Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ - Vistara News

ಆರೋಗ್ಯ

Health Tips For Lungs: ಈ ಆಹಾರ ತಿನ್ನಿ, ನಿಮ್ಮ ಶ್ವಾಸಕೋಶದ ಆರೋಗ್ಯ ಹೆಚ್ಚಿಸಿಕೊಳ್ಳಿ

ಶ್ವಾಸಕೋಶ ನಮ್ಮ ದೇಹದ ಅತಿ ಮುಖ್ಯ ಭಾಗ. ಯಾವೆಲ್ಲ ಆಹಾರಗಳು ಶ್ವಾಸಕೋಶದ (Health Tips for Lungs) ಡಿಟಾಕ್ಸ್‌ಗೆ ಒಳ್ಳೆಯದು? ಈ ಲೇಖನ ಓದಿ.

VISTARANEWS.COM


on

Doctor listens to the human lungs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ದೇಹದ ಪ್ರಮುಖ ಅಂಗಗಳ ಪೈಕಿ ಶ್ವಾಸಕೋಶವೂ ಒಂದು. ಶ್ವಾಸಕೋಶದ ಆರೋಗ್ಯ ಅತ್ಯಂತ ಮುಖ್ಯ. ಆದರೆ ಇಂದು ನಗರೀಕರಣ, ಹೆಚ್ಚಿದ ವಾಹನಗಳು, ನಿತ್ಯವೂ ಇಂತಹ ಪರಿಸರದಲ್ಲೇ ಕೆಲಸ ಮಾಡಬೇಕಾಗಿ ಬರುವ ಅನಿವಾರ್ಯತೆ ಇತ್ಯಾದಿಗಳಿಂದಾಗಿ ನಮ್ಮ ಶ್ವಾಸಕೋಶಗೊಳಕ್ಕೆ ವಾತಾವರಣದ ಕಲುಶಿತ ಗಾಳಿಯ ಪ್ರವೇಶವಾಗಿಯೇ ಆಗುತ್ತದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದಾಗಿ ಭಾರತದ ಹಲವು ನಗರಗಳು ಮನುಷ್ಯರಿಗೆ ಉಸಿರಾಡಲು ಯೋಗ್ಯವೇ ಇಲ್ಲದಂಥ ಗಾಳಿಯನ್ನೂ ಹೊಂದಿವೆ. ಇಂಥ ಸಂದರ್ಭದಲ್ಲಿ ನಮ್ಮ ಶ್ವಾಸಕೋಶವನ್ನು ಆದಷ್ಟೂ ಆರೋಗ್ಯವಾಗಿ ಇಟ್ಟುಕೊಳ್ಳುವ ಉತ್ತಮ ಆಹಾರ ಸೇವನೆ, ಪ್ರಾಣಾಯಾಮ, ಯೋಗ ಇತ್ಯಾದಿಗಳ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಿದೆ. ಶ್ವಾಸಕೋಶಕ್ಕೆ ಒಳ್ಳೆಯದನ್ನೇ ಮಾಡುವ ಆಹಾರಗಳೂ ನಮ್ಮ ಸುತ್ತಮುತ್ತಲಿವೆ. ನೈಸರ್ಗಿಕವಾಗಿ ನಮಗೆ ದಕ್ಕುವ ಶ್ವಾಸಕೋಶ ಸ್ನೇಹಿ ಆಹಾರಗಳನ್ನು ನಾವು ಸೇವನೆ ಮಾಡುವ ಮೂಲಕವೂ ಶ್ವಾಸಕೋಶವನ್ನು ಡಿಟಾಕ್ಸ್‌ ಮಾಡಬಹುದು. ಕಶ್ಮಲಗಳನ್ನು ಹೊರಹೋಗುವಂತೆ ಮಾಡಬಹುದು. ಬನ್ನಿ, ಯಾವೆಲ್ಲ ಆಹಾರಗಳು ಶ್ವಾಸಕೋಶದ ಡಿಟಾಕ್ಸ್‌ಗೆ ಒಳ್ಳೆಯದು (Health Tips for Lungs) ಎಂಬುದನ್ನು ನೋಡೋಣ.

sprouts

ಕೋಸುಗಳು

ಪ್ರಕೃತಿಯ ಅಚ್ಚರಿ ನೋಡಿ. ಇಲ್ಲಿ ನಮ್ಮ ದೇಹದ ಅಂಗವನ್ನೇ ಹೋಲುವ ತರಕಾರಿಗಳೂ ಸಿಗುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಶ್ವಾಸಕೋಶದ ರಚನೆಗೆ ತಾಳೆಯಾಗುವ ತರಕಾರಿಗಳು ಯಾವುದೆಂದು ನಿಮಗೆ ಅರ್ಥವಾಗಬಹುದು. ಬ್ರೊಕೋಲಿ, ಕ್ಯಾಬೇಜ್‌, ಹೂಕೋಸು ಇತ್ಯಾದಿ ಕೋಸುಗಳು ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಇವು ಶ್ವಾಸಕೋಶದ ಮಲಿನತೆಯನ್ನು ಹೊರಹಾಕುವಲ್ಲಿ (Health Tips for Lungs) ನೆರವಾಗುತ್ತವೆ.

ginger

ಶುಂಠಿ

ಶುಂಠಿಯಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿವೆ. ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ರಾಮ ಬಾಣವಾಗಿರುವ ಶುಂಠಿ, ಶ್ವಾಸಕೋಶವನ್ನು ಕಫಮುಕ್ತವನ್ನಾಗಿಸಿ ಸ್ವಚ್ಛಗೊಳಿಸುವಲ್ಲಿ ನೆರವಾಗುತ್ತದೆ. ಅಸ್ತಮಾ, ಬ್ರೋಂಕೈಟಿಸ್‌ ಹಾಗೂ ಶ್ವಾಸಕೋಶದಲ್ಲಿ ರಕ್ತ ಸಂಚಾರಕ್ಕೂ ಇದು ನೆರವಾಗುತ್ತದೆ.

Tumeric Rhizome with Green Leaf and Turmeric Powder

ಅರಿಶಿನ

ಅರಿಶಿನದಲ್ಲಿರುವ ಕರ್‌ಕ್ಯುಮಿನ್‌ ಎಂಬ ಅಂಶದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳನ್ನೂ, ಆಂಟಿ ಇನ್‌ಫ್ಲಮೇಟರಿ ಗುಣಗಳನ್ನೂ ಹೊಂದಿರುವುದರಿಂದ ಶವಾಸಕೋಶದ ಅಂಗಾಂಶಗಳ ಮರುರಚನೆಗೆ ಹಾಗೂ ಕಶ್ಮಲಗಳನ್ನು ಹೊರಕಳಿಸಲು ಸಹಾಯ ಮಾಡುತ್ತದೆ.

reen Tea Benefits Of Drinking Green Tea

ಗ್ರೀನ್‌ ಟೀ

ಗ್ರೀನ್‌ಟೀಯಲ್ಲಿನ ಕ್ಯಾಟ್‌ಚಿನ್‌ ಎಂಬ ಅಂಟಿ ಆಕ್ಸಿಡೆಂಟ್‌, ಶ್ವಾಸಕೋಶದಲ್ಲಿರುವ ಉರಿಯೂತದಂತಹ ಲಕ್ಷಣಗಳನ್ನು ಕಡಿಮೆ ಮಾಡಿ ಸರಾಗವಾಗಿ ಉಸಿರಾಟವಾಗುವಂತೆ ನೋಡಿಕೊಳ್ಳುತ್ತದೆ.

Fruits and Berries Foods Consumed By Lord Rama During His 14 Year Exile

ಬೆರ್ರಿಗಳು

ಬ್ಲೂಬೆರ್ರಿ, ರಸ್‌ಬೆರ್ರಿ, ಸ್ಟ್ರಾಬೆರ್ರಿ ಮತ್ತಿತರ ಬೆರ್ರಿ ಜಾತಿಯ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಶ್ವಾಸಕೋಶ ಅಂಗಾಶಗಳನ್ನು ರಕ್ಷಿಸುವುದಲ್ಲದೆ, ಶ್ವಾಸಕೋಶದ ಡಿಟಾಕ್ಸ್‌ಗೆ ನೆರವಾಗುತ್ತವೆ.

Citrus fruits Foods To Avoid Eating With Tea

ಸಿಟ್ರಸ್‌ ಹಣ್ಣುಗಳು

ಕಿತ್ತಳೆ, ನಿಂಬೆ, ಮೂಸಂಬಿ ಸೇರಿದಂತೆ ವಿಟಮಿನ್‌ ಸಿ ಹೇರಳವಾಗಿರುವ ಸಿಟ್ರಸ್‌ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ ಸಮೃದ್ಧವಾಗಿರುತ್ತವೆ. ಇವು ಶ್ವಾಸಕೋಶ ಸಂಬಂಧೀ ಕಾಯಿಲೆಗಳಿಗೆ ತುತ್ತಾಗದಂತೆ ರಕ್ಷಾಕವಚದಂತಹ ಕೆಲಸವನ್ನು ಮಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ.

Pomegranate Foods That Slow Down Ageing

ದಾಳಿಂಬೆ

ದಾಳಿಂಬೆಯಲ್ಲಿ ಪುನಿಕ್ಯಾಲಜಿನ್‌ ಎಂಬ ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ ಇದ್ದು, ಇದು ಶ್ವಾಸಕೋಶದ ಅಂಗಾಂಶಗಳಿಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ.

Lettuce

ಸೊಪ್ಪು

ಸೊಪ್ಪುಗಳಾದ, ಪಾಲಕ್‌, ಬಸಳೆ ಇತ್ಯಾದಿಗಳಲ್ಲಿ ಕ್ಲೋರೋಫಿಲ್‌ ಇರುವುದರಿಂದ ಇವು ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ನೆರವಾಗುತ್ತವೆ. ಶ್ವಾಸಕೋಶದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತವೆ.

Garlic cloves

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಆಲಿಸಿನ್‌ ಎಂಬ ಅಂಶವಿದ್ದು ಇದರಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇವು ಶ್ವಾಸಕೋಶದ ಕಶ್ಮಲಗಳನ್ನು ಹೊರಕ್ಕೆ ಕಳಿಸಿ ಸ್ವಚ್ಛ ಮಾಡುವ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಶ್ವಾಸಕೋಶಕ್ಕೆ ಇನ್ಫೆಕ್ಷನ್‌ ಆಗದಂತೆ ತಡೆಯುವಲ್ಲಿ ಇವು ರಕ್ಷಾಕವಚದಂತೆ ನೀರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

Dry seeds

ಬೀಜಗಳು

ಬಾದಾಮಿ, ವಾಲ್ನಟ್‌, ಅಗಸೆಬೀಜ ಸೇರಿದಂತೆ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಹಾಘೂ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಶ್ವಾಸಕೋಶವನ್ನು ಡಿಟಾಕ್ಸ್‌ ಮಾಡುವಲ್ಲಿ ನೆರವಾಗುತ್ತವೆ. ಶ್ವಾಸಕೋಶದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: Health Tips For Kidney: ಕಿಡ್ನಿಯ ಆರೋಗ್ಯಕ್ಕೆ ಯಾವೆಲ್ಲ ಆಹಾರಗಳು ಒಳ್ಳೆಯದು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Rashtrotthana Parishat: ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಜಯದೇವ್ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ.

VISTARANEWS.COM


on

Rashtrotthana Hospital adopts Dozi technology to provide greater safety to patients
Koo

ಬೆಂಗಳೂರು: 162 ಹಾಸಿಗೆಗಳನ್ನು ಹೊಂದಿರುವ ಇಂಟಿಗ್ರೇಟೆಡ್ ಮಲ್ಟಿ-ಸ್ಪೆಷಾಲಿಟಿ ಟರ್ಷಿಯರಿ ಕೇರ್ ಹಾಸ್ಪಿಟಲ್ ಆಗಿರುವ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು (Rashtrotthana Parishat) ಡೋಝಿಯ ಸುಧಾರಿತ ಎಐ ಆಧರಿತ ಸಂಪರ್ಕರಹಿತ, ಕಂಟಿನ್ಯೂಯಸ್ ಪೇಷೆಂಟ್ ಮಾನಿಟರಿಂಗ್ ಆಂಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅಳವಡಿಸಿಕೊಂಡಿರುವುದಾಗಿ ಘೋಷಿಸಿದೆ.

ಈ ಹೊಸ ವ್ಯವಸ್ಥೆ ಅನುಷ್ಠಾನದ ಮೂಲಕ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆಯು ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಸಂಯೋಜಿತವಾಗಿರುವ ದಕ್ಷಿಣ ಭಾರತದ ಆಸ್ಪತ್ರೆಗಳಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಂಡಿರುವ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಗಳಿಸಿದೆ. ಆ ಮೂಲಕ ರೋಗಿಗಳ ಸುರಕ್ಷತೆ, ನಿರಂತರ ಕಾಳಜಿ ಮತ್ತು ರೋಗಿಗಳ ಆರೈಕೆಯ ಗುಣಮಟ್ಟವನ್ನು ಹೆಚ್ಚಿಸಲು “ಮೇಡ್ ಇನ್ ಇಂಡಿಯಾ’ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿರುವ ನಾನ್-ಐಸಿಯು ವಾರ್ಡ್ ಬೆಡ್‌ಗಳು ಮುಂದಿನ ಪೀಳಿಗೆಯ ಅತ್ಯಾಧುನಿಕ ಸಂಚಾರಿ- ಸಂಪರ್ಕಿತ ರೋಗಿಗಳ ನಿಗಾ ವಹಿಸುವ ವ್ಯವಸ್ಥೆ ಹೊಂದಿದೆ. ಜತೆಗೆ ಅದು ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ ವ್ಯವಸ್ಥೆಯನ್ನೂ ಹೊಂದಿದ್ದು, ಸಂಪರ್ಕರಹಿತವಾಗಿ ನಿರಂತರವಾಗಿ ರೋಗಿಗಳ ನಿಗಾವಹಿಸುವಿಕೆಯ ಕೆಲಸವನ್ನು ಮಾಡುತ್ತದೆ.

ಇದನ್ನೂ ಓದಿ: Summer Tour: ಐತಿಹಾಸಿಕ ಹೆಗ್ಗುರುತಿನ ಶ್ರೀಮಂತ ನಗರ ತಿರುಚ್ಚಿ; ಬೇಸಿಗೆ ಪ್ರವಾಸದಲ್ಲಿ ನೋಡಲು ಮರೆಯದಿರಿ

ಡೋಝಿಯ ಉತ್ಪನ್ನವು ಕ್ಲೌಡ್ ಆಧರಿತವಾಗಿದೆ. ರೋಗಿಗಳ ಸುರಕ್ಷತೆಗಾಗಿ ಹಾಗೂ ಉತ್ತಮ ಚಿಕಿತ್ಸಾ ಫಲಿತಾಂಶ ದೊರಕಿಸಲು ಸಕಾಲಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರೋಗಿಯನ್ನು ನಿರಂತರವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಅನುವು ಮಾಡಿಕೊಡುವ ಸೆಂಟ್ರಲ್ ಆಂಡ್ ರಿಮೋಟ್ ಮಾನಿಟರಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ರಾಷ್ಟ್ರೋತ್ಥಾನ ಪರಿಷತ್ತಿನ ಒಂದು ಭಾಗವಾಗಿದ್ದು, ಸಮಾಜದ ಎಲ್ಲಾ ಸ್ತರದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ಉತ್ತಮ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಆಸ್ಪತ್ರೆಯು 19 ಸಾಮಾನ್ಯ ವಾರ್ಡ್‌ಗಳು, 72 ಅರೆ-ಖಾಸಗಿ ವಾರ್ಡ್‌ಗಳು, 11 ತುರ್ತು ಚಿಕಿತ್ಸಾ ವಿಭಾಗಗಳು ಮತ್ತು 17 ಖಾಸಗಿ ವಾರ್ಡ್‌ಗಳನ್ನು ಹೊಂದಿದೆ. ಒಟ್ಟು 162 ಹಾಸಿಗೆಗಳನ್ನು ಹೊಂದಿದ್ದು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿದೆ.

ಹೃದಯ ಬಡಿತ, ಉಸಿರಾಟ ಸ್ಥಿತಿ, ರಕ್ತದೊತ್ತಡ, ಎಸ್‌ಪಿಓ2 ಮಟ್ಟಗಳು, ಟೆಂಪರೇಚರ್ ಮತ್ತು ಇಸಿಜಿಯಂತಹ ರೋಗಿಗಳ ಪ್ರಮುಖ ಆರೋಗ್ಯ ಅಂಶಗಳನ್ನು ದೂರದಿಂದಲೇ ನಿಗಾ ವಹಿಸುವ ಸೌಲಭ್ಯವನ್ನು ಡೋಝಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸುತ್ತದೆ. ಡೋಝಿಯ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಅವಶ್ಯ ಮಾಹಿತಿಗಳನ್ನು ಗಮನಿಸುತ್ತಿರುತ್ತದೆ ಮತ್ತು ಒಂದು ವೇಳೆ ರೋಗಿಯ ಆರೋಗ್ಯ ಕ್ಷೀಣಿಸುವಿಕೆ ಕಂಡುಬಂದರೆ ಆ ಕುರಿತು ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತದೆ. ಆ ಮೂಲಕ ಸಕಾಲಿಕ ವೈದ್ಯಕೀಯ ಚಿಕಿತ್ಸೆ ಒದಗಿಸಲು ನೆರವಾಗುತ್ತದೆ. ಸಂಪರ್ಕರಹಿಕ ನಿಗಾ ವಹಿಸುವಿಕೆಗಾಗಿ ಡೋಝಿ ಎಐ ಆಧಾರಿತ ಬ್ಯಾಲಿಸ್ಟೋಕಾರ್ಡಿಯೋಗ್ರಫಿ (ಬಿಸಿಜಿ) ಅನ್ನು ಬಳಸುತ್ತದೆ. ಡೋಝಿಯ ಈ ಹೊಸ ತಂತ್ರಜ್ಞಾನವು ಪೇಟೆಂಟ್ ಹೊಂದಿದ್ದು, ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ.

ಇದನ್ನೂ ಓದಿ: Karnataka Weather : ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ವರ್ಷಧಾರೆ; ನಾಳೆ ರಭಸವಾಗಿ ‌ಬೀಸಲಿದೆ ಗಾಳಿ- ಮಳೆ

ಬೆಂಗಳೂರಿನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಐಸಿಯು ಮತ್ತು ಇಆರ್‌ನ ಅನೆಸ್ತೇಷಿಯಾಲಜಿ ಎಚ್‌ಒಡಿ ಡಾ. (ಕರ್ನಲ್) ಆನಂದ್ ಶಂಕರ್ ಮಾತನಾಡಿ, “ಆರೋಗ್ಯ ಸೇವಾ ಕ್ಷೇತ್ರವು ನಿರಂತರವಾಗಿ ರೂಪಾಂತರಕ್ಕೆ ಒಳಗಾಗುತ್ತಿರುವುದರಿಂದ ಆರೋಗ್ಯ ಸೇವೆ ಪೂರೈಕೆದಾರರು ರೋಗಿಗಳಿಗೆ ಅತ್ಯುತ್ತಮ ಆರೈಕೆ ಒದಗಿಸಲು ಅತ್ಯಾಧುನಿಕ ಸಾಧನಗಳಿಗೆ ಹೊಂದಿಕೊಳ್ಳುವುದು ಮತ್ತು ಅವುಗಳನ್ನು ಹೊಂದುವುದು ಅವಶ್ಯವಾಗಿದೆ. ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಮತ್ತು ರೋಗಿಗಳ ಚಿಕಿತ್ಸೆ ಫಲಿತಾಂಶಗಳನ್ನು ಸುಧಾರಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿ ‘ಮೇಡ್ ಇನ್ ಇಂಡಿಯಾ’ ಸಂಪರ್ಕರಹಿತ, ನಿರಂತರ ರೋಗಿಗಳ ನಿಗಾ ವಹಿಸುವಿಕೆ ಪರಿಹಾರೋತ್ಪನ್ನವಾದ ಡೋಝಿ ಜತೆಗಿನ ಪಾಲುದಾರಿಕೆ ಸೂಕ್ತವಾಗಿ ಹೊಂದಿಕೊಂಡಿದೆ.

ಜೀವಗಳನ್ನು ಉಳಿಸುವ ಸಾಮರ್ಥ್ಯವಿರುವ ಈ ಹೊಸ ಆರೋಗ್ಯ ಸೇವೆ ಆವಿಷ್ಕಾರವನ್ನು ಮೊದಲು ಬಳಸಿಕೊಳ್ಳುವ ಮೂಲಕ ದೇಶದಲ್ಲಿನ ರೋಗಿಗಳ ಸುರಕ್ಷತೆಗೆ ಹೊಸ ಮಾನದಂಡಗಳನ್ನು ರೂಪಿಸುವಲ್ಲಿ ನಾವು ಮುಂಚೂಣಿಯಲ್ಲಿ ನಿಂತಿದ್ದೇವೆ. ಡೋಝಿ ಜತೆಗೆ ಈ ಪ್ರಯಾಣದ ಭಾಗವಾಗಲು ನಮಗೆ ಸಂತೋಷವಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಆತ್ಮಾರಾಮ್ ಡಿ.ಸಿ. ಡೋಝಿ ತಂತ್ರಜ್ಞಾನದ ಅಳವಡಿಕೆಯ ಕುರಿತು ಮಾತನಾಡಿ, ಜಯದೇವ್ ಸ್ಮಾರಕ ಆಸ್ಪತ್ರೆಯು 162 ಹಾಸಿಗೆಗಳ ಇಂಟಿಗ್ರೇಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಸಮಾಜದ ಎಲ್ಲಾ ವರ್ಗಗಳ ಜನರಿಗೆ ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ರೋಗಿಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದಕ್ಕಾಗಿ ಡೋಝಿಯ ಎಐ ಆಧಾರಿತ ಸಂಪರ್ಕರಹಿತ ನಿಗಾವಹಿಸುವಿಕೆ ವ್ಯವಸ್ಥೆಯನ್ನು ಅಳವಡಿಸಿದ್ದು, ಅದರ ಅರ್ಲಿ ವಾರ್ನಿಂಗ್ ಸಿಸ್ಟಮ್ ಸಮಯಕ್ಕೆ ಸರಿಯಾಗಿ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಉತ್ತಮ ಆರೈಕೆ ಒದಗಿಸಲು ಸಹಾಯ ಮಾಡುತ್ತದೆ. ಅದರ ಕ್ಲೌಡ್-ಆಧರಿತ ತಂತ್ರಜ್ಞಾನದಿಂದಾಗಿ ನಮ್ಮ ವೈದ್ಯರು ತಮ್ಮ ರೋಗಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದೂರದಿಂದಲೇ ನಿಗಾವಹಿಸಬಹುದಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಸಲಹೆಯನ್ನು ನೀಡಬಹುದಾಗಿದೆ. ಈ ಮೂಲಕ ಸಂಗ್ರಹಿಸಿದ ಡೇಟಾವು ಮಹತ್ವದ್ದಾಗಿದ್ದು, ಬಹುಶಃ ಭವಿಷ್ಯದ ಎಲ್ಲಾ ಸಂಶೋಧನಾ ಅಧ್ಯಯನಗಳಿಗೆ ನೆರವನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಆಡಳಿತಾಧಿಕಾರಿ ಡಾ. ಶೈಲಾ ಎಚ್.ಎನ್. ಮಾತನಾಡಿ, ನಮ್ಮ ರೋಗಿಗಳ ಆರೈಕೆಯಲ್ಲಿ ಡೋಝಿಯ ಅನುಷ್ಠಾನವು ಆರೋಗ್ಯ ಸೇವೆ ಒದಗಿಸುವಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ನಮ್ಮ ಬದ್ಧತೆಯನ್ನು ತೋರಿಸಿಕೊಟ್ಟಿದೆ. ಈ ಅತ್ಯಾಧುನಿಕ ತಂತ್ರಜ್ಞಾನವು ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೋಗ್ಯ ಸೇವೆ ಒದಗಿಸುವ ನಮ್ಮ ದೃಷ್ಟಿಗೆ ಹೊಂದಿಕೆಯಾಗುತ್ತದೆ. ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಪ್ರಮುಖವಾಗಿ ನಾವು ಉತ್ಕೃಷ್ಟ ಆವಿಷ್ಕಾರ ಮತ್ತು ತಾಂತ್ರಿಕ ಪ್ರಗತಿಯನ್ನು ಅಳವಡಿಸಿಕೊಂಡು ನಮ್ಮ ಚಿಕಿತ್ಸಾ ವಿಧಾನವನ್ನು ಪರಿಷ್ಕರಿಸುವ ಮೌಲ್ಯವನ್ನು ಹೊಂದಿದ್ದೇವೆ. ಶ್ರೇಷ್ಠತೆಯನ್ನು ಅಳವಡಿಸಿಕೊಂಡು ಸಮುದಾಯಕ್ಕೆ ಸಹಾನುಭೂತಿ, ಕಾಳಜಿ ಮತ್ತು ಸೇವೆ ಒದಗಿಸುವ ಬದ್ಧತೆಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್; ಈ ಮೂರಕ್ಕೂ ಶಿವಮೊಗ್ಗ ನಂಟು!

ಈ ಕುರಿತು ಡೋಝಿ ಸಿಇಒ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವಾಟೆ ಮಾತನಾಡಿ, ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಕೈಜೋಡಿಸುವುದಕ್ಕೆ ನಮಗೆ ಹೆಮ್ಮೆ ಇದೆ. ಏಕೆಂದರೆ ರೋಗಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಲು ಮತ್ತು ಚಿಕಿತ್ಸಾ ಫಲಿತಾಂಶಗಳು ಮತ್ತು ಶುಶ್ರೂಷೆಯ ಧಕ್ಷತೆಯನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ. ನಿರಂತರವಾದ ವಾರ್ಡ್ ಮಾನಿಟರಿಂಗ್ ಮತ್ತು ಅರ್ಲಿ ವಾರ್ನಿಂಗ್ ಸಿಸ್ಟಮ್ ಅಳವಡಿಕೆಯಿಂದ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸಾಧ್ಯವಾಗುತ್ತದೆ. ಜಾಗತಿಕವಾಗಿ ಆರೋಗ್ಯ ಸೇವಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯ ಆವಿಷ್ಕಾರಗಳ ಪಾತ್ರವು ಹೆಚ್ಚುತ್ತಿರುವುದಕ್ಕೆ ಈ ಸಹಯೋಗವು ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Continue Reading

ಆರೋಗ್ಯ

Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಸನ್‌ಬ್ಲಾಕ್‌ ಬಳಸುವುದು ಮರೆತರೆ, ಬಿಸಿಲಿಗೆ ಚರ್ಮ ಸುಡುವುದು (Home remedies for sunburn) ಸಹಜ. ಆದರೆ ಅದಕ್ಕೆ ಸೂಕ್ತ ಆರೈಕೆ ಮಾಡದಿದ್ದರೆ ಚರ್ಮದ ಮೇಲೆ ಕಲೆಗಳು ಉಳಿಯಬಹುದು. ತೀವ್ರ ಸಮಸ್ಯೆಗಳಿಗೂ ಕಾರಣವಾಗಬಹುದು. ಇದಕ್ಕಿದೆ ಇಲ್ಲಿ ಮನೆಮದ್ದು.

VISTARANEWS.COM


on

Home Remedies For Sunburn
Koo

ಬಿಸಿಲಿನಲ್ಲಿ ಹೊರಗೆ ಹೋಗದೆ ಒಳಗೇ ಕುಳಿತಿರುವುದು ಸಾಧ್ಯವಾಗದ ಕೆಲಸ. ನಾಯಿಗೆ ವಾಕಿಂಗ್‌, ಗಿಡಕ್ಕೆ ನೀರುಣಿಸುವುದು, ಮಕ್ಕಳನ್ನು ಕರೆತರುವುದು, ಮನೆಗೆ ಬೇಕಾದ್ದನ್ನು ತರುವುದು- ಹೀಗೆ ಏನಾದರೊಂದು ಕೆಲಸಕ್ಕೆ ನಮ್ಮನ್ನು ಬಿರು ಬಿಸಿಲಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಕಚೇರಿಯೊಳಗೆ ತಂಪಿದ್ದರೂ ಹೋಗುವ ದಾರಿಯಲ್ಲಿ ಬಿಸಿಲೇ ತಾನೇ? ಈ ಕಠೋರ ಬಿಸಿಲಿನಲ್ಲಿ ಹತ್ತಿಪ್ಪತ್ತು ನಿಮಿಷಗಳಿದ್ದರೂ ಸಾಕು ಚರ್ಮ ಕೆಂಪಾಗುವುದಕ್ಕೆ. ಸದಾ ಕಾಲ ಸನ್‌ಸ್ಟ್ರೀನ್‌ ಧರಿಸಿಕೊಂಡಿರುವುದು, ಛತ್ರಿ ಹಿಡಿದು ಓಡಾಡುವುದು, ಮೈ-ಮುಖವೆಲ್ಲ ಮುಚ್ಚಿಕೊಂಡಿರುವುದು ಆಗದ ಕೆಲಸ. ಹೀಗೆ ಬಿಸಿಲಿಗೆ ಸುಟ್ಟು ಕೆಂಪಾಗುವ (Home remedies for sunburn) ಚರ್ಮಕ್ಕೆ ಆರೈಕೆ ಬೇಡವೇ?
ಸನ್‌ಬರ್ನ್‌ ಅಥವಾ ಬಿಸಿಲಿಗೆ ಸುಡುವುದೆಂದರೆ ಚರ್ಮ ಕೆಂಪಾಗುವುದು ಮಾತ್ರವಲ್ಲ. ಮೊದಲಿಗೆ ಉರಿಯೊಂದಿಗೆ ಕೆಂಪಾಗಿ, ನಂತರ ಕಪ್ಪಾಗಿ, ತುರಿಕೆ ಆರಂಭವಾಗಿ, ಕೆಲವೊಮ್ಮೆ ಸಣ್ಣ ಗುಳ್ಳೆಗಳೆದ್ದು, ಒಂದೆರಡು ದಿನಗಳಲ್ಲಿ ಸುಟ್ಟ ಚರ್ಮವೆಲ್ಲ ಸಿಪ್ಪೆ ಸುಲಿದಂತಾಗಿ… ಸೂಕ್ಷ್ಮ ಚರ್ಮದವರಿಗಂತೂ ಇದು ಇನ್ನೂ ಕಷ್ಟ. ಚರ್ಮ ಸುಟ್ಟಂತಾದಾಗ ತಣ್ಣನೆಯ ನೀರು ಹಾಕಿಕೊಳ್ಳುವುದು ನೆರವಾಗುತ್ತದೆ. ಹಾಗೆಂದು ಐಸ್‌ ಹಾಕಿದರೆ ಕೆಲವೊಮ್ಮೆ ಅದೂ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸುಟ್ಟ ಗಾಯಕ್ಕೆ ಹಚ್ಚುವ ಮುಲಾಮುಗಳು, ಕ್ಯಾಲಮಿನ್‌ ಲೋಶನ್‌ನಂಥವು ತೊಂದರೆಯನ್ನು ಶಮನ ಮಾಡಬಲ್ಲವು. ಬಿಸಿಲಿಗೆ ಚರ್ಮ ಸುಟ್ಟಂತಾದಾಗ ಸುರಕ್ಷಿತವಾದ ಮನೆಮದ್ದುಗಳೇನು?

Turmeric and sandalwood

ಅರಿಶಿನ ಮತ್ತು ಗಂಧ

ಮನೆಯಲ್ಲಿ ಗಂಧದ ಕೊರಡಿದ್ದರೆ ಅದನ್ನು ಹಾಲಿನಲ್ಲಿ ತೇಯ್ದು, ತೆಳುವಾದ ಗಂಧವನ್ನು ಬಟ್ಟಲಿಗೆ ತೆಗೆದುಕೊಳ್ಳಿ. ಇದಕ್ಕೆ ಕೊಂಚ ಅರಿಶಿನವನ್ನು ಸೇರಿಸಿ. ಇದನ್ನು ಬಿಸಿಲಿಗೆ ಸುಟ್ಟಂತಾದ ಭಾಗಕ್ಕೆ ಹಚ್ಚುವುದು ಹಿತಕರ. ಅರಿಶಿನದಲ್ಲಿ ಉರಿಯೂತವನ್ನು ಶಮನ ಮಾಡುವ ಸಾಮರ್ಥ್ಯವಿದ್ದರೆ, ತಂಪುಂಟುಮಾಡುವ ಗುಣ ಗಂಧಕ್ಕಿದೆ. ಇವೆರಡರ ಮಿಶ್ರಣದಿಂದ ಸುಟ್ಟು ಕೆಂಪಾದ ಚರ್ಮದ ತೊಂದರೆ ಬೇಗನೆ ಗುಣವಾಗುತ್ತದೆ.

Aloe Vera Home Remedies For Stretch Marks

ಲೋಳೆಸರ

ಅಲೊವೇರಾ ಕೇವಲ ಸೌಂದರ್ಯವರ್ಧಕವಾಗಿ ಮಾತ್ರವೇ ಬಳಕೆಗೆ ಬರುವಂಥದ್ದಲ್ಲ. ಇದರ ಔಷಧೀಯ ಗುಣಗಳು ಬಹಳಷ್ಟಿವೆ. ಸುಟ್ಟಗಾಯಕ್ಕೂ ಲೋಳೆಸರ ಒಳ್ಳೆಯ ಮದ್ದಾಗಬಲ್ಲದು. ಬೀಚಿನಲ್ಲಿ ಆಡುವಾಗ ಮುಖ ಮಾತ್ರವಲ್ಲದೆ, ಮೈ-ಕೈಯೆಲ್ಲಾ ಕೆಂಪಾಗಿದೆ ಎನಿಸಿದರೆ, ಲೋಳೆಸರವನ್ನು ಚಪ್ಪಟೆಯಾಗಿ ಉದ್ದಕ್ಕೆ ಕತ್ತರಿಸಿ. ಇದರಿಂದ ಒಳಗಿನ ಜೆಲ್‌ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಇದನ್ನು ಧಾರಾಳವಾಗಿ ಸುಟ್ಟ ಭಾಗಗಳಿಗೆಲ್ಲಾ ಲೇಪಿಸಿಕೊಳ್ಳಿ. ಇದು ಉರಿಯಿಂದ ತ್ವರಿತ ಉಪಶಮನವನ್ನು ನೀಡುತ್ತದೆ.

ರೋಸ್‌ ವಾಟರ್‌

ಗುಲಾಬಿ ಜಲ

ಜನಪ್ರಿಯವಾಗಿ ರೋಸ್‌ ವಾಟರ್‌ ಎಂದೇ ಹೇಳಲಾಗುವ ಇದನ್ನು ಬಿಸಿಲಿಗೆ ಸುಟ್ಟ ಭಾಗಕ್ಕೆ ಧಾರಾಳವಾಗಿ ಲೇಪಿಸಬೇಕಾಗುತ್ತದೆ. ಇದರಲ್ಲಿರುವ ವಿಟಮಿನ್‌ ಇ ಮತ್ತು ಉತ್ಕರ್ಷಣ ನಿರೋಧಕಗಳು ಹಾನಿಗೊಳಗಾದ ಚರ್ಮದ ಕೋಶಗಳ ದುರಸ್ತಿಗೆ ನೆರವಾಗುತ್ತವೆ. ಸ್ವಚ್ಛವಾದ ಹತ್ತಿಯ ಬಟ್ಟೆಯೊಂದನ್ನು ಗುಲಾಬಿ ನೀರಿನಲ್ಲಿ ಅದ್ದಿ, ಅದನ್ನು ಕೆಂಪಾದ ಚರ್ಮದ ಮೇಲಿರಿಸಿ. ಇದನ್ನು ಸುಮಾರು ೧೫-೨೦ ನಿಮಿಷಗಳವರೆಗೆ ಹಾಗೆಯೇ ಚರ್ಮದ ಮೇಲಿರಿಸಿದ್ದರೆ ಸುಟ್ಟ ಉರಿ ಬೇಗನೆ ಗುಣವಾಗುತ್ತದೆ.

Nutrient Rich Cucumber Benefits

ಸೌತೇಕಾಯಿ

ಇದಕ್ಕಿರುವ ಜನಪ್ರಿಯತೆಯೇ ಇದರ ತಂಪಾದ ಗುಣಕ್ಕೆ ಸಾಕ್ಷಿ. ಫೇಸ್‌ಮಾಸ್ಕ್‌ ಮಾಡುವುದರಿಂದ ಹಿಡಿದು, ಕಣ್ಣು ತಂಪಾಗಿಸಲು, ಕಡೆಗೆ ಹೊಟ್ಟೆ ತಂಪಾಗಿಸುವುದಕ್ಕೂ ಇದು ಅಗತ್ಯ. ಸೌತೇಕಾಯಿಯ ತುರಿಯನ್ನು, ರಸದ ಸಮೇತವಾಗಿ ಸ್ವಚ್ಛ ಹತ್ತಿಯ ಬಟ್ಟೆಯಲ್ಲಿ ಕಟ್ಟಿ. ಅದನ್ನು ಸುಟ್ಟಭಾಗಗಳ ಮೇಲೆ ಇರಿಸುತ್ತಾ ಬನ್ನಿ. ಹಾಗಿಲ್ಲದಿದ್ದರೆ, ಈ ತರಕಾರಿಯನ್ನು ಗಾಲಿಯಂತೆ ಕತ್ತರಿಸಿಕೊಂಡು, ಆ ಗಾಲಿಗಳನ್ನು ಚರ್ಮದ ಮೇಲಿರಿಸಿ; ಕೆಲಕಾಲ ಹಾಗೆಯೇ ಬಿಡಿ.

Health Tips about curd

ಮೊಸರು

ಹುಳಿಯಿಲ್ಲದ ಸಿಹಿ ಮೊಸರನ್ನು ಚರ್ಮ ಬಿಸಿಲಿಗೆ ಸುಟ್ಟಲ್ಲಿ ಹಾಕಬಹುದು. ಇದರಲ್ಲಿರುವ ಪ್ರೊಬಯಾಟಿಕ್‌ ಅಂಶಗಳು ಬೇಗ ಗುಣವಾಗುವುದಕ್ಕೆ ನೆರವಾಗುತ್ತವೆ. ಸುಟ್ಟ ಗುಳ್ಳೆಗಳನ್ನೆಲ್ಲ ಕಡಿಮೆ ಮಾಡುವುದಕ್ಕೆ ಇದು ಅನುಕೂಲ. ಆದರೆ ಮೊಸರಿನಲ್ಲಿ ಹುಳಿಯಂಶವಿದ್ದರೆ ಸುಟ್ಟ ಭಾಗದಲ್ಲಿ ಉರಿ ಹೆಚ್ಚುತ್ತದೆ. ಹಾಗಾಗಿ ಹುಳಿಯಿಲ್ಲದ ಸಿಹಿ ಮೊಸರಿನ ಬಳಕೆ ಸೂಕ್ತ.

ಇದನ್ನೂ ಓದಿ: Water For Health: ಯಾವ ಸಮಯದಲ್ಲಿ ನೀರು ಕುಡಿದರೆ ಆರೋಗ್ಯವಾಗಿರಬಹುದು?

Continue Reading

ಬೆಂಗಳೂರು

Heart Attack: ಟಿ.ಎ. ಶರವಣಗೆ ಲಘು ಹೃದಯಾಘಾತ; ಆರೋಗ್ಯದಲ್ಲಿ ಚೇತರಿಕೆ

Heart attack: ಲಘು ಹೃದಯಾಘಾತದಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖನಾಗಿದ್ದೇನೆ. ಹೃದಯದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಅಭಿಮಾನಿಗಳು ಹಾಗೂ ಆತ್ಮೀಯರು ಯಾರೂ ಕೂಡಾ ಆತಂಕಪಡಬೇಕಿಲ್ಲ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಪ್ರಾರ್ಥನೆಯಿಂದ ಮತ್ತು ಭಗವಂತನ ಕೃಪೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಆರೋಗ್ಯವೇ ಭಾಗ್ಯ, ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ” ಎಂದು ಶರವಣ ಹೇಳಿದ್ದಾರೆ.

VISTARANEWS.COM


on

TA Sharavana suffers mild heart attack
Koo

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ (TA Sharavana) ಅವರಿಗೆ ಲಘು ಹೃದಯಾಘಾತ (Heart Attack) ಸಂಭವಿಸಿದೆ. ಬೆಳಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಸ್ಟೆಂಟ್‌ ಅಳವಡಿಕೆ (stent implantation) ಮಾಡಲಾಗಿದ್ದು, ಚೇತರಿಕೆ ಕಂಡಿದ್ದಾರೆ.

ಬೆಳಗ್ಗೆ ಎದೆನೋವು ಕಾಣಿಸಿಕೊಂಡಾಗ ನೇರವಾಗಿ ಜಯದೇವ ಆಸ್ಪತ್ರೆಗೆ ಟಿ.ಎ. ಶರವಣ ಬಂದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರಿಗೆ ಲಘು ಹೃದಯಾಘಾತವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸ್ಟೆಂಟ್‌ ಅಳವಡಿಕೆ ಮಾಡಲಾಗಿದೆ. ಈಗ ಶರವಣ ಅವರ ಆರೋಗ್ಯ ಸ್ಥಿರವಾಗಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಟಿ.ಎ. ಶರವಣ, “ಲಘು ಹೃದಯಾಘಾತದಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖನಾಗಿದ್ದೇನೆ. ಹೃದಯದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಅಭಿಮಾನಿಗಳು ಹಾಗೂ ಆತ್ಮೀಯರು ಯಾರೂ ಕೂಡಾ ಆತಂಕಪಡಬೇಕಿಲ್ಲ. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಪ್ರಾರ್ಥನೆಯಿಂದ ಮತ್ತು ಭಗವಂತನ ಕೃಪೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಆರೋಗ್ಯವೇ ಭಾಗ್ಯ, ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ” ಎಂದು ಶರವಣ ಬರೆದುಕೊಂಡಿದ್ದಾರೆ.

Sweating Sickness: ಏನಿದು, ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಬೆವರುವ ಕಾಯಿಲೆ?

ಬೆವರುವ ಕಾಯಿಲೆ (Sweating Sickness) ಎಂಬ ಹೆಸರಿನಿಂದಲೂ ಕರೆಯಲ್ಪಡುವ ಟ್ಯೂಡರ್‌ ಕಾಯಿಲೆ ಯುವ ಜನರಲ್ಲಿ ಕಾಣಿಸಿಕೊಳ್ಳುವ ಕಾಯಿಲೆ. ಈ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವ ಸಂಭವ ಹೆಚ್ಚು. ಹಾಗಾದರೆ, ಈ ಟ್ಯೂಡರ್‌ ಎಂದರೆ ಏನು ಎಂಬ ಪ್ರಶ್ನೆ ನಿಮಗೀಗ ಬಂದಿರಬಹುದು. ಟ್ಯೂಡರ್‌ ಕಾಯಿಲೆಗೆ ಪ್ರಮುಖ ಕಾರಣ ಗೌಟ್‌ ಎಂಬ ಇನ್ನೊಂದು ಸಮಸ್ಯೆ. ಗೌಟ್‌ ಒಂದು ಬಗೆಯ ಸಂಧಿವಾತದ ಸಮಸ್ಯೆಯೇ ಆದರೂ ಇದು ಬರಲು ಕಾರಣ ಬೇರೆ. ಯೂರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದಾಗ ಹಾಗೂ ಅದು ದೇಹದ ಕೆಲವು ಭಾಗಗಳಲ್ಲಿ ಶೇಖರಣೆಯಾಗಲು ಆರಂಭವಾದಾಗ ಸಂದುಗಳಲ್ಲಿ ನೋವು, ಕೈಕಾಲು ಸೆಳೆತ, ಅತೀವ ನೋವು ಕಾಣಿಸಿಕೊಳ್ಳುತ್ತದೆ. ಗಂಟುಗಳಲ್ಲಿ ಯೂರಿಕ್‌ ಆಸಿಡ್‌ ಶೇಖರಣೆಯಾದಾಗ ಈ ನೋವು ಉಲ್ಬಣಿಸುತ್ತದೆ. ಗಂಟುಗಳು ಊದಿಕೊಳ್ಳುವುದು, ಕೆಂಪಗಾಗುವುದು ಇತ್ಯಾದಿಗಳು ಗೌಟ್‌ನ ಆರಂಭಿಕ ಲಕ್ಷಣಗಳು.

Heart Attack and youth
In Six Months, 80% Of Heart Attack Deaths In 11-25 Age Group In Gujarat

ಹೃದಯ ತೊಂದರೆಗೆ ದಾರಿ

ಈ ಸಮಸ್ಯೆ ಹೃದಯದ ತೊಂದರೆಯನ್ನು ಇನ್ನೂ ಹೆಚ್ಚು ಮಾಡುತ್ತದೆ. ಇದ್ದಕ್ಕಿದ್ದಂತೆ ಹೃದಯಾಘಾತ, ಕಾಲಿನ ಸಂಧಿಗಳಲ್ಲಿ ಅತೀವ ನೋವು, ಸೆಳೆತ, ಊದಿಕೊಂಡ ಪಾದ ಹಾಗೂ ಚರ್ಮ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇದು ಕೈಕಾಲುಗಳಿಗಿಡೀ ಹರಡಿಕೊಂಡು ತಡೆಯಲಾದ ನೋವನ್ನೂ ತರಬಹುದು. ಮೈಕೈ ಬೆವರಿ, ಅತೀವ ಸಂಕಟ ನೀಡುವ ಸಮಸ್ಯೆಯಿದು.

ರಕ್ತ ಸಂಚಾರ ಸಮಸ್ಯೆ

ವೈದ್ಯರುಗಳ ಪ್ರಕಾರ, ಈ ಸಮಸ್ಯೆಗೆ ಒಳಗಾದ ಮಂದಿಗೆ ಕೆಲವೊಮ್ಮೆ ಹೃದಯದ ಕೆಲವು ಭಾಗದ ಮಾಂಸಖಂಡಗಳಿಗೆ ರಕ್ತ ಸರಿಯಾಗಿ ಪೂರೈಕೆಯಾಗದೆ, ಇದ್ದಕ್ಕಿದ್ದ ಹಾಗೆಯೇ ಅತ್ಯಂತ ಅಪಾಯಕಾರಿಯಾದ ಹೃದಯಾಘಾತಕ್ಕೆ ಈಡಾಗುತ್ತಾರೆ. ಈ ರಕ್ತಪೂರಣ ಸಾಮರ್ಥ್ಯ ಕಡಿಮೆಯಾಗಲೂ ಕೂಡಾ ಕಾರಣವಿದೆ. ಹೃದಯದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬ್ಲಾಕ್‌ ಅಥವಾ ತಡೆಗಳಿದ್ದಾಗಲೂ ಹೀಗೆ ಆಗುತ್ತದೆ.

Heart Attack and Paralysis attack

ಪಾರ್ಶ್ವವಾಯು ಸಾಧ್ಯತೆ

ಅಧ್ಯಯನಗಳ ಪ್ರಕಾರ, ಸಾಮಾನ್ಯವಾಗಿ ಗೌಟ್‌ ತೊಂದರೆ ಉಲ್ಬಣಿಸುವ ಸಂದರ್ಭ ಹೃದಯದ ಸಮಸ್ಯೆಗೂ ಸಂಬಂಧವಿರುತ್ತದೆ. ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿಗಳ ಅಪಾಯವನ್ನು ಗೌಟ್‌ ಹೆಚ್ಚು ಮಾಡುತ್ತದೆ. ಹಾಗಾಗಿ ಗೌಟ್‌ ಸಮಸ್ಯೆ ಇರುವ ಮಂದಿ ಹೃದಯದ ಬಗ್ಗೆಯೂ ಎಚ್ಚರದಿಂದಿರಬೇಕು. ಆಗಾಗ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು. ಒಂದು ಅಧ್ಯಯನದ ಪ್ರಕಾರ, ಗೌಟ್‌ ಸಮಸ್ಯೆ ಹೊಂದಿರುವ ಮಂದಿಯ ಪೈಕಿ, 62,000 ಮಂದಿ ಗೌಟ್‌ ಸಮಸ್ಯೆಯನ್ನು ಹೊತ್ತು ತಂದ ಮಂದಿಯಲ್ಲಿ ಶೇ. 70ರಷ್ಟು ಮಂದಿ ಪುರುಷರು. ಅಂದರೆ ಪುರುಷರಲ್ಲಿ ಈ ಸಮಸ್ಯೆ ಹೆಚ್ಚು. ಗೌಟ್‌ ಉಲ್ಬಣವಾದ ಮೂರ್ನಾಲ್ಕು ತಿಂಗಳಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಸಮಸ್ಯೆ ಕಾಡಿದ ಮಂದಿ 10,000ಕ್ಕೂ ಹೆಚ್ಚು. ಹಾಗಾಗಿ ಗೌಟ್‌ ಕಾಯಿಲೆ ಇದೆ ಎಂದು ತಿಳಿದು ಬಂದ ಮೇಲೆ ಸುಮಾರು ಎರಡು ಮೂರು ತಿಂಗಳ ಆರಂಭಿಕ ಹಂತದಲ್ಲಿ ಬಹಳ ಜಾಗರೂಕರಾಗಿರುವುದು ಅತ್ಯಗತ್ಯ ಎಂದು ಈ ವರದಿ ಹೇಳಿದೆ.

heart attack and Diabetes control

ಇದನ್ನೂ ಓದಿ: Lok Sabha Election 2024: ನಿ

ಮ್ಮ ರಾಜಕೀಯಕ್ಕೆ ನನ್ನ, ಮಠದ ಹೆಸರು ಬಳಸಬೇಡಿ: ಒಕ್ಕಲಿಗ ನಾಯಕರಿಗೆ ನಿರ್ಮಲಾನಂದನಾಥ ಶ್ರೀ ಸೂಚನೆ

ಮಧುಮೇಹ, ಹೈಪರ್‌ ಟೆನ್ಶನ್‌ ಸಮಸ್ಯೆ

ಯೂರಿಕ್‌ ಆಸಿಡ್‌ ದೇಹದಲ್ಲಿ ಹೆಚ್ಚಾದಾಗ ಸಹಜವಾಗಿಯೇ, ಮಧುಮೇಹ, ಹೈಪರ್‌ ಟೆನ್ಶನ್‌ನಂತಹ ಸಮಸ್ಯೆಗಳೂ ಬರುವ ಸಂಭವ ಹೆಚ್ಚು. ಇವೂ ಕೂಡಾ, ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಮಧುಮೇಹ, ಹೈಪರ್‌ಟೆನ್ಶನ್‌ಗಳು ಹೃದಯದ ಸಮಸ್ಯೆಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಗೌಟ್‌ ಇದ್ದ ಮಾತ್ರಕ್ಕೆ ಎಲ್ಲರಿಗೂ ಹೀಗೆ ಆಗಿಯೇ ಆಗುತ್ತದೆ ಎಂದು ಅರ್ಥವಲ್ಲ, ಬದಲಾಗಿ ಆಗುವ ಅಪಾಯ ಇತರರಿಗಿಂತ ಹೆಚ್ಚು ಎಂಬುದನ್ನು ಅರ್ಥೈಸಿಕೊಳ್ಳಬೇಕು.

ರಕ್ತದೊತ್ತಡ ನಿರ್ವಹಣೆ

ಹೆಚ್ಚಿನ ಹೃದಯಾಘಾತದ ಪ್ರಕರಣಗಳಲ್ಲಿ ಇದೇ ಸಮಸ್ಯೆಯ ಮೂಲ. ರಕ್ತನಾಳಗಳು ಸಂಕುಚಿತಗೊಂಡರೆ ರಕ್ತದೊತ್ತಡ ಏರುತ್ತದೆ. ಇದಲ್ಲದೆ, ಕೌಟುಂಬಿಕ ಅಥವಾ ಔದ್ಯೋಗಿಕ ಒತ್ತಡಗಳು ಹೆಚ್ಚಾದರೆ, ಪ್ರಯಾಣ ಅಥವಾ ರಜೆಯ ವಿರಾಮವೂ ಆಯಾಸ ಹೆಚ್ಚಿಸಿದರೆ ರಕ್ತದೊತ್ತಡ ನಿಯಂತ್ರಣ ದುಸ್ತರವಾಗುತ್ತದೆ. ಹಾಗಾಗಿ ನಿಯಮಿತವಾಗಿ ರಕ್ತದೊತ್ತಡವನ್ನು ತಪಾಸಣೆ ಮಾಡಿಸಬೇಕು. ಇದರಲ್ಲಿ ಏರಿಳಿತ ಕಂಡುಬಂದಲ್ಲಿ ವೈದ್ಯರೊಂದಿಗೆ ಸಮಾಲೋಚಿಸಬೇಕು. ಇದರಿಂದ ಪ್ರಾಣಾಪಾಯಗಳನ್ನು ತಡೆಯಲು ಸಾಧ್ಯವಿದೆ.

Continue Reading

ವಿದೇಶ

Werewolf Syndrome: ಮೈತುಂಬ ಕೂದಲಿರುವ ಮಗು ಜನನ; ಮಹಿಳೆ ಈ ಮಾಂಸ ತಿಂದಿದ್ದೇ ಕಾರಣ?

ಹಾರ್ಮೋನ್ ತೊಂದರೆಯಿಂದ ಸಾಮಾನ್ಯವಾಗಿ ಮನುಷ್ಯನಲ್ಲಿ ಅಸಹಜ ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಫಿಲಿಪ್ಪೀನ್ಸ್ ನ ( Philippines) ಮನಿಲಾದಲ್ಲಿ (manila) ಜನಿಸಿದ ಮಗು ಜರೆನ್ ಗಮೊಂಗನ್ ಗೆ (Jaren Gamongan) ದೇಹ ಹಾಗೂ ಮುಖದ ತುಂಬಾ ದಟ್ಟ ಕೂದಲು ಬೆಳೆದಿದೆ. ಈಗ ಮಗುವಿಗೆ ಎರಡು ವರ್ಷವಾಗಿದ್ದು, ಇದಕ್ಕೆ ತಾವು ಗರ್ಭಿಣಿಯಾಗಿದ್ದಾಗ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎನ್ನುತ್ತಾರೆ ಮಗುವಿನ ತಾಯಿ ಅಲ್ಮಾ ಗಮೊಂಗನ್.

VISTARANEWS.COM


on

By

werewolf syndrome
Koo

ಫಿಲಿಪ್ಪೀನ್ಸ್: ಮುಖ (face), ಮೈತುಂಬಾ (full body) ಕೂದಲು (hair) ಬೆಳೆದ ಎರಡು ವರ್ಷದ ಮಗು ಕರಡಿಯಂತೆ ಕಾಣುತ್ತಿದೆ. ಇದನ್ನು ನೋಡಿ ಕಣ್ಣೀರು ಹಾಕುತ್ತಿರುವ ತಾಯಿ, ಇದಕ್ಕೆ ತಾನೇ ಕಾರಣ ಎಂದು ತನ್ನನ್ನು ತಾನೇ ದೂಷಿಸಿಕೊಳ್ಳುತ್ತಿದ್ದಾಳೆ. ಗರ್ಭಿಣಿಯಾಗಿದ್ದಾಗ (pragnecy) ಕಡು ಬಯಕೆಯನ್ನು ನಿಯಂತ್ರಿಸಲಾಗದೆ ಕಾಡು ಬೆಕ್ಕಿನ (Cat Meat) ಮಾಂಸ ತಿಂದುದರಿಂದ ತನ್ನ ಮಗುವಿಗೆ ವೇರ್‌ವುಲ್ಫ್ ಸಿಂಡ್ರೋಮ್ (werewolf syndrome) ಉಂಟಾಗಿದೆ ಎನ್ನುತ್ತಿದ್ದಾಳೆ.

ಹಾರ್ಮೋನ್ ತೊಂದರೆಯಿಂದ ಸಾಮಾನ್ಯವಾಗಿ ಮನುಷ್ಯನಲ್ಲಿ ಅಸಹಜ ಕೂದಲು ಬೆಳೆಯುವುದು ಸಾಮಾನ್ಯ. ಆದರೆ ಫಿಲಿಪ್ಪೀನ್ಸ್ ನ ( Philippines) ಮನಿಲಾದಲ್ಲಿ (manila) ಜನಿಸಿದ ಮಗು ಜರೆನ್ ಗಮೊಂಗನ್ ಗೆ (Jaren Gamongan) ದೇಹ ಹಾಗೂ ಮುಖದ ತುಂಬಾ ದಟ್ಟ ಕೂದಲು ಬೆಳೆದಿದೆ. ಈಗ ಮಗುವಿಗೆ ಎರಡು ವರ್ಷವಾಗಿದ್ದು, ಇದಕ್ಕೆ ತಾವು ಗರ್ಭಿಣಿಯಾಗಿದ್ದಾಗ ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎನ್ನುತ್ತಾರೆ ಮಗುವಿನ ತಾಯಿ ಅಲ್ಮಾ ಗಮೊಂಗನ್.


ಅಲ್ಮಾ ಗಮೊಂಗನ್ ಅವರಿಗೆ ಗರ್ಭಿಣಿಯಾಗಿದ್ದಾಗ ಸಾಮಾನ್ಯವಾಗಿ ಪರ್ವತ ಪ್ರದೇಶದಲ್ಲಿ ಕಾಣಸಿಗುವ ಕಾಡು ಬೆಕ್ಕಿನ ಮಾಂಸ ತಿನ್ನಬೇಕು ಎನ್ನುವ ತೀವ್ರ ಬಯಕೆಯಾಗುತ್ತದೆ. ಅದಕ್ಕಾಗಿ ಅವರು ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ ಅದನ್ನು ಪದಾರ್ಥ ಮಾಡಿ ತಿಂದಿದ್ದರು. ಈ ಮೂಲಕ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಈ ಕಾಡು ಬೆಕ್ಕಿನ ಮಾಂಸವನ್ನು ತಿಂದ ಕಾರಣ ತಮ್ಮ ಮಗವಿಗೆ ಶಾಪ ತಟ್ಟಿದೆ. ಹೀಗಾಗಿ ಮಗುವಿನ ಮೈ ತುಂಬಾ ಕೂದಲು ಬೆಳೆದಿದೆ ಎಂದು ಸ್ಥಳೀಯರು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಲ್ಮಾ ಮಗುವಿಗೆ ಹೀಗಾಗಲು ತಾವೇ ಕಾರಣ ಎಂದು ದುಃಖಿಸಿಕೊಂಡಿದ್ದರು.

ಇದನ್ನೂ ಓದಿ: Motherhood Myths: ತಾಯ್ತನದ ವೇಳೆ ಎದುರಾಗುವ ತಪ್ಪು ಕಲ್ಪನೆಗಳಿಗೆ ಇಲ್ಲಿವೆ ಉತ್ತರ

ಏನಾಗಿದೆ ಮಗುವಿಗೆ?

ಜರೆನ್ ಗಮೊಂಗನ್ ನ ತಲೆ ಕೂದಲಿನಂತೆ ಮುಖ, ಕುತ್ತಿಗೆ, ಬೆನ್ನು ಮತ್ತು ತೋಳುಗಳಲ್ಲೂ ಕೂದಲು ಬೆಳೆದಿದೆ. ಇದಕ್ಕಾಗಿ ಅವರು ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಲೇಸರ್ ಚಿಕಿತ್ಸೆ ಮೂಲಕ ಕೂದಲನ್ನು ತೆಗೆಯಲು ಪ್ರಯತ್ನಿಸಬಹುದು ಎಂದು ಹೇಳಿದ್ದಾರೆ.

werewolf syndrome


ಕಾರಣ ಏನು ?

ಮಗುವಿನಲ್ಲಿ ಈ ರೀತಿ ಅಸಹಜ ಕೂದಲು ಬೆಳೆಯಲು ʼವೇರ್‌ವುಲ್ಫ್‌ ಸಿಂಡ್ರೋಮ್ʼ ಎಂಬ ಕಾಯಿಲೆಯೇ ಕಾರಣ. ಇದಕ್ಕೂ ಕಾಡಿನ ಬೆಕ್ಕಿನ ಮಾಂಸಕ್ಕೂ ಯಾವುದೇ ಸಂಬಂಧವಿಲ್ಲ. ಜರೆನ್ ವೇರ್‌ವುಲ್ಫ್‌ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದಲೇ ಆತನ ಮುಖದಲ್ಲಿ ದಟ್ಟವಾದ ಕೂದಲು ಬೆಳೆಯುತ್ತಿದೆ ಎನ್ನುತ್ತಾರೆ ವೈದ್ಯರು.

ವೆರ್ವುಲ್ಫ್ ಸಿಂಡ್ರೋಮ್ ಎಂದರೇನು ?

ಇದು ಅತ್ಯಂತ ಅಪರೂಪದ ಸಿಂಡ್ರೋಮ್. ಮಧ್ಯ ಯುಗದಿಂದ ವಿಶ್ವದಾದ್ಯಂತ ಕೇವಲ 50 ರಿಂದ 100 ಪ್ರಕರಣಗಳಷ್ಟೇ ವರದಿಯಾಗಿದೆ. ಸಾಮಾನ್ಯವಾಗಿ ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ.


ತಾಯಿಗೆ ಆತಂಕ

ಜರೆನ್ ಈಗ ಸಣ್ಣವನು. ಇನ್ನು ಅವನು ಶಾಲೆಗೆ ಹೋಗಬೇಕು. ಅಲ್ಲಿ ಅವನು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಇದರಿಂದ ಆತ ಹಿಂಸೆಗೆ ಒಳಗಬಹುದು ಎಂದು ಅಲ್ಮಾ ಆತಂಕ ವ್ಯಕ್ತಪಡಿಸುತ್ತಾರೆ.
ನನಗಿದ್ದ ಕಡು ಬಯಕೆಯನ್ನು ನಿಯಂತ್ರಿಸಲಾಗದೆ ಅವನು ಹುಟ್ಟಿದಾಗ ತನ್ನನ್ನು ತಾನೇ ದೂಷಿಸಿಕೊಂಡೆ. ತುಂಬಾ ಅಪರಾಧಿ ಭಾವ ಕಾಡಿತ್ತು. ಆದರೆ ಇತ್ತೀಚೆಗಷ್ಟೇ ವೈದ್ಯರು ಇದಕ್ಕೆ ಸ್ಪಷ್ಟ ಕಾರಣ ಕೊಟ್ಟ ಮೇಲೆ ನಿಧಾನವಾಗಿ ದುಃಖದಿಂದ ಹೊರಬರುತ್ತಿದ್ದೇನೆ. ನನ್ನ ತಪ್ಪಿನಿಂದ ಹೀಗಾಗಿಲ್ಲ ಎನ್ನುವ ಕೊಂಚ ನೆಮ್ಮದಿ ಸಿಕ್ಕಿದರೂ ಮಗುವಿನ ಪರಿಸ್ಥಿತಿ ನೋಡುವಾಗ ದುಃಖವಾಗುತ್ತದೆ ಎನ್ನುತ್ತಾರೆ.

ಹೇಗಿದೆ ಮಗು ?

ಮೂವರು ಮಕ್ಕಳ ತಾಯಿಯಾಗಿರುವ ಅಲ್ಮಾ ಅವರ ಮಧ್ಯದ ಮಗು ಜರೆನ್ ಗೆ ಮಾತ್ರ ಈ ಸಮಸ್ಯೆ ಕಾಡಿದೆ. ಆತ ಅಕ್ಕ ಮತ್ತು ಕಿರಿಯ ಸಹೋದರನೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾನೆ. ಜರೆನ್ ಸಂತೋಷ ಮತ್ತು ತಮಾಷೆಯ ಹುಡುಗ.

ಕಾಡುವ ಸಮಸ್ಯೆ ಏನು ?

ಹವಾಮಾನವು ಬಿಸಿಯಾದಾಗ ಜರೆನ್ ಗೆ ತುರಿಕೆ, ದದ್ದುಗಳು ಕಾಣಿಸುತ್ತವೆ. ಈ ಸಂದರ್ಭದಲ್ಲಿ ಆತನಿಗೆ ಸ್ನಾನ ಮಾಡಿಸುವಾಗ ಕೂದಲನ್ನು ಕತ್ತರಿಸಲು ಪ್ರಯತ್ನಿಸಿದ್ದೇವೆ. ಆದರೆ ಅದು ಮತ್ತೆ ಉದ್ದವಾಗಿ ಮತ್ತು ಹೆಚ್ಚು ದಪ್ಪವಾಗಿ ಬೆಳೆಯಲು ಪ್ರಾರಂಭವಾಯಿತು. ಆದ್ದರಿಂದ ನಾವು ಅದನ್ನು ಮಾಡುವುದನ್ನು ನಿಲ್ಲಿಸಿದ್ದೇವೆ ಎನ್ನುತ್ತಾರೆ ತಾಯಿ ಅಲ್ಮಾ.

ವೈದ್ಯರು ಏನು ಹೇಳುತ್ತಾರೆ ?

ಜರೆನ್ ಅವರನ್ನು ಪರೀಕ್ಷಿಸಿರುವ ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್, ಇದು ಆನುವಂಶಿಕ ಕಾಯಿಲೆ ಎಂದು ನಾವು ನಂಬುತ್ತೇವೆ. ಆದರೆ ಇದು ಬಹಳ ಅಪರೂಪ. ಕೇವಲ ಒಂದು ಶತಕೋಟಿ ಜನರಲ್ಲಿ ಒಬ್ಬರಿಗೆ ಮಾತ್ರ ಇದು ಬರುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲದಿದ್ದರೂ ಲೇಸರ್ ಚಿಕಿತ್ಸೆಯಿಂದ ಕೂದಲು ತೆಗೆಯಬಹುದು. ನಾಲ್ಕರಿಂದ ಆರು ವಾರಗಳಲ್ಲಿ ಹತ್ತು ಸೆಷನ್‌ಗಳನ್ನು ಮಾಡಲು ಪ್ರಯತ್ನಿಸುತ್ತೇವೆ ಮತ್ತು ಬಳಿಕ ಗಮನಿಸಲಾಗುತ್ತದೆ. ಪ್ರತಿ ಸೆಷನ್ ಗೆ ಸುಮಾರು 2,500 ಫಿಲಿಪೈನ್ ಪೆಸೊಸ್ ಅಂದರೆ ಭಾರತದ ಕರೆನ್ಸಿ ಪ್ರಕಾರ ಸುಮಾರು 3,700 ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಅಲ್ಮಾ ತಿಳಿಸಿದ್ದಾರೆ.

Continue Reading
Advertisement
Pakistan
ಪ್ರಮುಖ ಸುದ್ದಿ5 mins ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ28 mins ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ30 mins ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ31 mins ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ33 mins ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Iran- israel War
ದೇಶ37 mins ago

Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

Rain News
ಪ್ರಮುಖ ಸುದ್ದಿ46 mins ago

Rain News: ರಾಜ್ಯದ ವಿವಿಧೆಡೆ ಮಳೆ ಆರ್ಭಟ; ಸಿಡಿಲು ಬಡಿದು ಗದಗದಲ್ಲಿ 20, ಶಿವಮೊಗ್ಗದಲ್ಲಿ 18 ಕುರಿ ಸಾವು

SK Jain
ಕರ್ನಾಟಕ1 hour ago

SK Jain: ಅನಾರೋಗ್ಯದಿಂದ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ನಿಧನ

IPL 2024
ಪ್ರಮುಖ ಸುದ್ದಿ1 hour ago

IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

Lok Sabha Election 2024 Will your vote get respect and dignity if you vote for BJP CM Siddaramaiah question
Lok Sabha Election 20242 hours ago

Lok Sabha Election 2024: ಬಿಜೆಪಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ, ಘನತೆ ಬರುತ್ತಾ? ಸಿಎಂ ಪ್ರಶ್ನೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ10 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ18 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌