Benefits Of Ginger: ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ; ಔಷಧಕ್ಕೂ ಬೇಕು! - Vistara News

ಆರೋಗ್ಯ

Benefits Of Ginger: ಶುಂಠಿ ಘಾಟು, ಘಮಕ್ಕೆ ಮಾತ್ರವಲ್ಲ; ಔಷಧಕ್ಕೂ ಬೇಕು!

ಘಾಟು, ಘಮ, ರುಚಿಯನ್ನು ಹೆಚ್ಚಿಸುವ ಉದ್ದೇಶದಿಂದ ಅಡುಗೆಯಲ್ಲಿ ಶುಂಠಿ ಬಳಕೆಯಾಗುತ್ತದೆ. ಆದರೆ ಶುಂಠಿ ರಸ, ಕಷಾಯ, ಚಹಾ ಇಂಥವೆಲ್ಲ ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿವೆ. ಏನಿದೆ ಶುಂಠಿಯಲ್ಲಿ (BENEFITS OF GINGER) ಅಂಥದ್ದು?

VISTARANEWS.COM


on

ginger
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿರೋಗಿಗಳಾಗಿರಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಶತಮಾನಗಳಿಂದ ನಾವು ಹುಡುಕಾಡುತ್ತಲೇ ಇದ್ದೇವೆ ಉತ್ತರವನ್ನು. ಉತ್ತರ ದೊರೆಯಲೇ ಇಲ್ಲ ಎನ್ನುವುದಕ್ಕೆ ಆಗದಿದ್ರೂ, ಪ್ರಶ್ನೆಗಳು ಮುಗಿದಿಲ್ಲ. ಕಾರಣ, ಕಾಲಕ್ಕೆ ತಕ್ಕಂತೆ ಹೊಸ ಪ್ರಶ್ನೆಗಳು, ಹೊಸ ರೋಗ ಮತ್ತು ಹೊಸ ಸವಾಲುಗಳು ತಲೆ ಎತ್ತುತ್ತಿವೆ. ಉದಾ, ದಿನವಿಡೀ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವ ಸವಾಲುಗಳು ಹಳೆಯ ಕಾಲದವರಿಗಿರಲಿಲ್ಲ. ಅವರದ್ದು ಹೆಚ್ಚಿನ ಸಾರಿ ದೇಹಶ್ರಮದ ಕೆಲಸವೇ ಇರುತ್ತಿತ್ತು. ಆದರೀಗ ದೇಹಕ್ಕೆ ಬೆವರು ಬರುವಂತೆ ಶ್ರಮವಾಗದಿದ್ದರೂ, ಕುಳಿತು ಕಂಗೆಡುವ ಶ್ರಮ ಕಡಿಮೆಯದಲ್ಲ. ಹೆಚ್ಚು ಹೊತ್ತು ಕುಳಿತೇ ಇರುವ ಜಡ ಜೀವನದ ಅಡ್ಡ ಪರಿಣಾಮಗಳು ನಾವು ಊಹಿಸಿದ್ದಕ್ಕಿಂತ ಹೆಚ್ಚು ದೂರದವರೆಗೆ ನಮ್ಮ ಬೆನ್ನಟ್ಟುತ್ತವೆ. ಇಂಥ ಸವಾಲುಗಳ ಉತ್ತರವೊ ಎಂಬಂತೆ ಹಲವು ರೀತಿಯ ನೈಸರ್ಗಿಕ ಮದ್ದು ಅಥವಾ ಸಿದ್ಧೌಷಧಗಳು ಜನಪ್ರಿಯಗೊಳ್ಳುತ್ತಿವೆ. ಇಂಥದ್ದೊಂದು ಮದ್ದು ಶುಂಠಿ ರಸ. ಅಡುಗೆಯಲ್ಲಿ ಸಾಧಾರಣವಾಗಿ ಬಳಕೆಯಾಗುವಂಥ ಮೂಲಿಕೆಯಿದು, ಆದರೆ ಔಷಧಿಯಾಗಿ ಅಲ್ಲ. ಘಾಟು, ಘಮ, ರುಚಿ ಮುಂತಾದವನ್ನು ಹೆಚ್ಚಿಸುವ ಉದ್ದೇಶದಿಂದ ಶುಂಠಿ ಅಡುಗೆಯಲ್ಲಿ ಬಳಕೆಯಾಗುತ್ತದೆ. ಆದರೆ ಶುಂಠಿ ರಸ, ಕಷಾಯ, ಚಹಾ ಇಂಥವೆಲ್ಲ ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿವೆ. ಇದರಲ್ಲಿರುವ ಸತ್ವಗಳು ಮತ್ತು ಅದರ ಪರಿಣಾಮಗಳು ಅರಿವಿಗೆ ಬರುತ್ತಿವೆ. ಏನಿದೆ ಶುಂಠಿಯಲ್ಲಿ (BENEFITS OF GINGER) ಅಂಥದ್ದು?

ealthy internal organs of human digestive system / highlighted blue organs

ಪಚನಕಾರಿ

ಶುಂಠಿಯಲ್ಲಿರುವ ಜಿಂಜರಾಲ್‌ ಎಂಬ ಅಂಶವು ಜೀರ್ಣಾಂಗಗಳನ್ನು ಚುರುಕು ಮಾಡುತ್ತದೆ. ಜಠರದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯ ಉಳಿಯಲು ಬಿಡದಂತೆ ಆಹಾರವನ್ನು ಮುಂದೂಡುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ. ಕೆಲವು ಸಂದರ್ಭಗಳಲ್ಲಿ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚಿನ ಪರಿಣಾಮ ಕಾಣಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಸೇವಿಸುವುದು ಕೆಲವರಿಗೆ ಹೊಂದಿಕೆಯಾಗದಿರುವ ಸಾಧ್ಯತೆಯಿದೆ.

iamges of Benefits Of Eating Ginger

ಉತ್ಕರ್ಷಣ ವಿರೋಧಿ

ಶುಂಠಿಯಲ್ಲಿ ಹಲವು ರೀತಿಯ ಪ್ರಬಲ ಉತ್ಕರ್ಷಣ ನಿರೋಧಕಗಳಿವೆ. ದೇಹದಲ್ಲಿ ಉರಿಯೂತ ನಿವಾರಣೆಗೆ ಉತ್ತಮ ಮದ್ದು ಇದು ಎಂಬುದು ಈಗಾಗಲೇ ತಿಳಿದಿರುವ ವಿಷಯ. ಜೊತೆಗೆ, ದೇಹದ ಪ್ರತಿರೋಧಕ ಶಕ್ತಿಯನ್ನು ಉದ್ದೀಪಿಸುವುದಲ್ಲೂ ಇದರದ್ದು ಎತ್ತಿದ ಕೈ. ಹಾಗಾಗಿ ಸಣ್ಣ-ಪುಟ್ಟ ಸೋಂಕಿನ ದಿನಗಳಲ್ಲಿ ಒಂದು ಖಡಕ್‌ ಶುಂಠಿ ಕಷಾಯ ದೇಹಕ್ಕೆ ಬಹಳಷ್ಟು ಆರಾಮ ನೀಡಬಲ್ಲದು.

weight loss

ತೂಕ ನಿರ್ವಹಣೆ

ದೇಹದ ಚಯಾಪಚಯ ಹೆಚ್ಚಿಸಿ, ಕೊಬ್ಬು ಕಡಿತ ಮಾಡುವಲ್ಲಿ ಶುಂಠಿ ಅತ್ಯಂತ ಪ್ರಯೋಜನಕಾರಿ. ಅನಗತ್ಯ ಹಸಿವೆಯನ್ನು ನಿರ್ಬಂಧಿಸಿ, ತಿಂದಿದ್ದೆಲ್ಲ ಸೂಕ್ತ ರೀತಿಯಲ್ಲಿ ರಕ್ತ ಸೇರುವಂತೆ ಮಾಡುವುದರಿಂದ, ಆಹಾರ ಸೇವನೆಯ ಸಂತೃಪ್ತಿ ಹೆಚ್ಚುತ್ತದೆ. ಈ ಎಲ್ಲ ಕಾರಣಗಳಿಂದಾಗಿ ತೂಕ ನಿರ್ವಹಣೆಯಲ್ಲಿ ಸವಾಲುಗಳಿದ್ದರೆ, ಶುಂಠಿಯನ್ನು ಆಹಾರದಲ್ಲಿ ಸೇರಿಸಿಕೊಂಡು ಪ್ರಯತ್ನಿಸಬಹುದು.

Pregnancy Beauty Car

ಗರ್ಭಿಣಿಯರಿಗೆ

ಬೆಳಗಿನ ಹೊತ್ತು ವಾಂತಿ, ಓಕರಿಕೆಯಂಥ ಮಾರ್ನಿಂಗ್‌ ಸಿಕ್‌ನೆಸ್‌ನಿಂದ ಒದ್ದಾಡುತ್ತಿರುವ ಗರ್ಭಿಣಿಯರಿಗೆ ಶುಂಠಿ ನೆರವಾಗಬಲ್ಲದು. ಹಸಿ ಶುಂಠಿಯ ರಸ, ಕಷಾಯ ಅಥವಾ ಶುಂಠಿಯನ್ನೇ ಬಾಯಲ್ಲಿರಿಸಿಕೊಂಡರೂ, ಹೊಟ್ಟೆ ತೊಳೆಸುವುದನ್ನು ಕಡೆಯಬಹುದು. ಪರಂಪರಾಗತ ಔಷಧಿಯಲ್ಲಿ ಈ ಸಮಸ್ಯೆಗೆ ಶುಂಠಿಯೇ ಮದ್ದು.

Diabetes control

ಮಧುಮೇಹಿಗಳಿಗೆ

ದೇಹದ ಚಯಾಪಚಯ ಹೆಚ್ಚಿಸುವ ಇದರ ಸಾಮರ್ಥ್ಯದಿಂದಾಗಿ ಮಧುಮೇಹಿಗಳು ಇದನ್ನು ತಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದು. ಜೀರ್ಣಕ್ರಿಯೆಯನ್ನು ಸರಾಗ ಮಾಡಿ, ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರದಂತೆ ಇದು ತಡೆಯಬಲ್ಲದು. ಜೊತೆಗೆ ರಕ್ತ ಪರಿಚಲನೆಯನ್ನೂ ಇದು ಉತ್ತೇಜಿಸುವುದರಿಂದ, ಅಂಗಾಂಗಗಳ ಯೋಗಕ್ಷೇಮ ಕಾಪಾಡುವಲ್ಲೂ ಶುಂಠಿ ಸಹಕಾರಿ.
ಶುಂಠಿಯನ್ನು ಹಸಿಯಾಗಿ, ಒಣಗಿಸಿದ ರೂಪದಲ್ಲಿ, ಪುಡಿ ಮಾಡಿಕೊಂಡು, ಪೇಸ್ಟ್‌ ಮಾಡಿ, ರಸ ತೆಗೆದು ಕಾಪಿಟ್ಟುಕೊಂಡು… ಹೇಗೆ ಉಪಯೋಗಿಸಿದರೂ ಪ್ರಯೋಜನಕಾರಿ. ಆದರೆ ತಾಜಾ ಹಸಿ ಶುಂಠಿಯ ಘಾಟು ಮತ್ತು ಘಮ ಉಳಿದ ರೂಪಗಳಲ್ಲಿ ದೊರೆಯುವುದಿಲ್ಲ. ಹಾಗೆಂದು ಅತಿಯಾಗಿ ಸೇವಿಸಿದರೂ ಆರೋಗ್ಯಕ್ಕೆ ಸಮಸ್ಯೆ ತರಬಹುದು. ಹಾಗಾಗಿ ನಿಯಮಿತವಾಗಿ, ಹಿತ-ಮಿತವಾಗಿ ಶುಂಠಿ ಬಳಸುವುದು ಸೂಕ್ತ.

ಇದನ್ನೂ ಓದಿ: Superfood Tomato: ಬಲ್ಲಿರಾ ಟೊಮೆಟೊ ಎಂಬ ಹಣ್ಣಿನ ಸದ್ಗುಣಗಳನ್ನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

World Hypertension Day: ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬಂದರೆ, ರಕ್ತದೊತ್ತಡವನ್ನು ತಪ್ಪದೇ ಪರೀಕ್ಷಿಸಿಕೊಳ್ಳಿ. ಜನರಲ್ಲಿ ಬಿಪಿ ಸಮಸ್ಯೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ ಮೇ 17ರಂದು ಜಾಗತಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತದೆ.

VISTARANEWS.COM


on

World Hypertension Day Today is Global Blood Pressure Day
Koo

ಬೆಂಗಳೂರು: ಶೀತ, ಜ್ವರ, ಕೆಮ್ಮು ಮುಂತಾದ ಸೋಂಕು ರೋಗಗಳು ಇಂದಿಲ್ಲದಿದ್ದರೂ ನಾಳೆಗೆ ಬಂದುಬಿಡಬಹುದು. ಆದರೆ ಜೀವನಶೈಲಿಯಿಂದ ಬರುವ ರೋಗಗಳು (World Hypertension Day) ಹಾಗಲ್ಲ, ನಮಗೇ ತಿಳಿಯದಂತೆ ನಾವೆಂದೋ ಬಿತ್ತಿದ ಬೀಜ, ಆಳವಾದ ಬೇರುಗಳನ್ನು ಬಿಟ್ಟ ಮೇಲೆಯೇ ಮೊಳಕೆ ಕಾಣುವುದು. ಉದಾ, ರಕ್ತದೊತ್ತಡದಂಥ ಸಮಸ್ಯೆಯನ್ನೇ ಗಮನಿಸಿದರೆ, ಎಂದಿನಿಂದ ಪ್ರಾರಂಭವಾಯಿತು ಎನ್ನುವುದೇ ತಿಳಿಯುವುದಿಲ್ಲ. ಆದರೆ ದೀರ್ಘಕಾಲದಿಂದಲೇ ಒತ್ತಡದ ಬದುಕು, ವ್ಯಾಯಾಮ ರಹಿತ ಜೀವನ, ಅನಾರೋಗ್ಯಕರ ಆಹಾರ ಮುಂತಾದ ಕಾರಣಗಳು ಈ ಬೀಜಕ್ಕೆ ನೀರು, ಗೊಬ್ಬರ ಹಾಕುತ್ತಲೇ ಇರುತ್ತವೆ. ಇದರಿಂದಲೇ ಹೃದಯದ ಸಮಸ್ಯೆಗಳು ಹುಟ್ಟಿಕೊಳ್ಳುವುದು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮೇ ತಿಂಗಳ ಹದಿನೇಳನೇ ದಿನವನ್ನು ಜಾಗತಿಕ ರಕ್ತದೊತ್ತಡದ ದಿನವೆಂದು ಘೋಷಿಸಲಾಗಿದೆ. ರಕ್ತದೊತ್ತಡ ಅಥವಾ ಬಿಪಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬಿಪಿ ಎಂದರೆ?

ಬಿಪಿ ಏರಿಸಿಕೊಳ್ಳುವುದು ಎಂದು ಆಡು ಮಾತಿನಲ್ಲಿ ಹೇಳುವುದು ಸಾಮಾನ್ಯ. ಹಾಗೆಂದರೆ ಏನು? ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತವು ನಿಗದಿತ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಹರಿಯುತ್ತಿದ್ದರೆ ಅದನ್ನು ರಕ್ತದ ಏರೊತ್ತಡ ಅಥವಾ ಬಿಪಿ ಎಂದು ಕರೆಯಲಾಗುತ್ತದೆ. ಇಂದಿನ ಜೀವನಶೈಲಿಯಲ್ಲಿ ವಯಸ್ಸು, ಲಿಂಗ ಮುಂತಾದ ಯಾವುದೇ ತಾರತಮ್ಯವಿಲ್ಲದೆ ಯಾರನ್ನೂ ಕಾಡಬಹುದಾದ ಸಮಸ್ಯೆಯಿದು. ಕೇವಲ ರಕ್ತದ ಏರೊತ್ತಡ ಎಂಬುದರಿಂದ ಆರಂಭವಾಗುವ ಸಮಸ್ಯೆಯು ಕ್ರಮೇಣ ಹೃದ್ರೋಗ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಮೊದಲಿಗೆ ತನ್ನ ಇರುವಿಕೆಯನ್ನು ಅಷ್ಟಾಗಿ ಪ್ರಕಟಿಸದ ಈ ಸಮಸ್ಯೆಯು, 180/120ರ ಆಜೂಬಾಜು ಬಿಪಿ ತಲುಪುತ್ತಿದ್ದಂತೆ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಸಾಮಾನ್ಯವಾಗಿ- ತಲೆನೋವು, ತಲೆ ಸುತ್ತು, ಎದೆನೋವು, ಉಸಿರಾಡಲು ಕಷ್ಟವಾಗುವುದು, ಆತಂಕ, ಗೊಂದಲ, ಹೊಟ್ಟೆ ತೊಳೆಸುವುದು, ವಾಂತಿ, ದೃಷ್ಟಿ ಮಂಜಾಗುವುದು, ಅನಿಯಂತ್ರಿತ ಎದೆ ಬಡಿತ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಒಂದು ಅಂದಾಜಿನ ಪ್ರಕಾರ, ಸುಮಾರು ಶೇ. ೪೬ರಷ್ಟು ಮಂದಿಗೆ ತಮಗೆ ರಕ್ತದೊತ್ತಡ ಇರುವ ವಿಷಯವೇ ತಿಳಿದಿರುವುದಿಲ್ಲ. ಹಾಗಾಗಿ ಇಂಥ ಯಾವುದೇ ಲಕ್ಷಣಗಳು ಕಾಣುವವರೆಗೆ ಕಾಯದೆ, ನಿಯಮಮಿತವಾಗಿ ಬಿಪಿ ಪರೀಕ್ಷಿಸಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: Swati Maliwal: ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆಆರೋಪಿ ಕೇಜ್ರಿವಾಲ್‌ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ

ಕಡಿಮೆ ಮಾಡುವುದು ಹೇಗೆ?

ಇದನ್ನು ಸಂಪೂರ್ಣ ಹತೋಟಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡರೆ, ರಕ್ತದ ಏರೊತ್ತಡವನ್ನು ನಿಯಂತ್ರಣಕ್ಕೆ ತರಬಹುದು. ಮೊದಲಿಗೆ ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ಉಪ್ಪು ಹೆಚ್ಚು ತಿನ್ನಬೇಡಿ. ಇದು ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಯಾವುದೇ ಸಂಸ್ಕರಿತ ಆಹಾರಗಳು ಬೇಡ. ಸಾಫ್ಟ್‌ ಡ್ರಿಂಕ್‌, ಚಿಪ್ಸ್‌, ಪ್ಯಾಕೆಟ್‌ ಅಥವಾ ಕ್ಯಾನ್ಡ್‌ ಆಹಾರಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುತ್ತದೆ. ಪ್ರಿಸರ್ವೇಟಿವ್‌ ಬಳಸಿದ ಬಹುತೇಕ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚು. ಹಾಗಾಗಿ ತಾಜಾ ಆಹಾರಗಳು, ಸತ್ವಭರಿತ ಆಹಾರಗಳ ಸೇವನೆಯತ್ತ ಗಮನ ನೀಡಿ. ಆಹಾರದ ರುಚಿ ಹೆಚ್ಚಿಸುವುದಕ್ಕೆ ಉಪ್ಪು ಹೆಚ್ಚು ಉಪಯೋಗಿಸುವ ಬದಲು ಹರ್ಬ್‌ಗಳ ಬಳಕೆಯನ್ನು ಹೆಚ್ಚಿಸಿ.

ಎಂಥಾ ಕೊಬ್ಬು?

ನಿತ್ಯ ತಿನ್ನುವ ಕೊಬ್ಬಿನ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆಯೂ ಗಮನ ಅಗತ್ಯ. ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿರುವ ಆಹಾರಗಳ ಬದಲಿಗೆ ಆರೋಗ್ಯಕರ ಕೊಬ್ಬಿರುವ ಎಣ್ಣೆ ಬೀಜಗಳು, ಅವಕಾಡೊ ಮುಂತಾದವು ದೇಹಕ್ಕೆ ಹಿತವಾಗುತ್ತವೆ. ಬಳಸುವ ಎಣ್ಣೆಯ ಬಗ್ಗೆಯೂ ಸರಿಯಾದ ಅರಿವು ಅಗತ್ಯ. ಕರಿದ ತಿಂಡಿಗಳನ್ನು ದೂರ ಮಾಡಿದಷ್ಟೂ ಒಳ್ಳೆಯದು. ಬದಲಿಗೆ, ಋತುಮಾನಕ್ಕೆ ದೊರೆಯುವ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ವ್ಯಾಯಾಮ

ಹಾಗೆನ್ನುತ್ತಿದ್ದಂತೆ ಜಿಮ್‌ನಲ್ಲಿ ಬೆವರಿಳಿಸುವುದು, ಉಸಿರುಗಟ್ಟಿ ರಸ್ತೆ ಮೇಲೆ ಓಡುವವರೇ ನೆನಪಾಗಬಹುದು. ಇಂಥವೆಲ್ಲ ಮಾತ್ರವೇ ವ್ಯಾಯಾಮವಲ್ಲ. ನಡಿಗೆ, ಸೈಕಲ್‌ ಹೊಡೆಯುವುದು, ಈಜು, ನೃತ್ಯ, ಯಾವುದೇ ಆಟಗಳು, ಯೋಗ, ಏರೋಬಿಕ್ಸ್‌ ಮುಂತಾದ ಯಾವುದೇ ದೈಹಿಕ ಚಟುವಟಿಕೆಗಳು ವಾರದಲ್ಲಿ ಕನಿಷ್ಟ ೫ ದಿನವಾದರೂ ಇರಲಿ. ದೇಹದ ತೂಕ ಹೆಚ್ಚಾಗಿದ್ದರೆ, ಅದನ್ನು ಆದ್ಯತೆಯ ಮೇರೆಗೆ ಇಳಿಸಿಕೊಳ್ಳಿ.

ತಪಾಸಣೆ

ಕಾಲಕಾಲಕ್ಕೆ ವೈದ್ಯರಲ್ಲಿ ಹೋಗಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ. ನಿಯಂತ್ರಣಕ್ಕೆ ಔಷಧಿ ಅಗತ್ಯವಾಗಿದ್ದರೆ, ಅದನ್ನು ಮರೆಯಬೇಡಿ. ಧೂಮಪಾನ, ಆಲ್ಕೊಹಾಲ್‌ನಂಥ ಚಟಗಳಿದ್ದರೆ, ಅವುಗಳ ಹೊರತಾಗಿ ಬದುಕುವ ಮಾರ್ಗವಿದೆ ಎಂಬುದನ್ನು ತಿಳಿಯಿರಿ. ಮಾನಸಿನ ಒತ್ತಡ ದೂರ ಮಾಡಲು ಆರೋಗ್ಯಕರ ಮಾರ್ಗಗಳತ್ತ ಗಮನ ಹರಿಸಿ.

Continue Reading

ದೇಶ

ಶಾರುಖ್‌ ಖಾನ್‌ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ.

VISTARANEWS.COM


on

Shah Rukh Khan
Koo

ನವದೆಹಲಿ: ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಹೀರೊಗಳು, ಕ್ರಿಕೆಟಿಗರು, ಸೆಲೆಬ್ರಿಟಿಗಳು (Celebrities) ನೂರಾರು ಉತ್ಪನ್ನಗಳ ಜಾಹೀರಾತುಗಳಲ್ಲಿ (Advertisements) ಅಭಿನಯಿಸುವ ಮೂಲಕ, ಆ ಉತ್ಪನ್ನಗಳನ್ನೂ ತಾವೇ ಬಳಸಿದ್ದೇವೆ ಎಂದು ಹೇಳುವ ಮೂಲಕ ಅಥವಾ ನಟಿಸುವ ಮೂಲಕ ಕೋಟ್ಯಂತರ ಜನರನ್ನು ಸೆಳೆಯುತ್ತಾರೆ. ಇನ್ನು, ಅಭಿಮಾನಿಗಳು, ಅನುಯಾಯಿಗಳು ಕೂಡ ನೆಚ್ಚಿನ ನಟ, ಕ್ರಿಕೆಟಿಗನ ಜಾಹೀರಾತು ನೋಡಿ, ಆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಹೀಗೆ ನಟರು ಸೇರಿ ಸೆಲೆಬ್ರಿಟಿಗಳ ಜಾಹೀರಾತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೌದು, ಶಾರುಖ್‌ ಖಾನ್‌ ಅವರ ಪಾನ್‌ ಮಸಾಲ (Pan Masala) ಜಾಹೀರಾತಿನಿಂದ ಪ್ರಚೋದನೆಗೊಂಡು ಗುಟ್ಕಾ ಸೇವಿಸಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ಮಕ್ಕಳು ಗುಟ್ಕಾ ತಿಂದು, ಅದರ ಪರಿಣಾಮ ಗೊತ್ತಿರದೆ ಮಾತನಾಡಿದ ವಿಡಿಯೊವನ್ನು ಸತ್ಯ, ನ್ಯಾಯ, ಪ್ರೀತಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. “ನೀವು ಗುಟ್ಕಾ ತಿಂತಿದ್ದೀರಲ್ಲ, ಸತ್ತು ಹೋದ್ರೆ ಏನ್‌ ಗತಿ” ಎಂದು ವ್ಯಕ್ತಿಯೊಬ್ಬರು ಪ್ರಶ್ನೆ ಕೇಳುತ್ತಾರೆ. ಆಗ ಮಕ್ಕಳು, “ಶಾರುಖ್‌ ಖಾನ್‌ ಸತ್ತಿಲ್ಲ, ನಾವು ಸಾಯ್ತೀವಾ” ಎಂದಿದ್ದಾರೆ. “ಶಾರುಖ್‌ ಖಾನ್‌ ಏಕೆ ಸಾಯುತ್ತಾರೆ” ಎಂಬ ಪ್ರಶ್ನೆಗೆ, “ಶಾರುಖ್‌ ಖಾನ್‌ ಗುಟ್ಕಾ ತಿಂತಾರಲ್ಲ, ಅವ್ರೇ ಸಾಯಲ್ಲ, ನಾವ್‌ ಹೇಗೆ ಸಾಯ್ತೀವಿ” ಎಂದಿದ್ದಾರೆ. ಅಷ್ಟೇ ಅಲ್ಲ, “ಶಾರುಖ್ ಖಾನ್‌ ಗುಟ್ಕಾ ತಿನ್ನೋದು ನಿಮಗೆ ಹೇಗೆ ಗೊತ್ತು” ಎಂದು ಕೇಳಿದ್ದಕ್ಕೆ, “ಜಾಹೀರಾತಿನಲ್ಲಿ ನೋಡಿದ್ದೀವಲ್ಲ” ಎಂದಿದ್ದಾರೆ.

ಶಾರುಖ್‌ ಖಾನ್‌ ಪಾನ್‌ ಮಸಾಲ ಜಾಹೀರಾತಿನಲ್ಲಿ ನಟಿಸಿದ್ದನ್ನೇ ಈ ಮಕ್ಕಳು ನಿಜ ಎಂದು ಭಾವಿಸಿದ್ದಾರೆ. ಶಾರುಖ್‌ ಖಾನ್‌ ಗುಟ್ಕಾ ತಿಂತಾರೆ, ಅವರಿಗೇ ಏನೂ ಆಗಲ್ಲ. ಇನ್ನು ನಮಗೆ ಏನಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದು, ಚಿಕ್ಕ ವಯಸ್ಸಿನಲ್ಲೇ ಗುಟ್ಕಾ ತಿನ್ನೋದನ್ನು ಕಲಿತಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ನಟಿಸುವಾಗ, ಆ ಉತ್ಪನ್ನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮ ಏನು ಎಂಬುದನ್ನು ಈ ವಿಡಿಯೊ ನೋಡಿ ಕಲಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.

“ಸೆಲೆಬ್ರಿಟಿಗಳು ನಮ್ಮ ಕನ್ನಡದ ಕಣ್ಮಣಿ ಡಾಕ್ಟರ್ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಂತಹವರನ್ನು ನೋಡಿ ಕಲಿಯಬೇಕು. ಥೂ ನಿಮ್ಮ, ನಿಮಗೆಲ್ಲ ಇದನ್ನು ನೋಡಿ ನಾಚಿಕೆ ಆಗಬೇಕು. ಇಂತಹ ಜಾಹೀರಾತು ಕೊಟ್ಟು ಯುವ ಜನತೆಯ ದಾರಿ ತಪ್ಪಿಸುತಿರುವ ನಿಮಗೆ ಧಿಕ್ಕಾರವಿರಲಿ” ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿದ್ದು, “ಈ ಗುಟ್ಕಾ ತಿಂದು ಮಕ್ಕಳು ಏನಾದರೂ ಮೃತಪಟ್ಟರೆ ಆಯಾ ಜಾಹೀರಾತು ಕಂಪನಿ ಹಾಗೂ ಜಾಹೀರಾತಿನಲ್ಲಿ ನಟಿಸುವ ಸೆಲೆಬ್ರಿಟಿಗಳು ಪರಿಹಾರ ನೀಡಬೇಕು ಎಂಬ ಕಾನೂನು ಬಂದರೆ ಮಾತ್ರ ಇದೆಲ್ಲ ಸರಿಯಾಗುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Continue Reading

ದೇಶ

Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

Medicine Price: ರಕ್ತದ ಗ್ಲುಕೋಸ್‌ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್‌ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್‌ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.

VISTARANEWS.COM


on

Medicine Price
Koo

ನವದೆಹಲಿ: ದೇಶದಲ್ಲಿ ಅಗತ್ಯ ಔಷಧಗಳ ಬೆಲೆ ಏರಿಕೆ ಕುರಿತು ವದಂತಿಗಳು ಹರಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ (Central Government) ಇಳಿಸಿದೆ. ಔಷಧಗಳ ಬೆಲೆ ಇಳಿಕೆ (Medicine Price) ಮಾಡಿ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಆದೇಶ ಹೊರಡಿಸಿದೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಜನರು ಕಡಿಮೆ ಬೆಲೆಗೆ ಔಷಧಗಳನ್ನು ಖರೀದಿಸಬಹುದಾಗಿದೆ.

ಯಾವ ಕಾಯಿಲೆಗಳ ಔಷಧ ಬೆಲೆ ಇಳಿಕೆ?

ಮಧುಮೇಹ, ಹೃದ್ರೋಗ, ಯಕೃತ್ತಿನ ಸಮಸ್ಯೆ, ಆ್ಯಂಟಿಬಯೋಟಿಕ್ಸ್‌, ಮಲ್ಟಿ ವಿಟಮಿನ್‌ ಸೇರಿ ಹಲವು ಔಷಧಗಳ ಬೆಲೆಯನ್ನು ಎನ್‌ಪಿಪಿಎ ಇಳಿಕೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮಧುಮೇಹಿಗಳು ಇರುವ ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾಗಿ, ಸಕ್ಕರೆ ಕಾಯಿಲೆಗೆ ಬಳಸುವ ಮಾತ್ರೆಗಳು ಹಾಗೂ ಇನ್ಸುಲಿನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವುದು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

medicines

“ಸಾರ್ವಜನಿಕರಿಗೆ ಅನುಕೂಲವಾಗುವ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆಯು ಒಂದು ನಿಯಮಿತ ಪ್ರಕ್ರಿಯೆಯಾಗಿದ್ದು, ಪ್ರಾಧಿಕಾರವು ಅದನ್ನು ಅನುಸರಿಸಿದೆ” ಎಂದು ಎನ್‌ಪಿಪಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ತದ ಗ್ಲುಕೋಸ್‌ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್‌ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್‌ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.

ಕೆಲ ತಿಂಗಳ ಹಿಂದಷ್ಟೇ, ಔಷಧಗಳ ಬೆಲೆಯೇರಿಕೆ ಕುರಿತು ವದಂತಿಗಳು ಹರಡಿದ್ದವು. ಆದರೆ, ಕೇಂದ್ರ ಸರ್ಕಾರವು ಇದನ್ನು ಅಲ್ಲಗಳೆದಿತ್ತು. “ಏಪ್ರಿಲ್‌ 1ರಿಂದ 500ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಶೇ.12ರಷ್ಟು ಬೆಲೆ ಏರಿಕೆಯಾಗಿದೆ ಎಂಬ ವದಂತಿಗಳು, ವರದಿಗಳು ಸತ್ಯಕ್ಕೆ ದೂರವಾಗಿವೆ. ಜನರ ಹಾದಿ ತಪ್ಪಿಸಲು ಇಂತಹ ವರದಿಗಳನ್ನು ಪಸರಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಸಗಟು ಬೆಲೆ ಸೂಚ್ಯಂಕದ ಆಧಾರದ ಬೆಲೆ ಏರಿಕೆ ಮಾಡುತ್ತದೆ. ಆದರೆ, 782 ಔಷಧಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇನ್ನು ಸುಮಾರು 54 ಔಷಧಗಳ ಬೆಲೆಯು ಒಂದು ಪೈಸೆ ಮಾತ್ರ ಏರಿಕೆಯಾಗಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ, ಅಗತ್ಯ ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

ಇದನ್ನೂ ಓದಿ: Jan Aushadhi: ಪ್ರಯಾಣಿಕರಿಗೆ ಗುಡ್‌ ನ್ಯೂಸ್; ರೈಲು ನಿಲ್ದಾಣಗಳಲ್ಲೂ ಸಿಗಲಿವೆ ಕಡಿಮೆ ಬೆಲೆಗೆ ಔಷಧ!

Continue Reading

ಆರೋಗ್ಯ

Skin Care Tips in Kannada: ಈ ಕಾರಣಕ್ಕಾಗಿ ನೀವು ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಲೇಬೇಕು!

ನಿತ್ಯವೂ ಸನ್‌ಸ್ಕ್ರೀನ್‌ ಹಚ್ಚುವುದರಿಂದ (Skin Care Tips in Kannada) ಮೆಲನೋಮ, ಕಾರ್ಸಿನೋಮಾದಂತಹ ಕ್ಯಾನ್ಸರ್‌ ಅಪಾಯವನ್ನು ನೀವು ತಪ್ಪಿಸಬಹುದು. ಚರ್ಮದ ಮೇಲೆ ಯುವಿ ಕಿರಣಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು. ಚರ್ಮದ ತಜ್ಞರು ಹೇಳುವ ಪ್ರಕಾರ ಸನ್‌ಸ್ಕ್ರೀನ್‌ ಹಚ್ಚುವುದರಿಂದ ಕೇವಲ ಚರ್ಮ ಕಪ್ಪಾಗುವುದನ್ನು ತಡೆಯುವುದು ಮಾತ್ರವಲ್ಲ ಇನ್ನೂ ಹಲವು ಲಾಭಗಳಿವೆ. ಅವು ಯಾವುದು ಗೊತ್ತೇ?

VISTARANEWS.COM


on

By

Skin Care Tips in Kannada
Koo

ಬಿಸಿಲಿಗೆ (sunny) ಹೊರಗೆ ಹೋಗುವ (Skin Care Tips in Kannada) ಮುನ್ನ ಮುಖದ ಚರ್ಮಕ್ಕೆ ಸನ್‌ಸ್ಕ್ರೀನ್‌ (sunscreen) ಹಚ್ಚಿಕೊಳ್ಳಬೇಕು ಎಂಬ ಕಿವಿಮಾತನ್ನು ನೀವು ಕೇಳಿರಬಹುದು. ಬಹುತೇಕರು ಇದನ್ನು ಪಾಲಿಸುತ್ತಾರೆ ಕೂಡ. ಆದರೆ, ಕೆಲವರು, ಉಡಾಫೆ ಮಾಡುವ ಜೊತೆಗೆ, ಬಿಸಿಲಿನಿಂದ ಚರ್ಮಕ್ಕೆ ಅಂಥದ್ದೇನೂ ಆಗಲ್ಲ, ಹೆಚ್ಚೆಂದರೆ ಸ್ವಲ್ಪ ಕಪ್ಪಾದೇನು (black) ಎಂದುಕೊಂಡು ಯಾವ ಸನ್‌ಸ್ಕ್ರೀನ್‌ಗಳ ಸಹವಾಸಕ್ಕೂ ಹೋಗುವುದಿಲ್ಲ.

ಚರ್ಮದ ತಜ್ಞರು (Skin specialist) ಹೇಳುವ ಪ್ರಕಾರ, ಸನ್‌ಸ್ಕ್ರೀನ್‌ ಹಚ್ಚದೇ ಇರುವುದರಿಂದ ಕೇವಲ ಕಪ್ಪಾಗುವುದಷ್ಟೇ ಅಲ್ಲ ಇತರ ಪರಿಣಾಮಗಳೂ ಇವೆ ಎನ್ನುತ್ತಾರೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಚರ್ಮಕ್ಕೆ ಸಾಕಷ್ಟು ಲಾಭಗಳಿವೆ. ಅವು ಯಾವುದು ಎಂಬುದನ್ನು ನೋಡೋಣ.

ಚರ್ಮದ ಕ್ಯಾನ್ಸರ್‌ ಅಪಾಯ ತಪ್ಪಿಸುತ್ತದೆ

ಸನ್‌ಸ್ಕ್ರೀನ್‌ ಹಚ್ಚುವುದರಿಂದ ಸೂರ್ಯನಿಂದ ಹೊರಬರುವ ಅಲ್ಟ್ರಾವಯಲೆಟ್‌ (ಯುವಿ) ಕಿರಣಗಳು ನೇರವಾಗಿ ನಿಮ್ಮ ಚರ್ಮವನ್ನು ತಾಕುವುದು ತಪ್ಪುತ್ತದೆ. ಹೀಗೆ ಈ ಕಿರಣಗಳು ಚರ್ಮವನ್ನು ನೇರವಾಗಿ ತಾಕುವುದರಿಂದ ಡಿಎನ್‌ಎಗಳ ಮೇಲೆ ಪರಿಣಾಮ ಬೀರಿ ಚರ್ಮದ ಕ್ಯಾನ್ಸರ್‌ನಂತಹ ಕಾಯಿಲೆಯೂ ಬರುವ ಅಪಾಯವಿದೆ. ನಿತ್ಯವೂ ಸನ್‌ಸ್ಕ್ರೀನ್‌ ಹಚ್ಚುವುದರಿಂದ ಮೆಲನೋಮ, ಕಾರ್ಸಿನೋಮಾದಂತಹ ಕ್ಯಾನ್ಸರ್‌ ಬರುವ ಅಪಾಯವನ್ನು ತಪ್ಪಿಸಬಹುದು. ಚರ್ಮದ ಮೇಲೆ ಯುವಿ ಕಿರಣಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಬಹುದು.


ಚರ್ಮದ ಬಹುಪದರಗಳ ಮೇಲೆ ಹಾನಿ

ಯುವಿ ಕಿರಣಗಳಿಂದ ಚರ್ಮದ ಮೇಲೆ ಹಾನಿಯಾಗಿ ಸನ್‌ಬರ್ನ್‌ ಆಗುವ ಅಪಾಯ ಹೆಚ್ಚು. ಈ ಕಿರಣಗಳು, ಕೇವಲ ಚರ್ಮದ ಮೇಲ್ಮೈಯ ಮೇಲಷ್ಟೇ ಅಲ್ಲ, ಚರ್ಮದ ಬಹುಪದರಗಳ ಮೇಲೂ ಹಾನಿ ಮಾಡುತ್ತದೆ. ಇದರಿಂದ ಚರ್ಮ ಕೆಂಪಾಗುವುದು, ಉರಿಯೂತ, ನೋವು ಇತ್ಯಾದಿಗಳಾಗುತ್ತವೆ. ಸನ್‌ಸ್ಕ್ರೀನ್‌ ಹಚ್ಚಿದರೆ ಈ ಹಾನಿಯನ್ನು ತಪ್ಪಿಸಬಹುದು.

ಚರ್ಮದ ಬಿಗುತನ

ಯುವಿ ಕಿರಣಗಳು ಚರ್ಮದ ಒಳಗಿನ ಪದರವರೆಗೆ ತಲುಪಿ ಕೊಲಾಜೆನ್‌ ಹಾಗೂ ಇಲಾಸ್ಟಿನ್‌ ಫೈಬರ್‌ಗಳನ್ನು ಒಡೆಯುವ ಮೂಲಕ ಚರ್ಮದ ಮೇಲೆ ನೆರಿಗೆಗಳು, ಕಪ್ಪು ಚುಕ್ಕೆಗಳನ್ನು ಹೆಚ್ಚು ಮಾಡುತ್ತದೆ. ಚರ್ಮ ಜೋತು ಬೀಳುತ್ತದೆ. ಚರ್ಮದ ಬಿಗುತನ ಕಡಿಮೆಯಾಗುತ್ತದೆ.

ಕಪ್ಪು ಕಲೆ

ಯುವಿ ಕಿರಣಗಳು ಮೆಲನೋಸೈಟ್‌ಗಳನ್ನು ಪ್ರಚೋದಿಸುವ ಕಾರಣದಿಂದ ಮೆಲನಿನ್‌ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಚರ್ಮದ ಮೇಲೆ ಕಪ್ಪು ಕಲೆಗಳು, ಅಲ್ಲಲ್ಲಿ ಬದಲಾದ ಚರ್ಮದ ಬಣ್ಣ ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತದೆ. ಸನ್‌ಸ್ಕ್ರೀನ್‌ ಹೀಗಾಗದಂತೆ ತಡೆಗಟ್ಟುತ್ತದೆ.


ಅಲರ್ಜಿಯಂತಹ ಸಮಸ್ಯೆ

ಕೆಲವು ಮಂದಿಯ ಚರ್ಮ ಸೂರ್ಯನ ಬೆಳಕಿಗೆ ತೆರೆದುಕೊಂಡ ತಕ್ಷಣ ಅಲರ್ಜಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಇದನ್ನು ತಡೆಯಬಹುದು.

ಅಂಗಾಂಶಗಳ ಮೇಲೆ ಕೆಟ್ಟ ಪರಿಣಾಮ

ಯುವಿ ಕಿರಣಗಳು ಫ್ರೀ ರ್ಯಾಡಿಕಲ್ಸ್‌ಗಳ ಬಿಡುಗಡೆಗೆ ಉದ್ದೀಪಿಸುವುದರಿಂದ ಇದು ಚರ್ಮದ ಅಂಗಾಂಶಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸನ್‌ಸ್ಕ್ರೀನ್‌ನಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಇದನ್ನು ಕಡಿಮೆ ಮಾಡುತ್ತವೆ. ವಾತಾವರಣದಲ್ಲಿರುವ ಮಾಲಿನ್ಯ ಚರ್ಮವನ್ನು ನೇರವಾಗ ತಲುಪದಂತೆಯೂ ನೋಡಿಕೊಳ್ಳುತ್ತದೆ.

ಒಣ ಚರ್ಮ

ಸೂರ್ಯನ ಬೆಳಕಿನ ಚರ್ಮ ಹೆಚ್ಚು ಹೊತ್ತು ತೆರೆದೇ ಇರುವುದರಿಂದ ಚರ್ಮ ಒಣಗಿದಂತಾಗುತ್ತದೆ. ಚರ್ಮದ ಮೇಲಿನ ನೀರಿನಂಶ ಆರಿಹೋಗುವುದು ಸೇರಿದಂತೆ ನಾನಾ ಸಮಸ್ಯೆಗಳು ಕಾಡುತ್ತವೆ. ಇದರಿಂದ ಚರ್ಮ ನಿಸ್ತೇಜವಾಗಿ, ಒಣವಾಗಿ ಕಾಣಿಸುತದೆ. ತಾಜಾತನ ಮಾಯವಾಗುತ್ತದೆ.

ಇದನ್ನೂ ಓದಿ: Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

ನೀರುಗುಳ್ಳೆ, ಕಜ್ಜಿ ಸಂಭವ

ಬೇಸಿಗೆಯ ಬಿಸಿಲಿಗೆ ಚರ್ಮ ಸದಾ ತೆರೆದಿರುವುದರಿಂದ ಬೇಸಿಗೆ ನೀರುಗುಳ್ಳೆಗಳು, ಕಜ್ಜಿಗಳು ಬರುವ ಸಂಭವವೂ ಇರುತ್ತದೆ. ಸನ್‌ಸ್ಕ್ರೀನ್‌ ಹಚ್ಚುವುದರಿಂದ ಇಂಥ ಸಮಸ್ಯೆ ಬರಲಾರದು.

ರಕ್ಷಣಾ ಕವಚ

ಸನ್‌ಸ್ಕ್ರೀನ್‌ ಹಚ್ಚುವುದಕ್ಕೂ ಮೊದಲು ನೀವು ಹಚ್ಚಿದ ಮಾಯ್‌ಶ್ಚರೈಸರ್‌ ಅಥವಾ ಇತರ ಕ್ರೀಂಗಳು ನಿಮ್ಮ ಚರ್ಮದೊಳಕ್ಕೆ ಸರಿಯಾಗಿ ಇಳಿಯುತ್ತವೆ ಹಾಗೂ ಇದಕ್ಕೆ ರಕ್ಷಣಾ ಕವಚವಾಗಿ ಸನ್‌ಸ್ಕ್ರೀನ್‌ ಲೋಶನ್‌ ಕೆಲಸ ಮಾಡುತ್ತದೆ. ಹೀಗಾಗಿ, ಮೊದಲು ಹಚ್ಚಿದ ಕ್ರೀಂಗಳ ಸದ್ಬಳಕೆಯನ್ನು ಚರ್ಮ ಮಾಡಿಕೊಳ್ಳುತ್ತದೆ.

Continue Reading
Advertisement
Karnataka weather Forecast
ಮಳೆ28 mins ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

World Hypertension Day Today is Global Blood Pressure Day
ಆರೋಗ್ಯ2 hours ago

World Hypertension Day: ಇಂದು ಜಾಗತಿಕ ರಕ್ತದೊತ್ತಡ ದಿನ; ಈ ಸಮಸ್ಯೆಯ ಅರಿವು ನಿಮಗೆಷ್ಟಿದೆ?

Pakistan
ಸಂಪಾದಕೀಯ7 hours ago

ವಿಸ್ತಾರ ಸಂಪಾದಕೀಯ: ಒಪ್ಪಿಕೊಂಡರೆ ಸಾಲದು, ಪಾಕ್‌ ತನ್ನನ್ನು ಸರಿಪಡಿಸಿಕೊಳ್ಳಲಿ

Kapil Sibal
ದೇಶ7 hours ago

Kapil Sibal: ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಕಪಿಲ್‌ ಸಿಬಲ್‌ ಆಯ್ಕೆ

MS Dhoni
ಕ್ರೀಡೆ7 hours ago

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

cauvery dispute
ಕರ್ನಾಟಕ7 hours ago

Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ

MS Dhoni
ಪ್ರಮುಖ ಸುದ್ದಿ7 hours ago

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

Sri Vedavyasa Jayanti programme at Bengaluru
ಬೆಂಗಳೂರು8 hours ago

Bengaluru News: ಹರಿದಾಸ ಸಾಹಿತ್ಯ ಚಿಂತನೆಯಿಂದ ಬದುಕು ಸುಗಮ: ವಿ. ಅಪ್ಪಣ್ಣ ಆಚಾರ್ಯ

Opposition party leader r ashok latest statement in Mysuru
ಪ್ರಮುಖ ಸುದ್ದಿ8 hours ago

R Ashok: ಪೊಲೀಸ್‌ ಇಲಾಖೆ ಸತ್ತಿದೆಯೋ ಬದುಕಿದೆಯೋ ತಿಳಿಯುತ್ತಿಲ್ಲ: ಆರ್.ಅಶೋಕ್ ಆಕ್ರೋಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ28 mins ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ14 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ17 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು20 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌