Health Info | ಯಾವ ಪ್ರದೇಶದ ಯಾವ ವಸ್ತುಗಳು ಅತ್ಯುತ್ತಮ? ಇಲ್ಲಿದೆ ಮಾಹಿತಿ Vistara News
Connect with us

ಆರೋಗ್ಯ

Health Info | ಯಾವ ಪ್ರದೇಶದ ಯಾವ ವಸ್ತುಗಳು ಅತ್ಯುತ್ತಮ? ಇಲ್ಲಿದೆ ಮಾಹಿತಿ

ಕೆಲವು ಪ್ರದೇಶಗಳಲ್ಲಿ ಮಾತ್ರ ನಿರ್ದಿಷ್ಟ ವಸ್ತುಗಳು ಗುಣಮಟ್ಟದಲ್ಲಿ ಲಭ್ಯವಾಗುತ್ತವೆ. ಅಂಥ ಕೆಲವು ವಸ್ತುಗಳು ಮತ್ತು ಪ್ರದೇಶಗಳ ಮಾಹಿತಿ ಇಲ್ಲಿದೆ.

VISTARANEWS.COM


on

health
Koo

ಒಂದೊಂದು ಪ್ರದೇಶಗಳಲ್ಲಿ ಒಂದೊಂದು ವೈಶಿಷ್ಟ್ಯಗಳಿರುತ್ತವೆ. ಭೌಗೋಳಿಕವಾಗಿ ಆಯಾ ಪ್ರದೇಶಗಳ ಹವಾಮಾನ, ಮಣ್ಣಿನ ಗುಣ, ಬೀಳುವ ಚಳಿ-ಮಳೆಯಂಥ ಹಲವು ಕಾರಣಗಳಿಂದಾಗಿ ಈ ವೈಶಿಷ್ಟ್ಯಗಳು ಅದಕ್ಕೆ ಸಿದ್ಧಿಸಿರಬಹುದು. ಉದಾ, ಬ್ಯಾಡಗಿಯ ಮೆಣಸಿನಕಾಯಿ, ಊಟಿಯ ಕ್ಯಾರೆಟ್‌, ಕೊಡಗಿನ ಕಿತ್ತಳೆ, ಬಳ್ಳಾರಿಯ ಈರುಳ್ಳಿ ಮುಂತಾದವು. ಅಂಥ ಇನ್ನೂ ಕೆಲವು ವೈಶಿಷ್ಟ್ಯಗಳು ಇಲ್ಲಿವೆ.

health

ಕಾಶ್ಮೀರದ ಕೇಸರಿ
ಯಾವುದೇ ರಾಜನಿಗೆ ನೀಡಿದ ಬಿರುದಿನ ಬಗ್ಗೆ ಹೇಳುತ್ತಿರುವುದಲ್ಲ! ಬದಲಿಗೆ, ಕಾಶ್ಮೀರದಲ್ಲಿ ದೊರೆಯುವ ಘಮಘಮಿಸುವ ಕೇಸರಿಯ ದಳಗಳ ಮಾತಿದು. ಪಾಂಪೋರ್‌ನಲ್ಲಿ ದೊರೆಯುವ ಕೇಸರಿಗಳು ಅವುಗಳ ಪರಿಮಳ, ಬಣ್ಣ ಮತ್ತು ಔಷಧೀಯ ಗುಣಗಳಿಗಾಗಿ ಪ್ರಸಿದ್ಧ. ಅದರಲ್ಲೂ ಸೌಂದರ್ಯವರ್ಧನೆಯಲ್ಲಿ ಈ ಕೇಸರಿದಳಗಳ ಅತಿ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತವೆ. ತ್ವಚೆಯ ಮೇಲಿನ ಕಪ್ಪು ಕಲೆಗಳು, ಬಂಗು ಮತ್ತು ಸೂರ್ಯನ ಬಿಸಿಲಿಗೆ ಕಪ್ಪಾಗುವುದನ್ನು ತಡೆಯಲು ಕೇಸರಿ ಉತ್ತಮ ಔಷಧ. ಇದನ್ನು ಸತತ ಬಳಕೆ ಮಾಡುವುದರಿಂದ ತ್ವಚೆಯ ಕಾಂತಿ ಮತ್ತು ಆರೋಗ್ಯ ಖಂಡಿತಕ್ಕೂ ವೃದ್ಧಿಸುತ್ತದೆ.

health

ಬಿಕಾನೇರ್‌ನ ಲೋಳೆಸರ
ಕಡಿಮೆ ಮಳೆ ಬೀಳುವ ಒಣ ಪ್ರದೇಶಗಳಲ್ಲಿ ಮತ್ತು ಮರಳುಮಿಶ್ರಿತ ಮಣ್ಣಿನಲ್ಲಿ ಬೆಳೆಯುವ ಲೋಳೆಸರಕ್ಕೆ ಹೆಚ್ಚಿನ ಮಹತ್ವ. ರಾಜಸ್ಥಾನದ ಹವಾಮಾನ ಲೋಳೆಸರ ಅಥವಾ ಅಲೋವೇರಾ ಬೆಳೆಯಲು ಸೂಕ್ತವಾದದ್ದೂ ಹೌದು. ಬ್ಯಾಕ್ಟೀರಿಯಾ, ವೈರಸ್‌ ಮತ್ತು ನಂಜು ನಿರೋಧಕ ಗುಣಗಳಿಗಾಗಿ ಬಳಕೆಯಾಗುವ ಅಲೋವೇರಾ ಸುಟ್ಟಗಾಯಕ್ಕೆ ಪರಿಣಾಮಕಾರಿಯಾದ ಔಷಧ. ಚರ್ಮದ ಕೊಲಾಜಿನ್‌ ಹೆಚ್ಚಿಸಿ, ಸುಕ್ಕು ಬರುವುದನ್ನು ತಡೆಗಟ್ಟುವ ಸಾಮರ್ಥ್ಯವೂ ಲೋಳೆಸರಕ್ಕಿದೆ. ಲೋಳೆಸರದ ಒಳಗಿನ ಲೋಳೆ ಅಥವಾ ಜೆಲ್‌ನಂಥ ವಸ್ತುವಿನಲ್ಲಿ ವಿಟಮಿನ್‌ಗಳು, ಖನಿಜಗಳು, ಅಮೈನೋ ಆಸಿಡ್‌ಗಳ ಭಂಡಾರವೇ ಇದೆ. ಇದನ್ನು ಕೂದಲ ಪೋಷಣೆಗೂ ವ್ಯಾಪಕವಾಗಿ ಬಳಸಲಾಗುತ್ತದೆ.

health

ಊಟಿಯ ನೀಲಗಿರಿ ಎಣ್ಣೆ
ಹಲವು ರೀತಿಯಲ್ಲಿ ಪ್ರಯೋಜನಕ್ಕೆ ಬರುವ ನೀಲಗಿರಿ ಎಣ್ಣೆ ಉದಕಮಂಡಲ ಅಥವಾ ಊಟಿಯದ್ದಾದರೆ ಶ್ರೇಷ್ಠ. ಕೆಮ್ಮು, ನೆಗಡಿ, ಕಫ, ಅಸ್ತಮಾ ಅಥವಾ ಸೈನಸ್‌ ತೊಂದರೆಗಳಲ್ಲಿ ಅತ್ಯುತ್ತಮ ಉಮಶಮನವನ್ನು ನೀಲಗಿರಿ ಎಣ್ಣೆ ನೀಡುತ್ತದೆ. ನೋವು ನಿವಾರಕದಂತೆಯೂ ಕೆಲಸ ಮಾಡುತ್ತದೆ. ಬಿಸಿ ನೀರಿಗೆ ಒಂದೆರಡು ಹನಿ ನೀಲಗಿರಿ ಎಣ್ಣೆ ಹಾಕಿ, ಬಿಸಿ ಆವಿ ತೆಗೆದುಕೊಂಡರೆ ಸಾಕು ಉಸಿರಾಟ ಸರಾಗವಾಗುವುದಕ್ಕೆ. ಬಟ್ಟೆಗೆ ಒಂದೆರಡು ಹನಿ ಎಣ್ಣೆ ಹಾಕಿ, ಅದನ್ನು ಪದೇಪದೇ ಮೂಗಿಗೆ ಹಿಡಿದುಕೊಳ್ಳುವವರೂ ಇದ್ದಾರೆ.

health

ಲಾಥೂರಿನ ಅಶ್ವಗಂಧ
ಬರಗಾಲವೇ ಹೆಚ್ಚಿರುವ ಮಹಾರಾಷ್ಟ್ರದ ಲಾಥೂರ್‌ನಂಥ ಪ್ರದೇಶದಲ್ಲಿ ಬೆಳೆಯುವ ಅಶ್ವಗಂಧದ ಗುಣಗಳಿಗೆ ಕಿಮ್ಮತ್ತು ಹೆಚ್ಚು. ಮೂಳೆಗಳ ಮತ್ತು ಮಾಂಸಖಂಡಗಳ ಸಾಮರ್ಥ್ಯ ಹೆಚ್ಚಿಸುವ, ದೇಹಕ್ಕೆ ಶಕ್ತಿ ನೀಡುವ, ರೋಗನಿರೋಧಕ ಶಕ್ತಿ ಹೆಚ್ಚಿಸುವ, ಸಂಧಿವಾತ ಕಡಿಮೆ ಮಾಡುವ ಮತ್ತು ದೇಹದಲ್ಲಿ ಉರಿಯೂತ ತಗ್ಗಿಸುವ ಸದ್ಗುಣಗಳಿಗಾಗಿ ಅಶ್ವಗಂಧ ಪ್ರಸಿದ್ಧ. ಅದರ ಬೇರು, ಪುಡಿಗಳನ್ನು ಕಷಾಯ ಅಥವಾ ಚಹಾದ ರೂಪದಲ್ಲಿ ಸೇವಿಸಬಹುದು. ಇದರ ಲೇಹವನ್ನು ಹಾಲಿನೊಂದಿಗೆ ಸೇವಿಸುವುದು ಸೂಕ್ತ.

ಇದನ್ನೂ ಓದಿ| Winter Care | ಚಳಿಗಾಲದಲ್ಲಿ ಆರೋಗ್ಯ ಕಾಪಾಡುವುದು ಕಷ್ಟವೇ? ಹಾಗೇನಿಲ್ಲ!

ಆರೋಗ್ಯ

Liver transplant: 73 ವರ್ಷದ ರೋಗಿಗೆ 6 ಗಂಟೆ ಶಸ್ತ್ರಚಿಕಿತ್ಸೆ ಯಶಸ್ವಿ ಲಿವರ್ ಕಸಿ ಮಾಡಿದ ಬೆಂಗಳೂರು ವೈದ್ಯರು

ಬ್ಲಾಕ್‌ಫಂಗಸ್‌ ಚಿಕಿತ್ಸೆಯನ್ನು ರಾಜ್ಯದಲ್ಲೇ ಅತಿ ಹೆಚ್ಚು ರೋಗಿಗಳನ್ನು ಚಿಕಿತ್ಸೆ ನೀಡಿದ ಟ್ರಸ್ಟ್‌ವೆಲ್‌ ಆಸ್ಪತ್ರೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಲಿವರ್‌ ಕಸಿ ಶಸ್ತ್ರಚಿಕಿತ್ಸೆಯನ್ನು (Liver transplant) ನಡೆಸಿದೆ. 6 ಗಂಟೆ ಶಸ್ತ್ರಚಿಕಿತ್ಸೆ ಮೂಲಕ 73 ವರ್ಷದ ರೋಗಿಗೆ ಮರುಜೀವ ನೀಡಿದ್ದಾರೆ.

VISTARANEWS.COM


on

Edited by

Bengaluru doctors successfully transplant a 73 year old patient after 6 hours of surgery
Koo

ಬೆಂಗಳೂರು: ಲಿವರ್ ಸಿರೋಸಿಸ್‌ ಹಾಗೂ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರಿಗೆ ಯಶಸ್ವಿ ಲಿವರ್‌ ಕಸಿ ಮಾಡುವ ಮೂಲಕ ಬೆಂಗಳೂರಿನ ಟ್ರಸ್ಟ್‌ವೆಲ್‌ ಆಸ್ಪತ್ರೆಯ ವೈದ್ಯರು ಮರುಜೀವ ನೀಡಿದ್ದಾರೆ. ಮುಂಬೈ ಮೂಲದ ಯೋಗೇಶ್‌ (ಹೆಸರು ಬದಲಾಯಿಸಲಾಗಿದೆ) ವ್ಯಕ್ತಿಗೆ ಯಕೃತ್ತಿನ ಕಸಿ ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಹೀಗಾಗಿ 6 ಗಂಟೆಯ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ.

ಯೋಗೇಶ್‌ ಅವರನ್ನು ಮೊದಲು ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಈ ವೇಳೆ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ ಟ್ರಾನ್ಸ್ ಆರ್ಟಿರಿಯಲ್ ಕೀಮೋ-ಎಂಬೋಲೈಸೇಶನ್‌ಗೆ ಒಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ, ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್‌ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ ಒಳಗಾಗಿದ್ದರು. ಈ ಎಲ್ಲ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು ಕೂಡ ತೀರಾ ಸವಾಲಿನ ಕೆಲಸವಾಗಿತ್ತು.

Bengaluru doctors successfully transplant a 73 year old patient after 6 hours of surgery

ಈ ಎಲ್ಲ ಸವಾಲಿನ ನಡುವೆ ಮಾರ್ಚ್ 7ರಂದು ವೈದ್ಯರ ತಂಡವು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕಸಿ ಶಸ್ತ್ರಚಿಕಿತ್ಸೆಯ ನಂತರ ಯೋಗೇಶ್ 6 ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಸಹ ಮಾಡಲಾಯಿತು. ಡಾ.ರವಿಮೋಹನ್‌, ಡಾ.ಸುನೀಲ್ ಶೇನ್ವಿ, ಡಾ.ಮನೀಶ್ ಜೋಶಿ, ಡಾ.ಮಿಚುವಲ್, ಡಾ.ಮಾಧವಿ, ಡಾ.ಅಮೇಯ ಮತ್ತು ಡಾ.ಎನ್.ಎಸ್.ಚಂದ್ರಶೇಖರ್ ವೈದ್ಯಕೀಯ ತಜ್ಞರು ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.

ಇದನ್ನೂ ಓದಿ: Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಇನ್ನು ಯಶಸ್ವಿಯಾಗಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಟ್ರಸ್ಟ್ ವೆಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ. ಮಧುಸೂದನ್, ಇದು ನಮ್ಮ ಶಸ್ತ್ರಚಿಕಿತ್ಸಕ ತಂಡದ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಸಾಧನೆಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಎಲ್ಲ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೈಕೆಯನ್ನು ಒದಗಿಸುತ್ತೇವೆ ಎಂದರು. ಯಕೃತ್ತಿನ ಕಸಿಯು ಜೀವ ಉಳಿಸುವ ವಿಧಾನವಾಗಿದ್ದು, ಇದು ರೋಗಿಗಳಿಗೆ ಹೊಸ ಜೀವನವನ್ನು ಕಟ್ಟಿಕೊಟ್ಟಂತೆ ಆಗುತ್ತದೆ. ಯಶಸ್ವಿ ಫಲಿತಾಂಶವನ್ನು ಪಡೆಯಲು ನುರಿತ ವೈದ್ಯರ ತಂಡದ ಅಗತ್ಯವಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಆರೋಗ್ಯ

Covid Origin: ಪ್ರಾಣಿಗಳಿಂದಲೇ ಮನುಷ್ಯರಿಗೆ ತಗುಲಿದ ಕೋವಿಡ್ ಸೋಂಕು!

Covid Origin: ಜಗತ್ತಿಗೇ ಅಪಾಯವನ್ನು ತಂದೊಡ್ಡಿದ್ದ ಕೋವಿಡ್-19 ಸೋಂಕು ಮೂಲ ಶೋಧನೆಯ ಕುರಿತು ಈವರೆಗೆ ಅನೇಕ ವರದಿಗಳು ಪ್ರಕಟವಾಗಿವೆ. ಈಗ ಹೊಸ ವರದಿಯೊಂದು ಪ್ರಕಟವಾಗಿದ್ದು, ಪ್ರಾಣಿಗಳಿಂದಲೇ ಮನುಷ್ಯರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

VISTARANEWS.COM


on

Edited by

Covid jumped from animals to humans says New report
Koo

ನವದೆಹಲಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಮೂಲ ಯಾವುದು ಎಂಬ ಚರ್ಚೆ ಇನ್ನೂ ನಿಂತಿಲ್ಲ. ಕೆಲವರು ಇದು ಮಾನವ ನಿರ್ಮಿತ ಎಂದು ವಾದಿಸುತ್ತಾರೆ, ಮತ್ತೆ ಕೆಲವರು ಚೀನಾದಿಂದಲೇ ಈ ವೈರಸ್ ಇಡೀ ಜಗತ್ತಿಗೆ ಅಂಟಿದೆ ಎಂದು ಹೇಳುತ್ತಾರೆ. ಈಗ ಹೊಸ ಅಧ್ಯಯನ ವರದಿಯೊಂದರಲ್ಲಿ ಕೋವಿಡ್-19 ಮೂಲ (Covid Origin) ಯಾವುದು ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ. ಚೀನಾ ವುಹಾನ್ ಮಾರುಕಟ್ಟೆಯಿಂದ ಪಡೆದ ಕೆಲವು ಸ್ಯಾಂಪಲ್‌ಗಳನ್ನು ಅಧ್ಯಯನ ಮಾಡಿರುವ ಸಂಶೋಧಕರು, ಕೋವಿಡ್-19 ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ತಗಲಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ರೋಗಕ್ಕೆ ತುತ್ತಾಗುವ ರಕೂನ್ ನಾಯಿಗಳು ಸೇರಿದಂತೆ ಅನೇಕ ಪ್ರಾಣಿಗಳ ಆನುವಂಶಿಕ ವಸ್ತುಗಳ ಜೊತೆಗೆ ನಾವೆಲ್ ಕೊರೊನಾ ವೈರಸ್ ಇರುವ ಪುರಾವೆಗಳನ್ನು ಮಾದರಿಗಳು ಕಂಡುಕೊಂಡಿವೆ. ಈ ಬಗ್ಗೆ ಓಪನ್ ಸೈನ್ಸ್ ಜಾಲತಾಣವಾಗಿರುವ Zenodo.orgನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ಹುವಾನಾನ್ ಸಗಟು ಸಮುದ್ರಾಹಾರ ಮಾರುಕಟ್ಟೆಯು ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ ಎಂದು ತಿಳಿಸಲಾಗಿದೆ.

ಕೆಲವು ಸ್ಯಾಂಪಲ್‌ಗಳಲ್ಲಿ ಪ್ರಾಣಿಗಳಲ್ಲಿ ಸಂಭವನೀಯ SARS-CoV-2 ಸೋಂಕನ್ನು ಸೂಚಿಸುವ ಮಾನವ ಆನುವಂಶಿಕ ವಸ್ತುಗಳಿಗಿಂತ ಹೆಚ್ಚು ಪ್ರಾಣಿಗಳ ಆನುವಂಶಿಕ ವಸ್ತುಗಳು ಕಂಡುಬಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವರದಿಗೆ ಇನ್ನೂ ಯಾವುದೇ ವೈಜ್ಞಾನಿಕ ಸಮುದಾಯವು ತನ್ನ ಒಪ್ಪಿಗೆ ನೀಡಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಅನೇಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ವೈಜ್ಞಾನಿಕ ಸಮುದಾಯವು ಈ ಎಲ್ಲ ವರದಿಗಳನ್ನು ಪರಿಶೀಲಿಸಲು ಹೋಗಿಲ್ಲ.

ಇದನ್ನೂ ಓದಿ: H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು

ಈಗಾಗಲೇ ಹೇಳಿದಂತೆ, ಕೋವಿಡ್-19 ಸಾಂಕ್ರಾಮಿಕ ಸ್ಫೋಟಗೊಳ್ಳುತ್ತಿದ್ದಂತೆ ಜಗತ್ತಿನಾದ್ಯಂತ ಸಂಶೋಧಕರು ಕೋವಿಡ್ ಮೂಲ ಹುಡುಕಲು ಆರಂಭಿಸಿದರು. ಬಹುತೇಕ ಅಧ್ಯಯನ ವರದಿಗಳು ಚೀನಾದ ವುಹಾನ್ ಮಾರುಕಟ್ಟೆಯತ್ತಲೇ ಬೊಟ್ಟು ಮಾಡಿ ತೋರಿಸಿವೆ. ಆದರೆ, ಈ ವರೆಗೂ ಚೀನಾ ಕೋವಿಡ್-19 ಸಾಂಕ್ರಾಮಿಕಕ್ಕೆ ತನ್ನ ದೇಶದ ಮಾರುಕಟ್ಟೆ ಎಂಬುದನ್ನು ಒಪ್ಪಿಕೊಂಡಿಲ್ಲ. ಈಗ ಹೊಸ ವರದಿ ಕೂಡ ಚೀನಾವೇ ಮೂಲ ಎಂಬ ಸತ್ಯವನ್ನು ಕಂಡುಕೊಂಡಿದೆ. ಈ ವರದಿಗೆ ಚೀನಾ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕು.

Continue Reading

ಆರೋಗ್ಯ

ತಾಜಾ ತರಕಾರಿ-ಕಾಳುಗಳನ್ನು ಸೇವಿಸಿ, ಸಂಸ್ಕರಿಸಿದ ಆಹಾರದಿಂದ ದೂರವಿರಿ; ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

ಮಾಂಸವನ್ನು ತಿನ್ನಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ ಸಂಸ್ಕರಿಸಲ್ಪಟ್ಟಿರುವ ಕೆಂಪು ಮಾಂಸಗಳಿಗಿಂತಲೂ ಬಿಳಿ ಮಾಂಸ ಮತ್ತು ಮೀನನ್ನು ಬಳಕೆ ಮಾಡಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉಪಯೋಗ ಜಾಸ್ತಿ ಇರಲಿ ಎಂದಿದೆ.

VISTARANEWS.COM


on

Edited by

FRESH UNPROCESSED FOOD
Koo

ಬೆಂಗಳೂರು: ಬೇಸಿಗೆ ಕಾಲ ಬರುತ್ತಿದೆ, ಜತೆಜತೆಗೆ ಎಚ್​​3ಎನ್​2, ಕೊವಿಡ್​ 19 ಸೇರಿ, ವಿವಿಧ ಸ್ವರೂಪದ ಜ್ವರ, ಸೋಂಕುಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಹಾರ ಸೇವನೆಗೆ ಸಂಬಂಧಪಟ್ಟ ಮಾರ್ಗಸೂಚಿ (Dietary Advisory) ಬಿಡುಗಡೆ ಮಾಡಿದೆ. ಸಾಧ್ಯವಾದಷ್ಟು ತಾಜಾ ಆಗಿರುವ ಮತ್ತು ಸಂಸ್ಕರಿಸದ ಆಹಾರಗಳನ್ನೇ ಸೇವಿಸಿ ಎಂದು ಜನರಿಗೆ ಸಲಹೆ ನೀಡಿದೆ. ‘ಕೊವಿಡ್​ 19 ಸವಾಲು ಒಡ್ಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಇದಕ್ಕಾಗಿ ಎಲ್ಲರೂ ಆರೋಗ್ಯಕರ ಡಯೆಟ್​ ಮತ್ತು ಜೀವನಶೈಲಿ ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ರಾಜ್ಯ ಆರೋಗ್ಯ ಆಯುಕ್ತರ ಕಚೇರಿ ಬಿಡುಗಡೆ ಮಾಡಿದ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನಲ್ಲಿ ಕೊವಿಡ್ 19 ವೈರಸ್​​ನ 661 ಕೇಸ್​​ಗಳು ಸಕ್ರಿಯವಾಗಿವೆ. ಫೆಬ್ರವರಿಯಲ್ಲಿ 278 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 661ಕ್ಕೆ ಏರಿಕೆಯಾಗಿದೆ. ಇದರಲ್ಲಿ ಗಂಭೀರ ಸ್ವರೂಪದ ಕೇಸ್​​ ಸಂಖ್ಯೆ ಕಡಿಮೆಯಿದ್ದರೂ, ನಿರ್ಲಕ್ಷ್ಯ ವಹಿಸುವಂಥದ್ದಲ್ಲ. ಅದರ ಜತೆ ದೇಶಾದ್ಯಂತ ಕಾಡುತ್ತಿರುವ ಎಚ್​3ಎನ್​2 ಸೇರಿ, ಹಲವು ವೈರಸ್​ಗಳೂ ಕಾಡುತ್ತಿವೆ. ಹೀಗಾಗಿ ಪ್ರತಿರೋಧಕ ವ್ಯವಸ್ಥೆ ಹೆಚ್ಚಿಸಿಕೊಳ್ಳಲು ಬಹುಮುಖ್ಯವಾಗಿ ನಮ್ಮ ದೇಹಕ್ಕೆ ಪೋಷಕಾಂಶಗಳು ಬೇಕು. ಅಲ್ಲದೆ, ದೇಹ ಹೈಡ್ರೇಟ್ ಆಗಿರಬೇಕು. ಹೀಗಾಗಿ ಸಮತೋಲಿತವಾದ ಆಹಾರಗಳನ್ನು ಸೇವಿಸಬೇಕು. ಇದರಿಂದ ಕೊವಿಡ್​ 19 ಮತ್ತಿತರ ಸೋಂಕಿನ ಅಪಾಯ ಅತ್ಯಂತ ಕಡಿಮೆ ಇರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ 22ಕೆಜಿ ತೂಕ ಇಳಿಸಿಕೊಂಡ ಕೇಂದ್ರ ಸಚಿವ; ಆಯುರ್ವೇದ ಪದ್ಧತಿ ಅನುಸರಿಸಿ ಡಯೆಟ್​

‘ತಾಜಾ ಆಗಿರುವ, ಸಂಸ್ಕರಣೆ ಮಾಡಿರದ ವಿವಿಧ ರೀತಿಯ ಆಹಾರಗಳನ್ನು ಸೇವಿಸಿ. ಈ ಮೂಲಕ ಅಗತ್ಯ ವಿಟಮಿನ್​​ಗಳು, ಖನಿಜಾಂಶಗಳು, ನಾರಿನಾಂಶ, ಪ್ರೋಟಿನ್​, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪಡೆಯಿರಿ. ದೇಹದ ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು. ಸಕ್ಕರೆ, ಕೊಬ್ಬು ಮತ್ತು ಉಪ್ಪಿನಾಂಶವುಳ್ಳ ಆಹಾರ ಸೇವೆಯನ್ನು ಕಡಿಮೆ ಮಾಡುವ ಮೂಲಕ ತೂಕ ಹೆಚ್ಚುವುದನ್ನು, ಹೃದಯ ಕಾಯಿಲೆಗಳು, ಸ್ಟ್ರೋಕ್​, ಮಧುಮೇಹ ಮತ್ತು ಇತರ ಕೆಲವು ವಿಧದ ಕ್ಯಾನ್ಸರ್​ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ’ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ‘ತಾಜಾ ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಗೆಣಸಿನಂಥ ಬೇರು ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಹಾಲುಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ

ಮಾಂಸವನ್ನು ತಿನ್ನಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ ಸಂಸ್ಕರಿಸಲ್ಪಟ್ಟಿರುವ ಕೆಂಪು ಮಾಂಸಗಳಿಗಿಂತಲೂ ಬಿಳಿ ಮಾಂಸ ಮತ್ತು ಮೀನನ್ನು ಬಳಕೆ ಮಾಡಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉಪಯೋಗ ಜಾಸ್ತಿ ಇರಲಿ. ಫಾಸ್ಟ್​ಫುಡ್​, ಸ್ನ್ಯಾಕ್ಸ್​​, ಕರಿದ ಪದಾರ್ಥಗಳು, ಫಿಜ್ಜಾ, ಕುಕ್ಕೀಸ್​ಗಳಂಥ ಆಹಾರಗಳ ಸೇವನೆಯನ್ನು ನಿಲ್ಲಿಸಿಬಿಡಿ ಎಂದೂ ಸಲಹೆ ನೀಡಿದೆ.

Continue Reading

ಆರೋಗ್ಯ

Migraine Headache: ಬೇಸಿಗೆಯಲ್ಲಿ ಉಲ್ಬಣಿಸುವ ತಲೆನೋವಿಗೆ ಪರಿಹಾರ ನಿಮ್ಮಲ್ಲೇ ಇದೆ!

ಮೈಗ್ರೇನಿನ ಸಮಸ್ಯೆಯಿದ್ದವರಿಗಂತೂ ಬೇಸಗೆಯಲ್ಲಿ ತಲೆನೋವಿನ ಸಂಭವ ಹೆಚ್ಚು. ಅತಿಯಾದ ಬೆಳಗು, ಬಿಸಿಲು ಇಂಥವಕ್ಕೆ ಒಳಪಟ್ಟರೆ ಈ ತೊಂದರೆಯಿರುವವರಿಗೆ ಮೈಗ್ರೇನ್‌ ಮತ್ತೆ ಕಾಟಕೊಡದೇ ಇರುವುದಿಲ್ಲ. ಬೇಸಿಗೆಯಲ್ಲಿ ಕಾಡುವ ಇಂತಹ ತಲೆನೋವಿನಿಂದ ಹೇಗೆ ಪಾರಾಗಬಹುದು (headache relief) ಎಂಬುದನ್ನು ನೋಡೋಣ.

VISTARANEWS.COM


on

Edited by

Migraine Problem
Koo

ಚಳಿಗಾಲ ತನ್ನ ಬಾಹುಬಂಧನವನ್ನು ಕಳಚಿ ಮೆಲ್ಲಗೆ ಹಿಂದೆ ಸರಿಯುತ್ತಿರುವಾಗ ಬೇಸಗೆ ಮೆಲ್ಲಮೆಲ್ಲನೆ ತನ್ನ ಹಿಡಿಯನ್ನು ಬಿಗಿಗೊಳಿಸುವ ಕಾಲ ಇದೀಗ ಬರುತ್ತಿದೆ. ಚಳಿಗಾಲದಲ್ಲಿ ಕಾಡಿದ ಒಂದೊಂದು ಸಮಸ್ಯೆಯನ್ನು ನೆನೆದು ಬಿಸಿಲುಗಾಲ ಬಂದಾಗ ನಿಟ್ಟುಸಿರು ಬಿಟ್ಟರೂ, ಬಿಸಿಲ ಝಳ ತರುವ ಒಂದೊಂದು ಸಮಸ್ಯೆಯೂ ಚಳಿಗಾಲದ ಸಮಸ್ಯೆಗಿಂತ ಸರಳವೇನೂ ಇಲ್ಲ. ಮುಖ್ಯವಾಗಿ ಸೂರ್ಯ ನೆತ್ತಿಯ ಮೇಲೆ ಬಂದಾಗ ಕೆಲಸದ ನಿಮಿತ್ತವೋ, ಇನ್ನಿತರ ಕಾರಣಗಳಿಂದಲೋ ಮನೆಯಿಂದ ಹೊರಗೆ ಕಾಲಿಟ್ಟರೆ, ಬಿಸಿಲಲ್ಲಿ ತಿರುಗಾಡಿದರೆ ಹಲವರಿಗೆ ತಲೆ ಸಿಡಿದುಹೋಗುವಂತೆ ನೋವಾಗುವುದು (summer headache) ನಿಶ್ಚಿತ. ಮೈಗ್ರೇನಿನ ಸಮಸ್ಯೆಯಿದ್ದವರಿಗಂತೂ ಬೇಸಗೆಯಲ್ಲಿ ತಲೆನೋವಿನ ಸಂಭವ ಹೆಚ್ಚು. ಅತಿಯಾದ ಬೆಳಗು, ಬಿಸಿಲು ಇಂಥವಕ್ಕೆ ಒಳಪಟ್ಟರೆ ಈ ತೊಂದರೆಯಿರುವವರಿಗೆ ಮೈಗ್ರೇನ್‌ ಮತ್ತೆ ಕಾಟಕೊಡದೇ ಇರುವುದಿಲ್ಲ. ಇನ್ನು ಕೆಲವರು ನೀರು ಕಡಿಮೆ ಕುಡಿಯುವುದರಿಂದಾಗಿ ನಿರ್ಜಲೀಕರಣ ಸ್ಥಿತಿಯೂ ಉಂಟಾಗುವುದರಿಂದ ತಲೆಸುತ್ತು, ತಲೆನೋವಿನಂತಹ ತೊಂದರೆಗೆ ಎಡೆ ಮಾಡುತ್ತದೆ. ಕೆಲವರಿಗೆ ವ್ಯಾಯಾಮ ಇತ್ಯಾದಿಗಳನ್ನು ಬಿಸಿಲಿನಲ್ಲೇ ಮಾಡುವುದರಿಂದಲೂ ತಲೆನೋವಿಗೆ ಕಾರಣವಾಗಬಹುದು. ನಿದ್ದೆಯ ಕೊರತೆಯಾದ ಮಂದಿಗೆ, ಮಧ್ಯಾಹ್ನದೂಟ ಬಿಟ್ಟಿದ್ದರೂ ಕೆಲವರಿಗೆ ತಲೆನೋವು ತೀವ್ರವಾಗಿ ಕಾಡುವುದುಂಟು. ಹಾಗಾದರೆ, ನಮ್ಮದೇ ಆಹಾರಕ್ರಮ ಬದಲಾವಣೆ ಹಾಗೂ ಜೀವನಶೈಲಿಯ ಬದಲಾವಣೆಯಿಂದ ಬೇಸಿಗೆಯಲ್ಲಿ ಕಾಡುವ ಇಂತಹ ತಲೆನೋವಿನಿಂದ ಹೇಗೆ ಪಾರಾಗಬಹುದು (headache relief) ಎಂಬುದನ್ನು ನೋಡೋಣ.

1. ಸರಿಯಾಗಿ ನೀರು ಕುಡಿಯಿರಿ: ನಿತ್ಯವೂ ಸರಿಯಾಗಿ ನೀರು ಕುಡಿಯಿರಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಿಡಿದು, ಇಡೀ ದಿನ ಕನಿಷ್ಟ ನಾಲ್ಕು ಲೀಟರ್‌ ನೀರಾದರೂ ಕುಡಿಯುವುದು ಅಗತ್ಯ.

2. ದೇಹವನ್ನು ತಂಪಾಗಿಡುವ ಪಾನೀಯಗಳನ್ನು ಸೇವಿಸಿ: ಬೇಸಿಗೆಯ ತಲೆನೋವನ್ನು ತಪ್ಪಿಸಲು, ದೇಹವನ್ನು ತಂಪಾಗಿ ಇಡುವುದು ಅತ್ಯಗತ್ಯ. ಕೋಕಂ ಶರಬತ್ತು, ಕಲ್ಲಂಗಡಿ ಹಣ್ಣಿನ ಜ್ಯೂಸು, ಎಳನೀರು, ಹಾಲಿನೊಂದಿಗೆ ಗುಲ್ಕಂದ್‌ ಇತ್ಯಾದಿಗಳನ್ನು ಸೇವಿಸಬಹುದು.

Migraine Problem

3.  ಚಹಾ ಕಾಫಿಯನ್ನು ಆದಷ್ಟೂ ಕಡಿಮೆ ಮಾಡಿ: ತಲೆನೋವು ಎಂದು ಪದೇ ಪದೇ ಕಾಫಿ ಕುಡಿಯುವುದು, ಚಹಾ ಸೇವಿಸುವುದು ಮಾಡಬೇಡಿ. ಬೇಸಿಗೆಯಲ್ಲಿ ಕೆಫೀನ್‌ಯುಕ್ತ ಪೇಯಗಳನ್ನು ಮಿತವಾಗಿಟ್ಟಿರಿ. ಶುಂಠಿ ಚಹಾ ಮಾಡಿ ಕುಡಿದರೆ, ತಲೆನೋವು ಕೊಂಚ ಸುಧಾರಣೆ ಕಾಣಬಹುದು.

4. ಮೆಗ್ನೀಶಿಯಂಯುಕ್ತ ಹಣ್ಣು ತಿನ್ನಿ: ಬೇಸಿಗೆಯಲ್ಲಿ ಮೆಗ್ನೀಶಿಯಂಯುಕ್ತ ಹಣ್ಣುಗಳನ್ನು ಸೇವಿಸಿ. ಬಾಳೆಹಣ್ಣು, ಅನನಾಸು, ಕಲ್ಲಂಗಡಿ ಹಣ್ಣು, ಆಪ್ರಿಕಾಟ್‌ ಮತ್ತಿತರ ಹಣ್ಣುಗಳಲ್ಲಿ ಮೆಗ್ನೀಶಿಯಂ ಅಧಿಕವಾಗಿದೆ.

5. ಮಜ್ಜಿಗೆ ಸೇವಿಸಿ: ಮೊಸರು ಹಾಗೂ ಮೊಸರಿನ ಸಂಬಂಧೀ ಪೇಯಗಳನ್ನು ಕುಡಿಯಿರಿ: ಮೊಸರಿನ ಉತ್ಪನ್ನಗಳಾದ ಮಜ್ಜಿಗೆ, ಲಸ್ಸಿ ಇತ್ಯಾದಿಗಳನ್ನೂ ಸೇವಿಸಬಹುದು. ಆದಷ್ಟೂ ತಂಪಾದ ಮಜ್ಜಿಗೆ ಕುಡಿಯಿರಿ.

ಇದನ್ನೂ ಓದಿ: Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

6. ದೇಸೀ ಪರ್ಯಾಯಗಳನ್ನು ಹುಡುಕಿ: ಬಾರ್ಲಿ ಗಂಜಿ, ರಾಗಿ ಅಂಬಲಿ ಇತ್ಯಾದಿ ದೇಸೀ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಆದಷ್ಟೂ ಕಾರ್ಬೋನೇಟೆಡ್‌ ಡ್ರಿಂಕ್‌ಗಳಿಂದ ದೂರವಿರಿ.

7. ಅಗಸೆಬೀಜ ತಿನ್ನಿ: ಫ್ಲ್ಯಾಕ್‌ಸೀಡ್‌ ಅಥವಾ ಅಗಸೆ ಬೀಜ ಮೆಗ್ನೀಶಿಯಂನಿಂದ ಶ್ರೀಮಂತವಾಗಿರುವ ಬೀಜವಾಗಿರುವುದರಿಂದ ಬೇಸಗೆಯಲ್ಲಿ ನಿತ್ಯ ನಿಮ್ಮ ಆಹಾರದೊಂದಿಗೆ ಅಗಸೆಬೀಜ ಬಳಸುವುದನ್ನು ರೂಢಿ ಮಾಡಿಕೊಳ್ಳಿ. 100 ಗ್ರಾಂ ಅಗಸೆಬೀಜದಲ್ಲಿ 392 ಮಿಲಿಗ್ರಾಂನಷ್ಟು ಮೆಗ್ನೀಶಿಯಂ ಇದೆ.

8. ಮೀನು ತಿನ್ನಿ: ಸಾಲ್ಮನ್‌, ಟೂನಾದಂತಹ ಮೀನನ್ನು ಬೇಸಗೆಯಲ್ಲಿ ತಿನ್ನುವುದು ಒಳ್ಳೆಯದು. ಇದರಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಇರುವುದರಿಂದ ಇದು ತಲೆನೋವಿಗೂ ಒಳ್ಳೆಯದು.

9. ಸಪ್ಲಿಮೆಂಟ್‌ ಕೂಡಾ ಪರಿಹಾರವಾಗಬಹುದು: ತಲೆನೋವು ಅತ್ಯಂತ ಹೆಚ್ಚು ಬಾಧೆ ಕೊಡುತ್ತಿದ್ದರೆ ವೈದ್ಯರ ಸಲಹೆ ಮೇರೆಗೆ ಮಲ್ಟಿವಿಟಮಿನ್‌ ಸಪ್ಲಿಮೆಂಟ್‌ ಮಾತ್ರೆಗಳನ್ನು ಸೇವಿಸಬಹುದು. ಕಬ್ಬಿಣಾಂಶ ಹಾಗೂ ಮೆಗ್ನೀಶೀಯಂಯುಕ್ತ ಮಾತ್ರೆಗಳ ಸೇವನೆಯಿಂದಲೂ ಪರಿಹಾರ ಕಾಣಬಹುದು. ಆದರೆ, ವೈದ್ಯರ ಸಲಹೆ ಮೇರೆಗೆ ಇದನ್ನು ಸೇವಿಸಬಹುದು.

ಇದನ್ನೂ ಓದಿ: Health Tips: ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?

Continue Reading
Advertisement
Donald Trump failed to disclose 17 gifts from India, including Narendra Modi Gift
ದೇಶ6 mins ago

Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌

Actress Haripriya gave good news at last; Didn't say the name though!
ಸಿನಿಮಾ10 mins ago

Sandalwood Actor : ಕೊನೆಗೂ ಗುಡ್​ ನ್ಯೂಸ್ ಕೊಟ್ಟ ನಟಿ ಹರಿಪ್ರಿಯಾ; ಆದರೂ ಹೆಸರು ಹೇಳಲಿಲ್ಲ!

Man killed in attack with deadly weapons near Kaveripatnam
ಕರ್ನಾಟಕ22 mins ago

Murder Case: ಕಾವೇರಿಪಟ್ಟಣಂ ಬಳಿ ಹಾಡಹಗಲೇ ತಲ್ವಾರ್‌ನಿಂದ ಕೊಚ್ಚಿ ಯುವಕನ ಕೊಲೆ

smartphone
ವಾಣಿಜ್ಯ29 mins ago

Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ರಫ್ತು

vistara-top-10-news-siddaramaiah-constituency-confusion-continues-to-congress-first-list-on-wednesday-and-more-news
ಕರ್ನಾಟಕ34 mins ago

ವಿಸ್ತಾರ TOP 10 NEWS: ಸಿದ್ದರಾಮಯ್ಯ ಕ್ಷೇತ್ರ ಗೊಂದಲದಿಂದ, ಕೇಂದ್ರ ಸರ್ಕಾರಕ್ಕೆ 155 ಲಕ್ಷ ಕೋಟಿ ರೂ. ಸಾಲದವರೆಗಿನ ಪ್ರಮುಖ ಸುದ್ದಿಗಳಿವು

Jio True 5G service launched in 41 cities including KGF's robertsonpet
ಕರ್ನಾಟಕ42 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್56 mins ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ1 hour ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ1 hour ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ1 hour ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ16 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!