Anant Ambani: ಅನಂತ್ ಅಂಬಾನಿ ನೇತೃತ್ವದಲ್ಲಿ ವನ್ಯಜೀವಿಗಳಿಗಾಗಿ 3000 ಎಕರೆಯ 'ವಂತಾರ' ; ಏನಿದೆ ಇಲ್ಲಿ? - Vistara News

ವಾಣಿಜ್ಯ

Anant Ambani: ಅನಂತ್ ಅಂಬಾನಿ ನೇತೃತ್ವದಲ್ಲಿ ವನ್ಯಜೀವಿಗಳಿಗಾಗಿ 3000 ಎಕರೆಯ ‘ವಂತಾರ’ ; ಏನಿದೆ ಇಲ್ಲಿ?

ಚಿಕ್ಕ ವಯಸ್ಸಿನಲ್ಲಿಯೇ ಶುರುವಾದ ಅನಂತ್‌ ಅಂಬಾನಿ (Anant Ambani) ಅವರ ವನ್ಯಪ್ರೀತಿಯು ಈಗ ವಂತಾರ ರೂಪದಲ್ಲಿ ಸಂರಕ್ಷಣೆಯ ರೂಪ ತಾಳುತ್ತಿದೆ.

VISTARANEWS.COM


on

anant ambani vantara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜಾಮ್‌ನಗರ: ರಿಲಯನ್ಸ್ ಇಂಡಸ್ಟ್ರೀಸ್ (Reliance industries) ಹಾಗೂ ರಿಲಯನ್ಸ್ ಫೌಂಡೇಷನ್‌ನಿಂದ (Riliance Foundation) ಇತ್ತೀಚೆಗೆ ಅನಂತ್‌ ಅಂಬಾನಿ (Anant Ambani) ನೇತೃತ್ವದಲ್ಲಿ ಮಹತ್ತರವಾದ ಕಾರ್ಯಕ್ರಮವೊಂದನ್ನು ಘೋಷಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ವಂತಾರ (VANTARA- ಸ್ಟಾರ್ ಆಫ್ ದ ಫಾರೆಸ್ಟ್) ಎಂದು ಹೆಸರಿಡಲಾಗಿದೆ. ಈ ಉಪಕ್ರಮದ ಅಡಿಯಲ್ಲಿ ಮಾಡುವ ಕೆಲಸ ಏನೆಂದರೆ, ಭಾರತ ಹಾಗೂ ವಿದೇಶಗಳಲ್ಲಿ ಗಾಯಗೊಂಡ, ಆತಂಕಕ್ಕೆ ಗುರಿಯಾದ, ಸಮಸ್ಯೆಗೆ ಈಡಾದ ಪ್ರಾಣಿಗಳ ರಕ್ಷಣೆ, ಆರೈಕೆ, ಚಿಕಿತ್ಸೆ ಹಾಗೂ ಪುನರ್ವಸತಿ. ಗುಜರಾತ್‌ನ ಜಾಮ್ ನಗರದಲ್ಲಿನ ರಿಲಯನ್ಸ್ ರಿಫೈನರಿ ಸಮುಚ್ಚಯದ ಹಸಿರು ವಲಯ 3000 ಎಕರೆ ವ್ಯಾಪಿಸಿದೆ.

ಜಾಗತಿಕ ಮಟ್ಟದಲ್ಲಿಯೇ ಈ ರೀತಿ ಸಂರಕ್ಷಣೆಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಕೊಡುಗೆ ನೀಡುತ್ತಿರುವ ಪ್ರಮುಖ ಉಪಕ್ರಮ “ವಂತಾರ”ದಿಂದ ಆಗುತ್ತಿದೆ. ಪ್ರಾಣಿಗಳ ರಕ್ಷಣೆ ಹಾಗೂ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು, ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಪರಿಣತರ ಜತೆಗೂಡಿ 3000 ಎಕರೆ ಪ್ರದೇಶವನ್ನು ಅರಣ್ಯದ ರೀತಿಯ ವಾತಾವರಣವಾಗಿ ವಂತಾರ ಪರಿವರ್ತನೆ ಮಾಡಿದೆ. ಇದು ಸಹಜವಾಗಿ, ಶ್ರೀಮಂತ ಪರಿಸರದಲ್ಲಿ, ದಟ್ಟಾರಣ್ಯದಿಂದ ರಕ್ಷಣೆ ಮಾಡುವ ಪ್ರಾಣಿಗಳಿಗೆ ಆವಾಸ ಸ್ಥಾನವಾಗಿದೆ.

ಈ ವಂತಾರ ಉಪಕ್ರಮವು ಈ ರೀತಿಯಾಗಿ ಮಾಡುತ್ತಿರುವುದು ಭಾರತದಲ್ಲಿಯೇ ಮೊದಲನೆಯದು. ವಂತಾರ ಹುಟ್ಟಿನ ಪರಿಕಲ್ಪನೆ ಹಾಗೂ ಅನುಷ್ಠಾನ ಆಗುತ್ತಿರುವುದು ರಿಲಯನ್ಸ್ ಮಂಡಳಿ ಹಾಗೂ ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾದ ಅನಂತ್ ಅಂಬಾನಿ ಅವರ ನಾಯಕತ್ವದಲ್ಲಿ. ಅಷ್ಟೇ ಅಲ್ಲ, ಜಾಮ್ ನಗರದಲ್ಲಿ ರಿಲಯನ್ಸ್ ನ ನವೀಕರಿಸವ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿರುವವರು ಸಹ ಅನಂತ್ ಅಂಬಾನಿಯವರೇ. ಈ ಮೂಲಕ 2035ರ ವೇಳೆಗೆ ನೆಟ್ ಕಾರ್ಬನ್ ಝೀರೋ ಕಂಪನಿಯಾಗಲು ರಿಲಯನ್ಸ್‌ನ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಅನಂತ್ ಅಂಬಾನಿ, “ನನಗೆ ಚಿಕ್ಕ ವಯಸ್ಸಿನಲ್ಲೇ ಶುರುವಾದ ಈ ಪ್ರೀತಿಯು ಈಗ ನಮ್ಮ ಅದ್ಭುತ ತಂಡ ಮತ್ತು ಬದ್ಧತೆಯೊಂದಿಗೆ ವಂತರಾ ರೂಪದಲ್ಲಿ ಸಾಕಾರ ಆಗಿದೆ. ಭಾರತದಲ್ಲಿ ಸ್ಥಳೀಯವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವಲ್ಲಿ ನಾವು ಗಮನಹರಿಸಿದ್ದೇವೆ. ನಾವು ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಮತ್ತು ಆ ಜೀವ ಪ್ರಭೇದಗಳಿಗೆ ಇರುವ ಆತಂಕವನ್ನು ನಿವಾರಿಸುವುದಕ್ಕೆ ಬಯಸುತ್ತೇವೆ. ನಮ್ಮ ಪ್ರಯತ್ನಗಳು ಭಾರತದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ನಾವು ಸಂತೋಷಪಡುತ್ತೇವೆ. ಭಾರತದ ಮತ್ತು ವಿಶ್ವದ ಕೆಲವು ಉನ್ನತ ಪ್ರಾಣಿಶಾಸ್ತ್ರ ಮತ್ತು ವೈದ್ಯಕೀಯ ತಜ್ಞರು ನಮ್ಮ ಮಿಷನ್‌ಗೆ ಸೇರಿಕೊಂಡಿದ್ದಾರೆ ಮತ್ತು ಸರ್ಕಾರಿ ಸಂಸ್ಥೆಗಳು, ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಗಳ ಸಕ್ರಿಯ ಸಹಯೋಗ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ತರಬೇತಿ, ಸಾಮರ್ಥ್ಯ ನಿರ್ಮಾಣ ಮತ್ತು ಪ್ರಾಣಿಗಳ ಆರೈಕೆಯ ಮೂಲಸೌಕರ್ಯಗಳ ವಿಷಯದಲ್ಲಿ ಭಾರತದಲ್ಲಿನ ಎಲ್ಲ 150ಕ್ಕೂ ಹೆಚ್ಚು ಮೃಗಾಲಯಗಳನ್ನು ಸುಧಾರಿಸುವಲ್ಲಿ ಝೂ ಅಥಾರಿಟಿ ಆಫ್ ಇಂಡಿಯಾ ಮತ್ತು ಇತರ ಸಂಬಂಧಿತ ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರ ಆಗಲು ವಂತರಾ ಗುರಿ ಇರಿಸಿಕೊಂಡಿದೆ,” ಎಂದಿದ್ದಾರೆ.

ವಂತಾರವನ್ನು ಸ್ಥಾಪಿಸಲು ಅವರನ್ನು ಪ್ರೇರೇಪಿಸಿದ ತತ್ವದ ಬಗ್ಗೆ ವಿವರಿಸಿರುವ ಅನಂತ್ ಅಂಬಾನಿ, “ವಂತಾರ ಎಂಬುದು ಆಧುನಿಕ ವೈಜ್ಞಾನಿಕ ಮತ್ತು ತಾಂತ್ರಿಕ ವೃತ್ತಿಪರತೆಯ ಶ್ರೇಷ್ಠತೆಯೊಂದಿಗೆ ಸಹಾನುಭೂತಿಯ ಪ್ರಾಚೀನ ನೈತಿಕ ಮೌಲ್ಯದ ಸಂಯೋಜನೆಯಾಗಿದೆ. ನಾನು ಜೀವದ ಸೇವೆಯನ್ನು (ಪ್ರಾಣಿಗಳ ಆರೈಕೆ) ಭಗವಂತ ಮತ್ತು ಮಾನವೀಯತೆಯ ಸೇವೆಯಾಗಿ ನೋಡುತ್ತೇನೆ,” ಎಂದಿದ್ದಾರೆ.

ವಂತಾರದ ಮೂಲಕವಾಗಿ ಪ್ರಾಣಿಗಳ ಸಂರಕ್ಷಣೆಗೆ ಅತ್ಯುತ್ಕೃಷ್ಟ ದರ್ಜೆಯ ವ್ಯವಸ್ಥೆ, ಅವುಗಳ ಆರೈಕೆಗೆ ಅತ್ಯುತ್ತಮ ಪದ್ಧತಿ ಅಳವಡಿಸಲಾಗಿದೆ. ಹೆಲ್ತ್ ಕೇರ್, ಆಸ್ಪತ್ರೆ, ಸಂಶೋಧನೆ ಹಾಗೂ ಶೈಕ್ಷಣಿಕ ಕೇಂದ್ರ ಸಹ ಇದೆ. ಇನ್ನು ಇದೇ ಕಾರ್ಯಕ್ರಮದ ಅಡಿಯಲ್ಲಿ ಉನ್ನತ ಮಟ್ಟದ ಸಂಶೋಧನೆ ಸಂಯೋಜನೆಗೆ, ಪ್ರತಿಷ್ಠಿತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ (IUCN) ಹಾಗೂ ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಫಾರ್ ನೇಚರ್ (WWF) ಜತೆಗಿನ ಸಹಭಾಗಿತ್ವದ ಮೇಲೆ ವಂತಾರ ಗಮನ ಕೇಂದ್ರೀಕರಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ಈ ಕಾರ್ಯಕ್ರಮದ ಅಡಿಯಲ್ಲಿ ಇನ್ನೂರಕ್ಕೂ ಹೆಚ್ಚು ಆನೆಗಳು, ಸಾವಿರಾರು ಇತರ ಪ್ರಾಣಿಗಳು, ಸರೀಸೃಪಗಳು ಮತ್ತು ಹಕ್ಕಿಗಳನ್ನು ಅಸುರಕ್ಷಿತ ಸನ್ನಿವೇಶಗಳಿಂದ ರಕ್ಷಣೆ ಮಾಡಲಾಗಿದೆ. ಅಷ್ಟೇ ಅಲ್ಲ, ಘೇಂಡಾಮೃಗ, ಚಿರತೆ ಹಾಗೂ ಮೊಸಳೆಗಳಂಥ ಮುಖ್ಯ ಜೀವಿಗಳ ಪುನರ್ವಸತಿಗಾಗಿಯೂ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಂತಾರದ ಮೂಲಕ ಮೆಕ್ಸಿಕೋ, ವೆನಿಜುವೆಲಾ ಮುಂತಾದ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಸೆಂಟ್ರಲ್ ಅಮೆರಿಕನ್ ಝೂ ಅಧಿಕಾರಿಗಳ ಮನವಿ ಮೇರೆಗೆ ಇತ್ತೀಚೆಗೆ ಹಲವು ದೊಡ್ಡ ಪ್ರಾಣಿಗಳನ್ನು ತರಲಾಗಿದೆ. ಇನ್ನು ಇಂಥ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳನ್ನು ಭಾರತ ಹಾಗೂ ಅಂತಾರಾಷ್ಟ್ರೀಯ ಕಠಿಣ ಕಾನೂನು ಮತ್ತು ನಿಯಮಾವಳಿಗಳ ವ್ಯಾಪ್ತಿಯಲ್ಲೇ ಮಾಡಲಾಗಿದೆ.

ಮೂರು ಸಾವಿರ ಎಕರೆ ಪ್ರದೇಶದಲ್ಲಿ ಇನ್ನೂರಕ್ಕೂ ಹೆಚ್ಚು ಆನೆಗಳ ಕಾಳಜಿಯನ್ನು ಹಗಲಿರುಳು ಮಾಡಲಾಗುತ್ತಿದೆ. ಐನೂರಕ್ಕೂ ಹೆಚ್ಚು ತಜ್ಞರು, ಪರಿಣತರು, ತರಬೇತಿ ಪಡೆದಂಥ ಸಿಬ್ಬಂದಿ ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಪ್ಪತ್ತೈದು ಸಾವಿರ ಚದರಡಿ ವ್ಯಾಪ್ತಿಯಲ್ಲಿ ಆನೆಗಳಿಗಾಗಿಯೇ ಆಸ್ಪತ್ರೆಯಿದೆ. ಜಗತ್ತಿನ ಅತಿ ದೊಡ್ಡ ಪ್ರಾಣಿಗಳ ಆಸ್ಪತ್ರೆಯಲ್ಲಿ ಇದೂ ಒಂದು ಎನಿಸಿಕೊಂಡಿದೆ. ಪೂರ್ಣ ಪ್ರಮಾಣದ ಫಾರ್ಮಸಿ, ಎಕ್ಸ್ ರೇ ಮಶೀನ್ ಗಳು, ಲೇಸರ್ ಮಶೀನ್, ಕಾಯಿಲೆ ಪತ್ತೆ ಹಚ್ಚುವ ಯಂತ್ರಗಳು, ಹೈಡ್ರಾಲಿಕ್ ಯಂತ್ರಗಳು, ಕ್ರೇನ್ ಗಳು, ಹೈಡ್ರಾಲಿಕ್ ಶಸ್ತ್ರಚಿಕಿತ್ಸೆ ಟೇಬಲ್ ಗಳು, ಹೈಪರ್ ಬೇರಿಕ್ ಆಮ್ಲಜನಕ ಚೇಂಬರ್ ಇತ್ಯಾದಿಗಳು ಆನೆಗಳಿಗಾಗಿಯೇ ಇವೆ. ಕಣ್ಣಿನ ಪೊರೆ ಹಾಗೂ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಮಾಡಲಾಗಿದ್ದು, ವಿಶೇಷವಾಗಿ ಎಂಡೋಸ್ಕೋಪಿಕ್ ಸಲಕರಣೆ ಇರುವಂಥ ಮೊದಲ ಆಸ್ಪತ್ರೆ ಇದಾಗಿದೆ. ಅಗತ್ಯ ಇರುವ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲಿ ಮಾಡಬಹುದಾಗಿದೆ.

ಈ ಕೇಂದ್ರದಲ್ಲಿ ಒಟ್ಟಾರೆ ಒಂದು ಲಕ್ಷ ಚದರಡಿಯ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರ ಇದ್ದು, ಎರಡು ಸಾವಿರದ ನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಐಸಿಯು, ಎಂಆರ್ಐ, ಸಿ ಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾ ಸೌಂಡ್, ಎಂಡೋಸ್ಕೋಪಿ ಹೀಗೆ ಅನೇಕ ವ್ಯವಸ್ಥೆ ಇದೆ. ಇಲ್ಲಿನ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಮೂಲಕ ಭಾರತದಾದ್ಯಂತ ಇನ್ನೂರಕ್ಕೂ ಹೆಚ್ಚು ಚಿರತೆಯನ್ನು ರಕ್ಷಿಸಲಾಗಿದೆ. ಬಹಳ ಇಕ್ಕಟ್ಟಾದ ಹಾಗೂ ಭಾರೀ ಸಂಖ್ಯೆಯಲ್ಲಿದ್ದ ತಮಿಳುನಾಡಿನ ಸ್ಥಳವೊಂದರಿಂದ ಸಾವಿರ ಮೊಸಳೆಯನ್ನು ರಕ್ಷಿಸಲಾಗಿದೆ. ಆಫ್ರಿಕಾ, ಸ್ಲೋವಾಕಿಯಾ, ಮೆಕ್ಸಿಕೋ ಮತ್ತಿತರ ಸ್ಥಳಗಳಿಂದ ಅಪಾಯದಲ್ಲಿದ್ದ ಪ್ರಾಣಿಗಳ ಸಂರಕ್ಷಣೆ ಮಾಡಲಾಗಿದೆ.

ನಲವತ್ಮೂರು ಪ್ರಭೇದದ ಎರಡು ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಇಲ್ಲಿನ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರದ ನಿಗಾದಲ್ಲಿ ಇವೆ. ಭಾರತ ಹಾಗೂ ವಿದೇಶದಲ್ಲಿನ ಅಳಿವಿನಂಚಿನ ಏಳು ಜೀವ ಪ್ರಭೇದಗಳ ಸಂರಕ್ಷಣೆ ಜತೆಗೆ ಅವುಗಳ ಸಂತಾನಾಭಿವೃದ್ಧಿಯನ್ನು ಮಾಡಲಾಗುತ್ತಿದೆ. ವಂತಾರದ ಮೂಲಕ ಇನ್ನೂರು ಆನೆಗಳ ಸಂರಕ್ಷಿಸಲಾಗಿದೆ. ಜತೆಗೆ ಚಿರತೆಗಳು, ಹುಲಿಗಳು, ಸಿಂಹಗಳು ಮುಂತಾದವು, ಜಿಂಕೆ ಮೊದಲಾದ ಪ್ರಭೇದವು ಮುನ್ನೂರಕ್ಕೂ ಹೆಚ್ಚು, ಮೊಸಳೆಗಳು, ಹಾವುಗಳು ಥರದ್ದು ಸಾವಿರದ ಇನ್ನೂರಕ್ಕೂ ಹೆಚ್ಚು ಜೀವಿಗಳನ್ನು ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: Anant Ambani wedding: ʻಅನ್ನದಾನʼದೊಂದಿಗೆ ಶುರುವಾಯ್ತು ಅನಂತ್ ಅಂಬಾನಿ ಪ್ರಿ- ವೆಡ್ಡಿಂಗ್‌ ಸಂಭ್ರಮಾಚರಣೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

RBI Guideline: ಬ್ಯಾಂಕುಗಳಿಗೆ ಬಿಸಿ ಮುಟ್ಟಿಸಿದ ಆರ್‌ಬಿಐ; ಸಂಗ್ರಹಿಸಿದ ಹೆಚ್ಚುವರಿ ಶುಲ್ಕ ಮರುಪಾವತಿಗೆ ಸೂಚನೆ

RBI Guideline: ಮಹತ್ವದ ಬೆಳವಣಿಗೆಯೊಂದರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವೈಜ್ಞಾನಿಕವಾಗಿ ಬಡ್ಡಿ ವಿಧಿಸಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಬ್ಯಾಂಕುಗಳು ಮತ್ತು ಇತರ ಸಾಲ ನೀಡುವ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಸಂಗ್ರಹಿಸಿದ ಹೆಚ್ಚುವರಿ ಬಡ್ಡಿ ಮತ್ತು ಇತರ ಶುಲ್ಕಗಳನ್ನು ಗ್ರಾಹಕರಿಗೆ ಮರುಪಾವತಿಸಲು ಸಲಹೆ ನೀಡಿದೆ. ಈ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

RBI Guideline
Koo

ನವದೆಹಲಿ: ಕೆಲವು ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಅವೈಜ್ಞಾನಿಕವಾಗಿ ಬಡ್ಡಿ ವಿಧಿಸಿ ಗ್ರಾಹಕರಿಗೆ ಅನ್ಯಾಯ ಎಸಗುತ್ತಿರುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕೂಡಲೇ ಈ ತಪ್ಪು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಹಕರಿಂದ ಪಡೆದುಕೊಂಡ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಬೇಕು ಎಂದು ನಿರ್ದೇಶನ ನೀಡಿದೆ (RBI Guideline).

2003ರಲ್ಲಿ ವಿವಿಧ ನಿಯಂತ್ರಿತ ಘಟಕಗಳಿಗೆ (REs) ಹೊರಡಿಸಲಾದ ನ್ಯಾಯೋಚಿತ ಆಚರಣೆಗಳ ಸಂಹಿತೆಯ ಮಾರ್ಗಸೂಚಿ ಪ್ರಕಾರ, ಸಾಲ ನೀಡುವವರು ಬಡ್ಡಿ ವಿಧಿಸುವಾಗ ನಿಯಮಗಳನ್ನು ಪಾಲಿಸಬೇಕು ಮತ್ತು ಪಾರದರ್ಶಕತೆಯನ್ನು ಪ್ರದರ್ಶಿಸಬೇಕು. “2023ರ ಮಾರ್ಚ್ 31ಕ್ಕೆ ಕೊನೆಗೊಂಡ ಅವಧಿಯ ಆರ್‌ಇಗಳ ಆನ್‌ಸೈಟ್‌ ಪರಿಶೀಲನೆಯ ಸಮಯದಲ್ಲಿ, ಸಾಲದಾತರು ಬಡ್ಡಿ ವಿಧಿಸುವಾಗ ಕೆಲವೊಂದು ನಿಯಮಗಳನ್ನು ಮುರಿದಿರುವುದು ಕಂಡು ಬಂದಿದೆʼʼ ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

“ನ್ಯಾಯಸಮ್ಮತ ಮತ್ತು ಪಾರದರ್ಶಕತೆಯ ಹಿತದೃಷ್ಟಿಯಿಂದ ಸಾಲಗಳ ವಿತರಣೆಯ ವಿಧಾನ, ಬಡ್ಡಿ ವಿಧಿಸುವುದು ಮತ್ತು ಇತರ ಶುಲ್ಕಗಳಿಗೆ ಸಂಬಂಧಿಸಿದಂತೆ ಈಗಿರುವ ನಿಯಮಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದರೆ ಸಿಸ್ಟಮ್ ಮಟ್ಟದ ಬದಲಾವಣೆಗಳು ಸೇರಿದಂತೆ ಹಲವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ಆರ್‌ಇಗಳಿಗೆ ನಿರ್ದೇಶಿಸಲಾಗಿದೆ” ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಆರ್‌ಬಿಐ ಗಮನಿಸಿದ್ದೇನು?

ಆರ್‌ಇಗಳ ಆನ್‌ಸೈಟ್‌ ಪರಿಶೀಲನೆ ವೇಳೆ ಗ್ರಾಹಕರಿಗೆ ಹಣವನ್ನು ವಿತರಿಸಿದ ದಿನಾಂಕದ ಬದಲಾಗಿ ಸಾಲ ಮಂಜೂರಾದ ದಿನದಿಂದ ಅಥವಾ ಸಾಲ ಒಪ್ಪಂದವನ್ನು ನಡೆಸಿದ ತಾರೀಕಿನಿಂದ ಬಡ್ಡಿ ವಿಧಿಸುವುದನ್ನು ಆರ್‌ಬಿಐ ಗಮನಿಸಿದೆ. ಅಲ್ಲದೆ ಚೆಕ್ ಅನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೊದಲೇ ಬಡ್ಡಿ ವಿಧಿಸಿದ ನಿದರ್ಶನವೂ ಬೆಳಕಿಗೆ ಬಂದಿದೆ ಎಂದು ಆರ್‌ಬಿಐ ಹೇಳಿದೆ.

ಗ್ರಾಹಕರಿಗೆ ಮರುಪಾವತಿಸಲು ಸೂಚನೆ

ಕೆಲವು ಸಂದರ್ಭಗಳಲ್ಲಿ ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಚಿತವಾಗಿ ಸಂಗ್ರಹಿಸುತ್ತಿರುವುದು ಮತ್ತು ಬಡ್ಡಿಯನ್ನು ವಿಧಿಸಲು ಪೂರ್ಣ ಸಾಲದ ಮೊತ್ತವನ್ನು ಲೆಕ್ಕ ಹಾಕುತ್ತಿರುವುದನ್ನೂ ಗಮನಿಸಲಾಗಿದೆ. ಜತೆಗೆ ಗ್ರಾಹಕರೊಂದಿಗೆ ವ್ಯವಹರಿಸುವಾಗ ಬಡ್ಡಿ ವಿಧಿಸುವ ಕೆಲವೊಂದು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕೂಡ ಕಂಡು ಬಂದಿದೆ ಎಂದಿರುವ ಆರ್‌ಬಿಐ, “ಇವು ರಿಸರ್ವ್ ಬ್ಯಾಂಕ್‌ಗೆ ಅತ್ಯಂತ ಗಂಭೀರ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಸಂಗ್ರಹಿಸಿದ ಹೆಚ್ಚುವರಿ ಬಡ್ಡಿ ಮತ್ತು ಇತರ ಶುಲ್ಕಗಳನ್ನು ಗ್ರಾಹಕರಿಗೆ ಮರುಪಾವತಿಸಲು ಸಲಹೆ ನೀಡಲಾಗಿದೆʼʼ ಎಂದು ತಿಳಿಸಿದೆ.

ತಕ್ಷಣದಿಂದ ಜಾರಿ

ಸಾಲ ವಿತರಣೆಯ ಸಂದರ್ಭಗಳಲ್ಲಿ ನೀಡಲಾಗುವ ಚೆಕ್‌ಗಳಿಗೆ ಬದಲಾಗಿ ಆನ್‌ಲೈನ್‌ ಖಾತೆ ವರ್ಗಾವಣೆಗಳನ್ನು ಬಳಸಲು ಆರ್‌ಇಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಈ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಆರ್‌ಬಿಐ ಪ್ರಕಟಿಸಿದೆ. ಸದ್ಯ ಆರ್‌ಬಿಐ ಹೊರಟಿಸಿರುವ ಈ ಪ್ರಕಟಣೆಯಿಂದ ದೇಶದ ಅನೇಕ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Kotak Mahindra Bank: ಹೊಸ ಕ್ರೆಡಿಟ್ ಕಾರ್ಡ್ ನೀಡದಂತೆ ಕೊಟಕ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ; ಕಾರಣ ಇಲ್ಲಿದೆ

Continue Reading

ದೇಶ

Campa cola: ಕ್ಯಾಂಪಾ ಕೋಲಾ ಪ್ರಚಾರದ ಹೊಸ ವಿಡಿಯೊ ಬಿಡುಗಡೆ ಮಾಡಿದ ರಿಲಯನ್ಸ್

Reliance: ರಿಲಯನ್ಸ್ ಇಂಡಸ್ಟ್ರೀಸ್‌ನ ಎಫ್ಎಂಸಿಜಿ ಅಂಗ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನಿಂದ ಖ್ಯಾತ ಭಾರತೀಯ ಪಾನೀಯ ಬ್ರ್ಯಾಂಡ್ ಆದ ಕ್ಯಾಂಪಾ ಕೋಲಾ ಪರವಾಗಿ ಹೊಸದಾಗಿ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಗಿದೆ.

VISTARANEWS.COM


on

Reliance launched a new campaign for Campa-Cola
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ (Reliance industries) ಎಫ್ಎಂಸಿಜಿ ಅಂಗ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನಿಂದ ಖ್ಯಾತ ಭಾರತೀಯ ಪಾನೀಯ ಬ್ರ್ಯಾಂಡ್ ಆದ ಕ್ಯಾಂಪಾ ಕೋಲಾ (Campa cola) ಪರವಾಗಿ ಹೊಸದಾಗಿ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಗಿದೆ.

ಈ ಅಭಿಯಾನವು ವಿಭಿನ್ನ ವಿಧಾನದ ಭರವಸೆಯನ್ನು ನೀಡುತ್ತದೆ. ಇದರ ಜತೆಗೆ ನೈಜ ಭಾರತೀಯರನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪಾರಮ್ಯ ಹಾಗೂ ಸಂಕಲ್ಪ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ನಿರಂತರವಾಗಿ ಹೊಸ ದಿಗಂತವನ್ನು ಬೆನ್ನಟ್ಟುವ ಯುವ ಭಾರತದ ಧೈರ್ಯಶಾಲಿ ಮನೋಭಾವಕ್ಕೆ ಗೌರವ ಸಮರ್ಪಣೆ ಮಾಡುತ್ತದೆ.

ಇದನ್ನೂ ಓದಿ: Leg Swelling: ಪ್ರಯಾಣಿಸುವಾಗ ನಮ್ಮ ಕಾಲುಗಳು ಊದಿಕೊಳ್ಳುವುದೇಕೆ?

ಈ ಕುರಿತು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಿಒಒ ಕೇತನ್ ಮೋದಿ ಮಾತನಾಡಿ, ಕಠಿಣ ಕೆಲಸಗಳನ್ನು ಮಾಡುವಂತಹ ಭಾರತೀಯರಿಗೆ, ತಮ್ಮ ಉನ್ನತ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೆ ನಮ್ಮ ಸಂವಹನವಾಗಿದ್ದು, ಕೈಗೆಟುಕುವ ಬೆಲೆಗೆ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದಕ್ಕೆ ಇದು ನಮ್ಮ ಪಾಲಿಗೆ ಪಯಣದ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಆರ್‌ಸಿಪಿಎಲ್ ಪೂರೈಕೆ ಸರಪಳಿಯನ್ನು ಬಲಪಡಿಸುತ್ತಿದ್ದು, ವಿತರಣೆಯನ್ನು ವಿಸ್ತರಣೆ ಮಾಡುವ ಮೂಲಕ ಕಾರ್ಯಾಚರಣೆಯನ್ನು ದೇಶದ ವಿವಿಧ ಭಾಗಗಳಲ್ಲಿ ವ್ಯಾಪಿಸುತ್ತಿದೆ. ಈ ಬ್ರ್ಯಾಂಡ್ ಫಿಲ್ಮ್ ಅನ್ನು ಪರಿಕಲ್ಪನೆ ಮಾಡಿಕೊಂಡಿರುವುದು ಆಡ್ ಗುರು ಪ್ರಸೂನ್ ಜೋಶಿ. ಇದನ್ನು ಟಿವಿ, ಡಿಜಿಟಲ್, ಹೊರಾಂಗಣ ಮತ್ತು ಮುದ್ರಣ ಮಾಧ್ಯಮ ಹೀಗೆ ಎಲ್ಲೆಡೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.

ಇದು ಸ್ಥಳೀಯದರ ಬಗ್ಗೆ ಹೆಮ್ಮೆ ಮತ್ತು ಪ್ರತಿಭೆ ಹಾಗೂ ಸಂಕಲ್ಪವನ್ನು ಎತ್ತರಕ್ಕೆ ಒಯ್ಯುತ್ತದೆ ಎಂದು ಮೆಕ್‌ಕನ್ ವರ್ಲ್ಡ್‌ಗ್ರೂಪ್‌ನ ಬರಹಗಾರ ಮತ್ತು ಮುಖ್ಯ ಕ್ರಿಯೇಟಿವ್‌ ಆಫೀಸರ್‌ ಪ್ರಸೂನ್ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War: ಯುದ್ಧ ಭೂಮಿಯಿಂದ ಪಾರಾಗಲು 10 ಕಿ.ಮೀ ನಡೆದ 98 ವರ್ಷದ ವೃದ್ಧೆ!

ಈ ಅಭಿಯಾನದ ಫಿಲ್ಮ್ ಚಿತ್ರ ನಿರ್ಮಾಪಕ ಅರುಣ್ ಗೋಪಾಲನ್ ಮತ್ತು ಗಾಯಕ-ಸಂಯೋಜಕ ಶಂಕರ್ ಮಹಾದೇವನ್ ಅವರ ಸಹಯೋಗದಲ್ಲಿ ಮೂಡಿಬಂದಿದ್ದು, ಇದಕ್ಕೆ ಪ್ರಸೂನ್ ಜೋಶಿ ಬರವಣಿಗೆ (ಸಾಹಿತ್ಯ) ಒದಗಿಸಿದ್ದಾರೆ.

Continue Reading

ದೇಶ

Toyota Kirloskar Motor: ಟೊಯೊಟಾ ರುಮಿಯಾನ್‌ G-AT ಬುಕ್ಕಿಂಗ್‌ ಶುರು! ಏನಿದರ ವಿಶೇಷ?

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಟೊಯೊಟಾ ರುಮಿಯಾನ್ G-AT ನೂತನ ಗ್ರೇಡ್ ಅನ್ನು ಪರಿಚಯಿಸಿದ್ದು, 1.5-ಲೀಟರ್ ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಯೋ ಡ್ರೈವ್ (ಐಎಸ್‌ಜಿ) ತಂತ್ರಜ್ಞಾನವನ್ನು ಒಳಗೊಂಡಿದೆ.

VISTARANEWS.COM


on

Toyota Kirloskar Motor Introduces New G-AT Grade of Toyota Rumion
Koo

ಬೆಂಗಳೂರು: ಟೊಯೊಟಾ ರುಮಿಯಾನ್‌ನ G-AT ಹೊಸ ಸರಣಿಯ ಅಧಿಕೃತ ಬುಕ್ಕಿಂಗ್ ಆರಂಭಿಸಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಬೆಲೆಯನ್ನು ಇಂದು ಘೋಷಿಸಿದ್ದು, ಹೊಸದಾಗಿ ಬಿಡುಗಡೆಯಾದ G-AT ವೇರಿಯಂಟ್‌ ಸರಿಸಾಟಿಯಿಲ್ಲದ ಸ್ಪೇಸ್ ಮತ್ತು ಕಂಫರ್ಟ್‌, ಅತ್ಯುತ್ತಮ ಇಂಧನ ದಕ್ಷತೆ, ಸ್ಟೈಲಿಶ್ ಮತ್ತು ಪ್ರೀಮಿಯಂ ಎಕ್ಸ್‌ಟೀರಿಯರ್ ಡಿಸೈನ್‌ ಒಳಗೊಂಡಿದೆ.

ಟಿಕೆಎಂನ ಇತ್ತೀಚಿನ ಆಫರ್ ಬೆಲೆಯು 13 ಲಕ್ಷ ರೂ. ಗಳ ಆಕರ್ಷಕ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಡೆಲಿವರಿ ಮೇ 5 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಗ್ರಾಹಕರು ಯಾವುದೇ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ 11 ಸಾವಿರ ರೂ. ಬುಕಿಂಗ್ ಶುಲ್ಕದೊಂದಿಗೆ ವಾಹನವನ್ನು ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ: Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್‌ ಇಲ್ಲಿದೆ

ಟೊಯೊಟಾ ರುಮಿಯಾನ್ G-AT ವೇರಿಯಂಟ್ 1.5-ಲೀಟರ್ ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಯೋ ಡ್ರೈವ್ (ಐಎಸ್‌ಜಿ) ತಂತ್ರಜ್ಞಾನವನ್ನು ಒಳಗೊಂಡಿದೆ. ಪೆಟ್ರೋಲ್ ಗ್ರೇಡ್ 75.8 ಕಿಲೋವ್ಯಾಟ್ @ 6000 rpm ಪವರ್ ಮತ್ತು 136.8 Nm @ 4400 ಆರ್‌ಪಿಎಂ ಟಾರ್ಕ್ ಅನ್ನು ಹೊಂದಿದೆ. ಸಿಎನ್‌ಜಿ ಗ್ರೇಡ್ 64.6 ಕಿಲೋವ್ಯಾಟ್ ಔಟ್‌ಪುಟ್ @ 5500 rpm ಮತ್ತು 121.5 Nm@4200 rpm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟೊಯೊಟಾ ರುಮಿಯಾನ್ ಈಗ ನಿಯೋ ಡ್ರೈವ್ MT ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಎಸ್, ಜಿ ಮತ್ತು ವಿ ಗ್ರೇಡ್ ಮತ್ತು ನಿಯೋ ಡ್ರೈವ್ AT: ಎಸ್, ಜಿ ಮತ್ತು ವಿ ಗ್ರೇಡ್. ಇ-ಸಿಎನ್ ಜಿ: ಎಸ್ ಗ್ರೇಡ್ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ.

G-AT ವೇರಿಯಂಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 17.78 ಸೆಂ.ಮೀ ಸ್ಮಾರ್ಟ್ ಪ್ಲೇ ಕ್ಯಾಸ್ಟ್ ಟಚ್ ಸ್ಕ್ರೀನ್ ಆಡಿಯೊ ಸಿಸ್ಟಮ್ ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಟೊಯೊಟಾ i-Connect ಹೊಂದಿರುವ ಇದು ಹವಾಮಾನ, ಲಾಕ್ / ಅನ್ಲಾಕ್, ಹಜಾರ್ಡ್ ಲೈಟ್ಸ್ ಸೇರಿದಂತೆ ಅನೇಕ ಸಂಪರ್ಕಿತ ವೈಶಿಷ್ಟ್ಯಗಳಿಗಾಗಿ ರಿಮೋಟ್ ಕಂಟ್ರೋಲ್ ಅನ್ನು ನೀಡುತ್ತದೆ. ಟೊಯೊಟಾ ರುಮಿಯಾನ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಹೋಲ್ಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಸೇರಿದಂತೆ ಹಲವು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತನ್ನ ಮಾಲೀಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

ಈ ಕುರಿತು ಟಿಕೆಎಂನ ಸೇಲ್ಸ್ ಅಂಡ್ ಸ್ಟ್ರಾಟಜಿಕ್ ಮಾರ್ಕೆಟಿಂಗ್ ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ಟೊಯೊಟಾ ರುಮಿಯಾನ್ ಸೀರಿಸ್‌ಗೆ ಹೊಸ ಗ್ರೆಡ್ ಸೇರ್ಪಡೆಯನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ, ಇದರಿಂದಾಗಿ ಗ್ರಾಹಕರಿಗೆ ಅವರ ಚಲನಶೀಲತೆ ಅಗತ್ಯತೆಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ವ್ಯಾಪಕ ಆಯ್ಕೆಗಳನ್ನು ನೀಡುತ್ತದೆ. G-AT ವೇರಿಯಂಟ್‌ನ ಬುಕಿಂಗ್ ಈಗ ತೆರೆದಿದೆ. ಆಗಸ್ಟ್ 23ರಲ್ಲಿ ಬಿಡುಗಡೆಯಾದಾಗಿನಿಂದ ಟೊಯೊಟಾ ರುಮಿಯಾನ್ ಗ್ರಾಹಕರಲ್ಲಿ ಹೆಚ್ಚಿನ ಉತ್ಸಾಹವನ್ನು ಸೃಷ್ಟಿಸಿದೆ. ಇದು ಹೆಚ್ಚಿನ ಎನ್‌ಕ್ವೈರಿ ಮತ್ತು ಆರೋಗ್ಯಕರ ಬುಕಿಂಗ್‌ಗೆ ಕಾರಣವಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರು ತೋರಿಸಿದ ಪ್ರೀತಿ ಮತ್ತು ನಂಬಿಕೆಯನ್ನು ನಾವು ತುಂಬು ಹೃದಯದಿಂದ ಪ್ರಶಂಸಿಸುತ್ತೇವೆ ಎಂದು ತಿಳಿಸಿದ್ದಾರೆ.

ಟೊಯೊಟಾ MPV ಸಿಗ್ನೇಚರ್ ಫ್ರಂಟ್ ಗ್ರಿಲ್, ಕ್ರೋಮ್ ಫಿನಿಶ್‌ನೊಂದಿಗೆ ಫ್ರಂಟ್ ಬಂಪರ್, ಬ್ಯಾಕ್ ಡೋರ್ ಕ್ರೋಮ್ ಡಿಸೈನ್ ನೊಂದಿಗೆ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಅತ್ಯಾಧುನಿಕ ಡ್ಯುಯಲ್ ಟೋನ್ ಅಲಾಯ್ ವೀಲ್ಸ್, ದೃಢವಾದ ಗುಣಲಕ್ಷಣಗಳೊಂದಿಗೆ ರಫ್ ಲುಕ್‌ಗಾಗಿ ರುಮಿಯನ್ ಸ್ಟೈಲಿಶ್ ಮತ್ತು ಪ್ರೀಮಿಯಂ ಎಕ್ಸ್‌ಟೀರಿಯರ್ ಡಿಸೈನ್ ಅನ್ನು ಹೊಂದಿದೆ. ಐಷಾರಾಮಿ ಒಳಾಂಗಣವು ಮರದ ಫಿನಿಶ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳೊಂದಿಗೆ ಪ್ರೀಮಿಯಂ ಡ್ಯುಯಲ್-ಟೋನ್, ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣ ಮತ್ತು ಅನುಕೂಲಕರ ಸೌಲಭ್ಯಗಳನ್ನು ನೀಡುತ್ತದೆ.

ಇದನ್ನೂ ಓದಿ: Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

ಟೊಯೊಟಾ ರುಮಿಯಾನ್ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಸಹ ನೋಡುತ್ತದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಮತ್ತು ಬ್ರೇಕ್ ಅಸಿಸ್ಟ್, ಎಂಜಿನ್ ಇಮೊಬೈಲೈಜರ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಐಎಸ್ ಒ ಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಪ್ರಿಟೆನ್ಷನರ್‌ಗಳು ಮತ್ತು ಫೋರ್ಸ್ ಲಿಮಿಟರ್‌ಗಳೊಂದಿಗೆ ಫ್ರಂಟ್ ಸೀಟ್ ಬೆಲ್ಟ್‌ಗಳು, ಎಲ್ಲಾ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈಸ್ಪೀಡ್ ಅಲರ್ಟ್ ಸಿಸ್ಟಮ್ ಹೊಂದಿದೆ.

Continue Reading

ಮನಿ ಗೈಡ್

Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್‌ ಇಲ್ಲಿದೆ

Labour Day 2024: ಹೊಸ ಉದ್ಯೋಗ ಪ್ರಾರಂಭಿಸುವಾಗಲೇ ಉಳಿತಾಯದತ್ತ ಗಮನವಿರಬೇಕು. ಇದರಿಂದ ಆರ್ಥಿಕ ಭವಿಷ್ಯ ಸುಂದರವಾಗಿರುವುದು. ಜೀವನ ಹೆಚ್ಚು ಸುಲಭವಾಗುವುದು. ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಹಣಕಾಸು ಮತ್ತು ಉಳಿತಾಯದ ಮಾಹಿತಿ ಇಲ್ಲಿ ಕೊಡಲಾಗಿದೆ.

VISTARANEWS.COM


on

By

Labour Day 2024
Koo

ಹುಟ್ಟಿದ ಮಗುವಿನಿಂದ ಹಿಡಿದು ಬದುಕಿನ ಕೊನೆಯವರೆಗೂ (Labour Day 2024) ಸಿಗುವ ಮೊದಲ ಅನುಭವಗಳು (First experience) ಸಾಕಷ್ಟಿರುತ್ತದೆ. ಮೊದಲ ಬಾರಿಯ ಅನುಭವಗಳು ಪ್ರತಿಯೊಬ್ಬರ ಜೀವನದಲ್ಲೂ ಬರುವ ಅಮೂಲ್ಯ ಕ್ಷಣವಾಗಿರುತ್ತದೆ. ಅದನ್ನೂ ನಾವು ಸ್ಮರಣೀಯವಾಗಿಸಬೇಕು ಎಂದು ಬಯಸುತ್ತೇವೆ. ಅದೇ ರೀತಿ ಮೊದಲು ಪಡೆಯುವ ಸಂಬಳಕ್ಕೂ ಸರಿಯಾದ ಯೋಜನೆ (Money Guide) ಹಾಕಿಕೊಳ್ಳುವುದು ಬಹುಮುಖ್ಯ.

ಹೊಸದಾಗಿ ಉದ್ಯೋಗ (new job) ಆರಂಭಿಸುವುದು ಕೂಡ ಪ್ರತಿಯೊಬ್ಬರ ಜೀವನದ ಒಂದು ಸುಂದರ ಅನುಭವ. ಮೊದಲ ವೇತನದ ಚೆಕ್ (first salary) ಪಡೆದುದನ್ನು ಯಾರೂ ಮರೆಯಲಾರರು. ಆದರೆ ಆ ಕ್ಷಣದಲ್ಲಿ ನೂರಾರು ಯೋಚನೆಗಳು ಹುಟ್ಟಿಕೊಂಡಿರುತ್ತವೆ, ಆಸೆಗಳು ಚಿಗುರೊಡೆಯುತ್ತದೆ. ಆದರೆ ಅವಕ್ಕೆಲ್ಲ ನಿಯಂತ್ರಣ ಹಾಕಿ ಭವಿಷ್ಯವನ್ನು ಸುಂದರವಾಗಿಸುವ ಪಣ ತೊಡಬೇಕು.

ಹೊಸದಾಗಿ ಗಳಿಸುವ ಉದ್ಯೋಗ ಆರ್ಥಿಕ ಸ್ವಾತಂತ್ರ್ಯದ ರುಚಿಯನ್ನು ಒದಗಿಸಬಹುದು. ಆದರೂ ಯುವ ವೃತ್ತಿಪರರು ಆಟವಾಡುವ ಬದಲು ತಮ್ಮ ಮೊದಲ ಸಂಬಳವನ್ನು ಆರ್ಥಿಕ ಯೋಗಕ್ಷೇಮದ ಮೆಟ್ಟಿಲು ಎಂದು ಪರಿಗಣಿಸಬೇಕು. ಆರೋಗ್ಯಕರ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಆರ್ಥಿಕ ಯೋಜನೆಗೆ ಇದು ಸರಿಯಾದ ಸಮಯವಾಗಿರುತ್ತದೆ.

ಹೊಸ ಉದ್ಯೋಗಿಗಳಿಗೆ ಹಣಕಾಸು ಯೋಜನೆಯನ್ನು ರೂಪಿಸಲು ಸಹಾಯಕವಾಗುವ ಎಂಟು ಸಲಹೆಗಳು ಇಲ್ಲಿವೆ. ಇದನ್ನು ಪಾಲಿಸಿದರೆ ನಿಮ್ಮ ಜೇಬು ಎಂದಿಗೂ ಖಾಲಿಯಾಗಲಾರದು.

ಇದನ್ನೂ ಓದಿ: Money Guide: ಫೊರೆಕ್ಸ್‌ ಕಾರ್ಡ್‌ V/S ಕ್ರೆಡಿಟ್‌ ಕಾರ್ಡ್‌: ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ?


ಮಾಸಿಕ ಬಜೆಟ್ ರೂಪಿಸಿ

ಉತ್ತಮ ಆರ್ಥಿಕ ಆರೋಗ್ಯದ ಮೊದಲ ಹೆಜ್ಜೆ ಗಳಿಕೆ ಮತ್ತು ವೆಚ್ಚಗಳನ್ನು ಟ್ರ್ಯಾಕ್ ಮಾಡುವುದು. ಹೊಸ ಉದ್ಯೋಗಿಯಾಗಿ ನೀವು ‘ಬಯಸುವ’ ಮತ್ತು ‘ಅಗತ್ಯಗಳ’ ನಡುವೆ ವ್ಯತ್ಯಾಸವನ್ನು ಹೊಂದಿರಬೇಕು. ಮಾಸಿಕ ವೆಚ್ಚಗಳನ್ನು ಪಟ್ಟಿ ಮಾಡುವುದು, ಅವುಗಳನ್ನು ವರ್ಗೀಕರಿಸುವುದು ಮತ್ತು ಪ್ರತಿಯೊಂದಕ್ಕೂ ಹಣವನ್ನು ಮೀಸಲಿಡುವುದು ಅಧಿಕ ಖರ್ಚು ಮಾಡುವುದನ್ನು ತಡೆಯಬಹುದು. ಹೆಚ್ಚುವರಿಯಾಗಿ ನಿಮ್ಮ ಬಜೆಟ್‌ನಲ್ಲಿ ಉಳಿತಾಯಕ್ಕಾಗಿ ಮೀಸಲಾದ ಭಾಗವನ್ನು ಹೊಂದಿರುವುದು ನೀವು ಗಳಿಸಿದ ಎಲ್ಲವನ್ನೂ ನೀವು ಖರ್ಚು ಮಾಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ತುರ್ತು ನಿಧಿಯನ್ನು ನಿರ್ಮಿಸಿ

ಅನಿರೀಕ್ಷಿತ ವೈದ್ಯಕೀಯ ಸಮಸ್ಯೆಯಾಗಿರಲಿ, ಹಠಾತ್ ಉದ್ಯೋಗ ನಷ್ಟವಾಗಲಿ ಅಥವಾ ತುರ್ತು ಮನೆ ದುರಸ್ತಿಯಾಗಿರಲಿ.. ಹೀಗೆ ಅನಿರೀಕ್ಷಿತ ಘಟನೆಗಳು ಆರ್ಥಿಕ ಸ್ಥಿರತೆಯನ್ನು ಕುಗ್ಗಿಸಬಹುದು. ಅಂತಹ ಸಮಯದಲ್ಲಿ ತುರ್ತು ನಿಧಿಯು ಸಹಾಯ ಮಾಡುತ್ತದೆ. ಆದ್ದರಿಂದ, ಹೊಸ ಉದ್ಯೋಗಿಗಳು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಕನಿಷ್ಠ ಮೂರರಿಂದ ಆರು ತಿಂಗಳ ಮೌಲ್ಯದ ವೆಚ್ಚವನ್ನು ಉಳಿತಾಯ ಖಾತೆಯಲ್ಲಿ ಉಳಿಸುವ ಗುರಿಯನ್ನು ಹೊಂದಿರಬೇಕು.

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹಣವು ನಿಮಗಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಒಂದು ಮ್ಯೂಚುಯಲ್ ಫಂಡ್ ಹಲವಾರು ಹೂಡಿಕೆದಾರರಿಂದ ಹಣವನ್ನು ಪೂಲ್ ಮಾಡಿ ಸೆಕ್ಯೂರಿಟಿಗಳ ವೈವಿಧ್ಯಮಯ ಪೋರ್ಟ್ ಫೋಲಿಯೋವನ್ನು ಖರೀದಿಸುತ್ತದೆ. ಈ ವೈವಿಧ್ಯೀಕರಣವು ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಕೆಲಸದಲ್ಲಿ ಪರಿಣಿತ ನಿಧಿ ವ್ಯವಸ್ಥಾಪಕರೊಂದಿಗೆ ನಿಮ್ಮ ಹಣವು ಸಮರ್ಥ ಕೈಯಲ್ಲಿದೆ. ಮ್ಯೂಚವಲ್ ಫಂಡ್ ಖರೀದಿಗೆ ಯಾವುದೇ ನಿಯಮವಿಲ್ಲ. ಸಣ್ಣ ಮೊತ್ತದೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು. ಕಾಲಾನಂತರದಲ್ಲಿ ಈ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಗಮನಾರ್ಹ ಮೊತ್ತವಾಗಿ ಪರಿವರ್ತನೆಯಾಗುತ್ತದೆ.

ನಿವೃತ್ತಿ ಯೋಜನೆ

ಉದ್ಯೋಗ ಪ್ರಾರಂಭಿಸುವಾಗ ನಿವೃತ್ತಿಯು ದೂರದಲ್ಲಿ ಇರುವಂತೆ ಕಾಣಿಸಬಹುದು. ಆದರೆ ಎಷ್ಟು ಬೇಗ ನಿವೃತ್ತಿಗಾಗಿ ಹಣ ಉಳಿಸಲು ಪ್ರಾರಂಭಿಸುತ್ತೀರೋ ಅಷ್ಟು ಉತ್ತಮ. ಹೆಚ್ಚುತ್ತಿರುವ ಜೀವಿತಾವಧಿ ಮತ್ತು ಹಣದುಬ್ಬರ ದರಗಳನ್ನು ಗಮನಿಸಿದರೆ ಗಣನೀಯ ನಿವೃತ್ತಿ ನಿಧಿಯನ್ನು ಹೊಂದಿದ್ದರೆ ಗಳಿಸುವುದನ್ನು ನಿಲ್ಲಿಸಿದ ಅನಂತರವೂ ಆರಾಮದಾಯಕ ಜೀವನ ನಡೆಸಲು ಸಹಾಯ ಮಾಡುತ್ತದೆ.

ಸಾಲದ ಬಲೆ ತಪ್ಪಿಸಿ

ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ಹೊಂದಿದ್ದರೆ, ಮರುಪಾವತಿ ಯೋಜನೆಯನ್ನು ರಚಿಸಿ. ಸಾಲಗಳು, ವಿಶೇಷವಾಗಿ ಹೆಚ್ಚಿನ ಬಡ್ಡಿಯೊಂದಿಗೆ, ತ್ವರಿತವಾಗಿ ಹೊರೆಯಾಗಬಹುದು. ಸತತವಾಗಿ ಸಾಲಗಳನ್ನು ಪಾವತಿಸುವುದು ನಿಮ್ಮ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದ. ಆದರೆ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸುತ್ತದೆ. ಇದು ಭವಿಷ್ಯದ ಹಣಕಾಸು ಯೋಜನೆಗಳಿಗೆ ಪ್ರಯೋಜನಕಾರಿಯಾಗಿದೆ.


ಉತ್ತಮ ಸಂಬಳದ ಮಾತುಕತೆ

ಆರಂಭಿಕ ವೇತನವು ಭವಿಷ್ಯದ ಏರಿಕೆಗಳಿಗೆ ಪೂರ್ವನಿದರ್ಶನವನ್ನು ಹೊಂದಿಸುತ್ತದೆ. ನಿಮ್ಮ ಪಾತ್ರಕ್ಕಾಗಿ ಉದ್ಯಮದ ಮಾನದಂಡಗಳನ್ನು ಸಂಶೋಧಿಸಿ ಮತ್ತು ಸಂದರ್ಶನಗಳು ಅಥವಾ ಮೌಲ್ಯಮಾಪನ ಚರ್ಚೆಗಳ ಸಮಯದಲ್ಲಿ ನಿಮ್ಮ ಮೌಲ್ಯವನ್ನು ಮಾತುಕತೆ ಮಾಡಲು ಸಿದ್ಧರಾಗಿರಿ. ಹೆಚ್ಚಿನ ಸಂಬಳವು ಹೆಚ್ಚಿನ ಉಳಿತಾಯ ಮತ್ತು ಹೂಡಿಕೆಗಳಿಗೆ ನೇರವಾಗಿ ಅನುವಾದಿಸುತ್ತದೆ.

ಗರಿಷ್ಠ ತೆರಿಗೆ ಉಳಿತಾಯ

ಆದಾಯದ ಗಮನಾರ್ಹ ಭಾಗವು ತೆರಿಗೆಗಳ ಕಡೆಗೆ ಹೋಗಬಹುದು. ಆದಾಗ್ಯೂ, ಇಎಲ್ ಎಸ್ ಎಸ್ ನಂತಹ ತೆರಿಗೆ-ಉಳಿತಾಯ ಸಾಧನಗಳಲ್ಲಿ ಸರಿಯಾದ ಯೋಜನೆ ಮತ್ತು ಹೂಡಿಕೆಯೊಂದಿಗೆ ಅಥವಾ ಕಡಿತಗಳಿಗೆ 80C ನಂತಹ ವಿಭಾಗಗಳನ್ನು ಬಳಸಿಕೊಂಡು, ನಿಮ್ಮ ತೆರಿಗೆ ಹೊರಹರಿವನ್ನು ಕಾನೂನುಬದ್ಧವಾಗಿ ಕಡಿಮೆ ಮಾಡಬಹುದು. ಇದು ಕೇವಲ ಗಳಿಸುವುದಷ್ಟೇ ಅಲ್ಲ ಆ ಗಳಿಕೆಯನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳುವುದು.

ಕಲಿಯಿರಿ ಮತ್ತು ಹೊಂದಿಕೊಳ್ಳಿ

ಹಣಕಾಸು ಪ್ರಪಂಚವು ಯಾವಾಗಲೂ ವಿಕಸನಗೊಳ್ಳುತ್ತಿರುತ್ತದೆ. ಮಾರುಕಟ್ಟೆಯಲ್ಲಿನ ಬದಲಾವಣೆಗಳು ಹೊಸ ಹೂಡಿಕೆ ಆಯ್ಕೆಗಳು ಮತ್ತು ವಿಕಸನಗೊಳ್ಳುತ್ತಿರುವ ತೆರಿಗೆ ನಿಯಮಗಳ ಬಗ್ಗೆ ನಿಯಮಿತವಾಗಿ ನವೀಕರಿಸಿಕೊಳ್ಳುವುದು ನೀವು ಯಾವಾಗಲೂ ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸುತ್ತದೆ. ಪೂರ್ವಭಾವಿಯಾಗಿರುವುದು ಮತ್ತು ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಸಂಪತ್ತಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Continue Reading
Advertisement
Summer Health Tips
ಆರೋಗ್ಯ39 seconds ago

Summer Health Tips: ಬೇಸಿಗೆಯಲ್ಲಿ ತಂಪಾಗಿರಲು ಬೇಕು ಈ ಆಹಾರ!

dina bhavishya read your daily horoscope predictions for May 01 2024
ಭವಿಷ್ಯ1 hour ago

Dina Bhavishya: ಎಚ್ಚರ.. ಎಚ್ಚರ.. ಈ ರಾಶಿಯವರು ಇತರರನ್ನು ನಂಬಿ ಹೂಡಿಕೆ ಮಾಡಿದರೆ ಭಾರಿ ನಷ್ಟ!

Kaladarpana-Art Reflects
ಬೆಂಗಳೂರು5 hours ago

Kaladarpana-Art Reflects: ಬೆಂಗಳೂರಿನಲ್ಲಿ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್‌-4 ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

Covishield Vaccine
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮ ಆತಂಕಕಾರಿ

Narendra modi
ಪ್ರಮುಖ ಸುದ್ದಿ6 hours ago

Narendra Modi : ನಾನು ಬದುಕಿರುವವರೆಗೂ ಮುಸ್ಲಿಮರಿಗೆ ಧರ್ಮದ ಆಧಾರದ ಮೀಸಲಾತಿ ಇಲ್ಲ ಎಂದ ಮೋದಿ

DK Shivakumar
ಪ್ರಮುಖ ಸುದ್ದಿ6 hours ago

DK Shivakumar: ಅಶ್ಲೀಲ ಚಿತ್ರಕ್ಕೆ ಡಿಕೆಶಿ ಫೋಟೊ ಮಾರ್ಫಿಂಗ್ ಆರೋಪ; ಮೂವರ ವಿರುದ್ಧ ಎಫ್‌ಐಆರ್‌

IPL 2024
Latest6 hours ago

IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

Union Minister Pralhad Joshi election campaign in Shiggavi
ಧಾರವಾಡ6 hours ago

Lok Sabha Election 2024: ಈ ಲೋಕಸಭಾ ಚುನಾವಣೆ ಭಾರತದ ಸುವರ್ಣ ಯುಗಕ್ಕೆ ನಾಂದಿ: ಪ್ರಲ್ಹಾದ್‌ ಜೋಶಿ

Lok Sabha Election 2024 Bike rally for voting awareness in Hosapete
ವಿಜಯನಗರ6 hours ago

Lok Sabha Election 2024: ಹೊಸಪೇಟೆಯಲ್ಲಿ ಮತದಾನ ಜಾಗೃತಿಗಾಗಿ ಬೈಕ್ ರ‍್ಯಾಲಿ

BJP National President JP Nadda Election Campaign for Haveri Gadag Lok Sabha Constituency BJP Candidate Basavaraj Bommai
ಕರ್ನಾಟಕ6 hours ago

Lok Sabha Election 2024: ಮೋದಿಯವರ ವಿಕಸಿತ ಭಾರತ ಸಾಕಾರಗೊಳಿಸಲು ಬೊಮ್ಮಾಯಿಯವರನ್ನು ಗೆಲ್ಲಿಸಿ: ಜೆಪಿ ನಡ್ಡಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ1 day ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20242 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20242 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20243 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20243 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20243 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20243 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌