Office life | ಕಚೇರಿಯಲ್ಲಿ ಯಶಸ್ವಿಯಾಗಲು ಸೂತ್ರ ಬೇಕೆ? 7 ಶಾರ್ಟ್‌ಕಟ್‌ ಇಲ್ಲಿವೆ ನೋಡಿ - Vistara News

ಲೈಫ್‌ಸ್ಟೈಲ್

Office life | ಕಚೇರಿಯಲ್ಲಿ ಯಶಸ್ವಿಯಾಗಲು ಸೂತ್ರ ಬೇಕೆ? 7 ಶಾರ್ಟ್‌ಕಟ್‌ ಇಲ್ಲಿವೆ ನೋಡಿ

ಮನೆಯಷ್ಟೇ ಸಮಯವನ್ನು ಕಚೇರಿಯಲ್ಲೂ ಕಳೆಯುತ್ತೀರಿ. ಅಲ್ಲೂ ಬದುಕು ಚೆನ್ನಾಗಿರಬೇಕಲ್ಲವೇ? ಹಾಗಿದ್ದರೆ ಈ ಏಳು ಸೂತ್ರಗಳನ್ನು ಪಾಲಿಸಿ.

VISTARANEWS.COM


on

office life
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವೃತ್ತಿ ಬದುಕು ಎಂಬುದು ಎಲ್ಲರ ಬದುಕಿನ ಪ್ರಮುಖವಾದ ಅಧ್ಯಾಯ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂಬ ದಾಸವಾಣಿಯಿದ್ದರೂ, ಹೊಟ್ಟೆಯ ಹಿಟ್ಟಿಗಾಗಿಯೇ ಕೆಲಸ ಮಾಡುತ್ತಿರುವುದು ಅಸಲಿ ಸತ್ಯವಾದರೂ, ಮಾಡುವ ಕೆಲಸದಲ್ಲಿ ಯಾವಾಗಲೂ ಪ್ರೀತಿಯಿರಬೇಕು, ಅದು ಮನಸ್ಸಿಗೆ ಸಂತೋಷ ನೀಡುವಂತಿರಬೇಕು. ಅಪ್ಪಿತಪ್ಪಿ ವೃತ್ತಿ ಬದುಕು ಸಂತಸವನ್ನು ಕಸಿದುಕೊಂಡರೆ, ಖಂಡಿತ ಅದು ಖಾಸಗಿ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಬದುಕಿಗೆ ಅತ್ಯಮೂಲ್ಯವಾಗಿ ಬೇಕಾಗಿರುವ ಶಾಂತಿ, ನೆಮ್ಮದಿ, ಸಂತೋಷವನ್ನು ಕಸಿಯುತ್ತದೆ. ಆ ಮೂಲಕ ಅದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಹಾಗಾದರೆ, ಇಂತಹ ಸಮಸ್ಯೆ ನಮ್ಮ ಬದುಕಿನಲ್ಲಿ ಎದುರಾಗದಿರಲು ಏನು ಮಾಡಬೇಕು? ವೃತ್ತಿ ಬದುಕು ಚೆನ್ನಾಗಿರಲು ಹೇಗಿದ್ದರೆ ಚೆನ್ನ, ಅಥವಾ ಅಪ್ಪಟ ಪ್ರೊಫೆಶನಲ್‌ನಂತೆ ಬದುಕುವುದು ಹೇಗೆ? ಎಂಬ ಇತ್ಯಾದಿ ಗೊಂದಲಗಳಿದ್ದರೆ ಇದನ್ನು ಓದಿ.

೧. ನೀವು ಮಾಡುತ್ತಿರುವ ಕೆಲಸ, ಆಫೀಸ್ ಇಷ್ಟವಾಗುತ್ತಿಲ್ಲವೇ, ಮಾಡುತ್ತಿರುವ ಕೆಲಸದಲ್ಲಿ ಕೊಂಚವೂ ಸಂತೋಷ ಸಿಗುತ್ತಿಲ್ಲವೇ, ಅಥವಾ ಆಫೀಸ್‌ ಪರಿಸರವೇ ಮನಸ್ಸಿಗೆ ಹಿಂಸೆಯಾಗುತ್ತಿದೆಯೇ, ಹಾಗಾದರೆ ಕೆಲಸ ಬಿಡಿ. ಅಯ್ಯೋ ಹೀಗೆ ಹೇಳುವುದು ಸುಲಭ, ಆದರೆ, ಕೆಲಸ ಬಿಟ್ಟರೆ ಮುಂದೇನು ಎಂಬ ಗೊಂದಲವೇ? ಹಾಗಿದ್ದರೆ, ಖಂಡಿತ ನಿಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಿ ಅದಕ್ಕೆ ಪೂರಕವಾದ ಇತರ ಆಯ್ಕೆಯನ್ನು ಮಾಡಿಯೇ ಕೆಲಸ ಬಿಡಿ. ಯಾಕೆಂದರೆ, ಮನಸ್ಸಿಗೆ ಇಷ್ಟವಾಗದೆ, ಕಷ್ಟಪಡುತ್ತಾ ಕೆಲಸ ಮಾಡುವುದು ಯಾರಿಗೇ ಆದರೂ ಒಗ್ಗದು. ಅಂತಿಮವಾಗಿ ಸಂಬಳವಷ್ಟೇ ಮುಖ್ಯವಾದರೂ, ಕೆಲಸದ ತೃಪ್ತಿ, ಮನಸ್ಸಿನ ಸಂತೋಷ ಎಲ್ಲಕ್ಕಿಂತ ಮುಖ್ಯ. ಕೆಲಸ ಬಿಟ್ಟು ಮುಂದೆ ಸಾಗುವುದು ಬಹಳ ಸಾರಿ ನಿಮ್ಮ ಬದುಕಿನಲ್ಲಿ ಮಹತ್ತರ ತಿರುವನ್ನೇ ತರಬಹುದು.

೨. ಕಷ್ಟ ಪಟ್ಟು ಕೆಲಸ ಮಾಡುವುದೊಂದೇ ಯಶಸ್ಸಿನ ಕೀಲಿಕೈ. ಮುಂದಿನ ದಾರಿ ಸುಲಭವಾಗಲೆಂದು ಕೆಲವರ ಹಿಂದೆ ಮುಂದೆ ಸುಳಿಯುತ್ತಿದ್ದು ಬಕೆಟ್‌ ಹಿಡಿಯುವ ಕೆಲಸ ಮಾಡಬೇಡಿ. ಇಂಥದ್ದು ಬೇಗ ನಿಮ್ಮನ್ನು ಬೇರೆಯೇ ಥರದಲ್ಲಿ ಗುರುತಿಸುವಂತೆ ಮಾಡುತ್ತದೆ. ನಿಮ್ಮ ಶ್ರಮದಿಂದ ಮಾಡಿದ ಕೆಲಸಕ್ಕೂ ಹಣೆಪಟ್ಟಿ ಸಿಗುತ್ತದೆ. ಹಾಗಾಗಿ, ನಿಮಗೆ ಸಿಗುವ ಜವಾಬ್ದಾರಿಗಳನ್ನು ಸ್ವೀಕರಿಸಿ ಅವುಗಳತ್ತ ಗಮನ ಹರಿಸಿ. ನಿಮ್ಮನ್ನು ನೀವು ಗೌರವದಿಂದ ಕಂಡರೆ, ಕೆಲಸದ ಮೇಲೆ ಶ್ರದ್ಧೆ ಇದ್ದರೆ, ಖಂಡಿತ ಸಂಸ್ಥೆಯ ಕಣ್ಣಿಗೆ ಅದು ಕಂಡೇ ಕಾಣುತ್ತದೆ. ವೃಥಾ ಚಿಂತೆ ಬೇಡ.

೩. ಆಫೀಸ್‌ ಗಾಸಿಪ್‌ಗಳಿಗೆ ತಲೆ ಹಾಕಬೇಡಿ. ಯಾರಾದರೂ ನಿಮ್ಮ ಬಳಿ ಬಂದು ಗಾಸಿಪ್‌ ಸುದ್ದಿಗಳನ್ನು ಆಗಾಗ ಬಿತ್ತರಿಸುತ್ತಿದ್ದರೆ, ಹೂಂಗುಟ್ಟಿ. ಆದರೆ, ಸಂಭಾಷಣೆಯನ್ನು ಇನ್ನೊಂದು ಸ್ತರಕ್ಕೆ ಕೊಂಡೊಯ್ಯಬೇಡಿ. ಅಥವಾ ನೀವೇ ಗಾಸಿಪ್‌ಗಳಿಂದ ದೂರವಿರಿ.

೪. ಸುಮ್ಮನೆ ಮೂಲೆಯಲ್ಲಿ ತಲೆ ಬಗ್ಗಿಸಿ ಕೆಲಸ ಮಾಡುತ್ತಾ ದಿನ ಕಳೆಯಬೇಡಿ. ಎಲ್ಲರ ಜೊತೆ ಮಾತಾಡಿ. ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವೂ ಅಗತ್ಯವೇ. ಊಟದ ಸಮಯದಲ್ಲಿ, ಚಹಾ ಸಮಯ ಹೀಗೆ ಕೆಲಸದ ನಡುವೆ ಕೊಂಚ ಬ್ರೇಕ್‌ ತೆಗೆದುಕೊಂಡಾಗ ಮಾತಾಡಿ. ಯಾರಿಗ್ಗೊತ್ತು, ಕೆಲವೊಮ್ಮೆ ಸಹೋದ್ಯೋಗಿಯೇ ನಿಮ್ಮ ಆಪ್ತಮಿತ್ರನೂ ಆಗಬಹುದು.

೫. ಸಿಕ್ಕಾಪಟ್ಟೆ ಕೆಲಸದಲ್ಲಿ ಬ್ಯುಸಿಯಾಗುವುದೂ ಒಳ್ಳೆಯದಲ್ಲ. ಒಂದಿಷ್ಟು ಸಮಯ ನಿಮಗಾಗಿ ಅಂತ ಎತ್ತಿಡಿ. ನಿಮ್ಮ ಕುಟುಂಬಕ್ಕೆ, ನಿಮ್ಮ ಇಷ್ಟದ ಕೆಲಸಕ್ಕೆ, ದಿನಚರಿಗೆ ಅಂತೆಲ್ಲ ಸಮಯ ಹೊಂದಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ.

೬. ತಪ್ಪು ಮಾಡುವುದು ಓಕೆ. ಎಲ್ಲರಿಂದಲೂ ತಪ್ಪುಗಳಾಗುತ್ತದೆ. ಕೆಲಸದ ಸಮಯದಲ್ಲೂ ಹೀಗೆ ತಪ್ಪು ನಡೆಯುವ ಸಂಭವವಿದೆ. ಆದರೆ, ತಪ್ದಾಗ ಅದನ್ನು ಒಪ್ಪಿಕೊಂಡು, ಪಾಸಿಟಿವ್‌ ಆಗಿ ಮುನ್ನಡೆಯುವುದನ್ನು ಕಲಿಯಿರಿ. ಅಪಮಾನವೆಂದು ತೆಗೆದುಕೊಳ್ಳದೆ, ಮುಂದೆ ಇನ್ನಷ್ಟು ಜಾಗರೂಕತೆಯಿಂದ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಿರಿ.

೭. ಯಶಸ್ಸು ದಿನ ಬೆಳಗಾಗುವುದರೊಳಗೆ ಸಿಗುವುದಿಲ್ಲ. ಯಶಸ್ಸಿನ ಹಾದಿಯಲ್ಲಿ ಮೆಟ್ಟಿಲುಗಳಿರುತ್ತದೆ, ಕಲ್ಲುಮುಳ್ಳುಗಳ ಹಾದಿಯಿರುತ್ತದೆ. ಕಷ್ಟಪಟ್ಟರೆ ಮಾತ್ರ ಬೇಕಾದಲ್ಲಿ ತಲುಪಬಹುದು ಎಂಬುದು ನೆನಪಿಡಿ. ಇದಕ್ಕೆ ಶಾರ್ಟ್‌ಕಟ್‌ಗಳಿರುವುದಿಲ್ಲ. ಗುರಿಯಲ್ಲಿ ಫೋಕಸ್‌ ಇದ್ದರೆ ಸಾಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರ ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗುವ ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಈ ಕುರಿತ (Cooking oils) ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Cooking Oils
Koo

ಎಣ್ಣೆಯ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವ ಸತ್ಯವೇ ಆದರೂ, ಸಾಕಷ್ಟು ಆಹಾರಗಳಲ್ಲಿ ಇಂದು ವ್ಯಾಪಕವಾಗಿ ಎಣ್ಣೆಯ ಬಳಕೆಯಾಗುತ್ತದೆ. ಅದರಲ್ಲೂ ಕೆಲವು ಅಗ್ಗದ ಎಣ್ಣೆಗಳು ಇಂದು ಸಂಸ್ಕರಿಸಿದ ಆಹಾರಗಳ ಮೂಲಕ ನಮ್ಮ ಹೊಟ್ಟೆ ಸೇರುವುದು ನಮಗೆ ಗೊತ್ತೇ ಆಗುವುದಿಲ್ಲ. ನಿತ್ಯವೂ ಮನೆಗಳಲ್ಲಿ ಅಡುಗೆಗೆ ಒಳ್ಳೆಯ ಎಣ್ಣೆಯನ್ನು ನಾವು ಬಳಕೆ ಮಾಡುತ್ತೇವೆ ಎಂದು ನಾವು ಅಂದುಕೊಂಡರೂ, ಹೊರಗಿನಿಂದ ತರುವ ಕುರುಕಲು ತಿಂಡಿಗಳು, ಹೊರಗೆ ತಿನ್ನುವ ಆಹಾರಗಳು ಇತ್ಯಾದಿಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುವುದು ಸುಲಭವಾಗಿ ಸಿಗು ಎಣ್ಣೆಗಳೇ ಆಗಿವೆ. ಹೀಗಾಗಿ, ಒಂದಲ್ಲ ಒಂದು ಬಗೆಯಲ್ಲಿ ಅನಾರೋಗ್ಯಕರ ಎಣ್ಣೆ ನಾವು ಬೇಡವೆಂದರೂ ನಮ್ಮ ಹೊಟ್ಟೆ ಸೇರುತ್ತವೆ. ಬನ್ನಿ, ಯಾವೆಲ್ಲ ಎಣ್ಣೆಗಳನ್ನು ನಾವು ನಮ್ಮ ಆಹಾರದಲ್ಲಿ ನಿತ್ಯವೂ ಬಳಸಬಾರದು (Cooking oils) ಎಂಬುದನ್ನು ನೋಡೋಣ.

Palm oil

ಪಾಮ್‌ ಎಣ್ಣೆ

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸಂಸ್ಕರಿಸಿದ ಆಹಾರಗಳಲ್ಲಿ, ಪ್ಯಾಕೇಟ್‌ಗಳಲ್ಲಿ ಬಳಸುವ ಎಣ್ಣೆ ಬಹುಪಾಲು ಪಾಮ್‌ ಎಣ್ಣೆ ಎಂಬುದು ನಿಜವಾದರೂ, ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವ ಎಣ್ಣೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಕಡಿಮೆ ದರ ಹಾಗೂ ಸುಲಭವಾಗಿ ದೊರೆಯಬಲ್ಲ ಅಗ್ಗದ ಎಣ್ಣೆ ಇದಾಗಿರಿವುದರಿಂದ ಇದನ್ನು ಇಂದು ಆಹಾರ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಇದರಲ್ಲಿ ಅತ್ಯಂತ ಹೆಚ್ಚು ಸ್ಯಾಚುರೇಟೆಡ್‌ ಫ್ಯಾಟ್‌ ಇರುವುದರಿಂದ ಇದು ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಇದು ಅತ್ಯಂತ ಕೆಟ್ಟದ್ದು.

Soybean oil

ಸೋಯಾಬೀನ್‌ ಎಣ್ಣೆ

ಕಡಿಮೆ ವಾಸನೆಯುಳ್ಳ ಹಾಗೂ ಅತ್ಯಂತ ಕಡಿಮೆ ಬೆಲೆಗೆ ವ್ಯಾಪಕವಾಗಿ ದೊರೆಯುವ ಸೋಯಾಬೀನ್‌ ಎಣ್ಣೆಯಲ್ಲಿ ಒಮೆಗಾ 6 ಫ್ಯಾಟಿ ಆಸಿಡ್‌ಗಳು ಹೇರಳವಾಗಿವೆ. ಒಮೆಗಾ 3 ಫ್ಯಾಟಿ ಆಸಿಡ್‌ನ ಅದೇ ಗುಣಗಳನ್ನು ಇದೂ ಹೊಂದಿರುವುದರಿಂದ ಹಾಗೂ ಉರಿಯೂತವನ್ನು ಹೆಚ್ಚಿಸುವ ಸಂಭವ ಇದರಲ್ಲಿ ಹೆಚ್ಚಿರುವುದರಿಂದ ಈ ಎಣ್ಣೆಯ ಬಳಕೆ ಅತಿಯಾಗಬಾರದು. ಒಮೆಗಾ 3 ಫ್ಯಾಟಿ ಆಸಿಡ್‌ನ ಮೂಲಗಳ ಜೊತೆಗೆ ಸಮತೋಲನದಲ್ಲಿ ಇದನ್ನು ಸೇಔಇಸುವುದು ಉತ್ತಮ. ಇದರ ಅತಿಯಾದ ಬಳಕೆ ಸಲ್ಲದು.

Cottonseed oil

ಹತ್ತಿಬೀಜದ ಎಣ್ಣೆ

ಹತ್ತಿಯನ್ನು ತೆಗೆದ ಮೇಳೆ ಅದರ ಬೀಜದಿಂದ ಮಾಡುವ ಎಣ್ಣೆಯಾದ ಕಾಟನ್‌ ಸೀಡ್‌ ಆಯಿಲ್‌ ಅಥವಾ ಹತ್ತಿಬೀಜದ ಎಣ್ಣೆ ಬಹಳಷ್ಟು ಸಂಸ್ಕರಿಸಿದ ಆಹಾರಗಳಲ್ಲಿ ವ್ಯಾಪಕವಾಗಿ ಇಂದು ಬಳಕೆಯಾಗುತ್ತಿದೆ. ಇದರಲ್ಲಿಯೂ ಒಮೆಗಾ 6 ಫ್ಯಾಟಿ ಆಸಿಡ್‌ ಹೇರಳವಾಗಿದೆ. ಹಾಗಾಗಿ ಇದನ್ನು ಅತಿಯಾಗಿ ಬಳಸುವುದರಿಂದ ಉರಿಯೂತ ಹಾಗೂ ಇತರ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Benefits of Tender Coconut: ಎಳನೀರು ಹೀರುವುದರಿಂದ ದೇಹಕ್ಕೆ ಏನೇನು ಲಾಭ ಗೊತ್ತೇ?

ವೆಜಿಟೆಬಲ್‌ ಆಯಿಲ್

ಈ ಸಾಮಾನ್ಯೀಕರಿಸಿದ ಹೆಸರಿಂದ ಬಹುತೇಕರು ಮೋಸಕ್ಕೆ ಒಳಗಾಗುವುದೇ ಹೆಚ್ಚು. ವೆಜಿಟೆಬಲ್‌ ಆಯಿಲ್‌ ಅಂದಾಕ್ಷಣ, ಆರೋಗ್ಯಕ್ಕೆ ಸಮಸ್ಯೆಯೇನಿಲ್ಲ ಎಂದು ಅಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದರೂ, ಈ ಎಣ್ಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋಳ, ಸೋಯಾಬೀನ್‌ ಹಾಗೂ ಸೂರ್ಯಕಾಂತಿ ಎಣ್ಣೆ ಬಳಕೆಯಾಗುತ್ತದೆ. ತೀರಾ ಕೆಟ್ಟದ್ದೇನೂ ಅಲ್ಲದಿದ್ದರೂ, ರಿಫೈನ್ಡ್‌ ಎಣ್ಣೆ ಇದಾಗಿರುವುದರಿಂದ ಹಾಗೂ ಸಾಕಷ್ಟು ರಾಸಾಯನಿಕಗಳು ಈ ಸಂದರ್ಭ ಬಳಕೆಯಾಗಿರುವುದರಿಂದ, ಒಮೆಗಾ 6 ಫ್ಯಾಟಿ ಆಸಿಡ್‌ ಹೆಚ್ಚಿರುವುದರಿಂದ ಈ ಎಣ್ಣೆಯೂ ಹೆಚ್ಚು ಬಳಕೆ ಮಾಡುವುದು ಒಳ್ಳೆಯದಲ್ಲ. ನಿತ್ಯದ ಉಪಯೋಗಕ್ಕೆ ಈ ಎಣ್ಣೆ ಅಷ್ಟು ಯೋಗ್ಯವಲ್ಲ.

Hydrogenated oils

ಹೈಡ್ರೋಜಿನೇಟೆಡ್‌ ಆಯಿಲ್‌ಗಳು

ಹೈಡ್ರೋಜಿನೇಷನ್‌ ಎಂಬ ಪ್ರಕ್ರಿಯೆಗೆ ಒಳಪಡಿಸುವ ಎಣ್ಣೆಗಳು ಇದಾಗಿದ್ದು, ಇದರಲ್ಲಿ ದ್ರವರೂಪದ ಎಣ್ಣೆಯನ್ನು ಘನರೂಪಕ್ಕೆ ಪರಿವರ್ತಿಸಲಾಗುತ್ತದೆ. ಇಂತಹ ಎಣ್ಣೆಗಳಲ್ಲಿ ಟ್ರಾನ್ಸ್‌ ಫ್ಯಾಟ್‌ ಅಧಿಕವಾಗಿರುವುದಲ್ಲದೆ, ಎಲ್‌ಡಿಎಲ್‌ ಕೊಲೆಸ್ಟೆರಾಲ್‌ ಮಟ್ಟವನ್ನು ಇದು ಏರಿಸುವ ಕಾರಣ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

Continue Reading

ಆರೋಗ್ಯ

Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಈ ಕುರಿತ (Pain relievers) ಮಾಹಿತಿ ಇಲ್ಲಿದೆ.

VISTARANEWS.COM


on

Pain relievers
Koo

ಪ್ರಕೃತಿಯಲ್ಲಿ ನಮ್ಮ ನೋವುಗಳಿಗೆಲ್ಲವೂ ಮದ್ದಿವೆ. ಪ್ರಕೃತಿಯ ಸಾನಿಧ್ಯ ನಮಗೆ ಮಾನಸಿಕ ನೆಮ್ಮದಿಯನ್ನು ನೀಡುವ ಜೊತೆಗೆ ದೇಹಕ್ಕೆ ಆದ ನೋವನ್ನೂ ಕಡಿಮೆ ಮಾಡಲು ಮೂಲಿಕೆಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಮನುಷ್ಯ ತನ್ನ ಆರೋಗ್ಯದ ಸಮಸ್ಯೆಗಳಿಗೆ ವೈದ್ಯ ಜಗತ್ತಿನಲ್ಲಿ ಸಾಕಷ್ಟು ಮುಂದುವರಿದಿದ್ದರೂ, ಕೆಲವು ಸರಳವಾದ ಪ್ರಾಕೃತಿಕ ಆಹಾರಗಳು ಅವನ ಕೈಯನ್ನು ಬಿಡುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಪ್ರಕೃತಿ ಆಸರೆಯಾಗುವ ಪರಿಯೇ ಅದ್ಭುತ. ನೋವು, ಊದಿಕೊಂಡ ಗಾಯಗಳಿಂದಾದ ನೋವು ಇತ್ಯಾದಿ ಸಮಸ್ಯೆಗಳಿಗೆ ಕೆಲವು ಸರಳ ಮನೆಮದ್ದುಗಳ ಸಹಾಯವೂ ಕೂಡ ನಮ್ಮ ದೇಹದ ನೋವುಗಳನ್ನು ಸಾಕಷ್ಟು ಶಮನಗೊಳಿಸುವ ತಾಕತ್ತನ್ನು ಹೊಂದಿವೆ. ಮಾನವನು ಕಂಡು ಹಿಡಿದ ನೋವು ನಿವಾರಕ ಮಾತ್ರೆಗಳಿಂದ ತಕ್ಷಣದ ಪರಿಹಾರ ದಕ್ಕಿದರೂ, ಅದರಿಂದ ಸಾಕಷ್ಟು ಅಡ್ಡಪರಿಣಾಮಗಳೂ ಇವೆ. ಹಾಗಾಗಿ, ಪ್ರಕೃತಿಯೇ ನಮಗೆ ನೀಡಿದ ಕೆಲವು ನೋವು ನಿವಾರಕಗಳೂ ಕೂಡ ಸಾಕಷ್ಟು ನೋವುಗಳನ್ನು ಕಡಿಮೆ ಮಾಡುವಲ್ಲಿ ಸಫಲವಾಗುತ್ತದೆ. ಬನ್ನಿ, ಪ್ರಕೃತಿದತ್ತ ನೋವು ನಿವಾರಕವಾಗಿ ಯಾವೆಲ್ಲ ಆಹಾರಗಳು ಕೆಲಸ ಮಾಡುತ್ತವೆ (Pain relievers) ಎಂಬುದನ್ನು ನೋಡೋಣ.

ginger

ಶುಂಠಿ

ಪ್ರಕೃತಿದತ್ತ ಆಂಟಿ ಇನ್‌ಫ್ಲಮೇಟರಿ ಗುಣಗಳುಳ್ಳ ಆಹಾರಗಳ ಪೈಕಿ ಶುಂಠಿ ಪ್ರಮುಖವಾದದ್ದು. ಇದರಲ್ಲಿ ಅತ್ಯಂತ ಶಕ್ತಿಯುತವಾದ ನೋವು ನಿವಾರಕ ಗುಣಗಳಿದ್ದು ಮಾಂಸಖಂಡಗಳ ಸೆಳೆತ, ಉರಿಯೂತ, ನೋವುಗಳನ್ನು ಇದು ಶಮನಗೊಳಿಸುವಲ್ಲಿ ನೆರವಾಗುತ್ತದೆ. ನೋವುಗಳಿದ್ದಾಗ ರಾತ್ರಿ ಮಲಗುವ ಮೊದಲು ಶುಂಠಿಯ ಚಹಾ ಕುಡಿಯುವ ಮೂಲಕ ಒಳ್ಲೆಯ ನಿದ್ರೆ ಹಾಗೂ ನೋವಿನಿಂದ ಕೊಂಚ ಆರಾಮ ಪಡೆಯಬಹುದು.

Anti-Inflammatory Properties Health Benefits Of Raw Turmeric

ಹಸಿ ಅರಿಶಿನ

ಮಸಾಲೆಯಾಗಿ ನಾವು ನಿತ್ಯ ಅರಿಶಿನವನ್ನು ಉಪಯೋಗಿಸಿದರೂ ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ನೋವುಗಳಿಗೆ ಒಳ್ಳೆಯ ಔಷಧಿ. ಇದರಲ್ಲಿ ಆಂಟಿಬಯಾಟಿಕ್‌ ಹಾಗೂ ಆಂಟಿಸೆಪ್ಟಿಕ್‌ ಗುಣಗಳು ಹೇರಳವಾಗಿವೆ. ಈ ಗುಣಗಳು ನೋವುನಿವಾರಕಗಳಂತೆ ಕೆಲಸ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವಲ್ಲಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ಅರಿಶಿನ ಹಾಕಿದ ಹಾಲನ್ನು ಕುಡಿಯುವ ಮೂಲಕ ಅರಿಶಿನದ ಲಾಭವನ್ನು ಪಡೆಯಬಹುದು.

Anise

ಸೋಂಪು

ಹೊಟ್ಟೆಯುಬ್ಬರಕ್ಕೆ ಹೇಳಿ ಮಾಡಿಸಿದಂಥ ಸೋಂಪು ಅಸಿಡಿಟಿ ಹಾಗೂ ಗ್ಯಾಸ್‌ನ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು. ಹೊಟ್ಟೆಯ ಸಮಸ್ಯೆಗಳು, ಗ್ಯಾಸ್‌ನಿಂದಾಗುವ ನೋವು, ಮಾಂಸಖಂಡಗಳ ಸೆಳೆತ ಇತ್ಯಾದಿ ನೋವುಗಳಿಗೆ ಸೋಂಪು ಅತ್ಯುತ್ತಮ ನೋವು ನಿವಾರಕವಾಗಿ, ಗ್ಯಾಸ್‌ನಿಂದ ಮುಕ್ತಿ ನೀಡುವ ಮನೆಮದ್ದಾಗಿ ಕೆಲಸ ಮಾಡುತ್ತದೆ. ಸೋಂಪನ್ನು ನೀರಿನಲ್ಲಿ ಕುದಿಸಿ ಸೋಸಿ ಕುಡಿಯುವ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅತಿಯಾಗಿ ಊಟ ಮಾಡಿದಾಗ, ಹೊರಗೆ ತಿಂದು ಬಂದಾಗ, ಸಮಾರಂಭಗಳಲ್ಲಿ ಊಟ ಮಾಡಿದಾಗ ಆಗುವ ಹೊಟ್ಟೆಯುಬ್ಬರಕ್ಕೆ ತಕ್ಷಣವೇ ಹೀಗೆ ಮಾಡುವ ಮೂಲಕ ಸಮಾಧಾನ ಸಿಗಬಹುದು.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

ಸಣ್ಣ ಪುಟ್ಟ ನೋವುಗಳಿಗೆ, ಯಾವಾಗಲೂ ಪ್ರಕೃತಿದತ್ತ ಇಂತಹ ನೋವು ನಿವಾರಕಗಳು, ಆಂಟಿಸೆಪ್ಟಿಕ್‌ ಗುಣಗಳ ಆಹಾರಗಳನ್ನು ನಮ್ಮ ನಿತ್ಯಾಹಾರದಲ್ಲಿ ಅಳವಡಿಸುವ ಮೂಲಕ ಪರಿಹಾರ ಕಂಡುಕೊಳ್ಳುವುದು ಯಾವಾಗಲೂ ಒಳ್ಳೆಯದು. ಅತಿಯಾದ ಮಾತ್ರೆಗಳ ದಾಸರಾಗುವುದು, ಅಥವಾ ಸಣ್ಣ ಪುಟ್ಟ ನೋವುಗಳಿಗೂ ಮಾತ್ರೆಗಳ ಸಹಾಯ ಪಡೆಯುವುದರಿಂದ ಅಡ್ಡ ಪರಿಣಾಮಗಳನ್ನು ನಾವು ಅನುಭವಿಸಲೇ ಬೇಕಾಗುತ್ತದೆ. ಆದಷ್ಟೂ ಪ್ರಕೃತಿಯ ಕೊಡುಗೆಗಳನ್ನು ಸಮರ್ಪಕವಾಗಿ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸುವುದನ್ನು ನಾವು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂಬುದನ್ನು ಹಿರಿಯರಾದಿಯಾಗಿ ವೈದ್ಯಜಗತ್ತೂ ಕೂಡ ಒಪ್ಪಿಕೊಂಡ ಸತ್ಯ.

Continue Reading

ಫ್ಯಾಷನ್

Torn Jeans Styling Tips: ಟೊರ್ನ್‌ ಜೀನ್ಸ್‌ ಪ್ಯಾಂಟ್‌ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ 5 ಪ್ರಮುಖ ಸಂಗತಿಗಳು

ಈ ಬೇಸಿಗೆಯಲ್ಲಿ ಟೊರ್ನ್‌ ಜೀನ್ಸ್‌ ಪ್ಯಾಂಟ್‌ (Torn Jeans Styling Tips) ಖರೀದಿಸುವವರು ಹಾಗೂ ಧರಿಸುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಇವನ್ನು ಧರಿಸುವವರು ಒಂದಿಷ್ಟು ಅಂಶಗಳನ್ನು ಮರೆಯದೇ ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವು ಯಾವುವು? ಇಲ್ಲಿದೆ ವಿವರ.

VISTARANEWS.COM


on

Torn Jeans Styling Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟೊರ್ನ್‌ ಜೀನ್ಸ್‌ ಧರಿಸುವ ಹುಡುಗಿಯರು (Torn Jeans Styling Tips) ಕೇವಲ ಫ್ಯಾಷನ್‌ಗೆ ಮಾತ್ರ ಬೆಲೆ ನೀಡದೇ, ಇವನ್ನು ಧರಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೈಲಿಂಗ್‌ ಮಾಡುವುದು ಉತ್ತಮ ಎನ್ನುತ್ತಾರೆ. ಇಲ್ಲವಾದಲ್ಲಿ, ನೋಡುಗರ ಕೆಂಗಣ್ಣಿಗೆ ಗುರಿಯಾಗಬಹುದು ಅಥವಾ ಧರಿಸುವವರಿಗೆ ಮುಜುಗರವಾಗಬಹುದು. ಹಾಗಾಗಿ ಈ ಪ್ಯಾಂಟ್‌ ಪ್ರಿಯರು ಆದಷ್ಟೂ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅಂದಹಾಗೆ, ಟೊರ್ನ್‌ ಜೀನ್ಸ್‌ ಫ್ಯಾಷನ್‌ ನಿನ್ನೆ ಮೊನ್ನೆಯದಲ್ಲ! ಸುಮಾರು ವರ್ಷಗಳಿಂದಲೂ ಇದು ನಾನಾ ಅವತಾರಗಳಲ್ಲಿ ಮಾಡರ್ನ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಕೆಲವು ಚಿಂದಿ ಉಡುಗೆಯಂತೆ ಕಂಡರೇ, ಇನ್ನು ಕೆಲವು ಫ್ಯಾಷೆನಬಲ್‌ ಪ್ಯಾಂಟ್‌ನಂತೆ ಕಾಣಬಹುದು. ಇದು ಆಯ್ಕೆ ಮಾಡುವವರ ಹಾಗೂ ಧರಿಸುವವರ ಮೇಲೆ ನಿರ್ಧರಿತವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಇಂದಿನ ಜೆನ್‌ ಜಿ ಹುಡುಗಿಯರ ಫೇವರೇಟ್‌ ವಾರ್ಡ್ರೋಬ್‌ ಲಿಸ್ಟ್‌ನಲ್ಲೂ ಇವು ಸ್ಥಾನ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಟೊರ್ನ್‌ ಪ್ಯಾಂಟ್‌ ಆಯ್ಕೆ ಹೀಗಿರಲಿ

ಟೊರ್ನ್‌ ಪ್ಯಾಂಟ್‌ ಆಯ್ಕೆ ಮಾಡುವಾಗ ಮೊದಲು ಆ ಪ್ಯಾಂಟ್‌ನ ವಿನ್ಯಾಸ ಅದರಲ್ಲೂ, ಯಾವ ಮಟ್ಟಿಗೆ ಟೊರ್ನ್‌ ಆಗಿದೆ ಎಂಬುದನ್ನು ಮೊದಲು ಗಮನಿಸಬೇಕು. ಯಾವ ಭಾಗದಲ್ಲಿ ಈ ಟೊರ್ನ್‌ ವಿನ್ಯಾಸವಿದೆ. ಕಾಲಿನ ಭಾಗದಲ್ಲಾದರೇ ಓಕೆ. ಅದೇ ತೊಡೆ ಅಥವಾ ಹಿಂಭಾಗದಲ್ಲಿ ಇದ್ದರೇ ಖರೀಸಬೇಡಿ. ಇದ್ದರೂ ಧರಿಸುವುದನ್ನು ಆವಾಯ್ಡ್‌ ಮಾಡಿ. ಇದು ನಿಮ್ಮನ್ನು ಇತರರ ಮುಂದೆ ಮುಜುಗರಕ್ಕೆ ಈಡುಮಾಡಬಹುದು.

Torn Jeans Styling Tips

ಸಂದರ್ಭಕ್ಕೆ ತಕ್ಕಂತೆ ಧರಿಸಿ

ಯಾವುದೇ ಟ್ರೆಡಿಷನಲ್‌ ಕಾರ್ಯಕ್ರಮಕ್ಕೆ ಇವನ್ನು ಧರಿಸಬೇಡಿ. ಅದರಲ್ಲೂ ಶುಭ ಸಮಾರಂಭಗಳಲ್ಲಿ ಈ ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳಲೇಬೇಡಿ. ಹಿರಿಯರ ಸಮ್ಮುಖದಲ್ಲಿ ನಡೆಯುವ ಪ್ರೋಗ್ರಾಂಗಳಲ್ಲೂ ಕೂಡ ಇವನ್ನು ಧರಿಸಬೇಡಿ. ಅವರ ಕಂಗೆಣ್ಣಿಗೆ ನೀವು ಗುರಿಯಾಗಬೇಕಾದಿತು.

Torn Jeans Styling Tips

ಚಿಂದಿ ಚಿಂದಿಯಾಗಿರುವ ಟೊರ್ನ್‌ ಪ್ಯಾಂಟ್‌ ಬೇಡ

ಫ್ಯಾಷನ್‌ನಲ್ಲಿದೆ ಎಂದು ಚಿಂದಿ ಚಿಂದಿಯಾಗಿರುವ ಟೊರ್ನ್‌ ಪ್ಯಾಂಟ್‌ ಆಯ್ಕೆ ಬೇಡ. ಇವು ನಿಮ್ಮನ್ನು ಬಿಕ್ಷುಕರಂತೆ ಬಿಂಬಿಸಬಹುದು. ನೀವು ಹುಡುಗ ಅಥವಾ ಹುಡುಗಿಯಾಗಿರಬಹುದು. ಅದು ಯಾರೇ ಆಗಿರಲಿ, ನಿಮ್ಮ ಘನತೆಗೆ ತಕ್ಕುದಾದುದಲ್ಲ ಎಂಬುದು ನೆನಪಿರಲಿ. ಕಚೇರಿಗಂತೂ ಧರಿಸುವುದೇ ಬೇಡ. ಆಫೀಸ್‌ನ ಮೀಟಿಂಗ್‌ಗಳಲ್ಲೂ ಇವನ್ನು ಧರಿಸಬೇಡಿ.

Torn Jeans Styling Tips

ಔಟಿಂಗ್‌ -ವೀಕೆಂಡ್‌ಗೆ ಮಾತ್ರ ಸೀಮಿತವಾಗಿರಲಿ

ಸ್ನೇಹಿತರೊಂದಿಗೆ ಅಥವಾ ಔಟಿಂಗ್‌-ವೀಕೆಂಡ್‌ ಹೋಗುತ್ತಿದ್ದಲ್ಲಿ ಆಗ ಮಾತ್ರ ಟೊರ್ನ್‌ ಪ್ಯಾಂಟ್‌ ಧರಿಸಿ. ಇದು ಹಾಲಿಡೇ ಲುಕ್‌ಗೂ ಮ್ಯಾಚ್‌ ಆಗುತ್ತದೆ. ಫ್ಯಾಷೆನಬಲ್‌ ಆಗಿ ಕಾಣಿಸುತ್ತದೆ.

ಇದನ್ನೂ ಓದಿ: Wedding Season Hair Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್‌ ಹೇರ್‌ ಎಕ್ಸ್‌ಟೆನ್ಷನ್ಸ್‌!

ಟೊರ್ನ್‌ ಪ್ಯಾಂಟ್‌ ಲೆಂಥ್‌

ಕೇಪ್ರಿಸ್‌ನಂತಿರುವ, ಆಂಕೆಲ್‌ ಲೆಂಥ್‌ ಅಥವಾ ಶಾರ್ಟ್ಸ್‌ ಟೊರ್ನ್‌ ಲೆಂಥ್‌ನವು ಇಂದು ಟ್ರೆಂಡ್‌ನಲ್ಲಿವೆ. ಸೀಸನ್‌ಗೆ ಹೊಂದುವಂತದ್ದನ್ನು ಸೆಲೆಕ್ಟ್‌ ಮಾಡಬಹುದು. ಇವಕ್ಕೆ ಸೂಕ್ತ ಟಾಪ್‌ಗಳನ್ನು ಮ್ಯಾಚ್‌ ಮಾಡಬಹುದು. ಒಟ್ಟಿನಲ್ಲಿ, ನಿಮ್ಮ ಪಸನಾಲಿಟಿಗೆ ಹೊಂದುವಂತದ್ದನ್ನು ಮಾತ್ರ ಧರಿಸಿ, ಕಾಣಿಸಿಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ದೇಶ

Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

Covishield Vaccine: ಕೊರೊನಾ ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮವನ್ನು ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಎಂದು ಹೇಳಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

VISTARANEWS.COM


on

Covishield Vaccine
Koo

ನವದೆಹಲಿ: ಕೊರೊನಾ (Covid 19) ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟು ಮಾಡಬಹುದು ಎಂದು ಲಸಿಕೆ ತಯಾರಕರು ಇಂಗ್ಲೆಂಡ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಇರಬಹುದು ಎಂಬ ಅನುಮಾನ ಕಾಡಿದ್ದು, ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

ವೇಣುಗೋಪಾಲನ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 2021ರಲ್ಲಿ ಇವರ ಪುತ್ರಿ 20 ವರ್ಷದ ಕಾರುಣ್ಯ ಕೋವಿಶೀಲ್ಡ್ ಪಡೆದ ಬಳಿಕ ಸಾವನ್ನಪ್ಪಿದ್ದರು. ಆಸ್ಟ್ರಾಜೆನಿಕಾ ಸಂಸ್ಥೆ ಬಹಳ ತಡವಾಗಿ ಅಂದರೆ ಹಲವರು ಜೀವ ಕಳೆದುಕೊಂಡ ನಂತರ ತನ್ನ ಲಸಿಕೆಯ ಲೋಪದೋಷಗಳನ್ನು ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ ದೇಶದಲ್ಲಿ ವ್ಯಾಪಕವಾಗಿ ಹಂಚಿತ್ತು.

ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ನೀಡಿ 15 ಯುರೋಪಿಯನ್ ದೇಶಗಳು ಕೋವಿಶೀಲ್ಡ್‌ ಬಳಕೆಗೆ ನಿಷೇಧ ಹೇರಿದ ಬಳಿಕವಾದರೂ ಸೆರಂ ಇನ್‌ಸ್ಟಿಟ್ಯೂಟ್‌ ಈ ಲಸಿಕೆಯ ಪೂರೈಕೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇದರಿಂದ ತೊಂದರೆಗೊಳಗಾಗಿ ತಮ್ಮವರನ್ನು ಕಳೆದುಕೊಂಡ ಅನೇಕ ಪೋಷಕರು ನ್ಯಾಯಾಲಯಗಳಲ್ಲಿ ಹೋರಾಟ ಮಾಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ವೇಣುಗೋಪಾಲನ್ ಹೇಳಿದ್ದಾರೆ. ಈಗಾಗಲೇ ಈ ಲಸಿಕೆಯಿಂದ ಜೀವ ಕಳೆದುಕೊಂಡ ಸಂತ್ರಸ್ತರ 8 ಕುಟುಂಬಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಸೆರಮ್ ಇಸ್ಟಿಟ್ಯೂಟ್‌ನ ಪೂನಾವಾಲಾ ಅವರು ತಾವು ಮಾಡಿದ ಪಾಪಗಳಿಗೆ ಉತ್ತರ ನೀಡಬೇಕು. ಅವರ ತಪ್ಪಿನಿಂದ ಬಲಿಯಾದ ಜೀವಗಳಿಗೆ ಉತ್ತರ ನೀಡಬೇಕು ಎಂದು ಗೋವಿಂದನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಈ ಲಸಿಕೆಗೆ ಅನುಮೋದನೆ ನೀಡಿದ ಸರ್ಕಾರಿ ಅಧಿಕಾರಿಗಳ ಬಗ್ಗೆಯೂ ಅವರು ಕಿಡಿ ಕಾರಿದ್ದಾರೆ. ಹಾಗೆಯೇ 2021ರಲ್ಲಿ ರಚನಾ ಗಂಗು ಎಂಬವರು ಕೂಡ ತಮ್ಮ 18 ವರ್ಷದ ಮಗಳು ರಿತೈಕಾಳನ್ನು ಕಳೆದು ಕೊಂಡಿದ್ದು, ಇದಕ್ಕೂ ಕೋವಿಶೀಲ್ಡ್‌ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಈ ಹಿಂದೆಯೂ ಅನುಮಾನ ಮೂಡಿಸಿದ್ದವು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ಈ ವಿವಾದದ ಕುರಿತು ಇನ್ನೂ ಹೇಳಿಕೆ ನೀಡಿಲ್ಲ.

Continue Reading
Advertisement
Prajwal Revanna Case
ಕರ್ನಾಟಕ11 mins ago

Prajwal Revanna Case: ಎಚ್‌.ಡಿ.ರೇವಣ್ಣರಿಗೆ ಇಂದು ಜಾಮೀನು ಸಿಗುತ್ತಾ?

Sunil Narine
ಕ್ರೀಡೆ21 mins ago

Sunil Narine: ಅತ್ಯಧಿಕ ಸಿಕ್ಸರ್​ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸುನೀಲ್​ ನರೈನ್

Ranjani Raghavan Starrer Sathyam Kannada Movie Gets UA Certificate
ಸ್ಯಾಂಡಲ್ ವುಡ್28 mins ago

Ranjani Raghavan: ರಂಜನಿ ರಾಘವನ್ ಸಿನಿಮಾದಲ್ಲಿ ಇರಲಿದೆ ಪಂಜುರ್ಲಿ ದೈವದ ಕಥೆ! ಬಿಡುಗಡೆ ಯಾವಾಗ?

Terrorist Attack
ದೇಶ32 mins ago

Terrorist attack: ʼಮಗನ ಬರ್ತ್‌ ಡೇ ಪಾರ್ಟಿಗೆ ಪ್ಲ್ಯಾನ್‌ ಮಾಡಿದ್ದ, ಆದರೆ ಈಗ…ʼ ಕಣ್ಣೀರಿಟ್ಟ ಹುತಾತ್ಮ ಯೋಧನ ಕುಟುಂಬ

Samantha Ruth Prabhu Fake Viral Nude Pic
ಟಾಲಿವುಡ್48 mins ago

Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

Dr.Nagareddy Patil
ಕರ್ನಾಟಕ48 mins ago

Dr.Nagareddy Patil: ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

IPL 2024 Points Table
ಕ್ರೀಡೆ49 mins ago

IPL 2024 Points Table: ರಾಜಸ್ಥಾನ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೆಕೆಆರ್​; ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Terrorist attack
ದೇಶ2 hours ago

Terrorist Attack: “ಉಗ್ರರ ದಾಳಿ ಬಿಜೆಪಿ ಚುನಾವಣಾ ಪೂರ್ವ ಸ್ಟಂಟ್‌”; ನಾಲಿಗೆ ಹರಿಬಿಟ್ಟ ಪ್ರತಿಪಕ್ಷದ ಇಬ್ಬರು ನಾಯಕರು

Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ ಕೇಸ್‌ನ ಸಂತ್ರಸ್ತೆಯರಿಗಾಗಿ ಆರಂಭಿಸಿದ ಹೆಲ್ಪ್‌ಲೈನ್‌ಗೆ ಬರ್ತಿವೆ ಹಲವು ಕರೆಗಳು

Cooking Oils
ಆರೋಗ್ಯ2 hours ago

Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ14 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ15 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ15 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌