Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ! - Vistara News

ಆರೋಗ್ಯ

Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!

ಅತಿಯಾದ ಚಹಾ ಸೇವನೆ ಹೇಗೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಲ್ಲದೋ ಹಾಗೆಯೇ ಚಳಿಗಾಲದಲ್ಲಿ ಕೆಲವು ರೀತಿಯ ಚಹಾ ಸೇವನೆಗಳು ಆರೋಗ್ಯಕ್ಕೆ (Health Tips) ಲಾಭವನ್ನೂ ತಂದುಕೊಡಬಲ್ಲವು. ಹೇಗೆ? ಈ ಲೇಖನ ಓದಿ.

VISTARANEWS.COM


on

Masala Tea For Health
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾ ಕುಡಿಯುವುದು ಹಲವಾರು ದೇಶಗಳ ಆಹಾರ ಸಂಸ್ಕೃತಿಯ ಭಾಗ. ಹಾಲು ಹಾಕದೆಯೇ ನಾನಾ ರೀತಿಯ ಹರ್ಬಲ್‌ ಚಹಾಗಳು ಜಪಾನ್‌ನಂಥ ಪೂರ್ವ ದೇಶಗಳಲ್ಲಿ ಜನಪ್ರಿಯವಾದರೆ, ಡಿಕಾಕ್ಷನ್‌ಗೆ ಹಾಲು ಬೆರೆಸಿದ ಚಹಾ ಪಶ್ಚಿಮದ ಬ್ರಿಟಿಷ್‌ ಬದುಕಿನ ಭಾಗ. ನಡುವಿರುವ ನಾವು, ಅಂದರೆ ಭಾರತೀಯರು ಹಾಲು ಬೆರೆಸದ ನಿಂಬೆ ಚಹಾ, ಪುದೀನಾ ಚಹಾಗಳಿಂದ ಹಿಡಿದು ವಿವಿಧ ರೀತಿಯ ಹರ್ಬಲ್‌ ಚಹಾ, ಗ್ರೀನ್‌ ಟೀ, ಬ್ಲ್ಯಾಕ್‌ ಟೀಗಳು ಹಾಗೂ ಹಾಲು ಬೆರೆಸಿದ ಖಡಕ್‌ ಮಸಾಲೆ ಚಹಾಗಳವರೆಗೆ ಯಾವುದಕ್ಕಾದರೂ ಸೈ. ಅತಿಯಾದ ಚಹಾ ಸೇವನೆ ಹೇಗೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಲ್ಲದೋ ಹಾಗೆಯೇ ಚಳಿಗಾಲದಲ್ಲಿ ಕೆಲವು ರೀತಿಯ ಚಹಾ ಸೇವನೆಗಳು ಆರೋಗ್ಯಕ್ಕೆ ಲಾಭವನ್ನೂ (Health Tips) ತಂದುಕೊಡಬಲ್ಲವು. ಎಂಥಾ ಚಹಾ ಅದು? ಬನ್ನಿ ತಿಳಿಯೋಣ.

ಮಸಾಲೆ ಚಹಾ
ಇದು ಚಹಾ ಪ್ರಿಯರೆಲ್ಲರಿಗೂ ಗೊತ್ತಿರುವ ವಿಷಯವೇ. ದಾಲ್ಚಿನಿ ಚಕ್ಕೆ, ಲವಂಗ, ಏಲಕ್ಕಿ, ಚಕ್ರಮೊಗ್ಗು, ಕೇಸರಿ, ಶುಂಠಿ ಮುಂತಾದ ಹಲವಾರು ಮಸಾಲೆ ಪದಾರ್ಥಗಳನ್ನು ಚಹಾ ತಯಾರಿಕೆಯಲ್ಲಿ ಬಳಸುತ್ತೇವೆ. ಕೆಲವೊಮ್ಮೆ ಇವುಗಳಲ್ಲಿ ಒಂದೊಂದೇ ವಸ್ತುಗಳನ್ನು, ಕೆಲವೊಮ್ಮೆ ಈ ವಸ್ತುಗಳ ಮಿಶ್ರಣಗಳನ್ನು ಬಳಸಿ ರುಚಿಕರವಾದ ಚಹಾ ತಯಾರಿಕೆ ಭಾರತೀಯರಲ್ಲಿ ರೂಢಿ. ಮಾತ್ರವಲ್ಲ, ಬೇರೆ ದೇಶಗಳಲ್ಲೂ ಈ ವಸ್ತುಗಳ ಚಹಾ ಬಳಕೆಯಲ್ಲಿದೆ. ಮುಖ್ಯವಾಗಿ ಚಳಿಗಾಲದಲ್ಲಿ ಬಿಸಿಯಾಗಿ ಏನಾದರೊಂದಿಷ್ಟು ಸವಿಯೋಣ ಎನಿಸಿದಾಗ ಇವು ಉಪಯುಕ್ತ. ಆದರೆ ಇಂಥ ಪೇಯಗಳಿಂದ ಆರೋಗ್ಯಕ್ಕೆ ಲಾಭವಾಗುವುದು ಹೇಗೆ ಎಂಬುದೀಗ ಪ್ರಶ್ನೆ.

ರೋಗ ನಿರೋಧಕತೆ ಹೆಚ್ಚಳ
ಮಸಾಲೆ ಚಹಾಗಳಿಂದ ದೊರೆಯುವ ಆಂಟಿ ಆಕ್ಸಿಡೆಂಟ್‌ಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ನೆಗಡಿ, ಕೆಮ್ಮು ಮತ್ತು ಫ್ಲೂ ಮಾದರಿಯ ಎಲ್ಲಾ ಲಕ್ಷಣಗಳಿಂದ ಹೋರಾಡಲು ದೇಹಕ್ಕೆ ಬಲ ನೀಡುತ್ತವೆ.

ಉರಿಯೂತ ಶಮನ
ಲವಂಗ ಮತ್ತು ಕೇಸರಿಯಂಥ ಮಸಾಲೆಗಳು ದೇಹದಲ್ಲಿನ ನೋವು ಮತ್ತು ಉರಿಯೂತ ಕಡಿಮೆ ಮಾಡಲು ನೆರವಾಗುತ್ತವೆ. ಇಂಥ ಚಹಾಗಳನ್ನು ಬಿಸಿಯಾಗಿ ಸೇವಿಸಿದಾಗ ಕಟ್ಟಿರುವ ಕಫ ಮತ್ತು ಬಿಗಿದ ಎದೆಯೂ ಸಡಿಲವಾಗಿ ನಿರಾಳವಾಗಿ ಉಸಿರಾಡಲು ಸಾಧ್ಯವಾಗುತ್ತದೆ.

ತೂಕ ಇಳಿಕೆ
ಹಸಿವು ನಿಯಂತ್ರಿಸಿ, ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸಿ, ದೇಹದ ತೂಕ ಇಳಿಸುವಲ್ಲಿ ಮಸಾಲೆ ಚಹಾ ಒಳ್ಳೆಯ ಫಲಿತಾಂಶ ನೀಡುತ್ತದೆ. ಗ್ರೀನ್‌ ಟೀ, ಹರ್ಬಲ್‌ ಟೀಗಳಿಗೆ ಕೆಲವು ಹನಿ ನಿಂಬೆ ರಸ ಬೆರೆಸುವುದು ಅಥವಾ ಶುಂಠಿ ಚಹಾಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿ.

ರಕ್ತ ಪರಿಚಲನೆಗೆ ನೆರವು
ಚಳಿಗಾಲದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾದಾಗ ರಕ್ತ ಪರಿಚಲನೆ ಉಳಿದ ಋತುಗಳಷ್ಟು ಸರಾಗ ಇಲ್ಲದೆ ಇರಬಹುದು. ಅಂಥ ಸಂದರ್ಭದಲ್ಲಿ ದಾಲ್ಚಿನ್ನಿ ಚಕ್ಕೆಯ ಚಹಾ ರಕ್ತದ ಪರಿಚಲನೆಗೆ ನೆರವಾಗುತ್ತದೆ.

ಪಚನಕಾರಿ
ಚಳಿಗಾಲದ ದಿನಗಳಲ್ಲಿ ಭೂರಿ ಭೋಜನ ಉಂಡರೆ, ಅರಗಿಸುವುದೇ ಸಮಸ್ಯೆ. ಇದರಿಂದ ಹೊಟ್ಟೆಯಲ್ಲಿ ನಾನಾ ರೀತಿಯ ಶಬ್ದಗಳು ಮೊದಲಾಗಿ, ಗ್ಯಾಸ್ಟ್ರಿಕ್‌ ಸಹ ತೊಂದರೆ ಕೊಡುತ್ತದೆ. ಇಂಥ ಹೊತ್ತಿನಲ್ಲಿ ಶುಂಠಿ, ಪುದೀನಾ, ಚಕ್ರಮೊಗ್ಗು ಮುಂತಾದವುಗಳ ಚಹಾ ಹೊಟ್ಟೆಯನ್ನು ನಿಶ್ಶಬ್ದವಾಗಿ ಇಡಬಲ್ಲದು.

ಇದನ್ನೂ ಓದಿ | Health Tips | ಹಣ್ಣುಗಳನ್ನೇಕೆ ತಿನ್ನಬೇಕು? ಇಲ್ಲಿವೆ ಸರಳ ಕಾರಣಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು? ಈ ಕುರಿತ ಉಪಯುಕ್ತ (Allergic Asthma) ಮಾಹಿತಿ ಇಲ್ಲಿದೆ.

VISTARANEWS.COM


on

Allergic Asthma
Koo

ಡಾ. ಸಚಿನ್ ಡಿ, ಸಲಹೆಗಾರ – ಇಂಟರ್ವೆನ್ಷನಲ್ ಪಲ್ಮನಾಲಜಿ ಕ್ರಿಟಿಕಲ್ ಕೇರ್ & ಸ್ಲೀಪ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್

ಕೆಲವರನ್ನು ಬಿಟ್ಟೂ ಬಿಡದೆ ಕಾಡುವ ಕಾಯಿಲೆಗಳ ಪೈಕಿ ಈ ಅಸ್ತಮಾ ಕೂಡ ಒಂದು. ಅಸ್ತಮಾವನ್ನು ಹೆಚ್ಚು ಮಾಡುವ ಅಲರ್ಜಿಕ್‌ ವಸ್ತುಗಳಿಂದ ದೂರ ಇರುವುದು ಅತ್ಯವಶ್ಯಕ. ಇಲ್ಲವಾದಲ್ಲಿ ಇದರಿಂದಲೇ ಅಸ್ತಮಾ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಉಂಟು ಮಾಡಬಹುದು. ಯಾವೆಲ್ಲಾ ವಸ್ತುಗಳಿಂದ ಅಸ್ತಮಾ ರೋಗಿಗಳು ದೂರವಿರಬೇಕು ಎಂಬುದರ ಬಗ್ಗೆ (Allergic Asthma) ಇಲ್ಲಿದೆ ಮಾಹಿತಿ.

Perfumes

ಸುಗಂಧ ದ್ರವ್ಯಗಳು

ಸಾಕಷ್ಟು ಜನರಿಗೆ ಪರ್ಫ್ಯೂಮ್‌ ಅಥವಾ ಸುಗಂಧ ದ್ರವ್ಯ ಹಾಕದೇ ಹೊರ ಹೋಗುವುದಿಲ್ಲ. ಆದರೆ, ಇದು ಅಸ್ತಮಾ ಇರುವವರಿಗೆ ಇನ್ನಷ್ಟು ಅಲರ್ಜಿ ಹೆಚ್ಚಿಸುವ ಸಾಧ್ಯತೆ ಇದೆ. ಪರ್ಫ್ಯೂಮ್‌, ಸುಗಂಧಭರಿತ ಲೋಷನ್‌ಗಳು ಮತ್ತು ಏರ್ ಫ್ರೆಶ್‌ನರ್‌ಗಳು ಕೆಲವು ವ್ಯಕ್ತಿಗಳಿಗೆ ಆಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು. ಈ ಕೃತಕ ಸುಗಂಧ ದ್ರವ್ಯಗಳು ಒಲಟೈಲ್‌ ಆರ್ಗಾನಿಕ್‌ ಕಾಂಪೋನೆಂಟ್ಸ್‌ (VOCs)ಗಳನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಶ್ವಾಸನಾಳವು ಕೆರಳಿ, ಕೆಮ್ಮು, ಉಬ್ಬಸ ಅಥವಾ ಉಸಿರಾಟದ ತೊಂದರೆ ಉಂಟು ಮಾಡಲಿದೆ.

ಗುಡುಗು ಸಹಿತ ಗಾಳಿಯಿಂದ ದೂರವಿರಿ

ಹೆಚ್ಚಿನ ಜನರು ಗುಡುಗು ಸಹಿತ ತಂಪಾದ ಗಾಳಿಯನ್ನು ಆನಂದಿಸಲು ಇಷ್ಟಪಡುತ್ತಾರೆ. ಆದರೆ ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಉಂಟು ಮಾಡಬಹುದು. ಚಂಡಮಾರುತದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆಗಳು ವಾತಾವರಣದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಜೊತೆಗೆ, ಗಾಳಿಯಲ್ಲಿನ ತೇವಾಂಶವು ಅಸ್ತಮಾ ಉಲ್ಬಣವನ್ನು ಪ್ರಚೋದಿಸಲಿದೆ. ಹೀಗಾಗಿ ಅಸ್ತಮಾ ರೋಗಿಗಳು ಈ ಗಾಳಿಗೆ ಒಡ್ಡಿಕೊಳ್ಳುವುದು ಒಳ್ಳೆಯದಲ್ಲ.

Outdoor Exercise

ವ್ಯಾಯಾಮದಲ್ಲೂ ಇರಲಿ ಮಿತಿ

ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ಆಸ್ತಮಾ ಹೊಂದಿರುವವರಿಗೆ ಕೆಲವು ವ್ಯಾಯಾಮಗಳು ಸಹ ಉಬ್ಬಸ ಬರುವಂತೆ ಮಾಡಬಹುದು ಎಚ್ಚರ. ಅಸ್ತಮಾ ರೋಗಿಗಳಿಗೆ ಅತಿಯಾಗಿ ಓಡುವುದು, ತೀವ್ರ ದೈಹಿಕ ಚಟುವಟಿಕೆಗಳು, ದೂಳು ಭರದ ಜಾಗದಲ್ಲಿ ದೈಹಿಕ ಚಟುವಟಿಕೆ ನಡೆಸುವುದು, ಉಸಿರುಗಟ್ಟಿಸುವ ವ್ಯಾಯಾಮಗಳು ನಿಶಿದ್ಧ. ಏಕೆಂದರೆ, ಈ ಎಲ್ಲಾ ದೈಹಿಕ ಚಟುವಟಿಕೆಗಳು ಉಸಿರಾಟದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ದೈಹಿಕ ಚಟುವಟಿಕೆ ಅವಶ್ಯಕತೆ ಇದ್ದಲ್ಲಿ ಮೊದಲು ಇನ್ಹೇಲರ್‌ ಬಳಸುವುದು ಉತ್ತಮ. ಇದಲ್ಲದೆ, ಸಾಮಾನ್ಯ ವ್ಯಾಯಾಮ, ದೈಹಿಕ ಚಟುವಟಿಕೆ ಮಾಡಬಹುದು.

ಭಾವನಾತ್ಮಕ ಒತ್ತಡಕ್ಕೆ ಒಳಗಾಗದಿರಿ

ಆಸ್ತಮಾ ಕೇವಲ ದೈಹಿಕ ಸ್ಥಿತಿಯಲ್ಲದೆ, ಭಾವನಾತ್ಮಕ ಒತ್ತಡಕ್ಕೂ ಸಂಬಂಧ ಹೊಂದಿದೆ. ಅತಿಯಾದ ಸಂಕಟ, ಮಾನಸಿಕವಾಗಿ ನೋವು ಅನುಭವಿಸುವುದು, ಕೆಲವು ವಿಚಾರಗಳ ಬಗ್ಗೆ ಆಳವಾಗಿ ಯೋಚಿಸುವುದರಿಂದಲೂ ಸಹ ಹೈಪರ್ವೆನ್ಟಿಲೇಷನ್‌ಗೆ ಕಾರಣವಾಗಬಹುದು, ಇದರಿಂದ ಅಸ್ತಮಾ ರೋಗವು ಇನ್ನಷ್ಟು ಹದಗೆಡಬಹುದು.

Preservative food

ಪ್ರಿಜರ್‌ವೇಟಿವ್‌ ಆಹಾರ ಬಳಕೆ ಉತ್ತಮವಲ್ಲ

ಇನ್ನು, ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡುವ ಪ್ರಿಜರ್‌ವೇಟಿವ್‌ ಬಳಸಿರುವ ಆಹಾರ ಸೇವನೆಯೂ ಕೂಡ ಅಸ್ತಮಾ ರೋಗವನ್ನು ಕೆರಳಿಸಬಹುದು ಎನ್ನಲಾಗಿದೆ.
ಇನ್ನು, ಸಂಸ್ಕರಿತ ಆಹಾರಗಳು ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳಾಗಿ ಬಳಸಲಾಗುವ ಸಲ್ಫೈಟ್‌ಗಳು ಉಬ್ಬಸ ಮತ್ತು ಉಸಿರಾಟದ ತೊಂದರೆಯಂತಹ ಆಸ್ತಮಾ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಹೀಗಾಗಿ ಆಸ್ತಮಾ ಹೊಂದಿರುವ ವ್ಯಕ್ತಿಗಳು ಆಹಾರದ ಲೇಬಲ್‌ಗಳನ್ನು ಓದುವುದು ಮತ್ತು ಸಲ್ಫೈಟ್-ಒಳಗೊಂಡಿರುವ ಉತ್ಪನ್ನಗಳನ್ನು ತಪ್ಪಿಸುವುದು ಒಳ್ಳೆಯದು

ಇದನ್ನೂ ಓದಿ: Leg Cramps At Night: ರಾತ್ರಿ ಮಲಗಿದಾಗ ಕಾಡುವ ಕಾಲುನೋವಿಗೆ ಇದೆ ಪರಿಹಾರ!

ಕೆಲಸಗಳ ಆಯ್ಕೆಯಲ್ಲಿ ಇರಲಿ ಎಚ್ಚರ

ಇನ್ನು, ಕೆಲವರು ಅಸ್ತಮಾ ಹೊಂದಿರುವವರು ತಾವು ಮಾಡುವ ಕೆಲಸಗಳ ಬಗ್ಗೆಯೂ ಜಾಗೃತಿ ವಹಿಸುವುದು ಉತ್ತಮ. ಸಾಕುಪ್ರಾಣಿಗಳನ್ನು ಪೋಷಿಸುವ ಕೆಲಸ, ಕೃಷಿ, ಧೂಳು ಪ್ರದೂಷಣೆಗೆ ಒಡ್ಡುವ ಕೆಲಸಗಳು, ಹೊಗೆಯುಕ್ತ, ಹೆಚ್ಚು ಸುಂಗಂಧಭರಿತ ನಿರ್ಮಾಣದ ಕೆಲಸ ಸೇರಿದಂತೆ ನಿಮ್ಮ ಅಸ್ತಮಾವನ್ನು ಹೆಚ್ಚಿಸುವ ಕೆಲಸಗಳಿಂದ ದೂರವಿರಿ. ಕೆಲಸ ಜೀವನ ನಡೆಸಲು ಮುಖ್ಯವೆ ಆದರೂ, ಆರೋಗ್ಯ ದುಡಿಮೆಗಿಂತಲೂ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.

Continue Reading

ಕರ್ನಾಟಕ

World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

World Blood Donors Day: ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಶುಕ್ರವಾರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

VISTARANEWS.COM


on

World Blood Donor Day Awareness Jatha in Bengaluru
Koo

ಬೆಂಗಳೂರು: ರಕ್ತದಾನ ಮಾಡುವ ಮೂಲಕ ಒಬ್ಬರ ಜೀವ ಉಳಿಸಬಹುದು. ರಕ್ತದಾನದಿಂದ (World Blood Donors Day) ಹಲವರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ‌ ಶುಕ್ರವಾರ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ರಕ್ತದಾನದ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ, ಮಾತನಾಡಿದ ಸಚಿವರು, ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರು ಮುಂದಾಗಬೇಕಿದೆ. ಹೆಚ್ಚು ರಕ್ತದಾನದ ಅಗತ್ಯತೆ ಇದೆ ಎಂದು ಹೇಳಿದರು.

ರಕ್ತದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವತ್ತ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಅವರು ಹಮ್ಮಿಕೊಂಡಿದ್ದ ಈ ರೀತಿಯ ಜಾಥಾ ಕಾರ್ಯಕ್ರಮಗಳು ಉತ್ತಮವಾದವು ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 14ರಂದು ಜಗತ್ತಿನಾದ್ಯಂತ 2004ರಿಂದ ಆಚರಿಸಿಕೊಂಡು ಬರಲಾಗಿತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಜಾಥಾ ಮೂಲಕ ಆಚರಿಸಿ, ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು. ರಕ್ತವನ್ನು ಸಕಾಲದಲ್ಲಿ ಪೂರೈಕೆ ಮಾಡುವ ಮುಖಾಂತರ ಜೀವಗಳನ್ನು ಉಳಿಸಬಹುದು.‌ ಈ ನಿಟ್ಟಿನಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಗೌರವಿಸಿ ಇತರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಕೆಎಸ್‌ಎಪಿಎಸ್‌ ಸಂಸ್ಥೆಯಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು.‌

“20 ವರ್ಷಗಳ ರಕ್ತದಾನದ ಸಂಭ್ರಮಾಚರಣೆ ಸಂದರ್ಭದಲ್ಲಿ ಧನ್ಯವಾದ ರಕ್ತದಾನಿಗಳೆ “Your Gift of Life is Priceless” ಎಂಬ ಘೋಷವಾಖ್ಯದೊಂದಿಗೆ ಈ ಬಾರಿಯ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: Tata Motors: ಪಂಚ್. ಇವಿ, ನೆಕ್ಸಾನ್.ಇವಿಗೆ ಭಾರತ್-ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್

ಜಾಥಾದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂ ಸೇವಕರು ರಕ್ತದಾನ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿದರು.

Continue Reading

ಆರೋಗ್ಯ

World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ವಿಶ್ವದೆಲ್ಲೆಡೆ ಕೋಟಿಗಟ್ಟಲೆ ಜನರ ಜೀವ ಉಳಿಸಿರುವುದು ರಕ್ತಪೂರಣವೆಂಬ ಪ್ರಕ್ರಿಯೆ. ಸಮಯಕ್ಕೆ ಸರಿಯಾಗಿ ರಕ್ತ ನೀಡಿ, ಜೀವ ಉಳಿಸಿದ ಘಟನೆಗಳು ಲೆಕ್ಕವಿಲ್ಲದಷ್ಟಿವೆ. ಹೀಗೆ ಜೀವಕಾರುಣ್ಯದಿಂದ ರಕ್ತದಾನ ಮಾಡುವ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮತ್ತು ರಕ್ತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಕ್ಕೆ ಮೀಸಲಿರಿಸಿದ ದಿನ ಜೂನ್‌ 14. ಈ ದಿನದ ಕುರಿತು (World Blood Donor Day) ಇಲ್ಲಿದೆ ಮಾಹಿತಿ.

VISTARANEWS.COM


on

World Blood Donor Day
Koo

ರಕ್ತದಾನ ಮಹಾದಾನವೆಂಬ ಮಾತಿದೆ. ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವ, ಅಪಘಾತಕ್ಕೆ ಈಡಾಗಿ ಬದುಕಿಗಾಗಿ ಹೋರಾಡುತ್ತಿರುವ ಬಹಳಷ್ಟು ಮಂದಿಗೆ ಸರಿಯಾದ ಸಮಯಕ್ಕೆ ರಕ್ತ ದೊರೆತರೆ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ಜೀವ ಉಳಿಸುವ ಉದ್ದೇಶದಿಂದ ರಕ್ತದಾನ ಮಾಡುವಂಥವರು ಜಗತ್ತಿನಲ್ಲಿ ಕೋಟಿಗಟ್ಟಲೆ ಜನರಿದ್ದಾರೆ. ಇಂಥವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ, ಜೂನ್‌ ತಿಂಗಳ 14ನೇ ದಿನವನ್ನು ವಿಶ್ವ ರಕ್ತದಾನಿಗಳ ದಿನ (World Blood Donor Day) ಎಂದು ಗುರುತಿಸಲಾಗಿದೆ.
ಮೊದಲ ಬಾರಿಗೆ 1940ರಲ್ಲಿ, ರಿಚರ್ಡ್‌ ಲೋವರ್ ಎಂಬಾತ ಎರಡು ಶ್ವಾನಗಳ ನಡುವೆ ಯಶಸ್ವಿಯಾಗಿ ರಕ್ತಪೂರಣ ನಡೆಸಿದ. ಇದಕ್ಕೂ ಮೊದಲೇ ಈ ಪ್ರಯತ್ನವನ್ನು ನಡೆಸಲಾಗಿತ್ತು. ಆದರೆ 1940ರ ನಂತರ ರಕ್ತಪೂರಣವೆಂಬುದು ಅತಿ ಕಷ್ಟದ ಸಂಗತಿಯಾಗಿ ಉಳಿಯಲಿಲ್ಲ. ಜೂನ್‌ 14ರಂದು ವಿಶ್ವ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮತ್ತು ರಕ್ತದಾನದ ಬಗ್ಗೆ ಅರಿವು ಮೂಡಿಸುವ ದಿನವನ್ನು ಆಚರಿಸಬೇಕೆಂದು, 2005ರಲ್ಲಿ ವಿಶ್ವ ಆರೋಗ್ಯ ಸಭೆ ತೀರ್ಮಾನಿಸಿತು.

World Blood Donor Day 2024

ಯಾರು ಮಾಡಬಹುದು?

ವಿಶ್ವದೆಲ್ಲೆಡೆ ಲಕ್ಷಾಂತರ ಜನರ ಜೀವ ಉಳಿಸುತ್ತಿದೆ ಈ ರಕ್ತದಾನವೆಂಬ ಪ್ರಕ್ರಿಯೆ. ಹಾಗಾದರೆ ಯಾರೆಲ್ಲ ರಕ್ತವನ್ನು ದಾನ ಮಾಡಬಹುದು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 18 ವರ್ಷದಿಂದ 65 ವರ್ಷದೊಳಗಿನ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದು. ಇದಕ್ಕಾಗಿ ಮಹಿಳೆಯರಲ್ಲಿ 12 ಜಿ/ಡಿಎಲ್‌ ಮತ್ತು ಪುರುಷರಲ್ಲಿ 13 ಜಿ/ಡಿಎಲ್‌ ನಷ್ಟು ಪ್ರಮಾಣದಲ್ಲಿ ರಕ್ತದಲ್ಲಿ ಹಿಮೋಗ್ಲೋಬಿನ್‌ ಇರಬೇಕಾಗುತ್ತದೆ. ಸರಳವಾಗಿ ಹೇಳಬೇಕಾದರೆ, ರಕ್ತದಾನಿಗೆ ಹಿಮೋಗ್ಲೋಬಿನ್‌ ಕೊರತೆ ಇರಬಾರದು ಮತ್ತು 45 ಕೆ.ಜಿ. ತೂಕವಾದರೂ ಇರಬೇಕು.
ಜೊತೆಗೆ ನೆಗಡಿ, ಜ್ವರ, ಗಂಟಲುನೋವು, ಹೊಟ್ಟೆನೋವು ಮುಂತಾದ ಯಾವುದೇ ರೀತಿಯ ಸೋಂಕು ರೋಗಗಳು ಅಥವಾ ಆರೋಗ್ಯ ತೊಂದರೆಗಳು ಇರಬಾರದು. ಇತ್ತೀಚೆಗೆ ಟ್ಯಾಟೂ ಹಾಕಿಸಿಕೊಂಡಿದ್ದೀರಿ ಎಂದಾದರೆ, ಮುಂದಿನ ಆರು ತಿಂಗಳು ರಕ್ತದಾನ ಮಾಡುವಂತಿಲ್ಲ. ಉಳಿದಂತೆ, ರಕ್ತಹೀನತೆ ಇಲ್ಲದ ಮಹಿಳೆಯರು ರಕ್ತದಾನ ಮಾಡಬಹುದು. ಆದರೆ ಗರ್ಭಿಣಿಯರು ಮತ್ತು ಹಾಲುಣಿಸುವ ಅಮ್ಮಂದಿರು ರಕ್ತದಾನ ಮಾಡುವಂತಿಲ್ಲ. ಸಸ್ಯಾಹಾರಿಗಳು, ಮಾಂಸಾಹಾರಿಗಳು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ರಕ್ತದಾನ ಮಾಡಬಹುದು. ಒಂದು ಬಾರಿ ರಕ್ತ ನೀಡಿದ ಮೇಲೆ, ಮುಂದಿನ 90 ದಿನಗಳು ಅಥವಾ ಮೂರು ತಿಂಗಳು ರಕ್ತ ನೀಡುವಂತಿಲ್ಲ. ಕಳೆದುಕೊಂಡಿದ್ದನ್ನು ಪುನರುತ್ಪತ್ತಿ ಮಾಡಲು ಶರೀರಕ್ಕೆ ಸಮಯ ನೀಡಬೇಡವೇ? ವರ್ಷಕ್ಕೊಮ್ಮೆ ಅಥವಾ ತಮ್ಮ ಜನ್ಮ ದಿನದಂದು ರಕ್ತದಾನ ಮಾಡುವವರು ಹಲವಾರು ಮಂದಿಯಿದ್ದಾರೆ. ರಕ್ತದ ಮಾದರಿ ಯಾವುದೇ ಇದ್ದರೂ, ಅವೆಲ್ಲವೂ ಆಪತ್ತಿನಲ್ಲಿ ಪ್ರಾಣ ಉಳಿಸುವಂಥವೇ. ಜೊತೆಗೆ ನಿಯಮಿತವಾಗಿ ರಕ್ತ ನೀಡುವುದರಿಂದ ದಾನಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಇದರಿಂದ ಅವರಿಗೇನೂ ತೊಂದರೆಯಾಗದು.

ಎಷ್ಟು ತೆಗೆಯುತ್ತಾರೆ?

ರಕ್ತದಾನವೆಂದರೆ ದೇಹದಲ್ಲಿ ಇರುವ ರಕ್ತವೆಲ್ಲಾ ಅಥವಾ ಬಾಟಲಿಗಟ್ಟಲೆ ತೆಗೆಯುತ್ತಾರೆ ಎಂದು ತಿಳಿಯಬಾರದು. ಒಮ್ಮೆಗೆ 350 ಎಂ.ಎಲ್‌. ರಕ್ತ ತೆಗೆಯಲಾಗುತ್ತದೆ. ಕೆಲವರಿಗೆ ಸ್ವಲ್ಪ ಆಯಾಸ ಎನಿಸಬಹುದು. ಆದರೆ ಒಂದೆರಡು ಗಂಟೆಗಳಲ್ಲಿ ಸಾಮಾನ್ಯವಾಗಿ ದಾನಿಗಳೆಲ್ಲರೂ ಚೇತರಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಪೌಷ್ಟಿಕವಾದ ಸತ್ವಯುತ ಆಹಾರವನ್ನು ದಾನಿಗಳು ಸೇವಿಸಬೇಕು. ಚೆನ್ನಾಗಿ ನೀರು ಕುಡಿದು, ವಿಶ್ರಾಂತಿ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನದ್ದು ಬೇಕಾಗುವುದಿಲ್ಲ.

ಇದನ್ನೂ ಓದಿ: Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಔಷಧಿ ತೆಗೆದುಕೊಳ್ಳುವವರು?

ತಾವೇ ಔಷಧಿ ತೆಗೆದುಕೊಳ್ಳುವಂಥವರು ಇನ್ನೊಬ್ಬರಿಗೆ ರಕ್ತ ನೀಡಬಹುದೇ? ಯಾವ ಸಮಸ್ಯೆಗೆ ಔಷಧಿ ಎಂಬುದು ಮುಖ್ಯವಾಗುತ್ತದೆ. ಸೋಂಕು ರೋಗಗಳಿದ್ದರೆ, ಕ್ಯಾನ್ಸರ್‌ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ಅವರ ರಕ್ತವನ್ನು ತೆಗೆದುಕೊಳ್ಳಲಾಗುವುದಿಲ್ಲ. ಉಳಿದಂತೆ ಬಿಪಿ, ಥೈರಾಯ್ಡ್‌ನಂಥ ತೊಂದರೆಗೆ ಮಾತ್ರೆ ನುಂಗುತ್ತಿದ್ದರೆ ಅದೇನು ಸಮಸ್ಯೆ ಆಗಲಾರದು. ಆದರೆ ದಾನಿಗಳ ಆರೋಗ್ಯ ಸಂಪೂರ್ಣ ಸುಸ್ಥಿತಿಯಲ್ಲಿ ಇರಬೇಕಾದ್ದು ಕಡ್ಡಾಯ.

Continue Reading

ಆರೋಗ್ಯ

Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ (Junk Food Side Effects) ಹೆಚ್ಚಿಸಿಕೊಳ್ಳುತ್ತಿದ್ದಾರೆ.

VISTARANEWS.COM


on

Junk Food Side Effects
Koo

ನಿಮ್ಮ ಮಕ್ಕಳು ಅತೀವವಾಗಿ ಗೇಮಿಂಗ್‌ಗೆ ದಾಸರಾಗಿದ್ದಾರೋ? ಮೊಬೈಲ್‌ಗಳಲ್ಲಿ, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ಗಳಲ್ಲಿ ಗಂಟೆಗಟ್ಟಲೆ ಗೇಮ್‌ ಆಡುತ್ತಾರೋ? ಹಾಗಾದರೆ ಹುಷಾರು. ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು (Junk Food Side Effects) ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೇಮಿಂಗ್‌ ಹಾಗೂ ಜಂಕ್‌ ಫುಡ್‌ ತಿನ್ನುವ ಚಟಕ್ಕೆ ಒಂದಕ್ಕೊಂದು ಸಂಬಂಧವಿದ್ದು ಮಕ್ಕಳು ಮತ್ತಷ್ಟು ಜಂಕ್‌ ಫುಡ್‌ ತಿನ್ನುವ ಬಯಕೆಯತ್ತ ಹೆಚ್ಚು ವಾಲುತ್ತಾರೆ. ಗೇಮಿಂಗ್‌ ಸಂದರ್ಭ ಅವರಿಗೆ ಅರಿವಿಲ್ಲದೆಯೇ ಹೆಚ್ಚು ಹೆಚ್ಚು ಜಂಕ್‌ ತಿನ್ನುತ್ತಾರೆ. ಇದರಿಂದ ಸಹಜವಾಗಿಯೇ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅದು ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಹದಿಹರೆಯದ, ಪುಟಾಣಿ ಮಕ್ಕಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬೊಜ್ಜಿನ ಸಮಸ್ಯೆಗಳು ಕಾಡುತ್ತಿವೆ. ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಚುರುಕಾಗಿರುವುದನ್ನು ಬಿಟ್ಟು, ಸರಿಯಾಗಿ ಮೈಬಗ್ಗಿಸಲಾರದೆ ಕಷ್ಟಪಡುವುದನ್ನು ನೀವು ನೋಡಿರಬಹುದು. ಇದಕ್ಕೆ ಇಂದಿನ ಗೇಮಿಂಗ್‌ ಪ್ರಪಂಚದಲ್ಲಿ ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು, ಗೇಮಿಂಗ್‌ ಲೈವ್‌ಸ್ಟ್ರೀಮ್‌ಗಳಲ್ಲಿ ಭಾಗವಹಿಸುವುದು, ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಗೇಮಿಂಗ್‌ನಲ್ಲಿ ಸಕ್ರಿಯರಾಗಿರುವುದು, ಗಂಟೆಗಟ್ಟ್ಲೆ, ಬೇರೆಯವರ ಜೊತೆ ಆನ್‌ಲೈನ್‌ ಗೇಮಿಂಗ್‌ನಲ್ಲಿ ಭಾಗವಹಿಸುವುದು ಇತ್ಯಾದಿಗಳೂ ಕೂಡಾ ಕಾರಣ ಎಂದಿದೆ.
ಮಕ್ಕಳಲ್ಲಿ ಈ ಮನಸ್ಥಿತಿಯನ್ನು ತರುವಲ್ಲಿ ಹಲವು ಖ್ಯಾತ ಬ್ರ್ಯಾಂಡ್‌ಗಳ ಪಾಲೂ ಇದೆ ಎಂದಿರುವ ಈ ಸಂಶೋಧನೆ, ಇಂತಹ ಪ್ಲಾಟ್‌ಫಾರಂಗಳಲ್ಲಿ ಮಕ್ಕಳ ಮನಸ್ಸಿಗೆ ನಾಟುವಂಥ, ಅರ ಆಸಕ್ತಿ ಕೆರಳಿಸುವಂತ ಜಾಹಿರಾತುಗಳು, ಮಾರಾಟಗಳು ಇತ್ಯಾದಿಗಳನ್ನು ಹಮ್ಮಿಕೊಳ್ಳುವುದೂ ಕೂಡಾ ಕಾರಣ ಎಂದಿದೆ.

No Junk Food Concept

ಜಂಕ್‌ ಫುಡ್‌ ಆಕರ್ಷಣೆ

ಗೇಮಿಂಗ್‌ಗಳ ಮೂಲಕ ಮಕ್ಕಳು ಇಂತಹ ಜಾಹೀರಾತುಗಳು ಹೇಳುವ ಆಸಕ್ತಿ ಕೆರಳಿಸುವ ಕೊಲಾಬ್‌ಗಳಲ್ಲಿ ಭಾಗವಹಿಸಿ ಗಂಟೆಗಟ್ಟಲೆ ಗೇಮಿಂಗ್‌ ದುನಿಯಾದಲ್ಲಿ ತಮಗೇ ಅರಿವಿಲ್ಲದಂತೆ, ಅತಿ ಹೆಚ್ಚು ಸಕ್ಕರೆ, ಉಪ್ಪು ಹಾಗೂ ರಾಸಾಯನಿಕಗಳಿರುವ ಜಂಕ್‌ ಆಹಾರಗಳನ್ನು ಸೇವಿಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹ ಡಿಜಿಟಲ್‌ ಮಾರ್ಕೆಟಿಂಗ್‌ ಪ್ಲಾಟ್‌ ಫಾರಂಗಳ ಹಾವಳಿಯಿಂದಾಗಿಯೇ ಇಂದು ಮಕ್ಕಳು ಇವುಗಳ ದಾಸರಾಗುತ್ತಿದ್ದಾರೆ. ಅರಿವಿಲ್ಲದೇ ಅವುಗಳ ಬಲೆಯಲ್ಲಿ ಬೀಳುತ್ತಿದ್ದಾರೆ. ಮಕ್ಕಳ ಚಟುವಟಿಕೆಗಳಲ್ಲಿ ಗಮನವಿಡದೇ, ಗೇಮಿಂಗ್‌ ನೀಡಿದರೆ, ಇಂತಹ ಅಪಾಯದಲ್ಲಿ ಮಕ್ಕಳನ್ನು ಬೀಳಿಸುವ ತಪ್ಪಿನ ಹೊಣೆಗಾರಿಕೆಯನ್ನು ಪೋಷಕರೇ ಹೊರಬೇಕಾಗುತ್ತದೆ.

ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ

ಹೀಗಾಗಿ, ನಿಮ್ಮ ಮಕ್ಕಳ ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ. ಅವರ ಗೇಮಿಂಗ್‌ ಪ್ರಪಂಚದ ಬಗ್ಗೆ ನಿಮಗೆ ಅರಿವಿರಲಿ. ನಮಗೆ ತಿಳಿಯದು ಎಂಬ ಉಡಾಫೆ ಬೇಡ. ಅವರು ಏನು ಆಡುತ್ತಾರೆ, ಎಷ್ಟು ಆಡುತ್ತಾರೆ ಎಂಬುದು ನಿಮಗೆ ಗೊತ್ತಿರಲಿ. ಮಕ್ಕಳಲ್ಲಿ ಈ ಬಗ್ಗೆ ಸಹಜವಾಗಿ ಮಾತುಕತೆ ನಡೆಸುವ ಸ್ನೇಹದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಿ.

Woman Ordering Pizza at Home Online

ಹೊರಗಿನ ಆರ್ಡರ್‌ ನಿಲ್ಲಿಸಿ

ಮಕ್ಕಳು ಮೂರು ಹೊತ್ತು ಮನೆಯೂಟವನ್ನು ಚೆನ್ನಾಗಿ ತಿನ್ನಲಿ. ಹೊರಗಿನಿಂದ ಆರ್ಡರ್‌ ಮಾಡಿಕೊಳ್ಳುವುದು ಉತ್ಯಾದಿಗಳನ್ನು ಆದಷ್ಟೂ ನಿಮ್ಮ ಹತೋಟಿಯಲ್ಲಿಡಿ. ಮಕ್ಕಳ ಊಟದ ತಟ್ಟೆಯಲ್ಲಿ ಸಾಕಷ್ಟು ತರಕಾರಿಗಳು, ಮೊಳಕೆ ಕಾಳುಗಳು, ಧಾನ್ಯಗಳಿಂದ ಮಾಡಿದ ತಿಂಡಿಗಳು, ಪ್ರೊಟೀನ್‌ಯುಕ್ತ ಆಹಾರ ಇರಲಿ. ಹಣ್ಣು ಹಂಪಲುಗಳನ್ನೂ ಮಕ್ಕಳು ತಿನ್ನಲಿ. ಯಾವಾಗಲಾದರೊಮ್ಮೆ ಅಪರೂಪಕ್ಕೆ ಮಾತ್ರ ಜಂಕ್‌ ತಿಂದರೆ ಸಾಕು.

ವಾಕಿಂಗ್‌ ಅಭ್ಯಾಸ ಬೆಳೆಸಿ

ಮಕ್ಕಳು ಚೆನ್ನಾಗಿ ಆಡಲಿ. ದೇಹ ಶ್ರಮವನ್ನು ಬೇಡುವ ಆಟವನ್ನು ಆಡಲಿ. ಮಕ್ಕಳ ಜೊತೆಗೆ ಒಂದು ವಾಕಿಂಗ್‌ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಿತ್ಯವೂ ನಿಮಗೆ ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಾದರೂ ಮಕ್ಕಳ ಜೊತೆ ಇದಕ್ಕಾಗಿ ಸಮಯ ಇಡಿ. ನಿಮ್ಮ ಹಾಗೂ ಅವರ ಪ್ರಪಂಚ ಬೇರೆ ಬೇರೆಯಾಗದಿರಲಿ.

fridge

ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ ತುಂಬಿಸಿಡಬೇಡಿ

ನಿಮ್ಮ ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ಗಳು, ಸಕ್ಕರೆಯುಕ್ಕ ತಿನಿಸುಗಳು, ಸಿಹಿತಿಂಡಿಗಳು ಇತ್ಯಾದಿಗಳಿಂದ ತುಂಬಿಸಬೇಡಿ. ಒಳ್ಳೆಯ ಆಹಾರಗಳೇ ಮಕ್ಕಳ ಕೈಗೆ ಸಿಗುವಂತಿರಲಿ. ಸಂಸ್ಕರಿಸಿದ ಆಹಾರಗಳು, ಪ್ಯಾಕೇಜ್ಡ್‌ ಡ್ರಿಂಕ್‌ಗಳನ್ನು ತಂದು ಇಟ್ಟುಕೊಳ್ಳಬೇಡಿ. ಆರೋಗ್ಯಕರ ಆಹಾರಗಳನ್ನು ಮಾಡುವ ಕ್ರಮ ಮಕ್ಕಳಿಗೆ ಕಲಿಸಿ. ಅವರಿಗೆ ಅವನ್ನೇ ತಿನ್ನಲು ಕೊಡಿ.

ಇದನ್ನೂ ಓದಿ: Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

ಟಿವಿ ಮುಂದೆ ಉಣ್ಣುವ ಅಭ್ಯಾಸ ಬಿಡಿಸಿ

ಟಿವಿ ಮುಂದೆ ಕೂತು ಅಥವಾ ಫೋನ್‌ ನೋಡುತ್ತಾ ಅವರು ಉಣ್ಣುವ ಅಭ್ಯಾಸವಿದ್ದರೆ ಅದನ್ನು ಬಿಡಿಸಿ. ಎಲ್ಲರೂ ಒಟ್ಟಾಗಿ ಜೊತೆಯಾಗಿ ಒಂದೆಡೆ ಸೇರಿ ಕುಳಿತು ಉಣ್ಣುವ ಅಭ್ಯಾಸವನ್ನು ಮಕ್ಕಳೂ ರೂಢಿಸಿಕೊಳ್ಳಲಿ. ಮಕ್ಕಳು ಶಾಲೆಯಿಂದ ಬಂದ ಮೇಳೆ ಟಿವಿ ಮುಂದೆ ಕೂತು ಉಣ್ಣುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದರಿಂದ ಅವರನ್ನು ಮುಕ್ತರನ್ನಾಗಿಸಿ. ಟೇಬಲ್‌ ಮೇಲೆ ಕುಳಿತು ಕೇವಲ ಉಣ್ಣುವ ವಿಚಾರಕ್ಕೆ ಮಾತ್ರ ಗಮನ ಹರಿಸುವಂತೆ ಅವರನ್ನು ಬದಲಾಯಿಸಿ.

Continue Reading
Advertisement
T20 World Cup 2024
ಕ್ರಿಕೆಟ್3 hours ago

T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

Toyota Technical Education Programme started at Bareilly Government Polytechnic by TKM
ದೇಶ3 hours ago

Toyota Kirloskar Motor: ಟೊಯೊಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮದಡಿ ವಿದ್ಯಾರ್ಥಿ ವೇತನ

Truck Driver
ದೇಶ4 hours ago

ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಂದ ಟ್ರಕ್‌ ಡ್ರೈವರ್;‌ ಭೀಕರ ವಿಡಿಯೊ ಇಲ್ಲಿದೆ

Do not split BBMP says Karave State President TA Narayana Gowda
ಕರ್ನಾಟಕ5 hours ago

BBMP: ಬಿಬಿಎಂಪಿ ವಿಭಜನೆ ಬೇಡ; ಇದು ಕನ್ನಡಿಗರಿಗೆ ಮಾರಕ: ನಾರಾಯಣ ಗೌಡ

ಕರ್ನಾಟಕ5 hours ago

Congress Guarantee: ಗ್ಯಾರಂಟಿ ಯೋಜನೆ ನಿಲ್ಲಲ್ಲ ನಿಲ್ಲಲ್ಲ ನಿಲ್ಲಲ್ಲ ಎಂದ ಸಿದ್ದರಾಮಯ್ಯ

Arundhati Roy
ದೇಶ6 hours ago

Arundhati Roy: ‘ಕಾಶ್ಮೀರ ಭಾರತದ್ದಲ್ಲ’ ಎಂದಿದ್ದ ಅರುಂಧತಿ ರಾಯ್‌ ವಿರುದ್ಧ ಉಗ್ರರ ನಿಗ್ರಹ ಕಾಯ್ದೆ ಅಡಿ ಕ್ರಮ!

Sunny Leone
ಸಿನಿಮಾ6 hours ago

Sunny Leone: ಸನ್ನಿ ಲಿಯೋನ್ ಬೇಕೇಬೇಕೆಂದು ವಿದ್ಯಾರ್ಥಿಗಳ ಪಟ್ಟು; ಕೇರಳ ವಿವಿಗೆ ಇಕ್ಕಟ್ಟು!

ಕರ್ನಾಟಕ6 hours ago

Course Fee Hike: ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ.10ರಷ್ಟು ಹೆಚ್ಚಳ

engineering students have invented a unique fire extinguisher drone at bengaluru
ಕರ್ನಾಟಕ6 hours ago

Bengaluru News: ಬೆಂಕಿ ನಂದಿಸುವ ‘ವಿಶಿಷ್ಟ ಡ್ರೋನ್‌’; ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಆವಿಷ್ಕಾರ!

RBI Penalty
ದೇಶ6 hours ago

RBI Penalty: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1.45 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ; ಕಾರಣ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ9 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು10 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು10 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ11 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌