Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು? - Vistara News

ಆರೋಗ್ಯ

Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

Ghee For Health: ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು!

VISTARANEWS.COM


on

Ghee benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿದೆ. ತುತ್ತು ಎತ್ತುವುದಕ್ಕೆ ತುಪ್ಪ ಬೇಕು ಎಂದವರೂ ಇದ್ದಾರೆ. ಇಂಥ ಮಾತುಗಳು ತುಪ್ಪ ನಮಗೆಷ್ಟು ಆವಶ್ಯಕ ಎನ್ನುವುದನ್ನು ತೋರಿಸುವಂತಿದೆ. ನಮ್ಮ ಆರೋಗ್ಯದ ಮೇಲೆ ತುಪ್ಪವು ಹಲವು ರೀತಿಯಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಬಲ್ಲದು ಎಂಬುದು ನಿಸ್ಸಂಶಯ. ಹಾಗೆಂದು ತಿನ್ನುವುದಕ್ಕೆಲ್ಲ ತುಪ್ಪ ಸುರಿದುಕೊಳ್ಳಬಹುದೇ? ಅಷ್ಟೊಂದು ಜಿಡ್ಡಿನ ಪದಾರ್ಥವನ್ನು ಒಳ್ಳೆಯದೆಂದು ತಿನ್ನುತ್ತಾ ಹೋದರೆ ಆರೋಗ್ಯದ ಗತಿ ಏನು? ಸಾಲ ಮಾಡಿ ತಿನ್ನುವಷ್ಟು ತುಪ್ಪ ನಮಗೆ ಬೇಕೆ! ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು? ದಿನಕ್ಕೆ ಎಷ್ಟು ತುಪ್ಪ ತಿನ್ನಬಹುದು ಎಂಬುದಕ್ಕೆ ನಿಖರವಾದ ಉತ್ತರವನ್ನು ನೀಡುವ ಮುನ್ನ, ನಮ್ಮ ಉಳಿದ ಜೀವನಶೈಲಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂದರೆ ಜಡ ಜೀವನವನ್ನು ಹೊಂದಿದ ವ್ಯಕ್ತಿಗೆ ಒಬ್ಬ ಅಥ್ಲೀಟ್‌ನಷ್ಟು ತುಪ್ಪ ಬೇಕಾಗುವುದಿಲ್ಲ, ಅಷ್ಟು ತಿನ್ನಬಾರದು. ಹಾಗಾಗಿ ನಮ್ಮ ವಯಸ್ಸು, ಆರೋಗ್ಯ, ತೂಕ ಇತ್ಯಾದಿಗಳ ಮೇಲೆ, ದಿನಕ್ಕೆಷ್ಟು ತುಪ್ಪ ಬೇಕು ಮತ್ತು ಸಾಕು ಎನ್ನುವುದನ್ನು ನಿರ್ಧರಿಸಬಹುದು. ಈಗಾಗಲೇ ಸಾಕಷ್ಟು ಎಣ್ಣೆ ಮತ್ತು ಜಿಡ್ಡಿನಂಶ ನಮ್ಮ ಆಹಾರದಲ್ಲಿದ್ದರೆ, ಅದಕ್ಕೆ ತುಪ್ಪವನ್ನೂ ಹೆಚ್ಚುವರಿಯಾಗಿ ಸೇರಿಸಬೇಕಿಲ್ಲ. ಬದಲಿಗೆ, ಈಗಾಗಲೇ ಇರುವ ಕೆಲವು ಜಿಡ್ಡಿನ ವಸ್ತುಗಳನ್ನು ಕಡಿಮೆ ಮಾಡಿ, ಅದರ ಬದಲಿಗೆ ತುಪ್ಪವನ್ನು (Ghee For Health) ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ghee Nutrients
Improves body metabolism Ghee Health Benefits

ಎಷ್ಟು ಬೇಕು?

ಸಾಮಾನ್ಯ ಅಂದಾಜಿಗೆ ಹೇಳುವುದಾದರೆ, ವಯಸ್ಕರಿಗೆ ದಿನಕ್ಕೆ 2-4 ಚಮಚ ತುಪ್ಪ ದಿನಕ್ಕೆ ಸಾಕಾಗುತ್ತದೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ತುಪ್ಪವನ್ನು ತಿನ್ನುವುದು, ಅದರಲ್ಲೂ ಬೆಚ್ಚಗಿನ ತುಪ್ಪದ ಸೇವನೆ ಒಳ್ಳೆಯದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಆದರೆ ಅವರ ಆರೋಗ್ಯ ಮತ್ತು ಜೀವನಶೈಲಿಯನ್ನು ಗಮನಿಸಿಕೊಳ್ಳಬೇಕು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ತುಪ್ಪ ಅಗತ್ಯವಾಗಿ ಬೇಕು. ಅದೇ ಹೃದ್ರೋಗಿಗಳಿಗಾದರೆ ವೈದ್ಯರಲ್ಲಿ ಮಾತಾಡಿಯೇ ನಿರ್ಧರಿಸಬೇಕು. ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುವುದರಿಂದ ತೊಡಗಿ, ಶಕ್ತಿ ಸಂಚಯಿಸುವ, ಉರಿಯೂತ ಕಡಿಮೆ ಮಾಡುವವರೆಗೆ ಬಹಳಷ್ಟು ರೀತಿಯಲ್ಲಿ ದೇಹಕ್ಕೆ ನೆರವಾಗಬಲ್ಲವು.

It is rich in good fats Ghee Benefits

ಚಯಾಪಚಯ ಚುರುಕು

ತುಪ್ಪದಲ್ಲಿ ಕಿರುಕೊಂಡಿಗಳ ಕೊಬ್ಬಿನಾಮ್ಲ (SCFAs) ಇರುತ್ತದೆ. ಇವು ಸುಲಭವಾಗಿ ದೇಹಕ್ಕೆ ಹೀರಲ್ಪಡುತ್ತವೆ. ಇದರಿಂದ ಉತ್ಪತ್ತಿಯಾಗುವ ಶಾಖವು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ನೆರವಾಗುತ್ತದೆ. ಅಂದರೆ, ಇದರಿಂದ ಚುರುಕಾಗುವ ಚಯಾಪಚಯ ಕ್ರಿಯೆಯಿಂದ ಹೆಚ್ಚಿನ ಕ್ಯಾಲರಿಗಳು ಕರಗಿ, ಕೊಬ್ಬೂ ಕಡಿಮೆಯಾಗುತ್ತದೆ

Improved Digestion Tea Benefits

ಜೀರ್ಣಾಂಗಗಳ ಆರೋಗ್ಯ ಸುಧಾರಣೆ

ಖಾಲಿ ಹೊಟ್ಟೆಗೆ ಬೀಳುವ ಬೆಚ್ಚನೆಯ ತುಪ್ಪವು ಜೀರ್ಣಾಂಗಗಳ ಆರೋಗ್ಯ ವೃದ್ಧಿಸುತ್ತದೆ. ಇದರಲ್ಲಿರುವ ಬಟೈರೇಟ್‌ ಅಂಶವು ಜಠರ ಮತ್ತು ಕರುಳಿನ ಒಳಪದರಗಳಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಜೀರ್ಣ, ಆಸಿಡಿಟಿಯಂಥವು ಕಡಿಮೆಯಾಗುತ್ತವೆ. ಹೊಟ್ಟೆಯ ಆರೋಗ್ಯಕ್ಕೆ ಅಗತ್ಯವಾದ ಉತ್ತಮ ಬ್ಯಾಕ್ಟೀರಿಯಗಳ ಸಂಖೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸಿ, ಆಹಾರದಲ್ಲಿನ ಪೋಷಕಾಂಶಗಳು ಚೆನ್ನಾಗಿ ಹೀರಲ್ಪಡುತ್ತವೆ.

Improves body metabolism Ghee Health Benefits

ತಿನ್ನುವ ಬಯಕೆಗೆ ಕಡಿವಾಣ

ಬೆಳಗಿನ ಸಮಯದಲ್ಲಿ ದೇಹಕ್ಕೆ ದೊರೆಯುವ ಆರೋಗ್ಯಕರ ಕೊಬ್ಬಿನಿಂದ ದಿನವಿಡೀ ಹೆಚ್ಚು ತಿನ್ನಬೇಕೆಂಬ ಬಯಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಇದರಿಂದ ಕಳ್ಳ ಹಸಿವಿಗೆ ಏನಾದರೂ ಬಾಯಾಡಬೇಕೆಂಬ ಚಟ ನಿಂತು, ದೇಹಕ್ಕೆ ಆರೋಗ್ಯಕರ ತೂಕವನ್ನು ಕಲ್ಪಿಸುವುದಕ್ಕೆ ಸಹಾಯವಾಗುತ್ತದೆ. ಹೊಟ್ಟೆ ತುಂಬಿದ ಭಾವವನ್ನು ಪ್ರಚೋದಿಸುವ ಚೋದಕಗಳ ಬಿಡುಗಡೆಗೂ ಇದು ನೆರವಾಗುತ್ತದೆ. ತಿಳಿದು ತಿಂದರೆ ತುಪ್ಪದಿಂದ ತೂಕವನ್ನು ಇಳಿಸಲೂ ಬಹುದು.

ಶಕ್ತಿ ಸಂಚಯನ

ಇದರ ಕೊಬ್ಬಿನ ಸ್ವರೂಪವು ಹೇಗಿದೆಯೆಂದರೆ ದೀರ್ಘಕಾಲದವರೆಗೆ ದೇಹಕ್ಕೆ ಸುಸ್ಥಿರವಾಗಿ ಶಕ್ತಿಯನ್ನು ನೀಡುತ್ತಲೇ ಇರುವಂತೆ ರೂಪಿತವಾಗಿದೆ. ತ್ವರಿತವಾಗಿ ಶಕ್ತಿಯ ಸ್ವರೂಪ ಪಡೆದು, ದೇಹಕ್ಕೆ ಬೇಕಾದ ಇಂಧನವನ್ನು ಒದಗಿಸುವುದು ತುಪ್ಪದಲ್ಲಿರುವ ಕೊಬ್ಬಿಗೆ ಸಾಧ್ಯ.

ಇದನ್ನೂ ಓದಿ: Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

ಹೃದಯದ ಆರೋಗ್ಯಕ್ಕೂ ಪೂರಕ

ತುಪ್ಪದಲ್ಲಿ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕ ಸತ್ವಗಳಿವೆ. ಇದು ಶರೀರದಲ್ಲಿ ಆಗಬಹುದಾದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡಿ, ಮಾರಕ ರೋಗಗಳನ್ನು ದೂರ ಇರಿಸುತ್ತವೆ. ಉತ್ತಮ ಕೊಬ್ಬನ್ನು ದೇಹಕ್ಕೆ ನೀಡುತ್ತಾ ಕೊಲೆಸ್ಟ್ರಾಲ್‌ನಂಥ ಬೇಡದ ಕೊಬ್ಬನ್ನು ಕಡಿಮೆ ಮಾಡಬಹುದು. ಆದರೆ ನೆನಪಿಡಿ, ಅತಿಯಾದರೆ ಅಮೃತವೂ ವಿಷ! ತುಪ್ಪ ಒಳ್ಳೆಯದು ಎಂಬ ಕಾರಣಕ್ಕಾಗಿ ಹೆಚ್ಚು ತಿನ್ನುವಂತಿಲ್ಲ. ಅದೇ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತವಾಗಿಯೇ ಬೆಳಗಿನ ತಿಂಡಿಯ ಜೊತೆಗೆ ಸೇರಿಸಿಕೊಂಡರೆ, ಹಲವು ರೀತಿಯ ಲಾಭಗಳನ್ನು ಪಡೆಯಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Sweet Potato Benefits: ಸವಿದವರೇ ಬಲ್ಲರು ಗೆಣಸಿನ ಸೊಗಸು! ಹಲವು ಆರೋಗ್ಯ ಸಮಸ್ಯೆಗೂ ಪರಿಹಾರ

Sweet Potato Benefits: ಗೆಣಸನ್ನು ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ಗಡ್ಡೆಯನ್ನು ತಿನ್ನುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ.

VISTARANEWS.COM


on

Blood Pressure
Koo

ಗಡ್ಡೆ-ಗೆಣಸುಗಳು ಪೂರ್ವಿಕರ ಕಾಲದಿಂದಲೇ ನಮ್ಮ ಆಹಾರವಾಗಿ ಬಳಕೆಯಾಗುತ್ತಿದೆ. ಅದರಲ್ಲೂ ಮರಗೆಣಸಿಗಿಂತಲೂ ಸಿಹಿ ಗೆಣಸು ಎಲ್ಲರಿಗೂ ಇಷ್ಟವಾಗುವಂಥ ಗಡ್ಡೆ. ತಿಳಿಗುಲಾಬಿ, ಕಂದು, ತಿಳಿ ಹಳದಿ, ನೇರಳೆ ಮುಂತಾಗಿ ಒಂದಕ್ಕಿಂತ ಹೆಚ್ಚು ಬಣ್ಣಗಳಲ್ಲಿರುವ ಈ ಗೆಣಸಿನ ಎಲ್ಲ ಬಣ್ಣಗಳೂ ಆರೋಗ್ಯಕ್ಕೆ ಒಳ್ಳೆಯವೆ. ಇದರ ಬಣ್ಣ ಗಾಢವಾದಷ್ಟೂ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚು ಎಂದು ತಿಳಿಯಬಹುದು. ಸುಮ್ಮನೆ ಬೇಯಿಸಿ ತಿನ್ನುವುದರಿಂದ ಹಿಡಿದು, ಪಲ್ಯ, ಭಾಜಿಗಳ ರೀತಿಯಲ್ಲಿ ಅಡುಗೆಗೆ ಬಳಸಬಹುದು, ಸಲಾಡ್‌ಗೆ, ಚಾಟ್‌ಗಳಿಗೆ ಹಾಕಿ ರುಚಿ ಹೆಚ್ಚಿಸಬಹುದು. ಪೋಡಿ, ಬಜ್ಜಿಗಳ ರೀತಿಯಲ್ಲಿ ಸವಿಯುವವರಿಗೂ ಬರವಿಲ್ಲ. ಇಂಥ ಗಡ್ಡೆಯನ್ನು ತಿನ್ನುವುದರಿಂದ (Sweet Potato Benefits) ಆಗುವ ಲಾಭಗಳೇನು?

Sweet potatoes have the ability to control diabetes and prevent cancer

ನಾರಿನಂಶ ಹೇರಳ

ಗೆಣಸಿನಲ್ಲಿ ನಾರಿನ ಅಂಶ ವಿಫುಲವಾಗಿದೆ. ಹೆಚ್ಚು ನಾರು ಇರುವಂಥ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಲ್ಲವು. ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತದೆ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ.

ಗ್ಲೈಸೆಮಿಕ್‌ ಸೂಚಿ

ಇದರ ರುಚಿ ಸಿಹಿಯೇ ಆದರೂ ಗ್ಲೈಸೆಮಿಕ್‌ ಸೂಚಿ ತೀರಾ ಹೆಚ್ಚೇನಿಲ್ಲ. ಹಾಗಾಗಿ ಜಿಐ ಹೆಚ್ಚಿರುವ ಆಹಾರಗಳಿಗೆ ಹೋಲಿಸಿದಲ್ಲಿ, ರಕ್ತದಲ್ಲಿ ಸಕ್ಕರೆಯಂಶ ದಿಢೀರ್‌ ಏರಿಕೆಯಾಗದಂತೆ ಇದು ನಿರ್ವಹಿಸುತ್ತದೆ. ಇದರಿಂದ ರಕ್ತದಲ್ಲಿ ಇನ್‌ಸುಲಿನ್‌ ಮಟ್ಟವನ್ನು ನಿಯಂತ್ರಿಸಲು ಅನುಕೂಲವಾಗುತ್ತದೆ. ಇದರಿಂದ ತಿನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಈ ಮೂಲಕ ಚಯಾಪಚಯ ಕೆಡದಂತೆ ಕಾಪಾಡಿಕೊಂಡು, ಹೊಟ್ಟೆಯಲ್ಲಿ ಕೊಬ್ಬು ಶೇಖರವಾಗುವುದನ್ನು ತಡೆಯಬಹುದು.

Sweet Potatoes Vegetarian foods for stamina

ಸತ್ವಯುತ

ಇದರಲ್ಲಿ ಪಿಷ್ಟ ಮತ್ತು ನಾರಿನ ಹೊರತಾಗಿ ವಿಟಮಿನ್‌ ಎ, ಸಿ ಮತ್ತು ಬಿ೬ ವಿಫುಲವಾಗಿವೆ. ಜೊತೆಗೆ ಪೊಟಾಶಿಯಂ, ಮ್ಯಾಂಗನೀಸ್‌ನಂಥ ಖನಿಜಗಳು ತುಂಬಿವೆ. ಇವುಗಳೊಂದಿಗೆ ಉತ್ಕರ್ಷಣ ನಿರೋಧಕಗಳು ಸೇರಿಕೊಂಡು ಸತ್ವಯುತ ಆಹಾರವೊಂದು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಚರ್ಮದ ಹೊಳಪಿಗೆ, ದೃಷ್ಟಿಯ ಪೋಷಣೆಗೆ ಅಗತ್ಯವಾದ ಸತ್ವಗಳು ಇದರಲ್ಲಿವೆ. ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್‌ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆಯುತ್ತದೆ. ಕಡಿಮೆ ಕ್ಯಾಲರಿಯಲ್ಲಿ, ರುಚಿಕಟ್ಟಾದ ಸತ್ವಯುತ ಆಹಾರ ದೊರೆತರೆ ಬೇಡ ಎನ್ನುವವರಾರು?

Weight Loss Tips kannada
Weight Loss Tips kannada

ತೂಕ ಇಳಿಕೆ

ಇದರಲ್ಲಿರುವ ಪೊಟಾಶಿಯಂ ಅಂಶವು ಡೈಯುರೇಟಿಕ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ, ಹೊಟ್ಟೆ ಉಬ್ಬರಿಸದಂತೆಯೂ ಪರಿಣಾಮ ಬೀರುತ್ತದೆ. ತೂಕ ಇಳಿಸುವವರಿಗೆ ಇದು ಇಂಥ ಹಲವು ವಿಷಯಗಳಲ್ಲಿ ಉಪಯುಕ್ತ ಎನಿಸಬಹುದು. ಅಂದರೆ, ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನು ಬೇಡಿಕೆಯನ್ನು ಮಟ್ಟ ಹಾಕಬಹುದು ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಸಪೂರ ಆದಂತೆ ಕಾಣಿಸುತ್ತದೆ.

ಇದನ್ನೂ ಓದಿ: Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ?

ಎಲ್ಲದಕ್ಕೂ ಹೊಂದುತ್ತದೆ

ಯಾವುದೇ ರೀತಿಯ ಅಡುಗೆಗಳಿಗೆ ಇದನ್ನು ಕಷ್ಟವಿಲ್ಲದೆ ಹೊಂದಿಕೊಳ್ಳಬಹುದು. ಚಪಾತಿಯೊಂದಿಗೆ ಗೆಣಸಿನ ಭಾಜಿ ಮಾಡಿದರೆ ರುಚಿ ಹೆಚ್ಚು. ಊಟಕ್ಕೆ ಜೊತೆಯಾಗಿ ಪಲ್ಯ ಮಾಡಿದರೆ ಒಲ್ಲೆ ಎನ್ನುವವರಿಲ್ಲ. ಬರೀ ಸಲಾಡ್‌ ಮಾಡುವ ಯೋಚನೆಯಿದ್ದರೆ ಗೆಣಸನ್ನು ಬೇಯಿಸಿ ಸೇರಿಸಿಕೊಳ್ಳಬಹುದು. ಸೂಪ್‌ ಜೊತೆಗೆ ಬೇಯಿಸಿದ ಗೆಣಸು ಬೇಗ ಹೊಟ್ಟೆ ತುಂಬಿಸಿ, ನಿಮ್ಮ ಡಯೆಟ್‌ ಯೋಜನೆಯನ್ನು ಕಾಪಾಡುತ್ತದೆ. ಪಾಸ್ತಾ ಮಾಡುವ ಯೋಚನೆಯಿದ್ದರೆ, ಯಾವುದಾದರೂ ಒಂದಿಷ್ಟು ನಟ್‌ಗಳನ್ನು ನೆನೆಸಿ, ಬೇಯಿಸಿದ ಗೆಣಸಿನೊಂಸಿಗೆ ಪೇಸ್ಟ್‌ ಮಾಡಿ ಸಾಸ್‌ ಮಾಡಿದರೆ ಮಕ್ಕಳು ಚಪ್ಪರಿಸಿಕೊಂಡು ತಿನ್ನುತ್ತವೆ. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಸುಮ್ಮನೆ ಕೆಂಡದಲ್ಲಿ ಸುಟ್ಟು ಅಥವಾ ಬೇಯಿಸಿಕೊಂಡು ಸಿಪ್ಪೆ ಸಮೇತ ತಿಂದರೆ, ಬೇರೆ ಸ್ವರ್ಗವೇ ಬೇಡ!

Continue Reading

ಆರೋಗ್ಯ

Fatty Liver: ಏನೆಲ್ಲ ಕಾರಣಗಳಿಗೆ ಫ್ಯಾಟಿ ಲಿವರ್‌ ಬರುತ್ತದೆ?

Fatty Liver: ಜೀವನಶೈಲಿಯ ದೋಷದಿಂದ ಬರುವಂಥ ಕಾಯಿಲೆಗಳ ಪೈಕಿ ಯಕೃತ್‌ನಲ್ಲಿ ಕೊಬ್ಬಿ ತುಂಬಿಕೊಳ್ಳುವುದೂ ಒಂದು. ಸಂಸ್ಕರಿತ ಆಹಾರಗಳು, ಅತಿಯಾದ ಸಕ್ಕರೆ ಮತ್ತು ಉಪ್ಪಿನ ಸೇವನೆ, ಮದ್ಯಪಾನ- ಇಂಥ ಹಲವು ಕಾರಣಗಳು ಈ ತೊಂದರೆಯ ಹಿಂದಿವೆ. ಇನ್ನೂ ಏನೆಲ್ಲಾ ಕಾರಣಗಳಿಗೆ ಫ್ಯಾಲಿ ಲಿವರ್‌ ಕಾಡಬಹುದು? ಇಲ್ಲಿದೆ ಮಾಹಿತಿ.

VISTARANEWS.COM


on

Fatty Liver What Causes
Koo

ಬೆಂಗಳೂರು: ಯಕೃತ್‌ನ ಕೊಬ್ಬು ಅಥವಾ ಫ್ಯಾಟಿ ಲಿವರ್‌ ಸಮಸ್ಯೆ (Fatty Liver) ವಿಶ್ವದ ಶೇ. 25ರಷ್ಟು ಜನರನ್ನೀಗ ಬಾಧಿಸುತ್ತಿದೆ. ಭಾರತವಂತೂ ವಿಶ್ವದ ಫ್ಯಾಟಿ ಲಿವರ್‌ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಬೊಜ್ಜು, ಮಧುಮೇಹ, ಕೊಲೆಸ್ಟ್ರಾಲ್‌ನಂಥ ಜೀವನಶೈಲಿಯ ದೋಷದಿಂದ ಬರುವ ಸಮಸ್ಯೆಗಳು ಯಕೃತ್‌ನ ಕೊಬ್ಬಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಅದಲ್ಲದೆ, ಪ್ರತಿಯೊಬ್ಬರದ್ದೂ ಪ್ರತ್ಯೇಕವಾದ ಜೀವನಶೈಲಿಗಳು ಇಂಥ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು. ಯಾವ ಕೆಟ್ಟ ಅಭ್ಯಾಸಗಳು ಇಂಥ ತೊಂದರೆಗಳನ್ನು ಮುಂದಿಡುತ್ತವೆ? ಅವುಗಳನ್ನು ಹೇಗೆ ದೂರ ಮಾಡಬಹುದು?

ಅತಿಯಾಗಿ ತಿನ್ನುವುದು

ನಮ್ಮ ಶರೀರಕ್ಕೆ ಬೇಕಾದ ಕ್ಯಾಲರಿಗಿಂತ ಅಧಿಕ ಪ್ರಮಾಣದಲ್ಲಿ ತಿನ್ನುವ ಅಭ್ಯಾಸವಿದ್ದರೆ, ಈ ವಿಷಯ ಗಮನದಲ್ಲಿರಬೇಕು. ಹೆಚ್ಚುವರಿ ಕ್ಯಾಲರಿಗಳೆಲ್ಲ ಶರೀರದಲ್ಲಿ ಶೇಖರಣೆಯಾಗುವುದು ಕೊಬ್ಬಿನ ರೂಪದಲ್ಲಿ. ಅದರಲ್ಲೂ ಜಿಡ್ಡು ಮತ್ತು ಪಿಷ್ಟದ ವಸ್ತುಗಳನ್ನು ಹೆಚ್ಚಾಗಿ ಸೇವಿಸುವುದು ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಬೇಕಾದಷ್ಟೇ ತಿನ್ನುವುದು ಸುಲಭದ ಉಪಾಯ. ಅದರಲ್ಲೂ ಲೀನ್‌ ಪ್ರೊಟೀನ್‌, ಇಡೀ ಧಾನ್ಯಗಳು ಮತ್ತು ನಾರು ಭರಿತ ಆಹಾರಗಳ ಸೇವನೆಯನ್ನು ಅಗತ್ಯವಾಗಿ ಮಾಡಿ.

ಜಡಜೀವನ

ದೈಹಿಕ ಚಟುವಟಿಕೆ ಕಡಿಮೆಯಾದಷ್ಟು ಸ್ವಾಸ್ಥ್ಯವೂ ಕಡಿಮೆಯಾಗುತ್ತದೆ. ದೇಹದ ಕೊಬ್ಬು ಕರಗುವಂತೆ, ಬಕೆಟ್‌ಗಟ್ಟಲೆ ಬೆವರು ಹರಿಸಿ ವ್ಯಾಯಾಮ ಮಾಡಬೇಕೆಂದಲ್ಲ. ಬದಲಿಗೆ, ವಾಋಕ್ಕೆ 150 ನಿಮಿಷಗಳ ಅಥವಾ ದಿನಕ್ಕೆ 30 ನಿಮಿಷಗಳ ಮಧ್ಯಮ ಪ್ರಮಾಣದ ವ್ಯಾಯಾಮ ಸಾಕಾಗುತ್ತದೆ. ಚುರುಕು ನಡಿಗೆ, ಸೈಕಲ್‌ ಹೊಡೆಯುವುದು, ಈಜು, ಯೋಗ, ಏರೋಬಿಕ್ಸ್‌, ಜುಂಬಾ, ಪಿಲಾಟೆ ಮುಂತಾದ ಯಾವುದೇ ನಿಮ್ಮಿಷ್ಟದ ವ್ಯಾಯಾಮವನ್ನು ಮಾಡಬಹುದು. ದೀರ್ಘ ಕಾಲ ಒಂದೇ ಕಡೆ ಕೂತು ಕೆಲಸ ಮಾಡದೆ ಆಗಾಗ ಎದ್ದು ಓಡಾಡಿ. ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ.

ಆಲ್ಕೋಹಾಲ್‌

ಇದಂತೂ ಯಕೃತ್‌ನಲ್ಲಿ ಕೊಬ್ಬು ಜಮೆಯಾಗುವುದಕ್ಕೆ ಇರುವಂಥ ಅತಿದೊಡ್ಡ ಕಾರಣಗಳಲ್ಲಿ ಒಂದು. ಮೊದಲಿಗೆ ಅಂಥ ವ್ಯತ್ಯಾಸ ಕಾಣದ್ದರೂ, ದೀರ್ಘ ಕಾಲ ಮದ್ಯಪಾನದ ಚಟ ಮುಂದುವರಿಯುವುದು ಇಡೀ ದೇಹವನ್ನು ಒಳಗಿಂದೊಳಗೆ ಶಿಥಿಲಗೊಳಿಸಬಲ್ಲದು. ಹಾಗಾಗಿ ಹವ್ಯಾಸ, ಮಜಾ, ಸ್ನೇಹಿತರ ಜೊತೆಗೆ, ಎಂದೋ ಪಾರ್ಟಿಗೆ… ಇಂಥ ಕುಂಟು ನೆಪಗಳನ್ನು ಹೇಳಿಕೊಂಡು ಗುಂಡು ಹಾಕುವ ಬದಲು, ಮದ್ಯಪಾನವನ್ನು ಸಂಪೂರ್ಣ ತ್ಯಜಿಸಲು ದೃಢ ಮನಸ್ಸು ಮಾಡಿ.

ಅಧಿಕ ಸಕ್ಕರೆ

ಸಕ್ಕರೆಯಂಶ ಹೆಚ್ಚಿರುವ ನೈಸರ್ಗಿಕ ಆಹಾರಗಳು ಅಂಥ ಅಪಾಯವನ್ನು ತರುವುದಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಮಿತಿಮೀರಿ ಹಣ್ಣುಗಳ ಸೇವನೆ ಮಾಡುವ ಅಭ್ಯಾಸದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆದರೆ ಕೃತಕ ಸಿಹಿಯನ್ನು ಸೇರಿಸಿದ ಆಹಾರಗಳು ಮಾತ್ರ ಯಾವತ್ತಿಗೂ ಕಂಟಕವನ್ನು ತರಬಲ್ಲವು. ಸೋಡಾ, ಫ್ರೂಟ್‌ ಜ್ಯೂಸ್‌, ಕ್ಯಾಂಡಿಗಳು, ಕೇಕ್‌, ಐಸ್‌ಕ್ರೀಮ್‌, ಜಿಲೇಬಿ, ಹಲ್ವಾಗಳಿಂದ ಹಿಡಿದು ಯಾವುದೇ ಸಿಹಿ ತಿನಿಸುಗಳು ಅತಿಯಾದರೆ ಯಕೃತ್‌ಗೆ ತೊಂದರೆ. ದಿನಕ್ಕೆ 4 ಚಮಚಕ್ಕಿಂತ ಹೆಚ್ಚಿನ ಸಕ್ಕರೆಯಂಶ ದೇಹಕ್ಕೆ ಹೋಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: Actor Suriya: ಸೂರ್ಯಗೆ ಸೆಟ್‌ನಲ್ಲಿ ಗಾಯ: ಆರೋಗ್ಯ ಸ್ಥಿತಿ ಹೇಗಿದೆ?

ನಿದ್ದೆಗೇಡಿತನ

ದಿನಕ್ಕೆ ಅಗತ್ಯ ಪ್ರಮಾಣದ ನಿದ್ದೆಯನ್ನು ಮಾಡದವರಲ್ಲಿ ಯಕೃತ್‌ನ ಆರೋಗ್ಯ ಚೆನ್ನಾಗಿಲ್ಲ ಎಂಬ ಅಂಶವನ್ನು ಅಧ್ಯಯನಗಳು ಎತ್ತಿ ಹಿಡಿದಿವೆ. ಹಾಗಾಗಿ ದಿನಕ್ಕೆ 7-8 ತಾಸು ಕಡ್ಡಾಯವಾಗಿ ನಿದ್ರಿಸಬೇಕು ಎಂಬ ನಿಯಮವನ್ನು ಹಾಕಿಕೊಳ್ಳಿ. ನಿದ್ದೆಯೆಂದರೆ ಕೇವಲ ಹಾಸಿಗೆಯ ಮೇಲೆ ಮಲಗಿ, ಕೈಯಲ್ಲಿ ಮೊಬೈಲ್‌ ಹಿಡಿಯುವುದಲ್ಲ. ಬದಲಿಗೆ, ಅದಷ್ಟೂ ತಾಸುಗಳ ಗಾಢ ನಿದ್ದೆ. ಇದರಿಂದ ದೇಹದ ಬಹಳಷ್ಟು ರಿಪೇರಿ ಕೆಲಸಗಳು ಸುಗಮವಾಗುತ್ತವೆ.

ಸಂಸ್ಕರಿತ ಆಹಾರ

ಇದು ಸಹ ಯಕೃತ್ತನ್ನು ಹಾಳು ಮಾಡುವ ಕೇಡಿಗಳಲ್ಲಿ ಒಂದು. ಅತಿಯಾದ ಕೊಬ್ಬಿನ ಆಹಾರಗಳು, ಉಪ್ಪು ಹೆಚ್ಚಿರುವ ಚಿಪ್ಸ್‌ನಂಥ ತಿನಿಸುಗಳು, ಮೈದಾಭರಿತ ಆಹಾರಗಳು, ಶೀತಲೀಕರಿಸಿದ ತಿನಿಸುಗಳು- ಇವೆಲ್ಲ ಪಿತ್ತಕೋಶದ ಆಯುಷ್ಯವನ್ನೇ ಕಡಿತ ಮಾಡುವ ಸಾಮರ್ಥ್ಯ ಹೊಂದಿದವು. ಹಾಗಾಗಿ ತಾಜಾ ಆಹಾರ ಸೇವಿಸಿ, ಇಡೀ ಧಾನ್ಯಗಳನ್ನು, ಸಾಕಷ್ಟು ಹಣ್ಣು-ತರಕಾರಿಗಳನ್ನು ಹೊಂದಿದ ಸತ್ವಯುತ ಆಹಾರವನ್ನೇ ತಿನ್ನಿ.

Continue Reading

ಆರೋಗ್ಯ

Almonds Benefits: ಈ 9 ಕಾರಣಗಳಿಗಾಗಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ನಿತ್ಯ ಸೇವಿಸಬೇಕು!

Almonds Benefits: ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ ಕಾರಣಗಳನ್ನು ತಿಳಿಯೋಣ.

VISTARANEWS.COM


on

Almonds
Koo

ಕೆಲವು ಆಹಾರಗಳ್ನು ಕೆಲವು ಹೊತ್ತಿನಲ್ಲಿ ತಿಂದರೆ ಆ ಆಹಾರದ ಸರ್ವ ಗುಣಗಳ ಲಾಭವನ್ನೂ ನಾವು ಪಡೆಯಬಹುದು ಎನ್ನುತ್ತಾರೆ ತಜ್ಞರು. ಆಹಾರವೇ ಹಾಗೆ, ಹೊತ್ತಲ್ಲದ ಹೊತ್ತಿನಲ್ಲಿ ತಿಂದರೆ ಲಾಭಕ್ಕಿಂತ ನಷ್ಟ ಹೆಚ್ಚು. ಯಾವಾಗ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ಸಾಮಾನ್ಯ ಜ್ಞಾನ, ನಮಗೆ ತಿಳಿದಿರಬೇಕು. ಅದು ಪ್ರತಿ ಆಹಾರಕ್ಕೂ ಅನ್ವಯಿಸುತ್ತದೆ. ಇನ್ನು ಕೆಲವು ಆಹಾರಗಳನ್ನು ಇಂತಹ ಹೊತ್ತಿನಲ್ಲಿ ತಿಂದರೆ, ಹೆಚ್ಚು ಅಡ್ಡ ಪರಿಣಾಮಗಳಾಗದು ಎಂಬ ಸತ್ಯವೂ ಇದೆ. ಒಟ್ಟಾರೆ, ಆಹಾರದ ಬಗೆಗಿನ ಸಾಮಾನ್ಯ ಜ್ಞಾನ ಜೀವನದಲ್ಲಿ ನಮಗಿದ್ದರೆ, ಆರೋಗ್ಯವೂ ನಮ್ಮ ಕೈಯಲ್ಲಿದ್ದಂತೆ. ಯಾಕೆಂದರೆ, ನಮ್ಮ ಆರೋಗ್ಯದ ಬಹುಪಾಲು ಗುಟ್ಟು ಅಡಗಿರುವುದು ನಾವು ತಿನ್ನುವ ಆಹಾರದಲ್ಲಿಯೇ.
ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ಮೇಲೆ ಸಿಪ್ಪೆ ಸುಲಿದು ನೀವು ತಿಂದಿರಬಹುದು, ನಿಮ್ಮ ಮಕ್ಕಳಿಗೂ ಕೊಟ್ಟಿರಬಹುದು. ಹೀಗೆ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇರುವ ಲಾಭಗಳೇನು ಗೊತ್ತೇ? ಬನ್ನಿ, ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲೇ ನಾವು ಯಾಕೆ ತಿನ್ನಬೇಕು ಎಂಬುದಕ್ಕೆ (Almonds Benefits) ಕಾರಣಗಳನ್ನು ತಿಳಿಯೋಣ.

Almonds Dry Fruits for Womens Health

ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ

ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಆಹಾರದಲ್ಲಿರುವ ಜೀವಸತ್ವಗಳು ಸರಿಯಾಗಿ ಹೀರಲ್ಪಡುತ್ತವೆ. ಬಾದಾಮಿಯಲ್ಲಿರುವ ಪ್ರೊಟೀನ್‌ ಹಾಗೂ ಕೊಬ್ಬು ಈ ಕೆಲಸವನ್ನು ಮಾಡುತ್ತವೆ. ಬಾದಾಮಿಯ ಸೇವನೆಯ ನಂತರ ನಮ್ಮ ದೇಹಕ್ಕೆ ಸೇರಿದ ಆಹಾಋದ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಾಗುತ್ತದೆ.

weight loss

ತೂಕ ಇಳಿಕೆಗೆ ಸಹಕಾರಿ

ನೀವು ತೂಕ ಇಳಿಸುವವರಾಗಿದ್ದರೆ, ಈ ಅಭ್ಯಾಸ ಬಹಳ ಒಳ್ಳೆಯದು. ಬಾದಾಮಿಯಲ್ಲಿ ಹೆಚ್ಚು ನಾರಿನಂಶ ಹಾಗೂ ಪ್ರೊಟೀನ್‌ ಇರುವುದರಿಂದ ಇದು ಹೆಚ್ಚು ಹಸಿವಾಗಲು ಬಿಡುವುದಿಲ್ಲ. ಖಾಲಿ ಹೊಟ್ಟೆಯಲ್ಲಿ ಬಾದಾಮಿ ಸೇವಿಸಿದ್ದರಿಂದ ಹಸಿವು ಕೊಂಚ ನಿಯಂತ್ರಣಕ್ಕೆ ಬಂದು ನೀವು ಕಡಿಮೆ ತಿನ್ನುತ್ತೀರಿ. ಸಹಜವಾಗಿಯೇ, ಕ್ಯಾಲರಿ ಕಡಿಮೆ ದೇಹಕ್ಕೆ ಸೇರುವುದರಿಂದ ತೂಕ ಇಳಿಕೆಯತ್ತ ಸಾಗುತ್ತದೆ.

ealthy internal organs of human digestive system / highlighted blue organs

ಜೀರ್ಣಕ್ರಿಯೆ ಹೆಚ್ಚಳ

ನಿಮ್ಮ ಜೀರ್ಣಕ್ರಿಯೆಯ ಶಕ್ತಿ ಇಮ್ಮಡಿಗೊಳ್ಳುತ್ತದೆ. ಬಾದಾಮಿಯಲ್ಲಿ ನಾರಿನಂಶವು ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ತಾಕತ್ತನ್ನು ಹೊಂದಿದೆ.

ಚಯಾಪಚಯಕ್ರಿಯೆ ಚುರುಕು

ಚಯಾಪಚಯಕ್ರಿಯೆ ಚುರುಕಾಗುತ್ತದೆ. ದೇಹದಲ್ಲಿ ಈ ಕ್ರಿಯೆಗೆ ಚುರುಕು ಬಂದ ತಕ್ಷಣ ಶಕ್ತಿ ಉತ್ಪಾದನೆಯೂ ಹೆಚ್ಚಾಗುತ್ತದೆ. ನಿಮ್ಮ ಸುಸ್ತು, ಬೇಸರಗಳೆಲ್ಲ ಮಾಯವಾಗಿ ನಿಮ್ಮ ದೇಹ ಚುರುಕಾಗುತ್ತದೆ.

Heart Health Fish Benefits

ಹೃದಯ ಸ್ನೇಹಿ

ಎಲ್ಲಕ್ಕಿಂತ ಮುಖ್ಯವಾಗಿ ಬಾದಾಮಿ ಹೃದಯ ಸ್ನೇಹಿ. ಇದರಲ್ಲಿರುವ ಮೋನೋ ಸ್ಯಾಚುರೇಟೆಡ್‌ ಕೊಬ್ಬು ಹೃದಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ. ಹೃದಯದಲ್ಲಿ ರಕ್ತಪೂರಣಕ್ಕೆ ಚುರುಕು ಮುಟ್ಟುತ್ತದೆ. ಹೃದಯದ ಸಮಸ್ಯೆಗಳು ದೂರ ನಿಲ್ಲುತ್ತವೆ.

ಸಕ್ಕರೆ ಮಟ್ಟ ಏರಿಕೆ ಕಡಿಮೆ

ಬಾದಾಮಿಯಲ್ಲಿ ಗ್ಲಿಸೆಮಿಕ್‌ ಇಂಡೆಕ್ಸ್‌ ತೀರಾ ಕಡಿಮೆ ಇದೆ. ಇದರಿಂದ ಸಹಜವಾಗಿಯೇ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆಯ ಪರಿಣಾಮ ಕಡಿಮೆಯೇ ಇರುತ್ತದೆ.

ಚರ್ಮದ ಆರೋಗ್ಯಕ್ಕೆ ಪೂರಕ

ಚರ್ಮದ ಕಾಳಜಿ ವಹಿಸುವ ಮಂದಿ ಇದನ್ನು ಖಂಡಿತ ಬಳಸಬೇಕು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಜೀವಸತ್ವಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ಇವು ಆಂಟಿ ಏಜಿಂಗ್‌ ಕೂಡಾ. ಚರ್ಮವನ್ನು ನಯವಾಗಿ ಹೊಳಪಾಗಿ ಇರಿಸುವ ಜೊತೆಗೆ ಚರ್ಮಕ್ಕೆ ಬೇಕಾದ ಪೋಷಣಾಯನ್ನು ನೀಡುತ್ತವೆ.

Antioxidants in it keep immunity strong Benefits Of Mandakki

ರೋಗ ನಿರೋಧಕ ಶಕ್ತಿ

ಬಾದಾಮಿಯಲ್ಲಿ ವಿಟಮಿನ್‌ ಇ ಹಾಗೂ ಝಿಂಕ್‌ ಇರುವುದರಿಂದ ಇವು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನೂ ನೀಡುತ್ತವೆ. ದೇಹವನ್ನು ಇನ್‌ಫೆಕ್ಷನ್‌ನಿಂದ ದೂರವಿರಿಸುತ್ತದೆ. ಒಟ್ಟಾರೆ ರೋಗನಿರೋಧಕತೆ ಹೆಚ್ಚುತ್ತದೆ.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ

ಬಾದಾಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರೂ ಇದೆ ಎಂದರೆ ನೀವು ನಂಬಲೇ ಬೇಕು. ಅದು ಒಣವಾಗಿ ಕಂಡರೂ, ತನ್ನ ಒಣ ಅಂಶದಷ್ಟೇ ಪ್ರಮಾಣದಲ್ಲಿ ನೀರನ್ನೂ ಹೊಂದಿದೆ ಎಂದರೆ ನೀವು ನಂಬಬೇಕು. ಹೀಗಾಗಿ, ದೇಹವನ್ನು ಸದಾ ಹೈಡ್ರೇಟ್‌ ಆಗಿ ಇಡುವಲ್ಲಿ ಇದು ತನ್ನ ಕಾಣಿಕೆಯನ್ನೂ ನೀಡುತ್ತದೆ.

Continue Reading

ಆರೋಗ್ಯ

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

High Calcium Foods: ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

High Calcium Foods
Koo

ಕ್ಯಾಲ್ಶಿಯಂ ಖನಿಜ (High Calcium Foods) ನಮ್ಮ ಆರೋಗ್ಯಕ್ಕೆ ಅಗತ್ಯ ಎಂಬುದು ನಮಗೆಲ್ಲ ಗೊತ್ತು. ಹಲ್ಲು, ಮೂಳೆಗಳಿಂದ ಹಿಡಿದು ನಮ್ಮಿಡೀ ದೇಹದ ಸ್ವಾಸ್ಥ್ಯ ರಕ್ಷಣೆಗೆ ಇದು ಅಗತ್ಯ. ನರಗಳ ಆರೋಗ್ಯ ಚೆನ್ನಾಗಿರಿಸಲು, ಸ್ನಾಯುಗಳ ವಿಕಸನಕ್ಕೆ, ರಕ್ತ ಹೆಪ್ಪುಗಟ್ಟಲು… ಹೀಗೆ ಬಹಳಷ್ಟು ಕೆಲಸಗಳಿಗೆ ಕ್ಯಾಲ್ಶಿಯಂ ಅಗತ್ಯವಿದೆ. ಕ್ಯಾಲ್ಶಿಯಂ ಆಹಾರ ಎನ್ನುತ್ತಿದ್ದಂತೆ ನಮಗೆ ನೆನಪಾಗುವುದು ಡೇರಿ ಉತ್ಪನ್ನಗಳು. ಸಸ್ಯಾಹಾರಿಗಳಂತೂ ಹಾಲು, ಚೀಸ್‌, ಪನೀರ್‌ ಮುಂತಾದವುಗಳನ್ನೇ ಕ್ಯಾಲ್ಶಿಯಂ ಪೂರೈಕೆಗೆ ನೆಚ್ಚಿಕೊಂಡಿರುತ್ತಾರೆ. ಆದರೆ ಕ್ಯಾಲ್ಶಿಯಂ ಆಹಾರಗಳು ಅದಷ್ಟೇ ಅಲ್ಲ, ಇನ್ನೂ ಎಷ್ಟೋ ಬೇರೆಯ ಆಹಾರಗಳು ಒಂದು ಸರ್ವಿಂಗ್‌ನಲ್ಲಿ ಒಂದು ಗ್ಲಾಸ್‌ ಹಾಲಿಗಿಂತಲೂ ಹೆಚ್ಚಿನ ಕ್ಯಾಲ್ಶಿಯಂ ಒದಗಿಸುತ್ತವೆ ದೇಹಕ್ಕೆ. ಯಾವ ಆಹಾರಗಳವು?

Greens vegetables

ಹಸಿರು ಸೊಪ್ಪುಗಳು

ಪಾಲಕ್‌ ಸೊಪ್ಪು, ಲೆಟೂಸ್‌, ಸ್ವಿಸ್‌ ಚಾರ್ಡ್‌, ಸಾಸಿವೆ ಸೊಪ್ಪುಗಳು, ಟರ್ನಿಪ್‌ ಸೊಪ್ಪು, ಕೆಲವು ಬಗೆಯ ಎಲೆಕೋಸು ಮುಂತಾದ ಹಲವು ಬಗೆಯ ಸೊಪ್ಪುಗಳಲ್ಲಿ ಕ್ಯಾಲ್ಶಿಯಂ ಅಂಶ ಅಧಿಕವಾಗಿದೆ. ಒಂದು ಕಪ್‌ ಬೇಯಿಸಿದ ಸೊಪ್ಪಿನಲ್ಲಿ 265 ಮಿ.ಗ್ರಾಂನಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದೇ ಒಂದು ಕಪ್‌ (160 ಎಂ.ಎಲ್‌) ಹಾಲಿನಲ್ಲಿ 250 ಮಿ.ಗ್ರಾಂ.ನಷ್ಟು ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ ಇಂಥ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾಲ್ಶಿಯಂ ಮಾತ್ರವಲ್ಲ, ಅವುಗಳಿಂದ ದೊರೆಯುವ ಸೂಕ್ಷ್ಮ ಪೋಷಕಾಂಶಗಳು ದೇಹದ ಆರೋಗ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತವೆ.

Mackerel fish on ice
Broccoli

ಮೀನು

ಮೀನುಗಳಲ್ಲಿರುವ ಲೀನ್‌ ಮೀಟ್‌ ಆರೋಗ್ಯಕ್ಕೆ ಸೂಕ್ತವಾದದ್ದು. ಅದರಲ್ಲೂ ಭೂತಾಯಿಯಂಥ ಮೀನಿನಲ್ಲಿ ಕ್ಯಾಲ್ಶಿಯಂ ಪ್ರಮಾಣ ಅಧಿಕ 3.75 ಔನ್ಸ್‌ ಮೀನಿನಿಂದ 325 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಮಾತ್ರವಲ್ಲ, ಹಲವು ಬಗೆಯ ಖನಿಜಗಳು ಮತ್ತು ಒಮೇಗಾ 3 ಕೊಬ್ಬಿನಾಮ್ಲವೂ ಇದರಿಂದ ವಿಫುಲವಾಗಿ ಸಿಗುತ್ತದೆ.

Health Benefits Of Tofu

ತೋಫು

ಸೋಯಾ ಉತ್ಪನ್ನವಾದ ತೋಫುವಿನಲ್ಲೂ ಅಧಿಕ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ಇದರ ಸಂಸ್ಕರಣೆಯಲ್ಲಿ ಕ್ಯಾಲ್ಶಿಯಂ ಸಲ್ಫೇಟ್‌ ಬಳಸಲಾಗಿದ್ದರೆ, ಅರ್ಧ ಕಪ್‌ ತೋಫುವಿನಿಂದ 250ರಿಂದ 850 ಎಂ.ಜಿ.ವರೆಗೂ ಕ್ಯಾಲ್ಶಿಯಂ ದೊರೆಯುತ್ತದೆ. ನೋಡುವುದಕ್ಕೆ ಪನೀರ್‌ನಂತೆಯೇ ಇರುವ ಇದನ್ನು ಹಲವು ರೀತಿಯ ಅಡುಗೆಗಳಲ್ಲಿ ಬಳಸಿ, ಕ್ಯಾಲ್ಶಿಯಂ ಸೇವನೆಯನ್ನು ಹೆಚ್ಚಿಸಿಕೊಳ್ಳಬಹುದು.

Black Chia Seed

ಚಿಯಾ ಬೀಜಗಳು

ನೋಡುವುದಕ್ಕೆ ತೀರಾ ಸಣ್ಣದಾಗಿರು ಈ ಬೀಜಗಳು ಸತ್ವದಲ್ಲಿ ತ್ರಿವಿಕ್ರಮನಂತೆ. ಕೇವಲ ಎರಡು ಟೇಬಲ್‌ ಚಮಚ ಚಿಯಾ ಬೀಜಗಳಿಂದ 180 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಇವುಗಳನ್ನು ನೀರಿನಲ್ಲಿ ನೆನೆಸಿ, ನಂತರ ಸ್ಮೂದಿ, ಸಲಾಡ್‌ ಮುಂತಾದ ಯಾವುದಕ್ಕೇ ಆದರೂ ಸೇರಿಸಿಕೊಳ್ಳಬಹುದು. ಇವುಗಳಲ್ಲಿ ನಾರು ಮತ್ತು ಒಳ್ಳೆಯ ಕೊಬ್ಬು ವಿಫುಲವಾಗಿವೆ.

sesame-seeds

ಎಳ್ಳು

ಇದನ್ನು ಅಂತೆಯೇ ತಿನ್ನುವುದಕ್ಕಿಂತ ಚಟ್ನಿಯಂತೆ ರುಬ್ಬಿ ತಿನ್ನುವುದು ಹೆಚ್ಚು ಪರಿಣಾಮಕಾರಿ. ಯಾವುದೇ ರೀತಿಯಲ್ಲಿ ಎಳ್ಳನ್ನು ರುಬ್ಬಿ ಅಡುಗೆಗೆ ಸೇರಿಸಿಕೊಳ್ಳಬಹುದು. ಎರಡು ಟೇಬಲ್‌ ಚಮಚ ಎಳ್ಳಿನಿಂದ 130 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ.

Broccoli

ಬ್ರೊಕೊಲಿ

ವಿಟಮಿನ್‌ ಸಿ ಮತ್ತು ಕೆ ಹೆಚ್ಚಾಗಿರುವ ಈ ತರಕಾರಿಯನ್ನು ಯಾವುದೇ ರೂಪದಲ್ಲಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಿಂದ 62 ಎಂ.ಜಿ. ಕ್ಯಾಲ್ಶಿಯಂ ದೊರೆಯುತ್ತದೆ. ಉಳಿದೆಲ್ಲ ಹಸಿರು ಸೊಪ್ಪುಗಳ ಜೊತೆಗೆ ಇದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

ಬಾದಾಮಿ, ಅಂಜೂರ

ಒಂದು ಔನ್ಸ್‌ ಬಾದಾಮಿಯಲ್ಲಿ (ಅಂದಾಜು 23 ಬಾದಾಮಿ) 76 ಎಂ.ಜಿ.ಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಅದಲ್ಲದೆ, ಈ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ಇತರ ಖನಿಜಗಳು ಧಾರಾಳವಾಗಿವೆ. ಅಂಜೂರವೂ ಇದಕ್ಕಿಂತ ಕಡಿಮೆಯೇನಿಲ್ಲ. ಕಾಲು ಕಪ್‌ನಷ್ಟು ಅಂಜೂರದಲ್ಲಿ ಸುಮಾರು 90 ಎಂ.ಜಿಯಷ್ಟು ಕ್ಯಾಲ್ಶಿಯಂ ದೊರೆಯುತ್ತದೆ. ಇದರಲ್ಲಿ ನಾರಿನಂಶವೂ ಸಾಕಷ್ಟಿದ್ದು, ಜೀರ್ಣಾಂಗಗಳ ಆರೋಗ್ಯವನ್ನು ವೃದ್ಧಿಸುತ್ತದೆ.

Continue Reading
Advertisement
submarines
ದೇಶ6 mins ago

Submarines: ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳಿಗಾಗಿ ಕೇಂದ್ರಕ್ಕೆ ಭಾರತೀಯ ನೌಕಾಪಡೆ ಮನವಿ

Urfi Javed 'LED Display Top' On Mumbai Streets
ಬಾಲಿವುಡ್31 mins ago

Urfi Javed: ಎಲ್ಇಡಿ ಡಿಸ್ಪ್ಲೇ ಇಂದ ಮಾನ ಮುಚ್ಚಿಕೊಂಡು ಬಂದ ಉರ್ಫಿ ಜಾವೇದ್!

Tungabhadra Dam
ಬೆಂಗಳೂರು46 mins ago

Tungabhadra Dam: ರಾಜ್ಯದ ಎಲ್ಲ ಡ್ಯಾಮ್‌ಗಳ ಪರಿಶೀಲನೆಗೆ ಸಮಿತಿ ರಚನೆ: ಡಿ.ಕೆ. ಶಿವಕುಮಾರ್ ಸುಳಿವು

Self Harming
ಚಿತ್ರದುರ್ಗ57 mins ago

Self Harming : ಹೆಂಡ್ತಿ ಟಾರ್ಚರ್‌ಗೆ ನೇಣು ಬಿಗಿದುಕೊಂಡು ಗಂಡ ಆತ್ಮಹತ್ಯೆ

Pushpa 2 Leela offered to do special song in Pushpa 2
ಟಾಲಿವುಡ್2 hours ago

Pushpa 2: ಪುಷ್ಪ 2 ಚಿತ್ರದಲ್ಲಿ ಇರಲಿದ್ದಾರಂತೆ ಈ ಕನ್ನಡದ ಹೀರೋಯಿನ್​?

Hindenburg Report
ದೇಶ2 hours ago

Hindenburg Report: ಷೇರು ಮಾರುಕಟ್ಟೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿಗೆ ಬಿಜೆಪಿ ಟಾಂಗ್‌

karnataka rain weather forecast
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಕೆರೆಯಂತಾದ ಬೆಂಗಳೂರು-ಹೊಸೂರು ಹೈವೆ; ಡ್ಯಾಡಿಸ್ ಗಾರ್ಡನ್ ಲೇಔಟ್‌ಗೆ ಜಲದಿಗ್ಬಂದನ

Gold Rate Today
ಚಿನ್ನದ ದರ2 hours ago

Gold Rate Today: ಮತ್ತೆ ಹೆಚ್ಚಾಯ್ತು ಚಿನ್ನದ ದರ; ಬಂಗಾರ ಇಂದು ಇಷ್ಟು ದುಬಾರಿ

Tungabhadra Dam
ಕರ್ನಾಟಕ2 hours ago

Tungabhadra Dam: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ; ನದಿಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರಿ ಎಚ್ಚರಿಕೆ

Physical abuse
ದೇಶ3 hours ago

Physical Abuse: 70 ವರ್ಷದ ಮುಸ್ಲಿಂ ಧರ್ಮ ಗುರು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡುವಾಗ ಸಿಕ್ಕಿ ಬಿದ್ದ! ವಿಡಿಯೊ ಇದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌