Ram Mandir: ರಾಮಮಂದಿರ ಉದ್ಘಾಟನೆಗೆ ನಟ ಯಶ್‌, ರಿಷಬ್‌ ಶೆಟ್ಟಿಗೆ ಆಹ್ವಾನ - Vistara News

South Cinema

Ram Mandir: ರಾಮಮಂದಿರ ಉದ್ಘಾಟನೆಗೆ ನಟ ಯಶ್‌, ರಿಷಬ್‌ ಶೆಟ್ಟಿಗೆ ಆಹ್ವಾನ

Ram Mandir: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದ್ದು, ಕನ್ನಡದ ಖ್ಯಾತ ನಟರಾದ ಯಶ್‌ ಮತ್ತು ರಿಷಬ್‌ ಶೆಟ್ಟಿ ಅವರಿಗೂ ಆಹ್ವಾನ ಬಂದಿದೆ.

VISTARANEWS.COM


on

yash and Rishab Shetty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಲೋಕಾರ್ಪಣೆಗೆ ರಾಮಮಂದಿರ ಸಜ್ಜುಗೊಂಡಿದೆ. ಜನವರಿ 22 ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ (Ram Mandir) ಪ್ರಮುಖ ರಾಜಕೀಯ ನಾಯಕರು, ಕ್ರೀಡೆ ಹಾಗೂ ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಅದರಂತೆ ಕನ್ನಡದ ಖ್ಯಾತ ನಟರಾದ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಡಿವೈನ್‌ ಸ್ಟಾರ್ ರಿಷಬ್‌ ಶೆಟ್ಟಿಗೆ ಆಹ್ವಾನ ನೀಡಲಾಗಿದೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಈಗಾಗಲೇ ಕಳುಹಿಸಿದೆ. ಜತೆಗೆ ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗುತ್ತಿದೆ.

ಇದನ್ನೂ ಓದಿ | Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಸಚಿನ್​​ಗೆ ಆಹ್ವಾನ

ಇನ್ನು ರಾಮ ಮಂದಿರ ಟ್ರಸ್ಟ್‌ನ 3,000 ವಿವಿಐಪಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಾಣಾವತ್‌, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮ್‌ದೇವ್‌ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದ್ದಾರೆ. ಇದಲ್ಲದೆ ಪ್ರಸಿದ್ಧ ಟಿವಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖ್ಲಿಯಾ ಅವರನ್ನು ಸಹ ಟ್ರಸ್ಟ್ ಆಹ್ವಾನಿಸಿದೆ.

ಇದೀಗ ಕನ್ನಡ ಚಿತ್ರರಂಗದ ಸ್ಟಾರ್‌ ನಟರಾದ ಯಶ್‌ ಮತ್ತು ರಿಷಬ್‌ ಶೆಟ್ಟಿ ಅವರಿಗೂ ಆಹ್ವಾನ ಬಂದಿದೆ. ಜತೆಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ‌ ರಜನಿಕಾಂತ್‌, ಚಿರಂಜೀವಿ, ಪ್ರಭಾಸ್‌‌, ಮೋಹನ್‌ ಲಾಲ್, ಧನುಷ್ ಅವರು ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ | Priyanka Kamath: ಮದುವೆ ಸಂಭ್ರಮದಲ್ಲಿ ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ನಟಿ ಪ್ರಿಯಾಂಕಾ ಕಾಮತ್

ವಾರಾಣಸಿಯ 21 ಪಂಡಿತರ ತಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯ ನಡೆಸಲಿದೆ. ಖ್ಯಾತ ವೈದಿಕ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ತಂಡವನ್ನು ಮುನ್ನಡೆಸಲಿದ್ದು, ಅವರ ಇಬ್ಬರು ಪುತ್ರರಾದ ಪಂಡಿತ್ ಜೈಕೃಷ್ಣ ದೀಕ್ಷಿತ್ ಮತ್ತು ಸುನಿಲ್ ದೀಕ್ಷಿತ್ ಮತ್ತು ಕಾಶಿಯ ಇತರ 18 ಪಂಡಿತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯ ರಾಮ ದೇವಾಲಯದ ಗರ್ಭಗುಡಿಯಲ್ಲಿ ಇರಿಸಬೇಕಾದ ವಿಗ್ರಹದ ಕೆಲಸ ಬಹುತೇಕ ಪೂರ್ಣಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

Jyotika Trolled: ಸೂರ್ಯ ಪತ್ನಿ ಜ್ಯೋತಿಕಾ ಏಕೆ ಮತ ಹಾಕಲಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಶ್ರೀಕಾಂತ್ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಟಿ ಏಕೆ ಮತದಾನ ಮಾಡಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ʻಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆʼ ಎಂದು ನಟಿ ಉತ್ತರ ನೀಡಿದ್ದಾರೆ. ಹೀಗಾಗಿ ನಟಿ ಜ್ಯೋತಿಕಾ ಟ್ರೋಲ್ ಆಗಿದ್ದಾರೆ. ನಟಿ ಜ್ಯೋತಿಕಾ (Jyotika Trolled) ಅವರು ಹಿಂದಿಯ ‘ಶ್ರೀಕಾಂತ್’ ಹೆಸರಿನ ( Srikanth with Rajkummar Rao) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

VISTARANEWS.COM


on

Jyotika Trolled For Claiming Online Private Voting
Koo

ಬೆಂಗಳೂರು: ನಟಿ ಜ್ಯೋತಿಕಾ (Jyotika Trolled) ಅವರು ಹಿಂದಿಯ ‘ಶ್ರೀಕಾಂತ್’ ಹೆಸರಿನ ( Srikanth with Rajkummar Rao) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಜ್ಯೋತಿಕಾ ಟ್ರೋಲ್ ಆಗಿದ್ದಾರೆ. ಕಳೆದ ತಿಂಗಳು, ನಟ ಸೂರ್ಯ ಚೆನ್ನೈನ ಮತಗಟ್ಟೆಯಲ್ಲಿ ಮತದಾನ ಮಾಡಲು ಆಗಮಿಸಿದ್ದರು. ಆದರೆ, ಅವರ ಪತ್ನಿ ಜ್ಯೋತಿಕಾ ಏಕೆ ಮತ ಹಾಕಲಿಲ್ಲ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಶ್ರೀಕಾಂತ್ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಟಿ ಏಕೆ ಮತದಾನ ಮಾಡಲಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ʻಆನ್​ಲೈನ್​ನಲ್ಲಿ ವೋಟ್ ಮಾಡಿದ್ದೇನೆʼ ಎಂದು ನಟಿ ಉತ್ತರ ನೀಡಿದ್ದಾರೆ. ಹೀಗಾಗಿ ನಟಿ ಜ್ಯೋತಿಕಾ ಟ್ರೋಲ್ ಆಗಿದ್ದಾರೆ.

ಈವೆಂಟ್‌ನ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವರದಿಗಾರರೊಬ್ಬರು ಜ್ಯೋತಿಕಾ ಅವರಿಗೆ ಏಕೆ ವೋಟ್‌ ಮಾಡಲು ಬರಲಿಲ್ಲ? ಎಂದು ಕೇಳಿದ್ದರು. ಆಗ ನಟಿ ʻʻನಾನು ಪ್ರತಿ ವರ್ಷ ವೋಟ್‌ ಮಾಡುತ್ತೇನೆʼʼಎಂದಿದ್ದಾರೆ. ನಂತರ ಮತದಾನ ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು.ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ.

ಯಾಕೆ ಮತ ಹಾಕಲಿಲ್ಲ ಎಂಬುದನ್ನು ವಿವರಿಸಿದ ಜ್ಯೋತಿಕಾ ʻʻಕೆಲವೊಮ್ಮೆ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಬೇರೆ ರಾಜ್ಯಕ್ಕೆ ಹೋಗಿರಬಹುದು. ನಾವು ಅನಾರೋಗ್ಯಕ್ಕೆ ಒಳಗಾಗಬಹುದು, ಇದು ಖಾಸಗಿ ವಿಷಯವಾಗಿದೆʼʼಎಂದಿದ್ದಾರೆ ನಟಿ.

ಇದನ್ನೂ ಓದಿ: Jyotika and Suriya: ಸೂರ್ಯ ಜತೆ ಜಿಮ್‌ನಲ್ಲಿ ನಟಿ ಜ್ಯೋತಿಕಾ ಹೆವಿ ವರ್ಕೌಟ್!

ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನಟಿಯನ್ನು ಟ್ರೋಲ್‌ ಮಾಡಲು ಶುರು ಮಾಡಿದ್ದಾರೆ. ಒಬ್ಬರು ʻʻನಟಿಯ ಆರೋಗ್ಯ ಹದೆಗಟ್ಟಿದ್ದರಿಂದ ವೋಟ್‌ ಹಾಕದೇ ಇರಬಹುದುʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ʻʻಇದೇನು ಬಿಗ್ ಬಾಸ್‌ನಲ್ಲಿ ಮತ ಚಲಾಯಿಸಿದಂತೆಯಾ?ʼʼಎಂದು ಕಮೆಂಟ್‌ ಮಾಡಿದ್ದಾರೆ. `ಜ್ಯೋತಿಕಾ ರೀತಿ ಆನ್​ಲೈನ್​ ವೋಟ್ ಮಾಡೋದು ಹೇಗೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.‘ಸಮಾಜ ಸುಧಾರಕಿ ಜ್ಯೋತಿಕಾ, ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷಕ್ಕೆ ಅಲ್ಲ, 5 ವರ್ಷಕ್ಕೊಮ್ಮೆ ಎಂದು. ನಾನು ಭಾರತದಲ್ಲಿ ಈವರೆಗೆ ಆನ್‌ಲೈನ್ ಮತದಾನದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ ಅವರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಜ್ಯೋತಿಕಾ ಕೊನೆಯದಾಗಿ ʻಶೈತಾನ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಈ ಚಿತ್ರದಲ್ಲಿ ಆರ್ ಮಾಧವನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಹಿಂದಿಯ ‘ಶ್ರೀಕಾಂತ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತುಶಾರ್ ಹಿರಾನಂದನಿ ಇದನ್ನು ನಿರ್ದೇಶನ ಮಾಡಿದ್ದು, ರಾಜ್​ಕುಮಾರ್ ರಾವ್, ಅಲಾಯ ಎಫ್, ಶರದ್ ಕೇಲ್ಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ.

Continue Reading

ಕಾಲಿವುಡ್

Annamalai Biopic: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಯೋಪಿಕ್‌ಗೆ ತಮಿಳು ಖ್ಯಾತ ನಟ ನಟನೆ!

Annamalai Biopic: ಸದ್ಯ ವಿಶಾಲ್ ನಟನೆಯ ‘ರತ್ನಂ’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಟ ವಿಶಾಲ್ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ತೆರೆಮೇಲೆ ಅಣ್ಣಾಮಲೈ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಇತ್ತೀಚೆಗೆ ವಿಶಾಲ್ ಕೂಡ ರಾಜಕೀಯಕ್ಕೆ ಸೇರುವ ಸೂಚನೆ ನೀಡಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಸೇರ್ಪಡೆ ಆಗುತ್ತಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ.

VISTARANEWS.COM


on

Annamalai Biopic Will Be Made In Kollywood Annamalai Biopic Will Be Made In Kollywood Annamalai Biopic Will Be Made In Kollywood
Koo

ಬೆಂಗಳೂರು: ಪೊಲೀಸ್ ಹುದ್ದೆಯಲ್ಲಿರುವಾಗ ತಮ್ಮ ಕಟ್ಟುನಿಟ್ಟಾದ ಕಾರ್ಯಶೈಲಿಯಿಂದ “ಸಿಂಗಂ ಅಣ್ಣ” ಎಂದು ಬಿರುದು ಪಡೆದ ನಿವೃತ್ತ ಪೊಲೀಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (k Annamalai) ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರ ಮೂಲಕ ಲೋಕಸಭಾ ಚುನಾವಣೆಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯ ಅಣ್ಣಾಮಲೈ ಕುರಿತು ತಮಿಳಿನಲ್ಲಿ ಬಯೋಪಿಕ್ ಸಿನಿಮಾ (Annamalai Biopic) ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ನಟ ವಿಶಾಲ್ ತೆರೆಮೇಲೆ ಅಣ್ಣಾಮಲೈ ಆಗಿ ನಟಿಸುತ್ತಾರೆ ಎನ್ನಲಾಗುತ್ತಿದೆ.

ಸದ್ಯ ವಿಶಾಲ್ ನಟನೆಯ ‘ರತ್ನಂ’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಟ ವಿಶಾಲ್ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ತೆರೆಮೇಲೆ ಅಣ್ಣಾಮಲೈ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. 1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಬಿಇ ಎಂಜಿನಿಯರಿಂಗ್‌ ಮಾಡಿ ಎಂಬಿಎ ಪೂರ್ಣಗೊಳಿಸಿದ ಅಣ್ಣಾಮಲೈ 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ಆಗಿದ್ದರು.

ಇತ್ತೀಚೆಗೆ ವಿಶಾಲ್ ಕೂಡ ರಾಜಕೀಯಕ್ಕೆ ಸೇರುವ ಸೂಚನೆ ನೀಡಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಸೇರ್ಪಡೆ ಆಗುತ್ತಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ

ಅಣ್ಣಾಮಲೈ ಅವರ ಕುರಿತಾದ ಕೆಲವು ಕುತೂಹಲಕರ ಸಂಗತಿಗಳು ಇಲ್ಲಿವೆ

  • ಅಣ್ಣಾಮಲೈ ಅವರಿಗೆ ಈಗ ಕೇವಲ 39 ವರ್ಷ. 2021ರಲ್ಲಿ ಅವರು ತಮಿಳುನಾಡಿನ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು.
  • ಕೆ. ಅಣ್ಣಾಮಲೈ ಅವರು 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ತಮಿಳುನಾಡಿನಲ್ಲಿ ಅವರು ಯುವಜನತೆಯ ಅಪಾರ ಬೆಂಬಲ ಪಡೆದಿದ್ದಾರೆ. ಈ ಮೂಲಕ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ದಾರೆ. ಬಹಳ ವೇಗವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
  • ಕರ್ನಾಟಕ ಕೇಡರ್‌ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅವರು ಜನರ ವಿಶ್ವಾಸ ಗಳಿಸಿದ್ದರು. ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
  • ಕೆ ಅಣ್ಣಾಮಲೈ ಅವರು ಸೆಪ್ಟೆಂಬರ್ 2019ರಲ್ಲಿ ಪೊಲೀಸ್ ಸೇವೆಯನ್ನು ತೊರೆದು ಅಚ್ಚರಿ ಮೂಡಿಸಿದ್ದರು.
  • ಇವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಐಐಎಂ ಲಕ್ನೋದಲ್ಲಿ ಎಂಬಿಎ ಓದಿದ್ದರು.
  • ಪೊಲೀಸ್ ಫೋರ್ಸ್‌ನಲ್ಲಿ ಕೆಲಸ ಮಾಡುವಾಗ ಕೆ ಅಣ್ಣಾಮಲೈ ಅವರ ಕಟ್ಟುನಿಟ್ಟಾದ ಕಾರ್ಯಶೈಲಿಯನ್ನು ಕಂಡು ಅವರನ್ನು “ಸಿಂಗಂ ಅಣ್ಣ” ಎಂದೇ ಕರೆಯಲಾಗಿತ್ತು.
  • ಅಣ್ಣಾಮಲೈ ಅವರು ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಧಾರ್ಮಿಕ ಗ್ರಂಥಗಳ ತಪ್ಪು ವ್ಯಾಖ್ಯಾನವನ್ನು ತಪ್ಪಿಸಲು ಮತ್ತು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇಸ್ಲಾಂ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ಧಾರ್ಮಿಕ ವಿದ್ವಾಂಸರ ಸಹಾಯದಿಂದ ಖುರಾನ್ ಮತ್ತು ಹದೀಸ್ ಅನ್ನು ಅಧ್ಯಯನ ಮಾಡಿದ್ದರು.
  • 2019ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ರಾಜೀನಾಮೆ ಪತ್ರದಲ್ಲಿ, ಇದು ನಾನು ತಕ್ಷಣ ತೆಗೆದುಕೊಂಡು ನಿರ್ಧಾರವಲ್ಲ. 2018ರಲ್ಲಿ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಪ್ರವಾಸವು ನನ್ನ ಜೀವನವನ್ನು ಹಿಂತಿರುಗಿ ನೋಡುವಂತೆ ಮಾಡಿದೆ ಎಂದು ಬರೆದಿದ್ದರು.
  • 2023ರಲ್ಲಿ ಅಣ್ಣಾಮಲೈ ಅವರು ‘ಎನ್‌ ಮನ್ ಎನ್ ಮಕ್ಕಳ್ (ನನ್ನ ಭೂಮಿ ನನ್ನ ಜನರು)’ ಯಾತ್ರೆಯನ್ನು ತಮಿಳುನಾಡು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿದರು.
  • ಅಣ್ಣಾಮಲೈ ಅವರನ್ನು ಬಿಜೆಪಿಯ ಭರವಸೆಯ ಉದಯೋನ್ಮುಖ ತಾರೆ ಎಂದು ವ್ಯಾಖ್ಯಾನಿಸಲಾಗಿದೆ. ಅವರು ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ಕಾರಣ ಅವರ ಭಾಷಣಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ.
Continue Reading

ಕಿರುತೆರೆ

Vijay Deverakonda: ಸಿನಿಮಾಗಳ ಸತತ ಸೋಲಿನ ಬೆನ್ನಲ್ಲೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ವಿಜಯ್‌ ದೇವರಕೊಂಡ!

Vijay Deverakonda: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿತ್ತು.ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ವಿಜಯ್‌ ದೇವರಕೊಂಡ.ತೆಲುಗು ನಟ ವಿಜಯ್ ದೇವರಕೊಂಡ ಅವರು ದಿಲ್ ರಾಜು ಅವರೊಂದಿಗೆ ಹೈ-ಆಕ್ಟೇನ್ ಆಕ್ಷನ್ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ.

VISTARANEWS.COM


on

Vijay Devarakonda announces new film
Koo

ಬೆಂಗಳೂರು: ʻಲೈಗರ್‌ʼ ಸಿನಿಮಾ ಸೋಲಿನ ಬಳಿಕ ನಟ ವಿಜಯ್‌ ದೇವರಕೊಂಡ (Vijay Deverakonda) ಯಾವ ಸಿನಿಮಾವನ್ನು ಮಾಡಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಇದಾದ ಬಳಿ ಸಾಕಷ್ಟು ಸಿನಿಮಾಗಳು ತೆರೆ ಕಂಡವು. ʻಖುಷಿʼ ಹಾಗೂ ʻಫ್ಯಾಮಿಲಿ ಸ್ಟಾರ್‌ʼ ಸಿನಿಮಾಗಳು ರಿಲೀಸ್‌ ಆದರೂ ತಕ್ಕ ಮಟ್ಟಿಗೆ ಸಕ್ಸೆಸ್‌ ಏನು ಆಗಿಲ್ಲ. ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ ವಿಜಯ್‌ ದೇವರಕೊಂಡ.

ತೆಲುಗು ನಟ ವಿಜಯ್ ದೇವರಕೊಂಡ ಅವರು ದಿಲ್ ರಾಜು ಅವರೊಂದಿಗೆ ಹೈ-ಆಕ್ಟೇನ್ ಆಕ್ಷನ್ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ರವಿ ಕರಣ್ ಕೋಲಾ (Ravi Kiran Kola) ನಿರ್ದೇಶನವಿದೆ. ರವಿಕಿರಣ್ ಕೋಲಾ ಅವರು ‘ರಾಜಾ ವರು ರಾಣಿ ಗಾರು’ (Raja Vaaru Rani Gaaru) ಮತ್ತು ‘ಅಶೋಕ ವನಮ್ಲೋ ಅರ್ಜುನ ಕಲ್ಯಾಣಂ'(Ashoka Vanamlo Arjuna Kalyanam) ಸಿನಿಮಾಗೆ ಹೆಸರುವಾಸಿಯಾಗಿದ್ದಾರೆ. ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ಬಿಡುಗಡೆಯ ದಿನಾಂಕ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್‌ (Family Star Box Office) ಪಡೆದುಕೊಂಡಿತ್ತು. ಏಪ್ರಿಲ್ 26 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿತ್ತು.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.

ಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು.

Continue Reading

ಟಾಲಿವುಡ್

Bandaru Supritha Naidu: ವಿಜಯ್‌ದೇವರಕೊಂಡರನ್ನು ಮದುವೆಯಾಗುತ್ತಿದ್ದಾರಂತೆ ತೆಲುಗು ಖ್ಯಾತ ನಟಿಯ ಮಗಳು!

Bandaru Supritha Naidu: ಸುರೇಖಾ ವಾಣಿ ಅವರ ಪುತ್ರಿ ಸುಪ್ರಿತಾ ತೆಲುಗು ಮಂದಿಗೆ ಚಿರಪರಿಚಿತ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಲೈವ್‌ಗೆ ಬಂದಿದ್ದರು.ಈ ವೇಳೆ ನೀವು ಯಾವ ಅವಿವಾಹಿತ ಹೀರೊನಾ ಮದುವೆ ಆಗಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ನಟಿಯ ಉತ್ತರಕ್ಕೆ ನೆಟ್ಟಿಗರು ಶಾಕ್‌ ಆಗಿದ್ದಾರೆ.

VISTARANEWS.COM


on

Bandaru Supritha Naidu surekha vani daughter wants to marry vijay deverakonda
Koo

ತೆಲುಗಿನ ಹಿರಿಯ ನಟಿ ಸುರೇಖಾ ವಾಣಿ ಅವರ ಪುತ್ರಿ ಸುಪ್ರಿತಾ (Bandaru Supritha Naidu) ಹೆಸರು ವಿಜಯ್ ದೇವರಕೊಂಡ ಜತೆ ಕೇಳಿಬರುತ್ತಿದೆ.

ಸುರೇಖಾ ವಾಣಿ ಅವರ ಪುತ್ರಿ ಸುಪ್ರಿತಾ ತೆಲುಗು ಮಂದಿಗೆ ಚಿರಪರಿಚಿತ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಲೈವ್‌ಗೆ ಬಂದಿದ್ದರು. ತಮ್ಮನ್ನು ಫಾಲೋ ಮಾಡುವವರಿಗೆ ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದಿದ್ದರು. ಈ ವೇಳೆ ನೆಟ್ಟಿಗರು ಪ್ರಶ್ನೆಗಳನ್ನು ಕೇಳಿದ್ದರು.

ಈ ವೇಳೆ ನೀವು ಯಾವ ಅವಿವಾಹಿತ ಹೀರೊನಾ ಮದುವೆ ಆಗಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು.ಈ ಪ್ರಶ್ನೆಗೆ ಸುಪ್ರಿತಾ ವಿಜಯ್ ದೇವರಕೊಂಡ ಎಂದು ಹೇಳಿದ್ದಾರೆ. ವಿಜಯ್ ದೇವರಕೊಂಡ ಅವರ ಫೋಟೊವನ್ನು ಕೂಡ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ: MI vs KKR: ಮತ್ತೆ ಮುಂಬೈ ವಿರುದ್ಧ ಕೇಳಿಬಂದ ಟಾಸ್​ ಫಿಕ್ಸಿಂಗ್​ ಆರೋಪ

ಇದೀಗ ನೆಟ್ಟಿಗರು ವಿಜಯ್ ದೇವರಕೊಂಡ ಜೊತೆ ಸುಪ್ರಿತಾರನ್ನು ಮದುವೆ ಮಾಡಿಸುವುದಕ್ಕೆ ನಿಂತಿದ್ದಾರೆ.

ಅಮರ್ ದೀಪ್ ಚೌಧರಿ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಮೂಲಕ ಸುಪ್ರಿತಾ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Continue Reading
Advertisement
Accident News Drowned in water
ವಿಜಯಪುರ5 mins ago

Accident News: ಸೆಕೆ ಎಂದು ಕೆರೆಗೆ ಜಿಗಿದ ವ್ಯಕ್ತಿ ಸಾವು; ವಿದ್ಯುತ್‌ ತಂತಿ ತುಳಿದು ಪ್ರಾಣಬಿಟ್ಟ ರೈತ

Sunidhi Chauhan audience member throws bottle at her
ಬಾಲಿವುಡ್18 mins ago

Sunidhi Chauhan: ಗಾಯಕಿ ಸುನಿಧಿ ಚೌಹಾಣ್ ಮೇಲೆ ಬಾಟಲಿ ಎಸೆತ: ವಿಡಿಯೊ ವೈರಲ್‌!

Vijay Sankeshwar
Lok Sabha Election 202419 mins ago

Vijay Sankeshwar: 2014ರಲ್ಲಿ ಮೋದಿ ಕೈಗೆ ಮೌನಿ ಬಾಬಾ ಖಾಲಿ ಚೊಂಬು ಕೊಟ್ಟಿದ್ದರು; ಉದ್ಯಮಿ ವಿಜಯ ಸಂಕೇಶ್ವರ ವಾಗ್ದಾಳಿ

Gold Rate
ಕರ್ನಾಟಕ40 mins ago

Gold Rate Today: ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನ- ಬೆಳ್ಳಿಯ ದರ; 22, 24 ಕ್ಯಾರಟ್‌ ದರಗಳು ಇಲ್ಲಿವೆ

Virat- Anushka
ಕ್ರೀಡೆ40 mins ago

Virat- Anushka: ಕೊಹ್ಲಿ ಮಾಡಿದ ರನೌಟ್​ ಕಂಡು ಆಶ್ಚರ್ಯ ಚಕಿತರಾದ ಅನುಷ್ಕಾ

Jyotika Trolled For Claiming Online Private Voting
ಕಾಲಿವುಡ್48 mins ago

Jyotika Trolled: ಆನ್​ಲೈನ್​ ಮೂಲಕ ವೋಟ್ ಮಾಡಿದ್ದಾರಂತೆ ಜ್ಯೋತಿಕಾ! ಟ್ರೋಲ್‌ ಆದ ಸೂರ್ಯ ಪತ್ನಿ!

Prajwal Revanna Case
ಕರ್ನಾಟಕ49 mins ago

Prajwal Revanna Case: ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು

murder case In karwar
ಉತ್ತರ ಕನ್ನಡ51 mins ago

Murder case : ಪತಿ ಮೇಲಿನ ಸಿಟ್ಟಿಗೆ ಮೂಕ ಮಗುವನ್ನೇ ಕಾಲುವೆಗೆ ಎಸೆದಳು; ಮೊಸಳೆ ಬಾಯಲ್ಲಿತ್ತು ಮೃತದೇಹ!

Nijjar Killing
ದೇಶ1 hour ago

Nijjar Killing: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣದ ಮೂವರ ಬಂಧನ; ಭಾರತದ ಪ್ರತಿಕ್ರಿಯೆ ಏನು?

Bhavya Gowda shares her experiences during shooting
ಕಿರುತೆರೆ2 hours ago

Bhavya Gowda: ಡ್ರಿಪ್ಸ್‌ ಹಾಕಿದ್ದರೂ ಶೂಟಿಂಗ್‌ಗೆ ಬರಲೇ ಬೇಕು ಅಂದ್ರು ಎಂದ ʻಗೀತಾ ಧಾರಾವಾಹಿʼ ನಟಿ ಭವ್ಯಾ ಗೌಡ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌