Rameshwaram Cafe : ರಾಮೇಶ್ವರಂ ಕೆಫೆ ಮಾಲಕಿ ದಿವ್ಯಾ ರಾಘವೇಂದ್ರ ರಾವ್‌ ಯಾರು? ಅರ್ಚಕರ ಮಗಳ ಅಡ್ವೆಂಚರ್‌! - Vistara News

ಆಹಾರ/ಅಡುಗೆ

Rameshwaram Cafe : ರಾಮೇಶ್ವರಂ ಕೆಫೆ ಮಾಲಕಿ ದಿವ್ಯಾ ರಾಘವೇಂದ್ರ ರಾವ್‌ ಯಾರು? ಅರ್ಚಕರ ಮಗಳ ಅಡ್ವೆಂಚರ್‌!

Rameshwaram Cafe : ಬಾಂಬ್‌ ಸ್ಫೋಟದೊಂದಿಗೆ ಸುದ್ದಿಯಾದ ರಾಮೇಶ್ವರಂ ಕೆಫೆ ಅದರಾಚೆಗೂ ದೇಶಾದ್ಯಂತ ಫೇಮಸ್‌. ಯಾಕೆಂದರೆ ಅದರ ಆರಂಭ ಮತ್ತು ಬೆಳವಣಿಗೆ ಒಂದು ದೊಡ್ಡ ಸಕ್ಸಸ್‌ ಸ್ಟೋರಿ.

VISTARANEWS.COM


on

Rameshwaram Cafe Divya Raghavendra Rao main
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೇವಲ ಮೂರು ವರ್ಷಗಳಲ್ಲಿ ಇಡೀ ದೇಶ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಫುಡ್‌ ಜಾಯಿಂಟ್‌ ಅಂದರೆ ಅದು ರಾಮೇಶ್ವರಂ ಕೆಫೆ (Rameshwaram Cafe). ಈಗ ಬಾಂಬ್‌ ಸ್ಫೋಟದ (Blast in Bengaluru) ಮೂಲಕ ಸುದ್ದಿಯಲ್ಲಿರುವ ಈ ಜನಪ್ರಿಯ ಕೆಫೆ ಅದಕ್ಕಿಂತ ಮೋದಲೇ ತನ್ನ ವಿಶಿಷ್ಟ ಮತ್ತು ರುಚಿಕರ ಖಾದ್ಯ ವಿಶೇಷಗಳಿಗಾಗಿ (Special and tasty Cuisines) ಜನರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಮೂರು ವರ್ಷಗಳ ಹಿಂದೆ ಸಣ್ಣ ಜಾಗದಲ್ಲಿ ಆರಂಭಗೊಂಡ ರಾಮೇಶ್ವರಂ ಕೆಫೆಯ ನಾಲ್ಕು ಜಾಯಿಂಟ್‌ಗಳು ಬೆಂಗಳೂರಿನಲ್ಲೇ ಇವೆ. ಉಳಿದಂತೆ ದುಬೈ ಮತ್ತು ಹೈದರಾಬಾದ್‌ನಲ್ಲೂ ಒಂದೊಂದು ಹೋಟೆಲ್‌ ಇದೆ.

ಇದೊಂದು ಹೋಟೆಲ್‌ ಎನ್ನುವುದಕ್ಕಿಂತಲೂ ವಿಶಿಷ್ಟ ರೀತಿಯ ಭೋಜನ ಶಾಲೆ ಎನ್ನಬಹುದು. ಇಲ್ಲಿನ ತುಪ್ಪವೇ ತುಂಬಿ ತುಳುಕುವ ದೋಸೆ, ಪೊಂಗಲ್‌ ಮತ್ತು ಎಲ್ಲ ಖಾದ್ಯಗಳು ಭಾರಿ ಫೇಮಸ್‌. ಬೆಳಗ್ಗಿನಿಂದ ರಾತ್ರಿವರೆಗೆ ಜನರಿಂದ ತುಂಬಿ ತುಳುಕುವ ಈ ಕೆಫೆಗಳಲ್ಲಿ ಆರಾಮವಾಗಿ ನೆಲದಲ್ಲೇ ಕುಳಿತು ತಿಂಡಿ ತಿನ್ನಬಹುದಾದಷ್ಟು ಸ್ವಚ್ಛತೆ ಇದೆ. ಇಲ್ಲಿ ಯಾವ ಮಟ್ಟದ ರಶ್‌ ಎಂದರೆ ಒಂದು ದೋಸೆ ತಿನ್ನಲು ಹೋದರೆ ಕನಿಷ್ಠ ಒಂದರ್ಧ ಗಂಟೆಯಾದರೂ ಕಾಯಲೇಬೇಕು.

Rameshwaram Cafe foods
Rameshwaram Cafe Divya Raghavendra Rao3

ಹಾಗಿದ್ದರೆ ಈ ರಾಮೇಶ್ವರಂ ಕೆಫೆ ಯಾರದ್ದು? ಕೇವಲ ಮೂರೇ ವರ್ಷದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣವೇನು? ಅದರ ಮಾಲಕಿ ದಿವ್ಯಾ (Divya Raghavendra Rao) ಯಾರು? ಅವರ ಬೆನ್ನಿಗೆ ನಿಂತ ರಾಘವೇಂದ್ರ ರಾವ್‌ (Raghavendra Rao) ಯಾರು ಎಂಬೆಲ್ಲ ವಿಚಾರಗಳು ಎಲ್ಲರ ತಲೆಯಲ್ಲಿ ಓಡುತ್ತಿರುತ್ತವೆ.

Rameshwaram Cafe : ಇದು ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರ ಕನಸಿನ ಕೂಸು

ಬೆಂಗಳೂರಿನ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಎಂಬಿಬ್ಬರು ಸೇರಿ ಕಟ್ಟಿದ ಹೋಟೆಲ್‌ ಚೈನ್‌ ಇದು. ರಾಘವೇಂದ್ರ ರಾವ್‌ ಅವರು ಒಬ್ಬ ಮೆಕ್ಯಾನಿಕಲ್‌ ಎಂಜಿನಿಯರ್‌. ಅವರಿಗೆ ಅಡುಗೆ ಮೇಲೆ ಅಪಾರವಾದ ಆಸಕ್ತಿ. ಬೆಂಗಳೂರಿನವರೇ ಆದ ದಿವ್ಯಾ ಅವರು ಐಐಎಂ ಪದವೀಧರೆ ಮತ್ತು ಚಾರ್ಟರ್ಡ್‌ ಅಕೌಂಟೆಂಟ್‌. ಅವರಿಗೆ ಉದ್ಯಮದಲ್ಲಿ ಆಸಕ್ತಿ. ಪರಿಚಿತರೇ ಆಗಿದ್ದ ಅವರಿಬ್ಬರೂ ಮಾತನಾಡುತ್ತಿದ್ದಾಗ ಒಂದು ಹೋಟೆಲ್‌ ಕನಸು ಹುಟ್ಟಿತು.

Rameshwaram Cafe Divya Raghavendra Rao1
Rameshwaram Cafe Divya Raghavendra Rao3

ತಾವು ಹೋಟೆಲ್‌ ಮಾಡಬೇಕು ಎಂದು ಯೋಚಿಸಿದಾಗ ಅವರ ತಲೆಗೆ ಬಂದಿದ್ದು ಎರಡು ವಿಷಯ. ಒಂದು ಇದು ದಕ್ಷಿಣ ಭಾರತದ ವಿಶೇಷ ಖಾದ್ಯಗಳ ತಾಣವಾಗಬೇಕು (South Indian Food joint) ಎಂಬ ಕನಸು ಕನಸು ಕಂಡರು. ಎರಡನೇಯದು ಹೋಟೆಲ್‌ಗೆ ಏನು ಹೆಸರು ಇಡುವುದು? ಈ ಯೋಚನೆ ಬಂದಾಗ ಅವರಿಗೆ ನೆನಪಾದದ್ದು ಇಬ್ಬರೂ ತುಂಬ ಅಭಿಮಾನದಿಂದ ಕಾಣುತ್ತಿದ್ದ ಡಾ. ಎಪಿಜೆ ಅಬ್ದುಲ್‌ ಕಲಾಂ. ಅಬ್ದುಲ್‌ ಕಲಾಂ ಅವರು ಹುಟ್ಟಿದ ಊರಾದ ರಾಮೇಶ್ವರಂ ಅನ್ನೇ ತಮ್ಮ ಹೋಟೆಲ್‌ಗೂ ಇಟ್ಟರು. ಅಲ್ಲಿಂದ ಶುರುವಾಯಿತು ಜೈತ್ರ ಯಾತ್ರೆ.

ದಕ್ಷಿಣ ಭಾರತದ ತಿನಿಸುಗಳನ್ನು ಜಾಗತಿಕ ಮಟ್ಟಕ್ಕೆ ಒಯ್ಯಬೇಕು ಎಂಬ ಕನಸಿನೊಂದಿಗೆ ಹುಟ್ಟಿದ ರಾಮೇಶ್ವರಂ ಕೆಫೆ ಇವತ್ತು ಬೆಂಗಳೂರಿನಲ್ಲಿ ನಾಲ್ಕು ಸೇರಿ ಒಟ್ಟು ಆರು ಔಟ್‌ಲೆಟ್‌ಗಳನ್ನು ಹೊಂದಿದೆ. ಇಲ್ಲಿನ ಖಾದ್ಯಗಳ ಬಗ್ಗೆ, ಅಲ್ಲಿನ ಆಂಬಿಯೆನ್ಸ್‌, ಶುಚಿ ರುಚಿಗಳ ಬಗ್ಗೆ ಜಗತ್ತಿನ ಬ್ಲಾಗರ್‌ಗಳು ಬರೆಯುತ್ತಿದ್ದಾರೆ. ಜನರು ಖುಷಿಯಿಂದ ತಿನ್ನುತ್ತಿದ್ದಾರೆ.

Rameshwaram Cafe Divya Raghavendra Rao3
Rameshwaram Cafe Divya Raghavendra Rao3

ಓಪನ್‌ ಕಿಚನ್‌, ವಿಶಾಲ ಅಂಗಳ, ಮರದ ಕಟ್ಟೆಗಳು

ಯಾರು ಬೇಕಾದರೂ ಒಳಗೆ ಹೋಗಿ ನೋಡಬಹುದಾದ ಓಪನ್‌ ಕಿಚನ್‌, ಅದರ ಎದುರು ಒಂದು ರೌಂಡ್‌ ಕುಳಿತು ಯಾ ನಿಂತು ತಿನ್ನಬಹುದಾದ ಜಾಗ. ಅದರ ಹೊರಾವರಣದಲ್ಲಿ ನಾಲ್ಕೈದು ವಿಶಾಲ ಮೆಟ್ಟಿಲು, ನಂತರ ವಿಶಾಲವಾದ ಅಂಗಳದಂಥ ಜಾಗ. ಅಲ್ಲಲ್ಲಿ ಮರದ ಕಟ್ಟೆಗಳು.. ಇದು ಎಲ್ಲಾ ರಾಮೇಶ್ವರಂ ಕೆಫೆಗಳ ಸಾಮಾನ್ಯ ನೋಟ.

ಸುಮಾರು 700ಕ್ಕೂ ಅಧಿಕ ಸಿಬ್ಬಂದಿಗಳ ಪರಿವಾರವಾಗಿ ಬೆಳೆದಿದೆ ಅದು. 4.5 ಕೋಟಿ ರೂ ವ್ಯವಹಾರ ನಡೆಯುತ್ತಿದೆ. ಇದರ ಜನಪ್ರಿಯತೆ ಎಷ್ಟೆಂದರೆ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿಯವರ ವಿವಾಹ ಪೂರ್ವ ಸಂಭ್ರಮಾಚರಣೆಗೆ ದಕ್ಷಿಣ ಭಾರತದ ತಿನಿಸು ಪೂರೈಕೆ ಮಾಡುವ ಜವಾಬ್ದಾರಿ ರಾಮೇಶ್ವರಂ ಕೆಫೆಗೆ ಸಿಕ್ಕಿದೆ. ಹಲವಾರು ಬಾಲಿವುಡ್‌ ನಟರು ಇಲ್ಲಿಗೆ ಬರುತ್ತಾರೆ.

ಹಾಗಿದ್ದರೆ ಈಗ ಮೂಲ ಪ್ರಶ್ನೆಗೆ ಬರೋಣ ಈ ದಿವ್ಯಾ ಯಾರು?

ದಿವ್ಯಾ ರಾಘವೇಂದ್ರ ರಾವ್‌ ಅವರನ್ನು ನೋಡಿದರೆ ನೀವು ಇವರು ಇಡೀ ದೇಶದಲ್ಲೇ ಜನಪ್ರಿಯತೆ ಪಡೆದಿರುವ ರಾಮೇಶ್ವರಂ ಕೆಫೆಯ ಮಾಲಕಿ ಎಂದು ಹೇಳುವುದು ಸಾಧ್ಯವೇ ಇಲ್ಲ. ಅಷ್ಟೊಂದು ಸಿಂಪಲ್‌ ಆಗಿದ್ದಾರೆ. ಇವರು ಅಹಮದಾಬಾದ್‌ನ ಐಐಎಂನಲ್ಲಿ ಓದಿದವರು, ಚಾರ್ಟರ್ಡ್‌ ಅಕೌಂಟೆಂಟ್‌ ಅಂದರೆ ನಂಬಲು ಸಾಧ್ಯವೇ ಇಲ್ಲ. ಅಷ್ಟೊಂದು ಹೋಮ್ಲೀ ಆಗಿದ್ದಾರೆ… ಪಕ್ಕದ್ಮನೆ ಹುಡುಗಿಯ ಹಾಗೆ ಮುಗ್ಧ ಮುಗ್ಧ.

Rameshwaram Cafe Divya Raghavendra Rao3
Rameshwaram Cafe Divya Raghavendra Rao3

ಇದಕ್ಕೆ ಒಂದು ಕಾರಣವೂ ಇದೆ. ಈಗ ಕೋಟಿ ಕೋಟಿ ವ್ಯವಹಾರ ನಡೆಸುವ ಇವರೇನೂ ಹುಟ್ಟಾ ಶ್ರೀಮಂತರಲ್ಲ. ಪುರೋಹಿತರ ಕುಟುಂಬದಲ್ಲಿ ಹುಟ್ಟಿದ ಇವರು ಪಕ್ಕಾ ಮಿಡಲ್‌ ಕ್ಲಾಸ್‌ ಹುಡುಗಿ. ಬಾಲ್ಯದಿಂದಲೇ ಬಡತನವನ್ನು ಕಂಡು ಉಂಡವರು. ಕಷ್ಟದಲ್ಲಿರುವ ಕುಟುಂಬಕ್ಕೆ ಆಸರೆಯಾಗಬೇಕು ಎಂದೇ ಕಷ್ಟಪಟ್ಟು ಓದಿದರು. ಅದಕ್ಕಾಗಿ ಸಿಎ ಮಾಡಿದರು.

ಪಿಯುಸಿ ಬಳಿಕ ಐಐಎಂ ಅಹಮದಾಬಾದ್‌ನಲ್ಲಿ ‘ಮ್ಯಾನೇಜ್‌ಮೆಂಟ್‌ ಮತ್ತು ಫೈನಾನ್ಸ್‌’ ಶಿಕ್ಷಣ ಪಡೆದರು. ಅಲ್ಲಿ ಅವರು ಫುಡ್ ಬಿಸಿನೆಸ್‌ ಬಗ್ಗೆ ಕೆಲವೊಂದು ಕೇಸ್‌ ಸ್ಟಡಿ ಮಾಡುತ್ತಿದ್ದಾಗ ನಾನ್ಯಾಕೆ ಹೋಟೆಲ್‌ ಉದ್ಯಮ ಮಾಡಬಾರದು ಎಂದು ಅನಿಸಿತು. ಹಾಗೆ ಶುರುವಾಗಿದ್ದೇ ಹೊಸ ಕನಸು.

ಇದನ್ನು ತಮ್ಮ ಪರಿಚಿತರೇ ಆಗಿದ್ದ, ಫುಡ್‌ ಅಂದರೆ ಅಂದರೆ ಜೀವ ಬಿಡುವ, ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿದ್ದರೂ ಆಹಾರ ತಯಾರಿಯಲ್ಲಿ ನಳ ಮಹಾರಾಜನೇ ಆಗಿದ್ದ ರಾಘವೇಂದ್ರ ರಾವ್‌ ಅವರಿಗೆ ಹೇಳಿದರು. ಅವರಿಬ್ಬರ ಪಾರ್ಟ್ನರ್‌ಶಿಪ್‌ನಲ್ಲಿ ಹೊಸ ವೆಂಚರ್‌ ತಲೆ ಎತ್ತಿತ್ತು. ಅಂದ ಹಾಗೆ ಜಗತ್ತು ಕೋವಿಡ್‌ನಿಂದ ಕಣ್ತೆರೆಯೋ ಗಳಿಗೆಯಲ್ಲಿ ರಾಮೇಶ್ವರಂ ಕೆಫೆ ಕೂಡಾ ಬೆಳಕು ಕಂಡಿತು.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅಂಬಾನಿ ಪುತ್ರನ ಮದುವೆಗೂ ಕನೆಕ್ಷನ್‌?

ಉದ್ಯಮಿ ದಂಪತಿಗೆ ಈಗ ಪುಟ್ಟ ಮಗು

ಎಲ್ಲರೂ ತಿಳಿದುಕೊಂಡ ಹಾಗೆ ದಿವ್ಯಾ ಮತ್ತು ರಾಘವೇಂದ್ರ ರಾವ್‌ ಅವರು ಮದುವೆಯಾದ ಬಳಿಕ ಕಟ್ಟಿದ ಸಂಸ್ಥೆಯಲ್ಲ ಈ ರಾಮೇಶ್ವರಂ ಕೆಫೆ. ಅದು ಅವರು ಪರಿಚಿತರಾಗಿದ್ದು ಬ್ಯುಸಿನೆಸ್‌ ಪಾರ್ಟ್ನರ್‌ಗಳಾಗಿ ಕಟ್ಟಿದ್ದು. ಬಳಿಕವಷ್ಟೇ ಅವರು ಬದುಕಿನಲ್ಲೂ ಪಾಲುದಾರರಾದರು. ಅಂದ ಹಾಗೆ, ಈ ದಂಪತಿಗೆ ಒಂದು ಪುಟ್ಟ ಮಗುವಿದೆ. ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸುತ್ತಿದ್ದಾಗ ದಿವ್ಯಾ ರಾವ್‌ ಅವರು ಜಗದ ಪರಿವೆಯನ್ನೇ ಮರೆತು ತನ್ನ ಪುಟ್ಟ ಕಂದಮ್ಮನನ್ನು ಕಾಲ ಮೇಲೆ ಮಲಗಿಸಿ ಬಿಸಿ ಬಿಸಿ ಸ್ನಾನ ಮಾಡಿಸುತ್ತಿದ್ದರು. ಇದು ದಿವ್ಯಾ ರಾವ್‌ ಎಂಬ ಹೆಣ್ಮಗಳ ಸರಳತೆಯ ಚಿತ್ರ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ಆಹಾರ/ಅಡುಗೆ

Shawarma Recipe: ಬೀದಿಬದಿಯ ಶವರ್ಮಾ ಏಕೆ? ಮನೆಯಲ್ಲೇ ರುಚಿಯಾದ ಶವರ್ಮಾವನ್ನು ಹೀಗೆ ಮಾಡಿ!

Shawarma recipe: ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮಾಡುವ ವಿಧಾನ ಇಲ್ಲಿದೆ.

VISTARANEWS.COM


on

Shawarma Recipe
Koo

ಇದೀಗ ಆಹಾರದ ಗುಣಮಟ್ಟವೇ ಸಮಸ್ಯೆ. ಹೊರಗೆ ತಿನ್ನುವ ಎಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದೇ. ಯಾಕೆಂದರೆ ಒಂಟಿಯಾಗಿ ಬದುಕುವ, ಮನೆಯಿಂದ ದೂರವಿರುವ, ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರುವ ಮಂದಿ ಹೊರಗಿನ ತಿಂಡಿಗಳನ್ನು ಅವಲಂಬಿಸುವುದೇ ಹೆಚ್ಚು. ಬೀದಿಬದಿಯ ತಿನಿಸುಗಳು, ಚಾಟ್‌ಗಳು, ಕಡಿಮೆ ದರದಲ್ಲಿ ಲಭ್ಯವಾಗುವ ತಿನಿಸುಗಳು ಇತ್ಯಾದಿಗಳು ಸುಲಭವಾಗಿ ಆಕರ್ಷಿಸುತ್ತವೆ ನಿಜವಾದರೂ, ಕೆಲವೊಮ್ಮೆ ಇಂತಹ ಆಹಾರಗಳೇ ಅನಾರೋಗ್ಯವನ್ನೂ ತರುತ್ತವೆ. ಮಳೆಗಾಲದಲ್ಲಿ ಈ ಸಂಭವ ಇನ್ನೂ ಹೆಚ್ಚು. ಕಲುಷಿತ ನೀರು, ಕಲುಷಿತ ಆಹಾರ, ಹೆಚ್ಚು ಕಾಲ ಶೇಖರಿಟ್ಟ ಆಹಾರಗಳಿಂದ ತಯಾರಿಸುವ ತಿಂಡಿ ತಿನಿಸುಗಳು, ವಾತಾವರಣದ ತೇವಾಂಶಕ್ಕೆ ಹಾಳಾಗಿ, ಹೊಟ್ಟೆ ಕೆಡುತ್ತದೆ. ಕೆಲವೊಮ್ಮೆ ದೊಡ್ಡ ಸಮಸ್ಯೆಯನ್ನೂ ಹುಟ್ಟುಹಾಕಿ, ಪ್ರಾಣಕ್ಕೂ ಸಂಚಕಾರ ಬರಬಹುದು. ಇತ್ತೀಚೆಗೆ, ಎಫ್‌ಎಸ್‌ಎಸ್‌ಎಐ ನಿಯಮಿತವಾಗಿ ಭಾರತದ ಹಲವು ಆಹಾರಗಳ ಪರೀಕ್ಷೆ ನಡೆಸುತ್ತಿದ್ದು, ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಬಣ್ಣಬಣ್ಣದ ಕಾಟನ್‌ ಕ್ಯಾಂಡಿ ರದ್ದಾಯಿತು. ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮನೆಯಲ್ಲೇ (shawarma recipe) ನೀವು ಹೇಗೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Shawarma

ಹೆಚ್ಚು ಕಷ್ಟವೇನಿಲ್ಲ

ಶವರ್ಮಾ ಮಾಡಲು ಹೆಚ್ಚು ಕಷ್ಟವೇನಿಲ್ಲ. ಶವರ್ಮಾದ ಮಸಾಲೆ ಮಿಕ್ಸ್‌ ನೀವೊಮ್ಮೆ ರೆಡಿ ಮಾಡಿಟ್ಟುಕೊಂಡರೆ ನಿಮ್ಮ ಕೆಲಸ ಅರ್ಧ ಆದಂತೆ. ಈ ಮಸಾಲೆಯ ಮಿಕ್ಸ್‌ ಹೇಗೆ ಮಾಡೋದು ಎಂದು ತಿಳಿಯೋಣ ಬನ್ನಿ.

ಇದನ್ನೂ ಓದಿ: How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

ಶವರ್ಮಾ ಮಸಾಲೆ

ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಹುರಿದಿಡಿ. ನಂತರ ಏಲಕ್ಕಿ, ಕರಿಮೆಣಸು, ಸೋಂಪು, ಜೀರಿಗೆ, ಕೊತ್ತಂಬರಿ ಇವೆಲ್ಲವನ್ನೂ ಒಂದೊಂದಾಗಿ ಹುರಿಯಿರಿ. ಇವೆಲ್ಲವೂ ತಣಿದ ಕೂಡಲೇ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಈಗ ಶವರ್ಮಾ ಮಸಾಲೆ ರೆಡಿ. ಒಂದು ಗಾಳಿಯಾಡದ ಡಬ್ಬದಲ್ಲಿ ಈ ಮಸಾಲೆ ಪುಡಿಯನ್ನು ಕೆಲಕಾಲ ಫ್ರಿಡ್ಜ್‌ನಲ್ಲಿ ಶೇಖರಿಸಿಯೂ ಇಡಬಹುದು. ಇನ್ನು ರುಚಿಯಾದ, ಅಷ್ಟೇ ಆರೋಗ್ಯಕರವಾದ ಶವರ್ಮಾ ಮಾಡುವುದು ಹೇಗೆಂದು ತಿಳಿಯೋಣ. ಒಂದು ಬೇಕಿಂಗ್ ಪಾತ್ರೆಯಲ್ಲಿ ಕಾಲು ಕಪ್‌ ಮಾಲ್ಟ್‌ ವಿನೆಗರ್‌, ಕಾಲು ಕಪ್‌ ಮೊಸರು, ಒಂದು ಚಮಚ ಎಣ್ಣೆ, ಶವರ್ಮಾ ಮಸಾಲೆ ಪುಡಿ, ರುಚಿಗೆ ಉಪ್ಪು ಇವಿಷ್ಟನ್ನು ಮಿಕ್ಸ್‌ ಮಾಡಿ ಇದರ ಮೇಲೆ ಫ್ರೆಶ್‌ ಚಿಕನ್‌ ತೊಡೆ ಮಾಂಸವನ್ನು ಹಾಕಿ ಮಿಕ್ಸ್‌ ಮಾಡಿ ಚೆನ್ನಾಗಿ ಎಲ್ಲ ಬದಿಯೂ ಕೋಟಿಂಗ್‌ ಆಗುವಂತೆ ನೋಡಿಕೊಂಡು ಇದನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಮಾರಿನೇಟ್‌ ಆಗುವಂತೆ ಬಿಡಿ.
ನಂತರ 350 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಅವನ್‌ ಅನ್ನು ಪ್ರಿಹೀಟ್‌ ಮಾಡಿಕೊಳ್ಳಿ. ಸಣ್ಣ ಬೌಲ್‌ನಲ್ಲಿ ತಾಹಿನಿ, ಕಾಲು ಕಪ್‌ ಮೊಸರು, ಬೆಳ್ಳುಳ್ಳಿ, ನಿಂಬೆ ರಸ, ಆಲಿವ್‌ ಆಯಿಲ್‌ ಹಾಗೂ ಪಾರ್ಸ್ಲೇ ತೆಗೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಹಾಕಿ ರೆಫ್ರಿಜರೇಟ್‌ ಮಾಡಿ. ಇದನ್ನು ಚಿಕನ್‌ಗೆ ಕವರ್‌ ಮಾಡಿ. ೩೦ ನಿಮಿಷಗಳ ಕಾಲ ಅವನ್‌ನಲ್ಲಿ ಬೇಕ್‌ ಮಾಡಿ. ಒಮ್ಮೆ ನೋಡಿಕೊಂಡು ಚಿಕನ್‌ ಕಂದು ಬಣ್ಣಕ್ಕೆ ತಿರುಗದಿದ್ದರೆ ಮತ್ತೆ ೧೦ ನಿಮಿಷ ಬೇಕ್‌ ಮಾಡಿ. ಹೊರತೆಗೆದು ಆಕಾರಕ್ಕೆ ಕತ್ತರಿಸಿಕೊಳ್ಳಿ. ಟೊಮೆಟೋ, ಈರುಳ್ಳಿ, ಕ್ಯಾಬೇಜ್‌ ತುರಿಯಿಂದ ಅಲಂಕರಿಸಿ. ರೋಲ್‌ ಮಾಡಿ ತಾಹಿನಿ ಸಾಸ್‌ ಜೊತೆ ತಿನ್ನಿ. ಇಂತಹ ಪರ್ಫೆಕ್ಟ್‌ ರುಚಿಯನ್ನು ನೀವು ರೆಸ್ಟೋರೆಂಟ್‌ನಲ್ಲೂ ಅಪರೂಪಕ್ಕಷ್ಟೇ ಕಂಡಿರಬಹುದು. ಈಗ ಯಾವ ಭಯವೂ ಇಲ್ಲದೆ, ಶವರ್ಮಾ ತಿನ್ನಬಹುದು. ಮಳೆಗಾಲಕ್ಕೆ ಪರ್ಫೆಕ್ಟ್‌ ರುಚಿಯಾದ ಖಾದ್ಯವಿದು.

Continue Reading

ಆಹಾರ/ಅಡುಗೆ

How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

How To Cook With Garlic: ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೈದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು.

VISTARANEWS.COM


on

How To Cook With Garlic
Koo

ವಾಸನೆ ಗಾಢವೇ ಆದರೂ ಬೆಳ್ಳುಳ್ಳಿ ಕಿಚನ್‌ನ ಸೂಪರ್‌ ಸ್ಟಾರ್‌. ಅಡುಗೆಗೆ ಒಂದು ವಿಶಿಷ್ಟ ಘಮವನ್ನೂ ರುಚಿಯನ್ನು ಕೊಟ್ಟು ಯಾವುದೇ ಅಡುಗೆಯಲ್ಲಾದರೂ ತನ್ನತನವನ್ನು ಗಾಢವಾಗಿ ಎತ್ತಿ ತೋರಿಸುವ ಗುಣ ಇದಕ್ಕಿದೆ. ಗುಂಪಿನಲ್ಲಿ ಗೋವಿಂದವಾಗದೆ, ಗುಂಪಿನಲ್ಲಿದ್ದೂ ಪ್ರತ್ಯೇಕವಾಗಿ ನಿಲ್ಲುವ ಗುಣ ಇದಕ್ಕಿದೆ. ಇಂತಹ ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೂದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು. ಬನ್ನಿ, ಬೆಳ್ಳುಳ್ಳಿಯನ್ನು ಬಳಸುವಾಗ ನೆನಪಿನಲ್ಲಿಡಬೇಕಾದ ಕೆಲವು ಮುಖ್ಯವಾದ (How To Cook With Garlic) ಅಂಶಗಳು ಇಲ್ಲಿವೆ.

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವ ಮೊದಲು ತೊಳೆದುಕೊಳ್ಳಿ. ಅಡುಗೆ ಮಾಡುವ ಮೊದಲು ಯಾವುದೇ ತರಕಾರಿ, ಧಾನ್ಯ, ಬೇಳೆ ಕಾಳುಗಳೇ ಇರಲಿ ತೊಳೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಆಹಾರ ಸ್ವಚ್ಛವಾಗಿರುವುದು ಬಹಳ ಮುಖ್ಯ. ಆದರೆ ಬೆಳ್ಳುಳ್ಳಿಯನ್ನು ತೊಳೆದು ಸಿಪ್ಪೆ ತೆಗೆದು ಕತ್ತರಿಸಲು ಇರುವ ಸುಲಭ ವಿಧಾನ ಎಂದರೆ ಅದನ್ನು ನೀರಿನಲ್ಲಿ ಅರ್ಧ ಗಂಟೆ ನೆನೆ ಹಾಕುವುದು. ಇದರಿಂದ ಸಿಪ್ಪೆ ಸುಲಭವಾಗಿ ಬಿಡಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕತ್ತರಿಸಲು ಸುಲಭವಾಗುತ್ತದೆ.

ಕೆಲವೊಮ್ಮೆ ನಾವು ತರಕಾರಿಯನ್ನು ಹೇಗೆ ಕತ್ತರಿಸುತ್ತೇವೆ ಎಂಬುದರಲ್ಲಿಯೂ ಅದರ ರುಚಿ ಅಡಗಿದೆ. ಕೆಲವಕ್ಕೆ ಬೆಳ್ಳುಳ್ಳಿಯನ್ನು ಹಾಗೆಯೇ ಹಾಕಿದರೆ ರುಚಿಯೆನಿಸಿದರೆ, ಇನ್ನೂ ಕೆಲವಕ್ಕೆ ಕತ್ತರಿಸಿ ಹಾಕಬೇಕು. ಕೆಲವಕ್ಕೆ ಸಣ್ಣದಾಗಿ ಹೆಚ್ಚಿ ಹಾಕಬೇಕು. ಇನ್ನೂ ಕೆಲವಕ್ಕೆ ಪೇಸ್ಟ್‌ ಮಾಡಿ ಹಾಕಬೇಕು. ಯಾವುದಕ್ಕೆ ಹೇಗಿರಬೇಕೋ ಹಾಗೆಯೇ ಮಾಡಿ. ಬೆಳ್ಳುಳ್ಳಿ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ.

Garlic

ಬೆಳ್ಳುಳ್ಳಿಯ ಘಮ ಹಾಗೂ ರುಚಿ ಸರಿಯಾಗಿ ಬರಬೇಕೆಂದರೆ ಅದನ್ನು ಯಾವಾಗ ಅಡುಗೆಗೆ ಸೇರಿಸಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಅಡುಗೆಗಳಲ್ಲಿ ಮುಂಚಿತವಾಗಿ ಬೆಳ್ಳುಳ್ಳಿಯನ್ನು ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೂ ಹುರಿದುಕೊಂಡು ಬೇರೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಬೆಳ್ಳುಳ್ಳಿಯ ಕೆಟ್ಟ ವಾಸನೆ ಅಡುಗೆಯಲ್ಲಿ ಮೇಳೈಸುತ್ತದೆ. ಇನ್ನೂ ಕೆಲವಕ್ಕೆ ಒಗ್ಗರಣೆಯೊಂದಿಗೆ ಹುರಿದುಕೊಂಡು ಹಾಕುತ್ತೇವೆ. ಹಾಗಾಗಿ, ಈ ಕ್ರಮವನ್ನು ಸರಿಯಾಗಿಯೇ ಪಾಲಿಸಿ.

Garlic

ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಹುರದುಕೊಳ್ಳುವಾಗ ಸದಾ ಎಚ್ಚರವಾಗಿರಬೇಕು. ಯಾಕೆಂದರೆ ಹುರಿದದ್ದು ಕಡಿಮೆಯಾಗಲೂಬಾರದು. ಹೆಚ್ಚಾಗಲೂಬಾರದು. ಕಡಿಮೆ ಹುರಿದರೆ ಹಸಿ ವಾಸನೆ ಹೋಗದು. ಹೆಚ್ಚಾದರೆ ಸುಟ್ಟು ಬಿಡುತ್ತದೆ. ಹಾಗಾಗಿ, ಬೆಳ್ಳುಳ್ಳಿಯನ್ನು ಕಪ್ಪಾಗುವವರೆಗೆ ಹುರಿಯಬೇಡಿ. ಅದರ ಪೋಷಕಾಂಶಗಳನ್ನು ಸರಿಯಾಗಿ ಬಳಸಬೇಕೆಂದರೆ ಹದವಾಗಿ ಹುರಿಯಿರಿ.

ಇದನ್ನೂ ಓದಿ: Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

ಇಡಿಯಾದ ಬೆಳ್ಳುಳ್ಳಿಯನ್ನು ಅಡುಗೆಗೆ ಹಾಗೆಯೇ ಬಳಸಿವುದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಬೆಳ್ಳುಳ್ಳಿಯಲ್ಲಿರುವ ಎನ್‌ಝೈಮ್‌ಗಳು ಸರಿಯಾಗಿ ಆಹಾರದೊಂದಿಗೆ ಮಿಳಿತವಾಗದು. ಇದಕ್ಕಾಗಿ, ಬೆಳ್ಳುಳ್ಳಿ ಆಹಾರದಲ್ಲಿ ಹಾಗೆಯೇ ಇರಬೇಕೆಂದು ಬಯಸಿದರೆ ಅದನ್ನು ಕತ್ತರಿಸಿ ಹುರಿದುಕೊಳ್ಳಿ. ಕತ್ತರಿಸಿದ ಬೆಳ್ಳುಳ್ಳಿಯಲ್ಲಿ ಬಹುಬೇಗನೆ ಅದರಲ್ಲಿರುವ ಅಲ್ಲಿನಾಸ್‌ ಎಂಬ ಎನ್‌ಝೈಮ್‌ ಅಲ್ಲಿನ್‌ ಆಗಿ ನಂತರ ಅಲ್ಲಿಸಿನ್‌ ಪರಿವರ್ತನೆಗೊಳ್ಳಲು ಸುಲಭವಾಗುತ್ತದೆ. ಅಲ್ಲಿಸಿನ್‌ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಹಾಗೂ ರ್ಕತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.

Continue Reading

ಆಹಾರ/ಅಡುಗೆ

Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

Curd Rice Recipe: ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಮೊಸರನ್ನ ರುಚಿಕರ ಮಾಡಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

VISTARANEWS.COM


on

Curd Rice Recipe
Koo

ದಕ್ಷಿಣ ಭಾರತೀಯರಿಗೆ ಮೊಸರನ್ನ ಎಂದರೆ ಅಮೃತದ ಹಾಗೆ. ಏನೂ ಇಲ್ಲದ ಹೊತ್ತಲ್ಲಿ, ಹೊಟ್ಟೆ ತಣ್ಣಗಿರಲು ಬಯಸುವ ಹೊತ್ತಲ್ಲಿ, ಬೇಸಿಗೆಯ ಬಿಸಿಲಿಗೆ ದಣಿದು ಬಂದಾಗ ನೆನಪಾಗುವುದು ಮೊಸರನ್ನ. ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಇಷ್ಟು ಸಿಂಪಲ್‌ ಮೊಸರನ್ನವನ್ನು ಮಾಡುವುದೂ ಕೂಡಾ ಯಾಕೆ ಬರುವುದಿಲ್ಲ ಎಂದು ಕೆಲವೊಮ್ಮೆ ಗೊಂದಲವೂ ಆಗಬಹುದು. ಆದರೆ, ಎಷ್ಟೇ ಸಿಂಪಲ್‌ ಆದರೂ ರುಚಿಯಾದ ಮೊಸರನ್ನ ಮಾಡುವುದೂ ಕೂಡಾ ಒಂದು ಕಲೆ. ಯಾಕೆಂದರೆ ರುಚಿಯಾದ ಮೊಸರನ್ನದ ಗುಟ್ಟು ಅಡಗಿರುವುದು ಅದರ ಕ್ರೀಮೀಯಾದ ಸ್ವರೂಪದಲ್ಲಿ. ಅದು ಹೆಚ್ಚು ತೆಳುವೂ ಆಗಿರಬಾರದು, ಗಟ್ಟಿಯೂ ಆಗಿರಬಾರದು. ಹದವಾದ ಕ್ರೀಮಿನಂತೆ ಬಾಯಿಗಿಟ್ಟರೆ ಐಸ್‌ಕ್ರೀಮಿನಂತೆ ಕರಗುವ, ಹೊಟ್ಟೆ ತಂಪೆನಿಸುವ ಮೊಸರನ್ನವನ್ನು ನೀವು ಮನೆಯಲ್ಲಿ ಮಾಡುವುದಿದ್ದರೆ ಈ ಸಿಂಪಲ್‌ (Curd Rice Recipe) ವಿಚಾರಗಳನ್ನು ಮರೆಯದಿರಿ.

Health Benefits Of Curd Rice

ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ

ಯಾವುದೋ ಅನ್ನವನ್ನು ಮೊಸರನ್ನಕ್ಕೆ ಬಳಸಬೇಡಿ. ಮೊಸರನ್ನಕ್ಕೆ ಬಳಸುವ ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ. ಯಾಕೆಂದರೆ ಇಲ್ಲಿ ಅನ್ನಕ್ಕೆ ಬಹಳ ಮುಖ್ಯ ಪಾತ್ರವಿದೆ. ಬಾಸುಮತಿ ಅಕ್ಕಿಯ ಅನ್ನವಾದರೆ ಒಳ್ಳೆಯ ಘಮ ಹಾಘೂ ರುಚಿಯೂ ಬರುತ್ತದೆ. ಅಷ್ಟೇ ಅಲ್ಲ, ಅಕ್ಕಿಗೆ ಬೇಯಲು ಸರಿಯಾದ ಸಮಯ ಕೊಡಿ. ಅತಿಯಾಗದಂತೆ, ಹಾಗೆ ಕಡಿಮೆಯೂ ಆಗದಂತೆ ಅಕ್ಕಿಯನ್ನು ಬೇಯಿಸಬೇಕು.

ತಾಜಾ ಮೊಸರನ್ನೇ ಬಳಸಿ

ಯಾವಾಗಲೂ, ಉಳಿದ ಮೊಸರನ್ನು, ಬೇಡವಾದ ಮೊಸರನ್ನು ಮೊಸರನ್ನಕ್ಕೆ ಬಳಸಬೇಡಿ. ತಾಜಾ ಮೊಸರನ್ನೇ ಬಳಸಿ. ಹುಳಿ ಬಂದ ಮೊಸರು ಇದಕ್ಕೆ ಸಲ್ಲ. ಮನೆಯಲ್ಲೇ ಮಾಡಿದ ಮೊಸರಾದರೆ ಒಳ್ಳೆಯದು. ಅನ್ನ ಬೆಂದು ತಣಿದ ಮೇಲಷ್ಟೇ ಮೊಸರನ್ನು ಅನ್ನಕ್ಕೆ ಸೇರಿಸಿ. ಇಷ್ಟು ತಾಳ್ಮೆ ನಿಮ್ಮಲ್ಲಿದ್ದರೆ ರುಚಿಯಾದ ಮೊಸರನ್ನ ಮಾಡಬಹುದು.

Curd Rice

ಕೆನೆಯನ್ನೂ ಇದಕ್ಕೆ ಹಾಕಬಹುದು

ಮೊಸರನ್ನ ರುಚಿಯಾಗಿ ಬರಬೇಕೆಂದರೆ ಹಾಲಿನ ಕೆನೆಯನ್ನೂ ಇದಕ್ಕೆ ಹಾಕಬಹುದು. ಫ್ರೆಶ್‌ ಕ್ರೀಮನ್ನು ಇದಕ್ಕೆ ಹಾಕಿದರೆ ಅಂತಹ ಟೆಕ್ಷ್ಚರ್‌ ಪಡೆಯಬಹುದು. ಇಷ್ಟವಾಗದೆ ಇದ್ದರೆ ಹಾಕದೆಯೂ ಇರಬಹುದು. ಇದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ, ಕ್ರೀಂ ಹಾಕುವಾಗ ಹಾಲನ್ನೂ ಸ್ವಲ್ಪ ಸೇರಿಸಲು ಮರೆಯದಿರಿ.

ಮೊಸರಿಗೆ ಏನು ಹಾಕಬೇಕು?

ಮೊಸರನ್ನ ಎಂದರೆ ಬಹಳ ಮಂದಿ, ಮೊಸರು ಹಾಗೂ ಅನ್ನ ಎಂದಷ್ಟೇ ತಿಳಿದುಕೊಳ್ಳುವವರಿದ್ದಾರೆ. ಆದರೆ, ಮೊಸರನ್ನ ರುಚಿಯಾಗಲು ಇದು ಬಿಟ್ಟು ಬೇರೆ ಕೆಲವು ವಿಚಾರಗಳೂ ಮುಖ್ಯವಾಗುತ್ತದೆ. ಕೆಲವು ತರಕಾರಿ, ಹಣ್ಣುಗಳನ್ನು ಸೇರಿಸುವ ಮೂಲಕವೂ ಮೊಸರನ್ನ ಅಮೃತವಾಗಿ ಬದಲಾಗುತ್ತದೆ. ಮುಖ್ಯವಾಗಿ, ಕ್ಯಾರೆಟ್‌, ಸೌತೆಕಾಯಿ, ಮಾವು, ದಾಳಿಂಬೆ ಇತ್ಯಾದಿಗಳು ಮೊಸರನ್ನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಇದನ್ನೂ ಓದಿ: Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?

ಒಗ್ಗರಣೆ ಮರೆಯಬೇಡಿ

ಒಗ್ಗರಣೆ ಹಾಕುವುದರಲ್ಲಿ ಕಂಜೂಸಿತನ ತೋರಿಸಬೇಡಿ. ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಗೋಡಂಬಿ, ಕರಿಬೇವನ್ನು ಧಾರಾಳವಾಗಿ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯಿಂದ ಮೊಸರನ್ನಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದನ್ನು ನೆನಪಿಡಿ. ಕರಿಬೇವು ಇಲ್ಲವಾದರೆ ಚಿಂತಿಸಬೇಡಿ. ಕೊತ್ತಂಬರಿ ಸೊಪ್ಪಾದರೂ ಸೈ. ಆದರೆ, ಒಗ್ಗರಣೆಯನ್ನು ಎಂದಿಗೂ ಮರೆಯಬೇಡಿ.

Continue Reading
Advertisement
Health Tips Kannada
ಆರೋಗ್ಯ10 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ55 mins ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ1 hour ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ1 hour ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ1 hour ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ6 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Mumbai Spa
ಪ್ರಮುಖ ಸುದ್ದಿ7 hours ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Vijay Mallya
ದೇಶ7 hours ago

Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ12 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ13 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ14 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ15 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌