Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು? Vistara News

ಆರೋಗ್ಯ

Baking soda side effects: ಅಡುಗೆಯಲ್ಲಿ ಸೋಡಾ ಬಳಸಿದರೆ ಉಂಟಾಗುವ ಸೈಡ್ ಎಫೆಕ್ಟ್ ಏನೇನು?

ಯಾವತ್ತೋ ಅಪರೂಪಕ್ಕೆ ಉಪಯೋಗಿಸಿದರೆ ಸೋಡಾದಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇದನ್ನೇ ನೆಚ್ಚಿಕೊಂಡಿದ್ದರೆ (Baking soda side effects) ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ.

VISTARANEWS.COM


on

Baking soda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಧುನಿಕ ಅಡುಗೆಯ ವಿಧಾನಗಳು (Baking soda side effects) ಬದಲಾಗಿವೆ. ಅಜ್ಜಿಯ ತಲೆಮಾರಿನ ಹಾಗೆ ಅತ್ಯಂತ ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸುವ ವ್ಯವಧಾನ ಕಡಿಮೆಯಾಗಿದೆ. ಉದಾ, ನಾಳೆ ಬೆಳಗಿನ ತಿಂಡಿಗೆ ದೋಸೆ ಅಥವಾ ಇಡ್ಲಿ ಮಾಡಬೇಕೆಂದು ರಾತ್ರಿ ಮಲಗುವಾಗ ನೆನಪಾದರೆ ಮಾಡುವುದು ಹೇಗೆ? ಇಂದಿನ ಅಡುಗೆ ಮನೆಗಳಲ್ಲಿ ಹಾಗೂ ಬೆಳಗಿನ ಹೊತ್ತಿಗೆ ದೋಸೆ ಸಿದ್ಧವಾಗುತ್ತದೆ. ಅಕ್ಕಿ-ಬೇಳೆಗಳು ಇಷ್ಟು ಹೊತ್ತು ನೆನೆಯಬೇಕು, ರುಬ್ಬಿದ ಧಾನ್ಯಗಳ ಹಿಟ್ಟು ಇದಿಷ್ಟು ಹೊತ್ತು ಹುದುಗಬೇಕು ಎಂಬಂಥ ನಿಯಮಗಳನ್ನು ಕೆಲವೊಮ್ಮೆ ಗಾಳಿಗೆ ತೂರುತ್ತೇವೆ. ಹಲವು ಶಾರ್ಟ್‌ಕಟ್‌ಗಳನ್ನು ಅರಸುತ್ತೇವೆ, ಏನಕ್ಕೇನೋ ಬೆರೆಸುತ್ತೇವೆ.

ಚಿಟಿಕೆ ಸೋಡಾ ಬೇಕೆ?

ಯೂಟ್ಯೂಬ್‌ನ ಯಾವುದೋ ಚಾನೆಲ್‌ನಲ್ಲಿ ಮೃದುವಾದ ತಟ್ಟೆ ಇಡ್ಲಿ ಮಾಡುವುದಕ್ಕೆ ಚಿಟಿಕೆ ಸೋಡಾ ಬೆರೆಸಿ ಎನ್ನುವುದು ನಮಗೆ ಅನುಸರಣೀಯ ಎನಿಸಿಬಿಡುತ್ತದೆ. ಬಹಳಷ್ಟು ಬೇಕಿಂಗ್‌ಗಳಿಗೆ ಸೋಡಾ ಎಂತಿದ್ದರೂ ಅಗತ್ಯವಲ್ಲವೇ, ಇಡ್ಲಿ-ದೋಸೆ ಹಿಟ್ಟುಗಳಿಗೂ ಬೆರೆಸಿದರಾಯಿತು ಎನಿಸಿಬಿಡುತ್ತದೆ. ʻನಾವೇನು ಸೋಡಾ ಹಾಕುವುದಿಲ್ಲ. ಇನೊ (Eno) ಮಾತ್ರ ಬಳಸೋದುʼ ಎಂಬ ಸಮಜಾಯಿಶಿ ಕೊಡುವವರೆಷ್ಟು ಮಂದಿ ಬೇಕು? ಆಂಟಾಸಿಡ್‌ನಂತೆ ಬಳಕೆಯಾಗುವ ಸ್ಯಾಶೆ ಇನೊ. ಬೇಕಿಂಗ್‌ ಸೋಡಾ, ಇನೊ ಇಂಥವುಗಳು ಹಿಟ್ಟನ್ನು ತ್ವರಿತವಾಗಿ ಹುದುಗು ಬರುವಂತೆ ಸುಲಭದಲ್ಲಿ ಮಾಡುತ್ತವೆ. ಅವಸರಕ್ಕೆ ಹಿಟ್ಟು ಹುದುಗು ಬರಿಸುವ ಈ ವಸ್ತುಗಳು ಎಷ್ಟೋ ಜನರಿಗೆ ಮೆಚ್ಚು ಎನಿಸಿವೆ. ಇಷ್ಟೊಂದು ಪೀಠಿಕೆಯ ನಂತರವೂ ವಿಷಯ ಹೇಳದಿದ್ದರೆ ಹೇಗೆ? (Health tips) ಸೋಡಾ ಬಳಕೆ ಆರೋಗ್ಯಕ್ಕೆ ಹಿತವೇ ಎಂಬುದು ಪ್ರಶ್ನೆ.

ಇದನ್ನೂ ಓದಿ: Saffron Health Benefits: ಕೇಸರಿ, ಆರೋಗ್ಯಕ್ಕೆ ಇದೇ ಸರಿ! ಮರೆವಿನ ಕಾಯಿಲೆಗೂ ಇದರಲ್ಲಿ ಮದ್ದಿದೆ!

Baking soda

ಆಹಾರ ತಜ್ಞರೇನು ಹೇಳುತ್ತಾರೆ?

ಯಾವತ್ತೋ ವರ್ಷಕ್ಕೊಂದೆರಡು ಬಾರಿ ಉಪಯೋಗಿಸಿದರೆ ಈ ವಸ್ತುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದಗೆಟ್ಟರೆ ಅಚ್ಚರಿಯಿಲ್ಲ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್. ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್‌ ವ್ಯತ್ಯಾಸವಾಗಬಹುದು. ರಕ್ತದ ಪಿಎಚ್‌ ಸಾಮಾನ್ಯವಾಗಿ ಸೂಕ್ಷ್ಮ ಪ್ರಕ್ರಿಯೆಗಳಿಂದ ಸಮತೋಲನಕ್ಕೆ ಒಳಪಡುತ್ತದೆ. ಒಂದೊಮ್ಮೆ ಈ ಸಮತೋಲನ ವ್ಯತ್ಯಾಸವಾದರೆ ಅನಾರೋಗ್ಯ ನಿಶ್ಚಿತ. ದೇಹದ ಚಯಾಪಚಯದ ಮೇಲೆ ತೀವ್ರತರ ಪರಿಣಾಮ ಇದರಿಂದ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚುವುದು ಸಾಮಾನ್ಯ.

ಮೂತ್ರಪಿಂಡಕ್ಕೆ ತೊಂದರೆ

ಹಾಗಾಗಿಯೇ ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ ಬಳಕೆ ಅತಿಯಾದರೆ, ಅದರ ದೂರಗಾಮಿ ಪರಿಣಾಮವಾಗಿ ಮೂತ್ರಪಿಂಡಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಇನೊದಲ್ಲಿರುವುದು ಶೇ. 60ರಷ್ಟು ಸೋಡಿಯಂ. ಈ ವಸ್ತುಗಳನ್ನು ಎಂದಾದರೊಮ್ಮೆ ಉಪಯೋಗಿಸಬಹುದೇ ಹೊರತು ನಿತ್ಯದ ಅಡುಗೆಯಲ್ಲಿ ಇವುಗಳನ್ನು ಉಪ್ಪು, ಸಕ್ಕರೆಯಂತೆ ಬಳಸುವ ಹಾಗಿಲ್ಲ. (Health tips) ಸೋಡಾಗಿಂತಲೂ ಇನೊ ಕಡಿಮೆ ತೀವ್ರತೆಯದ್ದು ಹೌದಾದರೂ, ಇಡ್ಲಿ, ದೋಕ್ಲಾ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಪದೇಪದೆ ಬಳಸಿದರೆ ರಕ್ತದೊತ್ತಡ ಹೆಚ್ಚುವುದು ಖಂಡಿತ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಆಂಟಾಸಿಡ್‌ನಂತೆ ಬಳಸುವಾಗಲೂ 5 ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಸಲ್ಲದು. ಅದರಲ್ಲೂ ರಕ್ತದೊತ್ತಡ, ಮೂತ್ರಪಿಂಡ, ಯಕೃತ್‌ ಮತ್ತು ಹೃದಯದ ಆರೋಗ್ಯಗಳ ಸಮಸ್ಯೆ ಇರುವವರು ಇಂಥ ವಸ್ತುಗಳನ್ನು ಆದಷ್ಟೂ ಬಳಸದೇ ಇರುವುದೇ ಕ್ಷೇಮ. ಹೆಚ್ಚಿನ ಸೋಡಿಯಂ ದೇಹಕ್ಕೆ ಹೊರೆಯೇ ಅಗುತ್ತದೆ ಹೊರತು ಮತ್ತೇನಿಲ್ಲ.

Baking soda

ಇನ್ನಷ್ಟು ಸಮಸ್ಯೆಗಳು

ಯಾವುದೇ ಅಂಟಾಸಿಡ್‌ಗಳು ದೇಹದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸೋಂಕುಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಾಗುವ ಆಸಿಡಿಟಿ ನಿಯಂತ್ರಣಕ್ಕೆ ಆಂಟಾಸಿಡ್‌ ಮೊರೆ ಹೋಗುವ ಬದಲು, ಜೀವನಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯನ್ನು ಹತೋಟಿಗೆ ತರುವುದಕ್ಕೆ ಯತ್ನಿಸುವುದು ಕ್ಷೇಮ. ಸೋಡಾದಲ್ಲಿ ಹೇಳುವಂಥ ಯಾವುದೇ ಪೋಷಕಾಂಶ ಇಲ್ಲ. ಇದರಲ್ಲಿರುವ ಫಾಸ್ಫಾರಿಕ್‌ ಆಮ್ಲವು ಹೊಟ್ಟೆಯಲ್ಲಿರುವ ಜೀರ್ಣ ರಸದೊಂದಿಗೆ ಬೆರೆತು, ಪಚನವನ್ನು ಇನ್ನಷ್ಟು ನಿಧಾನಗೊಳಿಸುತ್ತದೆ; ಸತ್ವಗಳನ್ನು ಹೀರಿಕೊಳ್ಳುವ ದೇಹದ ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ಆರೋಗ್ಯ ಹಾಳು ಹೊರತಾಗಿ ಮತ್ತೇನಿಲ್ಲ.

ಯಕೃತ್ತಿಗೂ ಅಪಾಯ

ಸೋಡಾ ಬಳಕೆ ಹೆಚ್ಚಾದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್‌ ಉತ್ಪಾದನೆ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಅಂಶ ಏರಿ, ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬಾಗಿ ಪರಿವರ್ತನೆ ಹೊಂದುತ್ತದೆ. ಮಾತ್ರವಲ್ಲ, ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಕ್ಯಾಲ್ಶಿಯಂ ಇದ್ದರೂ ಅದನ್ನು ಹೀರಿಕೊಳ್ಳಲು ಮೂಳೆಗಳಿಗೆ ಸೋಡಿಯಂ ತಡೆಯೊಡ್ಡುತ್ತದೆ. ಆಸ್ಟಿಯೊಪೊರೊಸಿಸ್‌ನಂಥ ಮಾರಕ ಕಾಯಿಲೆಗಳು ಅಮರಿಕೊಳ್ಳುವುದಕ್ಕೆ ಇಷ್ಟು ಸಾಲದೇ?
ಹಾಗಾಗಿ ಹಿಟ್ಟು ಹುದುಗು ಬರಬೇಕೆಂದರೆ, ಎಂಟು ತಾಸುಗಳ ಅಥವಾ ರಾತ್ರಿ-ಬೆಳಗಿನ ಸಮಯ ನೀಡುವುದು ಒಳಿತು. ಕೆಲವೊಮ್ಮೆ ಬೇಕಿಂಗ್‌ ಮಾಡುವಾಗ ಮೊಟ್ಟೆ, ಮೊಸರು ಅಥವಾ ಅಗಸೆ ಬೀಜ ಮುಂತಾದ ಇನ್ನಿತರ ಮಾರ್ಗಗಳ ಬಳಕೆ ಸಾಧ್ಯವೇ ಎಂಬುದನ್ನು ಪರಿಶೀಲಿಸುವುದು ಲೇಸಲ್ಲವೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Heart Attack: ಹೃದಯಾಘಾತಕ್ಕೆ 6 ತಿಂಗಳಲ್ಲಿ 1,052 ಜನ ಬಲಿ; 80% ಮಂದಿ 11-25 ವರ್ಷದವರೇ!

Heart Attack: ಗುಜರಾತ್‌ನಲ್ಲಿ ಕಳೆದ ಆರು ತಿಂಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಹೃದಯಾಘಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Heart Attack
Koo

ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.

“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್‌ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್‌ ದಿಂಡೋರ್‌ ಮಾಹಿತಿ ನೀಡಿದ್ದಾರೆ.

Heart Attack

“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್‌ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್‌ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?

ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ

“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್‌ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Winter Diet Tips: ಚಳಿಗಾಲದಲ್ಲಿ ನಮ್ಮನ್ನು ಆರೋಗ್ಯವಾಗಿ ಇರಿಸುವ ಆಹಾರಗಳಿವು

ಚಳಿಗಾಲದಲ್ಲಿ ನಮ್ಮನ್ನು ಆರೋಗ್ಯವಾಗಿ ಇರಿಸುವಂಥ ಪೋಷಕಾಂಶಗಳು ಯಾವುದು? ಅವು ಯಾವ ಆಹಾರದಲ್ಲಿ ದೊರೆಯುತ್ತವೆ (Winter Diet Tips) ಮುಂತಾದ ವಿಷಯಗಳನ್ನು ತಿಳಿದುಕೊಂಡರೆ ಚಳಿಗಾಲವನ್ನು ಶೀತ-ನೆಗಡಿಗಳಿಲ್ಲದೆ ಬೆಚ್ಚಗೆ ಕಳೆಯಬಹುದು.

VISTARANEWS.COM


on

Winter Diet Tips
Koo

ನಮಗೆ ʻಶೀತʼ ಆಗದಿದ್ದರೆ ಚಳಿಗಾಲ ಒಳ್ಳೆಯದು ಎಂಬ ಮಾತಿದೆ. ಅಂದರೆ ನಮ್ಮ ಆರೋಗ್ಯ ಸರಿಯಿದ್ದರೆ ಋತುಮಾನಗಳನ್ನು ಆನಂದಿಸಬಹುದು. ನಮ್ಮದೇ ಆರೋಗ್ಯ ಕೈಕೊಟ್ಟರೆ…? ಆಗ ಎಲ್ಲ ಕಾಲವೂ ಕೇಡುಗಾಲವೇ. ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದಂಥ ಪೋಷಕಾಂಶಗಳು ನಮಗೆ ದೊರೆಯುತ್ತಿವೆ ಎಂಬುದು ಖಾತ್ರಿಯಾದರೆ ಉತ್ತಮ ಆರೋಗ್ಯವೂ ಖಾತ್ರಿಯಾದಂತೆ. ಹಾಗಾದರೆ ಚಳಿಗಾಲದಲ್ಲಿ ನಮ್ಮ ಪ್ರತಿರೋಧಕ ಶಕ್ತಿ ಜಾಗೃತವಾಗಿ ಇರುವಂತೆ ಮಾಡುವ ಪೋಷಕಾಂಶಗಳು ಮತ್ತು ಆಹಾರಗಳು (winter diet tips) ಯಾವುವು?

Foods high in vitamin C

ವಿಟಮಿನ್‌ ಸಿ

ಚಳಿಗಾಲದಲ್ಲಿ ನಮಗೆ ಅಗತ್ಯವಾಗಿ ಬೇಕಾದಂಥ ಸತ್ವಗಳಲ್ಲಿ ವಿಟಮಿನ್‌ ಸಿ ಮುಖ್ಯವಾಗಿದ್ದು, ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಇದು ಅತ್ಯಗತ್ಯ. ಜೊತೆಗೆ ಚಳಿಗಾಲದಲ್ಲಿ ಸಮಸ್ಯೆಯಾಗುವ ಇನ್ನೊಂದು ಭಾಗವೆಂದರೆ ಚರ್ಮ. ಇದರ ರಕ್ಷಣೆಗೂ ಸಿ ಜೀವಸತ್ವದ ಆವಶ್ಯಕತೆ ಅಧಿಕವಾಗಿದೆ.

ಇದರ ಮೂಲಗಳೇನು?

ಇದಕ್ಕಾಗಿ ಸೀಬೆ ಹಣ್ಣು, ಕಿವಿ, ಪಪ್ಪಾಯ, ನಿಂಬೆ ರಸ, ಕಿತ್ತಳೆ, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ, ಮುಂತಾದವುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ಇವುಗಳ (ವಿಟಮಿನ್‌ ಸಿ ಸೇರಿದಂತೆ) ಉತ್ಕರ್ಷಣ ನಿರೋಧಕಗಳು ಸೋಂಕುಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಜಿಂಕ್

ಜಂಕ್‌ ಮಾತ್ರ ಕೇಳಿ ಗೊತ್ತಿರುವವರಿಗೆ ಜಿಂಕ್‌ ಅಥವಾ ಸತು ಸ್ವಲ್ಪ ಹೊಸತೆನಿಸಬಹುದು. ಸತುವಿನ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಚಳಿಗಾಲದಲ್ಲಿ ವೈರಸ್‌ಗಳು ದಾಳಿ ಇಡಲು ಇಷ್ಟು ಸಾಲದೇ? ದೇಹದ ಕೋಶಗಳ ಬೆಳವಣಿಗೆಗೆ ಮತ್ತು ರಿಪೇರಿಗೆ ಅಗತ್ಯವಾದ ಪೋಷಕಾಂಶವಿದು. ಹಾಗಾಗಿ ಜಿಂಕ್‌ ನಮ್ಮ ಆಹಾರದಲ್ಲಿ ಇರುವಂತೆ ನಿಗಾ ವಹಿಸುವುದು ಮುಖ್ಯ.

ಮೂಲಗಳೇನು?

ಆಹಾರದಿಂದ ಜಂಕ್‌ ಕಡಿಮೆ ಮಾಡಿದರೆ, ಜಿಂಕ್‌ ದೇಹಕ್ಕೆ ಒದಗಿಸುವುದು ಕಷ್ಟವಲ್ಲ. ಬೇಳೆ ಮತ್ತು ಇಡಿಕಾಳುಗಳು, ನಾನಾ ರೀತಿಯ ಬೀಜಗಳು, ಡೈರಿ ಉತ್ಪನ್ನಗಳು, ಲೀನ್‌ ಮೀಟ್‌, ಇಡೀ ಧಾನ್ಯಗಳು- ಇಂಥ ಎಲ್ಲಾ ಆಹಾರಗಳಲ್ಲೂ ಸತು ದೊರೆಯುತ್ತದೆ.

ಕಬ್ಬಿಣಾಂಶ

ಈ ಖನಿಜಕ್ಕೆ ದೇಹದಲ್ಲಿ ಬಹಳಷ್ಟು ಕೆಲಸಗಳಿವೆ ಮಾಡುವುದಕ್ಕೆ. ಕೆಂಪು ರಕ್ತ ಕಣಗಳನ್ನು ಉತ್ಪಾದನೆ ಮಾಡುವುದರಿಂದ ಹಿಡಿದು ಆಮ್ಲಜನಕವನ್ನು ದೇಹದೆಲ್ಲೆಡೆ ಸಾಗಿಸುವವರೆಗೆ ಎಲ್ಲದಕ್ಕೂ ಕಬ್ಬಿಣ ಅಗತ್ಯ. ಇದರ ಕೊರತೆಯಾದರೆ ರಕ್ತಹೀನತೆ ಗಂಟು ಬೀಳುತ್ತದೆ. ಆದರೆ ಕಬ್ಬಿಣದಂಶ ಹೇರಳವಾಗಿರುವಂಥ ಬಹಳಷ್ಟು ಆಹಾರಗಳು ನಮಗೆ ಲಭ್ಯವಿವೆ ಸುಲಭದಲ್ಲಿ.

ಮೂಲಗಳೇನು?

ಪಾಲಕ್‌ನಂಥ ಹಸಿರು ಸೊಪ್ಪುಗಳು, ಕೆಂಪು ಹರಿವೆಯಂಥವು, ಬೀಟ್‌ರೂಟ್‌, ನುಗ್ಗೆಕಾಯಿ, ಹಲವು ರೀತಿಯ ಬೀಜಗಳು, ಕಾಳುಗಳು, ಮೀನುಗಳು, ತೋಫು, ಕಿನೊವಾ ಮುಂತಾದವುಗಳಲ್ಲಿ ಕಬ್ಬಿಣದಂಶ ಧಾರಾಳವಾಗಿ ದೊರೆಯುತ್ತದೆ.

Fish and egg

ಸೂಕ್ಷ್ಮ ಪೋಷಕಾಂಶಗಳು

ಮೊಟ್ಟೆ ಮತ್ತು ಕೊಬ್ಬಿನ ಮೀನುಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಸಾಂದ್ರವಾಗಿವೆ. ಇವು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿಯಾಗಿವೆ. ವಿಟಮಿನ್‌ ಡಿ, ಬಿ6, ಬಿ12 ಮುಂತಾದ ಜೀವಸತ್ವಗಳು ಎಲ್ಲಾ ಆಹಾರಗಳಲ್ಲೂ ಸುಲಭವಾಗಿ ದೊರೆಯುವುದು ಕಷ್ಟ. ಹಾಗಾಗಿ ಮೀನು, ಮೊಟ್ಟೆಯಂಥ ತಿನಿಸುಗಳು ಅಗತ್ಯವಾಗುತ್ತವೆ. ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್‌, ಸೆಲೆನಿಯಂ, ಜಿಂಕ್‌, ಕಬ್ಬಿಣ, ತಾಮ್ರದ ಸತ್ವಗಳು ದೊರೆಯುತ್ತವೆ. ಮೀನುಗಳಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್‌ ಡಿ ಅಂಶ ಭರಪೂರ ದೊರೆಯುತ್ತದೆ. ಇದರಿಂದ ದೇಹದಲ್ಲಿ ಉತ್ತಮ ಕೊಬ್ಬಿನ ಮಟ್ಟ ಹೆಚ್ಚುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ದೃಷ್ಟಿಯೂ ಚುರುಕಾಗುತ್ತದೆ.

Turkish national sweets are sold at the fair. Multi-colored Asian desserts stacked on the table.

ಶರ್ಕರಪಿಷ್ಟಾದಿಗಳು ಮಿತಿಯಲ್ಲಿರಲಿ

ಚಳಿಗಾಲವೆಂದರೆ ನಾನಾ ರೀತಿಯ ತಿನಿಸುಗಳನ್ನು ಬಾಯಿ ಬೇಡುವ ಕಾಲ. ಜೊತೆಗೆ, ಸೂರ್ಯನ ಬೆಳಕು ಕಡಿಮೆಯಾದಂತೆ ದೇಹದಲ್ಲಿ ಸೆರೊಟೋನಿನ್‌ ಹಾರ್ಮೋನಿನ ಮಟ್ಟವೂ ಕಡಿಮೆಯಾಗಿ, ಹೆಚ್ಚು ಪಿಷ್ಟಭರಿತ ಆಹಾರವನ್ನು ದೇಹ ಬಯಸುತ್ತದೆ. ಪಿಷ್ಟದ ಪ್ರಮಾಣ ಮಿತಿ ಮೀರಿದರೆ ಆರೋಗ್ಯ ಸಮಸ್ಯೆಗಳು ಗಂಟು ಬೀಳಬಹುದು. ಹಾಗಾಗಿ ಪೋಷಕಾಂಶಗಳು ಸಮತೋಲನದಲ್ಲಿರಲಿ.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Continue Reading

ಆರೋಗ್ಯ

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Vanivilas Hospital : ವಾಣಿ ವಿಲಾಸ್‌ ಆಸ್ಪತ್ರೆಯಲ್ಲಿ ಮೊದಲಿನಿಂದಲೂ ಸ್ವಚ್ಛತೆ ತೆ ಕುರಿತು ಅಸಮಾಧಾನಗಳು ಇದ್ದೆಇದೆ. ಸದ್ಯ ಆಸ್ಪತ್ರೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ದು, ಎರಡು ದಿನದ ಹಿಂದಷ್ಟೇ ಜನಿಸಿದ ಮಗುವಿಗೆ ಕಚ್ಚಿ (Cockroach bite) ಗಾಯಗೊಳಿಸಿವೆ.

VISTARANEWS.COM


on

By

Cockroaches bite baby born 2 days ago in vanivilas hospital
Koo

ಬೆಂಗಳೂರು: ಪ್ರತಿಷ್ಠಿತ ವಾಣಿವಿಲಾಸ್‌ ಆಸ್ಪತ್ರೆಯಲ್ಲಿ (Vanivilas Hospital) ಜಿರಳೆ ಕಾಟ (Cockroach bite) ಹೆಚ್ಚಾಗಿದ್ದು, ಎರಡು ದಿನದ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನಾಗರಬಾವಿ ನಿವಾಸಿ ಆಶಾರಾಣಿ ಅವರು ಕಳೆದೆರಡು ದಿನದ ಹಿಂದೆ ವಾಣಿವಿಲಾಸ್ ಆಸ್ಪತ್ರೆಗೆ ಹೆರಿಗೆ ನೋವಿನಿಂದ ದಾಖಲಾಗಿದ್ದರು.

ಕಳೆದ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದರಿಂದ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ವಾರ್ಡ್‌ ಪೂರ್ತಿ ಎಲ್ಲೆಂದರಲ್ಲಿ ಜಿರಳೆಗಳೇ ತುಂಬಿ ಹೋಗಿದ್ದು, ಮಗುವನ್ನು ಕಚ್ಚಿ ಹಾಕಿವೆ. ಬೆಡ್ ಸ್ವಚ್ಛಗೊಳಿಸದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ಹೆರಿಗೆ ವಾರ್ಡ್ ಸೇರಿದಂತೆ ಬಾಣಂತಿ ವಾರ್ಡ್‌ನಲ್ಲೂ ಜಿರಳೆಗಳೇ ಇವೆ. ಎಳೆ ಕಂದಮ್ಮಗಳ ಸುತ್ತ ಜಿರಳೆಗಳು ಓಡಾಡುತ್ತಿವೆ. ಮೊನ್ನೆಯಿಂದಲೂ ಪುಟ್ಟ ಮಗುವಿಗೆ ಜಿರಳೆಗಳು ಕಚ್ಚುತ್ತಿದೆ. ಈ ಬಗ್ಗೆ ಆಸ್ಪತ್ರೆ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಹೇಳಿದರೂ ಕ್ಯಾರೇ ಎನ್ನದೆ ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಡವರ, ಮಧ್ಯಮ ವರ್ಗದವರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳೇ ಕಂಟಕವಾಗುತ್ತಿದೆ. ಹಿಂದೆಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಯಂತ್ರೋಪಕರಣಗಳು, ಮೂಲಭೂತ ಸೌಕಾರ್ಯವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಕಾಲಕಾಲಕ್ಕೆ ಅವೆಲ್ಲವೂ ಮರೆಯಾದವು, ಆದರೆ ಸ್ವಚ್ಛತೆ ಮಾತ್ರ ಶೂನ್ಯವಾಗಿದೆ.

ಮಗುವಿಗೆ ಜಿರಳೆ ಕಚ್ಚಿಲ್ಲ

ಮಗುವಿಗೆ ಜಿರಳೆ ಕಚ್ಚಿಲ್ಲ. ಬದಲಿಗೆ ಪೋಷಕರು ಮಗುವಿಗೆ ಹಾಕಿರುವ ಸ್ವೇಟರ್‌ನಿಂದ ಇನ್ಫೆಕ್ಷನ್ ಆಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ಮೆಡಿಕಲ್‌ ಸುಪರಿಟೆಂಡೆಂಟ್‌ ಸವಿತಾ ಮಾಹಿತಿ ನೀಡಿದ್ದಾರೆ. ನಾವು ನಮ್ಮ ವೈದ್ಯರ ಜತೆ ಮಾತನಾಡಿದ್ದೇವೆ ಅದು ಜಿರಳೆ ಕಚ್ಚಿರುವುದರಿಂದ ಆಗಿಲ್ಲ ಎಂದು ಹೇಳಿದ್ದಾರೆ. ವೈದ್ಯರು ಮಗುವಿನ ತಪಾಸಣೆ ಮಾಡಿದ್ದಾರೆ. ಸ್ವೇಟರ್ ಹಾಕಿರುವ ಕಾರಣಕ್ಕೆ ಮಗುವಿನ ಮೈ ಮೇಲೆ ಅಲರ್ಜಿ ಆಗಿದೆ. ಇದು ಮಕ್ಕಳಲ್ಲಿ ಸ್ವಾಭಾವಿಕ ಕಾಣಿಸಿಕೊಳ್ಳುತ್ತದೆ. ಮಕ್ಕಳ ಚರ್ಮ ಸಾಕಷ್ಟು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಇಂತಹ ಅಲರ್ಜಿ ಆಗುವುದು ಮಾಮೂಲಿ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Continue Reading

ಆರೋಗ್ಯ

Health Tips: ಮೋದಿ ಆರೋಗ್ಯದ ಹಿಂದಿದೆ ‘ನುಗ್ಗೆಕಾಯಿ ಮಹಿಮೆ’; ತೂಕ ಇಳಿಕೆಗೆ ನುಗ್ಗೆ ಹೇಗೆ ನೆರವು?

Health Tips: ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಆಹಾರದಲ್ಲಿ ನುಗ್ಗೆಯನ್ನೂ ಬಳಸುತ್ತಾರೆ. ಹಾಗಾದರೆ ನುಗ್ಗೆಯಲ್ಲಿನ ಔಷಧೀಯ ಗುಣಗಳೇನು? ಸೇವನೆಯಿಂದಾಗುವ ಪ್ರಯೋಜನಗಳೇನು? ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

paratha
Koo

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ರಾಜಕಾರಣದಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಒಂದು ದಿನವೂ ರಜೆ ಮಾಡದೆ ಅವರು ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಮಧ್ಯೆ ಚುನಾವಣೆ ಇದ್ದರೆ ದೇಶಾದ್ಯಂತ ಓಡಾಡಿ ಪ್ರಚಾರದಲ್ಲಿಯೂ ತೊಡಗಿಕೊಳ್ಳುತ್ತಾರೆ. ಹೀಗೆ ಸದಾ ಕ್ರಿಯಾಶೀಲರಾಗಿರಲು ಅವರ ಜೀವನ ಶೈಲಿಯೂ ಕಾರಣ. ಮೋದಿ ಯೋಗ, ಧ್ಯಾನ ಮತ್ತು ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ಪೂಲಕ ಸದಾ ಫಿಟ್‌ ಆಗಿರುತ್ತಾರೆ. ಮೋದಿ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರದ ಭಾಗವಾಗಿ ನುಗ್ಗೆ ಪರೋಟಗಳನ್ನು (Moringa parathas) ಸೇವಿಸುವುದನ್ನು ಉಲ್ಲೇಖಿಸಿದ್ದಾರೆ. ಹಾಗಾದರೆ ನುಗ್ಗೆ ಹೇಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ? ತೂಕ ಇಳಿಕೆಗೆ ಇದು ಹೇಗೆ ನೆರವಾಗುತ್ತದೆ? ಎನ್ನುವುದರ ವಿವರ ಇಲ್ಲಿದೆ (Health Tips).

ಪೋಷಕಾಂಶಗಳಿಂದ ಸಮೃದ್ಧ

ನುಗ್ಗೆ ಎಲೆ ಜೀವಸತ್ವಗಳು (ಎ, ಸಿ, ಇ ಮತ್ತು ಬಿ-ಕಾಂಪ್ಲೆಕ್ಸ್), ಖನಿಜಗಳು (ಕ್ಯಾಲ್ಶಿಯಂ, ಮೆಗ್ನೀಶಿಯಮ್, ಪೊಟ್ಯಾಶಿಯಮ್) ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವು ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತವೆ. ಮಾತ್ರವಲ್ಲ ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತವೆ. ನುಗ್ಗೆ ನೈಸರ್ಗಿಕವಾಗಿ ಹಸಿವನ್ನು ನಿಗ್ರಹಿಸುತ್ತದೆ. ಇದರಲ್ಲಿ ಫೈಬರ್ ಅಂಶಗಳು ಧಾರಾಳವಾಗಿವೆ. ಜತೆಗೆ ಹೆಚ್ಚಿನ ಕ್ಯಾಲರಿಯನ್ನು ನಾಶ ಮಾಡುತ್ತದೆ.

ಕೊಬ್ಬು ನಿಯಂತ್ರಿಸುತ್ತದೆ

ನುಗ್ಗೆ ಸಕ್ಕರೆ ಅಂಶಗಳನ್ನು ಹೊಸ ಕೊಬ್ಬಿನ ಕೋಶಗಳಾಗಿ ಪರಿವರ್ತಿಸುವುದನ್ನು ತಡೆಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್‌ನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದರಲ್ಲಿನ ಮೆಥಿಯೋನಿನ್ ಕೊಬ್ಬನ್ನು ಹೀರಿಕೊಳ್ಳುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೊಟ್ಟೆಯ ಕೊಬ್ಬು ನೈಸರ್ಗಿಕವಾಗಿ ಕರಗುತ್ತದೆ. ದೇಹವು ಆಹಾರವನ್ನು ಪರಿಣಾಮಕಾರಿಯಾಗಿ ಹೀರಿಕೊಂಡಾಗ ಮತ್ತು ಸರಿಯಾಗಿ ಕರಗಿದಾಗ ಸಹಜವಾಗಿ ತೂಕ ಕಡಿಮೆಯಾಗುತ್ತದೆ.

ಸಂಶೋಧನೆ ಏನು ಹೇಳುತ್ತದೆ?

ಅಧಿಕ ತೂಕ ಹೊಂದಿದ 41 ಮಂದಿಗೆ 8 ವಾರಗಳ ಕಾಲ ಒಂದೇ ರೀತಿಯ ಆಹಾರ ಮತ್ತು ವ್ಯಾಯಾಮ ಒದಗಿಸಿ ಅಧ್ಯಯನ ನಡೆಸಲಾಗಿದೆ. ಜತೆಗೆ ಅವರಿಗೆ 900 ಮಿಗ್ರಾಂ ನುಗ್ಗೆಕಾಯಿ, ಅರಿಶಿನ ಮತ್ತು ಕರಿಬೇವಿನ ಎಲೆಗಳ ಪೂರಕ ಮಿಶ್ರಣವನ್ನು ನೀಡಲಾಗಿತ್ತು. ಪರಿಣಾಮ ಅವರು ಸುಮಾರು 4.8 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಸಂಶೋಧನಾಕಾರರು ತಿಳಿಸಿದ್ದಾರೆ. 2021ರಲ್ಲಿ ನಡೆಸಿದ ಇನ್ನೊಂದು ಅಧ್ಯಯನದಲ್ಲಿ ನುಗ್ಗೆ ಎಲೆಯಲ್ಲಿನ ಸಾರವು ಬೊಜ್ಜು ವಿರೋಧಿ ಗುಣ ಹೊಂದಿದೆ ಎನ್ನುವುದು ಸಾಬೀತಾಗಿದೆ.

ಆ್ಯಂಟಿ ಆ್ಯಕ್ಸಿಡೆಂಟ್‌ ಗುಣ

ನುಗ್ಗೆಕಾಯಿಯಲ್ಲಿ ಕ್ವೆರ್ಸೆಟಿನ್, ಕ್ಲೋರೊಜೆನಿಕ್ ಆಮ್ಲ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ಆ್ಯಂಟಿ ಆ್ಯಕ್ಸಿಡೆಂಟ್‌ ಗುಣಗಳಿವೆ. ಇದು ಉರಿಯೂತದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಕೊಬ್ಬು ಹೀರಿಕೊಳ್ಳುವ ನಾರಿನಾಂಶ

ಮೊದಲೇ ಹೇಳಿದಂತೆ ನುಗ್ಗೆಕಾಯಿಯಲ್ಲಿ ನಾರಿನಾಂಶ ಅಧಿಕವಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಮಾಡುತ್ತದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಸರಿಯಾದ ಪೋಷಕಾಂಶ ಹೀರಿಕೊಳ್ಳಲು ಮತ್ತು ತ್ಯಾಜ್ಯವನ್ನು ಸಮರ್ಪಕವಾಗಿ ಹೊರ ಹಾಕಲು ನೆರವಾಗುತ್ತದೆ. ಇದು ತೂಕ ಇಳಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: Drumstick Leaves Benefits: ಸರ್ವಗುಣ ಸಂಪನ್ನ ನುಗ್ಗೆಸೊಪ್ಪಿನ ಮಹಾತ್ಮೆ!

ಎಚ್ಚರಿಕೆ ವಹಿಸಿ

ನುಗ್ಗೆ ಸೇವನೆಯಿಂದ ಮಾತ್ರ ತೂಕ ಇಳಿಕೆಯಾಗುವುದಿಲ್ಲ ಎನ್ನುವುದನ್ನು ಗಮನಿಸಿ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ ಸೇರಿದಂತೆ ಸಾಕಷ್ಟು ಅಂಶಗಳ ಸಂಯೋಜನೆಗಳ ಜತೆಗೆ ನುಗ್ಗೆಯ ಸೇವನೆ ಕೊಬ್ಬು ಕರಗಲು ನೆರವಾಗುತ್ತದೆ. ತೂಕ ಇಳಿಕೆಗಾಗಿ ಒಮ್ಮಿಂದೊಮ್ಮೆಗೆ ಅತಿಯಾದ ನುಗ್ಗೆಯ ಬಳಕೆ ಸಲ್ಲ. ಮಧುಮೇಹಿಗಳು, ಗರ್ಭಿಣಿಯರು ಅಥವಾ ಇತರ ಅರೋಗ್ಯ ಸಮಸ್ಯೆ ಹೊಂದಿರುವವರು ನುಗ್ಗೆ ಸೇವನೆಯ ಮುನ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯ. ನಿಯಮಿತವಾಗಿ ತೆಗೆದುಕೊಳ್ಳುವ ಔಷಧಗಳ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Narendra Modi And Rahul Gandhi
ದೇಶ9 mins ago

Election Results 2023: ವಿಧಾನಸಭೆ ಚುನಾವಣೆಗಳು ಲೋಕಸಭೆಯ ಸೆಮಿಫೈನಲ್‌ ಏಕೆ?

Rain disrupted for two more days
ಉಡುಪಿ29 mins ago

Karnataka Weather: ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮಳೆಯಾಟ!

Healthy relationship
ಅಂಕಣ34 mins ago

Raja Marga Column : ಚೆನ್ನಾಗಿದ್ದ ಸಂಬಂಧಗಳು ಕೆಡೋದ್ಯಾಕೆ? ಇಲ್ಲಿವೆ 12 ಕಾರಣಗಳು

Exit Poll_Vist
ದೇಶ49 mins ago

Assembly Election Result 2023: ಮತಗಟ್ಟೆ ಸಮೀಕ್ಷೆಗಳು ಹೇಳಿದ್ದೇನು?

Assembly Election Results 2023 Live
ದೇಶ54 mins ago

Election Results 2023: ನಾಲ್ಕೂ ರಾಜ್ಯಗಳಲ್ಲಿ ಪೈಪೋಟಿ ಹೇಗಿದೆ? ಯಾರಿಗೆ ವಿಜಯಮಾಲೆ?

Girl Child
ಕರ್ನಾಟಕ1 hour ago

ವಿಸ್ತಾರ ಸಂಪಾದಕೀಯ: ಭ್ರೂಣ ಹತ್ಯೆ ಜಾಲ ಆಘಾತಕಾರಿ

Dina Bhavihsya
ಪ್ರಮುಖ ಸುದ್ದಿ2 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Sphoorti Salu
ಸುವಚನ2 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Assembly Election Results 2023
Live News7 hours ago

Election Results 2023 Live: ಕೆಲವೇ ಕ್ಷಣಗಳಲ್ಲಿ 4 ರಾಜ್ಯಗಳ ಚುನಾವಣೆ ಫಲಿತಾಂಶ; ಇಲ್ಲಿದೆ ಕ್ಷಣಕ್ಷಣದ ಅಪ್‌ಡೇಟ್ಸ್

Kapil Sharma And Sunil Grover
ಕಿರುತೆರೆ/ಒಟಿಟಿ8 hours ago

Kapil Sharma: 6 ವರ್ಷದ ಮುನಿಸು ಮರೆತು ಒಂದಾದ ಕಪಿಲ್‌ ಶರ್ಮಾ, ಸುನಿಲ್‌ ಗ್ರೋವರ್;‌ ಬರ್ತಿದೆ ಶೋ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Dina Bhavihsya
ಪ್ರಮುಖ ಸುದ್ದಿ2 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ14 hours ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ1 day ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ5 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

ಟ್ರೆಂಡಿಂಗ್‌