ಉತ್ತರ ಕನ್ನಡ
Yallapura News: ಕೃಷಿಕ-ಕಾರ್ಮಿಕ ಒಂದೇ ನಾಣ್ಯದ ಎರಡು ಮುಖ ಇದ್ದಂತೆ: ಸಚಿವ ಶಿವರಾಮ ಹೆಬ್ಬಾರ್
ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದ್ದೆ. ನನ್ನ ಇಲಾಖೆಯಿಂದ ಜನತೆಗಾಗಿ ನೂತನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ (Shivarama Hebbar) ಹೇಳಿದ್ದಾರೆ.
ಯಲ್ಲಾಪುರ: ದೇಶ ಕಾಯುವ ಸೈನಿಕ, ದೇಶಕ್ಕೆ ಅನ್ನ ಹಾಕುವ ರೈತ ಹಾಗೂ ದೇಶದ ಅಭಿವದ್ಧಿಗಾಗಿ ಶ್ರಮಿಸುವ ಕಾರ್ಮಿಕರನ್ನು ಎಂದಿಗೂ ಕಡೆಗಣಿಸುವಂತಿಲ್ಲ. ಕೃಷಿಕ ಹಾಗೂ ಕಾರ್ಮಿಕ (Farmer and labourer) ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಅವರಿಗೆ ತೊಂದರೆಯಾಗದಂತೆ ಜತೆ ಜತೆಯಾಗಿ ನಡೆಸಿಕೊಂಡು ಹೋಗುತ್ತೇನೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಪಂಗಡಗಳ ಬೃಹತ್ ಎಸ್.ಟಿ. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಕಾರಣದಿಂದ 2 ವರ್ಷ ನಾವು ಯಾವುದೇ ಅಭಿವೃದ್ಧಿ ಕಾರ್ಯದತ್ತ ಗಮನಹರಿಸಲು ಆಗಲಿಲ್ಲ. ಕೇವಲ ಆರೋಗ್ಯ ಉಳಿಸಿಕೊಳ್ಳುವತ್ತ ನಮ್ಮ ಸರ್ಕಾರ ಕ್ರಮ ಕೈಗೊಂಡಿತು. ಆದರೆ, ಈಗ ರಾಜ್ಯದೆಲ್ಲೆಡೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದ್ದೆ. ನನ್ನ ಇಲಾಖೆಯಿಂದ ಜನತೆಗಾಗಿ ನೂತನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿಯೇ ವಿನೂತನವಾದ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 40 ವಿದ್ಯಾರ್ಥಿಗಳು ಈ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ನಾನು ಒಬ್ಬ ಕಾರ್ಮಿಕನಾಗಿ ಕೆಲಸ ಮಾಡಿದವನು. ಕಾರ್ಮಿಕರ ಕಷ್ಟವನ್ನು ಅರಿತಿದ್ದೇನೆ. ಹೀಗಾಗಿ ಕಾರ್ಮಿಕ ಇಲಾಖೆಗೆ ಜೀವಂತಿಕೆ ನೀಡುವ ಉದ್ದೇಶದಿಂದ ನಾನಾಗಿಯೇ ಈ ಇಲಾಖೆಯನ್ನು ಪಡೆದುಕೊಂಡಿದ್ದೆ. ಇಂದು ಇಲಾಖೆಯ ಅಧಿಕಾರ ಪಡೆಯಲು ಸ್ಪರ್ಧೆ ಏರ್ಪಟ್ಟಿದೆ ಎಂದರು.
ಇದನ್ನೂ ಓದಿ: ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಆಯೋಜಿಸಿರುವ 4ದಿನಗಳ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ತಾಲಿಬಾನಿಗಳು!
ಕ್ಷೇತ್ರದಲ್ಲಿ 25 ವರ್ಷಗಳಲ್ಲಿ ಆಗದಂತಹ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಎಸ್.ಸಿ. ಎಸ್.ಟಿ ಮೀಸಲಾತಿಯನ್ನು ಹೆಚ್ಚಿಸಿ ನಿಮ್ಮ ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ನಮ್ಮ ಸರ್ಕಾರದಿಂದಾಗಿದೆ. ಇದರ ಸದುಪಯೋಗದಿಂದ ಮುಂದೆ ನಿಮ್ಮ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಜಾತಿ, ಮತ ಪಕ್ಷವನ್ನು ನೋಡದೆ ಕೋವಿಡ್ ಸಂದರ್ಭದಲ್ಲಿ 70 ಸಾವಿರ ಆಹಾರದ ಕಿಟ್ ಅನ್ನು 2 ಬಾರಿ ವಿತರಿಸಿದ್ದೇನೆ. ಕಷ್ಟ ಕಾಲದಲ್ಲಿ ಜತೆಗಿದ್ದವರು ನಾವು. ಈಗ ಮತ ಕೇಳಲು ವಿರೋಧಿಗಳು ಮುಂದಾಗಿದ್ದಾರೆ. ಹೀಗಾಗಿ ಜನರು ಇದನ್ನು ನೇರವಾಗಿ ಕೇಳಬೇಕಾಗಿದೆ. ಕಷ್ಟವನ್ನು ಅರಿತವರಿಗೆ ಮಾತ್ರ ಬಡವರ ನೋವು ತಿಳಿಯುತ್ತದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ. ಮತ್ತೊಮ್ಮೆ ಆಯ್ಕೆಯಾಗಿ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: WPL 2023: ಸೋತವರ ಮತ್ತು ಗೆದ್ದವರ ನಡುವೆ ಕಾದಾಟ
ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯಕ ಮಾತನಾಡಿ, ಹಿಂದುಳಿದ ವರ್ಗಕ್ಕೆ ಹಾಗೂ ಪಂಗಡಕ್ಕೆ ಮೀಸಲಾತಿಯನ್ನು ಕೊಟ್ಟಿರುವುದು ನಮ್ಮ ಬಿಜೆಪಿ ಸರ್ಕಾರ. ಕೋವಿಡ್ ಸಂದರ್ಭದಲ್ಲಿ ಕೋಟ್ಯಂತರ ಕಾರ್ಮಿಕರ ಆಹಾರಕ್ಕೆ ಆಸರೆ ಆಗಿದ್ದು ಕಾರ್ಮಿಕ ಇಲಾಖೆಯಾಗಿದೆ. ಇದು ಸಚಿವ ಹೆಬ್ಬಾರ್ ಅವರ ಕಾರ್ಯ ವೈಖರಿಯನ್ನು ತೋರಿಸುತ್ತದೆ. ಪರಿಶಿಷ್ಟ ವರ್ಗ ಹಾಗೂ ಪಂಗಡಕ್ಕೆ ನಮ್ಮ ಸರ್ಕಾರ ನೀಡಿದಷ್ಟು ಸೌಕರ್ಯಗಳನ್ನು ಈ ಹಿಂದಿನ ಯಾವುದೇ ಸರ್ಕಾರ ನೀಡಿಲ್ಲ. ನಾವೆಷ್ಟು ದಿನ ಅಧಿಕಾರದಲ್ಲಿದ್ದೇವೆ ಎಂಬುದಕ್ಕಿಂತ ಜನತೆಗೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದು ಮಹತ್ವದ್ದಾಗಿರುತ್ತದೆ. ಹೀಗಾಗಿ ಆ ಕೆಲಸಗಳ ಆಧಾರದ ಮೇಲೆ ಮತ ಕೇಳುತ್ತೇವೆಯೇ ಹೊರತು ನೀಡಿದ ಹುಸಿ ಆಶ್ವಾಸನೆಗಳ ಮೇಲಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ, ರಾಷ್ಟ್ರಾದ್ಯಂತ ಬಿಜೆಪಿಯನ್ನು ಜನ ಒಪ್ಪಿಕೊಂಡು ಅಧಿಕಾರ ನೀಡಿದ್ದಾರೆ. ಅಂತೆಯೇ ಈ ಬಾರಿ ಜಿಲ್ಲೆಯ ಎಲ್ಲ 6 ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.
ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಬಡ ಜನರ ಕಷ್ಟವನ್ನು ಅರಿತು ಕೆಲಸ ಮಾಡುವ ಸಚಿವರು ನಮ್ಮ ಕ್ಷೇತ್ರಕ್ಕೆ ಸಿಕ್ಕಿದ್ದಾರೆ. ಅವರಿಂದ ಇನ್ನಷ್ಟು ಪ್ರಯೋಜನ ಪಡೆಯುವ ಅವಶ್ಯಕತೆ ನಮಗಿದೆ. ಹೀಗಾಗಿ ಮತ್ತೊಮ್ಮೆ ಹೆಬ್ಬಾರ್ ಅವರು ಬಹುಮತದಿಂದ ಆಯ್ಕೆಯಾಗುತ್ತಾರೆ ಎಂಬುದಕ್ಕೆ ಇಂದು ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿಯಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಸಿ.ಪಿ.ಪಾಟೀಲ್, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಸಿದ್ದಿ, ರಾಜ್ಯ ಮಹಿಳಾ ಕಾರ್ಯಕಾರಣಿ ಸದಸ್ಯೆ ರೇಖಾ ಹೆಗಡೆ ಪ್ರಮುಖರಾದ ವಿಜಯ ಮಿರಾಶಿ, ಚಂದ್ರು ಹೆಗಡೆ, ಉಷಾ ಹೆಗಡೆ, ಮತ್ತಿತರರು ವೇದಿಕೆಯಲ್ಲಿದ್ದರು.
ಇದನ್ನೂ ಓದಿ: KSRTC Employees Strike: ಕೆಪಿಟಿಸಿಎಲ್ ಬಳಿಕ ಸಾರಿಗೆ ನೌಕರರ ವೇತನವೂ ಹೆಚ್ಚಳ ಸಾಧ್ಯತೆ; ಸಂಜೆ ಸಭೆ ಬಳಿಕ ಮುಷ್ಕರ ವಾಪಸ್?
ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ತಳವಾರ್ ಸ್ವಾಗತಿಸಿದರು. ಉಮೇಶ್ ಬಂಕಾಪುರ ನಿರ್ವಹಿಸಿದರು. ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ವಂದಿಸಿದರು. ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.
ಉತ್ತರ ಕನ್ನಡ
Banavasi News: ಏ.1 ರಂದು ಬನವಾಸಿಯ ಮಹಾಸ್ಯಂದನ ರಥೋತ್ಸವ; ಭರದಿಂದ ಸಾಗಿದೆ ರಥ ಕಟ್ಟುವ ಕಾರ್ಯ
Banavasi News: ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆ ಸಮೀಪಿಸಿದ್ದು, ಮಹಾರಥ ಕಟ್ಟುವ ಕಾರ್ಯವು ಆರಂಭವಾಗಿದೆ. ಗೌಡ್ರ ಕುಟುಂಬವು 100 ವರ್ಷಗಳಿಂದ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದು, ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಸುಧೀರ್ ನಾಯರ್, ಬನವಾಸಿ
ಐತಿಹಾಸಿಕ ಬನವಾಸಿಯ ಮಹಾಸ್ಯಂದನ ರಥೋತ್ಸವ (Mahasyandana Rathotsava) ಏ.1 ಹಾಗೂ ಏ.2 ರಂದು ಸಡಗರದಿಂದ ಜರುಗಲಿದೆ. ಈ ಹಿನ್ನೆಲೆಯಲ್ಲಿ ತೇರು ಕಟ್ಟುವ ಕಾರ್ಯ ಆರಂಭವಾಗಿದೆ.
ಏ.1 ರಂದು ಸಂಜೆ ಗಜ ಯಂತ್ರೋತ್ಸವ (ಹೂವಿನ ತೇರು) ನಡೆಯಲಿದೆ. ಏ.2ರಂದು ಮುಂಜಾನೆ ಶ್ರೀ ಉಮಾ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಗುತ್ತದೆ. ರಾತ್ರಿ 12 ಗಂಟೆ ರಥೋತ್ಸವ ನಡೆಯಲಿದೆ. 416 ವರ್ಷಗಳ ಇತಿಹಾಸ ಹೊಂದಿರುವ ಈ ಮಹಾ ರಥೋತ್ಸವಕ್ಕೆ ರಾಜ್ಯದ ಭಕ್ತರು ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಆಗಮಿಸಿ ಸಂಭ್ರಮಿಸುತ್ತಾರೆ.
ಇದನ್ನೂ ಓದಿ: Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು
ಇಂತಹ ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗಾರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದು ಒಂದು ಕಲೆ. ತೇರು ಸಿಂಗಾರ ನೋಡಲೆಂದೇ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತಿ-ಭಾವಗಳ ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಎಳೆಯುವ ಮಹಾರಥ ಕಟ್ಟುವುದು ಗಮನ ಸೆಳೆಯುತ್ತದೆ. ಇಲ್ಲಿಯ ರಥ ಕಟ್ಟುವ ಗೌಡರ ಕುಟುಂಬ ವಿಶಿಷ್ಟವಾಗಿ ಕಂಡು ಬರುತ್ತದೆ.
ಸಾಂಘಿಕವಾಗಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ ಈ ಕುಟುಂಬವೂ ಮಧುಕೇಶ್ವರ ದೇವರ ರಥ ಕಟ್ಟುವ ಕಾರ್ಯ ನಡೆಸುತ್ತಾ ಬಂದಿದೆ. ಹದಿನೈದು ದಿನಗಳ ಕಾಲ ತಮ್ಮ ನಿತ್ಯ ಕಾಯಕಕ್ಕೆ ರಜೆ ಹಾಕಿ ರಥ ಕಟ್ಟುವ ಕಾಯಕವೂ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.
ದೊಡ್ಡ ವ್ಯಾಸದ ಸುತ್ತಳತೆಯ ಈ ಮಹಾಸ್ಯಂದನ ರಥವನ್ನು ಹೋಳಿ ಹುಣ್ಣಿಮೆ ಆಚರಿಸಿ ರಂಗ ಪಂಚಮಿಯ ದಿವಸ ಗೂಟ ಪೂಜೆ ನೆರವೇರಿಸಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ಈ ಕುಟುಂಬದ ನಾಲ್ಕೈದು ಮಂದಿ ರಥ ನಿರ್ಮಾಣ ಕೆಲಸಕ್ಕೆ ಹಾಜರಾಗುತ್ತಾರೆ. ಮರದಿಂದ ನಿರ್ಮಿತವಾದ ಮಹಾರಥ ತಳ ಭಾಗದಿಂದ ಚಕ್ರ ಸಹಿತ ಸುಭದ್ರವಾಗಿದ್ದು, 25 ಅಡಿ ಎತ್ತರ ಹೊಂದಿದೆ. ಪ್ರತಿ ವರ್ಷ ರಥೋತ್ಸವದ ಸಮಯದಲ್ಲಿ ಮೇಲ್ಭಾಗ ರೀಪುಗಳ ಸಹಿತ ಕತ್ತದ ಹುರಿಯಿಂದ ರಥವನ್ನು ಎತ್ತರಿಸುತ್ತಾ ಹೋಗುತ್ತಾರೆ. 7 ನೆಲೆಗಳನ್ನು ನಿರ್ಮಾಣ ಮಾಡಿ 10 ಅಡಿ ಎತ್ತರದ ಗೋಪುರ, 6 ಅಡಿ ಎತ್ತರದ ಕಳಶ ಇಟ್ಟು ಸುಮಾರು 75 ಅಡಿಗಳಷ್ಟು ಎತ್ತರದ ಮಹಾರಥವನ್ನು ಕಟ್ಟಲಾಗುತ್ತದೆ. ಈ ಮನೆತನದ ಮಹಿಳೆಯರು ಸಹ ರಥದಲ್ಲಿ ಅಳವಡಿಸುವ ಪತಾಕೆ ಸಜ್ಜುಗೊಳಿಸಿ ತಮ್ಮ ಸೇವೆಯನ್ನು ನೀಡುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Google: ಗೂಗಲ್ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
ಪಾರಂಪರಿಕವಾಗಿ ರಥ ಕಟ್ಟುವ ಕಾರ್ಯಕ್ಕೆ ಗೌರವ ಸಂಭಾವನೆ, ತೆಂಗಿನ ಕಾಯಿ, ಅಕ್ಕಿ, ಬೆಲ್ಲ ನೀಡಲಾಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ರಥವನ್ನು ಎಳೆಯುವಾಗ ಮಟ್ಟು ಹಾಕುವ ಜವಾಬ್ದಾರಿಯನ್ನು ಇವರೇ ನಿರ್ವಹಿಸುತ್ತಾರೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪಾರಂಪರಿಕ ವೈಶಿಷ್ಟ್ಯಗಳ ಸಂಪ್ರದಾಯ ಮುಂದುವರಿಯುತ್ತದೆ ಎಂಬುದಕ್ಕೆ ಇವೆಲ್ಲ ಸಾಕ್ಷಿಯಾಗಿದೆ.
“ನಮ್ಮ ಹಿರಿಯರು ಆರಂಭಿಸಿದ ಈ ರಥ ಕಟ್ಟುವ ಕಾಯಕವನ್ನು ನಾವು ಅವರಿಂದ ಕಲಿತು, ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ನಾನು ನಮ್ಮ ಮನೆತನದ ಸದಸ್ಯರ ಸಹಕಾರದಿಂದ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದೇನೆ. ರಥ ಕಟ್ಟುವ ಕಾರ್ಯ ನಮ್ಮ ಪಾಲಿನ ಭಾಗ್ಯವಾಗಿದೆ” ಎನ್ನುತ್ತಾರೆ ರಥ ಕಟ್ಟುವ ಗೌಡ್ರು ಮನೆತನದ ಹಿರಿಯ ಸಹೋದರ ಮಧುಕೇಶ್ವರ.
ಇದನ್ನೂ ಓದಿ: IPL 2023: ಪಂತ್ ಬದಲು ಡೆಲ್ಲಿ ಪಾಳಯ ಸೇರಿದ 20 ವರ್ಷದ ಬಂಗಾಳ ಕ್ರಿಕೆಟಿಗ; ಯಾರಿದು?
“ನಾನು ನಮ್ಮ ಸಹೋದರ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮುಂದೆ ನಮ್ಮ ಮಕ್ಕಳಿಗೂ ಈ ಕಲೆಯನ್ನು ಕಲಿಸಿ ಮುಂದಿನ ಪೀಳಿಗೆಗೂ ಪರಿಚಯಿಸುತ್ತೇವೆ” ಎಂದು ರಥ ಕಟ್ಟುವ ಗೌಡ್ರ ಮನೆತನದ ಕಿರಿಯ ಸಹೋದರ ನರಸಿಂಹ.
ಉತ್ತರ ಕನ್ನಡ
Honnavar News: ಕಳ್ಳಬಟ್ಟಿ ಸಾರಾಯಿ ಮಾರಾಟ; ಅಬಕಾರಿ ಅಧಿಕಾರಿಗಳ ದಾಳಿ, 650 ಲೀ. ಬೆಲ್ಲದ ಕೊಳೆ ವಶ
Honnavar News: ಕರ್ನಾಟಕ ವಿಧಾನಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಖರ್ವಾ ಗ್ರಾಮದಲ್ಲಿ ಗಸ್ತು ನಡೆಸುತ್ತಿರುವಾಗ ಕಳ್ಳಬಟ್ಟಿ ತಯಾರಿಕೆಯ ಮಾಹಿತಿ ಗೊತ್ತಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಹೊನ್ನಾವರ: ಮನೆ ಮತ್ತು ತೋಟದಲ್ಲಿ ಅಕ್ರಮವಾಗಿ 650 ಲೀ. ಬೆಲ್ಲದ ಕೊಳೆಯನ್ನು ದಾಸ್ತಾನು ಮಾಡಿ ಕಳ್ಳಬಟ್ಟಿ ಸಾರಾಯಿ (Toddy liquor) ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಖರ್ವಾದಲ್ಲಿ ಮಂಗಳವಾರ (ಮಾ.28) ನಡೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಖರ್ವಾ ಗ್ರಾಮದಲ್ಲಿ ಗಸ್ತು ನಡೆಸುತ್ತಿರುವಾಗ, ಮಂಜು ಮರಿ ಗೌಡ ಎಂಬಾತ ಅಕ್ರಮವಾಗಿ ಬೆಲ್ಲದ ಕೊಳೆಯನ್ನು ದಾಸ್ತಾನಿಟ್ಟುಕೊಂಡು ಕಳ್ಳಬಟ್ಟಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಿಷಯ ಗೊತ್ತಾಗಿದೆ.
ಈ ಮಾಹಿತಿ ಆಧಾರದ ಮೇರೆಗೆ ಕಾರವಾರ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಹೊನ್ನಾವರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಆರೋಪಿತನ ಮನೆ ಹಾಗೂ ತೋಟದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 650 ಲೀ. ಬೆಲ್ಲದ ಕೊಳೆಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Karnataka Elections 2023 : ಬಿಎಸ್‌ವೈ ಸರ್ವೋಚ್ಚ ನಾಯಕ, ಕಠಿಣ ಭಾಷೆ ಬಳಸಿದ್ದರೆ ಕ್ಷಮೆ ಇರಲಿ ಎಂದ ಸೋಮಣ್ಣ
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ದಾಮೋದರ್ ಎನ್. ನಾಯ್ಕ, ಅಬಕಾರಿ ಉಪ ನಿರೀಕ್ಷಕರಾದ ಕೆ.ಆರ್. ಪಾವಸ್ಕರ್, ಗಂಗಾಧರ್ ಅಂತರಗಟ್ಟಿ ಹಾಗೂ ಅಬಕಾರಿ ಪೇದೆಯವರಾದ ಶ್ರೀಕಾಂತ್ ಜಾಧವ್, ಮುತ್ತಪ್ಪ ಬುಗಡಿಕಟ್ಟೆ ಮತ್ತು ರಮೇಶ ರಾಮಚಂದ್ರ ರಾಥೋಡ ಪಾಲ್ಗೊಂಡಿದ್ದರು.
ಉತ್ತರ ಕನ್ನಡ
Karwar News: ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ತಂದ ಶಾಸಕಿ ರೂಪಾಲಿ ನಾಯ್ಕ
Karwar News: ಈ ಹಿಂದೆ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಯಾಗಿತ್ತು. ಇದೀಗ 5 ಕೋಟಿ ರೂ. ಬಿಡುಗಡೆಯಾಗಿದೆ. ವಿಶೇಷ ಪ್ರಯತ್ನದ ಮೂಲಕ ಬಿಡುಗಡೆಗೊಳಿಸಿರುವುದಾಗಿ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.
ಕಾರವಾರ: ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ವಿಶೇಷ ಪ್ರಯತ್ನದಿಂದ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ 27 ದೇವಾಲಯಗಳ ಅಭಿವೃದ್ಧಿಗೆ (development of temples) 5 ಕೋಟಿ ರೂ. ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಹಿಂದೆ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಯಾಗಿತ್ತು. ಇದೀಗ 5 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ. ಬಿಡುಗಡೆಯಾದಂತಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಇಷ್ಟೊಂದು ಅನುದಾನವನ್ನು ಶಾಸಕರು ತಂದಿರುವುದು ಗಮನಾರ್ಹವಾಗಿದೆ.
ದೇವಾಲಯಗಳ ವಿವರ
ಅಂಕೋಲಾ ಕಣಕಣೇಶ್ವರ ದೇವಸ್ಥಾನ- 35 ಲಕ್ಷ ರೂ., ತೋಡೂರು ಗೋವಿಂದ ದೇವಸ್ಥಾನ- 25 ಲಕ್ಷ ರೂ, ಕಾರವಾರ ಅಳ್ವೇವಾಡದ ನರಸಿಂಹ ದೇವಸ್ಥಾನ- 25 ಲಕ್ಷ ರೂ., ಶೆಟಗೇರಿ ಹಡವ ದೇವಸ್ಥಾನ- 15 ಲಕ್ಷ ರೂ, ಅಮದಳ್ಳಿ ಮಹಾಸತಿ ದೇವಸ್ಥಾನ- 50 ಲಕ್ಷ ರೂ., ಚೆಂಡಿಯಾ ಅಂಬಾಭವಾನಿ ದೇವಸ್ಥಾನ- 21 ಲಕ್ಷ ರೂ. ಅಂಕೋಲಾ ಶೆಟಗೇರಿ ಕಾಳಮ್ಮ ದೇವಸ್ಥಾನ – 25 ಲಕ್ಷ ರೂ., ಶಿರವಾಡ ದೇವತಿ ದೇವಸ್ಥಾನ- 25 ಲಕ್ಷ ರೂ., ಬೊಬ್ರುವಾಡ ತೆಂಕಣಕೇರಿ ವೆಂಕಟರಮಣ ದೇವಸ್ಥಾನ- 10 ಲಕ್ಷ ರೂ., ಬೊಬ್ರುವಾಡ ಬೊಬ್ರು ದೇವಸ್ಥಾನ- 6 ಲಕ್ಷ ರೂ, ಹಾರವಾಡ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗೆ 50 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: Priyanka Chopra: ಫೇರ್‌ನೆಸ್ ಆ್ಯಡ್‌ಗಳಲ್ಲಿ ನಟಿಸುವುದು ಹಾನಿಕರ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ?
ಹಿಲ್ಲೂರಬೈಲ್ ನಂದಿಕೇಶ್ವರ ದೇವಸ್ಥಾನ- 10 ಲಕ್ಷ ರೂ, ಬೆಳಸೆ ದುರ್ಗಾದೇವಿ ದೇವಸ್ಥಾನ- 30 ಲಕ್ಷ ರೂ, ಸಗಡಗೇರಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ- 15 ಲಕ್ಷ ರೂ., ಶಿರ್ವೆ ಶ್ರೀ ನಾರಾಯಣ ದೇವಸ್ಥಾನ- 25 ಲಕ್ಷ ರೂ., ಬರಗಲ್ ಶ್ರೀ ಮಹಾದೇವ ದೇವಸ್ಥಾನ- 10 ಲಕ್ಷ ರೂ., ಉಳಗಾ ಶ್ರೀ ನಾರಾಯಣ ಮಹಾದೇವ ದೇವಸ್ಥಾನ- 5 ಲಕ್ಷ ರೂ., ಅಸ್ನೋಟಿ ಶ್ರೀ ಕಾಮಾಕ್ಷೀ ರಾಜೇಶ್ವರ ಗಣಪತಿ ದೇವಸ್ಥಾನ- 5 ಲಕ್ಷ ರೂ., ಮಲ್ಲಾಪುರ ಶ್ರೀ ಮಹಾದೇವ ದೇವಸ್ಥಾನ- 10 ಲಕ್ಷ ರೂ., ಬಾಳ್ನಿ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ಅಭಿವೃದ್ಧಿಗಾಗಿ 10 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ.
ಅಂಕೋಲಾ ಪುರಸಭೆ ವ್ಯಾಪ್ತಿಯ ವಿಠ್ಠಲ ಸದಾಶಿವ ದೇವಾಲಯ ಅಭಿವೃದ್ಧಿಗೆ 10 ಲಕ್ಷ ರೂ, ಕೇಣಿ ದತ್ತಾತ್ರೇಯ ದೇವಾಲಯ ಅಭಿವೃದ್ಧಿಗೆ 15 ಲಕ್ಷ ರೂ, ಕಾರವಾರ ನಗರಸಭೆ ವ್ಯಾಪ್ತಿಯ ರಾಘವೇಂದ್ರ ಮಠ ಅಭಿವೃದ್ಧಿಗೆ 10 ಲಕ್ಷ ರೂ, ಮಂಜಗುಣಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ ತಾರಿಜಟಕ ದೇವಸ್ಥಾನ ಅಭಿವೃದ್ಧಿಗೆ 15 ಲಕ್ಷ ರೂ, ದೇವಳಮಕ್ಕಿ ಶ್ರೀ ನಾರಾಯಣ ಮಹಾದೇವ ದೇವಾಲಯ ಅಭಿವೃದ್ಧಿಗೆ 10 ಲಕ್ಷ ರೂ, ಅಂಕೋಲಾ ಪುರಸಭೆ ವ್ಯಾಪ್ತಿಯ ಕಾನಮ್ಮ ದೇವಾಲಯ ಅಭಿವೃದ್ಧಿಗೆ 28 ಲಕ್ಷ ರೂ. ಹಾಗೂ ಚಿತ್ತಾಕುಲ ದೇವಭಾಗ್ ನರಸಿಂಹ ದೇವಸ್ಥಾನ ಅಭಿವೃದ್ಧಿಗೆ (ಅಂಬಿಗ ಸಮಾಜ) 5 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡಿ ಆದೇಶಿಸಿದೆ. ಈಗಾಗಲೇ ಬಿಡುಗಡೆಯಾದ ಅನುದಾನದ ಬಹುತೇಕ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದಾರೆ.
“ಬಹುತೇಕ ಎಲ್ಲರೂ ದೇವರ ಸನ್ನಿಧಿಗೆ ಬರುತ್ತಾರೆ. ದೇವಾಲಯಗಳ ಕಟ್ಟಡಗಳು ಸುಸ್ಥಿತಿಯಲ್ಲಿರಬೇಕು. ಕ್ಷೇತ್ರದ ದೇವಾಲಯಗಳ ಅಭಿವೃದ್ಧಿಗೆ ಹಣ ಸಾಲದು ಎಂದಾಗ ವಿಶೇಷ ಪ್ರಯತ್ನದಿಂದ ಅನುದಾನ ನೀಡಲಾಗಿದೆ. ದೇವಾಲಯಗಳಿಗೆ ಹಣ ನೀಡಿರುವುದು ನನಗೂ ಸಮಾಧಾನ ತಂದಿದೆ” ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.
ಉತ್ತರ ಕನ್ನಡ
Karnataka Election 2023: ಏ.5ರಿಂದ ಅಖಾಡಕ್ಕೆ ಇಳಿಯುವೆ: ಆನಂದ ಅಸ್ನೋಟಿಕರ್
Karnataka Election 2023: ಆನಂದ ಅಸ್ನೋಟಿಕರ್ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೋ ಅಥವಾ ಜೆಡಿಎಸ್‌ನಿಂದಲೇ ಪ್ರಬಲ ಪೈಪೋಟಿ ನೀಡುತ್ತಾರೋ ಎನ್ನುವುದನ್ನು ಏ. 5ರವರೆಗೆ ಕಾದು ನೋಡಬೇಕಾಗಿದೆ. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ಅಂಕೋಲಾ: “ಜೆಡಿಎಸ್‌ನಲ್ಲಿ ಮುಂದುವರಿಯುವುದೋ ಅಥವಾ ರಾಷ್ಟ್ರೀಯ ಪಕ್ಷವೊಂದರಲ್ಲಿ ಸೇರುವುದೋ ಎಂಬ ಬಗ್ಗೆ ನಿರ್ಧಾರ ಇನ್ನೂ ಬಾಕಿ ಇದೆ. ಏ. 5 ರಿಂದ ಚುನಾವಣಾ (Karnataka Election 2023) ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿಯುವೆ” ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಅವರು ಮಂಗಳವಾರ (ಮಾ.28) ದೇವರ ದರ್ಶನಕ್ಕೆಂದು ಪಟ್ಟಣದ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ಆಗಮಿಸಿದ್ದು, ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ತಮ್ಮ ರಾಜಕೀಯ ನಡೆ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರವನ್ನು ಪ್ರಕಟ ಮಾಡುವೆ ಎಂದು ಹೇಳಿದರು.
ಗೊಂದಲದಲ್ಲಿ ಅಸ್ನೋಟಿಕರ್
ಕಳೆದ ನಾಲ್ಕೈದು ತಿಂಗಳ ಹಿಂದೆ ಅಂಕೋಲಾಕ್ಕೆ ಆಗಮಿಸಿದ್ದ ವೇಳೆ ಅವರು ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇಂದಿನ ಅವರ ಹೇಳಿಕೆ ಜೆಡಿಎಸ್ ಕಾರ್ಯಕರ್ತರಲ್ಲಿ ಜಿಜ್ಞಾಸೆ ಮೂಡಿಸಿತಾದರೂ ಅವರ ಅಭಿಮಾನಿಗಳು ಆನಂದ ಅವರು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆನಂದ ಅವರ ಹೇಳಿಕೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಕಾಂಗ್ರೆಸ್ ಸೇರುತ್ತಾರೋ ಅಥವಾ ಬಿಜೆಪಿ ಸೇರುತ್ತಾರೋ ಅಥವಾ ಜೆಡಿಎಸ್‌ನಿಂದಲೇ ಪ್ರಬಲ ಪೈಪೋಟಿ ನೀಡುತ್ತಾರೋ ಎನ್ನುವುದನ್ನು ಏ. 5ರವರೆಗೆ ಕಾದು ನೋಡಬೇಕಾಗಿದೆ. ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಸಂದೀಪ್ ಬಂಟ ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Karnataka Election 2023: ಜೆಡಿಎಸ್-ಬಿಜೆಪಿಯಿಂದ ಈ ಬಾರಿಯೂ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?