Children motivation: ಈ 10 ಸೂತ್ರಗಳು ನಿಮ್ಮ ಮಗುವನ್ನು ಖಂಡಿತಾ ಸ್ಮಾರ್ಟ್‌ ಆಗಿಸುತ್ತದೆ! - Vistara News

ಲೈಫ್‌ಸ್ಟೈಲ್

Children motivation: ಈ 10 ಸೂತ್ರಗಳು ನಿಮ್ಮ ಮಗುವನ್ನು ಖಂಡಿತಾ ಸ್ಮಾರ್ಟ್‌ ಆಗಿಸುತ್ತದೆ!

ನಿಮ್ಮ ಮಕ್ಕಳು ನಿಮ್ಮನ್ನು ನೋಡುತ್ತಾ ಬೆಳೆಯುತ್ತವೆ. ಅವರ ಪ್ರತಿಯೊಂದು ಕ್ರಿಯೆಗೆ ನೀವು ನೀಡುವ ಪ್ರತಿಕ್ರಿಯೆಯೇ ಸರಿಯಾದ Children motivation.

VISTARANEWS.COM


on

children
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯವನ್ನು ಬೆಳೆಸುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತೀ ಅವಶ್ಯಕ. ಆತ್ಮವಿಶ್ವಾಸವಿಲ್ಲದ ಮಗು ಯಾವುದೇ ಗುರಿಯನ್ನು ತಲುಪುವಲ್ಲಿ ಎಡವುತ್ತದೆ. ಅಥವಾ ತಮಗೆ ಬಂದ ಅವಕಾಶಗಳನ್ನಷ್ಟೆ ತೆಗೆದುಕೊಂಡು ಹೆಚ್ಚಿನ ಕನಸು ಕಾಣುವಲ್ಲಿ, ಆ ಕಡೆಗೆ ಲಕ್ಷ್ಯ ಇಡುವಲ್ಲಿ ಮನಸ್ಸು ಮಾಡುವುದಿಲ್ಲ. ನಿರಾಶಾವಾದಿಗಳಂತೆ ಕಾಣುವ ಇವರನ್ನು ಎಳವೆಯಲ್ಲಿಯೇ ಆಶಾವಾದದತ್ತ, ಆತ್ಮವಿಶ್ವಾಸದತ್ತ ಮುನ್ನುಗ್ಗುವಂತೆ ಮಾಡುವುದು ಹೆತ್ತವರ ದೊಡ್ಡ ಚಾಲೆಂಜ್‌. ಆದರೂ ಹೆತ್ತವರು ಈ ಸವಾಲನ್ನು ತೆಗೆದುಕೊಂಡು ಕೆಲವು ಸರಳ, ಸುಲಭ ನಡೆಗಳ ಮೂಲಕ ಗೆಲುವಿನ ಹಾದಿಯತ್ತ ಅವರನ್ನು ಕೊಂಡೊಯ್ಯಲು ಪ್ರೇರೇಪಿಸಬಹುದು.

೧. ಸಣ್ಣ ಸಣ್ಣ ಗುರಿಗಳನ್ನು ಅವರೆದುರಿಗಿಡಿ. ವಾರದಲ್ಲಿ ಕನಿಷ್ಟ ಒಂದು ಸಣ್ಣ ಗುರಿ ನಿಮ್ಮ ಮಕ್ಕಳಿಗೆ ಕೊಡಿ. ಇದು ತೀರಾ ಸಣ್ಣ ಮಕ್ಕಳಿಗಲ್ಲ ಎಂಬುದು ನೆನಪಿನಲ್ಲಿಡಿ. ಕೆಲವು ವಾರ ಸರಳ ಸುಲಭ ಗಣಿತ ಪರೀಕ್ಷೆಯೋ, ಅಥವಾ ಕಥೆ ಪುಸ್ತಕ ಓದುವಂತ ಚಾಲೆಂಜೋ, ಅಥವಾ ಅವರ ಇಷ್ಟದ ಆಟವನ್ನು ಇಂತಿಷ್ಟು ಸಮಯದೊಳಗೆ ಆಡಿ ಮುಗಿಸುವ ಅವರ ಕೈಯಲ್ಲಿ ಸಾಧ್ಯವಾಗುವಂಥ, ಅವರವರ ಮಟ್ಟಕ್ಕೆ ಅನುಸಾರವಾಗಿ ಕೊಡಿ. ಅವರು ಆ ಗುರಿಯನ್ನು ತಲುಪಿದಾಗ ಅದನ್ನು ಸಂಭ್ರಮಿಸಿ. ಅವರಲ್ಲಿ ತಾನದನ್ನು ಪೂರ್ಣಗೊಳಿಸಿದೆ ಎಂಬ ಭಾವ ಬರಲಿ.

೨. ಅವರ ವಯಸ್ಸಿಗೆ ಅನುಗುಣವಾಗಿ, ಪಠ್ಯೇತರವಾದ ಕೆಲವು ಕೆಲಸಗಳನ್ನು ಆಗಾಗ ಕೊಡಿ. ಉದಾಹರಣೆಗೆ, ನಿಮ್ಮ ಮಗು ೧೦ ವರ್ಷವನ್ನಾದರೂ ತಲುಪಿದ್ದರೆ, ಕೆಲವೊಮ್ಮೆ ಅವರನ್ನು ಅಂಗಡಿಗೆ ಕಳಿಸಿ, ಇಂಥ ಸಾಮಾನು ತೆಗೆದುಕೊಂಡು ಬಾ ಎಂದು ಒಬ್ಬರೇ ಕಳಿಸಬಹುದು. ವ್ಯವಹಾರ ಮಾಡುವುದು, ಜನರೊಂದಿಗೆ ಬೆರೆಯುವುದು ಅವರನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ.

೩. ನಿಮಗೆ ಆತ್ಮಸ್ಥೈರ್ಯ ಇಲ್ಲದೆ, ನೀವು ನಿಮ್ಮ ಮಗುವಿಗೆ ಅದನ್ನು ಹೇಳಿ ಕೊಡಲಾರಿರಿ. ಮೊದಲು ನಿಮ್ಮ ವೀಕ್‌ನೆಸ್‌ಗಳನ್ನು ಪತ್ತೆ ಹಚ್ಚಿ ಸರಿಮಾಡಿಕೊಳ್ಳಿ. ಆಗ ಅವರೂ ನಿಮ್ಮೊಂದಿಗೆ ಹೆಜ್ಜೆಯಿಡುತ್ತಾರೆ.

೪. ಎಡವಲು ಬಿಡಿ. ಸೋಲುಗಳು ಖಂಡಿತ ಮುಂದೆ ಹೋಗಲು ಪ್ರೇರೇಪಿಸುತ್ತದೆ. ಆತ್ಮಸ್ಥೈರ್ಯ ಬರಲಿ ಎಂದು ಟಾಸ್ಕ್‌ಗಳನ್ನು ಕೊಟ್ಟು ಅವರು ಗೆಲ್ಲಲಿ ಎಂದು ಸುಲಭವಾಗಿ ಗೆಲ್ಲಲು ಬೇಕೆಂದೇ ಅನುವು ಮಾಡಬಾರದು. ಇದರಿಂದ ಅದೇ ಅಭ್ಯಾಸವಾಗಿ ಮಗು ಸೋಲನ್ನು ಸ್ವೀಕರಿಸದ ಮನಸ್ಥಿತಿ ಬೆಳೆಸಿಕೊಳ್ಳುತ್ತದೆ. ಹಾಗಾಗಿ ಆಗಾಗ ಆಟದಲ್ಲಿ ನೀವು ಮಗುವನ್ನು ಸೋಲಿಸಿ. ಪ್ರತೀ ಸಲ ಅವರೇ ಗೆಲ್ಲಬಾರದು.

kid

೫. ತಪ್ಪುಗಳನ್ನು ಹುಡುಕಿ ಹುಡುಕಿ ಪದೇ ಪದೆ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಬೇಡಿ. ಮಕ್ಕಳು ತಪ್ಪುಗಳನ್ನು ಮಾಡಲಿ. ಮಾಡಿದ್ದನ್ನು ಅವರಿಗೆ ಮನದಟ್ಟು ಮಾಡಿ. ಎಲ್ಲಿ ತಪ್ಪಾಯಿತು, ಯಾಕೆ ಆಯಿತು ಎಂಬುದನ್ನು ವಿವರಿಸಿ. ಆಮೇಲೆ ಆ ವಿಷಯ ಬಿಟ್ಟುಬಿಡಿ. ಅಷ್ಟೇ.

೬. ಅವರನ್ನು ಕಂಫರ್ಟ್‌ ಝೋನ್‌ನಿಂದ ಹೊರಗೆ ತಳ್ಳಿ. ಹಾಗಂತ ಬಲವಂತವಾಗಿ ಒಮ್ಮೆಲೇ ಅಲ್ಲ. ನಿಧಾನವಾಗಿ ಕೆಲವೊಮ್ಮೆ ಅವರು ಕಂಫರ್ಟ್‌ ಝೋನಿನಿಂದ ಹೊರಗಿರುವುದನ್ನು ಅಭ್ಯಾಸ ಮಾಡಿಕೊಳ್ಳಲಿ. ಆಗಷ್ಟೇ ಬೆಳವಣಿಗೆ ಸಾಧ್ಯ.

೭. ಅವರ ಅಭಿಪ್ರಾವನ್ನು ಗೌರವಿಸಿ. ʻನೀನು ಸಣ್ಣವಳು/ನು, ಬಾಯ್ಮುಚ್ಚು, ದೊಡ್ಡವರು ಮಾತಾಡುವಾಗ ನಿನ್ನದೇನು?ʼ ಎಂದು ಪ್ರತಿ ಬಾರಿಯೂ ಗದರಬೇಡಿ. ಕೆಲವು ವಿಷಯಗಳಿಗೆ ಅವರು ಜೊತೆಗಿದ್ದಾಗ ಅವರ ಮಾತುಗಳನ್ನು ಕೇಳಿ. ಅವರ ಬಳಿಯೂ ಅಭಿಪ್ರಾಯಗಳಿರುತ್ತವೆ!

ಇದನ್ನೂ ಓದಿ: ಮಕ್ಕಳು ಸ್ಮಾರ್ಟ್‌ ಆಗಬೇಕೇ? ಅವರನ್ನು ಹೆಚ್ಚು ಅಪ್ಪಿಕೊಳ್ಳಿ!

೮. ಪಠ್ಯ, ಓದಿನ ಹೊರತಾಗಿಯೂ ಕುಟುಂಬದ ಕೆಲವು ಜವಾಬ್ದಾರಿಯುತ ಕೆಲಸಗಳನ್ನು ಅವರಿಗೆ ಕೊಡಿ. ಅವರದನ್ನು ನಿರ್ವಹಿಸಲಿ. ಕೇವಲ ಪಠ್ಯ ವಿಷಯಗಳು ಬದುಕಿನಲ್ಲಿ ಕೈ ಹಿಡಿಯುವುದಿಲ್ಲ.

೯. ಅವರ ಪ್ರಯತ್ನಗಳನ್ನು ಗೌರವಿಸಿ. ಅವರ ಪ್ರತಿಭೆ, ಯಾವುದೇ ಕೆಲಸಕ್ಕೆ ಅವರು ಮಾಡಿದ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ. ಉದಾಹರಣೆಗೆ, ಯಾವುದಾದರೊಂದು ಪರೀಕ್ಷೆಯಲ್ಲೋ, ಸ್ಪರ್ಧೆಯಲ್ಲೋ, ಉತ್ತಮ ಅಂಕ ಪಡೆದೋ, ಬಹುಮಾನವನ್ನೋ ಗಳಿಸಿದರೆ ʻನಿನ್ನ ಅದೃಷ್ಟʼ ಎನ್ನಬೇಡಿ. ʻನಿನ್ನ ಪ್ರಯತ್ನಕ್ಕೆ ತಕ್ಕ ಫಲ ಎನ್ನಿ. ನಿನ್ನ ಪ್ರಯತ್ನದ ಫಲ ನನಗೆ ಹೆಮ್ಮೆ ತಂದಿದೆʼ ಎನ್ನಿ.

೧೦. ತಮ್ಮ ಬಗ್ಗೆ ನೆಗೆಟಿವ್‌ ಭಾವನೆಗಳನ್ನು ಅವರು ಹೊಂದಿದ್ದರೆ ಅದರಿಂದ ಹೊರ ತರಲು ಪ್ರಯತ್ನಿಸಿ. ಉದಾಹರಣೆಗೆ, “ನಾನು ಸ್ಮಾರ್ಟ್‌ ಇಲ್ಲ, ನನಗದು ತಿಳಿದಿಲ್ಲ, ನಾನು ಮಾಡಲಾರೆ” ಥರದ ಮಾತುಗಳನ್ನಾಡುತ್ತಿದ್ದರೆ, ಬದಲಿಸಿಕೊಳ್ಳಿ. ʻನೀನು ಪ್ರಯತ್ನ ಪಡು, ಯಾಕೆ ಸಾಧ್ಯವಿಲ್ಲʼ ಎಂಬಂಥ ಉತ್ತೇಜಕ ಮಾತುಗಳನ್ನಾಡಿ. ಬದಲಾಗಿ “ಹೌದು, ನೀನು ಏನೇನೂ ಸಾಲದು” ಎಂದು ಮತ್ತಷ್ಟು ಕುಗ್ಗಿಸಬೇಡಿ.

ಇದನ್ನೂ ಓದಿ: ನನ್ನ ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ… ತಾಯಿಯ ನೂರನೇ ಜನ್ಮದಿನ ನೂರೆಂಟು ನೆನಪು ಹರವಿಟ್ಟ ಪ್ರಧಾನಿ ಮೋದಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

ಬೇಸಿಗೆಯಲ್ಲಿ ಕಾಡುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಪೈಕಿ ಮೂಗಿನಲ್ಲಿ ರಕ್ತ ಸೋರುವುದೂ ಒಂದು. ಅತಿ ಬಿಸಿಯಾದ ಮತ್ತು ಶುಷ್ಕ ವಾತಾವರಣವಿದ್ದಾಗ ಈ ಸಮಸ್ಯೆ ಕಾಡುವುದು ಹೆಚ್ಚು. ಅತಿಯಾದ ಚಳಿಯ ಜೊತೆಗಿನ ಒಣ ಹವೆ ಇದ್ದರೂ ಈ ತೊಂದರೆ ಕಾಡಬಹುದು. ಆದರೆ ಹೆಚ್ಚಿನ ಜನ ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಪಸ್ವಲ್ಪ ರಕ್ತ ಸೋರುತ್ತಿದ್ದರೆ ಇದನ್ನು ತಡೆಯುವುದಕ್ಕೆ ಕೆಲವು ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ಮೂಗಿನಲ್ಲಿ ಹೆಚ್ಚು ರಕ್ತಸ್ರಾವ (Nosebleeds In Summer) ಆಗುತ್ತಿದ್ದರೆ ವೈದ್ಯರನ್ನು ಕಾಣಬೇಕಾದೀತು.

VISTARANEWS.COM


on

Nosebleeds In Summer
Koo

ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮೂಗಿನಲ್ಲಿ ರಕ್ತಸ್ರಾವ ಆಗುವುದು ಸಾಮಾನ್ಯ. ಆದರೆ ಹಾಗೇಕಾಗುತ್ತದೆ? ಹಾಗೆ ಆಗದಂತೆ ತಡೆಯುವುದಕ್ಕೆ ಸಾಧ್ಯವಿಲ್ಲವೇ- ಈ ಎಲ್ಲ ಮಾಹಿತಿಗಳ ಜೊತೆಗೆ ಅದನ್ನು ತಡೆಯುವ ಸರಳ (Nosebleeds In Summer) ಉಪಾಯಗಳು ಇಲ್ಲಿವೆ. ಬೇಸಿಗೆಯಲ್ಲಿ ಕಾಡುವ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಪೈಕಿ ಮೂಗಿನಲ್ಲಿ ರಕ್ತ ಸೋರುವುದೂ ಒಂದು. ಅತಿ ಬಿಸಿಯಾದ ಮತ್ತು ಶುಷ್ಕ ವಾತಾವರಣವಿದ್ದಾಗ ಈ ಸಮಸ್ಯೆ ಕಾಡುವುದು ಹೆಚ್ಚು. ಅತಿಯಾದ ಚಳಿಯ ಜೊತೆಗಿನ ಒಣ ಹವೆ ಇದ್ದರೂ ಈ ತೊಂದರೆ ಕಾಡಬಹುದು. ಆದರೆ ಹೆಚ್ಚಿನ ಜನ ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಪಸ್ವಲ್ಪ ರಕ್ತ ಸೋರುತ್ತಿದ್ದರೆ ಇದನ್ನು ತಡೆಯುವುದಕ್ಕೆ ಕೆಲವು ಮನೆಮದ್ದುಗಳು ಸಹಾಯ ಮಾಡಬಹುದು. ಆದರೆ ಮೂಗಿನಲ್ಲಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ವೈದ್ಯರನ್ನು ಕಾಣಬೇಕಾದೀತು. ಮೂಗಿನಲ್ಲಿ ರಕ್ತ ಸೋರುವುದಕ್ಕೆ ಕಾರಣಗಳನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಒಣಗಿದ ಬಿಸಿ ಹವೆಯಿಂದಾಗಿ ಮೂಗಿನ ಒಳ ಭಾಗದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಒಡೆದಾಗ ಉಂಟಾಗುವ ಸಮಸ್ಯೆಯಿದು. ಕೆಲವೊಮ್ಮೆ ಸೋಂಕಿನಿಂದಲೂ ಈ ಸಮಸ್ಯೆ ಕಾಣಬಹುದು. ಅತಿಯಾಗಿ ರಕ್ತಸ್ರಾವ ಆಗುತ್ತಿದ್ದರೆ, ಬೇರೆಯದೇ ಸಮಸ್ಯೆಯನ್ನಿದು ಸೂಚಿಸಬಹುದು. ಆದರೆ ಬೇಸಿಗೆಯ ಕಾರಣದಿಂದಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ, ಕೆಲವು ಮನೆಮದ್ದುಗಳು ಇದಕ್ಕೆ ಉಪಶಮನ ನೀಡುತ್ತವೆ.

drink Water night

ನೀರು ಕುಡಿಯಿರಿ

ಇದಕ್ಕಿರುವ ಅತ್ಯಂತ ಸರಳವಾದ ಮದ್ದೆಂದರೆ ನೀರು ಕುಡಿಯುವುದು. ಹೆಚ್ಚಿನ ನೀರು ದೇಹ ಸೇರಿದಂತೆ ಕೋಶಗಳಲ್ಲಿರುವ ಶುಷ್ಕತೆ ಕಡಿಮೆಯಾಗುತ್ತದೆ. ಇದರಿಂದ ಮೂಗಿನಲ್ಲಿರುವ ಮ್ಯೂಕಸ್‌ ಕೋಶಗಳು ಸಹ ತಮ್ಮ ತೇವವನ್ನು ಕಾಪಿಟ್ಟುಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಅಂದರೆ, ಒಣ ಹವೆಯ ಪ್ರತಿಕೂಲ ಪರಿಣಾಮ ಬೀರದಂತೆ ತಡೆಯುವುದಕ್ಕೆ ಇದು ಸುಲಭದ ಉಪಾಯ.

ಹ್ಯುಮಿಡಿಫಯರ್‌

ಬೇಸಿಗೆಯ ನೆವದಿಂದ ಎಷ್ಟೋ ಬಾರಿ ಅತಿಯಾಗಿ ಫ್ಯಾನ್‌ ಅಥವಾ ಎಸಿ ಬಳಸುತ್ತೇವೆ. ಇದರಿಂದ ಮನೆಯ ಅಥವಾ ಕಚೇರಿಯ ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ನೈಸರ್ಗಿಕವಾದ ಬಿಸಿ ಗಾಳಿಯ ಜೊತೆಗೆ ಇದೂ ಸಹ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ ವಾತಾವರಣದ ತೇವಾಂಶವನ್ನು ಹೆಚ್ಚಿಸುವಂಥ ಹ್ಯುಮಿಡಿಫಯರ್‌ ಬಳಸುವುದು ಇನ್ನೊಂದು ಮಾರ್ಗ. ಇದರಿಂದ ಮೂಗಿನ ಅಂಗಾಂಶಗಳು ಹಾನಿಗೊಳ್ಳುವುದನ್ನು ತಡೆಯಬಹುದು.

Moisturizer

ಮಾಯಿಶ್ಚರೈಸರ್‌ ಬಳಕೆ

ಮೂಗಿನ ಒಳ ಭಾಗ ಒಣಗಿ ಬಿರಿಯದಂತೆ ತಡೆಯಲು ಮಾಯಿಶ್ಚರೈಸರ್‌ ಬಳಕೆ ಮಾಡುವುದು ಉಪಯುಕ್ತ. ಇದಕ್ಕಾಗಿ ಇರುವ ಜೆಲ್‌ ಇಲ್ಲವೇ ಸ್ಟ್ರೇ ಬಳಸಬಹುದು. ಸಾಲೈನ್‌ ಸ್ಪ್ರೇ ಬಳಕೆಯೂ ಉಪಯುಕ್ತವಾದೀತು. ಇವನ್ನೆಲ್ಲ ಹೊಸದಾಗಿ ಖರೀದಿಸಿ ತರುವಷ್ಟು ವ್ಯವಧಾನ ಇಲ್ಲದಿದ್ದರೆ, ಸರಳವಾಗಿ ಕೊಬ್ಬರಿ ಎಣ್ಣೆಯನ್ನು ಮೂಗಿನ ಒಳಭಾಗದ ಅಂಗಾಂಶಗಳಿಗೆ ಹೆಚ್ಚಿ. ಇದು ಪರಿಣಾಮಕಾರಿಯಾಗಿ ತೇವವನ್ನು ಹಿಡಿದಿಡುತ್ತದೆ.

ಮುಚ್ಚಿಕೊಳ್ಳಿ

ತೀವ್ರ ತಾಪದ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್‌ ಹಾಕುವುದು ಸಹಾಯಕ. ಇದರಿಂದ ಒಣ ಹವೆಯನ್ನು ಉಸಿರಾಡುವುದು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು. ತಿಳಿ ಬಣ್ಣದ ದೊಡ್ಡ ಹ್ಯಾಟ್‌ ಧರಿಸುವುದರಿಂದ ಮುಖದ ಮೇಲೆ ಬಿಸಿಲು ನೇರವಾಗಿ ಬೀಳದಂತೆ ಮಾಡಬಹುದು. ಈ ಕ್ರಮಗಳೆಲ್ಲ ಸಣ್ಣವೇ ಆದರೂ, ಒಟ್ಟಾರೆಯಾಗಿ ಸಮಸ್ಯೆಯನ್ನು ದೂರ ಮಾಡುವಲ್ಲಿ ನೆರವಾಗುತ್ತವೆ.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ಮಾಡಬೇಡಿ

ಮೂಗನ್ನು ಶುಚಿಗೊಳಿಸುವ ನೆವದಲ್ಲಿ ನಾಸಿಕದ ಮೇಲೆ ಯಾವುದೇ ರೀತಿಯಲ್ಲೂ ತೀರಾ ಒತ್ತಡ ಹಾಕಬೇಡಿ. ಈಗಾಗಲೇ ಮೂಗಿನಲ್ಲಿ ರಕ್ತ ಸೋರುತ್ತಿದ್ದರಂತೂ ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಮೂಗಿನ ಮೇಲೆ ಒತ್ತಡ ಹಾಕಿದರೆ ಬಿರಿದ ಕೋಶಗಳು ದುರಸ್ತಿಯಾಗುವುದು ನಿಧಾನವಾಗುತ್ತದೆ ಅಥವಾ ಇನ್ನಷ್ಟು ಬಿರಿದು ಸಮಸ್ಯೆಯನ್ನೇ ಸೃಷ್ಟಿಸುತ್ತವೆ. ಅಲರ್ಜಿಗಳನ್ನು ಹತ್ತಿಕ್ಕಿ. ದಿನವಿಡೀ ಜೋರಾಗಿ ಸೀನುತ್ತಲೇ ಇದ್ದರೆ, ಮೂಗು ಸೋರುವಾಗ ರಕ್ತಸ್ರಾವ ಆಗುವುದು ಖಚಿತ.

Winter transitions to summer

ಆಹಾರ

ಆರೋಗ್ಯಕರವಾದ ಆಹಾರವನ್ನು ಕಡ್ಡಾಯವಾಗಿ ಪಾಲಿಸಿ. ಸೆಕೆಯ ನೆವವೊಡ್ಡಿ ಅತಿಯಾದ ತಣ್ಣಗಿನ ಪೇಯಗಳನ್ನು ಕುಡಿಯುವುದು, ಐಸ್‌ಕ್ರೀಮ್‌ ಮೆಲ್ಲುವುದು- ಇವೆಲ್ಲ ಮೂಗಿನ ಸಮಸ್ಯೆಗಳನ್ನು ಹೆಚ್ಚಿಸಬಹುದು; ಗಂಟಲಿನ ಸೋಂಕಿಗೆ, ಶೀತ-ನೆಗಡಿಗೆ ಕಾರಣವಾಗಬಹುದು. ವಿಟಮಿನ್‌ ಸಿ ಹೆಚ್ಚಿರುವ ಆಹಾರವನ್ನು ವಿಫುಲವಾಗಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

Continue Reading

ಆರೋಗ್ಯ

Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!

ಕೂದಲು ಉದುರುವ ಸಮಸ್ಯೆ ಈಗ ಯಾರಿಗಿಲ್ಲ ಹೇಳಿ? ಹಾಗೆಂದು ಇದಕ್ಕೆ ಮದ್ದೇ ಇಲ್ಲ ಎಂದು ಹೇಳಲೂ ಆಗದು. ಬೀಟಾ ಕ್ಯಾರೊಟಿನ್‌ನಂಥ ಉತ್ಕರ್ಷಣ ನಿರೋಧಕಗಳು ಕೂದಲಿನ ಆರೋಗ್ಯ ವರ್ಧನೆಯಲ್ಲಿ ಮಹತ್ವದ ಕೆಲಸ ಮಾಡಬಲ್ಲವು. ಈ ಬಗೆಗಿನ (Hair Growth Tips) ವಿವರಗಳು ಇಲ್ಲಿವೆ.

VISTARANEWS.COM


on

Hair Growth Tips
Koo

ದೇಹದ ಆರೋಗ್ಯ ರಕ್ಷಣೆಯಲ್ಲಿ ಉತ್ಕರ್ಷಣ ನಿರೋಧಕಗಳ ಪಾತ್ರ ಹಿರಿದು. ರೋಗಗಳನ್ನು ದೂರ ಇರಿಸುವುದು ಮಾತ್ರವಲ್ಲ, ಹಲವು ವಿಷಯಗಳು ಏರುಪೇರಾಗದಂತೆ ನಿರ್ವಹಿಸಲು ಸಹಾಯವನ್ನೂ ಮಾಡುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೂದಲು ಉದುರದಂತೆ ಕಾಪಾಡಿಕೊಳ್ಳಲು ನಮಗೆ ಬೀಟಾ ಕ್ಯಾರೊಟಿನ್‌ ಎಂಬ ಉತ್ಕರ್ಷಣ ನಿರೋಧಕ ಸಹಾಯ ಮಾಡುತ್ತದೆ. ಆದರೆ ಆ ಸತ್ವ ನಮಗೆ ದೊರೆಯುವುದು ಹೇಗೆ? ಯಾವ ಆಹಾರಗಳಿಂದ ಅದು ದೊರೆಯುತ್ತದೆಂದು ತಿಳಿದರೆ, ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೂದಲಿನ ಸಮಸ್ಯೆಗೆ ಬೀಟಾ ಕ್ಯಾರೊಟಿನ್‌ ಹೇಗೆ ನೆರವಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಈ ಸತ್ವವನ್ನು ವಿಟಮಿನ್‌ ಎ ಆಗಿ ದೇಹ ಪರಿವರ್ತಿಸಿಕೊಳ್ಳುತ್ತದೆ. ಎ ಜೀವಸತ್ವವು ತಲೆಯ ಚರ್ಮದ ತೇವವನ್ನು ಕಾಪಾಡಿಕೊಂಡು, ಕೂದಲಿನ ಬುಡವನ್ನು ಸುದೃಢಗೊಳಿಸುತ್ತದೆ. ಬೇರು ಭದ್ರವಾಗಿದ್ದಾಗ ಸತ್ವಗಳನ್ನು ಪಡೆಯುವುದು ಕಷ್ಟವಲ್ಲ. ಹೀಗೆ ಕೂದಲು ಉದುರುವುದು ಕಡಿಮೆಯಾಗಿ, ನಯವಾದ, ಹೊಳಪಿನ ಕೂದಲನ್ನು ಪಡೆಯಬಹುದು. ಇದಕ್ಕೆ ಬೇಕಾದ (Hair Growth Tips) ಆಹಾರಗಳು ಯಾವುವು?

Sweet potatoes have the ability to control diabetes and prevent cancer

ಗೆಣಸು

ವಿಟಮಿನ್‌ ಎ ಆಗಿ ಪರಿವರ್ತನೆ ಆಗಬಲ್ಲಂಥ ಬೀಟಾ ಕ್ಯಾರೊಟಿನ್‌ಗಳು ಇದರಲ್ಲಿ ಹೇರಳವಾಗಿವೆ. ಜೊತೆಗೆ, ಪ್ರೊಟೀನ್‌, ಕಬ್ಬಿಣ, ವಿಟಮಿನ್‌ ಸಿಯಂಥ ಸತ್ವಗಳು ಇದರಲ್ಲಿ ತುಂಬಿವೆ. ಇದರಿಂದ ತಲೆಯ ಚರ್ಮದ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲ, ಕೂದಲು ದುರ್ಬಲವಾಗಿ ತುಂಡಾಗದಂತೆಯೂ ತಡೆಯಬಹುದು. ಹೀಗಾಗಿ ಕೂದಲು ಉದುರುವುದು ನಿಂತು, ಗಾತ್ರದಲ್ಲೂ ಸುಧಾರಣೆ ಆಗುತ್ತದೆ.

Yellow capsicum

ದಪ್ಪ ಮೆಣಸು

ಇವುಗಳಲ್ಲಿ ಕೆಂಪು ಬಣ್ಣದವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚು. ಇದಲ್ಲಿರುವ ಬೀಟಾ ಕ್ಯಾರೊಟಿನ್‌ ಮತ್ತು ವಿಟಮಿನ್‌ ಸಿ ಅಂಶಗಳು ಹೆಚ್ಚಿನ ಪ್ರಮಾಣದ ಕೊಲಾಜಿನ್‌ ಉತ್ಪಾದನೆಗೆ ನೆರವಾಗುತ್ತವೆ. ಕೊಲಾಜಿನ್‌ ಹೆಚ್ಚು ಉತ್ಪಾದನೆ ಆದಷ್ಟಕ್ಕೂ ಕೂದಲಿನ ಬಲವರ್ಧನೆಯಾಗುತ್ತದೆ. ಈ ಮೂಲಕ ಉದುರುವುದನ್ನು ಕಡಿಮೆ ಮಾಡಬಹುದು.

Spinach

ಪಾಲಕ್‌ ಸೊಪ್ಪು

ಕೇವಲ ಪಾಲಕ್‌ ಮಾತ್ರವಲ್ಲ, ಯಾವುದೇ ಹಸಿರು ಸೊಪ್ಪುಗಳ ಸೇವನೆ ಕೂದಲಿನ ಆರೋಗ್ಯದಲ್ಲಿ ಸುಧಾರಣೆಯನ್ನು ತರಬಲ್ಲದು. ಇದರಲ್ಲಿರುವ ವಿಟಮಿನ್‌ ಸಿ, ಇ, ಕಬ್ಬಿಣದ ಸತ್ವಗಳು ಕೂದಲಿನ ಒಟ್ಟಾರೆ ಆರೋಗ್ಯಕ್ಕೆ ಬಹಳಷ್ಟು ಒಳಿತು ಮಾಡುತ್ತವೆ. ಕೂಲಿನ ಬುಡವನ್ನು ಭದ್ರಮಾಡಿ, ತುಂಡಾಗದಂತೆ ನೋಡಿಕೊಂಡು, ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತವೆ. ಹಾಗಾಗಿ ಪಾಲಕ್‌ ಸೇರಿದಂತೆ ಯಾವುದೇ ಹಸಿರು ಸೊಪ್ಪುಗಳ ಸೇವನೆ ಕೂದಲಿನ ಬೆಳವಣಿಗೆಗೆ ಉಪಯುಕ್ತ.

Carrot

ಕ್ಯಾರೆಟ್‌

ಬೀಟಾ ಕ್ಯಾರೊಟಿನ್‌ ಸಾಂದ್ರತೆಯ ವಿಷಯದಲ್ಲಿ ಗಜ್ಜರಿ ಸಾಕಷ್ಟು ಹೆಸರಾಗಿದೆ. ಇದು ಕೂದಲಿನ ಬೆಳವಣಿಗೆಗೆ ಮಾತ್ರವಲ್ಲ, ತಲೆಯ ಚರ್ಮದ ಆರೋಗ್ಯ ಸುಧಾರಣೆಯಲ್ಲೂ ಮಹತ್ವದ ಕೊಡುಗೆ ನೀಡುತ್ತದೆ. ಕೂದಲಿನ ಬಲ ವೃದ್ಧಿಸಿ, ಗಾತ್ರವನ್ನು ಹೆಚ್ಚಿಸುತ್ತದೆ.

Melons

ಮೆಲನ್‌ಗಳು

ಈ ಹಣ್ಣುಗಳಲ್ಲಿ ವಿಟಮಿನ್‌ ಸಿ, ಬೀಟಾ ಕ್ಯಾರೊಟಿನ್‌ ಸೇರಿದಂತೆ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಇವೆ. ಕೂದಲಿನ ಬುಡದ ತೇವವನ್ನು ಕಾಪಾಡಲು ಇವು ಸಹಕಾರಿ. ಅಂದರೆ ಇವೆಲ್ಲ ನೈಸರ್ಗಿಕ ಕಂಡೀಶನರ್‌ಗಳಂತೆ ಕೆಲಸ ಮಾಡುತ್ತವೆ. ಇದರಿಂದ ಕೂದಲಿನ ಕೋಶಗಳು ಆರೋಗ್ಯಯುತವಾಗಿದ್ದು, ಕೇಶರಾಶಿ ನಳನಳಿಸುತ್ತದೆ.

ಇದನ್ನೂ ಓದಿ: Mango For Diabetes: ಮಧುಮೇಹಿಗಳೂ ಮಾವಿನಹಣ್ಣಿನ ರುಚಿ ಸವಿಯಬಹುದೇ? ಇಲ್ಲಿದೆ ಉತ್ತರ!

ವಿಟಮಿನ್‌ ಸಿ ಆಹಾರಗಳು

ಬೆರ್ರಿಗಳು ಮತ್ತು ಸಿಟ್ರಸ್‌ ಹಣ್ಣುಗಳು ಈ ಪಟ್ಟಿಯಲ್ಲಿ ಮೊದಲು ನಿಲ್ಲುತ್ತವೆ. ಇವುಗಳಲ್ಲಿ ವಿಟಮಿನ್‌ ಎ ಮಾತ್ರವಲ್ಲ, ಹಲವು ರೀತಿಯ ಖನಿಜಗಳು, ಫ್ಲೆವನಾಯ್ಡ್‌ಗಳು ವಿಫುಲವಾಗಿವೆ. ಇವೆಲ್ಲವೂ ಕೊಲಾಜಿನ್‌ ಉತ್ಪಾದನೆಗೆ ನೆರವಾಗಿ, ಕೂದಲಿನ ಆಯಸ್ಸನ್ನೂ ಹೆಚ್ಚಿಸುತ್ತವೆ. ಇಂಥವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲಿನ ಆರೋಗ್ಯಕ್ಕೆ ಮಾತ್ರವೇ ಅಲ್ಲ, ದೇಹದ ಒಟ್ಟಾರೆ ಆರೋಗ್ಯ ಸುಧಾರಣೆಯನ್ನೂ ಸಾಧಿಸಬಹುದು.

Continue Reading

ಫ್ಯಾಷನ್

Star Fashion: ಏನಿದು ನಟಿ ಶ್ರೀ ಲೀಲಾ ಧರಿಸಿ ಮಿಂಚಿದ್ದ ಘರಾರ ಡ್ರೆಸ್?

ದುಬೈ ಮೂಲದ ಡಿಸೈನರ್‌ವೇರ್‌ ಪ್ರಿಂಟೆಡ್‌ ಫ್ಲೋರಲ್‌ ಘರಾರ ಡ್ರೆಸ್‌ನಲ್ಲಿ ಬಹುಭಾಷಾ ತಾರೆ ಶ್ರೀ ಲೀಲಾ (Star Fashion) ಮಿಂಚಿದ್ದಾರೆ. ತೆರೆಮರೆಗೆ ಸರಿದಿದ್ದ, ಘರಾರ ಫ್ಯಾಷನ್‌ ಇದೀಗ ಮತ್ತೊಮ್ಮೆ ಹೊಸ ರೂಪದಲ್ಲಿ ಮರಳಿದೆ. ಏನಿದು ಘರಾರ ಡ್ರೆಸ್? ಇಲ್ಲಿದೆ ಮಾಹಿತಿ.

VISTARANEWS.COM


on

Star Fashion
ಚಿತ್ರಗಳು: ಶ್ರೀ ಲೀಲಾ, ಸ್ಯಾಂಡಲ್‌ವುಡ್‌ ನಟಿ, ಫೋಟೋಕೃಪೆ: ಡಾಟ್‌ ಮೆಟ್ರಿಕ್ಸ್ ಕ್ರಿಯೇಟಿವ್ಸ್
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಯೂಟಿಫುಲ್‌ ಘರಾರ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್‌ ತಾರೆ ಶ್ರೀ ಲೀಲಾ (Star Fashion) ಮಿಂಚಿದ್ದಾರೆ. ದುಬೈ ಮೂಲದ ಬೋಟಿಕ್‌ವೊಂದರ ಡಿಸೈನರ್‌ವೇರ್‌ ಇದಾಗಿದೆ. ಜಾರ್ಜೆಟ್‌ ಫ್ಯಾಬ್ರಿಕ್‌ ಮರೂನ್‌ ಶೇಡ್‌ನ ಗಾರ್ಡನ್‌ ಪ್ರಿಂಟ್ಸ್ ಇರುವ ಈ ಡ್ರೆಸ್ ಅದೇ ಬಣ್ಣದ ಫ್ಲೋರಲ್‌ ಕ್ರಾಪ್‌ ಬ್ಲೌಸ್, ಪ್ಯಾಂಟ್‌ ಹಾಗೂ ಕೇಪ್‌ ಹೊಂದಿದೆ. ಈ ತ್ರೀ ಪೀಸ್‌ನ ಘರಾರ ಕೋ ಆರ್ಡ್ ಸೆಟ್‌ ಡ್ರೆಸ್‌ನಲ್ಲಿ ನಟಿ ಶ್ರೀ ಲೀಲಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ನಮ್ಮಲ್ಲಿ ತೆರೆಮರೆಗೆ ಸರಿದಿದ್ದ ಘರಾರ ಫ್ಯಾಷನ್‌ಗೆ ಮರು ಹುಟ್ಟು ಸಿಕ್ಕಿದೆ.

Star Fashion

ನಟಿ ಶ್ರೀ ಲೀಲಾ ಫ್ಯಾಷನ್‌ ಲವ್‌

ಕನ್ನಡದ ಕಿಸ್‌ ಚಲನಚಿತ್ರ ಸೇರಿದಂತೆ ನಾನಾ ಸಿನಿಮಾಗಳಲ್ಲಿ ನಟಿಸಿರುವ ಸ್ಯಾಂಡಲ್‌ವುಡ್‌ ನಟಿ ಶ್ರೀ ಲೀಲಾ, ಇದೀಗ ತೆಲುಗು ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಈಕೆ ಫ್ಯಾಷನ್‌ ಲವ್ವರ್‌ ಕೂಡ. ತಮ್ಮದೇ ಆದ ಫ್ಯಾಷನ್‌ ಸೆನ್ಸ್ ಹೊಂದಿರುವ ಶ್ರೀ ಲೀಲಾ ಆಗಾಗ್ಗೆ ಪ್ರಯೋಗಾತ್ಮಕ ಫ್ಯಾಷನ್‌ ಔಟ್‌ಫಿಟ್‌ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ದುಬೈ ಮೂಲದ ಡಿಸೈನರ್‌ವೇರ್ ಘರಾರ ಡ್ರೆಸ್‌ನಲ್ಲಿ ಅಭಿಮಾನಿಗಳನ್ನು ಸೆಳೆದಿದ್ದಾರೆ.

Star Fashion

ಏನಿದು ಘರಾರ ಕೋ ಆರ್ಡ್ ಸೆಟ್‌ ಡ್ರೆಸ್‌?

ಮೂಲತಃ ಉತ್ತರ ಭಾರತ ಹಾಗೂ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ರಾಯಲ್‌ ಔಟ್‌ಫಿಟ್‌ ಇದು. ಮದುವೆ ಹಾಗೂ ಇನ್ನಿತರೇ ಸಮಾರಂಭಗಳಲ್ಲಿ ಗ್ರ್ಯಾಂಡ್‌ ಲುಕ್‌ಗಾಗಿ ಈ ಘರಾರ ಡ್ರೆಸ್‌ಗಳನ್ನು ಧರಿಸುವುದು ಮೊದಲಿನಿಂದಲೂ ಬೆಳೆದು ಬಂದಿದೆ. ನೋಡಲು ಶರಾರ ಡ್ರೆಸ್‌ನಂತೆ ಕಂಡರೂ ಇದು ಅದಲ್ಲ! ಮಂಡಿವರೆಗೂ ಅಥವಾ ಮಂಡಿಯ ಮೇಲಿನವರೆಗೂ ಕೊಂಚ ಫಿಟ್ಟಿಂಗ್‌ ಪ್ಯಾಂಟ್‌, ಈ ಘರಾರ ಡ್ರೆಸ್‌ನಲ್ಲಿ ಕಾಣಬಹುದು. ಕೆಳಗೆ ಮಾತ್ರ ಲೂಸಾಗಿರುತ್ತವೆ. ನೋಡಲು ನೆರಿಗೆ ಅಥವಾ ಹರಡಿದಂತಹ ಪಲ್ಹಾಜೊ ಪ್ಯಾಂಟಿನಂತಿರುತ್ತವೆ. ಇನ್ನು, ಇತ್ತೀಚೆಗೆ ಘರಾರಗೆ ಕ್ರಾಪ್‌ ಬ್ಲೌಸ್‌ಗಳು ಜೊತೆಯಾಗಿವೆ. ಅದರೊಂದಿಗೆ ಕೇಪ್‌ ಕೋಟ್‌ ಕೂಡ ಬಂದಿವೆ. ಹಾಗಾಗಿ ಕೊಂಚ ಗ್ಲಾಮರಸ್‌ ಲುಕ್‌ ಬಯಸುವರು ಲಾಂಗ್‌ ಬ್ಲೌಸ್‌ ಬದಲು ಕ್ರಾಪ್‌ ಬ್ಲೌಸ್‌ ಘರಾರಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಸೋ, ಇದೀಗ ಗ್ಲಾಮರಸ್‌ ಟ್ರೆಡಿಷನಲ್‌ ಡ್ರೆಸ್‌ ಫ್ಯಾಷನ್‌ನ ಟಾಪ್‌ ಲಿಸ್ಟ್‌ಗೆ ಸೇರಿವೆ.

Star Fashion

ಸೆಲೆಬ್ರೆಟಿಗಳ ರಾಯಲ್‌ಲುಕ್‌ಗೆ ಘರಾರ ಡ್ರೆಸ್

ಬಾಲಿವುಡ್‌ ಸೆಲೆಬ್ರೆಟಿಗಳು ಕೂಡ ವೆಡ್ಡಿಂಗ್‌ ಹಾಗೂ ಟ್ರೆಡಿಷನಲ್‌ ಕಾರ್ಯಕ್ರಮಗಳಲ್ಲಿ ಕ್ರಾಪ್‌ ಬ್ಲೌಸ್‌ ಘರಾರ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕೋ ಆರ್ಡ್ ಸೆಟ್‌ನಂತಿರುವ ಈ ಘರಾರ ಔಟ್‌ಫಿಟ್‌ಗಳು ಇದೀಗ ಗ್ಲಾಮರಸ್‌ ಡಿಸೈನ್‌ನಲ್ಲೂ ಲಭ್ಯ ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ರಾಜ್‌.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Continue Reading

ಫ್ಯಾಷನ್

Cannes 2024 Sandalwood Actress Interview: ಕಾನ್‌ನಲ್ಲಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ ಇತಿ ಆಚಾರ್ಯ ಹೇಳಿದ್ದೇನು?

ಕಾನ್‌ ರೆಡ್‌ ಕಾರ್ಪೆಟ್‌ನಲ್ಲಿ ಸತತವಾಗಿ ಮೂರನೇ ಬಾರಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಹೆಗ್ಗಳಿಕೆ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್‌ ಇತಿ ಆಚಾರ್ಯಗೆ ಸಲ್ಲುತ್ತದೆ. ಈ ಬಾರಿ ಹ್ಯಾಟ್ರಿಕ್‌ ವಾಕ್‌ ಮಾಡಿದ ಅವರು ದೂರದ ಫ್ರಾನ್ಸ್ ನಿಂದ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ (Cannes 2024 Sandalwood Actress Interview) ಸಾರಂಶ ಇಲ್ಲಿದೆ.

VISTARANEWS.COM


on

Cannes 2024 Sandalwood Actress Interview
ಚಿತ್ರಗಳು: 2024 ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ 3ನೇ ಬಾರಿ ವಾಕ್‌ ಮಾಡಿದ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್‌ ಇತಿ ಆಚಾರ್ಯ
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್‌ ನಟಿ ಹಾಗೂ ಮಾಡೆಲ್‌ ಇತಿ ಆಚಾರ್ಯ, ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸತತವಾಗಿ 3 ನೇ ಬಾರಿ ರೆಡ್‌ ಕಾರ್ಪೆಟ್‌ ವಾಕ್‌ ಮಾಡಿ, ಹ್ಯಾಟ್ರಿಕ್‌ ಬಾರಿಸಿದ್ದಾರೆ. ಯಾರಿದು ಇತಿ ಆಚಾರ್ಯ? ಕಳೆದೆರಡು ಬಾರಿಯೂ ಕಾನ್‌ ಫೆಸ್ಟಿವಲ್‌ನಲ್ಲಿ ಸ್ಯಾಂಡಲ್‌ವುಡ್‌ ಪ್ರತಿನಿಧಿಸಿರುವ ಇತಿ ಆಚಾರ್ಯ, ಸಾಕಷ್ಟು ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇಕೆ! ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿಯೂ ರ್ಯಾಂಪ್‌ ವಾಕ್‌ ಮಾಡಿದ್ದಾರೆ. ಇಂಟರ್‌ನ್ಯಾಷನಲ್‌ ಆಲ್ಬಂ ಸಿಂಗರ್‌ ಮರ್ಲಿನ್‌ ಬಾಬಾಜೀ ಜೊತೆ ಆಲ್ಬಂನಲ್ಲೂ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿ ಕಾನ್‌ನಲ್ಲಿ ಲ್ಯಾವೆಂಡರ್‌ ಎಲಾಂಗೆಟೆಡ್‌ ನೆಟ್‌ ಗೌನ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಕಳೆದ ಬಾರಿಯೂ ಇದೇ ರೀತಿ ಟ್ರೆಂಡಿ ಡಿಸೈನರ್‌ ಗೌನ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ದೂರದ ಫ್ರಾನ್ಸ್‌ನಿಂದಲೇ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡ ಇತಿ ಆಚಾರ್ಯ ಪುಟ್ಟ ಸಂದರ್ಶನ (Cannes 2024 Sandalwood Actress Interview) ನೀಡಿದರು.

Iti Acharya

ಕಾನ್‌ 2024 ರೆಡ್‌ಕಾರ್ಪೆಟ್‌ನಲ್ಲಿ ನಿಮ್ಮ ಲುಕ್‌ ಬಗ್ಗೆ ನೀವು ಹೇಳುವುದೇನು?

ಸ್ಕೈ ಬ್ಲ್ಯೂ ಶೇಡ್‌ನ ಶಿಮ್ಮರ್‌ ಅಸೆಮ್ಮಿಟ್ರಿಕಲ್‌ ಸಿಂಗಲ್‌ ಶೋಲ್ಡರ್ ಫಿಶ್‌ ಟೇಲ್‌ ಗೌನ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಸಾಕಷ್ಟು ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರೂ, ಹೆಚ್ಚು ಹೈಲೈಟಾದ ಗೌನ್‌ ಇದು.

Iti Acharya

ಕಾನ್‌ ರೆಡ್‌ಕಾರ್ಪೆಟ್‌ ವಾಕ್‌ ನಿಮಗೆ ಕಲಿಸಿದ್ದೇನು?

ಈಗಾಗಲೇ ಸತತವಾಗಿ 3ನೇ ಬಾರಿ ವಾಕ್‌ ಮಾಡಿರುವುದು ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಕೇವಲ ಫ್ಯಾಷನ್‌ ಮಾತ್ರವಲ್ಲ, ಸಿನಿಮಾ ಕುರಿತಂತೆಯೂ ಸಾಕಷ್ಟು ವಿಚಾರ-ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿಸಿದೆ.

Iti Acharya

ನಿಮ್ಮ ಪ್ರಕಾರ, ಕಾನ್‌ ಫೆಸ್ಟಿವಲ್‌ ಚಿತ್ರಣ ಹೇಗಿತ್ತು?

ಜಾಗತೀಕ ಮಟ್ಟದ ಫ್ಯಾಷನ್‌ ಸ್ಟಾರ್‌ಗಳು ವಾಕ್‌ ಮಾಡುವುದನ್ನು ನೋಡುವುದೇ ಒಂದು ಖುಷಿ!. 23 ಸಾವಿರಕ್ಕೂ ಹೆಚ್ಚು ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳು ಭಾಗವಹಿಸಿದ್ದವು. ಬೆಂಗಳೂರಿನ ಜ್ಯುವೆಲರಿ ಬ್ರಾಂಡ್‌ ಕೂಡ ಕಾಣಿಸಿಕೊಂಡಿತು. ಪ್ರಪಂಚಾದಾದ್ಯಂತ ಇರುವ ಡಿಸೈನರ್‌ಗಳಿಗೆ ಇದು ದೊಡ್ಡ ವೇದಿಕೆಯಾಗಿದ್ದು, ಪ್ರಾಕ್ಟಿಕಲ್‌ ಪಾಠದ ಪ್ರದರ್ಶನದಂತಿತ್ತು.

Iti Acharya

ಕಾನ್‌ ಫ್ಯಾಷನ್‌ನಲ್ಲಿ ವಾಕ್‌ ಮಾಡುವುದು ಸುಲಭವೇ!

ಖಂಡಿತಾ ಇಲ್ಲ! ಇಂಡಿಯನ್‌ ನಟಿಯರಿಗೆ ಡಿಸೈನರ್‌ ಜೊತೆ ಹೋಗಲು ಅವಕಾಶವಿರುವುದಿಲ್ಲ. ಒಬ್ಬರೇ ಭಾರಿ ಗಾತ್ರದ ಡಿಸೈನರ್‌ವೇರ್‌ ಧರಿಸಿ ವಾಕ್‌ ಮಾಡಬೇಕಾಗುತ್ತದೆ. ಜಾರಿ ಬಿದ್ದರೇ ನಗೆಪಾಟಲಿಗೀಡಾಗುವುದಂತೂ ಗ್ಯಾರಂಟಿ!

ಇದನ್ನೂ ಓದಿ: Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಕಾನ್‌ನಲ್ಲಿ 3 ನೇ ಬಾರಿ ವಾಕ್‌ ಮಾಡಿದ ಮೊದಲ ಕನ್ನಡ ನಟಿಯಾದ ನಿಮ್ಮ ಅಭಿಪ್ರಾಯವೇನು?

ಹೆಮ್ಮೆ ಎಂದೆನಿಸುತ್ತದೆ. ಕನ್ನಡದ ನಟಿಯರೂ ಕಡಿಮೆಯೇನಿಲ್ಲ! ಎಂಬುದನ್ನು ಅಂತರಾಷ್ಟ್ರೀಯ ಮಟ್ಟದ ರೆಡ್‌ಕಾರ್ಪೆಟ್‌ನಲ್ಲಿ 3 ಬಾರಿ ವಾಕ್‌ ಮಾಡುವುದರ ಮೂಲಕ ಪ್ರೂವ್‌ ಮಾಡಿ ತೋರಿಸಿದ್ದೇನೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Assault Case in Shivamogga
ಕ್ರೈಂ5 mins ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Team India Dream 11
ಕ್ರಿಕೆಟ್6 mins ago

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Shiva Rajkumar support Tamil Movie Non Voilance Cinema
ಸ್ಯಾಂಡಲ್ ವುಡ್12 mins ago

Shiva Rajkumar: ತಮಿಳಿನ ‘ನಾನ್ ವೈಲೆನ್ಸ್’ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್: ಫಸ್ಟ್ ಲುಕ್ ಔಟ್‌!

Narendra Modi
Lok Sabha Election 202412 mins ago

Narendra Modi: ಲೋಕಸಭಾ ಚುನಾವಣೆ ಫಲಿತಾಂಶದ 6 ತಿಂಗಳ ಬಳಿಕ ‘ರಾಜಕೀಯ ಭೂಕಂಪ’; ಮೋದಿನ ಮಾತಿನ ಮರ್ಮವೇನು?

Valmiki Corporation Scam
ಪ್ರಮುಖ ಸುದ್ದಿ15 mins ago

Valmiki Corporation Scam: ಹಗರಣದ ಆರೋಪಿ ಜೊತೆಗೆ ಸಚಿವ ನಾಗೇಂದ್ರ ಕ್ಲೋಸ್‌? ಫೋಟೋ ಬಿಡುಗಡೆ ಮಾಡಿದ ಬಿಜೆಪಿ

Mansoon
ದೇಶ24 mins ago

Monsoon: ವಾಡಿಕೆಗಿಂತ ಮುನ್ನವೇ ಲಗ್ಗೆ ಇಟ್ಟ ಮಾನ್ಸೂನ್‌; ಕೇರಳದಲ್ಲಿ ಮುಂಗಾರು ಆರಂಭ

Ravichandran Birthday Premaloka 2 update
ಸ್ಯಾಂಡಲ್ ವುಡ್36 mins ago

Ravichandran Birthday: `ಪ್ರೇಮಲೋಕ 2’ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ‘ಕ್ರೇಜಿ ಸ್ಟಾರ್’ ರವಿಚಂದ್ರನ್‌!

cylinder blast in Bengaluru
ಕ್ರೈಂ55 mins ago

Fire Accident : ಗಾಢ ನಿದ್ರೆಯಲ್ಲಿರುವಾಗಲೇ ಸಿಲಿಂಡರ್‌ ಸ್ಫೋಟ; ಬೆಂಕಿಯ ಕೆನ್ನಾಲಿಗೆಗೆ ಐವರು ಗಂಭೀರ

T20 World Cup 2007
ಕ್ರಿಕೆಟ್1 hour ago

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

Gold Rate Today
ಚಿನ್ನದ ದರ1 hour ago

Gold Rate Today: ತುಸು ಇಳಿಕೆ ಕಂಡ ಚಿನ್ನದ ಬೆಲೆ; ಇಲ್ಲಿದೆ ದರದ ವಿವರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ5 mins ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌