ಕರ್ನಾಟಕ
ಬೀಡಾ, ಬೀಡಿ, ಶೇಂದಿ, ಬ್ರಾಂಡಿಪ್ರಿಯ ಈ ಪವಾಡಪುರುಷ ಕೊರಗಜ್ಜ ಯಾರು?
ತುಳುನಾಡಿನ ಜನರಿಗೆ ಕೊರಗಜ್ಜನ ಮೇಲೆ ಅಪಾರ ಭಕ್ತಿ. ಅಲ್ಲಿ ಬಹಳಷ್ಟು ಜನ ತಮ್ಮ ವಸ್ತು ಕಳುವಾದರೆ ಪೊಲೀಸ್ ಠಾಣೆಗೆ ಹೋಗುವುದಿಲ್ಲ, ಬದಲಿಗೆ ಕೊರಗಜ್ಜನ ಮೊರೆ ಹೋಗುತ್ತಾರೆ! ಸಾವಿನ ಅಂಚಿನಲ್ಲಿದ್ದ ಮಗುವೊಂದು ಕೊರಗಜ್ಜನ ಪವಾಡದಿಂದ ಬಚಾವಾಗಿದೆ ಎಂಬ ಸುದ್ದಿಯೊಂದು ಈಗ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರಗಜ್ಜನ ಹಿನ್ನೆಲೆಯ ನೋಟ ಇಲ್ಲಿದೆ.
ಉಡುಪಿ: ಕರಾವಳಿ ಭೂಮಿಯ ಒಂದು ಕಾರ್ಣಿಕ ಶಕ್ತಿ ಕೊರಗಜ್ಜ ಎನ್ನಲಾಗುತ್ತದೆ. ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ. ತುಳುನಾಡಿನ ಜನ ಇಂದಿಗೂ ತಮ್ಮ ವಸ್ತುಗಳು ಕಾಣೆಯಾದರೆ ಮೊದಲು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದಿಲ್ಲ. ಬದಲಾಗಿ ತಾವಿದ್ದ ಜಾಗದಲ್ಲೇ ಕಾರ್ಣಿಕ ಪುರುಷ ಕೊರಗಜ್ಜನ ನೆನೆದು ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಾರೆ. ಇಷ್ಟಾದರೆ ಸಾಕು ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸತ್ಯ ಎನ್ನುವುದು ಕೊರಗಜ್ಜನ ಭಕ್ತರ ನಂಬಿಕೆಯ ನುಡಿ.
ಇನ್ನು ಕಷ್ಟಗಳು ಎದುರಾದಾಗಲೂ ಭಕ್ತರು ಕೊರಗಜ್ಜನ ಹೆಸರು ಕೂಗಿದರೆ ಸಾಕು ಕಷ್ಟಗಳೆಲ್ಲ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಮಾಯವಾಗುತ್ತದೆ ಎನ್ನುವ ಅಚಲ ನಂಬಿಕೆ ಹೊಂದಿದ್ದಾರೆ. ಇದೇ ಕಾರಣಕ್ಕೆ ತುಳುನಾಡಿನ ಆರಾಧ್ಯ ದೈವವಾಗಿ ʼಕೊರಗಜ್ಜʼ ಎಂದು ಕರೆಯಲ್ಪಡುವ ಕೊರಗ ತನಿಯನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತಿದೆ.
ಧರ್ಮ ಮತ್ತು ಸತ್ಯದ ಪ್ರತೀಕವಾಗಿ ನಂಬಿದವರಿಗೆ ಇಂಬು ಕೊಡುವ ಧರ್ಮದೈವವಾಗಿ ಕೊರಗಜ್ಜ ತುಳುನಾಡಿನಲ್ಲಿ ನೆಲೆ ನಿಂತಿದ್ದಾನೆ. ತುಳುನಾಡಿನಲ್ಲಿ ದೈವಗಳನ್ನು ಪ್ರೀತಿಯಿಂದ ಏಕವಚನದಲ್ಲಿ ಕರೆಯುವುದಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೊರಗಜ್ಜನ ಪವಾಡಗಳು ಇಂದಿಗೂ ನಡೆಯುತ್ತಿದ್ದು, ಅನೇಕ ಉದಾಹರಣೆಗಳು ಕಾಣಸಿಗುತ್ತವೆ.
ತುಳುನಾಡಿನ ದೈವರಾಧನೆಯ ಒಂದು ಭಾಗವಾಗಿ ಕೊರಗಜ್ಜನ ಆರಾಧನೆಯನ್ನು ಮಾಡಲಾಗುತ್ತದೆ. ಕೊರಗಜ್ಜನ ಮೂಲಸ್ಥಾನ ಕುತ್ತಾರಿನಲ್ಲಿದ್ದರೂ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಂಬಲಾಗುತ್ತಿದೆ. ಮಾನವನ ರೂಪದಲ್ಲಿ ಇದ್ದ ಕೊರಗತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ ಎಂಬ ಪ್ರತೀತಿ ಇದೆ.
ಹಾಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ಉದಾಹರಣೆಗೆ ವೀಳ್ಯದೆಲೆ, ಅಡಿಕೆ ಸುಣ್ಣ, ತಂಬಾಕು, ಬೀಡಿ, ಶೇಂದಿ, ಚಕ್ಕುಲಿ, ಮದ್ಯ ಹೆಚ್ಚಾಗಿ ಹರಕೆಯಾಗಿ ನೀಡಲಾಗುತ್ತದೆ. ಅಮೂಲ್ಯವಾದ ಅಥವಾ ಯಾವುದೇ ಸಣ್ಣ ವಸ್ತು ಕಳೆದು ಹೋದರೂ ಅಜ್ಜನನ್ನು ಮನಸ್ಸಿನಲ್ಲಿ ನೆನೆದು ಹರಕೆಯನ್ನು ಹೇಳಿದರೆ ಸಾಕು ಆ ವಸ್ತು ಮತ್ತೆ ಕೈ ಸೇರಿದ ಅನೇಕ ಉದಾಹರಣೆಗಳು ಇದೆ ಎಂಬ ಬಲವಾದ ನಂಬಿಕೆ ಇಂದಿಗೂ ಕೂಡ ತುಳುನಾಡಿನ ಜನರಲ್ಲಿ ಇದೆ.
ಯಾವುದರಲ್ಲೂ ಭಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಯಾವುದೇ ಜಾಗದಲ್ಲಿ ನಿಂತು ಮನಸಾರೆ ಅಜ್ಜ ಎಂದು ಕರೆದರೆ ನಾವಿದ್ದ ಜಾಗಕ್ಕೆ ಅಜ್ಜ ಬರುತ್ತಾನೆ ಎಂಬುವುದು ಭಕ್ತರ ನಂಬಿಕೆ. ಕೊರಗಜ್ಜ ಅಥವಾ ಕೊರಗತನಿಯ ಎಂದು ಪ್ರೀತಿಯಿಂದ ಆರಾಧಿಸುವ ಅಜ್ಜನ ಮೇಲೆ ತುಳುನಾಡಿನ ಜನರಿಗೆ ಎಲ್ಲಿಲ್ಲದ ನಂಬಿಕೆ.
ಯಾರೂ ಕೈ ಬಿಟ್ಟರೂ ಅಜ್ಜ ನಂಬಿದವರನ್ನು ಕೈ ಬಿಡುವುದಿಲ್ಲ ಎಂಬ ಮಾತು ಈ ಭಾಗದಲ್ಲಿ ಭಕ್ತರ ಬಾಯಿಯಲ್ಲಿ ಕೇಳಿ ಬರುತ್ತದೆ. ಯಾವುದೇ ಶುಭ ಸಮಾರಂಭದ ಸಂದರ್ಭದಲ್ಲಿ, ಹಟ್ಟಿಯಲ್ಲಿ ದನ ಕರು ಹಾಕುವ ಸಂದರ್ಭ, ಮಗು ಹುಟ್ಟಿದ ಸಂದರ್ಭದಲ್ಲಿ ಅಜ್ಜನಿಗೆ ವಿಶೇಷವಾಗಿ ಮದ್ಯ, ಶೇಂದಿ ಅಥವಾ ಅಜ್ಜನಿಗೆ ಪ್ರಿಯವಾದ ಪದಾರ್ಥಗಳನ್ನು ಭಕ್ತಿಯಿಂದ ನೀಡಲಾಗುತ್ತದೆ.
ಹೊಸ ವಾಹನವನ್ನು ಖರೀದಿಸುವರು ಅಜ್ಜನ ಹೆಸರನ್ನು ತಮ್ಮ ವಾಹನದಲ್ಲಿ ಸ್ವಾಮಿ ಕೊರಗಜ್ಜ ಎಂದು ಹಾಕುತ್ತಾರೆ. ಈ ಮೂಲಕ ಅಜ್ಜನನ್ನು ತುಳುನಾಡಿನ ಪ್ರತಿಯೊಬ್ಬರು ಭಕ್ತಿಯಿಂದ ಆರಾಧಿಸುವುದನ್ನು ಕಾಣಬಹುದು. ನಂಬಿದವರನ್ನು ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕೊರಗಜ್ಜನ ಮಾತಿಗೆ ಉದಾಹರಣೆ ಎಂಬಂತೆ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಹುಂಡಿಗೆ ಅಪಚಾರ ಬಗೆದವರಿಗೆ ತಕ್ಕ ಶಾಸ್ತಿ!
ಪಡುಬಿದ್ರೆಯ ಕಟಪಾಡಿ ಪೇಟೆಬೆಟ್ಟುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಅನ್ಯಕೋಮಿನ ಯುವಕರು ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದು ಮೂತ್ರ ವಿಸರ್ಜನೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಹಾಕುತ್ತಾರೆ. ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಅವರಲ್ಲಿ ಒಬ್ಬನಿಗೆ ಕಿಡ್ನಿ ಸಂಬಂಧಿ ಕಾಯಿಲೆ ಹಾಗೂ ಮತ್ತೊಬ್ಬನಿಗೆ ಎರಡೂ ಕಾಲು ಬಲಹೀನವಾಗುತ್ತದೆ.
ತಜ್ಞರನ್ನು ಕಂಡು ಪರೀಕ್ಷಿಸಿದರೂ ಪ್ರಯೋಜನವಾಗದೇ ಜ್ಯೋತಿಷಿಯ ಬಳಿ ಕೇಳಿದಾಗ ಅಸಲಿ ಸಂಗತಿಯ ಬಗ್ಗೆ ತಿಳಿದು ಬರುತ್ತದೆ. ನಂತರ ಅವರು ಈ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದು ದೈವಗಳ ಮುಂದೆ ಕ್ಷಮೆಯಾಚಿಸಿದ ಘಟನೆಯನ್ನು ಈ ಸಂದರ್ಭದಲ್ಲಿ ನೆಪಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿದ್ದ ಮನೋಜ್ ಪಂಡಿತ್ ಎಂಬಾತನ ವಿರುದ್ಧ ಕೇಸು ದಾಖಲಾಗಿತ್ತು.
ಬಳಿಕ ಈತನ ತಾಯಿಗೆ ತೀವ್ರ ಅನಾರೋಗ್ಯವಾಗಿ ತನ್ನ ತಪ್ಪಿನಿಂದ ಹಾಗೂ ದೈವನಿಂದನೆಯಿಂದ ಹೀಗಾಗಿದೆ ಎಂದು ತಿಳಿದ ನಂತರ, ತಾನು ವಿಚಾರವಾದಿ ಎಂದುಕೊಳ್ಳುತ್ತಿದ್ದ ಈತನೂ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಹರಕೆ ಒಪ್ಪಿಸಿ ಕ್ಷೆಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕೊರಗ ತನಿಯ ಕೊರಗಜ್ಜನಾದ ಕಥೆ…
ಪಣಂಬೂರಿನ ಓಡಿ ಮತ್ತು ಅಚ್ಚು ಮೈರೆದಿ ಎಂಬ ಕೊರಗ ದಂಪತಿಗೆ ಒಂದು ಗಂಡು ಮಗು ಹುಟ್ಟುತ್ತದೆ. ಅವನಿಗೆ ತನಿಯ ಎಂಬ ಹೆಸರನ್ನು ಇಟ್ಟಿದ್ದರು. ತನಿಯಯನಿಗೆ ಕೇವಲ 30 ದಿವಸವಾಗುತ್ತಲೇ ಅವನ ತಂದೆ ಮತ್ತು ತಾಯಿ ವಿಧಿವಶವಾಗುತ್ತಾರೆ. ತನಿಯ ಅನಾಥನಾಗುತ್ತಾನೆ. ಅವನು ಅಳುತ್ತಿರುವಾಗ ಬೈದೆರೆ ಜಾತಿಗೆ ಸೇರಿದ ಮೈರಕ್ಕ ಬೈದೆದಿ ಮತ್ತು ಅವರ ಮಗ ಚೆನ್ನಯ್ಯನನ್ನು ತನಿಯ ನೋಡುತ್ತಾನೆ. ಮೈರಕ್ಕನ ಬಳಿ ಬಂದು ಅಮ್ಮಾ ನನಗೆ ಬಟ್ಟೆ ಕೊಡಿ ಎಂದು ಕೇಳುವಾಗ ಅವರು ತನ್ನ ತಲೆಯ ನೀರು ಹೀರಿಕೊಳ್ಳಲು ಕಟ್ಟಿದ ಬಟ್ಟೆಯನ್ನೇ ಆ ಮಗುವಿಗೆ ಕೊಟ್ಟು ಮಗುವನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ.
ಮೈರಕ್ಕ ಶೇಂದಿ ಮಾರುವವರಾಗಿದ್ದರು. ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದ ತನಿಯ ಎಷ್ಟೇ ದೊಡ್ಡ ಕೆಲಸವಾದರೂ ಅದನ್ನು ಮಾಡಿ ಮುಗಿಸುತ್ತಿದ್ದ. ಹೀಗಿರುವಾಗ ಒಂದು ದಿನ ತನಿಯನ ಬಳಿ ತಂದ ಶೇಂದಿಯನ್ನು ಹಂಡೆಗೆ ತುಂಬಿಸಲು ಹೇಳುತ್ತಾರೆ. ಅವನು ತುಂಬಿಸುತ್ತಾನೆ. ಆದರೆ ಇಲ್ಲಿ ವಿಚಿತ್ರ ಏನೆಂದರೆ ಏಳು ರಾತ್ರಿ ಏಳು ಹಗಲು ಕಳೆದರೂ ಶೇಂದಿ ಖಾಲಿಯೇ ಆಗುವುದಿಲ್ಲ! ಮುಂದೆ ತನಿಯ ದೊಡ್ಡವನಾಗುತ್ತ ಹೋದಂತೆ ಪವಾಡಗಳು ನಡೆಯುತ್ತ ಹೋಗುತ್ತವೆ ಎಂಬ ಪ್ರತೀತಿ ತುಳುನಾಡಿನಲ್ಲಿದೆ.
ಇದನ್ನೂ ಓದಿ| ಮಂಗಳೂರು | ಕೊರಗಜ್ಜನ ಪವಾಡ | ಮಗು ಬದುಕುಳಿಯುವುದು ಕಷ್ಟ ಎಂದಿದ್ದ ವೈದ್ಯರು; ಮತ್ತೆ ಕಿಲಕಿಲನೆ ನಗುವಂತೆ ಮಾಡಿದ ಕೊರಗಜ್ಜ!
ಕರ್ನಾಟಕ
Honorary Doctorate: ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಎಚ್.ಡಿ ದೇವೇಗೌಡರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್
Honorary Doctorate: ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಸಾಧನೆಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹಾಗೂ ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆ ಪರಿಗಣಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ.
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹಾಗೂ ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾಜನರಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಆಯ್ಕೆ ಸಮಿತಿಯು ಈ ಇಬ್ಬರು ಗಣ್ಯರ ಹೆಸರನ್ನು ಗೌರವ ಡಾಕ್ಟರೇಟ್‌ಗೆ (Honorary Doctorate) ಶಿಫಾರಸು ಮಾಡಿತ್ತು. ಇದಕ್ಕೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡಿದ್ದಾರೆ. ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದಂದು ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತದೆ.
ಕರ್ನಾಟಕ ಬಂದ್‌ನಿಂದ ಘಟಿಕೋತ್ಸವ ಮುಂದೂಡಿಕೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 29ಕ್ಕೆ ನಿಗದಿಯಾಗಿದ್ದ ಘಟಿಕೋತ್ಸವವನ್ನು ಬೆಂಗಳೂರು ವಿಶ್ವವಿದ್ಯಾಲಯ ಮುಂದೂಡಿದೆ. ಶೀಘ್ರದಲ್ಲಿಯೇ ಹೊಸ ದಿನಾಂಕ ನಿಗದಿ ಮಾಡಿ ಘಟಿಕೋತ್ಸವ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಇದನ್ನೂ ಓದಿ | NEP 2020: ಜೈನ್ ವಿವಿಯಲ್ಲಿ ಸೆ.28ರಂದು ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾಗೃತಿಗಾಗಿ ವಿಚಾರಗೋಷ್ಠಿ
ಕಲೆ/ಸಾಹಿತ್ಯ
World Culture Festival: ಸೆ.29ರಿಂದ ವಾಷಿಂಗ್ಟನ್‌ನಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್; ಶ್ರೀ ರವಿಶಂಕರ್ ಗುರೂಜಿ ಮುಂದಾಳತ್ವ
World Culture Festival ಆರ್ಟ್ ಆಫ್ ಲಿವಿಂಗ್‌ನ 4ನೇ ಆವೃತ್ತಿಯ ʼವಿಶ್ವ ಸಾಂಸ್ಕೃತಿಕ ಉತ್ಸವʼ ಸೆ.29ರಿಂದ ಅ.1ರವರೆಗೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನ 4ನೇ ಆವೃತ್ತಿಯ ʼವಿಶ್ವ ಸಾಂಸ್ಕೃತಿಕ ಉತ್ಸವʼ ವನ್ನು (World Culture Festival) ಸೆ.29ರಿಂದ ಅ.1ರವರೆಗೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಆಯೋಜಿಸಲಾಗಿದೆ. 17,000 ಕಲಾವಿದರು ಭಾಗವಹಿಸುವ ಈ ʼಸಾಂಸ್ಕೃತಿಕ ಒಲಿಂಪಿಕ್ಸ್ʼನ ಮುಂದಾಳತ್ವವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ವಹಿಸಲಿದ್ದಾರೆ.
ಆರ್ಟ್ ಆಫ್ ಲಿವಿಂಗ್‌ನ ಅವಿಸ್ಮರಣೀಯವಾದಂತಹ ವೈವಿಧ್ಯತೆಯ ಹಾಗೂ ಏಕತೆಯ ಉತ್ಸವಕ್ಕೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ. ಆತಿಥ್ಯ ವಹಿಸಿದೆ. ವಿಶ್ವ ವಿಖ್ಯಾತ ಯುಎಸ್ ಕ್ಯಾಪಿಟಲ್‌ನ ಹಿನ್ನೆಲೆಯನ್ನು ಹೊಂದಿರುವ ವೇದಿಕೆಯೇ ಒಂದು ಫುಟ್ಬಾಲ್ ಆಟದ ಮೈದಾನದಷ್ಟಿದೆ. ಈ ಉತ್ಸವದಲ್ಲಿ 17,000 ಕಲಾವಿದರು, ಅನೇಕ ರಾಜ್ಯಗಳ ಮುಖ್ಯಸ್ಥರು, 100ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಭಾಗವಹಿಸಲಿದ್ದು, ಎಲ್ಲರೂ ನ್ಯಾಷನಲ್ ಮಾಲ್‌ನಲ್ಲಿ ಸೇರಲಿದ್ದಾರೆ.
ಅರ್ಧ ಮಿಲಿಯನ್ ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ಈ ಉತ್ಸವವು ವ್ಯಾಪಕವಾದ ಜಾಗತಿಕ ಉತ್ಸವವಾಗಲಿದೆ. ಈ ಉತ್ಸವದಲ್ಲಿ 50 ಪ್ರದರ್ಶನಗಳು ನಡೆಯಲಿವೆ.
ಇದನ್ನೂ ಓದಿ | Raja Marga Column : ಸೆ. 27, ವಿಶ್ವ ಪ್ರವಾಸೋದ್ಯಮ ದಿನ; ನೀವು ಹೋಗಲೇಬೇಕಾದ ಭಾರತದ TOP 10 ತಾಣ
ವಿಶ್ವ ಸಾಂಸ್ಕೃತಿಕ ಉತ್ಸವದ ವಿಶೇಷತೆ
- ಪಾರಂಪರಿಕ ಚೀನಾದ ಸಾಂಸ್ಕೃತಿಕ ಪ್ರದರ್ಶನ: ಇದರಲ್ಲಿ 1,000 ಹಾಡುಗಾರರು ಮತ್ತು ನರ್ತಕರು ಭಾಗವಹಿಸಲಿದ್ದಾರೆ.
- 7,000 ನರ್ತಕರನ್ನೊಳಗೊಂಡ ಗಾರ್ಬಾ ನೃತ್ಯ ವೈಭವ.
- ನೇರ ಸ್ವರಮೇಳದ ಸಹಿತ 700 ಭಾರತೀಯ ಶಾಸ್ತ್ರೀಯ ನರ್ತಕರು.
- ಹಿಪ್ ಹಾಪ್‌ನ 50ನೇ ವರ್ಷದ ಸಂಭ್ರಮ, ಕುರ್ಟಿಸ್ ಬ್ಲೋ, ಎಸ್ ಹೆಚ್ ಎ- ರಾಕ್, ಸೀಕ್ವೆನ್ಸ್ ಗರ್ಲ್ಸ್, ಡಿಜೆಕೂಲ್ ಮತ್ತಿತರ ಹಿಪ್ ಹಾಪ್‌ನ ಖ್ಯಾತನಾಮರು. ಇವರೊಂದಿಗೆ , ಕಿಂಗ್ ಚಾರ್ಲ್ಸ್ ಹಾಗೂ ಕೆಲ್ಲಿ ಫಾರ್ಮನ್ ರವರಿಂದ ಸಂಯೋಜಿಸಲ್ಪಟ್ಟ ನೃತ್ಯ ಸಂಯೋಜನೆಯಲ್ಲಿ 100 ಬ್ರೇಕ್ ಡಾನ್ಸ್ ನ ನರ್ತಕರು ತಮ್ಮ ಚೊಚ್ಚಲ ಪ್ರದರ್ಶನವನ್ನು ನೀಡಲಿದ್ದಾರೆ.
- ತಮ್ಮ ಪಾರಂಪರಿಕ ನೃತ್ಯವಾದ ಹೋಪಾಕ್ ನೃತ್ಯ ಪ್ರದರ್ಶನವನ್ನು ನೀಡಲಿರುವ 1000 ಯೂಕ್ರೇನ್ ನ ನರ್ತಕರು.
- ಗ್ರ್ಯಾಮಿ ಪ್ರಶಸ್ತಿ ವಿಜೇತರಾದ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1000 ಗಿಟಾರ್ ವಾದ್ಯ.
- ಬಾಬ್ ಮಾರ್ಲೆಯವರ ಖ್ಯಾತ ” ಒನ್ ಲವ್” ನ ಮರುಸೃಷ್ಟಿ ಅವರ ಮೊಮ್ಮಗ ಸ್ಕಿಪ್ ಮಾರ್ಲಿನ್ ಅವರಿಂದ.
ನ್ಯಾಷನಲ್ ಮಾಲ್‌ನಲ್ಲಿ 1963ಯಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ತಮ್ಮ ಖ್ಯಾತ ” ಐ ಹ್ಯಾವ್ ಎ ಡ್ರೀಮ್” ಭಾಷಣವನ್ನು ನೀಡಿ, ಜಗತ್ತಿಗೆ ಸಮನ್ವಯತೆಯ, ಏಕತೆಯ ಸಂದೇಶವನ್ನು ಸಾರಿದರು. ಅದಕ್ಕಿಂತಲೂ ನೂರು ವರ್ಷಗಳ ಹಿಂದೆ (1893) ಚಿಕಾಗೋನಲ್ಲಿ ನಡೆದ ಪ್ರಥಮ ವಿಶ್ವ ಧಾರ್ಮಿಕ ಸಂಸತ್‌ನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮಿಂಚಿನ ಭಾಷಣವನ್ನು ನೀಡಿ, ಸಭಿಕರನ್ನು ತಮ್ಮ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು. ಜಗತ್ತಿನ ದೊಡ್ಡ ಧರ್ಮಗಳ ಪ್ರತಿನಿಧಿಗಳನ್ನು ಸಹೋದರ, ಸಹೋದರಿಯರೇ ಎಂದು ಕರೆದು, ಧಾರ್ಮಿಕ ದ್ವಂದ್ವತೆ ಅಸಹಿಷ್ಣುತೆಯನ್ನು ಕೊನೆಗಾಣಿಸಬೇಕೆಂಬ ಕರೆಯನ್ನು ನೀಡಿದರು.
ಅದೇ ರೀತಿ 2023ರ ಸೆ.29ರಂದು ನ್ಯಾಷನಲ್ ಮಾಲ್‌ನಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರರು ” ಒಂದೇ ಜಾಗತಿಕ ಕುಟುಂಬ” ದ ಫಲಕದಡಿ ಎಲ್ಲಾ ಗಡಿಗಳ, ಧರ್ಮಗಳ, ಪಂಥಗಳ, 180 ದೇಶಗಳ ಜನರನ್ನು ಒಗ್ಗೂಡಿಸಿ, ಎಲ್ಲರ ನಡುವೆಯೂ ಇರುವ ವಿಭನೆಗಳನ್ನು ಜೋಡಿಸುವ ಸೇತುವೆಯಾಗಲಿದ್ದಾರೆ.
ಆಹಾರದಂತಹ ಒಗ್ಗೂಡಿಸುವ ವಿಷಯ ಮತ್ತೊಂದಿಲ್ಲ. ಈ ಉತ್ಸವದಲ್ಲಿ ಜಗತ್ತಿನ ಎಲ್ಲೆಡೆಯ ಆಹಾರಗಳ ಮೇಳವೂ ನಡೆಯಲಿದೆ. ಈ ಉತ್ಸವದ ವಿಶೇಷತೆಯೆಂದರೆ, ಚಿಗುರುತ್ತಿರುವ ಕಲಾವಿದರಿಗೆ, ಪ್ರದರ್ಶಕರಿಗೆ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುತ್ತಿರುವುದು.
ಇದನ್ನೂ ಓದಿ | UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
ಉತ್ಸವದಲ್ಲಿ ಭಾಗವಹಿಸಲಿರುವ ಗಣ್ಯ ಭಾಷಣಕಾರರು
ವಿಶ್ವ ಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಎಚ್. ಇ. ಬಾನ್ ಕೀ ಮೂನ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ, ಯುಎಸ್ ಸಂಸದರಾದ ರಿಕ್ ಸ್ಕಾಟ್, ನಾನ್ಸಿ ಪೆಲೋಸಿ, ಭಾರತದ ಮಾಜಿ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಕರ್ನಾಟಕ
Kolar News: ಬಾರ್‌ನಲ್ಲಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ
Kolar News: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಬಳಿ ಇರುವ ಬಾರ್ ಒಂದರಲ್ಲಿ ವ್ಯಕ್ತಿಗೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ.
ಕೋಲಾರ: ಬಾರ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ (Kolar News) ಮಾಲೂರು ತಾಲೂಕಿನ ಲಕ್ಕೂರು ಬಳಿ ಇರುವ ಬಾರ್ ಒಂದರಲ್ಲಿ ನಡೆದಿದೆ. ಜಗದೇನಹಳ್ಳಿ ಗ್ರಾಮದ ನಿವಾಸಿ ಬೈಯ್ಯರೆಡ್ಡಿ (35) ಮೃತರು. ಲಕ್ಕೂರು-ಚಿಕ್ಕ ತಿರುಪತಿ ರಸ್ತೆಯಲ್ಲಿರುವ ಬಾರ್‌ನಲ್ಲಿ ಹತ್ಯೆ ನಡೆದಿದೆ. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Electric Fence : ಜಮೀನಿಗೆ ಹಾಕಿದ್ದ ಹೈವೋಲ್ಟೇಜ್ ವಿದ್ಯುತ್ ಬೇಲಿ ಸ್ಪರ್ಶಿಸಿ ಇಬ್ಬರು ರೈತರು ದಾರುಣ ಸಾವು
ವಿದೇಶಿ ಮಹಿಳೆ ಬಳಿ ಕಂತೆ ಕಂತೆ ಭಾರತೀಯ ಕರೆನ್ಸಿ ನೋಟು
ದೇವನಹಳ್ಳಿ: ವಿದೇಶಿ ಮಹಿಳೆ ಬಳಿ ಕಂತೆ ಕಂತೆ ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿರುವುದು ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕಂಡುಬಂದಿದೆ. ಮಹಿಳೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ವಶಕ್ಕೆ ಪಡೆದು, ಹಣವನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ | Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
ವಿದೇಶಿ ಮಹಿಳೆ ಬಳಿ ಗರಿಗರಿ ನೋಟು ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ವಿದೇಶಿ ಮೂಲದ ಮಹಿಳೆಯ ಬ್ಯಾಗ್‌ನಲ್ಲಿ ಲಗೇಜ್ ಸ್ಕ್ಯಾನಿಂಗ್ ವೇಳೆ 15 ಲಕ್ಷ ರೂ. ಪತ್ತೆಯಾಗಿದೆ. ಹಣದ ಸಮೇತ ಮಹಿಳೆಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡಸುತ್ತಿದ್ದಾರೆ. ನಂತರ ಹಣ ಹಾಗೂ ಮಹಿಳೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.
ಜಮೀನಿಗೆ ಹಾಕಿದ್ದ ಹೈವೋಲ್ಟೇಜ್ ವಿದ್ಯುತ್ ಬೇಲಿ ಸ್ಪರ್ಶಿಸಿ ಇಬ್ಬರು ರೈತರು ದಾರುಣ ಸಾವು
ಚಿಕ್ಕಬಳ್ಳಾಪುರ: ಜಮೀನಿಗೆ ಹಾಕಿದ್ದ ವಿದ್ಯುತ್ ಬೇಲಿ (Electric Fence) ಸ್ಪರ್ಷಿಸಿ ಇಬ್ಬರು ರೈತರು ದಾರುಣವಾಗಿ ಪ್ರಾಣ (Two Farmers dead) ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura News) ಗೌರಿಬಿದನೂರು ತಾಲ್ಲೂಕಿನ ಕುರುಡಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟವರನ್ನು ಕುರುಡಿ ಗ್ರಾಮದ ತಿಪ್ಪೇಸ್ವಾಮಿ (26) ಹಾಗೂ ಅಂಬರೀಶ್ (28) ಎಂದು ಗುರುತಿಸಲಾಗಿದೆ.
ವೆಂಕಟೇಶಪ್ಪ ಎನ್ನುವವರಿಗೆ ಸೇರಿದ ಜಮೀನು ಬಳಿ ಘಟನೆ ನಡೆದಿದೆ. ವೆಂಕಟೇಶಪ್ಪ ತನ್ನ ಜಮೀನಿಗೆ ಕಾಡು ಪ್ರಾಣಿಗಳ ಕಾಟವನ್ನು ತಡೆಯಲು ಅನಧಿಕೃತವಾಗಿ ವಿದ್ಯುತ್ ಬೇಲಿ (Illegal Electric Fence) ಹಾಕಿದ್ದರು. ತಿಪ್ಪೇಸ್ವಾಮಿ ಮತ್ತು ಅಂಬರೀಷ್ ಅವರು ತಮ್ಮ ಪಕ್ಕದ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ವಿದ್ಯುತ್ ಬೇಲಿ ಹಾಕುವುದಿದ್ದರೆ ಅಲ್ಪ ಪ್ರಮಾಣದ ವಿದ್ಯುತ್ ಹಾಯಿಸಲಾಗುತ್ತದೆ. ಸಾಮಾನ್ಯವಾಗಿ ಸೋಲಾರ್ ಬೇಲಿ ಬಳಸಲಾಗುತ್ತದೆ. ಪ್ರಾಣಿಗಳು ಬಂದರೆ ಅವುಗಳಿಗೆ ಸಣ್ಣದಾಗಿ ಶಾಕ್ ಹೊಡೆಯುವಂತೆ ವೋಲ್ಟೇಜ್ ಸೆಟ್ ಮಾಡಲಾಗುತ್ತದೆ. ಅಂದರೆ ಇದಕ್ಕೆ ಪ್ರತ್ಯೇಕ ಸಲಕರಣೆ ಬೇಕಾಗುತ್ತದೆ. ಆದರೆ, ವೆಂಕಟೇಶಪ್ಪ ಮಾತ್ರ ಬೋರ್ ವೆಲ್ ವಯರನ್ನೇ ನೇರವಾಗಿ ತಂತಿ ಬೇಲಿಗೆ ಕನೆಕ್ಟ್ ಮಾಡಿ ವಿದ್ಯುತ್ ಹರಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ | PSI Recruitment Scam: ಕೊನೆಗೂ ಅಮೃತ್ ಪಾಲ್ ಸೆಂಟ್ರಲ್ ಜೈಲಿನಿಂದ ಬಿಡುಗಡೆ
ಸ್ಥಳಕ್ಕೆ ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕ
VISTARA TOP 10 NEWS : ಎಲ್ಲರ ಕಣ್ಣು ಶುಕ್ರವಾರದ ಕರ್ನಾಟಕ ಬಂದ್‌ನತ್ತ, ಇಸ್ರೋ ಚಿತ್ತ ಮಾತ್ರ ಶುಕ್ರನತ್ತ!
VISTARA TOP 10 NEWS: ಕರ್ನಾಟಕ ಬಂದ್‌ಗೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಇತ್ತ ಇಸ್ರೋ ಮಂಗಳದತ್ತ ಹೊರಡಲು ಸಜ್ಜಾಗಿದೆ. ಹೀಗೆ ದಿನದ ಪ್ರಮುಖ ಸುದ್ದಿಗಳ ಸಾರವೇ ವಿಸ್ತಾರ ಟಾಪ್ 10 ನ್ಯೂಸ್
1.ಕಾವೇರಿ ಉಳಿವಿಗಾಗಿ ಸಿಡಿದೆದ್ದ ಬಿಜೆಪಿ, ಜೆಡಿಎಸ್; ವಿಧಾನಸೌಧದ ಮುಂದೆ ದೋಸ್ತಿಗಳ ಪ್ರತಿಭಟನೆ
ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಬಿಜೆಪಿ – ಜೆಡಿಎಸ್ ನಾಯಕರು (BJP JDS leaders) ಜಂಟಿಯಾಗಿ ಬುಧವಾರ (ಸೆಪ್ಟೆಂಬರ್ 27) ಅಖಾಡಕ್ಕೆ ಇಳಿದಿದ್ದು, ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2 ಬೆಂಗಳೂರು ಬಂದ್ ಬಳಿಕ ಶುಕ್ರವಾರದ ಕರ್ನಾಟಕ ಬಂದ್‌ಗೆ ಸಿದ್ಧತೆ: ಏನಿರುತ್ತೆ? ಏನಿರಲ್ಲ?
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ, ಕೆಲವು ಬೆಂಬಲ ಕೊಡುವುದಿಲ್ಲ ಎಂದಿವೆ. ಹಾಗಿದ್ದರೆ ಹೇಗಿರುತ್ತದೆ ಬಂದ್? ಯಾರೆಲ್ಲ ಬೆಂಬಲ ನೀಡಿದ್ದಾರೆ? ಇಲ್ಲಿದೆ ವಿವರ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕರ್ನಾಟಕ ಬಂದ್ ದಿನವೇ ಪ್ರಾಧಿಕಾರದ ಸಭೆ-ಕಾವೇರಿ ಹೋರಾಟಕ್ಕೆ ನಂಜಾವಧೂತ, ಸುತ್ತೂರು ಶ್ರೀ ಎಂಟ್ರಿ
ಕರ್ನಾಟಕ ಬಂದ್ ನಡೆಯಲಿರುವ ಸೆ. 29ರಂದೇ ಕಾವೇರಿ ಪ್ರಾಧಿಕಾರದ ಸಭೆಯೂ ನಡೆಯಲಿದೆ. ಈ ಬಾರಿ ಏನಾಗಲಿದೆ ಎಂಬ ಕುತೂಹಲವಿದೆ. ಈ ನಡುವೆ ಇಬ್ಬರು ಸ್ವಾಮೀಜಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಬಿಜೆಪಿ ದೋಸ್ತಿಯಿಂದ ಜಾತ್ಯತೀತ ನಿಲುವು ಬದಲಾಗಲ್ಲ ಎಂದ ಎಚ್.ಡಿ. ದೇವೇಗೌಡ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನಿಂದ ಪಕ್ಷಕ್ಕಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ. ಇದೇವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೂ ಜಾತ್ಯತೀತ ನಿಲುವು ಬದಲಾಗುವುದಿಲ್ಲ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಲೋಕಸಮರ ಮುನ್ನ ಬಿಜೆಪಿ ರಥಯಾತ್ರೆ; 2.5 ಲಕ್ಷ ಗ್ರಾಮಗಳಲ್ಲಿ ಪ್ರಚಾರದ ರಣತಂತ್ರ
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲು ಬಿಜೆಪಿಯು ರಣತಂತ್ರ ರೂಪಿಸಿದೆ. ಗ್ರಾಮೀಣ ಸಂವಾದ ಯಾತ್ರೆ ಮೂಲಕ ಗ್ರಾಮೀಣ ಭಾಗದ ಜನರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ. 2.5 ಲಕ್ಷ ಗ್ರಾಮ ತಲುಪುವ ಯಾತ್ರೆ ಮಾಹಿತಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಭಾರತದಲ್ಲಿ ಶುರುವಾಯ್ತು ಆಪರೇಷನ್ ಖಲಿಸ್ತಾನ್- ಒಂದೇ ದಿನ ದೇಶದ 50 ಕಡೆ ಎನ್‌ಐಎ ದಾಳಿ
ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್‌ಸ್ಟರ್‌ಗಳ (gangsters) ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ದಾಳಿ ನಡೆಸಿದೆ. ಇದು ಖಲಿಸ್ತಾನಿಗಳ ವಿರುದ್ಧದ ದೊಡ್ಡ ಆಪರೇಷನ್ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಸತ್ತು ಹೋಯ್ತಾ ಮಾನವೀಯತೆ?; ಅತ್ಯಾಚಾರಕ್ಕೀಡಾದ ಬಾಲಕಿ ಕಣ್ಣೀರಿಟ್ಟು ಅಡ್ಡಾಡಿದ್ರೂ ಕರಗದ ಮನಸ್ಸು
ಮಧ್ಯಪ್ರದೇಶದಲ್ಲಿ (Madhya Pradesh) 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯು ಸಹಾಯಕ್ಕಾಗಿ ಅಂಗಲಾಚಿಕೊಂಡು ಮನೆ ಮನೆಗೆ ಹೋದರೂ ಯಾರೂ ಸಹಾಯ ಮಾಡದಿರುವುದು ಜನರ ಮನಸ್ಥಿತಿಗೂ ಕನ್ನಡಿ ಹಿಡಿದಂತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಇಸ್ರೋಗೆ ಶುರುವಾಯ್ತು ಶುಕ್ರದೆಸೆ- ಚಂದ್ರ, ಸೂರ್ಯನ ಬಳಿಕ ಶುಕ್ರಯಾನಕ್ಕೆ ಭಾರತ ಸಿದ್ಧತೆ
ಚಂದ್ರಯಾನ 3 ಮಿಷನ್ (Chandrayaan 3) ಯಶಸ್ಸಿನ ಬಳಿಕ ಜಾಗತಿಕವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೌರವ ನೂರ್ಮಡಿಯಾಗಿದೆ. ಆದಿತ್ಯ ಮಿಷನ್ ಬೆನ್ನಲ್ಲೇ ಇಸ್ರೋ ಗಮನ ಈಗ ಶುಕ್ರನ (Venus Misssion) ಮೇಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.- ಇರಾಕ್ ಅಗ್ನಿಅವಘಡದಲ್ಲಿ ವಧು, ವರ ಸೇರಿ 114ಕ್ಕೂ ಹೆಚ್ಚುಮಂದಿ ಸಜೀವ ದಹನ
ಇರಾಕ್‌ನ ನಿನೆವೆಹ್ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿರುವ ಮದುವೆ ಹಾಲ್‌ನಲ್ಲಿ (Wedding Hall) ಭೀಕರ ಅಗ್ನಿ ದುರಂತ (Iraq Fire Accident) ಸಂಭವಿಸಿದ್ದು, 114 ಜನ ಮೃತಪಟ್ಟಿದ್ದಾರೆ. ದುರಂತದಲ್ಲಿ ಮದುಮಕ್ಕಳು ಕೂಡ ಮೃತಪಟ್ಟಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. 101 ಕೋಟಿ ರೂ. ಮೌಲ್ಯದ ಷೇರು ಹೊಂದಿರುವ ಈ ವ್ಯಕ್ತಿ ಹೇಗೆ ಜೀವನ ಸಾಗಿಸುತ್ತಿದ್ದಾರೆ ನೋಡಿ!
ಒಂದು ದೊಡ್ಡ ಚಡ್ಡಿ ಧರಿಸಿ, ಮೇಲುಮೈಯಲ್ಲಿ ಇನ್ಯಾವ ದಿರಸನ್ನೂ ಧರಿಸದೆ ಅತ್ಯಂತ ಸರಳವಾಗಿ ನಗುತ್ತಿರುವ ಈ ಹಿರಿಯ ನಾಗರಿಕರ ಆಸ್ತಿ ಮೌಲ್ಯ ಎಷ್ಟು ಎಂದು ತಿಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳಬಹುದು. ಹೌದು, ಇವರೇ ಹೇಳಿಕೊಳ್ಳುವಂತೆ, ಇವರ ಬಳಿ 101 ಕೋಟಿ ರೂ. ಮೌಲ್ಯದ ಷೇರುಗಳಿವೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
-
ಪ್ರಮುಖ ಸುದ್ದಿ23 hours ago
Iraq Fire Accident: ಮದುವೆ ಮನೆಯಲ್ಲಿ ಅಗ್ನಿ ದುರಂತ; ಮದುಮಕ್ಕಳು ಸೇರಿ 114 ಜನರ ಸಾವು!
-
ಪ್ರಮುಖ ಸುದ್ದಿ13 hours ago
German Shepherd: ಸೀಕ್ರೆಟ್ ಸರ್ವಿಸ್ ಏಜೆಂಟ್ನಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ‘ಕಮಾಂಡರ್’!
-
ವಿದೇಶ14 hours ago
Most expensive wedding: ಜಗತ್ತಿನ ದುಬಾರಿ ವಿವಾಹ ಯಾವುದು ಗೊತ್ತೆ? ಖರ್ಚಾಗಿದ್ದು ಇಷ್ಟು ಕೋಟಿ ರೂ.
-
ಸುವಚನ2 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕ್ರೈಂ18 hours ago
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
-
ಕರ್ನಾಟಕ14 hours ago
Car Accident: ಮರಕ್ಕೆ ಕಾರು ಡಿಕ್ಕಿ ಹೊಡೆದು ಚಾಲಕ ಸಾವು
-
ದೇಶ15 hours ago
Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
-
ಕರ್ನಾಟಕ9 hours ago
PSI Recruitment Scam: ಕೊನೆಗೂ ಅಮೃತ್ ಪಾಲ್ ಸೆಂಟ್ರಲ್ ಜೈಲಿನಿಂದ ಬಿಡುಗಡೆ