Food Habits: ಈ ಖ್ಯಾತ ಬಿಲಿಯನೇರ್‌ಗಳು ಹೊಟ್ಟೆಗೇನು ತಿನ್ನುತ್ತಾರೆ ಗೊತ್ತೇ? - Vistara News

ಆಹಾರ/ಅಡುಗೆ

Food Habits: ಈ ಖ್ಯಾತ ಬಿಲಿಯನೇರ್‌ಗಳು ಹೊಟ್ಟೆಗೇನು ತಿನ್ನುತ್ತಾರೆ ಗೊತ್ತೇ?

ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!

VISTARANEWS.COM


on

warren buffet bill gates
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಿಲಿಯನೇರ್‌ (billionaire) ವಾರನ್‌ ಬಫೆಟ್‌ (warren buffet) ಅವರ ಜೀವನ ಸಾಧನೆ ಅನೇಕರಿಗೆ ಸ್ಪೂರ್ತಿದಾಯಕ ಕಥೆಯಾಗಿರಬಹುದು. ಇಲಾನ್‌ ಮಸ್ಕ್‌ (Elon Musk) ಅವರ ಐಷಾರಾಮಿ ಜೀವನಶೈಲಿ ನೋಡಿ ನೀವು ಹುಬ್ಬೇರಿಸಬಹುದು. ಬಿಲ್‌ ಗೇಟ್ಸ್‌ (Bill gates) ಎಂಬ ಹೆಸರು ಕೇಳಿದೊಡನೆ ರೋಮಾಂಚನವಾಗಬಹುದು. ಆದರೆ ಈ ಖ್ಯಾತನಾಮ ಶ್ರೀಮಂತರೆಲ್ಲ ಹೊಟ್ಟೆಗೇನು ತಿನ್ನುತ್ತಾರೆ (Food Habits) ಎಂಬ ಕುತೂಹಲ ನಿಮಗಿದ್ದರೆ, ಅವರ ಈ ಆಹಾರ ಕ್ರಮದಿಂದ ಮಾತ್ರ ಸ್ಪೂರ್ತಿ ಪಡೆಯಬೇಡಿ!

ಹೌದು. 93ರ ಹರೆಯದ ವಾರೆನ್‌ ಬಫೆಟ್‌ ಏನೆಲ್ಲ ತಿನ್ನುತ್ತಾರೆ ಎಂದು ನೀವು ತಿಳಿದರೆ ಹೌಹಾರುತ್ತೀರಿ. ಅದೂ ಈ ಇಳಿ ವಯಸ್ಸಿನಲ್ಲಿ! 2015ರಲ್ಲಿ ಫಾರ್ಚೂನ್‌ ಪ್ರಕಟಿಸಿದ ವಿಶೇಷ ವರದಿ, ವಾರನ್‌ ಬಫೆಟ್‌ ಅವರ ಆಹಾರ ಶೈಲಿಯ ಬಗೆಗೂ ಬೆಳಕು ಚೆಲ್ಲಿತ್ತು. ಅದರ ಪ್ರಕಾರ, ಬಫೆಟ್‌ ಅವರು ಪ್ರತಿ ನಿತ್ಯ ಐದು ಕ್ಯಾನ್ ಕೋಕ್‌ ಕುಡಿಯುತ್ತಾರಂತೆ! ಬಫೆಟ್‌ ಅವರು ಅತ್ಯಂತ ಖುಷಿಯ, ತನ್ನಿಚ್ಛೆಯ ಆಹಾರವನ್ನು ತಿನ್ನಲು ಇಷ್ಟಪಡುವವರಾಗಿದ್ದು, ಬದುಕಿದರೆ, ಬೇಕಾದಂತೆ ತಿಂದುಂಡು ಸಂತೋಷವಾಗಿ ಜೀವಿಸಬೇಕು ಎಂದವರು ಅಭಿಪ್ರಾಯಿಸಿದ್ದರು.

ಅದರ ಪ್ರಕಾರ, ಅವರು ದಿನಕ್ಕೆ ಐದು ಕ್ಯಾನ್‌ ಕೋಕ್‌ ಕುಡಿದರೆ, ವಾರದಲ್ಲಿ ಎರಡು ಬಾರಿ ಚಿಕನ್‌ ನಗ್ಗೆಟ್ಸ್‌ ತಿನ್ನುತ್ತಿದ್ದರಂತೆ. ಅಷ್ಟೇ ಅಲ್ಲ. ನಿತ್ಯವೂ ಊಟದ ನಂತರ ಐಸ್‌ ಕ್ರೀಂ ತಿನ್ನುವುದೂ ಕೂಡಾ ಅವರಿಗೆ ಬಲು ಪ್ರಿಯವಾದ ಅಭ್ಯಾಸವಂತೆ. ಹಗಲು ಹೊತ್ತಿನಲ್ಲಿ ಮೂರು ಕ್ಯಾನ್‌ ಕೋಕ್‌ ಕುಡಿದು ಮುಗಿಸಿದರೆ, ರಾತ್ರಿ ಎರಡು ಕ್ಯಾನ್‌ ಕೋಕ್‌ ಖಾಲಿ ಮಾಡುತ್ತಾರಂತೆ.

ನನ್ನ ದೇಹದ ಕಾಲು ಭಾಗ ಕೋಕಾಕೋಲಾದಿಂದ ಆವೃತವಾಗಿದೆ ಎಂದವರು ತನ್ನನ್ನೇ ತಾನು ತಮಾಷೆ ಮಾಡಿಕೊಂಡಿದ್ದರು. ಅವರ ಪ್ರತಿನಿತ್ಯದ ಕ್ಯಾಲರಿ ಶೇಕಡಾ 25 ಭಾಗ ಕೋಕ್‌ ಆವರಿಸಿದೆಯಂತೆ. ಕೋಕ್‌ ಇಲ್ಲದೆ ಅವರ ಜೀವನವೇ ಇಲ್ಲ ಎಂಬಷ್ಟು ಕೋಕ್‌ ದಾಸನಾಗಿದ್ದಾರಂತೆ ಬಫೆಟ್‌. ಅಷ್ಟರಮಟ್ಟಿಗೆ ಇವರು ಕೋಕಾಕೋಲಾ ಕಂಪನಿಯಲ್ಲಿ ತಾನು ಹೊಂದಿರುವ ಶೇಕಡಾ ಒಂಭತ್ತರಷ್ಟು ಶೇರುಗಳಿಗೆ ನ್ಯಾಯವನ್ನೂ ಸಲ್ಲಿಸುತ್ತಾರೆ!

ಕೇವಲ ಕೋಕ್‌ ಅಷ್ಟೇ ಅಲ್ಲ. ಸಾಕಷ್ಟು ಉಪ್ಪಿನಂಶವಿರುವ ಆಲೂಗಡ್ಡೆಯ ಸ್ಟಿಕ್‌ನಂತಹ ಕುರುಕಲು ಎಂದರೂ ಇವರಿಗೆ ಪಂಚಪ್ರಾಣವಂತೆ.

ಕಳೆದ ಎಪ್ರಿಲ್‌ನಲ್ಲಿ ಸಂದರ್ಶನವೊಂದರಲ್ಲೂ ಅವರು ಹೇಳಿದ್ದು ಇದನ್ನೇ. ʻನನ್ನ ಬಳಿ ಯಾರಾದರೂ ಬಂದು, ನೀವು ಬ್ರೊಕೋಲಿ ಹಾಗೂ ಇತರ ಆರೋಗ್ಯಕರ ಕೆಲವು ಆಹಾರಗಳನ್ನು ಶಿಸ್ತಾಗಿ ತಿನ್ನುತ್ತಿದ್ದರೆ ನೀವು ಹೆಚ್ಚು ಕಾಲ ಬದುಕಬಲ್ಲಿರಿ ಎಂದರೆ ನಾನು ಅವರಲ್ಲಿ, ನನ್ನ ಕೊನೆಯ ಆ ಹೆಚ್ಚುವರಿ ವರ್ಷಗಳನ್ನು ಬೇಕಾದರೆ ನೀವೇ ಇಟ್ಟುಕೊಳ್ಳಿ, ಆದರೆ, ನನ್ನಿಷ್ಟದ ತಿನಿಸುಗಳನ್ನು ನನಗೆ ತಿನ್ನಲು ಬಿಡಿ ಎಂದುಬಿಡುವೆʼ ಎಂದಿದ್ದರು.

ʻನಾನು ಆರು ವರ್ಷದವನಿದ್ದಾಗಲೇ, ನನಗೆ ಇಷ್ಟ ಬಂದ ಎಲ್ಲವನ್ನೂ ತಿನ್ನುತ್ತಿದ್ದೆ. ತಿನ್ನುವ ಈ ಕೆಲಸ ನನ್ನನ್ನು ಖುಷಿಪಡಿಸುತ್ತಿತ್ತು. ನನ್ನ ಪ್ರಕಾರ, ಜೀವನದಲ್ಲಿ ಸಂತೋಷವೆಂಬುದು ಬಹಳ ಮುಖ್ಯ. ದೀರ್ಘಾಯುಸ್ಸಿಗೆ ಈ ಸಂತೋಷವೂ ಬಹಳ ಮುಖ್ಯವಾಗುತ್ತದೆ. ಫಡ್ಜ್‌ ಸಂಡೇಸ್‌ ತಿನ್ನುವುದರಿಂದಲೋ, ಕೋಕ್‌ ಕುಡಿಯುವುದರಿಂದಲೋ ನನಗೆ ಆ ಸಂತೋಷ ಸಿಗುತ್ತದೆʼ ಎಂದವರು ತನ್ನ ಆಹಾರಶೈಲಿಯನ್ನು ಸಮರ್ಥಿಸಿಕೊಂಡಿದ್ದರು.

ಪ್ರಪಂಚದಲ್ಲಿ ಕೇವಲ ಬಫೆಟ್‌ ಒಬ್ಬರೇ ಈ ರೀತಿಯ ವಿಚಿತ್ರ ಆಹಾರಾಭ್ಯಾಸಗಳನ್ನು ಹೊಂದಿದವರಲ್ಲ. ಈ ಪಟ್ಟಿಗೆ ಹಲವರು ಸೇರುತ್ತಾರೆ. ವರ್ಜಿನ್‌ ಗ್ರೂಪ್‌ ಸಂಸ್ಥಾಪಕ ರಿಚರ್ಡ್‌ ಬ್ರಾನ್ಸನ್‌ ದಿನಕ್ಕೆ 20 ಕಪ್‌ ಚಹಾ ಕುಡಿಯುತ್ತಾರಂತೆ. ಜೆಫ್‌ ಬೆಝೋ ಅವರ ಬೆಳಗ್ಗಿನ ಉಪಹಾರದಲ್ಲಿ ಆಕ್ಟೋಪಸ್‌ ಜೊತೆಗೆ ಸದಾ ಆಲೂಗಡ್ಡೆಯ ಚಿಪ್ಸ್‌ ಇರುತ್ತದಂತೆ. ಖ್ಯಾತ ಹೂಡಿಕೆದಾರ ಮಾರ್ಕ್‌ ಕ್ಯೂಬನ್‌ ಬೆಳಗ್ಗಿನ ಉಪಹಾರಕ್ಕೆ ಸದಾ ಕುಕ್ಕೀಸ್‌ ತಿನ್ನುತ್ತಾರಂತೆ. ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಪ್ರತಿ ದಿನ ಮೂರರಿಂದ ನಾಲ್ಕು ಕ್ಯಾನ್‌ ಡಯಟ್‌ ಕೋಕ್‌ ಕುಡಿಯುತ್ತಾರಂತೆ. ಅಷ್ಟೇ ಅಲ್ಲ, ಅವರಿಗೆ ಚೀಸ್‌ ಬರ್ಗರ್‌ ಎಂದರೆ ಪಂಚಪ್ರಾಣವಂತೆ. ಎಲಾನ್‌ ಮಸ್ಕ್‌ ಅವರು ಪ್ರತಿದಿನ ಬೆಳಗ್ಗೆ ಡೋನಟ್‌ ಮಾತ್ರ ಉಪಹಾರವಾಗಿ ತಿನ್ನುತ್ತಾರೆ!

ಇದನ್ನೂ ಓದಿ: Food Tips: ಮನೆಯಲ್ಲೇ ಮಿದುವಾದ ಪರ್ಫೆಕ್ಟ್‌ ಇಡ್ಲಿ ಮಾಡಲು ಪಂಚಸೂತ್ರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

ಕಡಿಮೆ ಚಟುವಟಿಕೆಯುಳ್ಳ ಪುರುಷರು ಮತ್ತು ಮಹಿಳೆಯರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಚಟುವಟಿಕೆ ಹೊಂದಿರುವ ಪುರುಷರು (men) ಮತ್ತು ಮಹಿಳೆಯರು (women) ಆಹಾರದಲ್ಲಿ (food) ಪೌಷ್ಟಿಕಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದು, ಇದಕ್ಕಾಗಿ ಇಂಥವರು ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದರ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದೆ.

ಉಪಾಹಾರದಲ್ಲಿ ಏನು ಇರಬೇಕು?

ಐಸಿಎಂಆರ್ ಪ್ರಕಾರ ಕಡಿಮೆ ಚಟುವಟಿಕೆ ಹೊಂದಿರುವ ಪುರುಷರ ಉಪಾಹಾರದಲ್ಲಿ ನೆನೆಸಿದ ಮತ್ತು ಬೇಯಿಸಿದ ಬಜ್ರಾ 90 ಗ್ರಾಂ ಮತ್ತು ತರಕಾರಿಗಳು 50 ಗ್ರಾಂ ಒಳಗೊಂಡಿರಬೇಕು. ಅದೇ ರೀತಿ ಮಹಿಳೆಯರಿಗೆ ನೆನೆಸಿದ ಮತ್ತು ಬೇಯಿಸಿದ ಬಜ್ರಾವನ್ನು ಉಪಾಹಾರದಲ್ಲಿ 60 ಗ್ರಾಂ ಮತ್ತು ತರಕಾರಿಗಳು 100 ಗ್ರಾಂ ಸೇರಿಸಿಕೊಳ್ಳಬೇಕು.

ಊಟದಲ್ಲಿ ಏನು ಇರಬೇಕು?

ಮಧ್ಯಾಹ್ನದ ಊಟದಲ್ಲಿ ಪುರುಷರು ಧಾನ್ಯಗಳನ್ನು 100 ಗ್ರಾಂ ಮತ್ತು ಬೇಳೆಕಾಳುಗಳು 30 ಗ್ರಾಂ, ಮಹಿಳೆಯರು ಮಧ್ಯಾಹ್ನದ ಊಟದಲ್ಲಿ ಧಾನ್ಯಗಳು 80 ಗ್ರಾಂ ಮತ್ತು ದ್ವಿದಳ ಧಾನ್ಯಗಳನ್ನು 20 ಗ್ರಾಂ ತೆಗೆದುಕೊಳ್ಳಬಹುದು. ಸಂಜೆ ಇಬ್ಬರಿಗೂ 50 ಮಿಲಿ ಲೀಟರ್ ಹಾಲು ಕುಡಿಯಲು ಸೂಚಿಸಲಾಗುತ್ತದೆ.


ನಮ್ಮ ಆಹಾರ ಹೇಗಿರಬೇಕು?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ.

ಐಸಿಎಂಆರ್ ನ ಆಹಾರ ಮಾರ್ಗಸೂಚಿಗಳ ಪ್ರಕಾರ ಆರೋಗ್ಯಕರ ಊಟವು ಹೆಚ್ಚಿನ ತರಕಾರಿ, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೊಸರು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ. ಹೆಚ್ಚುವರಿ ಸಕ್ಕರೆಗಳಿಂದ ಮುಕ್ತ ಅಥವಾ ಅತೀ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುವ ಆಹಾರ ಒಳ್ಳೆಯ ಆಯ್ಕೆಯಾಗಿರುತ್ತದೆ.

ಆರೋಗ್ಯಕರವಾಗಿರಲು ಆಹಾರ ಮಾತ್ರವಲ್ಲ ದೈಹಿಕವಾಗಿ ಸಕ್ರಿಯವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ಸೂಚಿಸಲಾಗಿದೆ. ತಾಜಾ ಆಹಾರ ಸೇವಿಸುವುದು ಬಹು ಮುಖ್ಯ. ಆಹಾರ ಸುರಕ್ಷತೆಯ ಕಡೆಗೂ ಗಮನವಿರಬೇಕು. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ ಒಳ್ಳೆಯದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

ದೈಹಿಕ ಚಟುವಟಿಕೆ ಹೇಗಿರಬೇಕು?

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30ರಿಂದ 45 ನಿಮಿಷಗಳ ಮಧ್ಯಮ, ತೀವ್ರತೆಯ ದೈಹಿಕ ಚಟುವಟಿಕೆಯನ್ನು ನಡೆಸಲೇಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆ ಇದ್ದರೆ ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯಬಹುದು ಎನ್ನುತ್ತದೆ ಐಸಿಎಂಆರ್ ಮಾರ್ಗಸೂಚಿ.

Continue Reading

ಆರೋಗ್ಯ

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

2022ರ ಏಪ್ರಿಲ್‌ನಲ್ಲಿ ‘ವಿಷಕಾರಿ’ ಶವರ್ಮಾ ಸೇವಿಸಿ 52ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರ್‌ನಲ್ಲಿ ಯುವಕ, ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಹಾಗಾದರೆ ಶವರ್ಮಾ ಆಹಾರ ಪ್ರಿಯರಿಗೆ ವಿಷಕಾರಿವಾಗುತ್ತಿರುವುದು (Toxic Shawarma) ಯಾಕೆ? ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Toxic Shawarma
Koo

ಮುಂಬಯಿನ (mumbai) ಮಂಖುರ್ದ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ರಸ್ತೆ ಬದಿಯ ವ್ಯಾಪಾರಿಯಿಂದ ಚಿಕನ್‌ ಶವರ್ಮಾ ಸೇವಿಸಿದ (Toxic Shawarma) ಬಳಿಕ ಹೊಟ್ಟೆನೋವು (stomach pain), ವಾಂತಿ (vomiting) ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿತ್ತು. ಶವರ್ಮಾಗೆ ಬಳಸಿದ ಚಿಕನ್ ಕೆಟ್ಟುಹೋಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಥಮೇಶ್ ಭೋಕ್ಸೆ ಮೃತ ಯುವಕ. ಆತ ಸೇವಿಸಿದ ಆಹಾರ ವಿಷಪೂರಿತವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡ ಬಳಿಕ ಭೋಕ್ಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮೂರನೇ ಬಾರಿಗೆ ಮತ್ತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರು ಆಹಾರ ಮಾರಾಟಗಾರರನ್ನು ಬಂಧಿಸಿದ್ದಾರೆ. ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಬಂಧಿತರು. ಇವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ಮೊದಲಲ್ಲ

ಶವರ್ಮಾದಿಂದ ಸಾವು ಸಂಭವಿಸಿರುವುದು ಇದೇ ಮೊದಲ ಘಟನೆಯಲ್ಲ. 2022ರ ಏಪ್ರಿಲ್‌ನಲ್ಲಿ 52ಕ್ಕೂ ಹೆಚ್ಚು ಮಂದಿ ಶವರ್ಮಾ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರಿನಲ್ಲಿ ಶವರ್ಮಾವನ್ನು ತಿಂದು ಒಬ್ಬರು ಮೃತಪಟ್ಟಿದ್ದರು. 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಖಾದ್ಯವನ್ನು ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಳು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ನ ರೆಸ್ಟೋರೆಂಟ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ 14 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಲ್ಲದೆ, ಖಾದ್ಯವನ್ನು ಸೇವಿಸಿದ ಅನಂತರ ಸಂತ್ರಸ್ತೆಯ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 43 ಮಂದಿ ತೀವ್ರ ಜ್ವರ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

2023ರ ಅಕ್ಟೋಬರ್‌ನಲ್ಲಿ ಕೊಚ್ಚಿಯ ಯುವಕ ಕೇರಳದ ಮಾವೇಲಿಪುರಂನಲ್ಲಿರುವ ರೆಸ್ಟೋರೆಂಟ್‌ನಿಂದ ಶವರ್ಮಾ ಸೇವಿಸಿದ ಅನಂತರ ಸಾವನ್ನಪ್ಪಿದರು. 22 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಅವನ ಸಾವಿಗೆ ಕಾರಣವನ್ನು ಸೆಪ್ಟಿಸೆಮಿಯಾ ಎಂದು ಉಲ್ಲೇಖಿಸಿದೆ. ಇದು ಗಂಭೀರ ರಕ್ತಪ್ರವಾಹದ ಸೋಂಕಾಗಿದೆ.


ಶವರ್ಮಾ ಏಕೆ ಸಾವಿಗೆ ಕಾರಣ?

ಶವರ್ಮಾ ಭಕ್ಷ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಳಸುವ ಪದಾರ್ಥಗಳು ಇದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಳಿಮಾಂಸವನ್ನು ತಯಾರಿಸುವ, ನಿರ್ವಹಿಸುವ ಮತ್ತು ಸಂಗ್ರಹಿಸುವ ವಿಧಾನ ಸರಿಯಾಗಿ ಇಲ್ಲದೇ ಇದ್ದುದರಿಂದ ಶವರ್ಮಾವನ್ನು ತಿಂದ ಬಳಿಕ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಡಿಮೆ ಬೇಯಿಸಿದ ಮಾಂಸ ಅಥವಾ ಮಾಂಸದ ಅಸಮರ್ಪಕ ಶೈತ್ಯೀಕರಣದ ಕಾರಣದಿಂದಾಗಿ ಆಹಾರ ವಿಷವಾಗಿದೆ.

ಬೇಯಿಸದ ಮಾಂಸ ಕಾರಣ

ಶವರ್ಮಾಕ್ಕೆ ಬಳಸಲಾಗುವ ಮಾಂಸವನ್ನು ಆಳವಾಗಿ ಭೇದಿಸದ ಜ್ವಾಲೆಯನ್ನು ಬಳಸಿ ಗಂಟೆಗಳ ಕಾಲ ನಿಧಾನವಾಗಿ ಹುರಿಯಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರು ಹಲವು ಸಂದರ್ಭದಲ್ಲಿ ಸರಿಯಾಗಿ ಬೇಯಿಸದ ಮಾಂಸವನ್ನು ಪಡೆಯುತ್ತಾರೆ. ಶವರ್ಮಾದಿಂದ ಆಹಾರ ವಿಷಕ್ಕೆ ಮಾಂಸದ ಅಸಮರ್ಪಕ ಶೈತ್ಯೀಕರಣ, ಮಾಲಿನ್ಯ, ಅಥವಾ ಸಾಲ್ಮೊನೆಲ್ಲಾ ಅಥವಾ ಇ. ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಕ್ಕೆ ಕಾರಣವಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುವುದು ಮಾತ್ರವಲ್ಲ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಅನೈರ್ಮಲ್ಯ, ಸರಿಯಾಗಿ ಬೇಯಿಸದ ಅಥವಾ ಕಲುಷಿತ ಆಹಾರ ಕರುಳಿನ ಸೋಂಕನ್ನು ಉಂಟುಮಾಡಬಹುದು. ಅದು ತುಂಬಾ ಸಾಂಕ್ರಾಮಿಕವಾಗಿರುತ್ತದೆ. ಅಲ್ಲದೇ ಕಲುಷಿತ ಪಾತ್ರೆಗಳು, ಅಸಮರ್ಪಕ ಸಾಸ್ ಅಥವಾ ಪದಾರ್ಥಗಳ ಬಳಕೆ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಫ್ರಿಡ್ಜ್‌ ನಲ್ಲಿ ಮಾಂಸವನ್ನು ದೀರ್ಘಕಾಲದವರೆಗೆ ಬಿಟ್ಟರೂ ಅದು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಸುರಕ್ಷಿತ ಶವರ್ಮಾ ಸೇವಿಸಿ

ಶವರ್ಮಾ ತಿನ್ನಬೇಕಿದ್ದರೆ ಉತ್ತಮ ಆಹಾರ ಸುರಕ್ಷತಾ ಅಭ್ಯಾಸಗಳ ಇತಿಹಾಸ ಹೊಂದಿರುವ ಆರೋಗ್ಯಕರ ಮತ್ತು ಪ್ರತಿಷ್ಠಿತ ಆಹಾರ ಮಳಿಗೆಗಳು ಮತ್ತು ಮಾರಾಟಗಾರರನ್ನು ಆಯ್ಕೆ ಮಾಡಿ. ಹೊಟೇಲ್‌ನಲ್ಲಿನ ಶುಚಿತ್ವ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಗಮನ ಕೊಡಿ. ಮಾಂಸದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಅದು ಕಚ್ಚಾ ಅಥವಾ ಕಡಿಮೆ ಬೇಯಿಸಿರುವುದನ್ನು ತಿನ್ನಬೇಡಿ.

Continue Reading

ಆಹಾರ/ಅಡುಗೆ

Cooking Oils: ಭಾರತೀಯ ಅಡುಗೆ ಶೈಲಿಗೆ ಯೋಗ್ಯವಾದ 7 ಅಡುಗೆ ಎಣ್ಣೆಗಳಿವು

ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಏಳು ಎಣ್ಣೆಗಳು ಯಾವುವು ಎಂಬುದರ ಬಗ್ಗೆ (Cooking Oils) ಇಲ್ಲಿದೆ ಮಾಹಿತಿ.

VISTARANEWS.COM


on

Cooking Oils
Koo

ಭಾರತೀಯ ಅಡುಗೆಗಳಲ್ಲಿ ಎಣ್ಣೆಗೆ ಮುಖ್ಯ ಸ್ಥಾನವಿದೆ. ನಿತ್ಯವೂ ಏನಾದರೊಂದು ಕರಿಯಲು ಎಣ್ಣೆ ಬೇಕೇ ಬೇಕಾಗುತ್ತದೆ. ಭಾರತೀಯ ಅಡುಗೆಯ ಜೀವಾಳವಾದ ಒಗ್ಗರಣೆಗೂ ಎಣ್ಣೆ ಬೇಕೇ ಬೇಕು. ಬಗೆಬಗೆಯ ಖಾದ್ಯಗಳು, ತರಹೇವಾರಿ ಅಡುಗೆಗಳು, ಕುರುಕಲು ತಿಂಡಿಗಳು ಸೇರಿದಂತೆ ಎಲ್ಲವುಗಳ ತಯಾರಿಯಲ್ಲೂ ಎಣ್ಣೆಗೆ ಪ್ರಮುಖ ಸ್ಥಾನವಿದೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಬಗೆಯ ಅಡುಗೆ ಎಣ್ಣೆಗಳು ಲಭ್ಯವಿವೆ. ಪ್ರತಿ ಎಣ್ಣೆಯೂ ಉಳಿದ ಎಣ್ಣೆಗಳಿಗಿಂತ ತಾನೇ ಶ್ರೇಷ್ಠ, ನಿಮ್ಮ ಆರೋಗ್ಯಕ್ಕೆ ನನ್ನನ್ನೇ ಬಳಸಿ ಎನ್ನುವ ಜಾಹಿರಾತುಗಳು ಗ್ರಾಹಕನನ್ನು ಸಂದಿಗ್ಧಕ್ಕೆ ದೂಡುತ್ತದೆ. ಎಂತಹ ಎಣ್ಣೆಯನ್ನು ಖರೀದಿಸಬೇಕು, ನಿಜಕ್ಕೂ ಯಾವ ಎಣ್ಣೆ ಆರೋಗ್ಯಕ್ಕೆ ಯೋಗ್ಯ ಎಂಬ ಗೊಂದಲದಲ್ಲಿ ತಲೆಕೆಡಿಸಿಕೊಳ್ಳುತ್ತಾನೆ. ಬನ್ನಿ, ಭಾರತೀಯ ಅಡುಗೆಗಳಿಗೆ ಸೂಕ್ತವಾದ ಎಣ್ಣೆ ಯಾವುವು ಎಂಬುದನ್ನು ನೋಡೋಣ.
ಎಲ್ಲ ಕೊಬ್ಬೂ ಕೂಡಾ ಸ್ಯಾಚುರೇಟೆಡ್‌ ಹಾಗೂ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಮಿಶ್ರಣವಾಗಿದ್ದು, ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆಗಿಂತ, ಅನ್‌ ಸ್ಯಾಚುರೇಟೆಡ್‌ ಕೊಬ್ಬಿರುವ ಎಣ್ಣೆ ಉತ್ತಮ. ಇದು ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದರಿಂದ ಇಂತಹ ಎಣ್ಣೆಗಳು ಹೃದಯಕ್ಕೆ ಹೆಚ್ಚು ಕೆಟ್ಟದನ್ನು ಮಾಡಲಾರವು. ಆದರೆ, ದೇಹಕ್ಕೆ ಒಳ್ಳೆಯ ಕೊಬ್ಬಿನ ಅಗತ್ಯವಿರುವುದು ಹೌದಾದರೂ, ಯಾವುದೇ ಎಣ್ಣೆಯಿರಲಿ, ಅತಿಯಾದ ಸೇವನೆ ಒಳ್ಳೆಯದಲ್ಲ. ಬನ್ನಿ, ಭಾರತೀಯ ಅಡುಗೆಗಳಲ್ಲಿ ಕರಿಯಲು ಯೋಗ್ಯವಾದ ಐದು ಎಣ್ಣೆಗಳು ಯಾವುವು (Cooking Oils) ಎಂಬುದನ್ನು ನೋಡೋಣ.

Rice bran oil

ರೈಸ್‌ ಬ್ರಾನ್‌ ಎಣ್ಣೆ

ರೈಸ್‌ ಬ್ರಾನ್‌ ಅಥವಾ ಅಕ್ಕಿಯ ಹೊರಕವಚದಿಂದ ತಯಾರಿಸಲ್ಪಡುವ ಈ ಎಣ್ಣೆಯಲ್ಲಿ ಒಳ್ಳೆಯ ಕೊಬ್ಬು ಹೆಚ್ಚಿದೆ. ಆಲಿವ್‌ ಎಣ್ಣೆ, ಅವಕಾಡೋ ಎಣ್ಣೆಯಂತೆ ಇದು ಹೃದಯ ಸ್ನೇಹಿ. ಜಪಾನ್‌ನ ಸರ್ಕಾರ ಇದನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಿದ್ದು, ಇನ್ಸುಲಿನ್‌ ಮಟ್ಟದ ಮೇಲೆ ಪರಿಣಾಮ ಬೀರದೆ, ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಇಳಿಸಲೂ ಕೂಡಾ ಇದು ನೆರವಾಗುತ್ತದೆ. ಇದರಲ್ಲಿ ಕ್ಯಾನ್ಸರ್‌ ನಿರೋಧಕ ಗುಣಗಳೂ ಇದ್ದು, ಇದನ್ನು ಭಾರತೀಯ ಅಡುಗೆಗಳಲ್ಲಿ ಇತ್ತೀಚೆಗೆ ಹೇರಳವಾಗಿ ಬಳಸಲಾಗುತ್ತದೆ.

Mustard Oil

ಸಾಸಿವೆ ಎಣ್ಣೆ

ಎರುಸಿಕ್‌ ಆಸಿಡ್‌ ಎಂಬ ಫ್ಯಾಟಿ ಆಸಿಡ್‌ ಅನ್ನು ಹೊಂದಿರುವ ಸಾಸಿವೆ ಎಣ್ಣೆಯನ್ನು ಯುರೋಪ್‌ ಹಾಗೂ ಯುಸ್‌ಗಳಲ್ಲಿ ನಿಷೇಧಿಸಿದ್ದರೂ, ಭಾರತದಲ್ಲಿ ಹೇರಳವಾಗಿ ಬಳಕೆಯಾಗುವ ಎಣ್ಣೆ. ಮುಖ್ಯವಾಗಿ ಉತ್ತರ ಭಾರತದ ಮಂದಿ ಅಡುಗೆಗೆ ಬಳಸುವ ಈ ಸಾಸಿವೆ ಎಣ್ಣೆಯಲ್ಲಿ ಒಮೆಗಾ 3 ಹಾಗೂ ಒಮೆಗಾ 6 ಫ್ಯಾಟಿ ಆಸಿಡ್‌ಗಳಿದ್ದು, ಕಡಿಮೆ ಸ್ಯಾಚುರೆಟೆಡ್‌ ಫ್ಯಾಟ್‌ ಹೊಂದಿದೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್‌, ಆಂಟಿ ಬಯಾಟಿಕ್‌ ಗುಣಗಳೂ ಇದ್ದು, ಕೆಲವು ಬಗೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ.

Sunflower oil

ಸೂರ್ಯಕಾಂತಿ ಎಣ್ಣೆ

ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಮನೆಗಳಲ್ಲಿ ಸ್ಥಾನ ಪಡೆದಿರುವ ಸೂರ್ಯಕಾಂತಿ ಎಣ್ಣೆಯಲ್ಲಿ ಹೃದಯ ಸ್ನೇಹಿ ಗುಣಗಳಿವೆ. ಇದರಲ್ಲಿ ಪಾಳಿ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನ ಅಂಶಗಳು ಹೆಚ್ಚಿರುವುದರಿಂದ ಒಳ್ಳೆಯ ಕೊಬ್ಬನ್ನು ಪ್ರೋತ್ಸಾಹಿಸುತ್ತದೆ. ವಿಟಮಿನ್‌ ಇ ಇದರಲ್ಲಿ ಹೇರಳವಾಗಿದ್ದು, ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ಕರಿಯಲು ಈ ಎಣ್ಣೆ ಯೋಗ್ಯವಾಗಿದ್ದು ಬಹಳಷ್ಟು ಮಂದಿ ಇದನ್ನು ನಿತ್ಯವೂ ಬಳಸುತ್ತಾರೆ.

Ghee Testing Method

ತುಪ್ಪ

ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಿರುವುದು ಹೌದಾದರೂ, ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿರುವ ಹಾಗೂ ಭಾರತೀಯ ಮನೆಗಳ ಅವಿಭಾಜ್ಯ ಅಂಗ. ಇದರಲ್ಲಿ ವಿಟಮಿನ್‌ ಎ, ಡಿ, ಕೆ ಹಾಗೂ ಇ ಹೇರಳವಾಗಿದ್ದು, ಆಂಟಿ ಕ್ಯಾನ್ಸರ್‌ ಗುಣಗಳನ್ನೂ ಹೊಂದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿರುವ ಸಾಕಷ್ಟು ವೈದ್ಯಕೀಯ ಗುಣಗಳನ್ನು ಹೊಂದಿರುವ ಇದು ಭಾರತೀಯ ಆಯುರ್ವೇದ ಚಿಕಿತ್ಸೆಯಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಹೀಗಾಗಿ. ಇದರ ಬಳಕೆ ಭಾರತೀಯ ಅಡುಗೆಗಳಲ್ಲಿ ನಿರಾಕರಿಸುವುದು ಅಸಾಧ್ಯ. ಹಿತಮಿತವಾಗಿ ಬಳಕೆ ಮಾಡಿದಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

Coconut Oil

ತೆಂಗಿನೆಣ್ಣೆ

ಲಾರಿಕ್‌ ಆಸಿಡ್‌ ಎಂಬ ಅಪರೂಪದ ಸ್ಯಾಚುರೇಟೆಡ್‌ ಫ್ಯಾಟ್‌ ತೆಂಗಿನೆಣ್ಣೆಯಲ್ಲಿದ್ದರೂ ಸಾಕಷ್ಟು ಉತ್ತಮ ಆರೋಗ್ಯಕರ ಗುಣಗಳ ಮೂಲಕ ತೆಂಗಿನೆಣ್ನೆ ತಲೆತಲಾಂತರಗಳಿಂದ ಮುಖ್ಯವಾಗಿ ದಕ್ಷಿಣ ಭಾರತೀಯರ ಮನೆಗಳಲ್ಲಿ ಅಡುಗೆಯಲ್ಲಿ ಬಹುಮುಖ್ಯ ಸ್ಥಾಣವನ್ನು ಪಡೆದಿದೆ. ಆಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹೇರಳವಾಗಿದೆ. ಚರ್ಮ ಹಾಗೂ ಕೂದಲ ಆರೋಗ್ಯ ಸೇರಿದಂತೆ ಹಲವು ಲಾಭಗಳು ಇದರಲ್ಲಿವೆ.

Groundnut oil

ನೆಲಗಡಲೆ ಎಣ್ಣೆ

ವಿಟಮಿನ್‌ ಇ ಯಿಂದ ಸಮೃದ್ಧವಾಗಿರುವ ಈ ಎಣ್ಣೆ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ ಹೊಂದಿದೆ. ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಸ್ಯಾಚುರೇಟೆಡ್‌ ಕೊಬ್ಬಿದ್ದರೂ, ಇದರ ಇತರ ಆರೋಗ್ಯಕರ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆಗೆ, ಕರಿಯಲು ಬಳಸಬಹುದು.

Sesame Oil

ಎಳ್ಳೆಣ್ಣೆ

ಭಾರತೀಯ ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ಮಹತ್ವದ ಸ್ಥಾನವಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್‌ ಅನ್ನು ಅಡಿಮೆ ಮಾಡಲು ಈ ಎಣ್ಣೆ ಒಳ್ಳೆಯದು ಎಂಬುದನ್ನು ಸಾಕಷ್ಟು ಸಂಶೋಧನೆಗಳು ಪುಷ್ಠೀಕರಿಸಿವೆ. ಹೃದಯಸ್ನೇಹಿ ಗುಣಗಳನ್ನು ಹೊಂದಿರುವ ಈ ಎಣ್ಣೆಯನ್ನು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಅಡುಗೆಗೆ ಬಳಸಲಾಗುತ್ತದೆ. ಹಲವಾರಿ ಆರೋಗ್ಯದ ಲಾಭಗಳನ್ನೂ ಹೊಂದಿರುವ ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೂ ಒಳ್ಳೆಯದನ್ನೇ ಮಾಡುತ್ತದೆ.
ನೆನಪಿಡಿ: ಉತ್ತಮ ಆರೋಗ್ಯಕ್ಕೆ ಎಣ್ಣೆಗಳು ಬೇಕೇಬೇಕು. ಆದರೆ, ಅತಿಯಾಗಬಾರದು ಅಷ್ಟೇ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ಆರೋಗ್ಯ

Cancer Risk: ಕ್ಯಾನ್ಸರ್ ಅಪಾಯದಿಂದ ಪಾರಾಗಲು ಯಾವ ಆಹಾರ ಸೇವಿಸಬಾರದು? ಯಾವ ಆಹಾರ ಸೇವಿಸಬೇಕು?

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ (Cancer Risk) ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್‌ ಅಪಾಯದಿಂದ ಪಾರಾಗುವ ಕುರಿತು ಉಪಯುಕ್ತ ಸಲಹೆ ಇಲ್ಲಿದೆ.

VISTARANEWS.COM


on

By

Cancer Risk
Koo

ನಮ್ಮ ಜೀವನ ಶೈಲಿ (life style), ಆಹಾರ (food) ಪದ್ಧತಿಯಿಂದ ಕೆಲವೊಂದು ರೋಗಗಳನ್ನು ಆಹ್ವಾನಿಸುತ್ತಿದ್ದೇವೆ. ಅದರಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್‌ಗೆ (Cancer Risk) ಮುಖ್ಯ ಕಾರಣ ನಮ್ಮ ದೈನಂದಿನ ಆಹಾರಗಳು ಎನ್ನುತ್ತಾರೆ ತಜ್ಞರು. ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಹಲವಾರು ಅಂಶಗಳಿವೆ. ವಿಶೇಷವಾಗಿ ಪ್ರಸ್ತುತ ಹೆಚ್ಚಿನ ಜನರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ಜೀನ್‌ಗಳು ಮತ್ತು ಕುಟುಂಬದ ಇತಿಹಾಸವನ್ನು ಹೊರತುಪಡಿಸಿ ಆಹಾರ ಪದ್ಧತಿಯಂತಹ ಬಾಹ್ಯ ಅಂಶಗಳು ಕ್ಯಾನ್ಸರ್ ಹರಡುವಿಕೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಕ್ಯಾನ್ಸರ್ ಬಾರದಂತೆ ನಾವು ನಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ಆಹಾರವನ್ನು ತ್ಯಜಿಸಲೇಬೇಕು. ಕ್ಯಾನ್ಸರ್ ಅನೇಕ ಅಪಾಯಕಾರಿ ಅಂಶಗಳನ್ನು ಹೊಂದಿರುವ ಭಯಾನಕ ಕಾಯಿಲೆಯಾಗಿದೆ. ತಜ್ಞರ ಪ್ರಕಾರ, ಈ ಭಯಾನಕ ಕಾಯಿಲೆಯು ನಾವು ಪ್ರತಿದಿನ ಸೇವಿಸುವ ಆಹಾರದಿಂದಲೇ ಬರುತ್ತವೆ. ಈ ಆಹಾರಗಳಲ್ಲಿ ಹೆಚ್ಚಿನವು ರುಚಿಕರ ಮತ್ತು ವ್ಯಸನಕಾರಿಯಾಗಿರುತ್ತದೆ.

ಈ ವರ್ಷದ ಆರಂಭದಲ್ಲಿ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮಾಡಿರುವ ವರದಿ ಪ್ರಕಾರ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಒಂದು ದಶಕದ ಹಿಂದೆ ಹೋಲಿಸಿದರೆ ದ್ವಿಗುಣಗೊಂಡಿದೆ. ಹೀಗಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ತ್ಯಜಿಸಬೇಕು.


1. ಕೆಂಪು ಮಾಂಸ

ಹಂದಿ, ಕುರಿ ಮತ್ತು ಗೋಮಾಂಸ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಹಾರ್ವರ್ಡ್ ಹೆಲ್ತ್ ಪ್ರಕಾರ, ಮಾಂಸದ ಹೆಚ್ಚಿನ ಸೇವನೆಯು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸೋಡಿಯಂನೊಂದಿಗೆ ಪ್ಯಾಕ್ ಮಾಡಲ್ಪಟ್ಟಿರುವುದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಾರದಲ್ಲಿ 18 ಔನ್ಸ್ ಕೆಂಪು ಮಾಂಸವನ್ನು ತಿನ್ನಬಹುದು. ಅದನ್ನು ಬೇಯಿಸುವಾಗ ತಾಪಮಾನವನ್ನು ಗಮನಿಸಬೇಕು. ಯಾಕೆಂದರೆ ಅದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬರ್ಗರ್‌ ಮತ್ತು ಸ್ಟೀಕ್ಸ್‌ಗಳಂತಹ ಸುಟ್ಟ ಮಾಂಸಗಳು ಬೇಕಿಂಗ್ ಅಥವಾ ಸೌಸ್ ವೈಡ್‌ನಂತಹ ವಿಧಾನಗಳನ್ನು ಬಳಸಿಕೊಂಡು ಕಡಿಮೆ ತಾಪಮಾನದಲ್ಲಿ ತಯಾರಿಸಲಾಗುತ್ತದೆ. ಇದರಿಂದ ಅಪಾಯ ಹೆಚ್ಚಾಗಿರುತ್ತದೆ.


2. ಮದ್ಯ

ಆಲ್ಕೋಹಾಲ್ ಸೇವನೆ ಈಗ ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದು ವಿಶೇಷವಾಗಿ ಯುವಜನರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವೈದ್ಯರ ಪ್ರಕಾರ, ಆಲ್ಕೋಹಾಲ್ ಸೇವನೆಯು ಹೊಟ್ಟೆ, ಕರುಳು, ಅನ್ನನಾಳ, ಯಕೃತ್ತು, ಪ್ಯಾಂಕ್ರಿಯಾಟಿಕ್ ಮತ್ತು ಸ್ತನ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಇದು ಅಂಗಾಂಶಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಜೀವಕೋಶದ ಡಿಎನ್ ಎ ಯಲ್ಲಿ ಅನೇಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಆಲ್ಕೋಹಾಲ್ ಅನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು.


3. ಸಕ್ಕರೆ ಪಾನೀಯಗಳು

ಬೇಸಿಗೆಯಲ್ಲಿ ಹೆಚ್ಚಿನ ಜನರು ಸಕ್ಕರೆ ತುಂಬಿದ ತಂಪಾದ ಪಾನೀಯಗಳನ್ನು ಕುಡಿಯುತ್ತಾರೆ. ಹಾರ್ವರ್ಡ್ ಟಿ ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ದಿನಕ್ಕೆ ಎರಡಕ್ಕಿಂತ ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸಿದವರು ಕೊಲೊರೆಕ್ಟಲ್ ಕ್ಯಾನ್ಸರ್‌ನ ಆರಂಭಿಕ ಹಂತಕ್ಕಿಂತ ಎರಡು ಪಟ್ಟು ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೇ ಇದು ತೂಕ ಮತ್ತು ಬೊಜ್ಜಿಗೂ ಕಾರಣವಾಗುವುದು. ಇದರ ಬದಲು ನೀರು, ಹಾಲು ಅಥವಾ ಸಿಹಿಗೊಳಿಸದ ಚಹಾ ಅಥವಾ ಕಾಫಿ ಸೇವನೆ ಸೂಕ್ತ.


4. ಡೇರಿ ಉತ್ಪನ್ನ

ಹಾಲು, ಚೀಸ್ ಮತ್ತು ಮೊಸರುಗಳಂತಹ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಸಂಶೋಧನೆಯ ಪ್ರಕಾರ, ಡೈರಿ ಇನ್ಸುಲಿನ್ ತರಹದ ಬೆಳವಣಿಗೆಯ ಅಂಶ 1 (IGF-1) ಮಟ್ಟವನ್ನು ಹೆಚ್ಚಿಸುತ್ತದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ನ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. IGF-1 ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಪ್ರಸರಣ ಅಥವಾ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಆಹಾರಗಳು ಯಾವವು?

ವೈಜ್ಞಾನಿಕ ಸಂಶೋಧನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಆಹಾರಗಳಿವೆ.


1. ಹಣ್ಣು ಮತ್ತು ತರಕಾರಿಗಳು

ಹೆಚ್ಚಿನ ಹಣ್ಣು ಮತ್ತು ತರಕಾರಿಗಳು ರೋಗ ನಿರೋಧಕ ಗುಣಗಳಿಂದ ತುಂಬಿರುತ್ತವೆ. ಆಕ್ಸಿಡೇಟಿವ್ ಒತ್ತಡ ಮತ್ತು ಡಿಎನ್ಎ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತವೆ.

2. ಬೀಜಗಳು

ಬೀಜಗಳ ನಿಯಮಿತ ಸೇವನೆಯು ಉರಿಯೂತ ಮತ್ತು ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.

3. ಬೀನ್ಸ್ ಮತ್ತು ದ್ವಿದಳ ಧಾನ್ಯಗಳು

ಬೀನ್ಸ್, ದ್ವಿದಳ ಧಾನ್ಯಗಳು ಫೈಬರ್‌ನಿಂದ ಕೂಡಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


4. ಮೀನು

ಬಿಳಿ ಮೀನು ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕೆಲವು ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

Continue Reading
Advertisement
Arvind Kejriwal
ದೇಶ14 mins ago

Arvind Kejriwal: ಚೀನಾದಿಂದ ಭಾರತದ ನೆಲ ವಾಪಸ್‌ ಸೇರಿ 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

Prajwal Revanna Case: Beware of making a statement Parameshwara warns to HD Kumaraswamy
ರಾಜಕೀಯ14 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Road Accident
ಕ್ರೈಂ30 mins ago

Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

Ram Charan get mobbed by fans during public appearances
ಸಿನಿಮಾ32 mins ago

Ram Charan: ಚುನಾವಣಾ ಪ್ರಚಾರದ ವೇಳೆ ರಾಮ್ ಚರಣ್ ಶರ್ಟ್‌ ಹರಿದ ಫ್ಯಾನ್ಸ್‌: ಅಲ್ಲು ಸುತ್ತ ಜನವೋ ಜನ!

Mother's Day 2024 Duniya Vijay jaggesh Post Viral
ಸಿನಿಮಾ33 mins ago

Mother’s Day 2024: ಅಮ್ಮನ ನೆನೆದಾಗ ಮಗುವಾಗುವೆ ಎಂದ ಜಗ್ಗೇಶ್‌: ದುನಿಯಾ ವಿಜಯ್‌ ಭಾವುಕ ಪೋಸ್ಟ್‌!

Job Alert
ಉದ್ಯೋಗ53 mins ago

Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

Dead Body Found
ಕ್ರೈಂ1 hour ago

Dead Body Found : ಡ್ಯಾಂನಲ್ಲಿ ಬಿದ್ದಿತ್ತು ವ್ಯಕ್ತಿ ಶವ; ರೈಲು ಬೋಗಿ ಒಳಗೆ ಕೊಳೆಯುತ್ತಿತ್ತು ಮಹಿಳೆಯ ಡೆಡ್‌ಬಾಡಿ

Narendra Modi
ದೇಶ1 hour ago

Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Prajwal Revanna Case Preetham Gowda close aides arrested and Congress hits back at BJP
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಹಂಚಿಕೆ ಕೇಸ್‌; ಪ್ರೀತಂ ಗೌಡ ಅತ್ಯಾಪ್ತರ ಸೆರೆ: ಬಿಜೆಪಿಗೆ ಚೆಕ್‌ಮೇಟ್‌?

Mother's Day
ಮಹಿಳೆ1 hour ago

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Two people of pen drive allottees arrested
ಕ್ರೈಂ2 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ9 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು23 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ1 day ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ3 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ3 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

ಟ್ರೆಂಡಿಂಗ್‌