Health Article Kannada: ಸ್ವೀಟ್‌ ತಿನ್ನುವ ಚಪಲವೇ? ಆರೋಗ್ಯಕರವಾಗಿ ಸಿಹಿ ತಿನ್ನುವ ಉಪಾಯ ಇಲ್ಲಿದೆ! - Vistara News

ಆರೋಗ್ಯ

Health Article Kannada: ಸ್ವೀಟ್‌ ತಿನ್ನುವ ಚಪಲವೇ? ಆರೋಗ್ಯಕರವಾಗಿ ಸಿಹಿ ತಿನ್ನುವ ಉಪಾಯ ಇಲ್ಲಿದೆ!

Health Article Kannada: ಸಿಹಿ ತಿನ್ನಲು ಕಾರಣಗಳೇ ಬೇಕಾಗಿಲ್ಲ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಸಿಹಿ ಬೇಕೆನಿಸುತ್ತದೆ. ಆದರೆ ಇವೆಲ್ಲ ನಾಲಿಗೆಗೆ ಸಿಹಿಯಾಗಿದ್ರೂ ದೇಹಕ್ಕೆ ಸಿಹಿಯಲ್ಲ ಎಂಬುದೂ ನಮಗೆ ಗೊತ್ತು. ಆದರೆ, ಬಾಯಿ ಚಪಲವನ್ನು ತಡೆಯುವವರ್ಯಾರು ಹೇಳಿ. ಇಂದು ಬೇಡ ಎಂದುಕೊಂಡರೂ ನಾಳೆಯಾದರೂ ಸಿಹಿಯ ಬಲೆಯಲ್ಲಿ ಬೀಳುತ್ತೇವೆ. ಆರೋಗ್ಯಕ್ಕೆ ಮಾರಕ ಆಗದಂತೆ ಸಿಹಿ ತಿನ್ನುವುದು ಹೇಗೆ? ಈ ಲೇಖನ ಓದಿ.

VISTARANEWS.COM


on

Health Article Kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಹಿ ತಿನ್ನಬೇಕು ಎನಿಸುವುದು ಬಹಳ ಸಾಮಾನ್ಯ. ಸಹಜ ಕೂಡ. ಆಗಾಗ ಎಲ್ಲರಿಗೂ ಸಿಹಿ ತಿನ್ನೋಣ ಎಂದನಿಸುತ್ತದೆ. ಸಂತಸವನ್ನು ಹಂಚಿಕೊಂಡೂ ನಾವ ಸಿಹಿ ತಿನ್ನುತ್ತೇವೆ. ಸಿಹಿ ತಿನ್ನಲು ಕಾರಣಗಳೇ ಬೇಕಾಗಿಲ್ಲ. ಕೆಲವೊಮ್ಮೆ ಹೊತ್ತಲ್ಲದ ಹೊತ್ತಿನಲ್ಲಿ ಸಿಹಿ ಬೇಕೆನಿಸುತ್ತದೆ. ಆದರೆ ಇವೆಲ್ಲ ನಾಲಿಗೆಗೆ ಸಿಹಿಯಾಗಿದ್ರೂ ದೇಹಕ್ಕೆ ಸಿಹಿಯಲ್ಲ ಎಂಬುದೂ ನಮಗೆ ಗೊತ್ತು. ಆದರೆ, ಬಾಯಿ ಚಪಲವನ್ನು ತಡೆಯುವವರ್ಯಾರು ಹೇಳಿ. ಇಂದು ಬೇಡ ಎಂದುಕೊಂಡರೂ ನಾಳೆಯಾದರೂ ಸಿಹಿಯ ಬಲೆಯಲ್ಲಿ ಬೀಳುತ್ತೇವೆ. ಕೆಲವರಿಗೆ ನಿತ್ಯವೂ ಸಿಹಿ ತಿನ್ನುವ ಅಭ್ಯಾಸವಾಗಿಬಿಟ್ಟಿರುತ್ತದೆ. ಸಿಹಿ ಆ ಹೊತ್ತಿಗೆ ತಿನ್ನದೇ ಇದ್ದರೆ, ಅದೇನೋ ಕಸಿವಿಸಿ, ಕಳೆದುಕೊಂಡ ಭಾವ. ಆದರೆ, ಸಿಹಿಯನ್ನು ಕಡಿಮೆ ಮಾಡಬೇಕು, ಹೇಗೆ ಎಂದು ತಿಳಿಯುತ್ತಿಲ್ಲ ಎನ್ನುವವರೂ ಇದ್ದಾರೆ. ಸಿಹಿ ತಿನ್ನಬಾರದೆಂಬ ವೃತವನ್ನು (Health Article Kannada) ಮುರಿದವರೇ ಹೆಚ್ಚು.

Selection of Colorful Sweets

ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ

ಸಿಹಿ ಪ್ರಿಯರು ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದ್ದೇ ಇದೆ. ಸಿಹಿಯ ಅತಿಯಾದ ಚಪಲವನ್ನು ಕಡಿಮೆ ಮಾಡಲು, ಸಿಹಿಯ ಬದಲಾಗಿ ದೇಹಕ್ಕೆ ಹಿತವಾದ ಸಿಹಿಯನ್ನು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕವೂ ಸಿಹಿಯ ಬಯಕೆಯನ್ನು ತಕ್ಕಮಟ್ಟಿಗೆ ಹತ್ತಿಕ್ಕಿಕೊಳ್ಳಬಹುದು. ಫಿಟ್‌ ಆಗಿರುವ ಬಯಕೆಯಿಂದ ಸಿಹಿಯನ್ನು ಬಹಿಷ್ಕರಿಸಲು, ಆದರೆ, ಆಗಾಗ ಸಿಹಿ ತಿನ್ನಬೇಕೆನಿಸುವಾಗ ನಾಲಿಗೆಯನ್ನು ಸಮಾಧಾನಪಡಿಸಲು ತಿನ್ನಬಹುದಾದ ಕೆಲವು ಆರೋಗ್ಯಕರವಾದ ಸಿಹಿಗಳೂ ಇವೆ. ಬನ್ನಿ, ನಿಮ್ಮ ಸಿಹಿ ಚಪಲಕ್ಕೆ ತಣ್ಣೀರೆರಚದಂತೆ ಕೆಲವು ಪರ್ಯಾಯ ಸಿಹಿಗಳಾವುವು ಎಂಬುದನ್ನು ನೋಡೋಣ.

Chia Seeds Digestive Boosting Foods

ಚಿಯಾ ಬೀಜದ ಪುಡ್ಡಿಂಗ್‌

ರಾತ್ರಿ ಮಲಗುವ ಮೊದಲೇ ಒಂದೆರಡು ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆ ಹಾಕಿ ಫ್ರಿಡ್ಜ್‌ನಲ್ಲಿಡಿ. ಬೆಳಗ್ಗೆ ಅದಕ್ಕೆ ಬೇಕಾದ ಬೀಜಗಳನ್ನೂ, ಒಣಹಣ್ಣುಗಳನ್ನೂ ನೆನೆಸಿ ಸೇರಿಸಬಹುದು. ಖರ್ಜೂರ, ನೆನೆಸಿದ ಒಣದ್ರಾಕ್ಷಿ ಇತ್ಯಾದಿಗಳನ್ನೂ ಹಾಕಬಹುದು. ಸ್ಟ್ರಾಬೆರ್ರಿ ಸೇರಿದಂತೆ ಹಣ್ಣುಗಳನ್ನೂ ಇದಕ್ಕೆ ಸೇರಿಸಬಹುದು. ಒಂದು ಚಮಚ ಜೇನುತುಪ್ಪ ಸೇರಿಸಿ ಇವನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಸವಿಯಬಹುದು. ರುಚಿಯಾದ ಚಿಯಾ ಪುಡ್ಡಿಂಗ್‌ನಲ್ಲಿ, ಚಿಯಾ ಬೀಜದಲ್ಲಿ ಹೇರಳವಾಗಿರುವ ಪ್ರೊಟೀನ್‌, ನಾರಿನಂಶವೂ ಸೇರಿದಂತೆ, ಇತರ ಒಣಬೀಜಗಳು ಹಾಗೂ ಹಣ್ಣುಗಳ ಪೋಷಕಾಂಶಗಳೂ ಸೇರಿ ಅತ್ಯುತ್ತಮ ಸಂಪೂರ್ಣ ಆಹಾರ ಇದಾಗುತ್ತದೆ. ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಸುಲಭವಾಗಿ ಮಾಡಿಕೊಳ್ಳಬಹುದಾದ ತಿನಿಸಿದು. ಅರ್ಜೆಂಟಲ್ಲಿ ಆಫೀಸಿಗೆ ಹೊರಡುವ ಮುನ್ನವೂ ಹೊಟ್ಟೆತುಂಬ ಆರೋಗ್ಯಕರ ತಿಂಡಿ ತಿಂದ ಸಂತೃಪ್ತಿಯೂ ನಿಮ್ಮದು.

dates

ಖರ್ಜೂರ

ಆಫೀಸಿನಲ್ಲಿ, ಮನೆಯಲ್ಲಿ ಬಿಡುವಾದಾಗ, ಸ್ನ್ಯಾಕ್ಸ್‌ ಟೈಮ್‌ನಲ್ಲಿ ಏನಾದರೂ ಸಿಹಿ ತಿನ್ನಬೇಕೆನಿಸುವುದು ಸಹಜ. ಹೊರಗೆ ಹೋಗಿ ಸಿಹಿತಿನಿಸು ತಿನ್ನುವ ಬದಲು ಯಾವಾಗಲೂ ಒಂದೆರಡು ಖರ್ಜೂರವನ್ನು ಡಬ್ಬದಲ್ಲಿಟ್ಟುಕೊಳ್ಳಿ. ಒಳ್ಳೆಯ ಕಬ್ಬಿಣಾಂಶವೂ ಇತರ ಪೋಷಕಾಂಶಗಳನ್ನೂ ಹೊಂದಿದ ಖರ್ಜೂರ ನಿಮ್ಮನ್ನು ಸಿಹಿಬಯಕೆಯಿಂದ ದೂರವಿಟ್ಟು ಸಂತೃಪ್ತಗೊಳಿಸುತ್ತದೆ. ಅತಿಯಾಗಿ ತಿನ್ನಬೇಡಿ. ಹಿತಮಿತವಾಗಿ ತಿನ್ನಿ. ತುಂಬ ಸುಸ್ತಾದಾಗ, ದಿಢೀರ್‌ ಶಕ್ತಿ ಬೇಕೆನಿಸಿದಾಗಲೂ ಇದು ಒಳ್ಳೆಯದು.

Sweet potatoes have the ability to control diabetes and prevent cancer

ಸಿಹಿಗೆಣಸು

ಸಿಹಿಗೆಣಸು ಅತ್ಯುತ್ತಮ ಪೋಷಕಾಂಶಗಳಿರುವ ಗೆಡ್ಡೆ. ಇದರಲ್ಲಿ ಹೇರಳವಾಗಿ ನಾರಿನಂಶ, ಖನಿಜಾಂಶ ಹಾಗೂ ಜೀವಸತ್ವಗಳೂ ಇವೆ. ಸಿಹಿಗೆಣಸನ್ನು ಬೇಯಿಸಿ ಜೊತೆಯಲ್ಲಿ ಡಬ್ಬದಲ್ಲಿ ಹಾಕಿಟ್ಟುಕೊಂಡು ಹೊರಗೆ ಹೊರಟರೆ, ಹಸಿವಾದಾಗ ತಿನ್ನಲು ಯೋಗ್ಯ. ಆರೋಗ್ಯಕ್ಕೂ ಉತ್ತಮ.

Tropical fruit smoothies Dietary Fiber

ಸ್ಮೂದಿಗಳು

ಸಿಹಿಯ ಬಯಕೆಯಾದಾಗ ಆರೋಗ್ಯಕರವಾಗಿ ತಿನ್ನಬಹುದಾದ ಆಯ್ಕೆಗಳಲ್ಲಿ ಸ್ಮೂದಿಗಳೂ ಒಂದು. ನಿಮಗೆ ಬೇಕಾದ ಸ್ಮೂದಿಯನ್ನು ಬೇಕಾದ ಹಣ್ಣುಗಳನು ಹಾಕಿ ಮಾಡಿ ಕುಡಿಯಬಹುದು. ಆರೋಗ್ಯಕ್ಕೂ ಹಿತ.

ಇದನ್ನೂ ಓದಿ: Health Tips Kannada: ನಿಂತ ಮಳೆ ನೀರಿನಿಂದ ಈ 7 ರೋಗಗಳು ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?

ಪ್ರೊಟೀನ್‌ ಬಾರ್

ಮನೆಯಲ್ಲಿ ಸಮಯವಿದ್ದಾಗ ಎಲ್ಲ ಒಣ ಬೀಜಗಳನ್ನೂ, ಒಣಹಣ್ಣುಗಳನ್ನೂ ಕ್ರಶ್‌ ಮಾಡಿ, ಚೆನ್ನಾಘಿ ಮಿಕ್ಸ್‌ ಮಾಡಿ, ಚಾಕೋಲೇಟ್‌ನ ಬಾರ್‌ನಂತೆ ಮಾಡಿಟ್ಟುಕೊಂಡು ಫ್ರೀಜರ್‌ನಲ್ಲಿಡಬಹುದು. ಬೇಕಾದಾಗ ಡಬ್ಬದಲ್ಲಿ ಹಾಕಿ ಬ್ಯಾಗ್‌ನಲ್ಲಿಟ್ಟು ಹಸಿವಾದಾಗ ತಿನ್ನಬಹುದು. ಖರ್ಜೂರವನ್ನು ಸೇರಿಸಿದರೆ ಸಿಹಿಯಾಗಿರುವಂತೆ ಮಾಡಿಕೊಳ್ಳಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Dengue Fever: ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದೆ.‌ ಆದರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇಷ್ಟರೊಳಗೆ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಅಲರ್ಟ್ ಆಗಿರಬೇಕು. ಹೀಗಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಹಕಾರ ನೀಡಿ ಡೆಂಗ್ಯೂ ಹತೋಟಿಗೆ ತರುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

VISTARANEWS.COM


on

Health Minister Dinesh Gundurao instructs to send a team of deputy directors to dengue hot spots
Koo

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು (Dengue Fever) ಕಂಡುಬಂದಿರುವ 10 ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಉಪನಿರ್ದೇಶಕರು ತೆರಳಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಗಳ ಜತೆ ಸಭೆ ನಡೆಸಿದ ಸಚಿವರು, ಮಳೆ, ಪ್ರವಾಹದ ನಡುವೆ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನ ಕಡಿಮೆಯಾಗಬಾರದು ಎಂದು ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುತ್ತಿದೆ.‌ ಆದರೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಇಷ್ಟರೊಳಗೆ ಡೆಂಗ್ಯೂ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಮುಖ ಕಂಡುಬರಬೇಕಿತ್ತು. ಪ್ರಕರಣಗಳು ವರದಿಯಾಗುತ್ತಿರುವುದನ್ನು ನೋಡಿದರೆ ಇನ್ನೂ ಎರಡು ತಿಂಗಳು ನಾವು ಅಲರ್ಟ್ ಆಗಿರಬೇಕು. ಹೀಗಾಗಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಹಕಾರ ನೀಡಿ ಡೆಂಗ್ಯೂ ಹತೋಟಿಗೆ ತರುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ: Fortis Hospital: ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಲಿವರ್‌ ದಾನ!

ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮ ಅಭಿಯಾನದ ರೀತಿಯಲ್ಲಿ ನಡೆಯಬೇಕು. ಜನರಲ್ಲಿ ಡೆಂಗ್ಯೂ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಆದರೆ ಡೆಂಗ್ಯೂ ಹತೋಟಿಗೆ ತರುವ ಕ್ರಮಗಳು ಸ್ಥಳದಲ್ಲಿ ಅನುಷ್ಠಾನಗೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಶೇಷವಾಗಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕರ ಮಟ್ಟದ ಅಧಿಕಾರಿಗಳು ಡೆಂಗ್ಯೂ ಹೆಚ್ಚಿರುವ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಟಿ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಸೂಚನೆ ನೀಡಿದರು. ಕೇವಲ ಭೇಟಿ ಕೊಡುವುದಲ್ಲ. ಎರಡು ಮೂರು ದಿನಗಳವರೆಗೆ ಸ್ಥಳದಲ್ಲೇ ಇದ್ದು ಮಾನಿಟರ್ ಮಾಡಬೇಕು. ಸ್ಥಳದಲ್ಲಿ ಡೆಂಗ್ಯೂ ನಿಯಂತ್ರಣ ಕ್ರಮಗಳು ಅನುಷ್ಠಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌

ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌

ಅಲ್ಲದೇ ಬೆಂಗಳೂರಿನಲ್ಲಿ 37 ಡೆಂಗ್ಯೂ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ಹೆಚ್ಚಿನ ನಿಗಾ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್, ಇದೇ ವೇಳೆ ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಡೆಂಗ್ಯೂ ಪ್ರಕರಣಗಳಲ್ಲಿ ಶೇ.50ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಕಂಡುಬರುತ್ತಿವೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಡೆಂಗ್ಯೂ ಕಡಿಮೆಯಾಗಬಹುದು. ಆದರೆ ಬೆಂಗಳೂರಿನಲ್ಲಿ ಇದು ಹೆಚ್ಚಾಗಬಹುದು. ಹೀಗಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ಹತೋಟಿಗೆ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆ ಕರೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಡೆಂಗ್ಯೂ ಡೆತ್ ಆಡಿಟ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿರುವ ಆರೋಗ್ಯ ಸಚಿವರು, ಯಾವುದನ್ನು ಮುಚ್ಚಿಡುವುದು ಬೇಡ. ಡೆಂಗ್ಯೂ ಡೆತ್‌ಗಳಾಗಿದ್ದರೆ ಅದನ್ನು ಡೆಂಗ್ಯೂ ಡೆತ್ ಎಂದೇ ವರದಿ ಸಲ್ಲಿಸುವಂತೆ ಸಚಿವ ದಿನೇಶ್ ಗುಂಡೂರಾವ್‌ ಸೂಚಿಸಿದರು.

Continue Reading

ಕರ್ನಾಟಕ

Fortis Hospital: ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಲಿವರ್‌ ದಾನ!

Fortis Hospital: ಯಕೃತ್‌ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ತನ್ನ ತಾಯಿಗೆ ಸ್ವತಃ ಮಗನೇ ಯಕೃತ್‌ ಭಾಗವನ್ನು ದಾನ ಮಾಡಿದ್ದಾನೆ. ಬೆಂಗಳೂರಿನ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಕಿಶೋರ್ ಜಿ.ಎಸ್‌.ಬಿ. ಮತ್ತು ಡಾ. ಪಿಯೂಷ್ ಸಿನ್ಹಾ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಬಿ.ಎಸ್. ರವೀಂದ್ರ ಅವರ ತಂಡ, ಈ ಮಹಿಳೆಗೆ ಯಶಸ್ವಿಯಾಗಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

VISTARANEWS.COM


on

Successful liver transplant surgery at Fortis Hospital
Koo

ಬೆಂಗಳೂರು: ಯಕೃತ್‌ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ತನ್ನ ತಾಯಿಗೆ ಸ್ವತಃ ಮಗನೇ ಯಕೃತ್‌ ಭಾಗವನ್ನು ದಾನ ಮಾಡುವ ಮೂಲಕ ಮಹಿಳೆಗೆ ಯಶಸ್ವಿಯಾಗಿ ಯಕೃತ್‌ ಕಸಿ (Fortis Hospital) ನಡೆಸಲಾಗಿದೆ. ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಕಿಶೋರ್ ಜಿ.ಎಸ್‌.ಬಿ. ಮತ್ತು ಡಾ. ಪಿಯೂಷ್ ಸಿನ್ಹಾ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಬಿ.ಎಸ್. ರವೀಂದ್ರ ಅವರ ತಂಡ ಯಶಸ್ವಿಯಾಗಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಫೋರ್ಟಿಸ್‌ ಆಸ್ಪತ್ರೆಯ ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಸರ್ಜನ್‌ ಡಾ. ಕಿಶೋರ್ ಜಿ.ಎಸ್‌.ಬಿ. ಮತ್ತು ಡಾ. ಪಿಯೂಷ್ ಸಿನ್ಹಾ ಅವರು ಮಾತನಾಡಿ, 2021 ರಲ್ಲಿ 52 ವರ್ಷದ ಲೀಲಾ ಎಂಬುವವರು ಕಾಮಾಲೆ ಕಾಯಿಲೆಗೆ ತುತ್ತಾದರು. ಇದರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಯಿತು. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ದೀರ್ಘಕಾಲದಿಂದ ಯಕೃತ್‌ನ ಕಾಯಿಲೆ ಇರುವ ಕಾರಣ ಅವರ ಯಕೃತ್‌ನಲ್ಲಿ ದ್ರವದ ಶೇಖರಣೆಯಾಗಿ ಯಕೃತ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಅವರ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿತ್ತು. ಅವರನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದ ಬಳಿಕ ಪಿತ್ತರಸ ನಾಳದಲ್ಲಿ ಕಲ್ಲು ಇರುವುದು ಪತ್ತೆಯಾಯಿತು. ಗ್ಯಾಸ್ಟ್ರೋ ತಂಡವು ಈ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಆಕೆಗೆ ಯಕೃತ್‌ನ ಕ್ಯಾನ್ಸರ್‌ ಪ್ರಾರಂಭಿಕ ಹಂತದಲ್ಲಿರುವುದು ಸಹ ತಿಳಿದುಬಂತು. ಹೀಗಾಗಿ ಆಕೆಗೆ ಲಿವರ್ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕೂಡಲೇ ಯಕೃತ್‌ ಕಸಿ ಅಗತ್ಯತೆ ಬಿತ್ತು. ಸ್ವತಃ 31 ವರ್ಷದ ಮಗನೇ ತನ್ನ ಯಕೃತ್‌ನ ಭಾಗವನ್ನು ದಾನ ಮಾಡಲು ಮುಂದಾದರು. ಸಕಾಲದಲ್ಲಿ ಯಕೃತ್‌ ಸಿಕ್ಕ ಪರಿಣಾಮ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ವಿವರಿಸಿದರು.

ದಾನಿಯ ಯಕೃತ್ತಿನ ಉಳಿದ ಭಾಗವು ತಕ್ಷಣವೇ ಪುನರುತ್ಪಾದಿಸಲು ಪ್ರಾರಂಭಿಸುತ್ತದೆ. ಆರರಿಂದ ಎಂಟು ವಾರಗಳಲ್ಲಿ ಅದರ ಸಾಮಾನ್ಯ ಗಾತ್ರಕ್ಕೆ ಯಕೃತ್‌ ಬೆಳೆಯುತ್ತದೆ. ಹೆಚ್ಚಿನ ಯಕೃತ್‌ ದಾನಿಗಳು ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದರು.

ಇದನ್ನೂ ಓದಿ: Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ನಿರ್ದೇಶಕ ಡಾ. ಬಿ.ಎಸ್. ರವೀಂದ್ರ ಮಾತನಾಡಿ, ಯಕೃತ್ತಿನ ಕ್ಯಾನ್ಸರ್ ಅನ್ನು CT ಸ್ಕ್ಯಾನ್ ಸ್ಕ್ರೀನಿಂಗ್‌ನಲ್ಲಿ ಪತ್ತೆ ಹಚ್ಚಲಾಯಿತು. ಕೊಲಾಂಜೈಟಿಸ್‌ನೊಂದಿಗೆ ಸಿರೋಟಿಕ್ ರೋಗಿಗೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿ, ಜತೆಗೆ ಸಾಮಾನ್ಯ ಪಿತ್ತರಸ ನಾಳದಿಂದ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದು ಸ್ಟೆಂಟ್‌ಗಳನ್ನು ಇರಿಸಲು ಸಾಧ್ಯವಾಯಿತು ಎಂದು ವಿವರಿಸಿದರು.

Continue Reading

ಆರೋಗ್ಯ

Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

Home Remedies for Dengue: ಡೆಂಗ್ಯು ಜ್ವರ ಎಲ್ಲೆಡೆ ಹರಡಿದೆ. ಈ ಸೋಂಕು ಬಂದಾಗ ಕುಸಿಯುವ ಪ್ಲೇಟ್‌ಲೆಟ್‌ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೇ ಕೆಲವೊಮ್ಮೆ ಸವಾಲಾಗಿಬಿಡುತ್ತದೆ. ಇಂಥ ಸಮಯದಲ್ಲಿ ಸತ್ವಯುತ ಆಹಾರಗಳನ್ನು ಸೇವಿಸುವುದು ಅತ್ಯಗತ್ಯ. ಎಂಥಾ ಆಹಾರಗಳಿಂದ ನಾವು ಪ್ಲೇಟ್‌ಲೆಟ್‌ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಿಕೊಳ್ಳಬಹುದು?

VISTARANEWS.COM


on

Home Remedies for Dengue
Koo

ಡೆಂಗ್ಯು ಎಲ್ಲೆಡೆ (Home Remedies for Dengue) ಹರಡುತ್ತಿದೆ. ನಮ್ಮನೇಲಿ ಸೊಳ್ಳೆ ಇಲ್ಲ, ಸೊಳ್ಳೆ ಕಚ್ಚಿದ್ದೇ ನೆನಪಿಲ್ಲ ಎನ್ನುವವರನ್ನೂ ಬಿಡದೆ ಈ ರೋಗ ಬಾಧಿಸುತ್ತಿದೆ. ರೋಗದ ಎಲ್ಲಾ ಲಕ್ಷಣಗಳ ಜೊತೆಗೆ, ಆತಂಕ ಹುಟ್ಟಿಸುವ ಇನ್ನೂ ಒಂದು ಲಕ್ಷಣವೆಂದರೆ ರಕ್ತದಲ್ಲಿನ ಪ್ಲೇಟ್‌ಲೆಟ್‌ ಕುಸಿಯುವುದು. ಈ ಆತಂಕ ಅತಿಯಾಗದಂತೆ ಜಾಗ್ರತೆ ಮಾಡಿದರೆ, ರೋಗಿ ಅಪಾಯಕ್ಕೆ ಸಿಲುಕದಂತೆ ಕಾಪಾಡಿಕೊಳ್ಳಬಹುದು. ಪ್ಲೇಟ್‌ಲೆಟ್‌ ಕುಸಿಯದಂತೆ ತಡೆದು, ಈಗಾಗಲೇ ಇಳಿದಿರುವ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಆಹಾರದ ಮೂಲಕ ಪ್ರಯತ್ನಿಸುವುದು ಸರಿಯಾದ ಕ್ರಮ. ಪ್ಲೇಟ್‌ಲೆಟ್‌ಗಳ ಸಂಖ್ಯೆ ತ್ವರಿತವಾಗಿ ಹೆಚ್ಚುವಂತೆ ಮಾಡುವ ಆಹಾರಗಳು ಯಾವುವು?

ನೀರು

ಎಲ್ಲಕ್ಕಿಂತ ಮುಖ್ಯವಾದ ಭಾಗವಿದು. ಜ್ವರ ಕಾಣಿಸಿಕೊಂಡ 3-4 ದಿನಗಳ ನಂತರ ದಿಢೀರನೆ ರಕ್ತದೊತ್ತಡ ಕುಸಿಯದಂತೆ ಕಾಪಾಡುವಲ್ಲಿ ಇದು ಮಹತ್ವದ್ದು. ಜೊತೆಗೆ, ಪ್ಲೇಟ್‌ಲೆಟ್‌ ಹೆಚ್ಚಿಸುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ರಸಭರಿತ ಹಣ್ಣುಗಳು, ಎಳನೀರು, ಹರ್ಬಲ್‌ ಚಹಾ, ಕಷಾಯಗಳು, ಸೂಪ್‌, ಬೇಳೆಯ ಕಟ್ಟು, ಅಂಬಲಿಗಳು ಮುಂತಾದ ಯಾವುದೇ ದ್ರವಾಹಾರವನ್ನು ಹೆಚ್ಚಾಗಿ ಸೇವಿಸಿ. ಜ್ವರದಿಂದ ಶೀಘ್ರ ಚೇತರಿಸಿಕೊಳ್ಳಲು ಸಹ ಇದು ನೆರವಾಗುತ್ತದೆ.

ವಿಟಮಿನ್‌ ಸಿ

ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್‌ ಸಿ ಇರುವಂಥ ಆಹಾರಗಳು ಈಗ ಹೆಚ್ಚಾಗಿ ಬೇಕು. ಸಿ ಜೀವಸತ್ವ ಅಧಿಕವಾಗಿರುವ ಹಣ್ಣು ಮತ್ತು ತರಕಾರಿಗಳು ಆಹಾರದಲ್ಲಿ ಇದ್ದಷ್ಟೂ ಚೇತರಿಕೆ ಶೀಘ್ರವಾಗಿ ಆಗುತ್ತದೆ. ಕಿತ್ತಳೆ, ಮೂಸಂಬಿ, ನಿಂಬೆರಸ, ನೆಲ್ಲಿಕಾಯಿ, ಪಪ್ಪಾಯಿ, ಕಿವಿ ಹಣ್ಣು, ಬೆರ್ರಿಗಳೆಲ್ಲ ಆಹಾರದಲ್ಲಿ ಇರಲಿ. ಇವನ್ನೆಲ್ಲ ತಿನ್ನುವುದಕ್ಕೆ ಕಷ್ಟವಾದರೆ ಸ್ಮೂದಿ ಮಾಡಿಕೊಳ್ಳಿ. ಆದರೆ ಪ್ಲೇಟ್‌ಲೆಟ್‌ ಹೆಚ್ಚಿಸುವಲ್ಲಿ ಇವು ತೀರಾ ಅಗತ್ಯ ಎಂಬುದನ್ನು ಮರೆಯಬೇಡಿ.

Papaya leaf juice
Sweet pumpkin seed

ಪಪ್ಪಾಯ ಎಲೆಯ ರಸ

ಪಪ್ಪಾಯ ಹಣ್ಣುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದಂತೂ ಹೌದು. ಜೊತೆಗೆ, ಪಪ್ಪಾಯ ಎಲೆಗಳ ರಸ ಈ ಹೊತ್ತಿನಲ್ಲಿ ಸಂಜೀವಿನಿ ಎನಿಸಬಲ್ಲದು. ಪ್ಲೇಟ್‌ಲೆಟ್‌ ಸಂಖ್ಯೆಯನ್ನು ಹೆಚ್ಚಿಸುವ ಅಪೂರ್ಣ ಸಾಮರ್ಥ್ಯ ಈ ಎಲೆಗಳಿಗಿದೆ. ಹಾಗೆಯೇ ಕಿವಿ ಹಣ್ಣುಗಳ ಸೇವನೆಯೂ ಅಗತ್ಯಗಳಲ್ಲಿ ಒಂದು. ಪಪ್ಪಾಯ ಎಲೆಗಳು ರುಚಿಯಲ್ಲಿ ಕಹಿಯಾದ್ದರಿಂದ ಹಲವರಿಗೆ ಇದನ್ನು ಸೇವಿಸಲು ಆಗದಿರಬಹುದು. ಅದರಲ್ಲೂ ಜ್ವರದೊಂದಿಗೆ ವಾಂತಿಯ ಲಕ್ಷಣಗಳಿದ್ದರೆ, ಇದರ ಸೇವನೆ ಇನ್ನೂ ಕಷ್ಟ. ಹಾಗಾಗಿಯೇ ಪಪ್ಪಾಯ ಎಲೆಯ ಮಾತ್ರೆಗಳು ಸಹ ಲಭ್ಯವಿದ್ದು, ಈ ಬಗ್ಗೆ ವೈದ್ಯರಲ್ಲಿ ಮಾತನಾಡಿ.

ಕಬ್ಬಿಣಯುಕ್ತ ಆಹಾರಗಳು

ಆರೋಗ್ಯವಂತ ರಕ್ತಕಣಗಳನ್ನು ಉತ್ಪಾದನೆ ಮಾಡುವಲ್ಲಿ ಕಬ್ಬಿಣದಂಶ ಇರುವ ಆಹಾರಗಳು ಅತ್ಯವಶ್ಯ. ಹಾಗಾಗಿ ಹಸಿರು ಸೊಪ್ಪುಗಳು, ಕಾಳುಗಳು, ಇಡೀ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ನಿಜ, ಜ್ವರ ಸುಡುತ್ತಿರುವಾಗ ಇಷ್ಟೆಲ್ಲವನ್ನೂ ತಿನ್ನಲು ಯಾರಿಗೂ ಸಾಧ್ಯವಾಗುವುದಿಲ್ಲ. ಸೇರಿದಷ್ಟೇ ತಿನ್ನಿ, ಅದರಲ್ಲಿ ಸತ್ವಯುತವಾದ್ದನ್ನೇ ತಿನ್ನಿ.

Sweet pumpkin seed

ಕುಂಬಳಕಾಯಿ ಬೀಜ

ಈ ಸಣ್ಣ ಬೀಜಗಳಲ್ಲಿ ಮೆಗ್ನೀಶಿಯಂ, ಕಬ್ಬಿಣ ಮತ್ತು ಸತುವಿನ ಅಂಶಗಳು ಸಹಜವಾಗಿಯೇ ಹೆಚ್ಚಾಗಿವೆ. ಹಾಗಾಗಿ ಇವುಗಳನ್ನು ಇದ್ದಂತೆಯೇ ಅಗಿದು ತಿನ್ನಬಹುದು, ಪುಡಿ ಮಾಡಿ ಬೇರೆಯ ಖಾದ್ಯಗಳೊಂದಿಗೆ ಸೇರಿಸಿಕೊಳ್ಳಬಹುದು, ಚಿಟಿಕೆ ಉಪ್ಪು ಹಾಕಿ ಹುರಿದು ಸೇವಿಸಬಹುದು. ಪ್ಲೇಟ್‌ಲೆಟ್‌ ಹೆಚ್ಚಿಸುವಲ್ಲಿ ಇಂಥ ಸೂಪರ್‌ಫುಡ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಕೆಫೇನ್‌, ಆಲ್ಕೋಹಾಲ್‌

ಬೇಕಾದ ಆಹಾರಗಳೇನು ಎಂಬುದನ್ನು ತಿಳಿದಿದ್ದೇವೆ. ಹಾಗೆಯೇ ಬೇಡದ್ದೇನು ಎಂಬುದನ್ನೂ ಅರ್ಥ ಮಾಡಿಕೊಳ್ಳುವುದು ಮುಖ್ಯ. ಯಾವುದೇ ಸಂಸ್ಕರಿತ ಆಹಾರಗಳನ್ನು ಹತ್ತಿರ ಸೇರಿಸಬೇಡಿ. ಸಕ್ಕರೆಯನ್ನು ಮಿತಗೊಳಿಸಿ. ಕರಿದ, ಜಿಡ್ಡಿನ ಆಹಾರಗಳು ಈ ಸಮಯಕ್ಕಲ್ಲ. ದ್ರವಾಹಾರ ಬೇಕು ಎನ್ನುವ ನೆವ ಮಾಡಿಕೊಂಡು ಕಾಫಿ, ಟೀ, ಸೋಡಾದಂಥವನ್ನು ಕುಡಿದರೆ ಆರೋಗ್ಯ ಹಳ್ಳ ಹಿಡಿಯುತ್ತದೆ, ಜೋಕೆ. ಆಲ್ಕೋಹಾಲ್‌ ಈವರೆಗೆ ಇಲ್ಲದ ಸಮಸ್ಯೆಗಳನ್ನೂ ಹತ್ತಿರ ತರಬಹುದು.

ಇದನ್ನೂ ಓದಿ: Brain Eating Amoeba: ಮೆದುಳು ತಿನ್ನುವ ಅಮೀಬಾದಿಂದ ನಮಗೂ ಅಪಾಯ ಇದೆಯೆ?

ವಿಶ್ರಾಂತಿ

ಚೆನ್ನಾಗಿ ನಿದ್ದೆ ಮಾಡಿ, ಡೆಂಗು ಜ್ವರದಿಂದ ಬಳಲಿರುವ ದೇಹಕ್ಕೆ ವಿಪರೀತ ಎನ್ನುವಷ್ಟು ವಿಶ್ರಾಂತಿ ಬೇಕು. ಬಾಯಿಗೆ ಸೇರಿದಷ್ಟು ಸತ್ವಯುತ ಆಹಾರ ಸೇವಿಸಿ, ದ್ರವಾಹಾರ ಹೆಚ್ಚಿದ್ದಷ್ಟೂ ಅನುಕೂಲ. ಸೋಂಕು ತೀವ್ರವಾಗದಂತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ಅರ್ಧ ರೋಗವೇ ಕಡಿಮೆಯಾದಂತೆ. ಇಷ್ಟಾಗಿಯೂ ಲಕ್ಷಣಗಳು ಮುಂದುವರಿದರೆ ತ್ವರಿತವಾಗಿ ವೈದ್ಯರಲ್ಲಿ ತೆರಳಿ.

Continue Reading

ಆರೋಗ್ಯ

Tips For Teenager Parents: ಉತ್ತಮ ಪೋಷಕರಾಗಿ; ಹರೆಯದ ಮಕ್ಕಳನ್ನು ಅರ್ಥ ಮಾಡಿಕೊಳ್ಳಿ!

ಹದಿಹರೆಯದವರು ಗೌರವಿಸಲು, ಕೇಳಲು, ಮೌಲ್ಯಯುತ ಮತ್ತು ಮೆಚ್ಚುಗೆ ಪಡೆಯಲು ಬಯಸುತ್ತಾರೆ. ಒಳ್ಳೆಯ ಪೋಷಕರಾಗಬೇಕು (Tips For Teenager Parents) ಎಂದು ಬಯಸುವವರು ಹರೆಯದ ಮಕ್ಕಳನ್ನು ಪೋಷಿಸಲು ಪಾಲನೆಯ ಶೈಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧರಾಗಿರಬೇಕು. ಹದಿಹರೆಯದವರಿಗೆ ಮಕ್ಕಳಿಗೆ ಒಳ್ಳೆಯ ಪೋಷಕರಾಗಲು ಸಹಾಯ ಮಾಡುವ ಕೆಲವು ಅಂಶಗಳು ಇಲ್ಲಿವೆ.

VISTARANEWS.COM


on

By

Tips For Teenager Parents
Koo

ಪುಟ್ಟ ಮಕ್ಕಳನ್ನು (small kids) ಪಾಲನೆ ಮಾಡುವುದು ಪೋಷಕರಿಗೆ (Tips For Teenager Parents) ಎಷ್ಟು ಕಷ್ಟವೋ ಹದಿಹರೆಯದ ಮಕ್ಕಳನ್ನು (Teenager) ಸಂಭಾಳಿಸುವುದೂ ಅಷ್ಟೇ ಕಠಿಣವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಸರಿಯಾದ ಮಾರ್ಗದರ್ಶನ ದೊರೆಯದೇ ಇದ್ದರೆ ಹರೆಯದ ಮಕ್ಕಳು ಹಾದಿ ತಪ್ಪುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಹರೆಯದ ವಯಸ್ಸಿನ ಮಕ್ಕಳನ್ನು ಹೇಗೆ ತಿದ್ದುವುದು, ಅವರಿಗೆ ಹೇಗೆ ಸರಿಯಾದ ಮಾರ್ಗದರ್ಶನ ಮಾಡುವುದು ಎಂಬುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ.

ಹರೆಯದ ಮಕ್ಕಳಿಗೆ ಹೆಚ್ಚು ಶಿಸ್ತು ಬಂಧನ ಎಂದೆನಿಸಿದರೆ, ಹೆಚ್ಚು ಸ್ವಾತಂತ್ರ್ಯ ಅಪಾಯ ತೊಂದೊಡ್ಡುವ ಆತಂಕವಿರುತ್ತದೆ. ಹೀಗಾಗಿ ಹರೆಯದ ಮಕ್ಕಳೊಡನೆ ಪೋಷಕರು ಹೇಗಿರಬೇಕು ಎಂಬುದು ಅರಿತುಕೊಳ್ಳಬೇಕು.

ಹದಿಹರೆಯದವರನ್ನು ಬೆಳೆಸುವುದು ಸಾಕಷ್ಟು ಸವಾಲಿನ ಕಾರ್ಯವಾಗಿರುತ್ತದೆ. ಹೆಚ್ಚಿನ ಪೋಷಕರು ತಮ್ಮ ಹದಿಹರೆಯದ ಮಕ್ಕಳೊಂದಿಗೆ ಉತ್ತಮ ಮತ್ತು ಆರೋಗ್ಯಕರ ಬಾಂಧವ್ಯವನ್ನು ಹಂಚಿಕೊಳ್ಳುವುದು ಅವರು ಸಂತೋಷದಿಂದ ಸಹಬಾಳ್ವೆ ನಡೆಸಲು ಉತ್ತಮ ಮಾರ್ಗವಾಗಿದೆ ಎಂದು ಅರಿತುಕೊಳ್ಳುತ್ತಾರೆ. ಇಲ್ಲಿ ಇಬ್ಬರೂ ಪರಸ್ಪರ ಅಭಿಪ್ರಾಯಗಳನ್ನು ಹೇರದೇ ಇರಲು ಪ್ರಯತ್ನಿಸುತ್ತಾರೆ.

ಹರೆಯದವರಿಗೆ ಒಳ್ಳೆಯ ತಾಯಿಯಾಗಲು ಬಯಸಿದರೆ ಅವರು ನಿಮ್ಮನ್ನು ಮತ್ತೆ ಇಷ್ಟಪಡಬೇಕೆಂದು ಬಯಸಿದರೆ ನೀವು ಅವರ ಆಯ್ಕೆಗಳನ್ನು ಗೌರವಿಸಲು ಕಲಿಯಬೇಕು. ಅವರ ಬಗ್ಗೆ ಸಂಪೂರ್ಣ ನಿರ್ಧಾರವನ್ನು ನೀವು ತೆಗೆದುಕೊಳ್ಳಬಾರದು.

ಹದಿಹರೆಯದವರು ಗೌರವಿಸಲು, ಕೇಳಲು, ಮೌಲ್ಯಯುತ ಮತ್ತು ಮೆಚ್ಚುಗೆ ಪಡೆಯಲು ಬಯಸುತ್ತಾರೆ.ಒಳ್ಳೆಯ ಪೋಷಕರಾಗಬೇಕು ಎಂದು ಬಯಸುವವರು ಹರೆಯದ ಮಕ್ಕಳನ್ನು ಪೋಷಿಸಲು ಪಾಲನೆಯ ಶೈಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧರಾಗಿರಬೇಕು. ಹದಿಹರೆಯದವರಿಗೆ ಮಕ್ಕಳಿಗೆ ಒಳ್ಳೆಯ ಪೋಷಕರಾಗಲು ಸಹಾಯ ಮಾಡುವ ಕೆಲವು ಅಂಶಗಳು ಇಲ್ಲಿವೆ.

Tips For Teenager Parents
Tips For Teenager Parent


ಗೌಪ್ಯತೆಯನ್ನು ಕಾಪಾಡಿ

ಹದಿಹರೆಯದ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಗೌಪ್ಯವಾಗಿ ಇಡಲು ಬಯಸುತ್ತಾರೆ. ಬಹಳಷ್ಟು ಪೋಷಕರು ಇದನ್ನು ವಿರೋಧಿಸುತ್ತಾರೆ. ಆದರೆ ಹದಿಹರೆಯದವರೊಂದಿಗೆ ಆರೋಗ್ಯಕರ ಬಾಂಧವ್ಯವನ್ನು ಹಂಚಿಕೊಳ್ಳಲು ಬಯಸಿದರೆ ಅವರ ಆಯ್ಕೆಗಳು ಮತ್ತು ಗಡಿಗಳನ್ನು ಗೌರವಿಸಬೇಕು ಮತ್ತು ಅವರಿಗೆ ಗೌಪ್ಯತೆಗೆ ಅವಕಾಶ ಕೊಡಬೇಕು. ಇದನ್ನು ಅವರು ಖಂಡಿತವಾಗಿ ಇಷ್ಟಪಡುತ್ತಾರೆ.

ಮನಸ್ಸನ್ನು ಅರ್ಥ ಮಾಡಿಕೊಳ್ಳಿ

ಹರೆಯದವರ ಪ್ರತಿಯೊಂದು ಕೆಲಸವನ್ನು ಪ್ರಶ್ನಿಸುವುದು, ಮೇಲ್ವಿಚಾರಣೆ ಮಾಡುವುದು ಅವರಿಗೆ ನಿಮ್ಮಿಂದ ಎಲ್ಲವನ್ನು ಮುಚ್ಚಿಡುವಂತೆ ಮಾಡಬಹುದು. ಹದಿಹರೆಯದ ಮಕ್ಕಳನ್ನು ಕೇಳಿ, ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅನಗತ್ಯವೆಂದು ನಿಮಗನಿಸುವ ವಿಚಾರಗಳನ್ನು ತಿಳಿಸಿ. ಆದರೆ ಅದನ್ನು ಅವರ ಮೇಲೆ ಹೇರಲು ಹೋಗಬೇಡಿ. ಹದಿಹರೆಯದವರಿಗೆ ಕೊಂಚ ಸ್ವಾತಂತ್ರ್ಯ ನೀಡಿ.

ಹರೆಯದವರನ್ನು ಗೌರವಿಸಿ

ಹದಿಹರೆಯದವರು ತಮ್ಮೊಂದಿಗೆ ಯಾವ ರೀತಿಯ ಸಂಬಂಧವನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಪೋಷಕರು ಗುರುತಿಸುವುದು ಮುಖ್ಯವಾಗಿದೆ. ಹದಿಹರೆಯದವರು ನಿಮ್ಮೊಂದಿಗೆ ಸ್ನೇಹಿತರಾಗಲು ಬಯಸಬಹುದು, ಆದರೆ ಅವರು ತಮ್ಮ ಶಾಲೆ ಮತ್ತು ಇತರ ಸ್ನೇಹಿತರ ಬಗ್ಗೆ ಎಲ್ಲವನ್ನೂ ಹೇಳಲು ಬಯಸುವುದಿಲ್ಲ. ಪೋಷಕರಾಗಿ ನೀವು ಅವರೊಂದಿಗೆ ಸರಿಯಾಗಿ ವರ್ತಿಸಬೇಕು. ಹದಿಹರೆಯದವರ ಆಯ್ಕೆಗಳನ್ನು ಗೌರವಿಸಿ. ಅವರೊಂದಿಗೆ ಆರಾಮವಾಗಿ ಚರ್ಚಿಸಿ. ಇದು ನಿಮ್ಮ ಮತ್ತು ಅವರ ಸಂಬಂಧವನ್ನು ಆರೋಗ್ಯಕರಗೊಳಿಸುತ್ತದೆ.

ಸಂಭಾಷಣೆಗಳನ್ನು ನಡೆಸಿ

ಪೋಷಕರೊಂದಿಗೆ ಹರೆಯದ ಮಕ್ಕಳ ಭಿನ್ನಾಭಿಪ್ರಾಯ ಬರುವುದು ಸಹಜ. ಕೆಲವು ವಿಷಯಗಳ ಬಗ್ಗೆ ಸಮಯ, ಸಂದರ್ಭ ನೋಡಿ ಅವರೊಂದಿಗೆ ಸಂಭಾಷಣೆಗಳನ್ನು ನಡೆಸಿ. ಹದಿಹರೆಯದ ಮಗುವನ್ನು ಬೆಳೆಸುವುದು ಎಂದರೆ ಅವರೊಂದಿಗೆ ಹೆಚ್ಚು ಮುಕ್ತ ಮತ್ತು ಪ್ರಾಮಾಣಿಕವಾಗಿರಬೇಕು. ಹರೆಯದ ಮಕ್ಕಳೊಂದಿಗೆ ಮಾತನಾಡುವಾಗ ಮುಕ್ತ ಮನಸ್ಸಿನವರಾಗಿರಬೇಕು.

Tips For Teenager Parent
Tips For Teenager Parent


ಹೊಸ ವಿಷಯಗಳನ್ನು ಕಲಿಯಿರಿ

ಪೋಷಕರು ಮಾತ್ರ ತಮ್ಮ ಹರೆಯದ ಮಕ್ಕಳೊಂದಿಗೆ ತಮ್ಮ ಕಲಿಕೆಯನ್ನು ಹಂಚಿಕೊಳ್ಳಬಹುದು ಎಂಬುದು ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ. ಈಗ ಮಕ್ಕಳ ಆಲೋಚನೆಗಳು ನಮಗಿಂತ ವೇಗವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ತಮ್ಮ ಮಗುವಿನಿಂದ ಹೊಸ ವಿಷಯಗಳನ್ನು ಕಲಿಯಲು ನೀವು ಆಸಕ್ತರಾಗಿರಬೇಕು. ಹದಿಹರೆಯದವರು ವಿಭಿನ್ನ ಅಭಿರುಚಿಯನ್ನು ಹೊಂದಿರಬಹುದು. ಹೀಗಾಗಿ ಅವರೊಂದಿಗೆ ಮುಕ್ತ ಸಂಭಾಷಣೆಗಳನ್ನು ನಡೆಸಿ. ಅಲ್ಲಿ ಪರಸ್ಪರ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಇದು ನಿಮ್ಮ ಹದಿಹರೆಯದ ಮಕ್ಕಳೊಂದಿಗೆ ನಿಮ್ಮ ಬಾಂಧವ್ಯವನ್ನು ಬಲಪಡಿಸುವುದಲ್ಲದೆ ಇತರ ವಿಷಯಗಳ ಜೊತೆಗೆ ಅವರ ವ್ಯಕ್ತಿತ್ವ, ಜೀವನ, ನಡವಳಿಕೆಯ ಒಳನೋಟವನ್ನು ನಿಮಗೆ ಒದಗಿಸುತ್ತದೆ.

ಇದನ್ನೂ ಓದಿ: Allergies During Monsoon: ಮಳೆಗಾಲದಲ್ಲಿ ಅಲರ್ಜಿ ಸಮಸ್ಯೆಯಿಂದ ಪಾರಾಗುವುದು ಹೇಗೆ?

ಆಲಿಸಿ, ಬೋಧಿಸಬೇಡಿ

ಹದಿಹರೆಯದವರನ್ನು ಬೆಳೆಸಲು ಸಾಕಷ್ಟು ತಾಳ್ಮೆ ಬೇಕಾಗಬಹುದು. ಅವರು ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ನಿಮ್ಮ ಬಳಿಗೆ ಬಂದಾಗ ಅವರು ನಿಮ್ಮಿಂದ ಬಯಸುವುದು ತಾಳ್ಮೆಯ ವಿಚಾರಣೆಯನ್ನು. ಹೀಗಾಗಿ ಹದಿಹರೆಯದವರನ್ನು ಬೆಳೆಸುವಾಗ ಪೋಷಕರು ತಿಳಿದಿರಬೇಕಾದ ಅತ್ಯಂತ ನಿರ್ಣಾಯಕ ಅಂಶವೆಂದರೆ ನಿಮ್ಮ ಮಗುವಿಗೆ ಏನು ತೊಂದರೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರ ಮಾತನ್ನು ಆಲಿಸಿ, ಆದರೆ ಅವರಿಗೆ ಯಾವುದೇ ಬೋಧನೆ ಮಾಡಬೇಡಿ. ಅವರೊಂದಿಗೆ ಮುಕ್ತ ಮನಸ್ಸಿನಿಂದ ಮಾತನಾಡಿ.

Continue Reading
Advertisement
Paris Olympics 2024
ಕ್ರೀಡೆ3 mins ago

Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

PM Narendra Modi Live
ದೇಶ9 mins ago

PM Narendra Modi Live: ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ, ವೀರ ಯೋಧರಿಗೆ ಗೌರವ ನಮನ-ಲೈವ್‌ ಇಲ್ಲಿ ವೀಕ್ಷಿಸಿ

police firing hubli
ಕ್ರೈಂ19 mins ago

Police Firing: ದರೋಡೆ, ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ

Actor Yash Case Against Toxic Movie Producers For Building A Set On Forest Land
ಸ್ಯಾಂಡಲ್ ವುಡ್28 mins ago

Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

Women's Asia Cup
ಕ್ರೀಡೆ40 mins ago

Women’s Asia Cup: ಇಂದು ಸೆಮಿಫೈನಲ್‌ ಕಾದಾಟ: ಬಾಂಗ್ಲಾ ಸವಾಲಿಗೆ ಭಾರತ ಸಜ್ಜು

murder in PG koramangala
ಕ್ರೈಂ44 mins ago

Murder In PG: ಕೃತಿ ಕುಮಾರಿಗೆ ಮನಬಂದಂತೆ ಇರಿದ ಪಾತಕಿ, ನೋಡ್ತಾ ಇದ್ರೂ ಸಹಾಯಕ್ಕೆ ಬಾರದ ಯುವತಿಯರು

Actor Darshan wife Vijayalakshmi Darshan Visit Kollur Temple
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ಗಾಗಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ವಿಜಯಲಕ್ಷ್ಮಿ!

tumkur news temple mall
ತುಮಕೂರು1 hour ago

Tumkur News: ದೇವಸ್ಥಾನ ಕೆಡವಿ ಮಾಲ್‌ ಕಟ್ಟಲು ಮುಂದಾದ ಪಾಲಿಕೆ, ಹಿಂದು ಸಂಘಟನೆಗಳ ವಿರೋಧ

Paris Olympics
ಕ್ರೀಡೆ1 hour ago

Paris Olympics: ಇಂದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ?

Viral video
ವೈರಲ್ ನ್ಯೂಸ್1 hour ago

Viral Video: ಲಿಫ್ಟ್‌ನಲ್ಲಿ ಯುವಕನ ಕೈಯಲ್ಲಿದ್ದ ಲೀಥಿಯಂ ಬ್ಯಾಟರಿ ಬ್ಲಾಸ್ಟ್‌; ಅಬ್ಬಾ ಎಂಥಾ ಭೀಕರ ದೃಶ್ಯ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ17 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್20 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ21 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ22 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌