Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ… - Vistara News

ಆರೋಗ್ಯ

Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

ನ್ಯುಮೋನಿಯಾದಂತಹ (Health Tips for Winter) ಪ್ರಕರಣಗಳು ಈ ಸಂದರ್ಭ ಹೆಚ್ಚಾಗುವ ಸಂಭವವಿದ್ದು, ಬೀಸುವ ಚಳಿಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ. ಈ ಕುರಿತ ಟಿಪ್ಸ್‌ ಇಲ್ಲಿದೆ.

VISTARANEWS.COM


on

Health Tips for Winter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಳಿಗಾಲ (Health Tips for Winter) ಬಂತೆಂದರೆ ಉಸಿರಾಟದ ಸಮಸ್ಯೆಯಿರುವ ಮಂದಿಗೆ ಅದು ಸತ್ವಪರೀಕ್ಷೆಯ ಕಾಲ. ಚಳಿಯನ್ನು ಅನುಭವಿಸುವಂತಿಲ್ಲ, ಬಿಡುವಂತಿಲ್ಲ. ಚಳಿಗಾಲ ಶುರುವಾಗುತ್ತಿದ್ದಂತೆ, ಉಸಿರಾಟ, ಶ್ವಾಸಕೋಶದ ಸಮಸ್ಯೆಗಳೂ ಹೆಚ್ಚಾಗಲು ಆರಂಭವಾಗುತ್ತದೆ. ಉಬ್ಬಸ, ಅಸ್ತಮಾದಂತಹ ಖಾಯಿಲೆಯಿರುವ ಮಂದಿಗೆ, ಆಗಾಗ ಸಣ್ಣ ಸಣ್ಣ ಥಂಡಿಗೂ ಶೀತ, ನೆಗಡಿಯಂತಹ ಸಮಸ್ಯೆಗಳನ್ನು ತಂದುಕೊಳ್ಳುವ ಮಂದಿಗೆ ಚಳಿಗಾಲವೆಂದರೆ ದುಃಸ್ವಪ್ನ. ಹೊರಗೆ ಕಾಲಿಟ್ಟರೆ ಸಾಕು ಬೀಸುವ ಒಣ ಚಳಿಗಾಳಿಯ ಹವೆಗೆ ಇತ್ತೀಚೆಗೆ ಎಲ್ಲರಿಗೂ ನೆಗಡಿ, ಶೀತ, ಗಂಟಲಿನ ತೊಂದರೆಯಂತಹ ಸಮಸ್ಯೆಗಳನ್ನು ತಂದೊಡ್ಡುತ್ತಿದ್ದು, ವೈದ್ಯರ ಎದುರು ಸರತಿಯ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ನ್ಯುಮೋನಿಯಾದಂತಹ ಪ್ರಕರಣಗಳು ಈ ಸಂದರ್ಭ ಹೆಚ್ಚಾಗುವ ಸಂಭವವಿದ್ದು, ಬೀಸುವ ಚಳಿಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವಿದೆ.

Concept of World lung day, lung problems and treatment

ತಜ್ಞರ ಪ್ರಕಾರ, ಸದ್ಯ ವಾತಾವರಣದಲ್ಲಿ ಶುಷ್ಕ ಚಳಿಗಾಳಿಯು ಬೀಸುತ್ತಿರುವುದರಿಂದ ಮೂಗಿನ ರಂಧ್ರಗಳನ್ನು ಇನ್ನಷ್ಟು ಒಣಗಿಸುತ್ತದೆ. ಇದರಿಂದ ಕಿರಿಕಿರಿಯ ಅನುಭವಗಳಾಗುವುದಷ್ಟೇ ಅಲ್ಲ, ಇದು ಶೀತ ನೆಗಡಿ, ಗಂಟಲು ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಖ್ಯವಾಗಿ, ಸಾಮಾನ್ಯವಾಗಿ, ಯಾವಾಗಲೂ ಮನೆಯೊಳಗೇ ಕಳೆಯುವ ಹಿರಿಯ ವಯಸ್ಸಿನವರು ಇಂಥ ಸಂದರ್ಭ ಹೊರಗೆ ಕಾಲಿಟ್ಟಾಗ ಸುಲಭವಾಗಿ ಇಂಥ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಹಿರಿಯರಲ್ಲಿ, ರೋಗ ನಿರೋಧಕ ಶಕ್ತಿಯೂ ಕಡಿಮೆ ಇರುವುದರಿಂದ, ಉಸಿರಾಡಲು ಕಷ್ಟವಾಗುವುದು, ಎದೆಯಲ್ಲಿ ಕಫ ಕಟ್ಟಿದಂಥ ಸಮಸ್ಯೆಗಳು, ನ್ಯುಮೋನಿಯಾದಂತಹ ಕಾಯಿಲೆಗೆ ಈಗ ತುತ್ತಾಗುವ ಸಂಭವ ಅಧಿಕವಿದೆ ಎನ್ನುತ್ತಾರೆ.

ಸಂಶೋಧನೆಗಳ ಪ್ರಕಾರ, ಶೀತ ಹಾಗೂ ಒಣ ಹವೆಯ ಸಂದರ್ಭಗಳಲ್ಲಿ ವೈರಸ್‌ನ ಬೆಳವಣಿಗೆಯೂ ಹೆಚ್ಚಾಗುತ್ತದೆ. ಜೊತೆಗೆ ಗಾಳಿಯಲ್ಲಿ ಈ ವೈರಸ್‌ಗಳು ಹೆಚ್ಚು ಕಾಲ ಇರಬಲ್ಲವಾದ್ದರಿಂದ ಸುಲಭವಾಘಿ ಒಬ್ಬರಿಂದ ಒಬ್ಬರಿಗೆ ಹರಡುವಂಥ ಖಾಯಿಲೆಗಳು ಹೆಚ್ಚಾಗುತ್ತವೆ.

ಹಾಗಾದರೆ, ಚಳಿಗಾಲದಲ್ಲಿ ಮನೆಯ ಒಳಗೇ ಇರಲು ಸಾಧಯವೇ? ಖಂಡಿತಾ ಇಲ್ಲ. ಕೆಲಸ ಕಾರ್ಯಗಳ ನಿಮಿತ್ತ ಹೊರಗಡೆ ಓಡಾಡುವ ಸಂದರ್ಭಗಳು ಬಂದೇ ಬರುತ್ತವೆ. ಆದ್ದರಿಂದ ಈ ಸಮಸ್ಯೆಗಳು ಬಾರದಂತೆ ಹೇಗೆ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

Keep hands clean

ನಿಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಹ್ಯಾಂಡ್‌ವಾಶ್‌ ಬಳಸಿ ಕೈಕಾಲುಗಳನ್ನು ಹೊರಗೆ ಹೋಗಿ ಬಂದಾಗ ತೊಳೆಯುವುದನ್ನು ಮರೆಯಬೇಡಿ. ಮುಖ್ಯವಾಗಿ ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಿ. ವೈದ್ಯರುಗಳ ಪ್ರಕಾರ, ನಮ್ಮ ಕೈಗಳ ಮೂಲಕವೇ ರೋಗವು ಸುಲಭವಾಗಿ ಕಣ್ಣು, ಮೂಗು ಹಾಗೂ ಬಾಯಿಯ ಮೂಲಕ ಹರಡುತ್ತವೆ.

ಹೆಚ್ಚು ಕಾಳಜಿ ವಹಿಸಿ

ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ಹೆಚ್ಚು ಕಾಳಜಿ ವಹಿಸಿ. ಉದಾಹರಣೆಗೆ ಹೃದಯದ ಸಮಸ್ಯೆ, ಮಧುಮೇಹದಂತಹ ತೊಂದರೆಗಳಿದ್ದಲ್ಲಿ, ಅಂತಹ ಮಂದಿಗೆ ಬಹುಬೇಗನೆ ನ್ಯುಮೋನಿಯಾದಂತಹ ಖಾಯಿಲೆಗಳು ಬರುತ್ತವೆ. ಅದಕ್ಕಾಗಿ, ಚಳಿಗಾಲದಲ್ಲಿ, ಮುಖ್ಯವಾಗಿ ಹಿರಿಯ ನಾಗರಿಕರಿ ಹಾಗೂ ಈ ಸಮಸ್ಯೆಗಳಿರುವ ಮಂದಿ ತಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವತ್ತ ಗಮನ ಹರಿಸಬೇಕು.

Staying warm in cozy

ಬೆಚ್ಚಗೆ ಇರಿ

ಯಾವುದೇ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರು ಹಾಗೂ ಹಿರಿಯ ನಾಗರಿಕರು ಚಳಿಗಾಲದಲ್ಲಿ ತಮ್ಮನ್ನು ತಾವು ಬೆಚ್ಚಗಿಟ್ಟಿರುವುದು ಬಹಳ ಮುಖ್ಯ. ಬೆಚ್ಚಗಿಟ್ಟಿರುವುದು ಎಂದರೆ ಕೇವಲ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಮಾತ್ರವಲ್ಲ, ದೇಹವನ್ನು ಬೆಚ್ಚಗಿಡುವ ಆಹಾರಗಳನ್ನು ಸೇವಿಸುವುದು, ಶೀತ ಪ್ರಕೃತಿಯ ಆಹಾರಗಳನ್ನು ಕಡಿಮೆ ಮಾಡುವುದು ಅಥವಾ ಬಿಡುವುದು, ಬಿಸಿಬಿಸಿಯಾಗಿರುವಾಗಲೇ ಆಹಾರ ಸೇವಿಸುವುದು ಇತ್ಯಾದಿ ಗಮನ ಹರಿಸುವುದು ಒಳ್ಳೆಯದು.

ಸಾಮಾಜಿಕ ಅಂತರ

ಸಾಮಾಜಿಕವಾಗಿ ಅಂತರವನ್ನು ಕಾಯ್ದುಕೊಳ್ಳುವುದೂ ಕೂಡಾ ಬಹಳ ಮುಖ್ಯ. ಚಳಿಗಾಲದಲ್ಲಿ ಹೊರಗಡೆ ಓಡಾಡುವಾಗ ಮಾಸ್ಕ್‌ ಧರಿಸಿಕೊಳ್ಳಿ. ಕಿವಿ, ಮೂಗನ್ನು ಶಾಲಿನಿಂದ ಹೊದೆದುಕೊಳ್ಳುವುದು ಇತ್ಯಾದಿ ಮಾಡಬಹುದು. ವಾತಾವರಣ ಶುಷ್ಕವಾಗಿರುವುದರಿಂದ ಅಸ್ತಮಾ, ಸಿಒಪಿಡಿ ಹಾಗೂ ಬ್ರಾಂಖೈಟಿಸ್‌ ಮತ್ತಿತರ ಸಮಸ್ಯೆಗಳೂ ಬರುವ ಸಂಭವ ಹೆಚ್ಚಿರುವುದರಿಂದ ಶಾಲು ಹೊದೆದುಕೊಂಡು, ಬೆಚ್ಚಗಿನ ಉಡುಪುಗಳನ್ನು ಧರಿಸಿಯೇ ಹೊರಗೆ ಹೋಗುವುದು ಒಳ್ಳೆಯದು.

Staying Warm

ಬೆಂಕಿ ಶಾಖ ಬೇಡ

ಮರವನ್ನು ಉರಿಸುವುದು, ಬೆಂಕಿಯನ್ನು ಹಾಕುವುದು ಇತ್ಯಾದಿಗಳಿಂದ ಚಳಿ ತಾತ್ಕಾಲಿಕವಾಗಿ ಕಡಿಮೆಯಾದಂತೆ ಅನಿಸಿದರೂ ಇದರ ಹೊಗೆ ಶ್ವಾಸಕೋಶದ ಸಮಸ್ಯೆ ಇರುವ ಮಂದಿಗೆ, ಅಸ್ತಮಾ, ಹಾಗೂ ಅಲರ್ಜಿಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದಲ್ಲ. ಇದರಿಂದಲೂ ದೂರವಿರಿ.

ಧೂಮಪಾನ ತ್ಯಜಿಸಿ

ಧೂಮಪಾನ ಮಾಡುವ ಅಭ್ಯಾಸವಿದ್ದರೆ ಅದರಿಂದ ದೂರವಿರಿ. ಬಿಡಲು ಪ್ರಾಮಾಣಿಕ ಪ್ರಯತ್ನ ಮಾಡಿ. ತಂಬಾಕಿನಿಂದ ಶ್ವಾಸಕೋಶದ ಖಾಯಿಲೆಗಳು ಉಲ್ಬಣಿಸುತ್ತವೆ.

ಇದನ್ನೂ ಓದಿ: Bone Health: ಮೂಳೆಗಳನ್ನು ದುರ್ಬಲಗೊಳಿಸುವ ಈ ಅಭ್ಯಾಸ ಬಿಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Hepatitis-A:ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್‌-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್‌ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹೆಪಟಿಟಿಸ್‌-ಎ ಕೇಸ್‌ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Hepatitis-A
Koo

ಕೇರಳ: ಕೊರೋನಾ ವೈರಸ್‌ನಿಂದ ವರ್ಷಾನುಗಟ್ಟಲೇ ಬಳಲಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ಕೇರಳ(Kerala)ದಲ್ಲಿ ಮತ್ತೊಂದು ವೈರಸ್‌(Virus) ಜನರ ನಿದ್ದೆಗೆಡಿಸಿದೆ. ಹೆಪಟಿಟಿಸ್‌-ಎ(Hepatitis-A) ಖಾಯಿಲೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಕೇರಳ ಗಡಿ ರಾಜ್ಯವಾಗಿರುವುದರಿಂದ ಕರ್ನಾಟಕದಲ್ಲೂ ಇದರ ಭೀತಿ ಹೆಚ್ಚಾಗಿದೆ.

ಇನ್ನು ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್‌-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್‌ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹೆಪಟಿಟಿಸ್‌-ಎ ಕೇಸ್‌ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಎಲ್ಲಾ ಜಿಲ್ಲ ಮತ್ತು ತಾಲೂಕು ಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಿದ್ದು, ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಣಪ್ಪುರಣನ ಚಲಿಯಾರ್‌ ಮತ್ತು ಪೋತುಕಲ್ಲು ಪ್ರದೇಶದಲ್ಲಿ ಹೆಪಟಿಟಿಸ್‌-ಎ ಗೆ ಜನ ಬಲಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ರೋಗಾಣುಗಳನ್ನು ತಡೆಯಲು ಮತ್ತು ಜನರಲ್ಲಿ ಅರಿವು ಮೂಡಿಸಲು ಶೀಘ್ರದಲ್ಲಿಯೇ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಪೋತುಕಲ್ಲು ಪ್ರದೇಶದಲ್ಲಿ ಈ ಖಾಯಿಲೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಹೊಸ ಕೇಸ್‌ಗಳು ಮತ್ತೆ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ಚಲಿಯಾರ್‌ ಮತ್ತು ಪೋಲುಕಲ್ಲು ಪ್ರದೇಶದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳಾದ ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಕೇವಲ ಬಿಸಿ ನೀರನ್ನಷ್ಟೇ ಗ್ರಾಹಕರಿಗೆ ನೀಡುವಂತೆ ಎಲ್ಲಾ ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಖಡಕ್‌ ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ:Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

ಹೆಪಟಿಟಿಸ್‌-ಎ ಅಂದರೆ ಏನು?

ಹೆಪಟೈಟಿಸ್ ಎ ವೈರಸ್ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಅಥವಾ ಸಾಂಕ್ರಾಮಿಕ ವ್ಯಕ್ತಿಯೊಂದಿಗೆ ನೇರ ಸಂಪರ್ಕದ ಮೂಲಕ ಹರಡುತ್ತದೆ. ಈ ರೋಗವು ಮುಖ್ಯವಾಗಿ ರೋಗನಿರೋಧಕ ಶಕ್ತಿ ಇರದ ವ್ಯಕ್ತಿಗಳಲ್ಲಿ ಮತ್ತು ಎಚ್ಐವಿ ಮತ್ತು ಯಕೃತ್ತಿನ ಕಾಯಿಲೆಯಂತಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಬಹಳ ಬೇಗ ತಗುಲುತ್ತದೆ. ಆಯಾಸ, ಜ್ವರ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ಹಸಿವಿನ ಕೊರತೆ, ತುರಿಕೆ ಮತ್ತು ಕಾಮಾಲೆ ಸೇರಿವೆ. ಕಣ್ಣುಗಳು, ಮೂತ್ರ, ಚರ್ಮ ಮತ್ತು ಉಗುರುಗಳ ಬಿಳಿಯ ಹಳದಿ ಬಣ್ಣಕ್ಕೆ ತಿರುಗುವುದು ಇವೆಲ್ಲಾ ಈ ಖಾಯಿಲೆಯ ಲಕ್ಷಣಗಳು. ಕೇವಲ ಬಿಸಿ ನೀರು ಕುಡಿಯುವುದು, ಆಹಾರ ಸೇವೆನೆಗೂ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವುದರಿಂದ ಈ ಖಾಯಿಲೆಯನ್ನು ತಡೆಯಬಹುದಾಗಿದೆ.

Continue Reading

ಆರೋಗ್ಯ

Health Tips in Kannada: ಬೆಂಡೆಕಾಯಿ ನೀರನ್ನು ಕುಡಿಯೋದರಿಂದ ಏನೆಲ್ಲ ಲಾಭಗಳಿವೆ ತಿಳಿದುಕೊಳ್ಳಿ

Health Tips in Kannada:  ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಅದ್ದ ಮೇಲೆ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಹೀಗೆ ಮಾಡುವ ಮೂಲಕ ನಿತ್ಯವೂ ಬೆಂಡೆಕಾಯಿಯ ಪೋಷಕಾಂಶಗಳನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದು. ಬನ್ನಿ, ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

VISTARANEWS.COM


on

Health Tips in Kannada lady finger okra benefits
Koo

ನಿಮಗೆ ಬೆಂಡೆಕಾಯಿ ನೀರು ಕುಡಿದು ಗೊತ್ತೇ? ಅರೆ, ಇದೇನಿದು (Health Tips in Kannada) ಬೆಂಡೆಕಾಯಿ ನೀರು ಎಂದು ಆಶ್ಚರ್ಯಪಡಬೇಡಿ. ಬೆಂಡೆಕಾಯಿಯನ್ನು (Lady finger okra) ಕತ್ತರಿಸಿ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಅದ್ದ ಮೇಲೆ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಹೀಗೆ ಮಾಡುವ ಮೂಲಕ ನಿತ್ಯವೂ ಬೆಂಡೆಕಾಯಿಯ ಪೋಷಕಾಂಶಗಳನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದು. ಬನ್ನಿ, ಇದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.

ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳ

ಬೆಂಡೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಫ್ರೀ ರ್ಯಾಡಿಕಲ್ಸ್‌ಗಳನ್ನು ಕಡಿಮೆ ಮಾಡಿ, ಆಕ್ಸಿಡೇಟಿವ್‌ ಒತ್ತಡವನ್ನೂ ಇಳಿಸುವ ಜೊತೆಗೆ ಅಂಗಾಂಶ ಮಟ್ಟದಲ್ಲಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಇದರಿಂದ ಕ್ಯಾನ್ಸರ್‌, ಹೃದಯದ ಕಾಯಿಲೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳ ರಿಸ್ಕ್‌ ಕಡಿಮೆಯಾಗುತ್ತದೆ.

ಮಧುಮೇಹ ಕಾಯಿಲೆ ಹತೋಟಿ

ಬೆಂಡೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಸಕ್ಕರೆಯ ಹೀರಿಕೆಯನ್ನು ಇದು ತಡೆಯುತ್ತದೆ. ಪರಿಣಾಮವಾಗಿ ಮಧುಮೇಹದಂತಹ ಕಾಯಿಲೆ ಹತೋಟಿಗೆ ಬರುತ್ತದೆ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಜೀರ್ಣಕ್ರಿಯೆ ಆಗುವಲ್ಲಿ ಸಹಾಯ

ಜೀರ್ಣಾಂಗವ್ಯೂಹ ವ್ಯವಸ್ಥೆಗೆ ಬೆಂಡೆಕಾಯಿ ಒಳ್ಳೆಯದು. ಜೀರ್ಣಾಂಗನಾಳಗಳನ್ನು ಇದು ಸರಿಯಾಗಿಡುವ ಜೊತೆಗೆ, ಸಹಜವಾಗಿ ಜೀರ್ಣಕ್ರಿಯೆ ಆಗುವಲ್ಲಿ ಸಹಾಯ ಮಾಡುತ್ತದೆ.

ಕೊಲೆಸ್ಟೆರಾಲ್‌ ಕಡಿಮೆ ಮಾಡುತ್ತದೆ

ಬೆಂಡೆಕಾಯಿಯಲ್ಲಿರುವ ನಾರಿನಂಶ ಕೊಲೆಸ್ಟೆರಾಲ್‌ ಅನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟೆರಾಲ್‌ ಕಡಿಮೆಯಾಗುವ ಮೂಲಕ ಸಹಜವಾಗಿಯೇ ಹೃದಯಕ್ಕೆ ಬೆಂಡೆಕಾಯಿ ಒಳ್ಳೆಯದನ್ನೇ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಚರ್ಮದ ಆರೋಗ್ಯಕ್ಕೆ ಬೆಂಡೆಕಾಯಿ ಬಹಳ ಒಳ್ಳೆಯದು. ಚರ್ಮಕ್ಕೆ ಬೇಕಾದ ನೀರಿನಂಶವನ್ನು ಇದು ನೀಡುವ ಮೂಲಕ ಸದಾ ಚರ್ಮವನ್ನು ನಯವಾಗಿ ಆರೋಗ್ಯವಾಗಿ ಇರಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಬೆಂಡೆಕಾಯಿಯಲ್ಲಿ ವಿಟಮಿನ್‌ ಸಿ ಹಾಗೂ ಎ ಧಾರಾಳವಾಗಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊರಗಿನಿಂದ ದಾಳಿ ಮಾಡುವುದರ ವಿರುದ್ಧ ಪ್ರತಿದಾಳಿ ನಡೆಸಿ ದೇಹವನ್ನು ರೋಗ ಬರದಂತೆ ಕಾಪಾಡುತ್ತದೆ.

ಎಲುಬಿನ ಆರೋಗ್ಯಕ್ಕೆ ಒಳ್ಳೆಯದು

ಬೆಂಡೆಕಾಯಿಯಲ್ಲಿ ವಿಟಮಿನ್‌ ಕೆ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಎಲುಬಿನ ಆರೋಗ್ಯಕ್ಕೆ ಇದು ಒಳ್ಳೆಯದನ್ನೇ ಮಾಡುತ್ತದೆ. ಎಲುಬಿನ ಸವೆತವಾಗದಂತೆ ತಡೆಯುತ್ತದೆ. ಹಾಗೂ ಎಲುಬಿನ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ತಿನ್ನುವ ಚಟ ಕಡಿಮೆ

ಬೆಂಡೆಕಾಯಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿರುವ ಅನುಭವವಾಗಿ, ಅನಗತ್ಯ ತಿನ್ನುವ ಚಟ ಕಡಿಮೆಯಾಗುತ್ತದೆ. ಆ ಮೂಲಕ ತೂಕ ಇಳಿಯುತ್ತದೆ.

ಬೆಂಡೆಕಾಯಿಯಲ್ಲಿ ವಿಟಮಿನ್‌ ಎ ಗೂ ಬೀಟಾ ಕೆರಟಿನ್‌ ಇರುವುದರಿಂದ ಇದು ಕಣ್ಣಿನ ಆರೋಗ್ಯವನ್ನು ಚೆನ್ನಾಗಿಡುವಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಹಾಗಾದರೆ, ಈ ಬೆಂಡೆಕಾಯಿ ನೀರನ್ನು ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಇಲ್ಲಿ ಉತ್ತರವಿದೆ:
ಬೆಂಡೆಕಾಯಿಯನ್ನು ಅದರ ಮೈಮೇಲಿರುವ ಕೊಳೆ ಹಾಗೂ ರಾಸಾಯನಿಕಗಳು ಹೋಗುವಂತೆ ಚೆನ್ನಾಗಿ ತೊಳೆಯಿರಿ. ನಂತರ ಅದರ ತುದಿಗಳನ್ನು ಕತ್ತರಿಸಿ ತೆಗೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಕತ್ತರಿಸಿದ ಬೆಂಡೆಕಾಯಿಯನ್ನು ಒಂದು ಬಾಟಲಿಯಲ್ಲಿ ಅಥವಾ ಲೋಟದಲ್ಲಿ ಹಾಕಿಟ್ಟು ನೀರು ಹಾಕಿ ಮುಚ್ಚಿಡಿ. ರಾತ್ರಿ ಹೀಗೆ ಮಾಡಿಟ್ಟು ಮಲಗಿದರೆ, ಬೆಳಗ್ಗೆ ಎದ್ದ ಮೇಲೆ ಬೆಂಡೆಕಾಯಿಗಳನ್ನು ಅದರಿಂದ ತೆಗೆದು ಅದರ ನೀರನ್ನು ಕುಡಿಯಿರಿ. ಬೆಳಗ್ಗೆ ಸಾಧ್ಯವಾಗದಿದ್ದರೆ ದಿನದ ಬೇರೆ ಹೊತ್ತಿನಲ್ಲೂ ಇದನ್ನು ನೀರಿಗೆ ಬದಲಾಗಿ ಕುಡಿಯಬಹುದು. ಇದರ ಮೂಲಕ ಸಾಕಷ್ಟು ಆರೋಗ್ಯ ಲಾಭಗಳನ್ನು ನೀವು ಪಡೆಯಬಹುದು.

Continue Reading

ಆರೋಗ್ಯ

Health Tips in Kannada: ತಡರಾತ್ರಿಯವರೆಗೆ ಎಚ್ಚರದಿಂದ ಇದ್ದರೆ ಆಗುವ ಸಮಸ್ಯೆಗಳೇನು ಗೊತ್ತೇ?

Health Tips in Kannada: ತಡವಾಗಿ ಮಲಗುವ ಅಭ್ಯಾಸ ಮಾಡಿಕೊಂಡ ಅನೇಕರಿಗೆ, ಇದು ಆರೋಗ್ಯದ ಮೇಲೆ ಎಂಥಾ ಪರಿಣಾಮ ಬೀರೀತು ಎಂಬ ಬಗ್ಗೆ ಸಣ್ಣ ವಯಸ್ಸಿನಲ್ಲಿ ತಿಳಿದೇ ಇರುವುದಿಲ್ಲ. ಆದರೆ, ಈ ಕೆಟ್ಟ ಅಭ್ಯಾಸವು ದಿನ ಕಳೆದ ಹಾಗೆ ನಿಧಾನವಾಗಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅರ್ಥವಾಗುವಾಗ ಬಹಳ ತಡವಾಗಿರುತ್ತದೆ. ಬನ್ನಿ, ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದ್ದರೆ ಏನೆಲ್ಲ ಆರೋಗ್ಯದ ರಿಸ್ಕ್‌ಗಳಿವೆ ಎಂಬುದನ್ನು ನೋಡೋಣ.

VISTARANEWS.COM


on

stay awake till late night what is the problem For health
Koo

ಬೆಂಗಳೂರು: ತಡರಾತ್ರಿಯವರೆಗೆ ಎದ್ದಿರುವುದು ಈಗಿನ (Health Tips in Kannada) ಮಂದಿಗೆ ಬಹಳ ಸಾಮಾನ್ಯವಾದ ಅಭ್ಯಾಸ. ಕೆಲಸದ ಒತ್ತಡ, ಕಚೇರಿಯ ಕೆಲಸಗಳು, ಸಾಮಾಜಿಕ ಜಾಲತಾಣಗಳ ವೀಕ್ಷಣೆ, ಸಿನಿಮಾ ನೋಡುವುದು, ಪಾರ್ಟಿ ಮಾಡುವುದು ಇತ್ಯಾದಿ ಇತ್ಯಾದಿ ಜೀವನಕ್ರಮ ಬದಲಾವಣೆಗಳಿಂದ ತಡರಾತ್ರಿ ಹನ್ನೆರಡು ಕಳೆದರೂ ಅನೇಕರಿಗೆ ನಿದ್ದೆ ಹತ್ತಿರ ಸುಳಿಯುವುದಿಲ್ಲ. ಹೀಗೆ ತಡವಾಗಿ ಮಲಗುವ ಅಭ್ಯಾಸ ಮಾಡಿಕೊಂಡ ಅನೇಕರಿಗೆ, ಇದು ಆರೋಗ್ಯದ ಮೇಲೆ ಎಂಥಾ ಪರಿಣಾಮ ಬೀರೀತು ಎಂಬ ಬಗ್ಗೆ ಸಣ್ಣ ವಯಸ್ಸಿನಲ್ಲಿ ತಿಳಿದೇ ಇರುವುದಿಲ್ಲ. ಆದರೆ, ಈ ಕೆಟ್ಟ ಅಭ್ಯಾಸವು ದಿನ ಕಳೆದ ಹಾಗೆ ನಿಧಾನವಾಗಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅರ್ಥವಾಗುವಾಗ ಬಹಳ ತಡವಾಗಿರುತ್ತದೆ. ಬನ್ನಿ, ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದ್ದರೆ ಏನೆಲ್ಲ ಆರೋಗ್ಯದ ರಿಸ್ಕ್‌ಗಳಿವೆ ಎಂಬುದನ್ನು ನೋಡೋಣ

ನೈಸರ್ಗಿಕ ನಿದ್ದೆಯ ಅಭ್ಯಾಸಕ್ಕೆ ಪೆಟ್ಟು

ತಡರಾತ್ರಿಯವರೆಗೆ ಎದ್ದಿರುವುದರಿಂದ ನಮ್ಮ ದೇಹದ ನೈಸರ್ಗಿಕ ನಿದ್ದೆಯ ಅಭ್ಯಾಸಕ್ಕೆ ಪೆಟ್ಟು ಬೀಳುತ್ತದೆ. ಮಾನವನ ದೇಹ ರಾತ್ರಿಯ ನಿದ್ದೆಗೆ ಸೂಕ್ತವಾದುದು. ರಾತ್ರಿಯ ವೇಳೆ ಸೊಂಪಾದ ನಿದ್ದೆ ಸಿಕ್ಕರಷ್ಟೇ ಆತ ಮರುದಿನ ಸೂರ್ಯ ಏಳುವ ಹೊತ್ತಿನಲ್ಲಿ ಮತ್ತೆ ಎಡೆಬಿಡದೆ ಕೆಲಸ ಮಾಡುವಷ್ಟು ಶಕ್ತಿ, ಚೈತನ್ಯ ಪಡೆಯುತ್ತಾನೆ. ನಿದ್ದೆ ಸಿಗದೇ ಇದ್ದರೆ, ಈ ನೈಸರ್ಗಿಕ ವ್ಯವಸ್ಥೆಯ ಮೇಲೆ ಪೆಟ್ಟು ಬೀಳುತ್ತದೆ.

ನಿದ್ದೆಯ ನಷ್ಟ

ತಡರಾತ್ರಿಯವರೆಗೆ ಎದ್ದಿರುವುದರಿಂದ ನಮಗೆ ದಕ್ಕಬೇಕಾದಷ್ಟು ಪ್ರಮಾಣದ ನಿದ್ದೆ ದಕ್ಕುವುದಿಲ್ಲ. ನಮ್ಮ ದೇಹಕ್ಕೆ ಅಗತ್ಯವಿರುವ ನಿದ್ದೆಯನ್ನು ನಾವು ನೀಡದೆ ಇದ್ದರೆ ಅದು ಖಂಡಿತವಾಗಿಯೂ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೊಜ್ಜು, ಮಧುಮೇಹ ಇತ್ಯಾದಿ ಸಮಸ್ಯೆಗಳು ಬರುವ ಸಂಭವ ಹೆಚ್ಚು. ದೇಹದ ರೋಗನಿರೋಧಕ ವ್ಯವಸ್ಥೇಯೇ ಹದಗೆಡುತ್ತದೆ.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಹಾರ್ಮೋನಿನಲ್ಲಿ ವ್ಯತ್ಯಾಸ

ತಡವಾಗಿ ನಿದ್ದೆ ಮಾಡುವುದರಿಂದ ಹಾರ್ಮೋನು ಸಮಸ್ಯೆಗಳೂ ಹೆಚ್ಚಾಗುತ್ತವೆ. ಹಾರ್ಮೋನಿನ ಅಸಮತೋಲನದಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರಲಾರಂಭಿಸುತ್ತವೆ. ಹೆಚ್ಚು ಕ್ಯಾಲರಿ ಆಹಾರ ತಿನ್ನಬೇಕೆನ್ನುವ ಚಪಲ ಹೆಚ್ಚುತ್ತದೆ. ಇದರಿಂದ ಅತಿಯಾಗಿ ತಿನ್ನುವುದು ಹಾಗೂ ತೂಕ ಹೆಚ್ಚಾಗುವ ಸಂಭವ ಹೆಚ್ಚಾಗುತ್ತದೆ.

ಏಕಾಗ್ರತೆ ಕಡಿಮೆ

ನಿದ್ದೆ ಕಡಿಮೆಯಾದ ತಕ್ಷಣ ಬೆಳಗಿನ ಹೊತ್ತು ಮಾಡಬೇಕಾದ ಕೆಲಸಗಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಸ್ಮರಣಶಕ್ತಿ ಕುಗ್ಗುತ್ತದೆ.

ಮಾನಸಿಕವಾಗಿ ಕಿರಿಕಿರಿ

ನಿದ್ದೆ ತಡವಾಗಿ ಮಾಡಿದರೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ದೇಹಕ್ಕೆ ಒತ್ತಡದ ಹಾರ್ಮೋನನ್ನು ಸಮತೋಲನಕ್ಕೆ ತರಲು ಸಾಧ್ಯವಾಗುವುದಿಲ್ಲ. ಇದರಿಂದ ಉದ್ವೇಗ, ಮಾನಸಿಕವಾಗಿ ಕಿರಿಕಿರಿಯ ಅನುಭವವಾಗುತ್ತದೆ. ದೀರ್ಘವಾಗಿ ಉಸಿರಾಡುವುದು, ಧ್ಯಾನ, ವ್ಯಾಯಾಮದಂತಹ ಚಟುವಟಿಕೆಗಳಿಂದ ಇದನ್ನು ಹಿಡಿತಕ್ಕೆ ತರಬಹುದು.

ರೋಗ ನಿರೋಧಕ ಶಕ್ತಿ ಕ್ಷೀಣ

ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಅಷ್ಟೇ ಅಲ್ಲ, ಇದರಿಂದಾಗಿ ಬಹುಬೇಗನೆ ಆರೋಗ್ಯ ಹದಗೆಡುವುದು, ರೋಗ ವಾಸಿಯಾಗದಿರುವುದು, ರೋಗದ ವಿರುದ್ಧ ಹೋರಾಡುವ ಶಕ್ತಿ ಕುಗ್ಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.

ಮುಂದೆ ನಿದ್ರಾಹೀನತೆ ಸಮಸ್ಯೆ

ತಡರಾತ್ರಿಯವರೆಗೆ ಎದ್ದಿರುವುದರಿಂದ ಮುಂದೆ ನಿಧಾನವಾಗಿ ನಿದ್ರಾಹೀನತೆಯಂತಹ ಸಮಸ್ಯೆಯು ಎದುರಾಗುತ್ತದೆ. ಇದರಿಂದಾಗಿ ಮಾನಸಿಕವಾಗಿ ಏರುಪೇರು, ಖಿನ್ನತೆ, ಉದ್ವೇಗವೂ ಸೇರಿದಂತೆ ಹಲವು ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

ಅವಘಡಕ್ಕೆ ಕಾರಣ

ತಡವಾಗಿ ನಿದ್ದೆ ಮಾಡುವುದರಿಂದ ದೇಹಕ್ಕೆ ಬೇಕಾದಷ್ಟು ನಿದ್ದೆ ಸರಿಯಾಗಿ ಸಿಗದೇ ಹೋಗುವ ಸಂಭವವೇ ಹೆಚ್ಚು. ತಡವಾಗಿ ಎದ್ದರೆ ನೈಸರ್ಗಿಕವಾಗಿ ದೇಹಕ್ಕೆ ಸಿಗಬೇಕಾದ ನಿದ್ದೆ ಪರಿಪೂರ್ಣವಾಗಿ ಸಿಗದೇ ಹೋಗುವುದರಿಂದ, ನಿದ್ದೆಗೆಟ್ಟಂತಾಗಿ, ಇದು ಅಫಘಾತ, ಅವಘಡಗಳಿಗೂ ಕೆಲವೊಮ್ಮೆ ಕಾರಣವಾಗುತ್ತದೆ. ವಾಹನ ಚಾಲನೆಯೂ ಸೇರಿದಂತೆ ನಮ್ಮ ಚಲನಾ ಕೌಶಲ್ಯಗಳಿಗೆ ಸಂಬಂಧಿಸಿದ ಶಕ್ತಿಯು ನಿದ್ದೆಯಿಲ್ಲದ ಕಾರಣ ಕುಗ್ಗುವುದರಿಂದ ಅವಘಡ, ಅಫಘಾತಗಳಂತಹ ಅಪಾಯ ಹೆಚ್ಚು.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ಹಾಗಾಗಿ ಒಟ್ಟಾರೆಯಾಗಿ ಮಾನಸಿಕ, ದೈಹಿಕ ಆರೋಗ್ಯಕ್ಕೆ ನೈಸರ್ಗಿಕವಾಗಿ ಅಗತ್ಯವಿರುವಷ್ಟು ನಿದ್ದೆಯ ಅಗತ್ಯವಿದ್ದೇ ಇದೆ. ಅಷ್ಟೇ ಅಲ್ಲ, ಅದಕ್ಕೆ ಶಿಸ್ತಿನಿಂದ ಸಮಯಪಾಲನೆಯೂ ಅಗತ್ಯ. ನಿದ್ದೆಯ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ. ದೇಹದ ಆರೋಗ್ಯ ನಿದ್ದೆಯ ಮೇಲೆಯೂ ಅವಲಂಬಿಸಿರುವುದರಿಂದ ನಿದ್ದೆಗೆ ಪ್ರಾಮುಖ್ಯ ಕೊಡುವುದು ಬಹಳ ಮುಖ್ಯ.

Continue Reading

ಆರೋಗ್ಯ

Tips For Healthy Skin: ಈ ಐದು ಸಲಹೆಗಳನ್ನು ಪಾಲಿಸಿ, ಮೊಡವೆಗಳಿಂದ ಪಾರಾಗಿ!

ಉಸಿರಾಟದ ವ್ಯಾಯಾಮ (breathing exercises), ಕೂಲಿಂಗ್ ತಂತ್ರಗಳ (cooling techniques) ಜೊತೆಗೆ ಮುಖದ ಯೋಗವನ್ನು (Tips For Healthy Skin) ಸರಿಯಾಗಿ ಮಾಡುವುದರಿಂದ ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಚರ್ಮದ ತೈಲಗಳನ್ನು ಸಮತೋಲನಗೊಳಿಸುತ್ತದೆ. ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ಎಲ್ಲರೂ ನೆನಪಿಟ್ಟುಕೊಳ್ಳಬಹುದಾದ ಫೇಸ್ ಯೋಗದ 5 ವಿಷಯಗಳ ಕುರಿತು ಮಾಹಿತಿ (Tips For Healthy Skin) ಇಲ್ಲಿದೆ.

VISTARANEWS.COM


on

By

Tips For Healthy Skin
Koo

ಪಿಸಿಓಎಸ್ (PCOS) ಅಥವಾ ಪಿಸಿಓಡಿ (PCOD), ದೇಹದ ಶಾಖ, ಚರ್ಮದ ರಂಧ್ರಗಳನ್ನು ಮುಚ್ಚಿಹಾಕುವ ಉತ್ಪನ್ನಗಳ ತಪ್ಪು ಬಳಕೆ, ಹಾರ್ಮೋನ್ ಗಳ ಅಸಮತೋಲನ (hormonal imbalances), ನಾವು ಸೇವಿಸುವ ಅಸುರಕ್ಷಿತ ಆಹಾರ.. ಹೀಗೆ ಅನೇಕ ಕಾರಣಗಳಿಂದ ಮುಖದಲ್ಲಿ ಮೊಡವೆ (acne) ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾದ ಸೋಂಕಿನಿಂದ (bacterial infection ) ಹೆಚ್ಚಾಗುತ್ತದೆ.

ಉಸಿರಾಟದ ವ್ಯಾಯಾಮ (breathing exercises), ಕೂಲಿಂಗ್ ತಂತ್ರಗಳ (cooling techniques) ಜೊತೆಗೆ ಮುಖದ ಯೋಗವನ್ನು (Tips For Healthy Skin) ಸರಿಯಾಗಿ ಮಾಡುವುದರಿಂದ ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಚರ್ಮದ ತೈಲಗಳನ್ನು ಸಮತೋಲನಗೊಳಿಸುತ್ತದೆ. ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ನೆನಪಿಟ್ಟುಕೊಳ್ಳಬಹುದಾದ ಫೇಸ್ ಯೋಗದ 5 ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.


1. ಬಹಳಷ್ಟು ನೀರು ಕುಡಿಯಿರಿ

ಫೇಸ್ ಯೋಗವು ಮುಖದಲ್ಲಿನ ಹೆಚ್ಚುವರಿ ತೈಲವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ನೀರಿನಿಂದ ನಿರ್ಗಮಿಸುವ ದೇಹದ ವಿಷಕಾರಿ ದ್ರವವನ್ನು ತೆಗೆದುಹಾಕಿ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ನೀರು ಚರ್ಮದ ರಂಧ್ರಗಳನ್ನು ತೆರೆಯಲು ಸಹಾಯ ಮಾಡುತ್ತದೆ ಮತ್ತು ದೇಹದ ತೇವಾಂಶದ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.

2. ಪ್ರಾಣಾಯಾಮ

ಮೊಡವೆ ಪೀಡಿತ ಚರ್ಮಕ್ಕಾಗಿ ಕೂಲಿಂಗ್ ಡೌನ್ ತಂತ್ರಗಳು ಅಥವಾ ಪ್ರಾಣಾಯಾಮವನ್ನು ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಇದು ಮುಖಕ್ಕೆ ರಕ್ತದ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

3. ಸರಿಯಾದ ತೈಲವನ್ನು ಬಳಸಿ

ತೆಂಗಿನ ಎಣ್ಣೆಯಂತಹ ಹೆಚ್ಚು ಗಾಢವಾದ ಎಣ್ಣೆಯನ್ನು ಮುಖಕ್ಕೆ ಬಳಸಬೇಡಿ. ಮೊಡವೆಗಳನ್ನು ತೊಡೆದು ಹಾಕಲು ಮತ್ತು ಸುಲಭವಾಗಿ ಚರ್ಮಕ್ಕೆ ಹೀರಿಕೊಳ್ಳಲು ಸಹಾಯವಾಗುವ ಚಹಾ ಮರ ಅಥವಾ ಬೇವಿನ ಎಣ್ಣೆಯಂತಹ ಹಗುರವಾದ ತೈಲಗಳನ್ನು ಬಳಸಿ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

4. ಕನಿಷ್ಠ ಸ್ಪರ್ಶ

ಮುಖದ ಮೇಲೆ ಕನಿಷ್ಠ ಸ್ಪರ್ಶವನ್ನು ಬಳಸುವ ಮೇಕಪ್ ಸಾಮಗ್ರಿಗಳನ್ನು ಬಳಸಿ. ಇದರಿಂದ ಯಾವುದೇ ಮೊಡವೆಗಳು ಉಂಟಾಗುವುದಿಲ್ಲ ಅಥವಾ ಯಾವುದೇ ಬ್ಯಾಕ್ಟೀರಿಯಾ ಸೋಂಕು ಆಗುವುದಿಲ್ಲ. ಒಂದು ಸ್ಥಳದಿಂದ ಇನ್ನೊಂದಕ್ಕೆ ವರ್ಗಾಯಿಸುವುದಿಲ್ಲ.

5. ಮುಖವನ್ನು ತೊಳೆಯುತ್ತಿರಿ

ಸೌಂದರ್ಯ ವರ್ಧಕಗಳು ಚರ್ಮದ ಮೇಲೆ ಬಿಡಬಹುದಾದ ಎಣ್ಣೆಗಳಿಂದ ಮಾಡಲಾಗುತ್ತದೆ. ದೀರ್ಘಕಾಲದವರೆಗೆ ಇರಿಸಲಗುವ ಉತ್ಪನ್ನಗಳು ಹೆಚ್ಚು ಮೊಡವೆಗಳಿಗೆ ಕಾರಣವಾಗಬಹುದು. ಮೇಕಪ್ ನ ಅಗತ್ಯವಿಲ್ಲದೆ ಇದ್ದಾಗ ಚೆನ್ನಾಗಿ ಮುಖವನ್ನು ತೊಳೆಯುವುದರಿಂದ ಚರ್ಮದ ರಂಧ್ರಗಳು ಮುಚ್ಚಿಹೋಗುವುದಿಲ್ಲ ಅಥವಾ ತೈಲಗಳನ್ನು ಬಳಸಿದ ನಂತರ ಮೊಡವೆಗಳನ್ನು ಹುಟ್ಟುಹಾಕುವುದಿಲ್ಲ.

Continue Reading
Advertisement
pm narendra modi yogi adityanath
ಪ್ರಮುಖ ಸುದ್ದಿ22 mins ago

PM Narendra Modi: ʼಗೂಂಡಾರಾಜ್‌ʼ ನೆನಪಿಸಿದ ಮೋದಿ, ಉ.ಪ್ರದಲ್ಲಿ ʼಯೋಗಿ ಸ್ವಚ್ಛತಾ ಅಭಿಯಾನʼಕ್ಕೆ ಮೆಚ್ಚುಗೆ

Viral video
ವೈರಲ್ ನ್ಯೂಸ್30 mins ago

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Head Coach
ಕ್ರೀಡೆ33 mins ago

Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

Drowned in water
ಹಾಸನ56 mins ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

HD DeveGowda Wont celebrate 92nd birthday
ರಾಜಕೀಯ60 mins ago

HD Devegowda: 92ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ಎಚ್‌ಡಿ ದೇವೇಗೌಡ; ಮೊಮ್ಮಗನ ಕೇಸ್‌ನಿಂದ ಈ ತೀರ್ಮಾನ?

hd revanna case
ಕ್ರೈಂ1 hour ago

HD Revanna Case: ಎಚ್‌ಡಿ ರೇವಣ್ಣ ಮತ್ತೆ ಕೋರ್ಟ್‌ನಲ್ಲಿ; ಎಸ್‌ಐಟಿ ಅಧಿಕಾರಿಗಳು ರೇವಣ್ಣ ನಿವಾಸದಲ್ಲಿ!

Murder case
ದಾವಣಗೆರೆ1 hour ago

Murder Case : ಚಾಕುವಿನಿಂದ ಇರಿದು ಯುವಕನ ಕೊಲೆ; ಹಂತಕರಿಗಾಗಿ ಪೊಲೀಸರ ಹುಡುಕಾಟ

Amruthadhaare Serial bhoomika in birthday chaya singh
ಕಿರುತೆರೆ1 hour ago

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Theft in two houses in Kudligi taluk
ವಿಜಯನಗರ1 hour ago

Theft Case: ಕೂಡ್ಲಿಗಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

Prajwal Revanna Case Lawyer DevarajeGowda sent to police custody for another day
ಕ್ರೈಂ1 hour ago

Prajwal Revanna Case: ವಕೀಲ ದೇವರಾಜೇಗೌಡ ಮತ್ತೊಂದು ದಿನ ಪೊಲೀಸ್‌ ಕಸ್ಟಡಿಗೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌