Afternoon nap | ತೂಕಡಿಸಿ ತೂಕಡಿಸಿ ಬೀಳದಿರಿ: ಮಧ್ಯಾಹ್ನದ ನಿದ್ದೆಯಿಂದ ಮುಕ್ತಿ ಹೇಗೆ? - Vistara News

ಆರೋಗ್ಯ

Afternoon nap | ತೂಕಡಿಸಿ ತೂಕಡಿಸಿ ಬೀಳದಿರಿ: ಮಧ್ಯಾಹ್ನದ ನಿದ್ದೆಯಿಂದ ಮುಕ್ತಿ ಹೇಗೆ?

ಮಧ್ಯಾಹ್ನದ ನಿದ್ದೆ ದೈಹಿಕವಾಗಿ ಹೇಗೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಇದನ್ನು ಗೆಲ್ಲುವುದು ಸ್ವಲ್ಪ ಕಷ್ಟವೇ. ಆದರೂ ಆಗದ ಚಾಲೆಂಜೇನಲ್ಲ. ಆದರೆ, ಅದಕ್ಕೆ ಕೆಲವು ಉಪಾಯಗಳಂತೂ ಬೇಕೇ ಬೇಕು.

VISTARANEWS.COM


on

Afternoon nap
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಧ್ಯಾಹ್ನ ನಿದ್ದೆ ಬರುತ್ತಿದೆಯೇ? ಎಷ್ಟೋ ಬಾರಿ ಮಧ್ಯಾಹ್ನ ನಿದ್ದೆ ಮಾಡಬಾರದೆಂದು ಅಂದುಕೊಂಡರೂ ತೂಕಡಿಸಿ ತೂಕಡಿಸಿ ಒಂದು ಸಣ್ಣ ನಿದ್ದೆಯಾದರೂ ಮಾಡಿಬಿಡುವ ಅನಿಸುತ್ತಿದೆಯೋ? ಮಧ್ಯಾಹ್ನದ ಊಟವಾದ ತಕ್ಷಣ ಹಾಸಿಗೆಯ ಕಡೆಗೇ ಮನಸ್ಸು ಹೊರಳುತ್ತದೋ? ಅಥವಾ ಮಧ್ಯಾಹ್ನದ ನಿದ್ದೆ ಸಿಗದಿದ್ದರೆ ಯರ್ರಾಬಿರ್ರಿ ಹತಾಶೆ, ದುಃಖ, ಸಿಟ್ಟು ಬರುತ್ತದೆಯೋ? ಇವಿಷ್ಟೂ ಆಗದಿದ್ದರೂ, ಇವುಗಳಲ್ಲಿ ಒಂದೆರಡು ನಿಮ್ಮ ಅನುಭವವಾಗಿದ್ದರೂ ಸಾಕು, ನೀವು ಮಧ್ಯಾಹ್ನದ ನಿದ್ದೆಯ ಚಟಕ್ಕೆ ಬಿದ್ದಿದ್ದೀರಿ ಎಂದೇ ಅರ್ಥ.

ಎಷ್ಟೋ ಬಾರಿ ಒಂದೆರಡು ಸಾರಿ ಮನೆಯಿಂದಲೇ ಕೆಲಸ ಮಾಡುತ್ತಲೋ, ಅಥವಾ ರಜೆಯ ದಿನಗಳಲ್ಲೋ, ಮಧ್ಯಾಹ್ನದ ನಿದ್ದೆ ಮಾಡಿ ಅದರ ಸಿಹಿ ಅನುಭವಿಸಿದ ಮಂದಿ ಮಧ್ಯಾಹ್ನದ ನಿದ್ದೆಯ ಅಮಲೇರಿಸಿಕೊಂಡವರು ಬಹಳ. ಇನ್ನೂ ಕೆಲವೊಮ್ಮೆ ಭಾನುವಾರ ಮನೆಯಲ್ಲಿ ಮಧ್ಯಾಹ್ನ ಮಲಗಿ, ಸೋಮವಾರ ಬಂದಾಗ ಎಯ್ಯೋ ಅನಿಸಿ, ಆಫೀಸಿನಲ್ಲಿ ಮಧ್ಯಾಹ್ನದೂಟ ಮುಗಿಸಿ ನಿದ್ದೆ ತೂಗುವ, ತೂಕಡಿಸುತ್ತಾ ಕೆಲಸ ಮಾಡುವ ಒಂದಿಷ್ಟು ಮಂದಿ ಸಾಮಾನ್ಯ. ಇದರಿಂದಾಗಿ ಕೆಲಸದ ಮೇಲೆ ಗಮನ, ಆಗಬೇಕಾದ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗದೆ ಇರುವುದು ಸೇರಿದಂತೆ ಹಲವು ಪರಿಣಾಮಗಳು ಎದುರಿಸಲೇ ಬೇಕಾಗುತ್ತದೆ.

ಹಾಗಾದರೆ, ಮಧ್ಯಾಹ್ನದ ನಿದ್ದೆ ದೈಹಿಕವಾಗಿ ಹೇಗೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಇದನ್ನು ಗೆಲ್ಲುವುದು ಸ್ವಲ್ಪ ಕಷ್ಟವೇ. ಆದರೂ ಆಗದ ಚಾಲೆಂಜೇನಲ್ಲ. ಆದರೆ, ಅದಕ್ಕೆ ಕೆಲವು ಉಪಾಯಗಳಂತೂ ಬೇಕೇ ಬೇಕು. ವರ್ಕ್‌ಔಟ್‌ ಆಗಬಹುದಾದ ಉಪಾಯಗಳು ಯಾವುವು ಎಂಬುದನ್ನು ನೋಡೋಣ.

೧. ಸರಿಯಾದುದನ್ನು ತಿನ್ನಿ: ನಾವೊಂದು ಗಾಡಿ ಕೊಂಡರೆ ಅದನ್ನು ಸರಿಯಾಗಿ ಪಾಲನೆ ಮಾಡುವುದನ್ನೂ ಕಲಿತುಕೊಳ್ಳುತ್ತೇವೆ. ಕಾಲಕಾಲಕ್ಕೆ ಅದಕ್ಕೆ ಸರ್ವೀಸ್‌ ಮಾಡಿಸಿ, ತೊಂದರೆಗಳಿದ್ದರೆ ರಿಪೇರಿ ಮಾಡಿಸಿ, ಆಯಿಲ್‌ ಬದಲಾಯಿಸಿ ಸರಿಯಾಗಿ ಓಡುವಂತೆ ನೋಡಿಕೊಳ್ಳುತ್ತೇವೆ. ಏನಾದರೂ ವ್ಯತ್ಯಾಸವಿದ್ದರೆ ಕೂಡಲೇ ಅದನ್ನು ರಿಪೇರಿ ಮಾಡಿಸುವತ್ತ ಗಮನ ಕೊಡುತ್ತೇವೆ. ನಮ್ಮ ದೇಹಕ್ಕೂ ಈ ಗಾಡಿಯ ಯಂತ್ರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜೀವವಿರುವ ಎಂಜಿನ್‌ ಹೊಂದಿರುವ ಈ ದೇಹಕ್ಕೆ ಬೇಕಾದವುಗಳನ್ನು ನಾವು ಮಾಡಲೇಬೇಕು. ಪೋಷಕಾಂಶಯುಕ್ತ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಬೇಕು. ಹಾಗಾಗಿ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಕೊಡಿ. ಬಾಯಿಗೆ ರುಚಿ ಎಂಬು ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬಿನಿಂದ ಶ್ರೀಮಂತವಾಗಿರುವ ಎಲ್ಲಾ ಆಹಾರಗಳನ್ನು ತಿನ್ನುತ್ತಾ ಇದ್ದರೆ ಖಂಡಿತ ನಿದ್ದೆ ಬರದೇ ಇರದು. ಹಾಗಾಗಿ ಪ್ರೊಟೀನ್‌ಯುಕ್ತ, ಎಲ್ಲ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಊಟದತ್ತ ಗಮನ ಹರಿಸಿ. ಹೊಟ್ಟೆ ಬಿರಿಯುವಂಥ ಊಟ ಮಾಡಿದರೆ, ಸಿಹಿಯನ್ನು ಹೆಚ್ಚಾಗಿ ತಿಂದರೆ, ಸಹಜವಾಗಿಯೇ ಕಣ್ಣು ಕೂರಲು ಆರಂಭವಾಗುತ್ತದೆ.

೨. ಹೆಚ್ಚು ನೀರು ಕುಡಿಯಿರಿ: ದೇಹಕ್ಕೆ ನೀರು ಬೇಕು. ದೇಹಕ್ಕೆ ಆಗಾಗ ತಾಜಾ ನೀರಿನ ಪೂರೈಕೆ ಮಾಡುತ್ತಾ ಬಂದಲ್ಲಿ, ದೇಹ ಹೆಚ್ಚು ಚುರುಕಾಗುತ್ತದೆ. ಆಗಾಗ ಕಾಫಿಯೋ ಚಹಾವೋ ಕುಡಿದರೆ ಒಮ್ಮೆ ಎನರ್ಜಿ ಬಂದಂತಾಗಿ ನಿದ್ದೆ ಕಡಿಮೆಯಾದಂತೆನಿಸಬಹುದು. ಆದರೆ, ಇದು ದೇಹವನ್ನು ನಿರ್ಜಲೀಕರಣದತ್ತ ಕೊಂಡೊಯ್ಯುತ್ತದೆ. ರಾತ್ರಿ ಹೆಚ್ಚು ನಿದ್ದೆ ಬರದಂತೆ ಮಾಡುತ್ತದೆ. ಆದರೆ ನೀವು ನಿಮ್ಮ ಕೆಲಸ ಮಾಡುವ ಜಾಗದಲ್ಲಿ ನೀರಿನ ಬಾಟಲಿಯಿಟ್ಟುಕೊಂಡು ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ತೂಕಡಿಕೆ ಖಂಡಿತಾ ಬಾರದು. ದಿನದಲ್ಲಿ ಎಂಟರಿಂದ ೧೦ ಲೋಟ ನೀರಾದರೂ ನಿಮ್ಮ ಹೊಟ್ಟೆ ಸೇರಲಿ.

afternoon sleep

೩. ವ್ಯಾಯಾಮ ಮಾಡಿ: ನಿದ್ದೆ ಬರುತ್ತಿದೆ ಎಂದರೆ ಸಣ್ಣ ಸ್ಟ್ರೆಚ್ಚಿಂಗ್‌ ಮಾಡಿ. ದೇಹದ ಕೈಕಾಲನ್ನು ಅಲ್ಲಾಡಿಸಿ, ಒಂದು ಹತ್ತು ನಿಮಿಷ ಕೂತಲ್ಲೇ, ನಿಂತಲ್ಲೇ ವ್ಯಾಯಾಮ ಮಾಡಿ. ಪ್ರತಿ ಬೆಳಗನ್ನು ಚುರುಕಾಗಿ, ವಾಕಿಂಗೋ, ವ್ಯಾಯಾಮದಿಂದಲೋ ಶುರು ಮಾಡಿದರೆ ನಿದ್ದೆ ಬಾರದು.

ಇದನ್ನೂ ಓದಿ | Good sleep | ಪ್ರತಿ ಮಧ್ಯರಾತ್ರಿ ಒಂದೇ ಸಮಯಕ್ಕೆ ಎಚ್ಚರಾಗೋದು ಯಾಕೆ?!

೪. ನಿಸರ್ಗದ ಜೊತೆ ಸಮಯ ಕಳೆಯಿರಿ: ದಿನವೂ ಪ್ರಕೃತಿಯ ಒಡನಾಟ ಮನುಷ್ಯನಿಗೆ ಬಹಳ ಅಗತ್ಯ. ಕಚೇರಿಯಲ್ಲಿ ಒಂದು ನಿರ್ಧಿಷ್ಟ ಸಮಯದಲ್ಲಿ ನಿದ್ದೆ ನಿಮ್ಮನ್ನು ತೊಂದರೆ ಮಾಡುತ್ತಿದೆ ಎಂದರೆ, ಒಂದಿಷ್ಟು ಸಮಯ ಪ್ರಕೃತಿ ಜೊತೆ ಕಳೆಯಿರಿ. ಕಚೇರಿಯಲ್ಲೇ ಪುಟ್ಟ ಹಸಿರು ಜಾಗವಿದ್ದರೆ ಅಲ್ಲಿ ೧೦ ನಿಮಿಷ ಅಡ್ಡಾಡಿ ಬರಬಹುದು. ಒಂದ್ಹತ್ತು ನಿಮಿಷ ಎದ್ದು ಹೋಗಿ ಒಂದು ನಡೆದಾಡಿ ಬರಬಹುದು. ಒಂದೇ ಜಾಗದಲ್ಲಿ ಕೂತಿದ್ದರೆ ತೂಕಡಿಕೆ ಜಾಸ್ತಿಯಾಗುತ್ತದೆ.

೫. ಪವರ್‌ ನ್ಯಾಪ್‌ ತೆಗೆದುಕೊಳ್ಳಿ: ಏನೇ ಮಾಡಿದರೂ ನಿದ್ದೆ ಬರುವುದು ತಡೆಯಲಾಗುತ್ತಿಲ್ಲವೇ? ಹಾಗಾದರೆ, ಕೆಲಸದ ಮಧ್ಯೆ ೧೫ ನಿಮಿಷ ಅಲ್ಲೇ ಕುರ್ಚಿಯಲ್ಲಿ ಅಡ್ಡಾಗಿ ೧೫ ನಿಮಿಷದ ಟೈಮರ್‌ ಇಟ್ಟು ಕಣ್ಣು ಮುಚ್ಚಿ. ಇಂತಹ ಪವರ್‌ ನ್ಯಾಪ್‌ ಎಷ್ಟೋ ಬಾರಿ ವರ್ಕ್‌ಔಟ್‌ ಆಗುತ್ತದೆ. ನಿದ್ದೆ ಓಡಿ ಹೋಗಿ ಕೆಲಸಕ್ಕೆ ಮತ್ತೆ ಚುರುಕು ಬರುತ್ತದೆ. ಆದರೆ ಟೈಮರ್‌ ಇಡಲು ಮರೆತು ಹಂಗೇ ಅಡ್ಡಾಗಿ ಗಂಟೆಗಟ್ಟಲೆ ನಿದ್ದೆ ಮಾತ್ರ ಮಾಡದಿರಿ!

೬. ನಿಮ್ಮದೇ ಆದ ನಿದ್ದೆಯ ವೈಖರಿಯಿರಲಿ: ಇಂತಹ ಸಮಯ ಏನೇ ಕಷ್ಟಗಳಿದ್ದರೂ ನಿದ್ದೆ ಮಾಡುತ್ತೇನೆ ಹಾಗೂ ಇಷ್ಟು ಹೊತ್ತಿಗೆ ಪ್ರತಿದಿನವೂ ಏಳುತ್ತೇನೆ ಎಂಬ ನಿಯಮ ಸೆಟ್‌ ಮಾಡಿಟ್ಟುಕೊಳ್ಳಿ ಹಾಗೂ ಅದನ್ನು ಆದಷ್ಟೂ ಪಾಲಿಸಲು ಪ್ರಯತ್ನಿಸಿ. ಆಗೀಗ ತಪ್ಪುವ ನಿದ್ದೆಯಿಂದಾಗಿ ಎಷ್ಟೋ ಬಾರಿ ಬೇರೆ ಸಮಯದಲ್ಲಿ ನಿದ್ದೆ ಬರುತ್ತದೆ. ರಾತ್ರಿಯ ನಿದ್ದೆ ಪೂರ್ಣ ಆದರೆ, ಹಗಲಿನ ನಿದ್ದೆಯ ಚಿಂತೆಯೇ ಇರುವುದಿಲ್ಲ.

ಇದನ್ನೂ ಓದಿ | Sleep tips | ಚಳಿಗಾಲದಲ್ಲಿ ನಿದ್ದೆ ಬೇಕೆಂದರೆ ಈ ಏಳು ಸೂತ್ರಗಳನ್ನು ಮರೆಯದಿರಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

Red Spinach Benefits: ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌.

VISTARANEWS.COM


on

Red Spinach Benefits
Koo

ಭಾರತೀಯರ ಮನೆಗಳಲ್ಲಿ ಸೊಪ್ಪಿನಡುಗೆಗೆ ವಿಶೇಷವಾದ ಸ್ಥಾನವಿದೆ. ಚಳಿಗಾಲ ಬಂದರೆ, ಸೊಪ್ಪಿನದೇ ಸಾಮ್ರಾಜ್ಯ. ಚಳಿಗಾಲವನ್ನು ಹೊರತಾಗಿಯೂ ಎಲ್ಲ ಕಾಲಗಳಲ್ಲೂ ದೊರೆಯುವ ಕೆಲವು ಸೊಪ್ಪುಗಳಿಗೆ ನಿರಂತರವಾಗಿ ಸ್ಥಾನ ಇದ್ದೇ ಇರುತ್ತದೆ. ಅಂತಹ ಸೊಪ್ಪುಗಳ ಪೈಕಿ ಹರಿವೆ ಸೊಪ್ಪೂ ಒಂದು. ಹರಿವೆ ಸೊಪ್ಪಿನಲ್ಲಿ ಹಲವು ಬಗೆಗಳಿದ್ದರೂ ಕೆಂಪು ಹರಿವೆಗೆ ವಿಶೇಷ ಸ್ಥಾನ. ಪೋಷಕಾಂಶದ ವಿಷಯದಲ್ಲೂ ಇದೇ ನಂಬರ್‌ ವನ್‌. ಕೆಂಪು ಹರಿವೆ (Red Spinach Benefits) ಕೇವಲ ಬಣ್ಣದಿಂದ ಮಾತ್ರ ಕೆಂಪಲ್ಲ. ಬಣ್ಣದಿಂದ ಯಾವ ಬದಲಾವಣೆಯೂ ಇಲ್ಲ ಎಂದುಕೊಳ್ಳಬೇಡಿ. ಕೆಂಬಣ್ಣದ ಹರಿವೆಯಲ್ಲಿ ಸಾಮಾನ್ಯ ಹರಿವೆಗಿಂತ ಹೆಚ್ಚು ಪೋಷಕಾಂಶಗಳಿವೆ. ಇದು ಆರೋಗ್ಯದ ವಿಚಾರದಲ್ಲಿ ಅಪ್ಪಟ ಚಿನ್ನ. ಇದರಲ್ಲಿ ವಿಟಮಿನ್‌ ಇ, ಸಿ ಮತ್ತು ಕೆ ಹೇರಳವಾಗಿದ್ದು, ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂನಂತಹ ಅತ್ಯಗತ್ಯ ಖನಿಜಾಂಶಗಳೂ ಹೇರಳವಾಗಿವೆ. ಆಂಟಿ ಆಕ್ಸಿಡೆಂಟ್‌ಗಳಿಂದ ಶ್ರೀಮಂತವಾಗಿದ್ದು, ಇದು ಒಟ್ಟು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

Weight Loss Slim Body Healthy Lifestyle Concept Benefits Of Saffron

ತೂಕ ಇಳಿಕೆಗೆ

ಯಾರಾದರೂ, ತೂಕ ಇಳಿಸಬೇಕೆಂಬ ಯೋಚನೆಯಲ್ಲಿದ್ದರೆ ಅಂಥವರಿಗೆ ಇದು ಅತ್ಯಂತ ಉತ್ತಮವಾದ ಆಹಾರ. ಯಾಕೆಂದರೆ, ಇದರಲ್ಲಿ ಕಡಿಮೆ ಕ್ಯಾಲರಿಯಿದ್ದು, ನಾರಿನಂಶವೂ ಹೇರಳವಾಗಿದೆ. ಜೊತೆಗೆ ಬೇಕಾದ ಎಲ್ಲ ಪೋಷಕಾಂಶಗಳೂ ಭರಪೂರ ಇವೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಬೇಕಾದ ಎಲ್ಲವೂ ಇದರಲ್ಲಿದೆ. ಹೆಚ್ಚು ಹೊತ್ತು ಹೊಟ್ಟೆ ಫುಲ್‌ ಆದ ಅನುಭವ ನೀಡುವ ಕಾರಣ ಬೇರೆ ಆಗಾಗ ಏನಾದರೂ ತಿನ್ನಲು ಅನವಶ್ಯಕ ಪ್ರಚೋದನೆಯಾಗದು.

ಮಲಬದ್ಧತೆ ನಿವಾರಣೆಗೆ

ತೂಕದ ವಿಚಾರವನ್ನು ಹೊರತುಪಡಿಸಿದರೆ, ಮಲಬದ್ಧತೆಯ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು. ಜೀರ್ಣಕ್ರಿಯೆಗೆ ಇದು ಅತ್ಯಂತ ಒಳ್ಳೆಯದು. ಇದರಲ್ಲಿರುವ ನಾರಿನಂಶ, ಮಲಬದ್ಧತೆಯ ಸಮಸ್ಯೆಯನ್ನು ದೂರ ಓಡಿಸುತ್ತದೆ. ಇದನ್ನು ಸೇವಿಸಿದರೆ, ಬೆಳಗ್ಗೆ ಎದ್ದ ಕೂಡಲೇ ಖಂಡುತವಾಗಿಯೂ ಆರಾಮವಾಗಿ ಸುಖವಾಗಿ ಶೌಚ ಮುಗಿಸಿಕೊಳ್ಳುವಿರಿ. ಹೊಟ್ಟೆ ಹಗುರವಾಗಿ, ದೇಹ ಚುರುಕಾಗಿ ಇರಲು ಇದು ಅತ್ಯಂತ ಸೂಕ್ತವಾದ ಆಹಾರ. ಯಾವ ಔಷಧಿಗಳ ಸಹಾಯವೂ ಇಲ್ಲದೆ ಮಲಬದ್ಧತೆಯ ವಿರುದ್ಧ ಜಯ ಸಾಧಿಸಬಹುದು. ಈ ಕೆಂಪು ಹರಿವೆ ಸೊಪ್ಪಿನ ಇನ್ನೊಂದು ಪ್ರಮುಖ ಲಾಭವೆಂದರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಪ್ರೊಟೀನ್‌ ಹಾಗೂ ವಿಟಮಿನ್‌ ಕೆ ಇರುವುದರಿಂದ, ಋತುಮಾನಕ್ಕೆ ಅನುಸಾರವಾಗಿ ಬರುವ ಆರೋಗ್ಯ ಸಮಸ್ಯೆಗಳನ್ನು ದೂರ ಓಡಿಸುತ್ತದೆ. ಅವುಗಳು ಬರದಂತೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಭದ್ರ ಕೋಟೆಯನ್ನು ಬೆಳೆಸುತ್ತದೆ.

ಇದನ್ನೂ ಓದಿ: Nutrients For The Human Body: ನಮ್ಮ ದೇಹವೆಂಬ ಕಾರ್ಯಾಲಯದಲ್ಲಿ ಕೆಲಸ ಮಾಡುವ 22 ಪೋಷಕಾಂಶಗಳ ಬಗ್ಗೆ ನಿಮಗೆ ಗೊತ್ತೇ?

ಎಲುಬಿನ ಸದೃಢತೆಗೆ

ಎಲುಬು ಗಟ್ಟಿಯಾಗಬೇಕು ಎಂದರೆ ನೀವು ಖಂಡಿತವಾಗಿಯೂ ಈ ಕೆಂಪು ಹರಿವೆ ಸೊಪ್ಪನ್ನು ಕಂಡಾಗಲೆಲ್ಲ ಖರೀದಿಸಿ ತಂದೇ ತರುವಿರಿ. ಸೊಪ್ಪನ್ನು ಶುಚಿಗೊಳಿಸಿ ಅಡುಗೆ ಮಾಡುವ ಕೆಲಸ ಸ್ವಲ್ಪ ತ್ರಾಸದಾಯಕವಾದರೂ, ಇದರ ಲಾಭ ಕೇಳಿದರೆ, ಅಂತಹ ತೊಂದರೆ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ನಿಮೇ ಅನಿಸುತ್ತದೆ. ಕೆಂಪು ಹರಿವೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ಕಬ್ಬಿಣಾಂಶ ಹಾಗೂ ಪ್ರೊಟೀನ್‌ ಇರುವುದರಿಂದ ಮೂಳೆ ಗಟ್ಟಿಯಾಗಲು, ರಕ್ತ ದೇಹದಲ್ಲಿ ತುಂಬಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಕೆಂಪು ಹರಿವೆ ಸೊಪ್ಪನ್ನು ಅಡುಗೆ ಮಾಡಲು ಕಷ್ಟವೇನಿಲ್ಲ. ನೀವು ಮಾಡುವ ದಾಲ್‌ನಲ್ಲಿ ಇದರ ಸೊಪ್ಪನ್ನು ಕತ್ತರಿಸಿ ಹಾಕಬಹುದು. ಅಥವಾ ಸೊಪ್ಪಿನ ಸಾರು ಮಾಡಬಹುದು. ಸೊಪ್ಪು ತುಂಬ ಇದ್ದರೆ ಅದನ್ನು ಪಲ್ಯ ಮಾಡಬಹುದು. ಚಪಾತಿ ಹಿಟ್ಟಿನ ಜೊತೆಗೆ ಕಲಸಿಕೊಂಡು ಸೊಪ್ಪಿನ ಪರಾಠಾ ಮಾಡಬಹುದು. ಅಥವಾ ಇನ್ನೂ ಹಲವಾರು ಆಯ್ಕೆಗಳಿವೆ. ಯಾವುದಾದರೊಂದು ಬಗೆಯ ಅಡುಗೆ ಮೂಲಕ ಆಗಾಗ ಇದನ್ನು ನಮ್ಮ ದೇಹ ಸೇರುವಂತೆ ನೋಡಿಕೊಳ್ಳಬಹುದು. ಹಾಗಾಗಿ, ಮಾರುಕಟ್ಟೆಯಲ್ಲಿ ಹರಿವೆ ಸೊಪ್ಪು ಕಂಡಾಗ ಬಿಟ್ಟು ಬರಬೇಡಿ.

Continue Reading

ಆರೋಗ್ಯ

Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

Mushroom Benefits: ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್‌, ಸಲಾಡ್‌, ಸ್ಟರ್‌ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್‌ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು.

VISTARANEWS.COM


on

Mushroom Benefits
Koo

ಅಣಬೆ (Mushroom Benefits) ಇಂದು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲೆಡೆ ಸಿಗುತ್ತದೆ. ಈಗ ಮಳೆಗಾಲಕ್ಕೇ ಅಂತ ಕಾಯಬೇಕಾದ ಅಗತ್ಯವಿಲ್ಲ. ಎಲ್ಲ ಕಾಲದಲ್ಲೂ ಸಿಗುವ ಅಣಬೆಯಲ್ಲಿ ಭರಪೂರ ಪೋಷಕಾಂಶಗಳಿವೆ. ಸೂಪ್‌, ಸಲಾಡ್‌, ಸ್ಟರ್‌ ಫ್ರೈಗಳು ಸೇರಿದಂತೆ ಬಗೆಬಗೆಯ ಸಬ್ಜಿಗಳನ್ನೂ, ತಿನಿಸುಗಳನ್ನೂ ಇದರಿಂದ ಮಾಡಬಹುದು. ಸ್ವಲ್ಪ ಮಾಂಸದಡುಗೆಯ ರುಚಿ ನೀಡುವ ಅಣಬೆಯನ್ನು ಕೆಲವರು ಸಸ್ಯಾಹಾರವೆಂದು ಪರಿಗಣಿಸದೆ ದೂರ ಇಟ್ಟಿರುವುದೂ ಹೌದು. ತೂಕ ಇಳಿಸುವ ಮಂದಿಗೆ ಅಣಬೆಯಷ್ಟು ಉತ್ತಮ ಆಯ್ಕೆ ಇನ್ನೊಂದಿಲ್ಲ. ಕಡಿಮೆ ಕ್ಯಾಲರಿಯ, ವಿಟಮಿನ್‌ ಡಿಯಿಂದ ಸಂಪದ್ಭರಿತವಾದ, ಆರೋಗ್ಯಕರವಾದ ಆಂಟಿ ಆಕ್ಸಿಡೆಂಟ್‌ಗಳಿರುವ ಸಂಪೂರ್ಣ ಆಹಾರವಿದು. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಿದ್ದರೆ ತೂಕ ಇಳಿಸುವವರಿಗೆ ಸಹಾಯವಾಗುತ್ತದೆ. ಇದರಲ್ಲಿರುವ ಪೊಟಾಶಿಯಂ, ಝಿಂಕ್‌ಗಳುದೇಹದ ಹಲವು ಮುಖ್ಯ ಕೆಲಸಗಳಿಗೆ ಬೇಕೇ ಬೇಕಾಗುವ ಪೋಷಕಾಂಶಗಳು. ಎಲುಬಿನ ಆರೋಗ್ಯಕ್ಕೆ, ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಲು ಅಣಬೆ ಉತ್ತಮ ಆಹಾರ. ಬನ್ನಿ, ಅಣಬೆಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭಗಳಿವೆ ಎಂಬುದನ್ನು ವಿವರವಾಗಿ ನೋಡೋಣ.

Obese male suffering from chest pain high blood pressure cholesterol level Sesame Benefits

ಕೊಲೆಸ್ಟೆರಾಲ್‌ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ಅಣಬೆಯಲ್ಲಿ ಪ್ರೊಟೀನ್‌ ಕೂಡಾ ಹೇರಳವಾಗಿದೆ. ಆದರೆ, ಕೊಲೆಸ್ಟೆರಾಲ್‌ ಅಥವಾ ಕೊಬ್ಬು ಬಹಳ ಕಡಿಮೆ ಇದೆ. ಇದರಲ್ಲಿರುವ ನಾರಿನಂಶ ಹಾಗೂ ಕೊಬ್ಬು ಕೊಲೆಸ್ಟೆರಾಲ್‌ ಅನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಒಳ್ಳೆಯದು.

Knee bone mass Bone erosion and deterioration Pumpkin Benefits

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಶಿಯಂ ಇದೆ. ನಮ್ಮ ಎಲುಬನ್ನು ಸದೃಢಗೊಳಿಸಲು ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಅಣಬೆಯನ್ನು ಆಗಾಗ ಸೇವಿಸುವುದರಿಂದ ಮೂಳೆ ಸವೆತ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು, ಮೂಳೆ ಮುರಿತ, ಬಲಹೀನತೆಯಂಥ ಸಮಸ್ಯೆಗಳು ಹತ್ತಿರ ಸುಳಿಯದು.

ರೋಗ ನಿರೋಧಕತೆ ಹೆಚ್ಚಿಸುತ್ತದೆ

ಅಣಬೆಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹಾಗಾಗಿ ಇದು ದೇಹವನ್ನು ಪ್ರೀ ರ್ಯಾಡಿಕಲ್ಸ್‌ಗಳಿಂದ ಕಾಪಾಡುವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹಲವು ಇನ್‌ಫೆಕ್ಷನ್‌ಗಳನ್ನು ದೂರ ಓಡಿಸುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ವಿಟಮಿನ್‌ ಎ, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ವಿಟಮಿನ್‌ ಸಿ ಎಲ್ಲವೂ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುವಲ್ಲಿ ನೆರವಾಗುತ್ತದೆ.

Improved Digestion Tea Benefits

ಮಧುಮೇಹಿಗಳಿಗೂ ಒಳ್ಳೆಯದು

ಅಣಬೆಯಲ್ಲಿ ಕ್ರೋಮಿಯಂ ಹೇರಳವಾಗಿದ್ದು, ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಇಳಿಸುವಲ್ಲಿ ನೆರವಾಗುತ್ತದೆ. ಅಣಬೆಯಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬು ಇರುವುದರಿಂದ ಇದು ಮಧುಮೇಹಿಗಳಿಗೆ ಒಳ್ಳೆಯದನ್ನೇ ಮಾಡುತ್ತದೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ತೂಕ ಇಳಿಸುತ್ತದೆ

ಅಣಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ಇದು ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಕಾರ್ಬೋಹೈಡ್ರೇಟ್‌ ಕಡಿಮೆಯಿದ್ದು, ಕೊಬ್ಬು ಇಲ್ಲೇ ಇಲ್ಲ ಎನ್ನಬಹುದು. ಉಳಿದಂತೆ, ಪ್ರೊಟೀನ್‌ ಸೇರಿದಂತೆ ಎಲ್ಲ ಪೋಷಕಾಂಶಗಳೂ ಹೆಚ್ಚಿರುವುದರಿಂದ ಇದು ತೂಕ ಹೇಳಿಕೆಗೆ ಹೇಳಿ ಮಾಡಿಸಿದಂಥ ಆಹಾರ.
ಎಲ್ಲರೂ ಅಣಬೆಯನ್ನು ಇಷ್ಟಪಡಲಾರರು. ಆದರೆ, ಆರೋಗ್ಯದ ದೃಷ್ಠಿಯಿಂದ ಅಣಬೆ ಸಂಪೂರ್ಣ ಆಹಾರ. ಕೆಲವು ಅಣಬೆಗಳು ವಿಷಕಾರಿ ಕೂಡಾ. ಮಳೆಗಾಲದಲ್ಲಿ ಬೆಳೆಯುವ ಅಣಬೆಗಳನ್ನು ಸಂಗ್ರಹಿಸಿ ಅಡುಗೆ ಮಾಡುವ ಮುನ್ನ ಅಣಬೆಗಳ ಬಗ್ಗೆ ಸಾಕಷ್ಟು ಜ್ಞಾನ ಇರಬೇಕು. ಇಲ್ಲವಾದರೆ, ವಿಷಕಾಋ ಅಣಬೆಗಳನ್ನು ಸೇವಿಸುವ ಅಪಾಯ ಇದೆ. ಆದರೆ, ಮಾರುಕಟ್ಟೆಯಲ್ಲಿ ಸದಾ ಲಭ್ಯವಿರುವ ಅಣಬೆಗಳಲ್ಲಿ ಈ ಭಯವಿಲ್ಲ. ಆರಾಮವಾಗಿ ಅಡುಗೆ ಮಾಡಿ ತಿನ್ನಬಹುದು.

Continue Reading

ಆರೋಗ್ಯ

Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

Nita Ambani Beauty Secrets: ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವುದೇ ಅವರ ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Nita Ambani Beauty Secrets
Koo

ಮಗನ ಭರ್ಜರಿ ಮದುವೆಯಿಂದ (Nita Ambani Beauty Secrets) ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಅಂಬಾನಿ ಕುಟುಂಬದ ಕಣ್ಣು ನೀತಾ ಅಂಬಾನಿ. ವರ್ಷ ಅರುವತ್ತು ದಾಟಿದರೂ ಪುಟಿದೇಳುವ ಉತ್ಸಾಹ, ಮಾಸದ ಚೆಲುವಿನಿಂದಾಗಿಯೂ ಹಲವರಿಗೆ ಸ್ಫೂರ್ತಿ. ಬ್ಯುಸಿನೆಸ್‌ ವುಮನ್‌ ಆಗಿ, ರಿಲಯನ್ಸ್‌ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನೀತಾ ಅಂಬಾನಿ ಆರೋಗ್ಯದ ಕಾಳಜಿಯನ್ನೂ ಸಾಕಷ್ಟು ಮಾಡುತ್ತಾರಂತೆ. ತಮ್ಮ ಫಿಟ್‌ನಸ್‌ ಕಾಳಜಿಯನ್ನು ವಹಿಸುವ ಇವರು ಬೆಳಗ್ಗೆ ಎದ್ದ ಕೂಡಲೇ ಒಂದು ವಾಕ್‌ ಹಾಗೂ ಪೋಷಕಾಂಶಯುಕ್ತ ಬ್ರೇಕ್‌ಫಾಸ್ಟ್‌ ಇವರ ಇಡೀ ದಿನದ ಲವಲವಿಕೆಯ ಸೀಕ್ರೆಟ್‌. ಅಷ್ಟೇ ಅಲ್ಲ, ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌ ಅಂತೆ. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವ ಅವರ, ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬನ್ನಿ ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬುದನ್ನು ನೋಡೋಣ.

Ambani Wedding Fashion

ಹೇರಳವಾಗಿ ಪೋಷಕಾಂಶ

ಬೀಟ್‌ರೂಟ್‌ ಜ್ಯೂಸ್‌ನಲ್ಲಿ ಹೇರಳವಾಗಿ ಪೋಷಕಾಂಶಗಳಿವೆ. ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಿದರೆ, ಕಬ್ಬಿಣಾಂಶವು ರಕ್ತವನ್ನು ಹೆಚ್ಚಿಸುತ್ತದೆ.

ಚುರುಕಾಗಿ ಇರಲು ಸಾಧ್ಯ

ನೀತಾ ಅಂಬಾನಿ ಈ ಜ್ಯೂಸ್‌ ಹೀರುವುದಕ್ಕೆ ಮೂಲ ಕಾರಣ ದಿನವಿಡೀ ಚುರುಕಾಗಿ ಇರುವುದಕ್ಕೆ. ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ದೇಹವು ಇದ್ನು ನೈಟ್ರಿಕ್‌ ಆಕ್ಸೈಡ್‌ ಆಗಿ ಪರಿವರ್ತಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಚುರುಕುಗೊಳಿಸಲು ನೆರವಾಗುವುದಲ್ಲದೆ, ನಮ್ಮ ದೇಹಕ್ಕೆ ರಕ್ತದ ಮೂಲಕ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವನ್ನು ಒದಗಿಸುವಲ್ಲಿಯೂ ಸಹಾಯ ಮಾಡುತ್ತದೆ. ಇದರಿಂದಾಗಿ, ಉಲ್ಲಾಸ, ಚುರುಕುತನ ಹೆಚ್ಚುತ್ತದೆ.

Heart Health Fish Benefits

ಹೃದಯದ ಆರೋಗ್ಯ ಸುಧಾರಣೆ

ಹೃದಯದ ಆರೋಗ್ಯಕ್ಕೆ ಬೀಟ್‌ರೂಟ್‌ ಜ್ಯೂಸ್‌ ಬಹಳ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ನೈಟ್ರೇಟ್‌ ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಮೂಲಕ ಪರೋಕ್ಷವಾಗಿ ಹೃದಯವನ್ನೂ ಚುರುಕಾಗಿ ಇರಿಸುತ್ತದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನೀತಾ ಅಂಬಾನಿ ಇದಕ್ಕಾಗಿ ಬೀಟ್‌ರೂಟ್‌ ಜ್ಯೂಸ್‌ ಅನ್ನು ಮರೆಯದೆ ಸೇವಿಸುತ್ತಾರಂತೆ.

ಜೀರ್ಣಕ್ರಿಯೆಗೆ ಅಗತ್ಯ

ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದಾಗಿರುವ ಬೀಟ್‌ರೂಟ್‌ನಲ್ಲಿ ನಾರಿನಂಶ ಸಮೃದ್ಧವಾಗಿದೆ. ಮಲಬದ್ಧತೆಯಂತಹ ಸಮಸ್ಯೆ ಹತ್ತಿರ ಸುಳಿಯದು. ಜೀರ್ಣಾಂಗವ್ಹೂಹವನ್ನು ಸದಾ ಆರೋಗ್ಯವಾಗಿಡಲು ಇದು ಸುಲಭ ನೈಸರ್ಗಿಕವಾದ ವಿಧಾನ.

active brain

ಮಿದುಳಿಗೂ ಪೂರಕ

ಮಿದುಳಿನ ಆರೋಗ್ಯಕ್ಕೂ ಕೂಡಾ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಹಾಗೂ ರಕ್ತದ ಮೂಲಕ ದೇಹಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವುದರಿಂದ ಮಿದುಳಿಗೂ ಸರಿಯಾದ ಪೋಷಣೆ ದೊರೆಯುತ್ತದೆ. ಕೆಲಸದಲ್ಲಿ ದೃಢತೆ, ಫೋಕಸ್‌, ಚುರುಕುತನ, ತೀಕ್ಷ್ಣ ಬುದ್ಧಿ ಇವೆಲ್ಲವಕ್ಕೂ ಬೀಟ್‌ರೂಟ್‌ ಒಳ್ಳೆಯ ಆಹಾರ.

ಚರ್ಮದ ಆರೋಗ್ಯಕ್ಕೂ ಉತ್ತಮ

ಮುಖ್ಯವಾಗಿ ಚರ್ಮದ ಆರೋಗ್ಯಕ್ಕೂ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ವಿಟಮಿನ್‌ ಸಿ ಯೂ ಇವೆ. ಇದು ಆರೋಗ್ಯಯುತ ಚರ್ಮಕ್ಕೆ ಅಗತ್ಯ ಬೇಕಾದವು. ಆಂಟಿ ಏಜಿಂಗ್‌ ಕೂಡಾ. ನೀತಾ ಅಂಬಾನಿ ತನ್ನ ಸೌಂದರ್ಯದ ಗುಟ್ಟು ಆರೋಗ್ಯದಲ್ಲಿ ಅಡಗಿದೆ ಎಂಬುದನ್ನು ಬಲವಾಗಿ ನಂಬುವ ಕಾರಣ, ಚರ್ಮಕ್ಕೆ ಬೇಕಾದ ನೈಸರ್ಗಿಕ ಆಹಾರವನ್ನು ಇದರಲ್ಲಿ ಕಾಣುತ್ತಾರಂತೆ.

gall bladder

ಪಿತ್ತಕೋಶದ ಆರೋಗ್ಯಕ್ಕೂ ಉತ್ತಮ

ಪಿತ್ತಕೋಶದ ಆರೋಗ್ಯಕ್ಕೂ ಬೀಟ್‌ರೂಟ್‌ ಬಹಳ ಉತ್ತಮ. ಇದರಲ್ಲಿ ಡಿಟಾಕ್ಸಿಫೈಯಿಂಗ್‌ ಗುಣಗಳಿದ್ದು, ಮುಖ್ಯವಾಗಿ ಪಿತ್ತಕೋಶದ ವಿಚಾರದಲ್ಲಿ ಅದ್ಭುತ ಜಾದೂ ಮಾಡುತ್ತದೆ. ಪಿತ್ತಕೋಶದ ಆರೋಗ್ಯ ಅತ್ಯಂತ ಹೆಚ್ಚು ಗಮನ ಕೊಡಬೇಕಾದವುಗಳಲ್ಲಿ ಒಂದು.

ಔಷಧೀಯ ಗುಣ

ಸಂಧಿವಾತ ಸೇರಿದಂತೆ ಅನೇಕ ಬಗೆಯ ಉರಿಯೂತಗಳಿಗೂ ಬೀಟ್‌ರೂಟ್‌ ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿದೆ. ನಿತ್ಯ ಸೇವನೆಯಿಂದ ಇಂತಹ ಸಮಸ್ಯೆಯೂ ಬರದಂತೆ ತಡೆಯುವ ಗುಣವನ್ನು ಬೀಟ್‌ರೂಟ್‌ ಹೊಂದಿದೆ.

ಇದನ್ನೂ ಓದಿ: Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

ಕಡಿಮೆ ಕ್ಯಾಲರಿ

ಬೀಟ್‌ರೂಟ್‌ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಹಾಗಾಗಿ ತೂಕ ಇಳಿಕೆಗೂ ಇದು ಒಳ್ಳೆಯದು. ನೀತಾ ಅಂಬಾನಿ ಆರೋಗ್ಯಕರ ತೂವನ್ನು ಹೊಂದಲು ಸದಾ ಬೀಟ್‌ರೂಟ್‌ ಜ್ಯೂಸ್‌ ಅನ್ನು ತಮ್ಮ ಡಯಟ್‌ನ ಭಾಗವಾಗಿಸಿಕೊಂಡಿದ್ದಾರೆ.

Continue Reading

ಆರೋಗ್ಯ

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

Tea vs coffee: ʻಯಾವುದು ಒಳ್ಳೆಯದು?ʼ ಎನ್ನುವ ಚಹಾ ಮತ್ತು ಕಾಫಿಯ ಅಭಿಮಾನಿಗಳ ಮೂಲಭೂತ ಪ್ರಶ್ನೆಗೆ ಉತ್ತರ ನಿರ್ಣಯ ಮಾಡುವುದು ಕೊಂಚ ಕಷ್ಟ. ಆದರೆ ಇವೆರಡೂ ಪೇಯಗಳಲ್ಲಿ ಕೆಲವು ಸಾಮ್ಯತೆಗಳು ಮತ್ತು ಕೆಲವು ಭಿನ್ನತೆಗಳು ಇರುವುದು ಹೌದು. ಅದನ್ನು ತಿಳಿದುಕೊಂಡರೆ, ಉತ್ತರವನ್ನು ನೀವೇ ನಿರ್ಧರಿಸಬಹುದು. ಇಲ್ಲಿದೆ ವಿವರಗಳು.

VISTARANEWS.COM


on

Tea vs Coffee
Koo

ಬೆಳಗಾಗುತ್ತಿದ್ದಂತೆಯೇ ನಾವು (Tea vs coffee) ಮಾಡುವ ಕೆಲಸಗಳಲ್ಲಿ ಎರಡು ಪ್ರಮುಖವಾದವು. ಒಂದು ಮೊಬೈಲ್‌ ಗೀರುವುದು, ಇನ್ನೊಂದು ಕಾಫಿ/ ಚಹಾ ಹೀರುವುದು. ಇವೆರಡೂ ಇಲ್ಲದಿದ್ದರೆ ಬೆಳಕು ಹರಿಯುವುದೇ ಇಲ್ಲ ನಮಗೆ. ಇವೆರಡೂ ದೇಹಕ್ಕೆ ನೀಡುವುದರಲ್ಲಿ ಕೆಫೇನ್‌ ಅಂಶವೇ ಪ್ರಧಾನವಾಗಿ ನಮಗೆ ಲೆಕ್ಕಕ್ಕೆ ಬರುವುದು. ಶರೀರದಲ್ಲಿ ಕಾಣುವ ಚೇತರಿಕೆಗೆ ಇದೇ ಪ್ರಧಾನವಾದ ಕಾರಣ. ಚಹಾ ಎಲೆಗಳ ರಸ ಹೀರುವುದು ಒಳ್ಳೆಯದೋ ಅಥವಾ ಕಾಫಿ ಬೀಜಗಳ ರಸ ಹೀರುವುದೋ ಎಂಬ ಚರ್ಚೆ ಬಹುಶಃ ಇವುಗಳ ಹುಟ್ಟಿನಷ್ಟೇ ಹಳೆಯದು. ಆದರೂ… ಯಾವುದು ಸೂಕ್ತ? ಅಂದಹಾಗೆ ಚಹಾದ ಹುಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಸಣ್ಣದೊಂದು ಕಥೆಯೂ ಇದೆ. ಚೀನಾದ ಚಕ್ರವರ್ತಿ ಷೆನ್‌ ನಂಗ್‌ ಒಮ್ಮೆ ತನ್ನ ಪಡೆಯೊಂದಿಗೆ ಎಲ್ಲಿಗೋ ಹೋಗುತ್ತಿದ್ದ. ಆಗ ದಾರಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನೆರಳಿನಲ್ಲಿ ಬೀಡು ಬಿಟ್ಟಿದ್ದರು. ಏನೋ ಕಾರಣಕ್ಕಾಗಿ ಪಾತ್ರೆಯೊಂದರಲ್ಲಿ ನೀರನ್ನು ಕುದಿಸುತ್ತಿದ್ದರು. ಎಲ್ಲಿಂದಲೋ ತೂರಿ ಬಂದ ಚಹಾ ಎಲೆಗಳು ಈ ಪಾತ್ರೆಯೊಳಗೆ ಬಿದ್ದವಂತೆ. ನೀರು ತನ್ನಷ್ಟಕ್ಕೇ ಕುದಿದು, ಚಹಾ ಪರಿಮಳದ ನೀರು ಸಿದ್ಧವಾಯಿತು. ಈ ಲಘುವಾದ ಡಿಕಾಕ್ಷನ್‌ ಘಮ ಚಕ್ರವರ್ತಿಗೆ ಇಷ್ಟವಾಯಿತು ಎಂಬುದು ಚಹಾ ಹುಟ್ಟಿನ ಕಥೆ. ಇದೇನೇ ಇದ್ದರೂ, ಸಾವಿರಾರು ವರ್ಷಗಳಿಂದ ಏಷ್ಯಾದ ಸಂಸ್ಕೃತಿಗಳಲ್ಲಿ ಚಹಾಗೊಂದು ವಿಶಿಷ್ಟವಾದ ಸ್ಥಾನ ಇರುವುದಂತೂ ಹೌದು.

Tea And Coffee

ಯಾವುದು ಒಳ್ಳೆಯದು?

ಇದೀಗ ಮುಖ್ಯವಾದ ಪ್ರಶ್ನೆ- ಕಾಫಿಯೊ ಚಹಾವೊ… ಆರೋಗ್ಯಕ್ಕೆ ಯಾವುದು ಸರಿ? ಇವೆರಡೂ ಪೇಯಗಳಲ್ಲಿ ಮುಖ್ಯವಾಗಿ ಇರುವುದು ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳು. ಇದರಿಂದ ದೇಹದಲ್ಲಿನ ಶಕ್ತಿ ಸಂಚಯನ ಹೆಚ್ಚುತ್ತದೆ; ಮೆದುಳು ಚುರುಕಾಗುತ್ತದೆ; ಚಯಾಪಚಯ ವೃದ್ಧಿಸುತ್ತದೆ ಮತ್ತು ತೂಕ ಇಳಿಕೆಗೂ ನೆರವಾಗುತ್ತದೆ. ಹಾಗೆಂದು ಈ ಎರಡೂ ಪೇಯಗಳ ಗುಣಗಳು ಒಂದೇ ಎಂದೇನಲ್ಲ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳಿಗೆ ಹೆಚ್ಚಾಗಿ ಮನಸ್ಸನ್ನು ಶಾಂತವಾಗಿಸುವ ಗುಣಗಳಿವೆ. ಆದರೆ ಕಾಫಿಯಲ್ಲಿ ಕೆಫೇನ್‌ ಸಾಂದ್ರತೆ ಹೆಚ್ಚಿದ್ದು, ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸಾಮ್ಯತೆಯೇನು?

ಇವೆರಡೂ ಪೇಯಗಳಲ್ಲಿರುವ ಸಾಮ್ಯತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಇವೆರಡೂ ಪೇಯಗಳಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ಕೆಲವು ರೀತಿಯ ರೋಗಗಳನ್ನು ದೂರ ಇರಿಸುವುದಕ್ಕೆ ಇಂಥ ಅಂಶಗಳು ನೆರವಾಗುತ್ತವೆ. ಮಿತಿಯಲ್ಲಿ ಇವುಗಳನ್ನು ಕುಡಿಯುವುದು ಒಂದರ್ಥದಲ್ಲಿ ಆರೋಗ್ಯವನ್ನು ಕಾಪಾಡಲೂಬಹುದು. ಇವೆರಡೂ ಪೇಯಗಳಲ್ಲಿ ಕೆಫೇನ್‌ ಇರುವುದು ಹೌದು. ಆದರೆ ಬ್ಲಾಕ್‌ ಟೀಗೆ ಹೋಲಿಸಿದಲ್ಲಿ ಕಾಫಿಯಲ್ಲಿರುವ ಕೆಫೇನ್‌ ಪ್ರಮಾಣ ಹೆಚ್ಚು. ಅಂದಾಜಿಗೆ ಹೇಳುವುದಾದರೆ, ಒಂದು ದೊಡ್ಡ ಕಪ್‌ ಕಾಫಿಯಲ್ಲಿ, ಮೂರು ಚಹಾಗಳಲ್ಲಿರುವಷ್ಟು ಕೆಫೆನ್‌ ದೇಹ ಸೇರುತ್ತದೆ. ಹಾಗಾಗಿ ಈ ಪೇಯಗಳ ಸೇವನೆಯನ್ನು ಮಿತಿಯಲ್ಲಿ ಇರಿಸಿಕೊಳ್ಳದಿದ್ದರೆ ನಿದ್ರಾಹೀನತೆ, ಜೀರ್ಣಾಂಗಗಳ ತೊಂದರೆ, ಮಾನಸಿನ ಆತಂಕಗಳಂಥವು ಗಂಟು ಬೀಳುತ್ತವೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ಭಿನ್ನತೆಗಳೇನು?

ಚಹಾದಲ್ಲಿರುವ ಎಲ್‌-ಥಿಯಾನಿನ್‌ ಅಂಶವು ಮಾನಸಿಕ ಒತ್ತಡವನ್ನು ದೂರ ಮಾಡುವ ಕ್ಷಮತೆಯನ್ನು ಹೊಂದಿದೆ. ಜೊತೆಗೆ, ಮೆದುಳನ್ನು ಜಾಗೃತ ಸ್ಥಿತಿಯಲ್ಲೂ ಇರಿಸುತ್ತದೆ. ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳಿದ್ದು, ಚಯಾಪಚಯವನ್ನು ವೃದ್ಧಿಸುತ್ತದೆ. ಗ್ರೀನ್‌ ಟೀ ಅಥವಾ ಹರ್ಬಲ್‌ ಚಹಾಗಳು ಜೀರ್ಣಾಂಗಗಳ ಬ್ಯಾಕ್ಟೀರಿಯಗಳಿಗೆ ಕೊಂಚ ಸಹಾಯ ನೀಡಿ, ತೂಕ ಇಳಿಕೆಗೂ ನೆರವಾಗುತ್ತದೆ.
ಆದರೆ ಕಾಫಿಯಲ್ಲಿರುವ ಕ್ಷಮತೆ ಬೇರೆಯೇ. ಇದರಲ್ಲಿ ಕೆಫೇನ್‌ ಅಂಶ ನೈಸರ್ಗಿಕವಾಗಿಯೇ ಹೆಚ್ಚಿರುವುದರಿಂದ ದೇಹದಲ್ಲಿ ಶಕ್ತಿಯಲ್ಲಿ ಹೆಚ್ಚಿಸಿ, ಅಥ್ಲೆಟಿಕ್‌ ಕ್ಷಮತೆಯನ್ನು ವೃದ್ಧಿಸುವಂಥದ್ದು. ಡೋಪಮಿನ್‌ ಅಂಶದಿಂದಾಗಿ ನರಗಳನ್ನು ಉತ್ತೇಜಿಸುವುದರಿಂದ ಪಾರ್ಕಿನ್‌ಸನ್‌ ಮತ್ತು ಅಲ್‌ಜೈಮರ್ಸ್‌ ರೋಗಿಗಳಿಗೆ ಇದರಿಂದಾಗುವ ಲಾಭಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಿತಿಯಲ್ಲಿದ್ದರೆ ಯಕೃತ್‌ಗೂ ಒಳ್ಳೆಯದು. ಆದರೆ ಮಿತಿ ಮೀರಿದರೆ ಜೀರ್ಣಾಂಗಗಳ ಆರೋಗ್ಯವನ್ನು ಹದಗೆಡಿಸಿ, ವ್ಯಸನವನ್ನೂ ಅಂಟಿಸುತ್ತದೆ.

Continue Reading
Advertisement
ಮಾಲಿವುಡ್9 mins ago

Mohanlal Visits Landslide: ಸೇನಾ ಸಮವಸ್ತ್ರ ಧರಿಸಿ ವಯನಾಡಿಗೆ ಬಂದ ಮೋಹನ್​ಲಾಲ್!

M R Mamata
ಶ್ರದ್ಧಾಂಜಲಿ9 mins ago

M R Mamata: ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಆರ್. ಮಮತಾ ನಿಧನ

wayanad landslide cm siddaramaiah pinarayi vijayan
ಕರ್ನಾಟಕ25 mins ago

Wayanad landslide: ವಯನಾಡ್‌ ಭೂಕುಸಿತ ಸಂತ್ರಸ್ತರಿಗೆ 100 ಮನೆ ನಿರ್ಮಾಣ: ಕೇರಳ ಸಿಎಂಗೆ ಸಿದ್ದರಾಮಯ್ಯ ಭರವಸೆ

Paris Olympics
ಪ್ರಮುಖ ಸುದ್ದಿ26 mins ago

Paris Olympics: ಹ್ಯಾಟ್ರಿಕ್​ ಪದಕ ತಪ್ಪಿಸಿಕೊಂಡ ಮನು ಭಾಕರ್​; 4ನೇ ಸ್ಥಾನಕ್ಕೆ ತೃಪ್ತಿ

Self Harming
ಚಿಕ್ಕೋಡಿ42 mins ago

Self Harming : ಉಕ್ಕಿ ಹರಿಯುವ ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಗೆ ಶರಣು

BJP-JDS Padayatra
ಕರ್ನಾಟಕ44 mins ago

BJP-JDS Padayatra: ಮೈಸೂರು ಚಲೋ ಪಾದಯಾತ್ರೆ ಆರಂಭ; ದಲಿತರು, ರೈತರಿಗೆ ನ್ಯಾಯ ಕೊಡಿಸಲು ಹೋರಾಟ ಎಂದ ವಿಜಯೇಂದ್ರ

Narco-Terrorism
ದೇಶ45 mins ago

Narco-Terrorism: ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಆರು ಸರ್ಕಾರಿ ಅಧಿಕಾರಿಗಳ ಅಮಾನತು

Ismail Haniyeh
ವಿದೇಶ1 hour ago

Ismail Haniyh Killing: ಹನಿಯೆಹ್‌ ಹತ್ಯೆ ಹಿಂದೆ ಇಸ್ರೇಲ್‌ನ ಮಾಸ್ಟರ್‌ ಪ್ಲ್ಯಾನ್‌? ಮೊಸಾದ್‌ನ ಸೀಕ್ರೆಟ್‌ ಏಜೆಂಟ್‌ಗಳಿಂದ ಬಾಂಬ್‌ ಸ್ಫೋಟ?

karnataka rain
ಮಳೆ1 hour ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

hd kumaraswamy muda
ಪ್ರಮುಖ ಸುದ್ದಿ1 hour ago

HD Kumaraswamy: ಇನ್ನೂ ಹತ್ತು ತಿಂಗಳು ಸರ್ಕಾರ ನಡೆಸಿ ನೋಡೋಣ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲ್

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ1 hour ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌