Mango Benefits: ಬೇಸಿಗೆಯಲ್ಲಿ ಮಾವಿನಹಣ್ಣು ಎಂಬ ಸಂಪೂರ್ಣ ಆಹಾರವನ್ನು ಎಂದಿಗೂ ಬಿಡಬೇಡಿ! - Vistara News

ಆಹಾರ/ಅಡುಗೆ

Mango Benefits: ಬೇಸಿಗೆಯಲ್ಲಿ ಮಾವಿನಹಣ್ಣು ಎಂಬ ಸಂಪೂರ್ಣ ಆಹಾರವನ್ನು ಎಂದಿಗೂ ಬಿಡಬೇಡಿ!

ಮಾವು ಒಂದು ಸಂಪೂರ್ಣ ಆಹಾರವಂತೆ. ಮಾವಿನಲ್ಲಿ ಇಲ್ಲದ ಪೋಷಕಾಂಶಗಳೇ ಇಲ್ಲ (mango benefits). ಎಲ್ಲ ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣೆಂದರೆ ಅದು ಮಾವು.

VISTARANEWS.COM


on

mango benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಂಥಾ ಡಯಟ್‌ನಲ್ಲಿದ್ದರೂ ಬೇಸಿಗೆಯಲ್ಲಿ ಮಾವಿನಹಣ್ಣು (mango season) ತಿನ್ನದೆ ಹೇಗಿರಲಿ ಎಂದು ಪ್ರಶ್ನೆ ಮಾಡುವ ಮಂದಿ ಅನೇಕ. ಡಯಟ್‌ನ ತಲೆಬಿಸಿಯಲ್ಲಿರುವ ಮಂದಿ ಬೇರೆ ಆಹಾರವನ್ನಾದರೂ ಬಿಟ್ಟೇವು ಮಾವಿನಹಣ್ಣಿಗೆ ನೋ ಹೇಳೋದು ಹೇಗೆ ಎಂಬ ಉಭಯ ಸಂಕಟವನ್ನು ಬಿಚ್ಚಿಡುತ್ತಾರೆ. ಮಾವಿನಹಣ್ಣಿನ ಸೆಳೆತವೇ ಅಂಥದ್ದು. ಅದಕ್ಕಾಗಿಯೇ ಬಿರುಬೇಸಿಗೆಯ ಝಳವನ್ನೂ ನಾವು ಸಹಿಸಿಕೊಳ್ಳುತ್ತೇವೆ. ಮಾವು ತಿಂದು ಬೇಸಿಗೆಯ ಕಷ್ಟವನ್ನು ಮರೆಯುತ್ತೇವೆ ಕೂಡಾ.

ಇಂಥ ಮಾವು ಪ್ರಿಯರಿಗೆಲ್ಲರಿಗೂ ಸಂತಸದ ಸುದ್ದಿಯಿದೆ. ಮಾವು ತಿಂದರೆ ತೂಕ ಹೆಚ್ಚಾಗುತ್ತದೆ, ಮಾವು ಒಳ್ಳೆಯದಲ್ಲ ಎಂದು ವಾದ ಮಂಡಿಸುತ್ತಿದ್ದವರ ಎದುರು ಮಾವು ಪ್ರಿಯರು ಎದೆತಟ್ಟಿ ನಿಲ್ಲಬಹುದು. ಯಾಕೆಂದರೆ, ಮಾವು ಒಂದು ಸಂಪೂರ್ಣ ಆಹಾರವಂತೆ. ಮಾವಿನಲ್ಲಿ ಇಲ್ಲದ ಪೋಷಕಾಂಶಗಳೇ ಇಲ್ಲ (mango benefits). ಎಲ್ಲ ಬಗೆಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣೆಂದರೆ ಅದು ಮಾವು ಎನ್ನುತ್ತಾರೆ. ಖ್ಯಾತ ಪೋಷಕಾಂಶ ತಜ್ಞೆ ರುಜುತಾ ದಿವೇಕರ್.‌

ಹೌದು. ಮಾವು ಹಣ್ಣುಗಳ ರಾಜ ಎಂದು ಕರೆಯಲ್ಪಡುವುದು ಕೇವಲ ರುಚಿಯಾಗಿದೆ ಎಂಬ ಕಾರಣಕ್ಕಲ್ಲ. ಮಾವಿನಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಹೇರಳವಾಗಿವೆ. ಹಾಗಾಗಿ ಮಾವಿನಹಣ್ಣನ್ನು ಬೇಸಿಗೆಯಲ್ಲಿ ಯಾವೆಲ್ಲ ಕಾರಣಗಳಿಗಾಗಿ ನಾವು ತಿನ್ನಲೇಬೇಕು ಎಂಬುದನ್ನು ತಮ್ಮ ಇನ್ಸ್‌ಟಾಗ್ರಾಂ ಪೋಸ್ಟ್‌ ಒಂದರಲ್ಲಿ ವಿವರವಾಗಿ ವಿವರಿಸಿದ್ದಾರೆ.

ಬಹಳಷ್ಟು ಸಂಸ್ಥೆಗಳು ತಮ್ಮ ಆಹಾರದಲ್ಲಿ ಇರುವ ಪೋಷಕಾಂಶಗಳ ಪಟ್ಟಿಯನ್ನೇ ಆಹಾರದ ಪ್ಯಾಕ್‌ನ ಹೊರ ಭಾಗದಲ್ಲಿ ಮುದ್ರಿಸುತ್ತವೆ. ದೇಹಕ್ಕೆ ‌ ನಾರಿನಂಶದ ಅಗತ್ಯವಿದೆ ಎಂದರೆ ಓಟ್ಸ್‌ ತಿನ್ನಿ, ಪಾಲಿ ಫಿನಾಲ್ಸ್‌ ಬೇಕೆಂದರೆ ಗ್ರೀನ್‌ ಟೀ ಕುಡಿಯಿರಿ, ಹಾಗೂ ಆಂಟಿ ಆಕ್ಸಿಡೆಂಟ್‌ ಬೇಕೆಂದಾದರೆ ಡಾರ್ಕ್‌ ಚಾಕೋಲೇಟ್ಸ್‌ ತಿನ್ನಿ ಎಂದು ಸಲಹೆ ಮಾಡುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ, ಮಾವಿನಹಣ್ಣಿನಲ್ಲಿ ಇವೆಲ್ಲವೂ ಇವೆ ಎಂದರೆ ನಂಬುತ್ತೀರಾ? ಮಾವಿನಹಣ್ಣು ತಿಂದರೆ, ನಾರಿನಂಶವೂ ದಕ್ಕುತ್ತದೆ, ಪಾಲಿ ಫಿನಾಲ್ಸ್‌ ಹಾಗೂ ಸಾಕಷ್ಟು ಆಂಟಿ ಆಕ್ಸಿಡೆಂಟ್ಸ್‌ಗಳೂ ದೇಹಕ್ಕೆ ಲಭ್ಯವಾಗುತ್ತವೆ. ಮಾವಿನ ಹಣ್ಣಿನಲ್ಲಿ ಇವೆಲ್ಲ ಇವೆ ಎಂದು ಜಾಹಿರಾತು ಮುಖಪುಟದಲ್ಲಿ ಹಾಕುವುದು ರೈತರಿಗೆ ಸಾಧ್ಯವಿಲ್ಲವಲ್ಲ! ಹಾಗಾಗಿ ಮಾವಿನ ಹಣ್ಣಿಗೆ ನೋ ಅನ್ನಬೇಡಿ ಎಂದು ವಿವರಿಸುತ್ತಾರೆ ಅವರು.

ಹಾಗಾದರೆ ಈ ಬೇಸಿಗೆಯಲ್ಲಿ ಖಂಡಿತವಾಗಿಯೂ ಮಾವಿನಹಣ್ಣಿನಿಂದ ಮಾಡಿದ ಅಮೃತದಷ್ಟು ರುಚಿಕರವಾದ ಈ ಕೆಳಗಿನ  ತಿನಿಸುಗಳನ್ನು ಖಂಡಿತಾ ತಿನ್ನದೇ ಇರಬೇಡಿ!

Mango Diet

1. ಮ್ಯಾಂಗೋ ಫಿರ್ನಿ: ಬೇಸಿಗೆಯಲ್ಲಿ ಊಟ ಉಂಡು ಮುಗಿಸಿದ ಮೇಲೆ ತಟ್ಟೆಯಲ್ಲೊಂದು ಮಾವು ಇದ್ದರೆ, ಆಹಾ ಎನಿಸುತ್ತದಲ್ಲವೇ? ಅಂತಹ ಮಾವು ಪ್ರಿಯ ಮನಸ್ಸುಗಳು, ಊಟದ ನಂತರ ಮ್ಯಾಂಗೋ ಫಿರ್ನಿಯನ್ನು ತಿನ್ನಲು ಮರೆಯಬೇಡಿ.

2. ಮ್ಯಾಂಗೋ ಐಸ್‌ಕ್ರೀಂ: ಬೇಸಿಗೆಗೂ ಐಸ್‌ಕ್ರೀಂಗೂ ಎಲ್ಲಿಲ್ಲದ ನಂಟು. ಈ ನಂಟಿನಲ್ಲೊಂದು ಅದ್ಭುತ ಗಳಿಗೆಯನ್ನು ಸೃಷ್ಟಿ ಮಾಡುವ ಸಾಮರ್ಥ್ಯ ಮ್ಯಾಂಗೋ ಐಸ್‌ಕ್ರೀಂಗಿದೆ. ಹಾಗಾಗಿ, ಬೇಸಿಗೆಯಲ್ಲಿ ಮ್ಯಾಂಗೋ ಐಸ್‌ಕ್ರೀಂ ತಿನ್ನುವುದನ್ನು ಮಾತ್ರ ಮರೆಯುವ ಕೆಲಸ ಮಾಡಬಾರದು.

3. ಮಾವಿನಕಾಯಿ ಚಟ್ನಿ: ದಕ್ಷಿಣ ಭಾರತೀಯ ಇಡ್ಲಿ ದೋಸೆ ಪ್ರಿಯ ಮಂದಿಗೆ ಚಟ್ನಿಯ ಜೊತೆಗೂ ಗಳಸ್ಯ ಕಂಠಸ್ಯ ಭಾವ. ಬಗೆಬಗೆಯ ಚಟ್ನಿಗಳ ಪೈಕಿ ಮಾವಿನ ಕಾಲ ಬಂದಾಗ ಮಾವಿನಕಾಯಿ ಚಟ್ನಿ ಮಾಡದಿದ್ದರೆ ಬೇಸಿಗೆ ಹೇಗೆ ಸಂಪನ್ನವಾದೀತು ಹೇಳಿ. ಮಾವಿನಕಾಯಿ ಚಟ್ನಿ ಮಾಡಿ ತಿನ್ನಲು ಎಂದಿಗೂ ಮರೆಯಬೇಡಿ.

4. ಮಾವಿನಹಣ್ಣಿನ  ಹಪ್ಪಳ: ಹಣ್ಣನ್ನು ಕಿವುಚಿ ಹಿಂಡಿದ ರಸವನ್ನೇ ಒಣಗಿಸಿ ಮಾಡುವ ಹಪ್ಪಳ ಅಥವಾ ಮಾಂಬಳ ಮಾಡಿ ಕೂಡಿಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಈಗ ಅದು ಕಡಿಮೆಯಾಗಿದೆ ನಿಜ. ಆದರೂ, ಹಣ್ಣಿನ ಹಪ್ಪಳದ ರುಚಿಯನ್ನು ಹೇಗೆ ಮರೆತೇವು ಹೇಳಿ! ಹಾಗಾಗಿ ಬೇಸಗೆಯಲ್ಲೊಮ್ಮೆಯಾದರೂ ಹಣ್ಣಪ್ಪಳ ಮಾಡಿ ತಿನ್ನಬೇಕು!

ಇದನ್ನೂ ಓದಿ: Mango Benefits: ಮಾವಿನಹಣ್ಣು ತಿನ್ನುವ ಮೊದಲು ಒಂದೆರಡು ಗಂಟೆ ನೀರಲ್ಲಿ ನೆನೆಹಾಕಲೇ ಬೇಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Pav Bhaji: ಪಾವ್ ಭಾಜಿ ಮನೆಯಲ್ಲೇ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ

Pav Bhaji ಪಾವ್ ಭಾಜಿ ಎಂದರೆ ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಪಾವ್ ತುಂಡುಗಳನ್ನು ಬಿಸಿ ಬಿಸಿಯಾದ ಭಾಜಿ ಜೊತೆ ನೆಂಚಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಕೆಲವರಿಗೆ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ. ಅಂಥವರು ಸುಲಭವಾಗಿ ಮನೆಯಲ್ಲಿಯೇ ಪಾವ್‌ ಭಾಜಿ ಮಾಡಿಕೊಂಡು ಹೊಟ್ಟೆ ತಿನ್ನಬಹುದು. ಮಾಡುವ ವಿಧಾನ, ಬೇಕಾಗುವ ಸಾಮಗ್ರಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಇನ್ಯಾಕೆ ತಡ ನಿಮ್ಮ ಮನೆಯಲ್ಲೂ ಪಾವ್ ಭಾಜಿ ಮಾಡಿಕೊಂಡು ತಿಂದು ನೋಡಿ.

VISTARANEWS.COM


on

Pav Bhaji
Koo


ಪಾವ್ ಭಾಜಿ ಒಂದು ಜನಪ್ರಿಯ ಭಾರತೀಯ ಆಹಾರ. ಬೆಣ್ಣೆಯ ಬ್ರೆಡ್ ರೋಲ್ಸ್ (ಪಾವ್)ನೊಂದಿಗೆ ಬಡಿಸಲಾದ ಮಸಾಲೆಯುಕ್ತ ತರಕಾರಿ ಮ್ಯಾಶ್ (ಭಾಜಿ) ಅನ್ನು ಒಳಗೊಂಡಿದೆ. ಆದರೆ ಬೀದಿಯಲ್ಲಿ ತಯಾರಿಸಿದ ಇಂಥ ಆಹಾರ ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂಬ ಆತಂಕ ಕೆಲವರಿಗೆ. ಹಾಗಾಗಿ ಪಾವ್ ಭಾಜಿ(Pav Bhaji)ಯನ್ನು ಮನೆಯಲ್ಲೇ ತಯಾರಿಸಿ ಸೇವಿಸಬಹುದು. ಬೆಳಗ್ಗೆ ಉಪಾಹಾರದಲ್ಲಿ ನೀವು ನಿಮಗಿಷ್ಟವಾದ ಪಾವ್ ಭಾಜಿ ಸೇವಿಸಿದರೆ ದಿನವಿಡೀ ಖುಷಿಯಿಂದ ಕೆಲಸ ಮಾಡಬಹುದು! ಹಾಗಾದ್ರೆ ಮನೆಯಲ್ಲಿ ಪಾವ್ ಭಾಜಿ ತಯಾರಿಸುವುದು ಹೇಗೆ? ಸರಳ ಪಾಕವಿಧಾನಗಳ ವಿವರ ಇಲ್ಲಿದೆ.

Pav Bhaji
Pav Bhaji

ಬೇಕಾಗುವ ಪದಾರ್ಥಗಳು:
ಭಾಜಿಗಾಗಿ: 3 ಸಿಪ್ಪೆ ಸುಲಿದ ಮತ್ತು ಕತ್ತರಿಸಿದ ಆಲೂಗಡ್ಡೆ, ಕತ್ತರಿಸಿಟ್ಟ ಹೂಕೋಸು 1 ಕಪ್, ಹಸಿ ಬಟಾಣಿ 1/2 ಕಪ್, ಕತ್ತರಿಸಿಟ್ಟ ಕ್ಯಾರೆಟ್1 ಕಪ್, ಸಣ್ಣಗೆ ಕತ್ತರಿಸಿಟ್ಟ 1 ದೊಡ್ಡ ಈರುಳ್ಳಿ, ಸಣ್ಣಗೆ ಕತ್ತರಿಸಿಟ್ಟ 2 ದೊಡ್ಡ ಟೊಮೆಟೊ, ಸಣ್ಣಗೆ ಕತ್ತರಿಸಿದ1 ಕಪ್ ಕೊತ್ತಂಬರಿ ಸೊಪ್ಪು , ಸಣ್ಣಗೆ ಕತ್ತರಿಸಿದ 2 ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಪಾವ್ ಭಾಜಿ ಮಸಾಲಾ 2 ಟೇಬಲ್ ಚಮಚ (ಭಾರತೀಯ ದಿನಸಿ ಅಂಗಡಿಗಳಲ್ಲಿ ಲಭ್ಯವಿದೆ), ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್ , ಅರಿಶಿನ ಪುಡಿ 1/2 ಟೀ ಚಮಚ, ದನಿಯಾ ಪುಡಿ 1 ಟೀ ಚಮಚ, ಜೀರಿಗೆ 1 ಟೀ ಚಮಚ, ಸಾಸಿವೆ 1/2 ಚಮಚ, ಬೆಣ್ಣೆ 2 ಟೇಬಲ್ ಚಮಚ, ಎಣ್ಣೆ1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆ ರಸ 1 ಚಮಚ, ತಾಜಾ ಕೊತ್ತಂಬರಿ ಸೊಪ್ಪು(ಅಲಂಕಾರಕ್ಕಾಗಿ), ನೀರು (ಅಗತ್ಯಕ್ಕೆ ತಕ್ಕಷ್ಟು).ಪಾವ್‌ಗಾಗಿ: ಪಾವ್ (ಬ್ರೆಡ್ ರೋಲ್ಸ್) 8-10, ಬೆಣ್ಣೆ (ಟೋಸ್ಟ್ ಗಾಗಿ)

ಮಾಡುವ ವಿಧಾನ:

ಮೊದಲ ಹಂತದಲ್ಲಿ ಭಾಜಿ ತಯಾರಿಸಬೇಕು. ಅದಕ್ಕಾಗಿ ತರಕಾರಿಗಳನ್ನು ಬೇಯಿಸಿಕೊಳ್ಳಬೇಕು. ಒಂದು ದೊಡ್ಡ ಪಾತ್ರೆಯಲ್ಲಿ ಕತ್ತರಿಸಿದ ಆಲೂಗಡ್ಡೆ, ಹೂಕೋಸು, ಹಸಿರು ಬಟಾಣಿ, ಕ್ಯಾರೆಟ್ ಮತ್ತು ಬೇಯಲು ಸಾಕಷ್ಟು ನೀರನ್ನು ಸೇರಿಸಿ ಎಲ್ಲಾ ತರಕಾರಿಗಳು ಮೃದುವಾಗುವವರೆಗೆ ಬೇಯಿಸಿ. ನಂತರ ಸೋಸಿ ಪಕ್ಕಕ್ಕೆ ಇಡಿ.
2ನೇ ಹಂತದಲ್ಲಿ ಮಸಾಲಾ ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಬಾಣಲೆಯಲ್ಲಿ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.ಅದಕ್ಕೆ ಜೀರಿಗೆ ಮತ್ತು ಸಾಸಿವೆಯನ್ನು ಹಾಕಿ. ಅವು ಸಿಡಿಯಲು ಪ್ರಾರಂಭಿಸಿದ ನಂತರ, ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಅವು ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಪರಿಮಳ ಬರುವವರೆಗೆ ಇನ್ನೊಂದು ನಿಮಿಷ ಹುರಿಯಿರಿ. ಆಮೇಲೆ ಅದಕ್ಕೆ ಕತ್ತರಿಸಿದ ಟೊಮೆಟೊವನ್ನು ಸೇರಿಸಿ ಮತ್ತು ಅವು ಮೃದುವಾಗುವವರೆಗೆ ಬೇಯಿಸಿ ಮತ್ತು ಮಿಶ್ರಣದಿಂದ ಎಣ್ಣೆ ಬೇರ್ಪಡಲು ಪ್ರಾರಂಭಿಸುತ್ತದೆ.

ಆನಂತರ 3ನೇ ಹಂತದಲ್ಲಿ ಮಸಾಲೆಗಳನ್ನು ಸೇರಿಸಿಕೊಳ್ಳಬೇಕು. ಅದಕ್ಕಾಗಿ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಪಾವ್ ಭಾಜಿ ಮಸಾಲಾವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕೆಲವು ನಿಮಿಷಗಳ ಕಾಲ ಬೇಯಿಸಿ.

4ನೇ ಹಂತದಲ್ಲಿ ತರಕಾರಿಗಳನ್ನು ಮ್ಯಾಶ್ ಮಾಡಬೇಕು. ಅದಕ್ಕಾಗಿ ಬೇಯಿಸಿದ ತರಕಾರಿಗಳನ್ನು ಬಾಣಲೆಗೆ ಹಾಕಿ ಎಲ್ಲವನ್ನೂ ಒಟ್ಟಿಗೆ ಮ್ಯಾಶ್ ಮಾಡಲು ಆಲೂಗಡ್ಡೆ ಮಾಷರ್ ಬಳಸಿ, ತರಕಾರಿಗಳನ್ನು ಮಸಾಲೆ ಮಿಶ್ರಣದೊಂದಿಗೆ ಮಿಶ್ರಣ ಮಾಡಿ. ಹದಕ್ಕೆ ಬರಲು ಅಗತ್ಯವಿರುವಷ್ಟು ನೀರನ್ನು ಸೇರಿಸಿ. (ಮಿಶ್ರಣ ತುಂಬಾ ದಪ್ಪಾಗದಂತೆ, ತುಂಬಾ ನೀರಾಗದಂತೆ ಮಧ್ಯಮ ಪ್ರಮಾಣದಲ್ಲಿರಲಿ)

5ನೇ ಹಂತದಲ್ಲಿ ಈ ಮಿಶ್ರಣವನ್ನು 5-10 ನಿಮಿಷಗಳ ಕಾಲ ಕುದಿಯಲು ಬಿಡಿ, ಹಾಗೇ ಆಗಾಗ ಕಲಕುತ್ತಾ ಇರಿ. ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ಅಗತ್ಯಕ್ಕೆ ತಕ್ಕಂತೆ ಉಪ್ಪು ಮತ್ತು ಮಸಾಲೆಯನ್ನು ಸೇರಿಸಿ. ಕೊನೆಯಲ್ಲಿ ನಿಂಬೆ ರಸವನ್ನು ಬೆರೆಸಿ ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಪಾವ್ ತಯಾರಿಸಿ:ಮೊದಲ ಹಂತದಲ್ಲಿ ಪಾವ್ ಅನ್ನು ಟೋಸ್ಟ್ ಮಾಡಬೇಕು. ಬಾಣಲೆಯಲ್ಲಿ ಸ್ವಲ್ಪ ಬೆಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಪಾವ್ (ಬ್ರೆಡ್ ರೋಲ್ ಗಳು) ಅನ್ನು ಸಮವಾಗಿ ಕತ್ತರಿಸಿ ಪ್ರತಿ ಬದಿಯನ್ನು ಕಂದು ಮತ್ತು ಗರಿಗರಿಯಾಗುವವರೆಗೆ ಟೋಸ್ಟ್ ಮಾಡಿ.

ಇದನ್ನೂ ಓದಿ: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

ಆಗ ಪಾವ್ ಭಾಜಿ ರೆಡಿಯಾಗುತ್ತದೆ. ನಂತರ ಬಿಸಿ ಭಾಜಿಯನ್ನು ಟೋಸ್ಟ್ ಮಾಡಿದ ಪಾವ್‍ನೊಂದಿಗೆ ಬಡಿಸಿ, ಹೆಚ್ಚುವರಿ ಬೆಣ್ಣೆ, ಕತ್ತರಿಸಿದ ಈರುಳ್ಳಿ, ನಿಂಬೆ ತುಂಡುಗಳು ಮತ್ತು ತಾಜಾ ಕೊತ್ತಂಬರಿಯೊಂದಿಗೆ ಅಲಂಕರಿಸಿ.
ಈ ಪಾವ್ ಭಾಜಿ ತೃಪ್ತಿ ನೀಡುವಂತಹ ತಿಂಡಿ ಅಥವಾ ಊಟಕ್ಕೆ ಸೂಕ್ತವಾಗಿದೆ ಮತ್ತು ಇದು ಭಾರತೀಯ ಬೀದಿ ಆಹಾರದ ಸಾದಿಷ್ಟ ರುಚಿಗಳನ್ನು ನಿಮ್ಮ ಅಡುಗೆಮನೆಗೆ ತರುತ್ತದೆ. ನೀವೂ ಪ್ರಯೋಗ ಮಾಡಿ ರುಚಿ ನೋಡಿ!

Continue Reading

ಆಹಾರ/ಅಡುಗೆ

Health Tips: ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ಇವು ದೇಹಕ್ಕೆ ವಿಷವಾಗಬಹುದು ಎಚ್ಚರ!

ಆಹಾರವನ್ನು ತಾಜಾವಾಗಿ ಸೇವಿಸಿದರೆ ಮಾತ್ರ ಒಳ್ಳೆಯ ಪರಿಣಾಮ (Health Tips) ಬೀರುತ್ತದೆ. ಆದರೆ ಹೆಚ್ಚಿನವರು ಆಹಾರವನ್ನು ಅನೇಕ ಬಾರಿ ಬಿಸಿ ಮಾಡಿ ಸೇವಿಸುತ್ತಾರೆ. ಇದು ಒಳ್ಳೆಯದಲ್ಲ. ಕೆಲವು ಆಹಾರಗಳನ್ನು ಪದೇಪದೇ ಬಿಸಿ ಮಾಡುವುದು ಅದರಲ್ಲೂ ಮುಖ್ಯವಾಗಿ ಚಹಾ, ಪಾಲಕ್, ಅಕ್ಕಿ, ಅಣಬೆ, ಅಡುಗೆ ಎಣ್ಣೆಯನ್ನು ಬಿಸಿ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ಅಭ್ಯಾಸಗಳು ಯಾಕೆ ಒಳ್ಳೆಯದಲ್ಲ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಬೆಳಗ್ಗೆ ಮಾಡಿರುವ ಅನ್ನ, ಸಾಂಬಾರ್ ಬಿಸಿಬಿಸಿಯಾಗಿರಬೇಕು ಎಂದು ಹಲವಾರು ಮನೆಗಳಲ್ಲಿ ಪದೇಪದೇ ಬಿಸಿ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ರಾತ್ರಿ ಉಳಿದ ಅಡುಗೆಯನ್ನು (food) ಬಿಸಿ ಮಾಡಿ (reheat) ಮರುದಿನ ಸೇವಿಸುತ್ತಾರೆ. ಹೀಗೆ ಆಹಾರ ಬಿಸಿ ಮಾಡಿ ತಿನ್ನುವುದು ಅದರಲ್ಲೂ ವಿಶೇಷವಾಗಿ ಕೆಲವೊಂದು ಆಹಾರಗಳನ್ನು ಎರಡನೇ ಬಾರಿ ಬಿಸಿ ಮಾಡುವುದು ಆರೋಗ್ಯಕ್ಕೆ (Health Tips) ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಕೆಲವು ಆಹಾರವನ್ನು ಬಿಸಿ ಮಾಡಿದಾಗ ಅದು ವಿಷವಾಗಬಹುದು. ಇನ್ನು ಕೆಲವು ಆಹಾರಗಳಲ್ಲಿರುವ ಪೌಷ್ಟಿಕಾಂಶ ನಷ್ಟವಾಗಬಹುದು ಎನ್ನುತ್ತಾರೆ ಆಹಾರ ಪರಿಣತರು. ಕೆಲವು ಆಹಾರ ಪದಾರ್ಥಗಳನ್ನು ಎರಡನೇ ಬಾರಿ ಬಿಸಿ ಮಾಡಲೇಬಾರದು. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Health Tips
Health Tips


ಚಹಾ

ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳಂತಹ ಸೂಕ್ಷ್ಮ ಸಂಯುಕ್ತಗಳಿರುತ್ತವೆ. ಇದು ಚಹಾಕ್ಕೆ ಸುವಾಸನೆ ಮತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ. ಚಹಾವನ್ನು ಆರಂಭದಲ್ಲಿ ತಯಾರಿಸಿದಾಗ ಇದು ಟ್ಯಾನಿನ್‌ ಮತ್ತು ಕ್ಯಾಟೆಚಿನ್‌ಗಳನ್ನು ಒಳಗೊಂಡಂತೆ ವಿವಿಧ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡುವುದರಿಂದ ಈ ಸಂಯುಕ್ತಗಳು ನಷ್ಟವಾಗುತ್ತದೆ. ಇದರಿಂದ ಚಹಾ ಸುವಾಸನೆಯನ್ನು ಕಳೆದುಕೊಳ್ಳುತ್ತದೆ ಮತ್ತು ಅದರಲ್ಲಿರುವ ಒಳ್ಳೆಯ ಅಂಶಗಳು ನಷ್ಟವಾಗುತ್ತದೆ.

ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಇದನ್ನು ಪುನಃ ಬಿಸಿ ಮಾಡುವುದರಿಂದ ಇದು ಹೆಚ್ಚಾಗಿ ಜಿಗುಪ್ಸೆ, ನಿದ್ರಾಹೀನತೆಯಂತಹ ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಚಹಾವನ್ನು ಮತ್ತೆ ಬಿಸಿ ಮಾಡಿ ಸೇವಿಸುವುದು ಆಮ್ಲೀಯತೆಯನ್ನು ಹೆಚ್ಚಿಸಬಹುದು.

ಇದಲ್ಲದೇ ಚಹಾವನ್ನು ಕುದಿಸಿದ ಬಳಿಕ ದೀರ್ಘಕಾಲದವರೆಗೆ ಇಡುವುದು ಕೂಡ ಒಳ್ಳೆಯದಲ್ಲ. ಚಹಾವನ್ನು ಮಾಡಿ ಹತ್ತು ನಿಮಿಷಗಳ ಒಳಗೆ ಸೇವಿಸಬೇಕು. ಇಲ್ಲವಾದರೆ ಅದು ಹೆಚ್ಚು ಆಮ್ಲೀಯವಾಗಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.


ಪಾಲಕ್

ಪಾಲಕ್ ಸೊಪ್ಪು ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದನ್ನು ಮತ್ತೆ ಬಿಸಿ ಮಾಡಿದಾಗ ನೈಟ್ರೈಟ್‌ಗಳಾಗಿ ಪರಿವರ್ತನೆಯಾಗುತ್ತದೆ. ನೈಟ್ರೈಟ್‌ಗಳು ಅನಂತರ ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿ ನೈಟ್ರೊಸಮೈನ್‌ ಗಳಾಗುತ್ತವೆ. ಅವುಗಳು ಕ್ಯಾನ್ಸರ್ ಜನಕಗಳಾಗಿವೆ. ಪಾಲಕ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ವಿಟಮಿನ್ ಸಿ ಮತ್ತು ಬಿ ವಿಟಮಿನ್‌ಗಳು ನಷ್ಟವಾಗುತ್ತದೆ. ಅದರ ಪೌಷ್ಟಿಕಾಂಶದ ಮೌಲ್ಯ ಕುಗ್ಗುತ್ತದೆ.

ಪಾಲಕ್ ಕಬ್ಬಿಣದ ಸಮೃದ್ಧ ಮೂಲವಾಗಿದೆ. ಪಾಲಕ್ ಸೊಪ್ಪನ್ನು ಬೇಯಿಸಿ ಮತ್ತೆ ಬಿಸಿ ಮಾಡಿದಾಗ ಕಬ್ಬಿಣವು ಗಾಳಿಯಲ್ಲಿ ಆಮ್ಲಜನಕದ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆಯು ಸಂಭವಿಸಿ ಕಬ್ಬಿಣದ ಆಕ್ಸೈಡ್‌ಗಳ ರಚನೆಗೆ ಕಾರಣವಾಗಬಹುದು. ಇದು ಪಾಲಕ್ ನ ಬಣ್ಣ ಮತ್ತು ರುಚಿಯನ್ನು ಬದಲಾಯಿಸುತ್ತದೆ.

ಪಾಲಕ್ ನಲ್ಲಿರುವ ಕಬ್ಬಿನಾಂಶದ ಆಕ್ಸಿಡೀಕರಣವು ಅದರ ಪೌಷ್ಟಿಕಾಂಶದ ಮೌಲ್ಯದ ಮೇಲೆ ಪರಿಣಾಮ ಬೀರಬಹುದು. ಆಕ್ಸಿಡೀಕೃತ ಕಬ್ಬಿಣವು ದೇಹದಲ್ಲಿ ಸುಲಭವಾಗಿ ಹೀರಲ್ಪಡುವುದಿಲ್ಲ. ಮತ್ತೆ ಮತ್ತೆ ಪಾಲಕ್ ಅನ್ನು ಬಿಸಿ ಮಾಡುವುದು ಲೋಳೆಯ ರಚನೆ ಮತ್ತು ಕಹಿ ರುಚಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಪಾಲಕ್‌ನಲ್ಲಿರುವ ಪೋಷಕಾಂಶಗಳನ್ನು ಪಡೆಯಲು ಅದನ್ನು ತಾಜಾ ಆಗಿ ಸೇವಿಸುವುದು ಉತ್ತಮ.


ಅಡುಗೆ ಎಣ್ಣೆ

ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಅದರ ಗುಣಮಟ್ಟ ಮತ್ತು ಸುರಕ್ಷತೆ ಕೆಡಿಸುವ ರಾಸಾಯನಿಕ ಬದಲಾವಣೆಗಳಿಗೆ ಒಳಗಾಗುತ್ತದೆ. ಇದು ಟ್ರಾನ್ಸ್ ಕೊಬ್ಬುಗಳು ಮತ್ತು ಅಲ್ಡಿಹೈಡ್‌ಗಳಂತಹ ಹಾನಿಕಾರಕ ಸಂಯುಕ್ತಗಳ ರಚನೆಗೆ ಕಾರಣವಾಗಬಹುದು. ಇದು ಉರಿಯೂತ ಮತ್ತು ಹೃದಯರಕ್ತನಾಳದ ಕಾಯಿಲೆಯನ್ನು ಉಂಟು ಮಾಡುತ್ತದೆ. ಅಡುಗೆ ಎಣ್ಣೆಯ ಸಮಗ್ರ ಪ್ರಯೋಜನ ಪಡೆಯಲು ಪ್ರತಿ ಬಾರಿಯೂ ತಾಜಾ ಎಣ್ಣೆಯನ್ನು ಬಳಸುವುದು ಮತ್ತು ತೈಲವನ್ನು ಅನೇಕ ಬಾರಿ ಬಿಸಿ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.


ಅಣಬೆ

ಅಣಬೆಗಳು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆಹಾರದಿಂದ ಹರಡುವ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಅಣಬೆಗಳು ಪಾಲಿಸ್ಯಾಕರೈಡ್‌ಗಳಂತಹ ಕೆಲವು ಸಂಯುಕ್ತಗಳನ್ನು ಹೊಂದಿರುತ್ತವೆ. ಇದು ಮತ್ತೆ ಬಿಸಿ ಮಾಡಿದಾಗ ಕಿಣ್ವಕ ಪ್ರತಿಕ್ರಿಯೆಗಳಿಗೆ ಒಳಗಾಗಬಹುದು. ಅವುಗಳ ರುಚಿ ಮತ್ತು ವಿನ್ಯಾಸವನ್ನು ಬದಲಾಯಿಸುತ್ತದೆ.

ಮತ್ತೆ ಬಿಸಿ ಮಾಡಿದ ಅಣಬೆಗಳನ್ನು ಸೇವಿಸುವುದರಿಂದ ತಾಜಾತನ ಮತ್ತು ರುಚಿಯನ್ನು ಕಳೆದುಕೊಳ್ಳಬಹುದು. ಅಣಬೆಗಳು ಕಿಣ್ವ, ರಚನಾತ್ಮಕ ಪ್ರೋಟೀನ್‌ಗಳನ್ನು ಒಳಗೊಂಡಂತೆ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತವೆ. ಇದು ಅವುಗಳ ವಿನ್ಯಾಸ ಮತ್ತು ಪೌಷ್ಟಿಕಾಂಶದ ಪ್ರೊಫೈಲ್‌ಗೆ ಕೊಡುಗೆ ನೀಡುತ್ತದೆ. ಅಣಬೆಗಳನ್ನು ಬೇಯಿಸಿದಾಗ, ಈ ಪ್ರೋಟೀನ್ ಗಳು ಡಿನಾಟರೇಶನ್ ಎಂಬ ಪ್ರಕ್ರಿಯೆಯ ಮೂಲಕ ರಚನಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತವೆ. ಅಣಬೆಗಳನ್ನು ಮತ್ತೆ ಬಿಸಿ ಮಾಡಿದ ಅನಂತರ ಪ್ರೋಟೀನ್ ಸಂಯೋಜನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.

ಇದು ಅಣಬೆಗಳ ವಿನ್ಯಾಸ, ಸುವಾಸನೆ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಅಣಬೆಗಳನ್ನು ಮತ್ತೆ ಬಿಸಿ ಮಾಡುವುದರಿಂದ ಜಲವಿಚ್ಛೇದನೆಯಂತಹ ಪ್ರಕ್ರಿಯೆಗಳ ಮೂಲಕ ಸಣ್ಣ ಪೆಪ್ಟೈಡ್‌ಗಳು ಮತ್ತು ಅಮೈನೋ ಆಮ್ಲಗಳಾಗಿ ಕೆಲವು ಪ್ರೋಟೀನ್ ಅಣುಗಳ ವಿಭಜನೆಗೆ ಕಾರಣವಾಗಬಹುದು. ಇದು ಅಣಬೆಗಳ ಒಟ್ಟಾರೆ ಪ್ರೋಟೀನ್ ಅಂಶ ಮತ್ತು ಸಂಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅವುಗಳ ರುಚಿ ಮತ್ತು ಜೀರ್ಣಸಾಧ್ಯತೆಯ ಮೇಲೆ ಪರಿಣಾಮ ಬಿರುವುದು. ಅಣಬೆಗಳ ಗುಣಮಟ್ಟವನ್ನು ಕಾಪಾಡಲು, ಅವುಗಳನ್ನು ದೀರ್ಘಕಾಲದವರೆಗೆ ಬಿಸಿ ಮಾಡದೇ ಇರುವುದು ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು.


ಇದನ್ನೂ ಓದಿ: Intermittent Fasting: ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಡಯಟ್‌ ಮಾಡುವವರೇ ಹುಷಾರ್! ಈ ಸಂಗತಿ ಗೊತ್ತಿರಲಿ


ಅಕ್ಕಿ

ಅಕ್ಕಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಂ ಅಡುಗೆ ಪ್ರಕ್ರಿಯೆಯಲ್ಲಿ ಬದುಕುಳಿಯುತ್ತದೆ. ಅನ್ನ ಮಾಡಿ ಅದನ್ನು ದೀರ್ಘಕಾಲದವರೆಗೆ ಇಟ್ಟರೆ ಅದು ದ್ವಿಗುಣವಾಗುತ್ತಾ ಹೋಗುತ್ತದೆ. ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಯಾವಾಗಲೂ ಬ್ಯಾಕ್ಟೀರಿಯಾ ಮತ್ತು ಅವುಗಳ ವಿಷಕಾರಿ ಅಂಶಗಳು ಹೋಗುವುದಿಲ್ಲ. ಇದು ಆಹಾರವನ್ನು ವಿಷವಾಗಿಸುತ್ತದೆ. ಬಿಸಿ ಮಾಡಿದ ಅನ್ನ ತೇವಾಂಶ, ಪೌಷ್ಟಿಕಾಂಶ ಕಳೆದುಕೊಳ್ಳುತ್ತದೆ. ಆಹಾರದಿಂದ ಹರಡುವ ಅನಾರೋಗ್ಯವನ್ನು ತಡೆಗಟ್ಟಲು ಬೇಯಿಸಿದ ಅನ್ನವನ್ನು ರೆಫ್ರಿಜರೇಟರ್ ನಲ್ಲಿ ಸರಿಯಾಗಿ ಸಂಗ್ರಹಿಸುವುದು ಮತ್ತು ಒಂದೆರಡು ದಿನಗಳಲ್ಲಿ ಅದನ್ನು ಸೇವಿಸುವುದು ಮುಖ್ಯವಾಗಿದೆ.

Continue Reading

Latest

Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

Indian Dessert 2024: ಪಾಕಶಾಲೆಯ ಮಾರ್ಗದರ್ಶಿ ʼಟೇಸ್ಟ್ ಅಟ್ಲಾಸ್ʼ ಇತ್ತೀಚೆಗೆ 2024ರ ವಿಶ್ವದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ ತಯಾರಿಸುವ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಗತ್ತಿನಾದ್ಯಂತ ವಿಶೇಷವಾದ ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ತಯಾರಿಸುವಂತಹ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳಲ್ಲಿ, 10 ಭಾರತೀಯ ತಿನಿಸುಗಳು ಸ್ಥಾನವನ್ನು ಗಳಿಸಿವೆ. ಆ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Indian Dessert 2024
Koo


ವಿಶ್ವದ ಹಲವು ಕಡೆಗಳಲ್ಲಿ ಬಗೆಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಒಂದೊಂದು ತಿಂಡಿ ಒಂದೊಂದು ರೀತಿಯ ರುಚಿಯನ್ನು ಹೊಂದಿರುತ್ತದೆ. ಆದರೆ ತಿಂಡಿ ಪ್ರಿಯರಿಗೆ ಯಾವ ತಿಂಡಿ ತುಂಬಾ ರುಚಿಕರವಾಗಿರುತ್ತದೆ ಮತ್ತು ಅದು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಹಾಗಾಗಿ ಅಂಥವರಿಗಾಗಿ ಪಾಕಶಾಲೆಯ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಇತ್ತೀಚೆಗೆ 2024ರ ವಿಶ್ವದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ ತಯಾರಿಸುವ ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಜಗತ್ತಿನಾದ್ಯಂತ ವಿಶೇಷವಾದ ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ತಯಾರಿಸುವಂತಹ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳಲ್ಲಿ, 10 ಭಾರತೀಯ ತಿನಿಸುಗಳು (Indian Dessert 2024) ಸ್ಥಾನವನ್ನು ಗಳಿಸಿವೆ. ಆ 10 ಭಾರತೀಯ ತಿನಿಸುಗಳು ಮತ್ತು ಅವುಗಳು ಯಾವ ಸ್ಥಾನ ಪಡೆದುಕೊಂಡಿದ್ದಾವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Indian Dessert 2024
Indian Dessert 2024

1. ಕಯಾನಿ ಬೇಕರಿ, ಪುಣೆ

ಈ ಪಟ್ಟಿಯಲ್ಲಿ ಜಾಗತಿಕವಾಗಿ 18ನೇ ಸ್ಥಾನ ಪಡೆದುಕೊಂಡ ಕಯಾನಿ ಬೇಕರಿ 1955ರಲ್ಲಿ ಪ್ರಾರಂಭವಾಗಿತ್ತು. ಪುಣೆಯ ಕಯಾನಿ ಬೇಕರಿ ಶ್ರೂಸ್ಬರಿ ಬಿಸ್ಕತ್ತುಗಳು ಮತ್ತು ಮಾವಾ ಕೇಕ್‍ಗಳಿಗೆ ಹೆಸರುವಾಸಿಯಾಗಿದೆ.

ಪುಣೆಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಆಗಾಗ್ಗೆ ಈ ಬೇಕರಿ ಬಳಿ ಈ ಸಿಹಿತಿಂಡಿಗಳನ್ನು ಖರೀದಿಸುತ್ತಾರೆ.

Indian Dessert 2024
Indian Dessert 2024

2. ಕೆ.ಸಿ.ದಾಸ್, ಕೋಲ್ಕತಾ

ಪಟ್ಟಿಯಲ್ಲಿ 25ನೇ ಸ್ಥಾನ ಪಡೆದುಕೊಂಡ ಕೆ.ಸಿ.ದಾಸ್ 1866ರಲ್ಲಿ ಪ್ರಾರಂಭವಾಗಿತ್ತು. ಕೆ.ಸಿ.ದಾಸ್‌ ರಸಗುಲ್ಲಾಗಳಿಗೆ ಸಮಾನಾರ್ಥಕ ಹೆಸರು ಎಂಬ ಖ್ಯಾತಿ ಹೊಂದಿದೆ.

ಕೋಲ್ಕತ್ತಾ ಮೂಲದ ಈ ಮಿಠಾಯಿ ತಯಾರಕರು ಪ್ರವಾಸಿಗರಿಗೆ ಪ್ರಿಯವಾದ ಬಂಗಾಳಿ ಪಾಕಪದ್ಧತಿಯ ಮೂಲಕ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ.

Indian Dessert 2024
Indian Dessert 2024

3. ಫ್ಲೂರಿಸ್, ಕೋಲ್ಕತಾ

ಪಟ್ಟಿಯಲ್ಲಿ 26ನೇ ಸ್ಥಾನ ಪಡೆದುಕೊಂಡ ಕೋಲ್ಕತ್ತಾದ ಜನಪ್ರಿಯ ಟೀ ರೂಮ್ ಮತ್ತು ಬೇಕರಿಯಾದ ಫ್ಲೂರಿಸ್ 1927ರಿಂದ ಸ್ವಿಸ್ ಚಾಕೊಲೇಟ್‍ಗಳು ಮತ್ತು ಪ್ಯಾಟಿಸ್ಸೆರಿಯನ್ನು ಒದಗಿಸುತ್ತಿದೆ. ಈ ಐತಿಹಾಸಿಕ ಸಂಸ್ಥೆಗೆ ಭೇಟಿ ನೀಡುವವರು ಒಮ್ಮೆ ಇಲ್ಲಿ ಸಿಗುವ ರಮ್ ಬಾಲ್ ಸವಿಯಲೇಬೇಕು.

Indian Dessert 2024
Indian Dessert 2024

4. ಕರಾಚಿ ಬೇಕರಿ, ಹೈದರಾಬಾದ್

ಪಟ್ಟಿಯಲ್ಲಿ 29ನೇ ಸ್ಥಾನ ಪಡೆದುಕೊಂಡಿರುವ ಹೈದರಾಬಾದ್‍ನ ಕರಾಚಿ ಬೇಕರಿ ಹಣ್ಣಿನ ಬಿಸ್ಕತ್ತುಗಳು ಮತ್ತು ಇತರ ಬೇಯಿಸಿದ ಆಹಾರಗಳಿಗೆ ಹೆಸರುವಾಸಿಯಾಗಿದೆ.

ಇದು 1953ರಿಂದ ಜನರ ಗಮನ ಸೆಳೆದಿದೆ. ಬೇಕರಿಯ ವೈವಿಧ್ಯಮಯ ತಿಂಡಿತಿನಿಸುಗಳು ಸಿಹಿತಿಂಡಿ ಪ್ರಿಯರನ್ನು ಸಂತೋಷಪಡಿಸುತ್ತಲೇ ಇವೆ.

Indian Dessert 2024
Indian Dessert 2024

5. ಬಿ&ಆರ್ ಮುಲ್ಲಿಕ್, ಕೋಲ್ಕತಾ

ಪಟ್ಟಿಯಲ್ಲಿ 37ನೇ ಸ್ಥಾನ ಪಡೆದುಕೊಂಡ ಕೋಲ್ಕತ್ತಾದ ಬಿ&ಆರ್ ಮಲ್ಲಿಕ್ 1978ರಿಂದ ಪ್ರಾರಂಭವಾಗಿದೆ. ಬಲರಾಮ್ ಮುಲ್ಲಿಕ್ ಮತ್ತು ರಾಧಾರಮಣ್ ಮುಲ್ಲಿಕ್ ಎಂಬುವವರು ತನ್ನ ಸಾಂಪ್ರದಾಯಿಕ ಬಂಗಾಳಿ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದ್ದಾರೆ, ಇದು ಕೋಲ್ಕತ್ತಾದಲ್ಲಿ ವಿಶೇಷ ಸಿಹಿ ತಿಂಡಿಗಳು ದೊರೆಯುವ ಪ್ರಮುಖ ಸ್ಥಳವಾಗಿದೆ.

Indian Dessert 2024
Indian Dessert 2024

6. ಕೆ ರುಸ್ತುಂ ಅಂಡ್ ಕೋ, ಮುಂಬೈ

ಪಟ್ಟಿಯಲ್ಲಿ 49ನೇ ಸ್ಥಾನದಲ್ಲಿರುವ ಮುಂಬೈನ ಕೆ ರುಸ್ತುಂ ಅಂಡ್ ಕೋ 1953ರಲ್ಲಿ ಪ್ರಾರಂಭವಾಗಿದೆ. ಇದು ಮುಂಬೈನ ಪ್ರಸಿದ್ಧ ಐಸ್‌ಕ್ರೀಮ್ ಪಾರ್ಲರ್ ಆಗಿದೆ. ಇಲ್ಲಿ ಸಿಗುವ ವಿಶಿಷ್ಟ ಐಸ್‌ಕ್ರೀಮ್ ಸ್ಯಾಂಡ್ ವಿಚ್‍ಗಳು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ಬಹಳ ಅಚ್ಚುಮೆಚ್ಚು.

Indian Dessert 2024
Indian Dessert 2024

7. ಕುರೆಮಾಲ್ ಕುಲ್ಫಿ, ನವದೆಹಲಿ

ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದ ನವದೆಹಲಿಯ ಕುರೆಮಾಲ್ ಕುಲ್ಫಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿದೆ. ಇದು ರುಚಿಕರವಾದ ವಿಶೇಷವಾದ ಕುಲ್ಫಿಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಸ್ಟಫ್ಡ್ ಮಾವಿನ ಕುಲ್ಫಿಯನ್ನು ಸಿಗುತ್ತದೆ.

Indian Dessert 2024
Indian Dessert 2024

8. ಪ್ರಕಾಶ್ ಕುಲ್ಫಿ, ಲಕ್ನೋ

ಪಟ್ಟಿಯಲ್ಲಿ 77ನೇ ಸ್ಥಾನ ಪಡೆದುಕೊಂಡ ಲಕ್ನೋದ ಪ್ರಕಾಶ್ ಕುಲ್ಫಿ 1956ರಿಂದ ಪ್ರಾರಂಭವಾಗಿದ್ದು, ಇಲ್ಲಿ ಕ್ರೀಂ ಕುಲ್ಫಿಗಳು ಸಿಗುತ್ತವೆ. ಇದು ಎಲ್ಲಾ ಕಡೆಗಳಲ್ಲಿ ಸಿಗುವಂತಹ ಕುಲ್ಫಿಗಿಂತ ಹೆಚ್ಚು ರುಚಿಕರವಾಗಿದೆ.. ಹಾಗಾಗಿ ಇದು ಕುಲ್ಫಿ ಪ್ರಿಯರ ನೆಚ್ಚಿನ ಸ್ಥಳವಾಗಿದೆ.

Indian Dessert 2024
Indian Dessert 2024

9. ಚಿಟಾಲೆ ಬಂಧು, ಪುಣೆ

ಪಟ್ಟಿಯಲ್ಲಿ 85ನೇ ಸ್ಥಾನದಲ್ಲಿರುವ ಪುಣೆಯ ಚಿಟಾಲೆ ಬಂಧು ಸಿಹಿತಿಂಡಿಗಳು ಮತ್ತು ಬಕರ್ವಾಡಿಯಂತಹ ರುಚಿಕರವಾದ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಇದು 1950ರಿಂದ ಪುಣೆಯಲ್ಲಿ ಪ್ರಾರಂಭವಾಗಿದೆ.

Indian Dessert 2024
Indian Dessert 2024

10. ಜಿಲೇಬಿ ವಾಲಾ, ನವದೆಹಲಿ

ಪಟ್ಟಿಯಲ್ಲಿ 93ನೇ ಸ್ಥಾನ ಪಡೆದುಕೊಂಡ ನವದೆಹಲಿಯ ಹೃದಯಭಾಗದಲ್ಲಿರುವ ಜಿಲೇಬಿ ವಾಲಾ 1884ರಿಂದ ಹೊಸದಾದ ವಿಧಾನದಲ್ಲಿ ತಯಾರಿಸಿದ ಜಿಲೇಬಿಗಳನ್ನು ನೀಡುತ್ತಿದೆ. ಈ ಸ್ಥಳವು ಸ್ಥಳೀಯರಿಗೆ ಮತ್ತು ಸಂದರ್ಶಕರಿಗೆ ಅಚ್ಚುಮೆಚ್ಚಿನದಾಗಿದೆ.

ಇದನ್ನೂ ಓದಿ:  ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

ಸಿಹಿತಿಂಡಿಗಳ ವಿಷಯಕ್ಕೆ ಬಂದಾಗ, ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಪಾಕಶಾಲೆಯ ಸಂಪ್ರದಾಯಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ ಎಂಬುದನ್ನು ಈ 10 ಭಾರತೀಯ ತಿನಿಸುಗಳು ಸಾಬೀತುಪಡಿಸಿವೆ. ಈ ಪ್ರತಿಯೊಂದು ಸ್ಥಳಗಳು ಭಾರತದ ಸಿಹಿ ಪಾಕವಿಧಾನದಲ್ಲಿ ವಿಶಿಷ್ಟ ರುಚಿಯನ್ನು ನೀಡುತ್ತವೆ.

Continue Reading

ಆರೋಗ್ಯ

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

High Calcium Foods: ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

High Calcium Foods
Koo

ಕ್ಯಾಲ್ಶಿಯಂ ಖನಿಜ (High Calcium Foods) ನಮ್ಮ ಆರೋಗ್ಯಕ್ಕೆ ಅಗತ್ಯ ಎಂಬುದು ನಮಗೆಲ್ಲ ಗೊತ್ತು. ಹಲ್ಲು, ಮೂಳೆಗಳಿಂದ ಹಿಡಿದು ನಮ್ಮಿಡೀ ದೇಹದ ಸ್ವಾಸ್ಥ್ಯ ರಕ್ಷಣೆಗೆ ಇದು ಅಗತ್ಯ. ನರಗಳ ಆರೋಗ್ಯ ಚೆನ್ನಾಗಿರಿಸಲು, ಸ್ನಾಯುಗಳ ವಿಕಸನಕ್ಕೆ, ರಕ್ತ ಹೆಪ್ಪುಗಟ್ಟಲು… ಹೀಗೆ ಬಹಳಷ್ಟು ಕೆಲಸಗಳಿಗೆ ಕ್ಯಾಲ್ಶಿಯಂ ಅಗತ್ಯವಿದೆ. ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಸಸ್ಯಾಹಾರಿಗಳಂತೂ ಹಾಲು, ಚೀಸ್‌, ಪನೀರ್‌ ಮುಂತಾದವುಗಳನ್ನೇ ಕ್ಯಾಲ್ಶಿಯಂ ಪೂರೈಕೆಗೆ ನೆಚ್ಚಿಕೊಂಡಿರುತ್ತಾರೆ. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು?

Greens vegetables

ಹಸಿರು ಸೊಪ್ಪುಗಳು

ಪಾಲಕ್‌ ಸೊಪ್ಪು, ಲೆಟೂಸ್‌, ಸ್ವಿಸ್‌ ಚಾರ್ಡ್‌, ಸಾಸಿವೆ ಸೊಪ್ಪುಗಳು, ಟರ್ನಿಪ್‌ ಸೊಪ್ಪು, ಕೆಲವು ಬಗೆಯ ಎಲೆಕೋಸು ಮುಂತಾದ ಹಲವು ಬಗೆಯ ಸೊಪ್ಪುಗಳಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಾಗಿದೆ. ಒಂದು ಕಪ್‌ ಬೇಯಿಸಿದ ಸೊಪ್ಪಿನಲ್ಲಿ 265 ಮಿ.ಗ್ರಾಂನಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದೇ ಒಂದು ಕಪ್‌ (160 ಎಂ.ಎಲ್‌) ಹಾಲಿನಲ್ಲಿ 250 ಮಿ.ಗ್ರಾಂ.ನಷ್ಟು ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ ಇಂಥ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾಲ್ಶಿಯಂ ಮಾತ್ರವಲ್ಲ, ಅವುಗಳಿಂದ ದೊರೆಯುವ ಸೂಕ್ಷ್ಮ ಪೋಷಕಾಂಶಗಳು ದೇಹದ ಆರೋಗ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

Mackerel fish on ice
Broccoli

ಮೀನು

ಮೀನುಗಳಲ್ಲಿರುವ ಲೀನ್‌ ಮೀಟ್‌ ಆರೋಗ್ಯಕ್ಕೆ ಸೂಕ್ತವಾದದ್ದು. ಅದರಲ್ಲೂ ಭೂತಾಯಿಯಂಥ ಮೀನಿನಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕ 3.75 ಔನ್ಸ್‌ ಮೀನಿನಿಂದ 325 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಮಾತ್ರವಲ್ಲ, ಹಲವು ಬಗೆಯ ಖನಿಜಗಳು ಮತ್ತು ಒಮೇಗಾ 3 ಕೊಬ್ಬಿನಾಮ್ಲವೂ ಇದರಿಂದ ವಿಫುಲವಾಗಿ ಸಿಗುತ್ತದೆ.

Health Benefits Of Tofu

ತೋಫು

ಸೋಯಾ ಉತ್ಪನ್ನವಾದ ತೋಫುವಿನಲ್ಲೂ ಅಧಿಕ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಇದರ ಸಂಸ್ಕರಣೆಯಲ್ಲಿ ಕ್ಯಾಲ್ಶಿಯಂ ಸಲ್ಫೇಟ್‌ ಬಳಸಲಾಗಿದ್ದರೆ, ಅರ್ಧ ಕಪ್‌ ತೋಫುವಿನಿಂದ 250ರಿಂದ 850 ಎಂ.ಜಿ.ವರೆಗೂ ಕ್ಯಾಲ್ಶಿಯಂ ದೊರೆಯುತ್ತದೆ. ನೋಡುವುದಕ್ಕೆ ಪನೀರ್‌ನಂತೆಯೇ ಇರುವ ಇದನ್ನು ಹಲವು ರೀತಿಯ ಅಡುಗೆಗಳಲ್ಲಿ ಬಳಸಿ, ಕ್ಯಾಲ್ಶಿಯಂ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು.

Black Chia Seed

ಚಿಯಾ ಬೀಜಗಳು

ನೋಡುವುದಕ್ಕೆ ತೀರಾ ಸಣ್ಣದಾಗಿರು ಈ ಬೀಜಗಳು ಸತ್ವದಲ್ಲಿ ತ್ರಿವಿಕ್ರಮನಂತೆ. ಕೇವಲ ಎರಡು ಟೇಬಲ್‌ ಚಮಚ ಚಿಯಾ ಬೀಜಗಳಿಂದ 180 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇವುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ಮೂದಿ, ಸಲಾಡ್‌ ಮುಂತಾದ ಯಾವುದಕ್ಕೇ ಆದರೂ ಸೇರಿಸಿಕೊಳ್ಳಬಹುದು. ಇವುಗಳಲ್ಲಿ ನಾರು ಮತ್ತು ಒಳ್ಳೆಯ ಕೊಬ್ಬು ವಿಫುಲವಾಗಿವೆ.

sesame-seeds

ಎಳ್ಳು

ಇದನ್ನು ಅಂತೆಯೇ ತಿನ್ನುವುದಕ್ಕಿಂತ ಚಟ್ನಿಯಂತೆ ರುಬ್ಬಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಯಾವುದೇ ರೀತಿಯಲ್ಲಿ ಎಳ್ಳನ್ನು ರುಬ್ಬಿ ಅಡುಗೆಗೆ ಸೇರಿಸಿಕೊಳ್ಳಬಹುದು. ಎರಡು ಟೇಬಲ್‌ ಚಮಚ ಎಳ್ಳಿನಿಂದ 130 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ.

Broccoli

ಬ್ರೊಕೊಲಿ

ವಿಟಮಿನ್‌ ಸಿ ಮತ್ತು ಕೆ ಹೆಚ್ಚಾಗಿರುವ ಈ ತರಕಾರಿಯನ್ನು ಯಾವುದೇ ರೂಪದಲ್ಲಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಿಂದ 62 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಉಳಿದೆಲ್ಲ ಹಸಿರು ಸೊಪ್ಪುಗಳ ಜೊತೆಗೆ ಇದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ಬಾದಾಮಿ, ಅಂಜೂರ

ಒಂದು ಔನ್ಸ್‌ ಬಾದಾಮಿಯಲ್ಲಿ (ಅಂದಾಜು 23 ಬಾದಾಮಿ) 76 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದಲ್ಲದೆ, ಈ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ಇತರ ಖನಿಜಗಳು ಧಾರಾಳವಾಗಿವೆ. ಅಂಜೂರವೂ ಇದಕ್ಕಿಂತ ಕಡಿಮೆಯೇನಿಲ್ಲ. ಕಾಲು ಕಪ್‌ನಷ್ಟು ಅಂಜೂರದಲ್ಲಿ ಸುಮಾರು 90 ಎಂ.ಜಿಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ನಾರಿನಂಶವೂ ಸಾಕಷ್ಟಿದ್ದು, ಜೀರ್ಣಾಂಗಗಳ ಆರೋಗ್ಯವನ್ನು ವೃದ್ಧಿಸುತ್ತದೆ.

Continue Reading
Advertisement
Sourav Ganguly
ಪ್ರಮುಖ ಸುದ್ದಿ13 mins ago

Sourav Ganguly : ಕೊಲೆಗಡುಕರಿಗೆ ಈ ರೀತಿ ಮಾಡಿ; ಕೋಲ್ಕೊತಾ ವೈದ್ಯೆಯ ಅತ್ಯಾಚಾರ, ಕೊಲೆ ಬಗ್ಗೆ ಸೌರವ್​ ಗಂಗೂಲಿ ಅಭಿಪ್ರಾಯ ಹೀಗಿತ್ತು

Power Banks
ಪ್ರಮುಖ ಸುದ್ದಿ33 mins ago

Power Banks : ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಪವರ್​ ಬ್ಯಾಂಕ್​ಗಳನ್ನು ಬಾಡಿಗೆಗೆ ಪಡೆಯಬಹುದು!

Maheshchandra Guru
ಪ್ರಮುಖ ಸುದ್ದಿ1 hour ago

Maheshchandra Guru : ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಮಹೇಶ್​ಚಂದ್ರ ಗುರು ನಿಧನ

cm siddaramaiah
ಪ್ರಮುಖ ಸುದ್ದಿ2 hours ago

CM siddaramaiah : ಕಾಂಗ್ರೆಸ್ ಪಕ್ಷ, ಸರ್ಕಾರ ಸಿದ್ದರಾಮಯ್ಯ ಬೆಂಬಲಕ್ಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Kundapura Kannada Habba
ಕರ್ನಾಟಕ2 hours ago

Kundapura Kannada Habba: ನನ್ನ ಸಿನಿಮಾ ಕಥೆಗಳಿಗೆ ಊರು, ಯಕ್ಷಗಾನವೇ ಪ್ರೇರಣೆ; ರಿಷಬ್ ಶೆಟ್ಟಿ

NPS News
ಕರ್ನಾಟಕ2 hours ago

NPS News: ಹೊಸ ಪಿಂಚಣಿ ರದ್ದುಗೊಳಿಸಲು ಸಮಿತಿ ಪುನರ್‌ ರಚನೆ; ಎನ್‌ಪಿಎಸ್‌ ನೌಕರರ ಸಂಘ ವಿರೋಧ

ಪ್ರಮುಖ ಸುದ್ದಿ3 hours ago

7th pay commission : 7ನೇ ವೇತನ ಆಯೋಗ ಜಾರಿ ಬಳಿಕ ನೌಕರರ ಸಂಬಳ ಏರಿಕೆ ಎಷ್ಟು? ಅಧಿಕೃತ ಪಟ್ಟಿ ಬಿಡುಗಡೆ

Prabhas New Film
ಸಿನಿಮಾ3 hours ago

Prabhas New Film: ಹೊಸ ಯುದ್ಧ ಶುರು; ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಸುಳಿವು!

NPS
ಬೆಂಗಳೂರು3 hours ago

Government Employee: ಹಳೇ ಪಿಂಚಣಿ ವ್ಯವಸ್ಥೆ (OPS) ಜಾರಿ ಸಾಧ್ಯತೆ ಪರಿಶೀಲನೆಗೆ ಸರ್ಕಾರದಿಂದ ಸಮಿತಿ ಪುನರ್‌ ರಚನೆ

TJ Abraham
ಪ್ರಮುಖ ಸುದ್ದಿ4 hours ago

TJ Abraham : ಎಸ್ಎಂ ಕೃಷ್ಣರಿಂದ ಹಿಡಿದು ಸಿದ್ದರಾಮಯ್ಯವರೆಗೆ; ಕರ್ನಾಟಕ ರಾಜಕೀಯದ ದೊಡ್ಡ ಹುಲಿಗಳನ್ನೇ ಬೋನಿಗೆ ಬೀಳಿಸಿದ ಟಿ ಜೆ ಅಬ್ರಾಹಂ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌