Oldest Man: ನೀವೂ 100 ವರ್ಷ ಬದುಕಬೇಕೇ? 111 ವರ್ಷದ ಈ 'ಯುವಕ'ನ ಮಾತು ಕೇಳಿ - Vistara News

ಲೈಫ್‌ಸ್ಟೈಲ್

Oldest Man: ನೀವೂ 100 ವರ್ಷ ಬದುಕಬೇಕೇ? 111 ವರ್ಷದ ಈ ‘ಯುವಕ’ನ ಮಾತು ಕೇಳಿ

Oldest Man: ವಿಶ್ವದಲ್ಲಿ ಜೀವಂತವಾಗಿರುವ ಅತ್ಯಂತ ಹಿರಿಯ ವ್ಯಕ್ತಿ , 111 ವರ್ಷ 222 ದಿನಗಳ ಕಾಲ ಬದುಕಿದ ಬ್ರಿಟನ್ ಜಾನ್ ಟಿನ್ನಿಸ್ವುಡ್ ತಮ್ಮ ದೀರ್ಘಾಯುಷ್ಯದಲ್ಲಿ ಗುಟ್ಟನ್ನು ಹಂಚಿಕೊಂಡಿದ್ದಾರೆ. ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದು ಮುಖ್ಯವಲ್ಲ ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ ಎನ್ನುತ್ತಾರೆ ಅವರು.

VISTARANEWS.COM


on

Oldest Man
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್: ಸುದೀರ್ಘಕಾಲ ಆರೋಗ್ಯಯುತವಾಗಿ ಬಾಳಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈಗಿನ ನಮ್ಮ ಜೀವನ ಶೈಲಿಯಲ್ಲಿ ಇದು ಸಾಧ್ಯವಿಲ್ಲ. ನಮ್ಮ ಹಿರಿಯರು ಹೆಚ್ಚು ಕಾಲ ಬಾಳಿ ಬದುಕಿದ್ದಾರೆ. ಅವರು ತಿನ್ನುವ ಆಹಾರವನ್ನೇ ನಾವೂ ತಿನ್ನುತ್ತಿದ್ದೇವೆ. ಆದರೂ ಯಾಕೆ ಹೀಗೆ ಎನ್ನುವ ಪ್ರಶ್ನೆಯಂತೂ ಇದ್ದೇಇದೆ. ಹೆಚ್ಚು ಕಾಲ ಬದುಕಬೇಕಾದರೆ ಹಿರಿಯರ ಜೀವನ ರಹಸ್ಯ ಏನಿರಬಹುದು ಎನ್ನುವ ಕುತೂಹಲವಂತೂ ಎಲ್ಲರಲ್ಲೂ ಇದೆ. ಈ ಗುಟ್ಟನ್ನು ಈಗ ವಿಶ್ವದ (world) ಅತ್ಯಂತ ಹಿರಿಯ ವ್ಯಕ್ತಿ (Oldest Man) ಬ್ರಿಟನ್ (Briton) ಜಾನ್ ಟಿನ್ನಿಸ್ವುಡ್ (John Tinniswood) ಹೇಳಿಕೊಂಡಿದ್ದಾರೆ.

ಆಹಾರ ಮತ್ತು ಅದೃಷ್ಟದಲ್ಲಿದೆ ದೀರ್ಘಾಯುಷ್ಯದ ಗುಟ್ಟು ಎನ್ನುವ ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿ 111 ವರ್ಷದ ಬ್ರಿಟನ್ ಜಾನ್ ಟಿನ್ನಿಸ್ವುಡ್ ತಮ್ಮ ನೆಚ್ಚಿನ ಆಹಾರವಾಗಿ ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಅನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ದೀರ್ಘಾಯುಷ್ಯದಲ್ಲಿ ಯಾವುದೇ ವಿಶೇಷ ರಹಸ್ಯವಿಲ್ಲ. ಕೇವಲ ಅದೃಷ್ಟ ಮತ್ತು ಆಹಾರದಲ್ಲಿರುತ್ತೆ ಎನ್ನುತ್ತಾರೆ ಅವರು.


ದೀರ್ಘಾಯುಷ್ಯದ ಗುಟ್ಟು


ಉತ್ತರ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿ 1912 ರಲ್ಲಿ ಜನಿಸಿದ ನಿವೃತ್ತ ಅಕೌಂಟೆಂಟ್ ಮತ್ತು ಮಾಜಿ ಅಂಚೆ ಸೇವಾ ಕಾರ್ಯಕರ್ತ ಟಿನ್ನಿಸ್‌ವುಡ್‌ ಅವರಿಗೆ ಈಗ 111 ವರ್ಷ ಮತ್ತು 222 ದಿನಗಳು.

ಇದನ್ನೂ ಓದಿ: Lakshadweep Tourism: ಮೋದಿ ಭೇಟಿ ಬಳಿಕ ಲಕ್ಷದ್ವೀಪಕ್ಕೆ ಲಕ್;‌ ಪ್ರವಾಸಿಗರ ಸಂಖ್ಯೆ ಡಬಲ್!

ಅವರ ತಮ್ಮ ದೀರ್ಘಾಯುಷ್ಯದ ರಹಸ್ಯ ಹೇಳಿದ್ದು ಹೀಗೆ.. ನೀವು ದೀರ್ಘಕಾಲ ಬದುಕುತ್ತೀರೋ ಅಥವಾ ಕಡಿಮೆ ಬದುಕುತ್ತೀರೋ ಎಂಬುದು ಮುಖ್ಯವಲ್ಲ. ನೀವು ಹೆಚ್ಚು ಏನು ಮಾಡುತ್ತೀರಿ ಎಂಬುದಷ್ಟೇ ಮುಖ್ಯ ಎಂದರು. ಜಗತ್ತು ಯಾವಾಗಲೂ ಬದಲಾಗುತ್ತಿರುತ್ತದೆ. ಇದು ಒಂದು ರೀತಿಯ ನಿರಂತರ ಅನುಭವವಾಗಿದೆ. ನಾವು ಇದರಲ್ಲಿ ಸರಿಯಾದ ದಾರಿಯಲ್ಲಿ ಸಾಗಬೇಕು ಎನ್ನುತ್ತಾರೆ ಅವರು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರಿರುವ ಟಿನ್ನಿಸ್‌ವುಡ್‌ ಅವರ ದಾಖಲೆಯನ್ನು ಅದರ ತಜ್ಞರು ಮತ್ತು ಜೆರೊಂಟಾಲಜಿ ರಿಸರ್ಚ್ ಗ್ರೂಪ್ ಮೌಲ್ಯಮಾಪನ ಮಾಡಿದೆ.

ಜೀವಂತವಾಗಿರುವ ಹಿರಿಯ ಮಹಿಳೆ

ಜಪಾನ್‌ನ ಜಿರೋಮನ್ ಕಿಮುರಾ ಅವರು 116 ವರ್ಷ 54 ದಿನಗಳವರೆಗೆ ಬದುಕಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. 117 ವರ್ಷ ವಯಸ್ಸಿನ ಸ್ಪೇನ್‌ನ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಜೀವಂತವಾಗಿರುವ ಅತ್ಯಂತ ಹಿರಿಯ ಮಹಿಳೆ.

118ನೇ ವಯಸ್ಸಲ್ಲಿ ನಿಧನ

ವಿಶ್ವದ ಹಿರಿಯ ವ್ಯಕ್ತಿ ಎನಿಸಿದ್ದ ಫ್ರಾನ್ಸ್‌ನ ಲುಸೈಲ್‌ ರ‍್ಯಾಂಡನ್‌ ಅವರು ಕಳೆದ ವರ್ಷ ಜನವರಿಯಲ್ಲಿ 118ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಸಿಸ್ಟರ್‌ ಆ್ಯಂಡ್ರೆ ಎಂದೇ ಖ್ಯಾತಿಯಾಗಿದ್ದ ಲುಸೈಲ್‌ ರ‍್ಯಾಂಡನ್‌ ಅವರು ಆ್ಯಲೆಸ್‌ ಪಟ್ಟಣದಲ್ಲಿ 1904ರ ಫೆಬ್ರವರಿ 11ರಂದು ಜನಿಸಿದ್ದರು. 2021ರಲ್ಲಿ ಅವರಿಗೆ ಕೊರೊನಾ ದೃಢಪಟ್ಟಿದ್ದರೂ ಸೋಂಕನ್ನು ಗೆದ್ದು ಫ್ರಾನ್ಸ್‌ನಾದ್ಯಂತ ಸುದ್ದಿಯಾಗಿದ್ದರು. ಮುಂದಿನ ತಿಂಗಳು ಅವರು 119ನೇ ವಯಸ್ಸಿಗೆ ಕಾಲಿಡುವವರಿದ್ದರು. ಜನ್ಮದಿನಕ್ಕೂ ಕೆಲವೇ ದಿನಗಳ ಮೊದಲೇ ಆ್ಯಂಡ್ರೆ ಮೃತಪಟ್ಟಿದ್ದರು.

ವೃತ್ತಿಯಲ್ಲಿ ನರ್ಸ್‌ ಆಗಿದ್ದ ಲುಸೈಲ್‌ ರ‍್ಯಾಂಡನ್‌ ಅವರ ಆಹಾರ ಪದ್ಧತಿಯೇ ಅವರ ದೀರ್ಘಾಯುಷ್ಯದ ಗುಟ್ಟು ಎನ್ನಲಾಗಿದೆ. ಕಡಿಮೆ ಪ್ರಮಾಣದ ಊಟ, ತಿಂಡಿ ಸೇವಿಸುವುದು, ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡುವುದು, ಲವಲವಿಕೆಯಿಂದ ಇರುವುದೇ ಅವರ ಆರೋಗ್ಯದ ಗುಟ್ಟು ಎಂದು ಮೂಲಗಳು ತಿಳಿಸಿವೆ.

114 ವರ್ಷ ಬದುಕಿದ್ದ ಮೊರಾ

ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಮೊರಾ ಅವರು 114 ವರ್ಷ ಬದುಕಿದ್ದು, ಇದಕ್ಕಾಗಿ ಅವರು ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಪಡೆದರು.ಇತ್ತೀಚೆಗಷ್ಟೇ ಅವರು ನಿಧನರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

ಮಧ್ಯಪ್ರದೇಶದ ಇಂದೋರ್‌ನಲ್ಲಿ ಯುವಕನೊಬ್ಬ ಮೌನ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಯಾವುದೇ ಹೃದಯಾಘಾತದ ಲಕ್ಷಣವಿಲ್ಲದೆಯೇ ಸಾವನ್ನಪ್ಪುತ್ತಿರುವ (Silent Heart Attack) ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಏನು ಈ ಬಗೆಯ ಹೃದಯಾಘಾತದ ಲಕ್ಷಣ? ಇಲ್ಲಿದೆ ವರದಿ.

VISTARANEWS.COM


on

By

Silent Heart Attack
Koo

ಮಧ್ಯಪ್ರದೇಶದ ಇಂದೋರ್‌ನ 35 ವರ್ಷದ ವ್ಯಕ್ತಿಯೊಬ್ಬರು ತೀವ್ರ ಎದೆನೋವಿನ ಲಕ್ಷಣಗಳು ಇಲ್ಲದೆಯೇ ಹೃದಯಾಘಾತದಿಂದ (Silent Heart Attack) ಸಾವನ್ನಪ್ಪಿದ್ದಾರೆ. ಸೌಮ್ಯವಾದ ರೋಗಲಕ್ಷಣ ಅಥವಾ ಯಾವುದೇ ತೀವ್ರವಾದ ಎದೆನೋವಿನಂತಹ ವಿಶಿಷ್ಟ ಲಕ್ಷಣಗಳಿಲ್ಲದೆಯೇ ಹೃದಯಾಘಾತಗಳು ಸಂಭವಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಎದೆ ನೋವಿನ ಲಕ್ಷಣಗಳು ಕಂಡು ಬಂದರೆ ECGಯಿಂದ ರೋಗ ಲಕ್ಷಣಗಳು ಪತ್ತೆಯಾಗುತ್ತದೆ. ಎಚ್ಚರಿಕೆಯ ಚಿಹ್ನೆಗಳು ಎದೆಯ ಮಧ್ಯದಲ್ಲಿ ಅಥವಾ ದೇಹದ ಮೇಲ್ಭಾಗದ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ತಣ್ಣನೆಯ ಬೆವರು ಕಂಡು ಬರುತ್ತದೆ. ಆದರೆ ಇದ್ಯಾವುದು ಇಲ್ಲದೆಯೇ ಸಾವನ್ನಪ್ಪುತ್ತಿರುವವರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಯಾವ ಸೂಚನೆಯೂ ಇಲ್ಲದೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ತೀರ್ಥ ರಾಮ್ (35) ಮೃತರು.

ತೀರ್ಥ ರಾಮ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲು ನಿಧನರಾಗಿದ್ದಾರೆ. ಮೃತನ ಕುಟುಂಬದವರು ಆತನ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಗೋವಿಂದ್ ನಗರದ ನಿವಾಸಿ ಬಿಹಾರಿ ಲಾಲ್ ಸೋನ್ವಾನೆ ಅವರ ಪುತ್ರ ತೀರ್ಥ ರಾಮ್ ಎಂದು ಮೃತನನ್ನು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ತೀರ್ಥರಾಮ್ ಮನೆಯಿಂದ ಬೈಕ್ ನಲ್ಲಿ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಆತ ರಸ್ತೆಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂಬ ಸುದ್ದಿ ಮನೆಯವರಿಗೆ ತಿಳಿಯಿತು. ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬರುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೌನ ಹೃದಯಾಘಾತವೇ (ಸೈಲೆಂಟ್‌ ಹಾರ್ಟ್‌ ಆಟ್ಯಾಕ್‌) ಆತನ ಸಾವಿಗೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.


ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎಂದರೇನು?

ಮೌನ ಹೃದಯಾಘಾತವನ್ನು ಸಾಮಾನ್ಯವಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (SMI) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಹೃದಯಾಘಾತ ಸಂಭವಿಸಿದಾಗ ವ್ಯಕ್ತಿ ಎದೆಯಲ್ಲಿ ನೋವಿನ ಸಂವೇದನೆಯನ್ನು ಅನುಭವಿಸುವುದಿಲ್ಲ. ಆದರೆ ಇತರ ಕೆಲವು ಲಕ್ಷಣಗಳು ಕಂಡುಬರುತ್ತವೆ.

ಇದನ್ನೂ ಓದಿ: Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

ಮೌನ ಹೃದಯಾಘಾತದ ಲಕ್ಷಣಗಳು

ಮೌನ ಹೃದಯಾಘಾತದ ಲಕ್ಷಣಗಳು ಇಂತಿವೆ. ಶೀತ ಜ್ವರ, ಎದೆಯ ಬಳಿ ಅಥವಾ ಭುಜಗಳ ಬಳಿ ಮೇಲಿನ ಬೆನ್ನಿನ ಬಳಿ ಊತ, ಪಾದದ ಬಳಿ ನೋವು, ತೋಳು ಅಥವಾ ಮೇಲಿನ ಬೆನ್ನಿನಲ್ಲಿ ಸ್ನಾಯು ನೋವು, ಸುಸ್ತಾಗಿರುವ ಭಾವನೆ ಕಂಡು ಬರುತ್ತದೆ.

ಸಾಮಾನ್ಯ ಹೃದಯಾಘಾತದ ಲಕ್ಷಣಗಳು

ಕೆಲವು ನಿಮಿಷಗಳಿಗಿಂತ ಹೆಚ್ಚು ಎದೆ ನೋವು, ಉಸಿರಾಟದ ತೊಂದರೆ, ಚಡಪಡಿಕೆ ಭಾವನೆ, ಲಘುವಾದ ಹಠಾತ್ ಬೆವರುವಿಕೆ, ವಾಂತಿ, ತುಂಬಾ ದಣಿದ ಭಾವನೆ ಮತ್ತು ಸುಸ್ತು ಕೆಲವು ದಿನಗಳವರೆಗೆ ಇರುತ್ತದೆ.

Continue Reading

ಆರೋಗ್ಯ

Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಆಲಿವ್‌ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್‌ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳ ಬಗ್ಗೆ (Olive oil benefits) ಇಲ್ಲಿದೆ ಮಾಹಿತಿ.

VISTARANEWS.COM


on

Olive Oil benefits
Koo

ಆಲಿವ್‌ಗಳು ನಮಗೆ ದೇಸೀ ನೆಲದ ಆಹಾರವಲ್ಲದಿದ್ದರೂ ಇದರ ಆರೋಗ್ಯದ ಲಾಭಗಳು ಅನೇಕ. ಹಾಗೂ ಇದು ದೇಶಗಳ ಗಡಿಯ ಹಂಗಿಲ್ಲದೆ ಇಂದು ಪ್ರಪಂಚದಾದ್ಯಂತ ಬಳಕೆಯಾಗುತ್ತಿದೆ. ಹಸಿರು ಬಣ್ಣದ ಆಲಿವ್‌ ಆಗಿರಬಹುದು, ಕಪ್ಪು ಬಣ್ಣದ್ದಾಗಿರಬಹುದು. ಗುಣದಲ್ಲಿ ಎರಡೂ ಚಿನ್ನವೇ. ಎಲುಬು ಸವೆತವನ್ನು ತಡೆಯುವ ಗುಣ ಇದರಲ್ಲಿದ್ದು, ರಕ್ತದೊತ್ತಡವನ್ನೂ ಇದು ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲ, ಕ್ಯಾನ್ಸರ್‌ ನಿರೋಧಕ ಗುಣಗಳನ್ನೂ ಇದು ಹೊಂದಿದ್ದು, ಚರ್ಮಕ್ಕೆ, ಕೂದಲಿಗೆ ಸೇರಿದಂತೆ, ಆರೋಗ್ಯಕ್ಕೆ ಒಳ್ಳೆಯ ಪರಿಣಾಮವನ್ನು ಬೀರುವ ಆಹಾರವಿದು. ಆಲಿವ್‌ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್‌ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳನ್ನು (Olive oil benefits) ತಿಳಿಯೋಣ.

Olive Oil

ಸುಕ್ಕು ನಿವಾರಣೆ

ಆಲಿವ್‌ ಎಣ್ಣೆಯಲ್ಲಿರುವ ಪಾಲಿಫಿನಾಲ್‌ ಕಾಂಪೌಂಡ್‌ಗಳಿಂದಾಗಿ ಇದು ಆಕ್ಸಿಡೇಟಿವ್‌ ಒತ್ತಡಗಳನ್ನು ದೂರವಿರಿಸುತ್ತದೆ. ಪ್ರತಿ ನಿತ್ಯ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡುವುದರಿಂದ ಚರ್ಮದ ಮೇಲಿನ ಸುಕ್ಕು, ಕಪ್ಪು ಕಲೆಗಳು ದೂರವಾಗಿ ಚರ್ಮ ತಾಜಾ ಆಗಿ ಕಂಗೊಳಿಸುತ್ತದೆ.

ಅತ್ಯುತ್ತಮ ಮಾಯ್‌ಶ್ಚರೈಸರ್‌

ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಇ ಮತ್ತು ಎ ಹೇರಳವಾಗಿದ್ದು, ಇದು ಅತ್ಯುತ್ತಮ ಮಾಯ್‌ಶ್ಚರೈಸರ್‌ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮಕ್ಕೆ ಸರಿಯಾದ ತೇವಾಂಶವನ್ನು ಒದಗಿಸಲು ಈ ಎಣ್ಣೆಯ ಮಸಾಜ್‌ ಸೂಕ್ತ. ಅಷ್ಟೇ ಅಲ್ಲ, ಇದು ಚರ್ಮವನ್ನು ಇನ್ನಷ್ಟು ಆರೋಗ್ಯಯುತವಾಗಿ ನಳನಳಿಸುವಂತೆ ಮಾಡುತ್ತದೆ.

ಕಪ್ಪು ಕಲೆ ನಿವಾರಣೆ

ಬಿಸಿಲಿಗೆ ಚರ್ಮ ಬಹುಬೇಗನೆ ಹಾಳಾಗಿತ್ತದೆ, ಕಪ್ಪುಕಲೆ, ಸುಕ್ಕಾಗುವುದು ಎಲ್ಲವೂ ಬಿಸಿಲಿನ ಝಳಕ್ಕೆ. ಆಲಿವ್‌ ಎಣ್ಣೆಯಲ್ಲಿ ಸಾಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇದು ಚರ್ಮವನ್ನು ಸೂರ್ಯನ ಬಿಸಿಲಿನಿಂದಾಗುವ ಹಾನಿಯಿಂದ ತಪ್ಪಿಸುತ್ತದೆ. ನಿತ್ಯವೂ ಆಲಿವ್‌ ಎಣ್ಣೆಯಿಂದ ಮುಖ, ಕೈಕಾಲು, ಕುತ್ತಿಗೆಗೆ ಲೇಪಿಸಿ ಮಸಾಜ್‌ ಮಾಡುವುದುರಿಂದ ಉತ್ತಮ ಫಲ ಕಾಣಬಹುದು. ರಾತ್ರಿ ಮಲಗುವ ಮುಂಚೆ ಹೀಗೆ ಮಾಡಿ ಬೆಳಗ್ಗೆ ಇದನ್ನು ತೊಳೆಯಿರಿ.

image Olive Oil Benefits

ಕಜ್ಜಿ ನಿವಾರಣೆ

ಕೆಲವರಿಗೆ ಚರ್ಮದಲ್ಲಿ ತುರಿಕೆ ಇರುತ್ತದೆ. ಬಿಸಿಲಿನ ಝಳದಿಂದ ತುರಿಕೆ ಹೆಚ್ಚಾಗಿ ಚರ್ಮದ ತುಂಬ ಕಜ್ಜಿಗಳೇಳಬಹುದು. ಅಂಥ ಮಂದಿಗೆ ಈ ಎಣ್ಣೆ ಸೂಕ್ತ. ಇದು ತುರಿಕೆಯ ಪ್ರಮಾಣವನ್ನು ಕಡಿಮೆ ಮಾಡಿ, ಕಜ್ಜಿಯನ್ನು ಹೊಡೆದೋಡಿಸಿ ಚರ್ಮವನ್ನು ನಯವಾಗಿಸುತ್ತದೆ. ಮಕ್ಕಳಿಗೆ ಡಯಪರ್‌ನಿಂದಾಗುವ ಕಜ್ಜಿಗಳಿಗೂ ಈ ಎಣ್ಣೆ ಬಳಸಬಹುದು.

ಆಫ್ಟರ್‌ ಕ್ರೀಮ್‌ಗೆ ಪರ್ಯಾಯ

ಶೇವ್‌ ಮಾಡಿದ ಮೇಲೆ ತುರಿಕೆ, ಗಾಯ ಇತ್ಯಾದಿಗಳಿ ಇದ್ದಿದ್ದೇ. ಹಾಗಾಗಿ ಇದನ್ನು ಆಫ್ಟರ್‌ ಕ್ರೀಮ್‌ನ ಬದಲಾಗಿಯೂ ಬಳಸಬಹುದು. ಇದರಂದ ಚರ್ಮಕ್ಕೆ ಉತ್ತಮ ಮಾಯ್‌ಶ್ಚರೈಸರ್‌ ಸಿಗುವುದಷ್ಟೇ ಅಲ್ಲ ಇನ್‌ಫೆಕ್ಷನ್‌ ಕೂಡ ದೂರ ಉಳಿಯುತ್ತದೆ. ಕೇವಲ 2-3 ಬಿಂದು ಎಣ್ಣೆಯನ್ನು ಒದ್ದೆ ಮುಖದ ಮೇಲೆಯೇ ಹಚ್ಚಿಕೊಳ್ಳಿ, ಕೂಡಲೇ ಇದು ಚರ್ಮದ ರಂಧ್ರಗಳ ಮೂಲಕ ಹೀರಿಕೊಳ್ಳಲ್ಪಡುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಹೊಟ್ಟಿನ ಸಮಸ್ಯೆ ಮಾಯ

ತಲೆಹೊಟ್ಟು ಇರುವ ಮಂದಿಗೆ ಆಲಿವ್‌ ಎಣ್ಣೆ ಬಹಳ ಒಳ್ಳೆಯದು. ವಾರಕ್ಕೆರಡು ಬಾರಿ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡಿದರೆ ಕೆಲವೇ ವಾರಗಳಲ್ಲಿ ಹೊಟ್ಟಿನ ಸಮಸ್ಯೆ ಮಾಯ.

Hair Growth Tips

ಕೂದಲಿಗೆ ಪೋಷಣೆ

ಕೂದಲು ಒರಟೊರಟಾಗಿ ಸಂಭಾಳಿಸಲು ಕಷ್ಟವಾಗುತ್ತದೆ ಎಂದಾದಲ್ಲಿ, ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆ ಆಲಿವ್‌ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಿ. ಇದು ತಲೆ ಬುಡಕ್ಕೆ ಸಾಕಷ್ಟು ರಕ್ತಸಂಚಾರವನ್ನು ನೀಡಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಕೂದಲು ನಯವಾಗುತ್ತದೆ. ಗಾಳಿಗೆ ಹಾರುವ ಕೂದಲು, ಚೆನ್ನಾಗಿ ನಯವಾಗಿ ನಿಮ್ಮ ತಲೆಯೇ ಮೇಲೆಯೇ ಕೂರುತ್ತದೆ. ಮೊಟ್ಟೆಯ ಬಿಳಿ ಲೋಳೆಯೊಂದಿಗೆ ಆಲಿವ್‌ ಎಣ್ಣೆಯನ್ನೂ ಸೇರಿಸಿ ಹೇರ್‌ಪ್ಯಾಕ್‌ ಹಾಕಿ ತಲೆಗೆ ಸ್ನಾ ಮಾಡುವುದರಿಂದ ಕೂದಲು ಫಳಪಳನೆ ಹೊಳೆಯುತ್ತದೆ. ಈ ಪೋಷಣೆ ಯಾವ ಹೇರ್‌ ಸ್ಪಾಗೂ ಕಡಿಮೆಯಿಲ್ಲ.

Continue Reading

ಫ್ಯಾಷನ್

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

ಈ ಬಾರಿಯ ಅಕ್ಷಯ ತೃತೀಯದಲ್ಲಿ ಮಾನಿನಿಯರಿಗೆ (Akshaya Tritiya Fashion) ಪ್ರಿಯವಾಗುವಂತಹ ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್‌ ಬಂದಿವೆ. ಯಾವ್ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಯಾರಿಗೆ ಯಾವುದು ಸೂಕ್ತ ಎಂಬುದರ ಬಗ್ಗೆ ಇಲ್ಲಿದೆ ವಿವರ.

VISTARANEWS.COM


on

Akshaya Tritiya Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಅಕ್ಷಯ ತೃತೀಯದಲ್ಲಿ (Akshaya Tritiya Fashion) ಕಾಸಗಲದ ಬಂಗಾರದ ಮೂಗುತಿಗಳು ಹಾಗೂ ಮೂಗಿನ ಸ್ಟಡ್ಸ್‌ ಬಂದಿವೆ. ನೋಡಲು ಕಿವಿಯ ಓಲೆ ಹಾಗೂ ಸ್ಟಡ್ಸ್‌ನಂತೆ ಕಾಣುವ ಈ ನೋಸ್‌ ರಿಂಗ್ಸ್‌ , ಡ್ಯಾಂಗಲ್ಸ್‌ ಅಥವಾ ಸ್ಟಡ್ಸ್‌ ಲೆಕ್ಕವಿಲ್ಲದಷ್ಟು ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿವೆ. ಕಿವಿಗೆ ಧರಿಸುವ ಓಲೆಯಷ್ಟೇ ಮಹತ್ವವನ್ನು ಪಡೆದುಕೊಂಡಿವೆ.

Akshaya Tritiya Fashion

ಯುವತಿಯರ ನೋಸ್‌ ಸ್ಟಡ್ಸ್‌ ಒಲವು

“ಮೂಗುತಿ ಎಂದರೇ ಚಿಕ್ಕದೊಂದು ನೋಸ್‌ ರಿಂಗ್ಸ್‌ ಅಥವಾ ಚಿಕ್ಕ ಚುಕ್ಕೆಯಂತಹ ಡಿಸೈನ್‌ನವು ಈ ಮೊದಲೆಲ್ಲಾ ಚಾಲ್ತಿಯಲ್ಲಿದ್ದವು. ಆದರೆ, ಇದೀಗ ರೆಟ್ರೊ ಫ್ಯಾಷನ್‌ನಲ್ಲಿದ್ದವು, ಅದರಲ್ಲೂ ಹಳೆಯ ಸಿನಿಮಾಗಳಲ್ಲಿ ಪೌರಾಣಿಕ ಚಲನಚಿತ್ರಗಳಲ್ಲಿ ರಾಣಿ-ಮಹಾರಾಣಿಯರು, ದೇವಾನುದೇವತೆಗಳ ಪಾತ್ರಧಾರಿಗಳು ಧರಿಸುತ್ತಿದ್ದ ಬಿಗ್‌ ನೋಸ್‌ ರಿಂಗ್‌ ಅಥವಾ ಕಿವಿಯ ಓಲೆಯಂತೆ ಕಾಣುವ ಸ್ಟಡ್ಸ್‌ ಈ ಸೀಸನ್‌ನಲ್ಲಿ ಮರಳಿವೆ. ಮಾನಿನಿಯರ ಮುಖವನ್ನು ಎದ್ದು ಕಾಣುವಂತೆ ಮಾಡಬಲ್ಲ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಎಲ್ಲದಕ್ಕಿಂತ ಖುಷಿ ಪಡುವ ವಿಚಾರವೆಂದರೇ ಯುವತಿಯರು ಕೂಡ ಇದರತ್ತ ವಾಲತೊಡಗಿದ್ದಾರೆ. ತಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳಲ್ಲಿ ಇವನ್ನು ಸೇರಿಸಿಕೊಂಡಿದ್ದಾರೆ. ಪರಿಣಾಮ, ಜ್ಯುವೆಲರಿ ವಿನ್ಯಾಸಕಾರರು ಈ ಬಿಗ್‌ ನೋಸ್‌ ಸ್ಟಡ್ಸ್‌ ಅನ್ನು ನಾನಾ ರೂಪದಲ್ಲಿ ಬಿಡುಗಡೆಗೊಳಿಸಿದ್ದಾರೆ” ಎನ್ನುತ್ತಾರೆ ಆಭರಣ ವಿನ್ಯಾಸಕಾರರಾದ ರಮಣ ಆಚಾರ್‌ ಹಾಗೂ ಜಯಂತ್‌.

Akshaya Tritiya Fashion

ಟ್ರೆಂಡಿಯಾಗಿರುವ ಡಿಸೈನ್‌ಗಳ್ಯಾವುವು?

ಫ್ಲೋರಲ್‌, ಹರಳಿನ, ಅಮೆರಿಕನ್‌ ಡೈಮಂಡ್‌ನ ನಾನಾ ಡಿಸೈನ್‌ನ ಸ್ಟಡ್ಸ್‌, ಒಂಭತ್ತು, ಏಳು, ಐದು ಕಲ್ಲಿನ ಹಳೆಯ ನಕ್ಷತ್ರದಂತಹ ವಿನ್ಯಾಸ, ಮುತ್ತಿನ ಮೂಗುತಿಗಳು, ಟ್ವಿಸ್ಟೆಡ್‌, ಡಾಂಗಲ್ಸ್‌, ಡ್ರಾಪ್ಸ್‌, ಮಹಾರಾಷ್ಟ್ರದ ಮಹಿಳೆಯರು ಧರಿಸುವ ನಾನಾ ಬಗೆಯ ನತ್‌ ಜೊತೆಗಿನ ಸ್ಟಡ್ಸ್‌, ಕಲರ್‌ಫುಲ್‌ ಸೆಮಿ ಪ್ರಿಶಿಯಸ್‌ ಸ್ಟೋನ್ಸ್‌ ಇರುವಂತಹ ಡಿಸೈನ್‌ನವು, ಫ್ಲೋರಲ್‌, ನವಿಲು ಸೇರಿದಂತೆ ನಾನಾ ಬಗೆಯ ಬಿಗ್‌ ನೋಸ್‌ ಸ್ಟಡ್ಸ್‌ ಡಿಸೈನ್‌ನವು ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಅದರಲ್ಲೂ ಮೂಗುತಿ ಆಭರಣಗಳ ಕೆಟಗರಿಯಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಆಭರಣ ಮಾರಾಟಗಾರರು.

Akshaya Tritiya Fashion

ಯಾರಿಗೆ ಯಾವುದು ಸೂಕ್ತ?

  • ಅಗಲವಾದ ಮೂಗು ಹೊಂದಿರುವವರು ಆದಷ್ಟೂ ಉದ್ದನೆಯ ಡಿಸೈನ್‌ ಹೊಂದಿರುವಂತವು ಅಥವಾ ಡ್ಯಾಂಗಲ್ಸ್‌ ಚೂಸ್‌ ಮಾಡಬೇಕು.
  • ಉದ್ದನಾದ ಮೂಗಿರುವವರಿಗೆ ಯಾವುದೇ ಡಿಸೈನ್‌ನ ನೋಸ್‌ ಸ್ಟಡ್ಸ್‌ ಆದರೂ ಓಕೆ. ಆಕರ್ಷಕವಾಗಿ ಕಾಣುತ್ತದೆ.
  • ಪುಟ್ಟ ಮೂಗಿರುವವರು ಆದಷ್ಟೂ ಚಿಕ್ಕ ಸ್ಟೋನ್ಸ್‌ ಇರುವಂತಹ ಮಿನಿಯೇಚರ್‌ ಮೂಗುತಿಗಳನ್ನು ಆಯ್ಕೆ ಮಾಡುವುದು ಬೆಸ್ಟ್.‌
  • ದಪ್ಪಗಿನ ಮೂಗಿರುವವರು ಡಾಂಗಲ್ಸ್‌ ಇಲ್ಲವೇ ಪುಟ್ಟ ಡ್ರಾಪ್ಸ್‌ ಇರುವಂತಹ ನೋಸ್‌ ರಿಂಗ್‌ ಧರಿಸಿದಾಗ ನೋಡಲು ಚೆನ್ನಾಗಿ ಕಾಣುತ್ತದೆ.
  • ಮೂಗಿನ ಸ್ಟಡ್ಸ್‌ ಧರಿಸುವವರು ಆದಷ್ಟೂ ಇತರೇ ಆಭರಣಗಳನ್ನು ಮ್ಯಾಚ್‌ ಮಾಡುವ ಚಾಲಕಿತನ ಹೊಂದಿರಬೇಕು.
  • ಆದಷ್ಟೂ ಲೈಟ್‌ವೈಟ್‌ ನೋಸ್‌ ಸ್ಟಡ್ಸ್‌ ಸೆಲೆಕ್ಟ್‌ ಮಾಡಿ, ಧರಿಸಿದಲ್ಲಿ ಹೆಚ್ಚು ಭಾರವೆನಿಸದು.
  • ಸ್ಟೋನ್ಸ್‌ ಇರುವಂತಹ ಮೂಗುತಿಗಳು ಬೆಳಕಿನಲ್ಲಿ ಮಿನುಗುತ್ತವೆ. ಇಂತವು ಟ್ರೆಂಡಿಯಾಗಿವೆ.
  • ಪ್ರತಿದಿನ ಅಗಲವಾದ ಮೂಗುತಿಗಳನ್ನು ಧರಿಸಬೇಡಿ. ಕಾರ್ಯಕ್ರಮಗಳಿಗೆ ಮಾತ್ರ ಧರಿಸಿ.
  • ಅಗಲವಾದ ಪಿನ್‌ ಇರುವಂತವು ಮೂಗಿನ ತೂತನ್ನು ಮತ್ತಷ್ಟು ದೊಡ್ಡದಾಗಿಸಬಲ್ಲವು.
  • ಉಡುಪಿಗೆ ತಕ್ಕಂತೆ ಮ್ಯಾಚಿಂಗ್‌ ಬಣ್ಣ ಬಣ್ಣದ ಹರಳಿನ ನೋಸ್‌ ಸ್ಟಡ್ಸ್‌ ಕೂಡ ಪ್ರಚಲಿತದಲ್ಲಿದ್ದು, ಎಲ್ಲರಿಗೂ ಆಕರ್ಷಕವಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

Continue Reading

ಲೈಫ್‌ಸ್ಟೈಲ್

Do You Know: ನಿಮಗಿದು ಗೊತ್ತಾ? ಲವ್‌ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!

ಆಶ್ಚರ್ಯವಾದರೂ ಸತ್ಯ. (Do You Know) ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ (Weight gain) ಎಂಬುದನ್ನು ಪುಷ್ಟೀಕರಿಸುವ ಹಲವು ಸಂಶೋಧನಾ ವರದಿಗಳು ಬಂದಿವೆ. ಇಂಥದ್ದೇ ಒಂದು ವರದಿಯ ಪ್ರಕಾರ, ಪ್ರೀತಿಯಲ್ಲಿ ಬಿದ್ದ, ಮದುವೆಯಾದ ಸುಮಾರು 8000 ಮಂದಿಯ ತೂಕವನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ. ಮದುವೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ, ಮದುವೆಯಾಗಿ ಐದೇ ವರ್ಷಗಳಲ್ಲಿ ಅವರು ಸುಮಾರು 11 ಕೆಜಿಗಳಷ್ಟು ತೂಕ ಏರಿಕೆಯಾಗುತ್ತದೆ (Weight gain) ಎನ್ನಲಾಗಿದೆ.

VISTARANEWS.COM


on

Do You Know
Koo

ಪ್ರೀತಿಯಲ್ಲಿರುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಮಧುರ ಕ್ಷಣಗಳಲ್ಲಿ ಒಂದು. ಪ್ರೀತಿ ಬದುಕಿನ ಭಾಗ. ಪ್ರೀತಿಯೆಂಬ ಭಾವವಿಲ್ಲದೆ ಬದುಕುವುದು ಕಷ್ಟ. ಇಂತಹ ಪ್ರೀತಿಯ ವ್ಯಾಖ್ಯಾನ ಕಷ್ಟ. ಪ್ರೀತಿಯಲ್ಲಿ ಏರಿಳಿತ ಸಹಜ. ಪ್ರೀತಿಯಲ್ಲಿ ಬಿದ್ದವರಿಗೆ ಇದು ತಿಳಿದಿರುತ್ತದೆ. ಆದರೆ, ಈ ಪ್ರೀತಿಯಲ್ಲಿ ಬೀಳುವುದರಿಂದ (Do You Know) ಆಗುವ ಇನ್ನೊಂದು ಬಹುದೊಡ್ಡ ಸಮಸ್ಯೆ ಎಂದರೆ, ತೂಕ ಏರಿಕೆ (Weight gain)! ಆಶ್ಚರ್ಯವಾದರೂ ಸತ್ಯ. ಹೌದು. ಪ್ರೀತಿಸುವುದರಿಂದ ತೂಕದಲ್ಲಿ ಏರಿಕೆಯಾಗುತ್ತದೆ ಎಂಬುದನ್ನು ಪುಷ್ಟೀಕರಿಸುವ ಹಲವು ಸಂಶೋಧನಾ ವರದಿಗಳು ಬಂದಿವೆ. ಇಂಥದ್ದೇ ಒಂದು ವರದಿಯ ಪ್ರಕಾರ, ಪ್ರೀತಿಯಲ್ಲಿ ಬಿದ್ದ, ಮದುವೆಯಾದ ಸುಮಾರು 8000 ಮಂದಿಯ ತೂಕವನ್ನು ಅಧ್ಯಯನ ಮಾಡಲಾಗಿ ಈ ವರದಿ ಸಿದ್ಧಪಡಿಸಲಾಗಿದೆ. ಮದುವೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ, ಮದುವೆಯಾಗಿ ಐದೇ ವರ್ಷಗಳಲ್ಲಿ ಅವರು ಸುಮಾರು 11 ಕೆಜಿಗಳಷ್ಟು ತೂಕ ಏರಿಕೆಯಾಗುತ್ತದೆ ಎನ್ನಲಾಗಿದೆ. ಪ್ರೀತಿಸುತ್ತಿರುವ ಆದರೆ ಮದುವೆಯಾಗದೆ ಜೊತೆಗಿರುವ ಜೋಡಿಗಳು ಸುಮಾರು ಎಂಟು ಕೆಜಿ ಏರಿಸಿಕೊಂಡರೆ, ಜೊತೆಯಾಗಿರದ ಅದರೆ ಪ್ರೀತಿಸುತ್ತಿರುವ ಜೋಡಿಗಳ ಪೈಕಿ ಮಹಿಳೆಯರು ಏಳು ಕೆಜಿಗಳಷ್ಟು ತೂಕ ಏರಿಸಿಕೊಳ್ಳುತ್ತಾರಂತೆ. ಹಾಗಾದರೆ ಪ್ರೀತಿಸುವುದರಿಂದ ಮಹಿಳೆಯರ ತೂಕದಲ್ಲಿ ಏರಿಕೆಯಾಗುತ್ತದಾ ಎಂಬ ಸಂಶಯ ನಿಮ್ಮಲ್ಲಿ ಬರಬಹುದು. ಹೌದು ವರದಿಗಳು ಈ ಸಂಶಯವನ್ನು ಅಲ್ಲಗಳೆಯುವುದಿಲ್ಲ. ಹೀಗೆ ತೂಕ ಹೆಚ್ಚಾಗಲು ಸಾಮಾನ್ಯವಾಗಿ ಮೂರು ಕಾರಣಗಳಿವೆ. ಇದು ಪ್ರೀತಿಸುವುದರಿಂದ ತೂಕ ಏರಿಕೆ ಎನ್ನುವುದಕ್ಕಿಂತಲೂ, ಆ ಸಂದರ್ಭ ನಿಮ್ಮ ಆಹಾರ ಕ್ರಮದಿಂದಲೂ ಎಂದು ಹೇಳುತ್ತವೆ ಈ ವರದಿಗಳು. ಸಾಮಾನ್ಯವಾಗಿ ಪ್ರೀತಿಸುವ ಜೋಡಿಗಳು, ಸಾಮಾನ್ಯವಾಗಿ ಈ ಮೂರು ಕಾರಣಗಳಿಂದಾಗಿ ತೂಕ ಏರಿಸಿಕೊಳ್ಳುತ್ತಾರೆ. ಬನ್ನಿ, ಆ ಮೂರು ಕಾರಣಗಳನ್ನು ನೋಡೋಣ.

Strawberry lover

ನಿಮ್ಮ ಸಂಗಾತಿಯ ಕೆಟ್ಟ ಆಹಾರಕ್ರಮ

2007ರಲ್ಲಿ ನಡೆದ ಸಂಶೋಧನಾ ವರದಿಯೊಂದು ಹೇಳುವ ಪ್ರಕಾರ, ಜೋಡಿಯಲ್ಲಿ ಒಬ್ಬರ ತೂಕ ಹೆಚ್ಚಿದ್ದರೆ, ಇನ್ನೊಬ್ಬರ ತೂಕವೂ ಹೆಚ್ಚಾಗುವ ಸಾಧ್ಯತೆ ಶೇ.37ರಷ್ಟು ಹೆಚ್ಚಿರುತ್ತದೆ. ಕಾರಣ ಇಬ್ಬರಲ್ಲಿ ಒಬ್ಬರ ನಡತೆ, ಆಹಾರ ಕ್ರಮ ಮತ್ತೊಬ್ಬರ ಆಹಾರಕ್ರಮದ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಯೊಬ್ಬರು ಹೆಚ್ಚು ಕ್ಯಾಲರಿಯ ಆಹಾರಗಳನ್ನು ಸೇವಿಸುವವರಾಗಿದ್ದರೆ, ಸ್ನ್ಯಾಕ್ಸ್‌, ಸಂಸ್ಕರಿಸಿದ ಆಹಾರ, ಜಂಕ್‌ ಪ್ರಿಯರಾಗಿದ್ದರೆ, ಸಹಜವಾಗಿಯೇ ಅದನ್ನು ಇನ್ನೊಬ್ಬ ಸಂಗಾತಿಯೂ ಅನುಸರಿಸತೊಡಗುತ್ತಾರೆ. ಅವರ ಜೊತೆಗೆ ಎರಡು ತುತ್ತು ಉಂಡರೂ ಕೂಡಾ, ನಿಧಾನವಾಗಿ ಇಬ್ಬರೂ ಒಂದೇ ಅಭ್ಯಾಸವುಳ್ಳವರಾಗಿ ಬದಲಾಗುತ್ತಾರೆ.

ಹೊರಗೆ ತಿನ್ನುವುದು

ಸಂಗಾತಿಗಳಲ್ಲಿ ಒಬ್ಬರು ಫುಡೀ ಅರ್ಥಾತ್‌ ಆಹಾರ ಪ್ರಿಯರಾಗಿದ್ದರಂತೂ ಕತೆ ಮುಗೀತು. ಒಬ್ಬರ ಪರಿಣಾಮ ಇನ್ನೊಬ್ಬರ ಮೇಲೆ ಬೀರುತ್ತದೆ. ಇಬ್ಬರೂ ಹೊರಗೆ ಉಣ್ಣುವುದು ಹೆಚ್ಚಾಗುತ್ತದೆ. ಸಂಜೆಯ ಜೊತ್ತು, ಜೊತೆಗೆ ಸೇರುವ, ಸಮಯ ಕಳೆವ, ಸಿನೆಮಾ ಥಿಯೇಟರ್‌ ಭೇಟಿ ಇತ್ಯಾದಿ ಇತ್ಯಾದಿಗಳ ನೆಪದಲ್ಲಿ ಸಹಜವಾಗಿಯೇ ಹೆಚ್ಚು ಕ್ಯಾಲರಿ ಹೊಟ್ಟೆಗೆ ಹೋಗುತ್ತದೆ. ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚಾಗುತ್ತದೆ, ಪರಿಣಾಮ ತೂಕವೂ ಹೆಚ್ಚುತ್ತದೆ.

Cigarettes and alcohol consumption are known to cause permanent deterioration of bone health Menopause and Bone Loss

ಹೆಚ್ಚು ಆಲ್ಕೋಹಾಲ್‌ ಕುಡಿಯುತ್ತೀರಿ

ಪ್ರೀತಿಯಲ್ಲಿ ಬಿದ್ದಾಗ ಜೊತೆಯಲ್ಲಿ ಸಮಯ ಕಳೆಯುವ ನೆಪದಲ್ಲಿ ಗುಂಡು ಪಾರ್ಟಿಗಳೂ ಹೆಚ್ಚಾಗುತ್ತವೆ. ಆಗಾಗ ಸೇರಿಕೊಂಡು ಆಲ್ಕೋಹಾಲ್‌ ಸೇವಿಸುವುದು ಇತ್ಯಾದಿ ಚಟುವಟಿಕೆಗಳಿಂದ ಸಹಜವಾಗಿಯೇ ತೂಕ ಏರುತ್ತದೆ.

ಹಾಗಾದರೆ ಏನು ಮಾಡಬಹುದು?

  • ನಿಮ್ಮ ಸಂಗಾತಿಯ ಕೆಟ್ಟ ಆಹಾರಕ್ರಮವನ್ನು ನಿಮಗೆ ಸರಿಪಡಿಸಲು ಸಾಧ್ಯವಾಗದಿದ್ದರೂ, ನೀವು ಬದಲಾಗಬೇಡಿ. ನಿಮ್ಮ ಆಹಾರಕ್ರಮದಲ್ಲಿ ಶಿಸ್ತಿರಲಿ.
  • ಪ್ರೀತಿಸುವ ನೆಪದಲ್ಲಿ ಗುಂಡು ಪಾರ್ಟಿ ಮಾಡಿ ಆಲ್ಕೋಹಾಲ್‌ ಸೇವನೆ ಇತ್ಯಾದಿಗಳನ್ನು ಮಾಡುವ ಬದಲು ಪ್ರೀತಿಯಿಂದ ಜೊತೆಯಾಗಿ ಅಡುಗೆ ಮಾಡಿ. ಅದೂ ಕೂಡಾ ಬಹಳ ರೊಮ್ಯಾಂಟಿಕ್‌ ಗಳಿಗೆಗಳನ್ನು ಸೃಷ್ಟಿ ಮಾಡುತ್ತವೆ.
  • ಹೊರಗೆ ಹೋಗಿ ತಿನ್ನುವ ಸಂದರ್ಭ ಹೆಚ್ಚು ಆರ್ಡರ್‌ ಮಾಡಬೇಡಿ. ಅಗತ್ಯಕ್ಕಿಂತ ಕಡಿಮೆ ಆರ್ಡರ್‌ ಮಾಡಿ. ಕಡಿಮೆ ಪ್ರಮಾಣದಲ್ಲಿ ತಿನ್ನಿ. ಒಂದು ಬಗೆಯನ್ನು ಆರ್ಡರ್‌ ಮಾಡಿ ಇಬ್ಬರೂ ಹಂಚಿಕೊಂಡು ತಿನ್ನಿ.
Continue Reading
Advertisement
Silent Heart Attack
ಆರೋಗ್ಯ12 mins ago

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

Olive Oil benefits
ಆರೋಗ್ಯ13 mins ago

Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

SSLC Result 2024
ಮಂಡ್ಯ16 mins ago

SSLC Result 2024: ಪಾಸ್ ಆಗಿದ್ದರೂ ಫೇಲ್ ಎಂದು ತಿಳಿದು ನೇಣಿಗೆ ಶರಣಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ

IPL 2024
ಪ್ರಮುಖ ಸುದ್ದಿ16 mins ago

IPL 2024 : ಸ್ಟೊಯ್ನಿಸ್ ಕಪಾಳಕ್ಕೆ ಬಾರಿಸಿದ ಕೋಚ್​​ ಕ್ಲೂಸ್ನರ್​; ಇಲ್ಲಿದೆ ವಿಡಿಯೊ

Akshaya Tritiya Fashion
ಫ್ಯಾಷನ್43 mins ago

Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

SSLC Result 2024
ಶಿಕ್ಷಣ50 mins ago

SSLC Result 2024: ಎಸ್‌ಎಸ್‌ಎಲ್‌ಸಿ ‌ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರುಎಣಿಕೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

MS Dhoni
ಕ್ರೀಡೆ50 mins ago

MS Dhoni: ಧೋನಿಗೆ ವಿಶೇಷ ಉಡುಗೊರೆ ನೀಡಿದ ಅಭಿಮಾನಿ; ವಿಡಿಯೊ ವೈರಲ್​

Janhvi Kapoor Wears Cricket-Themed Dress
ಬಾಲಿವುಡ್57 mins ago

Janhvi Kapoor: ಕ್ರಿಕೆಟ್ ಥಿಮ್‌ ಡ್ರೆಸ್‌ನಲ್ಲಿ ಪೋಸ್‌ ಕೊಟ್ಟ ಜಾನ್ವಿ ಕಪೂರ್; ಚೆಂಡಿದೆ ಬೆನ್ನ ಹಿಂದೆ!

Job Alert
ಉದ್ಯೋಗ1 hour ago

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Kannada Serials TRP Puttakkana makkalu TOP one
ಕಿರುತೆರೆ2 hours ago

Kannada Serials TRP: ಟಾಪ್‌ 3ರಲ್ಲಿ ಇವೆ ಎರಡು ಧಾರಾವಾಹಿಗಳು; ʻಪುಟ್ಟಕ್ಕನ ಮಕ್ಕಳುʼ ಸೀರಿಯಲ್‌ನದ್ದೇ ಪಾರುಪತ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ4 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ4 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ5 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ5 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌