Acid Reflux: ನಿಮಗೆ ಗೊತ್ತಿರಲಿ, ಚಳಿಗಾಲಕ್ಕೂ ಹುಳಿತೇಗಿಗೂ ಇದೆ ಸಂಬಂಧ! Vistara News

ಆರೋಗ್ಯ

Acid Reflux: ನಿಮಗೆ ಗೊತ್ತಿರಲಿ, ಚಳಿಗಾಲಕ್ಕೂ ಹುಳಿತೇಗಿಗೂ ಇದೆ ಸಂಬಂಧ!

ಚಳಿಯೆಂದು ಹೆಚ್ಚು ಬಿಸಿಯಿರುವ ಆಹಾರ ಸೇವಿಸಿ, ಖಾರದ ಮತ್ತು ಮಸಾಲೆಯುಕ್ತ ತಿನಿಸುಗಳನ್ನು ತಿನ್ನುವುದರಿಂದ ಹೊಟ್ಟೆಯ ತೊಂದರೆ (Acid reflux) ತಾರಕಕ್ಕೇರುತ್ತದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಹುಳಿತೇಗಿನ ಸಮಸ್ಯೆಯನ್ನು ತಹಬಂದಿಗೆ ತರಬಹುದು.

VISTARANEWS.COM


on

Acid Reflux
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಲ್ಲಿ ಹುಳಿತೇಗಿನದ್ದೂ ಒಂದು. ಹೊಟ್ಟೆಯಲ್ಲಿರುವ ಆಮ್ಲದ ಅಂಶ ಅನ್ನನಾಳಕ್ಕೆ ಮೇಲ್ಮುಖವಾಗಿ ಹರಿದಾಗ ಆಗುವಂಥ ತೊಂದರೆಗಳು ಒಂದೆರಡಲ್ಲ. ಹೊಟ್ಟೆಯುರಿ, ಎದೆಯುರಿ, ಎದೆನೋವು, ಹೊಟ್ಟೆನೋವು, ವಾಂತಿ, ಅಜೀರ್ಣ ಮುಂತಾದ ಹತ್ತುಹಲವು ಸಮಸ್ಯೆಗಳನ್ನು ತಂದಿಡುತ್ತದೆ. ಹೊಟ್ಟೆಯ ಅವಸ್ಥೆ ಅತಿಸೂಕ್ಷ್ಮವಾಗಿ, ತಿಂದ ಆಹಾರದಲ್ಲಿ ಕೊಂಚ ಆಚೀಚೆ ಆದರೂ ಆಸಿಡಿಟಿ ಆರಂಭವಾಗಿ ಒದ್ದಾಡುವಂತಾಗುತ್ತದೆ. ಇಂಥ ಸಮಸ್ಯೆ (Gastroesophageal Reflux Disease ಅಥವಾ GERD) ಚಳಿಗಾಲದಲ್ಲಿ ಇನ್ನೂ ಹೆಚ್ಚು. ಚಳಿಯಲ್ಲಿ ಹೆಚ್ಚಾಗುವ ಈ ಸಮಸ್ಯೆಯನ್ನು ಹತೋಟಿಗೆ ತರುವುದು ಹೇಗೆ? ಬಾರದಂತೆ ಏನೂ ಮಾಡಲಾಗದೇ?

ಚಳಿಗಾಲಕ್ಕೂ ಹುಳಿತೇಗಿನ ಸಮಸ್ಯೆಗಳಿಗೂ ನೇರವಾದ ನಂಟಿಲ್ಲದಿರಬಹುದು. ಆದರೆ ಚಳಿಯೆಂದು ಹೆಚ್ಚು ಬಿಸಿಯಿರುವ ಆಹಾರ ಸೇವಿಸುವುದಕ್ಕೂ, ಖಾರದ ಮತ್ತು ಮಸಾಲೆಯುಕ್ತ ತಿನಿಸುಗಳನ್ನು ತಿನ್ನುವುದಕ್ಕೂ ಹೊಂದಿಕೆಯಾಗಿ ಹೊಟ್ಟೆಯ ತೊಂದರೆ ತಾರಕಕ್ಕೇರುತ್ತದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇದನ್ನು ತಹಬಂದಿಗೆ ತರಬಹುದು. ಏನೆಲ್ಲಾ ಮಾಡುವುದು ಪ್ರಯೋಜನಕಾರಿ ಎನ್ನುವುದನ್ನು ನೋಡೋಣ.

A change in diet

ಆಹಾರದಲ್ಲಿ ಬದಲಾವಣೆ

ಚಳಿ ಏಳುತ್ತಿದ್ದಂತೆ ಬಿಸಿಬಿಸಿ ಬಜ್ಜಿ, ಬೋಂಡಾಗಳ ನೆನಪಾಗುತ್ತದೆ. ಕ್ರಿಸ್‌ಮಸ್‌ ನೆವದಲ್ಲಿ ಕ್ರೀಮ್‌ಭರಿತ ಪೇಸ್ಟ್ರಿಗಳು ಇಲ್ಲದಿದ್ದರೆ ಹೇಗೆ? ಕೆನೆ ಅಥವಾ ಜಿಡ್ಡಿರುವ ಮಸಾಲೆಯ ಗ್ರೇವಿಗಳು ಹೆಚ್ಚು ಕಾಲ ಬಿಸಿ ಇರಬಲ್ಲವು. ಖಾರದ ಪಲ್ಯ ಹೊಂದಿದ ಉಗಿ ಹಾಯುವ ಮಸಾಲೆ ದೋಸೆಯನ್ನು ಮರೆಯಬಹುದೇ? ಚೀಸ್‌ಭರಿತ ಸುಡುಸುಡು ಪಿಜ್ಜಾ ಮತ್ತೂ ರುಚಿಕರ. ಇವುಗಳ ಬೆನ್ನಿಗೊಂದು ಹಾಟ್‌ ಚಾಕಲೇಟ್‌ ಅಥವಾ ಬಿಸಿ ಕಾಫಿ ಇಲ್ಲವೇ ಖಡಕ್ ಚಹಾ ಇದ್ದರೆ… ಸಾಲದೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು! ಸ್ವರ್ಗದ ವಿಷಯ ಗೊತ್ತಿಲ್ಲ, ಆದರೆ ಹೊಟ್ಟೆಗೆ ಕಿಚ್ಚು ಹಚ್ಚಲಂತೂ ಸಾಕು.

ಚಳಿಯಲ್ಲಿ ಖಾರದ, ಜಿಡ್ಡಿನ, ಎಣ್ಣೆಯ, ಸುಡು ಬಿಸಿಯ ತಿನಿಸುಗಳ ಆಸೆ ಆದರೂ ಕಡಿವಾಣ ಹಾಕುವುದು ಅಗತ್ಯ. ಇವೆಲ್ಲವೂ ಒಟ್ಟಾಗಿ ಹೊಟ್ಟೆಯ ಅವಸ್ಥೆಯನ್ನು ಹದಗೆಡಿಸುತ್ತವೆ. ಆಹಾರ ಹದವಾದ ಬಿಸಿಯಿದ್ದು ತಾಜಾ ಇರಲಿ. ಖಾರ, ಮೆಣಸು, ಮಸಾಲೆಯ ಅಂಶಗಳಿಗೆ ಮಿತಿ ಇರಲಿ. ಆಹಾರದಲ್ಲಿ ಎಣ್ಣೆ, ಜಿಡ್ಡು ಕಡಿಮೆ ಆದಷ್ಟೂ ಅನುಕೂಲ ಆರೋಗ್ಯಕ್ಕೆ.

Physical activity

ದೈಹಿಕ ಚಟುವಟಿಕೆ

ಚುಮುಚುಮು ಚಳಿಯಲ್ಲಿ ಬೆಳಗ್ಗೆ ಏಳಲಾಗದು. ಎದ್ದರೂ ಕೈಕಾಲು ಸರಿಮಾಡಿಕೊಳ್ಳುವುದಕ್ಕೇ ಅರ್ಧ ಗಂಟೆ ಬೇಕು. ಇನ್ನು ವ್ಯಾಯಾಮ ಮಾಡುವುದೆಲ್ಲಿ. ಬೆಳಗಿನ ಅವಸ್ಥೆ ಹೀಗಾದರೆ, ಸಂಜೆಗೆ ಬೆನ್ನುಬೀಳುವ ಸೋಮಾರಿತನ, ಸುಸ್ತು ಅಥವಾ ಇನ್ನೇನೋ ಕಾರಣಗಳು. ಹಲವು ಪ್ರಾಣಿಗಳಂತೆ ದೇಹದ ಕೊಬ್ಬು ಹೆಚ್ಚಿಸಿಕೊಂಡು ಅಥವಾ ತುಪ್ಪಳ ಬೆಳೆಸಿಕೊಂಡು ಚಳಿಗಾಲ ಕಳೆಯುವ ಪರಿಸ್ಥಿತಿ ನಮಗಿಲ್ಲದಿದ್ದರೂ, ನಾವು ಮಾಡುವುದು ಮಾತ್ರ ಅದನ್ನೇ.

ಹುಳಿತೇಗಿನ ಸಮಸ್ಯೆ ಇರುವವರಿಗೆ ದೇಹದ ತೂಕ ನಿರ್ವಹಿಸುವುದು ಮಹತ್ವದ್ದು. ತೂಕ ಹೆಚ್ಚಿದಂತೆ ಹೊಟ್ಟೆಯ ಸಮಸ್ಯೆಗಳ ಪಟ್ಟಿಯೂ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಬೊಜ್ಜು ನಿಯಂತ್ರಣದತ್ತ ಗಮನ ಹರಿಸುವುದು ಮುಖ್ಯ

ಇನ್ನಿತರ ಕಾರಣಗಳು

ಚಳಿಯಲ್ಲಿ ಸ್ವಲ್ಪ ʻಬೆಚ್ಚಗೆʼ ಮಾಡುವ ಪೇಯಗಳು ಬೇರೆಯೇ ಇರುತ್ತವಲ್ಲ. ಅವುಗಳ ಮೇಲೂ ನಿಯಂತ್ರಣ ಬೇಕು. ಮದ್ಯಪಾನ ಹೆಚ್ಚಿದಷ್ಟೂ ಹೊಟ್ಟೆಯ ಅವಸ್ಥೆ ಅಧೋಗತಿ. ಇವುಗಳ ಜೊತೆಗೆ ಹೊಟ್ಟೆಗಿಳಿಯುವ ಕುರುಕಲುಗಳು ಕ್ರೀಮ್‌ ಮೇಲಿನ ಚೆರ್ರಿಯಂತೆ! ಇವೆಲ್ಲವುಗಳ ಜೊತೆಗೆ ಆಲ್ಕೋಹಾಲ್‌ ಸೇವನೆಯಿಂದ ಯಕೃತ್ತಿನ ಮೇಲೂ ಗಂಭೀರ ಪರಿಣಾಮಗಳಾಗುತ್ತವೆ. ಹಾಗಾಗಿ ಇಂಥ ಚಟಗಳ ಮೇಲೆ ನಿಯಂತ್ರಣ ಸಾಧಿಸುವುದು ಅಗತ್ಯ.

Asian Woman with Acid Reflux.

ಏನು ಮಾಡಬಹುದು?

ಸುಲಭವಾಗಿ ಪಚನವಾಗಬಲ್ಲ ಲಘು ಆಹಾರಗಳಿಗೆ ಆದ್ಯತೆ ನೀಡಿ. ಒಮ್ಮೆಲೇ ದೊಡ್ಡ ಊಟ ಜೀರ್ಣವಾಗದಿದ್ದರೆ, ಒಂದು ಊಟವನ್ನು ಮೂರು ಭಾಗಗಳಾಗಿ ವಿಂಗಡಿಸಿ ತಿನ್ನಿ. ಸೋಡಾ, ಕೋಲಾ ಮತ್ತು ಅತಿ ಹುಳಿಯ ಆಹಾರಗಳು ನಿಶ್ಚಿತವಾಗಿ ಹೊಟ್ಟೆಯನ್ನು ಬುಡಮೇಲು ಮಾಡುತ್ತವೆ, ಜಾಗ್ರತೆ. ವ್ಯಾಯಾಮವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ.

ಚಳಿಯೆನ್ನುವ ಕಾರಣಕ್ಕೆ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ತಣ್ಣೀರು ಕಷ್ಟವಾದರೆ, ಬೆಚ್ಚಗಿನ ನೀರು ಕುಡಿಯಿರಿ. ನಾರು ಭರಿತ ತರಕಾರಿಗಳು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ಕಿರುಧಾನ್ಯಗಳು ಆಹಾರದ ಭಾಗವಾಗಿರಲಿ. ರಾತ್ರಿಯ ಸಮಯ ಹುಳಿತೇಗು ಬಾಧಿಸುತ್ತಿದ್ದರೆ, ದಿಂಬುಗಳನ್ನು ಹಾಕಿ ತಲೆ ಎತ್ತರಿಸಿ ಮಲಗಿ.

ಇದನ್ನೂ ಓದಿ: Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

ರಾಜ್ಯದಲ್ಲಿ ಡೆಂಗ್ಯು ಜ್ವರ (Dengue fever) ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿದ್ದು, ಸೊಳ್ಳೆಗಳಿಂದ ದೂರವಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

VISTARANEWS.COM


on

dengue flue
Koo

ಬೆಂಗಳೂರು: ಬದಲಾದ ವಾತಾವರಣದ ಪರಿಣಾಮ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು (Dengue Fever) ಹೆಚ್ಚಾಗಿ ವರದಿಯಾಗುತ್ತಿದೆ. 15 ಸಾವಿರದ ಗಡಿಯತ್ತ ಸಾಗುತ್ತಿದ್ದು, ಆತಂಕ ಮೂಡಿಸಿದೆ. ಆರೋಗ್ಯ ಇಲಾಖೆ (Health department) ಈ ವಿಚಾರದಲ್ಲಿ ಅಲರ್ಟ್‌ ಆಗಿದೆ.

ರಾಜ್ಯದಲ್ಲಿ ಡೆಂಗ್ಯೂ 14,955 ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳ ಅವಧಿಯಲ್ಲಿ 1,829 ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ರಾಜ್ಯದ 31 ಜಿಲ್ಲೆಗಳಿಂದ 7,282 ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 7,673 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲಿ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಡೆಂಗ್ಯೂ ಜ್ವರ ಶಂಕಿತರ ತಪಾಸಣೆ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 9,620 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದರು. ಕಳೆದ ವರ್ಷ ಡೆಂಗ್ಯೂನಿಂದ 9 ಮಂದಿ ಬಲಿಯಾಗಿದ್ದರು ಕೂಡ. ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಸೇರಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 52,721 ಡೆಂಗ್ಯು ಶಂಕಿತರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 33,326 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಕಳೆದ ಒಂದು ತಿಂಗಳಲ್ಲಿ 839 ಮಂದಿಯಲ್ಲಿ ಡೆಂಗ್ಯು ದೃಢಪಟ್ಟಿದೆ. ಡೆಂಗ್ಯೂ ಜೊತೆಗೆ 28 ಜಿಲ್ಲೆಗಳಲ್ಲಿ ಚಿಕೂನ್‌ ಗುನ್ಯಾ ಪ್ರಕರಣಗಳೂ ಪತ್ತೆಯಾಗಿದ್ದು, ತಲೆನೋವು ಮೂಡಿಸಿದೆ. 60 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ ಗುನ್ಯಾ ಶಂಕಿತರ ತಪಾಸಣೆ ಮಾಡಲಾಗಿದೆ.

ಸೊಳ್ಳೆಗಳನ್ನು ಆದಷ್ಟು ತಡೆಗಟ್ಟಲು ಸೂಚಿಸಲಾಗಿದೆ. ತೆರೆದ ಪ್ರದೇಶಗಳಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಹುಟ್ಟುತ್ತಿವೆ. ಇವುಗಳನ್ನು ನಿವಾರಿಸಬೇಕು. ಮನೆಗೆ ಹಾಗೂ ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು, ಮಾಸ್ಕಿಟೋ ರಿಪೆಲ್ಲೆಂಟ್‌ಗಳನ್ನು ಬಳಸಲು ಸೂಚಿಸಲಾಗಿದೆ.

ಜಿಲ್ಲೆ- ಪ್ರಕರಣಗಳು
ಕಲಬುರಗಿ- 662
ಮೈಸೂರು – 646
ಉಡುಪಿ – 635
ದಕ್ಷಿಣ ಕನ್ನಡ – 492
ಶಿವಮೊಗ್ಗ – 404
ತುಮಕೂರು – 315
ಚಿತ್ರದುರ್ಗ – 300

ಚಿಕೂನ್ ಗುನ್ಯಾ ಪ್ರಕರಣಗಳು
ಮೈಸೂರು – 196
ವಿಜಯಪುರ – 163
ಕಲಬುರಗಿ – 132
ಶಿವಮೊಗ್ಗದಲ್ಲಿ 125
ಒಟ್ಟು 1,481 ಮಂದಿ

Continue Reading

ಆರೋಗ್ಯ

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

ಈಗಿನ ಗುಜರಿ ತಿಂಡಿಗಳ (Hair care tips) ಭರಾಟೆಯಲ್ಲಿ ಸತ್ವಯುತ ಆಹಾರಗಳ ಬಗ್ಗೆ ಗಮನ ನೀಡುವುದೇ ಅಪರೂಪ ಆಗಿರುವಾಗ ಕೂದಲು ಉದುರುವುದು ಸಾಮಾನ್ಯ ತಾನೆ? ಕೂದಲ ಆರೋಗ್ಯ ಸುಧಾರಿಸಬೇಕಾದರೆ ಎಂಥಾ ಆಹಾರ (nutrition for hair care) ಅಗತ್ಯ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Hair Care Tips
Koo

ಕೂದಲೆಂದರೆ (Hair care tips) ಕೇವಲ ತಲೆ ಮೇಲೆ ಕೂತಿರುವ ವಸ್ತುವಲ್ಲ. ಅದು ಎಂಥೆಂಥ ಕೆಲಸಕ್ಕೆಲ್ಲಾ ಸಂಗಾತಿ ಗೊತ್ತೇ… ವಯ್ಯಾರ ಮಾಡಲು, ಜಗಳ ಕಾಯಲು, ನಾಚಿಕೆ ತೋರಲು, ಚಂದ ಕಾಣಲು, ಬೇಸರ ಕಳೆಯಲು, ಹೊತ್ತು ಹಾಳುಮಾಡಲು, ಹೆರಳು ಹಾಕುವ ನೆವದಲ್ಲಿ ಹರಟೆ ಹೊಡೆಯಲು, ಕೋಪ ತೋರಲು… ಒಂದೇ ಎರಡೇ! ಈಗಿನವರಿಗೆ ಉದ್ದ ಕೂದಲೇ ಅಪರೂಪ, ಹಾಗಾದರೆ ಈ ಭಾವಗಳನ್ನೆಲ್ಲಾ ತೋರಿಸುವುದಿಲ್ಲವೇ ಎಂದರೆ, ಹಾಗಲ್ಲ. ನೀಳವೇಣಿಯ ಝಳಪಿಲ್ಲದೆಯೇ ಇದಿಷ್ಟೂ ಭಾವಗಳನ್ನು ಪ್ರಕಟಿಸುವುದು ಅನಿವಾರ್ಯ. ಆದರೆ ಉದ್ದ ಕೂದಲು ಇದ್ದವರ ಸಂಖ್ಯೆ ಕಡಿಮೆಯಾಗಿರುವುದಂತೂ ಹೌದು. ಈಗಿನ ಗುಜರಿ ತಿಂಡಿಗಳ ಭರಾಟೆಯಲ್ಲಿ ಸತ್ವಯುತ ಆಹಾರಗಳ ಬಗ್ಗೆ ಗಮನ ನೀಡುವುದೇ ಅಪರೂಪ ಆಗಿರುವಾಗ ಕೂದಲು ಉದುರುವುದು ಸಾಮಾನ್ಯ ತಾನೆ? ಕೂದಲ ಆರೋಗ್ಯ ಸುಧಾರಿಸಬೇಕಾದರೆ ಎಂಥಾ ಆಹಾರ ಅಗತ್ಯ?

Malnutrition food

ಅಪೌಷ್ಟಿಕ ಆಹಾರದಿಂದ ಪ್ರಯೋಜನವಿಲ್ಲ

ಅಪೌಷ್ಟಿಕ ಆಹಾರದಿಂದ ಕೂದಲು ಉದುರುವುದನ್ನು ತಡೆಗಟ್ಟಲಾಗದು. ಸಮತೋಲಿತ ಆಹಾರದ ಸೇವನೆಯಿಂದ ಮಾತ್ರವೇ ಕೂದಲುಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೇಶ ಸಮೃದ್ಧಿಗೆ ವಿಟಮಿನ್‌ ಡಿ, ಬಿ12, ಕಬ್ಬಿಣ, ಬಯೋಟಿನ್‌, ರೈಬೋಫ್ಲೇವಿನ್‌ ಮತ್ತು ಕೆಲವು ಸೂಕ್ಷ್ಮ ಪೋಷಕಾಂಶಗಳು ಅಗತ್ಯವಾಗಿ ಬೇಕು. ಇವೆಲ್ಲವಕ್ಕೂ ಪೂರಕವಾದ ಆಹಾರಗಳ ಪಟ್ಟಿ ಇಲ್ಲಿದೆ.

ಋತುಮಾನದ ಹಣ್ಣುಗಳು

ಋತುಮಾನದಲ್ಲಿ ದೊರೆಯುವ ಹಲವು ರೀತಿಯ ಕಾಡು ಹಣ್ಣುಗಳು ಸೂಕ್ಷ್ಮ ಪೌಷ್ಟಿಕಾಂಶಗಳು ಮತ್ತು ವಿಟಮಿನ್‌ ಸಿ ಗಳ ಆಗರ. ಚಳಿಗಾಲದಲ್ಲಿ ದೊರೆಯುವ ಬೆಟ್ಟದ ನೆಲ್ಲಿಕಾಯಿ, ನೇರಳೆ, ಅಮಟೆ, ಬಿಂಬಲದಂಥ ಹಲವು ಕಾಡು ಫಲಗಳು ಎ ಮತ್ತು ಸಿ ವಿಟಮಿನ್‌ ಹೇರಳವಾಗಿ ಹೊಂದಿವೆ. ಇದಲ್ಲದೆ, ಚೆರ್ರಿ, ಸ್ಟ್ರಾಬೆರ್ರಿಯಂಥ ಹಣ್ಣುಗಳೂ ಸಹ ವಿಟಮಿನ್‌ ಸಿ ಜೀವಸತ್ವದ ಖನಿಗಳು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದೇ ಅಲ್ಲದೆ, ಕೂದಲ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಕೊಲಾಜಿನ್‌ ಉತ್ಪತ್ತಿಗೆ ಮತ್ತು ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದಕ್ಕೆ ಸಹಾಯಕವಾಗಿತ್ತದೆ.

the egg

ಮೊಟ್ಟೆ

ಕೂದಲುಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪ್ರೊಟೀನ್‌ ಮತ್ತು ಬಯೋಟಿನ್‌ಗಳು ಮೊಟ್ಟಯಲ್ಲಿ ಸಮೃದ್ಧವಾಗಿವೆ. ಕೂದಲು ಉದುರುವುದು ದೇಹದಲ್ಲಿ ಪ್ರೊಟೀನ್‌ ಕೊರತೆಯ ಸಂಕೇತವೂ ಆಗಿರಬಹುದು. ಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಕೆರಾಟಿನ್‌ ಎಂಬ ಪ್ರೊಟೀನ್‌ ಉತ್ಪತ್ತಿ ಮಾಡಲು ಬಯೋಟಿನ್‌ ಅವಶ್ಯಕ. ಮೊಟ್ಟೆಯಲ್ಲಿ ಜಿಂಕ್‌, ಸೆಲೆನಿಯಂ ಮುಂತಾದ ಹಲವು ಬಗೆಯ ಅಗತ್ಯ ಪೋಷಕಾಂಶಗಳಿದ್ದು, ದೇಹಾರೋಗ್ಯ ಉತ್ತಮಗೊಳ್ಳಲು ನೆರವಾಗುತ್ತವೆ.

ಸೊಪ್ಪು, ಹಸಿರು ತರಕಾರಿಗಳು

ಪಾಲಕ್‌, ಮೆಂತೆ, ಸಬ್ಬಸಿಗೆ ಮುಂತಾದ ಸೊಪ್ಪುಗಳು ಕಬ್ಬಿಣ, ವಿಟಮಿನ್‌ಗಳು ಮತ್ತು ಫೋಲೇಟ್‌ಗಳನ್ನು ಹೊಂದಿರುವಂಥವು. ಈ ಆಹಾರಗಳು ಮಾತ್ರವೇ ಅಲ್ಲ, ಬೀಟಾ ಕ್ಯಾರೋಟಿನ್‌ ಸಾಕಷ್ಟು ಪ್ರಮಾಣದಲ್ಲಿರುವ ಬೀಟ್‌ರೂಟ್‌, ಸಿಹಿ ಗೆಣಸು ಮುಂತಾದ ತರಕಾರಿಗಳು ಸಹ ಕೂದಲ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ. ಜೊತೆಗೆ ಬ್ರೊಕೊಲಿ, ಎಲೆಕೋಸು, ನುಗ್ಗೆಕಾಯಿ ಮುಂತಾದ ಹಸಿರು ತರಕಾರಿಗಳು ಅಗತ್ಯ.

seeds and castor oil

ಎಣ್ಣೆ ಬೀಜಗಳು

ಒಮೇಗಾ 3 ಮತ್ತು ವಿಟಮಿನ್‌ ಇ ವಿಫುಲವಾಗಿರುವ ಬಾದಾಮಿ, ಸೂರ್ಯಕಾಂತಿ ಬೀಜ, ಚಿಯಾ ಮತ್ತು ಅಗಸೆ ಬೀಜ ಮುಂತಾದವು ನಮ್ಮ ಆಹಾರದ ಅಗತ್ಯ ಭಾಗ ಆಗಿರಲೇ ಬೇಕಾದಂಥವು. ಜಿಂಕ್‌ ಸೆಲೆನಿಯಂನಂಥ ಇನ್ನಿತರ ಪೌಷ್ಟಿಕಾಂಶಗಳನ್ನೂ ಹೊಂದಿರುವ ಈ ಎಣ್ಣೆ ಬೀಜಗಳು, ನಮ್ಮ ದೇಹಕ್ಕೆ ಹೆಚ್ಚುವರಿ ಕ್ಯಾಲರಿಗಳನ್ನು ಅಷ್ಟಾಗಿ ಸೇರಿಸದೆಯೇ ಉಪಕಾರ ಮಾಡುತ್ತವೆ. ನಾವೇನು ತಿನ್ನುತ್ತೇವೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ, ನಮ್ಮ ಆರೋಗ್ಯವೇ ಸಾಕು. ನಳನಳಿಸುವ ಸೊಂಪಾದ ಕೂದಲು ಬೇಕೆ? ಸತ್ವಯುತ ಆಹಾರ ತಿನ್ನುವುದೊಂದೇ ಮಾರ್ಗ.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

Continue Reading

ಆರೋಗ್ಯ

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

vistara editorial: ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ಜನರೂ ಎಚ್ಚರ ವಹಿಸಬೇಕಿದೆ.

VISTARANEWS.COM


on

Vistara editorial, Let's take precautions for pneumonia infection
Koo

ಕೋವಿಡ್ ಬಳಿಕ ಚೀನಾದಲ್ಲಿ ಕೋಲಾಹಲ ಸೃಷ್ಟಿಸಿರುವ ನ್ಯುಮೋನಿಯಾ ರೀತಿಯ ಸೋಂಕು (Pneumonia Outbreak) ಇದೀಗ ಭಾರತಕ್ಕೂ ಹರಡಿರುವುದು ಖಚಿತವಾಗಿದೆ. ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಯಲ್ಲಿ ಇದರ 7 ಪ್ರಕರಣ ಪತ್ತೆಯಾಗಿದೆ. ದಿಲ್ಲಿಯಲ್ಲಿ ಕಾಣಿಸಿಕೊಂಡಿರುವುದು ಚೀನಾದಲ್ಲಿ ಕಾಣಿಸಿಕೊಂಡ ನ್ಯುಮೋನಿಯಾ ಬ್ಯಾಕ್ಟೀರಿಯಾ (Pneumonia Outbreak) ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಅಲರ್ಟ್‌ ಘೋಷಿಸಿದ ಭಾರತ ತೀವ್ರ ಮುನ್ನೆಚ್ಚರಿಕೆ ವಹಿಸಿತ್ತು. ಒಟ್ಟು 67 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ 7 ಮಾದರಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. 2023ರ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಕೆಲವೇ ದಿನಗಳ ಹಿಂದೆ ಈ ಬಗ್ಗೆ ಆಸ್ಪತ್ರೆಗಳ ಸನ್ನದ್ಧತೆ ಪರಿಶೀಲಿಸುವಂತೆ ಭಾರತದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿತ್ತು. ಈ ಬಗ್ಗೆ ಇನ್ನಷ್ಟು ಎಚ್ಚರ ವಹಿಸುವುದು ಸೂಕ್ತವಾಗಿದೆ(Vistara editorial).

ಚೀನಾದಲ್ಲಿ ಈ ಸೋಂಕು ತೀವ್ರಗತಿಯಲ್ಲಿ ಪಸರಿಸಿ ಆತಂಕ ಸೃಷ್ಟಿಸಿದೆ. ಮಕ್ಕಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿನಿಂದ ಚೀನಾದ ಕೆಲ ಪ್ರಾಂತ್ಯಗಳ ಆಸ್ಪತ್ರೆಗಳು ಭರ್ತಿಯಾಗಿವೆ. ಆ ಮೂಲಕ ಕೋವಿಡ್‌ ನಂತರ ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಪಸರಿಸಲಿದೆಯೇ ಎಂಬ ಆತಂಕ ಕಾಣಿಸಿಕೊಂಡಿತ್ತು. ಚೀನಾದಲ್ಲಿ ಆತಂಕ ಹುಟ್ಟಿಸಿದ ಈ ಸೋಂಕಿನಿಂದಾಗಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯ ಮತ್ತೆ ಜಾರಿ ಮಾಡಲಾಗಿದೆ. ಈ ಸೋಂಕು ಅಮೆರಿಕದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಭಾರತಕ್ಕೂ ಮೊದಲು ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್ ರಾಜ್ಯದ 3-14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರಿ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದೆ. ವೈದ್ಯಕೀಯ ಇಲಾಖೆ ಇದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ನಮ್ಮಲ್ಲಿ ಕರ್ನಾಟಕ ಸೇರಿ ಆರು ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯವನ್ನು ಅಲರ್ಟ್ ಮೋಡ್‌ನಲ್ಲಿ ಇಡಲು ಮುಂದಾಗಿವೆ. ಉಸಿರಾಟದ ಸಮಸ್ಯೆಗಳು ಕಂಡುಬಂದ ರೋಗಿಗಳನ್ನು ನಿಭಾಯಿಸಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಕೇಳಿಕೊಂಡಿವೆ.

ಭಾರತದಲ್ಲಿ ಪತ್ತೆಯಾದ ನ್ಯುಮೋನಿಯಾ ಬ್ಯಾಕ್ಟೀರಿಯಾವು (pneumonia bacteria) ಕೊರೋನಾವೈರಸ್‌ನಂತೆ (‌Corona Virus) ಪಸರಿಸುವ ಸಾಧ್ಯತೆ ಕಡಿಮೆ ಎಂದು ಕೆಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೊರೊನಾ ವೈರಸ್‌ ಕಾಲಿಟ್ಟ ಆರಂಭ ಕಾಲದಲ್ಲೂ ತಜ್ಞರು ಹೀಗೇ ಹೇಳಿದ್ದರು ಎಂಬುದನ್ನು ನೆನಪಿಡಬೇಕು. ಮುಂದೆ ಅದು ಎಷ್ಟು ಅನಾಹುತ ಮಾಡಿತು ಎಂಬುದನ್ನು ಹೇಳಬೇಕಿಲ್ಲ. ಕೋವಿಡ್‌ ಬಂದಾಗ, ಉಸಿರಾಟದ ಸಮಸ್ಯೆಯು ಮಾರಣಾಂತಿಕವಾಗಬಹುದು ಎಂಬ ಅರಿವು ಯಾರಿಗೂ ಇರಲಿಲ್ಲ. ನ್ಯುಮೋನಿಯಾದ ಮುಂದುವರಿದ ಹಂತದಲ್ಲೂ ಉಸಿರಾಟದ ತೊಂದರೆಯು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜ್ವರ, ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಸದ್ಯ ಈ ಸೋಂಕಿನ ಲಕ್ಷಣಗಳಾಗಿವೆ. ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ. ಆದರೆ ಮಕ್ಕಳಲ್ಲಿ ಈ ಜ್ವರ ಕಂಡುಬಂದರೆ ಹೆತ್ತವರ ಜಂಘಾಬಲ ಉಡುಗುವುದು ಸ್ವಾಭಾವಿಕ.

ಇನ್‌ಫ್ಲುಯೆಂಜಾ ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಭಾರತ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. ವರದಿಗಳ ಪ್ರಕಾರ, ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಈ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಶ್ವಾಸಕೋಶದ ಉರಿಯೂತ ಮತ್ತು ಹೆಚ್ಚಿನ ಜ್ವರ ಉಂಟುಮಾಡುತ್ತದೆ. ಆದರೆ ಕೆಮ್ಮಿನಂತಹ ಇತರ ಲಕ್ಷಣಗಳು ಕಾಣೆಯಾಗಿವೆ. ಉಸಿರಾಟದ ಕಾಯಿಲೆಗಳ ಪೀಕ್ ಸೀಸನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಈ ʼನಿಗೂಢ ನ್ಯುಮೋನಿಯಾ’ ಪ್ರಕರಣಗಳ ಉಲ್ಬಣ ಉಂಟಾಗಿದೆ. ಇದು ಪ್ರತಿರೋಧಕ ಶಕ್ತಿಯ ಕೊರತೆಯಿಂದ ಕಾಣಿಸಕೊಂಡಿರಬಹುದು ಎಂಬುದು ತಜ್ಞರ ಅನುಮಾನ. ಇದು ಹೊಸ ವೈರಸ್‌ ಅಲ್ಲ, ಮೊದಲು ಅಸ್ತಿತ್ವದಲ್ಲಿರುವುದೇ ಎಂದು ಗೊತ್ತಾಗಿದೆ.

ಅದೇನೇ ಇರಲಿ, ನಮ್ಮ ಮುನ್ನೆಚ್ಚರಿಕೆ ನಾವು ವಹಿಸೋಣ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳುವುದು, ಸಾಬೂನು ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಸ್ಪರ್ಶಿಸುವುದನ್ನು ತಪ್ಪಿಸುವುದು, ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವುದು, ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮಾಸ್ಕ್ ಬಳಸುವುದು, ಫ್ಲೂ ಪೀಡಿತ ವ್ಯಕ್ತಿಗಳಿಂದ ಕನಿಷ್ಠ ಅಂತರವನ್ನು ಕಾಪಾಡಿಕೊಳ್ಳುವುದು, ಸಾಕಷ್ಟು ನಿದ್ರೆ ಮಾಡುವುದು ಹಾಗೂ ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಇದರ ಮುನ್ನೆಚ್ಚರಿಕೆಗಳಾಗಿವೆ. ಇವು ವೈಯಕ್ತಿಕ ಮುನ್ನೆಚ್ಚರಿಕೆಗಳಾದರೆ, ಸರ್ಕಾರವೂ ಸಾಕಷ್ಟು ಎಚ್ಚರ ತೆಗೆದುಕೊಂಡು ಆರೋಗ್ಯ ಸೇವೆಯನ್ನು ಸನ್ನದ್ಧತೆಯಲ್ಲಿಡಬೇಕಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಶ್ಮೀರಿ ಪಂಡಿತರ ಅಳಲು ಕೊನೆಯಾಗಲು ಹೊಸ ವಿಧೇಯಕ ನೆರವಾಗಲಿ

Continue Reading

ಆರೋಗ್ಯ

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

ಚಳಿಗಾಲ ಮುಗಿಯುವಷ್ಟರಲ್ಲಿ ತಲೆಯಲ್ಲಿ ಕೂದಲುಗಳೂ ಮುಗಿದಿರುತ್ತವೆ ಎಂದು ಗೊಣಗುತ್ತಿದ್ದೀರಾ? ಅಗಸೆ ಬೀಜದಿಂದ (Flax Seeds Benefits For Hair) ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Flax Seeds Benefits For Hair
Koo

ಚಳಿಗಾಲದ ಹಲವು ಸಮಸ್ಯೆಗಳಲ್ಲಿ ಕೂದಲಿನದ್ದೂ ಒಂದು. ಸಿಕ್ಕುಸಿಕ್ಕಾಗಿ, ಒಣಗಿ, ಹೊಟ್ಟಾಗಿ, ತುಂಡಾಗಿ, ಉದುರಿ, ಬೋಳಾಗುವುದನ್ನು ತಪ್ಪಿಸುವುದು ಚಳಿಗಾಲದಲ್ಲಿ ಹರಸಾಹಸ. ಸೂಕ್ತ ಪೋಷಣೆಯಿಂದ ಇಂಥ ಸಮಸ್ಯೆಗಳನ್ನು ದೂರಮಾಡುವುದಕ್ಕೆ ಸಾಧ್ಯವಿರುವುದು ಹೌದಾದರೂ, ಯಾವುದನ್ನು ಹೇಗೆ ಪೋಷಿಸಬೇಕು ಎಂಬ ಮಾಹಿತಿ ಬೇಕಲ್ಲ. ಕೂದಲಿಗಾಗಿ ಮಾರುಕಟ್ಟೆಯಲ್ಲಿ ಲ‍ಭ್ಯವಿರುವ ಎಣ್ಣೆ, ಶಾಂಪುಗಳು ಕೆಲಸ ಮಾಡದಿದ್ದಾಗ ಕೆಲವು ಸರಳ ಸೂತ್ರಗಳನ್ನು ಬಳಸಿ ನಾವೇ ಕೂದಲಿನ ಆರೈಕೆ ಮಾಡಿಕೊಳ್ಳಬಹುದು. ಅಂದಹಾಗೆ, ಅಗಸೆ ಬೀಜ ಗೊತ್ತಲ್ಲವೇ? ಇದನ್ನು ಬಳಸಿ ಕೂದಲನ್ನು (Flax Seeds Benefits For Hair) ಆರೋಗ್ಯಪೂರ್ಣವಾಗಿಸಲು ಸಾಧ್ಯವಿದೆ.

Flax Seeds with Pottery

ಒಮೇಗಾ 3 ಕೊಬ್ಬಿನಾಮ್ಲ, ಪ್ರೊಟೀನ್‌, ವಿಟಮಿನ್‌ ಇ ಮತ್ತು ಹಲವು ಬಿ ವಿಟಮಿನ್‌ಗಳು ಹಾಗೂ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಗಸೆಬೀಜವನ್ನು ನಿತ್ಯದ ಅಡುಗೆಯಲ್ಲಿ ಉಪಯೋಗಿಸಬಹುದು. ಇದರಿಂದ ಇಡೀ ದೇಹದ ಸ್ವಾಸ್ಥ್ಯ ಹೆಚ್ಚುತ್ತದೆ. ಆದರೆ ಇದನ್ನು ನೇರವಾಗಿ ಕೂದಲಿಗೇ ಉಪಯೋಗಿಸಬಹುದೇ? ಕೂದಲು ಉದುರದಂತೆ ತಡೆಯಲು ಅಗಸೆ ಬೀಜ ಹೇಗೆ ನೆರವಾಗುತ್ತದೆ? ಇದರಿಂದ ಎಣ್ಣೆ ಮಾಡಬಹುದೇ? ಮುಂತಾದ ಹಲವು ಪ್ರಶ್ನೆಗಳು ಮನದಲ್ಲಿ ಬಂದೀತು. ಅವುಗಳಿಗೆಲ್ಲ ಇಲ್ಲಿದೆ ಉತ್ತರ:
ಅಗಸೆ ಬೀಜವನ್ನು ಎಣ್ಣೆ ಮಾಡಿ ಕೂದಲಿಗೆ ಉಪಯೋಗಿಸಬಹುದು. ಇದನ್ನು ರುಬ್ಬಿ ಜೆಲ್‌ನಂತೆ ಮಾಡಿ ಹೇರ್‌ಪ್ಯಾಕ್‌ಗೆ ಬಳಸಬಹುದು. ಪುಡಿ ಮಾಡಿ, ಮೊಸರಿನಲ್ಲಿ ಕಲೆಸಿ ಕೂದಲಿಗೆ ಹಚ್ಚಬಹುದು. ಇದು ಎಣ್ಣೆ ಬೀಜವೇ ಆದ್ದರಿಂದ ಅಗಸೆ ಎಣ್ಣೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರ ಜೆಲ್‌ಗಳೂ ಲಭ್ಯವಿವೆ. ಸ್ವಲ್ಪ ಸಮಯ ಹೊಂದಿಸಿಕೊಂಡರೆ, ನಾವೇ ಮಾಡಿಕೊಳ್ಳುವುದು ಸಹ ಕಷ್ಟವಲ್ಲ. ಕೂದಲಿಗೆ ಅಗಸೆ ಬೀಜವನ್ನು ಉಪಯೋಗಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬ ಮಾಹಿತಿಯಿದು.

Woman Is Massaging the Scalp. Isolated on a White Background.

ತಲೆಯ ಚರ್ಮಕ್ಕೆ ಲಾಭ

ತಲೆಯ ಚರ್ಮದಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುವ ಸಾಧ್ಯತೆ ಅಗಸೆಬೀಜಕ್ಕಿದೆ. ಕೂದಲ ಬುಡದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಿ, ಬುಡಕ್ಕೆ ಪೋಷಣೆ ಒದಗಿಸುತ್ತದೆ. ತಲೆಯ ಚರ್ಮದಲ್ಲಿರುವ ತೈಲ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಂತೆ ಪ್ರಚೋದಿಸಿ, ಅತಿಯಾಗಿ ಎಣ್ಣೆ ಜಿಡ್ಡಾಗದಂತೆ ತಡೆಯುತ್ತವೆ.

ಯಾವ ರೀತಿಯ ಕೂದಲು?

ಎಲ್ಲಾ ರೀತಿಯ ಕೂದಲುಗಳಿಗೂ ಅಗಸೆ ಬೀಜ ಉಪಯುಕ್ತ. ಒಣಗಿದ ಶುಷ್ಕ ಕೂದಲು, ಎಣ್ಣೆಜಿಡ್ಡಿನ ಕೂದಲು, ನೇರ ವೇಣಿ, ಸುರುಳಿ ಕೇಶಗಳು- ಹೀಗೆ ಎಲ್ಲ ರೀತಿಯ ಕೂದಲುಗಳಿಗೂ ಇದು ಉಪಯುಕ್ತ. ಕೂದಲನ್ನು ನಯವಾಗಿಸಿ, ಹೊಳಪು ನೀಡುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ ಅಗಸೆ ಬೀಜ.

ಕೂದಲನ್ನು ಬಲಗೊಳಿಸುತ್ತದೆ

ಕೂದಲು ಬಲಹೀನವಾಗಿ ತುಂಡಾಗುವುದನ್ನು ತಪ್ಪಿಸುವಂಥ ಉತ್ತಮ ಕೊಬ್ಬು ಮತ್ತು ವಿಟಮಿನ್‌ ಇ ಜೀವಸತ್ವ ಅಗಸೆಯಲ್ಲಿದೆ. ಕೂದಲ ಬುಡದಲ್ಲಿರುವ ಉರಿಯೂತ ಕಡಿಮೆಯಾಗುತ್ತಿದ್ದಂತೆ, ಸತ್ವಗಳನ್ನು ಹೀರಿಕೊಳ್ಳಲು ಕೂದಲಿಗೆ ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿ ಕೂದಲು ಶಕ್ತಿಯುತವಾಗುತ್ತದೆ. ಇದರಿಂದ ಒರಟಾದ ಕೂದಲುಗಳನ್ನೂ ನಯವಾಗಿಸಿ, ಮೃದುವಾಗಿಸಬಹುದು.

ರಿಪೇರಿ ಕೆಲಸ

ಇದರಲ್ಲಿರುವ ಜೀವಸತ್ವಗಳಲ್ಲಿ ಮುಖ್ಯವಾದವು ವಿಟಮಿನ್‌ ಇ ಮತ್ತು ಬಿ ಜೀವಸತ್ವಗಳು. ಹಲವು ರೀತಿಯ ಬಿ ವಿಟಮಿನ್‌ಗಳು ಅಗಸೆ ಬೀಜದಲ್ಲಿ ಇರುವುದರಿಂದ, ಕೂದಲಿಗೆ ಆಗಿರುವ ಹಾನಿಯನ್ನು ಸರಿ ಪಡಿಸುವ ಸಾಧ್ಯತೆಯನ್ನಿದು ಹೊಂದಿದೆ. ಕೂದಲ ಬೆಳವಣಿಗೆಗೂ ಈ ಜೀವಸತ್ವಗಳು ನೆರವಾಗುತ್ತವೆ. ಇನ್ನು ವಿಟಮಿನ್‌ ಇ ಎಂಬುದು ಪ್ರಬಲ ಉತ್ಕರ್ಷಣ ನಿರೋಧಕವೂ ಹೌದು. ಇವೆಲ್ಲವುಗಳ ಫಲವಾಗಿ, ಕೂದಲ ಹಾನಿ ಕಡಿಮೆಯಾಗಿ, ಕೇಶ ಸಶಕ್ತವಾಗುತ್ತದೆ.

Flax Seeds in a Wooden Spoon

ಹೇಗೆಲ್ಲಾ ಉಪಯೋಗಿಸಬಹುದು?

ಇದೊಂದು ಎಣ್ಣೆ ಬೀಜವಾದ್ದರಿಂದ, ಅಗಸೆಯ ಎಣ್ಣೆ ಲಭ್ಯವಿದೆ. ಇದನ್ನು ಆಹಾರವಾಗಿ ಉಪಯೋಗಿಸಬಹುದು. ಬೀಜಗಳನ್ನಂತೂ ನಾನಾ ರೀತಿಯಲ್ಲಿ ತಿನ್ನುವುದಕ್ಕೆ ಬಳಸಲಾಗುತ್ತದೆ. ಹಾಗಿಲ್ಲದಿದ್ದರೆ, ಕೊಬ್ಬರಿ ಎಣ್ಣೆಯಂಥ ಬೇರೆ ತೈಲದ ಜೊತೆ ಸೇರಿಸಿಕೊಂಡು, ಈ ಎಣ್ಣೆಯನ್ನು ತಲೆಗೆ ಮಸಾಜ್‌ ಮಾಡಬಹುದು. ಇದರ ಜೆಲ್‌ ಲಭ್ಯವಿದ್ದು, ಇದನ್ನು ತಲೆಗೆ ಹಚ್ಚಿದ ಮೇಲೆ ಒಂದೆರಡು ದಿನಗಳ ಕಾಲ ಹಾಗೆಯೇ ಬಿಡಬಹುದು, ಥೇಟ್‌ ಎಣ್ಣೆಯಂತೆ. ಬೇಕಾದಾಗ ತಲೆಸ್ನಾನ ಮಾಡಿದರಾಯಿತು.

ಇದನ್ನೂ ಓದಿ: Healthy Food For Women: 40 ದಾಟಿದ ಮಹಿಳೆ ಮರೆಯದೆ ತಿನ್ನಬೇಕಾದ ಆಹಾರಗಳ್ಯಾವುವು ಗೊತ್ತೇ?

Continue Reading
Advertisement
RBI governor Shaktikanta Das
ದೇಶ10 mins ago

RBI monetary policy: ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆಯ ನಿರ್ಧಾರ ಇಂದು; ಬಡ್ಡಿ ದರ ಏರುತ್ತಾ?

Stamp duty
ಕರ್ನಾಟಕ18 mins ago

Assembly Session : ಭೂಮಿ ಬೆಲೆ ಹೆಚ್ಚಿಸಿದ್ದ ಸರ್ಕಾರದಿಂದ ಮುದ್ರಾಂಕ ಶುಲ್ಕವೂ ಹೆಚ್ಚಳ

dengue flue
ಆರೋಗ್ಯ45 mins ago

Dengue Fever: ಸೊಳ್ಳೆಗಳಿಂದ ದೂರವಿರಿ! ಹೆಚ್ಚುತ್ತಿರುವ ಡೆಂಗ್ಯೂ ಜ್ವರ, 15 ಸಾವಿರ ಪ್ರಕರಣ ದಾಖಲು

Vistara Editorial, Government should conduct exam without any lapse
ಕರ್ನಾಟಕ1 hour ago

Cabinet Meeting: ಕೃಷಿಕರಲ್ಲದವರಿಂದ ಕೃಷಿ ಭೂಮಿ ಖರೀದಿಗೆ ಖೊಕ್‌, ವಿಧೇಯಕ ವಾಪಸ್ ಪಡೆಯಲು ಸಂಪುಟ ತೀರ್ಮಾನ

Raja Marga Father and Daughter
ಅಂಕಣ1 hour ago

Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

Hair Care Tips
ಆರೋಗ್ಯ2 hours ago

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

Heavy Rain warning In karnataka
ಉಡುಪಿ2 hours ago

Karnataka Weather : ಬಟ್ಟೆ ತೊಳೆಯೋಕೆ ವೀಕೆಂಡ್‌ವರೆಗೂ ಕಾಯ್ಬೇಡಿ; ಇನ್ನೊಂದು ವಾರ ಭಾರಿ ಮಳೆ!

Vistara editorial, Let's take precautions for pneumonia infection
ಆರೋಗ್ಯ3 hours ago

ವಿಸ್ತಾರ ಸಂಪಾದಕೀಯ: ನ್ಯುಮೋನಿಯಾ ಸೋಂಕಿನ ಬಗ್ಗೆ ಈಗಲೇ ಎಚ್ಚರ ವಹಿಸೋಣ

How To Remove Tea Stains From Clothes
ಲೈಫ್‌ಸ್ಟೈಲ್3 hours ago

How To Remove Tea Stains From Clothes: ಬಟ್ಟೆಯ ಮೇಲಿನ ಚಹಾ ಕಲೆಯನ್ನು ತೆಗೆಯುವ ಸುಲಭದ ಉಪಾಯ ಇದು!

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Dina Bhavishya
ಪ್ರಮುಖ ಸುದ್ದಿ4 hours ago

Dina Bhavishya: ಇಂದು ಈ ರಾಶಿಯವರು ತುಂಬಾ ಎಚ್ಚರ ವಹಿಸಬೇಕು!

Madhu Bangarappa in Belagavi Winter Session
ಕರ್ನಾಟಕ14 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ15 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ20 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಟ್ರೆಂಡಿಂಗ್‌