Accident Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 30 ಅಡಿ ದೂರ ಎಗರಿ ಬಿದ್ದ ಮಹಿಳಾ ಕಾನ್‌ಸ್ಟೇಬಲ್‌ - Vistara News

Latest

Accident Video: ಸ್ಕೂಟರ್‌ಗೆ ಅಪ್ಪಳಿಸಿದ ಕಾರು; 30 ಅಡಿ ದೂರ ಎಗರಿ ಬಿದ್ದ ಮಹಿಳಾ ಕಾನ್‌ಸ್ಟೇಬಲ್‌

Accident Video: ಅತೀ ವೇಗ ಒಳ್ಳೆಯದಲ್ಲ ಎಂದು ಎಷ್ಟು ಹೇಳಿದರೂ ಜನ ಮುನ್ನುಗ್ಗಿ ಬಿಡುತ್ತಾರೆ. ಇದರಿಂದಲೇ ಸಾಕಷ್ಟು ಅಪಘಾತಗಳಿಗೆ ತುತ್ತಾಗುತ್ತಾರೆ. ವೇಗವಾಗಿ ಚಲಿಸುತ್ತಿದ್ದ ಕಾರೊಂದು ಟರ್ನ್ ಮಾಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎದುರಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟರ್‌ಗೆ ಮುಂಭಾಗದಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪೊಲೀಸ್ ಪೇದೆ ಹಾರಿ ಹೋಗಿ 30 ಅಡಿ ದೂರಕ್ಕೆ ಬಿದ್ದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

VISTARANEWS.COM


on

Accident Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಚೆನ್ನೈ: ಅತಿ ವೇಗ ಅಪಘಾತಕ್ಕೆ ಕಾರಣವೆಂದು (Accident Video) ತಿಳಿದರೂ ಕೂಡ ಕೆಲವರು ವೇಗವಾಗಿ ವಾಹನಗಳನ್ನು ಚಲಾಯಿಸಿ ತಮ್ಮ ಜೀವದ ಜೊತೆಗೆ ಜನರ ಜೀವಕ್ಕೂ ಅಪಾಯವನ್ನು ತಂದೊಡ್ಡುತ್ತಾರೆ. ಇದೀಗ ಅಂತಹದೊಂದು ಅಪಘಾತದ (Hit and Run Case) ಘಟನೆ ಚೆನ್ನೈನಲ್ಲಿ ನಡೆದಿದ್ದು, ಈ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ಆ ಗಿದೆ. ಚೆನ್ನೈನಲ್ಲಿ ವೇಗವಾಗಿ ಬಂದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಮಹಿಳಾ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೆನ್ನೈನಲ್ಲಿ ಬುಧವಾರ ನಡೆದಿದೆ.

ಚೆನ್ನೈ ಪೊಲೀಸರ ಪ್ರಕಾರ, ಚೆನ್ನೈನ ತಿರುಮುಲ್ಲೈವಾಯಲ್ ಪ್ರದೇಶದ ನಿವಾಸಿ ಪವಿತ್ರಾ ಅವರು ಪೋರೂರಿನ ಮಹಿಳಾ ಪೊಲೀಸ್ ಠಾಣೆಯಿಂದ ತಮ್ಮ ನಿವಾಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರನ್ನು ಚಾಲಕ ಟರ್ನ್ ಮಾಡಲು ಹೋದಾಗ ನಿಯಂತ್ರಣ ಕಳೆದುಕೊಂಡು ರಸ್ತೆಯ ಎದುರಿನಿಂದ ಬರುತ್ತಿದ್ದ ಪವಿತ್ರಾ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪವಿತ್ರಾ ಅವರ ಸ್ಕೂಟರ್ ಹಿಂದೆ ಕಪ್ಪು ಕಾರೊಂದು ಬರುತ್ತಿತ್ತು. ಹಾಗೇ ಅದರ ಹಿಂದೆ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತಿರುವ ಟೆಂಪೊ ಬರುತ್ತಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಪವಿತ್ರಾ ಅವರ ಸ್ಕೂಟರ್ ಅನ್ನು ಮುಂಭಾಗದಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರ ಸ್ಕೂಟರ್ ಹಿಂದೆ ಇದ್ದ ಕಪ್ಪು ಕಾರಿಗೆ ಡಿಕ್ಕಿ ಹೊಡೆದು ಅವರು ಹಾರಿ ಹೋಗಿ 30 ಅಡಿ ದೂರಕ್ಕೆ ಬಿದ್ದಿರುವುದು ಕಂಡುಬಂದಿದೆ.

ಅದೃಷ್ಟವಶಾತ್, ಗ್ಯಾಸ್ ಸಿಲಿಂಡರ್‌ಗಳನ್ನು ಹೊಂದಿರುವ ಟೆಂಪೊ ಕಪ್ಪು ಕಾರಿನ ಹಿಂದೆ ಇದ್ದ ಕಾರಣ ದೊಡ್ಡ ಅಪಘಾತ ಸಂಭವಿಸಲಿಲ್ಲ ಎನ್ನಲಾಗಿದೆ. ಪವಿತ್ರಾ ಅವರ ಸ್ಥಿತಿ ಬಹಳ ಗಂಭೀರವಾಗಿದ್ದು, ತಕ್ಷಣ ಅವರನ್ನು ರಾಮಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಚಾಲಕ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಚಾಲಕನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಸ್‌ ಡ್ರೈವರ್‌ನ ರೀಲ್ಸ್‌ ಕ್ರೇಜ್‌ಗೆ 2 ಎತ್ತುಗಳು ಬಲಿ; ರೈತನ ಸ್ಥಿತಿ ಗಂಭೀರ

ಪ್ರತಿದಿನ ಒಂದಲ್ಲ ಒಂದು ಅಪಘಾತದ ಪ್ರಕರಣಗಳು ವರದಿಯಾಗುತ್ತಿರುತ್ತದೆ. ಜುಲೈ 8ರಂದು ರಸ್ತೆ ದಾಟಲು ಕಾಯುತ್ತಿದ್ದ 61 ವರ್ಷದ ಮಹಿಳೆಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಕಾಣಿಯೂರು ನಿವಾಸಿ ಗೋಮತಿ ಎಂದು ಗುರುತಿಸಲಾಗಿದೆ. ಸಿಸಿಟಿವಿಯಲ್ಲಿ ಈ ಘಟನೆಯನ್ನು ಸೆರೆಹಿಡಿಯಲಾಗಿದ್ದು, ಗೋಮತಿ ಜೀಬ್ರಾ ಕ್ರಾಸಿಂಗ್ ಬಳಿ ನಿಂತಿದ್ದಾಗ ಅತಿ ವೇಗದಲ್ಲಿ ಬಂದ ಕಾರು ನಿಂತಿದ್ದ ಆಕೆಗೆ ಡಿಕ್ಕಿ ಹೊಡೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Natasha ponawala jewelled kurta: ರಿಯಲ್‌ ಜ್ಯುವೆಲ್ಡ್ ಕುರ್ತಾ ಧರಿಸಿದ್ದ ಏಕೈಕ ಫ್ಯಾಷನ್‌ ಐಕಾನ್‌ ನತಾಶಾರ ‘ಮೊಗಲ್‌ ರಾಣಿ’ ಲುಕ್‌!

ಜ್ಯುವೆಲ್‌ಭರಿತ ಬ್ಲೌಸ್‌ ಗೊತ್ತು! ಜ್ಯುವೆಲ್‌ ಸಹಿತ ಕುರ್ತಾ ಬಗ್ಗೆ ಗೊತ್ತೇ! ಫ್ಯಾಷನ್‌ ಐಕಾನ್‌ ನತಾಶ ಪೂನಾವಾಲ (Natasha ponawala jewelled kurta) ಈ ಪ್ರಯೋಗಾತ್ಮಕ ಡಿಸೈನರ್‌ವೇರ್‌ನಲ್ಲಿ ಮೊಗಲರ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ಏನಿದು ಜ್ಯುವೆಲ್ಡ್ ಕುರ್ತಾ? ಇದ್ಯಾವ ಬಗೆಯ ಔಟ್‌ಫಿಟ್‌? ಇಲ್ಲಿದೆ ಡಿಟೇಲ್ಸ್.

VISTARANEWS.COM


on

By

Natasha ponawala jeweled kurta
Koo
ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಯಾಷನ್‌ ಐಕಾನ್‌ ನತಾಶ ಪೂನಾವಾಲ (Natasha ponawala jewelled kurta) ಜ್ಯುವೆಲ್‌ಭರಿತ ಕುರ್ತಾ ಸೆಟ್‌ನಲ್ಲಿ (kurta set) ಕಾಣಿಸಿಕೊಂಡಿರುವುದು, ಎಥ್ನಿಕ್‌ ಡಿಸೈನರ್ಸ್ (Ethnic Designers) ಲೋಕದಲ್ಲಿ ಡಿಸೈನರ್‌ಗಳ ಹುಬ್ಬೇರಿಸಿದೆ. ಹೌದು, ಅಂಬಾನಿ ಮದುವೆಯಲ್ಲಿ (ambani wedding) ಜ್ಯುವೆಲ್‌ ಭರಿತವಾದ ಡಿಸೈನರ್‌ ಸೀರೆ, ಲೆಹೆಂಗಾ ಬ್ಲೌಸ್‌ಗಳನ್ನು ಕಣ್ಣಾರೆ ಕಂಡು ಪಾವನರಾಗಿದ್ದ ಫ್ಯಾಷನ್‌ ಪ್ರಿಯರು ಇದೀಗ ನತಾಶರ ಆಭರಣಗಳಿಂದಲೇ ಸಿದ್ಧಪಡಿಸಿದ್ದ ಜ್ಯುವೆಲ್ಡ್ ಕುರ್ತಾ ಕಂಡು ದಂಗಾಗಿದ್ದಾರೆ.

ಸದಾ ಪ್ರಯೋಗಾತ್ಮಕ ಡಿಸೈನರ್‌ವೇರ್ ಧರಿಸುವ ನತಾಶ

ಮಾಡರ್ನ್‌ ಡ್ರೆಸ್‌ಗೂ ಸೈ, ಆಂಟಿಕ್‌ ಡಿಸೈನ್‌ನ ಎಥ್ನಿಕ್‌ವೇರ್‌ಗಳಿಗೂ ಸೈ ಎನ್ನುವ ನತಾಶ, ಅಂಬಾನಿಯವರ ಮದುವೆಗೆಂದು ವಿದೇಶದಿಂದ ಇಲ್ಲಿಗೆ ಹಾರಿ ಬಂದಿದ್ದರು. ಆದರೆ, ಅವರ ಔಟ್‌ಫಿಟ್‌ ಕಡೆ ಯಾರೂ ಹೆಚ್ಚಾಗಿ ಗಮನ ನೀಡಲಿಲ್ಲ! ಆದರೆ, ಇದೀಗ ಸೆಲೆಬ್ರೆಟಿ ಡಿಸೈನರ್‌ ಅಬು ಜಾನಿ ಸಂದೀಪ್‌ ಅವರು ನತಾಶ ಅವರಿಗಾಗಿ ಸಿದ್ಧಪಡಿಸಿದ್ದ ವಿಶೇಷ ಜ್ಯುವೆಲ್ಡ್ ಕುರ್ತಾ ಸೆಟ್ಟಿನ ವಿನ್ಯಾಸವನ್ನು ಅನಾವರಣಗೊಳಿಸಿದ್ದಾರೆ.

Natasha ponawala jeweled kurta

ಎಥ್ನಿಕ್‌ವೇರ್‌ ಡಿಸೈನರ್‌ಗಳ ಕಣ್ಣರಳಿಸಿದ ಜ್ಯುವೆಲ್ಡ್ ಕುರ್ತಾ

ಕುರ್ತಾ ಎಂದಾಕ್ಷಣ ಮಾರುದ್ದ ಇರುವ ಡಿಸೈನ್‌ ಟಾಪ್‌ ಅಲ್ಲ, ಶಾರ್ಟ್ ಲೆಂಥ್‌ನ ಕುರ್ತಾ ಶೈಲಿ ಹೋಲುವಂತಹ ಉಡುಗೆಯಿದು. ರಾಣಿ-ಮಹಾರಾಣಿಯರು ಅದರಲ್ಲೂ ಮೊಗಲರ ರಾಣಿಯರು ಧರಿಸುತ್ತಿದ್ದ ಡಿಸೈನ್‌ ಇದು ಎನ್ನಲಾಗಿದೆ. ಆದರೆ, ಅಂದು ಆ ಮಹಾರಾಣಿಯರು ಈ ಮಟ್ಟಿಗೆ ಆಭರಣಗಳಿಂದಲೇ ಡಿಸೈನ್‌ ಮಾಡಿಸಿದ ಕುರ್ತಾ ಧರಿಸಿದ್ದರೋ ಇಲ್ಲವೋ ಗೊತ್ತಿಲ್ಲ! ಆದರೆ, ಈ ಕಲಿಯುಗದಲ್ಲಿ ನತಾಶ ಈ ಜ್ಯುವೆಲ್ಡ್‌ ಕುರ್ತಾ ಧರಿಸಿ ಮೆರೆದಿದ್ದಾರೆ.

ಹಿಸ್ಟರಿ ರೀ ಕ್ರಿಯೇಟ್‌ ಮಾಡಿದ್ದಾರೆ ಎಂದಿದ್ದಾರೆ ಫ್ಯಾಷನ್‌ ವಿಶ್ಲೇಷಕರು. ಇನ್ನು, ಫ್ಯಾಷನಿಸ್ಟಾ ಪ್ರಸಾದ್‌ ಬಿದ್ದಪ್ಪ ಹೇಳುವಂತೆ, ಇದೊಂದು ಪ್ರಯೋಗಾತ್ಮಕ ಎಥ್ನಿಕ್‌ವೇರ್‌ ಎಲ್ಲರಿಗೂ ಇಂತಹ ಡಿಸೈನರ್‌ವೇರ್‌ ಪ್ರಯೋಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ನತಾಶ ತಕ್ಕಣಕ್ಕೆ ನೋಡಲು ಮೊಗಲರ ರಾಣಿಯಂತೆ ಕಂಗೊಳಿಸಿದ್ದಾರೆ ಎಂದಿದ್ದಾರೆ ಸ್ಟೈಲಿಸ್ಟ್ ಜನಕ್‌.

Natasha ponawala jeweled kurta


ಜ್ಯುವೆಲ್ಡ್ ಕುರ್ತಾ ಸೆಟ್‌ ವಿನ್ಯಾಸದ ಗುಟ್ಟು

ಮದುವೆಯಲ್ಲಿ ಮುಖದ ಮುಂದೆ ಧರಿಸುವ ಮದುಮಗನ ಸೆಹ್ರಾ ಡಿಸೈನಿಂದ ಸ್ಪೂರ್ತಿಗೊಂಡು, ಈ ಜ್ಯುವೆಲ್ಡ್ ಶಾರ್ಟ್ ಕುರ್ತಾ ಡಿಸೈನ್‌ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ. ಅವರು ಹೇಳುವಂತೆ, ಈ ಕುರ್ತಾದಲ್ಲಿ ಬೀಡ್ಸ್, ಪ್ರಿಶಿಯಸ್‌ ಸ್ಟೋನ್ಸ್, ಪರ್ಲ್ಸ್ ಎಲ್ಲವನ್ನು ಅತಿ ಸೂಕ್ಷ್ಮವಾಗಿ ಹೆಣೆಯಲಾಗಿದೆ. ಇದನ್ನು ದೇಸಿ ಮೂಲ ಕಲಾಕಾರರಿಂದ ಹೆಣೆಸಲಾಗಿದೆ. ಸ್ಟ್ರಿಂಗ್ಸ್ನಂತೆ ವಿನ್ಯಾಸ ಮಾಡಿ, ಕುರ್ತಾ ರೂಪ ನೀಡಲಾಗಿದೆ.

ಇದನ್ನೂ ಓದಿ: Golden Designer Fashion Wears: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಗೋಲ್ಡನ್‌ ಡಿಸೈನರ್‌ವೇರ್ಸ್!

ಇದಕ್ಕೆ ಶರಾರ ಶೈಲಿಯಲ್ಲಿರುವ ಅಗಲವಾದ ಸ್ಕರ್ಟ್ ಶೈಲಿಯ ಪ್ಯಾಂಟ್‌ಗಳನ್ನು ಬನಾರಸಿ ಬಾಂದನಿ ಬ್ರೋಕೆಡ್‌ನಿಂದ ವಿನ್ಯಾಸಗೊಳಿಸಲಾಗಿದೆ. ಡಾಕಾದ ಬಾಂದನಿ ಸೀರೆಯಿಂದ ದುಪಟ್ಟಾ ರೂಪಿಸಲಾಗಿದೆ. ಇನ್ನು, ನತಾಶ ತಮ್ಮ ಹೇರ್‌ಸ್ಟೈಲ್‌ಗೆ ಅಜ್ಜಿಯ ಗಿಫ್ಟ್ ಆಂಟಿಕ್‌ ಬಂಗಾರದ ಹಾರವನ್ನು ಧರಿಸಿದ್ದಾರೆ. ಇದು ಕಂಪ್ಲೀಟ್‌ ಮೊಗಲರ ರಾಣಿಯಂತೆ ಆಕೆಯನ್ನು ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

(ಲೇಖಕಿ : ಫ್ಯಾಷನ್‌ ಪರ್ತಕರ್ತೆ)
Continue Reading

Latest

Sexual Abuse : ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು

Sexual Abuse: ಚಿಕ್ಕಮಕ್ಕಳು, ಚಾಕೋಲೆಟ್ ಐಸ್‌ಕ್ರೀಂ, ಬಿಸ್ಕತ್ ಕೊಟ್ಟರೆ ಯಾರೇ ಕರೆದರೂ ಬಂದು ಬಿಡುತ್ತಾರೆ. ಮಕ್ಕಳಿಗೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಪರಿವೆ ಇರುವುದಿಲ್ಲ. ತಿಂಡಿಯ ಮೇಲಿನ ಆಸೆಗೆ ಅವರು ಯಾರೇ ಕರೆದರೂ ಹೋಗಿ ಬಿಡುತ್ತಾರೆ. ಇಲ್ಲೊಬ್ಬಳು ಬಾಲಕಿ ಬಿಸ್ಕೆತ್‌ನ ಆಮಿಷಕ್ಕೆ ಒಳಗಾಗಿ ಕಾಮುಕನ ಕೈಗೆ ಸಿಲುಕಿ ಜೀವವನ್ನೇ ಕಳೆದುಕೊಂಡಿದ್ದಾಳೆ. ಗಾಂಜಾ ಪ್ರಭಾವದಲ್ಲಿ ಕಾರ್ಮಿಕನೊಬ್ಬ ಈ ಹೀನ ಕೃತ್ಯ ಎಸಗಿದ್ದಾನೆ.

VISTARANEWS.COM


on

Sexual Abuse
Koo


ದಿನೇದಿನೇ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಮುಕರ ಕೆಟ್ಟ ಚಟಕ್ಕೆ ಬಾಲಕಿಯರು ಬಲಿಯಾಗುತ್ತಿದ್ದಾರೆ. ಇದೀಗ ಆಂಧ್ರಪ್ರದೇಶದ ತಿರುಪತಿಯಲ್ಲಿ ಭಯಾನಕ ಅತ್ಯಾಚಾರ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Sexual Abuse)ಆಗಿದೆ. ಜನರು ಘಟನೆ ನೋಡಿ ಬೆಚ್ಚಿಬಿದ್ದಿದ್ದಾರೆ.

ದೋರಾವರಿಸತ್ರಮ್ ಮಂಡಲದ ನೆಲಬಳ್ಳಿ ಗ್ರಾಮದಲ್ಲಿ ಜುಲೈ 17ರಂದು ಈ ಘಟನೆ ನಡೆದಿದ್ದು, ಗಾಂಜಾ ಪ್ರಭಾವದಲ್ಲಿ ಕಾರ್ಮಿಕನೊಬ್ಬ ಎಂಟು ವರ್ಷದ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ವರದಿ ಪ್ರಕಾರ, ಬಿಹಾರ ಮೂಲದ ಆರೋಪಿ, ಸ್ಥಳೀಯ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸ್ಕತ್ತು ನೀಡುವ ನೆಪದಲ್ಲಿ ಬಾಲಕಿಯನ್ನು ಹತ್ತಿರದ ಕಾಡಿಗೆ ಕರೆದೊಯ್ದಿದ್ದಾನೆ. ಯಾರೂ ಇಲ್ಲದ ಆ ಪ್ರದೇಶದಲ್ಲಿ, ಅವನು ಅವಳ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಬೆಳಗ್ಗೆ ಬಾಲಕಿ ಕಾಣೆಯಾದ ನಂತರ, ಅವಳ ಪೋಷಕರು ದಿನವಿಡೀ ಅವಳನ್ನು ಹುಡುಕಿದರು. ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ದನಕಾಯುವವರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿ ಬಿಹಾರದ ದರ್ಭಾಂಗ ಜಿಲ್ಲೆಯ ವಲಸೆ ಕಾರ್ಮಿಕನ ಮಗಳಾಗಿದ್ದು, ಶಂಕಿತ ಕೂಡ ಅದೇ ರಾಜ್ಯದವನಾಗಿದ್ದ. ತಿರುಪತಿ ಜಿಲ್ಲಾ ಎಸ್ಪಿ ಎಲ್ ಸುಬ್ಬರಾಯುಡು ಅವರ ಪ್ರಕಾರ, ಬಿಹಾರದಿಂದ ಸುಮಾರು 40 ಜನರು ಎರಡು ತಿಂಗಳ ಹಿಂದೆ ನೆಲಬಳ್ಳಿ ಗ್ರಾಮದ ಬಳಿಯ ಧನ್ಯಲಕ್ಷ್ಮಿ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡಲು ಬಂದಿದ್ದರು. ಅವರಲ್ಲಿ ಒಬ್ಬ ಅಡುಗೆಯವನು ತನ್ನ ಎಂಟು ವರ್ಷದ ಮಗಳನ್ನು ಕರೆತಂದಿದ್ದನು. ಆಕೆಯೇ ಈಗ ಕೊಲೆಯಾದ ಬಾಲಕಿ ಎನ್ನಲಾಗಿದೆ.

ಇದನ್ನೂ ಓದಿ: ಬಡಪಾಯಿ ಡೆಲಿವರಿ ಮ್ಯಾನ್‌ನನ್ನು ಭೀಕರವಾಗಿ ಕಚ್ಚಿದ ಶ್ರೀಮಂತರ ಮನೆಯ ನಾಯಿಗಳು; ವಿಡಿಯೊ ಇದೆ

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರದ ಮತ್ತೊಂದು ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ಕಾರಿನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಅಲ್ಲದೆ, ಆರೋಪಿಗಳು ಅಪ್ರಾಪ್ತೆಯ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿ ಅವಳ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Continue Reading

ದೇಶ

School Transfer Certificate: ಶಾಲಾ ಪ್ರವೇಶಕ್ಕೆ ವರ್ಗಾವಣೆ ಪ್ರಮಾಣಪತ್ರದ ಅಗತ್ಯ ಇಲ್ಲ; ಹೈಕೋರ್ಟ್‌ ಮಹತ್ವದ ತೀರ್ಪು

School Transfer Certificate: ತಮಿಳುನಾಡಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಹಿಂದಿನ ಶಿಕ್ಷಣ ಸಂಸ್ಥೆಗಳಿಂದ ವರ್ಗಾವಣೆ ಪ್ರಮಾಣಪತ್ರಗಳನ್ನು ತಯಾರಿಸಲು ಒತ್ತಾಯಿಸದಂತೆ ಸೂಚನೆ ನೀಡಿ ರಾಜ್ಯಾದ್ಯಂತ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ (Madras High Court) ನಿರ್ದೇಶನ ನೀಡಿದೆ.

VISTARANEWS.COM


on

By

School Transfer Certificate
Koo

ಶಾಲಾ ಪ್ರವೇಶಕ್ಕೆ (School Admission) ಯಾವುದೇ ರೀತಿಯ (School Transfer Certificate) ವರ್ಗಾವಣೆ ಪ್ರಮಾಣ ಪತ್ರಗಳ (Transfer Certificates) ಅಗತ್ಯವಿಲ್ಲ. ಶಾಲಾ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಮದ್ರಾಸ್ ಹೈಕೋರ್ಟ್ (Madras High Court) ತಮಿಳುನಾಡಿನ (Tamil Nadu Schools) ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಿದೆ. ಹೊಸ ವಿದ್ಯಾರ್ಥಿಗಳ ಸೇರ್ಪಡೆಗೆ ವರ್ಗಾವಣೆ ಪ್ರಮಾಣ ಪತ್ರ ತರಲು ಒತ್ತಾಯಿಸದಂತೆ ಸೂಚಿಸಿದೆ.

ತಮಿಳುನಾಡಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಹಿಂದಿನ ಶಿಕ್ಷಣ ಸಂಸ್ಥೆಗಳಿಂದ ವರ್ಗಾವಣೆ ಪ್ರಮಾಣಪತ್ರಗಳನ್ನು ತಯಾರಿಸಲು ಒತ್ತಾಯಿಸದಂತೆ ಸೂಚನೆ ನೀಡಿ ರಾಜ್ಯಾದ್ಯಂತ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

ಹೈಕೋರ್ಟ್ ಬಾರ್ ಮತ್ತು ಬೆಂಚ್ ವರದಿ ಮಾಡಿದಂತೆ, ವರ್ಗಾವಣೆ ಪ್ರಮಾಣ ಪತ್ರಗಳಲ್ಲಿ ಶಾಲಾ ಶುಲ್ಕವನ್ನು ಪಾವತಿಸದಿರುವ ಅಥವಾ ವಿಳಂಬವಾದ ಪಾವತಿಗೆ ಸಂಬಂಧಿಸಿದ ಅನಗತ್ಯ ನಮೂದುಗಳನ್ನು ಶಾಲೆಗಳು ಮಾಡುವುದಕ್ಕೆ ನ್ಯಾಯಾಲಯವು ನಿಷೇಧ ವಿಧಿಸಿದೆ. ನ್ಯಾಯಮೂರ್ತಿಗಳಾದ ಎಸ್‌.ಎಂ. ಸುಬ್ರಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರ ಪೀಠವು, ಶಾಲೆಗಳು ವಿದ್ಯಾರ್ಥಿಯ ಟಿಸಿಯನ್ನು ಶುಲ್ಕದ ಬಾಕಿ ವಸೂಲಿ ಮಾಡುವ ಸಾಧನವಾಗಿ ದುರ್ಬಳಕೆ ಮಾಡಬಾರದು ಎಂದು ಎಚ್ಚರಿಸಿದೆ.

ನ್ಯಾಯಾಲಯದ ನಿರ್ದೇಶನಗಳು ಎಲ್ಲಾ ಶುಲ್ಕ ಬಾಕಿಗಳನ್ನು ತೆರವುಗೊಳಿಸುವವರೆಗೆ ಶಾಲೆಗಳು ಟಿಸಿಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ತಡೆಯುವ ಗುರಿಯನ್ನು ಹೊಂದಿವೆ. ಟಿಸಿಯಲ್ಲಿ ಬಾಕಿ ಇರುವ ಅಥವಾ ಶುಲ್ಕವನ್ನು ಪಾವತಿಸದಿರುವ ನಮೂದುಗಳನ್ನು ಮಾಡುವುದನ್ನು ಇದು ತಡೆಯುತ್ತದೆ. ಯಾಕೆಂದರೆ ಇದು ಶಿಕ್ಷಣ ಹಕ್ಕು (RTE) ಕಾಯಿದೆಯ ಉಲ್ಲಂಘನೆಯಾಗಿದೆ ಮತ್ತು ಮಾನಸಿಕ ಕಿರುಕುಳವನ್ನು ಉಂಟು ಮಾಡುತ್ತದೆ ಎಂದು ಆರ್ಟಿಇ ಕಾಯಿದೆಯ ಸೆಕ್ಷನ್ 17ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.

ಇದನ್ನೂ ಓದಿ: Udhayanidhi Stalin: ತಮಿಳುನಾಡು ಉಪ ಮುಖ್ಯಮಂತ್ರಿಯಾಗಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್?

Continue Reading

ಕ್ರೈಂ

Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಜಾಲವನ್ನು ಭೇದಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯಲ್ಲಿ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ. ಈ ಮೂಲಕ ಖಲಿಸ್ತಾನಿ ಉಗ್ರರ ವಿರುದ್ಧ ತನಿಖಾ ಸಂಸ್ಥೆಗಳು ಯಶ ಸಾಧಿಸಿದಂತಾಗಿದೆ.

VISTARANEWS.COM


on

By

Khalistani Terrorist
Koo

ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ (supply of deadly weapons) ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಶುಕ್ರವಾರ ಬಂಧಿಸಿದೆ.

ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿದ ಎನ್‌ಐಎ, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ. ಬಲ್ಜೀತ್ ಸಿಂಗ್ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಂಜಾಬ್‌ನಲ್ಲಿರುವ ಲಾಂಡಾನ ಏಜೆಂಟ್‌ಗಳಿಗೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ಎಂದು ತಿಳಿದು ಬಂದಿದೆ.

Khalistani Terrorist


ಭಯೋತ್ಪಾದನಾ ವಿರೋಧಿ ಏಜೆನ್ಸಿ ಪ್ರಕಾರ, ಈ ಶಸ್ತ್ರಾಸ್ತ್ರಗಳನ್ನು ಉದ್ಯಮಿಗಳು ಮತ್ತು ಇತರರಿಂದ ಹಣ ಸುಲಿಗೆ ಸೇರಿದಂತೆ ದೊಡ್ಡ ಪ್ರಮಾಣದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿತ್ತು. ಗುರುಪ್ರೀತ್ ಸಿಂಗ್ ಮತ್ತು ಸತ್ನಾಮ್ ಸಿಂಗ್ ಸತ್ತಾ ಎಂಬುವರನ್ನು ಈ ಹಿಂದೆ ಬಂಧಿಸಲಾಗಿತ್ತು. ಅವರು ನೀಡಿದ ಸುಳಿವು ಆಧರಿಸಿ ಎನ್‌ಐಎ ಈ ಬಂಧನ ನಡೆಸಿದೆ.

ಕಳೆದ ವರ್ಷ ಜುಲೈ 10ರಂದು ಎನ್‌ಐಎ ಸ್ವಯಂಪ್ರೇರಿತವಾಗಿ ದಾಖಲಿಸಿದ ಪ್ರಕರಣದ ತನಿಖೆ ವೇಳೆ ಪಂಜಾಬ್ ಮತ್ತು ಇತರ ಕೆಲವು ಸ್ಥಳಗಳಲ್ಲಿ ನಡೆದಿದ್ದ ಹಿಂಸಾತ್ಮಕ ಕೃತ್ಯಗಳಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸತ್ನಾಮ್ ಸಿಂಗ್ ಸತ್ತಾಗೆ ಬಲ್ಜೀತ್ ಸಿಂಗ್ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: Khalistani Terrorists: ಬಿಜೆಪಿ ತೊರೆಯದಿದ್ದರೆ ಸಾಯಲು ಸಿದ್ಧರಾಗಿ; ಸಿಖ್‌ ನಾಯಕರಿಗೆ ಖಲಿಸ್ತಾನಿ ಉಗ್ರರಿಂದ ಜೀವ ಬೆದರಿಕೆ

ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ತನಿಖೆಯನ್ನು ಮುಂದುವರಿಸಿರುವ ಎನ್‌ಐಎ, ಭಾರತದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಲಾಂಡಾ ಮತ್ತು ಸತ್ತಾ ಇಬ್ಬರೂ ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದೆ.

Continue Reading
Advertisement
Natasha ponawala jeweled kurta
ಫ್ಯಾಷನ್3 mins ago

Natasha ponawala jewelled kurta: ರಿಯಲ್‌ ಜ್ಯುವೆಲ್ಡ್ ಕುರ್ತಾ ಧರಿಸಿದ್ದ ಏಕೈಕ ಫ್ಯಾಷನ್‌ ಐಕಾನ್‌ ನತಾಶಾರ ‘ಮೊಗಲ್‌ ರಾಣಿ’ ಲುಕ್‌!

Kubusa Kannada film release on 26th July
ಕರ್ನಾಟಕ4 mins ago

Kannada New Movie: ಜು.26ರಂದು ’ಕುಬುಸʼ ಚಿತ್ರ ರಾಜ್ಯಾದ್ಯಂತ ಬಿಡುಗಡೆ

Paris Olympics 2024
ಪ್ರಮುಖ ಸುದ್ದಿ18 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ 117 ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

Karnataka Rain
ಮಳೆ31 mins ago

Karnataka Rain : ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ಕೊಚ್ಚಿ ಹೋದ ಕಾರ್ಮಿಕ; ಮನೆಯ ಗೋಡೆ ಕುಸಿದು ಗೃಹಿಣಿ ಸಾವು

Kiran Kumar
ಕರ್ನಾಟಕ42 mins ago

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

Valmiki Corporation Scam
ಪ್ರಮುಖ ಸುದ್ದಿ44 mins ago

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ ಸಿಎಂ

Pooja Khedkar
ದೇಶ57 mins ago

Pooja Khedkar: IAS ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ FIR ದಾಖಲಿಸಿದ UPSC

CM Siddaramaiah
ಕರ್ನಾಟಕ1 hour ago

CM Siddaramaiah: ವಾಲ್ಮೀಕಿ ನಿಗಮ ಅಕ್ರಮಕ್ಕೆ ಸರ್ಕಾರ ಹೊಣೆಯಲ್ಲ; ಚಂದ್ರಶೇಖರನ್‌ ಆತ್ಮಹತ್ಯೆಗೆ ಅಧಿಕಾರಿಗಳು ಕಾರಣ ಎಂದ ಸಿಎಂ!

Ishan Kishan
ಕ್ರಿಕೆಟ್1 hour ago

Ishan Kishan: ಟೀಮ್​ ಇಂಡಿಯಾದಲ್ಲಿ ಇಶಾನ್ ಕಿಶನ್​ಗೆ ಬಾಗಿಲು ಬಂದ್​?

Krishan Kumar Daughter Tishaa Dies Of Cancer At 21
ಬಾಲಿವುಡ್1 hour ago

Krishan Kumar: ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ6 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ1 day ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌