Celebrity Fashion Corner | ಅಡುಗೆ ಪ್ರೋಗ್ರಾಂಗಳ ಮೂಲಕ ಮಹಿಳೆಯರ ಮನ ಗೆದ್ದಿರುವ ಮುರಳಿ ಫ್ಯಾಷನ್‌ ಲೈಫ್‌ ಹೇಗಿದೆ? - Vistara News

ಫ್ಯಾಷನ್

Celebrity Fashion Corner | ಅಡುಗೆ ಪ್ರೋಗ್ರಾಂಗಳ ಮೂಲಕ ಮಹಿಳೆಯರ ಮನ ಗೆದ್ದಿರುವ ಮುರಳಿ ಫ್ಯಾಷನ್‌ ಲೈಫ್‌ ಹೇಗಿದೆ?

ಒಗ್ಗರಣೆ ಡಬ್ಬಿ, ಸವಿರುಚಿ ಅಡುಗೆ ಕಾರ್ಯಕ್ರಮಗಳ ಮೂಲಕ ಜಗತ್ತಿನದ್ಯಾಂತ ಮಹಿಳೆಯರ ಮನಗೆದ್ದಿರುವ ಮುರಳಿಯವರು ಈ ಬಾರಿಯ ಸೆಲೆಬ್ರಿಟಿ ಫ್ಯಾಷನ್‌ ಕಾರ್ನರ್‌ನಲ್ಲಿ ತಮ್ಮ ಸಿಂಪಲ್‌ ಫ್ಯಾಷನ್‌ ಲೈಫ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

VISTARANEWS.COM


on

Celebrity Fashion Corner
ಚಿತ್ರಗಳು : ಮುರಳಿ, ಹಿರಿಯ ನಿರೂಪಕ, ನಟ, ನಿರ್ದೇಶಕ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಒಗ್ಗರಣೆ ಡಬ್ಬಿ, ಸವಿರುಚಿ ಸೇರಿದಂತೆ ನಾನಾ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಮನ ಗೆದ್ದಿರುವ ಹಿರಿಯ ನಿರೂಪಕ ಹಾಗೂ ನಿರ್ದೇಶಕ ಮುರಳಿಯವರು ಕೇವಲ ಅಡುಗೆ ಕಾರ್ಯಕ್ರಮಗಳಲ್ಲಿ ಮಾತ್ರ ಕೈ ರುಚಿ ಟೇಸ್ಟ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು! ಅವರು ಇತರೆ ಕ್ಷೇತ್ರದಲ್ಲೂ ಬ್ಯುಜಿಯಾಗಿದ್ದಾರೆ. ಜತೆಗೆ ಫ್ಯಾಷನಬಲ್‌ ಪರ್ಸನಾಲಿಟಿ ಅವರದು. ಈ ಬಗ್ಗೆ ಸೆಲೆಬ್ರಿಟಿ ಫ್ಯಾಷನ್‌ ಕಾರ್ನರ್‌ನಲ್ಲಿ ವಿಸ್ತಾರದೊಂದಿಗೆ ಅವರು ಮಾತನಾಡಿದ್ದಾರೆ.

Celebrity Fashion Corner

ವಿಸ್ತಾರ: ಒಗ್ಗರಣೆ ಡಬ್ಬಿ, ಸವಿರುಚಿ ಸೇರಿದಂತೆ ಅಡುಗೆ ಕಾರ್ಯಕ್ರಮಗಳ ಮೂಲಕ ಜಗತ್ತಿನೆಲ್ಲೆಡೆ ನಿಮ್ಮದೇ ಮಹಿಳಾ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿರುವ ನಿಮ್ಮ ನಿತ್ಯದ ಲೈಫ್‌ಸ್ಟೈಲ್‌ ಬಗ್ಗೆ ಹೇಳಿ.

ಮುರಳಿ: ನನ್ನದು ಕಂಪ್ಲೀಟ್‌ ಸಿಂಪಲ್‌ ಬಿಂದಾಸ್‌ ಲೈಫ್‌ಸ್ಟೈಲ್‌. ಅಡಂಬರವಿಲ್ಲ. ಯಾರನ್ನೂ ಫಾಲೋ ಮಾಡುವುದಿಲ್ಲ. ನನ್ನದೇ ಆದ ಸ್ವಾಭಿಮಾನಿ ವ್ಯಕ್ತಿತ್ವ ಬಿಂಬಿಸುವ ಲೈಫ್‌ಸ್ಟೈಲ್‌.

ವಿಸ್ತಾರ: ಅಪಾರ ಅಭಿಮಾನಿಗಳನ್ನು ಗಳಿಸಿರುವ ನಿಮಗೆ ಫ್ಯಾಷನ್‌ ಬಗ್ಗೆ ಒಲವಿದೆಯಾ?

ಮುರಳಿ: ಖಂಡಿತ. ಹಾಗೆಂದು ಸ್ಟೇಜ್‌ ಮೇಲೆ ವಾಕ್‌ ಮಾಡುವ ಮಾಡೆಲ್‌ಗಳಂತೆ ಇರುವುದಲ್ಲ! ಬದಲಿಗೆ, ಫ್ಯಾಷನ್‌ ಅಂದ್ರೆ ನಾವು ಎಂಬುದನ್ನು ಬಲವಾಗಿ ನಂಬುವುದು. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಫ್ಯಾಷನ್‌ ಇಷ್ಟಪಡುತ್ತಾರೆ. ಅದು ಅವರವರ ಭಾವಕ್ಕೆ ತಕ್ಕಂತೆ ಇಚ್ಛೆಗೆ ತಕ್ಕಂತೆ ಕಾಣಿಸಿಕೊಳ್ಳುವುದೇ ಫ್ಯಾಷನ್‌. ಇಷ್ಟಪಟ್ಟು ಧರಿಸುವ ಉಡುಗೆ ತೊಡುಗೆಗಳು ಧರಿಸಿದಾಗ ಆಕರ್ಷಕವಾಗಿ ಕಂಡಾಗ ಅದು ಅವರವರ ಫ್ಯಾಷನ್ ಸ್ಟೇಟ್‌ಮೆಂಟ್‌ ಆಗಿ ಬದಲಾಗುತ್ತದೆ. ಹಾಗೆಯೇ ನನ್ನದು ಕೂಡ.

Celebrity Fashion Corner

ವಿಸ್ತಾರ: ನಿಮ್ಮ ವಾರ್ಡ್‌ರೋಬ್‌ ಮ್ಯೂಸಿಯಂ ಇದ್ದ ಹಾಗಿದೆ ಎಂದು ಕೇಳಿದ್ದೇವೆ. ಇದು ನಿಜಾನಾ?

ಮುರಳಿ: ಹೌದು. ಸುಮಾರು ೧೯೯೪ರಲ್ಲಿ ಈ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದಾಗಿನಿಂದ ಧರಿಸಿದ ಸಾವಿರಾರು ಉಡುಪುಗಳು ನನ್ನ ಕಲೆಕ್ಷನ್‌ನಲ್ಲಿವೆ. ಅವುಗಳಲ್ಲಿ ಬ್ಲೇಝರ್‌, ಕೋಟ್‌, ಸೂಟ್‌ ಸೇರಿದಂತೆ ಸಾವಿರಾರು ಉಡುಪುಗಳಿವೆ. ಒಂದೂವರೆ ಸಾವಿರಗಳಷ್ಟು ಬರೀ ಟೀ ಶರ್ಟ್‌ಗಳೇ ಇವೆ. ಇಲ್ಲಿಯವರೆಗೂ ಆನ್‌ಸ್ಕ್ರೀನ್‌ನಲ್ಲಿ ರೀಪೀಟ್‌ ಮಾಡಿಲ್ಲ. ಹಾಗಾಗಿ ವಾರ್ಡ್‌ರೋಬ್‌ ಮ್ಯೂಸಿಯಂನಂತಾಗಿದೆ.

ವಿಸ್ತಾರ: ನಿಮ್ಮ ಸ್ಟೈಲಿಂಗ್‌ಗೆ ಯಾರು ಅಡ್ವೈಸರ್‌?

ಮುರಳಿ: ನನ್ನ ಮಕ್ಕಳೇ ನನ್ನ ಸ್ಟೈಲಿಂಗ್‌ ವಿಮರ್ಶಕರು. ಈ ಜನರೇಷನ್‌ನ ಮಕ್ಕಳ ವಿಮರ್ಶೆಯೇ ನಮಗೆ ನಮ್ಮ ಡ್ರೆಸ್ಸಿಂಗ್‌ ಸೆನ್ಸ್‌ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಫ್ಯಾಷನ್‌ ಪ್ರೇಮ ಮೂಡಿಸುತ್ತದೆ.

Celebrity Fashion Corner

ವಿಸ್ತಾರ: ನೀವು ಬ್ರಾಂಡ್‌ ಫ್ರೀಕ್ ಎನ್ನಬಹುದಾ?

ಮುರಳಿ: ಖಂಡಿತ ಇಲ್ಲ. ನನಗೆ ಬ್ರಾಂಡ್‌ ಬಗ್ಗೆ ಅಷ್ಟಾಗಿ ಕ್ರೇಜ್‌ ಇಲ್ಲ. ಧರಿಸಿ ನೋಡಿದಾಗ ಚೆನ್ನಾಗಿ ಕಾಣಬೇಕಷ್ಟೇ! ಆಗಷ್ಟೇ ನಾವು ಧರಿಸಿದ ಉಡುಪಿಗೆ ಬೆಲೆ ಸಿಗುವುದು. ಉಡುಪಿನಿಂದ ನಮಗೆ ಯಾವತ್ತೂ ಬೆಲೆ ಸಿಗಬಾರದು. ಇದು ನನ್ನ ಸ್ಟೈಲಿಂಗ್‌ ಸಿದ್ಧಾಂತ. ವ್ಯಕ್ತಿಯ ಐಡೆಂಟಿಟಿ ಬ್ರಾಂಡ್‌ ಕ್ರಿಯೇಟ್‌ ಮಾಡಬೇಕು. ಏನಂತೀರಾ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Fashion News | ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪಗೆ ಸಂದ ಹಾಲ್‌ ಆಫ್‌ ಫೇಮ್‌ ಅವಾರ್ಡ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Summer Fashion: ಸಮ್ಮರ್‌ ಹೈ ಸ್ಟ್ರೀಟ್‌ ಫ್ಯಾಷನ್‌ಗೆ ಮರಳಿದ 3 ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್

Summer Fashion: ಈ ಬಾರಿಯ ಸಮ್ಮರ್‌ನಲ್ಲಿ ಸೆಲೆಬ್ರೆಟಿ ಲುಕ್‌ ನೀಡುವ ೩ ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ. ಈ ಸೀಸನ್‌ ಪಾರ್ಟಿಗಳಲ್ಲಿ ಇವು ಕಾಣಿಸಿಕೊಳ್ಳತೊಡಗಿವೆ. ಅವು ಯಾವುವು? ಹೇಗೆಲ್ಲಾ ವಿನ್ಯಾಸಗೊಂಡಿರುತ್ತವೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

VISTARANEWS.COM


on

Summer Fashion
ಸಾಂದರ್ಭಿಕ ಚಿತ್ರಗಳು. ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಮತ್ತೊಮ್ಮೆ ಸೆಲೆಬ್ರೆಟಿ ಲುಕ್‌ ನೀಡುವ ಬ್ಯಾಕ್‌ಲೆಸ್‌ ಉಡುಪುಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 3 ಶೈಲಿಯ ಬ್ಯಾಕ್‌ಲೆಸ್‌ ಔಟ್‌ಫಿಟ್‌ಗಳು ಸಖತ್‌ ಟ್ರೆಂಡಿಯಾಗಿವೆ (Summer Fashion).

ಜೆನ್‌ ಜಿ ಹುಡುಗಿಯರು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರನ್ನು ಸೆಳೆದಿವೆ. ಧರಿಸಿದಾಗ ನೋಡಲು ಹಾಟ್‌ ಲುಕ್‌ ನೀಡುವ ಈ ಬ್ಯಾಕ್‌ಲೆಸ್‌ ಉಡುಪುಗಳಲ್ಲಿ ಈ ಬಾರಿಯೂ ಕೆಲವು ಹೆಚ್ಚು ಚಾಲ್ತಿಯಲ್ಲಿವೆ. ಪ್ರತಿ ಬೇಸಿಗೆಯಲ್ಲೂ ಹೊಸ ರೂಪದೊಂದಿಗೆ ಮರಳುವ ಈ ಬ್ಯಾಕ್‌ಲೆಸ್‌ ಡ್ರೆಸ್‌ ಹಾಗೂ ಟಾಪ್‌ಗಳು ಹೈ ಸ್ಟ್ರೀಟ್‌ ಫ್ಯಾಷನ್‌ನ ಭಾಗವಾಗಿವೆ.

“ಪ್ರತಿ ಬೇಸಿಗೆಯಲ್ಲೂ ಬಗೆಬಗೆಯ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್‌ ಕಾಲಿಡುತ್ತವೆ. ನೋಡಲು ಇವು ಒಂದೇ ಬಗೆಯದ್ದಾಗಿ ಕಂಡರೂ, ವಿನ್ಯಾಸ ಬೇರೆ ಬೇರೆಯದ್ದಾಗಿರುತ್ತವೆ. ಡಿಸೈನ್‌ ಕೂಡ ಬದಲಾಗಿರುತ್ತವೆ. ಕಾನ್ಸೆಪ್ಟ್‌ ಮಾತ್ರ ಒಂದೇ” ಎನ್ನುವ ಸ್ಟೈಲಿಸ್ಟ್‌ ರಚನಾ ಹೇಳುವಂತೆ, ʼʼಬ್ಯಾಕ್‌ಲೆಸ್‌ ಉಡುಪುಗಳು ಎಕ್ಸ್ಪೋಸ್‌ ಮಾಡುವ ಉಡುಪುಗಳು ಎಂಬ ಯೋಚನೆ ಜನರಲ್ಲಿದೆ. ಇದು ನಿಜ ಕೂಡ. ಇವು ಅಲ್ಟ್ರಾ ಮಾಡರ್ನ್‌ ಹುಡುಗಿಯರ ಚಾಯ್ಸ್‌ ಔಟ್‌ಫಿಟ್‌ಗಳುʼʼ ಎನ್ನುತ್ತಾರೆ.

ಬ್ಯಾಕ್‌ಲೆಸ್‌ ಹಾಲ್ಟರ್‌ ನೆಕ್‌ ಡ್ರೆಸ್‌

ಇದು ತೀರಾ ಕಾಮನ್‌ ಡ್ರೆಸ್.‌ ಈ ನೆಕ್‌ಲೈನ್‌ ಇರುವಂತಹ ಬ್ಯಾಕ್‌ಲೆಸ್‌ ಡ್ರೆಸ್‌ಗಳನ್ನು ಹಾಗೂ ಟಾಪ್‌ಗಳನ್ನು ಬಹುತೇಕ ಯುವತಿಯರು ಪ್ರಿಫರ್‌ ಮಾಡುತ್ತಾರೆ. ಈ ಉಡುಪಿನಲ್ಲಿ ಮುಂಭಾಗ ಕಂಪ್ಲೀಟ್‌ ಕ್ಲೋಸ್‌ ಆಗಿರುತ್ತದೆ. ಹಿಂಭಾಗ ಎಕ್ಸ್ಪೋಸ್‌ ಆಗಿರುತ್ತದೆ. ಕಾಲೇಜು ಹುಡುಗಿಯರ ಲಿಸ್ಟ್ನಲ್ಲಿವೆ. ಅತಿ ಹೆಚ್ಚು ಯುವತಿಯರು ಬಳಸುವ ಬ್ಯಾಕ್‌ಲೆಸ್‌ ಡ್ರೆಸ್ಗಳಿವು ಎಂದರೂ ಅತಿಶಯೋಕ್ತಿಯಾಗದು.

ಮಲ್ಟಿ ಸ್ಟ್ರಾಪ್‌ ಬ್ಯಾಕ್‌ಲೆಸ್‌ ಔಟ್‌ಫಿಟ್ಸ್‌

ಕೆಲವು ಬ್ಯಾಕ್‌ಲೆಸ್‌ ಡ್ರೆಸ್‌ಗಳು ಸಾಕಷ್ಟು ಸ್ಟ್ರಾಪ್‌ ಹೊಂದಿರುತ್ತವೆ. ಇದು ತೀರಾ ಎಕ್ಸ್ಪೋಸ್‌ ಆಗುವುದನ್ನು ತಪ್ಪಿಸುತ್ತವೆ. ಜತೆಗೆ ಗ್ಲಾಮರಸ್‌ ಲುಕ್‌ ನೀಡುತ್ತವೆ. ಇನ್ನು ಈ ಶೈಲಿಯ ಗೌನ್‌, ಮಿಡಿ, ಮ್ಯಾಕ್ಸಿಗಳು ಹೆಚ್ಚು ಪ್ರಚಲಿತದಲ್ಲಿವೆ. ನಾನಾ ಡಿಸೈನ್‌ನಲ್ಲಿ ಇವು ದೊರೆಯುತ್ತಿವೆ. ಸ್ಪೆಗೆಟಿ ಬ್ಯಾಕ್‌ಲೆಸ್‌ ಫ್ರಾಕ್‌ಗಳೂ ಟ್ರೆಂಡ್‌ನಲ್ಲಿವೆ.

ಬ್ಯಾಕ್‌ಲೆಸ್‌ ಮಿನಿ ಪಾರ್ಟಿ ಡ್ರೆಸ್‌

ಪಾರ್ಟಿಗಳಿಗೆ ಧರಿಸಬಹುದಾದ ನಾನಾ ಶೈಲಿಯ ಮಿನಿ ಬ್ಯಾಕ್‌ಲೆಸ್‌ ಪಾರ್ಟಿ ಡ್ರೆಸ್ಗಳು ಕೂಡ ಹೆಚ್ಚು ಪ್ರಚಲಿತದಲ್ಲಿವೆ. ಇವು ಜೆನ್‌ ಜಿ ಹುಡುಗಿಯರ ಫೇವರೇಟ್‌ ಲಿಸ್ಟ್ನಲ್ಲಿವೆ. ಇನ್ನು, ಮಿನಿ ಫ್ರಾಕ್‌ನಲ್ಲಿ ಇವನ್ನು ಕಾಣಬಹುದು. ಕೆಲವು ಸ್ಯಾಟೀನ್‌ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಇನ್ನು ಕೆಲವು ಸಿಕ್ವೀನ್ಸ್ನಲ್ಲೂ ಲಭ್ಯ. ಆನ್‌ಲೈನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯವು ದೊರೆಯುತ್ತಿವೆ. ಬೇಸಿಗೆಗೆ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಸಿಗುತ್ತಿವೆ.

ಬ್ಯಾಕ್‌ ಲೆಸ್‌ ಡ್ರೆಸ್‌ ಪ್ರಿಯರು ಪಾಲಿಸಬೇಕಾದ 5 ಟಿಪ್ಸ್‌:

  • ಬ್ಯಾಕ್‌ಲೆಸ್‌ ಡ್ರೆಸ್‌ ನಿಮ್ಮ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತಿರಬೇಕು.
  • ಫಿಟ್ಟಿಂಗ್‌ ಸರಿಯಾಗಿರದಿದ್ದಲ್ಲಿ ಎಕ್ಸ್‌ ಪೋಸ್‌ ಆಗುವ ಸಾಧ್ಯತೆಗಳಿರುತ್ತವೆ.
  • ಈ ಉಡುಪುಗಳಿಗೆ ಸೂಕ್ತವಾದ ಇನ್ನರ್‌ವೇರ್‌ ಧರಿಸುವುದು ಅಗತ್ಯ.
  • ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ.
  • ಪಾರ್ಟಿಗಳಿಗೆ ಹಾಗೂ ಔಟಿಂಗ್‌ಗೆ ಮಾತ್ರ ಸೂಕ್ತ ಎಂಬುದನ್ನು ಮರೆಯದಿರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

Continue Reading

ಫ್ಯಾಷನ್

Celebrities Ramanavami: ಎಥ್ನಿಕ್‌ವೇರ್ಸ್‌ನಲ್ಲಿ ರಾಮನನ್ನು ಜಪಿಸಿದ ಸೆಲೆಬ್ರೆಟಿಗಳಿವರು

ರಾಮನವಮಿಯಂದು (Celebrities Ramanavami) ಸಿಂಪಲ್‌ ಎಥ್ನಿಕ್‌ವೇರ್‌ಗಳನ್ನು ಧರಿಸಿದ ನಾನಾ ಸೆಲೆಬ್ರೆಟಿಗಳು ರಾಮನಾಮ ಜಪ ಮಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ಈ ವಿಶೇಷ ದಿನದಂದು ಕಾಣಿಸಿಕೊಂಡರು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Celebrities Ramanavami
ಚಿತ್ರಗಳು: ಸಿಂಪಲ್‌ ಎಥ್ನಿಕ್‌ವೇರ್ಸ್‌ನಲ್ಲಿ ರಾಮನವಮಿ ಆಚರಿಸಿದ ಸೆಲೆಬ್ರೆಟಿಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಮನವಮಿಯಂದು (Celebrities Ramanavami) ಸಿಂಪಲ್‌ ಎಥ್ನಿಕ್‌ವೇರ್‌ಗಳನ್ನು ಧರಿಸಿದ ನಾನಾ ಸೆಲೆಬ್ರೆಟಿಗಳು ರಾಮನಾಮ ಜಪ ಮಾಡಿ, ಹಬ್ಬ ಆಚರಿಸಿದ್ದಾರೆ. ಹಬ್ಬ ಎಂದಾಕ್ಷಣ ಎಂತಹ ಸೆಲೆಬ್ರೆಟಿಗಳು ಕೂಡ ತಾತ್ಕಲಿಕವಾಗಿ, ವೆಸ್ಟರ್ನ್‌ ವೇರ್‌ಗಳಿಂದ ದೂರ ಉಳಿದು ಎಥ್ನಿಕ್‌ವೇರ್‌ ಅಥವಾ ಟ್ರೆಡಿಷನಲ್‌ ವೇರ್‌ಗಳನ್ನು ಆಯ್ಕೆ ಮಾಡುತ್ತಾರೆ. ಅದು ದೊಡ್ಡ ಹಬ್ಬವಾಗಲಿ, ಬಿಡಲಿ, ದೇವರ ಪೂಜೆ ಎಂದಾಕ್ಷಣಾ ಸಿಂಪಲ್‌ವೇರ್‌ಗಳನ್ನು ಧರಿಸುತ್ತಾರೆ. ಅವು ಟ್ರೆಡಿಷನಲ್‌ ಪೂಜೆಗಳಿಗೆ ಪೂರಕವಾಗಿರುವಂತಿರುತ್ತವೆ. ಈ ನಿಟ್ಟಿನಲ್ಲಿ, ಹಬ್ಬಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಪ್ರಮೋಟ್‌ ಮಾಡುತ್ತಿವೆ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಫೆಸ್ಟೀವ್‌ ಸೀಸನ್‌ನ ಔಟ್‌ಫಿಟ್‌ಗಳು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಹಕರಿಸುತ್ತಿವೆಯಂತೆ.

Celebrities Ramanavami

ಸಂಸ್ಕೃತಿ ಬಿಂಬಿಸುವ ಉಡುಗೆಗಳು

ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಗಳನ್ನು ಪ್ರಮೋಟ್‌ ಮಾಡುವಲ್ಲಿ ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದಕ್ಕೆ ಸೋಷಿಯಲ್‌ ಮೀಡಿಯಾ ಕೂಡ ಸಹಕಾರಿಯಾಗಿದೆ. ಇದನ್ನು ನೋಡುವ ಅಭಿಮಾನಿಗಳು ಹಾಗೂ ಫ್ಯಾಷನ್‌ ಪ್ರಿಯರು ಕೂಡ ತಾವೇನೂ ಕಡಿಮೆ ಇಲ್ಲವೆಂಬಂತೆ ಹಬ್ಬಗಳಿಗೆ ಮ್ಯಾಚ್‌ ಆಗುವ ಉಡುಗೆ-ತೊಡುಗೆಗಳನ್ನು ಧರಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಗೆ ಪೂರಕವಾಗಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಸ್ಟೈಲಿಸ್ಟ್‌ ದಾಮಿನಿ.

Karunya ram, actress

ಲಂಗ-ದಾವಣಿಯಲ್ಲಿ ಕಾರುಣ್ಯ

ರಾಮನವಮಿ ಹಬ್ಬವನ್ನು ವಿಶ್‌ ಮಾಡಿರುವ ನಟಿ ಕಾರುಣ್ಯ, ಹಸಿರು ಲಂಗ, ಮರೂನ್‌ ವರ್ಣದ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಈ ಟ್ರೆಡಿಷನಲ್‌ ಡಿಸೈನರ್‌ವೇರ್‌ನಲ್ಲಿ ಕಾರುಣ್ಯ, ಸ್ಟ್ರೀಟ್‌ ಫೋಟೋಗ್ರಾಫಿಯಲ್ಲಿ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ವಿಶ್‌ ಮಾಡಿದ್ದಾರೆ.

Ragini Dwivedi, actress

ಕಲರ್‌ಫುಲ್‌ ಸಲ್ವಾರ್‌ ಸೂಟ್‌ನಲ್ಲಿ ರಾಗಿಣಿ

ನಟಿ ರಾಗಿಣಿ ಮಲ್ಟಿ ಕಲರ್‌ನ ದುಪಟ್ಟಾದ ಸಲ್ವಾರ್‌ ಸೂಟ್‌ನಲ್ಲಿ ಹಬ್ಬದ ವಿಶ್‌ ಮಾಡಿದ್ದಾರೆ. ಪೂಜೆ ಮುಗಿಸಿದ ನಂತರ ಇರುವ ಲುಕ್‌ ಇವರದ್ದಾಗಿದ್ದು, ವರ್ಣಮಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

Pranitha, actress

ಪ್ರಣೀತಾ ರಾಮನ ಪೂಜೆ

ಮಗಳೊಂದಿಗೆ ದೇವಸ್ಥಾನಕ್ಕೆ ತೆರಳಿ, ರಾಮ ಪೂಜೆ ಮಾಡಿರುವ ನಟಿ ಪ್ರಣೀತಾ, ಸಿಂಪಲ್‌ ಪಾಸ್ಟೆಲ್‌ ಶೇಡ್‌ ಉಡುಗೆಯಲ್ಲಿ ರಾಮನನ್ನು ಪೂಜಿಸಿದ್ದಾರೆ.

Priyanka chincholli, actress

ಪ್ರಿಯಾಂಕಾ ಚಿಂಚೊಳ್ಳಿಯ ರಾಮನ ಪೂಜೆ

ಮನೆಯಲ್ಲೆ ರಾಮನ ಜಪ, ಪೂಜೆ ಮಾಡಿರುವ ಪ್ರಿಯಾಂಕಾ ಚಿಂಚೊಳ್ಳಿ, ಎಂದಿನಂತೆ ಟ್ರೆಡಿಷನಲ್‌ ಲುಕ್‌ನಲ್ಲಿ ಪೂಜೆ ಕೈಗೊಂಡಿದ್ದಾರೆ.

Karunya ram, actress

ಅಂಕಿತಾ ಅಮರ್‌ ರಾಮ ನಾಮ

ನಟಿ ಅಂಕಿತಾ ಅಮರ್‌, ಕುಂಕುಮ ಬಳಿದುಕೊಂಡ ಸಾಮಾನ್ಯ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಇಷ್ಟ ದೇವರ ಹಬ್ಬವನ್ನು ಆಚರಿಸಿದ್ದಾರೆ. ಸಿಂಪಲ್‌ ಚೂಡಿದಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Aanya Shetty, actress

ಬಾಲ ನಟಿ ಅನ್ಯಾ ಶೆಟ್ಟಿಯ ರಾಮನ ಜಪ

ಬಾಲನಟಿ ಅನ್ಯಾ ಶೆಟ್ಟಿ ಇದೀಗ ಟೀನೇಜ್‌ ಹುಡುಗಿಯಾಗಿದ್ದು, ಲಂಗ-ದಾವಣಿ ಧರಿಸಿ, ರಾಮನಾಮ ಜಪ ಮಾಡಿದ್ದಾರೆ. ಉದ್ದ ಕೂದಲಿನ ನಗುಮೊಗದ ಅನ್ಯಾ ಆಗಾಗ್ಗೆ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸೆಲೆಬ್ರೆಟಿಗಳು ಮಾತ್ರವಲ್ಲ, ಬಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ-ಹಿರಿತೆರೆಯ ನಾನಾ ತಾರೆಯರು ಕೂಡ ರಾಮನವಮಿಯಂದು ತಮ್ಮದೇ ಆದ ಸಿಂಪಲ್‌ ಎಥ್ನಿಕ್‌ವೇರ್‌ಗಳಲ್ಲಿ ರಾಮನನ್ನು ಪೂಜಿಸಿ ಸಂಭ್ರಮಿಸಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Model Fashion Life: ಕಲಾವಿದೆ ಸ್ಮಿತಾ ಪ್ರಕಾಶ್ ವಿಂಟರ್‌ ಫ್ಯಾಷನ್‌ ಝಲಕ್‌ ಹೀಗಿದೆ!

Continue Reading

ಫ್ಯಾಷನ್

Niveditha Gowda: ಗೋಲ್ಡನ್‌ ಲುಕ್‌ನಲ್ಲಿ ನಿವೇದಿತಾ ಗೌಡ ಕಮಾಲ್‌

ನಿವೇದಿತಾ ಗೌಡ (Niveditha Gowda) ಯಾರಿಗೆ ಗೊತ್ತಿಲ್ಲ! ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌, ಬಿಗ್‌ಬಾಸ್‌ ಕಂಟೆಸ್ಟಂಟ್‌ ಹಾಗೂ ನಟಿ ನಿವೇದಿತಾ ಗೌಡ (Niveditha Gowda) ಅವರ ಗೋಲ್ಡನ್‌ ಲುಕ್‌ ಇದೀಗ ಟ್ರೆಂಡಿಯಾಗಿದೆ. ಜೊತೆಗೆ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ಏನಿದು ಗೋಲ್ಡನ್‌ ಲುಕ್‌? ಈ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.

VISTARANEWS.COM


on

Niveditha Gowda
ಚಿತ್ರಗಳು : ನಿವೇದಿತಾ ಗೌಡ, ನಟಿ ಫೋಟೋಗ್ರಾಫಿ : ಅರುಣ್‌ ಕುಮಾರ್‌ ಪೋಟ್ರೈಟ್ಸ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿವೇದಿತಾ ಗೌಡ (Niveditha Gowda) ಗೋಲ್ಡನ್‌ ಲುಕ್‌ ಇದೀಗ ಟ್ರೆಂಡಿಯಾಗಿದೆ. ಅಂದಹಾಗೆ, ಸದಾ ಒಂದಲ್ಲ ಒಂದು ರೀಲ್ಸ್‌ನಲ್ಲಿ ವೆಸ್ಟರ್ನ್‌ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ನಿವೇದಿತಾ ಗೌಡ ಯಾರಿಗೆ ಗೊತ್ತಿಲ್ಲ! ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌, ಬಿಗ್‌ಬಾಸ್‌ ಕಂಟೆಸ್ಟಂಟ್‌ ಹಾಗೂ ನಟಿ ಎಂದೆಲ್ಲಾ ಟ್ಯಾಗ್‌ಲೈನ್‌ ಹೊಂದಿರುವ ನಿವಿ ಅಲಿಯಾಸ್‌ ನಿವೇದಿತಾ ಗೌಡ (Niveditha Gowda) ಬೋಲ್ಡ್‌ ಮತ್ತು ಬ್ಯೂಟಿಫುಲ್‌ ಲೇಡಿ. ರ‍್ಯಾಪರ್‌ ಚಂದನ್‌ ಶೆಟ್ಟಿ ಮದುವೆಯಾದ ಮೇಲೂ ತಮ್ಮದೇ ಆದ ಛಾಪನ್ನು ಉಳಿಸಿಕೊಂಡಿರುವ ಇವರು ಆನ್‌ಸ್ಕ್ರಿನ್‌ಗಿಂತಲೂ ಸೋಷಿಯಲ್‌ ಮೀಡಿಯಾ ಮೂಲಕವೇ ಹೆಸರು ಮಾಡಿದವರು. ತಾವು ಅಪ್‌ಲೋಡ್‌ ಮಾಡುವ ಯಾವುದೇ ಫೋಟೋ ಆಗಲಿ ರೀಲ್ಸ್‌ ಆಗಲಿ ತಲೆಕೆಡಿಸಿಕೊಳ್ಳದವರು. ಇದೀಗ ತಾವು ಉಟ್ಟಿರುವ ಗೋಲ್ಡನ್‌ ವರ್ಣದ ಎಥ್ನಿಕ್‌ ಲುಕ್‌ನ ಸೀರೆಯ ಮೂಲಕ ಸೆಳೆದಿದ್ದಾರೆ. ಈಗಾಗಲೇ ಟ್ರೆಂಡ್‌ನಲ್ಲಿರುವ ಗೋಲ್ಡನ್‌ ಲುಕನ್ನು ಮತ್ತೊಮ್ಮೆ ಬಿಂಬಿಸಿದ್ದಾರೆ.

Niveditha Gowda

ಬಾಲಿವುಡ್‌ಗರ ಫೇವರೇಟ್‌ ಲುಕ್‌

“ಈ ಸೀಸನ್‌ನಲ್ಲಿ ಅದರಲ್ಲೂ ಫೆಸ್ಟೀವ್‌ ಹಾಗೂ ವೆಡ್ಡಿಂಗ್‌ ಸೀಸನ್‌ಗಳಲ್ಲಿ ಗೋಲ್ಡನ್‌ ಲುಕ್‌ ಟ್ರೆಂಡಿಯಾಗಿರುತ್ತದೆ. ಕಂಪ್ಲೀಟ್‌ ಬಂಗಾರದ ಲುಕ್‌ ನೀಡುವ ಈ ಔಟ್‌ಲುಕ್‌ ಸೆಲೆಬ್ರೆಟಿ ಲುಕ್‌ ನೀಡುತ್ತದೆ. ಬಾಲಿವುಡ್‌ನಲ್ಲಿ ಈ ಲುಕ್‌ಗೆ ಹೆಚ್ಚು ಆದ್ಯತೆ. ಅದರಲ್ಲೂ ವೆಡ್ಡಿಂಗ್‌ಗಳಲ್ಲಿ ಈ ಲುಕ್‌ ಇಲ್ಲದೇ ಸಮಾರಂಭಗಳೇ ನಡೆಯುವುದಿಲ್ಲ! ಆ ಮಟ್ಟಿಗೆ ಈ ಲುಕ್‌ ಟ್ರೆಂಡ್‌ನಲ್ಲಿದೆ. ಇನ್ನು ಸೆಲೆಬ್ರೆಟಿಗಳಿಂದಿಡಿದು ಸಾಮಾನ್ಯ ಯುವತಿಯರು ಕೂಡ ತಂತಮ್ಮ ಮದುವೆಗಳಲ್ಲಿ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ, ಈ ಲುಕ್‌ ಸದ್ಯ ಚಾಲ್ತಿಯಲ್ಲಿದೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Niveditha Gowda

ಏನಿದು ಗೋಲ್ಡನ್‌ ಲುಕ್‌ ?

ಮುಡಿಯಿಂದ ಪಾದದವರೆಗೂ ಬಂಗಾರ ವರ್ಣದ ಔಟ್‌ಫಿಟ್‌, ಲೆಹೆಂಗಾ, ಲಂಗ-ದಾವಣಿ ಅಥವಾ ಸೀರೆಯಲ್ಲಿ ಕಾಣಿಸಿಕೊಳ್ಳುವುದು. ಇದರೊಂದಿಗೆ ಧರಿಸುವ ಜ್ಯುವೆಲರಿ ಕೂಡ ಸಂಪೂರ್ಣ ಬಂಗಾರದ ಶೇಡ್‌ನಲ್ಲಿರುವುದು. ಯಾವುದೇ ಜಂಕ್ ಹಾಗೂ ಫಂಕಿ ಜ್ಯುವೆಲರಿರಹಿತವಾದ ಸ್ಟೈಲಿಂಗ್‌ ಇದು. ಇನ್ನು ಮೇಕಪ್‌ ಕೂಡ ಈ ಲುಕ್‌ಗೆ ಸಾಥ್‌ ನೀಡುತ್ತದೆ. ಹೇರ್‌ಸ್ಟೈಲ್‌ ಕೂಡ ಈ ಗೋಲ್ಡನ್‌ ಎಥ್ನಿಕ್‌ ಲುಕ್‌ಗೆ ಜೊತೆಯಾಗುತ್ತದೆ.

Niveditha Gowda

ಆಕರ್ಷಕವಾದ ನಿವೇದಿತಾ ಗೋಲ್ಡನ್‌ ಲುಕ್‌

ಇನ್ನು, ನಿವೇದಿತಾ ಧರಿಸಿರುವ ಗೋಲ್ಡನ್‌ ಲಂಗ-ದಾವಣಿ, ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ ಅವರ ಡಿಸೈನರ್‌ವೇರ್‌ ಆಗಿದೆ. ಮೇಕಪ್‌ ಯಶ್‌ಜೈನ್‌ ಮಾಡಿದ್ದಾರೆ. ಧರಿಸಿರುವ ಫ್ರಿಂಝ್‌ ಬೀಡ್ಸ್‌ನ ಡಿಸೈನರ್‌ ಬ್ಲೌಸ್‌ ಕಂಪ್ಲೀಟ್‌ ಗೋಲ್ಡನ್‌ ವರ್ಕ್‌ನದ್ದಾಗಿದ್ದು, ಇದಕ್ಕೆ ಸ್ಮಾಲ್‌ ಪ್ಲೀಟ್ಸ್‌ ಇರುವ ಲಂಗ ಹಾಗೂ ಸಾದಾ ಡಿಸೈನರ್‌ ಚಿಕ್ಕ ಬಾರ್ಡರ್‌ ಇರುವ ಬಂಗಾರ ವರ್ಣದ ದಾವಣಿ, ನಿವೇದಿತಾ ಅವರನ್ನು ಮನಮೋಹಕವಾಗಿಸಿದೆ. ಇದರೊಂದಿಗೆ ಧರಿಸಿರುವ ಆಂಟಿಕ್‌ ಕಡ, ಬಿಗ್‌ ನೆಕ್‌ಪೀಸ್‌ ಜುಮ್ಕಾ ಇವರನ್ನು ಮತ್ತಷ್ಟು ಸುಂದರವಾಗಿಸಿದೆ. ಹಣೆಗಿಟ್ಟ ಬಿಂದಿ ಸ್ಥಳಿಯ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡಿದೆ.

Niveditha Gowda

ಫ್ಯಾಷನ್‌ ವಿಮರ್ಶಕರ ಮಾತು

ನಿವೇದಿತಾ ಅವರ ಈ ಗೋಲ್ಡನ್‌ ಲುಕ್‌, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳನ್ನು ಸೆಳೆದಿದೆ. ಇದರೊಂದಿಗೆ ಟ್ರೆಡಿಷನಲ್‌ವೇರ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ. ಅವರ ಪ್ರಕಾರ, ಗೋಲ್ಡನ್‌ ಲುಕ್‌, ವೆಡ್ಡಿಂಗ್‌ ಸೀಸನ್‌ಗೆ ಹೇಳಿ ಮಾಡಿಸಿದ ಔಟ್‌ಲುಕ್‌ ಎನ್ನುತ್ತಾರೆ.

ನಿವೇದಿತಾ ಗೌಡ ಗೋಲ್ಡನ್‌ ಲುಕ್‌ ಟ್ರೈ ಮಾಡಿ ನೋಡಿ

  • ಕಂಪ್ಲೀಟ್‌ ಗೋಲ್ಡನ್‌ ಶೇಡ್‌ನ ಔಟ್‌ಫಿಟ್‌ ಚೂಸ್‌ ಮಾಡಿ.
  • ಎಥ್ನಿಕ್‌ವೇರ್‌ ಆಯ್ಕೆ ಮಾಡಿ.
  • ಜ್ಯುವೆಲರಿ ಕೂಡ ಗೋಲ್ಡನ್‌ ಶೇಡ್‌ನದ್ದಾಗಿರಬೇಕು.
  • ಮೇಕಪ್‌ ಹಾಗೂ ಹೇರ್‌ಸ್ಟೈಲ್‌ ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

Continue Reading

ಫ್ಯಾಷನ್

Summer Fashion: ಸಮ್ಮರ್‌ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್‌ ಇಯರಿಂಗ್ಸ್‌

ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್‌ ಫಾಲ್‌ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಈ ಇಯರಿಂಗ್ಸ್‌ ಸದ್ಯ ಹುಡುಗಿಯರ ಫೇವರೇಟ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ. ಏನಿದು ವಾಟರ್‌ ಫಾಲ್‌ ಇಯರಿಂಗ್ಸ್?‌ ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ಸಮ್ಮರ್‌ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್‌ ಫಾಲ್‌ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಕ್ರಿಸ್ಟಲ್‌ ಅಥವಾ ಅಮೆರಿಕನ್‌ ಡೈಮಂಡ್‌ ಹೊಂದಿರುವ ಈ ಇಯರಿಂಗ್ಸ್‌ ಸದ್ಯ ಹುಡುಗಿಯರ ಫೇವರೇಟ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿವೆ.

Summer Fashion

ಏನಿದು ವಾಟರ್ಫಾಲ್‌ ಇಯರಿಂಗ್ಸ್‌ ?

ನೋಡಲು ಥೇಟ್‌ ಜಲಪಾತದಂತೆ ಕಾಣಿಸುವ ಈ ಹ್ಯಾಂಗಿಂಗ್ಸ್‌ನಂತಹ ಕಿವಿಯೊಲೆಗಳು ನೋಡಲು ವಾಟರ್‌ಫಾಲ್‌ನಂತೆ ಕಾಣುತ್ತವೆ. ಹಾಗಾಗಿ ಇವನ್ನು ವಾಟರ್‌ಫಾಲ್‌ ಇಯರಿಂಗ್ಸ್‌ ಎನ್ನಲಾಗುತ್ತದೆ. ಕಿವಿಗೆ ಧರಿಸಿದಾಗ ಇಳೆ ಬೀಳುವ ಲೇಯರ್‌ನಂತಹ ಕ್ರಿಸ್ಟಲ್‌ ಸರಪಳಿಗಳು ವಾಟರ್‌ಫಾಲ್‌ನಂತೆ ಕಾಣಿಸುತ್ತವೆ. ಈ ವಿನ್ಯಾಸದಲ್ಲೆ ಇದೀಗ ಸಾಕಷ್ಟು ಡಿಸೈನ್‌ನವು ಆಕ್ಸೆಸರೀಸ್‌ ಲೋಕಕ್ಕೆ ಬಂದಿವೆ. ಮೈಕ್ರೋ ಕ್ರಿಸ್ಟಲ್ಸ್‌ ಅಂದರೇ, ಅಮೆರಿಕನ್‌ ಡೈಮಂಡ್‌ ಅಥವಾ ಆರ್ಟಿಫಿಷಿಯಲ್‌ ಅಮೆರಿಕನ್‌ ಡೈಮಂಡ್‌ ಹೊಂದಿರುವ ನಾಲ್ಕೈದು ಲೇಯರ್‌ ಹೊಂದಿರುವಂತಹ ಇಳೆ ಬೀಳುವಂತಹ ಇಯರಿಂಗ್‌ಗಳು ವೈಟ್‌ ಶೇಡ್‌ನಲ್ಲಿ ಲಭ್ಯ. ಇದೀಗ ಪಾಸ್ಟೆಲ್‌ ಶೇಡ್‌ಗಳಲ್ಲೂ ದೊರಕುತ್ತಿವೆ. ಲೈಟ್‌ ಪಿಂಕ್‌, ಪೀಚ್‌, ಬೀಚ್‌ ಬ್ಲ್ಯೂ, ಸ್ಕೈ ಬ್ಲ್ಯೂ, ಪಿಸ್ತಾ ಗ್ರೀನ್‌ ಶೇಡ್‌ನವು ಹೆಚ್ಚು ಪಾಪುಲರ್‌ ಆಗಿವೆ. ಹುಡುಗಿಯರನ್ನು ಸೆಳೆದಿವೆ.

Summer Fashion

ಪಾರ್ಟಿವೇರ್‌ ಆಕ್ಸೆಸರೀಸ್‌

ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಗೆ ಸೇರುವ ಈ ವಾಟರ್‌ ಫಾಲ್‌ ಇಯರಿಂಗ್‌ಗಳು ಕೆಲವು ಮೇಲ್ಭಾಗದಲ್ಲಿ ಬಿಗ್‌ ಸ್ಟೋನ್‌ ಅಥವಾ ಕಲರ್‌ಫುಲ್‌ ಇಮಿಟೇಡ್‌ ಸ್ಟೋನ್ಸ್‌ ಹೊಂದಿರುತ್ತವೆ. ಇಲ್ಲವೇ ಬೀಡ್ಸ್‌ ಅಥವಾ ಪರ್ಲ್‌ ಹೊಂದಿರುತ್ತವೆ. ಅದರ ಕೆಳಗೆ ಸುಮಾರು ನಾಲ್ಕೈದು ಇಂಚಿನಷ್ಟು ಉದ್ದದ ಹ್ಯಾಂಗಿಂಗ್‌ ಡಿಸೈನ್‌ ಹೊಂದಿರುತ್ತವೆ. ಕೆಲವು ಒಂದೇ ಸಮನಾಗಿ ಇದ್ದರೇ, ಇನ್ನು ಕೆಲವು ಆಸೆಮ್ಮಿಟ್ರಿಕಲ್‌ ಲೆಂಥ್‌ ಹೊಂದಿರುತ್ತವೆ. ಇವು ಇದೀಗ ಪಾರ್ಟಿವೇರ್‌ ಆಕ್ಸೆಸರೀಸ್‌ ಕೆಟಗರಿಯಲ್ಲಿ ಟಾಪ್‌ ಲಿಸ್ಟ್‌ನಲ್ಲಿವೆ. ಇವುಗಳ ವಿಶೇಷತೆಯೇಂದರೇ, ಯಾವುದೇ ಬಗೆಯ ಶಿಮ್ಮರ್‌ ಅಥವಾ ಶೈನಿಂಗ್‌ ಫ್ಯಾಬ್ರಿಕ್‌ನ ಪಾರ್ಟಿವೇರ್‌ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಬಹುದು. ಎಲ್ಲವಕ್ಕೂ ಇವು ಮ್ಯಾಚ್‌ ಆಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಮುಖವನ್ನು ಹೈ ಲೈಟ್‌ ಮಾಡುತ್ತವೆ. ಮಿರುಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Summer Fashion

ವಾಟರ್‌ ಫಾಲ್‌ ಕ್ಲಾಸಿ ಲುಕ್‌

“ಶಿಮ್ಮರ್‌ ಔಟ್‌ಫಿಟ್‌ಗಳಿಗೆ ಈ ವಾಟರ್‌ಫಾಲ್‌ ಇಯರಿಂಗ್‌ಗಳು ಹೇಳಿ ಮಾಡಿಸಿದಂತಿರುತ್ತವೆ. ಕಿವಿ ಮಾತ್ರವಲ್ಲ, ಇಡೀ ಲುಕ್‌ಗೆ ಇವು ಸಾಥ್‌ ನೀಡುತ್ತವೆ. ಆಕರ್ಷಕವಾಗಿ ಕಾಣಿಸುತ್ತವೆ. ಕ್ಲಾಸಿ ಲುಕ್‌ ನೀಡುವುದರೊಂದಿಗೆ ಸೆಲೆಬ್ರೆಟಿ ಇಮೇಜ್‌ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರೀಟಾ. ಅವರ ಪ್ರಕಾರ, ಯುವತಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುವುದು ಹೆಚ್ಚಾಗಿದೆ.

Summer Fashion

ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಹೀಗಿರಲಿ

  • ಶಿಮ್ಮರ್‌ ಡಿಸೈನರ್‌ವೇರ್‌ ಶೇಡ್ಸ್‌ಗೆ ತಕ್ಕಂತೆ ವಾಟರ್‌ ಫಾಲ್‌ ಇಯರಿಂಗ್‌ ಆಯ್ಕೆ ಮಾಡಿ.
  • ಪಾಸ್ಟೆಲ್‌ ಶೇಡ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ.
  • ಆದಷ್ಟೂ ಮಿನುಗುವಂತವನ್ನು ಸೆಲೆಕ್ಟ್‌ ಮಾಡಿ.
  • ಶೋಲ್ಡರ್‌ ತನಕ ನೇತಾಡುವಂತವು ಇದೀಗ ಜೆನ್‌ ಜಿ ಹುಡುಗಿಯರನ್ನು ಸೆಳೆದಿವೆ.
  • ನಾಲ್ಕೈದು ಎಳೆ ಎಳೆಯಾಗಿರುವಂತವನ್ನು ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Summer Saree Fashion: ಬೇಸಿಗೆಯಲ್ಲೂ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಬೇಕೆ? ನಟಿ ಮೇಘಾಶ್ರೀ ಟಿಪ್ಸ್‌ ಫಾಲೋ ಮಾಡಿ!

Continue Reading
Advertisement
Kantara Movie Rishab Shetty And Pragathi Shetty Met Mohanlal
ಸಿನಿಮಾ7 mins ago

Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

Solution For Pimple
ಆರೋಗ್ಯ11 mins ago

Solution For Pimples: ಈ ಆಹಾರಗಳ ಸಹವಾಸ ಬಿಡಿ; ಮೊಡವೆಯನ್ನು ದೂರವಿಡಿ!

indian navy chief of naval staff dinesh tripathi
ಪ್ರಮುಖ ಸುದ್ದಿ20 mins ago

Indian Navy: ನೌಕಾಪಡೆ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ

IPL 2024
ಕ್ರೀಡೆ24 mins ago

IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

Masaba Gupta, Satyadeep Misra expecting 1st child
ಸಿನಿಮಾ31 mins ago

Masaba Gupta: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೀನಾ ಗುಪ್ತಾ ಮಗಳು ಮಸಾಬಾ!

Modi in Karnataka on April 20 Massive rallies in Chikkaballapura and Bengaluru
Lok Sabha Election 202432 mins ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ; ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಬೃಹತ್‌ ಸಮಾವೇಶ

IPL 2024 Points Table
ಕ್ರೀಡೆ50 mins ago

IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

open sump drowned
ಕ್ರೈಂ51 mins ago

Drowned: ನೀರಿನ ಸಂಪ್‌ನಲ್ಲಿ ಮುಳುಗಿ ತಾಯಿ- ಮಗು ಸಾವು, ಮುಚ್ಚಳ ಹಾಕದೆ ಬಿಟ್ಟಿದ್ದ ಮಾಲಿಕ

Benefits of Spinach Juice
ಆರೋಗ್ಯ1 hour ago

Benefits Of Spinach Juice: ದಟ್ಟ ಕೂದಲು ಬೇಕೆ? ಪಾಲಕ್‌ ಜ್ಯೂಸ್‌ ಕುಡಿಯಿರಿ

murder case gadag
ಕ್ರೈಂ1 hour ago

Murder Case: ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿ 4 ಮಂದಿ ಮಲಗಿದಲ್ಲೇ ಕೊಚ್ಚಿ ಕೊಲೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌