vistara top 10 news siddaramaiah constituency confusion continues to congress first list on wednesday and more newsವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!
ʻʻಕೋಲಾರ ಸುರಕ್ಷಿತ ಅಲ್ಲ ಎಂಬ ವರದಿಗಳಿವೆ. ಹೀಗಾಗಿ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿʼʼ ಎಂಬ ಹೈಕಮಾಂಡ್‌ ಸಂದೇಶದ ಬಳಿಕ ಅಡಕತ್ತರಿಯಲ್ಲಿ ಸಿಲುಕಿರುವ ಹಿರಿಯ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಕೋಲಾರದ ಅಭಿಮಾನಿಗಳನ್ನು ಸಮಾಧಾನ ಮಾಡಲು ʻಫ್ಯಾಮಿಲಿ ಅಸ್ತ್ರʼ ಪ್ರಯೋಗ ಮಾಡಿದ್ದಾರೆ. ನಾನು ಹೆಂಡತಿ ಮತ್ತು ಮಗನ ಜತೆ ಚರ್ಚೆ ಮಾಡಿ ಗುರುವಾರ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ (Karnataka Elections) ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಳೆದ ಎರಡು ತಿಂಗಳಲ್ಲಿ ಬರೊಬ್ಬರಿ 13 ಬಾರಿ ತಮ್ಮ ಕ್ಷೇತ್ರ ಶಿಗ್ಗಾಂವಿಗೆ ಪ್ರವಾಸ ಮಾಡಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Elections : ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಕಟ್ಟಿ ಹಾಕಲು ಹೊರಟ ಕಾಂಗ್ರೆಸ್‌ಗೆ ಈಗ ಖಾದ್ರಿ ಸಂಕಟ!

3. Nitin Gadkari : ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?
ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Amritpal Singh: 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ? ಪಂಜಾಬ್‌ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ
ಖಲಿಸ್ತಾನಿಗಳ ಪರ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಅಮೃತ್‌ಪಾಲ್‌ ಸಿಂಗ್‌ (Amritpal Singh) ಬಂಧನಕ್ಕಾಗಿ ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆತನನ್ನು ಬಂಧಿಸಲು ರಾಜ್ಯದ ಪೊಲೀಸರು ಹರಸಾಹಸಪಡುತ್ತಿದ್ದರೂ ಇದುವರೆಗೆ ಬಂಧನ ಸಾಧ್ಯವಾಗಿಲ್ಲ. ಆತನ ಆಪ್ತರ ಬಂಧನ, ಕಾರು ವಶ, ಶಸ್ತ್ರಾಸ್ತ್ರಗಳ ಜಪ್ತಿ ಮಾತ್ರ ಸಾಧ್ಯವಾಗಿದೆ. ಇನ್ನು ಬಂಧನ ಕಾರ್ಯಾಚರಣೆ ಕುರಿತು ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election: ಯುಗಾದಿಗೆ ಕಾಂಗ್ರೆಸ್‌ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್‌
ಈಗಾಗಲೆ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಎರಡು ಸಭೆಗಳನ್ನು ನಡೆಸಿರುವ ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣೆಯ ಮೊದಲ ಪಟ್ಟಿಯನ್ನು ಯುಗಾದಿ ದಿನವಾದ ಬುಧವಾರ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಮಾಜಿ ಸಚಿವ ಹಾಗೂ ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಕೆ.ಜೆ. ಜಾರ್ಜ್‌ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಒಟ್ಟು 155 ಲಕ್ಷ ಕೋಟಿ ರೂ. ಸಾಲ ಇದೆ ಎಂದ ಸೀತಾರಾಮನ್, ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ಸಾಲ?
ಭಾರತ ಸರ್ಕಾರ (Indian Government) ಮಾಡಿರುವ ಒಟ್ಟು ಸಾಲ ಎಷ್ಟಾಗಿದೆ ಗೊತ್ತಾ? ಬರೋಬ್ಬರಿ 155.8 ಲಕ್ಷ ಕೋಟಿ ರೂಪಾಯಿ. ಅಂದರೆ, ನಮ್ಮ ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ ಈ ಮೊತ್ತ! ಅಂದ ಹಾಗೆ, ಈ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸೋಮವಾರ ಲೋಕಸಭೆಗೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Zakir Naik: ಒಮಾನ್‌ನಿಂದ ಜಾಕೀರ್‌ ನಾಯ್ಕ್‌ ಗಡಿಪಾರು, ಮೂಲಭೂತವಾದಿಯ ಬಂಧನಕ್ಕೆ ಭಾರತ ಮುಹೂರ್ತ ಫಿಕ್ಸ್‌?
ಇಸ್ಲಾಮಿಕ್‌ ಮೂಲಭೂತವಾದವನ್ನು ಪಸರಿಸುವುದು, ಉಗ್ರರಿಗೆ ಹಣಕಾಸು ನೆರವು ನೀಡುವುದು, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಭಾಷಣಗಳಿಂದ ಸಂಕಷ್ಟಕ್ಕೆ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ವಿವಾದಿತ ಧರ್ಮಗುರು ಜಾಕೀರ್‌ ನಾಯ್ಕ್‌ನನ್ನು (Zakir Naik) ಬಂಧಿಸಲು ಭಾರತ ಮುಹೂರ್ತ ಫಿಕ್ಸ್‌ ಮಾಡಿದೆ. ಇಸ್ಲಾಮಿಕ್‌ ಮೂಲಭೂತವಾದಿಯನ್ನು ಗಡಿಪಾರು ಮಾಡಲು ಒಮಾನ್‌ ಸರ್ಕಾರದ ಜತೆ ಭಾರತ ಮಾತುಕತೆ ನಡೆಸುತ್ತಿದೆ. ಅಲ್ಲಿಯೇ ಈತನ ಬಂಧನಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಒಮಾನ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Modi in Karnataka: ಬೈಯಪ್ಪನಹಳ್ಳಿ-ಕೆ.ಆರ್‌. ಪುರ ಕಾಮಗಾರಿ ಮುಗಿದಿಲ್ಲ: ಮೋದಿಯಿಂದ ಅಪೂರ್ಣ ಮೆಟ್ರೊ ಕಾಮಗಾರಿ ಉದ್ಘಾಟನೆ ಎಂದ ಕಾಂಗ್ರೆಸ್‌
ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 25 ರಂದು ಬೆಂಗಳೂರಿನಲ್ಲಿ ಕೆ.ಆರ್.‌ ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ರೈಲು ಮಾರ್ಗವನ್ನು ಉದ್ಘಾಟಿಸುವ ಕಾರ್ಯಕ್ರಮವಿದೆ. ಆದರೆ ಈ ಮಾರ್ಗ ಇನ್ನೂ ಅಪೂರ್ಣವಾಗಿದೆ ಹಾಗೂ ಹಿಂದಿನ ನಿಲ್ದಾಣದೊಂದಿಗೆ ಸಂಪರ್ಕವೇ ಸಾಧ್ಯವಾಗಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Actor Chetan Ahimsa : ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‌; ನಟ ಚೇತನ್‌ ಅಹಿಂಸಾ ಅರೆಸ್ಟ್‌
ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟ ಚೇತನ್‌ ಅಹಿಂಸಾ (Actor Chetan Ahimsa) ಅವರನ್ನು ಮಂಗಳವಾರ ಮುಂಜಾನೆ ಮತ್ತೆ ಬಂಧನಕ್ಕೆ ಒಳಗಾಗಿದ್ದಾರೆ. ಅವರು ಹಿಂದು ಧರ್ವವನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದಡಿ ಸೋಮವಾರ ರಾತ್ರಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಶೇಷಾದ್ರಿಪುರಂ ಪೊಲೀಸರು ಮಂಗಳವಾರ ಬೆಳಗ್ಗಿನ ಜಾವ ಮನೆಯಿಂದ ಬಂಧಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು
ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭದಲ್ಲಿ ಮಗಳು ಧೃತಿಗೆಡದೆ, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ (Brave daughter) ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ. ಮತ್ತಷ್ಟು ವೈರಲ್‌ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Rupert Murdoch: 92ನೇ ವಯಸ್ಸಲ್ಲಿ ಕೊನೇ ಪ್ರೀತಿ ಕಂಡುಕೊಂಡ ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್; ಶೀಘ್ರದಲ್ಲೇ 5ನೇ ಮದುವೆ
  2. WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್​ಸಿಬಿ
  3. Pathaan Film: ಒಟಿಟಿಯಲ್ಲೂ ತೆರೆಕಾಣಲು ಸಜ್ಜಾಗಿದೆ ಪಠಾಣ್​​; ಅಮೇಜಾನ್​ ಪ್ರೈಮ್​​ನಲ್ಲಿ ಈ ದಿನಾಂಕದಂದು ಬಿಡುಗಡೆ
  4. BJP Important Party: ಜಗತ್ತಿನಲ್ಲೇ ಬಿಜೆಪಿ ಪ್ರಮುಖ ಪಕ್ಷ, 2024ರಲ್ಲೂ ಗೆಲುವು; ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ
  5. ಪಾಟ್ನಾ ರೈಲ್ವೆ ಸ್ಟೇಶನ್​​ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಆಗಿದ್ದಕ್ಕೆ ಫುಲ್ ಖುಷಿಯಾದ ಪೋರ್ನ್​ ಸ್ಟಾರ್​; ಅದು ನಂದೇ ಎಂದ ಕೇಂದ್ರಾ ಲಸ್ಟ್​
  6. Tipu Sultan: ಕಾಂಗ್ರೆಸ್ ನನ್ನನ್ನು ನಂಜೇಗೌಡರಿಗೆ ಹೋಲಿಕೆ ಮಾಡಿರುವುದು ಹೆಮ್ಮೆಯ ವಿಚಾರ: ಸಿ.ಟಿ. ರವಿ
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

BS Yediyurappa: ಸಿದ್ದರಾಮಯ್ಯಗೆ ಗೌಪ್ಯ ಚೀಟಿ ಕೊಟ್ಟ ಯಡಿಯೂರಪ್ಪ; ಏನಿದರ ರಹಸ್ಯ?

BS Yediyurappa: ಮೈಸೂರಿನಲ್ಲಿ ಮಾಜಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗೆ ರಹಸ್ಯ ಚೀಟಿಯೊಂದನ್ನು ನೀಡಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

VISTARANEWS.COM


on

BS Yediyurappa
Koo

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ರಾಜಕೀಯವಾಗಿ ದಾಯಾದಿಗಳಾಗಿದ್ದರೂ, ದಿನ ಬೆಳಗಾದರೆ ಪರಸ್ಪರ ಆರೋಪ, ವಾಗ್ವಾದ ನಡೆಯುತ್ತಿದ್ದರೂ ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದಾರೆ. ಎಲ್ಲಿಯೇ ಭೇಟಿಯಾದರೂ ಅವರು ಆತ್ಮೀಯವಾಗಿ ಮಾತನಾಡುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಮೈಸೂರಿನಲ್ಲಿ ಮಾಜಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗೆ ರಹಸ್ಯ ಚೀಟಿಯೊಂದನ್ನು ನೀಡಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

ಶ್ರದ್ಧಾಂಜಲಿ ಸಭೆಯ ವೇದಿಕೆಯಲ್ಲಿ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಭೇಟಿಯಾದರು. ಇದೇ ವೇಳೆ ಯಡಿಯೂರಪ್ಪ ಅವರು ಜೇಬಿನಿಂದ ತೆಗೆದು ಚೀಟಿಯೊಂದನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು. ಚೀಟಿಯನ್ನು ಪಡೆದ ಸಿದ್ದರಾಮಯ್ಯ ಅವರು ಬಿಎಸ್‌ವೈ ಕೈ ಹಿಡಿದು, ಅವರ ಜತೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಆದರೆ, ಯಡಿಯೂರಪ್ಪ ನೀಡಿದ ಗೌಪ್ಯ ಚೀಟಿಯಲ್ಲಿ ಏನಿದೆ? ಯಾಕಾಗಿ ಅವರು ಚೀಟಿ ನೀಡಿದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಶ್ರೀನಿವಾಸ ಪ್ರಸಾದ್‌ಗೆ ಶ್ರದ್ಧಾಂಜಲಿ

ಕೆಲ ದಿನಗಳ ಹಿಂದಷ್ಟೇ ನಿಧನರಾದ ಮಾಜಿ ಸಂಸದ ಶ್ರೀನಿವಾಸ ಪ್ರಸಾದ್‌ ಅವರಿಗೆ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ಪತ್ನಿ ಭಾಗ್ಯಲಕ್ಷ್ಮೀ ಶ್ರೀನಿವಾಸ ಪ್ರಸಾದ್‌ ಸಮ್ಮುಖದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ದರ್ಶನ್‌ ಧ್ರುವನಾರಾಯಣ್‌ ಸೇರಿ ಹಲವರು ಇದ್ದರು.

ಮೈತ್ರಿಗೆ ಧಕ್ಕೆ ಇಲ್ಲ ಎಂದ ಬಿಎಸ್‌ವೈ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಪ್ರಜ್ವಲ್‌ ರೇವಣ್ಣ ಪ್ರಕರಣದಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಮೈತ್ರಿಗೆ ಧಕ್ಕೆ ಇಲ್ಲ ಎಂದರು. “ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆಯ ಮೈತ್ರಿಗೆ ಧಕ್ಕೆ ಬರುವುದಿಲ್ಲ. ಮುಂದೆಯೂ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೈತ್ರಿ ಇರುತ್ತದೆ. ಪರಿಷತ್‌ನ 6 ಸ್ಥಾನಗಳ ಪೈಕಿ ಜೆಡಿಎಸ್‌ಗೆ 2 ಹಾಗೂ ನಾವು 4 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ. ಎಲ್ಲಿ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿಲ್ಲ. ಇಂದು (ಮೇ 11) ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಟ್ಟಿ ಬಿಡುಗಡೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು. “ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಪ್ರಕರಣದ ಕುರಿತು ಪಾರದರ್ಶಕವಾಗಿ ತನಿಖೆ ನಡೆಯಬೇಕು ಎಂದರೆ ಸಿಬಿಐಗೆ ವಹಿಸಬೇಕು. ಸಿದ್ದರಾಮಯ್ಯ ಅವರ ಅಭಿಪ್ರಾಯ ಅವರದ್ದು. ಆದರೆ, ಸಿಬಿಐ ತನಿಖೆಯಾಗಬೇಕು ಎಂಬುದು ನಮ್ಮ ಅಭಿಪ್ರಾಯ” ಎಂದರು.

ಇದನ್ನೂ ಓದಿ: BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

Continue Reading

ಕರ್ನಾಟಕ

BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

BS Yediyurappa: ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆಯ ಮೈತ್ರಿಗೆ ಧಕ್ಕೆ ಬರುವುದಿಲ್ಲ. ಮುಂದೆಯೂ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೈತ್ರಿ ಇರುತ್ತದೆ. ಪರಿಷತ್‌ನ 6 ಸ್ಥಾನಗಳ ಪೈಕಿ ಜೆಡಿಎಸ್‌ಗೆ 2 ಹಾಗೂ ನಾವು 4 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

VISTARANEWS.COM


on

BS Yediyurappa
Koo

ಮೈಸೂರು: ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು (Prajwal Revanna Case) ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರಿಂದ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಭಂಗ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಬಿಜೆಪಿ ವರಿಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ್ದು, “ಪ್ರಜ್ವಲ್ ರೇವಣ್ಣ ಕೇಸ್‌ನಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಯಾವುದೇ ಭಂಗ ತರುವುದಿಲ್ಲ” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ಹೊಂದಾಣಿಕೆಯ ಮೈತ್ರಿಗೆ ಧಕ್ಕೆ ಬರುವುದಿಲ್ಲ. ಮುಂದೆಯೂ ಎರಡೂ ಪಕ್ಷಗಳ ನಡುವಿನ ಮೈತ್ರಿ ಮುಂದುವರಿಯುತ್ತದೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಮೈತ್ರಿ ಇರುತ್ತದೆ. ಪರಿಷತ್‌ನ 6 ಸ್ಥಾನಗಳ ಪೈಕಿ ಜೆಡಿಎಸ್‌ಗೆ 2 ಹಾಗೂ ನಾವು 4 ಸ್ಥಾನಗಳಿಗೆ ಸ್ಪರ್ಧಿಸುತ್ತೇವೆ. ಎಲ್ಲಿ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಆಗಿಲ್ಲ. ಇಂದು (ಮೇ 11) ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಟ್ಟಿ ಬಿಡುಗಡೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಸಿಬಿಐ ತನಿಖೆಗೆ ವಹಿಸಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು. “ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಪ್ರಕರಣದ ಕುರಿತು ಪಾರದರ್ಶಕವಾಗಿ ತನಿಖೆ ನಡೆಯಬೇಕು ಎಂದರೆ ಸಿಬಿಐಗೆ ವಹಿಸಬೇಕು. ಸಿದ್ದರಾಮಯ್ಯ ಅವರ ಅಭಿಪ್ರಾಯ ಅವರದ್ದು. ಆದರೆ, ಸಿಬಿಐ ತನಿಖೆಯಾಗಬೇಕು ಎಂಬುದು ನಮ್ಮ ಅಭಿಪ್ರಾಯ” ಎಂದರು.

400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು

ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಬಿ.ಎಸ್.ಯಡಿಯೂರಪ್ಪ, “ದೇಶದಲ್ಲಿ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ, ಮೋದಿ ಅವರು ಮತ್ತೆ ಪ್ರಧಾನಿಯಾಗೋದೂ ಅಷ್ಟೇ ಸತ್ಯ. ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಏನು ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ರಾಜ್ಯದಲ್ಲಿ 24-25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಅಷ್ಟಕ್ಕೂ, ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗುವ ಯೋಗ್ಯತೆ ಯಾರಿಗಿದೆ” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Continue Reading

ಕಲಬುರಗಿ

Assault Case : ಹಣಕ್ಕಾಗಿ ಕಿಡ್ನ್ಯಾಪ್‌; ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್‌!

Assault Case : ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಕ್ಷೇತ್ರದಲ್ಲೇ ಹೇಯ ಕೃತ್ಯವೊಂದು ನಡೆದಿದೆ. ಹಣಕ್ಕಾಗಿ ಕಾರು ವ್ಯಾಪಾರಿ ಸೇರಿ ಮತ್ತಿಬ್ಬರನ್ನು ಮನೆಯೊಂದರಲ್ಲಿ ಕೂಡಿ ಹಾಕಿದ ದುರ್ಷಮಿಗಳು, ಅವರನ್ನು ಬೆತ್ತಲೆ ಮಾಡಿ, ಕರೆಂಟ್‌ ಶಾಕ್‌ ಕೊಟ್ಟು ಹಲ್ಲೆ ಮಾಡಿ ಟಾರ್ಚರ್‌ ಮಾಡಿದ್ದಾರೆ.

VISTARANEWS.COM


on

By

Assault case in kalaburagi
ಆರು ಮಂದಿ ಬಂಧಿತ ಆರೋಪಿಗಳು ಹಾಗೂ ಮಧ್ಯ ಭಾಗದಲ್ಲಿ ಕಿಡ್ನ್ಯಾಪ್‌ ಆಗಿದ್ದ ಅರ್ಜುನ್‌
Koo

ಕಲಬುರಗಿ: ಹಣಕ್ಕಾಗಿ‌ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರಿ ಮತ್ತು ಆತನ ಸ್ನೇಹಿತರಿಬ್ಬರನ್ನು ಅಪಹರಿಸಿರುವ (Kidnap Case) ಘಟನೆ ನಡೆದಿದೆ. ರೂಮಿನಲ್ಲಿ ಮೂವರನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿ, ಹಣವನ್ನು ಲಪಟಾಯಿಸಿರುವ ಘಟನೆ (Assault Case) ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿ ಅರ್ಜುನ್‌ ಮಡಿವಾಳ ಎಂಬಾತನಿಗೆ ಹಲ್ಲೆ ನಡೆಸಲಾಗಿದೆ. ಅರ್ಜುನ್‌ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಮೇ 5ರಂದು ಪರಿಚಯಸ್ಥನಾಗಿದ್ದ ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಲು ಅರ್ಜುನ್‌ ತನ್ನಿಬ್ಬರು ಸ್ನೇಹಿತರಾದ ಎಂ.ಡಿ ಸಮೀರೊದ್ದಿನ್, ಅಬ್ದುಲ್ ರಹೇಮಾನ್ ಜತೆಗೆ ಹೋಗಿದ್ದರು.

ಇದನ್ನೂ ಓದಿ: Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

ಈ ವೇಳೆ ಆರೋಪಿ ರಮೇಶ್‌ ಕಾರಿನ ಟೆಸ್ಟ್‌ ಡ್ರೈವ್‌ ಮಾಡಿ, ಕಾರಿಗೆ ಹಣ ನೀಡುವವರು ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ಇದ್ದಾರೆ. ಅಲ್ಲಿಗೆ ಹೋಗೋಣಾ ಎಂದು ಮೂವರನ್ನು ಕರೆದುಹೋಗಿದ್ದಾರೆ. ನಂತರ ಯಾವುದೋ ಮನೆ ಬಳಿ ಕಾರು ನಿಲ್ಲಿಸಿದಾಗ ಸುಮಾರು ಹತ್ತಾರು ಮಂದಿ ಅರ್ಜುನ್‌ ಹಾಗೂ ಮತ್ತಿಬ್ಬರನ್ನು ಬಲವಂತದಿಂದ ಎಳೆದುಹೋಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ರಮೇಶ್‌ ಸೇರಿ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ.

ಕಿರಾತಕರು ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ನಡೆಸಿದ್ದಾರೆ. ಕರೆಂಟ್ ಶಾಕ್ ಬಳಿಕ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿ ಹಣ ಹಾಕಿಸಿಕೊಂಡು, ಬಳಿಕ ಪ್ರತಿ ಬಾರಿ ಕಾರು ಮಾರಾಟ ಮಾಡಿದಾಗ ಕಮಿಷನ್‌ ರೂಪದಲ್ಲಿ ಒಂದು ಲಕ್ಷ ರೂ. ಹಣ ಕೊಡಬೇಕು ಎಂದಿದ್ದಾರೆ. ಕೊಡದೆ ಹೋದರೆ ಮನೆಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Prajwal Revanna Case: ಏಪ್ರಿಲ್‌ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್‌ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್‌ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ ಎಂದು ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವು (Prajwal Revanna Case) ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೇ ಪ್ರಕರಣದಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಜೈಲುಪಾಲಾಗಿದ್ದಾರೆ. ಪ್ರಜ್ವಲ್‌ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ (L R Shivarame Gowda) ನಡುವಿನ ವಾಕ್ಸಮರವೂ ಜೋರಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, “ದೇವರಾಜೇಗೌಡ ಹುಚ್ಚು ನಾಯಿ ಇದ್ದಂತೆ. ಆತ ನಕಲಿ ವಕೀಲ” ಎಂದು ಎಲ್‌.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

“ಏಪ್ರಿಲ್‌ 29 ಹಾಗೂ 30ರಂದು ನಾವು ಭೇಟಿ ಮಾಡಿ ಮಾತನಾಡಿದ್ದೇವೆ. ಏಪ್ರಿಲ್‌ 29ಕ್ಕೂ ಮೊದಲು ನಾನು ಭೇಟಿ ಮಾಡಿಲ್ಲ. ಏಪ್ರಿಲ್‌ 29ರ ಬಳಿಕ 30ನೇ ತಾರೀಖಿನಂದೂ ಅವನೇ ಬಂದು ಭೇಟಿ ಮಾಡಿದ್ದಾನೆ. ಆ ಎರಡು ಸಭೆ ಹೊರತುಪಡಿಸಿ ನಾನು ಅವನ ಜತೆ ಮಾತನಾಡಿಲ್ಲ. ಅವನೊಬ್ಬ ಹುಚ್ಚುನಾಯಿ, ನಕಲಿ ವಕೀಲ. ಅಲ್ಲದೆ, ಆತನೊಬ್ಬರ ರೋಲ್‌ ಕಾಲ್‌ ಮಾಸ್ಟರ್‌ ಆಗಿದ್ದಾನೆ. ಅವನ ಹಣಕಾಸಿನ ವ್ಯವಹಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು” ಎಂದು ಮಾಜಿ ಸಂಸದ ‘ವಿಸ್ತಾರ ನ್ಯೂಸ್‌’ಗೆ ತಿಳಿಸಿದ್ದಾರೆ.

ಕಾರ್ತಿಕ್‌, ದೇವರಾಜೇಗೌಡ ಪೆನ್‌ಡ್ರೈವ್‌ ರೂವಾರಿಗಳು

“ಪೆನ್‌ಡ್ರೈವ್‌ ರಿಲೀಸ್‌ ಮಾಡಿರುವುದರ ಹಿಂದೆ ಕಾರು ಚಾಲಕ ಕಾರ್ತಿಕ್‌ ಹಾಗೂ ದೇವರಾಜೇಗೌಡ ಇದ್ದಾರೆ. ಏಟ್ರಿಯಾ ಹೋಟೆಲ್‌ನಲ್ಲಿ ಮಾತನಾಡುವಾಗ ನನ್ನ ವಿರುದ್ಧ ತನಿಖೆ ಮಾಡಬೇಕು ಅಂತಿದ್ದಾರೆ ಎಂದ. ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಬಗ್ಗೆ ಪದೇಪದೆ ಮಾತನಾಡಬೇಡ ಎಂದೆ. ನಿನ್ನದು ನೀನು ಸರಿಮಾಡಿಕೊ. ಉಳಿದ ಉಸಾಬರಿ ನಿನಗೆ ಬೇಡ ಎಂಬುದಾಗಿ ಹೇಳಿದ್ದೆ” ಎಂದು ತಿಳಿಸಿದರು.

“ದೇವರಾಜೇಗೌಡ ಖದೀಮ ಇದ್ದಾನೆ. ಪ್ರಚಾರ ಪ್ರಿಯನಾದ ಅವನಿಗೆ ಮಾಧ್ಯಮಗಳು ಆದ್ಯತೆ ನೀಡಬಾರದು. ಸಿಎಂ ಹಾಗೂ ಡಿಸಿಎಂ ಮೇಲೆ ನಂಬಿಕೆ ಇಲ್ಲ ಎಂದ. ನೀನು ಅವರನ್ನು ಬಿಡು, ಇವತ್ತಿನಿಂದ ಕೇಸ್‌ ಬಗ್ಗೆ ಹೋರಾಡ ಮಾಡಿಲ್ಲ ಎಂದು ಹೇಳು ಅಂದೆ. ಅಷ್ಟಕ್ಕೂ, ಅವನು ಬ್ಲ್ಯಾಕ್‌ಮೇಲ್‌ ಮಾಡಿ ದುಡ್ಡು ಮಾಡಿದ್ದಾನೆ. ಅವನು ವಕೀಲಿಕೆ ಮಾಡಲ್ಲ. ಇಷ್ಟಾದರೂ ಹೇಗೆ ದುಡ್ಡು ಬರುತ್ತದೆ? ವಿಧಾನಸಭೆ ಚುನಾವಣೆಯಲ್ಲಿ ದುಡ್ಡು ಇಟ್ಟುಕೊಂಡು ಸುಮ್ಮನಾದ. ಅವನ ಬಾಡಿಯಲ್ಲಿ ಯಾವಾಗಲೂ ಕ್ಯಾಮೆರಾ (ಬಾಡಿ ಕ್ಯಾಮ್)‌ ಇರುತ್ತದೆ. ನಾವು ಕೂತಾಗ ಒಂದೂ ಮಾತಾಡಲ್ಲ. ನನಗೆ ಅವನ ಬಗ್ಗೆ ಭಯ ಇಲ್ಲ. ಎಸ್‌ಐಟಿ ಅವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ” ಎಂದು ಹೇಳಿದರು.

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಸ್ಫೋಟಕ ಆಡಿಯೊ ಹೊರಬಿದ್ದಿದೆ. ಇತ್ತೀಚೆಗೆ ಈ ಹಗರಣದಲ್ಲಿ ಡಿಸಿಎಂ ಡಿಕೆಶಿ ಕೈವಾಡ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಮತ್ತೊಂದು ಆಡಿಯೊ ಬಾಂಬ್‌ ಹಾಕಿದ್ದಾರೆ. ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್‌ ಆಡಿಯೊ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೊ ಬಯಲಾದ ಬೆನ್ನಲ್ಲೇ ಈಗ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ ಹಲವು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Prajwal Revanna Case: ಸ್ಫೋಟಕ ಆಡಿಯೊ ರಿಲೀಸ್‌ ಮಾಡಿದ ಬೆನ್ನಲ್ಲೇ ವಕೀಲ ದೇವರಾಜೇಗೌಡ ವಶಕ್ಕೆ

Continue Reading
Advertisement
Chinese app
ವಿದೇಶ3 mins ago

Chinese Apps: ಟಿಕ್‌ಟಾಕ್‌ ಮಾತ್ರ ಅಲ್ಲ.. ಚೀನಾದ ಈ ಆಪ್‌ಗಳೂ ಅಷ್ಟೇ ಡೇಂಜರಸ್‌; ಶಾಕಿಂಗ್‌ ವರದಿ ಔಟ್‌

BS Yediyurappa
ಕರ್ನಾಟಕ14 mins ago

BS Yediyurappa: ಸಿದ್ದರಾಮಯ್ಯಗೆ ಗೌಪ್ಯ ಚೀಟಿ ಕೊಟ್ಟ ಯಡಿಯೂರಪ್ಪ; ಏನಿದರ ರಹಸ್ಯ?

Jyoti Rai
ಕಿರುತೆರೆ16 mins ago

Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

BS Yediyurappa
ಕರ್ನಾಟಕ38 mins ago

BS Yediyurappa: ಪ್ರಜ್ವಲ್‌ ಕೇಸ್‌ನಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆ? ಯಡಿಯೂರಪ್ಪ ಹೇಳಿದ್ದಿಷ್ಟು

Assault case in kalaburagi
ಕಲಬುರಗಿ43 mins ago

Assault Case : ಹಣಕ್ಕಾಗಿ ಕಿಡ್ನ್ಯಾಪ್‌; ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್‌!

Election Commission
ದೇಶ54 mins ago

Election Commission: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಡ್ಡಿಪಡಿಸುವ ಪ್ರಯತ್ನ; ಖರ್ಗೆ ಪತ್ರಕ್ಕೆ EC ತಿರುಗೇಟು

Prajwal Revanna Case
ಕರ್ನಾಟಕ59 mins ago

Prajwal Revanna Case: ದೇವರಾಜೇಗೌಡ ಹುಚ್ಚುನಾಯಿ, ನಕಲಿ ವಕೀಲ ಎಂದ ಶಿವರಾಮೇಗೌಡ

Hassan Pen Drive Case
ಕರ್ನಾಟಕ1 hour ago

Hassan Pen Drive Case: ಅಶ್ಲೀಲ ವಿಡಿಯೊ ಪ್ರಕರಣ; ಪೆನ್‌ಡ್ರೈವ್ ಲೀಕ್‌ ಮಾಡಿದವರಿಗೂ ಸಂಕಷ್ಟ?

SSLC Student missing In Kopala
ಕೊಪ್ಪಳ1 hour ago

SSLC Student Missing : ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆದ ಬಾಲಕ ನಾಪತ್ತೆ!

Rahul Gandhi
ದೇಶ2 hours ago

Rahul Gandhi: ನರೇಂದ್ರ ಮೋದಿ ಪ್ರಧಾನಿಯಲ್ಲ, ಮಹಾರಾಜ ಎಂದ ರಾಹುಲ್ ಗಾಂಧಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ23 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ1 day ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ2 days ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

ಟ್ರೆಂಡಿಂಗ್‌