್‌ನಲ್ಲಿ ಜೆಡಿಎಸ್‌ ನಾಯಕಿ ಮೇಲೆ ಪ್ರಜ್ವಲ್‌ರಿಂದ ರೇಪ್‌? ಎಫ್‌ಐಆರ್‌ನಲ್ಲಿದೆ ಇಂಚಿಂಚು ಡಿಟೇಲ್ಸ್!

ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

ನಟ ಹಾಗೂ ಬಿಗ್‌ಬಾಸ್‌ ಕಂಟೆಸ್ಟಂಟ್‌ ಶೈನ್‌ ಶೆಟ್ಟಿ ಈ ಸಮ್ಮರ್‌ನಲ್ಲಿ (Summer Fashion) ಸಖತ್‌ ಕೂಲ್‌ ಆಗಿ ಕಾಣಿಸಿಕೊಂಡಿದ್ದಾರೆ.ಹೌದು, ಶೈನ್‌ ಶೆಟ್ಟಿಯವರ ಈ ಸೀಸನ್‌ನ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಯಾವ ಮಟ್ಟಿಗೆ ಪುರುಷರಿಗೆ ಇಷ್ಟವಾಗಿದೆ ಎಂದರೇ, ಇವರ ಫ್ಯಾನ್‌ ಫಾಲೋವಿಂಗ್‌ ಹುಡುಗರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಹುಡುಗರು ಕೂಡ ಇವರ ಫ್ಯಾಷನ್‌ ಸ್ಟೇಟ್‌ಮೆಂಟ್‌ಗೆ ಮಾರು ಹೋಗಿದ್ದಾರೆ.

Shine Shetty Summer Fashion

ಶೈನ್‌ ಶೆಟ್ಟಿ ನ್ಯಾಚುರಲ್‌ ಲುಕ್‌

“ಶೈನ್‌ ಶೆಟ್ಟಿ ಮೊದಲಿನಿಂದಲೂ ನ್ಯಾಚುರಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇವರು ಮೂಲತಃ ಮಂಗಳೂರಿನವರಾಗಿರುವುದರಿಂದಲೋ ಏನೋ ಬಿಸಿಲಲ್ಲೂ ಆರಾಮಾಗಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೇ, ತಮ್ಮ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಇವರ ಲುಕ್‌ಗೆ ಫಿದಾ ಆಗುತ್ತಾರಂತೆ. ತೀರಾ ಫ್ಯಾಷನ್‌ ಕಾನ್ಶಿಯಸ್‌ ಕೂಡ ಅಲ್ಲದ ಇವರ ಪ್ರತಿಯೊಂದು ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳು ಕೂಡ ಇವರನ್ನು ಸದಾ ನ್ಯಾಚುರಲ್‌ ಲುಕ್‌ನಲ್ಲಿ ಬಿಂಬಿಸುತ್ತವಂತೆ. ಇನ್ನು, ಇವರ ತಿಳಿ ವರ್ಣದ ಸ್ಕಿನ್‌ ಟೋನ್‌ನಿಂದಾಗಿ ಅವರು ಧರಿಸುವ ಎಲ್ಲಾ ಬಗೆಯ ಔಟ್‌ಫಿಟ್ಸ್‌ ಕೂಡ ಇವರಿಗೆ ಮ್ಯಾಚ್‌ ಆಗುತ್ತವಂತೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರ ಯೂನಿಕ್‌ ಫ್ಯಾಷನ್‌ನಲ್ಲಿ ಸೇರಿರುವ ಸಿಂಪಲ್‌ ಸ್ಮೈಲ್‌ ಇಡೀ ಲುಕ್‌ಗೆ ಸಾಥ್‌ ನೀಡುವುದನ್ನು ಗಮನಿಸಬಹುದು” ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಅಮಿತ್‌ ಪಾಂಡ್ಯಾ ಅವರ ಪ್ರಕಾರ, ಕೆಲವು ನಟರು ತಮ್ಮ ನ್ಯಾಚುರಲ್‌ ಲುಕ್‌ನಿಂದಾಗಿಯೇ ಆಕರ್ಷಕವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ.

Shine Shetty Summer Fashion

ಶೈನ್‌ ಶೆಟ್ಟಿ ಸಮ್ಮರ್‌ ಲುಕ್‌ನಲ್ಲಿ ಏನಿದೆ?

ಮನಸ್ಸಿಗೆ ಮುದ ನೀಡುವಂತಹ ಶೇಡ್‌ನ ಔಟ್‌ಫಿಟ್‌! ವೈಟ್‌ ಪ್ಯಾಂಟ್‌ ಕಾಟನ್‌ ಪ್ರಿಂಟೆಡ್‌ ಶರ್ಟ್.‌ ಜೊತೆಗೆ ಅದಕ್ಕೆ ಹೊಂದುವ ಹೇರ್‌ಸ್ಟೈಲ್‌, ಸಿಂಪಲ್‌ ಚಪ್ಪಲಿ ಎಲ್ಲವೂ ಶೈನ್‌ ಸಮ್ಮರ್‌ ಲುಕ್‌ನಲ್ಲಿ ಸೇರಿದೆ. ಸನ್‌ ಗ್ಲಾಸ್‌ ಇವರನ್ನು ಮತ್ತಷ್ಟು ಹ್ಯಾಂಡ್‌ಸಮ್‌ ಆಗಿ ಕಾಣುವಂತೆ ಬಿಂಬಿಸಿದೆ. ಇವರ ಒಟ್ಟಾರೆ ಲುಕ್ಗೆ ಫ್ಯಾಷನ್‌ ಸ್ಟೈಲಿಸ್ಟ್‌ಗಳಾದ ತೇಜಸ್ವಿನಿ ಹಾಗೂ ಖುಷಿಯವರ ಸ್ಟೈಲಿಂಗ್‌ ಸಪೋರ್ಟ್‌ ಇದೆ.

Shine Shetty Summer Fashion

ಶೈನ್‌ ಶೆಟ್ಟಿ ಫ್ಯಾಷನ್‌ ಮಂತ್ರ

ಇನ್ನು, ಕಳೆದ ಬಾರಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ ಬಗ್ಗೆ ಮಾತನಾಡಿದ್ದ ಶೈನ್‌ ಶೆಟ್ಟಿ, ನಾನಂತೂ ಇದುವೆರಗೂ ಇಂತಹದ್ದೇ ಫ್ಯಾಷನ್‌ ಹಾಗೂ ಸ್ಟೈಲ್‌ ಫಾಲೋಮಾಡಬೇಕೆಂಬ ರೂಲ್ಸ್‌ ಹಾಕಿಕೊಂಡಿಲ್ಲ! ಯಾವುದಾದರೂ ಸರಿಯೇ ನೋಡುಗರಿಗೆ ಪ್ಲೆಸೆಂಟ್‌ ಆಗಿ ಕಾಣಿಸಬೇಕು. ಧರಿಸಿದ ಮನಕ್ಕೂ ಮುದ ನೀಡಬೇಕು. ಸೀಸನ್‌ಗೆ ತಕ್ಕಂತೆ ಉಡುಪುಗಳನ್ನು ಆಯ್ಕೆ ಮಾಡಿ ಧರಿಸಬೇಕು. ಇನ್ನು ಕಲರ್‌ಗಳ ವಿಷಯಕ್ಕೆ ಬಂದಲ್ಲಿ, ನಮ್ಮ ಮುಖಕ್ಕೆ ಹಾಗೂ ಸಿನ್‌ ಟೋನ್‌ಗೆ ಹೊಂದುವಂತಹ ಬಣ್ಣದ ಉಡುಗೆಗಳನ್ನು ಸೆಲೆಕ್ಟ್‌ ಮಾಡುವುದು ಉತ್ತಮ ಎಂದಿದ್ದರು. ಇನ್ನು, ತಾರೆಯರ ಫ್ಯಾಷನ್‌ ಫಾಲೋ ಮಾಡಲು ಬಯಸುವ ಹುಡುಗರು, ಮೊದಲಿಗೆ ತಾವು ಕಾಪಿ ಮಾಡುತ್ತಿರುವ ಸ್ಟೈಲಿಂಗ್‌ ಮ್ಯಾಚ್‌ ಆಗುತ್ತವೆಯೇ! ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು, ಸುಖಸುಮ್ಮನೇ, ಕಂಡ ಕಂಡ ಫ್ಯಾಷನ್‌ ಫಾಲೋ ಮಾಡುವುದಲ್ಲ. ಇಮಿಟೇಟ್‌ ಮಾಡುವಾಗಲು ಅದು ತಮಗೆ ಹೊಂದುತ್ತದೆಯೇ ಎಂಬುದನ್ನು ಅರಿಯಬೇಕು ಎಂದು ಹುಡುಗರಿಗೆ ಸಲಹೆ ನೀಡಿದ್ದರು.

ಹುಡುಗರಿಗೆ ಫ್ಯಾಷನ್‌ ವಿಮರ್ಶಕರ ಟಿಪ್ಸ್‌

ಶೈನ್‌ ಶೆಟ್ಟಿಯಂತೆ ಸಮ್ಮರ್‌ ಫ್ಯಾಷನ್‌ ಫಾಲೋ ಮಾಡುವವರು ಕೆಲವು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು.

  • 1. ಲೈಟ್‌ ಶೇಡ್‌ ಆಯ್ಕೆ ಮಾಡಬೇಕು.
  • 2. ಕಾಟನ್‌ ಶರ್ಟ್‌ ಆಯ್ಕೆ ಉತ್ತಮ.
  • 3. ಗಾಳಿಯಾಡುವಂತಹ ಪಾದರಕ್ಷೆಗಳು ಕೂಲ್‌ ಆಗಿರಿಸುತ್ತವೆ.
  • 4. ಸನ್‌ಗ್ಲಾಸ್‌ ಬಿಸಿಲಿನಿಂದ ಕಣ್ಣುಗಳನ್ನು ಸಂರಕ್ಷಿಸುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Lok Sabha Election 2024: ಗೊಂದಲಕ್ಕೆ ಅವಕಾಶವಿಲ್ಲದೆ ಚುನಾವಣೆ ನಡೆಸಲು ಉ.ಕ ಡಿಸಿ ಸೂಚನೆ

Lok Sabha Election 2024: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ವೇಳೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ತರಬೇತಿಯ ಅವಧಿಯಲ್ಲಿ ತಮ್ಮಲ್ಲಿರುವ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು, ಮತದಾನದ ಯಾವುದೇ ಗೊಂದಲಗಳಿಗೆ ಒಳಗಾಗದೇ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ಕಾರ್ಯನಿರ್ವಹಿಸಬೇಕು. ಇವಿಎಂಗಳ ಬಳಕೆ, ವಿವಿ ಪ್ಯಾಟ್ ಬಳಕೆ ಸೇರಿದಂತೆ, ಮತದಾನ ದಿನದಂದು ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ನಡೆಯುವ ಎಲ್ಲಾ ಪ್ರಕ್ರಿಯೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸವಿವರವಾಗಿ ತಿಳಿದುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ್ ಸೂಚಿಸಿದ್ದಾರೆ.

VISTARANEWS.COM


on

training for election duty staff in Karwar
Koo

ಕಾರವಾರ: ಲೋಕಸಭಾ ಚುನಾವಣೆಗೆ (Lok Sabha Election 2024) ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ತರಬೇತಿಯ ಅವಧಿಯಲ್ಲಿ ತಮ್ಮಲ್ಲಿರುವ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು, ಮತದಾನದ ಯಾವುದೇ ಗೊಂದಲಗಳಿಗೆ ಒಳಗಾಗದೇ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.

ಕಾರವಾರದ ಸೈಂಟ್ ಮೈಕಲ್ ಶಾಲೆಯಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ನಡೆದ 2ನೇ ಹಂತದ ತರಬೇತಿ ವೀಕ್ಷಿಸಿ ಅವರು ಮಾತನಾಡಿದರು.

ತರಬೇತಿ ಸಮಯದಲ್ಲಿ ಇವಿಎಂಗಳ ಬಳಕೆ, ವಿವಿ ಪ್ಯಾಟ್ ಬಳಕೆ ಸೇರಿದಂತೆ, ಮತದಾನ ದಿನದಂದು ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ನಡೆಯುವ ಎಲ್ಲಾ ಪ್ರಕ್ರಿಯೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸವಿವರವಾಗಿ ತಿಳಿದುಕೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: Hockey India: ಭಾರತ ಮಹಿಳಾ ಹಾಕಿ ತಂಡಕ್ಕೆ 22 ವರ್ಷದ ಸಲೀಮಾ ನೂತನ ನಾಯಕಿ

ಚುನಾವಣಾ ಪ್ರಕ್ರಿಯೆಯ ಯಶಸ್ಸಿಗೆ ಮತಗಟ್ಟೆ ಮಟ್ಟದಲ್ಲಿ ನಡೆಯುವ ಕಾರ್ಯವು ಅತ್ಯಂತ ಪ್ರಮುಖವಾಗಿರುವುದರಿಂದ, ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಪರಸ್ಪರ ಸಮನ್ವಯದಿಂದ, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ತಮ್ಮ ಕರ್ತವ್ಯ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಮತಗಟ್ಟೆಗಳಲ್ಲಿ ಮತದಾನ ಮಾಡುವ ಸ್ಥಳವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಸೂಕ್ತ ರೀತಿಯಲ್ಲಿ ಸಿದ್ದಪಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮತಗಟ್ಟೆಗಳಲ್ಲಿ ಮತ್ತು ಮತದಾನದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮತದಾನ ಪ್ರಮಾಣದ ಹೆಚ್ಚಳಕ್ಕೆ ಜಿಲ್ಲಾಡಳಿತದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಸಾಧ್ಯತೆಯಿದೆ. ಮತ ಚಲಾಯಿಸಲು ಆಗಮಿಸುವ ಮತದಾರರು ತಮ್ಮ ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ಸೂಚಿಸಿರುವಂತೆ ಬಳಸಬಹುದಾದ ಪರ್ಯಾಯ ಗುರುತಿನ ದಾಖಲೆಗಳ ಕುರಿತಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಸಮಗ್ರ ಮಾಹಿತಿ ಹೊಂದಿರಬೇಕು. ಮತದಾನದ ಅವಧಿ ಮುಕ್ತಾಯದ ನಂತರವೂ ಸರದಿ ಸಾಲಿನಲ್ಲಿ ಇರುವವರಿಗೆ ಟೋಕನ್‌ಗಳನ್ನು ನೀಡುವ ಮೂಲಕ ಅವರಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂದರು.

ಇದನ್ನೂ ಓದಿ: Bomber Drone: ಭಾರತದ ಮೊದಲ ಬಾಂಬರ್ ಡ್ರೋನ್ ಅನಾವರಣ; ಇದರ ವಿಶೇಷತೆ ಹೀಗಿದೆ ನೋಡಿ

ತರಬೇತಿ ಕಾರ್ಯಕ್ರಮದಲ್ಲಿ ಕಾರವಾರ ತಹಸೀಲ್ದಾರ್ ಪುರಂದರ, ವಿವಿಧ ಸೆಕ್ಟರ್ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಉಪಸ್ಥಿತರಿದ್ದರು.

Continue Reading
Advertisement
Shreyas Talpade hints his heart attack side effect of Covid vaccine
ಬಾಲಿವುಡ್5 mins ago

Shreyas Talpade: ಶ್ರೇಯಸ್‌ ತಲ್ಪಾಡೆ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್‌ ಕಾರಣವಂತೆ! ನಟ ಹೇಳಿದ್ದೇನು?

IPL 2024 Points Table
ಕ್ರಿಕೆಟ್13 mins ago

IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

Blood Pressure
ಆರೋಗ್ಯ15 mins ago

Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

Prajwal Revanna Case
ಕರ್ನಾಟಕ17 mins ago

Prajwal Revanna Case: ದುಬೈ ವಿಮಾನದಲ್ಲೂ ರಾಜ್ಯಕ್ಕೆ ಬಾರದ ಸಂಸದ ಪ್ರಜ್ವಲ್ ರೇವಣ್ಣ

Tips To Prevent Curd
ಆಹಾರ/ಅಡುಗೆ27 mins ago

Tips To Prevent Curd: ಮೊಸರು ಹುಳಿಯಾಗದೇ ಇರಲು ಈ ಟಿಪ್ಸ್ ಪಾಲಿಸಿ

Terrorist attack
ದೇಶ46 mins ago

Terrorist Attack: ಪೂಂಚ್​​ನಲ್ಲಿ ಭಯೋತ್ಪಾದಕರ ದಾಳಿ; ಓರ್ವ ಯೋಧ ಹುತಾತ್ಮ, ಐವರ ಸ್ಥಿತಿ ಗಂಭೀರ

HD Revanna
ಕರ್ನಾಟಕ54 mins ago

HD Revanna: ತಡರಾತ್ರಿವರೆಗೂ ರೇವಣ್ಣರನ್ನು ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು

Prawal Revanna Case
ಕರ್ನಾಟಕ1 hour ago

Prajwal Revanna Case: ಕುಮಾರಸ್ವಾಮಿಯನ್ನು ಭೇಟಿಯಾಗಲು ಒಪ್ಪದ ಅಮಿತ್ ಶಾ; ಹೋಟೆಲ್‌ಗೆ ಬಂದು ವಾಪಸ್ ಹೋದ ಎಚ್ ಡಿ ಕೆ

Summer Health Tips
ಆರೋಗ್ಯ2 hours ago

Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

karnataka Weather Forecast
ಮಳೆ2 hours ago

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು; ಉಳಿದೆಡೆ ಗುಡುಗು ಸಹಿತ ಮಳೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌