Vistara News Launch | ಕನ್ನಡಿಗರ ಮನ, ಮನೆ ತಲುಪುವುದೇ ವಿಸ್ತಾರನ್ಯೂಸ್ ಆಶಯ: ಹರಿಪ್ರಕಾಶ್ ಕೋಣೆಮನೆ - Vistara News

ಕರ್ನಾಟಕ

Vistara News Launch | ಕನ್ನಡಿಗರ ಮನ, ಮನೆ ತಲುಪುವುದೇ ವಿಸ್ತಾರನ್ಯೂಸ್ ಆಶಯ: ಹರಿಪ್ರಕಾಶ್ ಕೋಣೆಮನೆ

ಪ್ರತಿಯೊಬ್ಬ ಕನ್ನಡಿಗ ಮನ, ಮನೆ ತಲುಪುವುದೇ ವಿಸ್ತಾರನ್ಯೂಸ್ ಚಾನೆಲ್‌ನ (Vistara News Launch) ಆಶಯ ಎಂದು ವಿಸ್ತಾರ ನ್ಯೂಸ್ ಚಾನೆಲ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಹೇಳಿದರು.

VISTARANEWS.COM


on

Vistara News Launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಸ್ತಾರನ್ಯೂಸ್ ಚಾನೆಲ್ (Vistara News Launch) ಅನಾವರಣಕ್ಕೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಅಗತ್ಯವಿತ್ತೇ ಎಂದು ಹಲವರು ಪ್ರಶ್ನಿಸಿದ್ದಾರೆ. ನಾವು ಚಾನೆಲ್ ಆರಂಭಿಸಿದ್ದೆ ಕನ್ನಡಿಗರ ಮನ ಮತ್ತು ಮನೆಯನ್ನು ತಲುಪಲು. ಅದೇ ಕಾರಣಕ್ಕಾಗಿ ವಿಸ್ತಾರ ಕನ್ನಡ ಸಂಭ್ರಮ ನಿರಂತರ ಕಾರ್ಯಕ್ರಮದ ಮೂಲಕ ಚಾನೆಲ್‌ ಶುಭಾರಂಭ ಮಾಡುತ್ತಿದ್ದೇವೆ. ಭಾನುವಾರ ಬೆಂಗಳೂರಲ್ಲಿ ಇಡೀ ವಿಸ್ತಾರ ಕನ್ನಡ ಸಂಭ್ರಮ ನಡೆದಿದ್ದರೆ, ರಾಜ್ಯದ 220 ಕಡೆಗೂ ಇಂಥ ವಿಸ್ತಾರ ಕನ್ನಡ ಸಂಭ್ರಮ ನಡೆಯಲಿದೆ ಎಂದು ವಿಸ್ತಾರನ್ಯೂಸ್‌ ಸಿಇಒ ಕೂಡ ಆಗಿರುವ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಸ್ತಾರನ್ಯೂಸ್ ಲಾಂಚ್ ಸಮಾರಂಭದಲ್ಲಿ ಮಾತನಾಡಿ ದ ಅವರು,ವೃತ್ತಿ ವಿಷಯದಲ್ಲಿ ನನಗೆ ಎರಡು ಆಯ್ಕೆಗಳಿದ್ದವು. ಮೊದಲನೆಯ ನಾಗರಿಕ ಪರೀಕ್ಷೆ ಬರೆದು ಅಧಿಕಾರಿಯಾಗವುದು. ಎರಡನೆಯದು ಪತ್ರಕರ್ತನಾಗುವುದು. ನಾನು ಎರಡು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಬರೆದೆ. ಎರಡನೇ ಬಾರಿ ಸಂದರ್ಶನದಲ್ಲಿ ಸಕ್ಸೆಸ್ ಆಗಲಿಲ್ಲ. ಮಾಧ್ಯಮ ವೃತ್ತಿಯತ್ತ ಹೊರಳಿದೆ. ಅಧಿಕಾರಿಯಾಗುವುದಕ್ಕಿಂತಲೂ ಹಲವು ವ್ಯಕ್ತಿಗಳನ್ನು ಸರಿಯಾದ ದಿಕ್ಕಿನಲ್ಲಿ ಚಿಂತಿಸುವಂತೆ, ಕೆಲಸ ಮಾಡುವಂತೆ ಹಚ್ಚುವ ಕೆಲಸವನ್ನು ಮಾಡುವುದು ಯೋಗ್ಯವೆನಿಸಿತು. ಅದೇ ಕಾರಣಕ್ಕೆ 22 ವರ್ಷದ ಹಿಂದೆ ನಾನು ಪತ್ರಕರ್ತನಾಗುವ ನಿರ್ಧಾರ ಕೈಗೊಂಡೆ ಎಂದು ಅವರು ತಿಳಿಸಿದರು.

ಮಾಧ್ಯಮ ವೃತ್ತಿಯಲ್ಲಿ ನನಗೆ ಬಹಳ ವೇಗವಾಗಿ ಉನ್ನತಿ ದೊರೆಯುತ್ತಾ ಹೋಯಿತು. 33ನೇ ವಯಸ್ಸಿಗೆ ಕರ್ನಾಟಕದ ನಂಬರ್ 1 ಪತ್ರಿಕೆಯನ್ನು ಕಟ್ಟುವ ಅವಕಾಶ ದೊರೆಯಿತು. ಆ ಬಳಿಕ ನನಗೆ 40 ವಯಸ್ಸು ತುಂಬುವ ಹೊತ್ತಿಗೆ 2ನೇ ನಂಬರ್ 1 ಪತ್ರಿಕೆ ಮುನ್ನಡೆಸುವ ಅವಕಾಶ ದೊರೆಯಿತು. ನಾನು ಈಗ ಮೂರನೇ ಹೆಜ್ಜೆಯನ್ನು ಇಡುತ್ತಿದ್ದೇನೆ. ಬದಲಾದ ಸಂದರ್ಭದಲ್ಲಿ ಮಾಧ್ಯಮಗಳನ್ನು ನವ ಮಾಧ್ಯಮಗಳನ್ನು ಮುನ್ನಡೆಸಬೇಕಿದೆ ಎಂದು ಕೋಣೆಮನೆ ಅವರು ಹೇಳಿದರು.

ಪತ್ರಿಕೋದ್ಯಮ ಹೆಮ್ಮೆಯ ವೃತ್ತಿಯಾಗಬೇಕು. ಗೌರವದ ವೃತ್ತಿಯಾಗಬೇಕು. ಇದು ನಮ್ಮ ಆಶಯ ಮತ್ತು ಅಪೇಕ್ಷೆಯಾಗಿದೆ. ಯಾವುದೇ ವೃತ್ತಿಯಲ್ಲಿ ಏಕತಾನತೆ ಇರುತ್ತದೆ. ಆದರೆ, ಮಾಧ್ಯಮದಲ್ಲಿ ಅದಕ್ಕೆ ಅವಕಾಶವಿಲ್ಲ. ಸಮಾಜದ ಎಲ್ಲ ಜನರೊಂದಿಗೆ, ಸಂಸ್ಕೃತಿಗಳೊಂದಿಗೆ ಕೆಲಸ ಮಾಡುವ ಅವಕಾಶವಿದೆ. ಅದೇ ಕಾರಣಕ್ಕೆ ಅದು ಪ್ರಮುಖ ವೃತ್ತಿಯಾಗಿದೆ ಎಂದು ಅವರು ಹೇಳಿದರು.

ಮಾಧ್ಯಮವು ಸ್ವತಂತ್ರವಾಗಿರಬೇಕು ಎಂಬುದು ನನ್ನ ಇನ್ನೊಂದು ಆಸೆ. ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶಗಳು ದೊರೆಯಬೇಕು. ಆ ಕಾರಣಕ್ಕಾಗಿ ನಾವು ಈ ಹೊಸ ಮಾಧ್ಯಮ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಈಗಾಗಲೇ ನಾವು ವಿಸ್ತಾರ ನ್ಯೂಸ್, ಎಂಟರ್ಟೈನ್ಮೆಂಟ್, ಮ್ಯೂಸಿಕ್ ಚಾನೆಲ್‌‌ಗೆ ಅನುಮತಿಗಳನ್ನು ಪಡೆದುಕೊಂಡಿದ್ದೇವೆ. ಮೂರ್ನಾಲ್ಕು ತಿಂಗಳಲ್ಲಿ ಈ ಚಾನೆಲ್‌ಗಳು ಶುರುವಾಗಲಿವೆ ಎಂದು ಅವರು ತಿಳಿಸಿದರು.

ನಮ್ಮ ಆಶಯ ಜನಪರವಾಗಿರಬೇಕು. ಆ ಮೂಲಕ ದೇಶ, ರಾಜ್ಯದ ಅಭಿವೃದ್ಧಿಗೆ ಕಿಂಚಿತ್ ಕಾಣಿಕೆ ಕೊಡಬೇಕು. ನಾವು ಬೇರೆಯವರಿಗೆ ಬೊಟ್ಟು ಮಾಡುತ್ತೇವೆ. ಆದರೆ, ನಾವು ಕೂಡ ಈ ವ್ಯವಸ್ಥೆಯ ಭಾಗ ಮರೆಯುತ್ತೇವೆ. ಸದಭಿರುಚಿ ಚಾನೆಲ್ ಆಗಬೇಕೆಂಬುದು ನಮ್ಮ ಆಶಯ. ಸಮಾಜವನ್ನು ಒಳಗೊಂಡ ಚಾನೆಲ್ ಕಟ್ಟುವುದು ನಮ್ಮ ಮತ್ತೊಂದು ಆಶಯ. ವಿಸ್ತಾರನ್ಯೂಸ್ ಚಾನೆಲ್ ‌ಯಾರ ಮಾಲೀಕರದ್ದು ಅಲ್ಲ, ಹೂಡಿಕೆದಾರರದ್ದು ಅಲ್ಲ, ಇದು ಕನ್ನಡಿಗರ ಚಾನೆಲ್ ಎಂದು ತಿಳಿಸಿದರು.

ಇದನ್ನೂ ಓದಿ | Vistara News Launch | ತರುಣ ಉದ್ಯಮಿಗಳಿಗೆ ಬೆಂಬಲ, ಕಾಯಕಯೋಗಿ ಉಮಾಶಂಕರ್ ಹಂಬಲ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು ಗ್ರಾಮಾಂತರ

Lok Sabha Election 2024: ಬಿಜೆಪಿ ಕೈಗೊಂಬೆ ಐಟಿ ಅಧಿಕಾರಿಗಳಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ: ಡಿ.ಕೆ. ಸುರೇಶ್

Lok Sabha Election 2024: ಬಿಜೆಪಿ ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.

VISTARANEWS.COM


on

MP D K Suresh latest statement In Anekal
Koo

ಆನೇಕಲ್: ಬಿಜೆಪಿ (BJP) ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ (Lok Sabha Election 2024) ಆರೋಪಿಸಿದ್ದಾರೆ.

ಆನೇಕಲ್‌ನಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಕೆಲವು ಅಧಿಕಾರಿಗಳು ಬಂದು ನಮ್ಮ ಕಾರ್ಯಕರ್ತರನ್ನು, ಅವರ ಕುಟುಂಬದ ಹೆಣ್ಣುಮಕ್ಕಳನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಬರೆಯುತ್ತಿದ್ದು, ಐಟಿ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಅವರ ಕೆಲಸ ಕೇವಲ ಪರಿಶೀಲನೆ ಮಾಡುವುದು ಮಾತ್ರ. ಅದನ್ನು ಬಿಟ್ಟು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಏ. 24ರಂದು ಭಾಷಾ ಉತ್ಸವ

ನನ್ನ ಚಾಲಕರ ಮನೆಯಲ್ಲಿ ಅವರ ಕುಟುಂಬದವರನ್ನು ಎಳೆದಾಡಿದ್ದಾರೆ. ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರನ್ನು ಒಂಟಿ ಕಾಲಲ್ಲಿ ನಿಲ್ಲಿಸಿದ್ದಾರೆ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಬಿಜೆಪಿಯವರ ಕೈಗೊಂಬೆಯಾಗಿ ಐಟಿ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದೆ. ಅವರು ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಅಧಿಕಾರಿಗಳ ದುರ್ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಿಷ್ಪಕ್ಷಪಾತ ಚುನಾವಣೆ ಮಾಡಬೇಕು. ನಾನು ನನ್ನ ಕೆಲಸದ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ ಹೊರತು, ನನಗೆ ಯಾರನ್ನು ಬೆದರಿಸುವ ಅಗತ್ಯವಿಲ್ಲ ಎಂದು ಸಂಸದ ಡಿ.ಕೆ ಸುರೇಶ್‌ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಗೆಲುವಿಗಾಗಿ ಚಾಮುಂಡಿ ಬೆಟ್ಟ ಹತ್ತಿ ಪ್ರಾರ್ಥಿಸಿದ ಅಭಿಮಾನಿಗಳು

ಜನತಾದಳ ಹಾಗೂ ಜೆಡಿಎಸ್‌ನವರು ಕ್ಷುಲ್ಲಕ ರಾಜಕಾರಣ ಮಾಡುವುದರಲ್ಲಿ ಹೆಸರುವಾಸಿ. ಅವರು ಹಿರಿಯರಿದ್ದು, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮಾಡಿರುವ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದ ಅವರು, ನಾನು ಹಾಗೂ ಶಿವಕುಮಾರ್ ಅವರಿಗೆ ಕಲ್ಲು ಹೊಡೆದಿದ್ದಾರೆ ಎಂದು ಹೇಳುತ್ತಾರಲ್ಲ, ಅವರ ಕುಟುಂಬದಲ್ಲಿ ಯಾರೆಲ್ಲಾ ಎಲ್ಲಿ ಕಲ್ಲು ಹೊಡೆದಿದ್ದಾರೆ ಎಂದು ನಾನು ತೋರಿಸುತ್ತೇನೆ. ಅವರು ಯಾರ ಜಮಿನುಗಳನ್ನು ಯಾರ ಹೆಸರಲ್ಲಿ ಹಾಕಿಕೊಂಡಿದ್ದಾರೆ ಎಂಬುದನ್ನು ತೋರಿಸಬಹುದು. ಆದರೆ ಅದರ ಅಗತ್ಯ ನಮಗಿಲ್ಲ ಎಂದು ತಿಳಿಸಿದ್ದಾರೆ.

Continue Reading

ಬಳ್ಳಾರಿ

Ballari News: ಬಳ್ಳಾರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆ

Ballari News: ಬಳ್ಳಾರಿ ನಗರದ ಗಾಂಧಿನಗರ ಮಾರುಕಟ್ಟೆ ಸಮೀಪ ಗುರುವಾರ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಲಾಯಿತು.

VISTARANEWS.COM


on

New district congress office inaugurated in Ballari
Koo

ಬಳ್ಳಾರಿ: ನಗರದ ಗಾಂಧಿನಗರ ಮಾರುಕಟ್ಟೆ ಸಮೀಪ ಗುರುವಾರ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು (Ballari News) ಉದ್ಘಾಟಿಸಲಾಯಿತು.

ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿ ಪಕ್ಷದ ಹಿರಿಯ ಮುಖಂಡರು ಪೂಜೆ ಸಲ್ಲಿಸುವ ಮೂಲಕ ಗುರುವಾರ ಉದ್ಘಾಟಿಸಿದರು.

ಇದನ್ನೂ ಓದಿ: Money Guide: ತುರ್ತು ಚಿಕಿತ್ಸೆಗ ಪಿಎಫ್​ನಿಂದ 1 ಲಕ್ಷ ರೂ. ಪಡೆಯಬಹುದು; ಹೇಗೆ ಗೊತ್ತಾ?

ಈ ವೇಳೆ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ, ಈ ನೂತನ ಕಚೇರಿಯ ಸ್ಥಾಪನೆಯು ನಮ್ಮ ಕಾರ್ಯಕರ್ತರಲ್ಲಿ ಹೊಸ ಚೈತನ್ಯವನ್ನು ತಂದಿದೆ. ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಪರ ಎಲ್ಲಾ ಕಾರ್ಯಕರ್ತರು ಸಂಘಟಕರಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ನಗರದ ಹೃದಯ ಭಾಗದಲ್ಲಿ ಕಚೇರಿಯನ್ನು ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಏ. 24ರಂದು ಭಾಷಾ ಉತ್ಸವ

ಈ ಸಂದರ್ಭದಲ್ಲಿ ಲಿಡ್ಕರ್ ಮಂಡಳಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಪಾಲಿಕೆಯ ಮೇಯರ್ ಬಿ. ಶ್ವೇತಾ ಸೋಮು, ಉಪಮೇಯರ್‌ ಬಿ.ಜಾನಕಮ್ಮ, ಪಾಲಿಕೆ ಸದಸ್ಯರಾದ ಎಂ. ಪ್ರಭಂಜನಕುಮಾರ್, ಪಿ. ಗಾದೆಪ್ಪ, ನಂದೀಶ್, ಮುಖಂಡರಾದ ಮುರಳಿ ಕೃಷ್ಣ, ವೆಂಕಟೇಶ್ ಹೆಗಡೆ, ಕಮಲಾ ಮರಿಸ್ವಾಮಿ, ಎಂ.ಎಸ್. ಮಂಜುಳಾ, ಬಿ. ರಾಮ್ ಪ್ರಸಾದ್, ವಿವೇಕ್, ಬೆಣಕಲ್ ಬಸವರಾಜ್ ಗೌಡ, ಮಿಂಚು ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Murder Case: ಬೆಂಗಳೂರಲ್ಲಿ ಜೋಡಿ ಕೊಲೆ: ಅನೈತಿಕ ಸಂಬಂಧ ಸಾಕು ಎಂದವಳ ಕೊಂದ; ತಲೆ ಒಡೆದು ಸಾಯಿಸಿದ ಹುಡುಗಿ ಅಮ್ಮ!

Murder Case: ಸುರೇಶ್ ಮತ್ತು ಅನುಷಾ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದರು. ಸುರೇಶ್‌ಗೆ ಮದುವೆಯಾಗಿತ್ತು. ಇಷ್ಟಿದ್ದರೂ ಸುರೇಶ್ ಹಾಗೂ ಅನುಷಾ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಸುರೇಶ್ ಗೊರಗುಂಟೆ ಪಾಳ್ಯ ನಿವಾಸಿಯಾಗಿದ್ದ. ಅನುಷಾ ಶಾಕಾಂಬರಿ ನಗರ ನಿವಾಸಿಯಾಗಿದ್ದಾಳೆ. ಆದರೆ, ಈ ಮಧ್ಯೆ ಅನುಷಾಗೆ ಸಂಬಂಧವನ್ನು ಮುಂದುವರಿಸುವುದು ಇಷ್ಟ ಇರಲಿಲ್ಲ. ಹೀಗಾಗಿ ಗುರುವಾರ ಭೇಟಿಯಾಗಿ ಸಂಬಂಧಕ್ಕೆ ಅಂತ್ಯ ಹಾಡಲು ತೀರ್ಮಾನವನ್ನು ಮಾಡಿದ್ದರು ಎನ್ನಲಾಗಿದೆ. ಆದರೆ, ಈ ಭೇಟಿಯೇ ಜೀವಕ್ಕೆ ಮುಳುವಾಗಿದೆ.

VISTARANEWS.COM


on

Murder case Double murder in Bengaluru
Koo

ಬೆಂಗಳೂರು: ಬೆಂಗಳೂರಿನಲ್ಲಿ ಅನೈತಿಕ ಸಂಬಂಧವೊಂದು 2 ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಕಳೆದ ಐದು ವರ್ಷಗಳಿಂದ ಅಕ್ರಮ ಸಂಬಂಧದಲ್ಲಿದ್ದ ಜೋಡಿ ಮಧ್ಯೆ ಬಿರುಕು ಬಂದಿತ್ತು. ಎರಡು ಮಕ್ಕಳ ತಂದೆ ಜತೆ ಸಂಬಂಧ ಇಟ್ಟುಕೊಂಡಿದ್ದ ಯುವತಿಯು ಇನ್ನು ಸಾಕು ದೂರ ಇರೋಣ ಎಂದಿದ್ದೇ ಕೊಲೆಗೆ ಕಾರಣವಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಯುವತಿಯನ್ನು ಚಾಕುವಿನಿಂದ ಕೊಚ್ಚಿ ಕೊಚ್ಚಿ ಕೊಂದಿದ್ದಾನೆ. ಈ ವೇಳೆ ಮಗಳ ರಕ್ಷಣೆಗೆ ಧಾವಿಸಿದ ತಾಯಿಯು ಇಟ್ಟಿಗೆಯಿಂದ ಆತನ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಹೀಗಾಗಿ ಆತನೂ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಾರಕ್ಕಿ ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ. ಸುರೇಶ್ (46) ಹಾಗೂ ಅನುಷಾ (25) ಕೊಲೆಯಾದವರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಏನಿದು ದ್ವೇಷ?

ಸುರೇಶ್ ಮತ್ತು ಅನುಷಾ ಹಲವಾರು ವರ್ಷಗಳಿಂದ ಪರಿಚಿತರಾಗಿದ್ದರು. ಸುರೇಶ್‌ಗೆ ಮದುವೆಯಾಗಿತ್ತು. ಇಷ್ಟಿದ್ದರೂ ಸುರೇಶ್ ಹಾಗೂ ಅನುಷಾ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಸುರೇಶ್ ಗೊರಗುಂಟೆ ಪಾಳ್ಯ ನಿವಾಸಿಯಾಗಿದ್ದ. ಅನುಷಾ ಶಾಕಾಂಬರಿ ನಗರ ನಿವಾಸಿಯಾಗಿದ್ದಾಳೆ. ಆದರೆ, ಈ ಮಧ್ಯೆ ಅನುಷಾಗೆ ಸಂಬಂಧವನ್ನು ಮುಂದುವರಿಸುವುದು ಇಷ್ಟ ಇರಲಿಲ್ಲ. ಹೀಗಾಗಿ ಗುರುವಾರ ಭೇಟಿಯಾಗಿ ಸಂಬಂಧಕ್ಕೆ ಅಂತ್ಯ ಹಾಡಲು ತೀರ್ಮಾನವನ್ನು ಮಾಡಿದ್ದರು ಎನ್ನಲಾಗಿದೆ.

ಆದರೆ, ಅನುಷಾ ತನ್ನ ಕೈ ತಪ್ಪಿ ಹೋಗುತ್ತಾಳೆ ಎಂದು ಕೋಪಗೊಂಡಿದ್ದ ಸುರೇಶ್‌, ಸಂಬಂಧವನ್ನು ಬಿಡಬೇಡ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದ. ಆಕೆ ತನ್ನ ಸಂಪರ್ಕ ನಿಲ್ಲಿಸುವ ಎಂದು ಹೇಳಿದ್ದರೂ ಕೇಳಲಿಲ್ಲ. ಈ ವೇಳೆ ಕೋಪಗೊಂಡ ಸುರೇಶ್‌ ಮೊದಲೇ ನಿರ್ಧರಿಸಿ ತಂದಿದ್ದ ಚಾಕುವನ್ನು ಹೊರಗೆ ತೆಗೆದಿದ್ದಾನೆ. ಕೊನೆಗೆ ಮಾತಿಗೆ ಮಾತು ಬೆಳೆದಿದ್ದರಿಂದ ಅನುಷಾ ಮೇಲೆ ಇರಿದಿದ್ದಾನೆ.

ನಡೆದು ಹೋಯಿತು ಎರಡು ಕೊಲೆ!

ಈ ವೇಳೆ ಮಗಳ ವಿಷಯ ತಿಳಿದಿದ್ದ ಅನುಷಾ ತಾಯಿ ಗೀತಾ ಸಹ ಅಲ್ಲಿಗೆ ಬಂದಿದ್ದರು. ಸುರೇಶ್ ತನ್ನ ಮಗಳಿಗೆ ಚಾಕು ಹಾಕುತಿದ್ದಾಗ ತಡೆಯಲು ಅವರು ಬಂದಿದ್ದಾರೆ. ಆದರೆ, ಇದನ್ನು ಕೇಳದ ಸುರೇಶ್‌ ಚಾಕುವಿನಿಂದ ಇರಿಯುತ್ತಲೇ ಇದ್ದ. ಹೀಗಾಗಿ ಮಗಳನ್ನು ರಕ್ಷಣೆ ಮಾಡುವ ಸಲುವಾಗಿ ಗೀತಾ ಪಕ್ಕದಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಸುರೇಶ್‌ ತಲೆ ಮೇಲೆ ಜೋರಾಗಿ ಹೊಡೆದಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸುರೇಶ್‌ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅನುಷಾ ಸಹ ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಸದ್ಯ ಆರೋಪಿ ಗೀತಾಳನ್ನು ಜೆಪಿ‌ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುರೇಶ್‌ಗೆ ಇಬ್ಬರು ಮಕ್ಕಳು

ಸುರೇಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅನುಷಾಗೆ ಇನ್ನು ಮದುವೆಯಾಗಿರಲಿಲ್ಲ. ಆದರೂ ಇಬ್ಬರ ನಡುವೆ ಐದು ವರ್ಷಗಳಿಂದ ಪ್ರೀತಿ ಇತ್ತು. ಇಬ್ಬರ ಪ್ರೇಮ ಪುರಾಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇಂದು ಸಹ ಬೆಳಗ್ಗೆ ಪೊಲೀಸ್‌ ಠಾಣೆಯಲ್ಲಿ ರಾಜೀ ಪಂಚಾಯಿತಿ ನಡೆದಿತ್ತು. ಅದಾದ ಬಳಿಕವೂ ಸುರೇಶ್ ಹಾಗೂ ಅನುಷಾ ಪಾರ್ಕ್‌ನಲ್ಲಿ ಕೊನೇ ಭೇಟಿಗೆ ನಿಶ್ಚಯಿಸಿದ್ದರು. ಅಲ್ಲಿ ಇಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

Continue Reading

ಬಳ್ಳಾರಿ

Lok Sabha Election 2024: ಬೆಲೆ ಏರಿಕೆ ಮಾಡಿದ್ದೇ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ: ಸಂತೋಷ್‌ ಲಾಡ್‌

Lok Sabha Election 2024: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ, ಈ. ತುಕಾರಾಂ ಅವರನ್ನು ಗೆಲ್ಲಿಸಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಮನವಿ ಮಾಡಿದ್ದಾರೆ.

VISTARANEWS.COM


on

Minister Santosh Lad statement in Sandur Taluk
Koo

ಬಳ್ಳಾರಿ: ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದ್ದೇ ಸಾಧನೆ. ಬಡವರ ಬದುಕಿಗೆ ಏನೂ ಕೊಡಲಿಲ್ಲ. ಹಾಲು ಗ್ಯಾಸ್‌, ಪೆಟ್ರೋಲ್‌, ಎಲ್ಲದರ ಬೆಲೆ ಗಗನಕ್ಕೇರಿದೆ. ಸುಡಿಗಾಡಿಗೆ ಹೋಗಿ ತೆಂಗಿನ ಕಾಯಿ ಒಡೆದರೂ ಜಿಎಸ್‌ಟಿ (GST) ಹಾಕ್ತಾರೆ. ಎಲ್ಲಾ ತೆರಿಗೆ ಸಂಗ್ರಹಿಸಿ ಬಡವರಿಗೆ ನೀಡದೆ ವಂಚಿಸಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ (Lok Sabha Election 2024) ಹೇಳಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಅವರ ಪರ ಪ್ರಚಾರದ ಅಂಗವಾಗಿ ಚೋರನೂರು ಗ್ರಾಮದಲ್ಲಿ ನಡೆದ ದೇವಗಿರಿ, ಬಂಡ್ರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಏ. 24ರಂದು ಭಾಷಾ ಉತ್ಸವ

ಕೇಂದ್ರ ಸರ್ಕಾರದಿಂದ ಉದ್ಯಮಗಳ ಸಾಲ ಮನ್ನಾ ಆಗಿದೆ. ಆದರೆ ರೈತರ ಸಾಲ ಮನ್ನಾ ಆಗಿಲ್ಲ. ಅವರಿಗೆ ಯಾವುದೇ ಯೋಜನೆ ಜಾರಿ ಮಾಡಲಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ರೈತರಿಗೆ ಒಳಿತು ಮಾಡಿದ ಏಕೈಕ ಪಕ್ಷ ಅದುವೇ ಕಾಂಗ್ರೆಸ್‌ ಎಂದು ತಿಳಿಸಿದರು.

ವಿಧವಾ ವೇತನ ಜಾರಿ ಮಾಡಿದ್ದು ಇಂದಿರಾ ಗಾಂಧಿಯವರು. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಶಾಸನ, ಬಿಸಿಯೂಟ ಆರಂಭ ಮಾಡಿದ್ದು ಕಾಂಗ್ರೆಸ್. ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರ ನೇಮಕ‌ ಮಾಡಿದ್ದು ಕಾಂಗ್ರೆಸ್‌. ಆದ್ದರಿಂದ ಈ ಬಾರಿ ಕಾಂಗ್ರೆಸ್‌ಗೆ ಮತ ನೀಡಿ. ಈ. ತುಕಾರಾಂ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಈ. ತುಕಾರಾಂ ಮಾತನಾಡಿ, ಆರ್ಟಿಕಲ್‌ 371 ಜೆ ಜಾರಿ ಮಾಡಿದ್ದರಿಂದ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಇದನ್ನು ಜಾರಿ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಇದನ್ನು ಬಿಜೆಪಿಯವರು ವಿರೋಧ ಮಾಡಿದ್ದರು. ಜನರಿಗೆ ಬೇಕಾದ ಕಾನೂನುಗಳನ್ನು ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್‌. ಆದ್ದರಿಂದ ಈ ಬಾರಿ ಕಾಂಗ್ರೆಸ್‌ ಬೆಂಬಲಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Job Alert: ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿದೆ 4,660 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

ಸಭೆಯಲ್ಲಿ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading
Advertisement
IPL 2024
ಕ್ರೀಡೆ10 mins ago

IPL 2024 : ಮದುವೆ ಆಮಂತ್ರಣಕ್ಕೆ ಸಿಎಸ್​ಕೆ ಥೀಮ್​, ಯುವ ಜೋಡಿಯ ಅಭಿಮಾನಕ್ಕೆ ಮೆಚ್ಚುಗೆ

MP D K Suresh latest statement In Anekal
ಬೆಂಗಳೂರು ಗ್ರಾಮಾಂತರ10 mins ago

Lok Sabha Election 2024: ಬಿಜೆಪಿ ಕೈಗೊಂಬೆ ಐಟಿ ಅಧಿಕಾರಿಗಳಿಂದ ಕಾರ್ಯಕರ್ತರ ಮೇಲೆ ದೌರ್ಜನ್ಯ: ಡಿ.ಕೆ. ಸುರೇಶ್

New district congress office inaugurated in Ballari
ಬಳ್ಳಾರಿ12 mins ago

Ballari News: ಬಳ್ಳಾರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆ

Murder case Double murder in Bengaluru
ಕರ್ನಾಟಕ15 mins ago

Murder Case: ಬೆಂಗಳೂರಲ್ಲಿ ಜೋಡಿ ಕೊಲೆ: ಅನೈತಿಕ ಸಂಬಂಧ ಸಾಕು ಎಂದವಳ ಕೊಂದ; ತಲೆ ಒಡೆದು ಸಾಯಿಸಿದ ಹುಡುಗಿ ಅಮ್ಮ!

Make In India
ಪ್ರಮುಖ ಸುದ್ದಿ17 mins ago

ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

Minister Santosh Lad statement in Sandur Taluk
ಬಳ್ಳಾರಿ26 mins ago

Lok Sabha Election 2024: ಬೆಲೆ ಏರಿಕೆ ಮಾಡಿದ್ದೇ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ: ಸಂತೋಷ್‌ ಲಾಡ್‌

Karnataka Weather
ಮಳೆ41 mins ago

Karnataka Weather : ಕೊಪ್ಪಳದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು; ಹೊತ್ತಿ ಉರಿದ ತೆಂಗಿನ ಮರ, ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ

Murder case Man stabbed to death 9 times for refusing to love
ಧಾರವಾಡ1 hour ago

Murder Case: ಕಾರ್ಪೋರೇಟರ್‌ ಮಗಳ ಕೊಲೆ; ಪ್ರೀತಿಸಲು ನಿರಾಕರಿಸಿದ್ದಕ್ಕೆ 9 ಬಾರಿ ಚಾಕುವಿನಿಂದ ಇರಿದ ಫಯಾಜ್‌!

Infosys
ವಾಣಿಜ್ಯ1 hour ago

Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

EPF New rules
ವಾಣಿಜ್ಯ1 hour ago

Money Guide: ತುರ್ತು ಚಿಕಿತ್ಸೆಗೆ ಪಿಎಫ್​ನಿಂದ 1 ಲಕ್ಷ ರೂ. ಪಡೆಯಬಹುದು; ಹೇಗೆ ಗೊತ್ತಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌