ಪ್ರೀತಿಯಲ್ಲಿ ಬೀಳೋರಿಗೆ ಗೊತ್ತಿರಬೇಕು ಈ 8 ಗುಟ್ಟುಗಳು! - Vistara News

ಲೈಫ್‌ಸ್ಟೈಲ್

ಪ್ರೀತಿಯಲ್ಲಿ ಬೀಳೋರಿಗೆ ಗೊತ್ತಿರಬೇಕು ಈ 8 ಗುಟ್ಟುಗಳು!

ಪ್ರೀತಿ ಎಂಬ ಸುಖ ಸಾಗರದಲ್ಲಿ ಈಜುವವರಿಗೆ, ಧುಮುಕಲು ಹೊರಟವರಿಗೆ ಗೊತ್ತಿರಲೇಬೇಕಾದ 8 ಗುಟ್ಟುಗಳು ಇಲ್ಲಿವೆ!

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇದನ್ನೂ ಓದಿ| ಸ್ವಿಮ್ಮಿಂಗ್‌ ದಿಗ್ಗಜ ಮೈಕೆಲ್‌ ಫೆಲ್ಪ್ಸ್‌ ಜನ್ಮದಿನಕ್ಕೆ ತಿಳಿಯಬೇಕಾದ ಸಾಧನೆಗಳಿವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

ನೈಸರ್ಗಿಕವಾಗಿ ಮಳೆಗಾಲದ ಆರಂಭದ (Benefits of Bamboo Shoots) ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇದು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಕಳಲೆ ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ.

VISTARANEWS.COM


on

Benefits of Bamboo Shoots
Koo

ಬಿದಿರು ಎನ್ನುತ್ತಿದ್ದಂತೆ ದೊಡ್ಡ ಮೆಳೆಗಳೇ (Benefits of Bamboo Shoots) ನಮಗೆ ನೆನಪಾಗುವುದು. ಆದರೆ ಈ ಬೃಹತ್‌ ಮೆಳೆಗಳೂ ಹಿಂದೊಮ್ಮೆ ಎಳೆಯವೇ ಆಗಿದ್ದವಲ್ಲ. ಅಂಥ ಎಳೆಯ ಬಿದಿರು ಅಥವಾ ಮೊಳಕೆಗಳನ್ನು ಕಳಲೆ ಎನ್ನಲಾಗುತ್ತದೆ. ನೈಸರ್ಗಿಕವಾಗಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇದು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ತಾಜಾ ಕಳಲೆಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಸೇವನೆಗೆ ಯೋಗ್ಯವಾದ ಇಂಥ ರುಚಿಕರ ಕಳಲೆಗಳನ್ನು ಸಾಂಪ್ರದಾಯಿಕವಾದ ಸಾಂಬಾರು, ಪಲ್ಯಗಳಿಂದ ಹಿಡಿದು, ಆಧುನಿಕ ಖಾದ್ಯಗಳವರೆಗೆ ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತದೆ.
ಸಸ್ಯಾದಿಗಳ ಮೊಳಕೆ ಮತ್ತು ಚಿಗುರುಗಳು ಭರಪೂರ ಪೋಷಕಾಂಶಗಳಿಂದ ತುಂಬಿರುತ್ತವೆ. ಬೆಳೆಯುವ ಸಸ್ಯಗಳಿಗೆ ಬೇಕೆಂಬ ಕಾರಣಕ್ಕಾಗಿ ನಿಸರ್ಗವೇ ಸೃಷ್ಟಿಸಿಕೊಂಡಿರುವ ಮಾರ್ಗವಿದು. ಪ್ರಕೃತಿಯ ಈ ಕೃತಿ ಮಾನವರಿಗೂ ಲಾಭದಾಯಕವಾಗುವುದಿದೆ. ಕಾರಣ, ಇವು ಪೌಷ್ಟಿಕತೆಯಲ್ಲಿ ಮಾತ್ರವಲ್ಲಿ ರುಚಿಯಲ್ಲೂ ಒಂದು ಕೈ ಮೇಲೆಯೇ ಇರುತ್ತವೆ. ಎಳೆಯ ಬಿದಿರು ಅಥವಾ ಕಳಲೆಯನ್ನೂ ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು. ಏನಿವೆ ಇದನ್ನು ತಿನ್ನುವುದರ ಲಾಭಗಳು ಎಂಬುದನ್ನು ಅರಿಯೋಣ

 Bamboo Shoots

ಏನಿವೆ ಇದರಲ್ಲಿ?

ಹಲವಾರು ರೀತಿಯ ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಇದು ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಸ್ಥೂಲವಾಗಿ ಹೇಳುವುದಾದರೆ, ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ದೇಹದಲ್ಲಿ ಕೊಬ್ಬು ಕಡಿಮೆ ಮಾಡಲೂ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಿಟ್ಯುಟರಿ ಮತ್ತು ಥೈರಾಯ್ಡ್‌ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಇವುಗಳ ಮಾತ್ರ ಹಿರಿದಾದದ್ದು. ಇದರ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ನೋಡುವುದಾದರೆ-

Constipation

ಮಲಬದ್ಧತೆ ನಿವಾರಣೆ

ಇದರಲ್ಲಿ ಹೆಚ್ಚಿನ ಪ್ರಮಾಣದ ಸೆಲ್ಯುಲೋಸ್‌ ಅಂಶದಿಂದಾಗಿ, ಜಠರ ಮತ್ತು ಕರುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಪಚನವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗಿ, ದೇಹದಲ್ಲಿ ಶೇಖರವಾದ ಕೊಬ್ಬೂ ಇಳಿಯುತ್ತದೆ. ಕಳಲೆಗೆ ಪ್ರೊಬಯಾಟಿಕ್‌ ಗುಣವೂ ಇರುವುದರಿಂದ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

Overweight man suffering from chest pain, high blood pressure, cholesterol level

ಕೊಲೆಸ್ಟ್ರಾಲ್‌ ಕಡಿತ

ದೇಹಕ್ಕೆ ಮಾರಕವಾದ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಕಡಿತ ಮಾಡುವಂಥ ಫೈಟೋಸ್ಟೆರೋಲ್‌ಗಳು ಕಳಲೆಯಲ್ಲಿವೆ. ಹಾಗಾಗಿ ಇದು ಬೇಡದ ಕೊಲೆಸ್ಟ್ರಾಲ್‌ ನಿವಾರಿಸುವುದು ಮಾತ್ರವಲ್ಲದೆ, ಒಟ್ಟಾರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಕೆ ಅಂಶದಿಂದಾಗಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಈ ತರಕಾರಿ ಸಹಾಯಕ.

ಕೊಲಾಜಿನ್‌ ವೃದ್ಧಿ

ಮಾನವ ಶರೀರದಲ್ಲಿ ಹೇರಳವಾಗಿರುವ ಖನಿಜಗಳ ಪೈಕಿ ಸತು ಮತ್ತು ಕಬ್ಬಿಣದ ನಂತರದ ಸ್ಥಾನ ಸಿಲಿಕಾಗೆ. ಎಳೆ ಬಿದಿರಿನಲ್ಲೂ ಈ ಅಂಶ ಧಾರಾಳವಾಗಿದೆ. ಸಿಲಿಕಾ ಅಂಶವು ಹೈಡ್ರಾಕ್ಸಿಪ್ರೊಲಿನ್‌ ಎಂಬ ಅಮೈನೊ ಆಮ್ಲದ ಉತ್ಪತ್ತಿಗೆ ಅಗತ್ಯವಾದದ್ದು. ಎಲಾಸ್ಟಿನ್‌ ಮತ್ತು ಕೊಲಾಜಿನ್‌ ಅಂಶಗಳನ್ನು ದೇಹದಲ್ಲಿ ಸಿದ್ಧಪಡಿಸಿಕೊಳ್ಳುವುದಕ್ಕೆ ಈ ಅಮೈನೊ ಆಮ್ಲವು ಅತ್ಯಗತ್ಯ.

Bone Health In Winter

ಮೂಳೆಗಳ ಬಲವೃದ್ಧಿ

ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಅಂಶವು ಹೇರಳವಾಗಿರುವ ಕಳಲೆಯಿಂದ ಮೂಳೆಗಳು ಟೊಳ್ಳಾಗದೆ ಬಲಗೊಳ್ಳುತ್ತವೆ. ಇದರಲ್ಲಿರುವ ವಿಟಮಿನ್‌ ಸಿ ಅಂಶದಿಂದಾಗಿ ಇತರ ಖನಿಜಗಳನ್ನು ಹೀರಿಕೊಳ್ಳಲು ಮೂಳೆಗಳಿಗೆ ನೆರವು ದೊರೆಯುತ್ತದೆ.

weight loss

ತೂಕ ಇಳಿಕೆ

ಈ ತರಕಾರಿ ಕ್ಯಾಲರಿ ಲೆಕ್ಕದಲ್ಲಿ ಕಡಿಮೆ ಇದ್ದು, ನಾರಿನಂಶ ಬೇಕಾದಷ್ಟಿದೆ. ಹಾಗಾಗಿ ಆರೋಗ್ಯಕರ ಮಾರ್ಗದಲ್ಲಿ ತೂಕ ಇಳಿಸುವ ಉದ್ದೇಶ ಇರುವವರಿಗೆ ಇದೊಂದು ಉತ್ತಮ ಆಯ್ಕೆ. ನಾರಿನಿಂದ ಕೂಡಿದ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಂಡು, ದೀರ್ಘ ಕಾಲದವರೆಗೆ ಹಸಿವಾಗದಂತೆ ದೇಹವನ್ನು ಕಾಪಾಡುತ್ತವೆ.

ಇದನ್ನೂ ಓದಿ: Coriander Benefits: ಚರ್ಮದ ಯಾವುದೇ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪು ಮದ್ದು

Continue Reading

ಫ್ಯಾಷನ್

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

ಬೇಸಿಗೆಯಲ್ಲಿ ಲೈಟ್‌ವೈಟ್‌ ಡಂಗ್ರೀಸ್‌ಗಳು ಕಾಲಿಟ್ಟಿದ್ದು (Dungarees Fashion In Summer), ಇವುಗಳೊಂದಿಗೆ ಸ್ಲಿವ್‌ಲೆಸ್‌ ಹಾಗೂ ಸಮ್ಮರ್‌ ಟಾಪ್‌ಗಳ ಕಾಂಬಿನೇಷನ್‌ ಹಿಟ್‌ ಅಗಿವೆ. ಇನ್ನು, ಈ ಸೀಸನ್‌ನಲ್ಲಿ ಇವುಗಳ ಮಿಕ್ಸ್‌ ಮ್ಯಾಚ್‌ ಟ್ರೆಂಡ್‌ಗೆ ತಕ್ಕಂತೆ ಹೇಗೆಲ್ಲಾ ಮಾಡಬಹುದು ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್‌ ಟಿಪ್ಸ್‌ ಹಾಗೂ ಐಡಿಯಾಗಳನ್ನು ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Dungarees Fashion In Summer
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೈಟ್‌ವೈಟ್‌ ಡಂಗ್ರೀಸ್‌ ಫ್ಯಾಷನ್‌ (Dungarees Fashion In Summer) ಕೊಂಚ ಬದಲಾವಣೆಗಳೊಂದಿಗೆ ಇದೀಗ ಬೇಸಿಗೆ ಫ್ಯಾಷನ್‌ಗೂ ಕಾಲಿಟ್ಟಿದೆ. ಹೌದು. ದಪ್ಪನೆಯ ಫ್ಯಾಬ್ರಿಕ್‌ನ ಡಂಗ್ರೀಸ್‌ಗಳು ಸೈಡಿಗೆ ಸರಿದಿದ್ದು, ಭಾರವಿಲ್ಲದ ತೆಳುವಾದ ಫ್ಯಾಬ್ರಿಕ್‌ನವು, ಸ್ಲಿವ್‌ಲೆಸ್‌ ಹಾಗೂ ಕ್ರಾಪ್‌ ಟಾಪ್‌ಗಳೊಂದಿಗೆ ಬಿಡುಗಡೆಗೊಂಡಿವೆ. ಅಷ್ಟು ಮಾತ್ರವಲ್ಲದೇ, ಬೇಕಾದಾಗ ಇವನ್ನೇ ನಾನಾ ರೀತಿಯಲ್ಲಿ ಧರಿಸುವ ಸ್ಟೈಲಿಂಗ್‌ ಕೂಡ ಪಾಪುಲರ್‌ ಆಗಿದೆ.
“ಡಂಗ್ರೀಸ್‌ ಫ್ಯಾಷನ್‌ (Dungarees Fashion) ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವು ಹುಡುಗಿಯರಿಗೆ ಮಾತ್ರ, ಈ ಫ್ಯಾಷನ್‌ ಇಷ್ಟವಾಗುತ್ತವೆ. ಇಂತಹವರು ಈ ಸೀಸನ್‌ಗೆ ಮ್ಯಾಚ್‌ ಆಗುವಂತಹ ನಾನಾ ಕಾಂಬಿನೇಷನ್‌ಗಳಲ್ಲಿ ಧರಿಸುತ್ತಿದ್ದಾರೆ. ಪ್ರಯೋಗಾತ್ಮಕ ಮಿಕ್ಸ್‌ ಮ್ಯಾಚ್‌ ಕಾನ್ಸೆಪ್ಟ್‌ನಲ್ಲಿ ಧರಿಸುತ್ತಿದ್ದಾರೆ. ಇದು ಈ ಸೀಸನ್‌ ಟ್ರೆಂಡ್‌ನಲ್ಲಿ ಸೇರಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಹಾಗಾದಲ್ಲಿ, ಯಾವ್ಯಾವ ಬಗೆಯ ಡಂಗ್ರೀಸ್‌ಗಳು ಈ ಸೀಸನ್‌ಗೆ ಎಂಟ್ರಿ ನೀಡಿವೆ ಹಾಗೂ ಈ ಸೆಕೆಗಾಲದಲ್ಲಿ ಇದನ್ನು ಧರಿಸುವವರು ಹೇಗೆಲ್ಲಾ ಮಿಕ್ಸ್‌ ಮ್ಯಾಚ್‌ ಮಾಡಿ ನಾನಾ ಬಗೆಯ ಕಾಂಬಿನೇಷನ್‌ನಲ್ಲಿ ಟ್ರೆಂಡ್‌ಗೆ ತಕ್ಕಂತೆ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್‌ ಟಿಪ್ಸ್‌ ಹಾಗೂ ಐಡಿಯಾಗಳನ್ನು ಇಲ್ಲಿ ನೀಡಿದ್ದಾರೆ.

Dungarees Fashion In Summer

ಕ್ರಾಪ್‌ ಟಾಪ್‌ ಜೊತೆ ಡಂಗ್ರೀಸ್‌

ಡಂಗ್ರೀಸ್‌ ಜೊತೆ ಕ್ರಾಪ್‌ ಟಾಪ್‌ಗಳನ್ನು ನಾನಾ ಬಗೆಯಲ್ಲಿ ಧರಿಸಬಹುದು. ಹೊಟ್ಟೆಯ ಮೇಲೆ ನಿಲ್ಲುವ ಈ ಕ್ರಾಪ್‌ ಟಾಪ್‌ಗಳು ಡಂಗ್ರೀಸ್‌ ಜೊತೆ ಮ್ಯಾಚ್‌ ಮಾಡಿದಾಗ ಕೊಂಚ ಗ್ಲಾಮರಸ್‌ ಲುಕ್‌ ನೀಡುತ್ತವೆ. ಲೈಟ್‌ ಹಾಗೂ ಪಾಸ್ಟೆಲ್‌ ಶೇಡ್‌ನವು ಟ್ರೆಂಡ್‌ನಲ್ಲಿವೆ. ಅವನ್ನು ಇವುಗಳೊಂದಿಗೆ ಧರಿಸಿದಾಗ ಟ್ರೆಂಡಿಯಾಗಿ ಕಾಣಿಸುತ್ತವೆ.

ಶಾರ್ಟ್‌ ಕಾಲರ್‌ಲೆಸ್‌ ಟೀ ಶರ್ಟ್ಸ್‌

ಕಾಲರ್‌ ಇಲ್ಲದ ಶಾರ್ಟ್‌ ಟೀ ಶರ್ಟ್‌ಗಳು ಡಂಗ್ರೀಸ್‌ ಜೊತೆ ಧರಿಸಬಹುದು. ಇವು ಬಿಸಿಲಲ್ಲಿ ಧರಿಸಿದಾಗ ಸೆಕೆಯಾಗುವುದಿಲ್ಲ. ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.

Dungarees Fashion In Summer

ಹಾಲ್ಟರ್‌ ನೆಕ್‌ ಟಾಪ್‌

ಡಂಗ್ರೀಸ್‌ ಜೊತೆ ಹಾಲ್ಟರ್‌ ನೆಕ್‌ಲೈನ್‌ ಇರುವಂತಹ ಟಾಪ್ ಕೂಡ ಧರಿಸಬಹುದು. ಇವು ಕೂಡ ಗ್ಲಾಮರಸ್‌ ಟಚ್‌ ನೀಡುವುದರೊಂದಿಗೆ ಸಖತ್‌ ಲುಕ್‌ ನೀಡುತ್ತವೆ. ಇವು ಈ ಜನರೇಷನ್‌ ಯುವತಿಯರ ಹೈ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿವೆ.

ರಾಂಪರ್‌ ಶೈಲಿ ಡಂಗ್ರೀಸ್‌ ಜೊತೆ ಮಿಕ್ಸ್‌ ಮ್ಯಾಚ್‌

ಇನ್ನು ರಾಂಪರ್‌ ಶೈಲಿಯ ಶಾರ್ಟ್‌ ಡ್ರೆಸ್‌ ಜೊತೆಗೆ ಚಿಕ್ಕ ಮಕ್ಕಳು ಧರಿಸುವ ವಿನ್ಯಾಸವಿರುವ ಫ್ಲೋರಲ್‌ ಮಿನಿ ಟಾಪ್‌ಗಳ ಕಾಂಬಿನೇಷನ್‌ ಕೂಡ ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಇವು ಔಟಿಂಗ್‌ ಹಾಗೂ ವೀಕೆಂಡ್‌ ಸ್ಟೈಲ್‌ನಲ್ಲಿ ಚೆನ್ನಾಗಿ ಕಾಣಿಸುತ್ತವೆ.

ತ್ರೀ ಫೋರ್ತ್‌ ಡಂಗ್ರೀಸ್‌

ಮಂಡಿವರೆಗೂ ಬರುವ ಡಂಗ್ರೀಸ್‌ಗೆ ಎಂದಿನಂತೆ ಚಿಕ್ಕ ಕ್ರಾಪ್‌ ಟಾಪ್‌ ಹಾಗೂ ಟೀ ಶರ್ಟ್‌ ಧರಿಸಬಹುದು. ಇವು ಕೂಡ ಯಂಗ್‌ ಲುಕ್‌ ನೀಡುತ್ತವೆ. ಈ ಸೀಸನ್‌ನ ಫ್ಯಾಷನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Dungarees Fashion In Summer

ಡಂಗ್ರೀಸ್‌ ಸ್ಟೈಲಿಂಗ್‌ ಹಾಗೂ ಮೇಕೋವರ್‌ ಟಿಪ್ಸ್‌

  • ಈ ಸೀಸನ್‌ನಲ್ಲಿ ಆದಷ್ಟೂ ಫ್ಲೋರಲ್‌ ಟಾಪ್‌ ಹಾಗೂ ಪಾಸ್ಟೆಲ್‌ ಶೇಡ್ಸ್‌ ಆಯ್ಕೆ ಮಾಡಿ.
  • ಹೇರ್‌ಸ್ಟೈಲ್‌ ಸೀಸನ್‌ಗೆ ತಕ್ಕಂತಿರಲಿ.
  • ಸಿಂಪಲ್‌ ಮೇಕಪ್‌ ನಿಮ್ಮದಾಗಿರಲಿ.
  • ಫುಟ್‌ವೇರ್‌ ಮ್ಯಾಚ್‌ ಆಗುವಂತಿರಲಿ.
  • ಮಿನಿಮಲ್‌ ಆಕ್ಸೆಸರೀಸ್‌ಗೆ ಆದ್ಯತೆ ನೀಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Kids Summer Travel Fashion: ಬೇಸಿಗೆಯಲ್ಲಿ ಹೀಗಿರಲಿ ಚಿಣ್ಣರ ಟ್ರಾವೆಲ್‌ ಫ್ಯಾಷನ್‌

Continue Reading

ಆರೋಗ್ಯ

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

ದೇಹದೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕಾದರೆ ನಮ್ಮ ನಾಲಿಗೆಯನ್ನೂ ತಿಳಿಯಬೇಕು ನಾವು. ಅದರ ಬಣ್ಣ ಮತ್ತು ಮೇಲ್ಮೈ ಹೇಗಿದೆ ಎನ್ನುವುದರ ಮೇಲೆ ಬಹಳಷ್ಟು ವಿಷಯಗಳನ್ನು ತಿಳಿಯಬಹುದು. ಏನು ಮಾಹಿತಿಯನ್ನು ನೀಡುತ್ತದೆ (Tongue Reveals Health) ನಾಲಿಗೆ? ಈ ಲೇಖನ ಓದಿ.

VISTARANEWS.COM


on

Tongue Reveals Health
Koo

ನಾಲಿಗೆಯು (Tongue Reveals Health) ಆರೋಗ್ಯದ ಕನ್ನಡಿ ಎನ್ನುವ ಮಾತಿದೆ. ನಮ್ಮ ದೇಹದ ಸ್ಥಿತಿ-ಗತಿಗಳ ಬಗ್ಗೆ ಅರಿಯುವುದಕ್ಕೆ ನಾಲಿಗೆ ಸಹಾಯಕ. ಅದರ ಬಣ್ಣ, ಮೇಲ್ನೋಟಗಳಿಂದ ದೇಹದೊಳಗೆ ಹೇಗಿದೆ, ಏನಾಗುತ್ತಿದೆ ಎಂಬುದನ್ನು ಅರಿಯಬಹುದು. ದೇಹಾರೋಗ್ಯದ ದಿಕ್ಸೂಚಿಯಂತೆ ಜಿಹ್ವೆ ಕೆಲಸ ಮಾಡುತ್ತದೆ. ಇದನ್ನು ಸರಿಯಾಗಿ ಅವಲೋಕಿಸಿದರೆ, ನಮಗೆ ತಿಳಿಯುವ ಮಾಹಿತಿಗಳು ಹಲವಾರು. ನಾಲಿಗೆ ತಿಳಿಸುವುದೇನು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Woman's tongue

ಗುಲಾಬಿ ಬಣ್ಣ

ಸುಂದರ ಗುಲಾಬಿ ಬಣ್ಣದ ನಾಲಿಗೆಯಿದ್ದರೆ, ಅದು ಸ್ವಸ್ಥ ಆರೋಗ್ಯದ ಸಂಕೇತ. ಇಷ್ಟೇ ಅಲ್ಲ, ರಸ ಒಸರುವ, ಮೃದುವಾದ ಮೇಲ್ಮೈ ಹೊಂದಿರುವ ನಾಲಿಗೆಯು ದೇಹಕ್ಕೆ ಅಗತ್ಯವಾದ ನೀರಿನಂಶ ಒದಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ಜೀರ್ಣಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬ ಸಂದೇಶವನ್ನೂ ನೀಡುತ್ತದೆ.

ಬಿಳಿ ನಾಲಿಗೆ

ನಾಲಿಗೆಯ ಮೇಲೆ ಬಿಳಿ ಬಣ್ಣದ ಹೊದಿಕೆಯಿದ್ದರೆ ಇದು ಬಹಳಷ್ಟನ್ನು ಸೂಚಿಸುತ್ತದೆ. ಈ ಬಿಳಿಯ ಬಣ್ಣವು ಬಾಯಿಯ ಭಾಗಕ್ಕೆ ಅಂಟಿಕೊಂಡ ಫಂಗಸ್‌ ಸೋಂಕಿನ ಲಕ್ಷಣವಿರಬಹುದು; ಬಾಯಿಯ ಸ್ವಚ್ಛತೆಯ ಕೊರತೆಯನ್ನು ಸೂಚಿಸಬಹುದು; ಬ್ಯಾಕ್ಟೀರಿಯ ದಾಳಿ ಮಾಡಿದ್ದರಿಂದಲೂ ಇರಬಹುದು. ಇದಲ್ಲದೆ, ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದಿದ್ದರೆ ಹೀಗಾಗುತ್ತದೆ. ಜೊತೆಗೆ, ಜೀರ್ಣಾಂಗಗಳ ಕೆಲಸದಲ್ಲಿ ಏರುಪೇರಾದರೆ, ಅಜೀರ್ಣ ಅಥವಾ ಮಲಬದ್ಧತೆಯಿದ್ದರೂ ನಾಲಿಗೆಯ ಮೇಲೆ ಬಿಳಿಯ ಹೊದಿಕೆಯನ್ನು ಕಾಣಬಹುದು.

Little kid sticking out his tongue

ಕೆಂಪು ನಾಲಿಗೆ

ಸ್ಟ್ರಾಬೆರಿಯಂಥ ಕೆಂಪು ನಾಲಿಗೆಯು ದೇಹದಲ್ಲಿ ಅಗತ್ಯ ಸತ್ವಗಳ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್‌ಗಳ ಕೊರತೆಯಿದ್ದರೆ, ಅದರಲ್ಲೂ ಮುಖ್ಯವಾಗಿ ವಿಟಮಿನ್‌ ಬಿ೧೨ ಕಡಿಮೆಯಿದ್ದರೆ ನಾಲಿಗೆಯು ಹೀಗೆ ಸ್ಟ್ರಾಬೆರಿ ಕೆಂಪಿನ ಬಣ್ಣದಲ್ಲಿ ಗೋಚರಿಸುತ್ತದೆ. ಕಬ್ಬಿಣದಂಶ ಕಡಿಮೆಯಿದ್ದರೂ ನಾಲಿಗೆ ಕೆಂಪಾಗುತ್ತದೆ. ರಕ್ತನಾಳಗಳಲ್ಲಿ ಉರಿಯೂತ ತರುವ ಕವಾಸಾಕಿ ಎನ್ನುವ ರೋಗವೂ ಅಪರೂಪಕ್ಕೆ ಈ ಕೆನ್ನಾಲಗೆಗೆ ಕಾರಣವಾಗಬಹುದು.

ಕಪ್ಪು ನಾಲಿಗೆ

ಕೆಲವೊಮ್ಮೆ ಕಪ್ಪಾದ ರೋಮಭರಿತ ಲಕ್ಷಣಗಳನ್ನು ನಾಲಿಗೆ ತೋರಿಸಬಹುದು. ಇದು ಸಹ ಬ್ಯಾಕ್ಟೀರಿಯ ಸೋಂಕಿನಿಂದ ಆಗುವಂಥದ್ದು. ಕೆಲವು ಔಷಧಿಗಳಿಂದ ನಾಲಿಗೆ ಕಪ್ಪಾಗಬಹುದು. ಧೂಮಪಾನ ಅತಿಯಾದರೂ ನಾಲಿಗೆ ಹೀಗೆ ಬಣ್ಣಗೆಡಬಹುದು. ಆದರೆ ನಾಲಿಗೆಯಲ್ಲಿ ನೋವು, ಊತ ಇದ್ದು, ಬಾಯಿಯ ರುಚಿ ವಾಸನೆಗಳು ಬದಲಾಗಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.

ನಕಾಶೆ ನಾಲಿಗೆ

ಅಂದರೆ ನಾಲಿಗೆ ಮೇಲೆ ಕೆಂಪು ಬಣ್ಣದ ಮಚ್ಚೆಯಂಥ ಆಕೃತಿಗಳು ಕಾಣಬಹುದು. ನೋಡುವುದಕ್ಕೆ ಯಾವುದೇ ಭೂಪಟ ಅಥವಾ ನಕಾಶೆಯಂತೆ ಕಾಣುವ ಈ ಕೆಂಪು ಆಕೃತಿಗಳು ಸಾಮಾನ್ಯವಾಗಿ ಅಪಾಯ ಮಾಡುವುದಿಲ್ಲ. ಆದರೆ ಕೆಲವು ಆಹಾರಗಳಿಗೆ ಅಥವಾ ತೀಕ್ಷ್ಣ ರುಚಿಗಳಿಗೆ ಇವು ಪ್ರತಿಕ್ರಿಯಿಸಿ, ನೋವು ನೀಡುತ್ತವೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ತಿಳಿದಿಲ್ಲ.

Woman with halitosis for candida albicans pointing her tongue

ಸೀಳು ನಾಲಿಗೆ

ನಾಲಿಗೆಯ ಮೇಲ್ಮೈಯಲ್ಲಿ ಸೀಳಿನಂಥ ಆಳವಾದ ಗೆರೆಗಳು ಕಾಣಬಹುದು. ಕೆಲವೊಮ್ಮೆ ಇವು ಆನುವಂಶಿಕವಾಗಿ ಬರಬಹುದು. ಅದಿಲ್ಲದಿದ್ದರೆ, ಸೋರಿಯಾಸಿಸ್‌ ಅಥವಾ ಡೌನ್ಸ್‌ ಸಿಂಡ್ರೋಮ್‌ ಸಹ ಕಾರಣವಾಗಿರಬಹುದು. ಹೆಚ್ಚಿನ ಸಾರಿ ಈ ಗೆರೆಗಳು ಯಾವುದೇ ತೊಂದರೆ ನೀಡುವುದಿಲ್ಲ.

ಹುಣ್ಣುಗಳು

ಬಾಯಲ್ಲಿ ಹುಣ್ಣಾದಂತೆಯೇ ನಾಲಿಗೆ ಮೇಲೂ ಹುಣ್ಣುಗಳಾಗುತ್ತವೆ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸತ್ವಗಳ ಕೊರತೆ, ಸೋಂಕು ಅಥವಾ ಬ್ರೇಸಸ್‌ ಹಾಕಿದ ಕಾರಣಕ್ಕೂ ಆಗಿರಬಹುದು. ಹಲವು ವಾರಗಳಿಂದ ಈ ಹುಣ್ಣುಗಳು ಕಡಿಮೆಯಾಗದೆ ಮುಂದುವರಿಯುತ್ತಿದ್ದರೆ ಬಾಯಿ ಕ್ಯಾನ್ಸರ್‌ ಸೂಚನೆಯೂ ಇರಬಹುದು. ಗುಣವಾಗದ ಹುಣ್ಣುಗಳಿದ್ದರೆ ವೈದ್ಯರಲ್ಲಿ ತೋರಿಸುವುದು ಅಗತ್ಯ.

Woman With Wide Open Mouth and Tongue Out

ಗಮನ ಕೊಡಿ

ಕೆಂಪು, ಬಿಳಿಯ ಮಚ್ಚೆಯಂಥವು ನಾಲಿಗೆಯ ಮೇಲೆ ಕಾಣಿಸಿಕೊಂಡು ನೋವು ಕೊಡುತಿದ್ದರೆ, ಬಾಯಿ ವಾಸನೆ ಬರುತ್ತಿದ್ದರೆ, ಹುಣ್ಣುಗಳು ಗುಣವಾಗದೆ ಉಳಿದಿದ್ದರೆ, ಬಾಯಿ ಅಥವಾ ನಾಲಿಗೆಯಲ್ಲಿ ಕಾಣಿಸಿಕೊಂಡ ಯಾವುದೇ ಹುಣ್ಣು, ವ್ರಣ, ಮಚ್ಚೆಗಳು ಸಾಮಾನ್ಯಕ್ಕಿಂತ ಭಿನ್ನ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಾಣುವುದು ಸೂಕ್ತ. ಇಂಥ ಯಾವುದೇ ಲಕ್ಷಣಗಳು ಕ್ಯಾನ್ಸರ್‌ನ ಸೂಚಕಗಳಾಗಿರಬಹುದು.

ಇದನ್ನೂ ಓದಿ:Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

Continue Reading

ಫ್ಯಾಷನ್

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಒಂದರ ಒಳಗೆ ಇನ್ನೊಂದು ಬಗೆಯ ವಿನ್ಯಾಸ ಸೇರಿಕೊಂಡಿವೆ. ಅವು ಯಾವ್ಯುವು? ಇವನ್ನು ಹೇಗೆಲ್ಲಾ ಫಾಲೋ ಮಾಡಬಹುದು? ಎಂಬುದರ ಕುರಿತಂತೆ ಹೇರ್‌ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ. ‌

VISTARANEWS.COM


on

Summer Hairstyles
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಸೆಕೆಯಾಗದ 3 ಬಗೆಯ ಸಮ್ಮರ್‌ ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್‌ಗಳು (Summer Hairstyles) ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್‌ಸ್ಟೈಲ್‌ ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

Summer Hairstyles

ಸೈಡಿಗೆ ಸರಿದ ಫ್ರೀ ಹೇರ್‌ಸ್ಟೈಲ್‌ಗಳು

“ಈ ಸಮ್ಮರ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್‌ ಕಂಡೀಷನ್‌ ಕೋಣೆಗಳಲ್ಲಿ ಹಾಗೂ ಇನ್‌ಡೋರ್‌ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ ಸ್ಟೈಲ್‌ಗಳಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್‌ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ! ಟೀನೇಜ್‌ ಹಾಗೂ ಯುವತಿಯರಲ್ಲೂ ಕಾಮನ್‌ ಆಗಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ನಮಿತಾ. ಅವರ ಪ್ರಕಾರ, ಶಾರ್ಟ್‌ ಹೇರ್‌ಸ್ಟೈಲ್‌ಗಳು ಈ ಸೀಸನ್‌ನಲ್ಲಿ ತೀರಾ ಕಾಮನ್‌ ಆಗಿವೆ ಎನ್ನುತ್ತಾರೆ.

ಹೈ ಬನ್‌ ಹೇರ್‌ಸ್ಟೈಲ್‌

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್‌ ಹೇರ್‌ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್‌ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ!

Summer Hairstyles

ಪೋನಿಟೈಲ್‌ ವಿತ್‌ ಫ್ರಿಂಝ್‌ ಹೇರ್‌ಸ್ಟೈಲ್‌

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್‌ ಮಾಡುವ ಫ್ರಿಂಝ್‌ ಹೇರ್‌ಸ್ಟೈಲ್‌ ಹಿಂದೆ ಸಿಂಪಲ್‌ ಪೋನಿಟೈಲ್‌ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್‌ಸ್ಟೈಲ್‌ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್‌ಸ್ಟೈಲ್‌ ಕಾಂಬಿನೇಷನ್‌ ಇದಾಗಿರುತ್ತದೆ.

ಹನ್‌ ಹೇರ್‌ಸ್ಟೈಲ್‌

ಅರ್ಧ ಫ್ರೀ ಹೇರ್‌ಸ್ಟೈಲ್‌ ಹಾಗೂ ಅರ್ಧ ಕಟ್ಟಿದ ಬನ್‌ ಹೇರ್‌ಸ್ಟೈಲ್‌ ಕಾಂಬೀನೇಷನ್‌ ಈ ಸೀಸನ್‌ನ ಹನ್‌ ಹೇರ್‌ಸ್ಟೈಲ್‌ನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್‌ ಹೇರ್‌ಸ್ಟೈಲ್‌ ಮಿಕ್ಸ್‌ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್‌ ಹನ್‌ ಹೇರ್‌ಸ್ಟೈಲ್‌. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿದೆ.

Summer Hairstyles

ಬೇಸಿಗೆ ಹೇರ್‌ಸ್ಟೈಲ್‌ ಫಾಲೋ ಮಾಡಲು ಹೀಗೆ ಮಾಡಿ

  • ಹೊರಗಡೆ ಹೋಗುವಾಗ ಮೇಲಿನ ಹೇರ್‌ಸ್ಟೈಲ್‌ಗಳನ್ನು ಮಾಡಿ.
  • ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
  • ಫ್ರಿಂಝ್‌ ಮಾಡದಿದ್ದವರೂ ಸೈಡ್‌ಲಾಕ್ಸ್‌ ಕೂದಲ ವಿನ್ಯಾಸ ಮಾಡಬಹುದು.
  • ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
  • ಮೇಲಿನ ಹೇರ್‌ಸ್ಟೈಲ್ಸ್‌ ನಿಮಗೆ ಸ್ಲಿಮ್‌ ಲುಕ್‌ ನೀಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Earrings Fashion: ಬಳೆಗಿಂತ ದೊಡ್ಡದಾಯ್ತು ಕಿವಿಯ ಹೂಪ್‌ ರಿಂಗ್‌!

Continue Reading
Advertisement
IED Blast
Lok Sabha Election 202421 mins ago

IED Blast: ಎರಡನೇ ಹಂತದ ಮತದಾನಕ್ಕೆ ದಿನಗಣನೆ; ಮಣಿಪುರದ ಸೇತುವೆ ಮೇಲೆ ಐಇಡಿ ಸ್ಫೋಟ

Modi in Karnataka from April 28 and 29 BJP plan for second phase ready
Lok Sabha Election 202422 mins ago

Modi in Karnataka: ಏಪ್ರಿಲ್‌ 28 – 29ಕ್ಕೆ ಕರ್ನಾಟಕಕ್ಕೆ ಮೋದಿ; 2ನೇ ಹಂತಕ್ಕೆ ಬಿಜೆಪಿ ಪ್ಲ್ಯಾನ್‌ ರೆಡಿ!

female doctors
ಪ್ರಮುಖ ಸುದ್ದಿ23 mins ago

Female Doctors: ವೈದ್ಯೆಯರಿಂದ ಚಿಕಿತ್ಸೆ ಪಡೆದ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಂತೆ! ಅಧ್ಯಯನ ವರದಿ

Kannada New Movie Vidyarthi Vidyarthiniyare Bad Boys Full Video In AI Touch
ಸಿನಿಮಾ28 mins ago

Kannada New Movie: ʻವಿದ್ಯಾರ್ಥಿ ವಿದ್ಯಾರ್ಥಿನಿಯರೇʼ ಸಿನಿಮಾದ ವಿಡಿಯೊ ಸಾಂಗ್‌ಗೆ ʻAIʼ ಟಚ್‌!

Vicky Kaushal transforms into Chhatrapati Sambhaji Maharaj
ಸಿನಿಮಾ30 mins ago

Vicky Kaushal: ಛತ್ರಪತಿ ಸಂಭಾಜಿ ಮಹಾರಾಜ ಲುಕ್‌ನಲ್ಲಿ ವಿಕ್ಕಿ ಕೌಶಲ್; ಫೋಟೊ ಲೀಕ್‌!

Patanjali Case
ದೇಶ1 hour ago

Patanjali Case: ಪತಂಜಲಿ ಕೇಸ್‌; ಜಾಹೀರಾತು ಮೂಲಕ ಕ್ಷಮೆ ಕೋರಿದ ಬಾಬಾ ರಾಮ್‌ದೇವ್‌

Road accident in Ankola The biker was burnt to death
ಕ್ರೈಂ1 hour ago

Road Accident: ಅಂಕೋಲಾದಲ್ಲಿ ಭೀಕರ ಅಪಘಾತ; ಬೈಕ್‌ ಸವಾರ ಸುಟ್ಟು ಕರಕಲು!

Sachin Tendulkar Net Worth Assets Owned
ಕ್ರಿಕೆಟ್1 hour ago

Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!

gold model
ಚಿನ್ನದ ದರ1 hour ago

Gold Rate Today: ಚಿನ್ನದ ಬೆಲೆ ಇಂದು ತುಸು ಏರಿಕೆ; 22K, 24K ಬಂಗಾರದ ಬೆಲೆಗಳನ್ನು ಇಲ್ಲಿ ಖಚಿತಪಡಿಸಿಕೊಳ್ಳಿ

Lok Sabha Election 2024 ID raid in Bengaluru South Lok Sabha constituency 21.15 crore Gold ornaments seized in 2 days
ಕರ್ನಾಟಕ2 hours ago

Lok Sabha Election 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಐಡಿ ರೇಡ್;‌ 2 ದಿನದಲ್ಲಿ 21.15 ಕೋಟಿ ರೂ. ಚಿನ್ನಾಭರಣ ವಶ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌