Home Remedies For Indigestion: ಹಬ್ಬದೂಟದಿಂದ ಹೊಟ್ಟೆ ಭಾರವೇ? ಇಲ್ಲಿದೆ ಮನೆಮದ್ದು! - Vistara News

ಆರೋಗ್ಯ

Home Remedies For Indigestion: ಹಬ್ಬದೂಟದಿಂದ ಹೊಟ್ಟೆ ಭಾರವೇ? ಇಲ್ಲಿದೆ ಮನೆಮದ್ದು!

ಈ ದಿನಗಳಲ್ಲಿ ದೇವರ ಹೆಸರಲ್ಲಿ ಮನೆಮಂದಿಗೆ ರಸಕವಳ. ತಿನ್ನುವುದೇನೊ (Home Remedies For Indigestion) ಸರಿ, ಅದನ್ನು ಅರಗಿಸಬೇಕಲ್ಲ. ಎಲ್ಲರ ಪಚನಶಕ್ತಿಯೂ ಒಂದೇಸಮ ಇರುವುದಿಲ್ಲ. ಪರಿಣಾಮವಾಗಿ ಹೊಟ್ಟೆ ಭಾರವಾಗುವುದು, ಹೊಟ್ಟೆ ಉಬ್ಬರಿಸುವುದು, ಹುಳಿತೇಗು, ಆಸಿಡಿಟಿ, ಅಜೀರ್ಣದಂಥ ತೊಂದರೆಗಳು ಕಾಟ ಕೊಡುತ್ತವೆ. ಆಗ ಏನು ಮಾಡಬಹುದು?

VISTARANEWS.COM


on

Home Remedies For Indigestion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವರಾತ್ರಿ ಎಂದರೆ ಹಬ್ಬದ ಸಾಲು… ಊಟದಲ್ಲಿ (Home Remedies For Indigestion) ಸಿಹಿಗಳದ್ದೇ ಸಿಂಹಪಾಲು. ಉಪವಾಸ ಮಾಡುವವರಿಗೂ ನಂತರ ಭರ್ಜರಿ ಊಟ. ಶಾರದೆ ಸ್ಥಾಪಿಸಿದರೆ ದಿನಕ್ಕೊಂದು ಭಕ್ಷ್ಯದ ನೈವೇದ್ಯ. ಗೊಂಬೆ ಕೂರಿಸಿದರೆ ದಿನಕ್ಕೊಂದು ರೀತಿಯ ಗೊಂಬೆ ತಿಂಡಿ. ಇವೆಲ್ಲದರ ಫಲವೆಂದರೆ ದೇವರ ಹೆಸರಲ್ಲಿ ಮನೆಮಂದಿಗೆ ರಸಕವಳ. ತಿನ್ನುವುದೇನೊ ಸರಿ, ಅದನ್ನು ಅರಗಿಸಬೇಕಲ್ಲ. ಎಲ್ಲರ ಪಚನಶಕ್ತಿಯೂ ಒಂದೇಸಮ ಇರುವುದಿಲ್ಲ. ಪರಿಣಾಮವಾಗಿ ಹೊಟ್ಟೆ ಭಾರವಾಗುವುದು, ಹೊಟ್ಟೆ ಉಬ್ಬರಿಸುವುದು, ಹುಳಿತೇಗು, ಆಸಿಡಿಟಿ, ಅಜೀರ್ಣದಂಥ ತೊಂದರೆಗಳು ಕಾಟ ಕೊಡುತ್ತವೆ. ಹಬ್ಬ ಮುಗಿಯುವಷ್ಟರಲ್ಲಿ ಹೊಟ್ಟೆಯೇ ಹಾಳಾದಂಥ ಅವಸ್ಥೆಗೆ ಬಂದು ತಲುಪುತ್ತೇವೆ. ಸಾಲು ಹಬ್ಬಗಳ ನಡುವೆಯೂ ಹೊಟ್ಟೆ ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ಒಂದಿಷ್ಟು ಮನೆಮದ್ದುಗಳು

cumin
exercise

ಜೀರಿಗೆ

ನೈಸರ್ಗಿಕವಾಗಿ ಹೊಟ್ಟೆಯಲ್ಲಿರುವ ವಾಯುವನ್ನು ನಿರ್ಮೂಲಗೊಳಿಸಿ, ಜೀರ್ಣಕ್ರಿಯೆಯನ್ನು ಸರಾಗ ಮಾಡುವಂಥ ವಸ್ತುವಿದು. ಜೀರಿಗೆಯನ್ನು ಚಹಾದಂತೆ ಡಿಕಾಕ್ಷನ್‌ ತೆಗೆದು ಕುಡಿಯಬಹುದು. ಪುಡಿ ಮಾಡಿ ಕಷಾಯ ಮಾಡಿಕೊಳ್ಳಬಹುದು. ಜೀರಿಗೆ ಪುಡಿಯನ್ನು ಬಿಸಿಯಾದ ಅನ್ನಕ್ಕೆ ಸ್ವಲ್ಪವೇ ತುಪ್ಪ ಮತ್ತು ಚಿಟಿಕೆ ಉಪ್ಪು ಸೇರಿಸಿ ಊಟ ಮಾಡಬಹುದು. ಅಂತೂ ಯಾವುದೇ ರೀತಿಯಲ್ಲಿ ಜೀರಿಗೆಯನ್ನು ಸೇವಿಸಿದರೂ ಹೊಟ್ಟೆಯ ತೊಂದರೆಗಳಿಗೆ ಉಪಶಮನ ದೊರೆಯುತ್ತದೆ

Peppermint tea

ಪೆಪ್ಪರ್‌ಮಿಂಟ್‌ ಚಹಾ

ಪೆಪ್ಪರ್‌ಮಿಂಟ್‌ನಲ್ಲಿರುವ ಮೆಂಥಾಲ್‌ ಅಂಶವು ಜೀರ್ಣಾಂಗಗಳ ಸ್ನಾಯುಗಳನ್ನು ವಿಕಸನಗೊಳಿಸುತ್ತದೆ. ಇದರಿಂದ ಹೊಟ್ಟೆ ಭಾರವಾಗಿ, ಉಬ್ಬರಿಸಿದಂತಾಗಿದ್ದರೆ ಅಥವಾ ಹೊಟ್ಟೆ ನೋವಿದ್ದರೆ ಕಡಿಮೆಯಾಗುತ್ತದೆ. ಊಟವಾದ ಸ್ವಲ್ಪ ಹೊತ್ತಿನಲ್ಲಿ ಒಂದು ಕಪ್‌ ಹದ ಬಿಸಿಯಾದ ಪೆಪ್ಪರ್‌ಮಿಂಟ್‌ ಚಹಾ ಹೀರುವುದು ಆರಾಮ ನೀಡುತ್ತದೆ

ginger

ಶುಂಠಿ

ಇದನ್ನು ಹಲವು ರೀತಿಗಳಲ್ಲಿ ಉಪಯೋಗಿಸಬಹುದು. ಜೀರ್ಣಾಂಗಗಳಿಗೆ ಆರಾಮ ನೀಡಿ, ಅಜೀರ್ಣವಾಗದಂತೆ ಕಾಪಾಡುವ ಸಾಮರ್ಥ್ಯ ಇದರದ್ದು. ಶುಂಠಿ ಚಹಾ ಮಾಡಬಹುದು, ಕಷಾಯದಂತೆ ಸೇವಿಸಬಹುದು, ಮಜ್ಜಿಗೆಯಲ್ಲಿ ನೆನೆಸಿ ಒಣಗಿಸಿಟ್ಟುಕೊಂಡು ಕ್ಯಾಂಡಿಗಳಂತೆ ಚೀಪಬಹುದು, ಭಾವನಾಶುಂಠಿ ಎಂಬ ಹೆಸರಿನಲ್ಲಿ ಆಯುರ್ವೇದ ಅಂಗಡಿಗಳಲ್ಲಿ ಇರುವುದನ್ನು ಉಪಯೋಗಿಸಬಹುದು, ಹಸಿ ಶುಂಠಿಯನ್ನೇ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಬಳಸಬಹುದು. ಹೇಗೆ ಬಳಸಿದರೂ ಅದು ತನ್ನ ಪರಿಣಾಮವನ್ನು ಬೀರುತ್ತದೆ.

Anise

ಸೋಂಪು

ಊಟವಾದ ನಂತರ ಜಗಿಯುವುದಕ್ಕೆ ಸೋಂಪು ಬಳಸುವ ಪದ್ಧತಿ ಸಾಮಾನ್ಯವಾಗಿ ದೇಶದ ಉದ್ದಗಲಕ್ಕೆ ಚಾಲ್ತಿಯಲ್ಲಿದೆ. ಊಟದ ನಂತರ ತಾಂಬೂಲ ಸೇವಿಸುವಷ್ಟೇ ಇದು ಸಹ ಜನಪ್ರಿಯ. ಸೋಂಪು ಸಹ ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ವಾಯು ತುಂಬಿ ಡುಮ್ಮಗಾದ ಹೊಟ್ಟೆಯನ್ನು ಸಹಜ ಸ್ಥಿತಿಗೆ ತರುತ್ತದೆ. ಸೋಂಪು ಜಗಿಯುವುದು ಇಷ್ಟವಾಗದಿದ್ದರೆ ಅದರ ಚಹಾ ಸಹ ಪ್ರಯೋಜನಕಾರಿ

ಪ್ರೊಬಯಾಟಿಕ್

ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ಕಾಪಾಡಲು ಪ್ರೊಬಯಾಟಿಕ್‌ ಕಿಣ್ವಗಳ ಅಗತ್ಯವಿರುತ್ತದೆ. ಹಾಗಾಗಿ ಮೊಸರು, ಮಜ್ಜಿಗೆಯಂಥವು ಅಗತ್ಯವಾಗಿ ಬೇಕಾಗುತ್ತವೆ. ಇವುಗಳ ಜೊತೆಗೆ ಇಂಗು, ಜೀರಿಗೆ ಪುಡಿ ಅಥವಾ ಶುಂಠಿ ರಸ ಇತ್ಯಾದಿಗಳನ್ನು ಸೇರಿಸಿಕೊಂಡರೆ ಇನ್ನೂ ಉತ್ತಮ ಪರಿಣಾಮ ಪಡೆಯಬಹುದು

ಅಗಿದು ತಿನ್ನುವುದು

ಅವಸರದಲ್ಲಿ ಅಗಿಯದೆ ನುಂಗುವುದು ಬಹಳಷ್ಟು ಜನರ ಅಭ್ಯಾಸ. ಹೀಗೆ ಮಾಡುವಾಗ ಆಹಾರದ ಜೊತೆಗೆ ಸಾಕಷ್ಟು ಗಾಳಿಯೂ ಹೊಟ್ಟೆ ಸೇರುತ್ತದೆ. ಜಠರವನ್ನು ಬುಡಮೇಲು ಮಾಡುವುದಕ್ಕೆ ಇಷ್ಟು ಸಾಕಾಗುತ್ತದೆ. ಹಾಗಾಗಿ ನಿಧಾನವಾಗಿ ಅಗಿದು ತಿನ್ನುವುದರಿಂದಲೂ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು

Lemon water

ನಿಂಬೆ ನೀರು

ಬೆಚ್ಚಿನ ನೀರಿಗೆ ಒಂಚು ಚಮಚ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದಲೂ ಜೀರ್ಣಾಂಗಗಳನ್ನು ಚುರುಕು ಮಾಡಬಹುದು. ಕೆಲವರಿಗೆ ಚಿಟಿಕೆ ಸೈಂಧವ ಲವಣವನ್ನು ಬೆರೆಸಿ ಕುಡಿಯುವ ಅಭ್ಯಾಸವೂ ಇರುತ್ತದೆ. ಇದಕ್ಕೆ ಜೇನುತುಪ್ಪ ಇತ್ಯಾದಿಗಳನ್ನು ಬೆರೆಸುವ ಅಗತ್ಯವಿಲ್ಲ. ಇದಿಷ್ಟೇ ಅಲ್ಲ, ದಿನವಿಡೀ ಚೆನ್ನಾಗಿ ನೀರು ಕುಡಿಯುವುದೂ ಅಗತ್ಯ. ದೇಹಕ್ಕೆ ನೀರು ಸಾಕಾಗದಿದ್ದರೂ ಜೀರ್ಣಕ್ರಿಯೆ ಏರುಪೇರಾಗುತ್ತದೆ.

ಆಹಾರಗಳ ಬಗ್ಗೆ ಗಮನ ನೀಡಿ

ಕೆಲವು ಆಹಾರಗಳು ಹೆಚ್ಚು ವಾಯುಕಾರಕವಾಗಿರುತ್ತವೆ. ಉದಾ, ಕಾಳುಗಳು, ಎಲೆಕೋಸು, ಆಲೂಗಡ್ಡೆ ಮುಂತಾದವು. ಹೊಟ್ಟೆ ಸರಿಯಿಲ್ಲ ಎನ್ನುವಾಗ ಇಂಥ ಆಹಾರಗಳನ್ನು ಅಗತ್ಯವಾಗಿ ದೂರ ಇಡಿ. ಸೋಡಾದಂಥ ಪೇಯಗಳು ಸಹ ಪರಿಸ್ಥಿತಿಯನ್ನು ಹದಗೆಡಿಸಬಹುದು. ಅತಿಯಾಗಿ ಸಿಹಿ ತಿನ್ನುವುದು ಮತ್ತು ಸಿಕ್ಕಾಪಟ್ಟೆ ನಾರು ತಿನ್ನುವುದರಿಂದಲೂ ಪಚನಕ್ರಿಯೆ ಬುಡಮೇಲಾಗುತ್ತದೆ

exercise

ವ್ಯಾಯಾಮ

ಹಬ್ಬವೆಂದು ವ್ಯಾಯಾಮಕ್ಕೆ ರಜೆ ನೀಡಬೇಕೆಂದಿಲ್ಲ. ಊಟದ ನಂತರ ಕೊಂಚ ವಾಕಿಂಗ್‌, ಸಂಜೆ ಅಥವಾ ಬೆಳಗಿನ ಹೊತ್ತಿನ ಮಾಮೂಲಿ ವ್ಯಾಯಾಮಗಳನ್ನು ಬಿಡಬೇಡಿ. ಎಷ್ಟೇ ಪುರುಸೊತ್ತಿಲ್ಲ ಎಂಬ ಕಾರಣ ಹೇಳಿದರೂ ವ್ಯಾಯಾಮಕ್ಕೆ ಸ್ವಲ್ಪವಾದರೂ ಸಮಯ ತೆಗೆಯಲೇಬೇಕು.

ಇದನ್ನೂ ಓದಿ: Mustard Oil Benefits: Health Benefits Of Mustard Oil For Skin

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

Dengue Fever : ಮಹಾಮಾರಿ ಡೆಂಗ್ಯೂ ಈಗ ಸಾಂಕ್ರಾಮಿಕ ರೋಗ; ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ

VISTARANEWS.COM


on

By

Dengue is now an epidemic
Koo

ಬೆಂಗಳೂರು: ಡೆಂಗ್ಯೂ ಜ್ವರವನ್ನು (Dengue Fever) ಸಾಂಕ್ರಾಮಿಕ ರೋಗ (Epidemic Diseases) ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆ 2020 ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಉಲ್ಲಂಘನೆಗೂ ದಂಡ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ನೀಡಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕ್ರಮವಹಿಸಲಾಗಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ.

ಡಿಸಿಗಳಿಗೆ ಅಧಿಕಾರ

ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಪಟ್ಟಿಗೆ ಸೇರಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜನರಿಗೆ ಇದುವರೆಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದವಿ. ಆದರೆ ಇದುವರೆಗೆ ನಮಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ಮಾತ್ರ ಪಾಲಿಕೆಗಳು ಕೆಲ ಕ್ರಮ ತೆಗೆದುಕೊಳ್ಳುವ ಅವಕಾಶ ಇತ್ತು, ಬೇರೆ ಕಡೆ ಇರಲಿಲ್ಲ. ಇದೀಗ ಡೆಪ್ಯುಟಿ ಕಮೀಷನರ್‌, ಡಿಸಿಗಳು ಇನ್ನು ಮುಂದೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದ್ದೇವೆ. ಮನೆ, ಸಂಸ್ಥೆ, ಕಟ್ಟಡಗಳು, ನಿರ್ಮಾಣ ಹಂತದ ಸೈಟ್, ಹೋಟೆಲ್ ಹೀಗೆ ಹಲವು ಸ್ಥಳಗಳ ಸುತ್ತಮುತ್ತ ಸರಿಯಾದ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.

ಆ ಪ್ರಕಾರ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 200 ರೂ. ದಂಡ, ನಗರ ಪ್ರದೇಶಗಳ ಮನೆಗಳಿಗೆ 400 ರೂ., ನಗರ ಪ್ರದೇಶದ ವಾಣಿಜ್ಯ ಪ್ರದೇಶ, ಮಾಲ್, ಮಾರುಕಟ್ಟೆಗಳಿಗೆ 1 ಸಾವಿರ ರೂ, ಗ್ರಾಮೀಣ ಪ್ರದೇಶಗಳಲ್ಲಿ 500 ರೂವರೆಗೆ ದಂಡ ಇರಲಿದೆ. ಖಾಲಿ ಸ್ಥಳ, construction ಸೈಟ್ ( ನಗರ ಪ್ರದೇಶ) 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ ದಂಡ ಇರಲಿದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Amla For Your Hair: ತಲೆಗೂದಲ ಆರೈಕೆಯಲ್ಲಿ ನೆಲ್ಲಿಕಾಯಿಯ ಬಳಕೆ ಹೇಗೆ?

Amla For Your Hair: ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ನೆಲ್ಲಿಕಾಯಿಯ ಇನ್ನಷ್ಟು ಉಪಯೋಗಗಳ ಬಗ್ಗೆ, ಹೇರ್‌ಮಾಸ್ಕ್‌ ಮಾಡುವ ಬಗ್ಗೆಯೂ ಇಲ್ಲಿವೆ ವಿವರ.

VISTARANEWS.COM


on

Hair Care Habits
Koo

ಆಯುರ್ವೇದದಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿ ತನ್ನ ವಿಶೇಷ ಸತ್ವಗಳಿಂದ ಈಗ ವಿಶ್ವದೆಲ್ಲೆಡೆ ಹೆಸರಾಗಿದೆ. ವಿಟಮಿನ್‌-ಸಿಯಂಥ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಇದು, ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಉಪಯುಕ್ತ ಸತ್ವಗಳನ್ನು ಹೊಂದಿದೆ. ಮಧುಮೇಹ ನಿಯಂತ್ರಣಕ್ಕೆ ಮತ್ತು ತೂಕ ಇಳಿಕೆಗೆ ಅನುಕೂಲಕರವಾಗಿದೆ. ಜೊತೆಗೆ, ಹಲವು ರೀತಿಯ ಜೀವಸತ್ವಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ಇಡೀ ದೇಹಕ್ಕೆ ಬೇಕಾದಂಥ ಸತ್ವಗಳನ್ನು ಒದಗಿಸಬಲ್ಲವು. ಹೀಗೆ ಬಹೂಪಯೋಗಿ ಎನಿಸಿರುವ ನೆಲ್ಲಿಕಾಯಿಯಿಂದ ಆಗುವಂಥ ಅನುಕೂಲಗಳನ್ನು ಒಮ್ಮೆ ಗಮನಿಸೋಣ. ಜೊತೆಗೆ ಹಲವು ಬಗೆಯ ಹೇರ್‌ಮಾಸ್ಕ್‌ಗಳನ್ನು ಮಾಡುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ. ನಳನಳಿಸುವ (Amla For Your Hair) ಕೂದಲು ನಿಮ್ಮದಾಗಲಿ.

Skin Health Cucumber Benefits

ಚರ್ಮಕ್ಕೆ ಕಾಂತಿ

ಇದರಲ್ಲಿರುವ ವಿಟಮಿನ್‌ ಸಿ ಅಂಶವು ಕೊಲಾಜಿನ್‌ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಬರುವುದು ಕಡಿಮೆಯಾಗಿ, ತಾರುಣ್ಯಭರಿತ ತ್ವಚೆಯನ್ನು ಹೊಂದಬಹುದು. ಜೊತೆಗೆ, ಚರ್ಮದ ಹೊಳಪು ಹೆಚ್ಚಿಸಿ, ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆಯುತ್ತದೆ. ಹಾಗಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಈ ಮೂಲಕ ನೆರವಾಗುತ್ತದೆ.

Image Of Egg Benefits For Hair

ಕೂದಲು ಸೊಂಪು

ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೂ ಪೋಷಣೆ ನೀಡುತ್ತದೆ.

ಪ್ರತಿರೋಧಕ ಶಕ್ತಿ ಹೆಚ್ಚಳ

ವಿಟಮಿನ್‌ ಸಿ ಜೀವಸತ್ವ ನೆಲ್ಲಿಕಾಯಿಯಲ್ಲಿ ಅತ್ಯಧಿಕವಾಗಿದೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್‌ ಸಿ ದೊರೆಯಬೇಕಾದ್ದು ಅಗತ್ಯ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.

Antioxidants in it keep immunity strong Benefits Of Mandakki

ಉತ್ಕರ್ಷಣ ನಿರೋಧಕಗಳು

ಹಲವು ರೀತಿಯ ಫ್ಲೆವನಾಯ್ಡ್‌ಗಳು, ಪಾಲಿಫೆನಾಲ್‌ಗಳು ನೆಲ್ಲಿಕಾಯಿಯಲ್ಲಿ ವಿಫುಲವಾಗಿವೆ. ಇವು ದೇಹದಲ್ಲಿ ಉರಿಯೂತ ಶಮನ ಮಾಡುವುದಕ್ಕೆ ಸಹಕಾರಿ. ಜೊತೆಗೆ, ಬೀಡಾಡಿಗಳಂತೆ ಅಲೆದುಕೊಂಡಿರುವ ಮುಕ್ತ ಕಣಗಳನ್ನು ನಿರ್ಬಂಧಿಸಲು ಇವು ಅಗತ್ಯ. ಇದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂಥ ರೋಗಗಳ ಭೀತಿ ದೂರವಾಗುತ್ತದೆ.

Improves digestion Peach Benefits

ಜೀರ್ಣಾಂಗಗಳು ಚುರುಕು

ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ನೆಲ್ಲಿಕಾಯಿ ಪ್ರಚೋದನೆ ನೀಡುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ಆಹಾರ ಸುಲಲಿತವಾಗಿ ಪಚನವಾಗುತ್ತವೆ ಎಂಬುದಷ್ಟೇ ಅಲ್ಲ, ಸತ್ವಗಳನ್ನೂ ಚೆನ್ನಾಗಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ. ಲಘುವಾದ ವಿರೇಚನದ ಗುಣವನ್ನೂ ಆಮಲಕಿ ಹೊಂದಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

May support eye health Peach Benefits

ದೃಷ್ಟಿ ಉತ್ತಮ

ನೆಲ್ಲಿಕಾಯಲ್ಲಿರುವ ವಿಟಮಿನ್‌ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕ ಸತ್ವ. ಜೊತೆಗೆ, ಕೆರೊಟಿನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳು ದೃಷ್ಟಿ ಮಂದವಾಗದಂತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಯಸ್ಸಾದಂತೆ ಕಾಡುವ ಕ್ಯಾಟರಾಕ್ಟ್‌ ನಂಥ ಸಮಸ್ಯೆಗಳು ಬಾರದಂತೆ ಮುಂದೂಡುತ್ತವೆ.

ನೆಲ್ಲಿಕಾಯಿ ಎಣ್ಣೆ:

ಅಗಲವಾದ ಬಾಯಿಯ ಪಾತ್ರೆಯಲ್ಲಿ ಒಂದು ಕಪ್‌ ನೆಲ್ಲಿಕಾಯಿ ಪುಡಿಯನ್ನು ಎರಡು ಕಪ್‌ ಶುದ್ಧ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರ ಮಾಡಿ. ಇದನ್ನು ಮಂದವಾದ ಉರಿಯಲ್ಲಿ ಕುದಿಯುವುದಕ್ಕೆ ಬಿಡಿ. ಸುಮಾರು ೧೦-೧೫ ನಿಮಿಷಗಳ ನಂತರ ತಿಳಿಯಾದ ಹಸಿರು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಇದನ್ನು ಸೋಸಿ, ಗಾಜಿನ ಬಾಟಲಿಗೆ ತುಂಬಿಟ್ಟುಕೊಳ್ಳಿ. ಈ ನೆಲ್ಲಿಕಾಯಿ ಎಣ್ಣೆಯನ್ನು ನಿಯಮಿತವಾಗಿ ತಲೆಕೂದಲಿಗೆ ಉಪಯೋಗಿಸುವುದರಿಂದ ಆರೋಗ್ಯಕರ ಕೇಶರಾಶಿಯನ್ನು ಹೊಂದಲು ಸಾಧ್ಯ.

ಇದನ್ನೂ ಓದಿ: Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೇರ್‌ ಮಾಸ್ಕ್‌

ನಾಲ್ಕು ಚಮಚ ನೆಲ್ಲಿಕಾಯಿ ಪುಡಿಯನ್ನು ಅಷ್ಟೇ ಪ್ರಮಾಣದ ಮೊಸರಿನೊಂದಿಗೆ ಸೇರಿಸಿ ಪೇಸ್ಟ್‌ ಮಾಡಿ. ಇದನ್ನು ತಲೆಗೂದಲು ಬುಡದಿಂದ ತುದಿಯವರೆಗೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿ. ಹಾಗೆಯೇ, ಸಮ ಪ್ರಮಾಣದಲ್ಲಿ ನೆಲ್ಲಿಕಾಯಿ ಪುಡಿ, ಮದರಂಗಿ ಪುಡಿ ಮತ್ತು ಮೊಸರನ್ನು ಮಿಶ್ರ ಮಾಡಿ ಪೇಸ್ಟ್‌ ಮಾಡಿ. ಇದನ್ನು ತಲೆಯ ರೋಮರೋಮಗಳಿಗೆ ಹಚ್ಚಿ, ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಿಂದ ತಲೆಸ್ನಾನ ಮಾಡಿ. ಇನ್ನೊಂದು ಉತ್ತಮ ಹೇರ್‌ ಮಾಸ್ಕ್‌ ಎಂದರೆ- ೪ ಚಮಚ ನೆಲ್ಲಿಕಾಯಿ ಪುಡಿಗೆ ಕಾಲು ಕಪ್‌ ತೆಂಗಿನಕಾಯಿ ಹಾಲು ಸೇರಿಸಿ, ಹದವಾಗಿ ಪೇಸ್ಟ್‌ ತಯಾರಿಸಿ. ಇದನ್ನು ತಲೆಗೆಲ್ಲ ಆಮೂಲಾಗ್ರವಾಗಿ ಲೇಪಿಸಿ ಒಂದು ತಾಸು ಹಾಗೆಯೇ ಬಿಡಿ. ನಂತರ ಹದ ಉಷ್ಣತೆಯ ನೀರಿನಿಂದ ತೊಳೆಯಿರಿ.

Continue Reading

ಆರೋಗ್ಯ

Home Remedies for Skin: ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದು ಹೇಗೆ?

Home Remedies for Skin: ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Monsoon Skincare
Koo

ಪ್ರಾಯವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಎಂಬ ಬಗ್ಗೆ ಮಾನವನ ಶೋಧ ಕೊನೆಯರಿಯದ್ದು. ನಮ್ಮ ಆಹಾರ, ಜೀವನಶೈಲಿ, ವಂಶವಾಹಿಗಳೆಲ್ಲ ಸೇರಿ ನಮ್ಮ ಚರ್ಮದ ನಯ, ಹೊಳಪು, ಸುಕ್ಕು ಮುಂತಾದ ಬಹಳಷ್ಟನ್ನು ನಿರ್ಧರಿಸುತ್ತವೆ, ಎಂಬಲ್ಲಿಗೆ ನಮಗೆ ವಯಸ್ಸಾದಂತೆ ಕಾಣುವುದು ಅಥವಾ ಕಾಣದಿರುವುದನ್ನೂ ನಿರ್ಧರಿಸುತ್ತವೆ ಎಂದಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದೇಹಕ್ಕೆ ದೊರೆಯಬೇಕಾದ ಸತ್ವಗಳು ದೊರೆತಾಗ ಮಾತ್ರವೇ ಆರೋಗ್ಯಯುತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಅದರಲ್ಲೂ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಂಥ ಆಹಾರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಜೊತೆಗೆ ಕೆಲವು ಫೇಸ್‌ಪ್ಯಾಕ್‌ ಅಥವಾ ಫೇಸ್‌ ಮಾಸ್ಕ್‌ಗಳು ಸಹ ಒಳ್ಳೆಯ ಫಲಿತಾಂಶ ನೀಡಬಲ್ಲವು. ಅಂಥ ಕೆಲವನ್ನು (Home Remedies for Skin) ಇಲ್ಲಿ ವಿವರಿಸಲಾಗಿದೆ.

beautiful asian young woman eating healthy food Sleep Tips

ಆಹಾರ

ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಆಹಾರಗಳ ಸೇವನೆ ಅತಿಮುಖ್ಯ. ಇವುಗಳು ದೇಹದಲ್ಲಿ ಕೊಲಾಜಿನ್‌ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಮಾತ್ರವಲ್ಲ, ಕೀಲುಗಳು ಸವೆಯದಂತೆಯೂ ಕಾಪಾಡಿಕೊಳ್ಳಬಹುದು. ಒಮೇಗಾ ೩ ಕೊಬ್ಬಿನಾಮ್ಲ ಹೆಚ್ಚಿರುವ ಆಹಾರಗಳು, ವಿಟಮಿನ್‌ ಸಿ ಅಧಿಕವಿರುವ ಹಣ್ಣು ತರಕಾರಿಗಳು, ವಿಟಮಿನ್‌ ಇ ಹೇರಳವಾಗಿರುವ ಕಾಯಿ-ಬೀಜಗಳು- ಇವೆಲ್ಲವೂ ದಿನವೂ ನಮ್ಮ ಆಹಾರದ ಭಾಗವಾಗಿರಬೇಕು.

Aloe Vera Herbs For Hair Growth Aloe vera contains enzymes that can promote healthy hair growth by removing dead skin cells from the scalp and promoting hair follicle health.

ಲೋಳೆಸರ

ಅಲೋವೇರಾ ಎಂದೇ ಕರೆಸಿಕೊಳ್ಳುವ ಇದನ್ನು ಯಾವುದೇ ಫೇಸ್‌ ಮಾಸ್ಕ್‌ಗೆ ಬಳಸುವ ಬದಲು, ಇದನ್ನೇ ಪ್ರತ್ಯೇಕವಾಗಿ ಮುಖಕ್ಕೆ ಲೇಪಿಸಬಹುದು. ಇದರಲ್ಲಿರುವ ಮ್ಯಾಲಿಕ್‌ ಆಮ್ಲವು ಚರ್ಮದ ಮೇಲೆ ಅತ್ಯಂತ ಪೂರಕ ಪರಿಣಾಮವನ್ನು ಬೀರುತ್ತದೆ. ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಇದನ್ನು ಲೇಪಿಸಿ ಸುಮಾರು ೨೦ ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

ಮೊಟ್ಟೆ, ಜೇನುತುಪ್ಪದ ಮಾಸ್ಕ್‌

ಮೊಟ್ಟೆಯ ಬಿಳಿಯ ಭಾಗ ಇದಕ್ಕೆ ಸೂಕ್ತವಾದದ್ದು. ಇದರಲ್ಲಿರುವ ಅಲ್ಬುಮಿನ್‌ ಅಂಶವು ಚರ್ಮದಲ್ಲಿ ಕೊಲಾಜಿನ್‌ ಹೆಚ್ಚಳಕ್ಕೆ ನೆರವಾಗುತ್ತದೆ. ಜೊತೆಗೆ ಜೇನುತುಪ್ಪವು ಚರ್ಮದ ನೈಸರ್ಗಿಕ ತೇವಾಂಶ ನಾಶವಾಗದಂತೆ ನೋಡಿಕೊಳ್ಳುತ್ತದೆ. ಮೊಟ್ಟೆಯ ಬಿಳಿ ಭಾಗ ಮತ್ತು ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆಲ್ಲ ಲೇಪಿಸಿ ಕನಿಷ್ಟ ೨೦ ನಿಮಿಷಗಳಾದರೂ ಬಿಡಿ. ನಂತರ ಬೆಚ್ಚಗಿನ ನೀರಲ್ಲಿ ಮುಖ ತೊಳೆದರಾಯ್ತು.

Extra virgin olive oil Foods For Healthy Joints And Muscles

ಆಲಿವ್‌ ಎಣ್ಣೆ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಎ ಮತ್ತು ಇ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ರಾತ್ರಿ ಮಲಗುವ ಮುನ್ನ, ಆಲಿವ್‌ ಎಣ್ಣೆಯ ಕೆಲವು ಹನಿಗಳನ್ನು ಅಂಗೈಗೆ ಹಾಕಿಕೊಂಡು ಅದನ್ನು ಮುಖಕ್ಕೆಲ್ಲ ಲೇಪಿಸಿ. ಲಘುವಾಗಿ ವೃತ್ತಾಕಾರವಾಗಿ ಮುಖವನ್ನೆಲ್ಲ ಮಸಾಜ್‌ ಮಾಡುತ್ತಾ ಬನ್ನಿ. ಇದನ್ನು ರಾತ್ರಿಡೀ ಹಾಗೆಯೇ ಇರಿಸಿಕೊಂಡು ಮಲಗುವುದು ಸೂಕ್ತ. ಇದರಿಂದ ಚರ್ಮದ ಆರೈಕೆಗೆ ಅನುಕೂಲವಾಗುತ್ತದೆ.

Image Of Cucumber Benefits

ಸೌತೇಕಾಯಿ

ಈ ತರಕಾರಿಯಲ್ಲಿರುವ ನೀರಿನಂಶ ಮತ್ತು ಸಿಲಿಕಾಗಳು ಚರ್ಮದ ಬಿಗಿಯನ್ನು ಹೆಚ್ಚಿಸಿ, ಶುಷ್ಕತೆಯನ್ನು ಹೋಗಲಾಡಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಸಹ ಹೆಚ್ಚಿಸುತ್ತವೆ. ತಾಜಾ ಸೌತೇಕಾಯಿ ತುರಿಯನ್ನು ಮುಖದ ಮೇಲೆಲ್ಲ ಲೇಪಿಸಿ, ಅರ್ಧ ತಾಸು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯುವುದರಿಂದ, ಇಡೀ ಮುಖದ ಚರ್ಮವೆಲ್ಲ ತಾಜಾ ಆಗುತ್ತದೆ.

ಇದನ್ನೂ ಓದಿ: Breastfeeding diet: ಹಾಲುಣಿಸುವ ಅಮ್ಮಂದಿರ ಆಹಾರ ಹೇಗಿರಬೇಕು?

ಅವಕಾಡೊ

ಬೆಣ್ಣೆ ಹಣ್ಣು ಚರ್ಮದ ಆರೈಕೆಯಲ್ಲಿ ಮಾತ್ರವೇ ಅಲ್ಲ, ಇಡೀ ಶರೀರಕ್ಕೆ ಬೇಕಾದ ಆರೈಕೆಯನ್ನೂ ಒದಗಿಸುವಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ. ಚರ್ಮಕ್ಕೆ ಬೇಕಾದ ಕೊಲಾಜಿನ್‌ ಉತ್ಪಾದನೆಗೆ ಅಗತ್ಯವಾದ ಸತ್ವಗಳನ್ನು ಇದು ನೀಡುತ್ತದೆ. ಆರೋಗ್ಯಕರವಾದ ಕೊಬ್ಬಿನಂಶ, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಚರ್ಮಕ್ಕೆ ಒದಗಿಸುತ್ತದೆ. ಚೆನ್ನಾಗಿ ಹಣ್ಣಾದ ಅವಕಾಡೊವನ್ನು ಪೇಸ್ಟ್‌ ಮಾಡಿ ಮುಖಕ್ಕೆ ಲೇಪಿಸಿ. ಅರ್ಧ ತಾಸಿನ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.

Continue Reading

ಆರೋಗ್ಯ

Hair Combing: ಕೂದಲು ಬಾಚುವ ಅಭ್ಯಾಸವಿಲ್ಲವೇ? ಹಾಗಾದರೆ ಇದನ್ನೊಮ್ಮೆ ಓದಿ!

Hair Combing: ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್‌ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ಈ ಲೇಖನ ಓದಿ.

VISTARANEWS.COM


on

Hair Combing
Koo

ನಮ್ಮ ಅಜ್ಜಿಯರ ಕಾಲದ ಹೆರಳು ಹಾಕುವ ಕ್ರಮವನ್ನೊಮ್ಮೆ ನೆನಪಿಸಿಕೊಳ್ಳಿ. ತಲೆಯ ಚರ್ಮಕ್ಕೆ, ಬೈತಲೆಗೆಲ್ಲ ಸರಿಯಾಗಿ ಎಣ್ಣೆ ಹಚ್ಚಿ, ತಲೆಯನ್ನು ಚೆನ್ನಾಗಿ ಬಾಚಿ (Hair Combing), ಕೂದಲಿನ ಸಿಕ್ಕು ಬಿಡಿಸಿ ನಂತರ ಹೆರಳು ಹಾಕುತ್ತಿದ್ದರು. ಹೀಗೆ ಜಡೆ ಹಾಕಿದರೆ ಮಾರನೇ ದಿನ ಆ ಹೊತ್ತಿನವರೆಗೆ ಹೆರಳು ಬಿಚ್ಚುತ್ತಿರಲಿಲ್ಲ, ಭದ್ರವಾಗಿ ಹಾಗೆಯೇ ಕುಳಿತಿರುತ್ತಿತ್ತು. ಈಗಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟರೆ, ಉಳಿದವರಲ್ಲಿ ಎಷ್ಟು ಮಂದಿ ತಲೆ ಬಾಚುತ್ತಾರೆ ಎಂಬುದು ಚರ್ಚಾಸ್ಪದ ವಿಷಯ. ಕಾರಣ, ಒಂದೋ ಬಾಚುವಷ್ಟು ಕೂದಲು ಉಳಿದಿರುವುದಿಲ್ಲ ಅಥವಾ ಬಾಚದೆ ಕೆದಿರಿಕೊಂಡಿರುವುದು ʻಕೂಲ್‌ʼ ಎನಿಸುತ್ತದೆ ಇಲ್ಲವೇ ತಲೆ ಬಾಚುವುದಕ್ಕೆಲ್ಲ ವ್ಯವಧಾನವೇ ಇರುವುದಿಲ್ಲ. ಆದರೆ ತಲೆಯನ್ನು ಚೆನ್ನಾಗಿ ಬಾಚುವುದರಿಂದ ಆರೋಗ್ಯಕ್ಕೆ ಲಾಭಗಳಿವೆ ಎನ್ನುತ್ತವೆ ಅಧ್ಯಯನಗಳು. ಏನು ಲಾಭವಿದೆ? ತಲೆ ಬಾಚುವುದೆಂದರೆ ಕೂಲಿನ ಸಿಕ್ಕು ಬಿಡಿಸಿ, ಕೇಶಗಳನ್ನು ವ್ಯವಸ್ಥಿತಗೊಳಿಸುವುದು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ಅದಷ್ಟೇ ಅಲ್ಲ, ತಲೆಯ ಚರ್ಮದ ಮತ್ತು ಕೂದಲುಗಳ ಬುಡದ ಆರೋಗ್ಯವನ್ನು ಕಾಪಾಡುವಲ್ಲಿನ ಅಗತ್ಯ ಕೆಲಸವಿದು. ತಲೆಯ ಚರ್ಮದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ತೈಲದ ಅಂಶವು ಕೂದಲಿನ ಸಹಜ ಕಂಡೀಶನರ್‌ ರೀತಿಯಲ್ಲಿ ವರ್ತಿಸುತ್ತದೆ. ಹಾಗಾಗಿ ದಿನವೂ ಅದನ್ನು ಕೂದಲಿನ ಎಲ್ಲೆಡೆ ಹರಡುವುದು ಮುಖ್ಯ. ಅದನ್ನು ಒಂದೆಡೆ ಹಾಗೆಯೇ ಉಳಿಯಲು ಬಿಟ್ಟರೆ ತಲೆಯ ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ತಲೆಯನ್ನು ಸಾದ್ಯಂತವಾಗಿ ಬಾಚುವುದು ಅಗತ್ಯ. ಇನ್ನೊಂದು ಮುಖ್ಯವಾದ ಲಾಭವೆಂದರೆ ತಲೆಯ ಭಾಗಕ್ಕೆ ಹೆಚ್ಚುವ ರಕ್ತ ಸಂಚಾರ. ಇದರಿಂದ ತಲೆಯ ಚರ್ಮಕ್ಕೆ ಮತ್ತು ಕೂದಲಿನ ಬುಡಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಸರಬರಾಜಾಗುತ್ತದೆ. ಜೊತೆಗೆ, ಸತ್ವಗಳೂ ಹೆಚ್ಚಾಗಿ ದೊರೆಯುತ್ತವೆ. ಇದಲ್ಲದೆ, ಕೂದಲಿನ ಬುಡವನ್ನು ಬಾಚುವುದರಿಂದ ಮೃತಕೋಶಗಳನ್ನು ತೆಗೆದುಹಾಕಿ, ಹೊಸ ಕೊಶಗಳು ಬರುವುದಕ್ಕೆ ನೆರವಾಗುತ್ತದೆ. ಇದರಿಂದ ತಲೆಹೊಟ್ಟಿನ ಬಾಧೆಯನ್ನೂ ನಿಯಂತ್ರಣಕ್ಕೆ ತರಬಹುದು.

Hair Comb

ಎಷ್ಟು ಬಾರಿ?

ಕೂದಲು ಬಾಚುವುದು ಅಗತ್ಯ ಎನ್ನುವುದು ಸರಿ. ಎಷ್ಟು ದಿನಕ್ಕೊಮ್ಮೆ ಅಥವಾ ದಿನಕ್ಕೆಷ್ಟು ಬಾರಿ ಕೂದಲು ಬಾಚಬೇಕು? ನೆನಪಾದಾಗೆಲ್ಲ ಬಾಚಣಿಕೆಗೆ ಕೈಯಿಕ್ಕಬೇಕೆ? ಇದಕ್ಕೊಂದು ಶಿಸ್ತು ಮಾಡಿಕೊಳ್ಳುವುದೇ… ಹೇಗೆ? ದಿನಕ್ಕೆ ಎರಡು ಬಾರಿ ಬಾಚುವುದು ಸಾಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಬೆಳಗಿನ ಹೊತ್ತು ಮತ್ತು ರಾತ್ರಿ ಮಲಗುವ ಮುನ್ನ ತಲೆಯನ್ನೆಲ್ಲ ಕೂಲಂಕಷವಾಗಿ ಬಾಚುವುದು ಒಳ್ಳೆಯ ಅಭ್ಯಾಸ. ಕೂದಲು ಮಿತಿಮೀರಿ ಗುಂಗುರಾಗಿದ್ದರೆ ಬಾಚುವಾಗ ಎಚ್ಚರಿಕೆ ಬೇಕಾಗುತ್ತದೆ. ಹಾಗೆಯೇ ಒದ್ದೆ ಕೂದಲನ್ನು ಎಂದಿಗೂ ಬಾಚಬೇಡಿ. ಕೂದಲು ಒದ್ದೆ ಇದ್ದಾಗ ಬೇಗನೇ ತುಂಡಾಗುತ್ತದೆ. ಹೆಚ್ಚಿನ ಸಾರಿ ಬುಡದಿಂದಲೇ ಕಿತ್ತು ಬರುತ್ತದೆ.
ತಲೆಯಲ್ಲಿ ತೀರಾ ಎಣ್ಣೆಯ ಚರ್ಮವಿದ್ದರೆ, ಹೆಚ್ಚು ಸಾರಿ ಬಾಚಿದಷ್ಟಕ್ಕೂ ಚರ್ಮದಲ್ಲಿರುವ ಎಣ್ಣೆಯಂಶವನ್ನು ಎಲ್ಲೆಡೆ ಹರಡಬಹುದು. ಇದರಿಂದ ಒಂದೆಡೆ ಜಿಡ್ಡು ಜಮೆಯಾಗಿ, ಚರ್ಮದ ಆರೋಗ್ಯ ಹಾಳಾಗುವುದನ್ನು ತಪ್ಪಿಸಬಹುದು. ತಲೆ ಚರ್ಮದ ನೈಸರ್ಗಿಕ ತೈಲ ಅಥವಾ ಸೇಬಂ ಕೂದಲಿನ ಬುಡಕ್ಕೆ ಅಂಟಿಕೊಂಡಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ಬರಬಹುದು. ತಲೆ ಚರ್ಮದ ಉಸಿರಾಟಕ್ಕೆ ತಡೆಯಾಗುವಂತೆ, ಸೂಕ್ಷ್ಮ ರಂಧ್ರಗಳು ಮುಚ್ಚಿಹೋಗಬಹುದು. ಇದರಿಂದ ಕೂದಲಿನ ಬೆಳವಣಿಗೆ ನಿಂತು ಹೋಗಿ, ತಲೆಗೂದಲು ತೆಳ್ಳಗಾಗಬಹುದು.

ಇದನ್ನೂ ಓದಿ: Health Tips: ನೋವು ನಿವಾರಿಸುವ ಅಪಾಯರಹಿತ ನೈಸರ್ಗಿಕ ಮೂಲಿಕೆಗಳಿವು!

ಬಾಚಣಿಕೆ ಹೇಗಿರಬೇಕು?

ಇದೂ ಒಂದು ಪ್ರಶ್ನೆಯೇ ಎಂದು ನಗಬೇಡಿ. ಕೂದಲಿನ ಸಿಕ್ಕು ಬಿಡಿಸುವ ಉದ್ದೇಶವಿದ್ದರೆ ಅಗಲವಾದ ಹಲ್ಲುಗಳಿರುವ ಬಾಚಣಿಕೆಯ ಬಳಕೆ ಸರಿ. ತಲೆಯ ಚರ್ಮದಲ್ಲಿರುವ ತೈಲದಂಶವನ್ನು ಎಲ್ಲೆಡೆ ಸಮನಾಗಿ ಹರಡುವ ಉದ್ದೇಶವಿದ್ದರೆ ಒತ್ತೊತ್ತಾಗಿ ಹಲ್ಲುಗಳಿರುವ ಬಾಚಣಿಕೆ ಬೇಕಾಗುತ್ತದೆ. ಚೂಪಾದ ಮೊನೆಗಳಿರುವ ಪ್ಲಾಸ್ಟಿಕ್‌ ಬಾಚಣಿಕೆಗಳಿಗಿಂತ ಮೊಂಡಾದ ತುದಿಗಳಿರುವ ಮರದ ಬಾಚಣಿಕೆಗಳು ಒಳ್ಳೆಯವು. ಆದರೀಗ ನಾನಾ ರೀತಿಯ ಹೇರ್‌ಬ್ರಷ್‌ಗಳು ಲಭ್ಯವಿದ್ದು, ಹೆಚ್ಚಿನವುಗಳ ತುದಿ ಪರಚುವಂತೆ ಇರುವುದಿಲ್ಲ. ರಕ್ತ ಸಂಚಾರಕ್ಕೂ ಅನುಕೂಲ ಮಾಡುವಂತೆ ಇರುತ್ತವೆ.

Continue Reading
Advertisement
TA Sharavana
ಕರ್ನಾಟಕ2 hours ago

TA Sharavana : ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಬಳಿಕ ಕಚೇರಿ ಉದ್ಘಾಟನೆ ಮಾಡಿದ ಟಿ.ಎ ಶರವಣ

actor darshan
ಸಿನಿಮಾ4 hours ago

Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

Actor Darshans gang moves Google to destroy evidence after Renukaswamys murder
ಸಿನಿಮಾ4 hours ago

Actor darshan : ಪಟ್ಟಣಗೆರೆ ಶೆಡ್‌ನಲ್ಲಿ ಡೆವಿಲ್‌‌‌ ಗ್ಯಾಂಗ್‌‌‌ನ ಕ್ರೌರ್ಯ ಹೇಗಿತ್ತು? ; ಸಾಕ್ಷಿ ನಾಶಕ್ಕೆ ಗೂಗಲ್‌ ಮೊರೆ!

Actor Darshan gang
ಬೆಂಗಳೂರು6 hours ago

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

ROad Accident
ಗದಗ8 hours ago

Road Accident : ನೀರಿನಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ ಶವವಾಗಿ ಪತ್ತೆ; ಸ್ಕಿಡ್ ಆಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದ ಗೂಡ್ಸ್ ಗಾಡಿ

darling krishna
ಸಿನಿಮಾ9 hours ago

Darling Krishna: ಕೃಷ್ಣನ ಮನೆಗೆ ಮಹಾಲಕ್ಷ್ಮಿ”KrissMi” ಪದಾರ್ಪಣೆ

Road Accident
ರಾಯಚೂರು9 hours ago

Road Accident : ಸ್ಕೂಲ್‌ ಬಸ್‌-ಸಾರಿಗೆ ಬಸ್‌ ಡಿಕ್ಕಿ; ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಮಕ್ಕಳಿಬ್ಬರು ಬಲಿ, ತುಂಡಾಯ್ತು ಮಕ್ಕಳ ಕಾಲುಗಳು

Road Accident
ಚಿಕ್ಕಬಳ್ಳಾಪುರ10 hours ago

Road Accident : ಕಂಟ್ರೋಲ್ ತಪ್ಪಿ‌ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ ಲಾರಿ; ಕ್ಯಾಶಿಯರ್‌, ಅಡುಗೆ ಭಟ್ಟ ದಾರುಣ ಸಾವು

One and a half year old boy dies of suffocation after swallowing bottle cap in Shivamogga
ಶಿವಮೊಗ್ಗ10 hours ago

Child Death: ಶಿವಮೊಗ್ಗದಲ್ಲಿ ಜ್ಯೂಸ್‌ ಬಾಟೆಲ್‌ನ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಉಸಿರುಗಟ್ಟಿ ಸಾವು

Karnataka Weather Forecast
ಮಳೆ10 hours ago

Karnataka Weather : ಗೌರಿ-ಗಣೇಶ ಹಬ್ಬಕ್ಕೆ ಮಳೆ ಅಡ್ಡಿ!ನಿರಂತರ ಗಾಳಿ ಜತೆಗೆ ಭಾರಿ‌ ವರ್ಷಧಾರೆ ಎಚ್ಚರಿಕೆ

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್5 days ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 week ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 weeks ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ4 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 month ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 month ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 month ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 month ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌