Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್! Vistara News

ಲೈಫ್‌ಸ್ಟೈಲ್

Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್!

ನಿರುಪದ್ರವಿ ಹಲ್ಲಿಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಕೆಲವು ಸರಳ ವಿಧಾನಗಳಿಂದ ಮನೆಗೆ ಬರದಂತೆ ತಡೆಯಬಹುದು, ಅಥವಾ ಇರುವ ಹಲ್ಲಿಗಳನ್ನು ಓಡಿಸಿಬಿಡಬಹುದು. ಹಾಗಾದರೆ ಬನ್ನಿ, ಈ ಸರಳ ಟಿಪ್ಸ್‌ಗಳು ಯಾವುವು (lifestyle tips) ಎಂದು ನೋಡೋಣ.

VISTARANEWS.COM


on

home lizard
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಚೇರಿಯಲ್ಲಿ ಸುಸ್ತಾಗುವಷ್ಟು ಕೆಲಸ ಮಾಡಿ ಬಂದು ಸೋಫಾದ ಮೇಲೆ ಅಡ್ಡಾದರೆ, ಕಣ್ಣು ಮುಚ್ಚುವ ಮೊದಲೇ ಕಣ್ಣೆದುರು ಗೋಡೆಯಲ್ಲೊಂದು ಹಲ್ಲಿ ನಿಮ್ಮನ್ನೇ ನೋಡುತ್ತಿದ್ದರೆ, ಒಮ್ಮೆಲೆ ನಿಮ್ಮ ನಿದ್ದೆಯೆಲ್ಲ ಹಾರಿ ಹೋಗುತ್ತದೆ. ಜಿರಳೆ, ಹಲ್ಲಿ, ಜೇಡ ಇತ್ಯಾದಿಗಳು ಮನೆಯ ಗೋಡೆಗಳಲ್ಲಿ (Lizards in home) ಹರಿದಾಡುತ್ತಿದ್ದರೆ, ಖಂಡಿತವಾಗಿಯೂ ಅದು ಸಹ್ಯವಾಗಿ ಅನಿಸುವುದು ಕಷ್ಟ. ಹಲ್ಲಿಯಿಂದ ಹಾಗೆ ನೋಡಿದರೆ ಯಾವ ತೊಂದರೆಯೂ ಮೇಲ್ನೋಟಕ್ಕೆ ಕಾಣದಿದ್ದರೂ, ಹಲ್ಲಿ ನಡೆದಾಡುವ ರೀತಿಯೇ ಕೆಲವರಲ್ಲಿ ವಿಚಿತ್ರ ಭಯ ಹುಟ್ಟಿಸುತ್ತದೆ. ಇನ್ನೂ ಕೆಲವರಂತೂ ಹಲ್ಲಿ ಕಂಡಾಗ ಹುಲಿ ಕಂಡಂತೆ ಕಿರುಚಾಡಿ ಆಕಾಶ ಭೂಮಿ ಒಂದು ಮಾಡಿಬಿಡುತ್ತಾರೆ. ಆದರೆ, ಈ ನಿರುಪದ್ರವಿ ಹಲ್ಲಿಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಕೆಲವು ಸರಳ ವಿಧಾನಗಳಿಂದ ಮನೆಗೆ ಬರದಂತೆ ತಡೆಯಬಹುದು, ಅಥವಾ ಇರುವ ಹಲ್ಲಿಗಳನ್ನು ಓಡಿಸಿಬಿಡಬಹುದು. ಹಾಗಾದರೆ ಬನ್ನಿ, ಈ ಸರಳ ಟಿಪ್ಸ್‌ಗಳು ಯಾವುವು (lifestyle tips) ಎಂದು ನೋಡೋಣ.

1. ಮೊಟ್ಟೆಯ ಹೊರಕವಚ ಹಲ್ಲಿಗಳನ್ನು ಓಡಿಸಲು ಸುಲಭ ಉಪಾಯ. ಮೊಟ್ಟೆಯ ವಾಸನೆ ಹಲ್ಲಿಗಳಿಗೆ ಆಗಿ ಬರುವುದಿಲ್ಲ. ಹೀಗಾಗಿ, ಮುಂದಿನ ಬಾರಿ ಮನೆಯಲ್ಲಿ ಮೊಟ್ಟೆಯನ್ನು ಬಳಸಿದಾಗ ಅದರ ಹೊರಕವಚವನ್ನು ಕಸದ ತೊಟ್ಟಿಗೆ ಎಸೆಯಬೇಡಿ. ಅದನ್ನು ಹಾಗೆಯೇ ತೆಗೆದಿಟ್ಟು ಮನೆಯಲ್ಲಿ ಬಾಗಿಲ ಬಳಿ, ಕಿಟಕಿಯ ಬಳಿ ಹೀಗೆ ಕೆಲವು ಜಾಗಗಳಲ್ಲಿ ಇಟ್ಟುಬಿಡಿ. ಆದರೆ ಹೀಗೆ ಒಮ್ಮೆ ಇಟ್ಟ ಮೊಟ್ಟೆಯ ಕವಚವನ್ನು ಬಹಳ ದಿನ ಹಾಗೆಯೇ ಇಡಲಾಗುವುದಿಲ್ಲವಾದ್ದರಿಂದ ಪದೇಪದೇ ಈ ಕೆಲಸವನ್ನು ಮಾಡುತ್ತಲೇ ಇರಬೇಕಾಗುತ್ತದೆ.

2. ಹಲ್ಲಿಗಳು ಚಳಿಯಲ್ಲಿ ಇರಬಯಸುವುದಿಲ್ಲ. ಹೀಗಾಗಿ ನಿಮ್ಮ ಕೋಣೆಯ ಉಷ್ಣಾಂಶವನ್ನು ೨೨ ಡಿಗ್ರಿಗಿಂತ ಕಡಿಮೆ ಇಡಿ. ಹಲ್ಲಿಗಳೂ ಅಲ್ಲಿದ ಕಾಲು ಕೀಳುತ್ತವೆ.

3. ಕೆಟ್ಟ ವಾಸನೆಯನ್ನು ಯಾವತ್ತಿಗೂ ಹಲ್ಲಿಗಳು ಸಹಿಸಲಾರವು. ಹೀಗಾಗಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯಂತಹ ವಸ್ತುಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಕತ್ತರಿಸಿ ಮನೆಯಲ್ಲಿ ಅಲ್ಲಲ್ಲಿ ಇಟ್ಟುಬಿಡಿ. ಹಲ್ಲಿಗಳು ಆ ವಾಸನೆಗೆ ಓಡಿ ಹೋಗುತ್ತವೆ. ನಿಮಗೆ ಮನೆಯಲ್ಲಿ ಅಲ್ಲಲ್ಲಿ ಹೀಗೆ ಬೆಳ್ಳುಳ್ಳಿ, ಈರುಳ್ಳಿ ಇಡುವುದು ಇಷ್ಟವಾಗದಿದ್ದರೆ, ಇದರ ರಸ ತೆಗೆದು ಆ ರಸವನ್ನು ಮನೆಯಲ್ಲಿ ಗೋಡೆಗಳ ಮೇಲೆ ಸ್ಪ್ರೇ ಮಾಡಿದರೂ ಸಾಕು.

4. ಹಲ್ಲಿಗಳು ಸದಾ ಬೆಚ್ಚಗಿನ ವಾತಾವರಣದಲ್ಲಿರಲು ಇಷ್ಟಪಡುತ್ತವೆ. ಹಾಗಾಗಿ ಹಲ್ಲಿಗಳನ್ನು ಕಂಡಾಗ ಅವುಗಳ ಮೇಲೆ ಫ್ರಿಡ್ಜ್‌ನ ತಣ್ಣೀರು ಚಿಮುಕಿಸಿಬಿಡಿ. ಹಲ್ಲಿಗಳು ಓಡಿಹೋಗುತ್ತವೆ.

5. ಕರಿಮೆಣಸು ಹಾಗೂ ಕೆಂಪು ಮೆಣಸು ಎರಡರನ್ನೂ ಕಂಡರೆ ಹಲ್ಲಿಗಳಿಗೆ ಆಗುವುದಿಲ್ಲ. ಹಾಗಾಗಿ ಕರಿಮೆಣಸಿನ ಪುಡಿ ಹಾಗೂ ಮೆಣಸಿನ ಪುಡಿಯನ್ನು ನೀರಿನ ಜೊತೆ ಮಿಕ್ಸ್‌ ಮಾಡಿ ಹಲ್ಲಿಗಳು ಹೆಚ್ಚಾಗಿ ಕಂಡುಬರುವಲ್ಲಿ ಸ್ಪ್ರೇ ಮಾಡಬಹುದು. ಇದಾಗದಿದ್ದರೆ, ಒಣಗಿಸಿದ ಮೆಣಸನ್ನು ಅಲ್ಲಲ್ಲಿ ತೂಗುಹಾಕಬಹುದು.

6. ಕಾಫಿಯ ಪರಿಮಳವೂ ಹಲ್ಲಿಗಳಿಗೆ ಆಗದು. ಹೀಗಾಗಿ ಕಾಫಿಯ ನೀರನ್ನೂ ಹಲ್ಲಿಗಳು ಬರುವ ಜಾಗದಲ್ಲಿ ಸ್ಪ್ರೇ ಮಾಡಬಹುದು. ಅಥವಾ ಕೆಲವೆಡೆ ಕಾಫಿ ಪುಡಿಯನ್ನು ಚೆಲ್ಲಬಹುದು.

7. ಇದ್ಯಾವ ಉಪಾಯವೂ ನಿಮಗೆ ಸರಿ ಬರದಿದ್ದರೆ ನ್ಯಾಪ್ತಲಿನ್‌ ಗುಳಿಯನ್ನೂ ಬಳಸಬಹುದು. ಅಂಗಡಿಗಳಲ್ಲಿ ಸಿಗುವ ನ್ಯಾಪ್ತಲೀನ್‌ ಗುಳಿಗೆಯಲ್ಲಿ ಅಲ್ಲಲ್ಲಿ ಇಡುವ ಮೂಲಕ ಹಲ್ಲಿಗಳು ಬರದಂತೆ ತಡೆಯಬಹುದು. ಆದರೆ ಇದನ್ನು ಬಳಸುವಾಗ ಮನೆಯಲ್ಲಿ ಮಕ್ಕಳು, ಸಾಕುಪ್ರಾಣಿಗಳು ಇರದಂತೆ ಜಾಗ್ರತೆ ವಹಿಸಿ.

8. ಸೊಳ್ಳೆಗಳಿಗಾಗಿ ಬಳಸುವ ಸ್ಪ್ರೇಗಳು ಕೂಡಾ ಹಲ್ಲಿಗಳಿಂದ ನಿಮ್ಮನ್ನು ಕಾಪಾಡುತ್ತವೆ. ಅವುಗಳನ್ನು ಗೋಡೆಯಮೇಲೆ ಸಿಂಪಡಿಸುವುದರಿಂದ ಸೊಳ್ಲೆಯಷ್ಟೇ ಅಲ್ಲ, ಹಲ್ಲಿಗಳೂ ಬರುವುದಿಲ್ಲ.

ಇದನ್ನೂ ಓದಿ: Lifestyle Tips: ನಿಮಗೆ 30 ಆಗುವ ಮೊದಲು ಅರಿಯಲೇಬೇಕಾದ 6 ಸತ್ಯಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

ಅಧ್ಯಯನವೊಂದರ ಪ್ರಕಾರ, ಅತಿಯಾಗಿ ಯಾರು ತಮ್ಮ ಕೈಗಳನ್ನು ತೊಳೆಯುತ್ತಲೇ ಇರುತ್ತಾರೋ (Hand hygiene, health tips) ಅಂಥವರ ಕೈಗಳು ಅತಿಯಾಗಿ ಒಣಗುತ್ತವೆ. ಎಕ್ಸಿಮಾದಂತಹ ಚರ್ಮದ ತೊಂದರೆಗಳೂ (Skin disease) ಬರುವ ಸಂಭವ ಇವೆ.

VISTARANEWS.COM


on

wash hand
Koo

ಕೋವಿಡ್‌ 19 ಪ್ರಪಂಚದಾದ್ಯಂತ ಹರಡಿದ ಮೇಲೆ ಜಗತ್ತಿನಲ್ಲಿ ಶುಚಿತ್ವದ ಬಗ್ಗೆ ಹೆಚ್ಚು ಅರಿವು ಮೂಡಿದೆ. ಜನ ಸಾಮಾನ್ಯರು ಕೈಗಳನ್ನು ತಿಕ್ಕಿ ತಿಕ್ಕಿ ತೊಳೆಯುವ (washing hands) ಅಭ್ಯಾಸ, ಸೋಪು, ಹ್ಯಾಂಡ್‌ವಾಷ್‌ಗಳ ಬಳಕೆ, ಮುಖ್ಯವಾಗಿ ಸ್ಯಾನಿಟೈಸರ್‌ಗಳನ್ನು (sanitizers) ಬಳಸುವ ಪ್ರಮಾಣ ಬಹಳವೇ ಹೆಚ್ಚಾಗಿತ್ತು. ಈಗಲೂ ಹಲವೆಡೆ ಅದು ಮುಂದುವರಿದಿದ್ದರೂ, ತಕ್ಕಮಟ್ಟಿಗೆ ಸ್ಯಾನಿಟೈಸರ್‌ಗಳ ಬಳಕೆ ಮತ್ತೆ ಕಡಿಮೆಯಾಗಿದ್ದು, ಜನರು ಯಥಾ ಸ್ಥಿತಿಗೆ ಮರಳಿದ್ದಾರೆ. ಯಾವುದೂ ಅತಿಯಾಗಬಾರದು ಎಂಬ ಮಾತಿದೆ. ಅತಿಯಾದ ಶುಚಿತ್ವವೂ (hand hygiene practice) ಕೂಡಾ ಕೆಲವೊಮ್ಮೆ ಸಮಸ್ಯೆಯನ್ನೇ ತಂದೊಡ್ಡುತ್ತದೆ. ಕೈಗಳನ್ನು ಅತಿಯಾಗಿ ತೊಳೆಯುವುದರಿಂದಲೂ ಕೂಡಾ ಚರ್ಮದ ಸಮಸ್ಯೆಗಳು (Skin diseases) ಬರುವ ಅಪಾಯವಿದೆ ಎಂಬ ಸಂಗತಿಯೂ ಅಧ್ಯಯನಗಳಿಂದ ತಿಳಿದುಬಂದಿವೆ.

ಅಧ್ಯಯನವೊಂದರ ಪ್ರಕಾರ, ಅತಿಯಾಗಿ ಯಾರು ತಮ್ಮ ಕೈಗಳನ್ನು ತೊಳೆಯುತ್ತಲೇ ಇರುತ್ತಾರೋ ಅಂಥವರ ಕೈಗಳು ಅತಿಯಾಗಿ ಒಣಗುತ್ತವೆ. ಚರ್ಮಕ್ಕೆ ಅಗತ್ಯವಾಗಿ ಬೇಕಾದ ತೇವಾಂಶ, ಎಣ್ಣೆಯಂಶವೂ ಕೈಯಿಂದ ತೊಳೆದು ಹೋಗಲ್ಪಟ್ಟು ಚರ್ಮ ಒಡೆಯುತ್ತದೆ. ಬಿರುಕು ಬಿರುಕಾಗುತ್ತದೆ. ಒಣ ಚರ್ಮ ಪಕಳೆಗಳಂತೆ ಎದ್ದು ಬರುವಂತಹ ಸಮಸ್ಯೆಗಳೂ ಬರಬಹುದು ಎನ್ನಲಾಗಿದೆ. ತುರಿಕೆ, ಕಜ್ಜಿ, ಚರ್ಮದಲ್ಲಿ ಅಲ್ಲಲ್ಲಿ ಬಣ್ಣ ಬದಲಾಗುವುದು, ಹಾಗೂ ಎಕ್ಸಿಮಾದಂತಹ ಚರ್ಮದ ತೊಂದರೆಗಳೂ ಬರುವ ಸಂಭವ ಇವೆ ಎಂದು ಚರ್ಮವೈದ್ಯರು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ.

Maintain personal hygiene Wash your hands and feet with soap as soon as you come from outside Gastric Problem

ಎಕ್ಸಿಮಾ (Eczema) ಎಂಬ ಚರ್ಮದ ಸಮಸ್ಯೆ ಬಹಳಷ್ಟು ಮಂದಿಯನ್ನು ಈಗಾಗಲೇ ಕಾಡುತ್ತಿರುವ ಬಹಳ ಸಾರಿ ಮಾರಣಾಂತಿಕವೂ ಆಗಬಲ್ಲ ಸಮಸ್ಯೆ. ಚರ್ಮದಲ್ಲಿ ಕೆಂಪಗಾಗಿ, ಕಜ್ಜಿ ತುರಿಕೆಗಳಾಗಿ ಅಲ್ಲಲ್ಲಿ ದದ್ದುಗಳಾದಂತೆ ಚರ್ಮ ಪಕಳೆ ಪಕಳೆಯಾಗಿ ಎದ್ದು ಹೋಗುವ ಈ ಕಾಯಿಲೆ, ಒಮ್ಮೆ ಬಂದರೆ ಜೀವನಪೂರ್ತಿ ಕಾಡುತ್ತದೆ. ತುರಿಕೆ, ಅಲರ್ಜಿ ಇದರಲ್ಲಿ ಹೆಚ್ಚು. ಹಲವು ಆಹಾರ ಪದಾರ್ಥಗಳೂ ಕೂಡಾ ಇದಕ್ಕೆ ಆಗಿ ಬರುವುದಿಲ್ಲ. ಶಿಸ್ತಾಗಿ ಚರ್ಮದ ರಕ್ಷಣೆಯನ್ನು ಮಾಡಬೇಕಾಗುವುದರಿಂದ ಈ ಸಮಸ್ಯೆಯನ್ನು ಹೊಂದಿರುವ ಮಂದಿ ಅನುಭವಿಸುವ ಕಷ್ಟ ಒಂದೆರಡಲ್ಲ.

ಕೈ ತೊಳೆಯುವುದು ಹೇಗೆ?: ಹಾಗಾದರೆ, ಕೈ ತೊಳೆಯುವುದೂ ಕೂಡಾ ತಪ್ಪೇ ಎಂಬ ಸಂದೇಹ ನಿಮಗೆ ಬರಬಹುದು. ನಿಜ ಕೂಡಾ. ನಿತ್ಯವೂ ಏನಾದರೊಂದು ಕೆಲಸ ಮಾಡಿದ ಮೇಲೆ, ಅಥವಾ, ಎಲ್ಲೋ ಹೊರಗೆ ಹೋಗಿ ಬಂದು, ಅಥವಾ ಪ್ರತಿಯೊಂದು ಕೆಲಸದ ನಂತರ ದಿನಕ್ಕೆ ಹತ್ತಾರು ಬಾರಿ ಕೈ ತೊಳೆಯುವ ಅಭ್ಯಾಸ ನಮ್ಮಲ್ಲನೇಕರಿಗೆ ಇದೆ. ಆದರೆ, ಕೈ ತೊಳೆಯುವುದರಲ್ಲೂ ಸಾಕಷ್ಟು ಬಗೆಗಳಿವೆ. ನೀರಿಗೆ ಕೈಯೊಡ್ಡಿ ತೊಳೆದುಕೊಳ್ಳುವುದು, ಬೆಚ್ಚಗಿನ ನೀರಿನಲ್ಲಿ ಕೈತೊಳೆಯುವುದು, ಸೋಪು ಹಾಕಿ ತಿಕ್ಕಿ ತಿಕ್ಕಿ ಕೈತೊಳೆಯುವುದು, ಅಥವಾ ಸ್ಯಾನಿಟೈಸರ್‌ ಮಾಡಿಕೊಳ್ಳುವುದು ಹೀಗೆ ತೊಳೆಯುವುದರಲ್ಲೂ ಹಲವು ವಿಧ. ಆದರೆ, ಪ್ರತಿ ಬಾರಿಯೂ ಒಂದೇ ಬಗೆಯಲ್ಲಿ ತೊಳೆಯಬೇಕಿಲ್ಲ. ಜೊತೆಗೆ ಆದಷ್ಟೂ ಬಹಳ ಮೆದುವಾದ ಸೋಪು ಅಥವಾ ಹ್ಯಾಂಡ್‌ವಾಷ್‌ ಬಳಸಿ. ಬಿಸಿಬಿಸಿಯಾದ ನೀರನಲ್ಲಿ ಕೈ ತೊಳೆಯಬೇಡಿ. ಉಗುರು ಬೆಚ್ಚಗಿನ ಅಥವಾ ತಣ್ಣಿರಿನಲ್ಲಿ ಕೈತೊಳೆಯಿರಿ. ಪ್ರತಿ ಬಾರಿಯೂ, ಅಗತ್ಯವಿಲ್ಲದಿದ್ದರೆ, ಸೋಪು ಬಳಸಬೇಡಿ. ಕೈಗಳನ್ನು ಒಂದಕ್ಕೊಂದು ರಪರಪನೆ ಗಡುಸಾಗಿ ಉಜ್ಜಿಕೊಂಡು ಕೈತೊಳೆಯಬೇಡಿ. ಬೆರಳುಗಳನ್ನು ಬಳಸಿಕೊಂಡು ಸಂದಿಗಳ ಮೂಲಕ ಮೆದುವಾಗಿ ಉಜ್ಜಿಕೊಂಡು ಕೈತೊಳೆದರೆ ಸಾಕು. ನೀರಿನಿಂದ ಚೆನ್ನಾಗಿ ಸೋಪಿನ ಅಂಶಗಳು ಉಳಿಯದಂತೆ ತೊಳೆದುಕೊಂಡು ಮೆತ್ತಗಿನ ಬಟ್ಟೆಯಲ್ಲಿ ಕೈಗಳನ್ನು ಹಗುರವಾಗಿ ಉಜ್ಜಿಕೊಳ್ಳಿ.

ಎಕ್ಸಿಮಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಎಕ್ಸಿಮಾ ಸುಲಭವಾಗಿ ಹೋಗದಾದರೂ, ಅದು ಹೆಚ್ಚಾಗದಂತೆ, ಯಾವ ತೊಂದರೆಯನ್ನೂ ಮಾಡದಂತೆ ಅದನ್ನು ಸಮತೋಲನದಲ್ಲಿ ಇಡಲು ಸಾಧ್ಯವಿದೆ. ಸರಿಯಾಗಿ ವೈದ್ಯರು ಕೊಡುವ ಮುಲಾಮುಗಳನ್ನು ಹಚ್ಚುತ್ತಾ, ಎಣ್ಣೆತಿಂಡಿಗಳಿಂದ ದೂರವಿದ್ದುಕೊಂಡು ಸಮತೋಲನದ ಆಹಾರಗಳನ್ನು ತಿನ್ನುತ್ತಾ ಇದರ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಕೇವಲ ಎಕ್ಸಿಮಾ ಮಾತ್ರವಲ್ಲ, ಯಾವುದೇ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡರೂ ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.

ಇದನ್ನೂ ಓದಿ: Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!

Continue Reading

ಆರೋಗ್ಯ

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Heart Attack: ಗುಜರಾತ್‌ನಲ್ಲಿ ಕಳೆದ ಆರು ತಿಂಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಹೃದಯಾಘಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Heart Attack
Koo

ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.

“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್‌ ದಿಂಡೋರ್‌ ಮಾಹಿತಿ ನೀಡಿದ್ದಾರೆ.

Heart Attack

“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್‌ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ

“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Winter Diet Tips: ಚಳಿಗಾಲದಲ್ಲಿ ನಮ್ಮನ್ನು ಆರೋಗ್ಯವಾಗಿ ಇರಿಸುವ ಆಹಾರಗಳಿವು

ಚಳಿಗಾಲದಲ್ಲಿ ನಮ್ಮನ್ನು ಆರೋಗ್ಯವಾಗಿ ಇರಿಸುವಂಥ ಪೋಷಕಾಂಶಗಳು ಯಾವುದು? ಅವು ಯಾವ ಆಹಾರದಲ್ಲಿ ದೊರೆಯುತ್ತವೆ (Winter Diet Tips) ಮುಂತಾದ ವಿಷಯಗಳನ್ನು ತಿಳಿದುಕೊಂಡರೆ ಚಳಿಗಾಲವನ್ನು ಶೀತ-ನೆಗಡಿಗಳಿಲ್ಲದೆ ಬೆಚ್ಚಗೆ ಕಳೆಯಬಹುದು.

VISTARANEWS.COM


on

Winter Diet Tips
Koo

ನಮಗೆ ʻಶೀತʼ ಆಗದಿದ್ದರೆ ಚಳಿಗಾಲ ಒಳ್ಳೆಯದು ಎಂಬ ಮಾತಿದೆ. ಅಂದರೆ ನಮ್ಮ ಆರೋಗ್ಯ ಸರಿಯಿದ್ದರೆ ಋತುಮಾನಗಳನ್ನು ಆನಂದಿಸಬಹುದು. ನಮ್ಮದೇ ಆರೋಗ್ಯ ಕೈಕೊಟ್ಟರೆ…? ಆಗ ಎಲ್ಲ ಕಾಲವೂ ಕೇಡುಗಾಲವೇ. ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದಂಥ ಪೋಷಕಾಂಶಗಳು ನಮಗೆ ದೊರೆಯುತ್ತಿವೆ ಎಂಬುದು ಖಾತ್ರಿಯಾದರೆ ಉತ್ತಮ ಆರೋಗ್ಯವೂ ಖಾತ್ರಿಯಾದಂತೆ. ಹಾಗಾದರೆ ಚಳಿಗಾಲದಲ್ಲಿ ನಮ್ಮ ಪ್ರತಿರೋಧಕ ಶಕ್ತಿ ಜಾಗೃತವಾಗಿ ಇರುವಂತೆ ಮಾಡುವ ಪೋಷಕಾಂಶಗಳು ಮತ್ತು ಆಹಾರಗಳು (winter diet tips) ಯಾವುವು?

Foods high in vitamin C

ವಿಟಮಿನ್‌ ಸಿ

ಚಳಿಗಾಲದಲ್ಲಿ ನಮಗೆ ಅಗತ್ಯವಾಗಿ ಬೇಕಾದಂಥ ಸತ್ವಗಳಲ್ಲಿ ವಿಟಮಿನ್‌ ಸಿ ಮುಖ್ಯವಾಗಿದ್ದು, ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಇದು ಅತ್ಯಗತ್ಯ. ಜೊತೆಗೆ ಚಳಿಗಾಲದಲ್ಲಿ ಸಮಸ್ಯೆಯಾಗುವ ಇನ್ನೊಂದು ಭಾಗವೆಂದರೆ ಚರ್ಮ. ಇದರ ರಕ್ಷಣೆಗೂ ಸಿ ಜೀವಸತ್ವದ ಆವಶ್ಯಕತೆ ಅಧಿಕವಾಗಿದೆ.

ಇದರ ಮೂಲಗಳೇನು?

ಇದಕ್ಕಾಗಿ ಸೀಬೆ ಹಣ್ಣು, ಕಿವಿ, ಪಪ್ಪಾಯ, ನಿಂಬೆ ರಸ, ಕಿತ್ತಳೆ, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ, ಮುಂತಾದವುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ಇವುಗಳ (ವಿಟಮಿನ್‌ ಸಿ ಸೇರಿದಂತೆ) ಉತ್ಕರ್ಷಣ ನಿರೋಧಕಗಳು ಸೋಂಕುಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಜಿಂಕ್

ಜಂಕ್‌ ಮಾತ್ರ ಕೇಳಿ ಗೊತ್ತಿರುವವರಿಗೆ ಜಿಂಕ್‌ ಅಥವಾ ಸತು ಸ್ವಲ್ಪ ಹೊಸತೆನಿಸಬಹುದು. ಸತುವಿನ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಚಳಿಗಾಲದಲ್ಲಿ ವೈರಸ್‌ಗಳು ದಾಳಿ ಇಡಲು ಇಷ್ಟು ಸಾಲದೇ? ದೇಹದ ಕೋಶಗಳ ಬೆಳವಣಿಗೆಗೆ ಮತ್ತು ರಿಪೇರಿಗೆ ಅಗತ್ಯವಾದ ಪೋಷಕಾಂಶವಿದು. ಹಾಗಾಗಿ ಜಿಂಕ್‌ ನಮ್ಮ ಆಹಾರದಲ್ಲಿ ಇರುವಂತೆ ನಿಗಾ ವಹಿಸುವುದು ಮುಖ್ಯ.

ಮೂಲಗಳೇನು?

ಆಹಾರದಿಂದ ಜಂಕ್‌ ಕಡಿಮೆ ಮಾಡಿದರೆ, ಜಿಂಕ್‌ ದೇಹಕ್ಕೆ ಒದಗಿಸುವುದು ಕಷ್ಟವಲ್ಲ. ಬೇಳೆ ಮತ್ತು ಇಡಿಕಾಳುಗಳು, ನಾನಾ ರೀತಿಯ ಬೀಜಗಳು, ಡೈರಿ ಉತ್ಪನ್ನಗಳು, ಲೀನ್‌ ಮೀಟ್‌, ಇಡೀ ಧಾನ್ಯಗಳು- ಇಂಥ ಎಲ್ಲಾ ಆಹಾರಗಳಲ್ಲೂ ಸತು ದೊರೆಯುತ್ತದೆ.

ಕಬ್ಬಿಣಾಂಶ

ಈ ಖನಿಜಕ್ಕೆ ದೇಹದಲ್ಲಿ ಬಹಳಷ್ಟು ಕೆಲಸಗಳಿವೆ ಮಾಡುವುದಕ್ಕೆ. ಕೆಂಪು ರಕ್ತ ಕಣಗಳನ್ನು ಉತ್ಪಾದನೆ ಮಾಡುವುದರಿಂದ ಹಿಡಿದು ಆಮ್ಲಜನಕವನ್ನು ದೇಹದೆಲ್ಲೆಡೆ ಸಾಗಿಸುವವರೆಗೆ ಎಲ್ಲದಕ್ಕೂ ಕಬ್ಬಿಣ ಅಗತ್ಯ. ಇದರ ಕೊರತೆಯಾದರೆ ರಕ್ತಹೀನತೆ ಗಂಟು ಬೀಳುತ್ತದೆ. ಆದರೆ ಕಬ್ಬಿಣದಂಶ ಹೇರಳವಾಗಿರುವಂಥ ಬಹಳಷ್ಟು ಆಹಾರಗಳು ನಮಗೆ ಲಭ್ಯವಿವೆ ಸುಲಭದಲ್ಲಿ.

ಮೂಲಗಳೇನು?

ಪಾಲಕ್‌ನಂಥ ಹಸಿರು ಸೊಪ್ಪುಗಳು, ಕೆಂಪು ಹರಿವೆಯಂಥವು, ಬೀಟ್‌ರೂಟ್‌, ನುಗ್ಗೆಕಾಯಿ, ಹಲವು ರೀತಿಯ ಬೀಜಗಳು, ಕಾಳುಗಳು, ಮೀನುಗಳು, ತೋಫು, ಕಿನೊವಾ ಮುಂತಾದವುಗಳಲ್ಲಿ ಕಬ್ಬಿಣದಂಶ ಧಾರಾಳವಾಗಿ ದೊರೆಯುತ್ತದೆ.

Fish and egg

ಸೂಕ್ಷ್ಮ ಪೋಷಕಾಂಶಗಳು

ಮೊಟ್ಟೆ ಮತ್ತು ಕೊಬ್ಬಿನ ಮೀನುಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಸಾಂದ್ರವಾಗಿವೆ. ಇವು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿಯಾಗಿವೆ. ವಿಟಮಿನ್‌ ಡಿ, ಬಿ6, ಬಿ12 ಮುಂತಾದ ಜೀವಸತ್ವಗಳು ಎಲ್ಲಾ ಆಹಾರಗಳಲ್ಲೂ ಸುಲಭವಾಗಿ ದೊರೆಯುವುದು ಕಷ್ಟ. ಹಾಗಾಗಿ ಮೀನು, ಮೊಟ್ಟೆಯಂಥ ತಿನಿಸುಗಳು ಅಗತ್ಯವಾಗುತ್ತವೆ. ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌, ಸೆಲೆನಿಯಂ, ಜಿಂಕ್‌, ಕಬ್ಬಿಣ, ತಾಮ್ರದ ಸತ್ವಗಳು ದೊರೆಯುತ್ತವೆ. ಮೀನುಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್‌ ಡಿ ಅಂಶ ಭರಪೂರ ದೊರೆಯುತ್ತದೆ. ಇದರಿಂದ ದೇಹದಲ್ಲಿ ಉತ್ತಮ ಕೊಬ್ಬಿನ ಮಟ್ಟ ಹೆಚ್ಚುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ದೃಷ್ಟಿಯೂ ಚುರುಕಾಗುತ್ತದೆ.

Turkish national sweets are sold at the fair. Multi-colored Asian desserts stacked on the table.

ಶರ್ಕರಪಿಷ್ಟಾದಿಗಳು ಮಿತಿಯಲ್ಲಿರಲಿ

ಚಳಿಗಾಲವೆಂದರೆ ನಾನಾ ರೀತಿಯ ತಿನಿಸುಗಳನ್ನು ಬಾಯಿ ಬೇಡುವ ಕಾಲ. ಜೊತೆಗೆ, ಸೂರ್ಯನ ಬೆಳಕು ಕಡಿಮೆಯಾದಂತೆ ದೇಹದಲ್ಲಿ ಸೆರೊಟೋನಿನ್‌ ಹಾರ್ಮೋನಿನ ಮಟ್ಟವೂ ಕಡಿಮೆಯಾಗಿ, ಹೆಚ್ಚು ಪಿಷ್ಟಭರಿತ ಆಹಾರವನ್ನು ದೇಹ ಬಯಸುತ್ತದೆ. ಪಿಷ್ಟದ ಪ್ರಮಾಣ ಮಿತಿ ಮೀರಿದರೆ ಆರೋಗ್ಯ ಸಮಸ್ಯೆಗಳು ಗಂಟು ಬೀಳಬಹುದು. ಹಾಗಾಗಿ ಪೋಷಕಾಂಶಗಳು ಸಮತೋಲನದಲ್ಲಿರಲಿ.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Continue Reading

ಆರೋಗ್ಯ

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Vanivilas Hospital : ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ ಮೊದಲಿನಿಂದಲೂ ಸ್ವಚ್ಛತೆ ತೆ ಕುರಿತು ಅಸಮಾಧಾನಗಳು ಇದ್ದೆಇದೆ. ಸದ್ಯ ಆಸ್ಪತ್ರೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ದು, ಎರಡು ದಿನದ ಹಿಂದಷ್ಟೇ ಜನಿಸಿದ ಮಗುವಿಗೆ ಕಚ್ಚಿ (Cockroach bite) ಗಾಯಗೊಳಿಸಿವೆ.

VISTARANEWS.COM


on

By

Cockroaches bite baby born 2 days ago in vanivilas hospital
Koo

ಬೆಂಗಳೂರು: ಪ್ರತಿಷ್ಠಿತ ವಾಣಿವಿಲಾಸ್‌ ಆಸ್ಪತ್ರೆಯಲ್ಲಿ (Vanivilas Hospital) ಜಿರಳೆ ಕಾಟ (Cockroach bite) ಹೆಚ್ಚಾಗಿದ್ದು, ಎರಡು ದಿನದ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನಾಗರಬಾವಿ ನಿವಾಸಿ ಆಶಾರಾಣಿ ಅವರು ಕಳೆದೆರಡು ದಿನದ ಹಿಂದೆ ವಾಣಿವಿಲಾಸ್ ಆಸ್ಪತ್ರೆಗೆ ಹೆರಿಗೆ ನೋವಿನಿಂದ ದಾಖಲಾಗಿದ್ದರು.

ಕಳೆದ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದರಿಂದ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ವಾರ್ಡ್‌ ಪೂರ್ತಿ ಎಲ್ಲೆಂದರಲ್ಲಿ ಜಿರಳೆಗಳೇ ತುಂಬಿ ಹೋಗಿದ್ದು, ಮಗುವನ್ನು ಕಚ್ಚಿ ಹಾಕಿವೆ. ಬೆಡ್ ಸ್ವಚ್ಛಗೊಳಿಸದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ಹೆರಿಗೆ ವಾರ್ಡ್ ಸೇರಿದಂತೆ ಬಾಣಂತಿ ವಾರ್ಡ್‌ನಲ್ಲೂ ಜಿರಳೆಗಳೇ ಇವೆ. ಎಳೆ ಕಂದಮ್ಮಗಳ ಸುತ್ತ ಜಿರಳೆಗಳು ಓಡಾಡುತ್ತಿವೆ. ಮೊನ್ನೆಯಿಂದಲೂ ಪುಟ್ಟ ಮಗುವಿಗೆ ಜಿರಳೆಗಳು ಕಚ್ಚುತ್ತಿದೆ. ಈ ಬಗ್ಗೆ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಹೇಳಿದರೂ ಕ್ಯಾರೇ ಎನ್ನದೆ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಡವರ, ಮಧ್ಯಮ ವರ್ಗದವರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳೇ ಕಂಟಕವಾಗುತ್ತಿದೆ. ಹಿಂದೆಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಯಂತ್ರೋಪಕರಣಗಳು, ಮೂಲಭೂತ ಸೌಕಾರ್ಯವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಕಾಲಕಾಲಕ್ಕೆ ಅವೆಲ್ಲವೂ ಮರೆಯಾದವು, ಆದರೆ ಸ್ವಚ್ಛತೆ ಮಾತ್ರ ಶೂನ್ಯವಾಗಿದೆ.

ಮಗುವಿಗೆ ಜಿರಳೆ ಕಚ್ಚಿಲ್ಲ

ಮಗುವಿಗೆ ಜಿರಳೆ ಕಚ್ಚಿಲ್ಲ. ಬದಲಿಗೆ ಪೋಷಕರು ಮಗುವಿಗೆ ಹಾಕಿರುವ ಸ್ವೇಟರ್‌ನಿಂದ ಇನ್ಫೆಕ್ಷನ್ ಆಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಮೆಡಿಕಲ್‌ ಸುಪರಿಟೆಂಡೆಂಟ್‌ ಸವಿತಾ ಮಾಹಿತಿ ನೀಡಿದ್ದಾರೆ. ನಾವು ನಮ್ಮ ವೈದ್ಯರ ಜತೆ ಮಾತನಾಡಿದ್ದೇವೆ ಅದು ಜಿರಳೆ ಕಚ್ಚಿರುವುದರಿಂದ ಆಗಿಲ್ಲ ಎಂದು ಹೇಳಿದ್ದಾರೆ. ವೈದ್ಯರು ಮಗುವಿನ ತಪಾಸಣೆ ಮಾಡಿದ್ದಾರೆ. ಸ್ವೇಟರ್ ಹಾಕಿರುವ ಕಾರಣಕ್ಕೆ ಮಗುವಿನ ಮೈ ಮೇಲೆ ಅಲರ್ಜಿ ಆಗಿದೆ. ಇದು ಮಕ್ಕಳಲ್ಲಿ ಸ್ವಾಭಾವಿಕ ಕಾಣಿಸಿಕೊಳ್ಳುತ್ತದೆ. ಮಕ್ಕಳ ಚರ್ಮ ಸಾಕಷ್ಟು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಇಂತಹ ಅಲರ್ಜಿ ಆಗುವುದು ಮಾಮೂಲಿ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading
Advertisement
Maratha Mahamela cannot be held Belagavi district administration denies permission for MES
ಕರ್ನಾಟಕ14 mins ago

Assembly Session: ಮರಾಠ ಮಹಾಮೇಳಾವ್‌ ನಡೆಸುವಂತಿಲ್ಲ; ಎಂಇಎಸ್‌ಗೆ ಟಕ್ಕರ್‌ ಕೊಟ್ಟ ಜಿಲ್ಲಾಡಳಿತ

Tulu Language
ಕರ್ನಾಟಕ16 mins ago

Tulu Language : ತುಳುಗೆ ಸಿಗಲಿದೆಯೇ ಭಾಷಾ ಪ್ರಾತಿನಿಧ್ಯ? ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

Rajastan Elections: 10 reasons for BJP Win
ದೇಶ30 mins ago

Rajastan Elections 2023 : ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ; ದಿಗ್ವಿಜಯಕ್ಕೆ 10 ಕಾರಣ

raman singh bhupesh baghel
ದೇಶ31 mins ago

Election Result 2023: ಛತ್ತೀಸ್‌ಗಢದಲ್ಲಿ ಸುಳ್ಳಾದ ಎಕ್ಸಿಟ್‌ ಪೋಲ್‌, ಗೆಲುವಿನತ್ತ ಬಿಜೆಪಿ ದಾಪುಗಾಲು

Ration card not cancelled and Vidhanasoudha
ಕರ್ನಾಟಕ43 mins ago

Ration Card : ಆರು ತಿಂಗಳಿಂದ ರೇಷನ್‌ ಪಡೆದಿಲ್ಲವೇ? ನಿಮ್ಮ ಕಾರ್ಡ್‌ ರದ್ದಾಗುವ ಭಯ ಬೇಡ! ಆದರೆ..?

Sachin Tendulkar says he is super impressed by Vicky Kaushal
ಕ್ರಿಕೆಟ್52 mins ago

Sachin Tendulkar: ವಿಕ್ಕಿ ಕೌಶಲ್‌ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್‌!

Crime Sense Murder Case
ಕರ್ನಾಟಕ1 hour ago

Murder Case : ವ್ಯಕ್ತಿಯ ತಲೆ ಸೀಳಿ ಮೋರಿಗೆ ಶವ ಎಸೆದ ಹಂತಕರು!

election five states
ದೇಶ1 hour ago

Election Results 2023: ಲೋಕಸಭೆ 65 ಸ್ಥಾನಗಳ ಮೇಲೆ ಇದೀಗ ಬಿಜೆಪಿ ಹಿಡಿತ! ಮೋದಿ ಹಾದಿ ಸುಲಭ!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Shivraj Singh Chouhan
ದೇಶ2 hours ago

Ladli Behna: ಚೌಹಾಣ್‌ ‘ಗ್ಯಾರಂಟಿ’ಗೆ ಜೈ ಎಂದ ಮಧ್ಯಪ್ರದೇಶ ಜನ;‌ ಏನಿದು ಲಾಡ್ಲಿ ಬೆಹ್ನಾ?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ2 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ8 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ21 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌