ಮಕ್ಕಳ ಹೆತ್ತವರಿಗೆ ದಕ್ಕುವ ಉಚಿತ ಸಲಹೆಗಳು ಮತ್ತು ಕಟು ಸತ್ಯಗಳು! - Vistara News

ಲೈಫ್‌ಸ್ಟೈಲ್

ಮಕ್ಕಳ ಹೆತ್ತವರಿಗೆ ದಕ್ಕುವ ಉಚಿತ ಸಲಹೆಗಳು ಮತ್ತು ಕಟು ಸತ್ಯಗಳು!

child care: ಮಕ್ಕಳ ನಿದ್ರೆಯಿಂದ ಹಿಡಿದು ಆಹಾರದವರೆಗೆ ನೂರೆಂಟು ಸಲಹೆಗಳನ್ನು ಹೆತ್ತವರು ಸದಾ ಕೇಳಿಸಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ನಿಜವೆಷ್ಟು? ನಿಮ್ಮ ಮಕ್ಕಳಿಗೆ ಅನ್ವಯಿಸುವುದು ಎಷ್ಟು?

VISTARANEWS.COM


on

ಕಟು ಸತ್ಯಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾವು ಎಂಥಾ ಕಾಲದಲ್ಲಿ ಜೀವಿಸುತ್ತಿದೇವೆ ಎಂದರೆ ನಮ್ಮ ಬಯಸಿದಾಗ ಕ್ಷಣ ಮಾತ್ರದಲ್ಲಿ ನಮ್ಮ ಬೆರಳತುದಿಯಲ್ಲೇ ಜ್ಞಾನಸಂಪತ್ತು ಉದ್ಭವವಾಗುತ್ತದೆ. ಹೀಗಾಗಿ ಪ್ರತಿಯೋಬ್ಬರೂ ಜ್ಞಾನಿಗಳೇ. ತಮ್ಮದೇ ವಿಧಗಳಲ್ಲಿ ತಾವೇ ತೀರ್ಮಾನ ನೀಡಬಲ್ಲಷ್ಟು ಮುಂದುವರಿಯುವ ಪ್ರಸಂಗ ಇಲ್ಲದಿಲ್ಲ. ಮುಖ್ಯವಾಗಿ ಪೇರೆಂಟಿಂಗ್‌ ವಿಚಾರದಲ್ಲಿ. ಲೋಕದಲ್ಲಿ ಎಲ್ಲರೂ ಮಕ್ಕಳನ್ನು ಹೊಂದಿರುವವರೇ ಆದ್ದರಿಂದ ಈ ವಿಷಯದಲ್ಲಿ ಎಲ್ಲರೂ ತಜ್ಞರೇ, ಪಂಡಿತರೇ.

ಬಹಳಷ್ಟು ಸಾರಿ ಎಲ್ಲ ಮಕ್ಕಳಿಗೂ ಇದನ್ನೇ ಮಾಡಿ ಬೆಳೆಸಿದ್ದು, ನಿಮಗೂ ಇದನ್ನೇ ಮಾಡಿದ್ದು ಎಂದು ತೀರ್ಪು ಕೊಟ್ಟು ಮಕ್ಕಳನ್ನು ಹಾಗೆ ಬೆಳೆಸಿ ಹೀಗೆ ಬೆಳೆಸಿ ಎಂಬ ಉಪದೇಶಗಳನ್ನು ಹೊಸ ಅಪ್ಪ ಅಮ್ಮಂದಿರಿಗೆ, ಹಾಗೂ ಜೀವನಪೂರ್ತಿ ಹೆತ್ತವರಿಗೆ ಮಕ್ಕಳ ವಿಷಯದಲ್ಲಿ ಸಲಹೆ ಸೂಚನೆಗಳು ಬರುತ್ತಲೇ ಇರುತ್ತವೆ. ʻನಮ್ಮ ಮಕ್ಕಳಿಗೆ ನಾವು ಹೀಗೆ ಮಾಡುತ್ತೇವೆ, ನೀವೂ ಅದನ್ನೇ ಮಾಡಿʼ ಎಂದು ಸುಲಭವಾಗಿ ತಮ್ಮ ಜ್ಞಾನಸಂಪತ್ತನ್ನು ಇನ್ನೊಬ್ಬರಿಗೆ ಎರೆದುಬಿಡುವ ಪಾಂಡಿತ್ಯ ಪ್ರದರ್ಶನ ಸುಲಭ.

ಆದರೆ ಪ್ರತಿಯೊಂದು ಮಗುವೂ ಭಿನ್ನ. ಪ್ರತಿ ಅಮ್ಮ ಅಪ್ಪನಿಗೂ ತಮ್ಮ ಮಗು ಹೇಗೆ ಎಂಬುದು ತಿಳಿದಿರುತ್ತದೆ. ಕೆಲವೊಮ್ಮೆ ಹೊರಗಿನವರ ಉಪದೇಶ ಎಷ್ಟು ತೀವ್ರತರದ್ದಾಗಿರುತ್ತದೆಂದರೆ, ಹೆತ್ತವರ ಕಣ್ಣಂಚನ್ನೂ ಒದ್ದೆ ಮಾಡಿಬಿಡುತ್ತದೆ. ತಮ್ಮ ಮಗುವಿನ ಸಮಸ್ಯೆಗೆ ತಾವು ಯಾವ ರೀತಿ ಸ್ಪಂದಿಸಬೇಕೆಂಬುದು ಪ್ರತಿ ಅಪ್ಪ ಅಮ್ಮನಿಂತ ಹೆಚ್ಚಾಗಿ ಹೊರಗಿನವರು ಕಂಡುಹಿಡಿಯಲಾಗುವುದಿಲ್ಲ ಎಂಬುದು ನೆನಪಿಡಿ. ಹಾಗಾದರೆ, ಸಾಮಾನ್ಯವಾಗಿ ಹೊರಗಿನವರಿಂದ ಕೇಳಿ ಬರುವ ಉಪದೇಶಗಳ ಬಗ್ಗೆ ನೋಡೋಣ ಬನ್ನಿ.

ಕಟು ಸತ್ಯಗಳು

೧. ʻಮಕ್ಕಳು ಊಟ ಮುಗಿಸದ ಹೊರತು ಅವರಿಗೆ ಬೇರೇನನ್ನೂ ಕೊಡಬೇಡಿʼ. ಈ ಉಪದೇಶ ಸಾಮಾನ್ಯ ಎಲ್ಲರೂ ಕೇಳಿರುತ್ತೇವೆ. ಹೌದು. ಮಕ್ಕಳು ಊಟ ಮುಗಿಸದಿದ್ದರೆ, ಅವರಿಷ್ಟವಾದ ಟ್ರೀಟ್‌ ಸಿಕ್ಕರೆ ಆಮೇಲೆ ಊಟ ಮಾಡುವುದಿಲ್ಲ ಎಂಬುದು ಎಲ್ಲರ ಕಾಳಜಿ. ಒಪ್ಪೋಣ. ಆದರೂ, ಆಗೀಗೊಮ್ಮೆ, ಇಂತಹ ಕಟು ನಿಯಮ ಮುರಿಯಬಾರದೆಂದೇನಿಲ್ಲ. ಮಕ್ಕಳು, ತಮಗಿಷ್ಟ ಬಂದ ಐಸ್‌ಕ್ರೀಂ, ಸಿಹಿ ತಿನ್ನಲಿ. ತಿಂದ ಮೇಲೆ ಆ ದಿನ ಚೆನ್ನಾಗಿ ಮಲಗುವ ಮುನ್ನ ಚೆನ್ನಾಗಿ ಹಲ್ಲುಜ್ಜುವಂತೆ ನೋಡಿಕೊಳ್ಳಿ, ಅಷ್ಟೇ. ಸಿಂಪಲ್.‌

ಕಟು ಸತ್ಯಗಳು

೨. ʻಮಕ್ಕಳಲ್ಲಿ ಸಣ್ಣವರಿದ್ದಾಗಲೇ ಹಂಚಿ ತಿನ್ನುವ ಗುಣ ಬೆಳೆಸಿʼ. ಈ ಉಪದೇಶವೂ ಅತ್ಯಂತ ಸಾಮಾನ್ಯ ಉಪದೇಶ. ನಿಜ ಒಳ್ಳೆಯದೂ ಕೂಡಾ. ಆದರೆ, ಪ್ರತಿನಿತ್ಯವೂ ಪಾಲನೆ ಕಷ್ಟ ಸಾಧ್ಯ. ಇಂದಿನ ಪುಟ್ಟಪುಟ್ಟ ಕುಟುಂಬಗಳಲ್ಲಿ ದಿನವೂ ಇದನ್ನು ಕಟುವಾಗಿ ಪಾಲನೆ ಮಾಡಲಾಗುವುದಿಲ್ಲ. ಹಾಗಾಗಿ, ಮಕ್ಕಳಿಗೆ, ಎಂಥ ಸಂದರ್ಭ ಹಂಚಿ ತಿನ್ನಬೇಕು ಎಂಬ ಸಾಮಾನ್ಯಜ್ಞಾನ ಗೊತ್ತಿರಲಿ ಅಷ್ಟೇ.

ಕಟು ಸತ್ಯಗಳು

೩. ʻಮಕ್ಕಳು ಅವರ ಪಾತ್ರೆಗಳನ್ನು ಅವರೇ ತೊಳೆಯಲಿ.ʼ ಈ ಉಪದೇಶವನ್ನು ಹೇಳುವುದು ಸುಲಭ. ಹಾಗಂತ ದಿನವೂ ಪಾತ್ರೆ ತೊಳಿ ಎಂದು ಒತ್ತಡ ಹಾಕುತ್ತಾ ಕೂರುವುದು ಸರ್ವಥಾ ಸಲ್ಲ. ತಮಗೇ ಜವಾಬ್ದಾರಿಗಳು ಬರುವಾಗ ಮಕ್ಕಳು ಕಲಿತುಕೊಳ್ಳುತ್ತಾರೆ. ಆದರೆ, ಈ ಬಗ್ಗೆ ಉಡಾಫೆಯ ಗುಣ ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ ಅಷ್ಟೇ.

ಕಟು ಸತ್ಯಗಳು

೪. ʻಮಕ್ಕಳು ಮಲಗುವಾಗಲೇ ನೀವೂ ಮಲಗಿಬಿಡಿʼ. ಇದೂ ಅಷ್ಟೇ ಸಾರ್ವತ್ರೀಕರಿಸುವ ಉಪದೇಶಗಳಲ್ಲಿ ಒಂದು. ಎಷ್ಟೋ ಕೆಲಸಗಳು ಬಾಕಿ ಇರುತ್ತವೆ. ಮಕ್ಕಳನ್ನು ನಿಗದಿತ ಸಮಯಕ್ಕೆ ಮಲಗಿಸಬೇಕಾಗಿರುತ್ತದೆ. ಹಾಗಾಗಿ ಇದು ಫೈನ್.‌ ಮಕ್ಕಳನ್ನು ಮಲಗಿಸಿ, ನಿಮ್ಮ ಕೆಲಸಗಳನ್ನು ಮುಗಿಸಿ ಮಲಗಿ. ನಿಮ್ಮ ವಿಶ್ರಾಂತಿ ನಿಮಗೆ ಸಿಕ್ಕಿತೆಂದರೆ ತೊಂದರೆಯೇನಿಲ್ಲ.

ಕಟು ಸತ್ಯಗಳು

೫. ʻಮಕ್ಕಳನ್ನು ಅತಿಯಾಗಿ ಅಪ್ಪಿ ಮುದ್ದಾಡಬಾರದುʼ. ಇಂತಹ ಉಪದೇಶ ಹಿರಿಯರಿಂದ, ಬಂಧುಬಳಗದವರಿಂದ ಬರುತ್ತಲೇ ಇರುತ್ತದೆ. ಆದರೆ, ಚೆನ್ನಾಗಿ, ಅಪ್ಪಿ ಮುದ್ದುಮಾಡಿ ಬೆಳೆಸಿದ ಮಕ್ಕಳು ಸ್ಮಾರ್ಟ್‌ ಆಗಿ, ಭಾವನಾತ್ಮಕವಾಗಿ ಸ್ಟ್ರಾಂಗ್‌ ಆಗಿ ಬೆಳೆಯುತ್ತಾರೆ ಎಂಬುದಂತೂ ಸತ್ಯ.

ಕಟು ಸತ್ಯಗಳು

೬. ʻಹೇಳಿದಂತೆ ನಡೆಯದಿದ್ದರೆ ಮಕ್ಕಳಿಗೆರಡು ಬಾರಿಸಿಬಿಡಿʼ. ಇದಂತೂ ಎಲ್ಲರೂ ಧಾರಾಳವಾಗಿ ಹೇಳುವ ಬಿಟ್ಟಿ ಉಪದೇಶ. ಆದರೆ, ಖಂಡಿತವಾಗಿ ಹೊಡೆಯುವುದು ಒಳ್ಳೆಯ ಐಡಿಯಾ ಅಲ್ಲವೇ ಅಲ್ಲ. ಪೆಟ್ಟು ತಿಂದರೆ ಮಕ್ಕಳು ಸರಿಯಾಗುತ್ತಾರೆ ಎಂಬುದು ಸುಳ್ಳು. ಬದಲಾಗಿ ಇದು ಮಕ್ಕಳ ಹಾಗೂ ನಿಮ್ಮ ಮಧ್ಯೆ ಕಂದಕವನ್ನೇ ಸೃಷ್ಟಿಸಬಹುದು. ಅವರನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಾಗಾಗಿ ತಪ್ಪುಗಳನ್ನು ಕಂಡಾಗ ಸರಿಯಾದ ರೀತಿಯಲ್ಲಿ ಸಂಯಮದಿಂದ ಅವರನ್ನು ತಿದ್ದಿ.

ಕಟು ಸತ್ಯಗಳು

೭. ʻಅವರ ಆಯ್ಕೆಗಳನ್ನು ಅವರೇ ಮಾಡಲಿʼ. ಈ ಉಪದೇಶ ಒಂದು ರೀತಿಯಲ್ಲಿ ಸರಿಯಾಗಿ ಕಂಡರೂ, ಮಕ್ಕಳಿಗೆ ಯಾವುದೇ ಆಯ್ಕೆಯಲ್ಲಿ ಹೆತ್ತವರ ಸಹಕಾರ ಅಗತ್ಯ. ಅವರು ಆಯ್ಕೆಯಲ್ಲಿ ತಪ್ಪಿದಾಗ ತಿದ್ದಿ ನಡೆಸಲು ಹೆತ್ತವರು ಬೇಕು. ಹಾಗಾಗಿ ಅವರ ಆಯ್ಕೆಯನ್ನು ಗೌರವಿಸುತ್ತಲೇ, ಅಗತ್ಯ ಸಂದರ್ಭಗಳಲ್ಲಿ ಹೆತ್ತವರೇ ಕೈಹಿಡಿದು ಮುನ್ನಡೆಸಬೇಕು.

ಕಟು ಸತ್ಯಗಳು

೮. ʻಮಕ್ಕಳ ಎದುರು ನೀವು ಫೇಲ್‌ ಆಗಬೇಡಿʼ. ಇದೂ ಕೂಡಾ ಅಂಥದ್ದೇ ಒಂದು ಉಪದೇಶ. ಮಕ್ಕಳ ಎದುರಲ್ಲಿ ಸದಾ ಹೀರೋ ಆಗಿ ಕಾಣಿಸಲು ಸಾಧ್ಯವಿಲ್ಲ. ಹಾಗೆಂದು ಪ್ರತಿ ಬಾರಿಯೂ ಹೀಗೇ ಕಾಣಿಸಿಕೊಳ್ಳಿ ಎಂದಲ್ಲ. ಆದರೂ ಮಕ್ಕಳ ಜೊತೆಗೆ ತಾವು ಮಾಡಿದ ಕೆಲವು ತಪ್ಪುಗಳು, ಎಡವಿದ್ದನ್ನು ಹಂಚಬಹುದು. ಹೀಗಿದ್ದಾಗ ವಾಸ್ತವದ ಅರಿವು ಅವರಿಗಾಗುತ್ತದೆ.

ಇದನ್ನೂ ಓದಿ: Kids food: ಮಕ್ಕಳು ಲಂಬೂಜಿ ಆಗಬೇಕಾದರೆ ಅವರ ಆಹಾರದಲ್ಲಿ ಇವು ಇರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ಪುದಿನಾದಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿ ಇರಬಹುದು. ಈ ಕುರಿತ (Mint leaf water) ವಿವರಣೆ ಇಲ್ಲಿದೆ.

VISTARANEWS.COM


on

Mint Leaf Water
Koo

ಬೇಸಿಗೆ ಕಾಲಕ್ಕೂ ಪುದಿನಕ್ಕೂ ಚಂದನೆಯ ಬಾಂಧವ್ಯವಿದೆ. ಇದರಲ್ಲಿರುವ ರಿಫ್ರೆಶಿಂಗ್‌ ಗುಣ ಬೇಸಿಗೆಯಲ್ಲಿ ತಂಪಾದ ಅನುಭೂತಿ ನೀಡುತ್ತದೆ. ಪುದಿನವನ್ನು ಚಟ್ನಿ, ಸಲಾಡ್‌, ಕರಿ, ಪೇಯಗಳಲ್ಲಿ ಬಳಸಿದರೆ ಸಾಕು, ತನ್ನಲ್ಲಿರುವ ಅಪರೂಪದ ಘಮವನ್ನು ಅದು ಈ ಎಲ್ಲ ಆಹಾರಕ್ಕೆ ನೀಡಿ ಬೇರೆಯದೇ ಬಗೆಯ ಫೀಲ್‌ ನೀಡುತ್ತದೆ. ಇಂಥ ಪುದಿನದಿಂದ ನಮಗೆ ಆರೋಗ್ಯದ ಉಪಯೋಗಗಳೂ ಬೇಕಾದಷ್ಟಿದೆ. ಚರ್ಮದ ಆರೋಗ್ಯ, ರೋಗನಿರೋಧಕತೆ, ಜೀರ್ಣಕ್ರಿಯೆ, ದಂತಕಾಂತಿ ಸೇರಿದಂತೆ ಅನೇಕ ಉಪಯೋಗಗಳು ನಮಗೆಲ್ಲಾ ಗೊತ್ತಿದೆ. ಆದರೆ, ಪುದಿನವನ್ನು ನಿತ್ಯವೂ ಉಪಯೋಗಿಸುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿರುಬಹುದು. ಕೇವಲ ಒಂದು ಪುದಿನ ಇನ್‌ಫ್ಯೂಸ್ಡ್‌ ವಾಟರ್‌ನಿಂದ ಪುದಿನದ ಲಾಭಗಳನ್ನು ಪಡೆಯಬಹುದು. ಅಧವಾ ಪುದಿನ ಹಾಗೂ ನಿಂಬೆಹಣ್ಣಿನ ರಸವನ್ನು ಸೇರಿಸಿದ ನೀರನ್ನು, ನೀರಿನ ಬದಲಾಗಿಯೂ ದಿನಕ್ಕೊಮ್ಮೆ ಕುಡಿಯಬಹುದು. ಬನ್ನಿ, ಪುದಿನ ನೀರನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳಿವೆ (Mint leaf water) ಎಂಬುದನ್ನು ನೋಡೋಣ.

drink water

ದೇಹಕ್ಕೆ ನೀರು ಅಗತ್ಯ

ಬೇಸಿಗೆಯಲ್ಲಿ ದೇಹಕ್ಕೆ ನೀರು ಎಲ್ಲಕ್ಕಿಂತ ಹೆಚ್ಚು ಅಗತ್ಯ. ಹೈಡ್ರೇಟೆಡ್‌ ಆಗಿರುವುದು ಆರೋಗ್ಯಕ್ಕೆ ಮೂಲ. ಆದರೆ ಇಡೀ ದಿನ ಇಷ್ಟು ನೀರು ಕುಡಿಯಬೇಕು ಎಂಬ ಒತ್ತಡಕ್ಕೆ ಬಿದ್ದು ಖಾಲಿ ನೀರು ಕುಡಿಯುವುದು ಹೇಗೆ ಎಂಬ ಸಮಸ್ಯೆ ಎದುರಿಸುವ ಮಂದಿಗೆ ಪುದಿನ ನೀರು ಒಳ್ಳೆಯದು. ಪುದಿನವನ್ನು ಕೈಯಲ್ಲಿ ಕೊಂಚ ರಸ ಬಿಡುವ ಹಾಗೆ ಹಿಸುಕಿ ನೀರಿಗೆ ಹಾಕಿಟ್ಟು ಆಗಾಗ ಅವಶ್ಯಕತೆ ಬಿದ್ದಾಗ ಹೀರುತ್ತಿರಬಹುದು. ಇದರಿಂದ ಪುದಿನದ ಸತ್ವಗಳೂ ದೇಹಕ್ಕೆ ಸೇರಿ, ಬೇಸಿಗೆಯಲ್ಲಿ ರಿಫ್ರೆಶಿಂಗ್‌ ಅನುಭವ ನೀಡುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆಗೆ ಪುದಿನ ಒಳ್ಳೆಯದು

ಜೀರ್ಣಕ್ರಿಯೆಗೆ ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಮೆಂಥಾಲ್‌ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಿಗೆ ಅನುಕೂಲಕರ ವಾತಾವರಣ ಇದು ನಿರ್ಮಿಸುವುದರಿಂದ ಸಹಜವಾಗಿ, ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯ ಎಲ್ಲ ಬಗೆಯ ಸಮಸ್ಯೆಗಳಿಗೆ ಪುದಿನದಲ್ಲಿ ಉತ್ತರವಿದೆ. ಹೊಟ್ಟೆ ಉಬ್ಬರಿಸಿದಂತಾಗುವುದು, ಗ್ಯಾಸ್‌, ಹೊಟ್ಟಿಯಲ್ಲಿ ಕಿಚ್ಚು ಹೊತ್ತಿಸಿದಂತಃ ಅನುಭವ, ಅಸಿಡಿಟಿ ಈ ಎಲ್ಲ ಸಮಸ್ಯೆಗಳಿಗೆ ಪುದಿನ ಸಮಾಧಾನಕರ ಉತ್ತರ ನೀಡುತ್ತದೆ.

weight loss

ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ

ತೂಕ ಇಳಿಸುವಲ್ಲಿ ಪುದಿನದ ಪಾತ್ರ ದೊಡ್ಡದು. ಪುದಿನದ ಎಲೆ ಜೀರ್ಣಕ್ರಿಯೆಯ ಕಿಣ್ವಗಳಿಗೆ ಸೂಕ್ತ ವಾತಾವರಣ ನಿರ್ಮಾಣ ಮಾಡಿಕೊಡುವುದರಿಂದ ಜೀರ್ಣಕ್ರಿಯೆ ಸಹಜವಾಗಿ ಆಗುತ್ತದೆ. ಜೊತೆಗೆ ತೂಕ ಇಳಿಕೆಗೆ ನೆರವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆರೋಗ್ಯಕರವಾದ ರೀತಿಯಲ್ಲಿ ಆದರೆ ತೂಕ ಇಳಿಕೆಯೂ ಆಗುತ್ತದೆ. ಸರಿಯಾದ ಆಹಾರದ ಜೊತೆಜೊತೆಗೇ, ಪುದಿನ ನೀರನ್ನು ಆಗಾಗ ಕುಡಿಯುವುದರಿಂದ ತೂಕ ಇಳಿಕೆಯ ಪ್ರಯತ್ನವನ್ನು ಮಾಡಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ರೋಗ ನಿರೋಧಕ ಶಕ್ತಿ

ಪುದಿನದಲ್ಲಿರುವ ಇನ್ನೊಂದು ಅತ್ಯಂತ ಅಮೂಲ್ಯವಾದ ಶಕ್ತಿ ಎಂದರೆ ಅದರಲ್ಲಿರುವ ರೋಗ ನಿರೋಧಕ ಶಕ್ತಿ. ಪುದಿನ ನೀರನ್ನು ಆಗಾಗ ಕುಡಿಯುತ್ತಿರುವುದರಿಂದ ನಾವು ಸೇವಿಸುವ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳೂ ದೇಹದಲ್ಲಿ ಹೀರಲ್ಪಟ್ಟು ದೇಹದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಪುದಿನದಲ್ಲಿ ಆಂಟಿ ಇನ್ಫ್ಲಮೇಟರಿ ಗುಣಗಳು ಇರುವುದರಿಂದ ದೇಹಕ್ಕೆ ಎಲ್ಲ ವಿಧದಲ್ಲೂ ಇದು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

Skin Care

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಪುದಿನ ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಚರ್ಮದ ರಂಧ್ರಗಳನ್ನು ಬಿಗಿಯಾಗಿಸಲು, ಚರ್ಮಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಸಲು, ಪುದಿನ ಬಹಳ ಒಳ್ಳೆಯದು. ಪುದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಚರ್ಮದ ಯಾವುದೇ ಸಮಸ್ಯೆಗಳಿದ್ದರೂ ಉತ್ತರ ನೀಡುತ್ತದೆ. ಮೊಡವೆ, ಕಜ್ಜಿಗಳು, ಬೆವರು ಸಾಲೆ, ಚರ್ಮದ ಸುಕ್ಕು, ನಿರಿಗೆಗಳು, ಒಣಕಕಲು ಚರ್ಮ, ಎಣ್ಣೆಯುಕ್ತ ಚರ್ಮ, ಕಪ್ಪು ಕಲೆ ಇತ್ಯಾದಿ ಇತ್ಯಾದಿ ಮುಖದ ಚರ್ಮದ ಸಮಸ್ಯೆಗಳೂ ಕೂಡಾ ಪುದಿನ ನೀರು ಕುಡಿಯುವುದರಿಂದ ಪರಿಹಾರ ಪಡೆಯುತ್ತದೆ.

Continue Reading

ಆರೋಗ್ಯ

Protein Powder: ಫಿಟ್‌ನೆಸ್‌ಗಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುತ್ತೀರಾ? ಹಾಗಿದ್ದರೆ ಎಚ್ಚರ!

ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಔಟ್‌ಲೆಟ್‌ಗಳಿಂದ ಪ್ರೊಟೀನ್‌ ಪೌಡರನ್ನು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ? ಈ ಬಗ್ಗೆ (Protein Powder) ಇಲ್ಲಿದೆ ಮಾಹಿತಿ.

VISTARANEWS.COM


on

Protein Powder
Koo

ಬಹಳಷ್ಟು ಮಂದಿಗೆ ನಿತ್ಯವೂ ಪ್ರೊಟೀನ್‌ ಪುಡಿಗಳಿಂದ (Protein Powder) ಮಾಡಿದ ಶೇಕ್‌ಗಳನ್ನು ಕುಡಿಯುವ ಅಭ್ಯಾಸವಿರಬಹುದು. ಜಿಮ್‌ಗೆ ಹೋಗುವ, ವ್ಯಾಯಾಮ ಮಾಡುವ, ತೂಕ ಇಳಿಸುವ ಪ್ರಯತ್ನದಲ್ಲಿರುವ ಎಲ್ಲ ಮಂದಿಯೂ ಈಗ ಯಾವ ವೈದ್ಯರ ಸಲಹೆಯನ್ನೂ ಕೇಳದೆ ನೇರವಾಗಿ ಪ್ರೊಟೀನ್‌ ಪೌಡರ್‌ಗಳು ಸಿಗುವ ಔಟ್‌ಲೆಟ್‌ಗಳಿಂದ ಪೌಡರನ್ನು ಕೊಂಡು ತಂದು ಸೇವಿಸಲು ಆರಂಭಿಸುತ್ತಾರೆ. ಮಾಂಸಖಂಡಗಳ ಬಲವರ್ಧನೆಗೆ, ಪ್ರೊಟೀನ್‌ ಡಯಟ್‌ನಲ್ಲಿರುವ ಮಂದಿ, ಅಥ್ಲೀಟ್‌ಗಳು ಸೇರಿದಂತೆ ಎಲ್ಲರೂ ಇತ್ತೀಚೆಗೆ ಪ್ರೊಟೀನ್‌ ಪೌಡರ್‌ ಶೇಕ್‌ ಮಾಡಿ ಕುಡಿಯುವ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆಯೋ ಅಥವಾ ಇದರಿಂದ ಅಡ್ಡ ಪರಿಣಾಮಗಳೇನಾದರೂ ಇವೆಯೇ ಎಂಬ ಯೋಚನೆಯನ್ನೂ ಮಾಡುವುದಿಲ್ಲ. ಇತ್ತೀಚೆಗೆ ಹೆಚ್ಚುತ್ತಿರುವ ಈ ಟ್ರೆಂಡ್‌ಗೆ ಉತ್ತರವಾಗಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌- ನ್ಯಾಷನಲ್‌ ಆಫ್‌ ನ್ಯೂಟ್ರಿಷನ್‌ ಇದೀಗ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದು ಪ್ರೊಟೀನ್‌ ಪೌಡರುಗಳ ಕುರಿತಾದ ಆಘಾತಕಾರಿ ಸತ್ಯವನ್ನು ವಿವರಿಸಿದ್ದು, ಇದರ ಅಧಿಕ ಸೇವನೆಯಿಂದ ಯಾವೆಲ್ಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಎಚ್ಚರವನ್ನೂ ನೀಡಿದೆ. ಅಥ್ಲೀಟ್‌ಗಳೂ ಸೇರಿದಂತೆ, ಕ್ರೀಡಾಳುಗಳಿಗೆ ನಿತ್ಯವೂ ಆಹಾರ ಮೂಲಗಳಿಂದಲೇ ಪ್ರೊಟೀನ್‌ ನಮ್ಮ ದೇಹಕ್ಕೆ ಸೇರುವಂತೆ ಮಾಡಬೇಕು ಎಂಬ ನಿಯಮಾವಳಿ ಇದೆ. ಸಪ್ಲಿಮೆಂಟ್‌ಗಳ ಮೂಲಕ ಪ್ರೊಟೀನ್‌ ಅಥವಾ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಮಾಡುವುದು ಉತ್ತಮ ವಿಧಾನವಲ್ಲ ಎಂದು ಇದು ಹೇಳಿದೆ. ನಿತ್ಯವೂ ಹೀಗೆ ಪ್ರೊಟೀನ್‌ ಪುಡಿಗಳು ಹಾಗೂ ಇತರ ಸಪ್ಲಿಮೆಂಟ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುತ್ತಲೇ ಇದ್ದರೆ, ಎಲುಬಿನಲ್ಲಿ ಖನಿಜಾಂಶಗಳ ನಷ್ಟ ಸೇರಿದಂತೆ ಕಿಡ್ನಿಯ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚು ಎಂದು ಇದು (Protein Powder) ಎಚ್ಚರಿಕೆ ನೀಡಿದೆ.

Shaking protein powder

ಝೀರೋ ಫಿಗರ್‌ ಆಸೆ

ಇದೀಗ ಮುಖ್ಯವಾಗಿ ಸಣ್ಣ ವಯಸ್ಸಿನ ಯುವಕ ಯುವತಿಯರು ದೇಹವನ್ನು ಝೀರೋ ಫಿಗರ್‌ ಮಾಡುವ ಆಸೆಯಿಂದ, ಬಳುಕುವ ಬಳ್ಳಿಯಂತಾಗಲು, ಮಾಂಸಖಂಡಗಳ ಬಲವರ್ಧನೆಗೆ ಪ್ರೊಟೀನ್‌ ಪುಡಿಗಳ ಸೇವನೆ ನಿತ್ಯವೂ ಮಾಡುವುದು ಹೆಚ್ಚಾಗುತ್ತಿದೆ. ಸುಲಭವಾಗಿ ಸಿಗುವ, ಯಾವುದೇ ಕಷ್ಟವಿಲ್ಲದೆ ದುಡ್ಡು ಕೊಟ್ಟರೆ ಸಿಗುವ ಈ ದುಬಾರಿ ಪುಡಿಗಳ ಸೇವನೆಯಿಂದ ಬಹುಬೇಗನೆ ತಾವಂದುಕೊಂಡ ದೇಹವನ್ನು ಪಡೆಯುವುದು ಸಾಧ್ಯವಾಗುತ್ತದೆ ಎಂಬುದೇ ಇದರ ಹಿಂದಿನ ಈ ಮಟ್ಟಿನ ಆಕರ್ಷಣೆ. ಆದರೆ, ಇಂತಹ ಸಂಸ್ಕರಿಸಿ ಪ್ರೊಟೀನ್‌ ಪುಡಿಗಳು ಎಷ್ಟೇ ನೈಸರ್ಗಿಕ ಮೂಲಗಳಿಂದ ತಯಾರಿಸಿದ್ದು ಎಂಬ ಸ್ಪಷ್ಟಣೆ ನೀಡಿದರೂ ಅದರಿಂದ ಅಡ್ಡ ಪರಿಣಾಮಗಳಿದ್ದೇ ಇವೆ ಎಂದಿದೆ. ಭಾರತದಲ್ಲಿ ಈ ಟ್ರೆಂಡ್‌ ದಿನೇ ದಿನೇ ಹೆಚ್ಚಾಗುತ್ತಿದ್ದು, 2023ರಲ್ಲಿ ಪ್ರೊಟೀನ್‌ ಪೌಡರ್‌ ಮಾರುಕಟ್ಟೆ 33000 ಕೋಟಿ ವಹಿವಾಟು ನಡೆಸಿದ್ದು, ಪ್ರತೀ ವರ್ಷ ಇದು ಶೇ.15.8 ರಷ್ಟು ವೃದ್ಧಿ ಕಾಣುತ್ತಿದೆ. 2037ರ ವೇಳೆಗೆ ಇದು 1.28 ಕೋಟಿ ವಹಿವಾಟು ನಡೆಸುವ ಕ್ಷೇತ್ರವಾಗಿ ಇದು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

ವಿಷಕಾರಿ ಅಂಶಗಳು ಪತ್ತೆ

ಭಾರತದಲ್ಲಿರುವ ಪ್ರೊಟೀನ್‌ ಪೌಡರ್‌ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್‌ಗಳ ಪೈಕಿ ಶೇ.70ರಷ್ಟು ಬ್ರ್ಯಾಂಡ್‌ಗಳು ತಪ್ಪಾಗಿ ತಮ್ಮನ್ನು ಲೇಬಲ್‌ ಮಾಡಿಕೊಂಡಿದ್ದು ಜನರನ್ನು ಹಾದಿ ತಪ್ಪಿಸುತ್ತಿವೆ. ಶೇ.14ರಷ್ಟು ಬ್ರ್ಯಾಂಡ್‌ಗಳಲ್ಲಿ ವಿಷಕಾರಿ ಅಂಶಗಳಿದ್ದು, ಶೇ.8ರಷ್ಟು ಬ್ರ್ಯಾಂಡ್‌ಗಳಲ್ಲಿ ಕ್ರಿಮಿನಾಶಕಗಳ ಅಂಶಗಳೂ ಇದ್ದಿರುವುದು ಪತ್ತೆಯಾಗಿವೆ. ಹರ್ಬಲ್‌ ಪ್ರೊಟೀನ್‌ಗಳೆಂಬ ಹೆಸರಿನಲ್ಲಿರುವ ಪುಡಿಗಳ ಪರೀಕ್ಷೆ ಸರಿಯಾಗಿ ನಡೆಯದೆ, ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಹೀಗಾಗಿ, ಇವೆಲ್ಲವುಗಳ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದಕ್ಕಿಂತ ಹೆಚ್ಚು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೇ ಬೀರುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಆಘಾತಕಾರಿ ಸುದ್ದಿ ಎಂದರೆ, ಆಕ್ಟಿವ್‌ ಆಗಿ ಚುರುಕಾಗಿರುವ ಆರೋಗ್ಯವಂತ ಮಂದಿಯೂ ಇಂದು ವೈದ್ಯರ ಸಲಹೆ ಪಡೆಯದೆ ನೇರವಾಗಿ ಪ್ರೊಟೀನ್‌ ಪುಡಿಗಳ ಸೇವನೆ ಮಾಡುವ ಮೂಲಕ ದೇಹದ ಆರೋಗ್ಯವನ್ನು ಕೈಯಾರೆ ಹಾಳು ಮಾಡುತ್ತಿದ್ದಾರೆ. ಇಂತಹ ಹಲವು ಪುಡಿಗಳಲ್ಲಿ ಸ್ಟೀರಾಯ್ಡ್‌ ಕೂಡಾ ಇರುವ ಸಂಭವಗಳಿರುವುದರಿಂದ ವೃಥಾ ದೇಹವನ್ನು ಕೆಟ್ಟ ಪರಿಸ್ಥಿತಿಗೆ ದೂಡುತ್ತಿರುವುದು ನಿಜಕ್ಕೂ ಆಘಾತಕಾರಿ ಎಂದು ವರದಿ ನೀಡಿರುವ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Continue Reading

ಫ್ಯಾಷನ್

Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಇದೀಗ ಎಂಬ್ರಾಯ್ಡರಿ, ಸಿಕ್ವೀನ್ಸ್ ಹಾಗೂ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಆಕರ್ಷಕ ಡಿಸೈನ್‌ಗಳಲ್ಲಿ ಎಂಟ್ರಿ ನೀಡಿವೆ. ಏನಿದು ಕಟ್‌ ವರ್ಕ್ ಸೀರೆಗಳು? ಎಂಬುದರ ಬಗ್ಗೆ ಫ್ಯಾಷನಿಸ್ಟ್‌ಗಳು (Saree Fashion) ಇಲ್ಲಿ ಡಿಟೇಲ್ಸ್ ನೀಡಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಜರೀನ್‌ ಖಾನ್‌, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಟ್‌ ವರ್ಕ್ ಬಾರ್ಡರ್‌ ಪಾರ್ಟಿವೇರ್‌ ಸೀರೆಗಳು (Saree Fashion) ಇದೀಗ ಮಾನಿನಿಯರ ಮನ ಗೆದ್ದಿವೆ. ನೋಡಲು ಆಕರ್ಷಕವಾಗಿ ಕಾಣುವ ಈ ಸೀರೆಗಳು ಪಾರ್ಟಿವೇರ್‌ ಡಿಸೈನರ್‌ ಸೀರೆಗಳ ಕೆಟಗರಿಯಲ್ಲಿಬಿಡುಗಡೆಗೊಂಡಿವೆ. “ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಡಿಸೈನ್‌ನಲ್ಲಿ ಅಥವಾ ಹೊಸ ರೂಪದಲ್ಲಿ ಪಾರ್ಟಿವೇರ್‌ ಸೀರೆಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಕೆಲವು ಜಗಮಗಿಸುವ ಪ್ರಿಂಟ್ಸ್‌ನಲ್ಲಿ ವಿನ್ಯಾಸಗೊಂಡಿದ್ದರೇ, ಇನ್ನು ಕೆಲವು ಡಿಸೆಂಟ್‌ ಲುಕ್‌ ನೀಡುವಂತವು, ಮತ್ತೆ ಕೆಲವು ಪ್ರಿಂಟೆಡ್‌ ಶೈಲಿಯವು ಚಾಲ್ತಿಗೆ ಬರುತ್ತವೆ. ಮಹಿಳೆಯರು ಕೂಡ ತಮ್ಮ ಮನೋಭಿಲಾಷೆಗೆ ತಕ್ಕಂತೆ ಸೀರೆಗಳ ಆಯ್ಕೆ ಮಾಡುತ್ತಾರೆ. ನೋಡಲು ಡಿಸೆಂಟಾಗಿಯೂ ಕಾಣಿಸಬೇಕು. ಹೆಚ್ಚು ಎದ್ದು ಕಾಣುವಂತಹ ಡಿಸೈನ್‌ ಇರಬಾರದು, ಆಕರ್ಷಕ ಡಿಸೈನ್‌ ಕೂಡ ಇರಬೇಕು ಎನ್ನುವವರು ಈ ರೀತಿಯ ಸಾದಾ ಸೀರೆ ಅದರಲ್ಲಿ ಕಟ್‌ ವರ್ಕ್ ಬಾರ್ಡರ್‌ ಇರುವಂತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂತಹ ಮಹಿಳೆಯರಿಗೆಂದೇ ನಾನಾ ಶೈಲಿಯ ಕಟ್‌ ವರ್ಕ್ ಬಾರ್ಡರ್‌ ಸೀರೆಗಳು ಹಲವು ವಿನ್ಯಾಸದಲ್ಲಿ ಬಂದಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫ ರ್ಟ್ ಜೀವಿತಾ. ಅವರ ಪ್ರಕಾರ, ಈ ಶೈಲಿಯ ಬಾರ್ಡರ್‌ ಸೀರೆಗಳು ಯೂನಿಕ್‌ ಲುಕ್‌ ನೀಡುತ್ತವಂತೆ.

Saree Fashion

ಏನಿದು ಕಟ್‌ ವರ್ಕ್ ಬಾರ್ಡರ್ ಸೀರೆ?

ಅಂಚು ಅಂದರೇ, ಬಾರ್ಡರ್ ಕಟ್‌ ಆಗಿರುವಂತಹ ವಿನ್ಯಾಸಗೊಂಡಿರುವಂತಹ ಶೈಲಿಯಲ್ಲಿರುತ್ತವೆ. ಇತರೇ ಬಾರ್ಡರ್‌ಗಳಂತೆ ಒಂದೇ ಲೈನ್‌ನಲ್ಲಿರುವುದಿಲ್ಲ! ಕೆಲವು ಅಟ್ಯಾಚ್‌ ಆದಂತೆ ಕಾಣಿಸುತ್ತವೆ. ಈ ಕಟ್ವರ್ಕ್ ಡಿಸೈನ್‌ ಇಡೀ ಸೀರೆಯ ಲುಕ್ಕನ್ನು ಬದಲಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Saree Fashion

ಟ್ರೆಂಡಿಯಾಗಿರುವ ಕಟ್‌ ವರ್ಕ್ ಬಾರ್ಡರ್ ಪಾರ್ಟಿವೇರ್‌ ಸೀರೆ

ಇದೀಗ ಬಾರ್ಡರ್‌ನಲ್ಲಿ ಹ್ಯಾಂಡ್‌ ವರ್ಕ್ ಅಥವಾ ಮೆಷಿನ್‌ ವರ್ಕ್ ಇರುವಂತಹ ನಾನಾ ಬಗೆಯ ಎಂಬ್ರಾಯ್ಡರಿ ಡಿಸೈನ್ಸ್, ಬಗೆಬಗೆಯ ಶೇಡ್‌ನ ಅಥವಾ ಮಾನೋಕ್ರೋಮ್‌ ವರ್ಣದ ಸಿಕ್ವೀನ್ಸ್ ಹಾಗೂ ವೆರೈಟಿ ಎಂಬಾಲಿಶ್ಡ್ ಡಿಸೈನ್‌ ಇರುವಂತಹ ಕಟ್‌ ವರ್ಕ್ ಬಾರ್ಡರ್ ಪಾರ್ಟಿ ಸೀರೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

Saree Fashion

ಕಟ್‌ ವರ್ಕ್ ಬಾರ್ಡರ್ ಸೀರೆ ಬಗ್ಗೆ ತಿಳಿದಿರಬೇಕಾದ 3 ಸಂಗತಿಗಳು

  • ಜಾರ್ಜೆಟ್ ಸೀರೆಯಲ್ಲಿ ಕಟ್‌ ವರ್ಕ್ ಡಿಸೈನ್ಸ್ ಹೆಚ್ಚು ಹೈಲೈಟಾಗುತ್ತವೆ.
  • ಸೀರೆಯ ಫ್ಯಾಬ್ರಿಕ್‌ ನೋಡಿ, ಖರೀದಿಸುವುದು ಉತ್ತಮ.
  • ಸಾದಾ ಸೀರೆಯಲ್ಲಾದಲ್ಲಿ ಈ ಕಟ್‌ ವರ್ಕ್ ಡಿಸೈನ್ ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

Continue Reading

ಆರೋಗ್ಯ

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

ಮೌನವ್ರತವೆಂದರೆ ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾಗುತ್ತದೆ. ಆದರೆ ಮೌನಕ್ಕೂ ಚಿಕಿತ್ಸಕ ಗುಣವಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಇದು ಗುಣವಾಗುವುದಕ್ಕೆ ನೆರವಾಗುತ್ತದೆ. ಹಾಗಾಗಿ ಸದಾ ವಟವಟ ಮಾಡುವವರು ನೀವಾದರೆ, ಆಗೀಗ ಮೌನವ್ರತ ಇರಿಸಿಕೊಳ್ಳಿ (Speech Fasting), ಒಳ್ಳೆಯದು!

VISTARANEWS.COM


on

Speech Fasting
Koo

ಇಡೀ ಜಗತ್ತು ಸಂವಹನದ ಸೂತ್ರದಿಂದ ಬಂಧಿಸಲ್ಪಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇರಲಿ, ಮುಖಾಮುಖಿ ಭೇಟಿ ಇರಲಿ, ಅಂತೂ ಸಂವಹನ ನಡೆಯುತ್ತಲೇ ಇರಬೇಕು. ಅದರಲ್ಲೂ ಮಾತಿಗೆ ಕೂತರೆ ಸಾಮಾನ್ಯಕ್ಕೆ ನಿಲ್ಲಿಸುವುದಿಲ್ಲ ನಾವು. ಧ್ವನಿಪೆಟ್ಟಿಗೆಯನ್ನು ಶೋಷಿಸುತ್ತಲೇ ಇರುತ್ತೇವೆ. ನಮ್ಮ ದೇಹದ ಉಳಿದೆಲ್ಲ ಭಾಗಗಳಂತೆ ಧ್ವನಿ ಪೆಟ್ಟಿಗೆಗೂ ವಿಶ್ರಾಂತಿ ಬೇಕಾಗುತ್ತದೆ. ಅವಿಶ್ರಾಂತವಾಗಿ ಅದನ್ನು ದುಡಿಸುತ್ತಿದ್ದರೆ ಧ್ವನಿಪೆಟ್ಟಿಗೆಗೂ ಕಷ್ಟ ತಪ್ಪಿದ್ದಲ್ಲ. ಹಾಗಾಗಿಯೇ ಹಳೆಯ ಜನಗಳು ಹಲವಾರು ವ್ರತಗಳ ಜೊತೆಗೆ ʻಮೌನವ್ರತʼವನ್ನೂ ಆಗೀಗ ಇರಿಸಿಕೊಳ್ಳುತ್ತಿದ್ದರು. ಮೌನವ್ರತ ಎಂಬುದು ಕೆಲವೊಮ್ಮೆ ಹಾಸ್ಯಕ್ಕೆ ವಸ್ತುವಾದರೂ, ಇದರಿಂದ ಆರೋಗ್ಯಕ್ಕೆ ಲಾಭಗಳಿರುವುದು ಹೌದು. ಏನು ಪ್ರಯೋಜನ (Speech Fasting) ಮೌನದಿಂದ?

young woman covering closed mouth with hands.

ಏನು ಹಾಗೆಂದರೆ?

ಯಾವುದೇ ಧಾರ್ಮಿಕ ಆಚರಣೆಯ ಸಲುವಾಗಿ ಮಾಡುವಂಥ ವ್ರತವಲ್ಲ ಇದು. ಇದನ್ನು ʻವೋಕಲ್‌ ರೆಸ್ಟ್‌ʼ ಅಥವಾ ಧ್ವನಿಪೆಟ್ಟಿಗೆಗೆ ನೀಡುವ ವಿಶ್ರಾಂತಿ ಎಂದು ಕರೆಯಲಾಗುತ್ತದೆ. ನಿಗದಿತ ಸಮಯದಲ್ಲಿ ಮಾತನಾಡದೆ, ಧ್ವನಿಪೆಟ್ಟಿಗೆಯನ್ನು ಯಾವುದಕ್ಕೂ ಬಳಸದೆ ಇರುವುದು ಎಂದು ಅರ್ಥ. ಇದರಿಂದ ಧ್ವನಿಪೆಟ್ಟಿಗೆಯ ಸುಸ್ತು, ಆಯಾಸವೆಲ್ಲ ಕಡಿಮೆಯಾಗಿ, ದುರಸ್ತಿಯಾಗಲು ಅನುಕೂಲವಾಗುತ್ತದೆ. ಹಾಡುಗಾರರು, ನಟರು, ಪ್ರವಚನ ನೀಡುವವರು, ಉಪನ್ಯಾಸಕರು ಇತ್ಯಾದಿ ಧ್ವನಿಯನ್ನೇ ಪ್ರಧಾನವಾಗಿ ಬಳಸುವವರು ಈ ತಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾದೀತು. ಹಾಡು, ಮಾತು, ಪಿಸುಮಾತಿಗೂ ಸದಾ ಕಾಲ ಕಂಪಿಸುತ್ತಲೇ ಇರುವ ಧ್ವನಿಪೆಟ್ಟಿಗೆಗೆ ಸುಸ್ತಾಗುತ್ತದೆ. ಇದರಿಂದ ಧ್ವನಿ ಬೀಳುವುದು, ಗಂಟಲು ಉಬ್ಬಿದಂತಾಗಿ ನೋವು ಕಾಣುವುದು ಸಾಮಾನ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಅದನ್ನು ವಿಶ್ರಾಂತಿಗೆ ದೂಡಿದಾಗ ಆಗುವ ಅನುಕೂಲಗಳು ಬಹಳಷ್ಟು.

Children speech therapy concept.

ಆರೋಗ್ಯ ಮರಳಿಸುತ್ತದೆ

ದೇಹದ ಯಾವುದೇ ಭಾಗಕ್ಕೂ ಅತಿ ಬಳಕೆಯಿಂದ ಆಯಾಸವಾದರೆ ವಿಶ್ರಾಂತಿ ಅಗತ್ಯವಾಗುತ್ತದೆ. ಹೀಗೆ ಮಾತಿನ ಉಪವಾಸದ ಮೂಲಕ ವಿಶ್ರಾಂತಿ ನೀಡುವುದರಿಂದ ಕಳೆದು ಹೋದ ಆರೋಗ್ಯ ಮರಳು ದೊರೆಯುವುದಕ್ಕೆ ಸಾಧ್ಯ. ಇದು ಧ್ವನಿಪೆಟ್ಟಿಗೆಯ ವಿಷಯದಲ್ಲೂ ಹೌದು. ಧ್ವನಿ ಪೆಟ್ಟಿಗೆಯಲ್ಲಿನ ಊತ, ಕಿರಿಕಿರಿ ಮುಂತಾದವುಗಳನ್ನು ಗುಣಪಡಿಸಬಹುದು.

ಗುಣಮಟ್ಟ ಸುಧಾರಣೆ

ಪದೇಪದೆ ಧ್ವನಿ ಬೀಳುತ್ತಿದ್ದರೆ, ಧ್ವನಿಯ ಗುಣಮಟ್ಟ ಹಾಳಾಗಿದ್ದರೆ, ಶೃತಿಯ ಸಮಸ್ಯೆಯಿದ್ದರೆ, ಸ್ಪಷ್ಟತೆ ಕಡಿಮೆಯಿದ್ದರೆ- ಇಂಥ ಎಲ್ಲ ಸಮಸ್ಯೆಗಳಿಗೆ ಮೌನ ಅಥವಾ ಧ್ವನಿಪೆಟ್ಟಿಗೆಯ ವಿಶ್ರಾಂತಿ ಮದ್ದಾಗಬಲ್ಲದು. ಧ್ವನಿ ಚಿಕಿತ್ಸೆಯಲ್ಲಿ ಮೌನವನ್ನೂ ಒಂದು ಸಾಧನವಾಗಿ ಬಳಸಲಾಗುತ್ತದೆ. ಇದರಿಂದ ಧ್ವನಿಯ ಗುಣಮಟ್ಟವನ್ನು ಗಣನೀಯವಾಗಿ ಸುಧಾರಿಸಲು ಸಾಧ್ಯವಿದೆ.

ಹಾನಿ ಕಡಿಮೆ

ಧ್ವನಿಪೆಟ್ಟಿಗೆಯನ್ನು ಅತಿಯಾಗಿ ಮತ್ತು ಸತತ ಬಳಸುವುದರಿಂದ ಧ್ವನಿಪೆಟ್ಟಿಗೆಯಲ್ಲಿ ನಾಡ್ಯೂಲ್‌ ಅಥವಾ ಪಾಲಿಪ್‌ಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಧ್ವನಿಪೆಟ್ಟಿಗೆಗೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ಚಿಕಿತ್ಸಕ ಉದ್ದೇಶದಿಂದ ಮೌನ ವಹಿಸುವುದರಿಂದ ಇಂಥ ಹಾನಿಯನ್ನು ಕಡಿಮೆ ಮಾಡಲು ಸಾಧ್ಯವಿದೆ.

Mood Enhancement Dark Chocolate Benefits

ಮಾನಸಿಕ ನೆಮ್ಮದಿ

ಹೊರಗಿನ ವ್ಯವಹಾರವನ್ನು ಕೊಂಚ ನಿಲ್ಲಿಸಿದರೆ, ಒಳಗಿನ ಮನೋವ್ಯಾಪಾರಕ್ಕೆ ತೆರೆದುಕೊಳ್ಳುವುದಕ್ಕೆ ಸಾಧ್ಯ. ನಮ್ಮ ಬಗ್ಗೆ ನಮಗೆ ತಿಳಿಯುವುದಕ್ಕೆ, ನಾವೇನು ಮಾಡುತ್ತಿದ್ದೇವೆ, ಅದನ್ನು ಯಾಕಾಗಿ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೌನ ಸಾಧನವಾಗಬಲ್ಲದು. ಮಾನಸಿಕ ನೋವುಗಳನ್ನು ದೂರಮಾಡಿ, ಸಾಂತ್ವನಕ್ಕೆ ನಮ್ಮೊಳಗೇ ಜಾಗ ಮಾಡಿಕೊಡುತ್ತದೆ.

ಇದನ್ನೂ ಓದಿ: Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಎಷ್ಟು ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಹೇಗೆ ಮಾಡಬೇಕು?

ಧ್ವನಿಗೆ ಎಷ್ಟು ಸಮಸ್ಯೆಯಾಗಿದೆ ಎಂಬುದರ ಮೇಲೆ ಎಷ್ಟು ಹೊತ್ತು ವಿಶ್ರಾಂತಿ ನೀಡಬೇಕು ಎಂಬುದನ್ನು ನಿರ್ಧರಿಸಬಹುದು. ದಿನದ ಒಂದಿಷ್ಟು ತಾಸು, ಇಡೀ ದಿನ, ವಾರದಲ್ಲಿ ಪ್ರತಿದಿನದ ಒಂದಿಷ್ಟು ಹೊತ್ತು- ಹೀಗೆ. ಮಾತಾಡುವುದಿಲ್ಲ ಎಂದರೆ ಗುನುಗಬಹುದು, ಪಿಸು ಮಾತಾಡಬಹುದು ಎಂದು ಅರ್ಥವಲ್ಲ, ಧ್ವನಿಪೆಟ್ಟಿಗೆಗೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಮೌನ ಮುರಿದ ಹೊತ್ತಿನಲ್ಲೂ ಸಿಕ್ಕಾಪಟ್ಟೆ ಕೂಗುವುದು, ಕಿರುಚುವುದು ಸಲ್ಲದು. ದಿನಕ್ಕೆ 3-4 ಲೀಟರ್‌ ನೀರು ಕುಡಿಯುವುದು ಅಗತ್ಯ. ಇದರಿಂದ ಧ್ವನಿಪೆಟ್ಟಿಗೆಗೆ ಬೇಕಾದ ತೇವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕೆಮ್ಮುವುದು, ಕ್ಯಾಕರಿಸುವುದು ಇತ್ಯಾದಿಗಳನ್ನು ಮಾಡುವ ಅಗತ್ಯವಿದ್ದರೆ, ನೆಗಡಿಯ ಸಮಸ್ಯೆಯಿದ್ದರೆ, ಬೆಚ್ಚಗಿನ ಉಪ್ಪು ನೀರಿನಿಂದ ಗಂಟಲನ್ನು ಚೆನ್ನಾಗಿ ಗಾರ್ಗಲ್‌ ಮಾಡುವುದು ಒಳ್ಳೆಯದು.

Continue Reading
Advertisement
Teenage boy arrested
ಕ್ರೈಂ12 mins ago

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

Janhvi Kapoor on paparazzi culture
ಬಾಲಿವುಡ್19 mins ago

Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್‌ ಮಾಡಿದ ಜಾನ್ವಿ ಕಪೂರ್!

Gold Rate Today
ಕರ್ನಾಟಕ24 mins ago

Gold Rate Today: ಇಂದೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ

Tiger attack
ಮೈಸೂರು44 mins ago

Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

IPL 2024 Final
ಕ್ರೀಡೆ48 mins ago

IPL 2024 Final: ಐಪಿಎಲ್​ ವಿನ್ನರ್​ & ರನ್ನರ್​ಗೆ ಸಿಗುವ ಮೊತ್ತವೆಷ್ಟು? ಈ ಬಾರಿ ಆರೆಂಜ್​ ಕ್ಯಾಪ್​, ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ?

Cyclone Remal
ದೇಶ49 mins ago

Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Dhruva Sarja KD Movie Release date announce
South Cinema1 hour ago

Dhruva Sarja: ಮತ್ತೆ ಗುಡ್‌ ನ್ಯೂಸ್‌ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Road Accident
ಉತ್ತರ ಕನ್ನಡ1 hour ago

Road Accident : ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

Monsoon 2024
ಮಳೆ2 hours ago

Monsoon 2024: ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

Sambavami Yuge Yuge song release By sruthi hariharan
ಟಾಲಿವುಡ್2 hours ago

Kannada New Movie: ʻಸಂಭವಾಮಿ ಯುಗೇ ಯುಗೇʼ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಿದ ನಟಿ ಶ್ರುತಿ ಹರಿಹರನ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌