Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು! - Vistara News

ಆರೋಗ್ಯ

Health Tips: ಬೇಸಿಗೆಯ ಆಹಾರದಲ್ಲಿ ನಿಮಗೆ ಗೊತ್ತಿಲ್ಲದೆ ಈ ತಪ್ಪುಗಳಾಗಬಹುದು!

ಬೇಸಿಗೆಯಲ್ಲಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ, ನಮಗರಿವಿಲ್ಲದಂತೆ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅಂಥ ತಪ್ಪುಗಳನ್ನು ನಿವಾರಿಸಿಕೊಂಡರೆ ಬೇಸಿಗೆಯಲ್ಲಿ ಆರೋಗ್ಯ ಹಿತ.

VISTARANEWS.COM


on

tender coconut
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಹಳಷ್ಟು ಮಂದಿಗೆ ಕೆಲವು ಬಗೆಯ ಆಹಾರಗಳು‌ (summer foods) ಹಾಗೂ ಹಣ್ಣುಹಂಪಲುಗಳನ್ನು‌ ಬೇಸಿಗೆಯಲ್ಲಿ‌ ನಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ‌ಸೇವಿಸಬೇಕು‌ ಎಂಬುದರಲ್ಲಿ‌ ನಂಬಿಕೆಯಿದೆ. ಆಹಾರದ ಬಗೆಗೆ ನಾವು ಇಟ್ಟುಕೊಂಡಿರುವ ನಂಬಿಕೆಗಳು ಕೆಲವೊಮ್ಮೆ ಸತ್ಯವೂ ಆಗಿರಬಹುದು, ಕೆಲವೊಮ್ಮೆ ಆ ನಂಬಿಕೆಯಲ್ಲಿ‌ ಹುರುಳೇ ಇಲ್ಲದೆಯೂ ಇರಬಹುದು. ಹಾಗಾದರೆ ಬನ್ನಿ‌ ನಮ್ಮ‌ ನಂಬಿಕೆಯ ಸತ್ಯಾಸತ್ಯತೆಯನ್ನೊಮ್ಮೆ ಒರೆಗೆ ಹಚ್ಚಿ ನೋಡೋಣ.

1. ಕೋಲ್ಡ್ ಡ್ರಿಂಕ್‌ಗಳು: ಕಾರ್ಬೋನೇಟೆಡ್ ಡ್ರಿಂಕ್‌ಗಳ ಬಗ್ಗೆ ಮಾತ್ರ ಇಲ್ಲಿ ಹೇಳುತ್ತಿಲ್ಲ. ಎಲ್ಲ ಬಗೆಯ ತಾಜಾ‌ ಜ್ಯೂಸ್‌ಗಳೂ, ಸ್ಮೂದಿಗಳೂ, ಮಿಲ್ಕ್ ಶೇಕ್ ಗಳೂ ಕೂಡಾ‌ ನಮ್ಮ‌ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದಿಲ್ಲ. ದೇಹದ ಉಷ್ಣತೆ‌ ಮೇಲೆ‌ ಇವು‌ ಯಾವ ಪರಿಣಾಮ‌ವನ್ನೂ ಬೀರುವುದಿಲ್ಲ. ಆದರೆ, ಇವು ದೇಹಕ್ಕೆ ಬೇಕಾದ ತಾಜಾ‌ ಅನುಭೂತಿ‌ ನೀಡುತ್ತದೆ ಎಂಬುದು ನಿಜವೇ. ವಾತಾವರಣದಲ್ಲಿ ತೇವಾಂಶ ಹೆಚ್ಚಿರುವ ಸಂದರ್ಭ ಇವು ದೇಹವನ್ನು ತಣ್ಣಗಿರಿಸಲು‌ ಸಹಾಯ ಮಾಡಬಹುದು. ಆದರೆ, ನೇರವಾಗಿ ದೇಹದ ಉಷ್ಣತೆಯನ್ನು ಕಡಿಮೆಗೆ ತರುವುದಿಲ್ಲ. ಪೆಪ್ಸಿ, ಕೋಲಾದಂತಹ‌ ಕಾರ್ಬೋನೇಟೆಡ್ ಪೇಯಗಳನ್ನು ಬಿಟ್ಟರೆ ಉಳಿದವು ಖಂಡಿತವಾಗಿಯೂ ದೇಹದಲ್ಲಿ  ಬೇಸಿಗೆಯಲ್ಲಿ‌  ನೀರಿನಂಶ ಇರುವಂತೆ ನೋಡಿಕೊಳ್ಳುತ್ತವೆ.

juices

2. ಬಿಸಿ ಪೇಯಗಳು: ಹಲವರಿಗೆ ಬೇಸಿಗೆಯಲ್ಲಿ ಬಿಸಿ ಪೇಯಗಳಾದ ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಭಾವನೆಯಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಂಬುವ ಮಂದಿ ಇವರು. ಆದರೆ ಇದು ಸಂಪೂರ್ಣ ತಪ್ಪು‌ ನಂಬಿಕೆ. ಬೇಸಿಗೆಯಲ್ಲಿ ಬಿಸಿಬಿಸಿ ಪೇಯಗಳನ್ನು ಕುಡಿಯುವುದರಿಂದ ಇನ್ಮಷ್ಟು ಸೆಖೆ ಹೆಚ್ಚಾಗುತ್ತದೆ. ತೇವಾಂಶ ಹೆಚ್ಚಿರುವ ಸೆಖೆ ಪ್ರದೇಶಗಳಾದ ಸಮುದ್ರ ತೀರದಲ್ಲಿ ಬಿಸಿ ಬಿಸಿ‌ ಚಹಾ, ಕಾಫಿ ಇನ್ನಷ್ಟು ಬೆವರಿಳಿಸುವಂತೆ ಮಾಡುತ್ತದೆ.  ಆದರೆ, ವಾತಾವರಣದಲ್ಲಿ ತೇವಾಂಶ ಕಡಿಮೆ ಇರುವ ಸಮಯದಲ್ಲಿ ಚಹಾ, ಕಾಫಿ ಕುಡಿಯಬಹುದು. ಆದರೆ ಹೆಚ್ಚು ಒಳ್ಳೆಯದಲ್ಲ.

3. ಹಣ್ಣು ಹಂಪಲು: ಹಣ್ಣು ಹಂಪಲುಗಳು ಬೇಸಿಗೆಯಲ್ಲಿ ಒಳ್ಳೆಯದನ್ನೇ ಮಾಡುತ್ತದೆ. ಮಾವು, ಕಲ್ಲಂಗಡಿ, ಮಾವು, ಚಿಕ್ಕು ಹಲಸು, ದ್ರಾಕ್ಷಿ, ಕಿತ್ತಳೆ, ಬಾಳೆಹಣ್ಣು ಹೀಗೆ ಬಹುತೇಕ ಎಲ್ಲ ಹಣ್ಣುಗಳ ಸೇವನೆಯೂ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ‌ ಪೂರೈಕೆಯಲ್ಲಿ ಮುಖ್ಯ‌ ಪಾತ್ರ ವಹಿಸುತ್ತದೆ.

health tips fruits for stress

4. ಮಸಾಲೆ ಪದಾರ್ಥಗಳು: ಮೆಣಸು ಹಾಗೂ ಖಾರಯುಕ್ತ ಮಸಾಲೆ ಪದಾರ್ಥಗಳ‌ ಅತಿಯಾದ ಸೇವನೆ  ಬೇಸಿಗೆಯಲ್ಲಿ ಒಳ್ಳೆಯದಲ್ಲ. 

ಇದನ್ನೂ ಓದಿ: Health Tips: ಬಾರ್ಲಿ ನೀರಿನಲ್ಲಿದೆ ಹಲವು ಹಲವು ಆರೋಗ್ಯ ಪ್ರಯೋಜನ, ಇದು ಬೇಸಿಗೆಯ ಸಂಗಾತಿ

5. ಸ್ಪೋರ್ಟ್ಸ್‌ ಡ್ರಿಂಕ್‌ಗಳು: ಸ್ಪೋರ್ಟ್ಸ್ ಡ್ರಿಂಕ್‌ಗಳಲ್ಲಿ ಹೇರಳವಾಗಿ ಕೆಫೀನ್ ಇರುವುದರಿಂದ ಖಂಡಿತ ಇವು ಒಳ್ಳೆಯದಲ್ಲ. ಶಕ್ತಿವರ್ಧಕ‌ ಪೋಷಕಾಂಶಗಳು ಇದರಲ್ಲಿವೆ ಅಂದುಕೊಂಡು ಬೇಸಿಗೆಯ ದಾಹಕ್ಕೆ ಬಳಸಿಕೊಂಡರೆ ತತ್ ಕ್ಷಣಕ್ಕೆ ಪ್ರಯೋಜನ ಸಿಕ್ಕರೂ ದೀರ್ಘಕಾಲಕ್ಕೆ ಇವು ಒಳ್ಳೆಯದಲ್ಲ.

6. ಎಳನೀರು: ಬೇಸಿಗೆಯಲ್ಲಿ ಕುಡಿಯಬಹುದಾದ ಪೇಯಗಳ ಪೈಕಿ ಅತ್ಯಂತ ಒಳ್ಳೆಯದು ಎಂದರೆ ಎಳನೀರು. ಇದು ಬೇಸಿಗೆಯಲ್ಲಿ ದಾಹ ಇಂಗಿಸುವುದಷ್ಟೇ ಅಲ್ಲ, ಇದರಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಖನಿಜಾಂಶಗಳೂ ಇರುತ್ತದೆ. ಇದರಲ್ಲದೆ,ಮಜ್ಜಿಗೆಯನ್ನೂ ಅತ್ಯಂತ ಉತ್ತಮ ಬೇಸಿಗೆಯ ಪೇಯ ಎನ್ನಬಹುದು.

7. ಊಟ ಬಿಡುವುದು: ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮದೂಗಿಸಿಕೊಳ್ಳುವ ಸಲುವಾಗಿ ಕೆಲವರು ಯಾವುದಾದರೊಂದು ಹೊತ್ತು ಊಟ ಬಿಡುವ ಯೋಚನೆ ಮಾಡುತ್ತಾರೆ. ಬಹಳ ಮಂದಿಗೆ ಇಂಥದ್ದೊಂದು ನಂಬಿಕೆಯಿದೆ. ಆದರೆ ಈ ನಂಬಿಕೆಯಲ್ಲಿ ಹುರುಳಿಲ್ಲ. ಕ್ಯಾಲರಿ ಕಡಿಮೆ ತೆಗೆದುಕೊಂಡರೆ ಬೇಸಿಗೆಯಲ್ಲಿ ಒಳ್ಳೆಯದು ನಿಜ. ಆದರೆ, ಇದಕ್ಕೆ ಊಟ ಬಿಡಲು ಹೋದರೆ ತೊಂದರೆ ತಪ್ಪಿದ್ದಲ್ಲ.

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಬೇಸಿಗೆಯಲ್ಲಿ ಯಾವುದು ಹಿತಕರ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Baking Soda: ಅಡುಗೆ ಸೋಡಾ ನಿಜಕ್ಕೂ ಆರೋಗ್ಯಕ್ಕೆ ಕೆಟ್ಟದ್ದಾ?

ಬೇಕಿಂಗ್‌ ಸೋಡಾವನ್ನು (Baking Soda) ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

VISTARANEWS.COM


on

Baking Soda
Koo

ಅಡುಗೆಯಲ್ಲಿ ಆಸಕ್ತಿ ಇರುವ ಮಂದಿಗೆ, ಮೇಲಾಗಿ ಬೇಕಿಂಗ್‌ನಲ್ಲಿ ಅಭಿರುಚಿ ಇರುವ ಮಂದಿಗೆ ಬೇಕಿಂಗ್‌ ಸೋಡಾ (Baking Soda) ಎಂಬ ವಸ್ತು ಅತ್ಯಂತ ಮುಖ್ಯವಾದ ವಸ್ತು. ಮಿದುವಾದ ಸ್ಪಾಂಜೀಯಾಗಿರುವ ಕೇಕ್‌ಗಳನ್ನು ಮಾಡಲು ಬೇಕಿಂಗ್‌ ಸೋಡಾ ಇಲ್ಲದಿದ್ದರೆ ಹೇಗೆ? ಕೇವಲ ಕೇಕ್‌ ಅಂತಲ್ಲ. ಸಾಕಷ್ಟು ಅಡುಗೆಗಳಿಗೆ, ದಿಢೀರ್‌ ತಿಂಡಿಗಳಿಗೆ, ಹುಳಿಬರಿಸುವಷ್ಟು ಸಮಯ ಇಲ್ಲದಾದಾಗ ಮಾಡುವ ಡೋಕ್ಲಾ, ಇಡ್ಲಿ ಮತ್ತಿತರ ಬೆಳಗಿನ ಉಪಾಹಾರಕ್ಕೂ ಬಹಳ ಸಲ ಇಂದಿನ ಧಾವಂತದ ಯುಗದಲ್ಲಿ ಬೇಕಿಂಗ್‌ ಸೋಡಾ ಬೇಕೇ ಬೇಕು. ಹಾಗಾಗಿ ಇದು ಎಲ್ಲರ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ವಸ್ತು.
ಎಲ್ಲ ಆಹಾರ ವಸ್ತುಗಳಂತೆ ಬೇಕಿಂಗ್‌ ಸೋಡಾದ ಬಗೆಯೂ ಹಲವು ಗೊಂದಲಗಳಿವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಬಾವನೆಯೂ ಹಲವರಲ್ಲಿ ಇದೆ. ಸೋಡಾ ಬಳಸಿದರೆ, ಹೊಟ್ಟೆಯುಬ್ಬರ, ಅಸಿಡಿಟಿ ಹೆಚ್ಚಾಗುತ್ತದೆ, ಹುಳಿತೇಗು ಬರುತ್ತದೆ, ಹೊಟ್ಟೆಯಲ್ಲಿ ಗ್ಯಾಸ್‌ ತುಂಬಿದಂತಾಗುತ್ತದೆ ಎಂಬ ಅಳಲು ಹಲವರದ್ದು. ಇವು ನಿಜವೇ ಆಗಿದ್ದರೂ, ಇದರ ಬಗ್ಗೆ ಹಲವು ತಪ್ಪು ತಿಳುವಳಿಕೆಗಳಿವೆ. ನಾವು ಅಂದುಕೊಳ್ಳುವಷ್ಟು ಬೇಕಿಂಗ್‌ ಸೋಡಾ ನಿಜಕ್ಕೂ ಕೆಟ್ಟದ್ದೇ? ಎಂಬ ಪ್ರಶ್ನೆ ಕಾಡಿರಬಹುದು. ಹಾಗಾದರೆ ಬನ್ನಿ, ಬೇಕಿಂಗ್‌ ಸೋಡಾದ ಸಾಧಕ ಬಾಧಕಗಳ ಬಗ್ಗೆ ತಿಳಿಯೋಣ.

Baking soda

ಗ್ಯಾಸ್‌ ಸಮತೋಲನಗೊಳಿಸುತ್ತದೆ

ಬೇಕಿಂಗ್‌ ಸೋಡಾ ನೈಸರ್ಗಿಕವಾದ ಎಂಟಾಸಿಡ್‌ನಂತೆ ವರ್ತಿಸುವ ಮೂಲಕ ಹೊಟ್ಟೆಯಲ್ಲಿರುವ ಅತಿಯಾದ ಗ್ಯಾಸ್‌ ಅನ್ನು ಸಮತೋಲನಗೊಳಿಸುತ್ತದೆ. ಇದು ಎದೆಯುರಿ, ಆಸಿಡಿಟಿ ಹಾಗೂ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವ ಸಮಸ್ಯೆಯೂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ!

Baking soda

ಬೇಗನೆ ಬೇಯುತ್ತದೆ

ಬೇಕಿಂಗ್‌ ಸೋಡಾ ಆಹಾರದಲ್ಲಿರುವ ಪೋಷಕಾಂಶಗಳನ್ನು ಕೊಲ್ಲುವುದಿಲ್ಲ. ಚಿಟಿಕೆಯಷ್ಟು ಬೇಕಿಂಗ್‌ ಸೋಡಾವನ್ನು ಧಾನ್ಯಗಳು ಹಾಗೂ ಬೇಳೆಕಾಳುಗಳು ಬೇಯುವಾಗ ಹಾಕಿದರೆ ಅದು ಬೇಗನೆ ಬೇಯುತ್ತದೆ.
ಇವೆರಡು ಲಾಭಗಳು ಬೇಕಿಂಗ್‌ ಸೋಡಾದಿಂದ ಇವೆಯಾದರೂ, ಇದರಿಂದಾಗುವ ಸಮಸ್ಯೆಗಳೂ ಇವೆ. ಬನ್ನಿ, ಬೇಕಿಂಗ್‌ ಸೋಡಾದ ಅತಿಯಾದ ಬಳಕೆಯಿಂದ ನಾವು ನಮಗೇ ಅರಿವಿಲ್ಲದೆ ಯಾವ ಸಮಸ್ಯೆಗಳನ್ನು ಆಹ್ವಾನಿಸಬಹುದು ಎಂಬುದನ್ನು ನೋಡೋಣ.

ಹೈಪರ್‌ಟೆನ್ಶನ್‌ ಸಮಸ್ಯೆ

ಬೇಕಿಂಗ್‌ ಸೋಡಾದಲ್ಲಿ ಹೆಚ್ಚು ಸೋಡಿಯಂ ಇರುವುದರಿಂದ, ಇದರ ಹೆಚ್ಚಿನ ಸೇವನೆಯಿಂದ ದೇಹದಲ್ಲಿ ನೀರಿನಂಶ ಶೇಖರಣೆಯಾಗುವುದು, ಎಲೆಕ್ಟ್ರೋಲೈಟ್‌ ಅಸಮತೋಲನ, ಹೈಪರ್‌ಟೆನ್ಶನ್‌ನಂತಹ ಸಮಸ್ಯೆಗಳು ಉಂಟಾಗಬಹುದು.

Woman anemia image Coriander Benefits

ವಾಂತಿ, ತಲೆಸುತ್ತುವಿಕೆ

ಪ್ರತಿದಿನವೂ ಬೇಕಿಂಗ್‌ ಸೋಡ ಸೇವಿಸುವುದರಿಂದ ಕೆಲವು ಮಂದಿಗೆ ಅಲ್ಕಲೋಸಿಸ್‌ ಎಂಬ ಸಮಸ್ಯೆ ಬರಬಹುದು. ಇದು ದೇಹದ ಆಸಿಡ್‌ ಸಮತೋಲನವನ್ನೇ ಹದಗೆಡಿಸಿ, ವಾಂತಿ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸೆಳೆತ, ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು.

Thigh muscles are strengthened by walking Benefits Of Walking

ಮಾಂಸಖಂಡಗಳ ಸೆಳೆತ

ಅತೀ ಕಡಿಮೆ ಮಂದಿಯಲ್ಲಿ ಈ ಬೇಕಿಂಗ್‌ ಸೋಡಾ ಇನ್ನೂ ಒಂದು ಸಮಸ್ಯೆ ಹುಟ್ಟುಹಾಕಬಹುದು. ಹೈಪೋಕಲೇಮಿಯಾ ಎಂಬ ಈ ಸಮಸ್ಯೆಯಲ್ಲಿ ದೇಹದ ಪೊಟಾಶಿಯಂ ಮಟ್ಟವೇ ಇಳಿಯುತ್ತದೆ. ಪೊಟಾಶಿಯಂ ಮಟ್ಟದ ಇಳಿಕೆಯಿಂದ ಮಾಂಸಖಂಡಗಳ ಸೆಳೆತ, ದುರ್ಬಲತೆ, ಪಾರ್ಶ್ವವಾಯು, ದೇಹದಲ್ಲಿ ಅಲ್ಲಲ್ಲಿ ನೋವುಗಳು ಇತ್ಯಾದಿ ಸಮಸ್ಯೆಗಳು ಬರಬಹುದು. ಇದು ಕೆಲವೊಮ್ಮೆ ಮಾರಣಾಂತಿಕ ಸಮಸ್ಯೆಯಾಗಿಯೂ ಪರಿಣಮಿಸಬಹುದಾದ್ದರಿಂದ ವೈದ್ಯರ ನೆರವು ಅತ್ಯಗತ್ಯ.
ಆದರೆ, ಬೇಕಿಂಗ್‌ ಸೋಡಾವನ್ನು ವಿಷದಂತೆ ಪರಿಗಣಿಸುವ ಧೋರಣೆಯೂ ನಮ್ಮ ಮನಸ್ಸಿನಿಂದ ಬದಲಾಗಬೇಕಿದೆ. ಯಾವಾಗಲಾದರೊಮ್ಮೆ ಬೇಖಿಂಗ್‌ ಸೋಡಾ ಅಡುಗೆಯಲ್ಲಿ ಬಳಸಿದರೆ, ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರದು. ಅತಿಯಾದರೆ ಮಾತ್ರ ಸಮಸ್ಯೆಗಳು ಬರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Food Poisoning: ಬಟರ್‌ ಚಿಕನ್‌ ತಿಂದಿದ್ದಕ್ಕೂ ದಿಢೀರ್‌ ಸಾವಿಗೂ ಏನು ಸಂಬಂಧ? ಇದೊಂದು ವಿಚಿತ್ರ ಕಾಯಿಲೆ!

Continue Reading

ಆರೋಗ್ಯ

World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

ಮಲೇರಿಯಾ ವಿರುದ್ಧದ ಜಾಗತಿಕ ಹೋರಾಟದಲ್ಲಿ (World Malaria Day) ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ, ಈ ರೋಗದ ಕುರಿತಾದ ತಿಳುವಳಿಕೆ, ಬಾರದಂತೆ ಜಾಗೃತಿ ಮತ್ತು ಬಂದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ- “ನನ್ನ ಆರೋಗ್ಯ, ನನ್ನ ಹಕ್ಕು” (My Health, My Right) ಎಂಬ ಘೋಷವಾಕ್ಯವನ್ನು ಈ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಹಾಗಾಗಿ ರೋಗ ಬಾರದಂತೆ ತಡೆಯುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಮಯವಿದು.

VISTARANEWS.COM


on

World Malaria Day
Koo

ಪ್ರತಿವರ್ಷ 20 ಸಾವಿರ ಮಂದಿ ಮಲೇರಿಯಾ ರೋಗಕ್ಕೆ ಭಾರತದಲ್ಲಿ ಜೀವ ತೆರುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2021ರಲ್ಲಿ ವಿಶ್ವದೆಲ್ಲೆಡೆಯಿಂದ 21.7 ಕೋಟಿ ಪ್ರಕರಣಗಳು ವರದಿಯಾಗಿವೆ ಮತ್ತು 6 ಲಕ್ಷಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಆಫ್ರಿಕಾದ್ದೇ ಸಿಂಹಪಾಲು. ಹಾಗಾಗಿ ಮೊದಲಿಗೆ ಆಫ್ರಿಕಾ ಮಲೇರಿಯ ದಿನ ಎಂದು ಪ್ರಾರಂಭವಾದ ಅರಿವಿನ ದಿನವನ್ನು, ಎಪ್ರಿಲ್‌ 25ರಂದು ವಿಶ್ವ ಮಲೇರಿಯಾ ಜಾಗೃತಿ ದಿನ (World Malaria Day) ಎಂದು ಗುರುತಿಸಲಾಗಿದೆ. ಮಲೇರಿಯಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ, ಈ ರೋಗದ ಕುರಿತಾದ ತಿಳಿವಳಿಕೆ, ಬಾರದಂತೆ ಜಾಗೃತಿ ಮತ್ತು ಬಂದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ- “ನನ್ನ ಆರೋಗ್ಯ, ನನ್ನ ಹಕ್ಕು” (My Health, My Right) ಎಂಬ ಘೋಷವಾಕ್ಯವನ್ನು ಈ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಹಾಗಾಗಿ ರೋಗ ಬಾರದಂತೆ ತಡೆಯುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಮಯವಿದು.

World Malaria Day, Mosquito eradication is essential to prevent the disease

ತಡೆಯುವುದು ಹೇಗೆ?

ಈ ಬಾರಿಯ ಕಠೋರ ಬೇಸಿಗೆಯ ಪರಿಣಾಮವಾಗಿ ಎಲ್ಲೆಡೆ ಸೊಳ್ಳೆಗಳ ಸಂಖ್ಯೆ ಹೆಚ್ಚಿರುವುದು ಕಾಣುತ್ತದೆ. ಹಾಗಾಗಿ, ವೃದ್ಧಿಯಾಗುವ ಸೊಳ್ಳೆಗಳನ್ನು ನಾಶ ಮಾಡಲೇಬೇಕು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಸೊಳ್ಳೆಗಳ ಹೆಚ್ಚಳ ತಡೆಯುವುದು ಈ ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ. ಮಾತ್ರವಲ್ಲ, ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಿ. ಮಲೇರಿಯ ನಿರೋಧಕತೆ ಉದ್ದೀಪಿಸುವಂಥ ಲಸಿಕೆಗಳು ಮಕ್ಕಳಿಗಾಗಿ ಲಭ್ಯವಿದೆ. ಈ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಕ್ಷೇಮ.

ಬರಲು ಕಾರಣವೇನು?

ಪ್ಲಾಸ್ಮೋರಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಈ ಜೀವಿಯ ಪ್ರಸರಣಕ್ಕೆ ಪೂರಕವಾಗಿ ಒದಗುವುದು ಅನಾಫಿಲಿಸ್‌ ಸೊಳ್ಳೆಗಳು. ಕಚ್ಚುವ ಸೊಳ್ಳೆಗಳ ಮೂಲಕ ಮಾನವದ ದೇಹವನ್ನು ಪ್ರವೇಶಿಸುವ ರೋಗಾಣು, ಯಕೃತ್‌ನಲ್ಲಿ ಸಂತಾನಾಭಿವೃದ್ಧಿ ನಡೆಸುತ್ತದೆ. ರೋಗಾಣುಗಳು ಸಾಕಷ್ಟು ವೃದ್ಧಿಯಾಗಿ, ಸೋಂಕು ಪಸರಿಸುವ ಹೊತ್ತಿನಲ್ಲಿ ರೋಗ ಲಕ್ಷಣಗಳು ಕಾಣಲು ಆರಂಭಿಸುತ್ತವೆ. ಇದಕ್ಕೆ ಸಾಮಾನ್ಯವಾಗಿ ಸೋಂಕು ತಗುಲಿದ ನಂತರ, 10 ದಿನಗಳಿಂದ ನಾಲ್ಕು ವಾರಗಳವರೆಗೂ ಬೇಕಾಗುತ್ತದೆ.

image of Preventing Mosquitoborne Disease

ಲಕ್ಷಣಗಳೇನು?

ತೀವ್ರ ಜ್ವರ, ಚಳಿನಡುಕ, ತಲೆನೋವು, ಮೈಕೈ ನೋವು, ವಾಂತಿ, ವಿಪರೀತ ಸುಸ್ತು- ಇವು ಸಾಮಾನ್ಯವಾಗಿ ಮಲೇರಿಯ ರೋಗಿಯಲ್ಲಿ ಕಂಡುಬರುವ ಲಕ್ಷಣಗಳು. ಮಕ್ಕಳಲ್ಲಿ ಇವಿಷ್ಟರ ಜೊತೆಗೆ ಕೆಮ್ಮು ಮತ್ತು ಡಯರಿಯ ಸಹ ಬರಬಹುದು. ಮಲೇರಿಯದಿಂದ ಕಾಮಾಲೆ (ಜಾಂಡೀಸ್)‌ ಮತ್ತು ರಕ್ತಹೀನತೆ (ಅನಿಮಿಯ) ಸಹ ಬರಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಕ್ತಪರೀಕ್ಷೆ ಮಾಡಿಸಲು ವೈದ್ಯರು ಸೂಚಿಸುತ್ತಾರೆ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ಯಕೃತ್‌ ಸಮಸ್ಯೆ, ಶ್ವಾಸಕೋಶಗಳಲ್ಲಿ ನೀರು ತುಂಬುವುದು, ನ್ಯುಮೋನಿಯ, ದೃಷ್ಟಿಯ ತೊಂದರೆ, ಕಿಡ್ನಿ ವೈಫಲ್ಯ- ಹೀಗೆ ಹಲವು ರೀತಿಯಲ್ಲಿ ಆರೋಗ್ಯ ಕೈಕೊಟ್ಟು ಸಾವು ವಕ್ಕರಿಸಬಹುದು.

ಇದನ್ನೂ ಓದಿ: Healthy Foods For Kidney: ಕಿಡ್ನಿಯ ಆರೋಗ್ಯವರ್ಧನೆಗೆ ಈ ಕೆಳಗಿನ ಆಹಾರಶೈಲಿಯ ಬಗೆಗೆ ಗೊತ್ತಿರಲಿ!

Continue Reading

ಆರೋಗ್ಯ

Benefits of Bamboo Shoots: ಮೂಳೆಗಳ ನೋವು, ಮಲಬದ್ಧತೆ ನಿವಾರಣೆಗೆ ಎಳೆಯ ಬಿದಿರು ಸೇವನೆ ಮದ್ದು

ನೈಸರ್ಗಿಕವಾಗಿ ಮಳೆಗಾಲದ ಆರಂಭದ (Benefits of Bamboo Shoots) ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇದು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಕಳಲೆ ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ.

VISTARANEWS.COM


on

Benefits of Bamboo Shoots
Koo

ಬಿದಿರು ಎನ್ನುತ್ತಿದ್ದಂತೆ ದೊಡ್ಡ ಮೆಳೆಗಳೇ (Benefits of Bamboo Shoots) ನಮಗೆ ನೆನಪಾಗುವುದು. ಆದರೆ ಈ ಬೃಹತ್‌ ಮೆಳೆಗಳೂ ಹಿಂದೊಮ್ಮೆ ಎಳೆಯವೇ ಆಗಿದ್ದವಲ್ಲ. ಅಂಥ ಎಳೆಯ ಬಿದಿರು ಅಥವಾ ಮೊಳಕೆಗಳನ್ನು ಕಳಲೆ ಎನ್ನಲಾಗುತ್ತದೆ. ನೈಸರ್ಗಿಕವಾಗಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇದು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ತಾಜಾ ಕಳಲೆಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಸೇವನೆಗೆ ಯೋಗ್ಯವಾದ ಇಂಥ ರುಚಿಕರ ಕಳಲೆಗಳನ್ನು ಸಾಂಪ್ರದಾಯಿಕವಾದ ಸಾಂಬಾರು, ಪಲ್ಯಗಳಿಂದ ಹಿಡಿದು, ಆಧುನಿಕ ಖಾದ್ಯಗಳವರೆಗೆ ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತದೆ.
ಸಸ್ಯಾದಿಗಳ ಮೊಳಕೆ ಮತ್ತು ಚಿಗುರುಗಳು ಭರಪೂರ ಪೋಷಕಾಂಶಗಳಿಂದ ತುಂಬಿರುತ್ತವೆ. ಬೆಳೆಯುವ ಸಸ್ಯಗಳಿಗೆ ಬೇಕೆಂಬ ಕಾರಣಕ್ಕಾಗಿ ನಿಸರ್ಗವೇ ಸೃಷ್ಟಿಸಿಕೊಂಡಿರುವ ಮಾರ್ಗವಿದು. ಪ್ರಕೃತಿಯ ಈ ಕೃತಿ ಮಾನವರಿಗೂ ಲಾಭದಾಯಕವಾಗುವುದಿದೆ. ಕಾರಣ, ಇವು ಪೌಷ್ಟಿಕತೆಯಲ್ಲಿ ಮಾತ್ರವಲ್ಲಿ ರುಚಿಯಲ್ಲೂ ಒಂದು ಕೈ ಮೇಲೆಯೇ ಇರುತ್ತವೆ. ಎಳೆಯ ಬಿದಿರು ಅಥವಾ ಕಳಲೆಯನ್ನೂ ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು. ಏನಿವೆ ಇದನ್ನು ತಿನ್ನುವುದರ ಲಾಭಗಳು ಎಂಬುದನ್ನು ಅರಿಯೋಣ

 Bamboo Shoots

ಏನಿವೆ ಇದರಲ್ಲಿ?

ಹಲವಾರು ರೀತಿಯ ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಇದು ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಸ್ಥೂಲವಾಗಿ ಹೇಳುವುದಾದರೆ, ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ದೇಹದಲ್ಲಿ ಕೊಬ್ಬು ಕಡಿಮೆ ಮಾಡಲೂ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಿಟ್ಯುಟರಿ ಮತ್ತು ಥೈರಾಯ್ಡ್‌ ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಇವುಗಳ ಮಾತ್ರ ಹಿರಿದಾದದ್ದು. ಇದರ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ನೋಡುವುದಾದರೆ-

Constipation

ಮಲಬದ್ಧತೆ ನಿವಾರಣೆ

ಇದರಲ್ಲಿ ಹೆಚ್ಚಿನ ಪ್ರಮಾಣದ ಸೆಲ್ಯುಲೋಸ್‌ ಅಂಶದಿಂದಾಗಿ, ಜಠರ ಮತ್ತು ಕರುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಪಚನವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗಿ, ದೇಹದಲ್ಲಿ ಶೇಖರವಾದ ಕೊಬ್ಬೂ ಇಳಿಯುತ್ತದೆ. ಕಳಲೆಗೆ ಪ್ರೊಬಯಾಟಿಕ್‌ ಗುಣವೂ ಇರುವುದರಿಂದ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

Overweight man suffering from chest pain, high blood pressure, cholesterol level

ಕೊಲೆಸ್ಟ್ರಾಲ್‌ ಕಡಿತ

ದೇಹಕ್ಕೆ ಮಾರಕವಾದ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ ಕಡಿತ ಮಾಡುವಂಥ ಫೈಟೋಸ್ಟೆರೋಲ್‌ಗಳು ಕಳಲೆಯಲ್ಲಿವೆ. ಹಾಗಾಗಿ ಇದು ಬೇಡದ ಕೊಲೆಸ್ಟ್ರಾಲ್‌ ನಿವಾರಿಸುವುದು ಮಾತ್ರವಲ್ಲದೆ, ಒಟ್ಟಾರೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಹೃದಯದ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್‌ ಕೆ ಅಂಶದಿಂದಾಗಿ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಈ ತರಕಾರಿ ಸಹಾಯಕ.

ಕೊಲಾಜಿನ್‌ ವೃದ್ಧಿ

ಮಾನವ ಶರೀರದಲ್ಲಿ ಹೇರಳವಾಗಿರುವ ಖನಿಜಗಳ ಪೈಕಿ ಸತು ಮತ್ತು ಕಬ್ಬಿಣದ ನಂತರದ ಸ್ಥಾನ ಸಿಲಿಕಾಗೆ. ಎಳೆ ಬಿದಿರಿನಲ್ಲೂ ಈ ಅಂಶ ಧಾರಾಳವಾಗಿದೆ. ಸಿಲಿಕಾ ಅಂಶವು ಹೈಡ್ರಾಕ್ಸಿಪ್ರೊಲಿನ್‌ ಎಂಬ ಅಮೈನೊ ಆಮ್ಲದ ಉತ್ಪತ್ತಿಗೆ ಅಗತ್ಯವಾದದ್ದು. ಎಲಾಸ್ಟಿನ್‌ ಮತ್ತು ಕೊಲಾಜಿನ್‌ ಅಂಶಗಳನ್ನು ದೇಹದಲ್ಲಿ ಸಿದ್ಧಪಡಿಸಿಕೊಳ್ಳುವುದಕ್ಕೆ ಈ ಅಮೈನೊ ಆಮ್ಲವು ಅತ್ಯಗತ್ಯ.

Bone Health In Winter

ಮೂಳೆಗಳ ಬಲವೃದ್ಧಿ

ಕ್ಯಾಲ್ಶಿಯಂ ಮತ್ತು ಮೆಗ್ನೀಶಿಯಂ ಅಂಶವು ಹೇರಳವಾಗಿರುವ ಕಳಲೆಯಿಂದ ಮೂಳೆಗಳು ಟೊಳ್ಳಾಗದೆ ಬಲಗೊಳ್ಳುತ್ತವೆ. ಇದರಲ್ಲಿರುವ ವಿಟಮಿನ್‌ ಸಿ ಅಂಶದಿಂದಾಗಿ ಇತರ ಖನಿಜಗಳನ್ನು ಹೀರಿಕೊಳ್ಳಲು ಮೂಳೆಗಳಿಗೆ ನೆರವು ದೊರೆಯುತ್ತದೆ.

weight loss

ತೂಕ ಇಳಿಕೆ

ಈ ತರಕಾರಿ ಕ್ಯಾಲರಿ ಲೆಕ್ಕದಲ್ಲಿ ಕಡಿಮೆ ಇದ್ದು, ನಾರಿನಂಶ ಬೇಕಾದಷ್ಟಿದೆ. ಹಾಗಾಗಿ ಆರೋಗ್ಯಕರ ಮಾರ್ಗದಲ್ಲಿ ತೂಕ ಇಳಿಸುವ ಉದ್ದೇಶ ಇರುವವರಿಗೆ ಇದೊಂದು ಉತ್ತಮ ಆಯ್ಕೆ. ನಾರಿನಿಂದ ಕೂಡಿದ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಂಡು, ದೀರ್ಘ ಕಾಲದವರೆಗೆ ಹಸಿವಾಗದಂತೆ ದೇಹವನ್ನು ಕಾಪಾಡುತ್ತವೆ.

ಇದನ್ನೂ ಓದಿ: Coriander Benefits: ಚರ್ಮದ ಯಾವುದೇ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪು ಮದ್ದು

Continue Reading

ಆರೋಗ್ಯ

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

ದೇಹದೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕಾದರೆ ನಮ್ಮ ನಾಲಿಗೆಯನ್ನೂ ತಿಳಿಯಬೇಕು ನಾವು. ಅದರ ಬಣ್ಣ ಮತ್ತು ಮೇಲ್ಮೈ ಹೇಗಿದೆ ಎನ್ನುವುದರ ಮೇಲೆ ಬಹಳಷ್ಟು ವಿಷಯಗಳನ್ನು ತಿಳಿಯಬಹುದು. ಏನು ಮಾಹಿತಿಯನ್ನು ನೀಡುತ್ತದೆ (Tongue Reveals Health) ನಾಲಿಗೆ? ಈ ಲೇಖನ ಓದಿ.

VISTARANEWS.COM


on

Tongue Reveals Health
Koo

ನಾಲಿಗೆಯು (Tongue Reveals Health) ಆರೋಗ್ಯದ ಕನ್ನಡಿ ಎನ್ನುವ ಮಾತಿದೆ. ನಮ್ಮ ದೇಹದ ಸ್ಥಿತಿ-ಗತಿಗಳ ಬಗ್ಗೆ ಅರಿಯುವುದಕ್ಕೆ ನಾಲಿಗೆ ಸಹಾಯಕ. ಅದರ ಬಣ್ಣ, ಮೇಲ್ನೋಟಗಳಿಂದ ದೇಹದೊಳಗೆ ಹೇಗಿದೆ, ಏನಾಗುತ್ತಿದೆ ಎಂಬುದನ್ನು ಅರಿಯಬಹುದು. ದೇಹಾರೋಗ್ಯದ ದಿಕ್ಸೂಚಿಯಂತೆ ಜಿಹ್ವೆ ಕೆಲಸ ಮಾಡುತ್ತದೆ. ಇದನ್ನು ಸರಿಯಾಗಿ ಅವಲೋಕಿಸಿದರೆ, ನಮಗೆ ತಿಳಿಯುವ ಮಾಹಿತಿಗಳು ಹಲವಾರು. ನಾಲಿಗೆ ತಿಳಿಸುವುದೇನು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Woman's tongue

ಗುಲಾಬಿ ಬಣ್ಣ

ಸುಂದರ ಗುಲಾಬಿ ಬಣ್ಣದ ನಾಲಿಗೆಯಿದ್ದರೆ, ಅದು ಸ್ವಸ್ಥ ಆರೋಗ್ಯದ ಸಂಕೇತ. ಇಷ್ಟೇ ಅಲ್ಲ, ರಸ ಒಸರುವ, ಮೃದುವಾದ ಮೇಲ್ಮೈ ಹೊಂದಿರುವ ನಾಲಿಗೆಯು ದೇಹಕ್ಕೆ ಅಗತ್ಯವಾದ ನೀರಿನಂಶ ಒದಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ಜೀರ್ಣಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬ ಸಂದೇಶವನ್ನೂ ನೀಡುತ್ತದೆ.

ಬಿಳಿ ನಾಲಿಗೆ

ನಾಲಿಗೆಯ ಮೇಲೆ ಬಿಳಿ ಬಣ್ಣದ ಹೊದಿಕೆಯಿದ್ದರೆ ಇದು ಬಹಳಷ್ಟನ್ನು ಸೂಚಿಸುತ್ತದೆ. ಈ ಬಿಳಿಯ ಬಣ್ಣವು ಬಾಯಿಯ ಭಾಗಕ್ಕೆ ಅಂಟಿಕೊಂಡ ಫಂಗಸ್‌ ಸೋಂಕಿನ ಲಕ್ಷಣವಿರಬಹುದು; ಬಾಯಿಯ ಸ್ವಚ್ಛತೆಯ ಕೊರತೆಯನ್ನು ಸೂಚಿಸಬಹುದು; ಬ್ಯಾಕ್ಟೀರಿಯ ದಾಳಿ ಮಾಡಿದ್ದರಿಂದಲೂ ಇರಬಹುದು. ಇದಲ್ಲದೆ, ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದಿದ್ದರೆ ಹೀಗಾಗುತ್ತದೆ. ಜೊತೆಗೆ, ಜೀರ್ಣಾಂಗಗಳ ಕೆಲಸದಲ್ಲಿ ಏರುಪೇರಾದರೆ, ಅಜೀರ್ಣ ಅಥವಾ ಮಲಬದ್ಧತೆಯಿದ್ದರೂ ನಾಲಿಗೆಯ ಮೇಲೆ ಬಿಳಿಯ ಹೊದಿಕೆಯನ್ನು ಕಾಣಬಹುದು.

Little kid sticking out his tongue

ಕೆಂಪು ನಾಲಿಗೆ

ಸ್ಟ್ರಾಬೆರಿಯಂಥ ಕೆಂಪು ನಾಲಿಗೆಯು ದೇಹದಲ್ಲಿ ಅಗತ್ಯ ಸತ್ವಗಳ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್‌ಗಳ ಕೊರತೆಯಿದ್ದರೆ, ಅದರಲ್ಲೂ ಮುಖ್ಯವಾಗಿ ವಿಟಮಿನ್‌ ಬಿ೧೨ ಕಡಿಮೆಯಿದ್ದರೆ ನಾಲಿಗೆಯು ಹೀಗೆ ಸ್ಟ್ರಾಬೆರಿ ಕೆಂಪಿನ ಬಣ್ಣದಲ್ಲಿ ಗೋಚರಿಸುತ್ತದೆ. ಕಬ್ಬಿಣದಂಶ ಕಡಿಮೆಯಿದ್ದರೂ ನಾಲಿಗೆ ಕೆಂಪಾಗುತ್ತದೆ. ರಕ್ತನಾಳಗಳಲ್ಲಿ ಉರಿಯೂತ ತರುವ ಕವಾಸಾಕಿ ಎನ್ನುವ ರೋಗವೂ ಅಪರೂಪಕ್ಕೆ ಈ ಕೆನ್ನಾಲಗೆಗೆ ಕಾರಣವಾಗಬಹುದು.

ಕಪ್ಪು ನಾಲಿಗೆ

ಕೆಲವೊಮ್ಮೆ ಕಪ್ಪಾದ ರೋಮಭರಿತ ಲಕ್ಷಣಗಳನ್ನು ನಾಲಿಗೆ ತೋರಿಸಬಹುದು. ಇದು ಸಹ ಬ್ಯಾಕ್ಟೀರಿಯ ಸೋಂಕಿನಿಂದ ಆಗುವಂಥದ್ದು. ಕೆಲವು ಔಷಧಿಗಳಿಂದ ನಾಲಿಗೆ ಕಪ್ಪಾಗಬಹುದು. ಧೂಮಪಾನ ಅತಿಯಾದರೂ ನಾಲಿಗೆ ಹೀಗೆ ಬಣ್ಣಗೆಡಬಹುದು. ಆದರೆ ನಾಲಿಗೆಯಲ್ಲಿ ನೋವು, ಊತ ಇದ್ದು, ಬಾಯಿಯ ರುಚಿ ವಾಸನೆಗಳು ಬದಲಾಗಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.

ನಕಾಶೆ ನಾಲಿಗೆ

ಅಂದರೆ ನಾಲಿಗೆ ಮೇಲೆ ಕೆಂಪು ಬಣ್ಣದ ಮಚ್ಚೆಯಂಥ ಆಕೃತಿಗಳು ಕಾಣಬಹುದು. ನೋಡುವುದಕ್ಕೆ ಯಾವುದೇ ಭೂಪಟ ಅಥವಾ ನಕಾಶೆಯಂತೆ ಕಾಣುವ ಈ ಕೆಂಪು ಆಕೃತಿಗಳು ಸಾಮಾನ್ಯವಾಗಿ ಅಪಾಯ ಮಾಡುವುದಿಲ್ಲ. ಆದರೆ ಕೆಲವು ಆಹಾರಗಳಿಗೆ ಅಥವಾ ತೀಕ್ಷ್ಣ ರುಚಿಗಳಿಗೆ ಇವು ಪ್ರತಿಕ್ರಿಯಿಸಿ, ನೋವು ನೀಡುತ್ತವೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ತಿಳಿದಿಲ್ಲ.

Woman with halitosis for candida albicans pointing her tongue

ಸೀಳು ನಾಲಿಗೆ

ನಾಲಿಗೆಯ ಮೇಲ್ಮೈಯಲ್ಲಿ ಸೀಳಿನಂಥ ಆಳವಾದ ಗೆರೆಗಳು ಕಾಣಬಹುದು. ಕೆಲವೊಮ್ಮೆ ಇವು ಆನುವಂಶಿಕವಾಗಿ ಬರಬಹುದು. ಅದಿಲ್ಲದಿದ್ದರೆ, ಸೋರಿಯಾಸಿಸ್‌ ಅಥವಾ ಡೌನ್ಸ್‌ ಸಿಂಡ್ರೋಮ್‌ ಸಹ ಕಾರಣವಾಗಿರಬಹುದು. ಹೆಚ್ಚಿನ ಸಾರಿ ಈ ಗೆರೆಗಳು ಯಾವುದೇ ತೊಂದರೆ ನೀಡುವುದಿಲ್ಲ.

ಹುಣ್ಣುಗಳು

ಬಾಯಲ್ಲಿ ಹುಣ್ಣಾದಂತೆಯೇ ನಾಲಿಗೆ ಮೇಲೂ ಹುಣ್ಣುಗಳಾಗುತ್ತವೆ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸತ್ವಗಳ ಕೊರತೆ, ಸೋಂಕು ಅಥವಾ ಬ್ರೇಸಸ್‌ ಹಾಕಿದ ಕಾರಣಕ್ಕೂ ಆಗಿರಬಹುದು. ಹಲವು ವಾರಗಳಿಂದ ಈ ಹುಣ್ಣುಗಳು ಕಡಿಮೆಯಾಗದೆ ಮುಂದುವರಿಯುತ್ತಿದ್ದರೆ ಬಾಯಿ ಕ್ಯಾನ್ಸರ್‌ ಸೂಚನೆಯೂ ಇರಬಹುದು. ಗುಣವಾಗದ ಹುಣ್ಣುಗಳಿದ್ದರೆ ವೈದ್ಯರಲ್ಲಿ ತೋರಿಸುವುದು ಅಗತ್ಯ.

Woman With Wide Open Mouth and Tongue Out

ಗಮನ ಕೊಡಿ

ಕೆಂಪು, ಬಿಳಿಯ ಮಚ್ಚೆಯಂಥವು ನಾಲಿಗೆಯ ಮೇಲೆ ಕಾಣಿಸಿಕೊಂಡು ನೋವು ಕೊಡುತಿದ್ದರೆ, ಬಾಯಿ ವಾಸನೆ ಬರುತ್ತಿದ್ದರೆ, ಹುಣ್ಣುಗಳು ಗುಣವಾಗದೆ ಉಳಿದಿದ್ದರೆ, ಬಾಯಿ ಅಥವಾ ನಾಲಿಗೆಯಲ್ಲಿ ಕಾಣಿಸಿಕೊಂಡ ಯಾವುದೇ ಹುಣ್ಣು, ವ್ರಣ, ಮಚ್ಚೆಗಳು ಸಾಮಾನ್ಯಕ್ಕಿಂತ ಭಿನ್ನ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಾಣುವುದು ಸೂಕ್ತ. ಇಂಥ ಯಾವುದೇ ಲಕ್ಷಣಗಳು ಕ್ಯಾನ್ಸರ್‌ನ ಸೂಚಕಗಳಾಗಿರಬಹುದು.

ಇದನ್ನೂ ಓದಿ:Health Tips: ಒಂದೇ ಕಡೆ ಕೂತಿರುತ್ತೀರಾ? ಸಮಸ್ಯೆಗಳು ಒಂದೆರಡಲ್ಲ!

Continue Reading
Advertisement
Lok sabha election 2024
Lok Sabha Election 20246 mins ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

leopard Attack
ಕ್ರೀಡೆ9 mins ago

leopard Attack: ಚಿರತೆ ದಾಳಿ; ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ತೀವ್ರ ಗಾಯ

Madhavi Latha
Lok Sabha Election 202420 mins ago

Kompella Madhavi Latha: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಆಸ್ತಿ ಎಷ್ಟಿದೆ ನೋಡಿ!

Tamannaah Bhatia Summoned in Illegal IPL Streaming Case
South Cinema23 mins ago

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Kotak Bank
ದೇಶ32 mins ago

Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Samsung India launched the 2nd edition of Samsung Innovation Campus
ದೇಶ40 mins ago

Samsung: ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ 2ನೇ ಆವೃತ್ತಿ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ

physical abuse women
ಬೆಂಗಳೂರು41 mins ago

Physical abuse : ಬೆಂಗಳೂರಲ್ಲಿ ಯುವತಿ ಕಿಡ್ನ್ಯಾಪ್; ಐವರು ಕಾಮುಕರಿಂದ ಅತ್ಯಾಚಾರ

Voter ID
Lok Sabha Election 202445 mins ago

Voter ID: ವೋಟರ್‌ ಐಡಿ ಕಾರ್ಡ್‌ ಸಿಕ್ಕಿಲ್ಲವೆ? ಡೋಂಟ್‌ ವರಿ. ಈ 12 ದಾಖಲೆಗಳಲ್ಲಿ ಒಂದಿದ್ದರೆ ಸಾಕು!

sahakara nagar robbery case
ಕ್ರೈಂ48 mins ago

Robbery Case: ಮನೆ ಮಾಲೀಕರಿಗೆ ಪಿಸ್ತೂಲ್ ತೋರಿಸಿ 40 ಲಕ್ಷ ರೂ. ದರೋಡೆ

Kiara Advani Joins Salaar 2
ಟಾಲಿವುಡ್57 mins ago

Kiara Advani: ಪ್ರಭಾಸ್ ನಟನೆಯ ʻಸಲಾರ್ 2ʼ ಸಿನಿಮಾದಲ್ಲಿ ಕಿಯಾರಾ ಆಡ್ವಾಣಿ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌