Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ! - Vistara News

ಆರೋಗ್ಯ

Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಪುಟ್ಟ ಚೆರ್ರಿಗಳನ್ನು ತಿನ್ನುವುದರ ಲಾಭಗಳು (Benefits Of Cherries) ಬಹಳಷ್ಟಿವೆ. ಮೈಕೈ ನೋವು ಮಾಯ ಮಾಡುವುದರಿಂದ ಹಿಡಿದು, ಹೃದಯದ ಆರೋಗ್ಯ ಕಾಪಾಡುವವರೆಗೆ ಇದರ ಸಾಮರ್ಥ್ಯವಿದೆ. ಇದಲ್ಲದೆ ಇನ್ನೂ ಏನೇನು ಲಾಭಗಳಿವೆ ಚೆರ್ರಿ ತಿನ್ನುವುದರಿಂದ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

VISTARANEWS.COM


on

Benefits Of Cherries
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾವುದೇ ಕೇಕ್‌ ಮೇಲೆ ಅಥವಾ ಸೋಡಾದಲ್ಲಿ ಕೂತು ಕರೆಯುವ ಚೆರ್ರಿಯನ್ನು ನೋಡಿ ತಿನ್ನಲು ಆಸೆ ಪಡುವವರು ಎಷ್ಟೋ ಮಂದಿ. ಕೆಲವೊಮ್ಮೆ ಸಕ್ಕರೆಭರಿತ ಕೃತಕ ಚೆರ್ರಿಗಳು ಕೇಕ್‌ಗಳನ್ನು ಅಲಂಕರಿಸಿದರೆ, ಹಲವು ಬಾರಿ ನಿಜವಾದ ಚೆರ್ರಿ ಹಣ್ಣುಗಳೇ ಕೂತು, ತಿನ್ನುವವರ ನಡುವೆ ಜಗಳ ಸೃಷ್ಟಿಸುತ್ತವೆ. ವಿಶ್ವದೆಲ್ಲೆಡೆ ದೊರೆಯುವ ಚೆರ್ರಿಗಳನ್ನು ಗಮನಿಸಿದರೆ ನೂರಾರು ಬಗೆಗಳಿವೆ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ದೊರೆಯುವುದು ಬಿಂಗ್‌ ಚೆರ್ರಿ. ಕಡುಕೆಂಪು ಬಣ್ಣದ ಸಿಹಿಯಾದ ಚೆರ್ರಿಗಳಿವು. ಇದೊಂದೇ ಅಲ್ಲ, ಹುಳಿಯಾದ ಟಾರ್ಟ್‌ ಚೆರ್ರಿ, ರೇನರ್‌ ಚೆರ್ರಿ, ಕಪ್ಪು ಚೆರ್ರಿ, ತುಸು ಕೆಂಪು ಬಣ್ಣದ್ದು, ಅಚ್ಚ ಕೆಂಪು ಬಣ್ಣದ್ದು- ಹೀಗೆ ನಾನಾ ರೀತಿಯ ಚೆರ್ರಿಗಳು ಪ್ರಾಂತ್ಯಾವಾರ ಭಿನ್ನತೆಯೊಂದಿಗೆ ಲಭ್ಯವಿವೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೇನು ಲಾಭಗಳಿವೆ (Benefits Of Cherries) ಎಂಬುದನ್ನು ನೋಡೋಣ.

Cherries Fruits You Can Easily Grow In Your Home Garden

ಸತ್ವಗಳೇನು?

ನೂರು ಗ್ರಾಂ ಚೆರ್ರಿಯಲ್ಲಿ ಇರುವಂಥ ಸತ್ವಗಳನ್ನು ಗಮನಿಸಿದರೆ- ಇದರಿಂದ ಸುಮಾರು 97 ಕ್ಯಾಲರಿ ಶಕ್ತಿ ದೊರೆಯುತ್ತದೆ. ಪ್ರೊಟೀನ್-‌ 2 ಗ್ರಾಂ, ಪಿಷ್ಟ- 26 ಗ್ರಾಂ, ಸಕ್ಕರೆ- 20 ಗ್ರಾಂ, ನಾರು- 3 ಗ್ರಾಂ, ವಿಟಮಿನ್‌ ಸಿ- 18%, ಪೊಟಾಶಿಯಂ- 10%, ತಾಮ್ರ ಮತ್ತು ಮೆಗ್ನೀಶಿಯಂ- 5% ಮುಂತಾದವು. ಕಪ್ಪು ಮತ್ತು ಕಡುಕೆಂಪು ಬಣ್ಣದಿಂದ ಹಿಡಿದು ಹಳದಿ ಬಣ್ಣದವರೆಗೆ ಚೆರ್ರಿಯ ವರ್ಣಗಳು ಭಿನ್ನವಾಗಿವೆ. ಎಲ್ಲವೂ ಆರೋಗ್ಯಕ್ಕೆ ಒಳ್ಳೆಯವೇ ಆದರೂ ವರ್ಣ ಗಾಢವಾದಷ್ಟೂ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ಹೇಳಬಹುದು.

Pain in knee joint inflammation on gray background Lemon Water Benefits

ಉರಿಯೂತ ಶಾಮಕ

ಬಣ್ಣ ಯಾವುದೇ ಆದರೂ, ಚೆರ್ರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಾಂದ್ರವಾಗಿವೆ. ಇದರಲ್ಲಿ ಪಾಲಿಫೆನಾಲ್‌ಗಳು ಹೇರಳವಾಗಿವೆ. ಮುಕ್ತ ಕಣಗಳಿಂದ ದೇಹದ ಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಲ್ಲಂಥ ಸಸ್ಯಜನ್ಯ ರಾಸಾಯನಿಕಗಳಿವು. ಕೆಲವು ರೀತಿಯ ಕ್ಯಾನ್ಸರ್‌ಗಳಿಂದ ಹಿಡಿದು, ಹೃದಯದ ತೊಂದರೆಗಳು, ಮಧುಮೇಹದವರೆಗೆ ಮಾರಕ ರೋಗಗಳ ದಾಳಿಯಿಂದ ಶರೀರವನ್ನು ಕಾಪಾಡುವಂಥವು. ಜೊತೆಗೆ ಇದರಲ್ಲಿರುವ ಕೆರೊಟಿನಾಯ್ಡ್‌ಗಳು ಸಹ ಉರಿಯೂತ ನಿವಾರಣೆ ಮಾಡುವಂಥ ಸಾಮರ್ಥ್ಯವನ್ನು ಹೊಂದಿವೆ.

ಶೀಘ್ರ ಚೇತರಿಕೆ

ಕಠಿಣವಾದ ದೇಹಶ್ರಮ ಇಲ್ಲವೇ ವ್ಯಾಯಾಮದ ನಂತರ ಕಾಣಿಸಿಕೊಳ್ಳುವ ಸ್ನಾಯುಗಳ ನೋವಿನಿಂದ ಚೆರ್ರಿಗಳು ಶೀಘ್ರ ಚೇತರಿಕೆ ನೀಡುತ್ತವೆ. ಸ್ನಾಯುಗಳ ನೋವು, ಊತದಿಂದ ಬೇಗ ಉಪಶಮನ ಒದಗಿಸುತ್ತವೆ. ಈ ಕೆಲಸಕ್ಕೆ ಟಾರ್ಟ್‌ ಚೆರ್ರಿಯನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ. ಸಿಹಿ ಚೆರ್ರಿಗಳಿಗಿಂತ ಕೊಂಚ ಹುಳಿಯಾದ ಚೆರ್ರಿಯಲ್ಲಿ ಈ ಸಾಮರ್ಥ್ಯ ಹೆಚ್ಚು ಎನ್ನಲಾಗುತ್ತದೆ. ಇದನ್ನು ಮ್ಯಾರಥಾನ್‌ ಓಡುವವರು, ಸೈಕ್ಲಿಸ್ಟ್‌ಗಳಂಥ ಕ್ರೀಡಾಳುಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಅವರು ಮಾತ್ರವೇ ಅಲ್ಲ, ಸಾಮಾನ್ಯರು ಸಹ ಹುಳಿ ಚೆರ್ರಿಯನ್ನು ಚೇತರಿಕೆಗಾಗಿ ಬಳಸಬಹುದು.

Heart Health Fish Benefits

ಹೃದಯದ ಸ್ನೇಹಿತ

ಪೊಟಾಶಿಯಂ ಭರಪೂರ ಇರುವಂಥ ಹಣ್ಣಿದು. ರಕ್ತದೊತ್ತಡ ನಿರ್ವಹಣೆಯಲ್ಲಿ ಪೊಟಾಶಿಯಂ ಪಾತ್ರ ಹಿರಿದು. ದೇಹಕ್ಕೆ ಹೊರೆಯಾಗಿರುವ ಸೋಡಿಯಂ ಅಂಶವನ್ನು ಹೊರಹಾಕಲು ಪೊಟಾಶಿಯಂ ಅಗತ್ಯ. ದಿನವೊಂದಕ್ಕೆ ದೇಹಕ್ಕೆ ಬೇಕಾದ ಶೇ. ೧೦ ಪೊಟಾಶಿಯಂ ಒಂದು ಕಪ್‌ ಚೆರ್ರಿಯಿಂದ ದೊರೆಯುತ್ತದೆ. ಜೊತೆಗೆ, ಇದರಲ್ಲಿರುವ ಪಾಲಿಫೆನಾಲ್‌ಗಳು, ಆಂಥೋಸಯನಿನ್‌ಗಳು ಮತ್ತು ಫ್ಲೆನಾಲ್‌ಗಳು ಹೃದಯದ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಕೆಲಸ ಮಾಡುತ್ತವೆ.

Image Of Anti Infective Foods

ಆರ್ಥರೈಟಿಸ್‌ ನೋವು ಶಮನ

ದೇಹದಲ್ಲಿ ಉರಿಯೂತ ಹೆಚ್ಚಿದಾಗ ಕಾಡುವ ರೋಗಗಳಲ್ಲಿ ಆರ್ಥರೈಟಿಸ್‌ ಸಹ ಒಂದು. ಶರೀರದಲ್ಲಿ ಯೂರಿಕ್‌ ಆಮ್ಲದ ಜಮಾವಣೆ ಹೆಚ್ಚಿ ಕಾಡುವಂಥದ್ದು ಗೌಟ್‌ ಆರ್ಥರೈಟಿಸ್‌. ಇವುಗಳ ನೋವು ಶಮನಕ್ಕೆ ಚೆರ್ರಿ ಸೇವನೆಯು ನೆರವು ನೀಡುತ್ತದೆ. ದೇಹದಲ್ಲಿ ಯೂರಿಕ್‌ ಆಮ್ಲ ಜಮೆಯಾಗುವುದನ್ನು ಚೆರ್ರಿ ಕಡಿಮೆ ಮಾಡುತ್ತದೆ. ಇದಲ್ಲದೆ, ಉಳಿದ ನೋವುಗಳ ಶಮನಕ್ಕೂ ಚೆರ್ರಿ ಸಹಕಾರಿ ಎನ್ನುತ್ತದೆ ಹಲವು ಅಧ್ಯಯನಗಳು.

Mouth Sleeping

ನಿದ್ದೆಗೆ ಪೂರಕ

ಚೆರ್ರಿಯಲ್ಲಿ ಮೆಲಟೋನಿನ ಅಂಶವಿದೆ. ಇದು ನಿದ್ರೆಯನ್ನು ಗಾಢವಾಗಿಸುತ್ತದೆ. ಜೊತೆಗೆ ನಿದ್ದೆಗೊಂದು ಸಮಯವನ್ನು ನಿಗದಿ ಮಾಡುವ ಸನ್ನಾಹದಲ್ಲಿದ್ದರೆ, ಚೆರ್ರಿ ತಿನ್ನುವುದು ಸೂಕ್ತವಾದದ್ದು. ಇದರಿಂದ ನಿದ್ದೆಯಲ್ಲಿ ಆಗಾಗ ಎಚ್ಚರಾಗುವುದು, ಕಡಿಮೆ ನಿದ್ದೆ, ಸೂಕ್ಷ್ಮ ನಿದ್ದೆಯಂಥ ತೊಂದರೆಗಳು ಮಾಯವಾಗಿ, ಗಡದ್ದಾಗಿ ರಾತ್ರಿ ಮಲಗಿ ಬೆಳಗ್ಗೆ ಎಚ್ಚರಾಗುವಂತೆ ಮಾಡುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Weight Loss: ಈ ವ್ಯಕ್ತಿ 445 ಕೆ.ಜಿ ಇದ್ದರು, ಈಗ 228 ಕೆ.ಜಿಗೆ ಇಳಿದಿದ್ದಾರೆ! ಇವರ ಬದುಕು ಕರುಣಾಜನಕ

Weight Loss: ಸಫೋಲ್ಕ್ ನಿವಾಸಿ ಪಾಲ್ ಮೇಸನ್ ಒಂದು ಕಾಲದಲ್ಲಿ 444.5 ಕೆಜಿ ತೂಕವನ್ನು ಹೊಂದಿದ್ದರು. ಆದರೆ ತೂಕ ಇಳಿಸಿಕೊಂಡು ಈಗ 228 ಕೆಜಿ ತೂಕ ಹೊಂದಿದ್ದಾರೆ. ಆದರೆ ವಿಪರ್ಯಾಸವೆನೆಂದರೆ ಅವರಿಗೆ ತಮ್ಮ ಕಾಲಿನಿಂದ ನಡೆಯಲು ಆಗುತ್ತಿಲ್ಲ, ಅವರು ಕಾಲಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಅವರು ಮತ್ತೆ ಎಂದಿಗೂ ನಡೆಯುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ . ಇವರ ಬದುಕಿನ ಕತೆ ಇಲ್ಲಿದೆ.

VISTARANEWS.COM


on

Koo

ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವಂತಹ ಸಮಸ್ಯೆಯಾಗಿದೆ. ಹಾಗಾಗಿ ಕೆಲವರು ಈ ತೂಕವನ್ನು ಇಳಿಸಲು ಆರೋಗ್ಯಕರ ಮಾರ್ಗಗಳನ್ನು ಅನುಸರಿಸಿದರೆ ಕೆಲವರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ಇದು ಜೀವಕ್ಕೂ ಅಪಾಯವಾಗಬಹುದು. ಈ ತೂಕ ಇಳಿಸಿಕೊಳ್ಳಲು ಹೋಗಿ ಅನೇಕರು ಸಾವನಪ್ಪಿರುವುದು ನಮಗೆ ಈಗಾಗಲೇ ತಿಳಿದಿದೆ. ಇದೀಗ ವ್ಯಕ್ತಿಯೊಬ್ಬ ತೂಕ (Weight Loss) ಇಳಿಸಿಕೊಳ್ಳಲು ಹೋಗಿ ತಾನು ನಡೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದಾನೆ.

Weight Loss

ಸಫೋಲ್ಕ್ ನಿವಾಸಿ ಪಾಲ್ ಮೇಸನ್ ಒಂದು ಕಾಲದಲ್ಲಿ 444.5 ಕೆಜಿ ತೂಕವನ್ನು ಹೊಂದಿದ್ದರು. ಆದರೆ ತೂಕ ಇಳಿಸಿಕೊಂಡು ಈಗ 228 ಕೆಜಿ ತೂಕ ಹೊಂದಿದ್ದಾರೆ. ಆದರೆ ವಿಪರ್ಯಾಸವೆನೆಂದರೆ ಅವರಿಗೆ ತಮ್ಮ ಕಾಲಿನಿಂದ ನಡೆಯಲು ಆಗುತ್ತಿಲ್ಲ, ಅವರು ಕಾಲಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಅವರು ಮತ್ತೆ ಎಂದಿಗೂ ನಡೆಯುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Weight Loss

ಕರೋನವೈರಸ್ ಲಾಕ್‍ಡೌನ್ ನಂತರ ಖಿನ್ನತೆಗೆ ಒಳಗಾದ ಅವರು ಅತಿಯಾಗಿ ಆಹಾರ ಸೇವನೆ ಮಾಡಿ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಅಲ್ಲದೆ, ಆಗ ಬ್ರಿಟನ್‌ನ ಅತ್ಯಂತ ತೂಕಯುಳ್ಳ ವ್ಯಕ್ತಿ ಜೇಸನ್ ಹೋಲ್ಟನ್ ಅವರ ಸಾವಿನ ಸುದ್ದಿ ಇವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಈ ಮಾನಸಿಕ ಆರೋಗ್ಯ ಸಮಸ್ಯೆಗಳು ಅವರ ತೂಕ ಹೆಚ್ಚಳಕ್ಕೆ ಕಾರಣವಾದವು. ಅಲ್ಲದೇ ಅವರಿಗೆ ಬಾಲ್ಯದಲ್ಲಿರುವಾಗ ಕುಟುಂಬಸ್ಥರು ಅವರ ಮೇಲೆ ಮೌಖಿಕ ಮತ್ತು ದೈಹಿಕ ನಿಂದನೆಗಳನ್ನು ಮಾಡುತ್ತಿದ್ದರು. ಪದೇ ಪದೇ ತಲೆಗೂ ಹೊಡೆಯುತ್ತಿದ್ದರು. ಆರು ವರ್ಷದವನಾಗಿದ್ದಾಗಿನಿಂದ ಮೂರು ವರ್ಷಗಳ ಕಾಲ ಕುಟುಂಬದ ಸದಸ್ಯರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Weight Loss

2015 ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಆದ ನಂತರ, ಪಾಲ್ 120 ಕೆಜಿ ತೂಕ ಕಳೆದುಕೊಂಡರು. ಮತ್ತು ಅವರು ತಮ್ಮ ಹೆಚ್ಚುವರಿ ಚರ್ಮವನ್ನು ಕತ್ತರಿಸಲು ಸರಣಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಲು ಯುಎಸ್‍ಗೆ ಹೋಗಿದ್ದರಂತೆ. ಅಲ್ಲಿ ತಮ್ಮ ಜೀವನ ಸಂಗಾತಿಯನ್ನು ಸಹ ಭೇಟಿಯಾಗಿದ್ದರು. ಆದರೆ ಅವರ ಮಾನಸಿಕ ಆರೋಗ್ಯವು ಹದಗೆಡುತ್ತಲೇ ಇತ್ತು ಎಂದು ಅವರು ತಿಳಿಸಿದ್ದಾರೆ. ಅವರು 40 ವರ್ಷ ಬದುಕುವುದೇ ಹೆಚ್ಚು ಎಂದು ವೈದ್ಯರು ಹೇಳಿದ್ದರಂತೆ. ಆದರೆ ಈಗ ಅವರು 64 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಬದುಕು ಸಾಗಿಸಲು ಸಾಕಷ್ಟು ಪಿಂಚಣಿ ಕೂಡ ಸಿಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ತನಗೆ ನಡೆದಾಡಲು ಕಷ್ಟವಾದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Weight Loss

ಹಾಗಾಗಿ ತೂಕವನ್ನು ಕಳೆದುಕೊಳ್ಳುವುದು ಸಾಕಷ್ಟು ಕಠಿಣ ಕೆಲಸವಾಗಿದ್ದರೂ ಅದನ್ನು ಆರೋಗ್ಯಕರ ರೀತಿಯಲ್ಲಿ ಇಳಿಸಿಕೊಳ್ಳಲು ಪ್ರಯತ್ನಿಸಿ ಎಂದು ತಜ್ಞರು ತಿಳಿಸುತ್ತಾರೆ. ತಜ್ಞರ ಪ್ರಕಾರ, ಆಹಾರ ಮತ್ತು ವ್ಯಾಯಾಮ ಎರಡರ ಸಮತೋಲನವು ನಿಮ್ಮ ಗುರಿಯನ್ನು ಆರೋಗ್ಯಕರ ರೀತಿಯಲ್ಲಿ ಸಾಧಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಎಂಟು ಸುಲಭ ಮಾರ್ಗಗಳನ್ನು ಅನುಸರಿಸಿ.

ಇದನ್ನೂ ಓದಿ:ಉಗ್ರರ ದಾಳಿ; ಭಾರತೀಯ ಸೇನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಆರೋಗ್ಯಕರ, ತಾಜಾ ಮತ್ತು ಕಾಲೋಚಿತ ಆಹಾರವನ್ನು ಸೇವಿಸುವತ್ತ ಗಮನ ಹರಿಸಿ. ಸಾಕಷ್ಟು ಫೈಬರ್ ಮತ್ತು ಪ್ರೋಟೀನ್ ಆಹಾರ ಸೇವಿಸಿ. ಆಹಾರದ ಜೊತೆಗೆ ಪ್ರತಿದಿನ ವಾಕಿಂಗ್, ನಿಯಮಿತವಾಗಿ ವ್ಯಾಯಾಮ ಮಾಡಿ. ಹಾಗೇ ಸಾಕಷ್ಟು ನೀರು ಕುಡಿಯಿರಿ. ಚೆನ್ನಾಗಿ ನಿದ್ರೆ ಮಾಡಿ.

Continue Reading

ಆರೋಗ್ಯ

Coriander Benefits For Beauty: ನಿಮ್ಮೆಲ್ಲ ಸೌಂದರ್ಯ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪಿನಲ್ಲಿದೆ ಸರಳ ಪರಿಹಾರ!

Coriander Benefits For beauty: ಕೊತ್ತಂಬರಿ ಸೊಪ್ಪು ಕೇವಲ ನಿಮ್ಮ ನಿತ್ಯದ, ಸಾರು, ಸಾಂಬಾರು ಸಬ್ಜಿಗಳಿಗೆ, ಬಿರಿಯಾನಿ ಪಲಾವುಗಳ ಮೇಲೆ ಕೇವಲ ಅಲಂಕಾರಕ್ಕೆ ಕತ್ತರಿಸಿ ಹಾಕುವ ಸೊಪ್ಪೆಂದು ತಿಳಿದುಕೊಂಡಿರುವುದೇ ಈ ಅವಜ್ಞೆಗೆ ಕಾರಣ. ಇದನ್ನು ಸರಿಯಾಗಿ ಬಳಸಿದಿರೆಂದರೆ, ನಿಮ್ಮ ಎಷ್ಟೋ ನಿತ್ಯದ ಸಮಸ್ಯೆಗಳು ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಯವಾಗಬಹುದು. ಆದರೆ ನಿಯಮಿತವಾಗಿ ಬಳಸುವುದು ಬಹಳ ಮುಖ್ಯ. ಇಲ್ಲಿದೆ ಆ ಕುರಿತ ಮಾಹಿತಿ.

VISTARANEWS.COM


on

Coriander Benefits For Beauty
Koo

ನಿಮ್ಮ ಮನೆಯ ಫ್ರಿಡ್ಜ್‌ನ ಮೂಲೆಯಲ್ಲಿ ಸದಾ ಒಣಗುತ್ತಾ ಬಿದ್ದಿರುವ ಕೊತ್ತಂಬರಿ ಸೊಪ್ಪಿನ ಬದುಕು ಕೇವಲ ಇಷ್ಟೇ ಎಂದು ನೀವು ತಿಳಿದಿದ್ದರೆ, ನೀವು ಅದರ ಅದ್ಭುತ ಸಾಧ್ಯತೆಗಳನ್ನು ನಿರ್ಲಕ್ಷಿಸಿದ್ದೀರಿ ಎಂದರ್ಥ. ಯಾಕೆಂದರೆ ಕೊತ್ತಂಬರಿ ಸೊಪ್ಪಿನಷ್ಟು ನಿರ್ಲಕ್ಷ್ಯಕ್ಕೆ ಒಳಗಾದ, ನಿತ್ಯೋಪಯೋಗಿ ವಸ್ತು ಇನ್ನೊಂದಿರಲಿಕ್ಕಿಲ್ಲ. ಕೊತ್ತಂಬರಿ ಸೊಪ್ಪು ಕೇವಲ ನಿಮ್ಮ ನಿತ್ಯದ, ಸಾರು, ಸಾಂಬಾರು ಸಬ್ಜಿಗಳಿಗೆ, ಬಿರಿಯಾನಿ ಪಲಾವುಗಳ ಮೇಲೆ ಕೇವಲ ಅಲಂಕಾರಕ್ಕೆ ಕತ್ತರಿಸಿ ಹಾಕುವ ಸೊಪ್ಪೆಂದು ತಿಳಿದುಕೊಂಡಿರುವುದೇ ಈ ಅವಜ್ಞೆಗೆ ಕಾರಣ. ಇದನ್ನು ಸರಿಯಾಗಿ ಬಳಸಿದಿರೆಂದರೆ, ನಿಮ್ಮ ಎಷ್ಟೋ ನಿತ್ಯದ ಸಮಸ್ಯೆಗಳು (Coriander Benefits For beauty) ಚಿಟಿಕೆ ಹೊಡೆದಷ್ಟು ಸುಲಭವಾಗಿ ಮಾಯವಾಗಬಹುದು. ಆದರೆ ನಿಯಮಿತವಾಗಿ ಬಳಸುವುದು ಬಹಳ ಮುಖ್ಯ.

Coriander Benefits

ಸಾಕಷ್ಟು ಪೋಷಕಾಂಶಗಳಿವೆ

ಅತ್ಯಂತ ಗಾಢ ಪರಿಮಳವನ್ನು ಹೊಂದಿರುವ ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಟಮಿನ್‌ ಎ, ಸಿ ಖನಿಜ ಲವಣಗಳು, ಪ್ರೊಟೀನ್‌ ನಾರಿನಂಶ ಎಲ್ಲವೂ ಇರುವ ಸಮೃದ್ಧವಾದ ಸೊಪ್ಪಿದು. ಹಾಗಾಗಿ ತೂಕ ಇಳಿಕೆಗೆ, ಕಣ್ಣಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಾಗಲು, ಪಚನಶಕ್ತಿ ಚುರುಕಾಗಲು ಹೀಗೆ ನಾನಾ ಆರೋಗ್ಯದ ಲಾಭಗಳಿಗೆ ಇದರಿಂದ ಭರಪೂರ ಉಪಯೋಗಗಳಿವೆ. ಕಬ್ಬಿಣ ಸತ್ವವೂ ಹೇರಳವಾಗಿರುವ ಇದು ರಕ್ತದಲ್ಲಿ ಹಿಮೋಗ್ಲೋಬೊನ್‌ ಹೆಚ್ಚಾಗಲೂ ಸಹಾಯ ಮಾಡುತ್ತದೆ. ಅನೀಮಿಯಾ ಸಮಸ್ಯೆ ಇರುವ ಮಂದಿಗೂ ಇದು ಅತ್ಯುತ್ತಮ ಅಹಾರ.

ಹಸಿ ಎಲೆ ಜಗಿಯಿರಿ

ನಿತ್ಯವೂ ಒಂದೆರಡು ಹಸಿ ಎಲೆಗಳನ್ನು ಬಾಯಲ್ಲಿ ಹಾಕಿ ಜಗಿಯುವ ಅಭ್ಯಾಸ ಇಟ್ಟುಕೊಂಡರೆ ಅದರಿಂದಲೂ ಸಾಕಷ್ಟು ಉಪಯೋಗಗಳನ್ನು ಪಡೆಯಬಹುದು. ಆದರೆ, ಮುಖ್ಯವಾಗಿ ಮಹಿಳೆಯರೂ ಸೇರಿದಂತೆ ಎಲ್ಲರೂ ಅನುಭವಿಸುವ ಚರ್ಮದ ಸಮಸ್ಯೆಗಳಿಗೂ ನಿಮ್ಮ ಫ್ರಿಡ್ಜ್‌ನ ಮೂಲೆಯಲ್ಲಿ ನರಳುತ್ತಿರುವ ಕೊತ್ತಂಬರಿ ಸೊಪ್ಪಿನಿಂದ ಪರಿಹಾರವಿದೆ ಎಂದಾದರೆ, ನೀವು ಖಂಡಿತ ಇನ್ನು ಸೊಪ್ಪನ್ನು ಹಾಗೆ ಮೂಲೆಯಲ್ಲಿ ಒಣಗಲು ಬಿಡುವುದಿಲ್ಲ.
ಚರ್ಮ ತಜ್ಞರು ಹೇಳುವ ಪ್ರಕಾರ, ಕೊತ್ತಂಬರಿ ಸೊಪ್ಪಿನಲ್ಲಿ ಚರ್ಮದ ಆರೋಗ್ಯಕ್ಕೆ ಮ್ಯಾಜಿಕ್‌ನ ರೀತಿಯ ಉತ್ತರವಿದೆ. ನಿಮ್ಮ ಚರ್ಮ ಎಂಥದ್ದೇ ಅಗಿರಬಹುದು, ಅದಕ್ಕೆ ಪೂರಕವಾಗಿರುವ ಸಮಸ್ಯೆಗಳಿಗೆಲ್ಲ ಇದರಲ್ಲಿ ಉತ್ತರವಿದೆಯಂತೆ. ಇದರ ಸೇವನೆ ಉತ್ತಮ ಡಿಟಾಕ್ಸ್‌ ತರಹದಲ್ಲಿ ವರ್ತಿಸುತ್ತದೆ. ಚರ್ಮದ ಎಕ್ಸಿಮಾದಂತಹ ಸಮಸ್ಯೆಗಳಿಗೂ ಇದರ ಬಳಿ ಉತ್ತರವಿದೆ. ಕೊತ್ತಂಬರಿ ಸೊಪ್ಪಿನ ಸೇವನೆಯಿಂದ ಅಸಿಡಿಟಿ ಪರಿಹಾರವಾಗುವ ಕಾರಣ, ಅಸಿಡಿಟಿಯ ಕಾರಣದಿಂದ ಚರ್ಮದಲ್ಲಿ ಉಂಟಾಗುವ ಕೆಂಪಾಗುವಿಕೆ, ಉಬ್ಬುಗಳು ಕಡಿಮೆಯಾಗುತ್ತವೆ. ಆಗಾಗ ಚರ್ಮದ ಮೇಲೆ ಉಂಟಾಗುವ ಇಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಕೊತ್ತಂಬರಿ ಸೊಪ್ಪನ್ನು ಶ್ರೀಗಂಧ, ಚಂದನ ಹಾಗೂ ಓಟ್‌ಮೀಲ್‌ ಜೊತೆ ಸೇರಿಸಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಅಲರ್ಜಿಯಂತಹ ಸಮಸ್ಯೆಯಿಂದ ಉಂಟಾಗುವ ಕಜ್ಜಿ, ಒಣಗುವಿಕೆ ಮತ್ತಿತರ ಸಮಸ್ಯೆಗಳು ಪರಿಹಾರವಾಗುತ್ತದೆ.

coriander leaves

ಕೊತ್ತಂಬರಿ ಸೊಪ್ಪನ್ನು ಬಗೆಬಗೆಯ ಫೇಸ್‌ ಪ್ಯಾಕ್‌ ಮಾಡಿ ಹಚ್ಚಿಕೊಳ್ಳುವುದರಿಂದಲೂ ಅನೇಕ ಚರ್ಮದ ಸಮಸ್ಯೆಗೆ ಪರಿಹಾರ ಪಡೆಯಬಹುದು. ಕೊತ್ತಂಬರಿ ಸೊಪ್ಪಿನೊಂದಿಗೆ ಅಲೊವೆರಾ ಸೇರಿಸಿ ಹಚ್ಚುವುದರಿಂದ ಚರ್ಮ ಸುಕ್ಕಾಗುವಿಕೆಗೆ ಉತ್ತಮ ಫಲ ಕಾಣಬಹುದು. ನಿಂಬೆಹಣ್ಣಿನ ರಸವನ್ನು ಕೊತ್ತಂಬರಿ ಸೊಪ್ಪಿನ ಪೇಸ್ಟ್‌ಗೆ ಸೇರಿಸಿ ಹಚ್ಚುವುದರಿಂದ ಚರ್ಮಕ್ಕೆ ಬೇಕಾದ ಸಿ ವಿಟಮಿನ್‌ ಸಿಗುವುದರಿಂದ ಮೊಡವೆಯ ಕಲೆಗಳು, ಬ್ಲ್ಯಾಕ್‌ಹೆಡ್‌ಗಳು ಮತ್ತಿತರ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಕೊತ್ತಂಬರಿ ಸೊಪ್ಪು, ಹಾಲು, ಜೇನುತುಪ್ಪ, ನಿಂಬೆ ಹಣ್ಣಿನ ರಸ ಸೇರಿಸಿಯೂ ಹಚ್ಚಬಹುದು. ಇದರಿಂದ ಚರ್ಮ ಆರೋಗ್ಯಪೂರ್ಣವಾಗಿ ಫಳಫಳಿಸಬಹುದು.

ಇದನ್ನೂ ಓದಿ: Cholesterol Management Tips: ಕೊಲೆಸ್ಟ್ರಾಲ್‌ ಹೆಚ್ಚಿದೆಯೇ? ಬೆಳ್ಳುಳ್ಳಿಯ ಈ ಉಪಾಯ ಗೊತ್ತಿರಲಿ!

ಚರ್ಮಕ್ಕೆ ಮಸಾಜ್ ಮಾಡಿ

ಕೊತ್ತಂಬರಿ ಸೊಪ್ಪು, ಅಕ್ಕಿ ಹಿಟ್ಟು ಹಾಗೂ ಮೊಸರು ಸೇರಿಸಿ ಹಚ್ಚು, ನಂತರ ತೊಳೆಯುವಾಗ ಸ್ಕ್ರಬ್‌ ಮಾಡಿಕೊಂಡು ತೊಳೆದರೆ ಚರ್ಮಕ್ಕೆ ಒಳ್ಳೆಯ ಮಸಾಜ್‌ ಸಿಕ್ಕಿ, ಮುಖದ ಚರ್ಮದ ಸ್ನಾಯುಗಳೆಲ್ಲ ರಿಲ್ಯಾಕ್ಸ್‌ ಆಗುತ್ತವೆ. ಚರ್ಮಕ್ಕೆ ರಕ್ತಪೂರಣವಾಗಿ ಚರ್ಮ ಆರೋಗ್ಯದ ಕಳೆಯಿಂದ ನಳನಳಿಸುತ್ತದೆ. ವಾಋಕ್ಕೊಮ್ಮೆ ಹೀಗೆ ಮಾಡುವುದರಿಂದ ಒಳ್ಳೆಯ ಫಲ ಕಾಣಬಹುದು. ತುಟಿಯ ಚರ್ಮ ಕಪ್ಪಾಗಿದ್ದರೆ, ಕೊತ್ತಂಬರಿ ಸೊಪ್ಪಿನ ರಸಕ್ಕೆ ಕೊಂಚ ಅಲೊವೆರಾ ಜೆಲ್‌ ಸೇರಿಸಿ ಹಚ್ಚುವ ಮೂಲಕ ಮತ್ತೆ ಪಿಂಕ್‌ ತುಟಿಗಳನ್ನು ನೀವು ಪಡೆಯಬಹುದು.

Continue Reading

ಆರೋಗ್ಯ

Monsoon Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Monsoon Health Tips: ಮಳೆಯೆಂದರೆ ಮಕ್ಕಳಿಗೆ ಎಷ್ಟು ಪ್ರೀತಿಯೊ, ಮಳೆಗಾಲದ ರೋಗಾಣುಗಳಿಗೆ ಮಕ್ಕಳೆಂದರೆ ಅಷ್ಟೇ ಪ್ರೀತಿ! ಅವು ಎಲ್ಲಿದ್ದರೂ ಮಕ್ಕಳ ಬಳಿ ಬಂದುಬಿಡುತ್ತವೆ. ಮನೆಯಲ್ಲಿರುವ ದೊಡ್ಡ ಮಕ್ಕಳಿಗೆ ಅನಾರೋಗ್ಯ ಶುರುವಾಯಿತೆಂದರೆ, ಬೆನ್ನಿಗೆ ಚಿಕ್ಕ ಮಕ್ಕಳಿದ್ದರೆ ಅವರೂ ಮಲಗುತ್ತಾರೆಂಬುದು ಖಾತ್ರಿ. ಅದರಲ್ಲೂ ಎಳೆಗೂಸುಗಳಿದ್ದರಂತೂ ಹೆತ್ತವರಿಗೆ ಇನ್ನಷ್ಟು ಆತಂಕ. ಹಾಗಾದರೆ ಮಳೆಗಾಲದಲ್ಲಿ ಮಕ್ಕಳನ್ನು ಜೋಪಾನ ಮಾಡುವುದು ಹೇಗೆ? ಇಲ್ಲಿವೆ ಸಲಹೆಗಳು.

VISTARANEWS.COM


on

Monsoon Health Tips
Koo

ಮಳೆ ಶುರುವಾಯಿತೆಂದರೆ ಹರವಿರುವ ಬಟ್ಟೆ ತೆಗೆಯುವ, ಒಣಗಿಸಿದ ಇನ್ನೇನನ್ನೋ ತೆಗೆಯುವ ಧಾವಂತ ಹಿರಿಯರಿಗೆ. ಆದರೆ ಮಕ್ಕಳಿಗೆ ಹೇಗಾದರೂ ಮಾಡಿ ಮಳೆಯಲ್ಲಿ ನೆನೆದಾಡಬೇಕೆಂಬ ಹವಣಿಕೆ. ಮಳೆ ಬರುವಾಗ ಎಲ್ಲೋ ಒಂದು ಸೂರಿನಡಿ ಮಗುವನ್ನೂ ನಿಲ್ಲಿಸಿಕೊಂಡು ನಿಂತಿದ್ದೀರಿ ಎಂದಿಟ್ಟುಕೊಳ್ಳಿ. ಮಳೆ ಕಡಿಮೆಯಾದ ಮೇಲೆ ಹೊರಟರೆ, ದಾರಿಯಲ್ಲಿ ನಿಂತಿರುವ ಮಳೆ ನೀರಲ್ಲೇ ಪಚಪಚ ಮಾಡುತ್ತಾ ನಡೆಯದಿದ್ದರೆ ಅವರು ಮಕ್ಕಳು ಅನಿಸಿಕೊಂಡಾರೆಯೇ? ಎಳೆಯರಿಗೆ ಮಳೆಯಲ್ಲಾಡುವ ಬಯಕೆ ಸಹಜ. ಆದರೆ ಆರೋಗ್ಯ…? ನೆಗಡಿ, ಕೆಮ್ಮು. ಜ್ವರ, ಗಂಟಲು ನೋವು, ಕಿವಿನೋವು ಮುಂತಾದ ಏನೇನೆಲ್ಲ ವೈರಸ್‌ಗಳು ಇವೆಯೋ ಅವೆಲ್ಲವೂ ವಕ್ಕರಿಸಿಕೊಳ್ಳುತ್ತವೆ.
ಮನೆಯಲ್ಲಿರುವ ದೊಡ್ಡ ಮಕ್ಕಳಿಗೆ ಅನಾರೋಗ್ಯ ಶುರುವಾಯಿತೆಂದರೆ, ಬೆನ್ನಿಗೆ ಚಿಕ್ಕ ಮಕ್ಕಳಿದ್ದರೆ ಅವರೂ ಮಲಗುತ್ತಾರೆಂಬುದು ಖಾತ್ರಿ. ಅದರಲ್ಲೂ ಎಳೆಗೂಸುಗಳಿದ್ದರಂತೂ ಹೆತ್ತವರಿಗೆ ಇನ್ನಷ್ಟು ಆತಂಕ. ಹೇಳಲು ಬಾರದ, ಹೇಳಿದ್ದು ತಿಳಿಯದ ಮಕ್ಕಳ ಅನಾರೋಗ್ಯವೆಂದರೆ ಮನೆಯ ಹಿರಿಯರಿಗೆ ತಲೆಬಿಸಿ. ಮಳೆಯಲ್ಲೇ ನೆನೆಯಬೇಕೆಂದಿಲ್ಲ, ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ, ಶೀತ-ಥಂಡಿಯ ಹವಾಮಾನ ಬರುತ್ತಿದ್ದಂತೆ ನಾನಾ ವೈರಸ್‌ಗಳು ಬೆನ್ನು ಬೀಳುತ್ತವೆ. ಹಾಗಾದರೆ ಮಳೆಗಾಲದಲ್ಲಿ ಮಕ್ಕಳನ್ನು ಜೋಪಾನ (Monsoon Health Tips) ಮಾಡುವುದು ಹೇಗೆ?

Essential Vaccines For Women

ಲಸಿಕೆಗಳು

ಮಕ್ಕಳಿಗೆ ಕಾಲಕಾಲಕ್ಕೆ ನೀಡಬೇಕಾದ ಯಾವುದೇ ಚುಚ್ಚುಮದ್ದುಗಳನ್ನು ಬಾಕಿ ಉಳಿಸಿಕೊಳ್ಳಬೇಡಿ. ಮಕ್ಕಳ ಪಾಲಿಗೆ, ರೋಗಗಳ ವಿರುದ್ಧದ ಮೊದಲ ರಕ್ಷಾ ಕವಚವಿದು. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಂತೆ ಲಸಿಕೆ ಬಾಕಿ ಇರುವ ಯಾವ್ಯಾವುದೋ ರೋಗಗಳು ಹೆತ್ತವರಿಗೆ ನೆನಪಾಗಿ ನೆಮ್ಮದಿ ಕೆಡಿಸುವುದಿಲ್ಲ. ಫ್ಲೂ ಲಸಿಕೆಗಳ ಬಗ್ಗೆಯೂ ವೈದ್ಯರಲ್ಲಿ ಮಾತಾಡಿ

ಆಹಾರ

ಮಕ್ಕಳಿಗೆ ಮಳೆ-ಚಳಿಯೆನ್ನದೆ ಎಲ್ಲ ಕಾಲದಲ್ಲೂ ಐಸ್‌ಕ್ರೀಂ ಬೇಕು. ಆದರೆ ಅವರು ಕೇಳಿದ ಗುಜರಿ ತಿಂಡಿಗಳ ಬದಲು, ಸತ್ವಯುತ ಆಹಾರದ ಬಗ್ಗೆ ಗಮನ ನೀಡಿ. ಬೀದಿ ಬದಿಯ ಆಹಾರವಂತೂ ಬೇಡವೇಬೇಡ. ಋತುಮಾನದ ಹಣ್ಣು-ತರಕಾರಿಗಳು ಮಕ್ಕಳಿಗೆ ಬೇಕು. ಅವರು ತಿನ್ನುವುದಿಲ್ಲ ಎನ್ನುವುದು ಅನಾರೋಗ್ಯಕ್ಕೆ ನೆವವೂ ಆದೀತು. ವಿಟಮಿನ್‌ ಸಿ, ಜಿಂಕ್ ಹೆಚ್ಚಿರುವ ಆಹಾರಗಳು, ಪ್ರೊಬಯಾಟಿಕ್‌ ಮತ್ತು ಇಡೀ ಧಾನ್ಯಗಳು, ಪ್ರೊಟೀನ್‌ ಮತ್ತು ಆರೋಗ್ಯಕರ ಕೊಬ್ಬಿನ ಆಹಾರಗಳು‌, ಶುಂಠಿ-ಬೆಳ್ಳುಳ್ಳಿಯಂಥ ಮಸಾಲೆಗಳು ಸೋಂಕು ದೂರ ಇರಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

Rainy day kid

ನೀರು ನಿಲ್ಲದಿರಲಿ

ಮನೆಯ ಸುತ್ತೆಲ್ಲೂ ನೀರು ನಿಲ್ಲದಂತೆ ಜಾಗ್ರತೆ ಮಾಡಿ. ಇದರಿಂದ ಹುಟ್ಟುವ ಸೊಳ್ಳೆಗಳಿಂದ ಮಕ್ಕಳಿಗೆ ಮಾತ್ರವಲ್ಲ, ಮನೆಮಂದಿಗೆಲ್ಲ ಅಪಾಯ. ಹೂವಿನ ಕುಂಡಗಳಲ್ಲೂ ಸೊಳ್ಳೆಗಳ ಸಂತಾನಾಭಿವೃದ್ಧಿ ಆಗಬಹುದು. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ. ಇದರಿಂದ ರೋಗಾಣುಗಳ ಅಬ್ಬರ ಕಡಿಮೆಯಾಗುತ್ತದೆ.

ಧಿರಸು

ಮಳೆಗಾಲದ ವಾತಾವರಣವನ್ನು ಹೀಗೆಂದು ಹೇಳಲು ಕಷ್ಟ. ಮನೆಯಿಂದ ಹೊರಬೀಳುವಾಗ ಸಣ್ಣ ಬಿಸಿಲಿತ್ತು ಎಂದರೂ, ಇನ್ನರ್ಧ ಗಂಟೆಯೊಳಗೆ ಜೋರು ಮಳೆ ಬರಬಹುದು. ಆಡಲು ಹೋದ ಮಕ್ಕಳು ತುಂತುರು ಮಳೆಗೆಲ್ಲ ಸೂರಿನಡಿ ಬರುವುದೇ ಇಲ್ಲ. ಹಾಗಾಗಿ ಗಾಳಿ-ಮಳೆಗೆ ಹೊಂದುವಂಥ ಬಟ್ಟೆಯನ್ನೇ ಮಕ್ಕಳಿಗೆ ಹಾಕಿ.

ಇದನ್ನೂ ಓದಿ: Cholesterol Management Tips: ಕೊಲೆಸ್ಟ್ರಾಲ್‌ ಹೆಚ್ಚಿದೆಯೇ? ಬೆಳ್ಳುಳ್ಳಿಯ ಈ ಉಪಾಯ ಗೊತ್ತಿರಲಿ!

ಸೊಳ್ಳೆಪರದೆ

ಸೊಳ್ಳೆಗಳಿಂದ ಬರುವ ರೋಗಗಳ ಹಾವಳಿ ಎಲ್ಲೆಡೆ ವಿಪರೀತ ಹೆಚ್ಚಿರುವುದರಿಂದ, ಮನೆಯ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಪರದೆಗಳನ್ನು ಹಾಕಿಕೊಳ್ಳಿ. ರಾತ್ರಿ ಮಲಗುವಾಗ ಸೊಳ್ಳೆಪರದೆಯ ಒಳಗೇ ಮಲಗಿ. ಎಳೆಕೂಸುಗಳಿಗೂ ಅದು ಬೇಕು. ಮಕ್ಕಳಿಗೆ ರಿಪೆಲ್ಲೆಂಟ್‌ಗಳನ್ನು ಹಚ್ಚಿ. ಮಕ್ಕಳ ಸೂಕ್ಷ್ಮ ಚರ್ಮಕ್ಕೆ ಯಾವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳಿ. ಮುಸ್ಸಂಜೆಯ ಹೊತ್ತಿಗೆ ಸೊಳ್ಳೆಗಳ ಚಟುವಟಿಕೆ ಜೋರಾಗಿರುತ್ತದೆ. ಸಾಧ್ಯವಾದರೆ ಆ ಹೊತ್ತಿಗೆ ಮಕ್ಕಳನ್ನು ಆಟದಿಂದ ಒಳಗೆ ಕರೆಯಿರಿ.

Boy Drinking Water from Glass

ನೀರು

ಇವೆಲ್ಲ ಅಲ್ಲದೆ, ವಾಂತಿ- ಅತಿಸಾರಗಳು ಸಹ ಮುಂಗಾರಿನ ಕೊಡುಗೆಯೇ ಆಗಿರುತ್ತವೆ. ಹಾಗಾಗಿ ನೀರನ್ನು ಕುದಿಸಿ ಕುಡಿಯುವುದು ಸೂಕ್ತ. ಆಹಾರದ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಇದ್ದಷ್ಟೂ ಹೊಟ್ಟೆ ಕ್ಷೇಮವಾಗಿ ಇರುತ್ತದೆ.

Continue Reading

ಉತ್ತರ ಕನ್ನಡ

Uttara Kannada News: ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಡಿಸಿ ಸೂಚನೆ

Uttara Kannada News: ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಉಲ್ಬಣಗೊಳ್ಳದಂತೆ, ಅದರ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.

VISTARANEWS.COM


on

Strictly take precautionary measures to control dengue in the district says DC Lakshmipriya
Koo

ಕಾರವಾರ: ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಉಲ್ಬಣಗೊಳ್ಳದಂತೆ, ಅದರ ಸಂಪೂರ್ಣ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ (Uttara Kannada News) ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತೀ ಶುಕ್ರವಾರ ಡೆಂಗ್ಯೂ ನಿಯಂತ್ರಣಕ್ಕೆ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆಯನ್ನು ನಡೆಸಬೇಕು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಕನಿಷ್ಠ 5 ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಕಡ್ಡಾಯವಾಗಿ ಈ ಚಟುವಟಿಕೆಯನ್ನು ಕೈಗೊಂಡು ಸಂಜೆಯ ವೇಳೆಗೆ ಪ್ರಗತಿಯ ವರದಿಯನ್ನು ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು, ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕು, ಗೂಡಂಗಡಿಗಳಲ್ಲಿ ಬಳಸಿ ಬಿಸಾಡುವ ಎಳನೀರಿನ ಚಿಪ್ಪುಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಲಿದ್ದು, ಈ ಬಗ್ಗೆ ಗಮನ ಹರಿಸುವುದರ ಜತೆಗೆ, ಆರೋಗ್ಯ ಇಲಾಖೆಯಿಂದ ಸೂಚಿಸುವ ಡೆಂಗ್ಯೂ ನಿಯಂತ್ರಣ ಕುರಿತ ಎಲ್ಲಾ ಕ್ರಮಗಳನ್ನು ಅನುಷ್ಠಾನಗೊಳಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ತಿಳಿಸಿದರು.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12 ರಿಂದ 3 ದಿನ “ಯುವ ಸಂಭ್ರಮ”

ಆರೋಗ್ಯ ಇಲಾಖೆಯ ಮೂಲಕ ಈಗಾಗಲೇ ಶಾಲಾ ಶಿಕ್ಷಕರಿಗೆ ಡೆಂಗ್ಯೂ ನಿಯಂತ್ರಣ ಕ್ರಮಗಳ ಕುರಿತಂತೆ ತರಬೇತಿಯನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ಶಾಲೆಗಳಲ್ಲಿ ಪ್ರಾರ್ಥನೆ ಸಮಯದಲ್ಲಿ ಮತ್ತು ಇತರೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸಿ ಅವರ ಮೂಲಕ ಮನೆ ಮನೆಗಳಿಗೆ ಜಾಗೃತಿ ಮೂಡುವಂತೆ ಮಾಡುವುದರ ಜತೆಗೆ ಶಾಲಾ ಆವರಣದಲ್ಲಿ ಸ್ವಚ್ಚತೆಯನ್ನು ಕಾಪಾಡುವ ಮೂಲಕ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಜಿಲ್ಲೆಗೆ ಉದ್ಯೋಗ ಅರಸಿ ಬರುವ ಕಾರ್ಮಿಕರ ಮೂಲಕ ಡೆಂಗ್ಯೂ ಹರಡುವ ಸಂಭವವಿದ್ದು, ವಲಸೆ ಕಾರ್ಮಿಕರು ಆಗಮಿಸಿದಾಗ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಅವರ ಆರೋಗ್ಯ ತಪಾಸಣೆ ಮಾಡಿಸಲು ಹಾಗೂ ಎಲ್ಲಾ ಕಟ್ಟಡ ಮಾಲೀಕರಿಗೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಸೂಚನೆ ನೀಡುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡೆಂಗ್ಯೂ ಪ್ರಕರಣಗಳ ಕುರಿತಂತೆ ಸಾರ್ವಜನಿಕ ತಪ್ಪು ಸಂದೇಶ ರವಾನೆಯಾಗಬಾರದು. ಪ್ರಕರಣಗಳ ಖಚಿತತೆಯ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಕರಣಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮುಂದಾಗುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ರೋಗ ಬಂದ ನಂತರ ಚಿಕಿತ್ಸೆ ನೀಡುವ ಬದಲು, ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಉತ್ತಮ, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ ಹರಡದಂತೆ ನೋಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: How Does Plastic Affect Cancer: ಪ್ಲಾಸ್ಟಿಕ್‌‌‌ ಬಳಕೆಯಿಂದ ಕ್ಯಾನ್ಸರ್ ಬರದಂತೆ ತಡೆಯುವುದು ಹೇಗೆ?

ಸಭೆಯಲ್ಲಿ ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರ) ಡಾ. ನಟರಾಜ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ ರಾವ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Continue Reading
Advertisement
Ambani Wedding
ಫ್ಯಾಷನ್15 mins ago

Ambani Wedding: ಜಾಗತಿಕ ಮಟ್ಟದಲ್ಲಿ ದಾಖಲೆ ಸೃಷ್ಟಿಸಿದ ಅಂಬಾನಿ ಫ್ಯಾಮಿಲಿಯ ರಾಯಲ್‌ ವೆಡ್ಡಿಂಗ್‌ ಫ್ಯಾಷನ್‌!

Samsung Launches 2 new foldable phones
ದೇಶ21 mins ago

Samsung Galaxy: ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡೆಬಲ್ ಫೋನ್‌ ಬಿಡುಗಡೆ; ವಿಶೇಷತೆ ಏನೇನು?

Protest by civil workers against the husband of former chairperson of Gangavati Municipal Council
ಕೊಪ್ಪಳ29 mins ago

Koppala News: ನಗರಸಭೆ ಮಾಜಿ ಅಧ್ಯಕ್ಷೆ ಪತಿಯಿಂದ ಪೌರಾಯುಕ್ತರಿಗೆ ಅಶ್ಲೀಲ ಮೆಸೇಜ್; ಪೌರ ಕಾರ್ಮಿಕರ ಪ್ರತಿಭಟನೆ

ಕರ್ನಾಟಕ34 mins ago

Cauvery Water Dispute: ತಮಿಳುನಾಡಿಗೆ ನೀರು; CWMAಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ, ಜು.14ಕ್ಕೆ ಸರ್ವಪಕ್ಷ ಸಭೆ

Murder Case
ಬೆಂಗಳೂರು39 mins ago

Murder Case : ಖಾಸಗಿ ಕ್ಷಣಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರೇಯಸಿಯ ಮಗುವನ್ನೇ ಕೊಂದ ಪಾಪಿ

Anant Radhika Wedding
ವಾಣಿಜ್ಯ40 mins ago

Anant Radhika Wedding: ಅನಂತ್‌ ಅಂಬಾನಿ ಮದುವೆ ಖರ್ಚು 5000 ಕೋಟಿ ರೂ! ಅವರ ಸಂಪತ್ತಿಗೆ ಹೋಲಿಸಿದರೆ ಇದು ಸಣ್ಣ ಮೊತ್ತ!

James Anderson
ಕ್ರೀಡೆ59 mins ago

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

Bear Attack
ವಿಜಯನಗರ1 hour ago

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

ED Raid
ಕರ್ನಾಟಕ1 hour ago

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

Emergency
ದೇಶ1 hour ago

Emergency: ತುರ್ತು ಪರಿಸ್ಥಿತಿ ಕರಾಳ ನೆನಪು; ಜೂನ್‌ 25ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌