Food Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ? - Vistara News

ಆರೋಗ್ಯ

Food Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?

ಗರಿಮುರಿಯಾಗುವ ಆಹಾರದ (Food Tips) ರುಚಿ ಬೇರೆ; ಅದಕ್ಕಿಂತ ಸ್ವಲ್ಪ ಹೆಚ್ಚೇ ಬೆಂದು ಕಂದು ಬಣ್ಣಕ್ಕೆ ತಿರುಗಿದ ಆಹಾರಗಳ ರುಚಿ ಬೇರೆ. ಆದರೆ ಹೀಗೆ ಸೀದು ಕೆಂಪಾದ ಆಹಾರವನ್ನು ತಿನ್ನಬಹುದೇ? ಇದು ಆರೋಗ್ಯಕ್ಕೆ ಸುರಕ್ಷಿತವೇ?

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಳ ಹಿಡಿದ ಉಪ್ಪಿಟ್ಟು, ಅವಲಕ್ಕಿ, ಸ್ವಲ್ಪ ಹೆಚ್ಚೇ ಕೆಂಪಾದ ದೋಸೆ, ಚೂರು ಕಪ್ಪಾದ ಚಪಾತಿ, ಕಂಬಳಿ ಹೊದೆದ ಟೋಸ್ಟ್‌- ಇಂಥ ಆಹಾರಗಳನ್ನು (Food Tips) ಇಷ್ಟಪಟ್ಟು ತಿನ್ನುವವರಿಗೆ ಕೊರತೆಯಿಲ್ಲ. ಹಬ್ಬಕ್ಕೆ ಮಾಡಿದ್ದ ಹೋಳಿಗೆ ಕೆಂಪಾದರೆ ಅದನ್ನು ಖುಷಿಯಿಂದ ಮೆಲ್ಲುವವರೂ ಬಹಳ ಮಂದಿ ಇದ್ದಾರೆ. ಹೊಂಬಣ್ಣಕ್ಕೆ ಬಂದು ಗರಿಮುರಿಯಾಗುವ ಆಹಾರದ ರುಚಿ ಬೇರೆ; ಅದಕ್ಕಿಂತ ಸ್ವಲ್ಪ ಹೆಚ್ಚೇ ಬೆಂದು ಕಂದು ಬಣ್ಣಕ್ಕೆ (ಅಂದಾಜು ತಪ್ಪಿದರೆ ಸೀದು ಕರಟಿ ಕಪ್ಪಾಗುವುದೂ ಉಂಟು!) ತಿರುಗಿದ ಆಹಾರಗಳ ರುಚಿ ಬೇರೆ. ಎರಡನೇ ವರ್ಗಕ್ಕೆ ಸೇರಿದ ಅಂದರೆ ಕೆಂಪು ಅಥವಾ ಕಂದು ಬಣ್ಣಕ್ಕೆ ತಿರುಗುವ ಆಹಾರಗಳನ್ನು ಆಸೆಯಿಂದ ತಿನ್ನುವವರ ಸಂಖ್ಯೆ ಕಡಿಮೆಯಲ್ಲ. ಕೆಂಪಾದ ಆಹಾರಕ್ಕಿರುವ ಘಮವೇ ಅಂಥದ್ದು. ಆದರೆ ಹೀಗೆ ಸೀದು ಕೆಂಪಾದ ಆಹಾರವನ್ನು ತಿನ್ನಬಹುದೇ? ಇದು ಆರೋಗ್ಯಕ್ಕೆ ಸುರಕ್ಷಿತವೇ?

Food Tips

ಆಹಾರಕ್ಕೆ ಬಿಸಿ ತಾಗುತ್ತಿದ್ದಂತೆಯೇ ಒಂದಾದಮೇಲೊಂದು ಬದಲಾವಣೆಗಳು ಪ್ರಾರಂಭವಾಗುತ್ತವೆ. ಆ ವಸ್ತುವಿನ ಭೌತಿಕ ರೂಪದಲ್ಲಿ ಮಾತ್ರವಲ್ಲ, ರಾಸಾಯನಿಕ ಸ್ವರೂಪದಲ್ಲೂ ಬದಲಾವಣೆಗಳು ಉಂಟಾಗುತ್ತವೆ. ಹೆಚ್ಚಿನ ಬಾರಿ ಈ ಬದಲಾವಣೆಗಳು ಆಹಾರವನ್ನು ಸೇವನೆಗೆ ಯೋಗ್ಯವನ್ನಾಗಿ ಮಾಡುತ್ತವೆ. ಆದರೆ ಕೆಲವೊಮ್ಮೆ ತಪ್ಪಾಗಿ ಸಂಸ್ಕರಿಸುವುದು ಅಥವಾ ಅಡುಗೆ ಕ್ರಮವನ್ನು ತಪ್ಪಾಗಿ ಪಾಲಿಸುವುದು ಸಮಸ್ಯೆಗಳನ್ನು ತರಬಹುದು. ಸೀದು ಕೆಂಪಾದ ಆಹಾರಗಳನ್ನು ತಿನ್ನುವುದು ಮತ್ತು ಕ್ಯಾನ್ಸರ್‌ ನಡುವಿನ ಸಂಬಂಧವೇನು ಎನ್ನುವ ಬಗ್ಗೆ ಬಹಳಷ್ಟು ಸಂಶೋಧನೆಗಳೂ ನಡೆಯುತ್ತಿವೆ.

ಅತಿ ಹೆಚ್ಚಿನ ಶಾಖಕ್ಕೆ ಆಹಾರವನ್ನು ಒಡ್ಡಿದಾಗ ಅಕ್ರಿಲಮೈಡ್‌ ಎನ್ನುವ ರಾಸಾಯನಿಕ ಬಿಡುಗಡೆಯಾಗುತ್ತದೆ. ಅದರಲ್ಲೂ ಆಲೂಗಡ್ಡೆ, ಕೆಲವು ಸೀರಿಯಲ್‌ಗಳು, ಬ್ರೆಡ್‌, ಕಾಫಿ ಅಂಶವಿರುವ ಆಹಾರ ಮುಂತಾದವುಗಳು ತಳ ಹಿಡಿದು ಕೆಂಪಾದರೆ ಅಕ್ರಿಲಮೈಡ್‌ ನಿಶ್ಚಿತವಾಗಿ ಬಿಡುಗಡೆಯಾಗುತ್ತದೆ. ಹೆಚ್ಚಿನ ಪ್ರಮಾಣದ ಅಕ್ರಿಲಮೈಡ್‌ಗೆ ಒಡ್ಡಿದಾಗ ಕ್ಯಾನ್ಸರ್‌ಗೆ ತುತ್ತಾಗುವುದನ್ನು ಪ್ರಾಣಿಗಳಲ್ಲಿ ಗುರುತಿಸಲಾಗಿದೆ. ಆದರೆ ಮಾನವರಲ್ಲಿ ಸೀದ ಆಹಾರ ಮತ್ತು ಕ್ಯಾನ್ಸರ್‌ ನಡುವಿನ ನೇರ ಸಂಬಂಧದ ಕುರಿತು ನಿರ್ಣಾಯಕವಾಗಿ ಹೇಳಲು ವಿಜ್ಞಾನಿಗಳಿಗಿನ್ನೂ ಸಾಧ್ಯವಾಗಿಲ್ಲ. ಆದರೆ ಅಕ್ರಿಲಮೈಡ್‌ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬ ಬಗ್ಗೆ ಯಾವುದೇ ಅನುಮಾನ ತಜ್ಞರಲ್ಲಿ ಉಳಿದಿಲ್ಲ.

ಇನ್ನಷ್ಟು ಪ್ರವರಗಳು

ಅಕ್ರಿಲಮೈಡ್‌ ಬಿಡುಗಡೆಯಾಗುವುದು ಯಾವೆಲ್ಲಾ ಸಂದರ್ಭಗಳಲ್ಲಿ ಎಂಬುದನ್ನು ತಿಳಿಯುವುದು ಮುಖ್ಯ. ಬೇಕಿಂಗ್‌, ಬಾರ್ಬೆಕ್ಯೂ, ಗ್ರಿಲ್ಲಿಂಗ್‌, ಹುರಿಯುವುದು, ಕರಿಯುವುದು, ಟೋಸ್ಟ್‌ ಮಾಡುವುದು- ಹೀಗೆ ಯಾವುದೇ ರೀತಿಯ ಅಡುಗೆಯಲ್ಲೂ ಆಹಾರ ಸೀದು ಕೆಂಪು ಅಥವಾ ಕಪ್ಪಾಗುವಂತಿಲ್ಲ. ಆದರೆ ಕಡಿಮೆ ಎಣ್ಣೆ ಹಾಕಿ ಮಾಡುವ ಎಲ್ಲಾ ಅಡುಗೆಗಳೂ ಆರೋಗ್ಯಕರ ಎಂಬ ಹಣೆಪಟ್ಟಿಯೊಂದಿಗೇ ಬರುತ್ತವೆ, ಉಳಿದ ಮಾನದಂಡಗಳನ್ನು ಪರಿಗಣಿಸಲು ಮರೆಯುತ್ತವೆ. ತಜ್ಞರ ಪ್ರಕಾರ, ಹೆಚ್ಚಿನ ಪೋಷಕಾಂಶಗಳು ನಷ್ಟವಾಗದಂತೆ, ಕಡಿಮೆ ಎಣ್ಣೆಯಲ್ಲಿ ನಿಭಾಯಿಸಲು ಆಗುವಂತೆ ಮತ್ತು ಸೀದು ಕೆಂಪಾಗದಂತೆ ಮಾಡುವ ಕ್ರಮವೆಂದರೆ- ಹಬೆಯಲ್ಲಿ ಬೇಯಿಸುವುದು. ಎಲ್ಲಕ್ಕಿಂತ ಇದೇ ಆರೋಗ್ಯಕರ ಮತ್ತು ಸುರಕ್ಷಿತ ಕ್ರಮ ಎನ್ನುವುದು ಪರಿಣಿತರ ಅಭಿಮತ ಹೌದಾದರೂ, ಎಲ್ಲವನ್ನೂ ಹಬೆಯಲ್ಲಿ ಬೇಯಿಸಲು ಸಾಧ್ಯವಿಲ್ಲವಲ್ಲ.

ಏನು ಮಾಡಬಹುದು?

ಇದಿಷ್ಟೇ ಅಲ್ಲ, ಕೆಲವೊಮ್ಮೆ ಹೆಚ್ಚಿನ ಶಾಖದಲ್ಲಿ ಹುರಿಯುವುದಕ್ಕೆ ಅಥವಾ ಕರಿಯುವುದಕ್ಕೆ ಕೆಲವು ಎಣ್ಣೆಗಳೂ ಸೂಕ್ತವಾಗಿ ಇರುವುದಿಲ್ಲ. ಅವುಗಳ ತಾಳಿಕೊಳ್ಳುವ ಸಾಮರ್ಥ್ಯವೇ ಕಡಿಮೆ ಇದ್ದು, ಕ್ಷಣ ಮಾತ್ರದಲ್ಲಿ ಕೆಂಪಾಗುತ್ತವೆ. ಇಂಥ ಎಣ್ಣೆಗಳನ್ನು ಬಳಕೆ ಮಾಡುವಾಗಲೂ ಎಚ್ಚರಿಕೆ ಬೇಕು. ಇದರಿಂದಲೂ ಆಹಾರದ ಸೂಕ್ಷ್ಮ ಪೋಷಕಾಂಶಗಳು ನಷ್ಟವಾಗಬಹುದು. ಹಾಗಾಗಿ ಆಯ್ಕೆ ಮಾಡುವ ಅಡುಗೆಯ ವಿಧಾನದ ಜೊತೆಗೆ, ಬಳಸುವ ಎಣ್ಣೆಯೂ ಮುಖ್ಯ ಪಾತ್ರ ವಹಿಸುತ್ತದೆ.

ಸುರಕ್ಷಿತ ಅಡುಗೆಯ ಕೆಲವು ವಿಧಾನಗಳನ್ನು ಈ ರೀತಿಯಲ್ಲೂ ಅನುಸರಿಸಬಹುದು. ಉದಾ, ಹಾಲು ಕಾಯಿಸುವಾಗ ಪದೇಪದೆ ಪಾತ್ರೆಯ ತಳ ಹಿಡಿದು ಕೆಂಪಾಗುತ್ತಿದೆ ಎನಿಸಿದರೆ, ದಪ್ಪ ತಳದ ಪಾತ್ರೆ ಅಥವಾ ಹಾಲಿನ ಕುಕ್ಕರ್‌ ಬಳಸಬಹುದು. ಇದರಿಂದ ಪೋಷಕಾಂಶ ನಷ್ಟವಾಗುವುದನ್ನು ಮತ್ತು ಅನಗತ್ಯ ರಾಸಾಯನಿಕ ಪರಿವರ್ತನೆಗಳನ್ನು ತಡೆಯಬಹುದು.

ಕೆಲವೊಮ್ಮೆ ಬೇಕಿಂಗ್‌ ಮಾಡುವಾಗ ಹೆಚ್ಚಿನ ಶಾಖ ಬಳಸುವ ಅಗತ್ಯವಿರುತ್ತದೆ. ಇಲ್ಲದಿದ್ದರೆ ಒಳಗಿನ ಪದರಗಳು ಸರಿಯಾಗಿ ಬೇಯುವುದಿಲ್ಲ. ಹೀಗಾದಲ್ಲಿ ಆಹಾರದ ಮೇಲ್ಪದರ ಕೆಂಪಾಗಿ, ಕೆಲವೊಮ್ಮೆ ಕಪ್ಪೂ ಆಗುತ್ತದೆ. ಇಂಥ ಸಂದರ್ಭಗಳಲ್ಲಿ ಅರ್ಥ ಸಮಯದ ನಂತರ ಮೇಲಿನ ಪದರಕ್ಕೆ ಹೆಚ್ಚಿನ ಶಾಖ ತಾಗದಂತೆ ಬೇಕಿಂಗ್‌ ಹಾಳೆಯನ್ನೇ ಮುಚ್ಚಬಹುದು. ಅದಿಲ್ಲದಿದ್ದರೆ, ಅವನ್ನಿನ ಕೆಳಗಿನ ಕಾಯಿಲ್‌ಗೆ ಹತ್ತಿರವಾಗಿ ಅಟ್ಟಣಿಗೆಯನ್ನು ಬದಲಾಯಿಸಿಕೊಳ್ಳಬಹುದು. ನಮ್ಮ ಅಡುಗೆಯ ರೀತಿಗೆ ಯಾವುದು ಸರಿ ಎಂಬುದನ್ನು ನಾವೇ ಪ್ರಯೋಗದ ಮೂಲಕ ಅರಿಯುವುದು ಒಳ್ಳೆಯದು.

ಇದನ್ನೂ ಓದಿ: Health Tips: ಗ್ಯಾಸ್‌, ಹೊಟ್ಟೆಯುಬ್ಬರ ಸಮಸ್ಯೆಯ ನಿಯಂತ್ರಣಕ್ಕೆ ಸುಲಭೋಪಾಯಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Kids Sleep: ಪೋಷಕರೇ ಎಚ್ಚರ; ನಿಮ್ಮ ಮಕ್ಕಳ ನಿದ್ರೆ ಕಸಿದುಕೊಳ್ಳುವ ಈ ವಸ್ತುಗಳನ್ನು ಕೊಡಲೇಬೇಡಿ

Kids Sleep ಹಾಸಿಗೆಯ ಮೇಲೆ ಬಿದ್ದುಕೊಂಡಾಗ ಸುಖವಾದ ನಿದ್ರೆ ಆವರಿಸಿದರೆ ಅವರಷ್ಟೂ ಪುಣ್ಯವಂತರು ಇಲ್ಲ ಎನ್ನಬಹುದೇನೋ. ದೊಡ್ಡವರು ಯಾವುದೋ ಒತ್ತಡದ ಕಾರಣದಿಂದ ನಿದ್ರೆ ಮಾಡದೇ ಇರಬಹುದು ಆದರೆ ಈಗಿನ ಮಕ್ಕಳಿಗೆ ಏನಾಗಿದೆ….? ಅವರು ಕೂಡ ಈಗ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

VISTARANEWS.COM


on

Kids Sleep
Koo

ಬೆಂಗಳೂರು: ನಿದ್ರೆ ಯಾರಿಗೆ ಬೇಡ ಹೇಳಿ? ಈಗ ಚಿಕ್ಕಮಕ್ಕಳು ಕೂಡ ರಾತ್ರಿ ಸರಿಯಾಗಿ ನಿದ್ದೆ ಇಲ್ಲದೇ ಯಾವುದೋ ಒತ್ತಡದಲ್ಲಿ ಬಳಲುತ್ತಿರುವವರ ಹಾಗೇ ಇರುತ್ತಾರೆ. ಮಕ್ಕಳ ಬೆಳವಣಿಗೆಗೆ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯವಾದದ್ದು. ನಿದ್ರೆಯಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರುತ್ತದೆ. ಹಾಗಾಗಿ ನಿದ್ರೆ ಎನ್ನವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಉತ್ತಮ ನಿದ್ರೆ ಮಕ್ಕಳ ದೇಹದ ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರವಾದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಹಾಗಾಗಿ ಇದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಈ ಕೆಲವು ಅಂಶಗಳು ನಿಮ್ಮ ಮಕ್ಕಳ ನಿದ್ರೆಯನ್ನು (Kids Sleep) ಕೆಡಿಸುತ್ತದೆಯಂತೆ. ಅವು ಯಾವುವು ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

  • ಮಕ್ಕಳು ಹೆಚ್ಚು ಹೊತ್ತು ಟಿವಿ ನೋಡುವುದು, ಮೊಬೈಲ್ ಬಳಸುವುದು. ಇವು ನಿದ್ರೆಯ ಮಟ್ಟವನ್ನು ಕಡಿಮೆ ಮಾಡುತ್ತದೆಯಂತೆ. ಯಾಕೆಂದರೆ ಟಿವಿ, ಮೊಬೈಲ್ ನಿಂದ ಹೊರಬರುವ ನೀಲಿ ಬೆಳಕು ದೇಹದಲ್ಲಿ ಮೆಲಟೋನಿನ್ ಹಾರ್ಮೋನ್ ನ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಇದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ.
  • ಹಾಗೇ ಪ್ರತಿದಿನ ಮಕ್ಕಳನ್ನು ಒಂದೇ ಸಮಯದಲ್ಲಿ ಮಲಗುವಂತೆ ರೂಢಿ ಮಾಡಬೇಕು. ಇದರಿಂದ ಅವರ ದೇಹ ಆ ಸಮಯಕ್ಕೆ ಸರಿಯಾಗಿ ನಿದ್ರೆಗೆ ಜಾರುವಂತೆ ಮಾಡುತ್ತದೆ. ಹಾಗಾಗಿ ಪೋಷಕರು ಮಕ್ಕಳ ನಿದ್ರೆಯ ದಿನಚರಿಯನ್ನು ಸರಿಯಾಗಿ ರೂಢಿ ಮಾಡಿಸಿ.
  • ಕೆಲವು ಒತ್ತಡದ ಘಟನೆಗಳು ಮಕ್ಕಳ ನಿದ್ರೆಗೆ ಭಂಗವನ್ನುಂಟುಮಾಡುತ್ತದೆ. ಶಾಲೆ, ಸ್ನೇಹಿತರು ಮತ್ತು ಕುಟುಂಬದವರ ಸಮಸ್ಯೆಗಳು ಮಕ್ಕಳಲ್ಲಿ ಆತಂಕವನ್ನುಂಟುಮಾಡುತ್ತದೆ. ಇದರಿಂದ ನಿದ್ರೆಯಲ್ಲಿ ಮಕ್ಕಳು ಬೆಚ್ಚಿ ಬೀಳುತ್ತಾರೆ. ಇದು ಅವರ ನಿದ್ರೆಯನ್ನು ಕೆಡಿಸುತ್ತದೆ.
  • ಮಕ್ಕಳು ಸುಖವಾಗಿ ನಿದ್ರೆ ಮಾಡಲು ಅವರು ಮಲಗುವ ವಾತಾವರಣ ಅನುಕೂಲಕರವಾಗಿರಬೇಕು. ಅವರು ಮಲಗುವಂತಹ ಹಾಸಿಗೆ , ಅತಿಯಾದ ಶಬ್ದ, ರೂಂನ ತಾಪಮಾನ ಮಕ್ಕಳ ನಿದ್ರೆಗೆ ಭಂಗ ತರುತ್ತದೆಯಂತೆ. ಹಾಗಾಗಿ ಮಕ್ಕಳು ಮಲಗುವ ಕೋಣೆ ಆರಾಮದಾಯವಾಗಿರುವಂತೆ ನೋಡಿಕೊಳ್ಳಿ.
  • ಹಾಗೇ ಮಕ್ಕಳು ಮಲಗುವಾಗ ಅತಿಯಾಗಿ ಸಕ್ಕರೆಯುಕ್ತ ತಿಂಡಿಗಳನ್ನು ಅಥವಾ ಪಾನೀಯಗಳನ್ನು ಸೇವಿಸುವುದು ನಿದ್ರೆಗೆ ಅಡ್ಡಿಯನ್ನುಂಟುಮಾಡುತ್ತದೆಯಂತೆ. ಹಾಗಾಗಿ ಇವುಗಳನ್ನು ಕಡಿಮೆ ಮಾಡಿ. ಮಕ್ಕಳು ಮಲಗುವ ಮುನ್ನ ಇವುಗಳನ್ನು ನೀಡುವುದು ತಪ್ಪಿಸಿ.
  • ಮಕ್ಕಳಲ್ಲಿ ಕಂಡುಬರುವಂತಹ ಅಲರ್ಜಿ, ಉಸಿರಾಟದ ಸಮಸ್ಯೆಗಳು, ಮೈಕೈ ನೋವು ಮುಂತಾದ ದೈಹಿಕ ಅಸ್ವಸ್ಥಗಳಿಂದ ಅವರಿಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳ ದೈಹಿಕ ಸಮಸ್ಯೆಗೆ ಸೂಕ್ತವಾದ ಚಿಕಿತ್ಸೆ ನೀಡಿ.
  • ಮಕ್ಕಳಿಗೆ ಅತಿಯಾಗಿ ಓದಲು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸುವುದು ಮಕ್ಕಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಅವರಿಗೆ ನಿದ್ರೆ ಬರುವುದಿಲ್ಲ. ಹಾಗಾಗಿ ಅವರಿಗೆ ಇಷ್ಟವಾದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯ ಮಾಡಿ.
  • ನಿದ್ರೆ ಮಕ್ಕಳ ಆರೋಗ್ಯಕ್ಕೆ ಉತ್ತಮ ನಿಜ. ಅಂದಮಾತ್ರಕ್ಕೆ ಅವರಿಗೆ ಹಗಲಿನಲ್ಲಿ ನಿದ್ರೆ ಮಾಡಿಸಬೇಡಿ. ಇದರಿಂದ ಅವರಿಗೆ ರಾತ್ರಿ ನಿದ್ರೆ ಬರುವುದಿಲ್ಲ.
  • ಸ್ಲೀಪ್ ಅಪ್ನಿಯ, ರೆಸ್ಟ್ ಲೆಸ್ ಲೆಗ್ಸ್ ಸಿಂಡ್ರೋಮ್, ನೈಟ್ ಟೆರರ್ಸ್  ಅಥವಾ ಸ್ಲೀಪ್ ವಾಕಿಂಗ್ ನಂತಹ ನಿದ್ರೆಗೆ ಸಂಬಂಧಪಟ್ಟ ಕಾಯಿಲೆಗಳು ನಿದ್ರೆಗೆ ಭಂಗವನ್ನುಂಟುಮಾಡುತ್ತವೆ. ಹಾಗಾಗಿ ಇವುಗಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರನ್ನು ಭೇಟಿ ಮಾಡಿ.
  • ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರ ನಿದ್ರಾಶೈಲಿಯನ್ನು ಅನುಸರಿಸುತ್ತಾರೆ. ಪೋಷಕರು ಆರೋಗ್ಯಕರ ನಿದ್ರೆಯ ಅಭ್ಯಾಸವನ್ನು ರೂಢಿಸಿಕೊಂಡರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ.

ಇದನ್ನೂ ಓದಿ: Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

ಮಕ್ಕಳು ಸರಿಯಾಗಲಿಲ್ಲ ನಿದ್ರೆ ಮಾಡಲಿಲ್ಲ ಎಂದರೆ ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಬಗ್ಗೆ ಪೋಷಕರು ಸರಿಯಾಗಿ ತಿಳಿದುಕೊಂಡಿರಬೇಕು. ಇದರಿಂದ ಮಕ್ಕಳ ದೈಹಿಕ, ಮಾನಸಿಕ ಆರೊಗ್ಯವನ್ನು ಸುಧಾರಿಸಬಹುದು.

Continue Reading

ಲೈಫ್‌ಸ್ಟೈಲ್

Diabetic Control: ಕಾಡುವ ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ತಂತ್ರ

Diabetic Controle ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಪಾಯಸ, ಹೋಳಿಗೆ, ಲಾಡು ನೀಡುವಾಗ ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿಂದರೆ ಮಧುಮೇಹಿಗಳು ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾದ ವಿಧಾನದಲ್ಲಿ ನಿಯಂತ್ರಿಸಿಕೊಳ್ಳಿ.

VISTARANEWS.COM


on

Diabetic Controle
Koo

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹ ಎಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು. ಹಾಗಾಗಿ ಮಧುಮೇಹ ಸಮಸ್ಯೆ ಇದೆ ಎಂದಾಗ ಹಲವರಿಗೆ ಬೇಸರವಾಗುತ್ತದೆ. ಯಾಕೆಂದರೆ ಇದರಿಂದ ಸಿಹಿ ಪದಾರ್ಥಗಳನ್ನು ತಿನ್ನಲು ಆಗುವುದಿಲ್ಲ. ಯಾವುದೇ ಸಭೆ ಸಮಾರಂಭಗಳಿಗೆ ಹೋದಾಗ ಬಡಿಸುವ ಪಾಯಸ, ಹೋಳಿಗೆ ತಿಂದು ಎಲ್ಲರೂ ಬಾಯಿ ಚಪ್ಪರಿಸಿಕೊಂಡರೆ ಮಧುಮೇಹಿಗಳು ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತಾರೆ. ಈ ಸಮಸ್ಯೆಗಳಿಂದ ಪಾರಾಗಲು ಸುಲಭ ತಂತ್ರವಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Diabetic Controle) ನಿಯಂತ್ರಿಸಿಕೊಳ್ಳಬೇಕು. ಅದಕ್ಕಾಗಿ ಈ ಸಲಹೆಗಳನ್ನು ಪಾಲಿಸಿ.

  • ಆರೋಗ್ಯಕರ ಕೊಬ್ಬಿನ ಆಹಾರ ಸೇವನೆ: ನೀವು ಬೆಳಗ್ಗಿನ ಉಪಹಾರದಲ್ಲಿ ಬಾದಾಮಿ ಮತ್ತು ವಾಲ್ ನಟ್ಸ್ ನಂತಹ ನೆನೆಸಿದ ಬೀಜಗಳನ್ನು ಸೇವಿಸಿ. ಇವುಗಳಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಇನ್ಸುಲಿನ್ ಮಟ್ಟ ಸುಧಾರಿಸುತ್ತದೆ.
  1. ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸೇವನೆ: ನಿಮ್ಮ ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಿ. ಪ್ರೋಟೀನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮತ್ತು ನೀವು ದಿನವಿಡೀ ಉತ್ಸಾಹದಿಂದ ಇರಬಹುದು.
  2. ಆ್ಯಪಲ್ ಸೈಡರ್ ವಿನೆಗರ್ ಸೇವನೆ : ಇದರಲ್ಲಿ ಅಸಿಟಿನ್ ಆಮ್ಲವಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಊಟಕ್ಕೆ ಅರ್ಧ ಗಂಟೆಯ ಮೊದಲು ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.
  3. ಮೆಗ್ನೀಸಿಯಂ ಭರಿತ ಆಹಾರ ಸೇವನೆ: ಆಹಾರದಲ್ಲಿ ಬಾಳೆಹಣ್ಣು, ಬಾದಾಮಿ, ಕೋಕೋ ಮತ್ತು ಹಸಿರು ಸೊಪ್ಪುಗಳನ್ನು ಸೇರಿಸಬೇಕು. ಇವುಗಳಲ್ಲಿ ಮೆಗ್ನೀಸಿಯಂ ಸಮೃದ್ಧವಾಗಿರುತ್ತದೆ. ಇದು ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಹೀರಿಕೊಳ್ಳುವಂತೆ ಉತ್ತೇಜಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ.
  4. ಊಟದ ಬಳಿಕ ವಾಕಿಂಗ್ : ಊಟವಾದ ತಕ್ಷಣ ನಿದ್ರೆ ಮಾಡಬಾರು. ಬದಲಾಗಿ ಊಟವಾದ ನಂತರ 10-15 ನಿಮಿಷ ಕಾಲ ಲಘು ವಾಕಿಂಗ್ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.
  5. ಸರಿಯಾದ ಪ್ರಮಾಣದಲ್ಲಿ ಊಟದ ಸೇವನೆ : ನೀವು ಮಧ್ಯಾಹ್ನದ ವೇಳೆ 12ರಿಂದ 2 ಗಂಟೆಯೊಳಗೆ ನಿಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡಿ. ಯಾಕೆಂದರೆ ಈ ಸಮಯದಲ್ಲಿ ಜೀರ್ಣಕ್ರಿಯೆ ವೇಗವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತೇಜಿಸುತ್ತದೆ.
  6. ದಾಲ್ಚಿನ್ನಿ- ಗ್ರೀನ್ ಟೀ ಸೇವನೆ : ಸಂಜೆಯ ವೇಳೆ ಗ್ರೀನ್ ಟೀಗೆ ದಾಲ್ಚಿನ್ನಿಯನ್ನು ಬೆರೆಸಿ ಕುದಿಸಿ ಕುಡಿಯಿರಿ. ಈ ಮಿಶ್ರಣವು ಜೀರ್ಣಕ್ರೀಯೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
  7. ರಾಗಿ ಸೇವನೆ : ನಿಮ್ಮ ಆಹಾರದಲ್ಲಿ ರಾಗಿ ಸೇರಿಸಿ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.
  8. ಸರಿಯಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ : ನೀವು ಅತಿಯಾಗಿ ಆಹಾರ ಸೇವಿಸುವುದನ್ನು ತಪ್ಪಿಸಿ. ಅದಕ್ಕಾಗಿ ನೀವು ಹೊಟ್ಟೆ 80% ತುಂಬುವವರೆಗೆ ತಿನ್ನಿ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ:Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

Continue Reading

ಲೈಫ್‌ಸ್ಟೈಲ್

Cardiac Arrest: ಮಹಿಳೆಯರೇ ಹುಷಾರು; ನೀವು ಮಾಡುವ ಈ ತಪ್ಪುಗಳೇ ಹೃದಯಾಘಾತಕ್ಕೆಕಾರಣ!

Cardiac Arrest ಹೃದಯದ ಸಮಸ್ಯೆ ಇಂದು ಸಾಕಷ್ಟು ಮಹಿಳೆಯರನ್ನು ಕಾಡುತ್ತಿದೆ. ಮಹಿಳೆಯರು ಗಂಡ, ಮಕ್ಕಳು, ಕೆಲಸ ಎಂದುಕೊಂಡು ತಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸುವುದಿಲ್ಲ. ಮಹಿಳೆಯರನ್ನು ಕಾಡುವ ಈ ಹೃದಯದ ಕಾಯಿಲೆಗೆ ಮುಖ್ಯ ಕಾರಣಗಳು ಇಲ್ಲಿವೆ.

VISTARANEWS.COM


on

Cardiac Arrest
Koo

ಬೆಂಗಳೂರು: ಹೃದಯ ಸ್ತಂಭನ (Cardiac Arrest) ಈ ಹೆಸರು ಕೇಳುತ್ತಲೇ ಹೃದಯವೇ ಬಾಯಿಗೆ ಬಂದ ಹಾಗೇ ಆಗುತ್ತದೆ. ಅಷ್ಟೊಂದು ನಡುಕ ಹುಟ್ಟಿಸುತ್ತದೆ. ಕುಳಿತಲ್ಲಿಯೇ ಹೃದಯ ಸ್ತಂಭನದಿಂದ ಕುಸಿದು ಬಿದ್ದರು, ರಾತ್ರಿ ಮಲಗಿದವರು ಏಳಲೇ ಇಲ್ಲ ಇಂತಹ ಸುದ್ದಿಗಳನ್ನು ದಿನಂಪ್ರತಿ ಕೇಳುತ್ತೇವೆ. ಸಣ್ಣಮಕ್ಕಳು ಕೂಡ ಈಗ ಈ ಕಾಯಿಲೆಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಾಕಷ್ಟು  ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಇನ್ನು ಒತ್ತಡದ ಜೀವನ ಶೈಲಿ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದು ಈ ಹೃದಯಾಸ್ತಂಭನಕ್ಕೆ ಕಾರಣ ಎನ್ನುತ್ತದೆ ಹೊಸ ಸಂಶೋಧನೆ. ಪ್ರಮುಖವಾಗಿ ಮಹಿಳೆಯರ ಜೀವಕ್ಕೆ ಕುತ್ತನ್ನುಂಟು ಮಾಡುವ ಈ ಹೃದಯದ ಕಾಯಿಲೆಗೇ ಮುಖ್ಯ ಕಾರಣಗಳೇನು ಹಾಗೂ ಅದನ್ನು ಹೇಗೆ ತಡೆಗಟ್ಟಬಹುದು ಎಂಬ ವಿವರ ಇಲ್ಲಿದೆ.

  • ಹೃದಯದ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿ ಪ್ಲೇಕ್ ರಚನೆಯಾದಾಗ ರಕ್ತನಾಳಗಳಲ್ಲಿ ತಡೆ ಉಂಟಾಗುತ್ತದೆ. ಇದರಿಂದ ಹೃದಯದ ಸ್ನಾಯುಗಳಿಗೆ ರಕ್ತದ ಹರಿಯುವಿಕೆ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸ್ತಂಭನ ಸಂಭವಿಸುತ್ತದೆ.
  • ಅಧಿಕ ರಕ್ತದೊತ್ತಡದಿಂದ ಈ ಸಮಸ್ಯೆ ಕಾಡುತ್ತದೆ. ಅಧಿಕ ರಕ್ತದೊತ್ತಡವು ಹೃದಯ ಮತ್ತು ರಕ್ತನಾಳಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಹೃದಯ ಸ್ತಂಭನ ಸಮಸ್ಯೆ ಕಾಡುತ್ತದೆ.
  • ಮಧುಮೇಹದಿಂದ ಹೃದಯದ ರಕ್ತನಾಳಗಳು ಹಾನಿಗೊಳಗಾಗುತ್ತದೆ. ಇದರಿಂದ ಹೃದಯ ಸ್ತಂಭನದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಬೇಕು
  • ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ. ಹಾಗಾಗಿ ತರಕಾರಿ, ಹಣ್ಣುಗಳು, ತರಕಾರಿ ಮತ್ತು ಧಾನ್ಯಗಳನ್ನು ಹಾಗೂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಮತ್ತು ಆರೋಗ್ಯಕರವಾದ ತೂಕವನ್ನು ಹೊಂದಿರಬೇಕು.
  • ಧೂಮಪಾನವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದು ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸ್ತಂಭನ ಉಂಟಾಗುತ್ತದೆ. ಹಾಗಾಗಿ ಧೂಮಪಾನವನ್ನು ತ್ಯಜಿಸಿದಷ್ಟು ಒಳ್ಳೆಯದು.
  • ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಹೃದಯ ಅಪಧಮನಿಗಳಲ್ಲಿ ಫ್ಲೇಕ್​ ಸಂಗ್ರಹವಾಗಲು ಕಾರಣವಾಗುತ್ತದೆ. ಇದು ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಆಗಾಗ ಕೊಲೆಸ್ಟ್ರಾಲ್ ಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು.
  • ದೈಹಿಕ ಚಟುವಟಿಕೆಯ ಕೊರತೆಯು ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ನೀವು ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗದಿದ್ದರೆ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿದಿನ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು. ಏರೋಬಿಕ್ ವ್ಯಾಯಾಮ ಅತ್ಯುತ್ತಮ.
  • ದೀರ್ಘಕಾಲದವರೆಗೆ ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಎದುರಿಸುತ್ತಿದ್ದರೆ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಹೃದಯ ಸ್ತಂಭನ ಸಂಭವಿಸುತ್ತದೆ. ಆಗಾಗಿ ಒತ್ತಡವನ್ನು ನಿವಾರಿಸುವಂತಹ ತಂತ್ರಗಳನ್ನು ಅಳವಡಿಸಿಕೊಳ್ಳಿ. ಅಗತ್ಯವಿದ್ದರೆ ಮಾನೋವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

ಇದನ್ನೂ ಓದಿ: Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

  • ಋತುಬಂಧ, ಗರ್ಭಾಧಾರಣೆ, ಮತ್ತು ಹಾರ್ಮೋನ್ ಚಿಕಿತ್ಸೆಗಳಿಗೆ ಸಂಬಂಧಿಸಿದ ಹಾರ್ಮೋನ್ ಬದಲಾವಣೆಗಳು ರಕ್ತನಾಳದ ಕಾರ್ಯ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯ ಸ್ತಂಭನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಹಾರ್ಮೋನ್ ಚಿಕಿತ್ಸೆ ನೀಡುವ ಮುನ್ನ ಆರೋಗ್ಯ ತಜ್ಞರ ಸಲಹೆ ಪಡೆಯಿರಿ.
Continue Reading

ಆರೋಗ್ಯ

Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

ಬೇರೆ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣಿನ ಬಗ್ಗೆ ಕೊಂಚ ತಾತ್ಸಾರ ಇದ್ದರೂ, ಬೇಕಾಬಿಟ್ಟಿ ಇದು ದೊರೆಯುವುದರಿಂದಲೋ ಏನೋ, ಇದು ಮೂಲೆಗುಂಪಾಗುವುದು ಹೆಚ್ಚು. ಆದರೆ, ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ನೀವು ಹಲಸನ್ನು ಕಡೆಗಣಿಸಲಾರಿರಿ. ಈ ಕುರಿತ (Jackfruit Benefits) ಉಪಯುಕ್ತ ಮಾಹಿತಿ ಇಲ್ಲಿದೆ. ಈ ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ಮಿಸ್ ಮಾಡಿಕೊಳ್ಳಬೇಡಿ.

VISTARANEWS.COM


on

Jackfruit benefits
Koo

ಬೇಸಿಗೆ ಬಂತೆಂದರೆ ಮಾವು ಹಲಸುಗಳ ಸಂಭ್ರಮ. ಸೆಖೆಯಲ್ಲಿ ಮೈ ಬೇಯುತ್ತಿದ್ದರೂ, ಹಲಸಿನ ಹಣ್ಣಿನ (Jackfruit) ಬಗೆಬಗೆಯ ಖಾದ್ಯಗಳನ್ನು ಮಾಡಿ ಬಾಯಿ ಚಪ್ಪರಿಸುವ ಸುಖ ಬಹುತೇಕ ಎಲ್ಲರದ್ದು. ಬೇರೆ ಹಣ್ಣುಗಳಿಗೆ ಹೋಲಿಸಿದರೆ, ಹಲಸಿನ ಹಣ್ಣಿನ ಬಗ್ಗೆ ಕೊಂಚ ತಾತ್ಸಾರ ಇದ್ದರೂ, ಬೇಕಾಬಿಟ್ಟಿ ಇದು ದೊರೆಯುವುದರಿಂದಲೋ ಏನೋ, ಇದು ಮೂಲೆಗುಂಪಾಗುವುದು ಹೆಚ್ಚು. ಆದರೆ, ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ನೀವು ಹಲಸನ್ನು ಕಡೆಗಣಿಸಲಾರಿರಿ. ಈ ರುಚಿಯಾದ ಹಣ್ಣನ್ನು ಈ ಬೇಸಿಗೆಯಲ್ಲಿ ನೀವು ಯಾಕೆ ತಿನ್ನಬೇಕು (Jackfruit Benefits) ಎಂಬುದಕ್ಕೆ 10 ಕಾರಣಗಳು ಇಲ್ಲಿವೆ.

Immunity Against Diseases Lemon Water Benefits

ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ

ಕಡಿಮೆ ಕ್ಯಾಲರಿಯ ಈ ಹಣ್ಣು (Jackfruit) ಪೋಷಕಾಂಶಗಳ ವಿಚಾರದಲ್ಲಿಯೂ ಶ್ರೀಮಂತಿಕೆಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸದಾ ಮುಂದಿರುವ ಸೇಬು, ಆಪ್ರಿಕಾಟ್‌, ಅವಕಾಡೋ, ಬಾಳೆಹಣ್ಣು ಮತ್ತಿತರ ಹಣ್ಣುಗಳಿಗೆ ಹೋಲಿಸಿದರೆ ಹಲಸಿನ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿವೆ. ಹಲಸಿನಹಣ್ಣಿನಲ್ಲಿ ವಿಟಮಿನ್‌ ಸಿ ಹಾಗೂ ಆಂಟಿ ಆಕ್ಸಿಡೆಂಟ್‌ಗಳೂ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ದೇಹಕ್ಕೆ ಯಾವುದೇ ಇನ್‌ಫೆಕ್ಷನ್‌ ಅಥವಾ ವೈರಸ್‌ನ ಪ್ರವೇಶವಾದಾಗ ಅವುಗಳ ವಿರುದ್ಧ ಹೋರಾಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಹಲಸಿನ ಹಣ್ಣಿನ ಬೀಜ ಹಾಗೂ ತೊಳೆಯಲ್ಲಿ ಉತ್ತಮ ಮಟ್ಟದಲ್ಲಿ ಕ್ಯಾಲ್ಶಿಯಂ ಹಾಗೂ ಕಬ್ಬಿಣಾಂಶವಿದ್ದು, ವಿಟಮಿನ್‌ ಬಿ1 ಬಿ3, ಬಿ6 ಹಾಘೂ ಫೋಲೇಟ್‌ ಅನ್ನೂ ಹೊಂದಿದೆ.

images of Jackfruit Benefits

ಉತ್ತಮ ಶಕ್ತಿವರ್ಧಕ

100 ಗ್ರಾಂಗಳಷ್ಟು ಹಲಸಿನ ಹಣ್ಣಿನಲ್ಲಿ 94 ಕ್ಯಾಲರಿಗಳಿದ್ದು ಇದು ಸಾಕಷ್ಟು ಕಾರ್ಬೋಹೈಡ್ರೇಟನ್ನು ಹೊಂದಿದೆ. ಹಾಗಾಗಿ, ಹೆಚ್ಚು ಹಸಿವಾದಾಗ, ಬಹುಬೇಗನೆ ಹಸಿವನ್ನು ತಣಿಸಿ ಶಕ್ತಿಯನ್ನು ನೀಡುತ್ತದೆ.ಹಲಸಿನ ಹಣ್ಣಿನಲ್ಲಿರುವ ಸಕ್ಕರೆಯು ದೇಹದಲ್ಲಿ ಸುಲಭವಾಗಿ ಕರಗಬಲ್ಲದ್ದಾಗಿದೆ. ಹಾಗೂ, ಇದು ಆರೋಗ್ಯಕರವೂ ಕೂಡಾ.

Blood Sugar Control Guava Benefits

ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ಹಲಸಿನ ಹಣ್ಣಿನಲ್ಲಿ ಕಡಿಮೆ ಮಟ್ಟದ ಗ್ಲಿಸೆಮಿಕ್ಸ್‌ ಇಂಡೆಕ್ಸ್‌ ಇರುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಬಹುಬೇಗನೆ ಉದ್ದೀಪನೆ ಮಾಡುವುದಿಲ್ಲ. ಹೀಗಾಗಿ.ಸಕ್ಕರೆಯ ಮಟ್ಟ ದಿಢೀರ್‌ ಏರಿಕೆಯಾಗದು. ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿದ ಅನುಭವ ಇದು ನೀಡುವುದರಿಂದ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ರಕ್ತದೊತ್ತಡ ಸಮತೋಲನಗೊಳಿಸುತ್ತದೆ

ಹಲಸಿನಹಣ್ಣಿನಲ್ಲಿ ಪೊಟಾಶಿಯಂ ಸರಿಯಾದ ಪ್ರಮಾಣದಲ್ಲಿ ಇರುವುದರಿಂದ ಇದು ಹೃದಯದ ಆರೋಗ್ಯವನ್ನು ಜತನದಿಂದ ಕಾಪಾಡುತ್ತದೆ.

Close-up human eye, lens, cornea and brown iris.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್‌ ಎ ಯಿಂದ ಹಲಸಿನ ಹಣ್ಣು ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಇದು ಕಣ್ಣನ್ನು ಬ್ಯಾಕ್ಟೀರಿಯಾ ಹಾಗೂ ವೈರಲ್‌ ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತದೆ. ದೃಷ್ಟಿದೋಷವಿರುವ ಮಂದಿಗೆ ಇದು ಒಳ್ಳೆಯದು. ಕಣ್ಣನ್ನು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಿಸಲೂ ಇವು ಸಹಾಯ ಮಾಡುತ್ತವೆ.

ಮುಪ್ಪನ್ನು ತಡೆಯುತ್ತದೆ

ನೀವು ಯೌವನದಿಂದ ಕಂಗೊಳಿಸಬೇಕಿದ್ದರೆ ನಿಮ್ಮ ಚರ್ಮ ಲಕಲಕ ಹೊಳೆಯಬೇಕಿದ್ದರೆ ನೀವು ಖುಷಿಯಿಂದ ಹಲಸಿನಹಣ್ಣು ತಿನ್ನಬಹುದು. ಹಲಸಿನ ಹಣ್ಣು ಚರ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

Promotes Bone Health Fish Benefits

ಎಲುಬನ್ನು ಗಟ್ಟಿಯಾಗಿಸುತ್ತದೆ

ಹಲಸಿನಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶೀಯಂ ಇರುವುದರಿಂದ ಇದು ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸುವಲ್ಲಿ ನೆರವಾಗುತ್ತದೆ.

ಥೈರಾಯ್ಡ್‌ ಸಮಸ್ಯೆಗೆ ಒಳ್ಳೆಯದು

ಹಲಸಿನ ಹಣ್ಣಿನಲ್ಲಿ ತಾಮ್ರವೂ ಇರುವುದರಿಂದ ಇದು ಥೈರಾಯ್ಡ್‌ನಲ್ಲಿ ಹಾರ್ಮೋನಿನ ಉತ್ಪಾದನೆ ಹಾಗೂ ಹೀರುವಿಕೆಗೆ ನೆರವಾಗುತ್ತದೆ. ಆ ಮೂಲಕ ಥೈರಾಯ್ಡ್‌ನ ಆರೋಗ್ಯವನ್ನು ಕಾಪಾಡುತ್ತದೆ.

Reduces Risk of Asthma in Children Fish Benefits

ಅಸ್ತಮಾಕ್ಕೆ ಒಳ್ಳೆಯದು

ಮಾಲಿನ್ಯದಿಂದ ಉಂಟಾಗುವ ಅಸ್ತಮಾದಂತಹ ತೊಂದರೆಗಳಿಗೆ ಹಲಸಿನಹಣ್ಣು ಬಹಳ ಒಳ್ಳೆಯದು. ಹಾಗಾಗಿ ಅಸ್ತಮಾ ಇರುವ ಮಂದಿ ಹಲಸಿನ ಹಣ್ಣು ತಿನ್ನಲು ಭಯಪಡಬೇಕಾಗಿಲ್ಲ.

Viral news

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಹಲಸಿನಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ಫೈಟೋನ್ಯೂಟ್ರಿಯೆಂಟ್‌ಗಳೂ, ಫ್ಲೇವನಾಯ್ಡ್‌ಗಳೂ ಇರುವುದರಿಂದ ದೇಹದಲ್ಲಿರುವ ವಿಷಕಾರಕ, ಕಲ್ಮಶ, ಹಾಗೂ ಫ್ರೀರ್ಯಾಡಿಕಲ್‌ಗಳನ್ನು ಹೊರಕ್ಕೆ ಕಳಿಸುವಲ್ಲಿ ಇದು ನೆರವಾಗುತ್ತದೆ. ಕಲ್ಮಶಗಳೂ, ಫ್ರೀ ರ್ಯಾಡಿಕಲ್ಸ್‌ಗಳೂ ಕೂಡಾ ಕ್ಯಾನ್ಸರ್‌ ಕಾರಕಗಳಾಗಿರುವುದರಿಂದ ಹಲಸಿನ ಹಣ್ಣು ನಮಗೆ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Continue Reading
Advertisement
50 out of syllabus question in CET 2024 exam Re examination or grace marks
ಶಿಕ್ಷಣ9 mins ago

CET 2024 exam: ಸಿಇಟಿಯಲ್ಲಿ 50 ಔಟ್ ಆಫ್ ಸಿಲೆಬಸ್ ಪ್ರಶ್ನೆ; ಮರು ಪರೀಕ್ಷೆ ಅಥವಾ ಗ್ರೇಸ್‌ ಮಾರ್ಕ್ಸ್‌? ಇಂದು ನಿರ್ಧಾರ

MS Dhoni
ಪ್ರಮುಖ ಸುದ್ದಿ14 mins ago

MS Dhoni : ಧೋನಿ ಮುಟ್ಟಿದ್ದೆಲ್ಲ ದಾಖಲೆ, ಲಕ್ನೊ ವಿರುದ್ಧವೂ ಮತ್ತೊಂದು ರೆಕಾರ್ಡ್​​

Neha Murder Case Rachita Ram React
ಕ್ರೈಂ30 mins ago

Neha Murder Case: ನೇಹಾ ಹತ್ಯೆ ಆರೋಪಿಯನ್ನು ಜನರ ಕೈಗೆ ಒಪ್ಪಿಸಿ ಎಂದ ಡಿಂಪಲ್‌ ಕ್ವೀನ್‌!

Rain News
ಮಳೆ34 mins ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

gold beauty
ಚಿನ್ನದ ದರ38 mins ago

Gold Rate Today: ಬಂಗಾರದ ದರ ಇಳಿಮುಖ; ರಾಜ್ಯದ ಬೆಲೆಗಳನ್ನು ಇಲ್ಲಿ ಗಮನಿಸಿ

Pragya Misra
ತಂತ್ರಜ್ಞಾನ48 mins ago

Pragya Misra: ಭಾರತದಲ್ಲಿ ತನ್ನ ಮೊದಲ ಉದ್ಯೋಗಿಯನ್ನು ನೇಮಿಸಿದ ಒಪನ್ ಎಐ

Neha Murder case JDS slams hands for defending love jihad to protect accused
ಕ್ರೈಂ51 mins ago

Neha Murder Case: ನೇಹಾಳನ್ನು ಮದುವೆ ಮಾಡಿಸುವಂತೆ ಆಕೆಯ ಹೆತ್ತವರ ಪ್ರಾಣ ತಿಂದಿದ್ದ ಫಯಾಜ್!‌

Drunken Groom
ದೇಶ51 mins ago

Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

Nysa Devgan Kajol shares 3 new pics
ಸಿನಿಮಾ57 mins ago

Nysa Devgan: ಕಾಜೋಲ್‌ ಮಗಳಿಗೆ ಹುಟ್ಟು ಹಬ್ಬದ ಸಂಭ್ರಮ! ನೈಸಾಗೆ ವಯಸ್ಸೆಷ್ಟು?

IPL 2024
ಕ್ರೀಡೆ1 hour ago

IPL 2024 : ಬಿಸಿಸಿಐ ನಿಯಮ ಉಲ್ಲಂಘನೆ; ಋತುರಾಜ್​, ರಾಹುಲ್​ಗೆ ದಂಡ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ2 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ22 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

ಟ್ರೆಂಡಿಂಗ್‌